ಭಾಗ 06 : ಜಾತಕರ್ಮ: ಹದಿನಾರು ಸಂಸ್ಕಾರಂಗೊ –

October 6, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಸಗೆಲಿ ಮದುವೆ, ಸಟ್ಟುಮುಡಿ, ಉಪನಯನ, ಮನೆ ಒಕ್ಕಲು, ಗ್ರಾಶಾಂತಿ ಹೇಳಿ ಒಂದಿನವೂ ಪುರುಸೊತ್ತಿರ್ತಿಲ್ಲೆ. ಪಿತೃ ಪಕ್ಷವೂ ಕಳುದತ್ತು. ನವರಾತ್ರಿಯೂ ಮುಗುತ್ತು. ಇನ್ನು ದೀಪಾವಳಿವರೆಂಗೆ ಕಾಯೆಕ್ಕಷ್ಟೆಯೋ.  ಈಗ ರಜಾ ಬಿಡುವು ಇಪ್ಪಗ ಛೆ.! ಒಂದು ಪಾಚವೂ ಇಲ್ಲೆನ್ನೇ ಹೇಳಿ ಉದಾಸನವೂ ಅವ್ತಪ್ಪೋ. ಇದಾ ಬನ್ನಿ, ಒಂದು ಜಾತ ಕರ್ಮ ಇದ್ದಿದಾ. ಎಂತರ ಹೇದು ನೋಡ್ವೋ.

ಜಾತಕರ್ಮ (ಜನ್ಮವಿಧಿ) : ಗರ್ಭಾಶಯಲ್ಲಿಪ್ಪಗ ಗರ್ಭಾಶಯದಲ್ಲಿನ ನೀರು ಬಾಯಿಯ ಮೂಲಕ ಗರ್ಭಸ್ಥ ಶಿಶುವಿನ ಹೊಟ್ಟಗೆ ಹೋವುತ್ತು. ವೈದಿಕವಾಗಿ ಇದು ಅಭಕ್ಷ್ಯ. ಇದು ಉದಕ ಪ್ರಾಶನಾದಿ ದೋಷ ಹೇಳಿ ಹೇಳ್ತವು. ಈ ದೋಷ ನಿವಾರಣೆ ಆಯೆಕ್ಕು. ಪುತ್ರನ ಮುಖವ ನೋಡುವುದರಿಂದ ಅಪ್ಪ° ಪಿತೃ ಋಣ೦ದ ಮುಕ್ತನಾಯೆಕು ಹೇಳ್ವದು ಜಾತಕರ್ಮದ ಉದ್ದೇಶ. ಪುರೋಹಿತರ ಮೂಲಕ ಪಂಚಕವ್ಯ ಮಾಡಿಸಿ ಮನೆ ಒಳ ಹೆರ ಪರಿಸರ ತಳುದು, ಮನೆಮಂದಿಯೂ ತೆಕ್ಕೊಂಡು ಜನನ ಅಶೌಚ  ಶುದ್ಧಿಮಾಡಿಗೊಂಬದು ಮದಾಲು. ನಂತರ ಗಣಪತಿ ಪೂಜೆ ಸಹಿತ ಪುರೋಹಿತರಿದ್ದು ಪುಣ್ಯಾಹ ವಾಚನ.

