ನಾವು ಎಂತಕೆ ಭಸ್ಮವ ಲೇಪಿಸುತ್ತು?

August 18, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯಾವುದೇ ಸುಟ್ಟವಸ್ತುವಿನ ಬೂದಿಯ ಪುಣ್ಯಕರ ‘ಭಸ್ಮ’ ಹೇಳಿ ಪರಿಗಣಿಸುತ್ತಿಲ್ಲೆ.
ದೇವ ಯಜ್ಞ ಅಥವಾ ಹೋಮವ ಆಚರಿಸಿದ ಸಂದರ್ಭಲ್ಲಿ ಆಯಾಯ ದೇವತೆಯ ಆವಾಹಿಸಿ ತುಪ್ಪ ಸಮಿತ್ತು ದ್ರವ್ಯ ಇತ್ಯಾದಿ ಆಹುತಿಗಳ ಅಗ್ನಿಗೆ ಸಮರ್ಪಿಸಿದ ನಂತರ ಅದು ಉರುದು ಹುತಶೇಷ ಬೂದಿಯ ‘ಭಸ್ಮ’ ಹೇಳಿ ನಾವು ತೆಕ್ಕೊಳ್ಳುತ್ತು.
ಅಥವಾ ದೇವರ ಮೂರ್ತಿಯ ವಿಭೂತಿಯಿಂದ ಲೇಪಿಸಿ ಅಲಂಕರಿಸಿ ಪೂಜಿಸಿದ ಬಳಿಕ ಅದನ್ನೇ ಪ್ರಸಾದ ರೂಪಲ್ಲಿ ಭಸ್ಮ ಹೇಳಿ ಸ್ವೀಕರುಸುತ್ತು.

ಸಾಮಾನ್ಯವಾಗಿ ಭಸ್ಮವ ಹಣಗೆ ಲೇಪಿಸಿಗೊಂಬದು ವಾಡಿಕೆ. ಆದರೆ ಕೆಲವರು ತಮ್ಮ ಶರೀರದ ತೋಳು ಎದೆ ಇತ್ಯಾದಿ ಅವಯವಗಳಿಂಗೂ ಲೇಪಿಸಿಕೊಳ್ಳುತ್ತವು. ಇನ್ನು ಕೆಲವರು ಭಸ್ಮವ ಲೇಪಿಸಿ ಚಿಟಿಕೆಯಷ್ಟು ಬಾಯಿಲಿ ಸೇವಿಸುವ ಅಭ್ಯಾಸವೂ ಇದ್ದು.

‘ಭಸ್ಮ’ = ಭರ್ಜನಂ (ಸುಡುವುದು) + ಸ್ಮರಣಂ (ನೆನಪಿಸಿಗೊಂಬದು) ,
ಹೇಳಿರೆ, – ಯಾವುದರಿಂದ ನಮ್ಮ ಪಾಪ ನಾಶ ಮತ್ತು ಪರಮಾತ್ಮನ ಸ್ಮರಣೆ ಅವುತ್ತೋ ಅದು ಭಸ್ಮ ಎಂಬುದು ಸಾಂಕೇತಿಕ ಅರಿವು.
ಭಸ್ಮವ ವಿಭೂತಿ (ಕೀರ್ತಿ ಹೇಳಿ ಅರ್ಥ) ಹೇಳಿ ಹೇಳುತ್ತು. ಭಸ್ಮವ ಲೇಪಿಸಿಕೊಂಡವ ಕೀರ್ತಿವಂತ ಆವುತ್ತಾ ಹೇಳಿ ತಾತ್ಪರ್ಯ. ಭಸ್ಮವ ‘ರಕ್ಷೆ’ (ಅನಿಷ್ಟ, ರೋಗಗಳಿಂದ ಕಾಪಾಡುತ್ತು) ಹೇಳಿಯೂ ನಂಬಿಕೆ.

