ಭಾಗ 10 : ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ : ಹದಿನಾರು ಸಂಸ್ಕಾರಂಗೊ

November 3, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವೇದಾಧ್ಯಯನ – ಮಹಾನಾಮ್ನೀ ವ್ರತ :

ಉಪನಯನ ಸಂಸ್ಕಾರ ಪಡದನಂತರ ವಟುವು ದ್ವಿಜ°ಎಂದೆಣಿಸಿಗೊಳ್ಳುತ್ತ°.  ದ್ವಿಜ° ಹೇಳಿರೆ ಬ್ರಾಹ್ಮಣನೇ (ಎರಡನೇ ಜನ್ಮವ ಪಡದವ°). ಬ್ರಾಹ್ಮಣ° ಎಂಬುದು ಇಂದ್ರಾಣ ದಿನಂಗಳಲ್ಲಿ ಒಂದು ಜಾತಿ ವಾಚಕ ಶಬ್ದವಾಗಿ ಬಳಕೆ. ವೇದಾಧ್ಯಯನ ಕಲ್ತು ಬ್ರಹ್ಮ ಜ್ಞಾನವ ಪಡದು ಶಾಸ್ತ್ರೋಕ್ತ ಸನಾತನ ಧರ್ಮವ ಆಚರುಸುವುದು ಒಂದು ನಿರ್ದಿಷ್ಟ ಪಂಗಡದವ್ವೇ ಆಗಿಹೊದ್ದರಿಂದ ಆ ಪಂಗಡಕ್ಕೆ ಬ್ರಾಹ್ಮಣ ವರ್ಗ (ಜಾತಿ) ಹೇಳಿ (“….ವೇದಾಧ್ಯಯನತೋ ವಿಪ್ರಃ, ಬ್ರಹ್ಮವಿತ್ ಬ್ರಾಹ್ಮಣ ಸ್ಮೃತಃ”) ಹೆಸರಾತು. ‘ಬ್ರಾಹ್ಮಣ°’ ಹೇಳುವ ಶಬ್ದವು ಧ್ವನಿಸುವ ಅರ್ಥವ್ಯಾಪ್ತಿ ಬಹಳ ವಿಸ್ತಾರವಾದ್ದು. ಪ್ರತಿಯೊಬ್ಬನಲ್ಲಿ ಅಂತರ್ಗತವಾಗಿಪ್ಪ ಸಂಸ್ಕಾರದ ಮಟ್ಟವ ಸೂಚಿಸುವಲ್ಲಿ ಈ ಶಬ್ದದ ಬಳಕೆ ಅಪ್ಪದಡ. ಇಂಥಾ ಸಂಸ್ಕಾರವಂತನಾದ ಬ್ರಾಹ್ಮಣ° ಶಾಸ್ತ್ರೋಕ್ತವಾದ ಜೀವನ ಪಾಲುಸಲೇ ಬೇಕು. ಅಂದರೆ ಮಾತ್ರ ಅವನ ಜೀವನದ ಉನ್ನತಿಗೆ ಅವಕಾಶ. ಇಲ್ಲದ್ರೆ, ಮೇಲೇರಿದ್ದ ಅವನ ಸಂಸ್ಕಾರದ ಮಟ್ಟ ಕುಸುದು ಹೋವ್ತು.

ಉಪನಯನ ನಂತರ ದ್ವಿಜ° ಎಂದೆನಿಸಿಗೊಂಡವ° ಕೆಲವೊಂದು ಧಾರ್ಮಿಕ ಕ್ರಿಯೆ ವಿಧಿ ನಿಷೇಧಂಗಳ ತಪ್ಪದ್ದೆ ಪಾಲುಸಲೇ ಬೇಕು. ಅಂದರೆ ಮಾತ್ರ ಅವನ ದ್ವಿಜಜನ್ಮ ಸಾರ್ಥಕ. ದ್ವಿಜರ ಪೈಕಿ ಬ್ರಾಹ್ಮಣರ ನಿತ್ಯ ಜೀವನ ಕ್ರಮಲ್ಲಿ ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯಯಜ್ಞ, ಬ್ರಹ್ಮಯಜ್ಞ  ಎಂಬ ಪಂಚ ಮಹಾಯಜ್ಞಂಗಳ ಪ್ರತಿದಿನವೂ ಆಚರುಸಲೇ ಬೇಕು. ಬ್ರಾಹ್ಮಣ ಕುಟುಂಬಲ್ಲಿ ಜನಿಸಿದ ವ್ಯಕ್ತಿಗೆ ಉಪನಯನಾನಂತರ ಯಜ್ಞ-ಯಾಗಾದಿಗಳ ಆಚರುಸುವ ಅಧಿಕಾರ ಸಿಕ್ಕಿದರೂ, ಅಪ್ಪ° – ಅಬ್ಬೆ ಇಪ್ಪವ° ಪಿತೃಯಜ್ಞದ ಅಧಿಕಾರ ಹೊಂದಿರುತ್ತನಿಲ್ಲೆ. ಬ್ರಾಹ್ಮಣ ಹೇಳಿಗೊಂಬವ° ಪ್ರತಿದಿನವೂ ಸ್ನಾನ, ಸಂಧ್ಯಾವಂದನೆ, ದೇವತಾರ್ಚನೆ, ವೇದಾಧ್ಯಯನ ಮುಂತಾದವುಗಳ ತಪ್ಪುಸದ್ದೆ ಪಾಲುಸೆಕ್ಕು. ಮನೇಲಿ ಮಾಡಿದ ಅಡುಗೆ ದೇವರಿಂಗೆ ನೈವೇದ್ಯ ಮಾಡಿಕ್ಕಿ ಪ್ರಸಾದ ರೂಪವಾಗಿ ಅದರ ಸೇವಿಸೆಕ್ಕು. ಯಜ್ಞ – ಯಾಗ ಹೇಳಿರೆ ‘ನಮ್ಮ ಇಹ ಜೀವನ ಸುಗಮವಾಗಿ ಸಾಗಲೆ ನಾನಾ ರೀತಿಲಿ ನೆರವಪ್ಪ ಗೋಚರ-ಅಗೋಚರ ಶಕ್ತಿಗೊಕ್ಕೆ ನಾವು ಕೃತಜ್ಞತಾ ಪೂರ್ವಕ ಸಲ್ಲುಸುವ ಗೌರವ’. ಈ ಕೃತಜ್ಞತಾ ಪ್ರತ್ಯುಪಕಾರವ ನಾವು ನಮ್ಮ ಅಬ್ಬೆ – ಅಪ್ಪ°, ಬಂಧು-ಬಳಗ, ನಮ್ಮ ವಂಶದ ಹಿರಿಯೋರು, ಋಷಿ-ಮುನಿಗೊ,  ಭೂತತತ್ವಂಗೊ, ಪಶು-ಪಕ್ಷಿ-ಪ್ರಾಣಿ, ನಿಸರ್ಗ, ಸೃಷ್ಟಿಕರ್ತ ಬ್ರಹ್ಮ°, ಸರ್ವಶಕ್ತ ಪರಮಾತ್ಮ ಮುಂತಾದ ಎಲ್ಲೋರ ಪರವಾಗಿ ಮಾಡುವದು. ಪ್ರತಿದಿನವೂ ನಾವು ಇಂಥ ಮಹಾಯಜ್ನಂಗಳ ಆಚರುಸುವದು ಪ್ರಾಯೋಗಿಕ ಸುಲಭ ಸಾಧ್ಯವಲ್ಲದ ಮಾತು. ಆದ್ದರಿಂದಲೇ, ಈ ಪಂಚಮಹಾಯಜ್ಞದ ಸಂಕೇತವಾಗಿ ಬ್ರಾಹ್ಮರು ಪ್ರತಿದಿನವೂ ಊಟ ಸುರು ಮಾಡುವ ಮದಲು ‘ಪರಿಷಂಚನೆ’ ಹೇಳ್ವ ಸುಲಭೋಪಾಯವ ಹಿಂದಾಣ ಋಷಿಗೊ ರೂಪಿಸಿದ್ದು.

