ಭಾಗ 05 : ಸೀಮಂತೋನ್ನಯನ : ಹದಿನಾರು ಸಂಸ್ಕಾರಂಗೊ

September 30, 2011 ರ 12:30 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಪುಂಸವನ ಮಾಡಿದ್ದಷ್ಟೇ. ಇಷ್ಟು ಪಕ್ಕ ಸೀಮಂತಕ್ಕೂ ಆತೋ?. ಛೆಲ! ಇವನೇ!! ಹೇದು ಸುಭಗ ಭಾವಂಗೆ ತಲೆ ತಿರುಗಲೆ ಸುರುವಕ್ಕೀಗ. ಇದು ಅಲ್ಲಿ ಅಲ್ಲ. ಬೇರೊಂದಿಕ್ಕೆ. ಏ ಸುಭಗ ಭಾವ, ಓ ಅಂದು ಪುಂಸವನ ಆದ್ದದಾ. ನಿಂಗಳೂ ಬಯಿಂದಿ ನೋಡಿ. ನಾಕು ಮಾರ್ಗ ಸೇರುತ್ತಲ್ಲಿ ಸಿಕ್ಕುತ್ತೆ ಹೇಳಿದ ಅಜ್ಜಕ್ಕಾನ ಭಾವನ ಕಾದು ಕೂದು ಅವ ಬಾರದ್ದೆ ಮತ್ತೆ ಮಳಗೆ ಚಂಡಿ ಪುಂಡಿ ಆಗ್ಯೊಂಡು ನಿಂಗೊ ಬಂದು ಸೇರಿದ್ದು. ಮತ್ತೆ ಲಾಡು, ಜಿಲೇಬಿ….. ನೆಂಪಿದ್ದೋ … ಹಾಮ್…. ಅದು ಅದು.

‘ಸೀಮಂತೋನ್ನಯನ’ ಶಬ್ದ – ಸೀಮಂತ ಹೇಳಿರೆ ಬೈತಲೆ ರೇಖೆ, ಉನ್ನಯನ ಹೇಳಿರೆ ಪಕ್ಕಲ್ಲಿಪ್ಪ ಕೂದಲ ಮೇಲೆ ಒಯ್ಯುವದು. ಅರ್ಥಾತ್, ಪತ್ನಿಯ ತಲೆ ಕೂದಲಿನ ಮೇಲೆ ಬಾಚಿ ಚೆಂದಕೆ ಬೈತಲೆ ತೆಗವದು. ಗರ್ಭ ಧರಿಸಿದ ಸ್ತ್ರೀಯರ ಗರ್ಭ ಭಕ್ಷಿಸುಲೆ ಕೆಲವು ರಾಕ್ಷಸೀ ಶಕ್ತಿಗೊ ಪ್ರಯತ್ನಿಸುತ್ತವು ಹೇಳಿ ಪ್ರತೀತಿ. ಇದರ ನಾಶ ಮಾಡ್ಳೆ ಸ್ತ್ರೀಯ ಬೈತಲೆಲಿ ಲಕ್ಷ್ಮೀಯ ಆವಾಹಿಸುವುದಾವ್ತು ಸೀಮಂತೋನ್ನಯನ ಸಂಸ್ಕಾರದ ಪ್ರಧಾನ ಕರ್ಮ. ಇದರಿಂದ ಸ್ತ್ರೀಯ ಶಿರಸ್ಸಿಲ್ಲಿ ಇಪ್ಪ ಸಹಸ್ರಾರ ಚಕ್ರದ ಮೂಲಕ ಒಳ್ಳೆಯ ಲಹರಿಗೋ ಶರೀರ ಪ್ರವೇಶಿಸಿ, ಗರ್ಭದ ಉತ್ತಮ ಬೆಳವಣಿಗೆಗೆ ಸಹಾಯ ಆವ್ತು ಹೇಳಿ ಪ್ರತೀತಿ. ಗರ್ಭದಲ್ಲಿನ ಶಿಶುವಿಂಗೆ ಸಂಸ್ಕಾರ ಮಾಡುವಾಗ ಮಣ್ಣಿನ ಬಟ್ಟಲು (ಹರಿವಾಣ) ಉಪಯೋಗುಸುವದು. ಇದು ಗರ್ಭಾಶಯದ ಪ್ರತೀಕ.

