ಭಾಗ 03 : ಗರ್ಭಾಧಾನ (ಋತು ಶಾಂತಿ) : ಹದಿನಾರು ಸಂಸ್ಕಾರಂಗೊ

September 15, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಪೀಠಿಕೆ ಹಾಕಿ ನಿಲ್ಸಿದ್ದು ನಾವು – ‘ಷೋಡಶ ಸಂಸ್ಕಾರ’ದ ಬಗ್ಗೆ. ಇಲ್ಲಿಂದ ಮುಂದೆ ಒಂದೊಂದೇ ಸಂಸ್ಕಾರವ ಚಿಂತನೆ ಮಾಡುವೋ.

ಸಂಸ್ಕಾರಂಗಳಲ್ಲಿ ಎರಡು ವಿಧ – ೧. ಕ್ಷೇತ್ರ ಸಂಸ್ಕಾರ ೨. ಪ್ರಜಾ ಸಂಸ್ಕಾರ. ಗರ್ಭಾಧಾನಾದಿ ವಿಷ್ಣುಬಲಿ ವರೇಗೆ ಕ್ಷೇತ್ರ ಸಂಸ್ಕಾರ ( ಗರ್ಭಕ್ಕೆ ಮಾಡುವ ಸಂಸ್ಕಾರ), ಜನನದ ಮುಂದಾಣ ಸಂಸ್ಕಾರಂಗೊ – ಪ್ರಜಾ ಸಂಸ್ಕಾರ.

ಗರ್ಭಾಧಾನ (ಋತು ಶಾಂತಿ) :

ಋತುಶಾಂತಿ ಸಂಸ್ಕಾರ ಕನ್ನೆಯು ಮೈ ನೆರದಪ್ಪಗ ಮಾಡೆಕ್ಕಪ್ಪದು. ಆ ಸಂದರ್ಭಲ್ಲಿ ಮಾಡ್ಳೆ ಬಿಟ್ಟು ಹೋದಲ್ಲಿ, ವಿವಾಹದ ನಂತರ ಪ್ರಥಮ ರಜೋದರ್ಶನದ ಪ್ರಥಮ ಋತುಕಾಲಲ್ಲಿ (ಋತುಚಕ್ರದ ಮೊದಲನೇ ಹದಿನಾರು  ದಿನಂದೊಳ), ಗರ್ಭಾಧಾನದ ಒಟ್ಟಿಂಗೆ ಮಾಡುವುದು ಕ್ರಮ. ಇನ್ನು ಕೆಲವು ಕಡೆ ವಿವಾಹದ ನಾಂದಿ ಒಟ್ಟಿಂಗೂ ಮಾಡುವದಿದ್ದು. ಪ್ರಥಮ ರಜೋದರ್ಶನ ಕಾಲೇ ಸಮುತ್ಥಿತ-ತಿಥಿ-ವಾರ-ನಕ್ಷತ್ರ-ಯೋಗ-ಕರಣ-ಲಗ್ನ ದೋಷ ಶಾಂತ್ಯರ್ಥಂ ಋತುಶಾಂತಿ:’.