ಮತ್ತೆ, ‘ಹೇ ಪ್ರಿಯ ಪುತ್ರನೇ, ನಿನಗೆ ಜೇನುತುಪ್ಪ ಮೊದಲು ಕುಡುಶುತ್ತೆ. ವಿಶ್ವೋತ್ಪಾದಕ ಶ್ರೀ ಪರಮೇಶ್ವರನ ದಯೆಂದ ನಿನಗೆ ಜ್ಞಾನ ಧನ ಧಾನ್ಯ ಸಮೃದ್ಧಿ ದೊರಕಲಿ. ಪರಮೇಶ್ವರನು ನಿನ್ನ ಸದಾ ರಕ್ಷಣೆ ಮಾಡಲಿ. ನಿನಗೆ ನೂರು ವರ್ಷಗಳಷ್ಟು ಆಯುಷ್ಯ ದಯಪಾಲುಸಲಿ.’ ಎಂದು ಮಗುವಿಂಗೆ ಚಿನ್ನಲ್ಲಿ ಜೇನು ತುಪ್ಪ ಪ್ರಾಶನ ಮಾಡುಸುವದು. (ಬರೇ ಚೀಪೆ ನಕ್ಕುಸುವದು ಹೇಳಿ ಹಲವರು ಭಾವಿಸಿಗೊಂಡಿದ್ದವು).  ಮಧು- ಸರ್ಪಿ- ಹಿರಣ್ಯ ಚೂರ್ಣ ಪ್ರಾಶನಂದ ಪುರುಷ ರೇತಸ್ಸಿನ ವೃದ್ಧಿ ಮತ್ತು ಗರ್ಭಾಂಬುಪಾನ ಮಾಡಿದ ದೋಷ ನಿವಾರಣೆ ಆವ್ತು ಮತ್ತು ತನು ಪವಿತ್ರ ಆವ್ತು ಹೇಳಿ ಶಾಸ್ತ್ರ. ಮಗುವಿಲ್ಲಿ ಬಲ-ಆರೋಗ್ಯ-ತೇಜ ಮುಂತಾದ ಪುಷ್ಟಿಕರ ಗುಣಂಗೊ ಹೆಚ್ಚುತ್ತು.

ಬಳಿಕ ಚಿನ್ನವ ಬಾಲಕನ ಬಲ ಕೆಮಿಲಿ ಇರಿಸಿ ಅಪ್ಪ ತನ್ನ ಮುಖವ ಮಾಣಿಯ ಮುಖ ಹತ್ರೆ ತಂದು (ಪ್ರೀತಿ ಹೆಮ್ಮೆ ಸಾರ್ಥಕತೆ) ‘ಓಂ ಮೇಧಾತೇ ದೇವಃ’ ಹೇಳೆಕ್ಕು.   ‘ಓ ಪ್ರಿಯ ಕುಮಾರನೇ, ಪರಮೇಶ್ವರನು ನಿನಗೆ ವೇದಾಭ್ಯಾಸಕ್ಕಾಗಿ ತೀಕ್ಷ್ಣ ಸದ್ಬುದ್ಧಿಯ ಕೊಡಲಿ ಅಶ್ವಿನೀ ದೇವರು ವರ್ಚಸ್ಸು ಬುದ್ದಿ ಶಕ್ತಿಯ ನೀಡಲಿ’ ಹೇಳಿ  ಹೇಳಿಗೊಂಡು ಇದೇ ರೀತಿ ಎಡದ ಕೆಮಿಲಿಯೂ. ಬಂಗಾರಲ್ಲಿ ಸಾತ್ವಿಕ ಲಹರಿಯ ಗ್ರಹಿಸಿ ಪ್ರಕ್ಷೇಪಿಸುವ ಕ್ಷಮತೆ ಇತರ ಧಾತುಗಳಿಂದ ಹೆಚ್ಚಿಗೆ ಇದ್ದಡ. ನವಜಾತ ಶಿಶುವಿಂಗೆ ಬಾಹ್ಯ ರಸ ಶಬ್ದ ಸ್ಪರ್ಶ ಸಂಯೋಗ ಅಪ್ಪಂದ ಮದಲು ಮಂತ್ರಪೂರಿತ ರಸ ಶಬ್ದ ಸ್ಪರ್ಶ ಮಾಡುಸುವದು ಜಾತಕರ್ಮಲ್ಲಿಪ್ಪ ಪ್ರಕ್ರಿಯೆ.  ಮತ್ತೆ ಬಾಲಕನ ಮಸ್ತಕವ ಅಪ್ಪ ಮೂರು ಸರ್ತಿ ಮೂಸುವದು. ಮುಂದೆ ಮಾಣಿಗೆ ಯಾವ ಹೆಸರು ಮಡುಗುವದು ಹೇಳಿಯೂ ಮನಸ್ಸಿಲ್ಲಿ ಗ್ರೇಶಿಯೊಂಬದಡ. ಗರ್ಭಾಶಯಲ್ಲಿ ಇಪ್ಪಗ ಮಗುವಿನ ಬ್ರಹ್ಮರಂಧ್ರ ಮುಚ್ಚಿಗೊಂಡಿರುತ್ತಡ. ಅಪ್ಪ ಮಸ್ತಕ ಈ ರೀತಿ ಮೂಸಿಯಪ್ಪಗ ತೆರದು ಕೊಳ್ಳುತ್ತಡ. ಅಲ್ಲದ್ರೆ ಅಪ್ಪ ಮಸ್ತಕ ಮೂರು ಸರ್ತಿ ಊಪಿಯಪ್ಪಗಳೂ ಬ್ರಹ್ಮ ರಂಧ್ರ ತೆರದು ಕೊಳ್ಳುತ್ತಡ. ಅಪ್ಪ ಸಾತ್ವಿಕ ಆಗಿದ್ದರೆ ಮಾತ್ರ ಇದೆಲ್ಲಾ ಸಾಧ್ಯ. ಮತ್ತೆ ಅಬ್ಬೆ ಬಲ ಸ್ತನ ತೊಳದು ಮಗುವಿಂಗೆ ಕುಡುಸುವದು. ಬಲದ್ದು ಪಿಂಗಳಾ ಅಥವಾ ಸೂರ್ಯ ನಾಡಿಗೆ ಸಂಬಂಧ ಪಟ್ಟುದ್ದಾದ್ದರಿಂದ ಮಾಣಿಯ ನಾಡಿಯು ಕಾರ್ಯ ನಿರತ ಆವ್ತಡ. ಇದರಿಂದ ಹಾಲನ್ನು ಜೀರ್ಣಿಸುವ ಕ್ರಿಯೆ ಚುರುಕುಗೊಳ್ಳುತ್ತು. ಪಂಚಭೂತ ತತ್ವಂದ ನಿರ್ಮಾಣವಾದ ಈ ಹೊಸ ತನುವು ಪಂಚಭೂತಂಗಳ ಸೇವೆಗಾಗಿ ಅರ್ಪಣೆಯಾಗಲಿ ಶತಮಾನ ಪರ್ಯಂತ ಸೇವೆ ಮಾಡುವ ಭಾಗ್ಯ ಲಭಿಸಲಿ ಹೇಳಿ ಮಂತ್ರಸಾರ.