ಮಾಡಿದ ಅಡಿಗೆಯ ಎಲೆಲಿ ಕ್ರಮಬದ್ಧವಾಗಿ ಬಡಿಸಿಕ್ಕಿ, ಗಾಯತ್ರೀ ಮಂತ್ರ ಸಹಿತವಾಗಿ ಜಲ ಪ್ರೋಕ್ಷಣೆ ಮಾಡಿಶುದ್ಧಗೊಳಿಸಿ, ಊಟದ ಎಲೆಯ ಸುತ್ತಲೂ ನೀರಿಂದ ಸುತ್ತುಗಟ್ಟಿ, ಎಲೆಯ ಬಳಬದಿಲಿ ಒದ್ದೆಬೆರಳಿಂದ ಒಂದು ಸಣ್ಣ ಗೆರೆ ಎಳದು ಎಲೆಲಿ ಬಡುಸಿದ ಅನ್ನಂದ ನಾಕು  ಅವುಳು ತೆಗದು ಎಳದ ಗೆರೆಯ ಮೇಲೆ ಚಿತ್ರಾಯ ಸ್ವಾಹಾ, ಚಿತ್ರಗುಪ್ತಾಯ ಸ್ವಾಹಾ, ಯಮಾಯ ಸ್ವಾಹಾ, ಯಮಧರ್ಮರಾಜಾಯ ಸ್ವಾಹಾ, ಹೇಳಿ ನಾಲ್ಕು ಅಶನ ಮಡುಗಿ ಸರ್ವಭೂತೇಭ್ಯೋ ನಮಃ, ತೃಪ್ತಿರಸ್ತು ಹೇಳಿ ಅದರ ಮೇಗಂದ ನೀರು ಬಿಡುವದು. ಇದಾದ ನಂತರ ಅಮೃತಮಸ್ತು, ಅಮೃತೋಪಸ್ತರಣಮಸಿ ಸ್ವಾಹಾ ಹೇಳಿ ಅಂಗೈಲಿ ನೀರೆರದು ಕುಡಿವದು. ಓಂ ಪ್ರಾಣಾಯ ಸ್ವಾಹಾ, ಓಂ ಅಪಾನಾಯ ಸ್ವಾಹಾ, ಓಂ ವ್ಯಾನಾಯ ಸ್ವಾಹಾ, ಓಂ ಉದಾನಾಯ ಸ್ವಾಹಾ, ಓಂ ಸಮಾನಾಯ ಸ್ವಾಹಾ, ಓಂ ಬ್ರಹ್ಮಣೇ ಸ್ವಾಹಾ ಹೇಳಿಗೊಂಡು ಒಂದೊಂದೇ ಅವುಳು ಅನ್ನವ ಅಗಿಯದ್ದೆ ನುಂಗಿ ಪ್ರಾಣಾಹುತಿ ಕೊಟ್ಟು ಅನಂತರ ನಿಧಾನವಾಗಿ ಊಟಮಾಡುವದು.

ಪ್ರಾಣಾಹುತಿ ಹೇಳಿರೆ., ಜೀವನಾಧಾರವಾಗಿಪ್ಪ ಪ್ರಾಣಶಕ್ತಿ ಪರಮಾತ್ಮಲಿ, ಅವಂಗೂ ಶಾರೀರಿಕ ಮಟ್ಟಲ್ಲಿ ನಡವ ಪಂಚಪ್ರಾಣ ಕ್ರಿಯಗೂ ಆಹುತಿರೂಪವಾಗಿ ಒಂದೊಂದು ಔಳು ಅಶನ ತೆಕ್ಕೊಂಬದು –

ಪ್ರಾಣಾಯ ಸ್ವಾಹಾ – ಶ್ವಾಸೋಚ್ಚಾಸ – ಪೂರ್ವ ದಿಕ್ಕಿಂದ ಅಶನವ ತೋರು, ಅಂಗುಷ್ಠ, ಮಧ್ಯ ಬೆರಳುಗಳ ಕೊಡಿಲಿ ಹೆರ್ಕಿ ಪ್ರಾಶನ ಮಾಡೆಕ್ಕು.
ಅಪಾನಾಯ ಸ್ವಾಹ – ಮಲ ವಿಸರ್ಜನೆ – ದಕ್ಷಿಣ ದಿಕ್ಕಿಂದ ಅಶನವ ಮಧ್ಯ,ಪವಿತ್ರ,ಅಂಗುಷ್ಠ ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
ವ್ಯಾನಾಯ ಸ್ವಾಹ – ರಕ್ತ ಪರಿಚಲನೆ – ಪಶ್ಚಿಮ ದಿಕ್ಕಿಂದ ಕಿರುಬೆರಳು, ಪವಿತ್ರ ಬೆರಳು, ಅಂಗುಷ್ಠ ಬೆರಳು ಸೇರ್ಸಿ,
ಉದಾನಾಯ ಸ್ವಾಹ – ಪರಾವರ್ತನ (ಮೇಲಾಣ ಕ್ರಿಯೆಗಳ ಪುನರಾವರ್ತನೆ) – ಉತ್ತರ ದಿಕ್ಕಿಂದ ಕಿರು ಬೆರಳು, ತೋರು ಬೆರಳು, ಅಂಗುಷ್ಠ ಬೆರಳು ಸೇರ್ಸಿ,
ಸಮಾನಾಯ ಸ್ವಾಹ – ಪಾಚಕ (ಪಚನ) – ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು, ಮತ್ತೆ
ಬ್ರಹ್ಮಣೇ ಸ್ವಾಹ  – ಸರ್ವಶಕ್ತ  – ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು.ಹೀಂಗೆ ಆಹಾರ ಸಮರ್ಪಿಸಿದ ಮತ್ತೆ ಪ್ರಸಾದ ಹೇಳಿ ಭುಂಜಿಸುವದು.

