ಗರುಡ ಪುರಾಣ – ಅಧ್ಯಾಯ 01 – ಭಾಗ 03

July 25, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸತ್ಸಂಗ ಬಯಸದ, ದೈವೀ ಸಂಪತ್ತಿಲ್ಲಿ ಆಸಕ್ತಿಯಿಲ್ಲದ್ದ, ದುಷ್ಟರ ಸಹವಾಸಲ್ಲಿಪ್ಪ, ಆಶಾಮೋಹಕಾಮಭೋಗಾಸಕ್ತಿಲಿ ಜೀವನ ನಡೆಶುವ ಜೀವಿ, ಪೂರ್ವಕೃತಕರ್ಮದ ಫಲವ ಅನುಭವಿಸ್ಯೊಂಡು ಇಪ್ಪ ಒಂದು ಹಂತಲ್ಲಿ ಯಾವುದೋ ಆಧಿವ್ಯಾಧಿ ರೋಗಕ್ಕೆ ಬಲಿಯಾಗಿ ಹಸೆ ಹಿಡುದು, ಯಮಪಾಶ ಅವನ ಮೇಲೆ ಬಿದ್ದು,  ವಿಲಪಿಸುವ ಬಂಧುಜನರ ನಡುಕೆ ತುಚ್ಛೀಕಾರ ದೃಷ್ಟಿಗೆ ತುತ್ತಾಗಿ, ವೇದನೆಂದ ನರಳಿಯೊಂಡು, ಬಾಯಿಲಿ ಜೊಲ್ಲು ಹರುಸಿ, ದೊಂಡೆಲಿ ಕಫಗಟ್ಟಿ, ಶ್ವಾಸೋಚ್ಛಾಸಕ್ಕೇ ಕಷ್ಟ ಪಟ್ಟುಗೊಂಡಿಪ್ಪಗ, ದಿವ್ಯದೃಷ್ಟಿ ಒಂದರಿ ಗೋಚರಿಸಿ, ಏಕಕಾಲಕ್ಕೆ ಇಹಪರ ಲೋಕವ ನೋಡಿ ಬೆರಗಾಗಿ, ಮಾತು ಬಾರದ್ದೆ,  ಅಕೇರಿಗೆ ಅಧೋದ್ವಾರಲ್ಲಿ ಪ್ರಾಣವಾಯು ಹೋವ್ತು, ಜೀವಿ ಆ ಶರೀರವ ಬಿಟ್ಟು ಹೆರ ಬತ್ತ° ಹೇದು ಕಳುದ ವಾರದ ಭಾಗಲ್ಲಿ ಓದಿದ್ದದು. ಮುಂದೆ-

 

ಗರುಡ ಪುರಾಣ – ಅಧ್ಯಾಯ 01  – ಭಾಗ 03

 

ಯಮದೂತೌ ತದಾ ಪ್ರಾಪ್ತೌ ಭೀಮೌ ಸರಭಸೇಕ್ಷಣೌ ।images6
ಪಾಶದಂಡಧರೌ ನಗ್ನೌ ದಂತೈಃ ಕತಕತಾಯತೌ ॥೩೦॥

ಅಂಬಗ ಭಯಂಕರ ಸ್ವರೂಪರಾದ ತೀಕ್ಷ್ಣವಾದ ಕಣ್ಣುಗಳಿಪ್ಪ, ಪಾಶ ಮತ್ತೆ ದಂಡವ ಧರಿಸಿಪ್ಪ ನಗ್ನರಾದ, ಹಲ್ಲುಗಳ ಕಟಕಟನೆ ಕಚ್ಚಿಗೊಂಡಿಪ್ಪ ಇಬ್ರು ಯಮದೂತರುಗೊ ಹತ್ರೆ ಬತ್ತವು.

ಊರ್ಧ್ವಕೇಶೌ ಕಾಕಕೃಷ್ಟೌ ವಕ್ರತುಂಡೌ ನಖಾಯುಧೌ ।
ಸ ದೃಷ್ಟ್ವಾ ತ್ರಸ್ತಹೃದಯಃ ಶಕೃನ್ಮೂತ್ರಂ ವಿಮುಂಚತಿ ॥೩೧॥

ಕೇಶವ ಮೇಗಂತಾಗಿ ನೆಗ್ಗಿ ಕಟ್ಟಿಗೊಂಡಿಪ್ಪ, ಕಾಕೆ ಕಪ್ಪು ಬಣ್ಣದವರಾದ, ವಕ್ರಮೋರೆಯ, ಉಗುರುಗಳನ್ನೇ ಆಯುಧವಾಗಿರಿಸಿಪ್ಪ ಯಮದೂತರ ನೋಡಿ ಅಂವ° ಹೃದಯಂದ ಹೆದರಿ ಮಲಮೂತ್ರ ವಿಸರ್ಜಿಸುತ್ತ°.

ಅಂಗುಷ್ಟಮಾತ್ರಃ ಪುರುಷೋ ಹಾಹಾಕುರ್ವನ್ಕಲೇವರಾತ್ ।
ತದೈವ ಗೃಹ್ಯತೇ ದೂತೈರ್ಯಾಮ್ಯೈ ಪಶ್ಯನ್ಸ್ವಕಂ ಗೃಹಮ್ ॥೩೨॥

ಹಾಹಾಕಾರ ಮಾಡುತ್ತಿಪ್ಪ, ಹೆಬ್ಬೆರಳಗಾತ್ರದ ಪುರುಷ°, ತನ್ನ ಸ್ಥೂಲದೇಹವ ನೋಡುತ್ತಿಪ್ಪಗಳೇ ಯಮದೂತರಿಂದ ಆ ದೇಹಂದ ಎಳೆಯಲ್ಪಡುತ್ತ°.

ಯಾತನಾದೇಹ ಆವೃತ್ಯ ಪಾಶೈರ್ಬದ್ಧ್ವಾ ಗಲೇಬಲಾತ್ ।
ನಯತೋ ದೀರ್ಘಮಧ್ವಾನಂ ದಂಡ್ಯಂ ರಾಜಭಟಾ ಯಥಾ ॥೩೩॥

ಯಾತನಾದೇಹಂದ ಒಡಗೂಡಿದ ಅವನ ಕೊರಳ ಪಾಶಂದ ಬಲವಾಗಿ ಬಂಧಿಸಿ, ರಾಜಭಟರುಗೊ ಅಪರಾಧಿಯ ಎಳಕ್ಕೊಂಡು ಹೋವ್ತಾಂಗೆ ಯಮದೂತರು ದೀರ್ಘವಾದ ಮಾರ್ಗಲ್ಲಿ ಎಳಕ್ಕೊಂಡು ಹೋವ್ತವು.

ತಸ್ಯೈವಂ ನೀಯಮಾನಸ್ಯ ದೂತಾಃ ಸತರ್ಜಯಂತಿ ಚ ।
ಪ್ರವದಂತಿ ಭಯಂ ತೀವ್ರಂ ನರಕಾಣಾಂ ಪುನಃ ಪುನಃ ॥೩೪॥

ಈ ರೀತಿ ಕರಕ್ಕೊಂಡು ಹೋಪಗ ಯಮದೂತರುಗೊ ಅವನ ಹೆದರುಸುತ್ತವು ಹಾಂಗೂ ಹೆದರಿಕೆಯಪ್ಪ ನರಕದ ವರ್ಣನೆಯ ಪುನಃ ಪುನಃ ಮಾಡುತ್ತವು.

ಶೀಘ್ರಂ ಪ್ರಚಲ ದುಷ್ಟಾತ್ಮಾನ್ಯಾಸ್ಯಸಿ ತ್ವಂ ಯಮಾಲಯಮ್ ।
ಕುಂಭೀಪಾಕಾದಿ ನರಕಾಂಸ್ತ್ವಾಂ ನಯಾವಾದ್ಯ ಮಾ ಚಿರಮ್ ॥೩೫॥

“ನೀನು ದುಷ್ಟ°, ಬೇಗ ನೆಡೆ, ಈಗ ನೀನು ಯಮನಾಲಯಕ್ಕೆ ಹೋವ್ತಾ ಇದ್ದೆ. ಕುಂಭೀಪಾಕ ಮೊದಲಾದ ನರಕಂಗೊಕ್ಕೆ ಈಗ ನಿನ್ನ ಕರಕ್ಕೊಂಡು ಹೋವ್ತೆಯೋ°. ತಡವು ಮಾಡೆಡ ಬೇಗ ನಡೆ”

ಏವಂ ವಾಚಸ್ತದಾ ಶೃಣ್ವನ್ಬಂಧೂನಾಂ ರುದಿತಂ ತಥಾ ।
ಉಚ್ಚೈರ್ಹಾಹೇತಿ ವಿಲಪಂಸ್ತಾಡ್ಯತೇ ಯಮಕಿಂಕರೈಃ ॥೩೬॥

ಈ ನಮೂನೆಯ ಮಾತುಗಳನ್ನೂ ಬಂಧುಗಳ ರೋದನವನ್ನೂ ಕೇಳಿಗೊಂಡು, ಗಟ್ಟಿ ಸ್ವರಲ್ಲಿ ಹಾಹಾಕಾರ ಮಾಡ್ಯೊಂಡು ಕೂಗ್ಯೋಂಡಿಪ್ಪಗ ಯಮಕಿಂಕರುಗಳಿಂದ ಜೆಪ್ಪಲ್ಪಡುತ್ತ°.

ತಯೋರ್ನಿರ್ಭಿನ್ನಹೃದಯಸ್ತರ್ಜನೈರ್ಜಾತವೇಪಥುಃ ।
ಪಥಿ ಶ್ವಭಿರ್ಭಕ್ಷ್ಯಮಾಣ ಆರ್ತೋsಘಂ ಸ್ವಮನುಸ್ಮರನ್ ॥೩೭॥

ಹೆದರಿಕೆಂದ ವಿಕೀರ್ಣ ಹೃದಯನಾಗಿ ಹೋಗ್ಯೊಂಡಿಪ್ಪಗ ಮಾರ್ಗಲ್ಲಿ ನಾಯಿಗಳಿಂದ ತಿನ್ನಲ್ಪಡುತ್ತ ಆರ್ತನಾಗಿ ತನ್ನ ಪಾಪಂಗಳ ಸ್ಮರಿಸಿಗೊಂಡು ಮುಂದೆ ಹೋವ್ತ°.

