ಭಾಗ 11: ಸಮಾವರ್ತನ : ಹದಿನಾರು ಸಂಸ್ಕಾರಂಗೊ

ಸಮಾವರ್ತನ :

ಗುರುಕುಲಲ್ಲಿ ಇದ್ದು ಬ್ರಹ್ಮಚರ್ಯ ಪಾಲಿಸಿಗೊಂಡು ವೇದಾಧ್ಯಯನ ಮಾಡಿಗೊಂದಿದ್ದವ° ಮುಂದೆ ಕೇಶಾಂತ ಸಂಸ್ಕಾರ ಆಗಿ ಸ್ನಾತಕ ನಾಗಿ ಮುಂದೆ ಗೃಹಸ್ಥ ಜೀವನ ದಾರಿ ಹುಡುಕಲೆ ಗುರುವಿನ ಅಪ್ಪಣೆ, ಆಶೀರ್ವಾದವ ಮೊದಲು ಪಡಕ್ಕೊಳ್ಳೆಕ್ಕು. ಬ್ರಹ್ಮಚರ್ಯ ವ್ರತವ ತೆಕ್ಕೊಂಡ ಮಾಣಿ ವಿದ್ಯಾಭ್ಯಾಸ ಮುಗಿಸಿ ಗುರು ನಿವಾಸಂದ ತನ್ನ ಮನಗೆ ಹಿಂತಿರುಗಿ ಬಪ್ಪದರ ಸಮಾವರ್ತನ ಹೇಳಿ ಹೇಳ್ವದು. (ಪದವಿ ವರಂಗೆ ಕಲ್ತು ಪರೀಕ್ಷೆ ಮುಗಿಸಿ ಪಲಿತಾಂಶ ಪ್ರಕಟ ಆದ ಬಳಿಕ ಚಂದಕ್ಕೆ ಕ್ರಾಪ್ ಮಾಡಿಗೊಂಡು, ಟಿಪ್ ಟಾಪ್ ಆಗಿ, ಕೋಟು ಟೈ ಸುರ್ಕೊಂಡು ಪದವಿ ಸರ್ಟಿಪಿಕೆಟ್ಟು ತೆಕ್ಕೊಂಬಲೆ ಹೋಪದು ನೆಂಪಾವ್ತೋ – ಅದು ಇದು). ಕೇಶಾಂತ ಸಂಸ್ಕಾರ ಪಡೆದು ಸ್ನಾತಕನಾಯೆಕ್ಕಾರೆ ಮತ್ತಾಣ ಸಂಸ್ಕಾರವೇ ‘ಸಮಾವರ್ತನ’. ಅರ್ಥಾತ್ ಬ್ರಹ್ಮಚರ್ಯ ವ್ರತ ವಿಸರ್ಜಿಸಿ ಗುರುಗಳ ಆದೇಶ ಪ್ರಕಾರ ಗೃಹಸ್ಥನಪ್ಪಲೆ ಯೋಗ್ಯತೆ ಪಡಕ್ಕೊಂಬದು.  ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ಸನಾತನ ಜೀವನ ಪದ್ಧತಿಲಿ ಅತಿ ಹೊಣೆಗಾರಿಗೆ ಗೃಹಸ್ಥಾಶ್ರಮ. ಉಳಿದ ಮೂರು ಆಶ್ರಮಂಗಳ ಅತಿ ಉತ್ತಮ ರೀತಿಲಿ ಕಾಪಾಡುವ ಜವಾಬ್ಧಾರಿ ಗೃಹಸ್ಥದ್ದು. ಇಂತಾ ಗೃಹಸ್ಥಾಶ್ರಮ ಬಯಸುವವ ಮದಾಲು ಮಾಡೆಕ್ಕಪ್ಪದು ಸಮಾವರ್ತನ ಸಂಸ್ಕಾರ ಕ್ರಿಯೆ. ಪುರುಷಾರ್ಥ ಸಾಧನಗೆ, ಸಂತಾನ ಪ್ರಾಪ್ತಿ ಅನಿವಾರ್ಯ. ಅದಕ್ಕೆ ಗೃಹಸ್ಥಾಶ್ರಮ ಪ್ರವೇಶಕ್ಕೆ ಮಾನಸಿಕವಾಗ ಸಿದ್ಧನಪ್ಪ ಸಂಸ್ಕಾರ ಸಮಾವರ್ತನ.

