ನಾವು ಎಂತಕೆ ದೀಪ ಬೆಳಗುಸುತ್ತು

April 21, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನವರ “ಸಂಸ್ಕಾರ ಜ್ಞಾನ” ಹೆಚ್ಚಪ್ಪಲೆ ಚೆನ್ನೈಭಾವನ “ಸಂಸ್ಕಾರ” ವಿಚಾರಧಾರೆಗೊ..
ಎಲ್ಲೋರುದೇ ಇದರ ಸದುಪಯೋಗ ಪಡಕ್ಕೊಳಿ ಹೇಳ್ತದು ನಮ್ಮ ಆಶಯ.

ದೀಪ ಜ್ಞಾನದ ಸಂಕೇತ. ಕತ್ತೆಲೆ ಅಜ್ಞಾನದ ಸಂಕೇತ.
ನಮ್ಮ ಎಲ್ಲ ಗ್ರಹಣೆಗೆ ಮೂಲ – ಚಿಚ್ಛಕ್ತಿ ಮತ್ತು ಜ್ಞಾನ ಪ್ರಚೋದನಾ ಶಕ್ತಿಯೇ ಚೈತನ್ಯ.
ಈ ಚೈತನ್ಯ ಪರಮಾತ್ಮ ಸ್ವರೂಪಿ . ಆದ್ದರಿಂದ ದೀಪವ ಪರಮಾತ್ಮ ಹೇಳಿ ಭಾವಿಸಿ ಪೂಜಿಸುತ್ತು.

ಬೆಳಕು ಕತ್ತಲೆಯ ದೂರ ಮಾಡುತ್ತಾಂಗೆ ಜ್ಞಾನವು ಅಜ್ಞಾನವ ದೂರ ಮಾಡುತ್ತು. ಜ್ಞಾನವು ನಮ್ಮ ಅಂತರ್ಶಕ್ತಿಯ ಪ್ರಚೇತಕವಾಗಿ ಯಶಸ್ಸನ್ನು ತಂದುಕೊಡುತ್ತು. ಆದ್ದರಿಂದಲೇ ಸರ್ವೋತ್ಕೃಷ್ಟ ಜ್ಞಾನಕ್ಕೆ ಶಿರಬಾಗಿ ನಮಿಸುವ ಪ್ರತೀಕವೇ ದೀಪ ಪ್ರಜ್ವಾಲನೆ.
ನಮ್ಮ ಎಲ್ಲಾ ಆಲೋಚನೆ ಮತ್ತು ಚಟುವಟಿಕೆಗಳಿಂಗೆ ಸಾಕ್ಷಿಯಾಗಿರಲಿ ಹೇಳಿ ನಾವು ನಿತ್ಯ ಮನೇಲಿ , ಶುಭಕಾರ್ಯಂಗಳಲ್ಲಿ , ಸಾಮಾಜಿಕ ಕಾರ್ಯಕ್ರಮಂಗಳಲ್ಲಿ ದೀಪ ಬೆಳಗಿಸಿ ಶುಭಕಾರ್ಯ ತೊಡಗುತ್ತು.
ಕೆಲವು ಮನಗಳಲ್ಲಿ ಸಂಧ್ಯಾಕಾಲಲ್ಲಿ ದೀಪ ಹಚ್ಚುತ್ತರೆ ಇನ್ನು ಕೆಲವು ಮನೆಗಳಲ್ಲಿ ಅಖಂಡವಾಗಿ ಉಳಿಸಿಕೊಂಬ ರೂಢಿಯೂ ಇದ್ದು.

ನಾವು ಎಂತಕೆ ದೀಪ ಬೆಳಗೆಕು?
ವಿದ್ಯುತ್ ಬಲ್ಬು ಅಥವಾ ಟ್ಯೂಬ್ ಲೈಟು ಆಗದೋ ಈಗಾಣ ಕಾಲಲ್ಲಿ?. – ಆಗ.