ಕ್ಷುತ್ತೃಟ್ ಪರೀತೋsರ್ಕದವಾನಲಾನಿಲೈಃ ಸಂತಪ್ಯಮಾನಃ ಪಥಿ ತಪ್ತವಾಲುಕೇ ।
ಕೃಚ್ಛ್ರೇಣ ಪೃಷ್ಠೇ ಕಶಯಾ ಚ ತಾಡಿತಶ್ಚಲತ್ಯಶಕ್ತೋsಪಿ ನಿರಾಶ್ರಮೋದಕೇ ॥೩೮॥

ಹಶು ಆಸರಂದ ಕಂಗಾಲಾಗಿ, ಸುಡುವ ಸೂರ್ಯ°, ಕಾಡ್ಗಿಚ್ಚು, ಬೆಶಿಗಾಳಿಂದ ಬೆಂದುಗೊಂಡು, ಬೆನ್ನಮೇಗೆ ಬೀಳುವ ಛಾಟಿಯೇಟುಗಳಿಂದ ಕಡುನೊಂದು, ನೀರು ನೆರಳಿಲ್ಲದೆ, ಕಾದ ಹೊಯಿಗೆ ಮಾರ್ಗಲ್ಲಿ ಅಂವ° ನಿತ್ರಾಣಿಯಾದರೂ ಪ್ರಯಾಸಂದ ನಡೆತ್ತ°.

ತತ್ರ ತತ್ರ ಪತನ್ ನಿಶ್ರಾಂತೋ ಮೂರ್ಛಿತಃ ಪುನರುತ್ಥಿತಃ ।
ಯಥಾ ಪಾಪೀಯಸಾ ನೀತಸ್ತಮಸಾ ಯಮಸಾದನಂ ॥೩೯॥

ಆಯಾಸಂದ ಅಲ್ಲಲ್ಲಿ ಮೂರ್ಛಿತನಾಗಿ ಬಿದ್ದುಗೊಂಡು ಕಷ್ಟಪಟ್ಟುಗೊಂಡು ಎದ್ದುಗೊಂಡು ನಡವ ಅವನ ಈ ರೀತಿಯಾಗಿ ಪಾಪಿಯಾದವನ ಕಸ್ತಲೆಯ ದಾರಿಲಿ ಯಮನ ಮನಗೆ ಕರೆದೊಯ್ಯಲಾವ್ತು°.

ತ್ರಿಭಿರ್ಮುಹೂರ್ತೈರ್ದ್ವಾಭ್ಯಾಂ ವಾ ನೀಯತೇ ತತ್ರ ಮಾನವಃ ।
ಪ್ರದರ್ಶಯಂತಿ ದೂತಾಸ್ತಾ ಘೋರಾ ನರಕಯಾತನಾಃ ॥೪೦॥

ಆ ಜೀವಿಯ (ಮನುಷ್ಯನ) ಎರಡು ವಾ ಮೂರು ಮುಹೂರ್ತಲ್ಲಿ (ಒಂದುವರೆ ಯಾ ಎರಡು ಕಾಲು ಗಂಟೆಲಿ) ಕರಕ್ಕೊಂಡು ಹೋವ್ತವು. ಅಲ್ಲಿ ಘೋರನರಕ ಯಾತನೆಯ ಅವಂಗೆ ಯಮದೂತರುಗೊ ತೋರುಸುತ್ತವು.   (1ಮುಹೂರ್ತ = 45 ನಿಮಿಷ)

ಮುಹೂರ್ತಮಾತ್ರಾತ್ತ್ವರಿತಂ ಯಮಂ ವೀಕ್ಷ್ಯಭಯಂ ಪುಮಾನ್ ।
ಯಮಾಜ್ಞಯಾ ಸಮಂ ದೂತೈಃ ಪುನರಾಯಾತಿ ಖೇಚರಃ ॥೪೧॥

ಕೇವಲ ಒಂದು ಮುಹೂರ್ತಲ್ಲಿ ಬೇಗಂದ ಯಮನನ್ನೂ, ಭಯಪ್ರದವಾದ ಯಾತನೆಯನ್ನೂ ನೋಡಿದ ಆ ಜೀವಿ (ಮನುಷ್ಯ) ಯಮನ ಆಜ್ಞಾನುಸಾರವಾಗಿ ದೂತರಿಂದೊಡಗೂಡಿ ಆಕಾಶಮಾರ್ಗಲ್ಲಿ ಹಿಂತುರುಗುತ್ತ°.

ಆಗಮ್ಯ ವಾಸನಾಬದ್ಧೋ ದೇಹಮಿಚ್ಛನ್ಯಮಾನುಗೈಃ ।
ಧೃತಃ ಪಾಶೇನ ರುದತಿ ಕ್ಷುತ್ತೃಡ್ಭ್ಯಾಂ ಪರಿಪೀಡಿತಃ ॥೪೨॥

ಬಂದಪ್ಪದ್ದೇ ತನ್ನ ಸ್ಥೂಲದೇಹವ ಆಶಿಸಿಗೊಂಡು ಆದರೆ ಯಮನ ಪಾಶಂದ ಹಿಂದೆಳೆಯಲ್ಪಟ್ಟು ಹಶು ಆಸರು ಪೀಡಿತನಾಗಿ ಕೂಗುತ್ತ°.

ಭುಂಕ್ತೇ ಪಿಂಡಂ ಸುತೈರ್ದತ್ತಂ ದಾನಂ ಚಾತುರಕಾಲಿಕಂ ।
ತಥಾಪಿ ನಾಸ್ತಿ ಕಸ್ತಾರ್ಕ್ಷ್ಯತೃಪ್ತಿಂ ಯಾತಿ ನ ಪಾತಕೀ ॥೪೩॥

ತನ್ನ ಮಕ್ಕಳಿಂದ ಕೊಡಲ್ಪಟ್ಟ ಪಿಂಡವನ್ನೂ, ದಾನವನ್ನೂ ತಿಂತ°. ಅಂದರೂ ನಾಸ್ತೀಕನಾದ ಆ ಪಾಪಿ ಅದರಿಂದ ತೃಪ್ತಿ ಹೊಂದುತ್ತನಿಲ್ಲೆ.

ಪಾಪಿನಾಂ ನೋಪತಿಷ್ಠಂತಿ ದಾನಂ ಶ್ರಾದ್ಧಂ ಜಲಾಂಜಲಿಃ ।
ಅತಃ ಕ್ಷುದ್ವ್ಯಾಕುಲಾ ಯಾಂತಿ ಪಿಂಡದಾನಭುಜೋsಪಿ ತೇ ॥೪೪॥

ಪಾಪಿಗೊಕ್ಕೆ ದಾನ, ಶ್ರಾದ್ಧ, ಜಲಾಂಜಲಿಗಳಿಂದ ತೃಪ್ತಿಯುಂಟಾವ್ತಿಲ್ಲೆ. ಹಾಂಗಾಗಿ ಪಿಂಡವ ಭುಂಜಿಸಿರೂ ಅವ್ವು ಹಶುವಿಂದ ವ್ಯಾಕುಲರಾಗಿರುತ್ತವು.

ಭವಂತಿ ಪ್ರೇತರೂಪಾಸ್ತೇ ಪಿಂಡದಾನ ವಿವರ್ಜಿತಾಃ ।
ಆಕಲ್ಪಂ ನಿರ್ಜನಾರಣ್ಯೇ ಭ್ರಮಂತಿ ಬಹುದುಃಖಿತಾಃ ॥೪೫॥

ಪಿಂಡದಾನವ ಪಡೆಯದ್ದೆ ಇಪ್ಪವ್ವು ಪ್ರೇತರೂಪವ ಹೊಂದಿ, ಒಂದು ಕಲ್ಪದವರೇಂಗೆ ನಿರ್ಜನವಾದ ಅರಣ್ಯಲ್ಲಿ ಬಹುದುಃಖಿತರಾಗಿ ಅಲೆದಾಡುತ್ತಿರುತ್ತವು.

ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ ।
ಅಭುಕ್ತ್ವಾ ಯಾತನಾಂ ಜಂತುರ್ಮಾನುಷ್ಯಂ ಲಭತೇ ನಹಿ ॥೪೬॥

ನೂರು ಕೋಟಿ ಕಲ್ಪಂಗಳಾದರೂ ಕರ್ಮಫಲವ ಅನುಭವುಸದ್ದೆ ಕ್ಷಯವಾವ್ತಿಲ್ಲೆ. ಯಾತನೆಯ ಅನುಭವುಸದ್ದೆ ಜೀವಿಗೆ ಮನುಷ್ಯ ಜನ್ಮವು ಲಭಿಸುತ್ತಿಲ್ಲೆ.

ಅತೋ ದದ್ಯಾತ್ಸುತಃ ಪಿಂಡಾನ್ ದಿನೇಷು ದಶಸು ದ್ವಿಜ ।
ಪ್ರತ್ಯಹಂ ತೇ ವಿಭಜ್ಯಂತೇ ಚತುರ್ಭಾಗೈಃ ಖಗೋತ್ತಮ ॥೪೭॥

ಹಾಂಗಾಗಿ, ಏ ‘ದ್ವಿಜ’ನಾದವನೇ!, ಪಕ್ಷಿಶ್ರೇಷ್ಠನೇ!, ಮಗನಾದಂವ° ಹತ್ತು ದಿನಂಗಳ ಪಿಂಡವ ಕೊಡೆಕು.  ಅವ್ವು ಪ್ರತಿದಿನವೂ ನಾಲ್ಕು ಭಾಗವಾಗಿ ವಿಭಜಿತವಾವ್ತು. (ಅಬ್ಬೆಯ ಹೊಟ್ಟೆಂದ ಒಂದರಿ, ಮೊಟ್ಟೆಂದ ಒಂದರಿ ಹೀಂಗೆ ಎರಡು ಸರ್ತಿ ಹುಟ್ಟುತ್ತರಿಂದ ಪಕ್ಷಿಗೊಕ್ಕೆ ‘ದ್ವಿಜ’ ಹೇಳಿ ಹೆಸರು)

ಭಾಗದ್ವಯಂ ತು ದೇಹಸ್ಯ ಪುಷ್ಟಿದಂ ಭೂತಪಂಚಕೇ ।
ತೃತೀಯಂ ಯಮದೂತಾನಾಂ ಚತುರ್ಥಂ ಸೋಪಜೀವತಿ ॥೪೮॥

(ಅದರಲ್ಲಿ) ಎರಡು ಭಾಗ ದೇಹದ ಪಂಚಭೂತಂಗಳ ಪುಷ್ಟಿದಾಯಕವಾವ್ತು. ಮೂರನೇದು ಯಮದೂತರಿಂಗೆ, ನಾಲ್ಕನೇದರಿಂದ ತಾನು ಜೀವಿಸುತ್ತ°.

ಅಹೋರಾತ್ರೈಶ್ಚ ನವಭಿ ಪ್ರೇತಃ ಪಿಂಡಮವಾಪ್ನುಯಾತ್ ।
ಜಂತುರ್ನಿಷ್ಟನ್ನ ದೇಹಶ್ಚ ದಶಮೇ ಬಲಮಾಪ್ನುಯಾತ್ ॥೪೯॥

ಒಂಬತ್ತು ದಿನ ಹಗಲು ಇರುಳು ಪ್ರೇತವು ಪಿಂಡವ ಪಡೆತ್ತು. ಹತ್ತನೇ ದಿನ ಪೂರ್ಣವಾದ ಅದರ ದೇಹಲ್ಲಿ ಬಲವುಂಟಾವ್ತು.