ಒಟ್ಟಾರೆ ಸ್ಥೂಲವಾಗ ಹೇಳುವುದಾದರೆ ಜನಿಸಿದ ಮಗುವಿನ ಶುದ್ಧಿ ಮಾಡಿ ಈ ಪ್ರಪಂಚಲ್ಲಿ ಅವನ ಚಟುವಟಿಕೆ ಕಾರ್ಯ ಪ್ರವೃತ್ತ ಗೊಳುಸುವದು ಜಾತಕರ್ಮ ಹೇಳ್ವ ವೈದಿಕ ಪ್ರಕ್ರಿಯೆ.

ಇನ್ನು ಮಗುವಿಂಗೆ ಹೆಸರು ಮಡುಗುವನೋ?. ಏವ ಹೆಸರು ಒಪ್ಪ ಅಕ್ಕು. ಯೋಚನೆ ಮಾಡಿ ಮಡುಗಿ ಆತೋ ಏ.

|| ಹರೇ ರಾಮ ||

( ಮುಂದುವರಿತ್ತು. )

ಕಳುದ ವಾರದ್ದು : ಭಾಗ 05 : ಸೀಮಂತೋನ್ನಯನ –  http://oppanna.com/lekhana/samskara-lekhana/bhaga05_seemantonnayana

ಭಾಗ 06 : ಜಾತಕರ್ಮ: ಹದಿನಾರು ಸಂಸ್ಕಾರಂಗೊ - , 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಜಯಲಕ್ಷ್ಮಿ ಕುಕ್ಕಿಲ