ಗರ್ಭ  ಹೇಳಿರೆ ಬಸಿರು. ಒಳ ಹೇಳಿ ಅರ್ಥ. ಆಧಾನ ಹೇಳಿರೆ ಇರಿಸುವುದು ಹೇಳಿ ಅರ್ಥ. ಗೃಹಸ್ಥನು ರಹಸ್ಯಲ್ಲಿ ಆಚರಿಸುವ  ಆಂತರಂಗಿಕ ವಿಷಯ- ‘ರೇತೋಯಜ್ಞ’ ಇದು. ಉತ್ತಮವಾದ ಬೆಳೆ ಬೆಳಸುವ ಆಸಕ್ತಿ ಇಪ್ಪವು ಕಾಲ ಕಾಲಕ್ಕೆ ಸುರುವಿಂಗೆ ಭೂಮಿಯ ಲಾಯಕ ನುಸುಳು ಗೊಳಿಸಿ, ಉತ್ಕೃಷ್ಟ ಬೀಜವ ಆಯ್ದು ತಮ್ಮ ಕೃಷಿಯ ಪ್ರಾರಂಭಿಸಿ ಅದಕ್ಕೆ ಮುಂದೆ ನೀರು, ಗೊಬ್ಬರ. ಗಾಳಿ, ಬೆಳಕು, ಬಿಸಿಲು, ಸಮರ್ಪಕ ದೊರಕುವಂತೆ ನೋಡಿಗೊಳ್ಳುತ್ತವು. ಕ್ರಿಮಿ ಕೀಟ ಭಾಧೆಯಿಂದ ರಕ್ಷಿಸುತ್ತವು. ಇದೇ ರೀತಿಲಿ ಉನ್ನತವಾದ ಮಾನವ ವರ್ಗದ ನಿರ್ಮಾಣಕ್ಕಾಗಿ ‘ಗರ್ಭಾಧಾನ’ ಸಂಸ್ಕಾರ.

ಬೀಜ ಮತ್ತು ಗರ್ಭಗಳ ಸಂದರ್ಭದಲ್ಲಿನ ದೋಷಂಗಳ ದೂರ ಮಾಡುವುದು ಮತ್ತು ಗರ್ಭಾಶಯ (ಕ್ಷೇತ್ರ) ವ ವೈದಿಕ ವಿಧಾನಲ್ಲಿ ಶುದ್ಧ ಗೊಳುಸುವದೇ – ಗರ್ಭಾಧಾನ (ಋತು ಶಾಂತಿ). ಮನುಷ್ಯನ ದೈಹಿಕ ತೊಂದರೆಗಳಲ್ಲಿ ಶಾರೀರಿಕ ತೊಂದರೆ, ಮಾನಸಿಕ ತೊಂದರೆ ಹೇಳಿ ಎರಡು ವಿಭಾಗ. ಬೀಜ – ಕ್ಷೇತ್ರ ದೋಷಂಗಳೂ ಇದಕ್ಕೆ ಮೂಲ ಕಾರಣ ಹೇಳಿ ವಿಜ್ನಾನಿಗೊ ಅರ್ಥೈಸಿಗೊಂಡಿದವು. ಗರ್ಭಾಧಾನ ಸಂಸ್ಕಾರಂದ ಉತ್ಪನ್ನವಾದ ಮಗುವಿಂಗೆ ಮುಂದೆ ಬ್ರಹ್ಮ ವಿದ್ಯೆಯನ್ನೂ ಪಡೆಯುವ ಕ್ಷಮತೆ ಇರ್ತು ಹೇಳಿ ಶಾಸ್ತ್ರ ವಚನ.

“….. ಅಸ್ಯಾಂ ಭಾರ್ಯಾಯಾಂ, ಜನಿಷ್ಯಮಾಣ – ಗರ್ಭಸ್ಯ ಬೀಜಗರ್ಭಸಮುಧ್ಬವೈನೋ ನಿಬರ್ಹಣಪೂರ್ವಕಂ, ಪ್ರಜಾಸಂಸ್ಕಾರಾತಿಶಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಗರ್ಭಾಧಾನಾಖ್ಯಂ ಕರ್ಮ ಕರಿಷ್ಯೇ| ತದಾದೌ, ಪ್ರಥಮ ರಜೋದರ್ಶನ ಕಾಲೇ ಸಮುತ್ಥಿತ ತಿಥಿ ವಾರ ನಕ್ಷತ್ರ ಯೋಗ ಕರಣ ಲಗ್ನ ದೋಷ ಶಾಂತ್ಯರ್ಥಂ ಋತುಶಾಂತಿಂ ಕರಿಷ್ಯೇ” ||  – ಹೇಳಿ ಸಂಕಲ್ಪ.