ಬ್ರಹ್ಮಚರ್ಯ ವೃತಾನುಷ್ಠಾನಲ್ಲಿ ಆಗಿಪ್ಪ ಲೋಪ ದೋಷ ಪರಿಹಾರಕ್ಕಾಗಿ ಪ್ರಾಯಶ್ಚಿತ್ತ ಮಾಡಿಗೊಂಡು ವೇದಾಧ್ಯಯನ ಮಾಡಿ ಸ್ನಾನ ಮಾಡುತ್ತೆ” ಹೇಳಿ ಸಂಕಲ್ಪ. ಆಜ್ಯ ಹೋಮ, ಸಮಿಧಾಧಾನ, ಕೇಶ-ನಖ-ಲೋಮಾದಿ ವಪನ ಕರ್ಮ ಮಾಡಿ ಶುದ್ಧ ಸ್ನಾನ. ನಂತ್ರ ನೂತನ ವಸ್ತ್ರ, ಗಂಧ, ಅಲಂಕಾರ, ಉತ್ತರೀಯ, ಮುಂಡಾಸು, ಯಜ್ಞೋಪವೀತ, ಆಭರಣ, ಹೂಮಾಲೆ, ಕನ್ನಡಿ, ಅಂಜನ(ಕಾಡಿಗೆ), ಕುಂಡಲ ಧಾರಣೆ, ಪಾದರಕ್ಷೆ, ಛತ್ರಿ, ದಂಡ ಮಂತ್ರ ಪೂರ್ವಕ ಧಾರಣೆ ಮಾಡುವದು. ಇದು ಸಮಾವರ್ತನ ಕ್ರಮ. ಇಲ್ಲಿಂದ ಅವನ ‘ಸ್ನಾತಕ’ ಹೇಳಿ ಹೇಳುವದು. ಇತರ ಸಂಸ್ಕಾರಂಗಳ ಹಾಂಗೇ ಸಮಾವರ್ತನ ವಿಧಿ ಸರಿಯಾದ ದಿನ ಮುಹೂರ್ತ ನೋಡಿ ಮಾಡುವದು. ಪ್ರಾಯೋಗಿಕವಾಗಿ ನಮ್ಮಲ್ಲಿ ವಿವಾಹದ ಮದಲು ಮಾಡುತ್ತು. ಸರ್ವಾಲಂಕಾರೈಃ ಭೂಷಿತಃ ಸನ್ ವಿದುಶಾಂ ಸಭಾಂ ಪ್ರವೇಷ್ಟವ್ಯ’- ಮೇಗೆ ಹೇಳಿದ ಆಯ್ತ, ಅಲಂಕಾರ, ವೇಷ-ಭೂಷಣ ಮಾಡಿಗೊಂಡು ವಿದ್ವಾಂಸರ ಸಭಗೆ ಹೋಪದು. ಮದಲಿಂಗೆ ಕಾಶಿನಗರ ವಿದ್ವಾಂಸರ ನೆಲೆ ಹೇಳಿ ಪ್ರಸಿದ್ಧಿ. ಹಾಂಗಾಗಿ ಕಾಶಿಗೆ ಹೆರಡುವದು. ಆದ್ದರಿಂದಲೇ ಈ ಕ್ರಿಯಗೆ ‘ಕಾಶೀಯಾತ್ರೆ’ ಹೇಳಿಯೂ ಹೇಳುತ್ತವು. (ಅಲ್ಲದ್ದೆ, ಕಾಶೀಯಾತ್ರೆ ಹೇಳಿರೆ ಮದುವಗೆ ಕೂಸು ಸಿಕ್ಕಿದ್ದಿಲ್ಲೇ ಹೇಳಿ ಎಲ್ಲಾ ಬಿಟ್ಟು ವೈರಾಗ್ಯಲ್ಲಿ ಕಾಶಿಗೆ ಹೋಪದು ಹೇಳಿ ಸಮಾವರ್ತನೆ ಹೇಳಿ ಕೆಲವರು ಹೇಳುವದು ತಪ್ಪು ಕಲ್ಪನೆ). ಅಲ್ಲಿ ‘ಕಾಶಿ’ಲಿ ವಿದ್ವಾಂಸರು ಅವನ ಪ್ರತಿಭೆಯ ಪರೀಕ್ಷಿಸಿ ಸಮಾಜಕ್ಕೆ ಯೋಗ್ಯ ವ್ಯಕ್ತಿ ಹೇಳಿ ಗುರುತಿಸಿ ಗೃಹಸ್ಥಾಶ್ರಮಕ್ಕೆ ಅನುಮತಿ / ಅನುಮೋದನೆ ನೀಡುತ್ತದು. ಗೃಹಸ್ಥಾಶ್ರಮಕ್ಕೆ ಯೋಗ್ಯನಲ್ಲ ಹೇಳಿ ಅಲ್ಲಿ ಕಂಡತ್ತು ಕಂಡ್ರೆ ಬ್ರಹ್ಮಚರ್ಯಾಶ್ರಮಲ್ಲೇ ಮುಂದುವರಿ ಹೇಳಿ ಆದೇಶ ಸಿಕ್ಕುಗು ಅಲ್ಲಿಂದ. ಅವನ ಮತ್ತೆ ‘ನೈಷ್ಠಿಕ ಬ್ರಹ್ಮಚಾರಿ’ ಹೇಳಿ ಗುರುತುಸುವದು.