  ಶಿಶುವಿಂಗೆ ಚಿನ್ನಲ್ಲಿ ಜೇನು ತುಪ್ಪ ಪ್ರಾಶನ ಮಾಡುಸುವದು ಚೀಪೆ ನಕ್ಕುಸುದರೊಟ್ಟಿಂಗೆ ರೋಗನಿರೋಧಕ ಶಕ್ತಿವೃದ್ಧಿಗೋಸ್ಕರ ಹೇಳಿ ಮಾತ್ರ ಗ್ರೇಶಿಗೊಂಡಿತ್ತಿದ್ದೆ. ಚಿನ್ನಲ್ಲಿಯೇ ಪ್ರಾಶನ ಮಾಡ್ಸುದು ಸಮೃದ್ಧಿ ಬರಲಿ ಹೇಳುವ ಉದ್ದೇಶವಾ ಹೇಳಿ ಅಂದಾಜು ಮಾಡಿತ್ತಿದ್ದೆ.
  ಮಧು- ಸರ್ಪಿ- ಹಿರಣ್ಯ ಚೂರ್ಣ ಪ್ರಾಶನಂದ ಪುರುಷ ರೇತಸ್ಸಿನ ವೃದ್ಧಿ ಮತ್ತು ಗರ್ಭಾಂಬುಪಾನ ಮಾಡಿದ ದೋಷ ನಿವಾರಣೆ ಮತ್ತೆ ತನು ಪವಿತ್ರ ತೆಗೆ ಶಿಶುವಿನ ಬಲ-ಆರೋಗ್ಯ-ತೇಜ ಮುಂತಾದ ಪುಷ್ಟಿಕರ ಗುಣಂಗೊಕ್ಕೆಹೇಳಿಯೂ, ಶಿಶುವಿನ ನೆತ್ತಿಯ ಮೂಸುವ ಹಾಂಗೇ ಊಪುವ ಉದ್ದೇಶ ಎಲ್ಲಾ ಈಗಳೇ ಗೊಂತಾದ್ದು. ಉದ್ದೇಶ ಗೊಂತಿಲ್ಲದ್ದೆ ಅಂತೇ ಯಾಂತ್ರಿಕವಾಗಿ, ಹಿರಿಯರು ಮಾಡುದರ ನೋಡಿಯೋ ಅಥವಾ ಪುರೋಹಿತರು ಹೇಳ್ತವು ಹೇಳಿ ಮಾಡುದು ಕಾಣ್ತಷ್ಟೆ. ಉದ್ದೇಶ ಗೊಂತಿಲ್ಲದ್ರೂ ಅದರ ಪರಿಣಾಮ ಒೞೆದೇ ಇದ್ದು ಸರಿ. ಹೀಂಗೇ ನಮ್ಮೆಲ್ಲಾ ಧಾರ್ಮಿಕ ವಿಧಿಗಳೊಟ್ಟಿಂಗೆ ಪ್ರತಿಯೊಂದು ಕರ್ಮಂಗಳ ಆಶಯಂಗಳ ಮಾಹಿತಿ ಬತ್ತಾ ಇರಲಿ. ಧನ್ಯವಾದಂಗೊ.
  ಜಯತ್ತೆ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಶುದ್ದಿಯ ಮೆಚ್ಚಿ ಕೊಟ್ಟ ಒಪ್ಪಕ್ಕೆ ಧನ್ಯವಾದಂಗೊ. ಹೇಳಿದ್ದರಷ್ಟು ಕಣ್ಣು ಮುಚ್ಚಿ ನಾವು ಅನುಸರುಸುವ ಕ್ರಮಂಗಳ ಮೇಲ್ಮೈ ಅರ್ಥ / ಸಾರವ ತಿಳಿವ ಕಿರು ಪ್ರಯತ್ನ ಇದು.

