ನಾವು ಎಂತಕೆ ದೇವರ ಕೋಣೆ ಕಟ್ಟುತ್ತದು?

August 25, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸನಾತನ ಭಾರತ ಸಂಸ್ಕೃತಿ ಅನುಸರುಸುವ ಆಸ್ತಿಕರಾದ ನಾವು ಮನೆಗಳಲ್ಲಿ ದೇವರ ಕೋಣೆ ಅಥವಾ ಇದೇ ರೀತಿಯ ಒಂದು ಪವಿತ್ರ ವೇದಿಕೆ ನಿರ್ಮಿಸುತ್ತು.
ಅಲ್ಲಿ ಪ್ರತಿದಿನ ದೀಪ ಹಚ್ಚಿ ಧಾರ್ಮಿಕ ಆರಾಧನೆ ನಡೆಸುತ್ತು.

ಪರಮಾತ್ಮ ಸಮಸ್ತ ಸೃಷ್ಟಿಯ ಒಡೆಯ. ನಾವು ವಾಸಿಸುವ ಮನೆಯ ವಾಸ್ತವಿಕ ಒಡೆಯನೂ ಅವನೇ. ಅವನ ಮನೆಲಿ ನಾವು ತಾತ್ಕಾಲಿಕ ವಾಸಿಕರು.
ಈ ಅಭಿಪ್ರಾಯ ನಮ್ಮ ಹುಸಿ ಗರ್ವವ ದೂರ ಮಾಡುತ್ತು. ಪರಮಾತ್ಮನೇ ನಮ್ಮೆಲ್ಲರ ಆಸ್ತಿಯ ಹಕ್ಕುದಾರ, ಸಂರಕ್ಷಕ . ನಾವು ಮಾಧ್ಯಮ ಮಾತ್ರ. ಹಾಂಗಾಗಿ ನಾವು ಪರಮಾತ್ಮನ ಒಬ್ಬ ಗಣ್ಯ ಅತಿಥಿ ಸ್ಥಾನಲ್ಲಿ ಕಲ್ಪಿಸುತ್ತು.
ಹೇಂಗೆ ನಾವು ಒಬ್ಬ ಗಣ್ಯ ವ್ಯಕ್ತಿಯ ಪೂಜ್ಯ ಭಾವಂದ ಉಪಚರಿಸುತ್ತೋ ಹಾಂಗೆಯೇ ಸರ್ವವ್ಯಾಪಿ , ಸರ್ವಾಂತರ್ಯಾಮಿ ಪರಮಾತ್ಮನ ಅಸ್ತಿತ್ವ ನಿರಂತರ ಸ್ಮರಿಸಲೆ ಶುಚಿಯಾದ ಅಲಂಕರಿಸಲ್ಪಟ್ಟ ವೇದಿಕೆಯ ನಾವು ನಿರ್ಮಿಸುತ್ತು.
ಅದುವೇ ದೇವರ ಕೋಣೆ ಹೇಳಿ ನಾವು ಹೆಸರಿಸಿತ್ತು. ಪರಮಾತ್ಮನ ಅನುಗ್ರಹ ಇಲ್ಲದ್ದೆ ಯಾವ ಕಾರ್ಯವನ್ನೂ ನಾವು ಯಶಸ್ವಿಯಾಗಿ ಸಾಧುಸಲೇ ಎಡಿಯ. ಅದಕ್ಕಾಗಿಯೇ ನಾವು ನಿತ್ಯ ದೇವರ ಕೋಣೇಲಿ ಕೂದು ಪ್ರಾರ್ಥನೆ ಪೂಜೆ ಭಜನೆ ನಾಮೋಚ್ಛಾರಣೆ ನಿತ್ಯ ಭಕ್ತಿಂದ ಮಾಡುತ್ತು.