ಸೀಮಂತಕ್ಕು ಪುಂಸವನಕ್ಕೆ ನೋಡಿದಾಂಗೆ ದಿನ ನಕ್ಷತ್ರ ನೋಡಿ ನಿಘಂಟು ಮಾಡುವದು.(ಪುರುಷವಾಚಕ ನಕ್ಷತ್ರ – ಪುನರ್ವಸು , ಪುಷ್ಯ , ಹಸ್ತ , ಮೂಲ …). ಸಮ ಮಾಸಲ್ಲಿ ಸಾಧ್ಯವಾದರೆ, ನಾಲ್ಕನೇ ಮಾಸಲ್ಲಿ ಈ ಸಂಸ್ಕಾರ ಮಾಡಿದರೆ, ಅದು ಹೆಸರಿಂಗೆ ತಕ್ಕಂತೆ ನಿಜವಾದ ಅರ್ಥಲ್ಲಿ ಆವುತ್ತು. ನಮ್ಮಲ್ಲಿ ಸಾಮಾನ್ಯವಾಗಿ ಏಳನೇ ತಿಂಗಳಲಿ ಮಾಡ್ತವು. ಸಂತಾನ ಪ್ರಾಪ್ತಿ ಎಷ್ಟು ಪ್ರಾಮುಖ್ಯವೋ ಆ ಸಂತಾನ ಅಂಗವೈಕಲ್ಯ , ಬುದ್ದಿವೈಕಲ್ಯ ಇಲ್ಲದ್ದೆ ಗರ್ಭಲ್ಲಿ ಸಂಪೂರ್ಣ ಬೆಳವಣಿಗೆ ಹೊಂದಿ ಬುದ್ದಿವಂತನಾಗಿ ಆರೋಗ್ಯಶಾಲಿಯಾಗಿ ಜನಿಸೆಕ್ಕಪ್ಪದೂ ಮುಖ್ಯವೇ. ಗರ್ಭಾವಸ್ಥೆಲಿ ಇಪ್ಪ ಮಗುವಿನ ಎಲ್ಲಾ ಅವಯವಂಗೊ ಸರ್ವಾಂಗೀಣ ವೃದ್ಧಿ ಆಯೇಕು ಎಂಬುದು ಸೀಮಂತೋನ್ನಯನ ಸಂಸ್ಕಾರದ ಮುಖ್ಯ ಉದ್ದೇಶ.

ಇನ್ನೊಂದು ಪ್ರಾಮುಖ್ಯ ವಿಷಯ ನಾವಿಲ್ಲಿ ನೆನಪಿಸಿಗೊಳ್ಳೆಕ್ಕಪ್ಪದು  ಮತ್ತು ಕೆಲವರಿಂಗೆ ಸಂಶಯಕ್ಕೆ ಆಸ್ಪದಗೊಡುವದು – ಈ ಸಂಸ್ಕಾರಂಗೊ, ಅಂದರೆ, ಗರ್ಭಾಧಾನಂದ ಮೊದಲ್ಗೊಂಡು ಕೊನೆವರೇಗೆ ಪ್ರತಿ ಗರ್ಭಕ್ಕೂ ಮಾಡೆಕ್ಕಪ್ಪದ್ದೆ. ನಮ್ಮಲ್ಲಿ ರೂಢಿಲಿ, ಸುರುವಾಣ ಗರ್ಭ- ವಾರೀಸು, ಕರ್ಮ ಹಕ್ಕು ಉಳ್ಳವನಾದ ಪುತ್ರ ಸಂತತಿ ಆಯೇಕ್ಕು ಹೇಳ್ವ ಭಾವನೆ ಪ್ರತಿಯೊಬ್ಬ ದಂಪತಿಗಳಲ್ಲೂ ಇಪ್ಪಾದ್ದೇ. ಹಾಂಗಾಗಿ ಸುರುವಾಣ ಸರ್ತಿ ಮಾತ್ರ ಸಂಸ್ಕಾರಂಗಳ ಮಾಡಿಕ್ಕಿ ಮತ್ತಾಣದ್ದಕ್ಕಪ್ಪಗ ಮಾಡದ್ದೇ ಬಿಡುತ್ತವು. ಕಾರ್ಯಕ್ಕಾರು ಎರಡನೇ, ಮೂರನೇ … ಸರ್ತಿಯೂ ಮಾಡೆಕ್ಕಾದ್ದೇ.

