Oppanna.com

ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬರದೋರು :   ಚೆನ್ನೈ ಬಾವ°    on   17/05/2012    16 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಯೇ ಮೇ ಮತಮಿದಂ ನಿತ್ಯಂ ಅನುತಿಷ್ಠಂತಿ ಮಾನವಾಃ ।
ಶ್ರದ್ಧಾವಂತೋsನಸೂಯಂತೋ ಮುಚ್ಯಂತೇ ತೇsಪಿ ಕರ್ಮಭಿಃ ॥೩೧॥

ಪದವಿಭಾಗ

ಯೇ ಮೇ ಮತಮ್ ಇದಮ್ ನಿತ್ಯಮ್ ಅನುತಿಷ್ಠಂತಿ ಮಾನವಾಃ । ಶ್ರದ್ಧಾವಂತಃ ಅನಸೂಯಂತಃ ಮುಚ್ಯಂತೇ ತೇ ಅಪಿ ಕರ್ಮಭಿಃ ॥

ಅನ್ವಯ

ಯೇ ಮಾನವಾಃ ಶ್ರದ್ಧಾವಂತಃ ಅನಸೂಯಂತಃ ಇದಂ ಮೇ ಮತಂ ನಿತ್ಯಮ್ ಅನುತಿಷ್ಠಂತಿ, ತೇ ಅಪಿ, ಕರ್ಮಭಿಃ ಮುಚ್ಯಂತೇ ।

ಪ್ರತಿಪದಾರ್ಥ

ಯೇ – ಏವ, ಮಾನವಾಃ – ಮಾನವ ಜೀವಿಗೊ, ಶ್ರದ್ಧಾವಂತಃ – ಶ್ರದ್ಧಾವಂತವರುಗಳಾದ, ಅನಸೂಯಂತಃ – ಅಸೂಯೆಇಲ್ಲದ್ದವು,  ಇದಮ್ – ಈ, ಮೇ – ಎನ್ನ, ಮತಮ್ – ಆಜ್ಞೆಗಳ, ನಿತ್ಯಮ್ – ನಿತ್ಯಕಾರ್ಯ ಹೇದು, ಅನುತಿಷ್ಯಂತಿ – ತಪ್ಪದ್ದೆ ಪಾಲುಸುತ್ತವೋ, ತೇ – ಅವೆಲ್ಲರೂ, ಅಪಿ – ಕೂಡ, ಕರ್ಮಭಿಃ – ಕಾಮ್ಯಕರ್ಮ ಬಂಧನಂದ , ಮುಚ್ಯಂತೇ – ಮುಕ್ತರಾವುತ್ತವು.

ಅನ್ವಯಾರ್ಥ

ಆರು ಎನ್ನ ಅಪ್ಪಣೆ ಪ್ರಕಾರವಾಗಿ ತಮ್ಮ ಕರ್ತವ್ಯಂಗಳ ತಪ್ಪದ್ದೆ ನಿರ್ವಹಿಸಿಗೊಂಡು ಈ ಬೋಧನೆಯ (ಆಜ್ಞೆಯ) ಅಸೂಯೆಯಿಲ್ಲದ್ದೆ, ಶ್ರದ್ಧೆಂದ ಅನುಸರುಸುತ್ತವೋ, ಅವು, ಕರ್ಮಫಲದ ಬಂಧನಂದ ಮುಕ್ತರಾವುತ್ತವು.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣ ಬೋಧನೆಯು (ಆಜ್ಞೆಯು) ಎಲ್ಲ ವೇದಂಗಳ ಜ್ಞಾನದ ತಿರುಳು. ಆದ್ದರಿಂದ ಅದು ಆಕ್ಷೇಪಣೆಗೆ ಅವಕಾಶ ಇಲ್ಲದ್ದ ಶಾಶ್ವತವಾದ ಸತ್ಯ. ವೇದಂಗೊ ನಿತ್ಯ ಇಪ್ಪ ಹಾಂಗೆ ಕೃಷ್ಣಪ್ರಜ್ಞೆಯೂ ಸತ್ಯವೂ ನಿತ್ಯವೂ. ಭಗವಂತನಲ್ಲಿ ಅಸೂಯೆ ಇಲ್ಲದ್ದೆ, ಅಪನಂಬಿಕೆ ಇಲ್ಲದ್ದೆ,  ಮನುಷ್ಯ° ಆ ಆಜ್ಞೆಲಿ ದೃಢವಾದ ನಂಬಿಕೆ ಇಟ್ಟುಗೊಂಡಿರೆಕು. ಸಾಮಾನ್ಯವಾಗಿ ಶ್ರೀಕೃಷ್ಣನ ಅಪ್ಪಣೆಗಳ ಕಾರ್ಯಗತ ಮಾಡಿಗೊಂಬಲೆ ಎಡಿಯದ್ದೆ ಹೋಪಲೂ ಸಾಕು, ಅಂದರೂ, ಭಗವಂತನ ನಿತ್ಯವಾದ ಸತ್ಯವಾದ ಅಪ್ಪಣೆಗಳಲ್ಲಿ ಅವಂಗೆ ದೃಢವಾದ ಶ್ರದ್ಧೆ ಇದ್ದರೆ ಅವ್ವು ಕರ್ಮ ಬಂಧನಂದ ಬಿಡುಗಡೆ ಹೊಂದುತ್ತವು. ಕೃಷ್ಣಪ್ರಜ್ಞೆಯ  ಪ್ರಾರಂಭಲ್ಲಿ ಮನುಷ್ಯಂಗೆ ಭಗವಂತನ ಅಪ್ಪಣೆಗಳ ಸಂಪೂರ್ಣವಾಗಿ ಪಾಲುಸದ್ದೆ ಹೋಕು. ಆದರೆ, ಈ ತತ್ವದ ವಿಷಯಲ್ಲಿ ಅವಂಗೆ ಅಸಮಧಾನ ಏನೇನೂ ಇಲ್ಲದಿಪ್ಪದರಿಂದ , ಅದರಲ್ಲಿ ಸಂಪೂರ್ಣ ವಿಶ್ವಾಸ , ಶ್ರದ್ಧೆ, ಭಕ್ತಿ, ಭಯ ಇಪ್ಪದರಿಂದ ಸೋಲು ಮತ್ತು ನಿರಾಸೆಗಳ ಗೊಡವೆ ಇಲ್ಲದ್ದಿಪ್ಪದರಿಂದ ಮತ್ತು ಪ್ರಾಮಾಣಿಕವಾಗಿ ಕರ್ಮ ಮಾಡುವದರಿಂದ ನಿಶ್ಚಯವಾಗಿ ಅವ° ಕೃಷ್ಣಪ್ರಜ್ಞೆಗೆ ಏರುತ್ತ. ಭಗವದ್ಗೀತಯ ಬರವವಂಗೆ ಓದುವವಂಗೆ ಕೃಷ್ಣನಲ್ಲಿ ನಂಬಿಕೆ ಇಲ್ಲದ್ದೆ ಇದ್ದರೆ ಇದರ ಓದಿ ಬರದ್ದರ್ಲಿ ಎಂತ ಗುಣವೂ ಇಲ್ಲೆ, ಕರ್ಮ ಬಂಧನಂದ ಮುಕ್ತಿಯೂ ಇಲ್ಲೆ.

“ಎಲ್ಲವೂ ಭಗವಂತ°, ಎಲ್ಲವನ್ನೂ ಭಗವಂತ° ಎನ್ನ ಕೈಂದ ಮಾಡುಸುತ್ತಿದ್ದ°, ಆನು ಮಾಡುತ್ತದೆಲ್ಲವೂ ಅವನ ಪೂಜೆ, ಯಾವ ಫಲಂದ ಒಳಿತು ಹೇಳ್ವದು ಅವಂಗೇ ಗೊಂತಿಪ್ಪದು, ಕರ್ಮದ ಪರಿಣಾಮವಾಗಿ ಸಿಕ್ಕುತ್ತದೆಲ್ಲವೂ ಭಗವಂತನ ಪ್ರಸಾದ” – ಈ ರೀತಿಯಾಗಿ ನಿತ್ಯಾನುಷ್ಠಾನಲ್ಲಿ ಈ ತತ್ವವ ಅಳವಡಿಸಿಗೊಂಡವಂಗೆ ಕರ್ಮ ಬಂಧನ ತಾಗುತ್ತಿಲ್ಲೆ. ಜೀವನದ ಪ್ರತಿಕ್ಷಣಲ್ಲಿಯೂ ಮನುಷ್ಯತ್ವ ಉಳ್ಳವರಾಗಿ, ಶ್ರದ್ಧಾ ಭಕ್ತಿಂದ ಮತ್ತು ಕಾಮನೆ ಅಸೂಯೆಗಳ ತ್ಯಜಿಸಿ ನಿಷ್ಕಾಮ ಕರ್ಮ ಮಾಡಿಗೊಂಡು ಹೋದರೆ ಜ್ಞಾನ ವೃದ್ಧಿ ಆವುತ್ತು. ನಿತ್ಯಾನುಷ್ಠಾನಲ್ಲಿ ಈ ತತ್ವ ಅನುಸಂಧಾನಮಾಡಿಗೊಂಡು ಇಪ್ಪಗ ನಮ್ಮ ಕರ್ಮವೇ ನಮ್ಮ ಕರ್ಮ ಬಂಧನಂದ ಕಳಚ್ಚುತ್ತದಕ್ಕೆ ಮೆಟ್ಟಿಲು ಮತ್ತು ಕರ್ಮ ಬಂಧನಂದ ನಮ್ಮ ಪಾರು ಮಾಡುತ್ತು.

ಶ್ಲೋಕ

ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಮ್ ।
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ ॥೩೨॥

ಪದವಿಭಾಗ

ಯೇ ತು ಏತತ್ ಅಭ್ಯಸೂಯಂತಃ ನ ಅನುತಿಷ್ಠಂತಿ ಮೇ ಮತಮ್ । ಸರ್ವ-ಜ್ಞಾನ-ವಿಮೂಢಾನ್ ತಾನ್ ವಿದ್ಧಿ ನಷ್ಟಾನ್ ಅಚೇತಸಃ ।

ಅನ್ವಯ

ಯೇ ತು ಏತತ್ ಅಭ್ಯಸೂಯಂತಃ ಮೇ ಮತಂ ನ ಅನುತಿಷ್ಠಂತಿ, ತಾನ್ ಸರ್ವ-ಜ್ಞಾನ-ವಿಮೂಢಾನ್ ಅಚೇತಸಃ ನಷ್ಟಾನ್ ವಿದ್ಧಿ ।

ಪ್ರತಿಪದಾರ್ಥ

ಯೇ – ಆರು, ತು – ಆದರೋ, ಏತತ್ – ಈ, ಅಭ್ಯಸೂಯಂತಃ – ಅಸೂಯೆಯುಳ್ಳವರಾಗಿ, ಮೇ – ಎನ್ನ, ಮತಮ್ – ಆಜ್ಞೆಯ, ನ ಅನುತುಷ್ಯಂತಿ – ಕ್ರಮಬದ್ಧವಾಗಿ ಆಚರಿಸುತ್ತವಿಲ್ಲೆಯೋ, ತಾನ್ – ಅವರ, ಸರ್ವ-ಜ್ಞಾನ-ವಿಮೂಢಾನ್  – ಸಕಲ ವಿಧಜ್ಞಾನಲ್ಲಿ  ಪೂರ್ಣಮೂಢರ, ಅಚೇತಸಃ   – ಕೃಷ್ಣಪ್ರಜ್ಞಾರಹಿತರು, ನಷ್ಟಾನ್ – ನಾಶವಾದ, ವಿದ್ಧಿ – ಹೇದು ಚೆನ್ನಾಗಿ ತಿಳಿ.

ಅನ್ವಯಾರ್ಥ

ಆರು ಅಸೂಯೆಂದ ಈ ಎನ್ನ ಬೋಧನೆಗಳ ಅಲಕ್ಷಿಸುತ್ತವೋ ಮತ್ತು ಆಚರುಸದ್ದೆ ಇರ್ತವೊ ಅವ್ವು ಏವ ತಿಳುವಳಿಕೆ ಇಲ್ಲದ್ದವವ್ವು, ವಿಮೂಢರು ಹೇಳಿ ತಿಳುಕ್ಕೊ. ಪರಿಪೂರ್ಣತೆಗಾಗಿ ಅವು ಪಡುವ ಶ್ರಮವೆಲ್ಲ ನಾಶವಾವ್ತು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆ ಇಲ್ಲದಿಪ್ಪದರ ದೋಷವ ಇಲ್ಲಿ ಎತ್ತಿ ಹೇಳಿದ್ದು. ಅತ್ಯುನ್ನತ ಕಾರ್ಯಕಾರಿ ಅಧಿಕಾರಿಯ ಆಜ್ಞೆಗೆ ಅವಿಧೇಯರಾದರೆ ಹೇಂಗೆ ಶಿಕ್ಷೆಯಾವ್ತೋ, ಹಾಂಗೇ, ದೇವೋತ್ತಮ ಪರಮ ಪುರುಷನ ಆಜ್ಞೆಗೆ ಅವಿಧೇಯರಾದರೂ ನಿಶ್ಚಯವಾಗ್ಯೂ ಶಿಕ್ಷೆ ಇದ್ದು. ಅವಿಧೇಯನಾದವ ಎಷ್ಟೇ ದೊಡ್ಡವನಾಗಿದ್ದರೂ ಅವ° ಶೂನ್ಯಹೃದಯದವನಾಗಿ, ಆತ್ಮವನ್ನೂ ಪರಬ್ರಹ್ಮವನ್ನೂ ಪರಮಾತ್ಮನನ್ನೂ ದೇವೋತ್ತಮ ಪರಮ ಪುರುಷನನ್ನೂ ಅರ್ತುಗೊಂಬಲೆ ಎಡಿಯದ್ದವನಾವ್ತ. ಆದ್ದರಿಂದ ಆತಂಗೆ ಬದುಕಿನ ಪರಿಪೂರ್ಣತೆಯ ಭರವಸೆಯೇ ಇಲ್ಲೆ.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳುತ್ತವು – ಆರು ಕಿಚ್ಚಿಂದ ಭಗವಂತನ ಸಿದ್ಧಾಂತವ ಆಚರಣೆಗೆ ತತ್ತವಿಲ್ಲೆಯೋ ಅವ್ವು ಎಲ್ಲಾ ತಿಳಿವಿಂಗೂ ಮೂಢರು, ವಿನಾಶದತ್ತ ಸರಿವ ತಿಳಿಗೇಡಿಗೊ. “ಎನ್ನ ಕೆಲಸಕ್ಕೆ ಆನೇ ಜವಾಬ್ದಾರ, ಆನು ಮಾಡುವದು ಎನ್ನ ಸ್ವಂತ ಹಿತಾಸಕ್ತಿಗೆ, ಅದರ ಫಲ ಆನು ಪಡೆತ್ತೆ, ಎನ್ನ ಕೈಲೇ ಎನ್ನ ಅಸ್ತಿತ್ವ ಇಪ್ಪದು, ಯಾವ ದೇವರೂ ಅದಕ್ಕೆ ಹೊಣೆಯಲ್ಲ ” ಎಂಬಿತ್ಯಾದಿ ಅಹಂಕಾರಂದ ಬದುಕುತ್ತವಂಗೆ ಎಂದಿಂಗೂ ಜ್ಞಾನದ ಬಾಗಿಲು ತೆರೆತ್ತಿಲ್ಲೆ. ಆತ ಪ್ರಪಂಚಲ್ಲಿ ವಿಮೂಢ (ಶ್ರೇಷ್ಠ ದಡ್ಡ) ಆಗಿರ್ತ. ಅಂತವಕ್ಕೆ ಸತ್ಯದ ಬಗ್ಗೆ ಚಿಂತನೆ ಮಾಡುವ ಶಕ್ತಿಯೂ ಇರ್ತಿಲ್ಲೆ ಅರ್ಹತೆಯೂ ಇರ್ತಿಲ್ಲೆ. ಅಂತವು ವಿನಾಶದತ್ತ ನಡವ ತಿಳಿಗೇಡಿಗೊ. ಅವ್ವು ಕತ್ತಲಿಂದ ಕತ್ತಲತ್ತ ಸಾಗುತ್ತ ಅಧಃಪಾತವ ತಲುಪಿ ತಮ್ಮ ಅಸ್ಥಿತ್ವವ ಕಳಕ್ಕೊಳ್ಳುತ್ತವು.

ಶ್ಲೋಕ

ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ ।
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ ॥೩೩॥

ಪದವಿಭಾಗ

ಸದೃಶಮ್ ಚೇಷ್ಟತೇ ಸ್ವಸ್ಯಾಃ ಪ್ರಕೃತೇಃ ಜ್ಞಾನವಾನ್ ಅಪಿ । ಪ್ರಕೃತಿಮ್ ಯಾಂತಿ ಭೂತಾನಿ ನಿಗ್ರಹಃ ಕಿಮ್ ಕರಿಷ್ಯತಿ ॥

ಅನ್ವಯ

ಜ್ಞಾನವಾನ್ ಅಪಿ ಸ್ವಸ್ತ್ಯಾಃ ಪ್ರಕೃತೇಃ ಸದೃಶಂ ಚೇಷ್ಟತೇ । ಭೂತಾನಿ ಪ್ರಕೃತಿಂ ಯಾಂತಿ । ನಿಗ್ರಹಃ ಕಿಂ ಕರಿಷ್ಯತಿ ?॥

ಪ್ರತಿಪದಾರ್ಥ

ಜ್ಞಾನವಾನ್ – ವಿದ್ವಾಂಸ°, ಅಪಿ – ಕೂಡ, ಸ್ವಸ್ಯಾಃ – ಸ್ವಂತದ, ಪ್ರಕೃತೇಃ  ಸದೃಶಮ್ – ಪ್ರಕೃತಿಗುಣಂಗೊಕ್ಕೆ ಅನುಗುಣವಾಗಿ,  ಚೇಷ್ಟತೇ – ಪ್ರಯತ್ನಿಸುತ್ತ°, ಭೂತಾನಿ – ಎಲ್ಲ ಜೀವಿಗೊ, ಪ್ರಕೃತಿಮ್ – ಪ್ರಕೃತಿಯ, ಯಾಂತಿ – ಹೊಂದುತ್ತವು, ನಿಗ್ರಹಃ – ನಿಗ್ರಹವು, ಕಿಮ್ – ಏನ, ಕರಿಷ್ಯತಿ – ಮಾಡುತ್ತು.  