ಇಲ್ಲಿ ‘ಚಿತ್ರಾ’ ಹೇಳಿರೆ ಪರಬ್ರಹ್ಮ, ‘ಚಿತ್ರಗುಪ್ತ’ ಹೇಳಿರೆ ನಮ್ಮ ಪಾಪ ಪುಣ್ಯವ ರೆಕಾರ್ಡ್ ಮಾಡಿ ಮಾಡಿಕ್ಕೊಂಬ ಯಮಲೋಕದ ಒಬ್ಬ ಅಧಿಕಾರಿ, ‘ಯಮ’ ಹೇಳಿರೆ ಮೃತ್ಯುದೇವತೆ, ‘ಯಮಧರ್ಮರಾಜ’ ಹೇಳಿರೆ ಕರ್ತವ್ಯಪರಾಯಣ ನ್ಯಾಯದೇವತೆ, ‘ಸರ್ವಭೂತ’ ಹೇಳಿರೆ ಇರುವಿಕೆ / ಜೀವಿ / ಸೃಷ್ಟಿ, ಇತ್ಯಾದಿ ಅರ್ಥ. ಮನುಷ್ಯ ದೇಹವು  ಅಗ್ನಿ, ಆಕಾಶ, ಆಪ, ಭೂಮಿ, ವಾಯು ಎಂಬ ಪಂಚಭೂತಂಗಳಿಂದ ಉಂಟಾದ್ದು. ಈ ಶರೀರ ಅಬ್ಬೆ-ಅಪ್ಪನಿಂದ ಉಂಟಾದ್ದು. ಈ ಕ್ರಮಲ್ಲಿ ಎಲ್ಲಾ ದೇಹಂಗೊಕ್ಕೂ ಕಾರಣನಾದ ಸರ್ವಭೂತಂಗಳಿಗೂ ನಮಸ್ಕರುಸುವದು. ಹೇಳಿರೆ, ಎನ್ನ ಕೃತಜ್ಞತೆ ಸಲ್ಲುಸುತ್ತೆ ಹೇಳಿ ಭಾವನೆ ಪ್ರತಿ ಊಟದ ಸಮಯಲ್ಲಿ ಪ್ರಕಟಗೊಳುಸುವದು. ಹಿತಮಿತವಾದ ಊಟವಾದ ನಂತರ ಅಮೃತಾಪಿಧಾನಮಸಿ ಸ್ವಾಹಾ ಹೇಳಿಗೊಂಡು ಒಂದು ಸಕ್ಕಣ ನೀರು ಅಂಗೈಲಿ ಸುರುದು ಕುಡಿವದು (ಉತ್ತರಾಪೋಷನ), ತನಗೆ ಅಗೋಚರ ಆಗಿಪ್ಪ ಲೋಕಾಂತರ ವಾಸಿಗಳಾಗಿಪ್ಪ ದೀನ ದರಿದ್ರರ ಸುಖಕ್ಕಾಗಿ ಬಾಳೆ ಕೊಡಿಲಿ ರಜಾ ನೀರು ಹಾಕಿ, ಅನ್ನದಾತಃ ಸುಖೀ ಭವ (ಅನ್ನ ಕೊಟ್ಟವನೇ ! ನೀನು ಸುಖವಾಗಿರು) ಹೇಳಿ ಹಾರೈಸಿ ಏಳುವದು ಭೋಜನದ ಕ್ರಮ. ಇದರ ಸರಿಯಾಗಿ ಅರ್ಥಮಾಡಿಗೊಳ್ಳದ್ದೇ ಶ್ರದ್ಧೆಂದ ಆಚರುಸದ್ದೇ, ಅದರ ಮಹತ್ವವ ಅರಿಯದ್ದೇ , ನೀರು ಸುತ್ತುಗಟ್ಟುವದು ಬಾಳೆಂದ ರಜಾ ದೂರಲ್ಲಿ ಅಶನ ಮಡುಗುವದು ಬಾಳಗೆ ಎರುಗು ಬಾರದ್ದಿಪ್ಪಲೋ ಅಲ್ಲ. ಬದಲಾದ ಸಾಮಾಜಿಕ ಪರಿಸ್ಥಿತಿಲಿ, ಶಾಸ್ತ್ರೋಕ್ತ ಪಂಚಯಜ್ಞ ಕರ್ಮಂಗಳ ಆಚರುಸುವದು ಅಸಾಧ್ಯ, ಈ ‘ಕರ್ಮಲೋಪ’ ಲೋಪ ಆಗದ್ದ ಹಾಂಗೆ, ಬ್ರಾಹ್ಮರ ಶ್ರೇಯಸ್ಸಿನ ಹಾದಿಲಿ ಸಹಾಯಕ ಆಗಿಪ್ಪ ಈ ಪರಿಷಂಚನೆ ಬಹು ಅರ್ಥಪೂರ್ಣವೇ ಹೊರತು ಮೂಢನಂಬಿಕೆ ಅಲ್ಲ.  ಈ ಪರಿಷಿಂಚನೆ ಹೇಳ್ವದು ಭೋಜನಕ್ಕೆ ಮಾತ್ರ ಹೇಳಿ ಅರ್ಥಮಾಡಿಗೊಂಡಿದ್ದು. ಕಾರ್ಯಕ್ಕಾರು ಹಾಂಗಲ್ಲ, ಏನೇ ಬೇಶಿದ ಆಹಾರವ ಸ್ವೀಕರುಸುವ ಮದಲು ಪರಿಷಿಂಚನೆ ಮಾಡೆಕು ಹೇಳಿಯೇ ಶಾಸ್ತ್ರವಿಹಿತ. ಕೆಳ ಚಕ್ಕನಾಟಿ ಕೂದು ಉಂಬಗ ಪರಿಷಿಂಚನೆ ಮಾಡ್ಳಕ್ಕು ಸರಿ, ಮೇಜಿಲ್ಲಿ ಮಡಗಿ ಉಂಬವಕೋ?! ., ಸಂಶಯವೇ ಬೇಡ, ಎಲ್ಲಿ ಕೂದು ಉಣ್ತರೂ, ಹೋಟ್ಲಿಲಿ ಉಣ್ತರೂ ರೈಲಿಲ್ಲಿ ಉಣ್ತರೂ ಪರಿಷಿಂಚನೆ ಮಾಡಿಯೇ ಆಹಾರ ತೆಕ್ಕೊಳ್ಳೆಕ್ಕಪ್ಪದು ಶಾಸ್ತ್ರ. ಆದರೆ, ‘ಲವಣಕ್ಷಾರಮರೀಚಿಕಾತಿಂತ್ರಿಣೀಯುಕ್ತ ಭೋಜನೇ ಪರಿಷಿಂಚನಂ ನ ಕರಣೀಯಂ’ ಹೇಳಿಯೂ ಇದ್ದು. ಅರ್ಥಾತ್., ಉಪ್ಪು ಹುಳಿ, ಮೆಣಸು, ಕ್ಷಾರ ಇತ್ಯಾದಿ ಅಥವಾ ಮಸಾಲೆಯುಕ್ತ ಭೋಜನ ವರ್ಜ್ಯ. ಅಂಬಗ ಊಟಕ್ಕೆ ಉಪ್ಪು ಮೆಣಸು ಕೂಡ ಹಾಕಲೆ ಇಲ್ಯೋ?!! . ಇಲ್ಲೆ., ಮದಲಿಂಗೆ ಇಲ್ಲೆ. ಮೆಣಸು ಹೇಳಿದ್ದಿಲ್ಲಿ ನಿಂಗಳ ಕುಂಟೆ/ಘಾಟಿ ಮೆಣಸಿನ. ಗೆಣಮೆಣಸು (ಒಳ್ಳೆಮೆಣಸು) ಆಯೇಕ್ಕಾದ್ದು ಪದಾರ್ಥಕ್ಕೆ. ಸೂಕ್ಷ್ಮವಾಗಿ ಗಮನಿಸಿರೆ, ಇಂದಿಂಗೂ ಕೆಲವು ಮನೆಲಿ ತಿಥಿಗೆ ತಂಬ್ಳಿ ತೋವೆಗೊಕ್ಕೆ ಉಪ್ಪು ಹಾಕುತ್ತವಿಲ್ಲೆ. ಬಾಕಿ ತಾಳು, ಕೊದಿಲು, ಮೇಲಾರಕ್ಕೆಲ್ಲ ಹಾಕುತ್ತವು!!.  ಇದೆಲ್ಲಾ ಆರೋಗ್ಯ ದೃಷ್ಟಿಂದ ಬಂದದು. ಶರೀರಲ್ಲಿ ಸಾತ್ವಿಕಗುಣ ಬೆಳೆಶೆಕು., ರಾಜಸವೋ, ತಾಮಸವೋ, ಕಾಮವೋ ಏರ್ಲಾಗ ಹೇಳ್ವ ಅರ್ಥಲ್ಲಿ. ದೇವರಿಂಗೆ ನೈವೇದ್ಯ ಮಾಡುವಾಗ ಪರಿಷಿಂಚನೆ ಬೇಕೋ ಹೇಳಿ ಎನ್ನದೊಂದು ಪ್ರಶ್ನೆ ಇಲ್ಲಿ. ಇಡೀ ಬಾಳೆಹಣ್ಣು ಗುಳುಂ ಮಾಡುವ ನಾವು, ಅದರ ತಿಂಬಗ ಇಡೀ ಸ್ವಾಹ ಮಾಡುತ್ತು, ಆದರೆ ದೇವರಿಂಗೆ ತುಂಡು ಬಾಳೆಹಣ್ಣು ಮಡುಗಿರೂ  ಪ್ರಾಣಯಸ್ವಾಹ ..ಹೇಳಿ ಕೈಕರಣ ಮಾಡುತ್ತು. ಅಗತ್ಯ ಇದ್ದೋ?  ಕಾರ್ಯಕ್ಕಾರು ನೋಡಿರೆ ಇಲ್ಲೆ. ನೈವೇದ್ಯಂ ಸಮರ್ಪಯಾಮಿ ಹೇಳಿ ಹೇಳಿದ್ದದು. ಇಲ್ಲಿ ತಿನ್ಸುತ್ತೆ ಹೇಳಿ ಹೇಳುತ್ತಿಲ್ಲೆ. ನೈವೇದ್ಯ ಸಮರ್ಪಣೆ ಮಾತ್ರ. ದೇವರೆದುರು ಮಡುಗು ಕೈ ಮುಗುದರೆ ಸಾಕು. ಮತ್ತೆಂತಕೆ ನಮ್ಮ ನಾಟಕ?!. ದೇವರು ಸರ್ವಶಕ್ತ, ಎಲ್ಲವೂ ದೇವರದ್ದೇ. ಅವನದ್ದರ ಅವಂಗೇ ಸಮರ್ಪಿಸಿ ಪ್ರಸಾದರೂಪವಾಗಿ ನಾವು ಮತ್ತೆ ತೆಕ್ಕೊಂಬದು ಹೊರತು, ಕೈನಾಂದುವ ತಟ್ಟಗೆ ಇಡ್ಕಲಿಪ್ಪದು ಅಲ್ಲ. ನಾವು ಭಗವಂತನ ನಮ್ಮ ಹಾಂಗೆ ರೂಪವ ಕಲ್ಪಿಸಿ ಆವಾಹನೆ ಮಾಡಿ ಪೂಜೆ ಮಾಡುವದು. ಇದೊಂದು ನಮ್ಮ ಮಾನಸಿಕ ಕಲ್ಪನೆ ಮಾತ್ರ. ಅಂತಹ ನಮ್ಮ ಅತಿಥಿಯಾಗಿ ಆಹ್ವಾನಿಸಿದ ಭಗವಂತನ ನವಗೆ ಉಪಚಾರ ಯಾವ ರೀತಿಲಿ ಮಾಡುತ್ತೋ (ಆಯೇಕ್ಕೋ), ಅದೇ ರೀತಿ ಉಪಚರುಸುವದಾವ್ತು. ಪ್ರತಿಯೊಂದು ಸರ್ತಿಯೂ ಬೇಶಿ ತಂದುಮಡುಗಲೆ ಇಲ್ಲೆನ್ನೆ. ತತ್ಕಾಲೇ ನೈವೇದ್ಯಾರ್ಥೇ ಇದಂ ರಂಭಾಫಲಖಂಡಂ / ಗುಡೋಪಹಾರಂ …, ಹೇಳಿ ಅದರ ಬದಲಿಂಗೆ ಇದು ಹೇಳಿ ನೈವೇದ್ಯ ಮಾಡುವದಾವ್ತು ಅಷ್ಟೆ. ಎಲ್ಲವೂ ನಮ್ಮ ಮಾನಸಿಕ ಕಲ್ಪನೆಗೊ. ಎಂದಿಂದಲೋ ಬಂದ ಶಾಸ್ತ್ರ ರೂಢಿಲಿ ಮುಂದುವರ್ಕೊಂಡು ಬಯಿಂದು ನಾವೂ ಅದನ್ನೇ ಮುಂದುವರ್ಸಿರೆ ಆತು. ಹಾಂಗೇ ಸಂಧ್ಯಾಕಾಲಲ್ಲಿ ಎಲ್ಲಿ ಇದ್ದೇ ಹೇಳಿ ಲೆಕ್ಕ ಅಲ್ಲ. ಸಂಧ್ಯಾಕಾಲಲ್ಲಿ ಸಂಧ್ಯಾವಂದನೆ ಮಾಡೆಕ್ಕಪ್ಪದೇ ನಿಯಮ. ಆ ಹೊತ್ತಿಲ್ಲಿ ಎಲ್ಲಿ ಇದ್ದೋ, ಅಲ್ಲಿ.