ವೈದಿಕಲ್ಲಿ ವೈಜ್ಞಾನಿಕ ಸತ್ಯಂಗೊ ಅಡಗಿದ್ದು  ಹೇಳಿ (ದಿನ ಸಮಯ ಮುಹೂರ್ತ ನೋಡುತ್ತವು ಹೇಳುವದರಿಂದ) ನಾವು ತಿಳ್ಕೊಳ್ಳೆಕ್ಕಾದ/ಅರ್ಥೈಸೆಕ್ಕಾದ ವಿಚಾರ. ಈ ವಿಷಯಲ್ಲಿ ಮದಲಾಣ ನಾಲ್ಕು ಮತ್ತು ಹನ್ನೊಂದು , ಹದಿಮೂರು ಬಿಟ್ಟು ಉಳಿದ ಹತ್ತು ದಿನ ಸಂಸ್ಕಾರಕ್ಕೆ ಯೋಗ್ಯ ದಿನ ಹೇಳಿ ಹೇಳಿದ್ದು. ಚತುರ್ಥಿ, ಷಷ್ಠಿ, ಅಷ್ಟಮಿ, ಚತುರ್ದಶಿ, ಹುಣ್ಣಮೆ/ಅಮಾವಾಸ್ಯೆ ತಿಥಿಗಳ ಬಿಟ್ಟು ಬಾಕಿ ತಿಥಿಗಳಲ್ಲೂ ಮತ್ತೆ  ಸೋಮವಾರ, ಗುರುವಾರ, ಶುಕ್ರವಾರ ಈ ವಾರಂಗಳಲ್ಲೂ   ಶ್ರವಣ, ರೋಹಿಣಿ, ಹಸ್ತ, ಅನುರಾಧ, ಸ್ವಾತಿ, ರೇವತಿ, ಉತ್ತರ, ಶತಭಿಷ ದಿನಂಗಳಲ್ಲಿ ಉತ್ತಮ ಚಂದ್ರ ಬಲ ಇಪ್ಪ ದಿನ ನೋಡಿ ಮಾಡೆಕ್ಕಪ್ಪದು. ಪ್ರಕೃತಿಲಿಪ್ಪ ಪ್ರತಿಯೊಂದು ವಿಷಯವೂ (ಶಕ್ತಿಯೂ) ಕಾಲಕ್ಕನುಗುಣವಾಗಿ ಬದಲಾವ್ತು. ಬ್ರಹ್ಮ ಮಾತ್ರ ಸ್ಥಿರ. ಆದಕಾರಣವೇ ದಿನ ನೋಡಿ ಕರ್ಮ ಮಾಡೆಕ್ಕಪ್ಪದು.

ಅಶ್ವಗಂಧ ಅಥವಾ ದೂರ್ವಾರಸ ಸೇವನೆ: ಪತಿ ಮಂತ್ರೋಚ್ಚಾರ ಪೂರ್ವಕ  ಪತ್ನಿಯ ಬಲ ಮೂಗಿಂಗೆ ಅಶ್ವಗಂಧ ವಾ ದೂರ್ವೆಯ ರಸ ಹಿಂಡುವದು. ಅದು ಹೊಟ್ಟಗೆ ಹೋದಬಳಿಕ ಆಚಮನ. ಮೂಗಿನ ಬಲ ಬದಿ ಪಿಂಗಳಾ ನಾಡಿಯಾವ್ತು. ಕಾರ್ಯಂಗೊ ಯಶಸ್ವಿಯಪ್ಪಲೆ ಪಿಂಗಳಾ ನಾಡಿಯ ಕಾರ್ಯನಿರತೆ ಪೂರಕ. ಅಶ್ವಗಂಧ ಅಥವಾ ದೂರ್ವೆಯ ರಸಂದ ಈ ನಾಡಿ ಚುರುಕಾಗಿ ಕಾರ್ಯ ನಿರ್ವಹಿಸುತ್ತು. ಈ ವಿಧಾನ ಆಪಸ್ತಂಭ ಸೂತ್ರಲ್ಲಿ ರೂಢಿಲಿ ಇದ್ದು, ಭೋಧಾಯನ ಪ್ರಯೋಗಲ್ಲಿ ಇಲ್ಲೆ.