ಅನ್ವಯಾರ್ಥ

ಪ್ರತಿಯೊಬ್ಬನೂ ತಾನು ತ್ರಿಗುಣಂಗಳಿಂದ ಪಡದ ಸ್ವಭಾವಕ್ಕೆ ಅನುಗುಣವಾಗಿ ನಡೆತ್ತವು. ಹಾಂಗಾಗಿ ತಿಳುವಳಿಕೆ ಇಪ್ಪವನೂ ಕೂಡ ತನ್ನ ಸ್ವಭಾವಕ್ಕೆ ಅನುಗುಣವಾಗಿ ಕಾರ್ಯ ನಡೆಸುತ್ತ°. ನಿಗ್ರಹಂದ ಎಂತ ಪ್ರಯೋಜನ ?

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಯ ಆಧ್ಯಾತ್ಮಿಕ ವೇದಿಕೆಲಿ ನೆಲೆಗೊಳ್ಳದ್ದರೆ ಮನುಷ್ಯನಾದವ° ಐಹಿಕ ಪ್ರಕೃತಿಯ ಗುಣಂಗಳ ಪ್ರಭಾವಂದ ಬಿಡಿಸಿಗೊಂಬಲೆಡಿಯ. ಅಧ್ಯಯನ ದೃಷ್ಟಿಂದ ಒಬ್ಬ ಮನುಷ್ಯ ದೊಡ್ಡ ವಿದ್ವಾಂಸ ಆಗಿಕ್ಕು. ಆದರೆ, ಐಹಿಕ ಪ್ರಕೃತಿಯೊಂದಿಂಗೆ ಬಹುಕಾಲ ಸಹವಾಸ ಮಾಡುವದರಿಂದ ಆತ ಬಂಧನಲ್ಲಿರುತ್ತ°. ಐಹಿಕ ಅಸ್ತಿತ್ವದ ದೃಷ್ಟಿಂದ ಮನುಷ್ಯ° ತನಗೆ ವಿಧಿಸಿದ ಕರ್ತವ್ಯಂಗಳಲ್ಲಿ ತೊಡಗಿಕ್ಕು, ಆದರೂ, ಕೃಷ್ಣಪ್ರಜ್ಞೆಯು ಆತನ ಐಹಿಕ ತೊಡಕಿಂದ ಬಿಡುಗಡೆ ಹೊಂದಲೆ ಸಹಾಯಕ ಆವುತ್ತು. ಆದ್ದರಿಂದ ಕೃಷ್ಣಪ್ರಜ್ಞೆಯ ಸಾಧುಸುವವರೇಂಗೆ ಮನುಷ್ಯ° ತನ್ನ ನಿಯತ ಕರ್ತವ್ಯಂಗಳ, ವೃತ್ತಿಯ ಬಿಡ್ಳಾಗ. ಆರೂ ಇದ್ದಕ್ಕಿದ್ದಂತೆ ತನ್ನ ನಿಯತ ಕರ್ತವ್ಯಂಗಳ ತ್ಯಜಿಸಿ, ಕೃತಕವಾಗಿ ಯೋಗಿ, ಅಥವಾ ಅಧ್ಯಾತ್ಮಿಕವಾದಿ ಹೇಳಿ ಅಪ್ಪಲಾಗ. ತನ್ನ ಸ್ಥಾನಲ್ಲೇ ಇದ್ದುಗೊಂಡು, ಹೆಚ್ಚಿನ ಶಿಕ್ಷಣ ಪಡದವರ ಮಾರ್ಗದರ್ಶನಲ್ಲಿ ಕೃಷ್ಣಪ್ರಜ್ಞೆಯ ಪಡವಲೆ ಪ್ರಯತ್ನುಸುವದು ಉತ್ತಮ.  

ಬನ್ನಂಜೆ ವಿವರುಸುತ್ತವು – ಎಷ್ಟು ತಿಳುದವನಾಗಿದ್ದರು ತನ್ನ ಸಂಸ್ಕಾರಕ್ಕೆ (ಸ್ವಭಾವಕ್ಕೆ) ತಕ್ಕ ಹಾಂಗೆಯೇ ಮನುಷ್ಯ° ನಡಕ್ಕೊಳ್ಳುತ್ತ°. ಎಲ್ಲಾ ಜೀವಿಗಳೂ ಸಂಸ್ಕಾರದ (ಸ್ವಭಾವದ) ಕೈಗೊಂಬಗೊ. ಅದರ ಅದುಮಿ ಹಿಡ್ಕೊಂಡೆಂತ ಗುಣ!

ಆರು ಎಷ್ಟು ಉಪದೇಶ ಮಾಡಿರೂ ಇಡೀ ಜಗತ್ತಿಲ್ಲಿ ಎಲ್ಲೋರು ಒಂದೇ ಮಾರ್ಗವ ಅನುಸರುಸುವದು ಎಂದೂ ಸಾಧ್ಯ ಇಲ್ಲೆ. ಇದಕ್ಕೆ ನಮ್ಮ ನಡೆ, ಸಂಸ್ಕಾರ, ಸ್ವಭಾವ ಇತ್ಯಾದಿ ಕಾರಣಂಗೊ.  ನಾವು ನಮ್ಮ ಪೂರ್ವ ಸಂಸ್ಕಾರಂಗಳ ನೋಡಿರೆ, ಸಾತ್ವಿಕ, ರಾಜಸ , ತಾಮಸ ಅನುಭವಂಗೊ ಜನ್ಮ ಜನ್ಮಾಂತರಂದ ಸುಪ್ತಪ್ರಜ್ಞೆಲಿ ಇರುತ್ತು. ಅನೇಕ ಜನ್ಮಂಗಳ ಮೂಲಕ ಹರುದು ಬಂದ ಈ ಜೀವಕ್ಕೆ ಅನೇಕ ಜನಂಗಳ ಅನುಭವದ ಸಂಸ್ಕಾರ ಇದ್ದು. ಒಂದೇ ಜನ್ಮವ ನೋಡಿರೂ ಕೂಡ, ಹುಟ್ಟಿ, ಬೆಳದು ಬಂದ ವಾತಾವರಣದ ಛಾಪು, ಪ್ರಭಾವ ಸದಾ ನಮ್ಮ ಮೇಲೆ ಇರುತ್ತು. ಇದಲ್ಲದೆ ಪ್ರತೀ ವ್ಯಕ್ತಿಗೂ ಆತನದ್ದೇ ಆದ ಜೀವಸ್ವಭಾವ ಇರುತ್ತು. ಆತ° ಸದಾ ಅದಕ್ಕೆ ತಕ್ಕಂತೆ ನಡಕ್ಕೊಳ್ಳುತ್ತ°. ಮೆಣಸಿನ ಗೆಡು ಹೇಂಗೆ ಚೀಪೆ ಹಣ್ಣ ಕೊಡುತ್ತಿಲ್ಲೆಯೋ ಹಾಂಗೆಯೇ ಒಬ್ಬ ವ್ಯಕ್ತಿಯ ಜೀವ ಸ್ವಭಾವವ ಬದಲುಸುವದು ಅಸಾಧ್ಯ. ಸ್ವಭಾವ ಮತ್ತೆ ಪ್ರಭಾವದ ಸಮ್ಮಿಶ್ರಣ ಈ ಬದುಕು.
“ಜೀವ ಸ್ವಭಾವದಂತೆ ನಡೆ, ನುಡಿ, ಕ್ರಿಯೆ’. ಹಾಂಗಾದರೆ ಈ ಜೀವನಲ್ಲಿ ಪ್ರಯತ್ನ ಎಂತಕ್ಕೆ ಮಾಡೆಕು ? – ಎಂತಕೆ ಹೇಳಿರೆ ಸದಾ ಪ್ರಯತ್ನ ಮಾಡುವದರಿಂದ ಸಂಸ್ಕಾರಂದ ಅಥವಾ ಪ್ರಭಾವಂದ ಇತ್ಲಾಗಿ ಬಪ್ಪಲೆ ಸಾಧ್ಯ. ಸಹಜ ಸ್ವಭಾವಲ್ಲಿ ನಿಂಬವರೆಂಗೆ  ಪ್ರಭಾವಂದ ಪಾರಪ್ಪ ನಿರಂತರ ಪ್ರಯತ್ನ ಅಗತ್ಯ. ನಿರಂತರ ಅಧ್ಯಾತ್ಮ ಸಾಧನೆ ನಮ್ಮ ಸಹಜ ಸ್ವಭಾವವ ಅಭಿವ್ಯಕ್ತಗೊಳುಸುಲೆ ಸಹಾಯ ಮಾಡುತ್ತು.

ಶ್ಲೋಕ

ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ ।
ತಯೋರ್ನ ವಶಮಾಗಚ್ಛೇತ್ ತೌ ಹ್ಯಸ್ಯ ಪರಿಪಂಥಿನೌ ॥೩೪॥

ಪದವಿಭಾಗ

ಇಂದ್ರಿಯಸ್ಯ ಇಂದ್ರಿಯಸ್ಯ-ಅರ್ಥೇ ರಾಗ-ದ್ವೇಷೌ ವ್ಯವಸ್ಥಿತೌ । ತಯೋಃ ನ ವಶಮ್ ಆಗಚ್ಛೇತ್ ತೌ ಹಿ ಅಸ್ಯ ಪರಿಪಂಥಿನೌ ॥

ಅನ್ವಯ

ಇಂದ್ರಿಯಸ್ಯ ಇಂದ್ರಿಯಸ್ಯ-ಅರ್ಥೇ ರಾಗ-ದ್ವೇಷೌ ವ್ಯವಸ್ಥಿತೌ , ತಯೋಃ ವಶಂ ನ ಆಗಚ್ಛೇತ್ । ತೌ ಹಿ ಅಸ್ಯ ಪರಿಪಂಥಿನೌ ॥

ಪ್ರತಿಪದಾರ್ಥ

ಇಂದ್ರಿಯಸ್ಯ – ಇಂದ್ರಿಯದ, ಇಂದ್ರಿಯಸ್ಯ-ಅರ್ಥೇ – ಇಂದ್ರಿಯ ವಿಷಯಲಿ, ರಾಗ-ದ್ವೇಷೌ  – ಆಸಕ್ತಿ –  ಅನಾಸಕ್ತಿಯೂ (ದ್ವೇಷ), ವ್ಯವಸ್ಥಿತೌ – ನಿಯಂತ್ರಣಕ್ಕೆ ಎರಡು ಒಳಗಾಯ್ದು. ತಯೋಃ – ಅವುಗಳೆರಡರ, ವಶಮ್ – ನಿಯಂತ್ರಣದೊಳ , ನ ಆಗಚ್ಛೇತ್  – ಬಪ್ಪಲಾಗ, ತೌ – ಅವೆರಡು, ಹಿ – ಖಂಡಿತವಾಗಿಯೂ, ಅಸ್ಯ – ಅವನ, ಪರಿಪಂಥಿನೌ – ಅಡ್ಡಿಗೊ.

ಅನ್ವಯಾರ್ಥ

ಇಂದ್ರಿಯಂಗೊ ಮತ್ತು ಅವುಗಳ ವಿಷಯಂಗೊಕ್ಕೆ ಸಂಬಂಧಿಸಿ ರಾಗದ್ವೇಷಂಗಳ ನಿಯಂತ್ರಿಸುವ ತತ್ವಂಗೊ ಇದ್ದು. ಮನುಷ್ಯ° ಇಂತಹ ರಾಗದ್ವೇಷಂಗಳ ವಶ ಅಪ್ಪಲಾಗ. ಇವು ಆತ್ಮಸಾಕ್ಷಾತ್ಕಾರದ ಮಾರ್ಗಲ್ಲಿ ಅಡ್ಡಿಗೊ.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿಪ್ಪವು ಸಹಜವಾಗಿಯೇ ಐಹಿಕ ಇಂದ್ರಿಯ ತೃಪ್ತಿಯ ವಿಷಯಲ್ಲಿ ತೊಡಗಲೆ ಇಷ್ಟಪಡುತ್ತವಿಲ್ಲೆ. ಆದರೆ, ಇಂತಹ ಪ್ರಜ್ಞೆಲಿ ಇಲ್ಲದ್ದವು ಅಪೌರುಷೇಯ ಧರ್ಮಗ್ರಂಥಂಗಳ ವಿಧಿ-ನಿಯಮಂಗಳ ಅನುಸರುಸೆಕು. ಐಹಿಕ ಸೆರೆಗೆ ಮಿತಿ ಇಲ್ಲದ ಇಂದ್ರಿಯಭೋಗವೇ ಕಾರಣ. ಆದರೆ, ಅಪೌರುಷೇಯ ಶಾಸ್ತ್ರಂಗಳ ವಿಧಿ-ನಿಯಮಂಗಳ ಅನುಸರುಸುವವ° ಇಂದ್ರಿಯ ವಸ್ತುಗಳ ಗೋಜಿಂಗೆ ಸಿಕ್ಕಿಬೀಳುತ್ತನಿಲ್ಲೆ. ಉದಾಹರಣೆಗೆ, ಬದ್ಧ ಆತ್ಮಕ್ಕೆ ಕಾಮತೃಪ್ತಿಯು ಅಗತ್ಯ. ವಿವಾಹಬಂಧನದ ಸ್ವಾತಂತ್ರ್ಯ ಮಿತಿಲಿ ಕಾಮತೃಪ್ತಿಗೆ ಅವಕಾಶ ಇದ್ದು. ಶಾಸ್ತ್ರಂಗಳ ಆದೇಶದಂತೆ, ತನ್ನ ಪತ್ನಿಯ ಹೊರತಾಗಿ ಪರಸ್ತೀ ಜೊತೆ ಕಾಮಭೋಗ ಪಡವಂತಿಲ್ಲೆ. ಉಳಿದೆಲ್ಲಾ ಸ್ತ್ರೀಯರ ತನ್ನ ಅಬ್ಬೆ ಹಾಂಗೆ ಕಾಣತಕ್ಕದ್ದು. ಇಂತಹ ಆದೇಶ ಇದ್ದಾಗ್ಯೂ ಮನುಷ್ಯ° ಇತರ ಸ್ತ್ರೀಯರೊಡನೆ ಕಾಮಭೋಗವ ಬಯಸುತ್ತ°. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕೆಕು. ಇಲ್ಲವಾದರೆ, ಅವು ಆತ್ಮಸಾಕ್ಷಾತ್ಕಾರದ ಮಾರ್ಗಲ್ಲಿ ಅಡ್ಡಿಗೊ ಆಗಿರ್ತು. ಭೌತಿಕ ದೇಹ ಇಪ್ಪನ್ನಾರ ಭೌತಿಕ ದೇಹದ ಅಗತ್ಯಕ್ಕೆ ಅವಕಾಶ ಇದ್ದು. ಆದರೆ, ವಿಧಿ-ನಿಯಮಂಗೊಕ್ಕೆ ಬದ್ಧವಾಗಿ ಮಾಂತ್ರ. ಅಂದರೂ ನಾವು ಇಂತಹ ಅವಕಾಶಂಗಳ ಹತೋಟಿಯನ್ನೇ ಅವಲಂಬಿಸಿಪ್ಪಲಾಗ. ಆ ನಿಯಮ ನಿಬಂಧನೆಗೊಕ್ಕೆ ಅಂಟಿಕೊಳ್ಳದ್ದೆ ಅದರ ಅನುಸರುಸೇಕು. ಎಂತಕೆ ಹೇಳಿರೆ, ನಿಯಮಂಗೊಕ್ಕೆ ವಿಧೇಯವಾಗಿ ಇಂದ್ರಿಯ ತೃಪ್ತಿಪಟ್ಟುಗೊಂಬ ರೂಢಿಯೂ ಮನುಷ್ಯನ ದಾರಿತಪ್ಪುಸಲೆ ಅವಕಾಶ ಕೊಡುತ್ತು. ರಾಜಮಾರ್ಗಲ್ಲಿಯೂ ಅಪಘಾತಂಗೊ ಸಾಧ್ಯತೆ ಇಪ್ಪ ಹಾಂಗೆ ಮಾರ್ಗವ ಬಹು ಎಚ್ಚರಿಕೆಂದ ಒಳ್ಳೆಯ ಸ್ಥಿತಿಲಿ ಉಳುಸಿಗೊಂಡು ಬರೆಕು. ಆದರೂ ಅತ್ಯಂತ ಸುರಕ್ಷಿತ ರಸ್ತೆಲಿಯೂ ಸಾನ ಅಪಘಾತ ಆವ್ತೇ ಇಲ್ಲೆ ಹೇಳಿ ಆರೂ ಎಂದೂ ಖಂಡಿತವಾಗಿಯೂ ಭರವಸೆಂದ ಇಪ್ಪಲೆ ಸಾಧ್ಯ ಇಲ್ಲೆ. ಐಹಿಕ ಸಹವಾಸ ಇಪ್ಪದರಿಂದ ಇಂದ್ರಿಯಭೋಗದ ಮನೋಧರ್ಮ ಬಹು ದೀರ್ಘಕಾಲಂದ ಉಳುಕ್ಕೊಂಡು ಬಯಿಂದು. ಆದ್ದರಿಂದ ನಿಯಂತ್ರಣಕ್ಕೆ ಒಳಗಾಗಿದ್ದರೂ ಪತನದ ಸಾಧ್ಯತೆ ಇದ್ದೇ ಇದ್ದು. ಆದ್ದರಿಂದ, ನಿಯಂತ್ರಿತ ಇಂದ್ರಿಯ ತೃಪ್ತಿಯನ್ನೂ ಕೂಡ ನಿಶ್ಚಯವಾಗಿಯೂ ತಪ್ಪುಸೇಕು. ಆದರೆ, ಕೃಷ್ಣಪ್ರಜ್ಞೆಲಿ, ಹೇಳಿರೆ, ಸದಾ ಕೃಷ್ಣನ ಪ್ರೇಮಪೂರ್ವಕ ಸೇವೆಲಿ, ಆಸಕ್ತಿಯ ಬೆಳೆಶಿಗೊಂಡರೆ ಅದು ಎಲ್ಲಾ ಇಂದ್ರಿಯ ಕರ್ಮ ಭೋಗಂದ ಮನುಷ್ಯನ ಕಾಪಾಡುತ್ತು. ಆದ್ದರಿಂದ ಬದುಕಿನ ಯಾವುದೇ ಘಟ್ಟಾಲ್ಲಿಯೂ ಕೃಷ್ಣಪ್ರಜ್ಞೆಲಿ ಅನಾಸಕ್ತರಪ್ಪಲೆ ಪ್ರಯತ್ನಿಸಲಾಗ. ಎಲ್ಲ ರೀತಿಯ ಇಂದ್ರಿಯಾಸಕ್ತಿಂದ ದೂರ ಇಪ್ಪ ಉದ್ದೇಶವು ಅಂತಿಮವಾಗಿ ಕೃಷ್ಣಪ್ರಜ್ಞೆಯ ವೇದಿಕೆಲಿ ನೆಲೆಯ ಕಂಡುಕೊಳ್ಳುತ್ತು. 