ಸೀಮಂತೋನ್ನಯನಲ್ಲಿ ವೈದಿಕ ಮಂತ್ರಂಗಳಿಂದ ಅಭಿಮಂತ್ರಿತ ಯಜ್ಞ ಪ್ರಸಾದ, (ಮಂಗಲ ನಾಮಕ ಅಗ್ನಿ, ಧಾತೃ , ರಾಕ, ವಿಷ್ಣು, ಪ್ರಜಾಪತಿ ಪ್ರಧಾನ ದೇವತೆಗೊ)  ಔದುಂಬರಾದಿ (ಅತ್ತಿ) ಗಿಡ (ಔದುಂಬರ ವೃಕ್ಷ ತ್ರಿಮೂರ್ತಿಗಳ ಅವತಾರ ರೂಪಿ ಜ್ಞಾನಿ ದತ್ತಾತ್ರೇಯನ ಆವಾಸ ಸ್ಥಾನ, ಅಪರಿಮಿತ ಫಲ ಬಿಡುವ ಮರ)  ಮರ ಮೂಲಿಕೆಗಳಿಂದ, ಮುಳ್ಳು ಹಂದಿಯ (ಮುಳ್ಳು ಹಂದಿ ಪ್ರಾಣಿಗಳಲ್ಲೇ ಅತೀ ಅಪಾಯಕಾರಿ ಕಾಡುಪ್ರಾಣಿ, ಅದರ ಶರೀರಲ್ಲಿಪ್ಪ ಮುಳ್ಳು ಎಂತ ಬಲಶಾಲಿ ಶತ್ರುವನ್ನೂ ದೂರ ಇರುಸುತ್ತು. ಈ ಮುಳ್ಳಿನ ಉಪಯೋಗಿಸಿರೆ ಗರ್ಭಸ್ಥ ಶಿಶುವಿಂಗೆ ಬರ ಬಹುದಾದ ಕ್ರಿಮಿ ಕೀಟಾಣು ರೋಗ ರುಜಿನ ಬಾಧೆಂದ ರಕ್ಷಿಸುತ್ತು ಎಂಬ ನಂಬಿಕೆ) ಮುಳ್ಳಿನಿಂದ ಪತ್ನಿಯ ಸೀಮಂತದ (ಬೈತಲೆ) ಉನ್ನಯನ (ಪೃಥಕ್ಕರಣ) ಇತ್ಯಾದಿ ಭಾವಪೂರ್ಣ ಸಂಸ್ಕಾರಂದ ಗರ್ಭವತಿಯ ಚೈತನ್ಯ ಶಕ್ತಿಯು ವೃದ್ಧಿಯಾಗಿ ಗರ್ಭಸ್ಥ ಶಿಶುವಿನ ಮೇಲೆ ನೇರ ಪರಿಣಾಮ ಬೀಳ್ತು ಹೇಳಿ ನಂಬಿಕೆ. ಇದು ಧಾರ್ಮಿಕ ಹಿನ್ನಲೆಯಾಗಿದ್ದರೂ ಇಲ್ಲಿ ಮನಃಶಾಸ್ತ್ರಕ್ಕೆ ಹೆಚ್ಚಿನ ಮಹತ್ವ. ಹಾಂಗೇ ಅದೇ ದಿನ ಗರ್ಭಿಣಿಯ ಉಡುವುದರಲ್ಲಿ ತಿಂಬದರಲ್ಲಿ ಇಪ್ಪ ಬಯಕೆಯ ಪೂರೈಸಿ ಅದರ ಮನಸ್ಸು ಸಂತೋಷಲ್ಲಿ ಇರೆಕು ಹೇಳ್ವ ಅರ್ಥಲ್ಲಿ ಆವ್ತು ಬಯಕೆ ಮದಿಮ್ಮೆ ಹೇಳಿ ಪ್ರಚಲಿತ ಆದ್ದು. ಅದರ ಜೊತೇಲಿ ಇನ್ನು ಕೆಲವರ ಬಯಕೆಯೂ ತೀರ್ತು ಹೇಳಿ ಬೋಸಭಾವಂಗೆ ಖುಶೀ. ಹೊಸ ವಸ್ತ್ರ, ಉಡುಗೊರೆ, ತಿಂಡಿ ತಿನಸು ಭಕ್ಷ್ಯ ಭೋಜ್ಯ ಗರ್ಭಿಣಿಗೆ ಬೇಕಾದ ಆಸೆ ರೀತಿಲಿ ಮಾಡಿ ಕೊಡೆಕ್ಕಪ್ಪದು ಗಂಡನ ಹೊಣೆ. ಗರ್ಭ ಕಾಲಲ್ಲಿ ಗರ್ಭಿಣಿ, ಸದಾ, ಸತ್ ಚಿಂತನೆ, ಸದಾಚಾರ, ಸತ್ ಕೃತಿಗೊ, ಒಳ್ಳೆಯ ಮಾತುಗೋ, ಶ್ಲೋಕ, ಗೀತೆ, ಸುಪ್ರಭಾತ, ಸಹಸ್ರನಾಮ ಇತ್ಯಾದಿ ಒಡನಾಟಲ್ಲಿ ಇಪ್ಪದು ಅತೀ ಅವಶ್ಯ. ಮಾನಸಿಕ ಧೈರ್ಯ ಶಾಂತಿ ಸಂತೋಷ ಅತೀ ಅಗತ್ಯ. ಇವೆಲ್ಲವೂ ಗರ್ಭಸ್ಥ ಶಿಶುವಿನ ಮೇಲೆ ನೇರ ಪ್ರಭಾವ ಉಂಟಾವ್ತು. ಗರ್ಭಿಣಿ ಕೆಟ್ಟ ಮಾತು ಆಡುವದು, ನೋಡುವುದು, ಒಂಟಿಯಾಗಿ ಇಪ್ಪದು ಹೋಪದು ಇತ್ಯಾದಿ ವರ್ಜಿಸುವದು ತೀರಾ ಅಗತ್ಯ.