ಗರ್ಭಾಧಾನದ ಮತ್ತು ವಿವಾಹದ ಪ್ರಧಾನ ದೇವತೆ – ಪ್ರಜಾಪತಿ. ಅವನ ಉದ್ದೇಶಿಸಿಯೇ ವೈದಿಕ ಸಂಸ್ಕಾರ, ಪ್ರಾರ್ಥನೆ.

ಐದು ಜನ ಮುತ್ತೈದೆರು ಮದಿಮ್ಮಾಳಿನ ಸೆರಗಿಲಿ  ಅಕ್ಕಿ ಕಾಯಿ ಹಣ್ಣು ತಾಂಬೂಲ ವೀಳ್ಯ ಸೇರ್ಸಿ ಮಡಿಲು ತುಂಬುವದು. ಮದಿಮ್ಮಾಯ ಮಡಿಲು ಮುಟ್ಟಿ ಪ್ರಜಾಪತಿಯತ್ರೆ ಪ್ರಾರ್ಥಿಸುವದು. ಬಳಿಕ ಮದಿಮ್ಮಾಯನ ಕೈಲಿ ಆ ಎಲೆ ಅಡಕ್ಕೆ ತೆಂಗಿನಕಾಯಿ ಕೊಡುವುದು. ದೇವರಿಂಗೆ ಗುರು ಹಿರಿಯರಿಂಗೆ ನಮಸ್ಕರಿಸುವದು. ಸೂರ್ಯನು ತೇಜ ತತ್ವದ ಪ್ರತೀಕ. ಅಂತಹ ತೇಜಸ್ವಿ ಸಂತಾನವ ದಯಪಾಲುಸು ಹೇಳಿ ಬೇಡಿಗೊಂಬದು. ಇದುವೇ ಮಡಿಲು ತುಂಬುವದರ ಸಾಂಕೇತಿಕ. ಪತ್ನಿಯ ನಾಭಿಯ ಸ್ಪರ್ಶಿಸಿ ಪತಿ ‘ಉಪಸ್ಥಸ್ಪರ್ಶ…’ ಹೇಳಿ ಜಪಿಸುವದು. “ಗರ್ಭ ಧಾರಣೆಗಾಗಿ ಈ ಕ್ಷೇತ್ರ ಸಮರ್ಥವಾಗಿ,  ಸುಖಕರ ವೃದ್ಧಿಯಾಗಿ, ಹತ್ತು ಚಾಂದ್ರಮಾಸ  ತನಕ ಆರೋಗ್ಯವಾಗಿ ಪುಷ್ಟಿ ಗೊಂಡು ಪತನವಾಗದಂತೆ ಈಶ್ವರನು ಕೃಪೆ ಮಾಡಲಿ, ಪೃಥ್ವಿಯು ಅಗ್ನಿಯಿಂದ ಗರ್ಭವತಿ ಆದಂತೆ, ಯಾಹಿಯು ಇಂದ್ರನಿಂದ ಗರ್ಭವತಿಯಾದಂತೆ, ವಾಯುವು ದಿಕ್ಕುಗಳ ಗರ್ಭವಾಗಿರುವಂತೆ ನಾನು ನಿನಗೆ ಗರ್ಭಧಾರಣೆ ಮಾಡುತ್ತೇನೆ” ಹೇಳಿ ದೇವರ ನಂಬಿಗೊಂಡು ಪ್ರಾರ್ಥಿಸುವದು. ಬಳಿಕ   ಪತ್ನಿಯ ಹೃದಯ ಸ್ಪರ್ಶಿಸಿವುದು. ಹೃದಯ ಸ್ಪರ್ಶಿಸುವುದು ಸ್ನೇಹದ ಮತ್ತು ಪ್ರೇಮದ ಪ್ರತೀಕ.

ಕೊನೆಗೆ ಆಚಮನ. ಇಲ್ಲಿಗೆ ಈ ವಿಧಿ ಪೂರ್ಣ ಆತು.

