ನಾವು ಎಂತಕೆ ಶಂಖ ಊದುತ್ತದು?

April 28, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾವು ಮನಗಳಲ್ಲಿ ನಿತ್ಯ ಸಂಧ್ಯಾಕಾಲಕ್ಕೆ, ವಿಶೇಷ ಪೂಜೆ, ಸಮಾರಂಭ ಸಮಯಲ್ಲಿ ಶಂಖ ಊದುವ ಕ್ರಮ ಇದ್ದು.
ಪುರಾಣ ಕಾಲಲ್ಲಿ ಯುದ್ಧ ಘೋಷಣೆ ವಿಜಯ ಉದ್ಘೋಷಣೆ ಕೂಡ ಶಂಖನಾದ ಮೂಲಕ ಸೂಚಿಸಿದ್ದವು.

ಶಂಖ ಊದುವಾಗ, ‘ಮೂಲಪ್ರಕೃತಿ’ಯಾದ ಓಂಕಾರ ನಾದ ಹೊರ ಹೊಮ್ಮುತ್ತು.
ಓಂಕಾರ ಜಗತ್ತಿನ ರಹಸ್ಯ,  ಅಲ್ಲ, ಇದಕ್ಕಿಂತಲೂ ಅತೀತ ಪಾರಮಾರ್ಥಿಕ ತತ್ವದ ಸೂಚಕ.

ಪುರಾಣಲ್ಲಿ ಹೇಳಿದಾಂಗೆ, ಒಂದರಿ ಶಂಖಾಸುರ ಹೇಳ್ವ ರಕ್ಕಸ ದೇವತೆಗಳ ಸೋಲುಸಿ ಸಾಗರದಡಿಲಿ ಹೊಕ್ಕಿ ಕೂದಪ್ಪಗ , ದೇವತೆಗಳ ಪ್ರಾರ್ಥನೆಯಂತೆ ಪರಮಾತ್ಮ ಶಂಖಾಸುರನ ಸಂಹರುಸಲೆ ಮತ್ಸ್ಯಾವತಾರ ತಾಳಿದ.
ಆ ಖಳನ ಸಂಹರಿಸಿ, ಶಂಖದಾಕಾರಲ್ಲಿ ಇಪ್ಪ ಅದರ ಕೆಮಿ ಮೂಳೆಯ ಭಗವಂತ ಊದಿದನಡ. ಅದರಿಂದ ‘ಓಂ’ ಹೇಳ್ವ ನಾದ ಹೊರಹೊಮ್ಮಿ ಎಲ್ಲಾ ವೇದ ಹಿಂದಿರುಗಿ ಸಿಕ್ಕಿತ್ತಡ.
ವೇದಗಳ  ಸಮಸ್ತ ಜ್ಞಾನ ಓಂಕಾರದ ವಿಸ್ತೀರ್ಣಡ. ಶಂಖಾಸುರಂದ ಓಂಕಾರ ಹೊರಹೊಮ್ಮಿದ್ದಕ್ಕೆ ಈ ವಾದ್ಯಕ್ಕೆ ‘ಶಂಖ’ ಹೇಳ್ವ ಹೆಸರು ಬಂತು ಹೇಳಿ ಕತೆ.
ಪರಮಾತ್ಮ ಉಪಯೋಗಿಸಿದ ಶಂಖಕ್ಕೆ ‘ಪಾಂಚಜನ್ಯ’ ಹೇಳಿ ಹೆಸರು. ಧರ್ಮ ಅರ್ಥ ಕಾಮ ಮೋಕ್ಷ ಈ ನಾಕು ಪುರುಷಾರ್ಥಲ್ಲಿ ಶಂಖವು ಧರ್ಮದ ಸಂಕೇತ.
ಹಾಂಗಾಗಿ ಪರಮಾತ್ಮನ ಒಂದು ಕೈಲಿ ಸದಾ ಶಂಖ ಇಪ್ಪದು ನಾವು ಕಾಣುತ್ತು.