ಗರ್ಭಸ್ಥ ಶಿಶುವು ಹೆರಪ್ರಪಂಚಕ್ಕೆ ಕಿವಿಗೊಡುತ್ತು. ಸ್ಪಂದಿಸುತ್ತು. ಮತ್ತು ಬಾಹ್ಯಲ್ಲಿ ಅಪ್ಪ ಚಟುವಟಿಕೆಗೊ ಗರ್ಭದೊಳ ಇಪ್ಪ ಶಿಶುವಿಲ್ಲಿ ನಾಟುತ್ತು. ಆದ್ದರಿಂದ ನಾವಾಡುವ ಮಾತುಗೊ, ಚಿಂತನೆಗೋ ಪರಿಣಾಮ ಬೀರುತ್ತು, (ಉದಾ-ಟಿವಿ ನೋಡುವಾಗ ಜಾಗ್ರತೆ ಬೇಕು…..) ಅದೇ ರೀತಿ, ನಾವಾಡುವ – ಕೇಳುವ  ಒಳ್ಳೆಯ ಭಾವನೆಗೊ, ಮಾತುಗೊ ಒಳ್ಳೆ ಪ್ರಭಾವ ಬಿರಿ ಸತ್ಪ್ರವರ್ತನೆಗೆ ಕಾರಣ ಆವುತ್ತು. ಸತ್ ಸಂತಾನ ಪ್ರಾಪ್ತಿಗಾಗಿ ಹಂಬಲುಸುವ ಪ್ರತಿಯೊಬ್ಬ ದಂಪತಿಗೋ ಈ ವಿಷಯಂಗಳ ಅರ್ಥ ಮಾಡಿಗೊಳ್ಳೆಕ್ಕು. ದ್ವೇಷ, ಅಸೂಯೆ, ಬೈದಾಟ , ಕೆಟ್ಟ ಮಾತು, ವ್ಯಸನಂಗಳ ದೂರ ಇರುಸೆಕ್ಕು. ತನ್ನ ಆರೋಗ್ಯವೇ ಮಗುವಿನ ಅರೋಗ್ಯ.