ಯಜ್ಞದ ಆಚರಣೆಲಿ ಮಂತ್ರೋಚ್ಚಾರಣೆ ಮೂಲಕ ಯಜ್ಞ ದೇವನಾದ ಅಗ್ನಿಗೆ ದ್ರವ್ಯ ಆಹುತಿಯಾಗಿ ಅರ್ಪಿಸುತ್ತು.
ಸಾಂಕೇತಿಕವಾಗಿ – ಅಹಂಕಾರ ಮತ್ತು ಸ್ವಾರ್ಥಪರ ಕಾಮನೆಗಳ, ಜ್ಞಾನ ಎಂಬ ಅಗ್ನಿಲಿ ಅರ್ಪಿಸುವದು. ಇಂತಹ ಯಜ್ಞದ ನಂತರ ಉಳಿದ ಬೂದಿಯು ಅಜ್ಞಾನ ಅಹಂಕಾರ ಜಡತ್ವ ತೊಲಗಿಸಿ ಚಿತ್ತಶುದ್ಧಿಯನ್ನುಂಟುಮಾಡುತ್ತು ಹೇಳಿ ನಂಬಿಕೆ.
ನಾವು ಧರಿಸುವ ಭಸ್ಮ ಈ ಹುಸಿ ಶರೀರವ ಜನನ ಮರಣ ಸಂಕೊಲೆಂದ ಬಿಡಿಸೆಕು ಹೇಳಿ ಅಂತರಾರ್ಥ. ಮನುಷ್ಯ ಶರೀರ ನಶ್ವರ, ಒಂದು ದಿನ ಸುಟ್ಟು ಬೂದಿಯಪ್ಪಲಿಪ್ಪದು ಎಂಬ ವಿಚಾರ ಭಸ್ಮ ಲೇಪನ ನೆನಪಿಸುತ್ತು.

ಭಸ್ಮವು ವಿಶೇಷವಾಗಿ ಶಿವ ಸಂಪ್ರದಾಯಲ್ಲಿ ಬಳಕೆ. ಶಿವನ ಆರಾಧಕರು ವಿಭೂತಿಯ ತ್ರಿಪುಂಡ್ರ (ಮೂರು ಅಡ್ಡ ಗೆರೆ) ಆಕಾರಲ್ಲಿ ಲೇಪಿಸುವದು. ಮಧ್ಯಲ್ಲಿ ಕೆಂಪು ಚುಕ್ಕಿ (ಬೊಟ್ಟು) ಕೂಡ ಮಡಿಕ್ಕೊಂಬ ಕ್ರಮ. ಇದು ಶಿವ ಶಕ್ತಿಯ ಸಂಗಮದ ಸೂಚಕ.
ಭಸ್ಮ ಲೇಪನಂದ ಶರೀರದ ಹೆಚ್ಚಿನ ತೇವ ಹೀರಿಕೊಳ್ಳುತ್ತು, ತಲೆಬೇನೆ ಹಾಗೂ ಶೀತ ಭಾಧೆ ಕಡಮ್ಮೆ ಮಾಡುತ್ತು ಹೇಳಿ ಔಷಧೀಯ ಮೌಲ್ಯ ಇದ್ದು ಹೇಳಿ ಹೇಳುತ್ತವು. ಭಸ್ಮ ಲೆಪಿಸುವಾಗ ಮೃತ್ಯುಂಜಯ ಮಂತ್ರ ಉಚ್ಚರಿಸುತ್ತಾ ಲೇಪಿಸಿಕೊಳ್ಳೆಕು ಹೇಳಿ ಶಾಸ್ತ್ರಜ್ಞರು ಹೇಳುತ್ತವಡ –

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಮ್ |
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್ ||

‘ಆರು ನಮ್ಮ ಪಾಲನೆ ಪೋಷಣೆಯ ನಿರ್ವಹಿಸಿ ಜೀವನಲ್ಲಿ ಸುಗಂಧವಾದ ಪರಿಮಳವ – ಭೌದ್ಧಿಕ ಶಕ್ತಿಯ ವರ್ಧಿಸುತ್ತನೋ, ಅಂತಹ ತ್ರಿನೇತ್ರನಾದ ಶಿವನ ಆರಾಧಿಸುತ್ತೆ.
ಹೇಂಗೆ ಒಂದು ಪರಿಪಕ್ವವಾದ ಸೌತೇಕಾಯಿಯು ತಾನೇ ತಾನಾಗಿ ತನ್ನ ಬಳ್ಳಿಯಿಂದ ಕಳಚಿಕೊಳ್ಳುತ್ತೋ, ಹಾಂಗೇ,  ಪರಮಾತ್ಮ ನಮ್ಮ ಮೃತ್ಯುವಿನಿಂದ (ದುಃಖ ವಿಕಾರ ) ಸಂಕೊಲೆಂದ ಬಿಡುಗಡೆಗೊಳಿಸಿ, ಅನಾಯಾಸವಾಗಿ ಅಮೃತದ ಕಡೆಂಗೆ ಕೊಂಡುಹೋಪಂತೆ ಆಗಲಿ’.

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ಭಸ್ಮವ ಲೇಪಿಸುತ್ತು?, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಭಸ್ಮ – ಅರ್ಥ ವಿಶ್ಲೇಷಣೆ ಲಾಯಿಕ್ಕಾಯಿದು. ಭಸ್ಮದ ಮಹತ್ವವನ್ನೂ ತಿಳಿಸಿದ್ದಕ್ಕೆ ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)
 2. Shama Prasad
  ಶಾಮ ಪ್ರಸಾದ್

  ಒಳ್ಲೆದಿದ್ದು. ಮಾಹಿತಿಗೆ ಧನ್ಯವಾದಂಗೊ ಭಾವಯ್ಯ.

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಒಪ್ಪ೦ಗೊ ಚೆನ್ನೈ ಭಾವಾ..

  [Reply]

  VA:F [1.9.22_1171]
  Rating: 0 (from 0 votes)
 4. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಒಳ್ಲೆಯ ಮಾಹಿತಿ ಕೊಟ್ಟದ್ದಕ್ಕೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 5. ಚುಬ್ಬಣ್ಣ
  ಚುಬ್ಬಣ್ಣ

  ಒಳ್ಳೆ ಮಾಹಿತಿ ಕೊಟ್ಟಿ ಭಾವ. ಲಾಯಕ ಬರದ್ದಿ.. ಮತ್ತೆ, ವಿಭೂತಿ ( ಭಸ್ಮ) ಮಾಡ್ತದು ಹೇ೦ಗೇ ಹೇಳಿ ಅರಡಿಗೋ ಆರಿ೦ಗಾರು??
  ಆನು ತಿಳುದಾ೦ಗೆ – ಗೋಮಯ೦ದ ಮಾಡುದು ಹೇಳಿ ಕೇಳಿದ್ದೆ ಸರೀ ಗೊ೦ತಿಲ್ಲೆ ಮತ್ತೆ..

  ಮತ್ತೆ ಕೆಳ ಬರದ ಮ೦ತ್ರವ ನಾವು ದಿನಾಲು ಸ೦ಧ್ಯಾವ೦ದನೆ ಮಾಡುವಾಗ ಭಸ್ಮ ಹಾಕುತ್ತ ಸಮಯಲ್ಲಿ ಹೇಳೆಕಿದ, ತಪ್ಪಿರೆ ಬಟ್ಟ ಮಾವ° ಸರಿ ತಿದ್ದಿಕ್ಕಿ:

  ಬಲಗೈಲಿ ಭಸ್ಮವ ತೊಕ್ಕೊ೦ಡು, ಎಡಗೈಲಿ ಮುಚ್ಚಿಕ್ಕಿ ಈ ಮ೦ತ್ರ೦ಗಳ ಹೇಳಿಕ್ಕಿ ಭಸ್ಮ ಹಾಕೆಕು –

  ———————————————————————————–

  ಓಂ ಈಶಾನಾಯ ನಮ:|ಓಂ ತತ್ಪುರುಷಾಯ ನಮ: | ಓ೦ ಅಘೋರಾಯ ನಮ: | ಓಂ ವಾಮದೇವಾಯ ನಮ: |ಓಂ ಸದ್ಯೋಜಾತಾಯ ನಮ:||

  ಸದ್ಯೋಜಾತ ಮ೦ತ್ರ:

  ಓಂ ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ |
  ಭವೇ ಭವೇ ನಾತಿ ಭವೇ ಭವಸ್ವಮಾ೦ | ಭವೋದ್ಭವಾಯ ನಮ:||

  ———
  ವಾಮದೇವ ಮ೦ತ್ರ –

  ಓಂ ವಾಮದೇವಾಯ ನಮೋ ಜ್ಯೇಷ್ಠಾಯ ನಮಃ ಶ್ರೇಷ್ಠಾಯ
  ನಮೋ ರುದ್ರಾಯ ನಮಃ ಕಾಲಾಯ ನಮಃ
  ಕಲವಿಕರಣಾಯ ನಮೋ ಬಲವಿಕರಣಾಯ
  ನಮೋ ಬಲಾಯ ನಮೋ, ಬಲಪ್ರಮಥನಾಯ ನಮಃ
  ಸರ್ವಭೂತದಮನಾಯ ನಮೋ ಮನೋನ್ಮನಾಯ ನಮಃ

  ———
  ಅಘೋರಮ೦ತ್ರ:

  ಓ೦ ಅಘೋರೇಭ್ಯೋSಥಘೋರೇಭ್ಯೋ ಘೋರ ಘೋರತರೇಭ್ಯ:||
  ಸರ್ವೇಭ್ಯ: ಸರ್ವಶರ್ವೇಭ್ಯೋ ನಮಸ್ತೇ ಅಸ್ತು ರುದ್ರರೂಪೇಭ್ಯ: ||

  ———
  ತತ್ಪುರುಷಮ೦ತ್ರ:

  ಓ೦ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ.
  ತನ್ನೋ ರುದ್ರಃ ಪ್ರಚೋದಯತ್ ||

  ———
  ಈಶಾನ ಮ೦ತ್ರ:

  ಓ೦ ಈಶಾನ: ಸರ್ವವಿದ್ಯಾನಾಮೀಶ್ವರ:
  ಸರ್ವಭೂತಾನಾ೦ ಬ್ರಹ್ಮಾಧಿ ಪತಿರ್ಬಹ್ಮಣೋಧಿಪತಿರ್ಬ್ರಹ್ಮಾ
  ಶಿವೋ ಮೇ ಅಸ್ತು ಸದಾಶಿವೋ೦||

  ———
  ರುದ್ರದೇವರ ಪ್ರಾರ್ಥನೆ:

  ಮಾ ನ ಸ್ತೋಕೇ ತನಯೇ ಮಾ ನ ಆಯುಷಿ ಮಾನೋ
  ಗೋಷು ಮಾ ನೋ ಅಶ್ವೇಷು ರೀರಿಷಃ|
  ವೀರಾನ್ಮಾನೋ ರುದ್ರ ಭಾಮಿತೋs ವಧೀರ್ಹವಿಷ್ಮ೦ತೋ ನಮಸಾ ವಿಧೇಮ ತೇ||

  ———————————————————————————–

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಗೋವು ಬೆರಟಿ ತಯಾರಿಸಿ ಹೊತ್ತಿಸಿ ಪಾತ್ರಲ್ಲಿ ವಸ್ತ್ರಲ್ಲಿ ತೊಳದು ಆರಿಸಿ (ಸೋಸಿ ಕಶ್ಮಲ ತೆಗದು) ಉಂಡೆ ಮಾಡಿ ಬೆಶಿಲಿಂಗೆ ಒಣಗಿಸಿ ಮಡುಗುತ್ತದು ನಮ್ಮ ಹಿರಿಯರು ಮಾಡಿಯೊಂಡಿತ್ತವು ಹೇಳಿ ಕಂಡ ನೆಂಪು. ಪೇಟೇಲಿ ಪ್ಯಾಕೇಟು ಪರಿಮ್ಮಳ ಭಸ್ಮ ಹೇಂಗೆ ಮಾಡುತ್ತವೋ ಎಂತ ಸೇರ್ಸುತ್ತವೋ ನವಗರಡಿಯ.

  ಇದರ ಒಂದರಿ ನೋಡಿಕ್ಕಿ-
  http://msawaal.ibibo.com/viewanswers.aspx?quesid=6bee8a5c-d495-4c84-80a3-cf3a041bb295&sb=k&catcityid=41&tab=l&type=l&pageno=1&csurl=puja-and-rituals&shorturl=how-follow-traditional-ancient-way-making-vibhuti-496285&isvisible=1

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಹೋ..! ಒಳ್ಳೆ ಲಿ೦ಕ್, ಭಾವ.. ಈಗ ಭಸ್ಮದ ಉ೦ಡೆ ಮಾಡ್ತದು ಕಮ್ಮಿ ಆಯಿದು.. ನಮ್ಮ ಅಜ್ಜಿಯಕ್ಕೊ ಇಪ್ಪಗ ಮಾಡಿಮಡುಗ್ಗು.. ಮತ್ತೆ ಅ೦ಗಡಿಲ್ಲಿ ಹೇ೦ಗು ಸಿಕ್ಕಾ.. ನಿ೦ಗೊ ಹೇಳಿದಾ೦ಗೆ ಆ ಪರಿಮ್ಮಳ ಭಸ್ಮದ “ಹೊಡಿ” ಏ ಸಿಕ್ಕುತದ್ದು… ಪೊ..!