ಮನೆಲಿಪ್ಪ ಪ್ರತಿಯೊಂದು ಕೋಣೆ ನಿರ್ದಿಷ್ಟ ಕಾರ್ಯಕ್ಕಾಗಿ ನಾವು ಬಳಸುತ್ತು. ಅಡಿಗೆ ಕೋಣೆ, ಮಲಗುವ ಕೋಣೆ, ಬೈಠಕ್ ಕೋಣೆ, ಬಚ್ಚಲು ಕೋಣೆ, ದಾಸ್ತಾನು ಕೋಣೆ ಇತ್ಯಾದಿ.
ಪ್ರತಿಯೊಂದು ಕೋಣೆ ಆಯಾಯ ಕಾರ್ಯಕ್ಕೆ ಸಹಕಾರಿಯಾಗಿ ಇಪ್ಪ ಹಾಂಗೆ ವಾತಾವರಣ ಅಲಂಕಾರ ಮಾಡುತ್ತು.
ಹಾಂಗೆಯೇ ನಿತ್ಯ ಪ್ರಾರ್ಥನೆ ಪೂಜೆ ಜಪ ತಪ ಮಾಡಿಗೊಂಬಲೆ ದೇವರ ಕೋಣೆಯನ್ನೂ ಸೂಕ್ತವಾಗಿ ನಿರ್ಮಾಣ ಮಾಡುತ್ತು. ವೇದ ಘೋಷ ಪಠನೆಂದ ಶುದ್ಧ ಅಲೆ ದೇವರ ಕೋಣೇಲಿ ವ್ಯಾಪಿಸಿ ಅಲ್ಲಿ ಕೂದೊಂಡಿಪ್ಪವರ ಮನಸ್ಸು ಪರಮಾತ್ಮನೆಡೆ ಸ್ಪಂದಿಸುವ ರೀತಿಲಿ ಆಕರ್ಷಿಸುತ್ತು.

ದೇವರ ಕೋಣೇಲಿ ಕೂದು ನಾವು ಮಾಡುವ ಧ್ಯಾನ ನಮ್ಮ ಶಾರೀರಿಕ ಹಾಗೂ ಮಾನಸಿಕ ಗೊಂದಲವ ದೂರ ಮಾಡಿ ಚಿತ್ತ ಶುದ್ದಿ ನೀಡುತ್ತು. ನವ ಚೈತನ್ಯ ಮೂಡುತ್ತು.

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ದೇವರ ಕೋಣೆ ಕಟ್ಟುತ್ತದು?, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶ್ರೀಅಕ್ಕ°

  ಚೆನ್ನೈ ಭಾವ°,

  [ಪರಮಾತ್ಮ ಸಮಸ್ತ ಸೃಷ್ಟಿಯ ಒಡೆಯ. ನಾವು ವಾಸಿಸುವ ಮನೆಯ ವಾಸ್ತವಿಕ ಒಡೆಯನೂ ಅವನೇ. ಅವನ ಮನೆಲಿ ನಾವು ತಾತ್ಕಾಲಿಕ ವಾಸಿಕರು.]

  ಒಂದು ಶಾಶ್ವತ ಸತ್ಯವ ತುಂಬಾ ಲಾಯ್ಕಲ್ಲಿ ಹೇಳಿದ್ದಿ. ಮನೆಯೂ, ದೇಹವೂ ಎಲ್ಲವೂ ತಾತ್ಕಾಲಿಕ ವಾಸಕ್ಕೇ ಇಪ್ಪದಲ್ಲದಾ? ಆದರೆ ಎಲ್ಲದರಲ್ಲಿಯೂ ನಾವು ಶಾಶ್ವತವಾಗಿ ಇಪ್ಪ ಹಾಂಗೆ ವ್ಯವಹರಿಸುತ್ತು ಅಲ್ಲದಾ? ಲಾಯ್ಕ ಬರದ್ದಿ ಶುದ್ದಿ ನಿಂಗೋ.

  ನಮ್ಮ ಮನೆಯ ಕೇಂದ್ರ ಜಾಗೆಯ ಬಗ್ಗೆ ವಿವರಣೆ ಕೊಟ್ಟ ಚೆನ್ನೈ ಭಾವಂಗೆ ಧನ್ಯವಾದಂಗೋ.