ಅದಾ…. ಮನೆ ಯಜಮಾನ ಬ್ರಹ್ಮ ಸಭಾ ಸಮಸ್ತರು ಶ್ರೀ ಪಾದ ತೊಳದು ಮಡಿ ಹಚ್ಚಿಕ್ಕೊಳ್ಳೆಕ್ಕು ಹೇಳಿ ಎರಡು ಚೆಂಬು ನೀರು ತಂದು ಗುರುಕ್ಕಾರತ್ರೆ ವಿಜ್ನಾಪಿಸಿದ್ದು ಕಂಡತ್ತೋ. ಬನ್ನಿ., ಅಂತೆಯೇ ಮಾಡುವೋ. ಸುಧರಿಕಗೆ ನಿಂಗೊ ಇದ್ದೀರನ್ನೇ. ಹಂತಿಲಿ ಕಾಂಬೋ ಹೇಳಿದವದಾ ಬಟ್ಟಮಾವ.

ಇನ್ನು ಪುಂಸವನ (ಸಂತಾನ ಪ್ರಾಪ್ತಿ). ಎಲ್ಲ ಒಟ್ಟಿಂಗೆ ಒಂದೇ ದಿನಲ್ಲಿ ನಡೆಯ ನೋಡಿ. ಪ್ರಾಯೋಗಿಕವಾಗಿ ಎರಡು ತಿಂಗಳು ಕಾಯೇಡದೋ. ನಾವು ಬಪ್ಪ ವಾರದ ವರೇಂಗಾರೂ ಕಾಯ್ವೋ ಆಗದೋ ಏ.

|| ಹರೇ ರಾಮ ||

(ಮುಂದುವರಿತ್ತು)

ಈ ಹಿಂದಾಣ ವಾರದ್ದು : ಭಾಗ 02 : http://oppanna.com/lekhana/samskara-lekhana/samskara-prarambha

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ವಿಷಯ ಲಾಯ್ಕ ಆಯಿದು. ಭಟ್ರು ಹೇಳಿದ ಹನ್ಗೆ ಮಾಡಿಗೊನ್ಡು ಹೋಗಿ ಮಾತ್ರ ಅಬ್ಯಾಸ ಆಗಿ ಅರ್ಥ ಎನ್ಥ ಗೊನ್ಥಿಥಿಲ್ಲೆ. ನಿನ್ಗಳ ಲೇಖನ ಓದಿದ ಮೇಲೆ ಅರ್ಥ ಗೊನ್ಥಾತು. ವಿಶಯ ತಿಳಿಸಿ ಕೊಟ್ಟದ್ಡಕ್ಕ್ವೆ ಧನ್ಯವಾದ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯವಾದಂಗೊ ಅಕ್ಕಂಗೆ.

  [Reply]

  VN:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಸುಧರಿಕೆಲಿಯೂ ಇದ್ದೆಯೊ, ಹಂತಿಲಿಯೂ ಕೂರ್ತೆಯೋ…
  “ಚೆನ್ನೈವಾಣಿ” ಇನ್ನುದೇ ರೈಸಲಿ ಹೇಳಿಗೊಂಡು ಹಾರೈಸುತ್ತೆಯೊ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇಷ್ಟಿದ್ದರೆ ನವಗೆಂತ ಹೆದರಿಕೆ ಇನ್ನು. ನಿಂಗಳ ಧೈರ್ಯ ನಂಬಿ ಮುಂದುವರುಸೋದೆ. ಇದಾ ಎಡೇಲಿ ಅಂಬೇರಿಪ್ಪಿದ್ದು ಹೇಳಿ ಜಾರಿಕ್ಕೇಡಿ ಇನ್ನು.!