ಮಗುವಿನ ಸಂಪೂರ್ಣ ಬೆಳವಣಿಗೆಯ ಬಯಸಿ (ಗರ್ಭಪುಷ್ಟಿ ರಕ್ಷಾರ್ಥಂ) ಗರ್ಭಿಣಿಯ ಎಂಟನೇ ತಿಂಗಳಿಲಿ ಗರ್ಭಕ್ಕೆ ಯಾವುದೇ ತೊಂದರೆ ಬಾರದಿರಲಿ, ಸುಖ ಪ್ರಸವ ಆಗಲಿ, ಗರ್ಭಾಧಿದೇವತೆ ಶ್ರೀ ಮಹಾವಿಷ್ಣುವಿನ ಸಂಪೂರ್ಣ ಕೃಪಾಕಟಾಕ್ಷ ಸಿದ್ಧಿಸೆಕ್ಕು,  ಹೇಳಿ ಶ್ರೀ ಮಹಾವಿಷ್ಣು ದ್ವಾದಶ ನಾಮಾರ್ಚನೆ, ಹೋಮ , ಬಲಿ ಹೇಳ್ವ ‘ವಿಷ್ಣು ಬಲಿ’ ಸಂಸ್ಕಾರ ಕೂಡ ಮಾಡುವದು. ಗರ್ಭಾಧಿದೇವತೆ ವಿಷ್ಣು. ಅವನ ಉದ್ದೇಶಿಸಿ ಆಜ್ಯ , ಚರುವಿನ ಆಹುತಿಗಳ ಕೊಟ್ಟು ಹೋಮ ಕುಂಡದ ಈಶಾನ್ಯ ದಿಕ್ಕಿಲ್ಲಿ, ಸ್ಥಂಡಿಲ ಮಾಡಿ, ಅದರಲ್ಲಿ ಚರು ಬಲಿ ಪ್ರದಾನ ಮಾಡುವುದು ವಿಷ್ಣು ಬಲಿಲಿಪ್ಪ ಕಾರ್ಯ. ನೂರು ತಿಲ ತೆಕ್ಕೊಂಡು ಲಾಯಕ್ಕ ಜಜ್ಜಿ, ವಸ್ತ್ರಲ್ಲಿ ಹಿಂಡಿ ಎಣ್ಣೆ ತೆಗದು ಅದರ ಮೂರನೇ ಒಂದು ಭಾಗ ಗರ್ಭವತಿಗೆ ಪ್ರಾಶನ ಮಾಡುಸುವದು, ‘ವಿಜೀಹೀಶ್ವ ವನಸ್ಪತೇ…’ ಎಂಬ ಸುಖ ಪ್ರಸವ ಸೂಕ್ತವ ಪಠಿಸಿ ಎರಡನೇ ಭಾಗವ ಗರ್ಭಿಣಿಯ ಉದರಕ್ಕೂ, ಮೂರನೇ ಭಾಗ ಜ.ಇಂದ್ರಿಯಕ್ಕೂ ಸವರುವುದು. ಧಾರ್ಮಿಕ ಮತ್ತು ದೈಹಿಕ ಎರಡೂ ಪ್ರಯೋಜನಂಗಳ ನಾವಿಲ್ಲಿ ಕಂಡುಗೊಂಬಲಕ್ಕು. ಪ್ರಸವ ಸಮಯಲ್ಲಿ ಅರಡಿಯದ್ದೇ ಆಗಿ ಹೋಪ ಹರಣ ಮರಣ ಆಗದೇ ಇಪ್ಪ ಹಾಂಗೆ ಮಾಡ್ಳೆ ವಿಷ್ಣು ಬಲಿ, ಪ್ರಸವ ಸಮಯಲ್ಲಿ ಗರ್ಭ ಸುಲಭಲ್ಲಿ ಜಾರ್ಲೆ ಬೇಕಾಗಿ ತೈಲ ಪ್ರಾಶನ , ಹಾಂಗೆ ಉದರವೇದನೆ ಮತ್ತು ಜನನದ್ವಾರ ಶಿಥಿಲೀಕರಣಕ್ಕೆ ತೈಲ ಲೇಪನ ಕರ್ಮಂಗಳ ಹೇಳಿದ್ದು.