ದಗ್ಧೇ ದೇಹೇ ಪುನರ್ದೇಹಃ ಪಿಂಡೈರುತ್ಪದ್ಯತೇ ಖಗ ।
ಹಸ್ತಮಾತ್ರಃ ಪುಮಾನ್ಯೇನ ಪಥಿ ಭುಂಕ್ತೇ ಶುಭಾಶುಭಮ್ ॥೫೦॥

ಏ ಪಕ್ಷಿಯೇ!, ಹಿಂದಾಣ ದೇಹ ದಗ್ಧವಾದ ಮತ್ತೆ ಪುನಃ ಕೈಯಷ್ಟು ಗಾತ್ರದ ದೇಹವು ಪಿಂಡಂಗಳಿಂದ ಉಂಟಾವ್ತು. ಅದರ ಸಹಾಯಂದ ಮಾರ್ಗಲ್ಲಿ ಅಂವ ಶುಭಾಶುಭಂಗಳ ಅನುಭವುಸುತ್ತ°.

ಪ್ರಥಮೇsಹನಿ ಯಃ ಪಿಂಡಸ್ತೇನ ಮೂರ್ಧಾ ಪ್ರಜಾಯತೇ ।
ಗ್ರೀವಾಸ್ಕಂಧೌದ್ವಿತೀಯೇನ ತೃತೀಯಾದ್ಧೃದಯಂ ಭವೇತ್ ॥೫೧॥

ಸುರೂವಾಣ ದಿನ ಕೊಡಲ್ಪಟ್ಟ ಪಿಂಡಂದ ತಲೆ ಹುಟ್ಟುತ್ತು. ಎರಡ್ನೇ ದಿನದ್ದರಿಂದ ಕೊರಳು ಮತ್ತು ಭುಜವೂ, ಮೂರ್ನೇ ದಿನದ್ದರಿಂದ ಹೃದಯವು ಉಂಟಾವ್ತು.

ಚತುರ್ಥೇನ ಭವೇತ್ಪೃಷ್ಠಂ ಪಂಚಮಾನ್ನಾಭಿರೇವ ಚ ।
ಷಷ್ಠೇನ ಚ ಕಟೀ ಗುಹ್ಯಂ ಸಪ್ತಮಾತ್ಸಕ್ಥಿನೀ ಭವೇತ್ ॥ ೫೨॥

ನಾಲ್ಕನೇದರಿಂದ ಬೆನ್ನೂ, ಐದನೇದರಿಂದ ಹೊಕ್ಕುಳೂ ಉಂಟಾವ್ತು. ಆರನೇದರಿಂದ ಕಟಿಪ್ರದೇಶ ಮತ್ತೆ ಗುಪ್ತಾಂಗಂಗೊ, ಏಳನೇದರಿಂದ ತೊಡೆಯೂ ಉಂಟಾವ್ತು.

ಜಾನು ಪಾದೌ ತಥಾ ದ್ವಾಭ್ಯಾಂ ದಶಮೇsಹ್ನಿಕ್ಷುಧಾತೃಷಾ ॥೫೩॥

ಹಾಂಗೇ ಇನ್ನೆರಡು ದಿನಗಳ ಪಿಂಡಂದ ಮೊಣಕಾಲು ಮತ್ತೆ ಪಾದಂಗಳೂ ಹತ್ತನೇ ದಿನದ ಪಿಂಡಂದ ಹಶು ಆಸರವೂ ಉಂಟಾವ್ತು.

ಪಿಂಡಜಂ ದೇಹಮಾಶ್ರಿತ್ಯ ಕ್ಷುಧಾವಿಷ್ಟಸ್ತೃಷಾರ್ದಿತಃ ।
ಏಕಾದಶಂ ದ್ವಾದಶಂ ಚ ಪ್ರೇತೋ ಭುಂಕ್ತೇ ದಿನದ್ವಯಮ್ ॥

ಪಿಂಡಂಗಳಿಂದ ಉಂಟಾದ ಈ ದೇಹವ ಆಶ್ರಯಿಸಿ ಹಶುವಿಂದ ಕೂಡಿ, ಆಸರಂದ ಬಳಲಿ ಆ ಜೀವ ಹನ್ನೊಂದು ಮತ್ತೆ ಹನ್ನೆರಡ್ನೇ ದಿನಂಗಳಲ್ಲಿ ಉಣ್ತ°.

ತ್ರಯೋದಶೇsಹನಿ ಪ್ರೇತೋ ಯಂತ್ರಿತೋ ಯಮಕಿಂಕರೈಃ ।
ತಸ್ಮಿನ್ ಮಾರ್ಗೇ ವ್ರಜತ್ಯೇಕೋ ಗೃಹೀತ ಇವ ಮರ್ಕಟ ॥೫೫॥

ಹದಿಮೂರ್ನೇ ದಿನ ಜೀವ ಯಮಕಿಂಕರನ ಹಿಡಿತಲ್ಲಿ ಬಂಧಿಸಲ್ಪಟ್ಟು ಮಂಗನಾಂಗೆ ಆ ಮಾರ್ಗಲ್ಲಿ ತಾನೊಬ್ಬನೇ ಹೋವ್ತ°.

ಷಡಶೀತಿಸಹಸ್ರಾಣಿ ಯೋಜನಾನಾಂ ಪ್ರಮಾಣತಃ ।
ಯಮಮಾರ್ಗಸ್ಯ ವಿಸ್ತಾರೋ ವಿನಾ ವೈತರಿಣೀಂ ಖಗ ॥೫೬॥

ಎಲೈ ಪಕ್ಷಿಯೇ!, ವೈತರಿಣೀ ನದಿಯ ಬಿಟ್ಟು ಯಮಮಾರ್ಗದ ಪ್ರಮಾಣವು (ಅಳತೆ) 86000 ಯೋಜನ ದೂರ ಆಗಿದ್ದು.

(1 ಯೋಜನ = ಸುಮಾರು 8 – 9 ಮೈಲಪ್ಪಷ್ಟು ದೂರ. ನಿಖರವಾದ ಅಳತೆ ಯಾವ ದಾಖಲೆಲಿಯೂ ಉಲ್ಲೇಖ ಆಯ್ದಿಲ್ಲೆ )

ಅಹನ್ಯಹನಿ ವೈ ಪ್ರೇತೋ ಯೋಜನಾನಾಂ ಶತದ್ವಯಮ್ ।
ಚತ್ವಾರಿಂಶತ್ತಥಾ ಸಪ್ತ ದಿವಾರಾತ್ರೇಣ ಗಚ್ಛತಿ ॥೫೭॥

ಪ್ರತಿದಿನವೂ ಆ ಜೀವಿ ನಿಶ್ಚಯವಾಗಿಯೂ 247 ಯೋಜನಂಗಳಷ್ಟು ದೂರವ ಹಗಲಿರುಳು ನಡಕ್ಕೊಂಡು ಹೋವ್ತ°.

ಅತೀತ್ಯ ಕ್ರಮಶೋ ಮಾರ್ಗೇ ಪುರಾಣೀಮಾನಿ ಷೋಡಶ ।
ಪ್ರಯಾತಿ ಧರ್ಮರಾಜಸ್ಯ ಭವನಂ ಪಾತಕೀ ಜನಃ ॥೫೮॥

ಮಾರ್ಗಲ್ಲಿ ಕ್ರಮವಾಗಿ 16 ಊರುಗಳ ದಾಂಟಿ ಪಾಪಿ ಧರ್ಮರಾಜನ ಭವನಕ್ಕೆ ಹೋಗಿ ಸೇರುತ್ತ°.

ಸೌಮ್ಯಂ ಸೌರಿಪುರಂ ನಗೇಂದ್ರಭವನಂ ಗಂಧರ್ವ ಶೈಲಾಗಮೌ ।
ಕ್ರೌಂಚಂ ಕ್ರೂರಪುರಂ ವಿಚಿತ್ರಭವನಂ ಬಹ್ವಾಪದಂ ದುಃಖದಮ್ ॥
ನಾನಾಕ್ರಂದಪುರಂ ಸುತಪ್ತಭವನಂ ರೌದ್ರಂ ಪಯೋವರ್ಷಣಮ್ ।
ಶೀತಾಢ್ಯಂ ಬಹುಭೀತಿ ಧರ್ಮಭವನಂ ಯಾಮ್ಯಂಪುರಂ ಚಾಗ್ರತಃ ॥೫೯॥

ಸೌಮ್ಯ, ಸೌರಿಪುರ, ನಗೇಂದ್ರಭವನ, ಗಂಧರ್ವ, ಶಿಲಾಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ, ಬಹ್ವಾಪದ, ದುಃಖದ, ನಾನಾಕ್ರಂದಪುರ, ಸುತಪ್ತಭವನ, ರೌದ್ರ, ಪಯೋವರ್ಷಣ, ಶೀತಾಢ್ಯ, ಬಹುಭೀತಿ ಇವುಗೊ ಆದಮತ್ತೆ ಯಮನ ಊರಾದ ಧರ್ಮಭವನ ಇದ್ದು.

ಯಾಮ್ಯಪಾಶೈರ್ಧೃತಃ ಪಾಪೀ ಹಾಹೇತಿ ಪ್ರರುದನ್ಪಥಿ ।
ಸ್ವಗೃಹಂ ತು ಪರಿತ್ಯಜ್ಯ ಪುರಂ ಯಾಮ್ಯಮನುವ್ರಜೇತ್ ॥೬೦॥

ಯಮದೂತರ ಪಾಶಂದ ಬಂಧಿಸಲ್ಪಟ್ಟ ಪಾಪಿ ‘ಹಾಹಾ’ ಹೇದು ರೋದಿಸ್ಯೊಂಡು, ತನ್ನ ಮನೆಯ ಬಿಟ್ಟಿಕ್ಕಿ, ಯಮಪುರಿಯ ದಾರಿಲ್ಲಿ ಹೋವುತ್ತ°.

ಇತಿ ಶ್ರೀಗರುಡ ಪುರಾಣೇ ಸಾರೋದ್ಧಾರೇ ಪಾಪಿನಾ ಮೈಹಿಕಾಮುಷ್ಮಿಕದುಃಖನಿರೂಪಣಂ ನಾಮ ಪ್ರಥಮೋsಧ್ಯಾಯಃ ॥

ಇಲ್ಲಿಗೆ ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಇಹಪರ ದುಃಖಂಗಳ ನಿರೂಪಣೆ’ ಹೇಳ್ವ ಒಂದನೇ ಅಧ್ಯಾಯ ಮುಗುದತ್ತು.

 

ಗದ್ಯರೂಪಲ್ಲಿ –

 

ಪಾಪಿಯ ಅಧೋದ್ವಾರದ ಮೂಲಕ ಪ್ರಾಣವಾಯು ಹೆರಹೋಪಗ ಎರಡೂಕೈಗಳಲ್ಲಿ ಪಾಶ ಹಾಂಗೂ ದಂಡ ಧಾರಣೆ ಮಾಡಿದ, ನಗ, ಮಸವ ಹಲ್ಲುಗಳಿಂದ, ಕ್ರೋಧಪೂರ್ಣ ಕಣ್ಣುಗಳಿಪ್ಪ ಭಯಾನಕವಾಗಿ ಕಾಂಬ ಯಮನ ಇಬ್ರು ದೂತರು ಹತ್ರೆ ಬತ್ತವು. ಅವರ ಕೇಶ ಮೇಲ್ಮುಖವಾಗಿ ಎದ್ದು ನಿಂದೊಂಡಿರುತ್ತು, ಕಾಕಗಳಾಂಗೆ ಕಪ್ಪು ವರ್ಣದವರಾಗಿದ್ದು, ವಕ್ರಮುಖಂದ ಭಯಾನಕ ರೂಪ/ಆಕಾರವುಳ್ಳವುಳಾಗಿರುತ್ತವು. ಅವರ ಉಗುರುಗೊ ಆಯುಧಂಗಳ ಹಾಂಗೆ ಇರುತ್ತು. ಅದರ ನೋಡಿ ಮರಣಸನ್ನ ಜೀವಿ ಹೇಲುಚ್ಚು ಮಾಡ್ಳೆಸುರುಮಾಡುತ್ತ°. ಹಾಹಾಕಾರಂದ ಆರ್ಭಟಿಸಿ ಬಪ್ಪ ಅವರ ಕಂಡು ಅವರ ಹೆಬ್ಬೆರಳ ಗಾತ್ರಕ್ಕೆ ಸಮಾನನಾಗಿಪ್ಪ  ಕಂಡು ತನ್ನ ಸ್ಥೂಲ ದೇಹವ ಯಾತನೆಂದ ಆ ಜೀವಿ ನೋಡುತ್ತಿಪ್ಪಂತೆಯೇ ಯಮದೂತರಿಂದ ಅವನ ಕೊರಳಿಂಗೆ ಪಾಶವ ಬಿಗಿಯಲ್ಪಟ್ಟು ರಾಜಭಟರುಗೊ ಅಪರಾಧಿಗಳ ಎಳಕ್ಕೊಂಡು ಹೋವ್ತಾಂಗೆ ಆ ಜೀವಿ ಆ ಶರೀರಂದ ದೂರದ ಯಮನಾಲಯದ ಮಾರ್ಗಕ್ಕೆ ಎಳೆಯಲ್ಪಡುತ್ತ°. ಹೆದರಿ ಕಂಗಾಲಾಗಿಪ್ಪ ಅವನ ಈ ರೀತಿ ಬಲುಗಿ ಹೆದರಿಸಿ ಎಳಕ್ಕೊಂಡು ಹೋಪಗ ದಾರಿಲಿ ಯಮದೂತರು ಅವಂಗೆ ನರಕದ ಕಠಿಣ ಕಷ್ಟವ ಪುನಃ ಪುನಃ ಹೇಳುತ್ತವು.   

‘ಏಯ್ ದುಷ್ಟ! ಬೇಗ ನಡೆ, ನೀನು ಯಮಲೋಕಕ್ಕೆ ಹೋಗಿ ಎತ್ತೆಕು. ನಿನ್ನ ಬೇಗ ಕುಂಭೀಪಾಕಾದಿ ನರಕಕ್ಕೆ ಕರಕ್ಕೊಂಡು ಹೋಪಲಿದ್ದು. ತಡವು ಮಾಡೇಡ, ಬೇಗ ನಡೆ’ ಹೇಳಿ ಅವನ ಯಮದೂತರು ಬೈಯ್ಕೊಂಡು, ಛಾಟಿಲಿ ಬಡುಕ್ಕೊಂಡು ಎಳಕ್ಕೊಂಡು ಹೋವ್ತವು. ಒಂದೊಡೆಲಿ ಈ ಪ್ರಕಾರದ ಯಮದೂತರ ಗರ್ಜನೆಯ ಕೇಳಿಯೊಂಡು ಮತ್ತೊಂದೆಡೆಲಿ ತನ್ನ ಬಂಧುಗಳ ರೋದನವನ್ನೂ ಕೇಳಿಗೊಂಡು ಒಳ್ಳೆತ ಯಾತನೆಯ ಅನುಭವಿಸಿಯೊಂಡು ಪೀಡನೆಲಿ ಯಮದೂತರೊಟ್ಟಿಂಗೆ ಯಮಮಾರ್ಗಲ್ಲಿ ನಡಕ್ಕೊಂಡು ಹೋವ್ತ°. ಯಮಭಟರ ಛಾಟಿಯೇಟಿಂದ ಅವನ ಹೃದಯ ಛಿದ್ರ ಆವ್ತು. ದಾರಿಲ್ಲಿಪ್ಪ ನಾಯಿಗೊ ಅವನ ಮೇಲೆ ಹಾರಿ ಕಚ್ಚುತ್ತವು. ತನ್ನ ಪಾಪಂಗಳ ನೆಂಪುಮಾಡಿ ದುಃಖಿಸಿ ಪರಿತಪಿಸ್ಯೊಂಡು ಯಮದೂತರ ಬಲುಗಾಣದೊಟ್ಟಿಂಗೆ ನಡೆತ್ತ°. ಪೀಡಿತನಾದ ಈ ಜೀವಿ ಹಶು ಆಸರಂದ ಬಳಲಿ ಸುಡು ಬೆಶಿಲು, ಕಾಡ್ಗಿಚ್ಚು, ಬೆಶಿಗಾಳಿಲಿ ಬೆಂದವನಾಂಗಾಗಿ, ಬೀಳ್ವ ಪೆಟ್ಟಿಂದ ಬಸವಳಿದು, ಕೊದಿವ ಹೊಯಿಗೆ ಮಾರ್ಗಲ್ಲಿ ವಿಶ್ರಾಂತಿ ಇಲ್ಲದ್ದೆ ನಡದು, ನೀರಿಲ್ಲದ್ದೆ ಆಸರಾಗಿ ದಣುದು ತತ್ತರಿಸಿ, ಬಹು ಕಠಿಣತೆಂದ ಮುಂದೆ ಮುಂದೆ ಹೋವ್ತ°.  ಮಾರ್ಗಲ್ಲಿ ಅಲ್ಲಲ್ಲಿ ಮುಗ್ಗರಿಸಿ ಮೂರ್ಛಿತನಾಗಿ ಬಿದ್ದು ಎದ್ದು ನಡವ ಅವನ  ಅಂಧಕಾರಯುಕ್ತ ಯಮನಾಲಯಕ್ಕೆ ಕರೆದೊಯ್ಯಲಾವ್ತು.

ಎರಡು ಅಥವಾ ಮೂರು ಮುಹೂರ್ತದಷ್ಟು ಸಮಯಲ್ಲಿ ಆ ಜೀವಿಯ ಅಲ್ಲಿಗೆ ಕರೆದೊಯ್ಯಲಾವ್ತು. ಅಲ್ಲಿ ಅವಂಗೆ ಯಮದೂತರು ಘೋರ ನರಕಯಾತೆನೆಯ ತೋರುಸುತ್ತವು. ಮುಹೂರ್ತ ಮಾತ್ರಲ್ಲಿ ಯಮನನ್ನೂ ನರಕಯತೆನೆಯ ಭಯವನ್ನೂ ದೃಷ್ಟಿಸಿ ನೋಡಿಕ್ಕಿ, ಮತ್ತೆ ಯಮನಾಜ್ಞೆಯಂತೆ ಅವನ ಮತ್ತೆ ಯಮದೂತರೊಟ್ಟಿಂಗೆ ಈ ಲೋಕಕ್ಕೆ ಹಿಂತುರುಗುತ್ತ°. ಮನುಷ್ಯಲೋಕದ ಒಂದು ವಾಸನೆಂದ ಬದ್ಧನಾದ ಆ ಜೀವಿ ಇನ್ನೊಂದು ದೇಹವ ಆಶಿಸುವಾಗಲೇ ಯಮದೂತರಿಂದ ಹಿಂದಂಗೆ ಎಳೆಯಲ್ಪಡುತ್ತ°. ಹಶು ಆಸರಿಂದ ಬಳಲಿಪ್ಪ ಆ ಜೀವಿ ತನ್ನ ಮಕ್ಕಳಿಂದ ಕೊಡಲ್ಪಟ್ಟ ಪಿಂಡ, ದಾನಂಗಳ ತಿಂತನಾದರೂ ಅದರಿಂದ ತೃಪ್ತಿ ಹೊಂದುತ್ತನಿಲ್ಲೆ. ಪುತ್ರಾದಿಗಳಿಂದ ಪಾಪಿಗಳ ಉದ್ದೇಶಕ್ಕಾಗಿ ಮಾಡಿದ ಶ್ರಾದ್ಧ, ದಾನ, ತರ್ಪಣ ಜೀವಿಯ ಬಳಿ ಉಳಿತ್ತಿಲ್ಲೆ. ಹಾಂಗಾಗಿ ಪಿಂಡದಾನ ಮಾಡಿರೂ ಕೂಡ ಜೀವಿಯು ಹಶುವಿಂದ ವ್ಯಾಕುಲನಾಗಿ ಯಮಮಾರ್ಗಲ್ಲಿ ಹೋವುತ್ತ°. ಆರಿಂಗೆ ಪಿಂಡದಾನ ಆವುತ್ತಿಲ್ಯೋ ಅವ್ವು ಪ್ರೇತರೂಪದ ಧಾರಣೆ ಮಾಡಿ ಕಲ್ಪಪರ್ಯಂತ ನಿರ್ಜನ ವನಲ್ಲಿ ದುಃಖಿಗಳಾಗಿ ತಿರಿಗ್ಯೊಂಡಿರುತ್ತವು. ನೂರಾರು ಕೋಟಿ ಕಲ್ಪಂಗೊ ಸಂದುಹೋದರೂ ಕೂಡ ಅನುಭವುಸದ್ದೆ ಕರ್ಮಫಲಂಗೊ ನಾಶ ಆವ್ತಿಲ್ಲೆ, ಎಲ್ಲಿ ವರೇಂಗೆ ಆ ಜೀವಿಗೆ ಅದರ ಅನುಭವಿಸಿ ಮುಗಿತ್ತಿಲ್ಯೋ ಅಲ್ಲಿವರೇಂಗೆ ಆ ಜೀವಿಗೆ ಮನುಷ್ಯ ಶರೀರ ಪ್ರಾಪ್ತಿಯಾವುತ್ತಿಲ್ಲೆ. ಹಾಂಗಾಗಿ ಮಕ್ಕಳಾದವು ನಿಯಮಿತವಾಗಿ ಹತ್ತು ದಿನಂಗಳವರೇಂಗೆ ಪಿಂಡದಾನ ಮಾಡೆಕು. ಆ ಪಿಂಡ ಪ್ರತಿನಿತ್ಯ ನಾಲ್ಕು ಭಾಗಗಳಾಗಿ ವಿಂಗಡನೆ ಆವುತ್ತು. ಅದರಲ್ಲಿ ಎರಡು ಭಾಗ ಪ್ರೇತದೇಹದ ಪಂಚಭೂತಗಳ ಪುಷ್ಟಿಗಾಗಿ ಇರುತ್ತು. ಮೂರನೇ ಭಾಗ ಯಮದೂತರಿಂಗೆ ಹೋವ್ತು, ನಾಲ್ಕನೇ ಭಾಗಂದ ಆ ಜೀವಿಗೆ ಆಹಾರ ಪ್ರಾಪ್ತಿಯಾವ್ತು. ಒಂಬತ್ತು ದಿನ ಹಗಲು ಇರುಳು ಪಿಂಡಪ್ರಾಪ್ತಿಯಾಗಿ ಪ್ರೇತದ ಶರೀರ ನಿರ್ಮಾಣ ಆವ್ತು. ಹತ್ತನೇ ದಿನ ಅದರಲ್ಲಿ ಬಲಪ್ರಾಪ್ತಿಯಾವ್ತು. ಮೃಕ್ತಿವ್ಯಕ್ತಿಯ ದೇಹ ದಹನವಾದ ಮತ್ತೆ ಪಿಂಡದ ಮೂಲಕ ಪುನಃ ಒಂದು ಮೊಳ ಉದ್ದದ ಶರೀರ ಪ್ರಾಪ್ತಿಯಾವ್ತು. ಅದರ ಮೂಲಕ ಈ ಜೀವಿಯು ಯಮಲೋಕದ ದಾರಿಲಿ ಶುಭ ಮತ್ತೆ ಅಶುಭ ಕರ್ಮಂಗಳ ಫಲವ ಭೋಗಿಸುತ್ತ°.

ಸುರುವಾಣ ದಿನ ಕೊಟ್ಟ ಪಿಂಡಂದ ಜೀವಿಯ ತಲೆ ನಿರ್ಮಾಣ ಆವ್ತು. ಎರಡ್ನೇ ದಿನದ ಪಿಂಡಂದ ಕೊರಳು ಮತ್ತೆ ಹೆಗಲು ನಿರ್ಮಾಣ ಆವ್ತು, ಮೂರನೇ ದಿನದ ಪಿಂಡಂದ ಹೃದಯ ನಿರ್ಮಾಣ ಆವ್ತು, ನಾಲ್ಕನೇ ದಿನದ ಪಿಂಡಂದ ಬೆನ್ನು, ಐದನೇದರಿಂದ ನಾಭಿ, ಆರು ಮತ್ತೆ ಏಳನೇದರಿಂದ ಸೊಂಟ ಮತ್ತೆ ಗುಹ್ಯಾಂಗ, ಎಂಟನೇದರಿಂದ ತೊಡೆ ಮತ್ತೆ ಒಂಬತ್ತೇನದರಿಂದ ಕಾಲುಗೊ ಪಾದಂಗೊ ನಿರ್ಮಾಣ ಆವ್ತು. ಈ ಪ್ರಕಾರವಾಗಿ ಒಂಬತ್ತು ಪಿಂಡಂಗಳಿಂದ ಶರೀರ ಪ್ರಾಪ್ತಿಹೊಂದಿ ಚೈತನ್ಯವ ಪಡೆತ್ತು. ಹತ್ತನೇ ಪಿಂಡಂದ ಶರೀರದ ಹಶು ಆಸರ ಜಾಗೃತ ಆವ್ತು. ಈ ಪಿಂಡಜ ಶರೀರವ ಹೊಂದಿ ಹಶು ಆಸರು ಪೀಡಿತನಾಗಿ ಹನ್ನೊಂದು ಮತ್ತೆ ಹನ್ನೆರಡನೇ ದಿನ ಭೋಜನವ ಉಣ್ತ°. ಹದಿಮೂರನೇ ದಿನ ಯಮದೂತರಿಂದ ಮಂಗನಾಂಗೆ ಬಂಧನಕ್ಕೊಳಪ್ಪಟ್ಟು ಆ ಜೀವಿ ಏಕಾಂಗಿಯಾಗಿ ಆ ಯಮ ಮಾರ್ಗಲ್ಲಿ ಹೋವ್ತ°.

ಮಾರ್ಗಲ್ಲಿ ಎದುರು ಸಿಕ್ಕುವ ವೈತರಿಣೀ ನದಿಯ ಹೊರತುಪಡುಸಿ ಯಮಲೋಕದ ದೂರ 86000 ಯೋಜನಗಳಷ್ಟಿದ್ದು. ಆ ಪ್ರೇತ ಪ್ರತಿನಿತ್ಯ ಹಗಲು ಇರುಳು 247 ಯೋಜನದಷ್ಟು ದೂರ ನಡೆತ್ತು. ಮಾರ್ಗಲ್ಲಿ ಬಪ್ಪ ಸೌಮ್ಯ, ಸೌರಿಪುರ, ನಗೇಂದ್ರಭವನ, ಗಂಧರ್ವ, ಶಿಲಾಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ, ಬಹ್ವಾಪದ, ದುಃಖದ, ನಾನಾಕ್ರಂದಪುರ, ಸುತಪ್ತಭವನ, ರೌದ್ರ, ಪಯೋವರ್ಷಣ, ಶೀತಾಢ್ಯ, ಬಹುಭೀತಿ ಇವುಗೊ ಆದಮತ್ತೆ ಯಮನ ಊರಾದ ಧರ್ಮಭವನ ಇದ್ದು. ಯಮರಾಜನ ದೂತರ ಪಾಶಂದ ಬಂಧಿಸಲ್ಪಟ್ಟಾ ಪಾಪಿ ಜೀವಿ ಮಾರ್ಗಲ್ಲಿ ಹಾಹಾಕಾರ ಮಾಡಿಗೊಂಡು ರೋದಿಸ್ಯೊಂಡು ತನ್ನ ಮನೆಯ ಬಿಟ್ಟಿಕ್ಕಿ ಯಮಪುರಿಗೆ ಹೋವುತ್ತ°.

ಈ ರೀತಿಯಾಗಿ ಗರುಡಂಗೆ ಭಗವಂತ° ಶ್ರೀ ಮಹಾವಿಷ್ಣು ಹೇಳಿದಲ್ಯಂಗೆ – ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಇಹಪರ ದುಃಖಂಗಳ ನಿರೂಪಣೆ’ ಹೇಳ್ವ ಒಂದನೇ ಅಧ್ಯಾಯ ಮುಗುದತ್ತು.

 

[ಚಿಂತನೀಯಾ –

‘ಪ್ರಪಂಚ’ ಹೇಳ್ವದು ಭಗವಂತನ ಸೃಷ್ಟಿ. ಇಲ್ಲಿ ಜೀವಿಗೊ ಅವನಿಂದ ಕಳುಹಿಸಲ್ಪಟ್ಟದು ಅವನ ಲೀಲೆ. ಜೀವಿಗೊ ಈ ಪ್ರಪಂಚಲ್ಲಿ ಹುಟ್ಟಿ ‘ಧರ್ಮಾರ್ಥಕಾಮಮೋಕ್ಷ’ ಕರ್ಮವ / ಸಿದ್ಧಿಯ ಸಾಧಿಸಿ ಪುನಃ ಭಗವಂತನ ಹೋಗಿ ಸೇರೆಕು. ಹುಟ್ಟಿದ ಕೂಡ್ಳೆ ಮೋಕ್ಷಸಾಧನೆ ಅಲ್ಲ. ಧರ್ಮ ಅರ್ಥ ಕಾಮ ಮೋಕ್ಷ ಹೇಳಿ ಜೀವನದ ನಾಲ್ಕ ಹಂತ. ಇದರ ನಿಯಮಿತವಾಗಿ ಪರಿಶುದ್ಧವಾಗಿ ಭಗವದ್ಪ್ರಜ್ಞೆಂದ ಆಚೆರಿಸಿಗೊಂಡು ಹೋಯೆಕು. ಎಲ್ಲಿಯಾರು ರಜಾರು ತಪ್ಪು ಆತು ಹೇಳಿರೆ ಅದು ಭಗವಂತಂಗೇ ಮಾಡಿದ ಅಪಚಾರವಾವ್ತು. ಅಷ್ಟಪ್ಪಗ ಜೀವಿ ಅಪವಿತ್ರನಾವ್ತ°. ಪವಿತ್ರನಾಗದ್ದೆ ಮೋಕ್ಷ ಸಿದ್ಧಿ ಇಲ್ಲೆ. ಅಪವಿತ್ರನಪ್ಪದರಿಂದ ಪಾಪಾತ್ಮರಾವ್ತವು. ಪಾಪಿಗೊಕ್ಕೆ ಭಗವಂತನಲ್ಲಿ ಹೋಗಿ ಸೇರುವ ಅರ್ಹತೆ ಇಲ್ಲೆ. ತಾನು ಮಾಡಿದ ಪಾಪಕ್ಕೆ ಶಿಕ್ಷೆ ಅನುಭವುಸಲೇ ಬೇಕು. ಆ ನ್ಯಾಯಾನ್ಯಯವ ವಿಚಾರ್ಸುವದು ಯಮಧರ್ಮರಾಯನ ಜವಾಬ್ದಾರಿ. ಹಾಂಗಾಗಿ ಪಾಪಿಗೊ ಮರಣಾನಂತರ ಮದಾಲು ಯಮನಲ್ಲಿಗೇ ಹೋಪದು. ಅಲ್ಲಿ ಅಂವ ಮಾಡಿದ ಪ್ರತಿಯೊಂದು ಕರ್ಮವೂ ವಿಚಾರಣೆಗೆ ಒಳಪ್ಪಡುತ್ತು. ಪುಣ್ಯ ಕಾರ್ಯವು ಮನ್ನಣೆಯಾಗಿ ಪಾಪಕ್ಕೆ ಅಪರಾಧ ಅಲ್ಲಿ ವಿಧಿಸಲ್ಪಡುತ್ತು. 13ನೇ ದಿನಂದ ಜೀವಿ ಯಮಲೋಕಕ್ಕೆ ಪ್ರಯಾಣ ಸುರುಮಾಡುತ್ತ°, ದಿನವೊಂದಕ್ಕೆ ಹಗಲು ಇರುಳು ನಡದು ಸುಮಾರು 247 ಯೋಜನದಷ್ಟು ದೂರವ ಕ್ರಮಿಸುತ್ತ°. ದಾರೀಲಿ ಬಪ್ಪ ವೈತರಿಣಿ ಬಗ್ಗೆ ಆ ಸಂದರ್ಭಲ್ಲಿ ವಿವರ ನೋಡಿಗೊಂಬೊ°. ಇಲ್ಲಿಗೆ ಗರುಡಪುರಾಣ ಉತ್ತರಖಂಡ (‘ಸಾರೋದ್ಧಾರ’)ದ  ಒಂದನೇ ಅಧ್ಯಾಯ ಮುಗುದತ್ತು. ಹರೇ ರಾಮ.]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಗರುಡ ಪುರಾಣದ ಶ್ಲೋಕ ಮತ್ತೆ ಅರ್ಥವ ವಿವರವಾಗಿ ತಿಳಿಸಿ ಜೆನರ ಸನ್ಮಾರ್ಗದೆದಡೆಗೆ ಕೊಂಡೊಯ್ಯುವ ನಿಂಗಳ ಕಾರ್ಯ ವಿಜಯವಾಗಲಿ. ಹರೇ ರಾಮ.

  [Reply]

  VA:F [1.9.22_1171]
  Rating: +2 (from 2 votes)
 2. ಮಾನೀರ್ ಮಾಣಿ
  ಮಾನೀರ್ ಮಾಣಿ

  ಗರುಡಪುರಾಣವ ಓದಿಸುತ್ತಾ ಇಪ್ಪದಕ್ಕೆ ಧನ್ಯವಾದ ಭಾವಾ…

  [Reply]

  VN:F [1.9.22_1171]
  Rating: +1 (from 1 vote)
 3. ಶ್ಯಾಮಣ್ಣ
  ಶ್ಯಾಮಣ್ಣ

  ಏ ದೇವರೇ… ಹೀಂಗುದೇ ಒಂದು ಹೆದರ್ಸುದಾ?

  [Reply]

  VN:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪಾಪಿಗಳ ಯಾತನಾಮಯ ಪ್ರಯಾಣವ ತುಂಬಾ ಲಾಯಿಕಲಿ ವಿವರಿಸಿದ್ದವು.
  ಧರ್ಮ ಮಾರ್ಗಲ್ಲಿಯೇ ನೆಡೆಕಾದ್ದು ಎಂತಕೆ ಹೇಳಿ ಅರ್ಥೈಸಿಗೊಂಬಲೆ ಈ ಅಧ್ಯಾಯ ಪ್ರೇರೇಪಣೆ ಕೊಡ್ತು.

  [Reply]

  VA:F [1.9.22_1171]
  Rating: +1 (from 1 vote)
 5. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಯಬ್ಬಾ, ಕೂದಲ್ಲಿಗೇ ನರಕ ದರ್ಶನ ಆತದ. ಜೀವನವೇ ಒಂದು ನರಕ ಹೇಳಿ ಎಂತಕೆ ಹೇಳ್ತದು ಹೇಳಿ ಗೊಂತಾತು. ಪುಣ್ಯ ಕಾರ್ಯ ಎಂತಕೆ ಮಾಡೆಕು ಹೇಳಿ ತೋರುಸಿತ್ತು.

  [Reply]

  VA:F [1.9.22_1171]
  Rating: +1 (from 1 vote)
 6. ರಜಿತ್.ಎಂ

  ಹೊಸಗನ್ನಡದಲ್ಲಿ ಲೇಖನ ಇದ್ದಲ್ಲಿ, ಅರಿತುಕೊಳ್ಳಲು ಸಹಾಯವಾಗುತ್ತದೆ

  [Reply]

  VA:F [1.9.22_1171]
  Rating: 0 (from 0 votes)
 7. rathnamsjcc

  ವೈಕುಂಠ ಹೇಳಿರೆ ಯಾವುದಕ್ಕೂ ಕುಂಠಿತ ಇಲ್ಲದ್ದ, ಕೊರತೆ ಇಲ್ಲದ್ದ ಜಾಗೆ. ದೇಹ, ಮನಸ್ಸು, ಬುದ್ಧಿ, ಆನಂದ ಯಾವುದಕ್ಕೂ ಎಲ್ಲಿ ಕುಂಟಿಲ್ಲೆಯೋ ಅದೇ ವೈಕುಂಠ).(‘ಗುರು ಹೇಳ್ವ ಪದಕ್ಕೆ – ಗು = ಅಂಧಕಾರ, ರು = ತೇಜಸ್ಸು. ಅಜ್ಞಾನ ಹೇಳ್ವ ಅಂಧಕಾರವ ಜ್ಞಾನ ಹೇಳ್ವ ತೇಜಸ್ಸಿಂದ ಬೆಳಗಿಸಿ ಪ್ರಕಾಶಿಸುವದು

  ಗುರು ನಿತ್ಯಸಿದ್ಧ, ಬುದ್ಧ, ನಿರ್ಮಲ ಸ್ವರೂಪ ಇಪ್ಪಂವನಾಗಿರೆಕು. ಗು – ಗುಣಾತೀತ, ರು – ರೂಪಾತೀತ. ಅಂಥವರ ಗುರುಃ ಬ್ರಹ್ಮ ಗುರುಃ ವಿಷ್ಣು ಗುರುಃ ದೇವಃ ಮಹೇಶ್ವರಃ, ಗುರುಃ ಸಾಕ್ಷಾತ್ ಪರಂಬ್ರಹ್ಮ ., ಅಂತಹ ಗುರುವಿಂಗೆ ನಮಸ್ಕಾರ (ತಸ್ಮೈ ಶ್ರೀ ಗುರುವೇ ನಮಃ). ಈ ಗುಣಂಗೊ ಇಲ್ಲದ್ರೆ ಅದು ಬರೇ ಭಾರ ಹೇಳ್ವ ಅರ್ಥವ ಕೊಡುತ್ತು. ಅಂಥ ಗುರುವ ಸ್ತುತಿಸಿ ವಂದಿಸಿ ಎಂತ ಗುಣವೂ ಇಲ್ಲೆ. ಇದು ಮೇಲ್ಮೈ ನೇರ ಸರಳಾರ್ಥ. ಇದರ ಅಂತರಾರ್ಥ – ಬ್ರಹ್ಮನೇ ಗುರು, ವಿಷ್ಣುಮೂರ್ತಿಯೇ ಗುರು, ಮಹೇಶ್ವರನೇ ಗುರು, ಸಾಕ್ಷಾತ್ ಪರಬ್ರಹ್ಮನೇ ನಿನ್ನ ಗುರು ಹೇದು ತಿಳುದು ಮುಕ್ತನಾಗು. ವಿಷಯ ವಾಸನೆಗಳಲ್ಲಿ ಸಂಬಂಧ ಇಲ್ಲದ್ದ ಗುರು ಸಿಕ್ಕುವದು ಸುಲಭ ಅಲ್ಲದ್ದರಿಂದ ನಮ್ಮಲ್ಲಿ ಅಂತರ್ಯಾಮಿಯಾಗಿಪ್ಪ ಪರಮಾತ್ಮನನ್ನೇ ಗುರು ಹೇದು ಪ್ರಾರ್ಥಿಸಿರೆ ನವಗೆ ನಮ್ಮ ಹೃದಯಂದ ಆ ಪರಮಾತ್ಮ ಸದ್ಭೋದನೆ ನೀಡಿ ನಮ್ಮ ಮುಕ್ತನನ್ನಾಗಿ ಮಾಡುತ್ತ°. ನವಗೆ ಜ್ಞಾನ ಲಭಿಸುವದು ಗುರುವಿನ ಮೂಲಕ. ಗುರುವಿಂದ ವಿದ್ಯೆ (ಜ್ಞಾನ) ಸಿಕ್ಕೆಕ್ಕಾರೆ ನಾವು ಗುರುವಿಂಗೆ ಸಂಪೂರ್ಣವಾಗಿ ವಿನೀತರಾಗಿ ಶರಣಾಯೇಕ್ಕು. ಗುರು ಹೇಳಿರೆ ಭಗವಂತನ ಪ್ರತಿನಿಧಿ. ಗುರುವಿಂಗೆ ಶರಣಾಗತನಪ್ಪದು ಹೇಳಿರೆ ಆ ಭಗವಂತಂಗೇ ಶರಣಾಗತನಾದಾಂಗೇ. ಆರು ಭಗವಂತಂಗೆ ಅನನ್ಯ ಭಕ್ತಿ ವಿಶ್ವಾಸಂದ ಶರಣಾಗತನಾವ್ತನೋ ಅವನ ಯೋಗಕ್ಷೇಮವ ಆ ಭಗವಂತ° ನೋಡಿಗೊಳ್ತ°. ಅವನಲ್ಲಿ ಸದ್ಬುದ್ಧಿಯ ಪ್ರಚೋದಿಸಿ, ಸನ್ಮಾರ್ಗಲ್ಲಿ ನಿರತನಾಗಿ, ಸಿದ್ಧಿಯ ದಾರಿಲಿ ಮುನ್ನೆಡವಲೆ ಆ ಭಗವಂತ° ಅನುಕೂಲ ಮಾಡಿಕೊಡ್ತ°.)
  (ಶ್ರವಣಂ, ಕೀರ್ತನಂ, ವಿಷ್ಣೋಃ ಸ್ಮರಣಂ, ಪಾದಸೇವನಂ, ವಂದನಂ, ಅರ್ಚನಂ, ದಾಸ್ಯಂ, ಸ್ನೇಹಂ, ಆತ್ಮ ನಿವೇದನಂ ಇವು ಒಂಬತ್ತು ವಿಧಂಗೊ. ಇದರಲ್ಲಿ ಯಾವುದಾದರೊಂದರನ್ನಾರು ಸರಿಯಾಗಿ ಆಚರಿಸಿರೆ ಭಗವಂತಂಗೆ ಸಂಪೂರ್ಣ ಶರಣಾಗತನಾದಾಂಗೆ ಆವ್ತು,. ಭಗವಂತ° ಅವಂಗೆ ಒಲುದು ಅವಂಗೆ ಮಾರ್ಗದರ್ಶನವ ನೀಡಿ ಸಲಹುತ್ತ°. ಇದು ಭಗವಂತಂಗೆ ವಿನೀತನಪ್ಪ ಲಕ್ಷಣಂಗೊ).

  ಅಧ್ಯಾತ್ಮಸಾಧನೆಯಮೂಲಕನಿಜತತ್ತ್ವವನ್ನರಿಯಲುಮತ್ರ್ಯಲೋಕದ ಮಾನವಜನ್ಮಕ್ಕಿಂತ ಶ್ರೇಷ್ಠವಾದ ಜನ್ಮ ಯಾವುದೂ ಇಲ್ಲ. ಇಂಥ ದುರ್ಲಭವಾದ ಮತ್ತು ಪುಣ್ಯವಿಶೇಷದಿಂದ ಪ್ರಾಪ್ತವಾದ ನರಜನ್ಮವನ್ನು ಮದ್ಯ, ಮಾನಿನಿ ಮುಂತಾದ ವ್ಯಸನಗಳಿಗೆ ಬಲಿಯಾಗಿಸಿ ಕಸದ ತೊಟ್ಟಿಯಾಗಿಸದೇ ಪರಿಶುದ್ಧವಾಗಿಟ್ಟುಕೊಂಡು ನಿತ್ಯ ಸುಖಿಯಾಗಬೇಕೆಂಬುದೇ ‘ಜಂತೂನಾಂ ನರಜನ್ಮ ದುರ್ಲಭಂ’ ಎಂಬ ಮಾತಿನ ಮಥಿತಾರ್ಥವಾಗಿದೆ.

  ಇಂದ್ರಿಯಗಳನ್ನು ಶೋಷಣೆ ಮಾಡಲು ಆಚರಿಸುವ ವ್ರತಗಳು. ಇವುಗಳ ಆಚರಣೆಯಿಂದ ಅಶುದ್ಧಿ ನಾಶವಾಗಿ ಅಂತಃಕರಣವು ಶುದ್ಧವಾಗುತ್ತದೆ. ಮನುಷ್ಯ ಮತ್ತು ದೇವರ ಮಧ್ಯೆ ಇರುವ ಅಂತರವನ್ನು ಇದು ಕಮ್ಮಿ ಮಾಡುತ್ತದೆ’. ಆದರೂ ಒಟ್ಟಾರೆಯಾಗಿ ಸೂಫಿಗಳ ಅಭಿಮತವೆಂದರೆ `‘ಸಕಲ ಸೃಷ್ಟಿಕರ್ತನಾದ ಒಡೆಯನು ಒಡೆಯನೇ ಆಗಿರುತ್ತಾನೆ,
  ತನ್ನ ಮೂಲ ಸ್ವರೂಪಯದು ತೊಳೆದು, ಮನಸ್ಸನ್ನು ನಿರ್ಮಲವಾಗಿ ಇರಿಸಿಕೊಳ್ಳಬಹುದು. ಅಂಥ ನಿರ್ಮಲಾತ್ಮನೇ ಪರಮಾತ್ಮ.
  ಯಾವನು ಸದಾ ತನ್ನ ಮನಸ್ಸನ್ನು ಪರಿಶುದ್ಧವಾಗಿ ಇರಿಸಿಕೊಳ್ಳುವನೋ ಅವನೇ ಉತ್ತಮ ಜೀವನ ದೃಷ್ಟಿಯುಳ್ಳವನು. ಅವನು ಚಿನ್ನದಂತೆ. ಅನುತ್ತಮ ಸೂಕ್ತಿ ದೃಷ್ಟಿಯುಳ್ಳವನು ಕಬ್ಬಿಣದಂತೆ. ದುಷ್ಟ ಪರಿಸರವೆಂಬ ಕೆಸರಿನಲ್ಲಿ ಬಿದ್ದ ಚಿನ್ನ ಮಾತ್ರ ಚಿನ್ನವಾಗಿಯೇ ಉಳಿಯುತ್ತದೆ. ಆದರೆ, ದುಷ್ಟ ಪರಿಸರವೆಂಬ ಕೆಸರಿನಲ್ಲಿ ಬಿದ್ದ ಕಬ್ಬಿಣ ಮಾತ್ರ ತುಕ್ಕು ಹಿಡಿದು ನಾಶವಾಗುತ್ತದೆ

  ಸೂಕ್ತಿ ದೃಷ್ಟಿ ನಾನು ಸಮಸ್ತಲೋಕಕೆ ಮೂಲ ಜ್ಞಾನಿ
  ಈ ಪ್ರಪಂಚದ ಸೃಷ್ಟಿಯ ವಿಚಾರ ಬ್ರಹ್ಮನಿಂದ ಹೇಳಲ್ಪಟ್ಟಂತೆ ಇದರಲ್ಲಿ ವಿವರಿಸಲಾಗಿದೆ.ಸಕಲ ಲೋಕಗಳ ವಿಚಾರವಾಗಿ

  ಈ ಸೃಷ್ಟಿಸುಸ್ಥಿತಿಗೆ ಪರಮಜ್ಞಾನಿ ಹಾಗೂ ತ್ರಿಕಾಲದರ್ಶಿಯೂ ಆಗುತ್ತಾನೆ.

  ಜ್ಞಾನಿಗಳಲ್ಲಿ ನಾಲ್ಕು ವಿಧದವರನ್ನು ಗುರುತಿಸಿ ಶರಣ ಇವರೆಲ್ಲವರಿಗಿಂತ ಭಿನ್ನ ಎಂದು ಹೇಳಿದ್ದಾರೆ. ಆ ವಚನ ಇಂತಿದೆ. ‘ಅಲ್ಪ ಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮ ಜ್ಞಾನಿ ವೇಷಧಾರಿ, ಅತೀತ ಜ್ಞಾನಿ ಆರೂಢ, ಆರೂಢನಾದರೂ ಅರಿಯಬಾರದಯ್ಯ, ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಇಲ್ಲ ಗುಹೇಶ್ವರಾ ನಿಮ್ಮ ಶರಣ’. ಅಂದರೆ ಜ್ಞಾನಿಗಳಲ್ಲಿ ಅಲ್ಪ ಜ್ಞಾನಿ, ಮಧ್ಯಮ ಜ್ಞಾನಿ, ಅತೀತ ಜ್ಞಾನಿ, ಅಜ್ಞಾನಿ ಎಂದು ನಾಲ್ಕುವಿಧ. ಇವರನ್ನೇ ಜನಪದರು ಬೆಂದಿಲ್ಲದ ಕೊಡ, ಬರಿಗೊಡ, ಅರೆಗೊಡ, ತುಂಬಿದ ಕೊಡ ಎಂಬ ರೂಪಕದಲ್ಲಿ ಹೇಳಿದ್ದಾರೆ. ಬೆಂದಿಲ್ಲದಕೊಡ ಎಂದರೆ ಹಸಿಕೊಡ ಅದು ಬಳಸಲು ಯೋಗ್ಯವಲ್ಲದ್ದು, ಬರಿಗೊಡ ಬರೀ ಗಾಳಿಯ ಸಿಳ್ಳು, ಅರೆಗೊಡ ಲೊಡಲೊಡ ಶಬ್ಧಬುರುಗು, ತುಂಬಿದ ಕೊಡ ತುಳುಕುವುದಿಲ್ಲ.
  ತುಳುಕಿದರೂ ತುಂತುಂ ಅಂದಾದ ತುಂಬೀದ ಬಿಂದಿಗೆ. ಇದರಲ್ಲಿ ನಾದವಿದೆ, ಮಾಧುರ್ಯವಿದೆ. ಜ್ಞಾನಿಗಳಾದ ಬಳಿಕ ಪರಿಪೂರ್ಣ ಜಗತ್ತೆಂದರಿಯಬೇಕು. ಪಾಪ ವಾಸನೆ ತೊರೆದಿರಬೇಕು. ಅನ್ಯರ ನುಡಿಗೆ ಒಳಗಾಗದಿರಬೇಕು. ಮಾತುಕೊಟ್ಟು ತಪ್ಪಬಾರದು, ಜ್ಞಾನಿಗಳು ಇಂತಿಪ್ಪರು. ಮಹಾ ಜ್ಞಾನಿಗಳು ನೋಡಲೊಡನೆ ಕಾಣಬಹುದು. ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ. ಇದು ಶರಣರ ಪರಿ.

  ಜ್ಞಾನವಿಲ್ಲದ ಕ್ರೀಯ” ಮಾಡಿದಲ್ಲಿ ಫಲವೇನಯ್ಯ? ಆ ಜ್ಞಾನವು ಕ್ರೀಯನು ಸಂಬಂಧಿಸಲು ಸಂಬಂಧ ಸ್ವಯವಾಯಿತಯ್ಯ ಎಂದು ಹೇಳಿದ್ದಾರೆ. ಕ್ರಿಯೆ ಇಲ್ಲದ ಜ್ಞಾನ ಜ್ಞಾನವಿಲ್ಲದ ಕ್ರಿಯೆ ಎರಡೂ ವ್ಯರ್ಥ. ಏನು ಮಾಡುತ್ತಿದ್ದೇನೆ, ಏಕೆ ಮಾಡುತ್ತಿದ್ದೇನೆ ಎಂಬ ಪ್ರಜ್ಞೆಯ ಜೊತೆಗೆ ಹೇಗೆ ಮಾಡಬೇಕು ಎಂಬ ತಿಳುವಳಿಕೆ ಇದ್ದಾಗ ಅದು ಸಂಬಂಧ ಸ್ವಯಸ್ಥಿತಿ.

  ಅಲ್ಲಮ ಪ್ರಭುಗಳು ಜ್ಞಾನಿಗಳಲ್ಲಿ ನಾಲ್ಕು ವಿಧದವರನ್ನು ಗುರುತಿಸಿ ಶರಣ ಇವರೆಲ್ಲವರಿಗಿಂತ ಭಿನ್ನ ಎಂದು ಹೇಳಿದ್ದಾರೆ. ಆ ವಚನ ಇಂತಿದೆ. ಅಲ್ಪ ಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮ ಜ್ಞಾನಿ ವೇಷಧಾರಿ, ಅತೀತ ಜ್ಞಾನಿ ಆರೂಢ, ಆರೂಢನಾದರೂ ಅರಿಯಬಾರದಯ್ಯ, ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಇಲ್ಲ ಗುಹೇಶ್ವರಾ ನಿಮ್ಮ ಶರಣ. ಅಂದರೆ ಜ್ಞಾನಿಗಳಲ್ಲಿ ಅಲ್ಪ ಜ್ಞಾನಿ, ಮಧ್ಯಮ ಜ್ಞಾನಿ, ಅತೀತ ಜ್ಞಾನಿ, ಅಜ್ಞಾನಿ ಎಂದು ನಾಲ್ಕುವಿಧ. ಇವರನ್ನೇ ಜನಪದರು ಬೆಂದಿಲ್ಲದ ಕೊಡ, ಬರಿಗೊಡ, ಅರೆಗೊಡ, ತುಂಬಿದ ಕೊಡ ಎಂಬ ರೂಪಕದಲ್ಲಿ ಹೇಳಿದ್ದಾರೆ. ಬೆಂದಿಲ್ಲದಕೊಡ ಎಂದರೆ ಹಸಿಕೊಡ ಅದು ಬಳಸಲು ಯೋಗ್ಯವಲ್ಲದ್ದು, ಬರಿಗೊಡ ಬರೀ ಗಾಳಿಯ ಸಿಳ್ಳು, ಅರೆಗೊಡ ಲೊಡಲೊಡ ಶಬ್ಧಬುರುಗು, ತುಂಬಿದ ಕೊಡ ತುಳುಕುವುದಿಲ್ಲ.
  ತುಳುಕಿದರೂ ತುಂತುಂ ಅಂದಾದ ತುಂಬೀದ ಬಿಂದಿಗೆ. ಇದರಲ್ಲಿ ನಾದವಿದೆ, ಮಾಧುರ್ಯವಿದೆ. ಜ್ಞಾನಿಗಳಾದ ಬಳಿಕ ಪರಿಪೂರ್ಣ ಜಗತ್ತೆಂದರಿಯಬೇಕು. ಪಾಪ ವಾಸನೆ ತೊರೆದಿರಬೇಕು. ಅನ್ಯರ ನುಡಿಗೆ ಒಳಗಾಗದಿರಬೇಕು. ಮಾತುಕೊಟ್ಟು ತಪ್ಪಬಾರದು, ಜ್ಞಾನಿಗಳು ಇಂತಿಪ್ಪರು. ಮಹಾ ಜ್ಞಾನಿಗಳು ನೋಡಲೊಡನೆ ಕಾಣಬಹುದು. ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ. ಇದು ಶರಣರ ಪರಿ.

  ಇದರಿಂದ ಪರಿಸರ ಸಂರಕ್ಷಿತವಾಗುವುದು; ಜೊತೆಗೆ ಮನುಕುಲದಲ್ಲಿ ಅಹಿಂಸೆ ಪಾಲನೆಯಾಗಿ ಶಾಂತಿ ನೆಲಸುವುದು. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ – ಇವು ಐದು ಇಂದ್ರಿಯಗಳಾಗಿವೆ. ಇವುಗಳಿಗೆ ಅನುಕ್ರಮವಾಗಿ ರೂಪ, ಧ್ವನಿ, ಗಂಧ, ರಸ, ಸ್ಪರ್ಶ ವಿಷಯಗಳಾಗಿವೆ.
  ಇವುಗಳಿಂದ ಇಂದ್ರಿಯ ಸುಖವೂ ಜ್ಞಾನವೂ ದೊರೆಯುವುದು. ಇವು ಒಂದು ಮಿತಿಯವರೆಗೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅನಿವಾರ್ಯವಾಗಿವೆ. ಆದರೆ ಅತಿಯಾದರೆ ಅಮೃತವೂ ವಿಷವಾಗುವಂತೆ ಮಿತ್ರರಂತೆ ಹಿತರಾದ ಇಂದ್ರಿಯಗಳೇ ಅಹಿತಕಾರಿ ಶತ್ರುಗಳಾಗುತ್ತವೆ. ಆದ್ದರಿಂದ ವ್ಯಕ್ತಿಯು ಇಂದ್ರಿಯಗಳ ಗುಲಾಮನಾಗದೆ, ಯಜಮಾನನಾಗಬೇಕು. ಹೀಗೆ ಪಂಚೇಂದ್ರಿಯಗಳ ಬಗ್ಗೆ ಹತೋಟಿ ಹೊಂದುವುದೇ ಇಂದ್ರಿಯ ಸಂಯಮ.
  ಮನುಷ್ಯನು ಈ ಎರಡು ರೀತಿಯ ಸಂಯಮವನ್ನು ಸಾಧಿಸಿದಾಗಲೇ ಆತ ತನ್ನ ಪರಮ ಗಂತವ್ಯವಾದ ಮೋಕ್ಷವನ್ನು ತಲುಪಬಲ್ಲ. ಆ ಪರಮಗುರಿ ಲೌಕಿಕವೂ ಆಗಿರಬಹುದು. ಜೈನಗೃಹಸ್ಥನು ದಿನವೂ ಆಚರಿಸುವ ಷಟ್ಕರ್ಮದಲ್ಲಿ ಸಂಯಮವೂ ಸೇರಿದೆ. ಅಲ್ಲದೆ ಮುನಿಗಳು ವಿಶೇಷವಾಗಿ ಪರಿಭಾವಿಸುವ ಧರ್ಮದ ಹತ್ತು ಲಕ್ಷಣಗಳಲ್ಲಿ ಸಂಯಮಧರ್ಮವೂ ಒಂದಾಗಿದೆ.
  ಜೈನದರ್ಶನದ ಪ್ರಕಾರ ಈ ಸಂಯಮ ಪಾಲನೆಯು ನಾಕ-ನರಕ-ಪ್ರಾಣಿ ಗತಿಗಳಲ್ಲಿ ಸಾಧ್ಯವಿಲ್ಲ. ಆದರೆ ಅದನ್ನು ಪೂರ್ಣವಾಗಿ ಧಾರಣೆ ಮಾಡಲು ಯೋಗ್ಯವಾದ ಗತಿಯೆಂದರೆ ಮನುಷ್ಯ ಗತಿಯೇ ಆಗಿದೆ. ಆದ್ದರಿಂದಲೆ ಮನುಷ್ಯ ಜನ್ಮ ದೊಡ್ಡದು ಎನ್ನುತ್ತಾಸೂಕ್ಷ್ಮ ಜ್ಞಾನವನ್ನಿಟ್ಟುಕೊಂಡು ಶಾಶ್ವತವಾದ ಆತ್ಮನನ್ನು ಯಾರು ಅರಿಯುತ್ತಾರೋ ಅವರು ಬ್ರಹ್ಮಜ್ಞಾನಿಗಳೆಂದು ತಿಳಿಯಲಾಗಿದೆ.ಸೂಕ್ತಿ ಸ್ವರೂಪವನ್ನು ತಿಳಿಯಬಹುದು.

  ಆತ್ಮನನ್ನು ಯಾರು ತನ್ನ ಸ್ವಂತ ಅನುಭವದಿಂದ

  ಮನಸ್ಸು ಪರಿಶುದ್ಧವಾಗಿ ಭಗವಂತನನ್ನು ಬಯಸುವುದು ಸಾಧ್ಯವಾಗುತ್ತದೆ ಎಂದು. ಜ್ಞಾನ ಬಂದರೆ ನಮ್ಮೊಳಗಿನ ಕೊಳೆ ತೊಳೆದು ಹೋಗಿ ಮನಸ್ಸು ನಿರ್ಮಲವಾಗುತ್ತದೆ. ನಮ್ಮ ಅತಿ ದೊಡ್ಡ ಸಂಪತ್ತು ಎಂದರೆ ಪ್ರಸನ್ನವಾದ ಸ್ವಚ್ಛ ಮನಸ್ಸು. ಅಂತಹ ಮನಸ್ಸಿನಲ್ಲಿ ಭಗವಂತ ಕಾಣಿಸಿಕೊಳ್ಳುತ್ತಾನೆ. ಅಹಂಕಾರ-ಅಸೂಯೆ ಇಲ್ಲದ ಮನಸ್ಸು ವಸುದೇವ ಹಾಗು ಇಂತಹ ಮನಸ್ಸಿಗೆ ಕಾಣುವ ಭಗವಂತ ವಾಸುದೇವ. ಶುದ್ಧ ಮನಸ್ಸಿನಿಂದ ಜ್ಞಾನ, ಇದರಿಂದ ಅಭಯ ಮತ್ತು ಆನಂದ. ಆನಂದಮಯವಾದ ಈ ಸ್ಥಿತಿಯಿಂದ ಪಾಂಚಬೌತಿಕ ಶರೀರದಿಂದ ಮತ್ತು ಸಂಸಾರದಿಂದ ಬಿಡುಗಡೆ ಮತ್ತುಮೋಕ್ಷ.
  ಜ್ಞಾನಾನಂದಮಯವಾದ ಆತ್ಮಸ್ವರೂಪವಿದೆ. ಲಿಂಗಶರೀರ, ಸೂಕ್ಷ್ಮಶರೀರ ಮತ್ತು ಸ್ಥೂಲಶರೀರ ಇವು ಆತ್ಮವನ್ನು ಆವರಿಸಿರುವ ಆವರಣಗಳು. ನಾವು ಈ ಮೂರೂ ಅಂಗಿಗಳನ್ನು ಕಳಚಿ, ಅಶುಭದಿಂದ ಬಿಡುಗಡೆಹೊಂದಿ, ಸ್ವರೂಪಭೂತವಾದ ನೈಜ ಸ್ಥಿತಿಯಲ್ಲಿ ಭಗವಂತನ ಮುಂದೆ ನಿಲ್ಲುವುದನ್ನುಇಲ್ಲಿ ಎಂದು ಸಂಕ್ಷಿಪ್ತವಾಗಿ ಹೇಳಿದ್ದಾನೆ.[ನಾವು ದೇವಸ್ಥಾನದಲ್ಲಿ ದೇವರ ಮುಂದೆ ಅಂಗಿ ತೆಗೆಯುವುದು ಭಗವಂತನ ಮುಂದೆ ಹಾಕಿಕೊಂಡಿರುವ ಎಲ್ಲ ಆವರಣವನ್ನು ತೆಗೆದು ದೇವರ ಮುಂದೆ ಬತ್ತಲಾಗುವುದು ಎನ್ನುವ ಮುಖ್ಯಾರ್ಥವನ್ನು ಹೊಂದಿದೆ. ನಾವು ಭಗವಂತನ ಮುಂದೆ ಹಾಕಿಕೊಂಡ ಎಲ್ಲ ಮುಚ್ಚಳಗಳನ್ನು ಬಿಚ್ಚಿ ಆತನ ಮುಂದೆ ತೆರೆದುಕೊಳ್ಳಬೇಕು. ಆಗ ಆತ ನಮಗೆ ತೆರೆದುಕೊಳ್ಳುತ್ತಾನೆ.] ಹೀಗೆ ಯಾವ ರೀತಿ ಪಾಂಚಬೌತಿಕ ಶರೀರದಿಂದ ಬಿಡುಗಡೆ ಮತ್ತು ಮೋಕ್ಷ ಎನ್ನುವ ಜ್ಞಾನ-ವಿಜ್ಞಾನವನ್ನು ಭಗವಂತ ಸಮಷ್ಠಿಯಾಗಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಮಾಷ್ಟ್ರುಮಾವ°ವಸಂತರಾಜ್ ಹಳೆಮನೆಶುದ್ದಿಕ್ಕಾರ°ಬೊಳುಂಬು ಮಾವ°ವಿದ್ವಾನಣ್ಣvreddhiಶೀಲಾಲಕ್ಷ್ಮೀ ಕಾಸರಗೋಡುಮುಳಿಯ ಭಾವಶಾ...ರೀಪುತ್ತೂರುಬಾವಸುವರ್ಣಿನೀ ಕೊಣಲೆತೆಕ್ಕುಂಜ ಕುಮಾರ ಮಾವ°ಡೈಮಂಡು ಭಾವದೊಡ್ಡಭಾವಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಡಾಗುಟ್ರಕ್ಕ°ಬಂಡಾಡಿ ಅಜ್ಜಿಪೆರ್ಲದಣ್ಣಕೊಳಚ್ಚಿಪ್ಪು ಬಾವಶಾಂತತ್ತೆಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