ಆರಿಂಗೆ ಗೃಹಸ್ಥಾಶ್ರಮ ಪ್ರವೇಶಿಸಲೆ ಮನಸ್ಸೇ ಇಲ್ಲ್ಯೋ (ವಿರಕ್ತ), ಯಾವನು ಗೂನು ಶರೀರ, ಕುಳ್ಳ°, ಕುರುಡ, ನಪುಂಸಕ, ಸಮಾಜ ಹಿತ ಬಯಸದ್ದವ°, ನಿವಾರಣೆ ಆಗದ್ದ ರೋಗಗ್ರಸ್ತ ಇತ್ಯಾದಿ ವ್ಯಕ್ತಿಗೊ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿಯೇಕ್ಕು ಹೇಳಿ ಶಾಸ್ತ್ರಡ. ಇಂತವಕ್ಕೆ ಗೃಹಸ್ಥಾಶ್ರಮ ಸೇರುಲೆ ಅನುಮತಿ ಇಲ್ಲೆ. ಅವ್ವು ನೈಷ್ಠಿಕ ಬ್ರಹ್ಮಚಾರಿಗಳಾಗಿ ಮುಂದೆ ಗುರುಕುಲಲ್ಲಿಯೇ ನೆಲಸುವದು.

ಸಮಾವರ್ತನ ಆದಮತ್ತೆ ಮಾಣಿ ಬ್ರಹ್ಮಚರ್ಯಾಶ್ರಮಂದ ನಿವೃತ್ತನಾವುತ್ತ°. ಆದ್ರೆ,  ಗೃಹಸ್ಥಾಶ್ರಮ ಪ್ರವೇಶ ಆಗಿರ್ತಿಲ್ಲೆ. ಈ ಸ್ಥಿತಿಗೆ ‘ಸ್ನಾತಕ’ ಹೇಳಿ ಹೆಸರು.  ವಿದ್ಯಾಧ್ಯಯನ ಮುಗಿಸಿ (ಸಮಾವರ್ತನ) ಅಲ್ಲಿಂದ  ವಿವಾಹ ಆವ್ತ  ವರೇಂಗೆ  ಅವನ ‘ಸ್ನಾತಕ’ ಹೇಳಿ ಹೇಳ್ವದು.

‘ಸ್ನಾತಕ’ – ಇದರಲ್ಲಿ ಮೂರು ಬಗೆಯಡ.