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶಬ್ದದ ಅರ್ಥ, ವೈದಿಕ ಕಾರ್ಯಕ್ರಮದ ವಿವರ, ಮಹ್ತತ್ವ ಎಲ್ಲವನ್ನೂ ತುಂಬಾ ಚೆಂದಕೆ ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ಕೊಟ್ಟದಕ್ಕೆ ಧನವಾದಂಗೊ
  “ಚೆನ್ನೈ ವಾಣಿ” ನಿರಂತರ ಮೊಳಗುತ್ತಾ ಇರಳಿ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗೊ ಎಲ್ಲೋರ ಪ್ರೋತ್ಸಾಹವೇ ನಮ್ಮ ಬಲ. ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಸಂಗ್ರಹಯೋಗ್ಯ, ಒಳ್ಳೆ ಮಾಹಿತಿ, ಧನ್ಯವಾದ ಚೆನ್ನೈ ಭಾವಂಗೆ..
  {ಮದಲಾಣ ನಾಲ್ಕು ಮತ್ತು ಹನ್ನೊಂದು , ಹದಿಮೂರು ಬಿಟ್ಟು ಉಳಿದ ಹತ್ತು ದಿನ ಸಂಸ್ಕಾರಕ್ಕೆ ಯೋಗ್ಯ ದಿನ} ಇವುಗಳಲ್ಲಿ ಯೇವೇವ ದಿನಕ್ಕೆ ಯೇವ ಗುಣಲಕ್ಷಣದ ಸಂತತಿ ಹುಟ್ಟುತ್ತು..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕುಮಾರಣ್ಣ ಧನ್ಯವಾದಂಗೊ. ಶುದ್ದಿಯ ಚೊಕ್ಕಲ್ಲಿ ಓದಿ ಒಪ್ಪ ಕೊಟ್ಟು ಪ್ರೋತ್ಸಾಹಿಸುವದು ಸಂತೋಷ ಆತು. ಅವಿರತ ಬೈಲಿಂಗೆ ಬಂದುಗೊಂಡಿರಿ. ನಿಂಗಳ ಒಪ್ಪವೂ ಬೇಕು , ಶುದ್ದಿಯೂ ಬೇಕು.
  ನಿಂಗೊ ಕೇಳಿದ ಲಕ್ಷಣದ ಬಗ್ಗೆ ಮಾಹಿತಿ ಎಲ್ಲೂ ಸಿಕ್ಕಿದ್ದಿಲ್ಲೆ ಎನಗೆ. ಸಿಕ್ಕಿರೆ ತಿಳಿಸೋಣ. ನಿಂಗಳ ಕೈಗೆ ಎಲ್ಯಾರು ಸಿಕ್ಕಿರೆ ಇಲ್ಲಿ ಬರದಿಕ್ಕಿ.

  [Reply]

  VN:F [1.9.22_1171]
  Rating: 0 (from 0 votes)
 5. ನೀರ್ಕಜೆ ಮಹೇಶ
  ಮಹೇಶ ನೀರ್ಕಜೆ

  ಒಳ್ಳೆಯ ಲೇಖನ. ಚೆನ್ನೈ ಭಾವಂಗೆ ಧನ್ಯವಾದ!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮಹೇಶಣ್ಣಂಗೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ದಿಂಡಿನ ಬಗ್ಗೆ ಸವಿವರವಾದ ಲೇಖನ, ಮಾಹಿತಿ ಕೊಟ್ಟಂತಹ ಲೇಖನ. ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ದೇವಸ್ಯ ಮಾಣಿಅನಿತಾ ನರೇಶ್, ಮಂಚಿಸಂಪಾದಕ°ಬಟ್ಟಮಾವ°ತೆಕ್ಕುಂಜ ಕುಮಾರ ಮಾವ°ಅಕ್ಷರದಣ್ಣವಸಂತರಾಜ್ ಹಳೆಮನೆವೇಣೂರಣ್ಣಪುಣಚ ಡಾಕ್ಟ್ರುವಿಜಯತ್ತೆಪಟಿಕಲ್ಲಪ್ಪಚ್ಚಿಅಕ್ಷರ°ನೀರ್ಕಜೆ ಮಹೇಶಪುತ್ತೂರುಬಾವವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣನೆಗೆಗಾರ°ಮಾಲಕ್ಕ°ಪವನಜಮಾವಬೊಳುಂಬು ಮಾವ°ಶ್ಯಾಮಣ್ಣಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