ಇಲ್ಲಿ ಕೃಷ್ಣ° ಅರ್ಜುನಂಗೆ ಯುದ್ಧಮಾಡುವಾಗ ಕೂಡ ರಾಗ-ದ್ವೇಷವ ಮನಸ್ಸಿಲ್ಲಿ ಮಡಿಕ್ಕೊಳ್ಳೆಡ. ಕೇವಲ ನ್ಯಾಯಾನ್ಯಾಯದ ಹೋರಾಟ ಎಂಬ ನಿರ್ಲಿಪ್ತತೆಂದ ಯುದ್ಧಮಾಡು ಹೇಳಿ ಉಪದೇಶಿಸುತ್ತ°.      

ಶ್ಲೋಕ

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ।೩೫॥

ಪದವಿಭಾಗ

ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸು-ಅನುಷ್ಠಿತಾತ್ । ಸ್ವಧರ್ಮೇ ನಿಧನಮ್ ಶ್ರೇಯಃ ಪರಧರ್ಮಃ ಭಯ-ಆವಹಃ

ಅನ್ವಯ

ಸು-ನುಷ್ಠಿತಾತ್ ಪರಧರ್ಮಾತ್ ವಿಗುಣಃ ಸ್ವಧರ್ಮಃ ಅಪಿ ಶ್ರೇಯಾನ್ । ಸ್ವಧರ್ಮೇ ನಿಧನಂ ಶ್ರೇಯಃ । ಪರಧರ್ಮಃ ಭಯ-ಆವಹಃ ॥

ಪ್ರತಿಪದಾರ್ಥ

ಸು-ಅನುಷ್ಠಿತಾತ್  (ಸ್ವನುಷ್ಠಿತಾತ್) – ಪರಿಪೂರ್ಣವಾಗಿ ಆಚರುಸಿದ, ಪರಧರ್ಮಾತ್ – ಇತರರಿಂಗೆ ಹೇಳಿಪ್ಪ ಕರ್ತವ್ಯಂಗೊಕ್ಕಿಂತ, ವಿಗುಣಃ – ತಪ್ಪಾಗಿದ್ದರೂ, ಸ್ವಧರ್ಮಃ – ತನ್ನ ವಿಧ್ಯುಕ್ತ ಕರ್ಮಂಗೊ, ಅಪಿ – ಕೂಡ, ಶ್ರೇಯಾನ್ – ಬಹು ಉತ್ತಮಕರವಾದ್ದು,   ಸ್ವಧರ್ಮೇ – ತನ್ನ ವಿಧ್ಯುಕ್ತ ಕರ್ತವ್ಯಂಗಳಲ್ಲಿ, ನಿಧನಮ್ – ನಾಶವು, ಶ್ರೇಯಃ – ಉತ್ತಮವು, ಪರಧರ್ಮಃ – ಇತರರಿಂಗೆ ವಿಧ್ಯುಕ್ತವಾದ ಕರ್ತವ್ಯಂಗೊ, ಭಯ ಆವಹಃ – ಅಪಾಯಕರವಾದವು. 

ಅನ್ವಯಾರ್ಥ

ತನ್ನ ನಿಯತ ಕರ್ತವ್ಯಂಗಳ ತಪ್ಪಾಗಿಯಾದರೂ ನಿರ್ವಹಿಸುವದು, ಪರಧರ್ಮವ ಪರಿಪೂರ್ಣವಾಗಿ ಮಾಡುವದಕ್ಕಿಂತ ಉತ್ತಮವು. ಮತ್ತೊಬ್ಬರ ಧರ್ಮವ ಆಚರುಸುವದಕ್ಕಿಂತ ಸ್ವಧರ್ಮಲ್ಲಿ ನಾಶ ಅಪ್ಪದೇ ಮೇಲು. ಎಂತಕೆ ಹೇಳಿರೆ ಪರಧರ್ಮವು ಅಪಾಯಕಾರಿಯೂ ಭಯಂಕರವೂ ಆಗಿದ್ದು.

ತಾತ್ಪರ್ಯ / ವಿವರಣೆ

ಇತರರಿಂಗೆ ವಿಧಿಸಿಪ್ಪ ಕರ್ತವ್ಯಂಗಳ ಮಾಡುವದಕ್ಕಿಂತ ಮನುಷ್ಯ° ತನ್ನ ನಿಯತ ಕರ್ತವ್ಯಂಗಳ ಕೃಷ್ಣಪ್ರಜ್ಞೆಲಿ ಮಾಡೆಕು. ಲೌಕಿಕ ಕರ್ತವ್ಯಂಗೊ ಹೇಳಿರೆ ನಿಸರ್ಗಗುಣಂಗಳ ಅಧೀನಲ್ಲಿ ಮನುಷ್ಯನ ಮಾನಸಿಕ – ಭೌತಿಕ ಸ್ಥಿತಿಗನುಗುಣವಾಗಿ ನಿರ್ಧರಿಸಿದ ಕರ್ತವ್ಯಂಗೊ. ಆಧ್ಯಾತ್ಮಿಕ ಕರ್ತವ್ಯಂಗೊ ಕೃಷ್ಣನ ಆಧ್ಯಾತ್ಮಿಕ ಸೇವೆಗೊಕ್ಕಾಗಿ ಗುರುಗೊ ಆಜ್ಞಾಪಿಸಿಪ್ಪವು. ಐಹಿಕ ಕರ್ತವ್ಯಂಗಳಾಗಲೀ, ಆಧ್ಯಾತ್ಮಿಕ ಕರ್ತವ್ಯಂಗಳಾಗಲೀ ಮನುಷ್ಯ° ಇನ್ನೊಬ್ಬಂಗೆ ವಿಧಿಸಿಪ್ಪ ಕರ್ತವ್ಯಂಗಳ ಅನುಕರುಸದ್ದೆ ತನಗೆ ವಿಧಿಸಿದ ಕರ್ತವ್ಯಂಗಳ ಸಾಯುವವರಗೆ ಪರಿಪಾಲುಸೆಕು. ಆಧ್ಯಾತ್ಮಿಕ ವೇದಿಕೆಯ ಕರ್ತವ್ಯಂಗೊ ಮತ್ತು ಐಹಿಕ ವೇದಿಕೆಯ ಕರ್ತವ್ಯಂಗೊ ಭಿನ್ನವಾಗಿಕ್ಕು. ಆದರೆ, ಅಧಿಕೃತ ನಿರ್ದೇಶನವ ಪಾಲುಸುವ ತತ್ವವ ಆಚರುಸುವವಂಗೆ ಯಾವಾಗಳೂ ಒಳ್ಳೆದು. ಐಹಿಕ ಪ್ರಕೃತಿಯ ಗುಣಂಗಳ ಹಿಡಿತಲ್ಲಿಪ್ಪಗ ಮನುಷ್ಯ° ತನ್ನ ನಿರ್ದಿಷ್ಟ ಸನ್ನಿವೇಶಕ್ಕೆ ವಿಧಿಸಿದ ನಿಯಮಂಗಳ ಅನುಸರುಸೆಕು, ಇತರರ ಅನುಕರುಸಲಾಗ. ಉದಾ – ಸತ್ವಗುಣದ ಬ್ರಾಹ್ಮಣ° ಅಹಿಂಸೆಯ ಅನುಸರುಸುತ್ತ°. ರಜೋಗುಣದ ಕ್ಷತ್ರಿಯ ಹಿಂಸೆಯ ಆಚರುಸುತ್ತ°. ಆದ್ದರಿಂದ ಕ್ಷತ್ರಿಯಂಗೆ ಅಹಿಂಸೆಯ ತತ್ವಂಗಳ ಆಚರುಸುವ ಬ್ರಾಹ್ಮಣನ ಅನುಕರುಸುವದಕ್ಕಿಂತ ಹಿಂಸೆಯ ನಿಯಮಂಗಳ ಅನುಸರುಸಿ ಸೋಲುವದು ಉತ್ತಮ. ಪ್ರತಿಯೊಬ್ಬನೂ ಕ್ರಮಕ್ರಮವಾದ ಪ್ರಕ್ರಿಯೆಂದ ತನ್ನ ಹೃದಯವ ಶುದ್ಧಿಗೊಳುಸೆಕು. ಆದರೆ, ಐಹಿಕ ಸಿಸರ್ಗದ ಗುಣಂಗಳ ಮೀರಿ ಕೃಷ್ಣಪ್ರಜ್ಞೆಲಿ ಸಂಪೂರ್ಣವಾಗಿ ನೆಲೆಯ ಕಂಡುಕೊಂಡಪ್ಪಗ ಮನುಷ್ಯ° ನಿಜವಾದ ಗುರುವಿನ ಮಾರ್ಗದರ್ಶನಲ್ಲಿ ಏನನ್ನಾದರೂ ಮಾಡ್ಳೆ ಎಡಿಗು. ಕೃಷ್ಣಪ್ರಜ್ಞೆಯ ಆ ಪರಿಪೂರ್ಣ ಸ್ಥಿತಿಲಿ ಕ್ಷತ್ರಿಯ ಬ್ರಾಹ್ಮಣನ ಕರ್ತವ್ಯವ ಮಾಡ್ಳಕ್ಕು ಅಥವಾ ಬ್ರಾಹ್ಮಣ ಕ್ಷತ್ರಿಯನ ಧರ್ಮವ ಪಾಲುಸಲಕ್ಕು. ಆಧ್ಯಾತ್ಮಿಕ ಸ್ಥಿತಿಲಿ ಐಹಿಕ ಜಗತ್ತಿನ ವ್ಯತ್ಯಾಸಂಗೊ ಅಮುಖ್ಯವಾಗಿರುತ್ತು. ಉದಾಹರಣಗೆ – ವಿಶ್ವಾಮಿತ್ರ ಮೂಲತಃ ಕ್ಷತ್ರಿಯ., ಆದರೆ., ಅಕೇರಿಗೆ ಅವ° ಬ್ರಾಹ್ಮಣನಾಗಿ ವರ್ತಿಸಿದ°. ಪರಶುರಾಮ ಬ್ರಾಹ್ಮಣ., ಆದರೆ, ಅಕೇರಿಗೆ ಅವ° ಕ್ಷತ್ರಿಯನಂತೆ ನಡಕ್ಕೊಂಡ. ಆಧ್ಯಾತ್ಮಿಕ ನೆಲೆಯ ಸಾಧಿಸಿದವಂಗೆ ಮಾತ್ರ ಹಾಂಗೆ ಮಾಡ್ಳೆ ಸಾಧ್ಯ ಆತು. ಆದರೆ, ಐಹಿಕ ನೆಲೆಲಿ ಇಪ್ಪಷ್ಟು ಕಾಲ ಮನುಷ್ಯ° ಐಹಿಕ ನಿಸರ್ಗದ ಗುಣಂಗಳ ಅನುಗುಣವಾಗಿ ತನ್ನ ಕರ್ತವ್ಯಂಗಳ ಮಾಡೆಕು. ಒಟ್ಟಿಂಗೆ, ಅವಂಗೆ ಕೃಷ್ಣಪ್ರಜ್ಞೆಯ ಅರಿವೂ ಇರೆಕ್ಕು.   

ಬನ್ನಂಜೆ ವ್ಯಾಖ್ಯಾನಿಸುತ್ತವು – ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವ ಇರುತ್ತು ಮತ್ತು ಅದರ ಬದಲುಸಲೆ ಸಾಧ್ಯ ಇಲ್ಲೆ ಏಕಾಏಕಿಯಾಗಿ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ. ಅದು ಸ್ವಧರ್ಮ. ಇದು ಸಹಜ ಕ್ರಿಯೆ. ನಮ್ಮ ಸಹಜ ಸ್ವಭಾವ ಯಾವುದೋ ಅದರ ನಾವು ಮಾಡೆಕೇ ವಿನಃ ಇನ್ನೊಂದರಲ್ಲ. ಅದಕ್ಕಾಗಿಯೇ, ಅಪ್ಪ – ಅಬ್ಬೆ ತಮ್ಮ ಅಭಿರುಚಿಯ ಮಕ್ಕಳ ಮೇಲೆ ಹೇರದ್ದೆ, ಮಕ್ಕಳ ನಿಜ ಸ್ವಭಾವ ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವ ರೂಪುಸೇಕು. ಇಲ್ಲದ್ದರೆ, ಅವರ ಭವಿಷ್ಯವ ಹಾಳುಮಾಡಿದಾಂಗೆ. ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವಲ್ಲಿರುತ್ತು. ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸೇಕೇ ಹೊರತು ಇನ್ಯೇವುದೋ ಧರ್ಮವ ಅನುಸರುಸಿರೆ ನಡೆಯ. ಇಲ್ಲಿ ಶ್ರೀಕೃಷ್ಣ° ಹೇಳುತ್ತ° – “ನಿನ್ನ ಸ್ವಧರ್ಮ ಆಚರಣೆಲಿ ನ್ಯೂನತೆ ಇದ್ದರೂ ಅದು ಪರಕೀಯ ಧರ್ಮವ ಆಚರುಸುವದಿಕ್ಕಿಂತ ಶ್ರೇಷ್ಠವೇ”.  ಪರಧರ್ಮವ ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲೆ., ಅದು ಅಸಹ್ಯ ಅಥವಾ ಭಯಂಕರ ಅಪಾಯಕಾರಿ. ಇಲ್ಲಿ ಯುದ್ಧಮಾಡುವದು ಅರ್ಜುನನ ಸ್ವಭಾವ ಧರ್ಮ. ಅದರ ಬಿಟ್ಟು ಅವ° ತಪಸ್ಸು ಮಾಡ್ಳೆ ಕಾಡಿಂಗೆ ಹೋವ್ತೆ ಹೇಳುವದು ಅವನ ಸ್ವಧರ್ಮಕ್ಕೆ ವಿರುದ್ಧ. ಹಾಂಗಾಗಿ ಸ್ವಧರ್ಮ ಪಾಲನೆ ಮಾಡು, ರಾಗ-ದ್ವೇಷವ ಬಿಟ್ಟು ಹೋರಾಡು ಹೇದು ಬೋಧುಸುತ್ತ° ಶ್ರೀಕೃಷ್ಣ°.     

ಶ್ಲೋಕ

ಅರ್ಜುನ ಉವಾಚ –
ಅಥ ಕೇನ ಪ್ರಯುಕ್ತೋsಯಂ ಪಾಪಂ ಚರತಿ ಪೂರುಷಃ ।
ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ ॥೩೬॥

ಪದವಿಭಾಗ

ಅರ್ಜುನಃ ಉವಾಚ –
ಅಥ ಕೇನ ಪ್ರಯುಕ್ತಃ ಅಯಂ ಪಾಪಮ್ ಚರತಿ ಪೂರುಷಃ । ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ ॥

ಅನ್ವಯ

ಅರ್ಜುನಃ ಉವಾಚ –
ಹೇ ವಾರ್ಷ್ಣೇಯ!, ಅಥ ಕೇನ ಪ್ರಯುಕ್ತಃ ಅಯಂ ಪೂರುಷಃ ಅನಿಚ್ಛನ್ ಅಪಿ, ಬಲಾತ್ ನಿಯೋಜಿತಃ ಇವ ಪಾಪಂ ಚರತಿ ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°,  ಹೇ ವಾರ್ಷ್ಣೇಯ! – ಏ ವೃಷ್ಣಿವಂಶದವನೇ!, ಅಥ – ಮತ್ತೆ, ಕೇನ – ಏವುದರಿಂದ, ಪ್ರಯುಕ್ತಃ – ಬಲವಂತಕ್ಕೆ ಒಳಗಾವ್ತ°, ಅಯಮ್ ಪೂರುಷಃ – ಒಬ್ಬ° ಮನುಷ್ಯ°, ಅನಿಚ್ಛನ್ – ಅಪೇಕ್ಷಿಸದ್ದೆ, ಅಪಿ – ಆಗಿದ್ದರೂ, ಬಲಾತ್ – ಬಲಂದ, ನಿಯೋಜಿತಃ ಇವ – ತೊಡಗುತ್ತ° ಎಂಬ ಹಾಂಗೆ, ಪಾಪಮ್ – ಪಾಪಂಗಳ, ಚರತಿ – ಮಾಡುತ್ತ°?