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°

  ಭಸ್ಮ ಲೇಪನದ ಪ್ರಾಮುಖ್ಯತೆಯ ವಿವರುಸಿದ ಚೆನ್ನೈಬಾವಂಗೆ ಧನ್ಯವಾದ. ಏವತ್ರಾಣ ಹಾಂಗೆ ಪೂರ ಮಾಹಿತಿ ಕೊಟ್ಟತ್ತು. ಚುಬ್ಬಣ್ಣ, ಮಂತ್ರವನ್ನುದೆ ಹೇಳಿ ಅಪ್ಪಗ ಲೇಖನ ಸಂಪೂರ್ಣ ಆತದ.

  [Reply]

  VN:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಭಸ್ಮಲೇಪನದ ಹಿನ್ನೆಲೆಯ ಚೆಂದಕೆ ತಿಳುಶಿದ್ದಿ.

  [Reply]

  VN:F [1.9.22_1171]
  Rating: 0 (from 0 votes)
 8. ಶ್ರೀಅಕ್ಕ°

  ಚೆನ್ನೈ ಭಾವ°,

  [ಸಾಂಕೇತಿಕವಾಗಿ – ಅಹಂಕಾರ ಮತ್ತು ಸ್ವಾರ್ಥಪರ ಕಾಮನೆಗಳ, ಜ್ಞಾನ ಎಂಬ ಅಗ್ನಿಲಿ ಅರ್ಪಿಸುವದು. ಇಂತಹ ಯಜ್ಞದ ನಂತರ ಉಳಿದ ಬೂದಿಯು ಅಜ್ಞಾನ ಅಹಂಕಾರ ಜಡತ್ವ ತೊಲಗಿಸಿ ಚಿತ್ತಶುದ್ಧಿಯನ್ನುಂಟುಮಾಡುತ್ತು ಹೇಳಿ ನಂಬಿಕೆ.]
  ತುಂಬಾ ಲಾಯ್ಕ ವಿವರಣೆ. ಯಾವುದನ್ನಾದರೂ ನಾವು ದೇವರಿಂಗೆ ಅರ್ಪಿಸುವಾಗ ಸರ್ವವನ್ನೂ ಅರ್ಪಿಸಿಗೊಂಬ ಭಾವನೆ ಬೇಕಲ್ಲದಾ?

  ನಮ್ಮ ಜೀವನವೂ ಒಂದು ಯಜ್ಞವೇ!! ಇದರಲ್ಲಿಯೂ ನಮ್ಮ ಅಹಂಕಾರ, ಸ್ವಾರ್ಥವ ಎಲ್ಲಾ ಆಹುತಿ ಮಾಡಿ ಜ್ಞಾನಲ್ಲಿ ಬೆಳಗೆಕ್ಕಲ್ಲದಾ? ತುಂಬಾ ಲಾಯ್ಕಲ್ಲಿ ಭಸ್ಮ ಲೇಪನದ ಬಗ್ಗೆ ವಿವರಣೆ ಕೊಟ್ಟದಕ್ಕೆ ಧನ್ಯವಾದಂಗೋ.

  [Reply]

  VN:F [1.9.22_1171]
  Rating: 0 (from 0 votes)
 9. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರಿಂಗೂ ಧನ್ಯವಾದ. ಪ್ರೋತ್ಸಾಹಕ್ಕೆ ಪೂರಕ ಮಾಹಿತಿಗಳ ಒದಗಿಸಿ ಒಪ್ಪ ಮಾಡಿದಿ ಹೇಳಿ ಮೆಚ್ಚುಗೆಯ ಒಪ್ಪ ಈ ಕಡೆಂದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿಶಾಂತತ್ತೆಎರುಂಬು ಅಪ್ಪಚ್ಚಿಜಯಶ್ರೀ ನೀರಮೂಲೆವೇಣೂರಣ್ಣಬಂಡಾಡಿ ಅಜ್ಜಿಶೇಡಿಗುಮ್ಮೆ ಪುಳ್ಳಿಗೋಪಾಲಣ್ಣಪುಟ್ಟಬಾವ°ಅಕ್ಷರದಣ್ಣದೊಡ್ಡಭಾವಡೈಮಂಡು ಭಾವಬೋಸ ಬಾವಶಾ...ರೀನೀರ್ಕಜೆ ಮಹೇಶvreddhiಪುಣಚ ಡಾಕ್ಟ್ರುಡಾಗುಟ್ರಕ್ಕ°ಚೆನ್ನಬೆಟ್ಟಣ್ಣಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಚೆನ್ನೈ ಬಾವ°ಚುಬ್ಬಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