ಗರುಡ ಪುರಾಣ – ಅಧ್ಯಾಯ 13 – ಭಾಗ 01

December 19, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರ ವೃಷೋತ್ಸರ್ಗ ಹಾಂಗೂ ಹನ್ನೆರಡನೇ ಅಧ್ಯಾಯಲ್ಲಿ ಹನ್ನೊಂದನೇ ದಿನ ಮಾಡೇಕ್ಕಪ್ಪ ಕಾರ್ಯಂಗಳ ಬಗ್ಗೆ ಓದಿದ್ದದು. ಮುಂದೆ –

 

ಗರುಡ ಪುರಾಣಮ್                                           ಗರುಡ ಪುರಾಣ

ಅಥ ತ್ರಯೋದಶೋsಧ್ಯಾಯಃ                                 ಅಧ್ಯಾಯ 13

ಸಪಿಂಡನಾದಿಸರ್ವಕರ್ಮನಿರೂಪಣಮ್                         ಸಪಿಂಡನ ಮುಂತಾದ ಎಲ್ಲ ಕರ್ಮಂಗಳ ನಿರೂಪಣೆ

 

ಗರುಡ ಉವಾಚ
ಸಪಿಂಡನವಿಧಿಂ ಬ್ರೂಹಿ ಸೂತಕಸ್ಯ ಚ ನಿರ್ಣಯಮ್ ।
ಶಯ್ಯಾಪದಾನಾಂ ಸಾಮಾಗ್ರೀಂ ತೇಷಾಂ ಚ ಮಹಿಮಾ ಪ್ರಭೋ ॥೦೧॥images

ಗರುಡ° ಹೇಳಿದ° – ಹೇ ಪ್ರಭೋ!, ಸಪಿಂಡನ (ಸಪಿಂಡಿಕರಣ) ವಿಧಿಯ ಮತ್ತು ಸೂತಕದ ನಿರ್ಣಯ ವಿಚಾರವನ್ನೂ, ಹಾಂಗೇ ಶಯ್ಯೆ ಮತ್ತೆ ಪದಂಗಳ ಸಾಮಾಗ್ರಿಗಳನ್ನೂ (ಪದದಾನ ಸಾಮಾಗ್ರಿಗಳನ್ನೂ), ಅವುಗಳ ಮಹಿಮೆಯನ್ನೂ ಎನಗೆ ಹೇಳು.

ಶ್ರೀ ಭಗವಾನುವಾಚ
ಶ್ರುಣು ತಾರ್ಕ್ಷ್ಯ ಪ್ರವಕ್ಷ್ಯಾಮಿ ಸಾಪಿಂಡ್ಯಾದ್ಯಖಿಲಾಂ ಕ್ರಿಯಾಮ್ ।
ಪ್ರೇತನಾಮ ಪರಿತ್ಯಜ್ಯ ಯಯಾ ಪಿತೃಗಣೇ ವಿಶೇತ್ ॥೦೨॥

ಭಗವಂತ° ಹೇಳಿದ° – ಹೇ ಗರುಡ!, ಸಪಿಂಡನ ವಿಧಿ ಮುಂತಾದ ಎಲ್ಲಾ ಕ್ರಿಯೆಗಳ ವಿವರುಸುತ್ತೆ ಕೇಳು. ಅದರಿಂದ ಜೀವಿ ಪ್ರೇತ ಹೇಳ್ವ ಹೆಸರ ಬಿಟ್ಟಿಕ್ಕಿ ಪಿತೃಗಣವ ಪ್ರವೇಶಿಸುತ್ತ°.

ನ ಪಿಂಡೋ ಮಿಲಿತೋ ಯೇಷಾಂ ಪಿತಾಮಹಶಿವಾದಿಷು ।
ನೋಪತಿಷ್ಠಂತಿ ದಾನಾನಿ ಪುತ್ರೈರ್ದತ್ತಾನ್ಯನೇಕಧಾ ॥೦೩॥

ಆರ ಪಿಂಡವು ರುದ್ರಸ್ವರೂಪನಾದ ಪಿತಾಮಹ° ಇತ್ಯಾದಿಗಳ ಪಿಂಡಂಗಳೊಟ್ಟಿಂಗೆ ಬೆರೆಸಲ್ಪಟ್ಟಿದಿಲ್ಲೆಯೋ, ಅವ್ವು ಮಗನಿಂದ ಕೊಡಲ್ಪಟ್ಟ ಅನೇಕ ರೀತಿಯ ದಾನಂಗಳನ್ನೂ ಪಡೆತ್ತವಿಲ್ಲೆ.

ಅಶುದ್ಧಃ ಸ್ಯಾತ್ಸದಾ ಪುತ್ರೋ ನ ಶುಧ್ಯತಿ ಕದಾಚನ ।
ಸೂತಕಂ ನ ನಿವರ್ತೇತ ಸಪಿಂಡೀಕರಣಂ ವಿನಾ ॥೦೪॥

ಮಗ ಏವತ್ತೂ ಅಶುದ್ಧನಾಗಿಯೇ ಇರುತ್ತ°. ಎಂದಿಂಗೂ ಶುದ್ಧನಾವುತ್ತನಿಲ್ಲೆ. ಎಂತಕೆ ಹೇಳಿರೆ ಸಪಿಂಡೀಕರಣ ಮಾಡದ್ದೆ ಸೂತಕವು ಹೋವುತ್ತಿಲ್ಲೆ.

ತಸ್ಮಾತ್ಪುತ್ರೇಣ ಕರ್ತವ್ಯಂ ಸೂತಕಾಂತೇ ಸಪಿಂಡನಮ್ ।
ಸೂತಕಾಂತಂ ಪ್ರವಕ್ಷ್ಯಾಮಿ ಸರ್ವೇಷಾಂ ಚ ಯಥೋಚಿತಮ್ ॥೦೫॥

ಹಾಂಗಾಗಿ ಸೂತಕದ ಅಂತ್ಯಲ್ಲಿ ಮಗ ಸಪಿಂಡನವ ಮಾಡೆಕು. ಎಲ್ಲೋರಿಂಗೂ ಯಥೋಚಿತವಾಗಿ ಸೂತಕ ಮುಗಿವದರ ನಿನಗೆ ಹೇಳುತ್ತೆ.

ಬ್ರಾಹ್ಮಣಸ್ತು ದಶಾಹೇನ ಕ್ಷತ್ರಿಯೋ ದ್ವಾದಶೇsಹನಿ ।
ವೈಶ್ಯಃ ಪಂಚದಶಾಹೇನ ಶೂದ್ರೋ ಮಾಸೇನ ಶುಧ್ಯತಿ ॥೦೬॥

ಬ್ರಾಹ್ಮಣ° ಹತ್ತು ದಿನಂಗಳಲ್ಲಿ, ಕ್ಷತ್ರಿಯ° ಹನ್ನೆರಡು ದಿನಂಗಳಲ್ಲಿ, ವೈಶ್ಯ° ಹದಿನೈದು ದಿನಂಗಳಲ್ಲಿ, ಶೂದ್ರ° ಒಂದು ತಿಂಗಳಿಲ್ಲಿ ಶುದ್ಧನಾವುತ್ತ°.

ದಶಾಹೇನ ಸಪಿಂಡಾಸ್ತು ಶುಧ್ಯಂತಿ ಪ್ರೇತಸೂತಕೇ ।
ತ್ರಿರಾತ್ರೇಣ ಸಕುಲ್ಯಾಸ್ತು ಸ್ನಾತ್ವಾ ಶುಧ್ಯಂತಿ ಗೋತ್ರಜಾಃ ॥೦೭॥

ಸಪಿಂಡಕರು ಹತ್ತು ದಿನಂಗಳಲ್ಲಿ ಪ್ರೇತಸೂತಕಂದ ಶುದ್ಧರಾವುತ್ತವು. ಕುಲದೋರು ಮೂರು ಇರುಳಾಣದ್ದರ್ಲಿ, ಸಗೋತ್ರದವ್ವು ಬರೇ ಒಂದು ಮೀಯಾಣಂದ ಶುದ್ಧರಾವುತ್ತವು.

ಚತುರ್ಥೇ ದಶರಾತ್ರಂ ಸ್ಯಾಕ್ಷಣ್-ನಿಶಾಃ ಪುಂಸಿ ಪಂಚಮೇ ।
ಷಷ್ಥೇ ಚತುರಃ ಪ್ರೋಕ್ತಂ ಸಪ್ತಮೇ ಚ ದಿನತ್ರಯಮ್ ॥೦೮॥

ನಾಲ್ಕನೇ ಪೀಳಿಗೆಯೋರಲ್ಲಿ ಹತ್ತು ಇರುಳುಗೊ, ಐದನೇ ಪೀಳಿಗೆಯೋರಲ್ಲಿ ಆರು ಇರುಳುಗೊ, ಆರನೇಯೋರಲ್ಲಿ ನಾಲ್ಕು ಇರುಳುಗೊ, ಏಳನೇಯೋರಲ್ಲಿ ಮೂರು ದಿನಂಗೊ

ಅಷ್ಟಮೇ ದಿನಮೇಕಂ ತು ನವಮೇ ಪ್ರಹರದ್ವಯಮ್ ।
ದಶಮೇ ಸ್ನಾನಮಾತ್ರಂ ಹಿ ಮೃತಕಂ ಜನ್ಮಸೂತಕಂ ॥೦೯॥

ಎಂಟನೇ ಪೀಳಿಗೆಯೋರಲ್ಲಿ ಒಂದು ದಿನ, ಒಂಬತ್ತನೇಯೋರಲ್ಲಿ ಎರಡು ಪ್ರಹರ (ಎಂಟು ಗಂಟೆ), ಹತ್ತನೇಯೋರಲ್ಲಿ ಬರೇ ಮೀಯಾಣ ಮಾತ್ರಂದ ಮೃತ ಮತ್ತು ಜನನ ಸೂತಕವು ಶುದ್ಧವಾವ್ತು.