ಅನ್ವಯಾರ್ಥ

ಅರ್ಜುನ° ಹೇಳುತ್ತ° – ಏ ವೃಷ್ಣಿವಂಶಜನಾದ ಶ್ರೀಕೃಷ್ಣನೇ!, ಮನುಷ್ಯ° ಇಷ್ಟವಿಲ್ಲದ್ದರೂ ಬಲಾತ್ಕಾರಂದ (ಬಲವಂತಕ್ಕೆ ಒಳಗಾಗಿ) ಪಾಪಕಾರ್ಯಂಗಳ ಮಾಡ್ಳೆ ಏವುದರಿಂದ ಪ್ರಚೋದಿತನಾವುತ್ತ°?

ತಾತ್ಪರ್ಯ / ವಿವರಣೆ

ಜೀವಿ, ಪರಮ ಪ್ರಭುವಿನ ವಿಭಿನ್ನ ಅಂಶ. ಹಾಂಗಾಗಿ ಅದು ಮೂಲತಃ ಆಧ್ಯಾತ್ಮಿಕವಾದ್ದು, ಪರಿಶುದ್ಧವಾದ್ದು ಮತ್ತು ಎಲ್ಲ ಐಹಿಕ ಕಶ್ಮಲಂಗಳಿಂದ ಮುಕ್ತವಾದ್ದು. ಹಾಂಗಾಗಿ ಮನುಷ್ಯ° ಈ ಐಹಿಕ ಜಗತ್ತಿನ ಪಾಪಂಗೊಕ್ಕೆ ಒಳಪಟ್ಟವನಲ್ಲ. ಆದರೆ ಐಹಿಕ ನಿಸರ್ಗದ ಸಂಪರ್ಕದಲ್ಲಿಪ್ಪಗ ಅವ° ಅನೇಕ ಪಾಪಂಗಳ ಮಾಡುತ್ತ°. ಕೆಲವೊಂದರಿ ತನ್ನ ಇಚ್ಛೆಗೆ ವಿರುದ್ಧವಾಗಿಯೂ ಬಲವಂತಕ್ಕೊಳಗಾಗಿಯೂ ಪಾಪಂಗಳ ಮಾಡುತ್ತ°. ಹಾಂಗಾಗಿ  ವಕ್ರಜೀವಿಗಳ ವಕ್ರಬುದ್ಧಿಯ ಕುರಿತು ಅರ್ಜುನ° ಕೃಷ್ಣನತ್ರೆ ಕೇಳುತ್ತ° – ಕೆಲವೊಂದರಿ ಜೀವಿಯು ಪಾಪಕರ್ಮವ ಮಾಡ್ಳೆ ಬಯಸದ್ದರೂ ಆತ° ಆ ಕ್ರಿಯೆಲಿ ತೊಡಗೆಕ್ಕಾವ್ತು. ಆದರೆ ಪಾಪಕರ್ಮಂಗಳ ಮಾಡ್ಳೆ ಅಂತರಂಗಲ್ಲಿಪ್ಪ ಪರಮಾತ್ಮ° ಪ್ರಚೋದಿಸುತ್ತನಿಲ್ಲೆ. ಇದಕ್ಕೆ ಬೇರೆಯೇ ಕಾರಣ ಇರೆಕು. ಅದೆಂತರ?

ಪಾಪ ಪುಣ್ಯದ ಅರಿವಿದ್ದೂ, ಮಾಡ್ಳಾಗದ ಕೆಲಸ ಹೇಳಿ ಗೊಂತಿದ್ದೂ, ಮನುಷ್ಯ ಕೆಲವೊಂದರಿ ತಪ್ಪು ಕಾರ್ಯವ ಮಾಡುತ್ತ°. ಎದು ಎಂತಕೆ? ಸರಿ-ತಪ್ಪಿನ ಅರಿವಿದ್ದರೂ ನಾವೆಂತಕೆ ತಪ್ಪು ಮಾಡುಸ್ಸು? ಮಾಡ್ಳಾಗದ್ದರ ಮಾಡ್ಳೆ ಪ್ರಚೋದುಸುವ ಆ ಶಕ್ತಿ ಏವುದು? ಇದು ಅರ್ಜುನನ ಪ್ರಶ್ನೆ.

ಬನ್ನಂಜೆ ಹೇಳುತ್ತವು – ಇಲ್ಲಿ ‘ಪೂರುಷ’ ಎಂಬ ಪದ ಪ್ರಯೋಗ ಆಯ್ದು. ಒಬ್ಬ ಅಪರೋಕ್ಷ ಜ್ಞಾನಿಯೂ ಈ ಮೇಲಣ ತಪ್ಪು ಮಾಡುತ್ತ° ಎಂಬರ್ಥಲ್ಲಿ ಬಳಸಿದ್ದದು. ಕೃಷ್ಣನ ‘ವಾರ್ಷ್ಣೇಯ’ ಹೇಳಿ ದೆನಿಗೊಂಡಿದ°. ‘ವೃಷ್ಣಿ’ ಎಂಬುದು ವೈದಿಕ ಪದ, ಬಯಸಿದ ಬಯಕೆಯ ಈಡೇರುಸುವವ°. ಬಯಸಿದ ಬಯಕೆಗಳ ಈಡೇರುಸುವವನಾಗಿ, ಮಹಾಶಕ್ತಿಯಾಗಿ ನಿಂದಿಪ್ಪ ನೀನು ಇಪ್ಪಗ ಇಷ್ಟವಿಲ್ಲದ್ರೂ ನಮ್ಮಿಂದ ಬಲವಂತವಾಗಿ ಕೆಲಸ ಮಾಡುಸುವ ಶಕ್ತಿ ಯಾವುದು ತಿಳುಸು ಹೇಳ್ವ ಭಾವಲ್ಲಿ ಇಲ್ಲಿ ಉಲ್ಲೇಖವಾಗಿಪ್ಪದು.

ಶ್ಲೋಕ

ಶ್ರೀ ಭಗವಾನುವಾಚ –
ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥೩೭॥

ಪದವಿಭಾಗ

ಶ್ರೀ ಭಗವಾನ್ ಉವಾಚ –
ಕಾಮಃ ಏಷಃ ಕ್ರೋಧಃ ಏಷಃ ರಜಃ ಗುಣ-ಸಮುದ್ಭವಃ । ಮಹಾ-ಅಶನಃ ಮಹಾ-ಪಾಪ್ಮಾ ವಿದ್ಧಿ ಏನಮ್ ಇಹ ವೈರಿಣಮ್ ॥

ಅನ್ವಯ

ಶ್ರೀ ಭಗವಾನ್ ಉವಾಚ –
ರಜಃ ಗುಣ-ಸಮುದ್ಭವಃ ಮಹಾ-ಪಾಪ್ಮಾ ಮಹಾ-ಅಶನಃ ಏಷಃ ಕಾಮಃ, ಏಷಃ ಕ್ರೋಧಃ ಅಸ್ತಿ, ತ್ವಂ ಏನಮ್ ಇಹ ವೈರಿಣಂ ವಿದ್ಧಿ ॥

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಭಗವಂತ° ಹೇಳಿದ°,  ರಜಃ ಗುಣ-ಸಮುದ್ಭವಃ  – ರಜೋಗುಣಂದ ಹುಟ್ಟಿದ, ಮಾಹಾ-ಪಾಪ್ಮಾ – ಮಹಾ ಪಾಪಪೂರ್ಣವಾದ, ಮಹಾ-ಅಶನಃ – ಎಲ್ಲವನ್ನೂ ತಿಂಬ, ಏಷಃ – ಇದು, ಕಾಮಃ – ಕಾಮವು, ಏಷಃ – ಇದು, ಕ್ರೋಧಃ ಅಸ್ತಿ – ಕೋಪವು ಆಗಿದ್ದು,  ತ್ವಮ್ – ನೀನು, ಏನಮ್ – ಇದರ, ಇಹ ವೈರಿಣಮ್  ವಿದ್ಧಿ  – ಈ ಭೌತಿಕ ಜಗತ್ತಿನ ಮಹಾವೈರಿಯಾಗಿಪ್ಪದು ಹೇದು ತಿಳಿಕ್ಕೊ.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷನಾದ  ಭಗವಂತ° ಹೇಳಿದ° – ಏ ಅರ್ಜುನ!, ರಜೋಗುಣದ ಸಂಪರ್ಕಂದ ಹುಟ್ಟಿ, ಮತ್ತೆ ಕ್ರೋಧವಾಗಿ ಮಾರ್ಪಡುವ ಕಾಮವೇ ಇದಕ್ಕೆ ಕಾರಣ. ಇದು ಎಲ್ಲವನ್ನೂ ನುಂಗಿಹಾಕುವ ಈ ಜಗತ್ತಿನ ಪಾಪಪೂರಿತ ಶತ್ರು.    

ತಾತ್ಪರ್ಯ / ವಿವರಣೆ

ಜೀವಿಗೆ ಐಹಿಕ ಸೃಷ್ಟಿಯೊಡನೆ ಸಂಬಂಧ ಬಂದಪ್ಪಗ, ರಜೋಗುಣದ ಸಹವಾಸಂದ, ಕೃಷ್ಣನಲ್ಲಿ ಅವನ ನಿತ್ಯಪ್ರೇಮವು ಕಾಮವಾಗಿ ಮಾರ್ಪಡುತ್ತು. ಹುಳಿಯ ಸಹವಾಸಂದ ಹಾಲು ಮೊಸರಪ್ಪಂತೆ ಇದು ಕೂಡ ಸಹವಾಸ ಪ್ರಭಾವ. ಕಾಮಕ್ಕೆ ತೃಪ್ತಿ ಸಿಕ್ಕದ್ದಪ್ಪಗ ಅದು ಕ್ರೋಧ ಆವುತ್ತು. ಕ್ರೋಧವು ಮಾಯೆಯಾಗಿ ಪರಿವರ್ತನೆ ಆವ್ತು. ಮಾಯೆಂದ ಐಹಿಕ ಅಸ್ತಿತ್ವ ಮುಂದುವರಿತ್ತು. ಆದ್ದರಿಂದ ಮನುಷ್ಯನ ಕಾಮವು ಅತ್ಯಂತ ದೊಡ್ಡಶತ್ರು. ಶುದ್ಧವಾದ ಜೀವಿಯು ಐಹಿಕ ಜಗತ್ತಿನ ಬಲೆಲಿಯೇ ಉಳಿತ್ತಾಂಗೆ ಪ್ರೇರೇಪುಸುವದು ಕಾಮವೇ. ಕೋಪವು ತಮೋಗುಣದ ಅಭಿವ್ಯಕ್ತಿ. ಈ ಗುಣಂಗೊ ಕ್ರೋಧ ಮತ್ತು ಇದಕ್ಕೆ ಸಂಬಂಧಿಸಿದ ಇತರ ಫಲಂಗಳಾಗಿ ಕಾಣಿಸಿಗೊಳ್ತು. ರಜೋಗುಣವು ತಮೋಗುಣವಾಗಿ ಕೀಳುಮಟ್ಟಕ್ಕಿಳಿಯದ್ದೆ ಬದುಕಿನ ಮತ್ತು ಕೆಲಸ ಮಾಡುವ ನಿಯತ ರೀತಿಂದ ಸತ್ವಗುಣಕ್ಕೆ ಏರಿದರೆ ಮನುಷ್ಯ ಅಧಃಪತನಂದ ಆಧ್ಯಾತ್ಮಿಕ ಆಸಕ್ತಿಯ ಮೂಲಕ ಉದ್ಧಾರ ಅಪ್ಪಲೆಡಿಗು.
ದೇವೋತ್ತಮ ಸದಾ ಬೆಳೆಕ್ಕೊಂಡಿಪ್ಪ ತನ್ನ ದಿವ್ಯಾನಂದಕ್ಕಾಗಿ ತನ್ನ ಅನೇಕವಾಗಿ ವಿಸ್ತರಿಸಿಗೊಂಡ. ಜೀವಿಗೊ ಈ ದಿವ್ಯಾನಂದದ ವಿಭಿನ್ನ ಅಂಶಂಗೊ. ಅವಕ್ಕೆ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಇದ್ದು. ಆದರೆ, ಈ ಸ್ವಾತಂತ್ರ್ಯವ ದುರುಪಯೋಗ ಮಾಡಿಯಪ್ಪಗ ಸೇವಾಭಾವವು ಇಂದ್ರಿಯಭೋಗದ ಪ್ರವೃತ್ತಿಯಾಗಿ ಪರಿವರ್ತನೆ ಆವುತ್ತು. ಅಷ್ಟಪ್ಪಗ ಕಾಮವಶರಾವುತ್ತವು. ಬದ್ಧಾತ್ಮಂಗೊ ತಮ್ಮ ಈ ಕಾಮಪ್ರವೃತ್ತಿಯ ಪೂರೈಸಿಗೊಂಬಲೆ ಬೇಕಾಗಿಯೇ ಭಗವಂತ° ಈ ಐಹಿಕ ಜಗತ್ತಿನ ಸೃಷ್ಟಿಸಿದ್ದ°. ದೀರ್ಘಕಾಲದ ಕಾಮಪೂರಿತ ಚಟುವಟಿಕೆಗಳಿಂದ ಜೀವಿಗೊ ದಿಗ್ಭ್ರಮೆಗೊಂಡಪ್ಪಗ (ಬೊಡುದಪ್ಪಗ) ಅವು ತಮ್ಮ ನಿಜ ಸ್ಥಾನವ ಕುರಿತು ಅನ್ವೇಷಿಸಲೆ ಪ್ರಾರಂಭುಸುತ್ತವು.

ಈ ಅನ್ವೇಷಣೆಯೇ ವೇದಾಂತಸೂತ್ರಂಗಳ ಪ್ರಾರಂಭ. ಅಲ್ಲಿ “ಅಥಾತೋ ಬ್ರಹ್ಮಜಿಜ್ಞಾಸಾ”, ಮನುಷ್ಯ° ಪರಾತ್ಪರವ ಕುರಿತು ಜಿಜ್ಞಾನೆ ಮಾಡೆಕು ಹೇಳಿ ಹೇಳಿದ್ದು. ಎಲ್ಲದರ ಮೂಲವೂ ಪರಬ್ರಹ್ಮ ಹೇಳಿ ಹೇಳಿಪ್ಪದರಿಂದ ಕಾಮದ ಮೂಲವೂ ಪರಾತ್ಪರವೇ. ಆದ್ದರಿಂದ ಕಾಮವ ಪರಾತ್ಪರದ ಪ್ರೇಮವನ್ನಾಗಿ ಪರಿವರ್ತಿಸಿದರೆ ಅಥವಾ ಕೃಷ್ಣಪ್ರಜ್ಞೆಯಾಗಿ (ಎಲ್ಲವು ಕೃಷ್ಣ, ಎಲ್ಲವು ಕೃಷ್ಣಂದಾಗಿ, ಎಲ್ಲವೂ ಕೃಷ್ಣಂಗಾಗಿ) ಪರಿವರ್ತಿಸಿದರೆ ಕಾಮವನ್ನೂ ಕ್ರೋಧವನ್ನೂ ಅಧ್ಯಾತ್ಮವಾಗಿ ಪರಿವರ್ತಿಸಲಕ್ಕು. ರಾಮಾಯಣಲ್ಲಿ, ಹನುಮಂತ ಸ್ವ್ರರ್ಣನಗರಿ ಲಂಕೆಯ ಸುಟ್ಟು ತನ್ನ ಕೋಪವ ತೀರ್ಸಿಗೊಂಡ° ಆದರೆ ಆರಿಂಗಾಗಿ ? – ಶ್ರೀರಾಮಂಗಾಗಿ. ಇಲ್ಲಿ ಭಗವಂತನ ತೃಪ್ತಿಗಾಗಿ ತನ್ನ ಶತ್ರುಗಳ ಮೇಲೆ ತನ್ನ ಕೋಪವ ಪ್ರಯೋಗುಸು ಹೇಳಿ ಭಗವಂತ° ಅರ್ಜುನನ ಪ್ರೇರೇಪಿಸುತ್ತ°. ಆದ್ದರಿಂದ ಕಾಮಕ್ರೋಧಂಗಳ ಕೃಷ್ಣಪ್ರಜ್ಞೆಲಿ ಬಳಸಿಗೊಂಡಪ್ಪಗ ಅವು ನಮ್ಮ ಶತ್ರುಗೊ ಆಗದ್ದೆ ಮಿತ್ರರಾವುತ್ತು.

ಎಲ್ಲವುದಕ್ಕೂ ಮೂಲಕಾರಣ ನಮ್ಮೊಳ ಇಪ್ಪ ಬಯಕೆ. ಆ ಬಯಕೆಯ ನೇರವಾಗಿ ಎಡಿಯದ್ರೆ ತಪ್ಪು ಮಾಡುವ ಮುಖೇನ ಈಡೇರುಸಲೆ ನವಗೆ ಪ್ರೇರಣೆ ನಮ್ಮ್ಲಲ್ಲಿ ಆವುತ್ತು. ಒಂದು ಅಪೇಕ್ಷೆ., ಆ ಅಪೇಕ್ಷೆ ಈಡೇರದ್ದಪ್ಪಗ ಕೋಪ. ಹಾಂಗಾದರೆ ಈ ಕೋಪಕ್ಕೆ ಮೂಲ ಕಾಮ. ಕಾಮ ಇಲ್ಲದ್ದೆ ಕ್ರೋಧ ಇಲ್ಲೆ. ಎಲ್ಲಾ ಕ್ರೋಧದ ಹಿಂದೆ ಒಂದು ಅರ್ಥಹೀನ ಕಾಮ. 