ಉಪನಯನ ಸಂಸ್ಕಾರ ಹೊಂದಿದ ವಟುವು ಉಪನಯನಕ್ಕೆ ಮದಲು ಅನುಸರುಸುತ್ತಿದ್ದ ಸಾಮಾನ್ಯ ಜೀವನ ಪದ್ಧತಿಯ ತೊರದು ಪ್ರತಿ ದಿನವೂ ನಿಯಮಿತ ಸಮಯಲ್ಲಿ ತ್ರಿಕಾಲ ಸ್ನಾನ ಸಂಧ್ಯೋಪಾಸನೆ ಮಾಡುತ್ತಾ ತನು ಮನಂಗಳ ಶುದ್ದಿ ಪಡೆಯಲು ಸಾಧನೆ ಮಾಡೆಕ್ಕು. ಸಾತ್ವಿಕ ಜೀವನ ಶೈಲಿಯ ಅನುಸರಿಸಿ ಯೋಗ್ಯನಾದ ಗುರುವಿನ ಶಿಷ್ಯತ್ವವ ಸ್ವೀಕರಿಸಿ ಸಂಪೂರ್ಣ ಗುರು ಪರಾಧೀನನಾಗಿ, ವ್ಯಕ್ತಿ ಜೀವನದ ಸಂಪೂರ್ಣ ವಿಕಾಸಕ್ಕೆ ವಿದ್ಯಾರ್ಜನೆ ಮಾಡಿ ಯಶಸ್ಸು ಪಡೆದು ಗುರು ಹಿರಿಯರ ಪ್ರೀತಿಗೆ ಪಾತ್ರನಾಗಿ ಮುಂದಾಣ ಸಂಸ್ಕಾರಕ್ಕೆ ಅರ್ಹತೆಪಡೆಕ್ಕು. ಮಘಾದಿ ಪಂಚಕಲ್ಲಿ (ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ)  ವಟುವಿಂಗೆ ಉಪನಯನ ಮಾಡಿದ್ದರೂ ವೇದಾರಂಭಕ್ಕೆ ಅದು ಸೂಕ್ತ ಕಾಲ ಅಲ್ಲಡ. ಶ್ರಾವಣ ಮಾಸಂದ ಮಾಘ ಮಾಸದವರೇಂಗೆ ವೇದಾಧ್ಯಯನ ಮಾಡುವ ಯೋಗ್ಯ ಸಮಯಡ. ಶ್ರಾವಣ ಮಾಸಲ್ಲಿ ಸ್ವಶಾಖಾ-ಸೂತ್ರಾನುಸಾರವಾಗಿ ಮಂಡಲ ಋಷಿ, ಕಾಂಡ ಋಷಿಗಳ ಪೂಜಿಸಿ, ಕಾಂಡ ಮಂಡಲ ದೇವತೆಗೊಕ್ಕೆ ಆಹುತಿ ಕೊಟ್ಟು, ತರ್ಪಣ ಕೊಟ್ಟು, ಋಷಿ ದೇವತೆಗಳ ತೃಪ್ತಿಪಡಿಸಿ, ವೇದಾಧ್ಯಯನ ಪ್ರಾರಂಭ ಮಾಡುವದು. ಈ ಕರ್ಮಭಾಗಕ್ಕೆ ಉಪಾಕರ್ಮಹೇಳಿ ಹೆಸರು. ಉಪ ಹೇಳಿರೆ ಸಮೀಪ (ಹತ್ರೆ). ಆರ ಹತ್ರೆ (ಸಮೀಪ)? – ಗುರುವಿನ ಸಮೀಪ. ಉಪಾ = ಉಪಾದಾನ = ಗ್ರಹಣ, ಸ್ವೀಕಾರ, ಉಪಾಯ = ಹತ್ತಿರಕ್ಕೆ ತಪ್ಪದು. ಈ ಅರ್ಥಲ್ಲಿ ನೋಡಿರೆ ಉಪಾಕರ್ಮ ಹೇಳ್ವದು ಉಪನಯನ ಕಳುದಿಕ್ಕಿ ಗುರುವಿನ ಸಮೀಪಕ್ಕೆ ವಿದ್ಯಾಭ್ಯಾಸಕ್ಕೆ ಕರಕ್ಕೊಂಡು ಹೋವ್ತ ಕರ್ಮ – ‘ಉಪಾಕರ್ಮ’. ಉಪ+ಆ+ಕರ್ಮ = ಉಪಾಕರ್ಮ. ಇಲಿ ಆ ಹೇಳಿರೆ  ‘ಆಙ್’ ಹೇಳ್ವ ಉಪಸರ್ಗ, ಸಮಗ್ರವಾಗಿ ಹೇಳ್ವ ಅರ್ಥ.  ವೇದಾಧ್ಯಯನವ ಸಮಗ್ರವಾಗಿ ವಿಧಿವತ್ತಾಗಿ ಆರಂಭಿಸುವ ಕಾರ್ಯಕ್ರಮವ `ಉಪಾಕರಣ’ ಹೇಳಿ ಹೇಳುವದು. ಕರಣ ಹೇಳಿರೆ ಕರ್ಮ. ಉಪಾಕರಣವೇ ಉಪಾಕರ್ಮ.  ಶ್ರಾವಣಮಾಸದ ಹುಣ್ಣಮೆ ದಿನ ಮಾಡುವದು. ಶ್ರಾವಣ ಮಾಸ ಹುಣ್ಣಮೆಯ ದಿನದ ವಿಶೇಷ ಎಂತ ಹೇಳಿರೆ – ಭಗವಂತ° ಶ್ರೀಮಹಾವಿಷ್ಣು ಬ್ರಹ್ಮನ ಹತ್ರೆಂದ ಮಧುಕೈಟಭರಿಂದ ಅಪಹೃತವಾದ ವೇದವ ಉದ್ಧರುಸಲೆ ಹಯಗ್ರೀವನಾಗಿ ಅವತರಿಸಿದ ಶುಭದಿನ (ಹಯಗ್ರೀವ ಜಯಂತಿ). ವೇದಂಗಳ ಪುನರ್’ಸ್ಥಾಪನೆಯಾದ ಈ ವಿಶೇಷದಿನದಂದೇ ಯಜುರುಪಾಕರ್ಮ/ಋಗ್ ಉಪಾಕರ್ಮ ದಿನ ಹೇಳಿ ಪ್ರಾಕಿಂದಲೇ ನಡಕ್ಕೊಂಡು ಬೈಂದು. ಸಾಮವೇದಿಗೊ ಅವರ ಧರ್ಮನಿರ್ಣಯದಂತೆ ಭಾದ್ರಪದ ಶುಕ್ಲಪಕ್ಷದ ಹಸ್ತಾ ನಕ್ಷತ್ರದಂದು ಉಪಾಕರ್ಮ ಆಚರುಸುತ್ತವು. ಇಲ್ಲಿ ಇನ್ನೊಂದು ಮುಖ್ಯ ವಿಷಯ ಎಂತ ಹೇಳಿರೆ, ಉಪಾಕರ್ಮದ ದಿನ ಬರೇ ನೂತನ ಬ್ರಹ್ಮಚಾರಿಗೆ ಮಾಂತ್ರ ಅಲ್ಲ ಉಪಾಕರ್ಮ ಮಾಡುತ್ತದು. ಪ್ರತಿಯೊಬ್ಬ ಬ್ರಾಹ್ಮಣನೂ ಮಾಡೇಕ್ಕಾದ ಕರ್ತವ್ಯ. ಇಲ್ಲಿ ವಿದ್ಯಾಭ್ಯಾಸ ಪ್ರಾರಂಭಕ್ಕೆ ಗುರುಮಠಕ್ಕೆ ಕಳುಸುವದು ಒಂದೇ ಉದ್ದೇಶ ಅಲ್ಲ, ಪ್ರತಿಯೊಬ್ಬ ಮನುಷ್ಯಂಗೂ ಇಡೀ ಜೀವನ ಒಂದು ಅಧ್ಯಯನವೇ. ಬಾಕಿದ್ದೋರಿಂಗೆ ಬರೇ ಜನಿವಾರ ಬದಲುಸುತ್ತದು ಮಾಂತ್ರ ಅಲ್ಲ ಆ ದಿನದ ಮಹತ್ವ. ಅದರೊಟ್ಟಿಂಗೆ ಸಮಿಧಾಧಾನ, ಕಾಮೋಕಾರ್ಷಿತ್ ಜಪ, ಕಾಂಡಋಷಿ ತರ್ಪಣ, ೧೦೦೮ ಗಾಯತ್ರೀ ಜಪ, ಇತ್ಯಾದಿ ಪ್ರತಿಯೊಬ್ಬನೂ ಮಾಡೇಕ್ಕಪ್ಪ ಕರ್ತವ್ಯ ಉಪಾಕರ್ಮ ದಿನಲ್ಲಿ ಇದ್ದು. ಏನೂ ಮಾಡ್ಳೆ ಎಡಿಯದ್ದರೆ ಕಡೇಪಕ್ಷ ನೂತನ ಯಜ್ಞೋಪವೀತಧಾರಣೆ ಮಾಡಿ ೧೦೦೮ ಗಾಯತ್ರೀ ಮಂತ್ರ ಪಠಣವನ್ನಾರೂ ಮಾಡೇಕು ಹೇಳಿ ಸುರುವಾದ್ದು ಇತ್ತೀಚೆಗಿನ ಉಪಾಕರ್ಮದ ದಿನದ ಬಾಕಿದ್ದೋರಿಂಗೆ ಬರೇ ಜನಿವಾರ ಬದಲುಸುತ್ತ ವಿಧಿ. ಶ್ರಾವಣ ಮಾಸದ ಹುಣ್ಣಮೆ ನಂತ್ರಂದ ವಿದ್ಯಾಭ್ಯಾಸ ಮಾಡುವದು (ಅಲ್ಲಿಂದ ವೇದ ವಿದ್ಯಾಭ್ಯಾಸ ಸುರು ಹೇಳಿ ಶಾಸ್ತ್ರ).