ಎಲ್ಲೋರಿಂಗೂ ಒಳ್ಳೆದಾಗಲಿ. ಸತ್ ಸಂತಾನ ಪ್ರಾಪ್ತಿರಸ್ತು.

ಹಾಮ್., ಹೇಳಿದಾಂಗೆ ಬಪ್ಪವಾರ ಆಚಕರೆ ಮಾಣಿ ಮನೇಲಿ ಜಾತಕರ್ಮ ಇದ್ದು ಹೇಳಿ ಹೇಳಿಕೆ ಬಯಿಂದು ಅಪ್ಪೋ . ನಿಂಗಳೂ ಬನ್ನಿ. ಅಲ್ಲಿ ಕಾಂಬೋ ಆತೋ. ಏ.

|| ಹರೇ ರಾಮ ||

(ಮುಂದುವರಿತ್ತು)

ಸೂಃ
ಕಳುದ ವಾರ ಓದಿದ್ದುಃ ಭಾಗ 04: ಪುಂಸವನ ಇಲ್ಲಿದ್ದು –  http://oppanna.com/lekhana/samskara-lekhana/04-pumsavana-samskara

ಭಾಗ 05 : ಸೀಮಂತೋನ್ನಯನ : ಹದಿನಾರು ಸಂಸ್ಕಾರಂಗೊ , 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸೀಮಂತ- ಶಬ್ದಾರ್ಥ, ಶಾಸ್ತ್ರದ ಮಹತ್ವವ ಎಲ್ಲರಿಂಗೂ ಅರ್ಥ ಆವ್ತ ಹಾಂಗೆ ವಿವರಿಸಿ ಬರದ್ದು ತುಂಬಾ ಲಾಯಿಕ ಅಯಿದು.
  ಗರ್ಭಸ್ಥ ಶಿಶು ಹೆರ ಪ್ರಪಂಚಕ್ಕೆ ಕೆಮಿ ಕೊಡ್ತು ಹೇಳಿ ಹೇಳಿಕ್ಕಿ, ತೆಕ್ಕೊಳೆಕ್ಕಾದ ಜಾಗ್ರತೆ ತಿಳಿಶಿದ್ದು ಎಲ್ಲರೂ ತಿಳಿಯೆಕ್ಕಾದ ವಿಚಾರ.
  ಅಭಿಮನ್ಯು, ಚಕ್ರವ್ಯೂಹವ ಹೊಕ್ಕು ಹೆರ ಬಪ್ಪಲೆ ಎಡಿಯದ್ದ್ದೆ ಅಪ್ಪ ಕತೆಲಿ ಕೂಡಾ ಇದರ ನಾವು ತಿಳ್ಕೊಂಡಿದು. ಈಗಾಣ ವಿಜ್ನಾನ ಕೂಡಾ ಇದರ ಸಮರ್ಥನೆ ಮಾಡ್ತು.
  ಶೋಡಷ ಸಂಸ್ಕಾರ ಮಾಲಿಕೆಲಿ ಎಲ್ಲಾ ಸಂಸ್ಕಾರಂಗಳ ವಿವರಂಗಳ ಒದಗಿಸಿ ಕೊಡ್ತಾ ಇಪ್ಪ ಚೆನ್ನೈ ಭಾವಂಗೆ ಧನ್ಯವಾದಂಗೊ.
  ಈ ನಿಂಗಳ ಪ್ರಯತ್ನಕ್ಕೆ ಅಭಿನಂದನೆಗೊ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪಚ್ಚಿಯ ಪ್ರೋತ್ಸಾಹದ ಮಾತುಗೊಕ್ಕೆ ಮನಃಪೂರ್ವಕ ವಂದನೆಗಳು.

  [Reply]

  VN:F [1.9.22_1171]
  Rating: 0 (from 0 votes)
 2. ರಾಜಗೋಪಾಲ