ಮನುಷ್ಯನಲ್ಲಿಪ್ಪ ರಜೋಗುಣ ರಾಗ ದ್ವೇಷವ ಬೆಳಸುತ್ತು. ಅದಕ್ಕೆ ಎಷ್ಟು ಸಿಕ್ಕಿರೂ ತೃಪ್ತಿ ಹೇಳುವದೇ ಇಲ್ಲೆ. ರಜಾ ಸಿಕ್ಕಿಯಪ್ಪಗ ಮತ್ತೂ ರಜ ಬೇಕು, ಮತ್ತಷ್ಟು ರಜಾ ಬೇಕು ಹೇಳಿ ಪ್ರೇರಣೆ. ಇದು ದುರಾಸೆಗೆ ಮಾರ್ಗ. ದುರಾಸೆ ಕ್ರೋಧಕ್ಕೆ ನಾಂದಿ.  ಹೀಂಗೆ ನಾವು ತಪ್ಪು ಮಾಡುವದರ ಒಗ್ಗಿಸಿಗೊಂಡರೆ ಅದು ‘ಮಹಾಶನ’ ಆವುತ್ತು. ಅದಕ್ಕೆ ಎಷ್ಟು ಅಶನ ಹಾಕಿರೂ ಮತ್ತೆ ಮತ್ತೆ ಬೇಕು ಅನುಸುತ್ತು. ಅದುವೇ ನಮ್ಮ ನಮ್ಮಿಂದ ಮಾಡಲಾಗದ್ದ ಕೆಲಸವ ಮಾಡುಸುತ್ತು. ತನ್ನ ಆಸೆಯ ಈಡೇರಿಸುವಲ್ಲಿ ಛಲಕ್ಕೆ ಬಿದ್ದವ ಯಾವ ಹೇಯ ಕೃತ್ಯಕ್ಕೂ ಹಿಂಜರಿತ್ತನಿಲ್ಲೆ. ಅದು ನಮ್ಮ ವಿನಾಶಕ್ಕೆ ಕಾರಣ ಆವುತ್ತು. ಆದ್ದರಿಂದ ನಮ್ಮ ಮೊದಲ ಶತ್ರು ರಾಗ-ದ್ವೇಷ. ಅದರ ಬಗ್ಗೆ ಬಹು ಎಚ್ಚರವಹಿಸೆಕು. ಅದು ನಮ್ಮೊಳ ಇದ್ದು ನಮ್ಮ ಆಳದ್ದಿರಲಿ. ಅದರ ಹೊರದೋಡುಸಿ ನಾವು ನಾವಾಗಿ ಬದುಕುವಂತೆ ಆಯೇಕು. ಇದು ಕೃಷ್ಣಪ್ರಜ್ಞೆಯ ಮಾರ್ಗಕ್ಕೆ ಜೋಡಣೆ.

ಶ್ಲೋಕ

ಧೂಮೇನಾವ್ರಿಯತೇ ವಹ್ನಿಃ ಯಥಾದರ್ಶೋಮಲೇನ ಚ ।
ಯಥೋಲ್ಬೇನಾವೃತೋ ಗರ್ಭಃ ತಥಾ ತೇನೇದಮಾವೃತಮ್॥ ೩೮॥

ಪದವಿಭಾಗ

ಧೂಮೇನ ಅವ್ರಿಯತೇ ವಹ್ನಿಃ ಯಥಾ ಆದರ್ಶಃ ಮಲೇನ ಚ । ಯಥಾ ಉಲ್ಬೇನ ಆವೃತಃ ಗರ್ಭಃ ತಥಾ ತೇನ ಇದಮ್ ಆವೃತಮ್ ॥

ಅನ್ವಯ

ಯಥಾ ಧೂಮೇನ ವಹ್ನಿಃ, ಯಥಾ ಚ ಮಲೇನ ಆದರ್ಶಃ ಆವ್ರಿಯತೇ, ಯಥಾ ಉಲ್ಬೇನ ಗರ್ಭಃ ಆವೃತಃ , ತಥಾ ತೇನ ಇದಮ್ ಆವೃತಮ್ ॥

ಪ್ರತಿಪದಾರ್ಥ

ಯಥಾ – ಯಾವರೀತಿಲಿ (ಹೇಂಗೆ), ಧೂಮೇನ – ಹೊಗೆಂದ, ವಹ್ನಿಃ – ಕಿಚ್ಚು,  ಯಥಾ – ಹೇಂಗೆ, ಚ – ಕೂಡ, ಮಲೇನ – ಧೂಳಿಂದ, ಆದರ್ಶಃ – ಕನ್ನಾಟಿ, ಆವ್ರಿಯತೇ – ಆವರಿಸಲ್ಪಟ್ಟಿರುತ್ತೋ, ಯಥಾ – ಹೇಂಗೆ, ಉಲ್ಬೇನ – ಗರ್ಭಕೋಶಂದ, ಗರ್ಭಃ – ಭ್ರೂಣವು, ಆವೃತಃ – ಆವರಿಸಲ್ಪಟ್ಟಿದ್ದೋ,  ತಥಾ – ಹಾಂಗೆಯೇ, ತೇನ – ಆ ಕಾಮಂದ, ಇದಮ್ – ಇದು, ಆವೃತಮ್ – ಆವೃತವಾಗಿದ್ದು.

ಅನ್ವಯಾರ್ಥ

ಹೊಗೆಯು ಕಿಚ್ಚಿನ ಮುಚ್ಚಿಕೊಂಡಿಪ್ಪಾಂಗೆ, ಧೂಳು ಕನ್ನಟಿಯ ಮುಚ್ಚಿಕೊಂಡಿಪ್ಪಾಂಗೆ, ಗರ್ಭಕೋಶವು ಭ್ರೂಣವ ಮುಚ್ಚಿಕೊಂಡಿಪ್ಪಾಂಗೆ, ವಿವಿಧ ಪ್ರಮಾಣಗಳ ಕಾಮವು ಜೀವಿಯ ಮುಚ್ಚಿಗೊಂಡಿರುತ್ತು.

ತಾತ್ಪರ್ಯ / ವಿವರಣೆ

ಮೂರು ಪ್ರಮಾಣದ ಆವರಣಂಗೊ ಜೀವಿಯ ಮುಚ್ಚಿ ಅವನ ಶುದ್ಧ ಪ್ರಜ್ಞೆಯ ಮಸುಕುಗೊಳುಸುತ್ತು. ಹೊಗೆ ಬೆಂಕಿಯ, ಧೂಳು ಕನ್ನಟಿಯ, ಗರ್ಭಕೋಶ ಭ್ರೂಣವ ಮುಚ್ಚಿಗೊಂಡಿಪ್ಪಂತೆ ವಿವಿಧ ತೋರಿಕೆಗಳೂ ಮನುಷ್ಯನ ನೈಜ ಕಾಮವ ಮುಚ್ಚಿಮಡಿಗಿಕೊಂಡಿರುತ್ತು. ಕಾಮವ ಹೊಗಗೆ ಹೋಲಿಸಿಯಪ್ಪಗ ಕಿಡಿಯಾಂಗೆ ಇಪ್ಪ ಜೀವಿಯ ಬೆಂಕಿಯು ಸ್ವಲ್ಪಮಟ್ಟಿಂಗೆ ಮಾತ್ರ ಗೋಚರುಸುತ್ತದು. ಇನ್ನೊಂದು ರೀತಿಲಿ ಹೇಳುತ್ತಾದರೆ, ಜೀವಿಯು ತನ್ನ ಕೃಷ್ಣಪ್ರಜ್ಞೆಯ ಸ್ವಲ್ಪಮಟ್ಟಿಂಗೆ ಪ್ರದರ್ಶಿಸಿಯಪ್ಪಗ (ಆಚರಿಸಿದರೆ) ಅವನ ಹೊಗೆಯು ಮುಚ್ಚಿದ ಅಗ್ನಿಗೆ ಹೋಲುಸಲಕ್ಕು. ಹೊಗೆ ಇಪ್ಪಲ್ಲಿ ಅಗ್ನಿ ಇಪ್ಪಲೇ ಬೇಕು. ಆದರೂ ಪ್ರಾರಂಭದ ಘಟ್ಟಲ್ಲಿ ಅಗ್ನಿ ಹೆರಂಗೆ ಕಾಣ. ಈ ಘಟ್ಟವು ಕೃಷ್ಣಪ್ರಜ್ಞೆಯ ಆರಂಭಿಕ ಘಟ್ಟದ ಹಾಂಗೆ. ಕನ್ನಟಿಯ ಮೆಲಣ ಧೂಳು, ಮನಸ್ಸಿನ ಕನ್ನಟಿಯ ಹಲವಾರು ಆಧ್ಯಾತ್ಮಿಕ ರೀತಿಲಿ ಶುಭ್ರಗೊಳುಸುವ ವಿಧಾನಕ್ಕೆ ಸಂಬಂಧಿಸಿದದು. ಅತ್ಯುತ್ತಮ ಮಾರ್ಗ ಹೇಳಿರೆ ಭಗವಂತನ ಪಾವನ ನಾಮ ಸಂಕೀರ್ತನೆ. ಗರ್ಭಕೋಷವು ಭ್ರೂಣವ ಆವರುಸುವ ಸಾದೃಶ್ಯ ನಿಸ್ಸಹಾಯಕ ಸ್ಥಿತಿಯ ಸೂಚುಸುತ್ತು. ಗರ್ಭಲ್ಲಿಪ್ಪ ಶಿಶುವು ಎಷ್ಟು ನಿಸ್ಸಹಾಯಕ ಹೇಳಿರೆ ಅದು ಅಲ್ಲಾಡಲೂ ಇಲ್ಲೆ.

ಹೊಗೆಂದ ಆವೃತವಾದ ಅಗ್ನಿಯ ಮನುಷ್ಯಂಗೆ ಹೋಲಿಸಿದ್ದು. ಮನುಷ್ಯರೂಪಲ್ಲಿ ಜೀವಿಯು ಕೃಷ್ಣಪ್ರಜ್ಞೆಯ ಸ್ವಲ್ಪಮಟ್ಟಿಂಗೆ ಪುನಶ್ಚೇತನಗೊಳುಸಲಕ್ಕು. ಆತ° ಇನ್ನೂ ಬೆಳವಣಿಗೆಯ ಸಾಧುಸಿರೆ ಆಧ್ಯಾತ್ಮಿಕ ಜೀವನದ ಅಗ್ನಿಯ ತನ್ನಲ್ಲಿ ಮತ್ತೆ ಹೊತ್ತುಸಲಕ್ಕು. ಬೆಂಕಿಯಲ್ಲಿನ ಹೊಗೆಯ ಎಚ್ಚರಿಕೆಂದ ನಿರ್ವಹಿಸಿದರೆ ಬಿಂಕಿಯ ಪ್ರಜ್ವಲುಸಲೆ ಮಾಡ್ಳೆಡಿಗು. ಆದ್ದರಿಂದ ಮಾನವ ಜನ್ಮವು ಐಹಿಕ ಅಸ್ತಿತ್ವದ ಗೋಜಿಂದ ತಪ್ಪಿಸಿಗೊಂಬಲೆ ಜೀವಿಗೆ ಒಂದು ಅವಕಾಶ. ಮನುಷ್ಯ ಜನ್ಮಲ್ಲಿ ಸಮರ್ಥ ಮಾರ್ಗದರ್ಶನಲ್ಲಿ ಕೃಷ್ನಪ್ರಜ್ಞೆಯ ಬೆಳೆಸಿಗೊಂಡು ಶತ್ರುವಾದ ಕಾಮವ ಸೋಲುಸಲೆಡಿಗು.

ಬನ್ನಂಜೆ ವ್ಯಾಖ್ಯಾನಿಸುತ್ತವು – ಹೊಗೆಂದ ಕಿಚ್ಚು ಮುಚ್ಚಿಗೊಂಡಿಪ್ಪ (ಭಗವಂತ°) ಹಾಂಗೆ, ಕೊಳೆಂದ ಕನ್ನಟಿ ಮುಚ್ಚಿಗೊಂಡಿಪ್ಪ ಹಾಂಗೆ (ಮನಸ್ಸು), ಗರ್ಭಕೋಶಂದ ಭ್ರೂಣ (ಜೀವ) ಆವೃತವಾಗಿಪ್ಪಾಂಗೆ ಜೀವನ ಕಾಮಂದ ಆವೃತವಾಗಿದ್ದು.  ಹೊಗೆ ಬೆಂಕಿಯ ಮುಚ್ಚಿಗೊಂಡಿಪ್ಪಹಾಂಗೆ ಕಾಮ ಸಜ್ಜನರ ಮುಚ್ಚಿಗೊಂಡುರುತ್ತು. ಕೊಳೆಯು  ಕನ್ನಟಿಯ ಮುಚ್ಚಿಪ್ಪಂತೆ ಮಧ್ಯಮರ ಮುಚ್ಚಿಗೊಂಡಿರುತ್ತು ಮತ್ತು ಗರ್ಭಕೋಶವು ಭ್ರೂಣವ ಮುಚ್ಚಿದಂತೆ ದುರ್ಜನರ ಅದುಮಿರುತ್ತು. ಇದುವೇ ರಜೋಗುಣದ ಪರದೆ ನಮ್ಮ ಆವರಿಸಿಗೊಂಡಿಪ್ಪದು ಐಹಿಕ ಜಗತ್ತಿನ ಜೀವನಲ್ಲಿ.

ಶ್ಲೋಕ

ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ ।
ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ ॥೩೯॥

ಪದವಿಭಾಗ

ಆವೃತಮ್ ಜ್ಞಾನಮ್ ಏತೇನ ಜ್ಞಾನಿನಃ ನಿತ್ಯವೈರಿಣಾ । ಕಾಮರೂಪೇಣ ಕೌಂತೇಯ ದುಷ್ಪೂರೇಣ ಅನಲೇನ ಚ ॥

ಅನ್ವಯ

ಹೇ ಕೌಂತೇಯ!, ನಿತ್ಯವೈರಿಣಾ ಏತೇನ ದುಷ್ಪೂರೇಣ ಕಾಮರೂಪೇಣ ಚ ಅನಲೇನ ಜ್ಞಾನಿನಃ ಜ್ಞಾನಮ್ ಆವೃತಮ್ ॥

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತಿಯ ಮಗನೇ!, ನಿತ್ಯವೈರಿಣಾ ಏತೇನ ದುಷ್ಪೂರೇಣ ಜ್ಞಾನಿನಃ  – ಶಾಶ್ವತ ಶತ್ರುವಾದ ಈ ಎಂದಿಂಗೂ ತೃಪ್ತಿಯಾಗದ್ದ, ಕಾಮರೂಪೇಣ – ಕಾಮ ರೂಪಂದ, ಚ  – ಕೂಡ, ಅನಲೇನ – ಜ್ಞಾನಿನಃ ಜ್ಞಾನಮ್ – ಅಗ್ನಿಯಾದ ಜೀವಿಗಳ ಶುದ್ಧಪ್ರಜ್ಞೆಯು, ಆವೃತಮ್ – ಆವೃತವಾಗಿದ್ದು.

ಅನ್ವಯಾರ್ಥ

ಏ ಅರ್ಜುನ!, ಹೀಂಗೆ ಪ್ರಾಜ್ಞನಾದ ಜೀವಿಯ ಶುದ್ಧ ಪ್ರಜ್ಞೆಯ ಅವನ ನಿತ್ಯವೈರಿಯು ಕಾಮರೂಪಂದ ಆವರಿಸಿರುತ್ತು. ಅದಕ್ಕೆ ತೃಪ್ತಿ ಹೇಳುವದೇ ಇಲ್ಲೆ. ಅದು ಅಗ್ನಿಯ ಹಾಂಗೆ ಸುಪ್ತವಾಗಿ ಉರುಕ್ಕೊಂಡಿರುತ್ತು.

ತಾತ್ಪರ್ಯ / ವಿವರಣೆ

ಒಂದೇ ಹಾಂಗೆ ಇಂಧನವ ಪೂರೈಸುತ್ತಲಿಪ್ಪದರಿಂದ ಅಗ್ನಿಯು ಹೇಂಗೆ ಆರುತ್ತಿಲ್ಲೇಯೊ ಹಾಂಗೇ ಎಷ್ಟೇ ಇಂದ್ರಿಯ ಭೋಗಂದಲೂ ಕಾಮಕ್ಕೆ ತೃಪ್ತಿಯಾವುತ್ತೇ ಇಲ್ಲೆ. ಈ ಐಹಿಕ ಜಗತ್ತಿಲ್ಲಿ ಎಲ್ಲ ಚಟುವಟಿಕೆಗೆಳ ಕೇಂದ್ರವು ಕಾಮ. ಇಂದ್ರಿಯ ಭೋಗಲ್ಲಿ ಸ್ವಲ್ಪಸುಖದ ಭಾವನೆ ಇಕ್ಕು. ಆದರೆ ವಾಸ್ತವವಾಗಿ ಸುಖ ಎನುಸುವ ಈ ಭಾವನೆಯು ಅಂತಿಮವಾಗಿ ಭೋಗಪಡುವವನ ಶತ್ರುವೇ ಆಗಿರುತ್ತು.