ಹೀಂಗೆ, ಶಂಖನಾದವು ಅಧರ್ಮದ ಮೇಲೆ ಧರ್ಮದ ವಿಜಯವ ಉದ್ಘೋಶಿಸುತ್ತು ಹೇಳಿ ನಂಬಿಕೆ. ಶಂಖನಾದ ಇತರ ಎಲ್ಲಾ ರೀತಿಯ ಕರ್ಕಶ ನಾದ , ರೋದನ , ಶಬ್ಧ ಮಾಲಿನ್ಯದ ದುಷ್ಪರಿಣಾಮ ನಶಿಸಲಿ ಹೇಳಿ ಉದ್ದೇಶ. ಶಂಖನಾದ ರಾಕ್ಷಸರಿಂಗೆ ಅತ್ಯಂತ ಕಿರುಕುಳ , ದೇವತೆಗೊಕ್ಕೆ ಆಪ್ಯಾಯಮಾನ. ಹಾಂಗಾಗಿ ತಾಮಸೀ ಗುಣ ನಶಿಸಲಿ ಸತ್ವ ಗುಣ ವಿಜ್ರಂಬಿಸಲಿ ಹೇಳಿ ನಾವು ಶಂಖನಾದ ಮಾಡುತ್ತು. ಶಂಖನಾದ ಎಷ್ಟು ದೂರಕ್ಕೆ ಕೆಮಿಗೆ ಕೇಳುತ್ತೋ, ಅದು, ಆ ಪ್ರದೇಶದ ಜನರ ಗೊಂದಲ ಮನಸ್ಸು ತಾತ್ಕಾಲಿಕ ಸ್ಥಿಮಿತಕ್ಕೆ ಬಂದು ಚಿನ್ಮಯನತ್ತ ತಮ್ಮ ಮನೋವೃತ್ತಿ ಪ್ರಾರ್ಥನೆಯ ಭಾವಲ್ಲಿ ಇರಿಸುತ್ತು. ಶಂಖ ಊದುವಾಗ ನಮ್ಮ ಕೊರಳಿನ ತುಸು ಮೇಗಂತಾಗಿ ನೆಗ್ಗಿ , ಮನಸ್ಸಿನ ಊರ್ಧ್ವ ಮುಖವಾಗಿ ಏಕಾಗ್ರಗೊಳಿಸಿ  ಒಂದೇ ಶ್ವಾಸಲ್ಲಿ ಊದೆಕು , ಸಣ್ಣ ಸ್ವರಲ್ಲಿ ಸುರುಮಾಡಿ ಒಂದೇ ವೇಗಲ್ಲಿ ಊದಿಗೊಂಡು ದೊಡ್ಡ ಸ್ವರಲ್ಲಿ ನಿಲ್ಲುಸೆಕು  ( ಇದರಿಂದ ನಮ್ಮ ಸುಷುಮ್ನ ನಾಡಿ ಜಾಗ್ರತಗೊಂಡು ಶಂಖನಾದದ ಕಂಪನ ಅಲೆ ವಾತಾವರಣಲ್ಲಿ ಹೆಚ್ಚು ಹೊತ್ತು ನಿಲ್ಲುತ್ತು).

ಶಾಸ್ತ್ರ ಪ್ರಕಾರ ಶಂಖ ಲಕ್ಷ್ಮೀ ಸ್ವರೂಪ. ದೇವರಿಂಗೆ ಅಭಿಷೇಕ ಮತ್ತು ಪೂಜೆ ಮಾಡೆಕ್ಕಾರೆ ಲಕ್ಷೀಗೇ ಅಧಿಕಾರ. ಆದ್ದರಿಂದ ಲಕ್ಷ್ಮೀ ಮುಖಾಂತರ ಪೂಜೆ ಮಾಡೆಕು ಹೇಳಿ ಆವ್ತು ಪೂಜಾ ಶಂಖ ನಾವು ಪೂಜಗಳಲ್ಲಿ ಬಳಸುವದು. ವೈಜ್ಞಾನಿಕವಾಗಿ ನೋಡಿರೆ ಶಂಖವು ಸುಣ್ಣದ ಅಂಶ. ಪೂಜಾ ಬಳಿಕ ನಾವು ಸೇವನೆ ಮಾಡುವ ತೀರ್ಥ ನಮ್ಮ ಆರೋಗ್ಯಕ್ಕೆ (calcium)  ಸತ್ವ ಕೊಟ್ಟು ದೇಹಾರೋಗ್ಯ ಅಸ್ಥಿ ಬೆಳವಣಿಗೆಗೆ ಸಹಕಾರಿ ಆವ್ತು. ಆದ್ದರಿಂದಲೇ ಶಂಖಂದಲೇ ಅಭಿಷೇಕ ಮಾಡೆಕು ಹೇಳಿ ನಿಯಮ.

