Oppanna.com

ಒಂದು ಚಾಟು ಶ್ಲೋಕ

ಬರದೋರು :   ಪುಣಚ ಡಾಕ್ಟ್ರು    on   01/11/2016    5 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಸುಧಾಧಿಕ್ಯಂ ಸ್ಪೃಹೇಚ್ಛತ್ರುಃ ಫಲಾಧಿಕ್ಯಂ ಸ್ಪೃಹೇದ್ಭಿಷಕ್
ಪತ್ರಾಧಿಕ್ಯಂ ಸ್ಪೃಹೇಜ್ಜಾಯಾ ಮಾತಾ ತು ತ್ರಿತಯಂ ಸ್ಪೃಹೇತ್

ಅನ್ವಯ:
ಶತ್ರುಃ ಸುಧಾಧಿಕ್ಯಂ ಸ್ಪೃಹೇತ್ ಭಿಷಕ್ ಫಲಾಧಿಕ್ಯಂ ಸ್ಪೃಹೇತ್
ಜಾಯಾ ಪತ್ರಾಧಿಕ್ಯಂ ಸ್ಪೃಹೇತ್ ಮಾತಾ ತು ತ್ರಿತಯಂ ಸ್ಪೃಹೇತ್

ಅರ್ಥ:
ತಾಂಬೂಲ ತಿಂಬವನ ನೋಡಿ ಅವನ ಶತ್ರು ಹೇಳ್ತ°ಡ – ‘ರಜ ಸುಣ್ಣ ಹೆಚ್ಚು ಬೀಳಲಿ’
ಸುಣ್ಣ ಹೆಚ್ಚಾಗಿ ಇವನ ಬಾಯಿ ಹೊತ್ತಿದರೆ ಅವಂಗೆ ಖುಷಿ!!!

~
ಅದೇ ವೈದ್ಯ ಒಬ್ಬ° ನೋಡಿ ಹೇಳಿದ° – ‘ಹೋಳು ಹೆಚ್ಚು ಬೀಳಲಿ
ಹೋಳು ಸೊಕ್ಕಿ ಪಿತ್ತಂದ ತಲೆ ತಿರುಗಿದರೆ ಆವಗ ವೈದ್ಯಂಗೇ ಲಾಭ!!!

~
ಪ್ರಿಯ ಪತ್ನಿ ಬಯಸುತ್ತಡ -‘ವೀಳ್ಯದೆಲೆ ಸಮಾ ಮುಟ್ಟಲಿ.’
ಇವನ ತುಟಿ ಕೆಂಪುಕೆಂಪಾಗಿ ಚೆಂದ ಆದರೆ ಅದಕ್ಕೆ ಖುಷಿಯೋ ಖುಷಿ!!!

~
ಆದರೆ ಮಾತೃಹೃದಯ!!! ಅದು ವಿಶಿಷ್ಟ!!! ಅದು ಬಯಸುತ್ತು!!! -‘ಸುಣ್ಣ ಹೋಳು ಎಲೆ ಮೂರೂ ಅಗತ್ಯಕ್ಕೆ ತಕ್ಕ ಮುಟ್ಟಲಿ! ‘
ಮಗ° ಖುಷಿಯಾಗಿ ತಿನ್ನಲಿ!! ಆರೋಗ್ಯ ಹೆಚ್ಚಲಿ!!!

 

5 thoughts on “ಒಂದು ಚಾಟು ಶ್ಲೋಕ

  1. ಒಟ್ಟಿಂಗೆ ಇಪ್ಪ ಹಲವು ಮನುಷ್ಯರ ಭಾವನಗಳ ಒಂದು ವಿಷಯಲ್ಲಿ ಚೆಂದಕ್ಕೆ ಬಿಡ್ಸಿ ಮಡುಗುತ್ತ ಶ್ಲೋಕ ಪಷ್ಟಾಯಿದು.

  2. ಚಾಟು ಶ್ಲೋಕ ಒಳ್ಳೆತ ಚಾಂಟುತ್ತಪ್ಪೋ!

  3. ತುಂಬಾ ಚೆಂದದ ಶ್ಲೋಕ…ಅರ್ಥವಂತೂ ಮನಸ್ಸಿಂಗೆ ತಟ್ಟುವ ಹಾಂಗಿದ್ದು….ಅವರವರ ಭಾವಕ್ಕೆ….ಭಕುತಿಗೆ ತಕ್ಕಂತೆ….

  4. ಇದು ಮಾತೃ ಹೃದಯ!! ಈಗಾಣ ಎಷ್ಟೋ ಮಕ್ಕ ಅರ್ಥ ಮಾಡ್ತವಲ್ಲೆ (ಮಕ್ಕಳ ಹಂಡತ್ತೀಯೂ !!!). ವೃದ್ಧ ಹೆತ್ತೋರ ಮನೆಂದ ಹೆರ ಹಾಕುತ್ತವು, ನಾಳೆ ಎನ್ನ ಮಕ್ಕಳೂ ಹಾಂಗೆಯೇ ಮಾಡುಗು ಹೇಳುವ ಯೋಚನೆ ಮಾಡ್ತವಲ್ಲೆ, ಇದೇ ಬೇಜಾರು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×