ಈ ರಜೋಗುಣದ ಪರದೆ ಜ್ಞಾನ ಬಂದವಂಗೆ ಇದ್ದ ಜ್ಞಾನ ಉಪಯೋಗ ಆಗದ ಹಾಂಗೆ, ಜ್ಞಾನ ಇಲ್ಲದ್ದವಂಗೆ ಜ್ಞಾನ ಬಾರದ್ದ ಹಾಂಗೆ ತಡೆಗೋಡೆಯಾಗಿ ನಿಲ್ಲುತ್ತು. ರಾಗ-ದ್ವೇಷ ನಮ್ಮ ಕಡು ವೈರಿ. ಅದು ನಮ್ಮ ಬಯಕೆಯ ಕಿಚ್ಚು. ಅದಕ್ಕೆ ಎಷ್ತು ಬಡಿಸಿದರೂ ಸಾಕು ಹೇಳ್ವ ಕ್ರಮ ಇಲ್ಲದ್ದು. ಕುಂತಿಯಂತ ಮಹಾಅಬ್ಬೆಯ ಮಗನಾದ ನೀನು ಈ ಕಾಮ (ಬಯಕೆ) ಎಂಬ ಜ್ಞಾನ ವಿರೊಧಿ ಶತ್ರುವ ತಿಳುಕ್ಕೊ ಹೇದು ಹೇಳುತ್ತ° ಶ್ರೀಕೃಷ್ಣ°.

ನವಗೆ ನಮ್ಮ ನಿಜ ವೈರಿ ನಮ್ಮ ಕಾಮ ಅಥವಾ ಬಯಕೆ,  ಅರ್ಥಾತ್..  ರಾಗ-ದ್ವೇಷ ಹೇದು ಗೊಂತಾತು. ಹಾಂಗಾರೆ ಈ ವೈರಿಯ ನೆಲೆ ಎಂತರ? –

ಶ್ಲೋಕ

ಇಂದ್ರಿಯಾಣಿ ಮನೋ ಬುದ್ಧಿಃ ಅಸ್ಯಾಧಿಷ್ಠಾನಮುಚ್ಯತೇ ।
ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್ ॥೪೦॥

ಪದವಿಭಾಗ

ಇಂದ್ರಿಯಾಣಿ ಮನಃ ಬುದ್ಧಿಃ ಅಸ್ಯ ಅಧಿಷ್ಠಾನಮ್ ಉಚ್ಯತೇ । ಏತೈಃ ವಿಮೋಹಯತಿ ಏಷಃ ಜ್ಞಾನಮ್ ಆವೃತ್ಯ ದೇಹಿನಮ್ ॥

ಅನ್ವಯ

ಇಂದ್ರಿಯಾಣಿ ಮನಃ ಬುದ್ಧಿಃ ಅಸ್ಯ ಅಧಿಷ್ಠಾನಮ್ ಉಚ್ಯತೇ । ಏಷಃ ಏತೈಃ ಜ್ಞಾನಮ್ ಆವೃತ್ಯ ದೇಹಿನಂ ವಿಮೋಹಯತಿ ॥

ಪ್ರತಿಪದಾರ್ಥ

ಇಂದ್ರಿಯಾಣಿ – ಇಂದ್ರಿಯಂಗೊ, ಮನಃ – ಮನಸ್ಸು, ಬುದ್ಧಿಃ – ಬುದ್ಧಿಯು, ಅಸ್ಯ – ಈ ಕಾಮದ, ಅಧಿಷ್ಠಾನಮ್ – ಆವಾಸ ಸ್ಥಾನ,  ಉಚ್ಯತೇ – ಹೇದು ಹೇಳಲಾಯ್ದು, ಏಷಃ – ಈ ಕಾಮವು,  ಏತೈಃ – ಈ ಎಲ್ಲವುಗಳಿಂದ, ಜ್ಞಾನಮ್ – ಜ್ಞಾನವ, ಆವೃತ್ಯ – ಆವರಿಸಿ, ದೇಹಿನಮ್ – ಹೇಹಿಯ (ದೇಹವುಳ್ಳವನ) ವಿಮೋಹಯತಿ – ಭ್ರಾಂತಿಗೊಳುಸುತ್ತು. 

ಅನ್ವಯಾರ್ಥ

ಈ ಕಾಮಕ್ಕೆ ಇಂದ್ರಿಯಂಗೊ ಮನಸ್ಸು ಮತ್ತು ಬುದ್ಧಿ ಆವಾಸಸ್ಥಾನಂಗೊ. ಅವುಗಳ ಮೂಲಕ ಕಾಮವು ಜೀವಿಯ ಜ್ಞಾನವ ಆವರಿಸಿ ಅವನ ದಿಕ್ಕುಗೆಡುಸುತ್ತು.

ತಾತ್ಪರ್ಯ / ವಿವರಣೆ

ಬದ್ಧಾತ್ಮನ ದೇಹಲ್ಲಿ ಶತ್ರುವು ಆಯಕಟ್ಟಿನ ಸ್ಥಾನಂಗಳ ವಶಮಾಡಿಗೊಂಡಿದು. ಶತ್ರುವ ಸೋಲುಸಲೆ ಬಯಸುವವಂಗೆ ಶತ್ರು ಎಲ್ಲಿದ್ದ ಹೇಳಿ ಮದಾಲು ತಿಳಿಯೆಕು. ಆದ್ದರಿಂದ ಕೃಷ್ಣ ಆ ಸ್ಥಳಂಗಳ ಸುಳಿವು ಇಲ್ಲಿ ವಿವರುಸುತ್ತ. ಇಂದ್ರಿಯಂಗಳ ಎಲ್ಲ ಚಟುವಟಿಕೆಗೊಎ ಕೇಂದ್ರ ಮನಸ್ಸು. ಆದ್ದರಿಂದ ಇಂದ್ರಿಯ ವಸ್ತುಗಳ ವಿಷಯವ ಕೇಳಿಯಪ್ಪಗ ಸಾಮಾನ್ಯವಾಗಿ ಮನಸ್ಸು ಎಲ್ಲ ಇಂದ್ರಿಯ ಭೋಗಂಗಳ ಯಾಚನೆಗಳ ಆಗರ. ಇದರ ಪರಿಣಾಮವಾಗಿ ಮನಸ್ಸೂ ಇಂದ್ರಿಯಂಗಳೂ ಕಾಮದ ಭಂಡಾರ ಆಗಿಬಿಡ್ತು. ಅನಂತರ, ಬುದ್ಧಿಯ ವಿಭಾಗವು ಇಂತಹ ಕಾಮಪ್ರವೃತ್ತಿಗಳ ರಾಜಧಾನಿಯಾಗಿಬಿಡುತ್ತು. ಬುದ್ಧಿಯು ಆತ್ಮದ ನೆರೆಮನೆ ನಿವಾಸಿ. ಕಾಮಪೂರಿತ ಬುದ್ಧಿಯು,  ಆತ್ಮವು ಅಹಂಕಾರ ಪಡೆತ್ತಹಾಂಗೆ ಮತ್ತು ಜಡವಸ್ತುವಿನೊಂದಿಂಗೆ, ಆ ಮೂಲಕ ಮನಸ್ಸು ಇಂದ್ರಿಯಂಗಳೊಂದಿಂಗೆ ತನ್ನ ಗುರುತಿಸಿಗೊಂಬಂತೆ ಪ್ರಭಾವ ಬೀರುತ್ತು. ಆತ್ಮವು ಹೀಂಗೆ ಐಹಿಕ ಇಂದ್ರಿಯಂಗಳ ಭೋಗದ ವ್ಯಸನಕ್ಕೆ ತುತ್ತಾವುತ್ತು. ಇದೇ ನಿಜವಾದ ಸುಖ ಹೇಳಿ ಭ್ರಮೆಲಿ ಒಳಗಾವ್ತು.

ಬನ್ನಂಜೆಯವು ಅವರ ವ್ಯಾಖ್ಯಾನಲ್ಲಿ ಉಲ್ಲೇಖಿಸಿಪ್ಪಂತೆ – ಇಂದ್ರಿಯಂಗೊ, ಮನಸ್ಸು, ಬುದ್ಧಿ ಈ ಕಾಮದ  ನೆಲೆಗೊ. ಇವುಗಳ ಮೂಲಕ ಕಾಮವು ಜ್ಞಾನವ ಕವಿದು ಸಾಧಕನ ಕಂಗೆಡೆಸುತ್ತು.

ನಮ್ಮ ಬಯಕೆಂಗಳ ಸರಮಾಲೆ ಬಂದು ಕೂಬದು ನಮ್ಮ ಇಂದ್ರಿಯಂಗಳಲ್ಲಿ. ಕಣ್ಣಿಂಗೆ ನೋಡುವ, ಕೆಮಿಗೆ ಕೇಳುವ, ಮೂಗಿಂಗೆ ಮೂಸುವ, ಮೈಗೆ ಮುಟ್ಟುವ ಹೀಂಗೆ ಒಂದೊಂದು ಬಯಕೆ ಒಂದೊಂದು ರೂಪಲ್ಲಿ ಒಂದೊಂದು ಇಂದ್ರಿಯಂಗಳಲ್ಲಿ ಬಂದು ಕೂದು ಜಾಗೆ ಗಟ್ಟಿಮಾಡಿಗೊಳ್ತು. ಅಲ್ಲಿ ನಾವು ಅದರ ನಿಗ್ರಹಿಸದ್ದೇ ಇದ್ದರೆ ಅದು ನಮ್ಮ ಮನಸ್ಸ ಆಕ್ರಮಿಸುತ್ತು. ಅಲ್ಲೂ ಅದರ ನಾವು ಸಡ್ಳು ಬಿಟ್ರೆ ಅದು ಮುಂದೆ ನಮ್ಮ ಬುದ್ಧಿಯ ಆಕ್ರಮಿಸುತ್ತು. ಹೀಂಗೆ ಜಾಲಿಂದ (ಇಂದ್ರಿಯ) ಈ ಶತ್ರುವ ಮೊಗಸಾಲಗೆ(ಮನಸ್ಸು) ಕರಕ್ಕೊಂಡು ಮುಂದೆ ನಮ್ಮ ನಡು ಮನೆಲಿ (ಬುದ್ಧಿ) ಆವಾಸ ಆಗಿಬಿಡ್ತು. ಒಂದರಿ ಈ ಶತ್ರು ನಮ್ಮ ಬುದ್ಧಿಯ ಆಕ್ರಮಿಸಿರೆ ಮುಂದೆ ಅದರ ತೊಡದು ಹಾಕುತ್ಸು ಕಠಿಣ. ಈ ಸ್ಥಿತಿಲಿ ಬಯಕೆ ಹೇಳ್ವದು ಸಿದ್ಧಾಂತವಾಗಿ ನಮ್ಮೊಳ ಇದ್ದುಗೊಂಡು ನಮ್ಮ ಆಳ್ಳೆ ಆರಂಭಿಸುತ್ತು. ಇದರಿಂದ ಕಾಮನೆ ಹೇಳ್ವದು ನಮ್ಮ ಜೀವನ ಧರ್ಮ ಆಗಿಬಿಡ್ತು.
ಉದಾಹರಣೆಗೆ – ಒಂದು ಸಂಗತಿ ನಮ್ಮ ಕೆಮಿಗೆ ಬೀಳುತ್ತು. ನಾವು ಆ ವಿಷಯಂದ ನಮಗೆಂತ ಉಪಯೋಗ, ಅದೆಂತ ಅಗತ್ಯ ಹೇಳ್ವದರ ಚಿಂತನೆ ಮಾಡುತ್ತಿಲ್ಲೆ. ಅದರ ಬಿಟ್ಟು ಕೇಳಿದ ವಿಷ್ಯವ ಕಣ್ಣಿಂದ ನೋಡ್ಳೆ ಹಂಬಲುಸುತ್ತು. ನೋಡಿದ ಮತ್ತೆ ಮುಟ್ಳೆ ಕೊದಿ ಅಪ್ಪದು. ಹೀಂಗೆ ನಮ್ಮೆಲ್ಲಾ ಇಂದ್ರಿಯಂಗ ಕಾಮ ಎಂಬ ವೈರಿಗೆ ಬಲಿಕೊಟ್ಟು ಪ್ರೋತ್ಸಾಹಿಸುತ್ತು. ಅದು ನಿಧಾನವಾಗಿ ನಮ್ಮ ಮನಸ್ಸಿನ ಆಕ್ರಮಿಸುತ್ತು. ಮನಸ್ಸು ನಿರಂತರ ಈ ವಿಷಯವ ಯೋಚಿಸಲೆ ಸುರುಮಾಡುತ್ತು. ಅದು ಎನಗೆ ಬೇಕು , ಅದು ಎನ್ನದಾಯೇಕು  ಹೇಳಿ ಸತತ ಚಿಂತನೆಗೆ ತಳ್ಳುತ್ತು. ಇಲ್ಲಿಂದ ಮುಂದೆ ಬುದ್ಧಿ . ಅದರ (ಆ ನೋಡಿದ ಕೇಳಿದ ವಿಷ್ಯವ) ಬಿಟ್ಟು ಆನಿರೆ, ಏನೇ ಆದರು ಅದು ಎನಗೆ ಬೇಕು ಹೇಳಿ ಬುದ್ಧಿಯ ಪ್ರಚೋದುಸುತ್ತು. ಬುದ್ಧಿ ಏನೇನಾರ ಮಾಡಿ ಅದರ ಪಡೆ ಹೇಳಿ ನಮ್ಮ ಕಾರ್ಯಕ್ಕೆ ಇಳಿವಲೆ ತಳ್ಳುತ್ತು. ಇದು ಸರ್ವನಾಶದ ಮುನ್ಸೂಚನೆ. ಹೀಂಗೆ ಜ್ಞಾನಕ್ಕೆ ವಿಭ್ರಮೆಯಾಗಿ ನಮ್ಮ ವೈರಿಯಾಗಿ ನಮ್ಮ ಇಂದ್ರಿಯಂಗಳಲ್ಲಿ ಸ್ಥಿರವಾಗಿ ಬಿಡ್ತು.

ದೇಹ ಹೇಳ್ವದು ಜ್ಞಾನದ ಮೂಲಕ ನಮ್ಮ ಎತ್ತರಕ್ಕೆ ಕೊಂಡೋಪ ಸಾಧನ. ಆದ್ದರಿಂದ ಇಲ್ಲಿ ‘ದೇಹಿನಂ’ ಹೇಳಿ ಹೇಳಿದ್ದು. ಆದರೆ, ಕಾಮನೆ ಹೇಳ್ವ ವೈರಿಯ ಸಂಗಂದಾಗಿ ಅದು ನಮ್ಮ ಅಧಃಪತನಕ್ಕೆ ತಳ್ಳುವ ಸಾಧನ ಆವುತ್ತು ಹೇಳಿ ಈ ಪದದ ಹಿಂದಿಪ್ಪ ಭಾವರ್ಥ.

ನಮ್ಮ ವೈರಿ ಆರು, ಅದು ಇಪ್ಪ ಸ್ಥಾನ ಯಾವುದು, ಅದು ನಮ್ಮ ಹೇಂಗೆ ಆಕ್ರಮಿಸುತ್ತು ಹೇಳ್ವದರ ಈ ವರೇಗೆ ನೋಡಿ ಆತು. ಹಾಂಗಾರೆ ಈ ವೈರಿಯ ಓಡುಸುತ್ತದು ಹೇಂಗೆ.. ?

ಮುಂದೆ ಎಂತರ.. ?   ಬಪ್ಪವಾರ ನೋಡುವೋ°.

……… ಮುಂದುವರಿತ್ತು.

ಕೆಮಿಲಿ ಕೇಳ್ಳೆ –
SRIMADBHAGAVADGEETHA – CHAPTER 03 – SHLOKAS 31 – 40 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

16 thoughts on “ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

    1. ಧನ್ಯವಾದ ಕಲ್ಮಕಾರು ಭಾವ. ಶ್ರೀಗುರುದೇವತಾನುಗ್ರಹ ಎಲ್ಲೋರಿಂಗೂ ಆಗಲಿ. ಬೈಲಿಂಗೆ ಬಂದುಗೊಂಡಿರಿ, ಶುದ್ದಿ ಹೇಳಿಗೊಂಡಿರಿ. ಮಾಣಿಗೂ ಉಜ್ವಲ ಭವಿಷ್ಯ ಲಭಿಸಲಿ.

  1. ಚೆನ್ನೈ ಭಾವಾ, ನಿ೦ಗ್ಳಿಗೆ ಸಾಷ್ಟಾ೦ಗ ನಮನ೦ಗೋ. ಅರ್ಥ-ವಿವರಣೆ ಚೆ೦ದ ಬೈ೦ದು.
    ಭಗವದ್ಗೀತೆ ಗ್ರ೦ಥ ಅ೦ಬುದು ’ರಾಶಿ ಗ್ರೇಟ್’ ಅ೦ತ ನಮ್ಮಲ್ಲಿ ಬೇಕಷ್ಟು ಜನಕ್ಕೆ ಗೊತ್ತಿದ್ದು. ಆದ್ರೆ ಅದ್ರೊಳಗೆ ಎ೦ತ ಇದ್ದು ಅ೦ತ ತಿಳಕ೦ಡಿಪ್ಪೋರು ಮಾತ್ರ ರಾಶಿ ಜನ ಇಲ್ಲೆ. ಇವತ್ತಿನ ದಿನ ಅ೦ಥವುನ್ನಲ್ಲಾ ಓದಕ್ಕೆ ಜನುಕ್ಕೆ ಟೈಮಿಲ್ಲೆ, ಓದಿದ್ರೂ ಅರ್ಥ ಮಾಡ್ಕ೦ಬುಲುಕ್ಕೆ ವ್ಯವಧಾನ ಇಲ್ಲೆ, ಭಾಷೆ ಮೇಲ್ಪದರದಿ೦ದ ಅರ್ಥ ಆದ್ರೂ ಅದ್ರ ಆಳ-ತಿರುಳು ಅರ್ಥ ಮಾಡ್ಕಳೋ ಹೊತ್ತಿಗೆ ಅರ್ಧ ಜೀವನವೇ ಕಳುದು ಹೋಗಗು! ಬವುಶ ಇದಕ್ಕೆಲ್ಲಾ ನಮ್ಮಲ್ಲಿಪ್ಪ ಕುತೂಹಲ, ಶ್ರದ್ಧೆ, ಸ೦ಸ್ಕಾರ ಕಾರಣನೋ ಎ೦ಥುದೋ…ಆದ್ರೆ ನಿ೦ಗ ಶ್ಲೋಕಗಳನ್ನ ಬರೀ ಅರ್ಥ ಮಾಡ್ಕ೦ಡಿದ್ದೇ ಅಲ್ಲದೆ ನಮ್ಮದೇ ಭಾಶೇಲಿ ಚೆ೦ದವಾಗಿ ಒಪ್ಪವಾಗಿ ಬರೆದು ಪುಣ್ಯ ಕಟ್ಕ೦ಡಿದಿ ಅ೦ತ ಆನು ತಿಳ್ಕ೦ಡಿದಿ. ವಿಷಯಗಳನ್ನ ನಾವು ತಿಳ್ಕ೦ಡಷ್ಟೇ ಅಲ್ಲದೆ ಅದುನ್ನ ಬೇರೆಯವ್ರಿಗೆ ತಿಳ್ಸಕ್ಕು ಅನ್ನೋ ಉತ್ಸಾಹ ಇದ್ದಲ್ರಾ ಅದು ದೊಡ್ಡಗುಣ. ಅಷ್ಟೇ ಅಲ್ಲ, ಬೈಲಿನ ಎಲ್ಲರಿಗೂ ’ಒಪ್ಪ೦ಗೊ’ ಮೂಲಕ ಪ್ರೋತ್ಸಾಹ ಕೊಡೋ ಆ ಮನಸ್ಸು ಇದ್ದಲ್ರಾ, ನಿ೦ಗಳ ಈ ಒಳ್ಳೇ ಮನೋಭಾವಕ್ಕೆ ನಮೋನ್ನಮಃ.