ಸ್ನಾನ ಪಾದೋದಕಂ ವಿಷ್ಣೋಃ ಶಿರಸಿ ಧಾರಯನ್ |
ಸರ್ವ ಪಾಪ ವಿನಿರ್ಮುಕ್ತೋ ವೈಷ್ಣವೀಂ ಸಿದ್ಧಿಮಾಪ್ನುಯಾತ್ ||

ಭಗವಂತಂಗೆ ಅಭಿಷೇಕ ಮಾಡಿದ ತೀರ್ಥವ ತಲೆಗೆ ಸಿಂಪಡಿಸಿ ಭಕ್ತಿಯಿಂದ ತೀರ್ಥವ ಕುಡುದರೆ ಸರ್ವಪಾಪ ವಿಮುಕ್ತನಾಗಿ ವಿಷ್ಣು ಜ್ನಾನಿಯಾವ್ತವು

ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧ್ರುತಃ ಕರೇ |
ದೇವೈಶ್ಚ ಪೂಜಿತಃ ಸರ್ವೈಃ ಪಾಂಚಜನ್ಯ ನಮೋಸ್ತುತೆ ||

ಸಾಗರಲ್ಲಿ ಉತ್ಪತ್ತಿಯಪ್ಪ ವಿಷ್ಣುವಿನ ಕೈಲಿ ಹಿಡ್ಕೊಂಡಿಪ್ಪ ಮತ್ತು ಎಲ್ಲಾ ದೇವತೆಗಳಿಂದ ವಂದಿಸಲ್ಪಡುವ, ಹೇ ಪಾಂಚಜನ್ಯವೇ, ನಿನಗೆ ನಮಸ್ಕಾರ.

(ಸಂಗ್ರಹ)

ನಾವು ಎಂತಕೆ ಶಂಖ ಊದುತ್ತದು?, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಆನು ಅಲ್ಲಿಲ್ಲಿ ಓದಿದ ಪ್ರಕಾರ ಒಂದು , ಎರಡು , ಮೂರು ಹೇಂಗೂ ಅಕ್ಕು ನಾವು ನಮ್ಮ ಮನೇಲಿ ಮದಲಿಂದ ಆಚರಿಸಿಗೊಂಡು ಬಂದ ಹಾಂಗೆ.
  ಮೂರು ಹೇಳುತ್ತದು ಸರೀ ಹೇಳಿ ಕಾಣುತ್ತೆನಗೆ. – ‘ತ್ರಿವರಂ ಸತ್ಯಂ’ ಹೇಳ್ವದು ನಮ್ಮ ಹಿರಿಯರ ನಂಬಿಕೆ. ಯಾವುದು ಮೂರು ಸರ್ತಿ ಹೇಳಲ್ಪಡುತ್ತೋ ಅದು ಸತ್ಯ ಆವ್ತು. ಯಾವುದೇ ಪ್ರಾಮುಖ್ಯತೆ ಇಪ್ಪ ವಿಷಯಂಗಳ ಹೇಳುವಾಗ ಅದರ ಮೂರು ಸರ್ತಿ ಹೇಳ್ವ ಕ್ರಮ.

  ಹೆಚ್ಚಿನ ಅಧ್ಯಯನ ಮಾಡಿ ನೋಡೆಕ್ಕಷ್ಟೆ. ಆರಾರು ಇಲ್ಲಿ ವಿವರ್ಸಿರೆ ಖಂಡಿತಾ ತೆಕ್ಕೊಳ್ತು.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಕೆಲವು ಜನ ಒಂದು ಸರ್ತಿ, ಕೆಲವು ಜನ ಮೂರು ಸರ್ತಿ ಊದುದರ ನೊಡಿದ್ದೆ / ಕೇಳಿದ್ದೆ …. ಆದರೆ ಊದುದು ಏರು ಸ್ವರಲ್ಲಿ ಊದೆಕ್ಕು ಹೇಳಿ ಕಾಣ್ತು … ಹೆಚ್ಚಿನ ಮಾಹಿತಿ ಗೊಂತಿಲ್ಲೆ ….

  [Reply]

  VA:F [1.9.22_1171]
  Rating: 0 (from 0 votes)
 2. ಶ್ಯಾಮಣ್ಣ
  ಶ್ಯಾಮಣ್ಣ

  ನಿಂಗ ಲಿಂಕ್ ಕೊಟ್ಟದು ಒಳ್ಳೆದಾತು… ಆದರೆ ಬೈಲಿಲಿಯೇ ನಿಂಗ ವಿವರಣೆ ಕೊಟ್ಟರೆ ಒಳ್ಳೆದಿತ್ತು..