1. ವೇದಾಧ್ಯಯನ ಮಾಡಿ ಮಹಾನಾಮ್ನೀ ಮಹಾವ್ರತ ಮುಂತಾದ ‘ವ್ರತಚತುಷ್ಟಯ’ (‘ಮಹಾನಾಮ್ನೀ- ಮಹಾವ್ರತ-ಉಪನಿಷತ್-ಗೋದಾನ’ – ಕಳುದವಾರದ ಶುದ್ದಿಲಿ ಇದ್ದು) ವೇದವ್ರತ ಸಂಸ್ಕಾರವ ಮಾಡಿಗೊಳ್ಳದ್ದೆ ನಿವೃತ್ತನಾವ್ತವ° – ‘ವಿದ್ಯಾಸ್ನಾತಕ’.,
2. ವೇದವ್ರತಚಟುಷ್ಟಯ ಮಾಡಿ ಪ್ರತಿಯೊಂದರಲ್ಲೂ ಸ್ವಲ್ಪ ಸ್ವಲ್ಪ ಭಾಗವ ಅಧ್ಯಯನ ಮಾಡಿ, ಸಂಪೂರ್ಣ ವೇದಾಧ್ಯಯನ ಮಾಡದೇ ನಿವೃತ್ತ ಆವ್ತವ° –  ‘ವ್ರತ ಸ್ನಾತಕ‘., 
3.
ವೇದಾಧ್ಯಯನ ಮತ್ತು ಅದಕ್ಕೆ ಸಂಬಂಧೀ ಎಲ್ಲಾ ಸಂಸ್ಕಾರಂಗಳ ಮುಗುಸಿ ಹೆರಬತ್ತವ° – ‘ವಿದ್ಯಾವ್ರತಸ್ನಾತಕ’.

ಇನ್ನು ಮದುವೆ.

ಇದಾ.., ನಮ್ಮ ಮಾಣಿ ವಿದ್ಯಾ ವಿನಯ ಸಂಪನ್ನ°. ಒಳ್ಳೆ ಪರ್ಸನಾಲಿಟಿ. ಏನೂ ತೊಂದರೆ ಆಗ. ವಿದ್ಯಾವಂತ ಇವ°, ತನ್ನ ವಿದ್ಯಾ ಪ್ರೌಢಿಮೆ ಪ್ರದರ್ಶನಕ್ಕೆ ಕಾಶಿಗೆ ಹೆರಡುತ್ತಡ!. ಎಲ್ಯಾರು ಕೂಸು ಇದ್ದೋ? ಇದ್ದರೆ ನೋಡಿ ಆಲೋಚನೆ ಮಾಡಿ ಹೇಳಿ. ಬಪ್ಪವಾರ ಮಾತಾಡುವೋ° ಆಗದೋ? ಏ°.

|| ಹರೇ ರಾಮ ||

(ಮುಂದುವರಿತ್ತು)

ಕಳುದ ವಾರ – ಭಾಗ 10 : ವೇದಾಧ್ಯಯನ, ಮಹಾನಾಮ್ನೀ ವ್ರತ, ಕೇಶಾಂತ –

http://oppanna.com/lekhana/samskara-lekhana/bhaga-10-vedadhyayana-mahanamnivrata-keshantha

ಚೆನ್ನೈ ಬಾವ°

   

You may also like...

10 Responses

 1. skgkbhat says:

  ಕಾಶಿ-ಈ ಕ್ಷೇತ್ರದ ಮಹತ್ವವನ್ನೂ ಬರೆದ್ದು ಸರಿ ಆತು.
  ಮಾಣಿ ಕಾಶಿಗೆ ಹೆರಟ-ಸೋದರಮಾವ ಬರಲಿ,ತಡವಲೆ.
  ಮುಂದಿನ ಕಂತು ನಿರೀಕ್ಷಿಸುತ್ತೆ.

  • ಚೆನ್ನೈ ಭಾವ says:

   ಪ್ರೀತಿಯ ಒಪ್ಪಕ್ಕೆ ಧನ್ಯವಾದ ಗೋಪಾಲಣ್ಣಂಗೆ.