    1. ಹೃತ್ಪೂರ್ವಕ ಧನ್ಯವಾದಂಗೊ ದೊಡ್ಮನೆ ಭಾವ. ನಿಂಗೊ ಹೇಳಿದ್ದು ತುಂಬಾ ಸತ್ಯ. ದೊಡ್ಡ ಪುಸ್ತಕ ಆದ್ರೆ ಓದುವ ಸಾಹಸಕ್ಕೆ ಕೈ ಹಾಕುವವು ಬಹುಬಹು ಕಡಿಮ್ಮೆ. ಭಗವದ್ಗೀತೆ ಆರೊಬ್ಬನ ಗಂಟೂ ಅಲ್ಲ. ಆದ್ರೆ ಅದೂ ಕಪಾಟದಲ್ಲಿ / ದೇವರಕೋಣೆಲಿ ಇಡುವುದಕ್ಕೆ ಮಾತ್ರ ಸೀಮಿತ ಅಪ್ಪಲಾಗ. ಮನೆಯಲ್ಲಿ ಪುಸ್ತಕ ಇದ್ದೂ ಓದದ್ದೇ ಇಪ್ಪದಕ್ಕೆ ಅದರಲ್ಲಿಪ್ಪ ಗಾಢತನ ಸುಲಭಕ್ಕೆ ಅರ್ಥೈಸಿಗೊಂಬಲೆ ಸಾಧ್ಯ ಇಲ್ಲದ್ದೇ ಇಪ್ಪದೂ ಆಯ್ಕು, ಮೇಲ್ಮೈ ಅರ್ಥಲ್ಲಿ ವಿಶೇಷ ಇದ್ದ ಹಾಂಗೂ ಇಲ್ಲೆ. ಆದರೆ ವಾರಕ್ಕೆ ಹತ್ತು ಶ್ಲೋಕವ ಓದಿ ಅರ್ಥೈಸಿಗೊಂಬಲೆ ಕಷ್ಟ ಆಗ ತುಸು ಆಸಕ್ತಿ ಇಪ್ಪೋರಿಂಗೆ ಹೇಳ್ವ ಉದ್ದೇಶಂದ ಬನ್ನಂಜೆಯಂತ ವಾಙ್ಮಯರ ವ್ಯಾಖ್ಯಾನವನ್ನೂ ಅಲ್ಲಲ್ಲಿ ಜೋಡಿಸಿ ಬರವ ಸಂಗ್ರಹ ಶುದ್ದಿ ಇದಾವ್ತು. ಎಲ್ಲೋರಿಂಗೂ ಉಪಯೋಗವಾಗಲಿ. ಶುದ್ದಿ ಬರವಾಗ ಏನಾರು ಹೆಚ್ಚು ಕಡಮ್ಮೆ ಆದರೆ ನಿಂಗೊ ಎಲ್ಲೋರು ತಿದ್ದಿಕೊಡೆಕು ಹೇಳಿಯೂ ವಿಜ್ಞಾಪನೆ. ಒಪ್ಪಕ್ಕೆ ತುಂಬಾ ಧನ್ಯವಾದ ಭಾವ.

  2. ಒಂದು ನಿಜ ಘಟನೆ — ಭಾರತದ ಶ್ರೀಮದ್ಭಗವದ್ಗೀತೆ, ಅಮೇರಿಕಾದ ಒಬ್ಬ ಬಿಳಿಯ ಪ್ರಜೆ, ಮತ್ತು ನಮ್ಮ ಭಾರತ ದ ಪತ್ರ ಕರ್ತರು — || ಒಂದರಿ ಒಬ್ಬ ಭಾರತ ದ ಶ್ರೇಷ್ಠ ಪ್ರವಚನ ಕಾರ “ಕನ್ನಡಿಗ ” ಒಂದು ಜಾಗೆ ಲಿ “ಶ್ರೀಮದ್ಭಗವದ್ಗೀತೆ ” ಯ ಪ್ರವಚನ ಮಾಡಿಕೊಂಡಿತ್ತಿದ್ದ — ಅದರ ಕೊನೆಗೆ ಒಬ್ಬ — ಪತ್ರ ಕರ್ತ ಕೇಳಿದ ಪ್ರಶ್ನೆ — ಈ ಪ್ರವಚನದಿಂದ ಹೊಟ್ಟೆ ತುಂಬುತ್ತದೆಯೇ ? — ಆಗ ಪ್ರವಚನಕಾರ ಉತ್ತರ ಕೊಟ್ಟ — ಖಂಡಿತಾ ಹೌದು ಆ ಹೊಟ್ಟೆ ನಿಮ್ಮಂತಹವರ ಅರಿವಿಗೂ ಬಾರದ ಎಲ್ಲ ಪ್ರಾಪಂಚಿಕ ಹೊಟ್ಟೆಗಳಿಗೂ ಹೊಟ್ಟೆ ಯಾದ ಒಂದು ದಿವ್ಯ ಹೊಟ್ಟೆ ! – ಎಂದು || ಹಾಂಗೇ ಅವ ಒಂದರಿ “ಅಮೆರಿಕಾಕ್ಕೆ” ಒಂದು “Relegious meet ” ಲಿ ಪ್ರವಚನ ಕೊಡುಲೆ ಹೋದ — ಅವನ –ಚೀಲಲ್ಲಿ “ಉಪ್ಪಿನ ಕಾಯಿ” ಯೂ ಇತ್ತು | ಅವಂಗೆ ಗೊಂತಿತ್ತು ಉಪ್ಪಿನ ಕಾಯಿ ಕೊಂಡೋಪಲಾಗ ಹೇಳಿ ಆದರೂ ಕೊಂಡು ಹೋದ || ಅಮೆರಿಕಾಲ್ಲಿ ಇಳಿವಾಗ ಒಬ್ಬ ಕಸ್ಟಮ್ ಅಧಿಕಾರಿ ಬಿಳಿಯ ಅವನ ತಪಾಸಣೆ ಮಾಡಿ ಬಿಟ್ಟ — ರಜ ದೂರ ಹೊಪಾಗ ಪುನಃ ಈ ಪ್ರವಚನಕಾರನ ಹಿಂದೆ ದಿನಿಗೇಳಿದ — ಇವ ಹೆದರಿದ ಎಲ್ಲಿಯಾದರೂ “ಉಪ್ಪಿನ ಕಾಯಿ” ಯ ವಿಷಯವೋ ಹೇಳಿ — ಆದರೆ ಅವ ಕೇಳಿದ ಪ್ರಶ್ನೆ — Are you from India ? do you know ಭಗವದ್ಗೀತಾ ? — ನಾಳೆ ಒಂದು ಆ ವಿಷಯದ್ದೇ ಸಮಾರಂಭ ಇಲ್ಲಿ ಇದ್ದು — ಹೇಳಿ — ಆ ಅಮೆರಿಕ ಬಿಳಿಯವ ಹೇಳಿದ || ಆಗ ಪ್ರವಚನ ಕಾರ — ಹೇಳಿದ ನೀನು ಈಗ ಬಿಟ್ಟರೆ ಆನು ಹೋಪದು ಅಲ್ಲಿಗೇ — ನಾಳೆ ಆ ವಿಷಯಲ್ಲಿ ಹೇಳುವವನು ಆನೇ ಹೇಳಿ ಹೇಳಿದ || ಬಿಳಿಯ ಹೇಳಿದ ” ಇಟ್ ಈಸ್ ದಿ ಗ್ರೇಟ್ ಟ್ರೆಶರ್ ಆಫ್ ಇಂಡಿಯ ” — ಅದು, ಶ್ರೀಮದ್ಭಗವದ್ಗೀತೆ ಭಾರತದ ಅತ್ಯಂತ “ಅಮೂಲ್ಯವಾದ ನಿಧಿ” – ಈಗ ನೋಡಿ ಈ ಭಾರತೀಯರ “ಅಹಂಕಾರವುದೇ ” ಅದೇ ಒಬ್ಬ ಭಾರತೀಯ ನಲ್ಲದ್ದವನ “ಶ್ರದ್ಧೆ ” ಯುದೇ | ಈ ಪ್ರವಚನ ಕಾರ ಬೇರೆ ಯಾರು ಅಲ್ಲ ನಮ್ಮ ಚೆನೈ ಭಾವ ರೆಫ್ಫೆರ್ ಮಾಡುವ ” ಶ್ರೀ ಬನ್ನಂಜೆ ಗೋವಿಂದ ಆಚಾರ್ಯ “

    1. ಧನ್ಯವಾದಂಗೊ ಎದುರ್ಕಳ ಮಾವಂಗೆ.

  3. ಮನುಷ್ಯ ನ ನಡವಳಿಕೆ ಮತ್ತು ಬುದ್ಧಿ “ಸಾತ್ವಿಕ, ರಾಜಸಿಕ, ತಾಮಸಿಕ ” ಗಳ ಮಿಶ್ರಣ | ಇದಲ್ಲಿ ಮೂರೂ ಬಗೆ | ೧. ತಾಮಸಾಧಿಕ್ಯ ೨. ರಾಜಸಾಧಿಕ್ಯ (ಪ್ರಪಂಚ ದ ಹೆಚ್ಚಿನವರು ಈ ಗುಂಪಿನವರು ) ೩. ಸಾತ್ವಿಕಾಧಿಕ್ಯ | ಇಲ್ಲಿ ೧. ತಾಮಸಾಧಿಕ್ಯ ದವರು ಶ್ರೀಮದ್ಭಗವದ್ಗೀತೆ ಯಂತಹಾ ಯಾವುದೇ ನೀತಿ ಬೋಧಕ ಗ್ರಂಥ ಗಳ ಒದುದು ಬಿಡಿ “ಗೋಜಿಗೇ” ಹೊವುತ್ತವಿಲ್ಲೇ | ೨. ರಾಜಸಾಧಿಕ್ಯ ಇಪ್ಪವರು, ಓದುಗು, ಪ್ರಯತ್ನವು ಮಾಡುಗು, ಆದರೂ ಅವಕ್ಕೆ ಅರ್ಥ ಬೇಗನೆ ಆವುತ್ತಿಲ್ಲೇ — ಈ ರೀತಿಯ ಉತ್ತಮ ನೀತಿಯುತ ನಿಯಮಂಗಲಿಂದಲೂ ಪ್ರಾಪಂಚಿಕ ಸೆಳೆತಕ್ಕೆ ಅವು ಹೆಚ್ಚು ತಲೆ ಬಾಗುತ್ತವು | ೩. ಸಾತ್ವಿಕಾಧಿಕ್ಯ ಇಪ್ಪವರು ನೀತಿ ಬೋಧಕ ಗ್ರಂಥ ಪ್ರವಚನಾದಿಗಳ ಹಿಂದೆ ಹಿಂದೆ ಬಹಳ ಪ್ರೀತಿಲಿ ಹೆಚ್ಚು ಹೆಚ್ಚಾಗಿ ಹೊವುತ್ತವು ||
    ಸಾತ್ವಿಕಾಧಿಕ್ಯ ದವರು “ಸಾಧನೆ ” ಗೆ ಹೆಚ್ಚಿನ ಬೆಲೆ ಕೊಡುತ್ತವು — ಇವರ ಗುಣ ಹೇಗಿರ್ತು ನೋಡಿ — ತನಗೆ ಕಷ್ಟ ಬಂದರೆ ಆ ಕಷ್ಟ ದ ಹಿಂದೆ ಇನ್ನೊಬ್ಬನ ಕೈವಾಡವ ಅವು ಹುಡುಕುತ್ತವಿಲ್ಲೇ — ಅಲ್ಲಿ ಇನ್ನೊಬ್ಬನ ಕೈವಾಡ ಸ್ಫಷ್ಟ ವಾಗಿ ಕಂಡರೂ ಅವು (ಭ.ಗೀ. ೩.೨೦ ರ ಪ್ರಕಾರ — ಪ್ರಕೃತೇಃ ಕ್ರಿಯಮಾಣಾನಿ ಗು ಣಿೈಃ ಕರ್ಮಾಣಿ —) ಪ್ರಕೃತಿ ಯ ಗುಣ ದ ಪ್ರಕಾರ “ಆನು ಪೂರ್ವ ಜನ್ಮ ” ಕರ್ಮಂಗಳ ಫಲ ವ ಅನುಭವಿಸುತ್ತಿದ್ದೆ — ಈಲ್ಲಿ ಇನ್ನೊಬ್ಬ ಅದಕ್ಕೆ “ನಿಮಿತ್ತ ಕಾರಣ” ಅಷ್ಟೇ ಹೇಳಿ ಗ್ರಹಿ “ಪ್ರತೀಕಾರ ಭಾವ ” ಎಂದೂ ತಾಳುತ್ತವಿಲ್ಲೇ — ಇದು ಒಂದು ಉತ್ತಮ ವಾದ ಸಾಧನಾ ಕ್ರಮ ಇದರ ” ತಿತಿಕ್ಷಾ ” ಹೇಳುತ್ತವು (ಭ.ಗೀ. ಅಧ್ಯಾಯ ೨ ತಾನ್ ತಿತಿಕ್ಷಸ್ವ ಭಾರತಾ), ಇದರ ಪೂರ್ಣ ವಿವರ “ವಿವೇಕ ಚೂಢಾಮಣಿ ” ಯ ಸಾಧನ ಚತುಷ್ಟಯ ಲ್ಲಿ ನೋಡುಲಕ್ಕು ||

  4. ಇಂತಹಾ ವಿಷಯಂಗಳ ” ಧಡೀರನೆ ” ಒಂದೇ ಸರ್ತಿ “ಸಾಧನೆ ” ಯ ರೂಪಲ್ಲಿ ಕಾರ್ಯ ಗತ ಗೊಳಿಸುದು ಮತ್ತು ನಮ್ಮ ನಿತ್ಯ ಜೀವನಕ್ಕೆ ಅಳವಡಿಸಿಗೊಮ್ಬದು ಖಂಡಿತಾ ಕಷ್ಟ- ಸಂಶಯ ಇಲ್ಲೇ | ಆದರೆ ಮೊದಲನೇ ಹೆಜ್ಜೆ — “ಆನು ಖಂಡಿತಾ ಸಾಧನೆ ಮಾಡುಲೆ ಅಪೇಕ್ಷೆ ಪಡುತ್ತೆ ” ಆದರೆ ಈಗ ಇಪ್ಪ ಬಲೆಂದ ಹೆರ ಬಪ್ಪಲೆ ದೇವರು ಎನಗೆ ಅನುಗ್ರಹಿಸಲಿ — ಎಂಬ ಒಂದು ಕಳಕಳಿ ಯ ಬೀಜ ಮನಸಿನ ಒಳ ಅಂಗಳಲ್ಲಿ ಬಿತ್ತಿದರೆ ಅದುವೇ ತನ್ನಿಂದ ತಾನೇ ನಮಗರಿವಿಲ್ಲದ್ದೆ ಮನಸಿನ ಶುದ್ಧೀಕರಣ ಮಾಡುಲೆ ಶುರು ಮಾಡುತ್ತು |
    ಭ.ಗೀ ಶ್ಲೋ ೪-೩೬ — ಅಪಿಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ | ಸರ್ವಂ ಜ್ಞಾನಪ್ಲೇವೆನೈವ ವೃಜಿನಂ ಸಂತರಿಷ್ಯಸಿ || — ಅರ್ಥ –ಶ್ರೀ ಕೃಷ್ಣ ಪರಮಾತ್ಮ ಮಾನವಕೋಟಿ ಗೆ ಅನುಗ್ರಹಿಸಿ ಹೇಳುವ ಮಾತು — –” ನೀನು ಎಲ್ಲಾ ಪಾಪಿಗಳಿಗಿಂತಲೂ ಹೆಚ್ಚು ಪಾಪವನ್ನೇ ಮಾಡಿದವನಾದರೂ ” ಆ ಪಾಪಗಳೆಲ್ಲವನ್ನೂ (ಪಾಪ ಸಾಗರವ ) ” ಜ್ಞಾನವೆಂಬ ನಾವೆಯಿಂದಲೇ ” ದಾಟುವೆ || — ನಿಜ ಜೀವನಲ್ಲಿ ಪಾಪ ಕಾರ್ಯ ಮಾಡದ್ದ ಮಾನವನೇ ಇರ ! — ಅಂಬಗ ಜ್ಞಾನದ ಮೊದಲ ಮೆಟ್ಟಲು ? – ಇನ್ನೊಬ್ಬನ ಬೈವದು, ಇನ್ನೊಬ್ಬನ ಮೇಲೆ ಹುಳುಕು, ಇನ್ನೊಬ್ಬನ ಮೇಲೆ ಶಾಪ ಹಾಕುದು, ಎಲ್ಲವನ್ನು ಬಿಟ್ಟು — ತನ್ನಿಂದ ಆಗಿಪ್ಪ ಅಥವಾ “ಆಗಿಪ್ಪಲು ಸಾಕು” ಹೇಳಿ ಇಪ್ಪ ” ಪಾಪ ಕಾರ್ಯ ಗಳ ” ಮೇಲೆ ಒಂದು ಆತ್ಮಾವಲೋಕನ — ಇದುವೇ ಮೇಲೆ ಪರಮಾತ್ಮ ಹೇಳಿದ ” ಜ್ಞಾನ ನೌಕೆ ” ಯ ಏರು ವ ಕಾರ್ಯ — ಮತ್ತೆ ಮುಂದೆ ಅದುವೇ ಕರಕೊಂಡು ಹೊವುತ್ತು | ಎರಡನೇ ಯ ಹೆಜ್ಜೆ ತನ್ನಿಂದ ಈಗಾಗಲೇ ಆದ ಪಾಪ ದ ವಿಷಯಲ್ಲಿ ಮರುಗುವಿಕೆ ” ಪಶ್ಚಾತ್ ತಾಪ ” — ಅದರ ಪರಿಣಾಮಲ್ಲಿ ನೊಂದ ಜೀವಿಯ ಮೇಲೆ ” ಅನುಕಂಪ ” || — ಇಷ್ಟಾದರೆ “ಪಾಪಸಾಗರ ” ವ ” ಜ್ಞಾನ ನೌಕೆ ” ಯ ಮೂಲಕ ಅರ್ಧ ದಾಟಿದ ಹಾಂಗೇ ||