ಏಕೆ ಕೇಳಿರೆ ಸಾಂಪ್ರದಾಯಕವಾಗಿ ನಾವು ಹಚ್ಚುವ ಎಣ್ಣೆ , ತುಪ್ಪ, ಬತ್ತಿಲಿ ವಿಶೇಷವಾದ ಆಧ್ಯಾತ್ಮಿಕ ಹಿನ್ನೆಲೆ , ಗುಣ ಇದ್ದಡ.
ದೀಪಕ್ಕೆ ಬಳಸುವ ಎಣ್ಣೆ ತುಪ್ಪ ಸಾಂಕೇತಿಕವಾಗಿ ನಮ್ಮ ವಾಸನೆ ಅಥವಾ ನಕಾರಾತ್ಮಕ ಸಂಸ್ಕಾರ ಮತ್ತು ಬತ್ತಿ ನಮ್ಮ ಅಹಂಕಾರವ ಸೂಚಿಸುತ್ತಡ.
ಅಧ್ಯಾತ್ಮ ದೀಪವ ಉರಿಸಿಯಪ್ಪಗ ನಕಾರತ್ಮಕ  ಕ್ಷಯಿಸಿ ಅಹಂಕಾರವೂ ಉರುದು ಹೊವ್ತು ಹೇಳಿ ನಂಬಿಕೆ. ದೀಪದ ಜ್ವಾಲೆ ಯಾವಾಗಲೂ ಊರ್ಧ್ವ ಮುಖವಾಗಿ ಉರಿವದು, ಹಾಂಗೆಯೇ ನಮ್ಮ ಧ್ಯೇಯ ಯಶಸ್ಸು ಸರ್ವತೋಮುಖ ಅಭಿವೃದ್ಧಿ ಯಾಗಿ ಮೇಲೆ ಮೇಲೆ ಏರೆಕು ಹೇಳಿ ಸೂಚ್ಯ.
ಅಂತಹ ಉತ್ತಮ (ಉನ್ನತ) ಧ್ಯೇಯೋದ್ದೇಶ ಇಪ್ಪ ‘ಜ್ಞಾನ’ವ ನಾವು ಪಡೆಯುವಂತೆ ಆಯೆಕು.

ಒಂದು ದೀಪ, ನೂರಾರು ದೀಪಂಗಳ ಬೆಳಗಿಸಬಲ್ಲುದು.
ಹಾಂಗೆಯೇ, ಒಬ್ಬ ಜ್ಞಾನಿ ಅನೇಕ ಜನರ ಜ್ಞಾನಿಯಾಗಿ ಪರಿವರ್ತಿಸಲೆಡಿಗು. ಹೇಂಗೆ ದೀಪದ ಜ್ವಾಲೆ ಮತ್ತು ಪ್ರಕಾಶ  ಮತ್ತಿನ್ನು ಎಷ್ಟು ದೀಪಗಳ ಬೆಳಗಿರೂ ಅದರ ಶಕ್ತಿ, ಪ್ರಕಾಶ, ಸತ್ವ ಕುಂಠಿತ ಆವ್ತಿಲ್ಲೆಯೋ, ಹಾಂಗೇ , ಜ್ಞಾನವ ಎಷ್ಟು ವಿಚಾರ ವಿನಿಮಯ, ಚಿಂತನ ಮಂಥನ ವೃದ್ಧಿ ಆವ್ತಷ್ಟೇ ವಿನಃ ಕಡಮ್ಮೆ ಆಗ.
ಈ ನಿರ್ವಹಣೆ ಶ್ರೋತಾ ಹಾಗೂ ವಕ್ತಾ ಇಬ್ಬರಿಂಗೂ ಸಹಕಾರಿಯಾವ್ತು.

ಭೋ ದೀಪ ದೈವ ರೂಪಸ್ತ್ವಂ ಕರ್ಮ ಸಾಕ್ಷೀ ಹ್ಯವಿಗ್ನಕೃತ್ |
ಯಾವತ್ಕರ್ಮ ಸಮಾಪ್ತಿಸ್ಯಾತ್ ತಾವತ್ವಂ ಸುಸ್ಥಿರೋ ಭವ ||
ದೀಪಜ್ಯೋತಿ: ಪರಬ್ರಹ್ಮ ದೀಪಃ ಸರ್ವತಮೋಪಹಃ |
ದೀಪೇನ ಸಾಧ್ಯತೆ ಸರ್ವಂ ಸಂಧ್ಯಾ ದೀಪೋ ನಮೋಸ್ತುತೇ ||

(ಸಂಗ್ರಹ)

ನಾವು ಎಂತಕೆ ದೀಪ ಬೆಳಗುಸುತ್ತು , 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಚೆನ್ನೈ ಭಾವ,
  ನಿಂಗಳ ದೀಪದ ಬತ್ತಿಂದ ಎಂಗಳ ಬತ್ತಿ ಹೊತ್ತಿಸಿದ್ದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಳ್ಳೆ ವಿಚಾರಧಾರೆಗೊ ಹೀಂಗೆ ಹರುದು ಬತ್ತಾ ಇರಳಿ.
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 3. ಸುಭಗ
  ಸುಭಗ

  ಚೆನ್ನೈ ಭಾವಾ, ಸಂಸ್ಕಾರ ಜ್ಯೋತಿ ಬೆಳಗುತ್ತ ‘ದೀಪ’ದ ವಿವರಣೆ ಲಾಯ್ಕ ಆಯಿದು.