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ವಿವರದಾಯಕ, ಜ್ನ್ಹಾನದಾಯಕ ಲೇಖನಕ್ಕೆ ಒಪ್ಪ೦ಗೊ ಚೆನ್ನೈ ಭಾವಾ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪೆರ್ವದಣ್ಣಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಚೆನ್ನೈಭಾವಾ,
  ಅಮೂಲ್ಯ ವಿವರ೦ಗೊ ಇಪ್ಪ ಈ ಶುದ್ದಿಗಳ ಸರಣಿಯ ಬೈಲಿಲಿ ಹ೦ಚುತ್ತಾ ಇಪ್ಪದಕ್ಕೆ ಧನ್ಯವಾದ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮುಳಿಯ ಭಾವನ ಪ್ರೋತ್ಸಾಹದ ಒಪ್ಪಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  “ಸಂಸ್ಕಾರ”ಂಗಳ ಲೇಕಹನ ಮಾಲೆ ಬತ್ತಾ ಇರಳಿ ಭಾವ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪ್ರೋತ್ಸಾಹದ ಒಪ್ಪಕ್ಕೆ ಧನ್ಯವಾದ ಕುಮಾರ ಮಾವಂಗೆ.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಹದಿನಾರು ಸಂಸ್ಕಾರ ಹೇಳ್ತ ಲೇಖನ ಮಾಲಿಕೆ ಒಳ್ಳೆ ಮಾಹಿತಿಯೊಟ್ಟಿಂಗೆ ಬತ್ತಾ ಇಪ್ಪದು ತುಂಬಾ ಸಂತೋಷ. ಆರು ಮೆಟ್ಟಿಲು ವರೆಗೆ ಕೈ ಹಿಡ್ಕೊಂಡು ಹತ್ತಿ ಅತು. ಮುಂದಾಣ ಮೆಟ್ಲು ಹತ್ತಲೆ ತಯಾರಾಯಿದೆಯೊ ಹೇಳಿ ಒಂದೊಪ್ಪ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಶರ್ಮಪ್ಪಚ್ಚಿಯ ಪ್ರೋತ್ಸಾಹದ ನುಡಿಗೆ ತುಂಬಾ ಧನ್ಯಾವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 6. Shama Prasad
  Shama Prasad

  ತುಂಬಾ ವಿವರವಾಗಿ ಬರದ್ದಿ. ಧನ್ಯವಾದಂಗೊ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯಾವಾದಂಗೊ ಶ್ಯಾಮಣ್ಣ.

  [Reply]