  5. ತಿದ್ದುಪಡಿ : ಮೇಲೆ — ” ಕರ್ಮೆಂದ್ರಿಯೈಃ ಕರ್ಮ ಯೋಗಮಸಕ್ತಃ ಸ ವಿಶಿಷ್ಯತೇ ” ಹೇಳಿ ಇಪ್ಪಲ್ಲಿ — ಹೀಂಗೆ ಕರ್ಮ ಯೋಗ ಮಾಡುವವ ” ಯೋಗಿ ” ಹೇಳಿ ಬರದ್ದೆ | — ಅಯೆಕ್ಕಪ್ಪದು “ಸಾಧಕ ” ಹೇಳಿ – ಕಾರಣ ಸಾಧನೆ ಮಡಿದ ಮೇಲೆ ಯೋಗಿ ಅಪ್ಪದು.| ವಾಕ್ಯಾರ್ಥ — ಸುರುವಣ ಶ್ಲೋಕಲ್ಲಿ (೩-೬ ) ಬರದ ಹಾಂಗೆ “ಸಾಧನೆ” ಮಾದುವವನಿಗಿಂತ ಎರಡನೆಯ ಶ್ಲೋಕಲ್ಲಿ ಬರದ ಹಾಂಗೆ (೩-೭ ) ಸಾಧನೆ ಮಾಡುವವ ಉತ್ತಮ ಹೇಳಿ — ||

  6. ಅಂಬಗ ಇದರ ಗೆಲ್ಲುದು ಹೆಂಗೆ ? — ಶ್ಲೋ ೩-೩೪ ಕ್ಕೆ (ಇಂದ್ರಿಯಸ್ಯೆನ್ದ್ಯಿಯಸ್ಯಾರ್ಥೇ ) ಚೆನೈ ಭಾವ ಬರದ ವಿವರಣೆ ನೋಡಿ ೧. ಈ ರೀತಿ ಯೋಚಿಸುವವರು (ಕೆಟ್ಟ ಯೋಚನೆ ಮಾಡುವವರು, ಕೃಷ್ಣ ಪ್ರಜ್ಞೆ ಲಿ ಇಲ್ಲದ್ದೊರು ) ಹೆಚ್ಚಾಗಿ ತಾನು ಕಾಮಿಸುವ ವಸ್ತುವಿನ /ವಿಷಯವ ಮಾತ್ರ ಮನಸಿಲಿ ಮೆಲುಕು ಹಾಕಿ ಅನುಭವಿಸಿ ಅದರ ಕಾರ್ಯ ರೂಪಕ್ಕೆ ತಂದು — ಅದರ “ಬಲೆಗೆ ” ಬಿದ್ದು ” ಬಂಧಿಸಲ್ಪಡುತ್ತವು ” | ಇದರ ಗೆಲ್ಲೆಕ್ಕಾದರೆ – ಪ್ರಾಜ್ಞರು ಹೇಳುವ ತತ್ವ ಒಂದಿದ್ದು ಅದು — ” ಪ್ರತಿ ಪಕ್ಷ ಭಾವನಂ ” — ಹೇಳಿದರೆ —- ಇದರ ಕಾರ್ಯ ರೂಪಕ್ಕೆ ತಂದರೆ — ಮುಂದೆ ಅಪ್ಪ ಅನಾಹುತಂಗೋ ಎಂತದು ಹೇಳಿ (ಪ್ರತಿ ಪಕ್ಷ ಭಾವನೆ) ಗಾಢ ವಾಗಿ ಯೋಚಿಸುದು ಅವಾಗ -ಅದು ಹಿಂದೆ ಹೇಳಿದ ಹಾಂಗೆ “ಪರಿಣಾಮೇ ವಿಷಮಿವ ” — ಹೇಳಿ ಗೊಂತಾವುತ್ತು | ಅವಾಗ ಈ “ದುಷ್ಕಾರ್ಯ” ಮಾಡುದು ತಪ್ಪುತ್ತು ಮತ್ತು ಒಂದರಿಯಂಗೆ ಬಂಧನಂದ ತಪ್ಪುತ್ತು — ಹಾಂಗೆ ತುಂಬಾ ಸರ್ತಿ ಮಾಡಿ ಅಪ್ಪಾಗ — ಮನಸಿನ್ಗೆ ಕೆಟ್ಟ ಯೋಚನೆ ಬಪ್ಪದೆ ಕಡಮೆ ಆಯಿಕ್ಕೊಂದು ಹೊವುತ್ತು | ೨. ಇದಕ್ಕೆ ಪೂರಕವಾಗಿ ಬೇಕಾದ ಇನ್ನೊಂದು ತತ್ವ – ” ಹ್ರೀರ ” = ಕೆಟ್ಟಕೆಲಸ ಮಾಡುಲೆ ಅಡ್ಡ ಬಪ್ಪ ” ನಾಚಿಗೆ ” — ಇದಲ್ಲಿ ಎರಡು ಬಗೆ — (ಅ) ಹೆರಾಣ ಜನರಿಂಗೆ ಗೊಂತಾಗಿ ತನ್ನ ಮರ್ಯಾದಿ ಹೋಕು ಹೇಳಿ — ಇದು ” ರಾಜಸ ” ಸ್ವಭಾವ — ಇಂಥ ವ –ತೆರೆ ಯ ಮರೆಂದ ಕೆಟ್ಟ ಕೆಲಸು ಮಾಡುವ ಸಂಭವ ಇದ್ದು | ( ಎ ) ಆದರೆ ನಿಜ ಅರ್ಥ ದ ” ಹ್ರೀರ ” — ಹೇಳಿದರೆ -ಹೀಂಗೆ — ಎಂತಹಾ ಗೋಪ್ಯವಾಗಿಯೇ ಇದ್ದರು / ಯಾರಿಂಗು ಗೊಂತಾಗದ್ದೆ ಯಾವ ತೊಂದರೆ ಯು ಆಗ ಹೇಳಿ ಖಾತ್ರಿ ಇದ್ದರೂ ಯಾವುದೇ ಕೆಟ್ಟ ಕೆಲಸ ಮಾಡುಲೆ “ತನಗೆ ತಾನೇ ನಾಚುಗೆ ಪಟ್ಟುಗೊಮ್ಬದು ” — ಇದು ನಿಜವಾದ ಹ್ರೀರ — ಇದು ” ಸಾತ್ವಿಕ ಸ್ವಭಾವ ” || ಮುಂದುವರಿತ್ತು

  7. ಇಲ್ಲಿ ಶ್ಲೋಕ ೩- ೩೩ — ಸದೃಶಂ ಚೇಷ್ಟತೇ ಸ್ವಸ್ಯಾಃ —————- ನಿಗ್ರಹಃ ಕಿಂ ಕರಿಷ್ಯತಿ | — ಇಲ್ಲಿ ಮಹಾ ಜ್ಞಾನಿಯೇ ಆದರೂ ತನ್ನ ಪ್ರಕೃತಿ ಗೆ ಅನುಗುಣ ವಾಗಿ ನಡೆತ್ತ — ಅಂಬಗ ನಿಗ್ರಹ ಎಂತ ಮಾಡುತ್ತು ? ಹೇಳಿ ಬತ್ತು | — ನಮ್ಮ ಲ್ಲಿ ಮೂಡುವ ಪ್ರಶ್ನೆ — ಅಂಬಗ ನಿಗ್ರವೇ ಬೇಡದೋ ? — ಮತ್ತೆ ಮಾಡುದು ಎಂತರ ? | ಈ ಪ್ರಶ್ನೆ ಗೆ ಸಮರ್ಪಕ ಉತ್ತರ — ಈ ಅಧ್ಯಾಯಲ್ಲೇ ಹಿಂದಾಣ ಎರಡು ಶ್ಲೋಕಂಗಳಲ್ಲಿ ಇದ್ದು — ಅದು ಶ್ಲೋ ೩-೬ ಮತ್ತು ೩-೭ | ಅದರ ನೋಡಿ — ೩-೬ “ಕರ್ಮೆಂದ್ರಿಯಾಣಿ ಸಂಯಮ್ಯ ಯ ಅಸ್ತೆೇ ಮನಸಾ ಸ್ಮರನ್ — ” — ಹೇಳಿದರೆ ಬರೇ ಕರ್ಮೇಂದ್ರಿಯ ನಿಗ್ರಹ ಮಾಡಿ ಲೋಕಕ್ಕೆ ತೋರಿಕೆಗೆ ಸುಬಗನ ಹಾಗಿಪ್ಪೋನು — ” ಮಿಥ್ಯಾಚಾರಿ” || ಅಂಬಗ ನಿಗ್ರಹ ದ ನಿಜಸ್ವರೂಪ ಹೆಂಗೆ ? — ಶ್ಲೋ ೩-೭ “ಯಸ್ತ್ವಿನ್ದ್ರಿಯಾಣಿ (ಯಃ ತು ಇಂದ್ರಿಯಾಣಿ) ಮನಸಾ ನಿಯಮ್ಯಾರಭಾತೆೀ ಽರ್ಜುನಾ | ಕರ್ಮೆಂದ್ರಿಯೈಃ ಕರ್ಮ ಯೋಗಮಸಕ್ತಃ ಸ ವಿಶಿಷ್ಯತೇ || ಸಮಸ್ತ ಇಂದ್ರಿಯಂಗಳನ್ನು ಮನಸಿನ ಮೂಲಕ ನಿಯಂತ್ರಿಸಿ ಕರ್ಮ ಯೋಗ ಮಾಡುವವ ಯೋಗಿ ಹೇಳಿ (ಕರ್ಮ ಯೋಗ ದ ಉದಾಹರಣೆ ಹಿಂದಿನ ಅದ್ಯಾಲ್ಲಿ ಬದ್ದು) ||

  8. ಜಯಶ್ರೀ ನೀರ ಮೂಲೆ ಸರಿಯಾದ ಮಾತು — ಧನ್ಯವಾದ | ನಮ್ಮ ವೈರಿಗೋ ಆರು ಹೇಳಿ ಗೊಂತಾತು | ಅವು ಎಲ್ಲಿ ಮನೆ ಮಾಡಿದ್ದವು ಹೇಳಿ ಅರ್ಥ ಆತು | ಅಂಬಗ ನಮ್ಮ ಸಾಧನೆ ಯ ಎಲ್ಲಿಂದ ಸುರು ಮಾದೆಕ್ಕು ಹೇಳುದು ಸ್ಫಷ್ಟ | ಇಲ್ಲಿ ಬಹಳ ಪ್ರಾಮುಖ್ಯ ವಾದ ಒಂದು ವಿಷಯ ಇದ್ದು | ಅಧ್ಯಾತ್ಮಲ್ಲಿ ೧. ಬಂಧ ೨. ಮೋಕ್ಷ — ಇದೆರಡು ಇಪ್ಪದು | ಒಂದನೆಯದರಲ್ಲಿ ನಾವು ಈಗ ಇಪ್ಪದು — ಎರಡನೆಯದರ ನಾವು ಪಡೆಯಕ್ಕಪ್ಪದು || ಮೋಕ್ಷ ಹೇಳಿದರೆ “ಬಿಡುಗಡೆ” ಹೇಳಿ ಅರ್ಥ | ಈಗ ನಮ್ಮ ಬುದ್ಧಿಯನ್ನೇ ಆಕ್ರಮಿಸಿ ನಮ್ಮ ಬಂದಿಸಿದ್ದು ಯಾವದು ಹೇಳಿ ಗೊಂತಾತು | ನಿಜ ಅರ್ಥ ಲ್ಲಿ ” ಯೋಗ ಸಾಧನೆ ” ಯ ಮೂಲಕ ನಮ್ಮ ಇಷ್ಟರ ವರೆಗೆ “ಬಂಧನ ” ಲ್ಲಿ ಮಡುಗಿದ ಈ ವೈರಿಗಳಿಂದಲೇ ಮುಕ್ತಿ ಪದೆಯಕ್ಕಪ್ಪದು, ಅದುವೇ ಮೋಕ್ಷ || ದೇಹಧಾರಿಯಾಗಿ — ಜೀವಿಸುತ್ತಿಪ್ಪಾಗಲೇ ಈ ” ಕಾಮ ಕ್ರೋಧಾ ದಿ ” ಅರಿ ಷಡ್ವರ್ಗ ಗಳಿಂದ ಮುಕ್ತ ನಾದೊನ ” ಜೀವನುಕ್ತ ” ಹೇಳಿ ಹೇಳುತ್ತವು || — ಈ ಮುಕ್ತಿ ಗೆ ಮೊದಲ ಸೋಪಾನ ಯಾವದು ಹೇಳಿ ಮುಂದೆ ನೋಡುವಾ ||

  9. ವಿಚಿತ್ರವಾದರೂ ಅನುಭವಿಸಿದ ಸತ್ಯ…

    “ನಮ್ಮ ವೈರಿ ಆರು, ಅದು ಇಪ್ಪ ಸ್ಥಾನ ಯಾವುದು, ಅದು ನಮ್ಮ ಹೇಂಗೆ ಆಕ್ರಮಿಸುತ್ತು ಹೇಳ್ವದರ ಈ ವರೇಗೆ ನೋಡಿ ಆತು. ಹಾಂಗಾರೆ ಈ ವೈರಿಯ ಓಡುಸುತ್ತದು ಹೇಂಗೆ.. ?”
    ಈ ಆಂತರ್ಯಲ್ಲಿ ಇಪ್ಪ ವೈರಿಗಳ ಗೆದ್ದರೆ ಮೊದಲು ಶತ್ರುಗಳ ಹಾಂಗೆ ಇದ್ದವು ನಮಗೆ ಅತೀ ಆತ್ಮೀಯರು ಆವುತ್ತವು… ಜಗತ್ತು ನಿಜವಾಗಿಯೂ ವಿಚಿತ್ರ… ಕಲಿವಲೆ ತುಂಬಾ ಆಸಕ್ತಿದಾಯಕವಾದ ವಿಷಯ… ಇಲ್ಲಿ ಹೇಳಿ ಕೊಡುತ್ತಾ ಇಪ್ಪದರ ಚೂರು ಚೂರು ಪ್ರಯೋಗ ಮಾಡಿ ನೋಡಿ…

  10. ಚೆನೈ ಭಾವ ಪರಿಪೂರ್ಣ ಹಾಗು ತಲಸ್ಫರ್ಶಿ ವಿವರಣೆ | ಎಸ್. ಕೆ . ಗೋಪಾಲಕೃಷ್ಣ ಭಟ್ಟರು ಮತ್ತು ಬೊಳುಂಬು ಗೋಪಾಲ ಭಾವ ಈ ಮೇಲೆ ಸರಿಯಾಗಿ ಯೇ ಹೇಳಿದ್ದವು – ಎಲ್ಲರಿಂಗು ಧನ್ಯವಾದಂಗೋ ||

  11. ಪ್ರತಿಯೊಂದು ಮಾತುಗಳು ಅರ್ಥಪೂರ್ಣ. ಅರ್ಥವ ಸರಿಯಾಗಿ ಅರ್ಥ ಆವ್ತ ಹಾಂಗೆ ಮಾಡ್ತ ಚೆನ್ನೈ ಭಾವಂಗೆ ಧನ್ಯವಾದಂಗೊ.

  12. ಕೃಷ್ಣ ಎಷ್ಟು ಸರಳವಾಗಿ ನಿತ್ಯ ಸತ್ಯಂಗಳ ಹೇಳುತ್ತ -ಚೆನ್ನೈ ಭಾವನ ವಿವರಣೆ ಹೃದಯಂಗಮ ಆಗಿ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×