  [Reply]

  VN:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ಓದಿ ಖುಶಿ ಆತು ಭಾವಾ..
  ಹಾಂಗೇ ದೇವರಕೋಣೆ ಇರೆಕಾದ ಜಾಗೆ ಮತ್ತು ದಿಕ್ಕುಗಳನ್ನೂ ಅದರ ಮಹತ್ವದೊಟ್ಟಿಂಗೆ ಹೇಳಿದ್ದರೆ ಲೇಖನ ಪೂರ್ತಿ ಆವುತಿತ್ತಿದಾ?? 😉 ನಿಂಗೊ ಇಷ್ಟರವರೆಗೆ ಹೇಳಿದ್ದರೆಲ್ಲ ಒಂದು ವೈಜ್ನಾನಿಕ ಹಿನ್ನೆಲೆಯ ಕೊಟ್ಟೊಂಡು ಬರದ್ದಿ.. ಇದಕ್ಕೂ ಆ ವಿಜ್ನಾನದ touch ಕೊಟ್ಟಿದ್ದರೆ…

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇದಾ ಇದರೊಂದರಿ ನೋಡಿಕ್ಕಿ – http://houseconstructionindia.blogspot.com/2009/04/vastu-shastra-puja-room.html

  http://www.maxabout.com/fitness/alt_med/holistic/vastu/puja_room.aspx

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ನಿಂಗೊ ಕೇಳಿದ್ದು ಇಲ್ಲಿದ್ದು. ಈರ ತುಸು ಅಂಬೇರ್ಪಿಲ್ಲಿಪ್ಪ ಕಾರಣ ಮತ್ತೆ ಕನ್ನಡೀಕರಿಸುತ್ತೆ. ಈಗಂಗೆ ಇದರ ನೋಡಿ –

  http://www.maxabout.com/fitness/alt_med/holistic/vastu/puja_room.aspx

  http://www.indiahousing.com/vastu-shastra/vastu-for-puja-room.html

  http://www.astrojyoti.com/vastupoojaroom.htm

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಧನ್ಯವಾದ ಭಾವಯ್ಯ.

  [Reply]

  VN:F [1.9.22_1171]
  Rating: 0 (from 0 votes)
 5. ಮರುವಳ ನಾರಾಯಣ ಭಟ್ಟ
  ಮರುವಳ ನಾರಾಯಣ ಭಟ್ಫ್ಟ

  ಸಮಯೋಚಿತ ಲೇಖನ. ಈಗಾಣ ಕಾಲಲ್ಲಿ ಅಡಿಗೆ ಕೋಣೆ, ಮಲಗುವ ಕೋಣೆ, ಬೈಠಕ್ ಕೋಣೆ, ಬಚ್ಚಲು ಕೋಣೆ, ದಾಸ್ತಾನು ಕೋಣೆ ಎಲ್ಲವನ್ಫ್ನುದೆ ಬೇಕಾದಷ್ಟು ದೊಡ್ಡ ಮಾಡಿ ದೇವರಿಂಗೆ ಮಾತ್ರ ಉಪ್ಪರಿಗೆ ಮೆಟ್ಲಿನ ಕೆಳವಾ, ಅಡಿಗೆ ಕೋಣೆಯ ಮೂಲೆಲಿಯಾ ಜಾಗೆ ಮಡುಗುವ ಕ್ರಮ ಇದ್ದು. ದೇವರಿಂಗೆ ಜಾಗೆ ಕೊಟ್ಟು ಜಾಗೆ ವೇಶ್ಟ್ ಮಾಡುಲಾಗನ್ನೆ

  [Reply]

  VA:F [1.9.22_1171]
  Rating: 0 (from 0 votes)
 6. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಸಕಾಲಿಕ ಲೇಖನ ಭಾವ.

  [Reply]

  VN:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರಿಂಗೂ ಧನ್ಯವಾದ. ಪ್ರೋತ್ಸಾಹಿಸುತ್ತಾ ಇರಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಸುಭಗಬೊಳುಂಬು ಮಾವ°ಅಜ್ಜಕಾನ ಭಾವನೀರ್ಕಜೆ ಮಹೇಶದೊಡ್ಡಭಾವಮಂಗ್ಳೂರ ಮಾಣಿಶರ್ಮಪ್ಪಚ್ಚಿಬಂಡಾಡಿ ಅಜ್ಜಿಗೋಪಾಲಣ್ಣಸರ್ಪಮಲೆ ಮಾವ°ಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ವೇಣೂರಣ್ಣಒಪ್ಪಕ್ಕಮುಳಿಯ ಭಾವಚುಬ್ಬಣ್ಣಪೆರ್ಲದಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ದೊಡ್ಮನೆ ಭಾವಸಂಪಾದಕ°ಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