  ದಕ್ಷಿಣ ಕೇರಳಲ್ಲಿ ಸಾಯಂ ಸಂಧ್ಯಾಕಾಲಲ್ಲಿ ಹೆಮ್ಮಕ್ಕೊ “ದೀಪಂ.. ದೀಪಂ..” ಹೇಳಿ ಬಾಯಿಲಿ ದೊಡ್ಡಕೆ ಹೇಳಿಂಡು ಮನೆ ಒಳಾಂದ ಹೊತ್ತುಸಿದ ದೀಪವ ತೊಳಶಿಕಟ್ಟೆ ಹತ್ರಂಗೆ ತಂದು ಮಡುಗುದು ಒಂದು ಪ್ರತ್ಯೇಕ, ವಿಶಿಷ್ಟ ಸಂಪ್ರದಾಯ. ಅಲ್ಲದೊ?

  [Reply]

  VN:F [1.9.22_1171]
  Rating: +1 (from 1 vote)
 4. ಗೋಪಾಲಣ್ಣ
  Gopalakrishna BHAT S.K.

  ದೀಪ ಬೆಳಗುಸುದು ನಮ್ಮ ಸಂಸ್ಕೃತಿ.ಹೊತ್ತಿಸಿದ ದೀಪವ ಲೆಕ್ಕ ಮಾಡಿ ನಂದುಸುದಲ್ಲ.ಈ ರೀತಿ ಮೇಣದ ಬತ್ತಿ ನಂದಿಸಿ ಹುಟ್ಟುಹಬ್ಬ ಆಚರಿಸುವದು ಅಂಧಾನುಕರಣೆ ಅಲ್ಲದೊ?
  ತುಂಬಾ ಉತ್ತಮ ಲೇಖನ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಚೆನ್ನೈ ಭಾವಯ್ಯಂಗುದೆ ಆರನ್ನೂ ಕೀಟಲೆ ಮಾಡದ್ದೆ, ವ್ಯಂಗ್ಯ, ತಮಾಷೆ ಎಲ್ಲ ಬಿಟ್ಟು, ಸುಂದರವಾಗಿ ಒಂದು ವಿಚಾರವ ಹೇಳಲೆ ಎಡಿತ್ತು ಹೇಳ್ತಕ್ಕೆ, ಅವನ ಈ ಲೇಖನವೇ ಸಾಕ್ಷಿ. ಚೆನ್ನೈ ಭಾವನ ಇಂತಹ ವೈಚಾರಿಕ ಲೇಖನಂಗಳೂ ಬತ್ತಾ ಇರಳಿ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ‘ಕಾರ್ಯಂ ವಿಟ್ಟು ಕಳಿಕ್ಕರದ್’ ಹೇಳುತ್ತವನ್ನೆ ಹಾಂಗೇ ನಮ್ಮದು. ವೈಚಾರಿಕ ವಿಷಯಲ್ಲಿ ಕೊಂಗಿ ಮಾಡ್ಲೆ ಇಲ್ಲೆ. ಮಸಾಲೆ ಮಾಡುವಾಗ ಒಗ್ಗರಣೆ ಹಾಕದ್ರೂ ರುಚಿ ಇಲ್ಲೆ ಇದಾ. ನಿಂಗಳ ಪ್ರೋತ್ಸಾಹ ಎಂದಿಂಗೂ ಬೇಕು ಮಾವ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಯೇನಂಕೂಡ್ಳು ಅಣ್ಣವೇಣೂರಣ್ಣಅನು ಉಡುಪುಮೂಲೆಗೋಪಾಲಣ್ಣಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿಪುಟ್ಟಬಾವ°ದೊಡ್ಡಭಾವಶಾಂತತ್ತೆಉಡುಪುಮೂಲೆ ಅಪ್ಪಚ್ಚಿಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿಚೆನ್ನೈ ಬಾವ°ಶಾ...ರೀಪ್ರಕಾಶಪ್ಪಚ್ಚಿಮಾಲಕ್ಕ°ವೆಂಕಟ್ ಕೋಟೂರುಡೈಮಂಡು ಭಾವಶ್ಯಾಮಣ್ಣಸರ್ಪಮಲೆ ಮಾವ°ಬಟ್ಟಮಾವ°ಡಾಮಹೇಶಣ್ಣಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