ದೇಶಾಂತರಗತಃ ಕಶ್ಚಿಚ್ಛ್ರುಣುಯಾದ್ಯೋ ಹ್ಯಹರ್ನಿಶಮ್ ।
ಯಚ್ಛೇಷಂ ದಶರಾತ್ರಸ್ಯ ತಾವದೇವಾಶುಚಿರ್ಭವೇತ್ ॥೧೦॥

ಆರಾರು ದೇಶಾಂತರ ಹೋಗಿ ಅಲ್ಲಿ ಮರಣಹೊಂದಿರೆ ಆ ಸುದ್ದಿಯ ಹತ್ತು ಇರುಳಾಣ ಒಳ ಕೇಳಿರೆ, ಆ ಹತ್ತು ಇರುಳಿಲ್ಲಿ ಇನ್ನು ಉಳುದ ಇರುಳುಗೊ ಮಾತ್ರ ಅಶೌಚ.

ಅತಿಕ್ರಾಂತೇ ದಶಾಹೇ ತು ತ್ರಿರಾತ್ರಮಶುಚಿರ್ಭವೇತ್ ।
ಸಂವತ್ಸರೇ ವ್ಯತೀತೇತು ಸ್ನಾನಮಾತ್ರಾದ್ವಿಶುಧ್ಯತಿ ॥೧೧॥

(ಮೃತನಾಗಿ) ಹತ್ತು ದಿನಂಗೊ ಮೀರಿದ್ದರೆ, ಮೂರು ಇರುಳುವರೆಂಗೆ ಅಶೌಚ ಇರುತ್ತು. ಒಂದು ವರ್ಷ ಕಳುದು ಹೋಗಿದ್ದರೆ ಕೇವಲ ಮೀಯಾಣಂದ ಶುದ್ಧಿಯಾವ್ತು.

ಆದ್ಯಭಾಗದ್ವಯಂ ಯಾವನ್ಮೃತಕಸ್ಯ ಚ ಸೂತಕೇ ।
ದ್ವಿತೀಯ ಪತಿತೇ ಚಾದ್ಯಾತ್ಸೂತಕಾಚ್ಛುದ್ಧಿರಿಷ್ಯತೇ ॥೧೨॥

ಯಾವ ಮೃತಸೂತಕದ ಮದಲಾಣ ಎರಡು ಭಾಗದೊಟ್ಟಿಂಗೆ ಎರಡ್ನೇ ಸೂತಕ ಬಂದರೆ, ಅಂಬಗ ಸುರುವಾಣ ಸೂತಕದದೊಟ್ಟಿಂಗೆಯೇ ಎರಡ್ನೇದೂ ಮುಗುದು ಶುದ್ಧವಾವ್ತು.

ಆದಂತಜನನಾತ್ಸದ್ಯ ಅಚೌಲಾನ್ನೈಶಿಕೀ ಸ್ಮೃತಾ ।
ತ್ರಿರಾತ್ರಮಾವ್ರತಾದೇಶಾದ್ದಶರಾತ್ರಮತಃ ಪರಮ್ ॥೧೩॥

ಬಾಲಕನ ಹಲ್ಲು ಹುಟ್ಟುವವರೆಂಗೆ ಮೃತನಾದರೆ ತಕ್ಷಣ ಮೀಯಾಣ ಮಾತ್ರಂದ, ಚೌಲದವರೆಂಗೆ ಒಂದು ಇರುಳು, ಯಜ್ಞೋಪವೀತ ಧಾರಣೆವರೆಂಗೆ ಮೂರು ಇರುಳು ಮತ್ತೆ ಅದರ ಮತ್ತೆ ಹತ್ತು ಇರುಳುಗೊ ಸೂತಕ ಅಶುಚಿಯಾಗಿರುತ್ತು.

ಆಜನ್ಮನಸ್ತು ಚೌಲಾಂತಂ ಯತ್ರ ಕನ್ಯಾ ವಿಪದ್ಯತೇ ।
ಸದ್ಯಃಶೌಚಂ ಭವೇತ್ತತ್ರ ಸರ್ವವರ್ಣೇಷು ನಿತ್ಯಶಃ ॥೧೪॥

ಹುಟ್ಟಿಂದ ಚೌಲದವರೆಂಗೆ ಕೂಸಿನ ಮರಣ ಹೊಂದಿರೆ ಕೇವಲ ಮೀಯಾಣ ಮಾತ್ರಂದ ಎಲ್ಲ ವರ್ಣದೋರಿಂಗೂ ಶುದ್ಧವಾವುತ್ತು.

ತತೋ ವಾಗ್ದಾನಪರ್ಯಂತಂ ಯಾವದೇಕಾಹಮೇವಹಿ ।
ಅತಃಪರಂ ಪ್ರವೃದ್ಧಾನಾಂ ತ್ರಿರಾತ್ರಮಿತಿ ನಿಶ್ಚಯಃ ॥೧೫॥

ಮತ್ತೆ ನಿಶ್ಚಿತಾರ್ಥದವರೆಂಗೆ ಒಂದೇ ದಿನ ಸೂತಕ ಇರುತ್ತು. ಅದರ ಮತ್ತೆ ಪ್ರಾಯಕ್ಕೆ ಬಂದದಾದರೆ ಮೂರು ಇರುಳಾಣವರೆಂಗೆ ಸೂತಕ ಇರುತ್ತು ಹೇಳ್ವದು ನಿಶ್ಚಯ.

ವಾಗ್ಪ್ರದಾನೇ ಕೃತೇ ತ್ವತ್ರಜ್ಞೇಯಂ ಚೋಭಯತಸ್ತ್ರ್ಯಹಮ್ ।
ಪಿತುರ್ವರಸ್ಯ ಚ ತತೋ ದತ್ತಾನಾಂ ಭರ್ತುರೇವ ಹಿ ॥೧೬॥

ವಾಗ್ದಾನ ಮಾಡಿದ ಮತ್ತೆ ಅಪ್ಪನ ಮತ್ತೆ ಗೆಂಡನ ಎರಡೂ ಕಡೆಯೋರಿಂಗೂ ಮೂರು ದಿನಾಣ ಸೂತಕ ಇರುತ್ತು ಹೇದು ತಿಳಿಯೆಕು. ಕನ್ಯಾದಾನ ಆದ ಮತ್ತೆ ಮೃತ ಆದರೆ ಬರೇ ಗೆಂಡನ ಕುಲದೋರಿಂಗೆ ಮಾತ್ರ ಸೂತಕ ಇಪ್ಪದು.

ಷಣ್ಮಾಸಾಭ್ಯಂತರೇ ಯಾವದ್ಗರ್ಭಸ್ರಾವೋ ಭವೇದ್ಯದಿ ।
ತದಾ ಮಾಸಸಮೈಸ್ತಾಸಾಂ ದಿವಸೈ ಶುದ್ಧಿರಿಷ್ಯತೇ ॥೧೭॥

ಒಂದುವೇಳೆ ಆರು ತಿಂಗಳೊಳ ಗರ್ಭಸ್ರಾವ ಆದರೆ, ಅಂಬಗ ಎಷ್ಟು ತಿಂಗಳು ಆಯ್ದೋ ಅಷ್ಟು ದಿನಾಣ ಸೂತಕಂದ ಮತ್ತೆ ಶುದ್ಧ ಆವುತ್ತು.

ಅತ ಊರ್ಧ್ವಂ ಸ್ವಜಾತ್ಯುಕ್ತಮಾಶೌಚಂ ತಾಸು ವಿದ್ಯತೇ ।
ಸದ್ಯಃಶೌಚಂ ಸಪಿಂಡಾನಾಂ ಗರ್ಭಸ್ಯ ಪತನೇ ಸತಿ ॥೧೮॥

ಇದರಮತ್ತೆ ಗರ್ಭಸ್ರಾವ ಆದರೆ ತನ್ನ ಜಾತಿಲಿ ಹೇಳಿದ ರೀತಿಲಿ ಅಬ್ಬಗೆ ಅಶೌಚ ಇರುತ್ತು. ಸಪಿಂಡರು ಸ್ನಾನಮಾತ್ರಂದ ಶುಚಿಯಾವುತ್ತವು.

ಸರ್ವೇಷಾಮೇವ ವರ್ಣಾನಾಂ ಸೂತಕೇ ಮೃತಕೇsಪಿ ವಾ ।
ದಶಾಹಾಚ್ಛುದ್ಧಿರಿತ್ಯೇಷ ಕಲೌ ಶಾಸ್ತ್ರಸ್ಯ ನಿಶ್ಚಯಃ ॥೧೯॥

ಎಲ್ಲ ವರ್ಣಂಗಳಲ್ಲಿಯೂ ಮರಣ ಅಥವಾ ಜನನಲ್ಲಿ ಹತ್ತುದಿನಾಣದ್ದರ್ಲಿ ಶುದ್ಧ ಆವುತ್ತು ಹೇದು ಕಲಿಯುಗಲ್ಲಿ ಶಾಸ್ತ್ರನಿರ್ಣಯ ಆಗಿದ್ದು.

ಆಶೀರ್ವಾದಂ ದೇವಪೂಜಾಂ ಪ್ರತ್ಯುತ್ಥಾನಾಭಿವಂದನಮ್ ।
ಪರ್ಯಂಕೇ ಶಯನಂ ಸ್ಪರ್ಶಂ ನ ಕುರ್ಯಾನ್ಮೃತಸೂತಕೇ ॥೨೦॥

ಆಶೀರ್ವಾದ, ದೇವಪೂಜೆ, ಸ್ವಾಗತಕ್ಕಾಗಿ ಎದ್ದು ನಿಂಬದು, ನಮಸ್ಕಾರ, ಹಾಸಿಗೆಲಿ ಮನುಗುವದು, ಸ್ಪರ್ಶ ಇವುಗಳ ಸೂತಕಲ್ಲಿ ಮಾಡ್ಳಾಗ.

ಸಂಧ್ಯಾ ದಾನಂ ಜಪಂ ಹೋಮಂ ಸ್ವಾಧ್ಯಾಯಂ ಪಿತೃತರ್ಪಣಮ್ ।
ಬ್ರಹ್ಮಭೋಜ್ಯಂ ವ್ರತಂ ನೈವ ಕರ್ತವ್ಯಂ ಮೃತಸೂತಕೇ ॥೨೧॥

ಸಂಧ್ಯಾವಂದನೆ, ದಾನ, ಜಪ, ಹೋಮ, ವೇದಪಾಠ(ವೇದಪಾಠ), ಪಿತೃತರ್ಪಣ, ಬ್ರಾಹ್ಮಣ ಭೋಜನ, ವ್ರತ ಇವುಗಳ ಮೃತಸೂತಕಲ್ಲಿ ಮಾಡ್ಳಾಗ.

ನಿತ್ಯಂ ನೈಮಿತ್ತಿಕಂ ಕಾಮ್ಯಂ ಸೂತಕೇ ಯಃ ಸಮಾಚರೇತ್ ।
ತಸ್ಯ ಪೂರ್ವಕೃತಂ ನಿತ್ಯಾದಿಕಂ ಕರ್ಮ ವಿನಶ್ಯತಿ ॥೨೨॥

ಯಾವಾತ° ಮೃತಸೂತಕಲ್ಲಿ ನಿತ್ಯ, ನೈಮಿತ್ತಿಕ ಮತ್ತೆ ಕಾಮ್ಯಕರ್ಮಂಗಳ ಆಚರುಸುತ್ತನೋ, ಅವ° ಹಿಂದೆ ಮಾಡಿದ ನಿತ್ಯ, ನೈಮಿತ್ತಿಕಾದಿ ಕರ್ಮಂಗಳೆಲ್ಲವೂ ನಾಶವಾವ್ತು.

ವ್ರತಿನೋ ಮಂತ್ರಪೂತಸ್ಯ ಸಾಗ್ನಿಕಸ್ಯ ದ್ವಿಜಸ್ಯ ಚ ।
ಬ್ರಹ್ಮನಿಷ್ಠಸ್ಯ ಯತಿನೋ ನಹಿ ರಾಜ್ಞಾಂ ಚ ಸೂತಕಮ್ ॥೨೩॥

ವ್ರತನಿಷ್ಠಂಗೆ, ಮಂತ್ರಂದ ಪವಿತ್ರನಾದವಂಗೆ, ಅಗ್ನಿಹೋತ್ರಿ ಬ್ರಾಹ್ಮಣಂಗೆ, ಬ್ರಹ್ಮನಿಷ್ಠಂಗೆ, ಸಂನ್ಯಾಸಿಗೆ ಮತ್ತೆ ರಾಜಂಗೆ ಸೂತಕ ಇಲ್ಲೆ.

ವಿವಾಹೋತ್ಸವಯಜ್ಞೇಷು ಜಾತೇ ಚ ಮೃತಸೂತಕೇ ।
ತಸ್ಯ ಪೂರ್ವಕೃತಂ ಚಾನ್ನಂ ಭೋಜ್ಯಂ ತನ್ಮನುರಬ್ರವೀತ್ ॥೨೪॥

ವಿವಾಹ, ಉತ್ಸವ, ಯಜ್ಞಂಗಳಲ್ಲಿ ಜನನ ಹಾಂಗೂ ಮೃತಸೂತಕ ಉಂಟಾದರೆ ಅದಕ್ಕೆ ಮದಲೆ ಮಾಡಿದ ಅನ್ನವ ಉಂಬಲಕ್ಕು.  ಇದರ ಮನು ಹೇಳಿದ್ದ° (ಹೀಂಗೇದು ಮನು ಹೇಳಿದ್ದ°).

ಸೂತಕೇ ಯಸ್ತು ಗೃಹ್ಣಾತಿ ತದಜ್ಞಾ ನಾನ್ನ ದೋಷಭಾಕ್ ।
ದಾತಾ ದೋಷಮವಾಪ್ನೋತಿ ಯಾಚಕಾಯ ದದನ್ನಪಿ ॥೨೫॥

ಯಾವಾತ° ಅರಡಿಯದ್ದೆ ಸೂತಕಲ್ಲಿ ಅನ್ನವ ತೆಕ್ಕೊಳ್ಳುತ್ತನೋ ಅವ ದೋಷಭಾಗಿಯಾವುತ್ತನಿಲ್ಲೆ. ಆದರೆ ಸೂತಕಲ್ಲಿ ಯಾಚಕರಿಂಗೆ ಕೊಡುವ ದಾನಿ ದೋಷಭಾಗಿಯಾವುತ್ತ°.

ಪ್ರಚ್ಛಾದ್ಯ ಸೂತಕಂ ಯಸ್ತು ದದಾತ್ಯನ್ನಂ ದ್ವಿಜಾಯ ಚ ।
ಜ್ಞಾತ್ವಾ ಗೃಹ್ಣಂತಿ ಯೇ ವಿಪ್ರಾ ದೋಷಭಾಜಸ್ತ ಏವ ಹಿ ॥೨೬॥

ಯಾವಾತ° ಸೂತಕವ ಹುಗ್ಗುಸಿ ಬ್ರಾಹ್ಮಣಂಗೆ ಅನ್ನವ ಕೊಡುತ್ತನೋ ಮತ್ತೆ ಯಾವ ಬ್ರಾಹ್ಮಣ ಸೂತಕವ ತಿಳುದೂ ಅನ್ನವ ಸ್ವೀಕರುಸುತ್ತನೋ ಅವಿಬ್ರೂ ದೋಷಭಾಗಿಗೊ ಆವುತ್ತವು.

ತಸ್ಮಾತ್ಸೂತಕಶುದ್ಧ್ಯರ್ಥಂ ಪಿತುಃ ಕುರ್ಯಾತ್ಸಪಿಂಡನಮ್ ।
ತತಃ ಪಿತೃಗಣೈಃ ಸಾರ್ಧಂ ಪಿತೃಲೋಕಂ ಸ ಗಚ್ಛತಿ ॥೨೭॥

ಹಾಂಗಾಗಿ ಸೂತಕ ಶುದ್ಧಕ್ಕಾಗಿ ಅಪ್ಪಂಗೆ ಸಪಿಂಡನವ ಮಾಡೆಕು. ಅದರಿಂದ ಅವ° ಪಿತೃಗಣಂಗಳ ಸೇರ್ಲೆ ಪಿತೃಲೋಕಕ್ಕೆ ಹೋವುತ್ತ°.

ದ್ವಾದಶಾಹೇ ತ್ರಿಪಕ್ಷೇ ವಾ ಷಣ್ಮಾಸೇ ವತ್ಸರೇsಪಿ ವಾ ।
ಸಪಿಂಡೀಕರಣಂ ಪ್ರೋಕ್ತಂ ಮುನಿಭಿಸ್ತತ್ತ್ವದರ್ಶಿಭಿಃ ॥೨೮॥

ಹನ್ನೆರಡ್ನೇ ದಿನ, ಮೂರ್ನೇ ಪಕ್ಷಲ್ಲಿ, ಆರನೇ ತಿಂಗಳ್ಳಿ ಅಥವಾ ವರ್ಷಾಂತಲ್ಲಿ ಸಪಿಂಡೀಕರಣವ ಮಾಡೆಕು ಹೇದು ತತ್ತ್ವದರ್ಶಿಗಳಾದ ಮುನಿಗೊ ಹೇಳಿದ್ದವು.

ಮಯಾ ತು ಪ್ರೋಚ್ಯತೇ ತಾರ್ಕ್ಷ್ಯ ಶಾಸ್ತ್ರಧರ್ಮಾನುಸಾರತಃ ।
ಚತುರ್ಣಾಮೇವ ವರ್ಣಾನಾಂ ದ್ವಾದಶಾಹೇ ಸಪಿಂಡನಮ್ ॥೨೯॥

ಹೇ ಗರುಡ, ಆದರೆ, ಶಾಸ್ತ್ರಧರ್ಮಾನುಸಾರವಾಗಿ ನಾಲ್ಕೂ ವರ್ಣದೋರಿಂಗೆ ಹನ್ನೆರಡ್ನೇ ದಿನ ಸಪಿಂಡೀಕರಣವ ಮಾಡೆಕು ಹೇದು ಎನ್ನಿಂದ ಹೇಳಲ್ಪಟ್ಟಿದು.

ಅನಿತ್ಯಾತ್ಕಲಿಧರ್ಮಾಣಾಂ ಪುಂಸಾಂ ಚೈವಾಯುಷಃ ಕ್ಷಯಾತ್ ।
ಅಸ್ಥಿರತ್ವಾಚ್ಛರೀರಸ್ಯ ದ್ವಾದಶಾಹೇ ಪ್ರಶಸ್ಯತೇ ॥೩೦॥

ಕಲಿಧರ್ಮದ ಅನಿತ್ಯತೆಂದಲೂ (ಕಲಿಯುಗಲ್ಲಿ ಧಾರ್ಮಿಕ ಭಾವನೆಗೊ ಅನಿತ್ಯವಾಗಿಪ್ಪದರಿಂದ), ಪುರುಷನ ಆಯಸ್ಸು ಕ್ಷೀಣವಾಗಿಪ್ಪದರಿಂದಲೂ ಮತ್ತು ಶರೀರದ ಅಸ್ಥಿರತೆಂದಲೂ ಹನ್ನೆರಡ್ನೇ ದಿನವೇ ಶ್ರೇಷ್ಠವಾಗಿದ್ದು.

ವ್ರತಬಂಧೋತ್ಸವಾದೀನಿ ವ್ರತಸ್ಯೋದ್ಯಾಪನಾನಿ ಚ ।
ವಿವಾಹಾದಿ ಭವೇನ್ನೈವ ಮೃತೇ ಚ ಗೃಹಮೇದಿನಿ ॥೩೧॥

ಯಜ್ಞೋಪವೀತಧಾರಣೆ, ವ್ರತದ ಉದ್ಯಾಪನೆ, ವಿವಾಹ ಮುಂತಾದ ಕಾರ್ಯಂಗಳ ಮನೆಯಜಮಾನ ಮೃತನಾದರೆ ಆಚರುಸಲಾಗ.

ಭಿಕ್ಶುರ್ಭಿಕ್ಷಾಂ ನ ಗೃಹ್ಣಾತಿ ಹಂತಕಾರೋ ನ ಗೃಹ್ಯತೇ ।
ನಿತ್ಯಂ ನೈಮಿತ್ತಿಕಂ ಲುಪ್ಯೇದ್ಯಾವತ್ಪಿಂಡಂ ನ ಮೇಲಿತಮ್ ॥೩೨॥

ಸಪಿಂಡೀಕರಣ ಆವ್ತವರೆಂಗೆ ಸಂನ್ಯಾಸಿ ಭಿಕ್ಷೆಯ ಸ್ವೀಕರುಸಲಾಗ, ಆತಿಥ್ಯವ ಸ್ವೀಕರುಸಲಾಗ. ನಿತ್ಯ ನೈಮಿತ್ತಿಕ ಕರ್ಮಂಗಳ ನಿಲ್ಲುಸೆಕು.

ಕರ್ಮಲೋತ್ಪ್ರತ್ಯವಾಯೀ ಭವೇತ್ತಸ್ಮಾತ್ಸಪಿಂಡನಮ್ ।
ನಿರಗ್ನಿಕಃ ಸಾಗ್ನಿಕೋ ವಾ ದ್ವಾದಶಾಹೇ ಸಮಾಚರೇತ್ ॥೩೩॥

ಕರ್ಮಲೋಪಂದ ಅವ° ಕರ್ಮಲೋಪದೋಷಭಾಗಿ ಆವುತ್ತ°. ಹಾಂಗಾಗಿ ನಿರಗ್ನಿಕನಾಗಲಿ, ಸಾಗ್ನಿಕನಾಗಲಿ, ಹನ್ನೆರಡ್ಣೇ ದಿನ ಸಪಿಂಡಿನವ ಆಚರುಸೆಕು.

ಯತ್ಫಲಂ ಸರ್ವತೀರ್ಥೇಷು ಸರ್ವಯಜ್ಞೇಷು ಯತ್ಫಲಮ್ ।
ತತ್ಫಲಂ ಸಮವಾಪ್ನೋತಿ ದ್ವಾದಶಾಹೇ ಸಪಿಂಡನಾತ್ ॥೩೪॥

ಸಮಸ್ತ ತೀರ್ಥ ಕ್ಷೇತ್ರಂಗಳಲ್ಲಿ ಮೀವದರಿಂದ ಮತ್ತೆ ಸಮಸ್ತ ಯಜ್ಞಾನುಷ್ಠಾನ ಮಾಡುವದರಿಂದ ಏವ ಫಲ ಪ್ರಾಪ್ತಿ ಆವುತ್ತೋ ,ಆ ಫಲ ಹನ್ನೆರಡ್ಣೇ ದಿನ ಸಪಿಂಡೀಕರಣ ಮಾಡುವದರಿಂದ ದೊರಕುತ್ತು.

ಅತಃ ಸ್ನಾತ್ವಾ ಮೃತಸ್ಥಾನೇ ಗೋಮಯೇನೋಪಲೇಪಿತೇ ।
ಶಾಸ್ತ್ರೋಕ್ತೇನ ವಿಧಾನೇನ ಸಪಿಂಡೀಂ ಕಾರಯೇತ್ಸುತಃ ॥೩೫॥

ಹಾಂಗಾಗಿ ಮಿಂದಿಕ್ಕಿ, ಮೃತಸ್ಥಾನಲ್ಲಿ ಗೋಮಯ ಸಾರುಸಿ, ಶಾಸ್ತ್ರೋಕ್ತ ಪ್ರಕಾರವಾಗಿ ಮಗನಾದವ° ಸಪಿಂಡೀಕರಣ ಮಾಡೆಕು.

ಪಾದ್ಯಾರ್ಘ್ಯಾಚಮನೀಯಾದ್ಯೈರ್ವಿಶ್ವೇದೇವಾಂಶ್ಚ ಪೂಜಯೇತ್ ।
ಕೌಪಿತ್ರೇ ವಿಕಿರಂ ದತ್ವಾ ಪುನರಾಪ ಉಪಸ್ಪೃಶೇತ್ ॥೩೬॥

ಪಾದ್ಯ, ಅರ್ಘ್ಯ, ಮತ್ತೆ ಆಚಮನಾದಿಗಳಿಂದ ವಿಶ್ವೇದೇವರ ಪೂಜಿಸೆಕು. ಪ್ರೇತಯೋನಿಂದ ಮುಕ್ತರಲ್ಲದೋರಿಂಗೆ (ಕೌಪಿತೃ / ಅಸದ್ಗತಿಯಾದವಕ್ಕೆ) ವಿಕಿರಪಿಂಡವ ಕೊಟ್ಟು , ಕೈ-ಕಾಲು ತೊಳಕ್ಕೊಂಡು ಪುನಃ ಆಚಮನ ಮಾಡೆಕು.

ದದ್ಯಾತ್ಪಿತಾಮಹಾದೀನಾಂ ತ್ರೀನ್ ಪಿಂಡಾಂಶ್ಚ ಯಥಾಕ್ರಮಮ್ ।
ವಸುರುದ್ರಾರ್ಕರೂಪಾಣಾಂ ಚತುರ್ಥಂ ಮೃತಕಸ್ಯ ಚ ॥೩೭॥

ವಸು, ರುದ್ರ, ಆದಿತ್ಯ ಸ್ವರೂಪರಾದ ಪಿತಾಮಹ ಇತ್ಯಾದಿಗೊಕ್ಕೆ ಮೂರು ಪಿಂಡಂಗಳ ಯಥಾಕ್ರಮವಾಗಿ ಕೊಡೆಕು. ಮತ್ತೆ ನಾಲ್ಕನೇ ಪಿಂಡವ ಮೃತಂಗೆ ಕೊಡೆಕು.

ಚಂದನೈಸ್ತುಲಸೀಪತ್ರೈರ್ಧೂಪೈರ್ದೀಪೈಃ ಸುಭೋಜನೈಃ ।
ಮುಖಾವಾಸೈಃ ಸುವಸ್ತ್ರೈಶ್ಚ ದಕ್ಷಿಣಾಭಿಶ್ಚ ಪೂಜಯೇತ್ ॥೩೮॥

ಚಂದನ, ತುಳಸೀಪತ್ರ, ಧೂಪ, ದೀಪಂಗಳಿಂದ, ಒಳ್ಳೆ ಭೋಜನಂದ, ಮುಖವಾಸಂದ, ಒಳ್ಳೆ ವಸ್ತ್ರಂದ ದಕ್ಷಿಣೆ ಸಹಿತವಾಗಿ ಪೂಜಿಸೆಕು.

ಪ್ರೇತಪಿಂಡಂ ತ್ರಿಧಾ ಕೃತ್ವಾ ಸುವರ್ಣಸ್ಯ ಶಲಾಕಯಾ ।
ಪಿತಾಮಹಾದಿಪಿಂಡೇಷು ಮೇಲಯೇತ್ತಂ ಪೃಥಕ್ ಪೃಥಕ್ ॥೩೯॥

ಪ್ರೇತಪಿಂಡವ ಚಿನ್ನದ ಕಡ್ಡಿಂದ ಮೂರು ಭಾಗಗಳನ್ನಾಗಿ ಮಾಡಿ ಪಿತಾಮಹ (ಅಜ್ಜ°) ಇತ್ಯಾದಿಗಳ ಮೂರು ಪಿಂಡಂಗಳ ಮೂರು ಭಾಗಗಳನ್ನೂ ಬೇರೆ ಬೇರೆಯಾಗಿ ಸೇರುಸೆಕು.

ಪಿತಾಮಹ್ಯಾ ಸಮಂ ಮಾತುಃ ಪಿತಾಮಹಸಮಂ ಪಿತುಃ ।
ಸಪಿಂಡೀಕರಣಂ ಕುರ್ಯಾದಿತಿ ತಾರ್ಕ್ಷ್ಯ ಮತಂ ಮಮ ॥೪೦॥

ಹೇ ಗರುಡ!, ಪಿತಾಮಹಿ(ಅಜ್ಜಿ)ಯೊಟ್ಟಿಂಗೆ ಅಬ್ಬೆಯ, ಪಿತಾಮಹನೊಟ್ಟಿಂಗೆ ಅಪ್ಪನ ಮತ್ತೆ ಅವನ ಹಿಂದಾಣೋರಿಂಗೆ ಮೂರು ಪಿಂಡಂಗಳ ಕೊಡೆಕು.

ಮೃತೇ ಪಿತರಿ ಯಸ್ಯಾಥ ವಿದ್ಯತೇ ಚ ಪಿತಾಮಹಃ ।
ತೇನ ದೇಯಾಸ್ತ್ರಯಃ ಪಿಂಡಾಃ ಪ್ರಪಿತಾಮಹಪೂರ್ವಕಾಃ ॥೪೧॥

ಆರ ಅಪ್ಪ° ಮೃತನಾಗಿಪ್ಪಗ ಪಿತಾಮಹ ಬದುಕ್ಕಿದ್ದರೆ, ಅಂಬಗ ಆ ಪುತ್ರನ ಪ್ರಪಿತಾಮಹನ ಮತ್ತು ಅವನ ಹಿಂದಾಣೋರಿಂಗೆ ಮೂರು ಪಿಂಡಂಗಳ ಕೊಡೆಕು.

ತೇಭ್ಯಶ್ಚ ಪೈತೃಕಂ ಪಿಂಡಂ ಮೇಲಯೇತ್ತಂ ತ್ರಿಧಾ ಕೃತಮ್ ।
ಮಾತರ್ಯಗ್ರೇ ಪ್ರಶಾಂತಾಯಾಂ ವಿದ್ಯತೇ ಚ ಪಿತಾಮಹೀ ॥೪೨॥

ಪಿತಂಗೆ ಕೊಟ್ಟ ಪಿಂಡವ ಮೂರು ಭಾಗಗಳನ್ನಾಗಿ ಮಾಡಿ ಆ ಪಿಂಡಂಗಳಲ್ಲಿ ಸೇರುಸೆಕು. ಪಿತಾಮಹಿ ಬದುಕ್ಕಿಪ್ಪಗ ಅಬ್ಬೆ ಮದಲೇ ಮರಣಹೊಂದಿರೆ

ತದಾ ಮಾತೃಕಶ್ರಾದ್ಧೇsಪಿ ಕುರ್ಯಾತ್ಪೈತೃಕವದ್ವಿಧಿಃ ।
ಯದ್ವಾ ಮಯಿ ಮಹಾಲಕ್ಷ್ಮ್ಯಾಂ ತಯೋಃ ಪಿಂಡಂ ಚ ಮೇಲಯೇತ್ ॥೪೩॥

ಅಂಬಗ ಮಾತೃಶ್ರಾದ್ಧಲ್ಲಿಯೂ ಪೈತೃಕವಿಧಿಯ ರೀತಿಲ್ಲಿಯೇ ಮಾಡೆಕು. ಅಥವಾ ಅಪ್ಪನ ಪಿಂದವ ಪಿತಾಮಹರೂನಾದ ಎನ್ನಲ್ಲಿಯೂ (ವಿಷ್ಣು), ಅಬ್ಬೆಯ ಪಿಂಡವ ಪಿತಾಮಹೀರೂಪಿಣಿಯಾದ ಮಹಾಲಕ್ಷ್ಮಿಯತ್ರೆಯೂ ಸೇರುಸೆಕು.

ಅಪುತ್ರಯಾಃ ಸ್ತ್ರಿಯಾಃ ಕುರ್ಯಾತ್ಪತಿಃ ಸಾಪಿಂಡನಾದಿಕಮ್ ।
ಸ್ವಶ್ರ್ವಾದಿಭಿಃ ಸಹೈವಾಸ್ಯಾಃ ಸಪಿಂಡೀಕರಣಂ ಭವೇತ್ ॥೪೪॥

ಅಪುತ್ರವತಿಯಾದ ಸ್ತ್ರೀಗೆ ಸಪಿಂಡನಾದಿಗಳ ಪತಿ ಮಾಡೆಕು. ಅತ್ತೆಯೋರು ಮೊದಲಾದೋರ ಒಟ್ಟಿಂಗೇ ಅದರ ಸಪಿಂಡೀಕರಣ ಆವುತ್ತು.

ಭರ್ತ್ರಾದಿಭಿಸ್ತ್ರಿಭಿಃ ಕಾರ್ಯಂ ಸಪಿಂಡೀಕರಣಂ ಸ್ತ್ರಿಯಾಃ ।
ನೈತನ್ಮಮ ಮತಂ ತಾರ್ಕ್ಷ್ಯ ಪತ್ಯಾ ಸಾಪಿಂಡ್ಯಮರ್ಹತಿ ॥೪೫॥

ಸ್ತ್ರೀಗೆ ಸಪಂಡೀಕರಣವು ಪತಿ ಮೊದಲಾದ ಮೂರು ಜೆನರ ಒಟ್ಟಿಂಗೆ ಆಯೇಕು ಹೇದು ಎನ್ನ ಅಭಿಪ್ರಾಯ ಅಲ್ಲ. ಹೇ ಗರುಡ!, ಸ್ತ್ರೀಯು ಪತಿಯ ಒಟ್ಟಿಂಗೆ ಸಪಿಂಡೀಕರಣಕ್ಕೆ ಯೋಗ್ಯೆ ಅಲ್ಲ.

ಏಕಾಂ ಚಿತಾಂ ಸಮಾರೂಢೌ ದಂಪತೀ ಯದಿ ಕಾಶ್ಯಪ ।
ತೃಣಮಂತರತಃ ಕೃತ್ವಾ ಶ್ವಶುರಾದೇಸ್ತದಾಚರೇತ್ ॥೪೬॥

ಹೇ ಕಾಶ್ಯಪ(ಗರುಡ)ನೇ!, ಒಂದುವೇಳೆ ದಂಪತಿಗೊ ಇಬ್ರೂ ಒಂದೇ ಚಿತೆಯ ಏರಿದ್ದರೆ, ನೆಡುಕೆ ದರ್ಭೆಯ ಮಡುಗಿ, ಅತ್ತೆ ಮೊದಲಾದರೊಟ್ಟಿಂಗೆ ಸಪಿಂಡೀಕರಣವ ಮಾಡೆಕು.

ಏಕ ಏವ ಸುತಃ ಕುರ್ಯಾದಾದೌ ಪಿಂಡಾದಿಕಂ ಪಿತುಃ ।
ತದೂರ್ಧ್ವಂ ಚ ಪ್ರಕುರ್ವೀತ ಸತ್ಯಾಃ ಸ್ನಾನಂ ಪುನಶ್ಚರೇತ್ ॥೪೭॥

ಒಬ್ಬನೇ ಮಗ ಮಾಡೆಕು. ಮದಾಲು ಅಪ್ಪಂಗೆ ಪಿಂಡಾದಿಗಳನ್ನೂ ಅದಾದಿಕ್ಕಿ ಪುನಃ ಮಿಂದಿಕ್ಕಿ ಅಬ್ಬಗೆ ಪಿಂಡಾದಿಗಳ ಕೊಡೆಕು.

ಹುತಾಶಂ ಯಾ ಸಮಾರೂಢಾ ದಶಾಹಾಭ್ಯಂತರೇ ಸತೀ ।
ತಸ್ಯಾ ಬರ್ತುರ್ದಿನೇ ಕಾರ್ಯಂ ಶಯ್ಯಾದಾನಂ ಸಪಿಂಡನಮ್ ॥೪೮॥

ಏವ ಸತಿ ಹತ್ತು ದಿನಂಗಳ ಒಳ ಅಗ್ನಿಪ್ರವೇಶ ಮಾಡುತ್ತೋ ಅದಕ್ಕೆ ಅದರ ಗೆಂಡನ ದಿನಲ್ಲಿಯೇ ಶಯ್ಯಾದಾನ ಮತ್ತೆ ಸಪಿಂಡೀಕರಣವ ಮಾಡೆಕು.

ಕೃತ್ವಾ ಸಪಿಂಡನಂ ತಾರ್ಕ್ಷ್ಯ ಪ್ರಕುರ್ಯಾತ್ಪಿತೃತರ್ಪಣಮ್ ।
ಉದಾಹರೇತ್ಸ್ವಧಾಕಾರಂ ವೇದಮಂತ್ರೈಃ ಸಮನ್ವಿತಮ್ ॥೪೯॥

ಹೇ ಗರುಡ, ಸಪಿಂಡೀಕರಣವ ಮಾಡಿಕ್ಕಿ ಪಿತೃತರ್ಪಣವ ಮಾಡೆಕು. ವೇದಮಂತ್ರಂಗಳ ಒಟ್ಟಿಂಗೇ ಸ್ವಧಾಕಾರವ ಹೇಳೆಕು.

ಅತಿಥಿಂ ಭೋಜಯೇತ್ಪಶ್ಚಾದ್ಧಂತಕಾರಂ ಚ ಸರ್ವದಾ ।
ತೇನ ತೃಪ್ಯಂತಿ ಪಿತರೋ ಮುನಯೋ ದೇವದಾನವಾಃ ॥೫೦॥

ಮತ್ತೆ, ಅತಿಥಿಗೊಕ್ಕೆ ಭೋಜನವ ನೀಡೆಕು ಮತ್ತು ‘ಹಂತಕಾರ’ (ಹದ್ನಾರು ಭಿಕ್ಷೆ) ಪ್ರದಾನ ಮಾಡೆಕು. ಅದರಿಂದ ಪಿತೃಗೊ, ಮುನಿಗೊ, ದೇವತೆಗೊ ಮತ್ತೆ ದಾನವರು ಎಲ್ಲೋರೂ ತೃಪ್ತಿ ಹೊಂದುತ್ತವು.

ಗ್ರಾಸಮಾತ್ರಾ ಭವೇದ್ಭಿಕ್ಷಾ ಚತುರ್ಗ್ರಾಸಂ ತು ಪುಷ್ಕಲಮ್ ।
ಪುಷ್ಕಲಾನಿ ಚ ಚತ್ವಾರಿ ಹಂತಕಾರೋ ವಿಧೀಯತೇ ॥೫೧॥

ಒಂದು ಗ್ರಾಸ (ತುತ್ತು) ಮಾತ್ರ ಒಂದು ಭಿಕ್ಷೆ. ನಾಲ್ಕು ಗ್ರಾಸಂಗೊ ಒಂದು ಪುಷ್ಕಲ. ನಾಲ್ಕು ಪುಷ್ಕಲಂಗೊ ಒಂದು ‘ಹಂತಕಾರ’ ಆವುತ್ತು.

ಸಪಿಂಡ್ಯಾಂ ವಿಪ್ರಚರಣೌ ಪೂಜಯೇಚ್ಚಂದನಾಕ್ಷತೈಃ ।
ದಾನಂ ತಸ್ಮೈ ಪ್ರದಾತವ್ಯಮಕ್ಷಯ್ಯ ತೃಪ್ತಿ ಹೇತವೇ ॥೫೨॥

ಸಪಿಂಡೀಕರಣಲ್ಲಿ ವೇದವ ತಿಳುದವನ ಪಾದವ ಚಂದನ ಅಕ್ಷತೆಗಳಿಂದ ಪೂಜಿಸಿ, ಅಕ್ಷಯ್ಯ ತೃಪ್ತಿಗೋಸ್ಕರ ಅವಂಗೆ ದಾನವ ಕೊಡೆಕು.

ವರ್ಷವೃತ್ತಿಂ ಘೃತಂ ಚಾನ್ನಂ ಸುವರ್ಣಂ ರಜತಂ ಸುಗಾಮ್ ।
ಅಶ್ವಂ ಗಜಂ ರಥಂ ಭೂಮಿಮಾಚಾರ್ಯಾಯ ಪ್ರದಾಪಯೇತ್ ॥೫೩॥

ಒಂದು ವರ್ಷದ ಜೀವಿಕೆ, ತುಪ್ಪ, ಆಹಾರ, ಚಿನ್ನ, ಬೆಳ್ಳಿ, ಸುಂದರವಾದು ಗೋವು, ಕುದುರೆ, ಆನೆ, ರಥ, ಭೂಮಿ ಇವುಗಳ ಆಚಾರ್ಯಂಗೆ ದಾನಕೊಡೆಕು.

ತತಶ್ಚ ಪೂಜಯೇನ್ಮಂತ್ರೈಃ ಸ್ವಸ್ತಿವಾಚನ ಪೂರ್ವಕಮ್ ।
ಕುಂಕುಮಾಕ್ಷತ ನೈವೇದ್ಯೈರ್ಗ್ರಹಾನ್ದೇವೀಂ ವಿನಾಯಕಮ್ ॥೫೪॥

ಮತ್ತೆ ಸ್ವಸ್ತಿವಾಚನಪೂರ್ವಕವಾಗಿ ಮಂತ್ರಂಗಳಿಂದ ಕುಂಕುಮ, ಅಕ್ಷತೆ, ಮತ್ತೆ ನೈವೇದ್ಯಂಗಳಿಂದ ನವಗ್ರಹಂಗಳನ್ನೂ, ದೇವಿಯನ್ನೂ, ವಿನಾಯಕನನ್ನೂ ಪೂಜಿಸೆಕು.

ಆಚಾರ್ಯಸ್ತು ತತಃ ಕುರ್ಯಾದಭಿಷೇಕಂ ಸಮಂತ್ರಕಮ್ ।
ಬದ್ಧ್ವಾ ಸೂತ್ರಂ ಕರಂ ದದ್ಯಾನ್ಮಂತ್ರಪೂತಾಂಸ್ತಥಾಕ್ಷತಾನ್ ॥೫೫॥

ಮತ್ತೆ ಆಚಾರ್ಯನಾದವ° ಮಂತ್ರಪೂರ್ವಕವಾಗಿ ಅಭಿಷೇಕಮಾಡಿ ಕೈಗೆ ದಾರವ ಕಟ್ಟಿಗೊಂಡು ಮಂತ್ರಂದ ಪವಿತ್ರವಾದ ಅಕ್ಷತೆಯ ಕೊಡೆಕು.

ತತಶ್ಚ ಭೋಜಯೇದ್ವಿಪ್ರಾನಿಷ್ಟಾನ್ನೈರ್ವಿವಿಧೈಃ ಶುಭೈಃ ।
ದದ್ಯಾತ್ಸದಕ್ಷಿಣಾಂಸ್ತೇಭ್ಯಃ ಸಜಲಾನ್ನಾನ್ ದ್ವಿಷಡ್‍ಘಟಾನ್ ॥೫೬॥

ಮತ್ತೆ, ನಾನಾ ಪ್ರಕಾರದ ಹಿತವಾದ ಮಿಷ್ಟಾನ್ನಂಗಳಿಂದ ಬ್ರಾಹ್ಮಣರಿಂಗೆ ಭೋಜನವ ಮಾಡುಸೆಕು. ಅವಕ್ಕೆ ನೀರು ಮತ್ತೆ ಅನ್ನ ಸಮೇತವಾಗಿ ಹನ್ನೆರಡು ಘಟಂಗಳ, ದಕ್ಷಿಣೆ ಸಹಿತ ದಾನ ಕೊಡೆಕು.

ವಾರ್ಯಾಯುಧಪ್ರತೋದಸ್ತು ದಂಡಸ್ತು ದ್ವಿಜಭೋಜನಾತ್ ।
ಸ್ಪೃಷ್ಟವ್ಯಾನಂತರಂ ವರ್ಣೈಃ ಶುದ್ಧ್ಯೇರಂಸ್ತೇ ತತಃ ಕ್ರಮಾತ್ ॥೫೭॥

ಬ್ರಾಹ್ಮಣರ ಭೋಜನ ಆದಮತ್ತೆ ನಾಲ್ಕು ವರ್ಣದೋರಿಂಗೆ ಅವರ ಶುದ್ಧಿಗಾಗಿ ಕ್ರಮವಾಗಿ ನೀರು, ಆಯುಧ, ಚಾಟಿ, ದೊಣ್ಣೆ – ಇವುಗಳ ಮುಟ್ಟುಸೆಕು. [ಹೇಳಿರೆ – ಬ್ರಾಹ್ಮಣರ ಭೋಜನ ಆದಿಕ್ಕಿ ಬ್ರಾಹ್ಮಣಾದಿ ಚತುರ್ವರ್ಣದೋರಿಂಗೆ ಅವರ ಶುದ್ಧಿಗಾಗಿ ಕ್ರಮವಾಗಿ- ಅರ್ಥಾತ್,   ಬ್ರಾಹ್ಮಣರಿಂಗೆ ನೀರು,  ಕ್ಷತ್ರಿಯಂಗೆ ಶಸ್ತ್ರ, ವೈಶ್ಯಂಗೆ ಬಾರುಕೋಲು, ಅನ್ಯರಿಂಗೆ ದಂಡವ ಸ್ಪರ್ಶಿಸೆಕು. ಇದರಿಂದ ಅವು ಶುದ್ಧರಾವ್ತವು.]

ಏವಂ ಸಪಿಂಡನಂ ಕೃತ್ವಾ ಕ್ರಿಯಾವಸ್ತ್ರಾಣಿ ಸಂತ್ಯಜೇತ್ ।
ಶುಕ್ಲಾಂಬರಧರೋ ಭೂತ್ವಾ ಶಯ್ಯಾದಾನಂ ಪ್ರದಾಪಯೇತ್ ॥೫೮॥

ಈ ರೀತಿ ಸಪಿಂಡೀಕರಣವ ಮಾಡಿಕ್ಕಿ, ಶ್ರಾದ್ಧಕರ್ಮ ಮಾಡುವಾಗ ಧರಿಸಿದ ವಸ್ತ್ರಂಗಳ ತೆಗದುಹಾಕಿ ಬೆಳಿ ವಸ್ತ್ರವ ಧರಿಸಿ ಶಯ್ಯಾದಾನ ಮಾಡೆಕು.

 

ಅದೇಂಗೆ ಹೇದು ಬಪ್ಪವಾರ ನೋಡುವೋ°

 

 

ಗದ್ಯ ರೂಪಲ್ಲಿ –

ಗರುಡ° ಹೇಳಿದ° – ಹೇ ಪ್ರಭುವೇ!, ಈಗ ಎನಗೆ ಸಪಿಂಡೀ ಶ್ರಾದ್ಧದ ವಿಧಾನವ ಹೇಳು. ಮತ್ತೆ ಸೂತಕದ ನಿರ್ಣಯ, ಶಯ್ಯಾದಾನ, ಪದದಾನದ ಸಾಮಾಗ್ರಿ ಮತ್ತದರ ಮಹಿಮೆಯನ್ನೂ ತಿಳಿಶು.

ಭಗವಂತ° ಹೇಳಿದ° – ಹೇ ಗರುಡ!, ಸಪಿಂಡೀಕರಣಾದಿ ಸಂಪೂರ್ಣ ಕ್ರಿಯೆಗಳ ವಿಷಯವಾಗಿ ನಿನಗೆ ಹೇಳುತ್ತೆ. ಅದರ ಮೂಲಕ ಮೃತಜೀವಿ ಪ್ರೇತತ್ವಂದ ಮುಕ್ತನಾಗಿ ಪಿತೃಗಣಂಗಳಲ್ಲಿ ಸೇರುತ್ತ°. ಆರ ಪಿಂಡವು ರುದ್ರಸ್ವರೂಪ ಪಿತಾಮಹ ಮುಂತಾದೋರ ಪಿಂಡಂಗಳೊಟ್ಟಿಗೆ ಬೆರೆಸಲ್ಪಡುತ್ತಿಲ್ಯೋ ಅಂಥವಕ್ಕೆ ಮಕ್ಕಾದಿಗಳ ಮೂಲಕ ಕೊಡಲ್ಪಡುತ್ತ ನಾನಾ ಪ್ರಕಾರ ದಾನಂಗೊ ಪ್ರಾಪ್ತಿಯಾವುತ್ತಿಲ್ಲೆ.

ಅಪ್ಪನ ಸಪಿಂಡಶ್ರಾದ್ಧವ ಮಾಡದ್ದ ಮಗ° ಸದಾ ಅಶುದ್ಧನಾಗಿರುತ್ತ°. ಅವ° ಎಂದಿಂಗೂ ಸೂತಕಂದ ಮುಕ್ತನಾವುತ್ತನೇ ಇಲ್ಲೆ. ಎಂತಕೇಳಿರೆ, ಸಪಿಂಡಿಕರಣ ಆಗದ್ದೆ ಸೂತಕದ ನಿವೃತ್ತಿ (ಸಮಾಪ್ತಿ) ಆವುತ್ತಿಲ್ಲೆ. ಹಾಂಗಾಗಿ ಮಗ° ಸೂತಕದ ಅಂತ್ಯಲ್ಲಿ ಸಪಿಂಡೀ ಶ್ರಾದ್ಧವ ಅಗತ್ಯ ಮಾಡೆಕು. ಆನು ಎಲ್ಲೋರಿಂಗಾಗಿ ಸೂತಕಾಂತ್ಯದ ಯಥೋಚಿತ ಕಾಲದ ಬಗ್ಗೆ ಹೇಳುತ್ತೆ. ಕೇಳು –

ಬ್ರಾಹ್ಮಣ ಹತ್ತು ದಿನಲ್ಲಿ, ಕ್ಷತ್ರಿಯ ಹನ್ನೆರಡು ದಿನಲ್ಲಿ, ವೈಶ್ಯ ಹದಿನೈದು ದಿನಲ್ಲಿ, ಬಾಕಿಯೊಳುದೋರು ಒಂದು ತಿಂಗಳ್ಳಿ ಶುದ್ಧರಾವ್ತವು. ಪ್ರೇತ ಸಂಬಂಧಿ (ಮೃತ ಸೂತಕ / ಶೌಚ) ಸೂತಕಲ್ಲಿ ಸಪಿಂಡಿ ಬಂಧುಗೊ ಹತ್ತು ದಿನಲ್ಲಿ ಶುದ್ಧರಾವುತ್ತವು. ಕುಲದೋರು ಮೂರುದಿನಲ್ಲಿ ಶುದ್ಧರಾವುತ್ತವು. ಮತ್ತೆ, ಸಗೋತ್ರದೋರು ಬರೇ ಮೀಯಾಣಂದ ಶುದ್ಧರಾವುತ್ತವು. ನಾಲ್ಕು ಪೀಳಿಗೆಯ ಬಂಧುಗೊ ಹತ್ತು ಇರುಳಿಲ್ಲಿ, ಐದು ಪೀಳಿಗೆಯೋರು ಆರು ಇರುಳಿಲ್ಲಿ, ಆರು ಪೀಳಿಗೆಯೋರು ನಾಲ್ಕು ದಿನಲ್ಲಿ ಮತ್ತೆ ಏಳು ಪೀಳಿಗೆಯೋರು ಮೂರು ದಿನಲ್ಲಿ, ಎಂಟು ಪೀಳಿಗೆಯೋರು ಒಂದು ದಿನಲ್ಲಿ, ಒಂಬತ್ತು ಪೀಳಿಗೆಯೋರು ಎರಡು ಪ್ರಹರ (=ಎಂಟು ಗಂಟೆ) ಹಾಂಗೂ ಹತ್ತು ಪೀಳಿಗೆಯೋರು ಬರೇ ಮೀಯಾಣ ಮಾತ್ರಂದ ಮೃತಶೌಚ ಹಾಂಗೂ ಜನನ ಶೌಚಂದ ಶುದ್ಧರಾವುತ್ತವು.

ದೇಶಾಂತರಲ್ಲಿ ಆರಾರು ಮರಣ ಹೊಂದಿರೆ, ಆ ಸುದ್ದಿ ಹತ್ತು ದಿನಂದೊಳ ಗೊಂತಾದರೆ, ಆ ಹತ್ತು ದಿನ ಮುಗಿವಲೆ ಮತ್ತೆ ಎಷ್ಟು ದಿನ ಬಾಕಿದ್ದೋ ಅಷ್ಟು ದಿನಾಣ ಅಶೌಚ ಇರುತ್ತು. ಹತ್ತು ದಿನ ಕಳುದ ಮತ್ತೆ ಒಂದುವರ್ಷದೊಳ ಶುದ್ದಿ ಗೊಂತಾದ್ದಾದರೆ ಮೂರು ದಿನಾಣ ಸೂತಕ ಹಾಂಗೂ ಒಂದು ವರ್ಷ ಕಳುದು ಬಂದ ವರ್ತಮಾನ ಆದರೆ ಬರೇ ಮೀಯಾಣಂದ ಅಶೌಚ ಶುದ್ಧಿ ಆವುತ್ತು. ಮರಣ ಸೂತಕದ ಸುರುವಾಣ ಎರಡು ಭಾಗಂಗೊ ಕಳೆತ್ತ ಮದಲೇ ( ಹೇದರೆ – ಆರು ದಿನಲ್ಲಿ) ಎರಡ್ನೇ ಸೂತಕ ಬಂದರೆ ಅದು ಸುರುವಾಣ ಸೂತಕ ಶುದ್ಧಿಯೊಟ್ಟಿಂಗೆ ಅಶೌಚ ಶುಚಿಯಾವುತ್ತು. ಹಲ್ಲು ಹುಟ್ಟುವಂದ ಮದಲು ಬಾಲಕನ ಮರಣ ಆದರೆ ಅವನ ಅಂತ್ಯಸಂಸ್ಕಾರ ಮಾಡಿ ಮಿಂದಲ್ಯಂಗೆ ಸೂತಕ ಶುದ್ಧಿ ಆವುತ್ತು. ಚೌಲಕರ್ಮ ಆಗಿದ್ದರೆ ಒಂದು ಇರುಳು, ಉಪ್ನಾನ (ವ್ರತಬಂಧ) ಪೂರ್ವಲ್ಲಿ ಮೂರು ಇರುಳು ಹಾಂಗೂ ಉಪ್ನಾನ ಆಗಿದ್ದರೆ ಮತ್ತೆ ಹತ್ತು ಇರುಳಾಣ ಸೂತಕ ಇರುತ್ತು. ಒಂದುವೇಳೆ ಏವುದೇ ವರ್ಣದ ಕೂಸಿನ ಮರಣ, ಜನ್ಮಂದ ಹಿಡುದು ಇಪ್ಪತ್ತೇಳು ತಿಂಗಳ ಅವಧಿಯೊಳ ಸಂಭವಿಸಿರೆ ಎಲ್ಲ ವರ್ಣದೋರಿಂಗೂ ಕೂಸಿನ ಅಂತಿಮ ಸಂಸ್ಕಾರದ ಮತ್ತೆ ಮೀಯಾಣ ಆದಲ್ಯಂಗೆ ಸೂತಕ ಶುದ್ಧಿ ಆವುತ್ತು. ಒಂದುವೇಳೆ ಕೂಸಿನ ವಾಗ್ದಾನ (ನಿಶ್ಚಿತಾರ್ಥ/ಬದ್ಧ) ಆಗಿರದ್ರೆ ಅರ್ಥಾತ್, ಬದ್ಧದ ವರೆಂಗೆ ಒಂದು ದಿನಾಣ ಸೂತಕ ಇರುತ್ತು. ಅದರ ಮತ್ತೆ ಪ್ರೌಢಕನ್ಯೆಯ ಮರಣ ನಿಶ್ಚಿತಾರ್ಥಂದ ಮದಲು ಆದರೆ ಮೂರು ಇರುಳಾಣ ಸೂತಕ ಇದ್ದು. ಬದ್ಧದ (ವಾಗ್ದಾನ) ಮತ್ತೆ ಕೂಸು ಮರಣ ಹೊಂದಿರೆ ಅಪ್ಪನ ಕುಲದೊರಿಂಗೂ, ವರನ ಕುಲದೋರಿಂಗೂ ಮೂರು ದಿನಾಣ ಸೂತಕ ಹಾಂಗೂ ಕನ್ಯಾದಾನ ಆಗಿದ್ದರೆ ಬರೇ ಗೆಂಡನ ಕುಲದೋರಿಂಗೆ ಮಾಂತ್ರ ಸೂತಕ ಇರುತ್ತು. ಒಂದು ವೇಳೆ ಏವುದೇ ಕೂಸಿಂಗೆ ಆರು ತಿಂಗಳಿನೊಳ ಗರ್ಭಸ್ರಾವ ಆಗಿದ್ದರೆ, ಆ ಗರ್ಭ ಎಷ್ತು ತಿಂಗಳು ಇದ್ದತ್ತೋ ಅಷ್ಟೇ ದಿನಾಣ ಸೂತಕ. ಇದಾಗಿಕ್ಕಿ,  ಆರು ತಿಂಗಳ ಮತ್ತೆ ಗರ್ಭಸ್ರಾವ ಆಗಿದ್ದರೆ ಆ ಹೆಮ್ಮಕ್ಕೊಗೆ ತನ್ನ ಕುಲದ ಕ್ರಮಲ್ಲಿ ಅಶೌಚ ಸೂತಕ ಇದ್ದು. ಈ ರೀತಿ ಗರ್ಭಸ್ರಾವ ಆದಲ್ಲಿ ಕುಲದೋರಿಂಗೆ ಸ್ನಾನ ಮಾತ್ರಂದ ಅಶೌಚ ಶುದ್ಧಿಯಾವುತ್ತು. ಕಲಿಯುಗಲ್ಲಿ ಜನನ ಶೌಚ ಮತ್ತೆ ಮರಣ ಶೌಚಂದ ಎಲ್ಲ ವರ್ಣದೋರೂ ಹತ್ತು ದಿನಲ್ಲಿ ಶುದ್ಧರಾವುತ್ತವು ಹೇದು ಶಾಸ್ತ್ರವಚನ.