  ಆನು ತುಂಬಾ ಕಾಲಂದ ಹುಡುಕ್ಕೆಂಡಿದ್ದ ವಿಷಯ, ಚೆನ್ನೈ ಭಾವಂಗೆ ಧನ್ಯವಾದ. ೧೯೮೦ರ ದಶಕಲ್ಲಿ ಭೊಪಾಲಲ್ಲಿ ಆದ ವಿಷಾನಿಲ ದುರಂತ ಹಲವು ಗರ್ಭಂಗಳ ವಿಕ್ರತಿಗೆ ಕಾರಣ ಆಯಿದನ್ನೆ! ಹಾಂಗೆ ರಶ್ಯಾದ ಚರ್ನೋಬಿಲ್, ಹಾಂಗೆ ತುಂಬಾ ಅಪಹಾತಂಗೊ ಹೆರಾಣ ವಿಷ ಮತ್ತೆ ವಾತಾವರಣ ಗರ್ಭಕ್ಕೂ ಆಘಾತ ಮಾಡುತ್ತು ಹೇಳೊದರ ಸಿದ್ಧ ಮಾಡಿದ್ದು. ಕೆಟ್ಟದ್ದು ಒಳ ಹೋಪಲೆ ಎಡಿಗಾರೆ ಓಳ್ಲೆದಕ್ಕೆ ಎಡಿಯದೊ? ಗರ್ಭಸಂಸ್ಕಾರ ಒಂದು ವೈಜ್ನಾನಿಕ ತಥ್ಯ – ಸತ್ಯ. ಈಗಾಣ ವಿಜ್ನಾನ ಅದರ ವಿವರುಸಲೆ ಅಸಮರ್ಧ ಆಗಿಪ್ಪದು ನಮ್ಮ ಸಂಸ್ಕಾರ – ಸಂಸ್ಕ್ರತಿಯ ತಪ್ಪೋ? ಈ ಚಿಂತನೆಯ ಆಧಾರಲ್ಲಿ ಆನಿಪ್ಪ ಗುಜರಾತಿಲ್ಲಿ ಕೆಲವು ಜನ ಸೇರೆಂಡು “ಗರ್ಭ ಸಂಸ್ಕಾರ – ದೇಶದ ಉನ್ನತಿಗೆ” ಹೇಳುವ ಓಂದು ಅಭಿಯಾನ ಸುರುಮಾಡಿ ಸುಮಾರು ೫ ವರ್ಷ ಆತು, ಅದರ ಪರಿಣಾಮ ಒಳ್ಲೆದಾಗಿ ಕಾಣುತ್ತಾ ಎದ್ದು. ದರ್ಶನ, ಶ್ರವಣ, ಚಿಂತನ, ಕರಣ ಇತ್ಯಾದಿ ಮತ್ತೆ ಗರ್ಭರಕ್ಷೆ ಒಳಗೊಂಡಿಪ್ಪ ಈ ಕಾರ್ಯಕ್ರಮದ ಉದ್ದೇಶ ಉತ್ತಮ ಸಂತತಿ ಮತ್ತೆ ಉತ್ತಮ ನಾಗರಿಕ – ಸತ್ಪ್ರಜೆ. ಅದಕ್ಕೆ ಬೇಕಾದ ಅಡಕಮುದ್ರಿಕೆ (CD) ಇತ್ಯಾದಿ ಕೂಡಾ ತಯಾರು ಮಾಡಿದ್ದೆಯೊ, (ಭಾಷೆ – ಗುಜರಾತಿ ಹಿಂದಿ), ಈ ಕಾರ್ಯಕ್ರಮಲ್ಲಿ ಸೀಮಂತ ಕೂಡಾ ಒಂದು. ಪೂರಕ ಮಾಹಿತಿಗೆ ಒಪ್ಪಣ್ಣಂಗೆ ಕೂಡಾ ಧನ್ಯವಾದಂಗೊ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ರಾಜಗೋಪಾಲಣ್ಣಂಗೆ ಧನ್ಯವಾದಂಗೊ. ಒಳ್ಳೆ ಮಾಹಿತಿ ಕೊಟ್ಟಿದಿ. ಕೊಶಿ ಆತು. ದೂರಲ್ಲಿದ್ದುಗೊಂಡು ಬೈಲಿನ ಮೂಲಕ ಸಂಪರ್ಕಲ್ಲಿಪ್ಪದು ಸಂತೋಷದ ವಿಷಯ.