  VA:F [1.9.22_1171]
  Rating: 0 (from 0 votes)
 7. ರಾಜಗೋಪಾಲ

  “ಕಣ್ಣು ಮುಚ್ಚಿ ನಾವು ಅನುಸರುಸುವ ಕ್ರಮಂಗಳ ಮೇಲ್ಮೈ ಅರ್ಥ / ಸಾರವ ತಿಳಿವ ಕಿರು ಪ್ರಯತ್ನ ಇದು.” ಬಹಳ ಉತ್ತಮ ಕಾರ್ಯ, ಕ್ರಿಯಾಕರ್ಮಂಗಳ ಮಾಡುವಗ ಇಷ್ತೆಲ್ಲಾ ವಿವರಂಗಳ ಕೇಳಿ ತಿಳುದು ಮಾಡ್ಲೆ ಅಥವಾ ಮಾಡುಸಲೂ ಸಮಯ ಈಗ ಆರಿಂಗೆ ಇದ್ದು? ಹಲವು ಸರ್ತಿ ಕೇಳಿರೂ ಹೆಳುವ ತಾಳ್ಮೆ ನಮ್ಮ ಬಟ್ಟಮಾವಂದ್ರುಗೊಕ್ಕೆ (ಎಲ್ಲರಿಂಗೂ ಖಂಡಿತವಾಗಿಯೂ ಅಲ್ಲ) ಇರುತ್ತಿಲ್ಲೆ (ಹಲವರಲ್ಲಿ ಕೆಲವರು ಈ ರೀತಿ ಪ್ರಶ್ನೆಗಳ ‘ಅಧಿಕಪ್ರಸಂಗ’ ಹೇಳಿಯೂ ತಿಳಿತ್ತವು!!). ಈ ಸರಣಿ ಲೇಖನ ಇನ್ನೂ ಹೆಚ್ಚು ವಿವರವಾಗಿ ಬಂದರೆ ಕೂಡಾ ನವಗೆ ಖುಶಿಯೇ. ವಾಗ್ಭಟಾಚಾರ್ಯನ ಅಷ್ತಾಂಗ ಹ್ರದಯಲ್ಲಿ ನವಜಾತಶಿಶುವಿನ ಪರಿಚರ್ಯ ಪ್ರಕರಣಲ್ಲಿ ಅಪ್ಪನಾದವ ಮಗುವಿನ ಕೈಲಿ ತೆಕ್ಕೊಂಡು (ಪ್ರಥಮ ಬಾರಿ) ಆಶೀರ್ವಾದ ಮಾಡುವ ಒಂದು ಶ್ಲೋಕ ಭಾರೀ ಅರ್ಥಪೂರ್ಣ ಇದ್ದು,
  “ಅಂಗಾದಂಗಾದ್ ಸಂಭವಸಿ ಹ್ರದಯಾದಭಿಜಾಯಸೇ
  ಆತ್ಮಾ ವೈ ಪುತ್ರನಾಮಾಸಿ ಸ ಜೀವ ಶರದಾಮ್ ಶತಮ್
  ನಕ್ಶತ್ರಾಣಿ ದಿಶೋ ರಾತ್ರಿ ರಹಶ್ಚ ತ್ವಾಭಿರಕ್ಶತು ” (ಇದರ ಕನ್ನಡ ಅನುವಾದ ‘ಎನ್ನದೇ ಅಂಗಾಂಗಗಳಿಂದ ಹುಟ್ಟಿದ್ದೆ ನೀನು, ಎನ್ನ ಹ್ರದಯಂದ ಬಯಿಂದೆ ನೀನು, ನೀನು ಎನ್ನ ಮಗ, ಏ ಮಗಾ! ನೀನು ನೂರು ಶರದ್ ಋತುಗಳ ಕಾಲ ಜೀವಿಸು, ನಕ್ಶತ್ರಂಗೊ, ದಿಕ್ಕುಗೊ, ರಾತ್ರಿಗೊ, ಹಗಲು ಇತ್ಯಾದಿ ಎಲ್ಲವೂ ನಿನ್ನ ರಕ್ಶಿಸಲಿ)
  ಪುನಃ ಚಿನ್ನ ಭಾವಂಗೆ ಧನ್ಯವಾದಂಗೊ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಲಾಯಕ ಪ್ರೋತ್ಸಾಹದ ಒಪ್ಪಕ್ಕೆ ರಾಜಗೋಪಾಲಣ್ಣಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಕಜೆವಸಂತ°ಕೊಳಚ್ಚಿಪ್ಪು ಬಾವಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕಡಾಗುಟ್ರಕ್ಕ°ದೀಪಿಕಾಜಯಶ್ರೀ ನೀರಮೂಲೆಮಂಗ್ಳೂರ ಮಾಣಿಅನುಶ್ರೀ ಬಂಡಾಡಿಹಳೆಮನೆ ಅಣ್ಣವೇಣಿಯಕ್ಕ°ಪೆರ್ಲದಣ್ಣಸರ್ಪಮಲೆ ಮಾವ°ಮಾಷ್ಟ್ರುಮಾವ°ಒಪ್ಪಕ್ಕಮಾಲಕ್ಕ°ಬಟ್ಟಮಾವ°ದೊಡ್ಡಭಾವಶಾಂತತ್ತೆಬಂಡಾಡಿ ಅಜ್ಜಿಅಕ್ಷರದಣ್ಣತೆಕ್ಕುಂಜ ಕುಮಾರ ಮಾವ°ಬೋಸ ಬಾವಡೈಮಂಡು ಭಾವಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