 2. jayalakshmi kukkila says:

  ಕಾಶೀಯಾತ್ರೆ ಹೇಳಿರೆ ಮದುವಗೆ ಕೂಸು ಸಿಕ್ಕಿದ್ದಿಲ್ಲೇ ಹೇಳಿ ವೈರಾಗ್ಯಲ್ಲಿ ಕಾಶಿಗೆ ಹೋಪದು ಹೇಳಿ ಸಮಾವರ್ತನೆ ಹೇಳುವಂತ ಕಲ್ಪನೆಯೇ ಇತ್ತು. ಅಲ್ಲಿ ‘ಕಾಶಿ’ಲಿ ವಿದ್ವಾಂಸರು ಅವನ ಪ್ರತಿಭೆಯ ಪರೀಕ್ಷಿಸಿ ಸಮಾಜಕ್ಕೆ ಯೋಗ್ಯ ವ್ಯಕ್ತಿ ಹೇಳಿ ಗುರುತಿಸಿ ಗೃಹಸ್ಥಾಶ್ರಮಕ್ಕೆ ಅನುಮತಿ ನೀಡುತ್ತದು, ಗೃಹಸ್ಥಾಶ್ರಮಕ್ಕೆ ಯೋಗ್ಯನಲ್ಲ ಹೇಳಿ ಅಲ್ಲಿ ಕಂಡತ್ತು ಕಂಡ್ರೆ ಬ್ರಹ್ಮಚರ್ಯಾಶ್ರಮಲ್ಲೇ ಮುಂದುವರಿಯೆಕ್ಕು ಹೇಳ್ತ ವಿಶಯ ಇದುವರೆಗೆ ಕೇಳಿದ್ದಿಲ್ಲೆ. ತುಂಬಾ ಒೞೇ ಮಾಹಿತಿ. ಎಲ್ಯಾರು ಕೂಸು ಇದ್ದೋ? ಕೇಳಿದ್ದವು ಚನ್ನೈ ಮಾವ. ಕೂಸಿನ ನೋಡುವಂದ ಮೊದಲೇ ಕೂಸಿನ ಕಂಡಿಶನ್ ಗಳ ಕೇಳಿಗೊಂಬದು ಒೞೆದು. ಕೆಲವು ಕೂಸುಗಳ ಕಂಡಿಶನ್ ಗ ಹೇಂಗಿರ್ತು ಹೇಳುವಂತಾದ್ದು ನಾವು ಕಾಣ್ತಾ ಇದ್ದು. ಇದಕ್ಕೆ ಸಂಬಂಧಪಟ್ಟ ಹಾಂಗೆ ಒಂದು ಹವ್ಯಕ ಹಾಡು ಇದ್ದು. ganesh desai-havyaka song ಹೇಳಿ google ಲಿ ಹುಡ್ಕಿರೆ “ಅಪ್ಪಯ್ಯ ಯಂಗೆ ಬೇಕು” ಹೇಳ್ತ ಜನಪದ ಶೈಲಿಯ ಹಾಡು ಸಿಕ್ಕುತ್ತು. ಕೇಳುವಾಂಗಿದ್ದು. ತುಂಬಾ ಲಾಯಿಕಿದ್ದು. ಇದು ನಮ್ಮ ಭಾರೀ ಆಲೋಚನೆಗೆ ನೂಕುತ್ತು. ವಿದ್ಯಾ ವಿನಯ ಸಂಪನ್ನ°. ಒಳ್ಳೆ ಪರ್ಸನಾಲಿಟಿ ಇಪ್ಪ ಮಾಣಿಗೆ ಯೋಗ್ಯ ಕೂಸು ಸಿಕ್ಕಲಿ ಹೇಳಿ ಹಾರೈಸುತ್ತಾ ಮುಂದಿನ ಕಂತಿನ ನಿರೀಕ್ಷೆಲಿ – ಜಯತ್ತೆ

  • ತೆಕ್ಕುಂಜ ಕುಮಾರ ಮಾವ° says:

   ‘ಅಪ್ಪಯ್ಯ ಯಂಗೆ ಬೇಕು’ – ಇದರ ಮಾಹಿತಿ ಕೊಟ್ಟದಕ್ಕೆ ಅಕ್ಕಂಗೆ ಧನ್ಯವಾದಂಗೊ.