  ಆಯುರ್ವೇದ ಬಗ್ಗೆ ಮತ್ತು ನಿಂಗಳ ಕಾರ್ಯಕ್ರಮಂಗಳ ಬಗ್ಗೆ ರಾಜಗೋಪಾಲಣ್ಣ ಬೈಲಿಂಗೆ ಶುದ್ದಿ ಬರದರೆ ಲಾಯಕ ಇಕ್ಕು. ಧನ್ಯವಾದಂಗಳ ಸಹಿತ ಪ್ರತಿ ಒಪ್ಪ ಇತ್ಲಾಗಿಂದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಹಳೆಮನೆ ಅಣ್ಣಗಣೇಶ ಮಾವ°ಬಂಡಾಡಿ ಅಜ್ಜಿಕಳಾಯಿ ಗೀತತ್ತೆಅಕ್ಷರ°ವೇಣಿಯಕ್ಕ°ಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ಡಾಮಹೇಶಣ್ಣಅನುಶ್ರೀ ಬಂಡಾಡಿಚುಬ್ಬಣ್ಣವಿದ್ವಾನಣ್ಣಪುತ್ತೂರಿನ ಪುಟ್ಟಕ್ಕನೀರ್ಕಜೆ ಮಹೇಶವೇಣೂರಣ್ಣಸುವರ್ಣಿನೀ ಕೊಣಲೆಅಡ್ಕತ್ತಿಮಾರುಮಾವ°ಮುಳಿಯ ಭಾವಮಾಷ್ಟ್ರುಮಾವ°ಅಜ್ಜಕಾನ ಭಾವಸುಭಗಶ್ಯಾಮಣ್ಣಮಂಗ್ಳೂರ ಮಾಣಿಪೆರ್ಲದಣ್ಣಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