“ವೇದಗ್ರಹಣಾಧಿಕಾರ ಸಿದ್ಧ್ಯರ್ಥಂ ನೂತನ ಉಪಾಕರ್ಮಾಖ್ಯಂ ಕರ್ಮ ಕರಿಷ್ಯೇ” ಹೇದು ಸಂಕಲ್ಪ. ಆ ದಿನ ಪ್ರಾತಃಕಾಲ ವಪನ (ಕ್ಷೌರ), ಸ್ನಾನ ಸಂಧ್ಯಾವಂದನೆ, ಅಗ್ನಿಕಾರ್ಯ ಪೂರೈಸಿಗೊಂಡು ಆಚಾರ್ಯಮುಖೇನ ನಾಂದೀ, ಪುಣ್ಯಾಹವಾಚನ, ೧೦೮ ಸಂಖ್ಯೆಲಿ ಕಾಮೋಕಾರ್ಷೀ ಜಪ ಮತ್ತು ಮನ್ಯುರಕಾರ್ಷೀ ಜಪ, ಮಾಧ್ಯಾಹ್ನಿಕ, ಬ್ರಹ್ಮಯಜ್ಞ, ಮಹಾಸಂಕಲ್ಪ, ನದೀಸ್ನಾನ, ನೂತನ ವಸ್ತ್ರ, ಯಜ್ಞೋಪವೀತಧಾರಣ, ಕಾಮೋಕಾರ್ಷೀ, ಮನ್ಯುರಕಾರ್ಷೀ ತರ್ಪಣ, ಉಪಾಕರ್ಮ ಹೋಮ, ನೂತನ ಅಜಿನ-ಮೇಖಲ-ದಂಡ ಧಾರಣ, ವೇದಾರಂಭ, ಹೋಮ ಅಂತ್ಯ. ಮರುದಿನ ೧೦೦೮ ಸಂಖ್ಯೆ ಗಾಯತ್ರೀ ಹೋಮ ಮತ್ತು ಜಪ. ಇದು ನೂತನ ಉಪಾಕರ್ಮಲ್ಲಿ ಇಪ್ಪ ವಿಧಿಗೊ. ಉಪನಯನ ಆದ ಪ್ರತಿಯೊಬ್ಬನೂ ಪ್ರತಿವರ್ಷವೂ ಉಪಾಕರ್ಮ ಮಾಡೆಕು. ಅಂಬಗ “ಸರ್ವೇಷಾಂ ಅಧ್ಯೇಷ್ಯಮಾಣಾನಾಂ ಛಂದಸಾಂ ಸವೀರ್ಯತ್ವಾಯೋಪಾಕರ್ಮಾಖ್ಯಂ ಕರ್ಮ ಕರಿಷ್ಯೇ”  ಹೇಳಿ ಸಂಕಲ್ಪ. ಮದಲೇ ಕಲ್ತದರ ವಾಪಾಸು ಅಧ್ಯಯನಮಾಡಿ ಮುಂದಾಣ ಅಧ್ಯಯನಕ್ಕೆ ಹೋಪದು. ಗೃಹಸ್ಥಂಗೂ ಉಪಾಕರ್ಮ ಇದ್ದು. ಗೃಹಸ್ಥಂಗೆ ಉಪಾಕರ್ಮದ ಒಟ್ಟಿಂಗೆ  ದೇವ-ಋಷಿ-ಪಿತೃ  ತರ್ಪಣವನ್ನೂ ಮಾಡ್ಳೆ ಇದ್ದು. ನಮ್ಮಲ್ಲಿ ಆಚರಣೆಲಿ ಇದು ಕಾಣುತ್ತಿಲ್ಲೆಯಾದರೂ ಇದೆಲ್ಲವೂ ಶಾಸ್ತ್ರ ವಿಧಿ. ನೂತನ ಮುಂಜೀ-ವಸ್ತ್ರ-ಅಜಿನ-ದಂಡ ಧಾರಣ ಪ್ರತಿವರ್ಷವೂ ಮಾಡೇಕ್ಕಾದ್ದೇ. ನಾಂದೀಯೂ ಉಪಾಕರ್ಮಹೋಮವೂ  ನೂತನ ಉಪಾಕರ್ಮಲ್ಲಿ ಮಾಂತ್ರ ಮಾಡುವದು.

ಆಚಾರ್ಯನೂ ಶಿಷ್ಯನೂ ಒಟ್ಟುಗೂಡಿ ಮಾಡುವ ಕರ್ಮ ವಿಶೇಷ ಇದು. ಉಪನಯನ ಕಾಲಲ್ಲಿ ವಟುವಿಂಗೆ ಪ್ರದಾನ ಮಾಡಿದ ಹಾಂಗೇ ಉಪಾಕರ್ಮ ಈ ಸಂದರ್ಭಲ್ಲಿಯೂ ಮತ್ತೊಂದರಿ ದೀಕ್ಷಾವಸ್ತ್ರ, ದಂಡ, ಅಜಿನ, ಮೌಂಜೀ ಸೂತ್ರ ಪ್ರದಾನ ಮಾಡೆಕ್ಕು. ನೂತನ ಯಜ್ಞೋಪವೀತ ಧಾರಣೆ ಸರ್ವ ಸಾಮಾನ್ಯ. ಇದು ವೇದಾರಂಭ ಕಾಲ. ಅಲ್ಲಿಂದ ಆರು ತಿಂಗಳು ವೇದಾಧ್ಯಯನ ಮಾಡಿ, ಮಾಘ ಮಾಸಲ್ಲಿ ‘ವೇದೋತ್ಸರ್ಗ’ (ವೇದಾಧ್ಯಯನಕ್ಕೆ ತಾತ್ಕಾಲಿಕ ವಿರಾಮ / ಬಿಡುವು / ಬದಿಗಿರುಸುವದು ಹೇಳಿ ತಾತ್ಪರ್ಯ) ಮಾಡಿಕ್ಕಿ, ತನ್ನ ವೃತ್ತಿ ಯಜನ-ಯಾಜನ-ದಾನ-ಪ್ರತಿಗ್ರಹ, ಕೃಷಿ ಇತ್ಯಾದಿ ನಿರತನಪ್ಪದು. ಉಪಾಕರ್ಮಲ್ಲಿ ಹೇಳಿದಾಂಗೆ ದೇವತಾ ಪೂಜನ, ಹವನ, ತರ್ಪಣ ಮಾಡಿ ‘ವೇದೋತ್ಸರ್ಗ’ ಮಾಡುವದು. ಈ ಕರ್ಮಕ್ಕೆ ‘ಉತ್ಸರ್ಜನ’ ಹೇಳಿ ಹೆಸರು.

ಮೇಗೆ ಹೇಳಿದ ವೆಕೇಷನ್ ಅಧ್ಯಯನಕ್ಕೆ ಬಿಡುವಿನ ಕಾಲ. ಆದರೆ ಧಾರಣಾಧ್ಯಯನ ಬ್ರಹ್ಮಯಜ್ಞ ಮಾಡಲೇ ಬೇಕು. ಅದು ನಿತ್ಯಕರ್ಮ. ಯಾಜನ-ಪ್ರತಿಗ್ರಹಾದಿ ಸಂಪಾದನೆಲಿ ನಿರತನಾಗಿಪ್ಪಗ ಅಧ್ಯಯನ ವ್ರತ, ಸತ್ಯವಚನ – ಅಪ್ರತಿಗ್ರಹ-ಪರಾನ್ನ ತ್ಯಾಗ ಇವೆಲ್ಲಾ ಪ್ರಾಸಂಗಿಕವಾಗಿ ಅನಿವಾರ್ಯತೆಂದ ಪಾಲುಸಲೆ ಎಡಿಗಾವ್ತಿಲ್ಲೆ. ಅತಥ್ಯ ಕಥನ, ಅಪ್ರತಿಗಾಹ್ಯ. ಪ್ರತಿಗ್ರಹ, ಅಭಕ್ಷ್ಯ ಭಕ್ಷಣ ಮಾಡಿಹೋವ್ತು. ಇದರಿಂದ ಅಧ್ಯಯನ ವ್ರತ ಭಂಗ ಆವ್ತು. ಅದಕ್ಕೆ ಬೇಕಾಗಿಉತ್ಸರ್ಜನೋಪಕರ್ಮ ಹೇಳಿ ಮಾಡಲಿದ್ದು. ಬ್ರಹ್ಮಚಾರಿಗೆ ಪರಾನ್ನ ಮತ್ತು ಪ್ರತಿಗ್ರಹ ಇವ್ವೆರಡೂ ನಿಷೇಧ. ಆದರೆ, ಅವ° ಕೂಡ ಗುರುಗಳ ಜೊತಗೆ ಕರ್ಮಂಗಳಲ್ಲಿ ಭಾಗವಹಿಸೆಕ್ಕಪ್ಪದಿರ್ತು. ಪ್ರಾಯೋಗಿಕ ಜ್ಞಾನ ಸಂಪಾದನಗೆ ಇದು ಅನಿವಾರ್ಯ. ಗುರು-ಶಿಷ್ಯ ಇಬ್ಬ್ರೂ ಯಾಜನ ಕರ್ಮಲ್ಲಿ ಭಾಗಿವಹಿಸೆಕ್ಕು. ಶಿಷ್ಯನ ಗುರು ಕರ್ಕೊಂಡು ಹೋಗಿ ಕರ್ಮ ಸ್ವರೂಪಂಗಳ ಪರಿಚಯ ಮಾಡುಸೆಕ್ಕು. ಶಿಷ್ಯ° ‘ಆರ್ತಿಜ್ವ ಮಾಡ್ಳಕ್ಕು. ಪ್ರತಿಗ್ರಹಾಧಿಕಾರ ಇಲ್ಲೆ. ಅದರ ಗುರುವಿಂಗೇ ಒಪ್ಪುಸೆಕ್ಕು.

ಶೀಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ ಮುಂತಾದ ವೇದಾಂಗಂಗಳ ಅಧ್ಯಯನ ಪ್ರಾರಂಭಿಸಿ, ಮೀಮಾಂಸ, ವೇದಾಂತ, ನ್ಯಾಯ, ವೈಶೇಷಿಕ, ಯೋಗ, ಮುಂತಾದ ಉಪಾಂಗಂಗಳ ಕಲ್ತು, ಆಯುರ್ವೇದ, ಧನುರ್ವೇದ, ಗಂಧರ್ವವೇದ, ಅಥರ್ವವೇದ ಎಂಬ ಉಪವೇದವ ತಿಳುದು, ಋಗ್, ಯಜು, ಸಾಮ, ಅಥರ್ವ ವೇದವೆಂಬ ನಾಲ್ಕು ವೇದಂಗಳ ಅಭ್ಯಸಿಸಿ ಸರ್ವ ವಿದ್ಯಾ ಪಾರಂಗತ ಎನಿಸಿಕೊಂಡು ಕೀರ್ತಿಯುತ° ಆಯೆಕ್ಕು. ಇದಕ್ಕೆ ಸುಮಾರು ಮುವ್ವತ್ತೊಂದು ವರ್ಷಂಗಳ ಸತತ ಪರಿಶ್ರಮದ ಅಗತ್ಯಡ. ಪ್ರಾಯೋಗಿಕವಾಗಿ ಇವಿಷ್ಟು ಸಾಧುಸಲೆ ಕೆಲವೇ ಮಂದಿಗೆ ಸಾಧ್ಯ ಎಂಬುದು ಸತ್ಯ. ಅಂತವು ಬ್ರಹ್ಮಚರ್ಯ ಪಾಲುಸಿಗೊಂಡು, ಗುರುಸೇವಾಶುಶ್ರೂಷೆ ಮೂಲಕ ನಿಗಧಿ ಗೊಳಿಸಿದ ಕ್ಲುಪ್ತ ಕಾಲಾವಧಿಲಿ ಅಧ್ಯಯನ ಮಾಡಿ ಗುರುವಿನ ಅನುಮತಿಯೊಂದಿಗೆ ಸ್ನಾತಕ (ಪದವೀಧರ) ಎಂದೆನಸಿ (ಕಲಿವಿಕೆ ಇನ್ನೂ ಕಲಿಯೇಕು ಹೇಳಿ ಇಚ್ಛೆ ಇಪ್ಪವ ಸ್ನಾತಕೋತ್ತರ ಪದವಿಗೆ ಅರ್ಜಿ ಹಾಕುತ್ತಾಂಗೆ ವೇದಾಧ್ಯಯನ ಇನ್ನೂ ಮುಂದುವರುಸಲೆ ಅಕ್ಕು) ಮುಂದಿನ ಸಂಸ್ಕಾರಕ್ಕೆ ಸಿದ್ಧನಾಗುತ್ತ°. ವೇದದ ಅಂಗವಾಗಿಪ್ಪ ಸಂಹಿತಾ, ಬ್ರಾಹ್ಮಣ ಅಧ್ಯಯನ ಆದ ಬಳಿಕ ಆರಣ್ಯಕ ಭಾಗ ಅಧ್ಯಯನ ಮಾಡುವದು. ಆವಾಗ, ಮಹಾನಾಮ್ನೀ- ಮಹಾವ್ರತ-ಉಪನಿಷತ್-ಗೋದಾನ ಎಂಬ ಸಂಸ್ಕಾರ ಆಯಾ ಭಾಗದ ಅಧ್ಯಯನ ಪ್ರಾರಂಭ ಮಾಡೆಕ್ಕಾರೆ ಮಾಡೆಕ್ಕಪ್ಪದು. ವೇದಾಧ್ಯಯನ ಸಮಯಲ್ಲಿ ಬ್ರಹ್ಮಚರ್ಯ ವ್ರತಾಚರಣೆಗೆ ಅಕಸ್ಮಾತ್ ತಿಳಿದೋ ತಿಳಿಯದ್ದೆಯೋ ಆಗಿಪ್ಪ ಲೋಪ ದೋಷಂಗೊಕ್ಕೆ ಪ್ರಾಯಶ್ಚಿತ್ತ ಮಾಡಿಗೊಂಡಿಕ್ಕಿ ವ್ರತ ಚತುಷ್ಟಯ ಹೇಳ್ವ ಕಾರ್ಯ ಮಾಡೆಕ್ಕು. ಅಗ್ನಿಕಾಂಡ, ಪ್ರಾಜಾಪತ್ಯಕಾಂಡ, ವೈಶ್ವದೇವಕಾಂಡ, ಔಪಾನಹ ಕಾಂಡ ಎಂಬುದೇ ಈ ನಾಲ್ಕು ವ್ರತಂಗೊ. ಮಹಾನಾಮ್ನೀವ್ರತ, ಮಹಾವ್ರತ, ಉಪನಿಷದ್ವ್ರತ, ಗೋದಾನವ್ರತ ಹೇಳಿಯೂ ಹೇಳ್ತವು. ಈ ವ್ರತಾಚರಣೆಲಿ ಶಿಕ್ಷಾರ್ಥಿಯು ವೇದ ಶಾಖೆಗೆ ಸಂಬಂಧಿಸಿದ ದೇವತೆಗೊಕ್ಕೆ, ಋಷಿಗೊಕ್ಕೆ ಹೋಮ ತರ್ಪಣ ಮೂಲಕ ಕೃತಜ್ಞತೆ ಹೇಳುವದು. ವೇದ ವಿದ್ಯಾ ಗುರುವಿಂಗೆ  ಗುರು ದಕ್ಷಿಣೆಯಾಗಿ ಗೋದಾನ ಅರ್ಪಿಸೆಕ್ಕು. ಇವಿಷ್ಟು ಈ ಸಂಸ್ಕಾರದ ಮುಖ್ಯ ಭಾಗ. ಮಹಾನಾಮ್ನೀ  ಹೇಳ್ವ ಸಂಸ್ಕಾರವ ಉಳಿದ ಸಂಸ್ಕಾರಂಗಳ ಹಾಂಗೇ ಶುಭ ದಿನ ಶುಭ ಲಗ್ನ ನೋಡಿ ಮಾಡುವದು.

ಕೇಶಾಂತ :

ವಿದ್ಯಾತುರಾಣಾಂ ನ ಸುಖಂ ನ ನಿದ್ರಾಹೇಳ್ವ ಉಕ್ತಿ ಗುರುಕುಲ ಶಿಕ್ಷಣ ಕ್ರಮಲ್ಲಿ ಇದ್ದ ವಿದ್ಯಾರ್ಥಿಗಳ ಸ್ಥಿತಿಯ ಸೂಚಿಸುತ್ತು. ವೇದಾಧ್ಯಯನ ಪೂರ್ಣ ಅಪ್ಪನ್ನಾರ ವಿದ್ಯಾರ್ಥಿಗೆ ಯಾವುದೇ ಲೌಕಿಕ ಸುಖವಾಗಲಿ ಪ್ರಕೃತಿ ಸಹಜ ನಿದ್ರಾ ಸುಖವಾಗಲಿ ಇರ್ತಿಲ್ಲೆ. ಶಿಕ್ಷಣಾವಧಿಲಿ ಏಕಾಗ್ರ ಲಕ್ಷ್ಯ- ಸದಾ ಅಧ್ಯಯನ. ಆದ್ದರಿಂದಲೇ ಒಂದಕ್ಷರ ಲೋಪವಿಲ್ಲದ್ದೆ, ವ್ಯತ್ಯಾಸವಿಲ್ಲದ್ದೆ ಕಂಠೋದ್ಗತ  ಅಪ್ಪಲೇ ಸಾಧ್ಯ. ಈ ರೀತಿ ವೇದಾಧ್ಯಯನಲ್ಲಿ ತಲ್ಲೀನನಾದ ವಿದ್ಯಾರ್ಥಿಗೆ ವಯೋ ಸಹಜವಾಗಿ ಅವನ ಮೋರೆ, ತಲೆಲಿ ಅನಿಯಂತ್ರಿತ ಬೆಳವ ಕೇಶ ರಾಶಿಯ ಒಪ್ಪ ಮಾಡುವ ಸಂದರ್ಭವೂ ಇಲ್ಲೆ. ನಿರ್ದಿಷ್ಟ ಅವಧಿಲಿ ವೇದ ಶಿಕ್ಷಣ ಪೂರೈಸಿ ಗುರುವಿನ ಅನುಗ್ರಹ ಪಡದ ನಂತರವೇ ತನ್ನ ಮೋರೆ, ತಲೇಲಿ ಬೆಳೆದ ಕೇಶರಾಶಿಯ ವಿಸರ್ಜಿಸುವ ಅಧಿಕಾರ. ಇದುವೇ ಕೇಶಾಂತ ಸಂಸ್ಕಾರ. ಕೇಶಾಂತ ಸಂಸ್ಕಾರಕ್ಕೂ ಒಳ್ಳೆ ದಿನ ಮುಹೂರ್ತ ನೋಡ್ಲೆ ಇದ್ದು. ಶನಿವಾರ, ಮಂಗಳವಾರ, ಅಮಾವಾಸ್ಯೆ, ಸಂಕ್ರಮಣ, ಮತ್ತು ಪರ್ವ ಕಾಲಂಗಳಲ್ಲಿ ಮಾಡ್ಳೆ ಇಲ್ಲೆ.   ಇದಾ…, ಕೇಶಾಂತ ಹೇಳಿರೆ ತಲೆ ಪೂರ್ತಿ ಕೆತ್ತಲಿಲ್ಲೆ. ಜುಟ್ಟು ಮಡುಗಿಯೇ ಕೇಶಾಂತ.  ‘ಗೋದಾನಂ ಷೋಡಶೇ ವರ್ಷೇ(ಅಶ್ವ.ಗೃ.ಸೂ)..’ ‘ಷೋಡಶವರ್ಷಸ್ಯ ಕೇಶಾಂತಃ..’ (ಪರಾ.ಗೃ.ಸೂ). ಗೋದಾನ ಮತ್ತು ಕೇಶಾಂತ ಹದಿನಾರನೇ ವಯಸ್ಸಿಲ್ಲಿ ಮಾಡೆಕ್ಕಪ್ಪದು.

ಸ್ಮಶ್ರೂಣಿ ಇಹ ಉಂಧತಿ, ಕೇಶ ಶ್ಮಶ್ರು-ಲೋಮ-ನಖಾನಿ ಉದಕ್ಸಸ್ಥಾಣಿ ಕುರು ಇತಿ ಸಂಪ್ರೇಷ್ಯತಿಕೂದಲು-ಗಡ್ಡ-ಲೋಮ-ನಖಂಗಳ ಉದಕ್ಸಂಸ್ಥವಾಗಿ, ಹೇಳಿರೆ, ದಕ್ಷಿಣ ಭಾಗಂದ ಪ್ರಾರಂಭಿಸಿ ಉತ್ತರ ಭಾಗಲ್ಲಿ ಮುಕ್ತಾಯ ಆಪ್ಪ ಹಾಂಗೆ ವಪನ ಮಾಡು ಹೇಳಿ ಬಂಡಾರಿಗೆ ಹೇಳೆಕ್ಕಡ. ಶರೀರಧರ್ಮದಂತೆ ಹದಿನಾರು ವರ್ಷ ಪ್ರಾಯಕ್ಕೆ ಗಡ್ಡ-ಮೀಸೆ-ಲೋಮ (ಕಂಕುಳ) ಬೆಳವದು. ಪ್ರಥಮ ಕೇಶ ಖಂಡನಡ ಹಾಂಗೆಯೇ ಪ್ರಥಮ ಶ್ಮಶ್ರು-ಲೋಮ-ನಖ ಖಂಡನಕ್ಕಾಗಿ ಮಾಡುವ ಈ ಸಂಸ್ಕಾರ ಚೌಲದಂತೆಯೇ. ಈ ಕ್ರಮಕ್ಕೆ ‘ಗೋಮಿಥುನಂ ದಕ್ಷಿಣಾ’ ಹೇಳಿ ಹೇಳ್ತವಡ. ‘ಗೋ’  ಹೇಳಿರೆ ಲೋಮ,- ಮೈಕೂದಲು ಹೇಳಿ ಅರ್ಥಡ. ಆದ್ದರಿಂದ ಇದಕ್ಕೆ ಗೋದಾನ ವ್ರತ ಹೇಳಿ ಹೆಸರು ಬಂದದಡ.

ಇದಾ.., ಮಾಣಿ ಕಲಿತ್ತರೆ ಸುಮಾರು ವರ್ಷ ಇದ್ದು. ಒಂದು ಮಟ್ಟು ಕಲ್ತದು ಸಾಕು ಹೇಳಿ ಆದರೆ ಸ್ನಾತಕ (ಡಿಗ್ರಿ) ಪದವಿ ವರಗೆ ಕಲ್ತು ನಿಲ್ಸಿ ಸಮಾವರ್ತನೆ ಮಾಡಿ ಮುಂದಾಣ ಯೋಚನೆ ಮಾಡ್ಳಕ್ಕು. ಅಲ್ಲಾ, ಇನ್ನೂ ಕಲಿಯೇಕು ಹೇಳಿ ಇದ್ದರೆ ಸ್ನಾತಕೋತ್ತರ ಪದವಿ ಮೊದಲ್ಗೊಂಡು ಇದ್ದು. ಯಾವುದಕ್ಕು ನೋಡಿ ಆಲೋಚನೆ ಮಾಡಿ ಹೇಳಿ. ಬಪ್ಪವಾರ ಮಾತಾಡುವೋ ಆಗದೋ? ಏ°.

|| ಹರೇ ರಾಮ ||

(ಮುಂದುವರಿತ್ತು)

ಕಳುದ ವಾರ :  ಭಾಗ 09 : ಉಪನಯನ  :

http://oppanna.com/lekhana/samskara-lekhana/bhaga-09-upanayana

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಸುಭಗ

  ಭಾವ.. ನಿಂಗಳ ಪ್ರಯತ್ನ, ಸಾಧನೆ ಅದ್ಭುತ!
  ಸಂಸ್ಕಾರಂಗಳ ಕುರಿತಾಗಿ ನಿಂಗೊ ಸಂಗ್ರಹಿಸಿ ಇಲ್ಲಿ ಪ್ರಕಾಶಿಸಿದ ಲೇಖನ ಸರಣಿಯ ಎಲ್ಲ ಭಾಗಂಗಳ ತಡವಾಗಿಯಾದರೂ ಈಗ ಪೂರ್ತಿ ಓದಿದೆ.
  ಶಾಸ್ತ್ರೋಕ್ತವಾದ ಈ ಎಲ್ಲ ಆಚರಣೆಗಳ ಇಂದ್ರಾಣ ಕಾಲಲ್ಲಿ ಮಾಡಿಯೊಂಬಲೆ ಕಷ್ಟ ಹೇಳಿ ಕಾಣುಗು. ಆದರೂ ಈ ಎಲ್ಲ ವಿಚಾರಂಗಳ ಮಹತ್ವವ ಪ್ರತಿಯೊಬ್ಬನೂ ಮನನ ಮಾಡಿಯೊಳ್ಳೆಕ್ಕಾದ್ದು ಅತಿ ಅಗತ್ಯ.

  ಸಂಸ್ಕಾರಂಗಳ ಪರಿಪೂರ್ಣ ಮಾಹಿತಿ ಕೊಡ್ತಾ ಇಪ್ಪ ಚೆನ್ನೈಭಾವಂಗೆ ಹೃತ್ಪೂರ್ವಕ ಧನ್ಯವಾದಂಗೊ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಎನ್ನ ಬೈಲಿಂಗೆ ಎಳದು ಬಿಟ್ಟಿಕ್ಕಿ ನಿಂಗೊ ಕಾಣೆ ಆಗಿ ಬಿಟ್ಟಿ ಕೆಲವು ಸಮಯ. ದಿಡೀರ್ನೆ ಇಂದಿಲ್ಲಿ – ‘ಎಲ್ಲ ಭಾಗಂಗಳ ತಡವಾಗಿಯಾದರೂ ಈಗ ಪೂರ್ತಿ ಓದಿದೆ’ ಹೇಳಿ ನಿಂಗಳ ಪ್ರೋತ್ಸಾಹದ ಒಪ್ಪ ಕಂಡು ಹೃದಯ ತುಂಬಿತ್ತು ಭಾವ. ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಭಾವ,
  ಭಾಗ ೧೦ ಕ್ಕೆ ಯೆತ್ತಿಯಪ್ಪಗ ನಿಂಗಳ ಬರವಣಿಗೆಲಿ ಹಿಡಿತ್ತ ಸಿಕ್ಕಿದ ಅನುಭವವೂ ಆವುತ್ತು, ಓದಿಗೊಂಡು ಹೋಪಗ.
  ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ – ಈ ಮೂರೂ ವಿಷಯಂಗಳ ಸಮಗ್ರ ಮಾಹಿತಿ ಸಿಕ್ಕಿತ್ತು.
  ಧನ್ಯವಾದ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗೊ ಎಲ್ಲೋರ ಪ್ರೋತ್ಸಾವೇ ಕಾರಣ. ಧನ್ಯವಾದ ಕು.ಮಾವಂಗೆ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಎಷ್ಟೊಂದು ವಿವರಂಗೊ. ಇದರಲ್ಲಿಪ್ಪ ಎಷ್ಟೋ ವಿಶಯಂಗೊ ಕೇಳಿ ಕೂಡಾ ಗೊಂತಿಲ್ಲೆ.
  ಇದರ ಸಂಗ್ರಹ ಮಾಡಿ ಒದಗಿಸಿ ಕೊಡುವ ಭಾವಯ್ಯಂಗೆ ಧನ್ಯವಾದಂಗೊ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪಚ್ಚಿಯ ಪ್ರೋತ್ಸಾಹದ ಒಪ್ಪಕ್ಕೆ ಸದಾ ಋಣಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣವೇಣಿಯಕ್ಕ°ದೊಡ್ಡಭಾವದೇವಸ್ಯ ಮಾಣಿವೆಂಕಟ್ ಕೋಟೂರುನೀರ್ಕಜೆ ಮಹೇಶವೇಣೂರಣ್ಣಕಾವಿನಮೂಲೆ ಮಾಣಿನೆಗೆಗಾರ°ಶೀಲಾಲಕ್ಷ್ಮೀ ಕಾಸರಗೋಡುಶರ್ಮಪ್ಪಚ್ಚಿರಾಜಣ್ಣಶಾಂತತ್ತೆಪುಣಚ ಡಾಕ್ಟ್ರುಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಡೈಮಂಡು ಭಾವಪ್ರಕಾಶಪ್ಪಚ್ಚಿಕೇಜಿಮಾವ°ಮಾಲಕ್ಕ°ಪವನಜಮಾವಬಟ್ಟಮಾವ°ಚುಬ್ಬಣ್ಣಮುಳಿಯ ಭಾವಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