  [Reply]

  VA:F [1.9.22_1171]
  Rating: 0 (from 0 votes)
 3. ಮುಣ್ಚಿಕಾನ ಭಾವ

  ಎನಗೆ ನಾವು ಶಂಖ ಊದಿಯಪ್ಪಗ ಅದರ ನಾದ ಕೇಳುವ ಜಾಗೆ ವರೆಗೆ ಯಾವ ದುಷ್ಟ ಶಕ್ತಿಗೊ ಬತ್ತವಿಲ್ಲೆ ಹೇಳಿ ಗೊಂತಿತ್ತು. ಆದರೆ ಶಂಖದ ಬಗ್ಗೆ ಹೆಚ್ಚಿನ ವಿವರ ಗೊಂತಿದ್ದಿತ್ತಿಲ್ಲೆ. ಲೇಖನ ಓದಿಯಪ್ಪಗ ತುಂಬಾ ಕೊಶಿ ಆತು.
  ವಿವರಿಸಿದ್ದಕ್ಕೆ ಧನ್ಯವಾದಂಗೊ…

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶಂಖ ತೀರ್ಥ ಬಗ್ಗೆ ಸಿಕ್ಕಿದ ಒಂದೆರಡು ಮಾಹಿತಿಗೊಃ
  ಶಂಖಂದ ದೇವರಿಂಗೆ ಅಭಿಶೇಕ ಮಾಡಿದ ತೀರ್ಥವ ಕುಡಿವಲೆ ಅಕ್ಕು. ಶಂಖಂದಲೇ ನೇರವಾಗಿ ತೀರ್ಥ ಹೇಳಿ ತೆಕ್ಕೊಂಬಲೆ ಇಲ್ಲೆ.
  ಅಭಿಶೇಕ ಮಾಡುವಾಗ ಶಂಖವ ನೀರಿಲ್ಲಿ ಮುಂಗುಸಲೆ ಆಗ. ಬದಲಿಂಗೆ ಶಂಖಕ್ಕೆ ಬೇರೆ ಪಾತ್ರಂದ ನೀರು ತುಂಬಿಸಿ, ಅದರ ಅಭಿಶೇಕ ಮಾಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಶರ್ಮಪ್ಪಚ್ಚಿಗೆ ಬಹು ಧನ್ಯವಾದ. ‘ಹಳೆ ಶುದ್ದಿ ಆದರೂ ಶುದ್ದಿ ಹಳತ್ತಾವ್ತಿಲ್ಲೆ’ ತೋರ್ಸಿಕೊಟ್ಟಿ.

  ಗುರುವಾಯೂರ್ ದೇವಸ್ಥಾನಲ್ಲಿ ಭಕ್ತರಿಂಗೆ ತೀರ್ಥ ಶಂಖಲ್ಲಿ ಕೊಡ್ತವು (ಸಕ್ಕಣಲ್ಲಿ ಅಲ್ಲ). ಅದರ ಔಚಿತ್ಯ ಎಂತರ ಹೇಳಿ ತಿಳಿಯೆಕು. ಅಂದರೆ ಅಲ್ಲಿ ಹೋಗಿ ಒಬ್ಬನತ್ರಾರು ಮಾತಾಡಿಕ್ಕಲೆಡಿಗೊ?!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವವೆಂಕಟ್ ಕೋಟೂರುದೊಡ್ಮನೆ ಭಾವಬಂಡಾಡಿ ಅಜ್ಜಿಪುಟ್ಟಬಾವ°ದೇವಸ್ಯ ಮಾಣಿಪೆಂಗಣ್ಣ°ಅಕ್ಷರ°ಪಟಿಕಲ್ಲಪ್ಪಚ್ಚಿಶರ್ಮಪ್ಪಚ್ಚಿದೀಪಿಕಾಕೇಜಿಮಾವ°ಅಕ್ಷರದಣ್ಣಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ಮಾಷ್ಟ್ರುಮಾವ°ಬಟ್ಟಮಾವ°ವೇಣಿಯಕ್ಕ°ಸುಭಗಚುಬ್ಬಣ್ಣಗಣೇಶ ಮಾವ°ಮಾಲಕ್ಕ°ಉಡುಪುಮೂಲೆ ಅಪ್ಪಚ್ಚಿಅನು ಉಡುಪುಮೂಲೆವಿಜಯತ್ತೆಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