  • ಚೆನ್ನೈ ಭಾವ says:

   ಅತ್ತೆಯ ಒಪ್ಪ ಒಳ್ಳೆ ಲಾಯಕ ಆಯ್ದು. “ಅಪ್ಪಯ್ಯ ಯಂಗೆ ಬೇಕು” ಪದ್ಯ ಭಾರೀ ಲಾಯಕ ಆಯ್ದು. ತಮಾಷೆ ಹೇಳಿ ಕಾಣುತ್ತಾದರೂ ಸಮಾಜದ ನೋವು ಅದರಲ್ಲಿದ್ದು. ಒಪ್ಪಕ್ಕೆ ಧನ್ಯವಾದ.

  • ಗಣೇಶ ಪೆರ್ವ says:

   ಚೆನ್ನೈ ಭಾವನ ಲೇಖನ ಯಾವತ್ತಿನ ಹಾ೦ಗೆ ಮೌಲ್ಯಯುತವಾಗಿದ್ದು, ‘ಅಪ್ಪಯ್ಯ ಯ೦ಗೆ ಬೇಕು’ ಪಷ್ಟುಕ್ಲಾಸಾಗಿದ್ದು.

 3. ತೆಕ್ಕುಂಜ ಕುಮಾರ ಮಾವ° says:

  (ಅಲ್ಲದ್ದೆ, ಕಾಶೀಯಾತ್ರೆ ಹೇಳಿರೆ ಮದುವಗೆ ಕೂಸು ಸಿಕ್ಕಿದ್ದಿಲ್ಲೇ ಹೇಳಿ ಎಲ್ಲಾ ಬಿಟ್ಟು ವೈರಾಗ್ಯಲ್ಲಿ ಕಾಶಿಗೆ ಹೋಪದು ಹೇಳಿ ಸಮಾವರ್ತನೆ ಹೇಳಿ ಕೆಲವರು ಹೇಳುವದು ತಪ್ಪು ಕಲ್ಪನೆ).
  ಈ ತಪ್ಪು ಕಲ್ಪನೆಯನ್ನೆ ಇಷ್ಟು ಸಮಯ ಸರಿ ಹೇಳಿ ತಿಳ್ಕೊಂಡಿತ್ತು. ನಿಂಗೊ ವಿವರಿಸಿದ ಮೇಲೆ ವಿಷಯ ಅಪ್ಪು ಹೇಳಿ ಕಂಡತ್ತು, ಸರಿಯಾದ ಆಲೋಚನೆ ಕೂಡ.
  ಆದರೂ, ಕಾಶಿಯತ್ರೆ ಹೆರಡುವಗ ಸೋದರಮಾವ ಬಂದು ತಡವದು ಇದ್ದನ್ನೆ, ಅದರ ಬಗ್ಗೆ ವಿಷ್ಲೇಶಣೆ ಕೊಡ್ತಿರೋ ?

  • ಚೆನ್ನೈ ಭಾವ says:

   ಧನ್ಯವಾದ ಮಾವ°
   ಸೋದರ ಮಾವ° ಬಪ್ಪ ವಾರ ಬತ್ತ° ನೋಡಿ.!

   • ಗಣೇಶ ಪೆರ್ವ says:

    ಅಪ್ಪೊ ಚೆನ್ನೈ ಭಾವಾ.. (ಸೋದರ ಮಾವ° ಬಪ್ಪ ವಾರ ಬತ್ತ° ನೋಡಿ.!…) ಒ೦ದುವಾರ ಅಪ್ಪಗ ಮಾಣಿ ಕಾಶಿಗೆ ಎತ್ತಿ ಅಕ್ಕನ್ನೆ!!! 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *