‘ಶ್ರೀಮದ್ಭಗವದ್ಗೀತಾ’ – ಪೀಠಿಕೆ, ಧ್ಯಾನ ಶ್ಲೋಕಂಗೊ.

February 2, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

‘ಶ್ರೀಮದ್ಭಗವದ್ಗೀತಾ’

‘ಶ್ರೀಮದ್ಭಗವದ್ಗೀತಾ’ – ಹಿಂದೂ ಧರ್ಮದ ಪರಮ ಶ್ರೇಷ್ಠ ಗ್ರಂಥ; ಭಾರತದ ದೇಶೀಯ ಗ್ರಂಥ; ಸಕಲ ವೇದ, ಶಾಸ್ತ್ರ, ಉಪನಿಷತ್ತುಗಳ ಸಾರ.  ಹಾಂಗಾಗಿಯೇ ಇದಕ್ಕೆ  ‘ಪಂಚಮವೇದ’ ಹೇಳುವ ಖ್ಯಾತಿ.
ಭಗವದ್ಗೀತಾಕ್ಕೆ ಇಡೀ ವಿಶ್ವಲ್ಲೇ ವಿಶೇಷ ಮಾನ್ಯತೆ ಇದ್ದು. ಭಗವದ್ಗೀತೆ ಮನುಷ್ಯನ ಜೀವನ ಕ್ರಮವ ಬದಲಿಸಿ ಸದಾಚಾರ ಪ್ರವೃತ್ತಿಲ್ಲಿ ಕೊಂಡೋಪ ಶಕ್ತಿ ಅಡಗಿಪ್ಪದು. ಜೀವನಮೌಲ್ಯ ಅಡಕವಾಗಿಪ್ಪದು.
ಪ್ರತಿಯೊಬ್ಬನ ಮನೆಲಿ ಇರೆಕ್ಕಪ್ಪದು ಭಗವದ್ಗೀತೆ ಪುಸ್ತಕ. ಬರೇ ಪುಸ್ತಕ ಇದ್ದರೆ ಸಾಲ. ಅದರ ಪಠಣ ಕೂಡ ಆಯೆಕು. ವರಾಹ ಪುರಾಣಲ್ಲಿ ವಿಷ್ಣು ಭೂದೇವಿಗೆ  ಹೇಳ್ತ° – ಗೀತೆ ಇಡೀ ಪುಸ್ತಕ ಪಠಣ ಆವ್ತಾ ಇರೇಕು. ಎಡಿಯದ್ರೆ ಅರ್ಧ ಆದರೂ ನಿತ್ಯವೂ ಓದಿಗೊಂಡು ಇರೆಕು,  ಎಡಿಯದ್ರೆ  ಒಂದು ಅಧ್ಯಾಯ ಆದರೂ ., ಅದೂ ಎಡಿಯದ್ರೆ ಒಂದು ಶ್ಲೋಕ ನಿತ್ಯ, ಅಲ್ಲದ್ರೆ ಒಂದು ಚರಣವಾದರೂ.  ಇಲ್ಲಿ ‘ಎಡಿಯದ್ರೆ’ ಹೇಳಿದ್ದದು, ಇದರ ನಿತ್ಯ ಪಾರಾಯಣ ಆಯೆಕು ಹೇಳ್ತ ಅರ್ಥಲ್ಲಿ ವಿನಃ ಹ್ಹೋ! ಇಷ್ಟು ಓದಿರೂ ಸಾಕೋ! ಹೇಳ್ವ ಭಾವನೆಗೆ ಅಲ್ಲ. ಹಾಂಗಾಗಿಯೇ ಅಲ್ಲಲ್ಲಿ ‘ಭಗವದ್ಗೀತಾ ಅಭಿಯಾನ’ ಹೇದು ಸುರುವಾದ್ದು. ಅಧ್ಯಯನ ಕೇಂದ್ರ, ಶಿಬಿರ, ಪ್ರವಚನ ಇತ್ಯಾದಿಗಳ ಮೂಲಕವೂ ಅನೇಕ ಧಾರ್ಮಿಕ ಮುಖಂಡರು, ಅನೇಕ ಸಂಘ-ಸಂಸ್ಥೆಗೊ ಭಗವದ್ಗೀತಾ ಪ್ರಚಾರ ಕೈಂಕರ್ಯಲ್ಲಿ ತಮ್ಮ ತಮ್ಮ ತೊಡಗಿಸಿಗೊಂಡಿದವು.   ಭಗವದ್ಗೀತೆಯ ನಿತ್ಯ ಅಧ್ಯಯನ, ಜ್ಞಾನಯಜ್ಞಕ್ಕೆ ಸಮಡ.

ಕುರುಕ್ಷೇತ್ರಲ್ಲಿ ಅರ್ಜುನ° ಮೋಹಪಾಶಕ್ಕೆ ಸಿಲುಕಿ ವಿಮುಖನಾಗಿ ಶಸ್ತ್ರತ್ಯಾಗ ಮಾಡಿ ಯುದ್ಧವೇ ಬೇಡ ಹೇಳಿ ವಿಷಣ್ಣವದನನಾಗಿ ಇಪ್ಪಗ ಭಗವಂತ° ಶ್ರೀಕೃಷ್ಣ ಪರಮಾತ್ಮ° ಎಲ್ಲಾ ಉಪನಿಷತ್ತುಗಳ ಸಾರವ ೭೦೦ ಶ್ಲೋಕಲ್ಲಿ ಪ್ರೀತಿಪೂರ್ವಕವಾಗಿ ಬೋಧಿಸಿಯಪ್ಪಗ ಅವನ ಮೋಹ ಮಾಯ ಆತಡ. ತಾನು ಆರು, ಎಂತರ, ಎಂತಕೆ ಎಂಬಿತ್ಯಾದಿ ಕರ್ತವ್ಯ ಪ್ರಜ್ಞೆ ಮೂಡಿಬಂದು ಯುದ್ಧಕ್ಕೆ ಸಿದ್ದನಾದ್ದಡ. ಅಂಬಗ ಭಗವಂತ° ಅಪ್ಪಣೆ ಕೊಡಿಸಿದ್ದು –  “ಈ ಗೀತಾಮೃತವ ಆನು ಈ ಮದಲು ಸೂರ್ಯಂಗೆ ಬೋಧಿಸಿತ್ತಿದ್ದೆ. ಸೂರ್ಯ ಮುಂದೆ ಮನುವಿಂಗೆ, ಮನು ಇಕ್ಷ್ವಾಕುವಿಂಗೂ ಬೋಧಿಸಿದವು. ಪರಂಪರಾನುಗತವಾಗಿ ಬಂದ ಈ ಯೋಗವ ರಾಜರ್ಷಿಗೊ ಮಾಂತ್ರ ಗೊಂತುಮಾಡಿದ್ದವು. ಕಾಲ ಅತಿ ಗತಿಸಿದ್ದರಿಂದ ಅವೆಲ್ಲಾ ಈಗ ನಷ್ಟ ಆದಿಕ್ಕು. ನೀನು ಎನಗೆ ಅತ್ಯಂತ ಪ್ರಿಯನಾದ್ದರಿಂದ ಅದೇ ಪುರಾತನ ರಹಸ್ಯವ ನಿನಗೆ ಬೋಧಿಸಿದ್ದೆ. ಇದರ ನೀನು ಎನ್ನ ಭಕ್ತರಿಂಗೆಲ್ಲ ಪ್ರಚಾರ ಮಾಡೆಕು”.

ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಶ್ಯಷ್ಯತ್ಯ ಸಂಶಯಃ ॥ (- ಶ್ರೀಮದ್ಭಗವದ್ಗೀತಾ, ಅಧ್ಯಾಯ ೧೮ , ಶ್ಲೋಕ ೬)

ಆರು ಎನ್ನಲ್ಲಿ ಪರಮ ಪ್ರೇಮಂದ ಈ ಪರಮ ರಹಸ್ಯಯುತವಾದ ಗೀತಾಶಾಸ್ತ್ರವ ಎನ್ನ ಭಕ್ತರಲ್ಲಿ ಪ್ರಚಾರ ಮಾಡ್ತವೋ ಅವ್ವು ನಿಸ್ಸಂದೇಹವಾಗಿ ಅಖೇರಿಗೆ ಎನ್ನನ್ನೇ ಸೇರುತ್ತವು.

|| ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ ||

ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ ।
ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರೋ ಭುವಿ ॥ (ಶ್ರೀಮದ್ಭಗವದ್ಗೀತಾ, ಅಧ್ಯಾಯ ೧೮, ಶ್ಲೋಕ ೬೯)

ಮತ್ತೆ ಮನುಷ್ಯರಲ್ಲಿ ಅಂತವರಿಂದ ಮಿಗಿಲಾಗಿ ಎನ್ನ ಪ್ರಿಯಕಾರ್ಯ ಮಾಡುವವು ಆರೂ ಇಲ್ಲೆ. ಮಾತ್ರ ಅಲ್ಲದ್ದೆ ಪೃಥ್ವಿಲಿ ಅವರಿಂದ ಮಿಗಿಲಾದ ಪ್ರೀತಿಪಾತ್ರರು ಬೇರೆ ಆರೂ ಇಪ್ಪಲಿಲ್ಲೆ.

ಪ್ರತಿನಿತ್ಯವೂ ಗೀತಾಪಾರಾಯಣ ಮತ್ತೆ ಅರ್ಥ ಮನನ ಮಾಡುವದರಿಂದ ಗೀತಾಯಜ್ಞದ ಮೂಲಕ ಪರಮಾತ್ಮನ ಆರಾಧನೆ ಮಾಡಿದ ಹಾಂಗೆ ಆವುತ್ತು.
ಅರ್ಥವ ಮೆಲುಕು ಹಾಕುವದರಿಂದ ಸುಪ್ತಚಿತ್ತಲ್ಲಿಪ್ಪ ಜನ್ಮ ಜನ್ಮಾಂತರ ಪಾಪ ನಿವಾರಣೆ ಆವ್ತಡ. ಒಟ್ಟು ೭೦೦ ಶ್ಲೋಕಂಗಳ ಒಳಗೊಂಡ, ೧೮ ಅಧ್ಯಾಯಂಗಳ ಒಳಗೊಂಡ ಇಡೀ ಭಗವದ್ಗೀತೆಯ ನಿತ್ಯ ಪಾರಾಯಣ ನಮ್ಮ ನಿತ್ಯ ಜೀವನಲ್ಲಿ ಪ್ರಾಯೋಗಿಕ ಅಸಾಧ್ಯ ಹೇಳ್ವದಂತೂ ಸತ್ಯ. ಅಂದರೂ ಆಚಾರ್ಯವರೇಣ್ಯರ ಆದೇಶ ಪ್ರಕಾರ, ಪರಮಾತ್ಮನ ಆದೇಶ ಪ್ರಕಾರ, ನಮ್ಮಿಂದ ಎಡಿಗಪ್ಪಷ್ಟು ಪ್ರಯತ್ನ ಮಾಡೆಕ್ಕಪ್ಪದು ನಮ್ಮೆಲ್ಲರ ಧರ್ಮ. ಈ ಉದ್ದೇಶಂದ ವಾರಕ್ಕೆ ೧೦ ಶ್ಲೋಕಂಗಳ ಬೈಲಿಂಗೆ ತಪ್ಪ ಕಿರು ಪ್ರಯತ್ನ ಇದು.

ನಿತ್ಯ ಪಾರಾಯಣ ಮಾಡುವ ಸಂಕಲ್ಪ ಮಾಡಿಗೊಂಡು ನಿತ್ಯ ಪ್ರಯತ್ನ ಮಾಡಿರೆ ದಿನಕ್ಕೆರಡು ಶ್ಲೋಕಂಗಳ ಹಾಂಗೆ ನಿತ್ಯ ಕಲಿವಲೆ ಅಭ್ಯಾಸ ಮಾಡಿರೆ ವಾರ-ವಾರಕ್ಕೆ ೧೦ ಶ್ಲೋಕಂಗಳ, ಹಾಂಗೆ ಸುಲಲಿತವಾಗಿ ಕಂಠಸ್ಥ ಕಲ್ತುಗೊಂಬ ಸದವಕಾಶ ಕೂಡ ಆವ್ತು ಈ ಮೂಲಕ.
ಎಲ್ಲೋರಿಂಗೂ ಅನುಕೂಲವಾಗಲಿ. ಶ್ರೀ ಗುರುದೇವತಾನುಗ್ರಹ ಪ್ರಾಪ್ತಿಸಲಿ ಹೇದು ನಮ್ಮ ಸದಾಶಯ.
ಈ ಮೂಲಕ ನಮ್ಮ ಭವ್ಯ ಸಂಸ್ಕೃತಿಯ ಉನ್ನತ ಧ್ಯೇಯೋದ್ದೇಶಂಗಳ ಪ್ರಚಾರಪಡುಸಿ, ಹೇಮರ್ಸಿ, ಮುಂದಾಣ ಪೀಳಿಗೆಗೂ ಲಭ್ಯ ಆಯೇಕು ಹೇಳಿ ಮಠಾಧಿಪತಿಗೊ, ಗೀತಾ ಕೇಂದ್ರ, ಶಿಬಿರಂಗೊ ಕಂಕಣ ಬದ್ದರಾಗಿ ಮಾಡುವ ಕಾರ್ಯಕ್ಕೆ ಪೂರಕವಾಗಿ ಬೈಲಿಲಿ ನಮ್ಮ ಈ ಸೇವೆಯ ಉದ್ದೇಶ.

 

ಭಗವದ್ಗೀತಾ ಪಾರಾಯಣ ಕ್ರಮ :

ಮಿಂದು ಶುಚಿರ್ಭೂತರಾಗಿ ಪ್ರಶಾಂತಚಿತ್ತಂದ ಮೂರು ಸರ್ತಿ ‘ಓಮ್’ ಎಂಬ ಪ್ರಣವವ ಉಚ್ಚರಿಸಿ ಕೆಳ ಬರದಿಪ್ಪ ಗುರುಸ್ತೋತ್ರ, ಶಾಂತಿಮಂತ್ರ ಪಠಿಸಿ, ಗೀತಾ ಪ್ರಭಾವವ ವರ್ಣಿಸುವ ೭ ಶ್ಲೋಕಂಗಳ ಪಠಿಸೆಕ್ಕಡ.
ಅಲ್ಲಿಂದ ಗೀತಾನ್ಯಾಸ ವಿಧಿ ಪ್ರಾರಂಭ ಮಾಡುವದು. ಗೀತಾಶಾಸ್ತ್ರವು ಮಂತ್ರ ಸ್ವರೂಪವಾದ್ದು, ಅದರಿಲ್ಲಿಪ್ಪ ಶ್ಲೋಕಂಗಳೆಲ್ಲವೂ ಮಂತ್ರಂಗಳೇ. ಮಂತ್ರಮಯವಾದ ಈ ಗೀತಾಶಾಸ್ತ್ರವ ಪಾರಾಯಣ ಮಾಡುವಾಗ ಋಷಿ, ಛಂದಸ್ಸು, ದೇವತೆ, ಬೀಜ, ಶಕ್ತಿ, ಕೀಲಕಂಗಳ ಮದಾಲು ಸ್ಮರಿಣೆ ಮಾಡೆಕ್ಕಡ.
ತದನಂತರ ಆಯಾ ನಿರ್ಣೀತ ಶ್ಲೋಕ ಪಾದಂಗಳಿಂದ ಅಂಗನ್ಯಾಸ ಮಾಡೆಕ್ಕಡ.

ಇದು ಅರಡಿಯದ್ದವು ಪಾರಾಯಣದ ಪ್ರಾರಂಭಲ್ಲಿ ‘ಓಂ ಶ್ರೀಕೃಷ್ಣ ಪರಮಾತ್ಮನೇ ನಮಃ’ ಹೇದು ಹೇದಿಕ್ಕಿ ಸುರುಮಾಡ್ಳಕ್ಕಡ..
ಅಕೇರಿಗೆ ನಿಲ್ಲುಸುವಾಗ ‘ಓಂ ತತ್ಸತ್, ಶ್ರೀಕೃಷ್ಣಾರ್ಪಣಮಸ್ತು’ ಹೇಳೆಕ್ಕು.

ಸಾಧಕ° ತನ್ನ ಅಂಗೋಪಾಂಗಂಗಳಲ್ಲಿ ಇಪ್ಪ ವಿಶೇಷ ಶಕ್ತಿಯ ವಿನ್ಯಾಸ ಮಾಡಿಗೊಂಬದಕ್ಕೆ ‘ನ್ಯಾಸ’ ಹೇಳಿ ಹೇಳುವದಡ.
ಮಾಂಸಮಯ ಶರೀರವ ಮಂತ್ರಮಯ ಮಾಡುವದು ಹೇದು ಅದರ ಭಾವ. ನ್ಯಾಸವಿಧಿಯ ಮತ್ತೆ ಗೀತೆಯ ಋಷಿ ಆದ ವೇದವ್ಯಾಸ ಭಗವಂತನ ಧ್ಯಾನಿಸಿ, ಯಥಾಶಕ್ತಿ, ಯಥಾರೀತಿ ಗೀತಾಪಾರಾಯಣ ಮಾಡುವದಡ.
ಪಾರಾಯಣಾಂತ್ಯಲ್ಲಿ ಗೀತಾ ಮಹತ್ವವ ಪಠಿಸಿ ಗುರುಸ್ತೋತ್ರ, ಶಾಂತಿಮಂತ್ರ ಮಂಗಲಮಂತ್ರ ಪಠಣದೊಟ್ಟಿಂಗೆ ಪಾರಾಯಣಕಾರ್ಯವ ಗೀತಾಚಾರ್ಯ ಶ್ರೀಕೃಷ್ಣಪರಮಾತ್ಮಂಗೆ ಸಮರ್ಪುಸುವದು.

~*~*~

ಶ್ರೀ ಗುರುಸ್ತೋತ್ರಮ್ –

ಓಂ ಓಂ ಓಂ

ಓಂ ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥೧॥

ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿ ಸ್ವರೂಪನೂ ಸಾಕ್ಷಾತ್ ಪರಬ್ರಹ್ಮನೂ ಆದ ಶ್ರೀಗುರುವಿಂಗೆ ನಮಸ್ಕಾರ.

ಓಂ ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥೨॥

ಸರ್ವವ್ಯಾಪಕನೂ ಸರ್ವ ತತ್ವಬೋಧಕನೂ ಆದ ಶ್ರೀಗುರುವಿಂಗೆ ನಮಸ್ಕಾರ.

ಓಂ ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿಲಕ್ಷ್ಯಮ್ ।
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಮ್
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ॥೩॥

ಸಚ್ಚಿದಾನಂದ ಸ್ವರೂಪನೂ, ತತ್ತ್ವಮಸಿವಾಕ್ಯಾರ್ಥಭೂತನೂ, ಬುದ್ಧಿಸಾಕ್ಷಿಯೂ, ಗುಣಾತೀತನೂ ಆದ ಶ್ರೀಗುರುವಿಂಗೆ ನಮಸ್ಕಾರ.

ಓಂ ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ ॥೪॥

ಹೇ ಪರಮಾತ್ಮ, ಅಸತ್ಯಂದ ಸತ್ಯಕ್ಕೆ , ಅಂಧಕಾರಂದ ಪ್ರಕಾಶಕ್ಕೆ, ಮೃತ್ಯುವಿಂದ ಅಮೃತತ್ವಕ್ಕೆ ಎನ್ನ ಕರಕ್ಕೊಂಡು ಹೋಗು.

ಓಂ ಸಹ ನಾವವತು  ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ ।
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ॥೫॥

ನಮ್ಮಿಬ್ಬರನ್ನೂ ತೇಜೋವೀರ್ಯಸಹಾನುಭೂತಿಗಳಿಂದ ಅಭಿವೃದ್ಧಿಯಪ್ಪಂತೆ ಮಾಡು.

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ।
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥೬॥

ಅದೂ, ಇದೂ, ಸೃಷ್ಟಿಯೂ, ಅವಶಿಷ್ಟವೂ ಪೂರ್ಣ ಪರಬ್ರಹ್ಮವೇ.

ಅಥ ಶ್ರೀ ಗೀತಾಪಾರಾಯಣ-ಪ್ರಾರಂಭಃ  –

ಓಂ ಗೀತಾಶಾಸ್ತ್ರಮಿದಂ ಪುಣ್ಯಂ ಯಃ ಪಠೇತ್ಪ್ರಯತಃ ಪುಮಾನ್ ।
ವಿಷ್ಣೋಃ ಪದಮವಾಪ್ನೋತಿ ಭಯಶೋಕಾದಿವರ್ಜಿತಃ ॥೭॥

ಆರು ಗೀತೆಯ ಪಠಿಸುತ್ತವೋ, ಅನುಷ್ಠಾನಕ್ಕೆ ತತ್ತವೋ ಅವ್ವು ಬದುಕಿನ ಎಲ್ಲಾ ರೀತಿಯ ಭಯ ಶೋಕ ಕಷ್ಟಂಗಳಿಂದ ಪಾರಾಗಿ ಅಭಯವಾದ ವಿಷ್ಣುಪದವ ಪಡಕ್ಕೊಳ್ಳುತ್ತವು.

ಗೀತಾಧ್ಯಯನಶೀಲಸ್ಯ ಪ್ರಾಣಾಯಾಮ ಪರಸ್ಯ ಚ ।
ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮಕೃತಾನಿ ಚ ॥೮॥

ಗೀತಾಧ್ಯಯನ ಭಕ್ತರಿಂಗೆ ಜನ್ಮಜನ್ಮಾಂತರ ಪಾಪಂಗೊ ನಾಶವಾವ್ತು.

ಮಲನಿರ್ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ ।
ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್ ॥೯॥

ನಿತ್ಯ ಜಲಸ್ನಾನಂದ ಶರೀರದ ಮಲಿನ ತೊಳದು ಹೋವ್ತಾಂಗೆ, ನಿತ್ಯ ಗೀತಾಪಾರಾಯಣ ಸ್ನಾನಂದ ಸಂಸಾರ (ಐಹಿಕ) ಮಾಲಿನ್ಯ ನಾಶವಾವ್ತು.

ಗೀತಾ ಸು-ಗೀತಾ ಕರ್ತವ್ಯಾ ಕಿಮನ್ನೈಃ ಶಾಸ್ತ್ರವಿಸ್ತರೈಃ ।
ಯಾ ಸ್ವಯಂ ಪದ್ಮನಾಭಸ್ಯ ಮುಖಪದ್ಮಾದ್ವಿನಿಃಸೃತಾ ॥೧೦॥

ಸಾಕ್ಷಾತ್ ಭಗವಂತನ ಬಾಯಿಂದ ಬೋಧಿಸಲ್ಪಟ್ಟ ಈ ಗೀತೆಯ ಆಶ್ರಯಿಸಿದರೆ ಸಾಕು, ಮಿಕ್ಕ ಶಾಸ್ತ್ರ ಯಾವುದೂ ಇದಕ್ಕೆ ಮಿಗಿಲಾಗಿಲ್ಲೆ.

ಭಾರತಾಮೃತಸರ್ವಸ್ವಂ ವಿಷ್ಣೋರ್ವಕ್ತ್ರಾದ್ವಿನಿಃಸೃತಮ್ ।
ಗೀತಾಗಂಗೋದಕಂ ಪೀತ್ವಾ ಪುನರ್ಜನ್ಮಂ ನ ವಿದ್ಯತೇ ॥೧೧॥

ಭಗವಂತನ ಬಾಯಿಂದ ಹೇಳಲ್ಪಟ್ಟ ಭಾರತಾಮೃತಸಾರ ಸರ್ವಸ್ವ ಈ ಗೀತಾಗಂಗೆಯ ಪಾನಮಾಡಿದವಕ್ಕೆ ಪುನರ್ಜನ್ಮದ ಭಯ ಇಲ್ಲೆ.

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ ।
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ॥೧೨॥

ಭಗವದ್ಗೀತೆ ಎಲ್ಲಾ ಉಪನಿಷತ್ತುಗಳ ಸಾರ. ಉಪನಿಷತ್ತುಗೊ ಹೇಳ್ವ ಗೋವುಗಳಿಂದ, ಅರ್ಜುನನ ಕಂಜಿಯ ಹಾಂಗೆ ಮಾಡಿ, ಗೋಪಾಲ-ನಂದನ° (ಶ್ರೀಕೃಷ್ಣ°) ಹಿಂಡಿದ ಈ ಗೀತಾಮೃತವ ಪಂಡಿತಕ್ಕೊ (ಭಕ್ತರು) ಸೇವಿಸುತ್ತವು.

ಏಕಂ ಶಾಸ್ತ್ರಂ ದೇವಕೀಪುತ್ರಗೀತಮ್, ಏಕೋ ದೇವೋ ದೇವಕೀಪುತ್ರ ಏವ ।
ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ॥೧೩॥

ಇಂದ್ರಾಣ ಜಗತ್ತಿಲ್ಲಿ ಪ್ರತಿಯೊಬ್ಬನೂ ಒಂದು ಧರ್ಮಶಾಸ್ತ್ರ, ಒಬ್ಬ° ದೇವರು, ಒಂದು ಕಾರ್ಯ ಬೇಕು ಹೇದು ಹಂಬಲುಸುತ್ತವು. ಹಾಂಗಾಗಿ ಇಡೀ ಜಗತ್ತಿಂಗೆ ಒಂದೇ ಒಂದು ಧರ್ಮಗ್ರಂಥ (ಶಾಸ್ತ್ರ) – ಗೀತಾಶಾಸ್ತ್ರವೇ ಶಾಸ್ತ್ರ, ಶ್ರೀಕೃಷ್ಣನೇ ದೇವರು, ಭಗವನ್ನಾಮವೇ ಮಂತ್ರ, ಅವನ ಸೇವೆಯೇ ಸತ್ಕರ್ಮ. ಎಲ್ಲವೂ ಒಂದೇ ಒಂದು – ಆ ಪರಮ ಪುರುಷನ ಸೇವೆ.

ಅಥ ಶ್ರೀಮದ್ಭಗವದ್ಗೀತಾನ್ಯಾಸಾದಿಃ  –

ಓಂ ಅಸ್ಯಶ್ರೀಮದ್ಭಗವದ್ಗೀತಾಶಾಸ್ತ್ರಮಹಾಮಂತ್ರಸ್ಯ
ಭಗವಾನ್ ವೇದವ್ಯಾಸ ಋಷಿಃ,
ಅನುಷ್ಟುಪ್ ಛಂದಃ,
ಶ್ರೀಕೃಷ್ಣ ಪರಮಾತ್ಮಾ ದೇವತಾ ॥

ಭಗವದ್ಗೀತಾಕ್ಕೆ ವೇದವ್ಯಾಸನೇ ಋಷಿ. (ಈ ಶಾಸ್ತ್ರವ ಲೋಕಲ್ಲಿ ಪ್ರಥಮ ಪ್ರಚಾರ ಮಾಡಿದವ° ಅವ°. ಹಾಂಗಾಗಿ ಇದಕ್ಕೆ ಅವನೇ ಋಷಿ ಎನಿಸಿಗೊಂಡನಡ), ಈ ಗ್ರಂಥಲ್ಲಿಪ್ಪ ಏಳ್ನೂರು ಶ್ಲೋಕಂಗಳಲ್ಲಿ ಆರ್ನೂರ ನಲ್ವೈತ್ತೈದು ಶ್ಲೋಕಂಗೊ ಅನುಷ್ಟುಪ್ ಛಂದಲ್ಲಿ ರಚಿಸಿದ್ದರಿಂದ ಇದಕ್ಕೆ ಛಂದಸ್ಸು- ಅನುಷ್ಟುಪ್, ಭಗವದ್ಗೀತೆಲಿ ಎಲ್ಲರೀತಿಂದಲೂ ಶ್ರೀಕೃಷ್ಣನೇ ಇಷ್ಟದೈವ, ಹಾಂಗಾಗಿ ಶ್ರೀಕೃಷ್ಣನೇ ಈ ಶಾಸ್ತ್ರಕ್ಕೆ ದೇವತೆ.

ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ । ಇತಿ ಬೀಜಂ ॥

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ । ಇತಿ ಶಕ್ತಿಃ ॥

ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥ ಇತಿ ಕೀಲಕಂ ॥

ಅಥ ಕರನ್ಯಾಸಃ  –

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ । ಇತಿ ಅಂಗುಷ್ಠಾಭ್ಯಾಂ ನಮಃ ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ । ಇತಿ ತರ್ಜನೀಭ್ಯಾಂ ನಮಃ ॥
ಅಚ್ಛೇದ್ಯೋsಯಮದಾಹ್ಯೋsಯಮಕ್ಲೇದ್ಯೋsಶೋಷ್ಯ ಏವ ಚ । ಇತಿ ಮಧ್ಯಮಾಭ್ಯಾಂ ನಮಃ ।
ನಿತ್ಯಃ ಸರ್ವಗತಃ ಸ್ಥಾಣುರಚಲೋsಯಂ ಸನಾತನಃ । ಇತಿ ಅನಾಮಿಕಾಭ್ಯಾಂ ನಮಃ ।।
ಪಶ್ಯ ಮೇ ಪಾರ್ಥರೂಪಾಣಿ ಶತಶೋsಥ ಸಹಸ್ರಶಃ । ಇತಿ ಕನಿಷ್ಠಿಕಾಭ್ಯಾಂ ನಮಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ । ಇತಿ ಕರತಲಕರಪೃಷ್ಠಾಭ್ಯಾಂ ನಮಃ ॥ ಇತಿ ಕರನ್ಯಾಸಃ ॥

ಅಥ ಹೃದಯಾದಿನ್ಯಾಸಃ  –

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ । ಇತಿ ಹೃದಯಾಯ ನಮಃ ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ । ಇತಿ ಶಿರಸೇ ಸ್ವಾಹಾ ॥
ಅಚ್ಛೇದ್ಯೋsಯಮದಾಹ್ಯೋsಯಮಕ್ಲೇದ್ಯೋsಶೋಷ್ಯ ಏವ ಚ । ಇತಿ ಶಿಖಾಯೈ ವಷಟ್ ।
ನಿತ್ಯಃ ಸರ್ವಗತಃ ಸ್ಥಾಣುರಚಲೋsಯಂ ಸನಾತನಃ । ಇತಿ ಕವಚಾಯ ಹುಂ ।।
ಪಶ್ಯ ಮೇ ಪಾರ್ಥರೂಪಾಣಿ ಶತಶೋsಥ ಸಹಸ್ರಶಃ । ಇತಿ ನೇತ್ರತ್ರಯಾಯ ವೌಷಟ್ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ । ಇತಿ ಅಸ್ತ್ರಾಯ ಫಟ್ ॥ ಇತಿ ಹೃದಯಾದಿನ್ಯಾಸಃ ॥

ಶ್ರೀಕೃಷ್ಣಪ್ರೀತ್ಯರ್ಥೇ ಶ್ರೀಮದ್ಭಗವದ್ಗೀತಾ ಪಾಠೇ ವಿನಿಯೋಗಃ ॥

ಈ ಶಾಸ್ತ್ರಕ್ಕೆ ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯದ ಹನ್ನೊಂದನೇ ಶ್ಲೋಕದ ‘ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ’ ಹೇಳ್ವದು ಬೀಜ. ವಿಸ್ತಾರವಾದ ಗೀತೋಪದೇಶವು ಈ ಶ್ಲೋಕಂದ ಆರಂಭ ಆದ್ದರಿಂದ ಇದಕ್ಕೆ ‘ಬೀಜ’ ಹೇದು ಹೆಸರು. ೧೮ ನೇ ಅಧ್ಯಾಯದ ಶ್ಲೋಕ ೬೬, ‘ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’ ಹೇಳ್ವದು ಶಕ್ತಿಮಂತ್ರ. ಈ ಶಕ್ತಿ ಸಂಚಾರಂದಲೇ ಈ ಗ್ರಂಥವು ಸಜೀವವಾಗಿಪ್ಪದಡ. ಅದೇ ಶ್ಲೋಕಲ್ಲಿಪ್ಪ ‘ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ’ ಹೇಳ್ವದು ಕೀಲಕ. ಗಾಡಿಯ ಚಕ್ರದ ಕೀಲಿನ ಹಾಂಗೆ ಈ ಮಂತ್ರವು ಈ ಶಾಸ್ತ್ರಕ್ಕೆ ಕೀಲಕದ ಹಾಂಗೆ ಇಪ್ಪದಡ.
ಈ ರೀತಿ ಶಾಸ್ತ್ರದ ಋಷಿ, ಛಂದಸ್ಸು, ದೇವತೆ, ಬೀಜ, ಶಕ್ತಿ, ಕೀಲಕಂಗಳ ಸ್ಮರಿಸಿ ಮತ್ತೆ ಪೂರ್ವಿಕರು ವಿಧಿಸಿದ ಆಯಾ ಶ್ಲೋಕಂಗಳಿಂದ  (ಮೇಗೆ ಬರದ್ದು) ಕರನ್ಯಾಸ, ಅಂಗನ್ಯಾಸ (ಹೃದಯಾದಿ ನ್ಯಾಸ) ಆಚರಿಸಿ ಏಕಾಗ್ರಚಿತ್ತಂದ ಧ್ಯಾನ ಮಾಡೆಕ್ಕಡ.

ಅಥ ಧ್ಯಾನಂ – (ಧ್ವನಿಯೊಟ್ಟಿಂಗೆ ಕೇಳ್ಳಕ್ಕು)

ಓಂ ಪಾರ್ಥಾಯ ಪ್ರತಿಭೋಧಿತಾಂ ಭಗವತಾ ನಾರಾಯಣೇನ ಸ್ವಯಮ್ ।
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ ॥
ಅದ್ವೈತಾಮೃತವರ್ಷಿಣೀಂ ಭಗವತೀಮ್ ಅಷ್ಟಾದಶಾಧ್ಯಾಯಿನೀಮ್ ।
ಅಂಬತ್ವಾಮನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ ॥೦೧॥

ಸ್ವಯಂ ಭಗವಂತನಾದ ಶ್ರೀಕೃಷ್ಣಂದ ಅರ್ಜುನಂಗೆ ಉಪದೇಶಿಸಲ್ಪಟ್ಟದಾಗಿಯೂ, ಸನಾತನಋಷಿಯಾದ ವೇದವ್ಯಾಸನಿಂದ ಮಹಾಭಾರತದ ಮಧ್ಯಲ್ಲಿ ಸೇರಿಸಲ್ಪಟ್ಟದಾಗಿಯೂ, ಹದಿನೆಂಟು ಅಧ್ಯಾಯಂಗಳಿಂದ ಕೂಡಿದುದಾಗಿಯೂ, ಅದ್ವೈತಾಮೃತ ಹೇಳ್ವ ಮಳೆಯ ಸುರುಸುವದಾಗಿಯೂ, ಭವಕರ್ಮಕಷ್ಟದುಃಖಂಗಳ ನಿವಾರಣೆ ಮಾಡುವದಾಗಿಯೂ ಇಪ್ಪ ಹೇ ಮಾತೆ!, ಭಗವದ್ಗೀತೆ!, ನಿನ್ನ ಧ್ಯಾನಿಸುತ್ತೆ.

ನಮೋsಸ್ತು ತೇ ವ್ಯಾಸ ವಿಶಾಲಬುದ್ಧೇ ಫುಲ್ಲಾರವಿಂದಾಯತಪತ್ರನೇತ್ರ ।
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ ॥೦೨॥

ಅರಳಿದ ಕಮಲದ ಪತ್ರದ ಹಾಂಗೆ ನೇತ್ರ ಇಪ್ಪ, ವಿಶಾಲಬುದ್ಧಿಯ, ಭಾರತತೈಲಮಧ್ಯಲ್ಲಿ, ಗೀತಾಜ್ಞಾನದೀಪವ ಬೆಳಗಿದ ಹೇ ವ್ಯಾಸದೇವ!, ನಿನಗೆ ನಮಸ್ಕಾರ.

ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೇ ।
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ ॥೦೩॥

ಆಶ್ರಿತರಿಂಗೆ ಕಲ್ಪವೃಕ್ಷಕ್ಕೆ ಸಮನಾಗಿಪ್ಪವ°, ಎಡ ಕೈಲಿ ಚಾಟಿಂದ ಕೂಡಿದ ಬೆತ್ತ, ಬಲ ಕೈಲಿ ಜ್ಞಾನಮುದ್ರೆಯ ಧರಿಸಿಪ್ಪ, ಗೀತಾಮೃತವ ಹಿಂಡುವವ° ಆದ ಶ್ರೀಕೃಷ್ಣಂಗೆ ನಮಸ್ಕಾರ.

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ ।
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ॥೦೪॥

ಭಗವದ್ಗೀತೆ ಎಲ್ಲಾ ಉಪನಿಷತ್ತುಗಳ ಸಾರ. ಉಪನಿಷತ್ತುಗೊ ಹೇಳ್ವ ಗೋವುಗಳಿಂದ, ಅರ್ಜುನನ ಕಂಜಿಯ ಹಾಂಗೆ ಮಾಡಿ, ಗೋಪಾಲ-ನಂದನ (ಶ್ರೀಕೃಷ್ಣ) ಹಿಂಡಿದ ಈ ಗೀತಾಮೃತವ ಪಂಡಿತಕ್ಕೊ (ಭಕ್ತರು) ಸೇವಿಸುತ್ತವು.

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ॥೦೫॥

ವಸುದೇವನ ಮಗನೂ, ಕಂಸಚಾಣೂರರ ಮರ್ದಿಸಿದವನೂ, ದೇವಕಿಯ ಆನಂದವರ್ಧಕನೂ, ಜಗದಾಚಾರ್ಯನೂ ಆದ ಶ್ರೀಕೃಷ್ಣದೇವಂಗೆ ನಮಸ್ಕಾರ.

ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ ।
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ ॥
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ ।
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ ॥೦೬॥

ಭೀಷ್ಮ°, ದ್ರೋಣ° ಹೇಳ್ವವು ದಡದ ಹಾಂಗೆಯೂ ಜಯದ್ರಥ° ನೀರಿನ ಹಾಂಗೆಯೂ, ಕೌರವರು ಕಲ್ಲುಬಂಡೆ ಹಾಂಗೆಯೂ, ಶಲ್ಯ° ದೊಡ್ಡ ಮೀನಿನ ಹಾಂಗೆಯೂ, ಕೃಪ° ಧುಮುಕುವ ಸೆಳೆವಿನ ಹಾಂಗೆಯೂ, ಕರ್ಣ° ಗಡಿ ಮೀರುವಂತೆಯೂ, ಅಶ್ವತ್ಥಾಮ°, ವಿಕರ್ಣ° ಭಯಂಕರ ಮೊಸಳೆಗಳ ಹಾಂಗೆಯೂ, ದುರ್ಯೋಧನ° ಸುಳಿಯ ಹಾಂಗೆಯೂ ಇದ್ದ ಯುದ್ಧ ಹೇಳ್ವ ನದಿಯ ಪಾಂಡವರು ದಾಂಟಿದವು. ದಾಂಟಿಸಿದವ° ಶ್ರೀಕೃಷ್ಣ.

ಪಾರಾಶರ್ಯವಚಸ್ಸರೋಜಮಮಲಂ ಗೀತಾರ್ಥಗಂಧೋತ್ಕಟಮ್ ।
ನಾನಾಖ್ಯಾನಕಕೇಸರಂ ಹರಿಕಥಾ ಸಂಬೋಧನಾಬೋಧಿತಮ್ ॥
ಲೋಕೇ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ ।
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ ॥೦೭॥

ವ್ಯಾಸನ ಮಾತುಗೊ ಹೇಳ್ವ ಸರೋವರಲ್ಲಿ ಹುಟ್ಟಿದ್ದಾಗಿಯೂ, ನಿರ್ಮಲವಾಗಿಯೂ, ಗೀತೆ ಹೇದು ಹೇಳ್ವ  ಶ್ರೇಷ್ಠವಾದ ಗಂಧವುಳ್ಳದ್ದಾಗಿಯೂ, ಅನೇಕ ಉಪಕಥೆಗೊ ಹೇದು ಹೇಳ್ವ ಎಸಳುಗಳಿಪ್ಪದ್ದಾಗಿಯೂ, ಜಗತ್ತಿಲ್ಲಿ ಸಜ್ಜನರೆಂಬ ಭ್ರಮರಂಗೊ ಸಂತೋಷಂದ ಯೇವತ್ತೂ ಕುಡಿವವದಾಗಿಯೂ, ಕಲಿಯುಗದ ಪಾಪಕಲ್ಮಷವ ತೊಳವದಾಗಿಯೂ ಇಪ್ಪ ಭಾರತ ಹೇಳ್ವ ಕಮಲ ನವಗೆ ಶ್ರೇಯಸ್ಸ ಉಂಟುಮಾಡಲಿ.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ ।
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್ ॥೦೮॥

ಆರ ಕೃಪೆಯು ಮೂಕನ ವಾಚಾಳಿಯನ್ನಾಗಿ, ಕುಂಟನ ಪರ್ವತ ಹಾರುವವನ್ನಾಗಿ ಮಾಡುತ್ತೋ ಆ ಪರಮಾನಂದಸ್ವರೂಪನಾದ ಶ್ರೀಕೃಷ್ಣನ ನಮಸ್ಕರಿಸುತ್ತೆ.

ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವ್ಯೈಃ ।
ವೇದೈಸ್ಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾಃ ॥
ಧ್ಯಾನಾವಸ್ಥಿತತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ ।
ಯಸ್ಯಾಂತಂ ನ ವಿದುಸ್ಸುರಾಸುರಗಣಾ ದೇವಾಯ ತಸ್ಮೈ ನಮಃ ॥೯॥

ಆರ ಬ್ರಹ್ಮಾದಿ ದೇವತೆಗೊ ದಿವ್ಯಸ್ತೋತ್ರಂಗಳಿಂದ ಕೊಂಡಾಡುತ್ತವೋ, ವೈದಿಕಋಷಿಗೊ ವೇದಮಂತ್ರಂಗಳಿಂದ ಆರ ಕೀರ್ತನೆ ಮಾಡುತ್ತವೋ,  ಯೋಗಿಗೊ ಆರ ಧ್ಯಾನನಿಶ್ಚಲಚಿತ್ತಂದ ಕಾಣುತ್ತವೋ, ಆರ ಅಂತ್ಯವ ಸುರಾಸುರರು ತಿಳುದ್ದವಿಲ್ಲೆಯೋ (ಸುರಾಸುರರಿಂದ ತಿಳ್ಕೊಂಬಲೆ ಎಡಿಗಾಯ್ದಿಲ್ಲೆಯೋ), ಅಂತಹ ಆ ಪರಮಾತ್ಮಂಗೆ ನಮಸ್ಕಾರ.

|| ಶ್ರೀ ಕೃಷ್ಣಾರ್ಪಣಮಸ್ತು ||

~*~*~

ಭಗವದ್ಗೀತಾ ಶ್ರವಣಕ್ಕೆ:
ಪೀಠಿಕೆ:

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtsey: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

ಬಪ್ಪ ವಾರಂದ – ಶ್ರೀಮದ್ಭಗವದ್ಗೀತೆಯ ಪ್ರಥಮ ಅಧ್ಯಾಯಂದ ವಾರಕ್ಕೆ ೧೦ ಶ್ಲೋಕಂಗ ಧ್ವನಿ ಸಹಿತ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಚೆನ್ನೈ ಭಾವ ನಮೋ ನಮಃ — ಇದೊಂದು ಅತ್ಯಂತ ಶುಭಕರವಾದ ಪುಣ್ಯ ಕಾರ್ಯ | ಹವ್ಯಕ ಭಾಷೇಲಿ ಇದರ ಅರ್ಥ ಇಪ್ಪದು ಹವ್ಯಕರಿಂಗೆ ಒಂದು ಉತ್ತಮ ಅವಕಾಶ || ಎಲ್ಲರೂ ಇದರ ಪ್ರಸಾದ ರೂಪಲ್ಲಿ ಪಡೆದುಕೊಳ್ಳಲಿ ಹೇಳಿ ಎನ್ನ ಸದಾಶಯ || ಭಗವದ್ಗೀತೆ ಯ ಎಂತಗೆ ಒದೆಕ್ಕು ಹೇಳಿ ಕೇಳುವವರೂ ಈ ಕಾಲಲ್ಲಿ ತುಂಬಾ ಜನ ಇದ್ದವು — ಅವಕ್ಕಾಗಿ ಈ ಕಾಲಕ್ಕೆ ಸರಿಹೊಂದುವ ಒಂದು ವಾಕ್ಯ || “ಧರ್ಮ ಕ್ಷೇತ್ರೇ ಕುರು ಕ್ಷೇತ್ರೇ ” ಇದೆ ಗೀತೆ ಯ ಮೊದಲ ವಾಕ್ಯ || — ವ್ಯಾವ ಹಾರಿಕ ಚಿಂತನೆ — ಪ್ರತಿಯೊಬ್ಬ ಮಾನವನಿಗೂ ಪರಮಾತ್ಮ ಅವರವರ “ಮಾತೃ ದೇವತೆ” ಯ ಪವಿತ್ರ ಗರ್ಭ ದ ಮೂಲಕ ಒಂದು “ಧರ್ಮ ಕ್ಷೇತ್ರ” ವ ಕರುಣಿಸಿದ್ದ (ಕ್ಷೇತ್ರ = ಶರೀರ ಭ.ಗೀ ಅಧ್ಯಾಯ 13 )|| ಹೆಚ್ಚಿನವರು ಅದರ (ಆ ಕ್ಷೇತ್ರ ವ ) ತಮ್ಮ ಸ್ವಯಂಕೃತ ಮತಿಹೀನತೆ ಯ ವ್ಯಾವಹಾರಿಕ ಕರ್ಮ ಗಳ ಮೂಲಕ “ಕುರುಕ್ಷೇತ್ರ” ವಾಗಿ ತಿಳಿದೋ ತಿಳಿಯದೆಯೋ ಮಾಡಿಗೊಂಡಿದವು || ಹೀಗೆ ಕುರುಕ್ಷೇತ್ರ ವಾದ ನಮ್ಮ ಕ್ಷೇತ್ರ (ಶರೀರ ವ ) ಪುನಃ “ಧರ್ಮ ಕ್ಷೇತ್ರ ವಾಗಿ” ಪರಿವರ್ತನೆ ಮಾಡುಲೆ “ಭಗವದ್ ಗೀತೆ” ಒಂದೇ ದಾರಿ || ಹೇಳಿದರೆ ಉದಿಯಪ್ಪಗ ಎದ್ದು ರಾತ್ರೆ ಮಲಗುವ ವರೆಗೂ ಎಲ್ಲರೂ ಮಾಡುದು “ಮಹಾಭಾರತ” ಯುದ್ಧವನ್ನೇ || ಈ ಯದ್ಧವ ಸರಿಯಾಗಿ “ಧರ್ಮ ಪ್ರದವಾಗಿ” (ಬೇಕಾದಲ್ಲಿ ಅಶ್ವತ್ತಾಮ ಹತಃ ಕುಜರಾ- ಉಪಯೂಗಿಸಿಯಾದರೂ) ನಿರ್ವಹಿಸುದು ಹೆಂಗೆ ? ಎಂಬ ಪ್ರಶ್ನೆ ಗೆ ಇಲ್ಲಿ ಸರಿಯಾದ ಉತ್ತರ ಸಿಕ್ಕುತ್ತು||

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಈ ಒಪ್ಪ ತುಂಬಾ ಇಷ್ಟ ಆತು… ಈ ಒಪ್ಪವ ನೆನಪು ಮಡಿಕ್ಕೊಂಡು ಗೀತಾ ಪಾರಾಯಣವ ಮುಂದುವರಿಸುವ… ಚೆನ್ನೈ ಭಾವಂಗೂ, E I Bhat ರಿಂಗೂ ನಮೋ ನಮ:

  [Reply]

  VA:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  E I ಮಾವಂಗೆ ನಮಸ್ಕಾರ ಸಹಿತ ಧನ್ಯವಾದ. ನಿಂಗಳ ಒಪ್ಪ ಇನ್ನೂ ಜವಾಬ್ದಾರಿಯ ಹೆಚ್ಚಿಸಿತ್ತು. ಎನ್ನಂದ ಎಡಿಗಪ್ಪಷ್ಟು ಮಟ್ಟಿಂಗೆ ಸೂಕ್ಷ್ಮರೂಪಲ್ಲಿ (ಉದ್ದ ಆದಷ್ಟು ಉದಾಸನಾವೂ ಜಾಸ್ತಿ ಇಂದ್ರಾಣ ಕಾಲಲ್ಲಿ) ಭಗವದ್ಗೀತೆಯ ಬೈಲಿಂಗೆ ಪರಿಚಯಿಸುವ ಕಿರುಪ್ರಯತ್ನ ಮಾಡ್ತ ಇಪ್ಪದು. ಏನಾರು ಹೆಚ್ಚಿಕಮ್ಮಿ ಆದಲ್ಲಿ ನಿಂಗೆಲ್ಲರೂ ವಿಶಾಲ ಹೃದಯಂದ ತಿದ್ದಿಕೊಡುವಿ ಹೇಳ್ವ ಭರವಸೆ ಎನಗೆ.

  ಮಾವನ ಒಪ್ಪಲ್ಲಿ ಧರ್ಮಕ್ಷೇತ್ರೇ ಹೇಳುವುದಕ್ಕೇ ಎಷ್ಟೊಂದು ಆಳ ಮತ್ತು ವಿಶಾಲ ಇದ್ದು ಹೇಳುವುದರ ನಿಜವಾಗಿ ಗಂಭೀರವಾಗಿ ಚಿಂತಿಸೆಕ್ಕಾದ್ದೇ. ಗೀತೆಲಿ ಬಪ್ಪ ಪ್ರತಿಯೊಂದು ಶಬ್ದಕ್ಕೂ, ಶ್ಲೋಕಕ್ಕೂ ಮಹತ್ವ, ತೂಕ ಇದ್ದು. ಪುಟಗಟ್ಟಲೆ ವಿವರಿಸಿಗೊಂಬಲಕ್ಕು. ನಿತ್ಯಜೀವನದ ತತ್ವ ಸಾರ ಅದರಲ್ಲಿ ಇದ್ದು. ತಿಳ್ಕೊಂಬ ಆಕಾಂಕ್ಷೆವುಳ್ಳವಂಗೆ ನಮ್ಮ ನಾವೇ ಗೀತೆಲಿ ಅಳವಡಿಸಿಗೊಂಡರೆ (ನಾವೇ ಅರ್ಜುನ ಹೇಳಿ ಭಾವಿಸಿಗೊಂಡು) ‘ನಾವೆಂತರ’ ಹೇಳಿ ಅರ್ಥೈಸಿಗೊಂಬಲೆ ಸಾಧ್ಯ ಇದ್ದು ಹೇಳುವದರ ನಿಂಗಳ ಒಪ್ಪಲ್ಲಿ ಕಂಡುಕೊಂಡತ್ತು. ಮಾವನ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಏವತ್ತೂ ಬೇಕು ಹೇಳಿ ಈ ಮೂಲಕ ಕೇಳಿಗೊಳ್ಳುತ್ತು.

  [Reply]

  VA:F [1.9.22_1171]
  Rating: +4 (from 4 votes)
 2. ಆದಷ್ಟು ವ್ಯಾವಹಾರಿಕ ಅರ್ಥವ ಕೊಡುವ ಪ್ರಯತ್ನ ಮುಂದುವರಿಸಿ ಆ ರೂಪಲ್ಲಿ ಗೀತಾ ಮಾತೆ ಯ ಸೇವೆಗೆ ಇದೊಂದು ಅವಕಾಶ ಹೇಳಿ ತಿಳಿದುಕೊಳ್ಳುತ್ತೆ | ಇಲ್ಲಿ ನಡೆಯುವ ಸರ್ವ ಪ್ರಯತ್ನವೂ ಕೆಳಗಿನ ವಾಕ್ಯಗಳ ಮೂಲಕ “ಗುರುಸಮರ್ಪಣೆ” ಮಾಡುತ್ತಾ ಇದ್ದೆ ||
  ಸರ್ವಮಿದಂ ಕೃತಂ ಅತ್ರ ಗುರು ಸಮರ್ಪಣಂ |
  ಯಸ್ಯಾನುಗ್ರಹಾದೇವ ವರಮಿದಂ ಜೀವನಂ ||
  ಅರ್ಥ : ಯಾವ ಗುರುವಿನ ಅನುಗ್ರಹಂದಾಗಿ ಈ ಜೀವನವೇ ವರಪ್ರದವಾಗಿ ಪರಿಣಮಿಸಿದ್ದೋ — ಆ ಗುರುವಿಂಗೆ ಇದೆಲ್ಲವೂ “ಅರ್ಪಿತವಾಗಲಿ” ||

  [Reply]

  VA:F [1.9.22_1171]
  Rating: +2 (from 2 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ಒಪ್ಪ೦ಗೊ

  [Reply]

  VA:F [1.9.22_1171]
  Rating: 0 (from 0 votes)
 4. ಭಗವದ್ಗೀತೆ ಹೇಳಿದರೆ ಎಂತರ ? ಅದರ ಓದಿದರೆ ಎಂತ ಲಾಭ ? — ಇದು ಎಷ್ಟೋ “ಆಧುನಿಕ” ರು ಕೇಳುವ ಪ್ರಶ್ನೆ. ಉತ್ತರ ಇಲ್ಲಿದ್ದು — ನಾವೆಲ್ಲರೂ ಈಗಾಣ ಕಾಲಲ್ಲಿ ಅಂಗಡಿಗೆ ಹೋಗಿ ” washing mechine , fan , mixi , etc ” ತೆಕ್ಕೊಂಬಗ ಅದರೊ ಟ್ಟಿನ್ಗೆ ಒಂದು ಸಣ್ಣ ಪುಸ್ತಕವ ಕೊಡುತ್ತವು (operation manual ).| ಅದು ಸಾಮಾನ್ಯ ಮನುಷ್ಯನಿಗೂ ಅರ್ಥ ಅಪ್ಪ ಹಾಂಗಿದ್ದು | ಅದರ ರಜ ಅರ್ಥ ಮಾಡಿಗೊಂಡು ಓದಿಗೊಂಡು ಈ ವಸ್ತುಗಳ ಉಪಯೋಗಿಸಿದರೆ — ಅದರ ಜೀವನಾವಧಿ ಯ ಕೊನೆಯ ತನಕವೂ ಅದು ಯಾವ ತೊಂದರೆ ಇಲ್ಲದ್ದೆ ನವಗೆ ಸಹಕರಿಸುತ್ತು | ಇಲ್ಲದ್ದರೆ Mechanic /Electrician ಹತ್ತರೆ ಕೊಟ್ಟು ಅದರ ಹಾಳು ಮಾಡಿ ನಮ್ಮ ತಲೆ ಯೂ ಹಾಳು ಮಾಡಿಗೊಂಡು ದಿನ ದೂಡೆಕ್ಕಾವುತ್ತು | ಹಾಂಗೇ ಪರಾಮಾತ್ಮ ನವಗೆ ಈ ದೇಹ ವೆಂಬ ಯಂತ್ರ (ಕ್ಷೇತ್ರ) ವ ಕೊಡುವಾಗ ಒಂದು ” operation manual ” ಕೊಟ್ಟಿದ | ಅದುವೇ ಈ “ಉತ್ಕೃಷ್ಟವಾದ ಸರ್ವ ಶಾಸ್ತ್ರ ಸಾರ ವೆಂಬ” ಶ್ರೀಮದ್ಭಗವದ್ ಗೀತೆ | ” ಭ್ರಾಮಯನ್ ಸರ್ವ ಭೂತಾನಿ ಯಂತ್ರಾರೂಡ್ಹಾನಿ ಮಾಯಯಾ || ಭ. ಗೀ 18 -61 ||
  ಶ್ರೀ ಆಚಾರ್ಯ ಶಂಕರ ಭಗವತ್ಪಾದರು ಅವರ ಭಾಷ್ಯ ದ ಮೊದಲು ಈ ಗೀತೆ ಯ ವಿಷಯಲ್ಲಿ ಬರದ ಶ್ಲೋಕ — “ಸಮಸ್ತ ವೆದಾರ್ಥ ಸಾರ ಸಂಗ್ರಹ ಭೂತಂ – ತದರ್ಥ ವಿಜ್ಞಾನೇ ಸಮಸ್ತ ಪುರುಷಾರ್ಥ ಸಿದ್ಧಿ: | – ಸಮಸ್ತ ಪುರುಷಾರ್ಥ = ಧರ್ಮ, ಅರ್ಥ, ಕಾಮ, ಮೋಕ್ಷ | ಇದಲ್ಲಿ ಮೊದಲ ಮೂರು ಎಲ್ಲಾ ಸಾಮಾನ್ಯ “ಸದ್ಗೃಹಸ್ತ” ರಿಂಗು ಬೆಕಪ್ಪದು | ಶ್ರೀಮದ್ಭಗವದ್ಗೀತೆ ಲಿ “ಧರ್ಮ ದ ಚೌಕಟ್ಟಿನ ಒಳ — “ಅರ್ಥ ಕಾಮಗಳ” ಹೇಂಗೆ ಪಡವಲಕ್ಕು ಹೇಳಿ, ಸಾಮಾನ್ಯ ಮನುಷ್ಯನೇ ಸುಲಭಲ್ಲಿ ತನ್ನ ನಡವಳಿಕೆ ತಿದ್ದಿಗೊಂದು ನಡವ ರೀತಿ ಯ ಅತ್ಯಂತ ರಮಣೀಯ ವಾಗಿ ಹೇಳಪತ್ತಿದು || ಧರ್ಮಾ (ಅ)ವಿರುದ್ದ್ಹೋ ಭೂತೇಷು ಕಾಮೋ ಅಸ್ಮಿ ಭಾರತರ್ಷಭಾ ||ಭ.ಗೀ. 7 -11 || ಅರ್ಥ — ಸಮಸ್ತ ಜೀವಿಗಳಲ್ಲೂ ಧರ್ಮ ಕ್ಕೆ ಅವಿರದ್ಧ ( ಧರ್ಮಕ್ಕೆ ವಿರುದ್ಧ ವಲ್ಲದ) ವಾದ ಕಾಮವು ನಾನೇ ಆಗಿರುವೇನು |

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಈಶ್ವರ ಮಾವ ದೊಡ್ಡ ಮನಸ್ಸು ಮಾಡಿ ಬೈಲಿಂಗೆ ಶುದ್ದಿ ಬರವಲೆ ಮುಂದಾಯೆಕು ಹೇಳಿ ವಿಜ್ಞಾಪನೆ. ನಿಂಗಳಿಂದ ಹಲುವು ವಿಷಯಂಗಳ ತಿಳ್ಕೊಂಬ ಕುತೂಹಲ ಹಂಬಲ ಬೈಲಿಂಗೆ ಇದ್ದು.

  [Reply]

  VN:F [1.9.22_1171]
  Rating: +2 (from 2 votes)
 5. ಮೊದಲನೆಯದಾಗಿ ಈ ಗೀತೆಯ ಹವ್ಯಕಲ್ಲಿ ಬರದು ಸಹಕರಿಸುವ ಶ್ರೀ ಚೆನೈ ಭಾವಂಗೆ — ಪರಮಾತ್ಮ ನೇ — ಸ್ವಯಂ ಹೇಳಿದ ಮಾತು — | “ಭಾವಿತಾ ನಚ ಮೇ ತಸ್ಮಾದನ್ಯಃ ಪ್ರಿಯ ತರೋ ಭುವಿ” || ಭ.ಗೀ 18-69 || ಇದು ಸತ್ಯವಾಗಲೀ ಹೇಳಿ ಎನ್ನ ಮನಃ ಪೂರ್ವಕ ಆಶಯ || ಆ ಪರಮಾತ್ಮ ನ “ಸಂಕಲ್ಪ ” ಎಲ್ಲಿ ಎಳೆತ್ತೋ ಅಲ್ಲಿಗೆ ಖಂಡಿತಾ ಹೊಯೇಕ್ಕಾವುತ್ತು|| ಇದೂ ಅವುಗಳಲ್ಲಿ ಒಂದು ಎಂಬ ಭಾವನೆ || ಇಲ್ಲಿ ಶ್ರೀ ಚೆನೈ ಭಾವ ಬರವ ಶ್ಲೋಕಂಗಳಲ್ಲಿ ಕೆಲವಕ್ಕೆ — ವ್ಯಾವಹಾರಿಕತೆ ಗೆ ಹೊಂದುವ ಅರ್ಥವ ಕೊಡುವ ಪ್ರಯತ್ನ ವ ಮಾಡುತ್ತೆ | ಈ ಪ್ರತ್ನಲ್ಲಿ ಎಲ್ಲವನ್ನೂ “ಶಾಂಕರ ಭಾಷ್ಯ” ದ ಚೌಕ ಟ್ಟಿಲೇ ನಿಲ್ಲಿಸುವ ಶಕ್ತಿ ಯ ಆ “ಗೀತಾ ಮಾತೆ” ಕರುಣಿಸಲಿ | ಒಟ್ಟಿಗೆ ಆಚಾರ್ಯ ತ್ರಯರು (ಶಂಕರ, ಮಾಧ್ವ, ರಾಮಾನುಜರು) ಹೇಳಿದ್ದರ ಕೆಲವು ಸಂಧರ್ಭ ಗಳಲ್ಲಿ ಬರವ ಪ್ರಯತ್ನ ನಡೆತ್ತು |
  ಹಾಗೆಯೇ ಈ ಒಪ್ಪಣ್ಣ ನ ಹವ್ಯಕ ಬೈಲಿಲಿ ಈ ಗೀತೆ ಗೆ ಇಷ್ಟು ಕಡಮೆ ಜನ ಏಕೆ ?– ಹೇಳಿ ಆರುದೆ ಆತುರ ಪಡುವ ಅವಶ್ಯಕತೆ ಇಲ್ಲೇ || ಅದಕ್ಕೆ ಗೀತೆಲಿಯೇ (ಮುಂದೆ ಎಲ್ಲ ಕಡೆ ಗೀತೆ ಹೇಳಿ ಬರದಲ್ಲಿ “ಶ್ರೀಮದ್ಭಗವದ್ಗೀತೆ” ಹೇಳಿ ತಿಳುಕ್ಕೊಳ್ಳಿ) ಇಪ್ಪ ಒಂದು ಶ್ಲೋಕ ನೋಡಿ |
  ಮನುಷ್ಯಾಣಾಂ ಸಹಸ್ರೆಷು ಕಶ್ಚಿದ್ಯತತಿ ಸಿದ್ಧಯೇ | ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೆತ್ತಿ ತತ್ವತಃ || ಭ.ಗೀ. 7 -3 || ಅರ್ಥ — ಸಾವಿರಾರು ಮನುಷ್ಯ ರಲ್ಲಿ ಯಾರೋ ಒಬ್ಬನು ಸಿದ್ಧಿ ಗಾಗಿ ಪ್ರಯತ್ನಿಸುತ್ತಾನೆ — ಅಂತಹಾ ಯೋಗಿಗಳಲ್ಲೂ ಯಾವನೋ ಒಬ್ಬನು
  ಮಾತ್ರ ನನ್ನನ್ನು ಯತಾರ್ಥ ರೂಪ ದಿಂದ ತಿಳಿದುಕೊಳ್ಳುತ್ತಾನೆ — ಇದು ಗೀತಾಚಾರ್ಯ ಶ್ರೀ ಕೃಷ್ಣ ನ ಮಾತು || ( ಅದು ದ್ವಾಪರಾ ಯುಗದಲ್ಲಾಯಿತು ಈಗ ಇದು ಲಕ್ಷ ಕ್ಕೆ ಒಬ್ಬನೂ ಏನೋ ?)|

  [Reply]

  VA:F [1.9.22_1171]
  Rating: +2 (from 2 votes)
 6. ಹಾಗಯೇ ಯಾರಿಗಾದರೂ ಪ್ರಶ್ನೆ ಗಳಿದ್ದರೆ ಗೀತೆ ಯ ವಿಷಯ ಲ್ಲಿ – ಉತ್ತರಿಸುವ ಪ್ರಯತ್ನ ಮಾಡುತ್ತೆ |

  [Reply]

  ಚೆನ್ನೈ ಬಾವ°

  ಚನ್ನೈ ಭಾವ Reply:

  ಎದುರ್ಕಳ ಮಾವಂಗೆ ಬೈಲಿನ ಪರವಾಗಿ ಆತ್ಮೀಯ ಸ್ವಾಗತ ಹೇಳಿ ಈ ಮೂಲಕ ಬರಮಾಡಿಕ್ಕೊಳ್ಳುತ್ತು. ನಿಂಗಳ ಪ್ರೋತ್ಸಾಹ ಬೈಲಿಂಗೆ ಶೋಭೆ. ಬನ್ನಿ , ಒಟ್ಟಿಂಗೆ ಹೋಪೊ ಹೇಳಿ ಗುರಿಕ್ಕಾರ್ರ ಪರವಾಗಿಯೂ ಈ ಮೂಲಕ ಸ್ವಾಗತ ಮತ್ತು ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)
 7. ಜಯಶ್ರೀ ನೀರಮೂಲೆ
  jayashree.neeramoole

  ಚೆನ್ನೈ ಭಾವ ಮತ್ತು ಈಶ್ವರ ಮಾವನ ಮೂಲಕ ಗೀತೆಯ ಸಾರಾಮೃತವ ಹೀರುಲೆ ಸಿದ್ದ ಇಪ್ಪ ಬೈಲು ಧನ್ಯ…ಧನ್ಯ…ಧನ್ಯ…

  [Reply]

  VA:F [1.9.22_1171]
  Rating: +1 (from 1 vote)
 8. ಮುಳಿಯ ಭಾವ
  ರಘು ಮುಳಿಯ

  ಆಹಾ.. ಎದುರ್ಕಳ ಈಶ್ವರ ಮಾವನ ಮಾರ್ಗದರ್ಶನ ಬೈಲಿನ ಬ೦ಧುಗೊಕ್ಕೆ ಸಿಕ್ಕೊದು ನಮ್ಮ ಯೋಗವೇ ಸರಿ. ಸಾಕಷ್ಟು ವಿವರ೦ಗಳ ಅರ್ತುಗೊ೦ಬಲೆ ಒ೦ದು ಅವಕಾಶ ಆತು.

  [Reply]

  VA:F [1.9.22_1171]
  Rating: 0 (from 0 votes)
 9. ಗಣೇಶ ಪೆರ್ವ
  ಗಣೇಶ ಪೆರ್ವ

  ಚೆನ್ನೈ ಭಾವಾ.. ಎರಡನೇ ಸರ್ತಿ ಓದಲೆ ಸುರು ಮಾಡಿದೆ.
  ಧ್ಯಾನ ಶ್ಲೋಕ೦ಗಳಲ್ಲಿ ಆರನೇ ಶ್ಲೋಕಲ್ಲಿ “ಭೀಷ್ಮದ್ರೋಣತಟಾ ಜಯದ್ರಥಜಲಾ ಗಾ೦ಧಾರನೀಲೋತ್ಪಲಾ” ಹೇಳ್ತ ಸುರುವಿನ ಸಾಲು ಬಿಟ್ಟುಹೋದ್ದದೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಅಲ್ಲಪ್ಪಾ.., ಅದು ನೀಲಿ ಬ್ರೆಶ್ಶು ಅಲ್ಲಿಗೆ ತಾಗದ್ದೆ ಹೋದ್ದು. ಈಗ ಸಮ ಆತೋ ನೋಡಿಕ್ಕಿ. ಹಾಂಗೇ ಏನಾರು ಅಕ್ಷರ ತಪ್ಪುಗೊ ಬಂದುಹೋದ್ದಿದ್ದರೆ, ಕಂಡ್ರೆ ತಿಳಿಶಿಕ್ಕಿ ಮಿನಿಯಾ. ಧನ್ಯವಾದಂಗೊ ಪೆರ್ವದಣ್ಣೋ.

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಅಯ್ಯೋ.. ಎನ “ದೋಷೈಕದೃಕ್” ನ ಹಾ೦ಗೆ ಸರಿಯಾಗಿ ನೋಡದ್ದೆ ಹೇಳಿಹೋತೋ ಚೆನ್ನೈ ಭಾವಾ.. :(

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಬಂಡಾಡಿ ಅಜ್ಜಿವಿಜಯತ್ತೆಒಪ್ಪಕ್ಕಸಂಪಾದಕ°ಪುಟ್ಟಬಾವ°ಬಟ್ಟಮಾವ°ಅಕ್ಷರ°ಕಾವಿನಮೂಲೆ ಮಾಣಿಡಾಮಹೇಶಣ್ಣವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿಸುಭಗಶಾಂತತ್ತೆಚುಬ್ಬಣ್ಣರಾಜಣ್ಣದೊಡ್ಡಮಾವ°ಡೈಮಂಡು ಭಾವದೀಪಿಕಾಪಟಿಕಲ್ಲಪ್ಪಚ್ಚಿಡಾಗುಟ್ರಕ್ಕ°ಪುತ್ತೂರಿನ ಪುಟ್ಟಕ್ಕಪುತ್ತೂರುಬಾವವೇಣಿಯಕ್ಕ°ಸುವರ್ಣಿನೀ ಕೊಣಲೆಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