ಮರಣ ಶೌಚದ ಸ್ಥಿತಿಲಿ ಆಶೀರ್ವಾದ, ದೇವಪೂಜೆ, ಆಗಂತುಕರ ಸ್ವಾಗತಕ್ಕಾಗಿ ಎದ್ದು ನಿಂದು ನಮಸ್ಕಾರ ಮಾಡುವದು, ಅಭಿನಂದನೆ, ಪಲ್ಲಂಗ ಶಯನ ಮತ್ತೆ ಅನ್ಯರ ಮುಟ್ಟುವದು ಇತ್ಯಾದಿಗಳ ಮಾಡ್ಳಾಗ. ಹಾಂಗೇ, ಸಂಧ್ಯಾವಂದನೆ, ದಾನ, ಜೆಪ, ಹೋಮ, ಸ್ವಾಧ್ಯಾಯ, ಪಿತೃತರ್ಪಣ, ಬ್ರಾಹ್ಮನ ಭೋಜನ, ವ್ರತಾನುಷ್ಠಾನ ಇತ್ಯಾದಿಗಳನ್ನೂ ಮಾಡ್ಳಾಗ.

ಆರು ಮೃತ ಸೂತಕಲ್ಲಿ ನಿತ್ಯ, ನೈಮಿತ್ತಿಕ ಮತ್ತೆ ಕಾಮ್ಯಕರ್ಮಂಗಳ ಮಾಡುತ್ತನೋ, ಅವ° ಹಿಂದೆ ಮಾಡಿದ ನಿತ್ಯ, ನೈಮಿತ್ತಿಕ ಕರ್ಮಂಗಳೆಲ್ಲವೂ (ಪುಣ್ಯಕರ್ಮಫಲಂಗಳೆಲ್ಲವೂ) ನಾಶವಾವ್ತು, ಪಾಪ ಸಂಚಯ ಆವುತ್ತು. ಇನ್ನು ವ್ರತನಿಷ್ಠನಾಗಿಪ್ಪವಂಗೆ, ಮಂತ್ರಂದ ಶುಚಿಯಾಗಿಪ್ಪವಂಗೆ, ಅಗ್ನಿಹೋತ್ರಿ ಬ್ರಾಹ್ಮಣಂಗೆ, ಬ್ರಹ್ಮನಿಷ್ಠಂಗೆ, ಯತಿಗೆ (ಸಂನ್ಯಾಸಿಗೆ) ಮತ್ತೆ ರಾಜಂಗೆ ಸೂತಕ ಇಲ್ಲೆ. ವಿವಾಹ, ಉತ್ಸವ ಅಥವಾ ಯಜ್ಞಂಗಳಲ್ಲಿ ಮರಣ ಸೂತಕ ಆದರೆ, ಆ ಸೂತಕಂದ ಮದಲು ಮಾಡಿಮಡಿಗಿದ ಅನ್ನವ ಉಂಬಲಕ್ಕು. ಹೀಂಗೇಳಿ ಮನುವೇ ಹೇಳಿದ್ದ°. ಯಾವಾತ° ಸೂತಕವ ಅರಡಿಯದ್ದೆ ಸೂತಕದ ಮನೆ ಅನ್ನವ ಸ್ವೀಕರುಸುತ್ತನೋ ಅವ° ದೋಷಭಾಗಿ ಆವುತ್ತನಿಲ್ಲೆ. ಆದರೆ ಸೂತಕಲ್ಲಿ (ಸೂತಕ ಇಪ್ಪದು ಗೊಂತಿದ್ದುಗೊಂಡು) ಯಾಚಕಂಗೆ ಅನ್ನ ನೀಡುವವ° ದೋಷಭಾಗಿ ಆವುತ್ತ°. ಆರು ತನ್ನ ಸೂತಕವ ಮುಚ್ಚಿಮಡಿಗಿ ಯಾಚಕಂಗೆ ಅನ್ನ ನೀಡುತ್ತನೋ ಅಥವಾ ಅವನ ಸೂತಕವ ಅರ್ತುಗೊಂಡೂ ಯಾವಾತ° ಅವನಿಂದ ಅನ್ನವ ಸ್ವೀಕರುಸುತ್ತನೋ ಅವಿಬ್ರೂ ದೋಷಭಾಗಿಗೊ ಆವ್ತವು.

ಹಾಂಗಾಗಿ, ಸೂತಕದ ಶುದ್ಧಿಗಾಗಿ ಪಿತೃವಿನ ಸಪಿಂಡೀಕರಣ ಶ್ರಾದ್ಧವ ಮಾಡೆಕು. ಅಂಬಗಷ್ಟೇ ಆ ಮೃತ° ಪಿತೃಗಣಂಗಳ ಸೇರ್ಲೆ ಪಿತೃಲೋಕಕ್ಕೆ ಹೋವುತ್ತ°. ತತ್ತ್ವದರ್ಶಿ ಮುನಿಗೊ ಹನ್ನೆರಡ್ನೇ ದಿನ, ಮೂರು ಪಕ್ಷಲ್ಲಿ, ಆರು ಮಾಸಲ್ಲಿ, ಅಥವಾ ಒಂದು ವರ್ಷ ಪೂರ್ಣಲ್ಲಿ ಸಪಿಂಡೀಕರಣ ಶ್ರಾದ್ಧಕ್ಕೆ ಪ್ರಸಕ್ತ ಹೇದು ಹೇಳಿದ್ದವು. ಹೇ ಗರುಡ!, ಶಾಸ್ತ್ರ-ಧರ್ಮಾನುಸಾರ ನಾಲ್ಕೂ ವರ್ಣದೋರಿಂಗೂ ಹನ್ನರಡ್ನೇ ದಿನವೇ ಸಪಿಂಡೀಕರಣ ಮಾಡೆಕು ಹೇದು ಆನು ಹೇಳ್ವದು. ಕಲಿಯುಗಲ್ಲಿ ಧಾರ್ಮಿಕ ಭಾವನೆಗೊ ಅನಿತ್ಯವಾಗಿಪ್ಪದರಿಂದಲೂ, ಮನುಷ್ಯರ ಆಯಸ್ಸು ಕ್ಷೀಣವಾಗಿಪ್ಪದರಿಂದಲೂ ಮತ್ತೆ ಶರೀರದ ಅಸ್ಥಿರತೆಯ ಕಾರಣಂದಲೂ ಹನ್ನೆರಡನೇ ದಿನವೇ ಸಪಿಂಡೀಕರಣ ಮಾಡುವದು ಪ್ರಶಸ್ತ. ಯಜ್ಞೋಪವೀತಧಾರಣೆ, ವ್ರತದ ಉದ್ಯಾಪನೆ, ವಿವಾಹ ಮುಂತಾದ ಕಾರ್ಯಂಗಳ ಮನೆಯಜಮಾನ ಮೃತನಾದರೆ ಆಚರುಸಲಾಗ. ಸಪಿಂಡೀಕರಣ ಆವ್ತವರೆಂಗೆ ಸಂನ್ಯಾಸಿ ಭಿಕ್ಷೆಯ ಸ್ವೀಕರುಸಲಾಗ, ಆತಿಥ್ಯವ ಸ್ವೀಕರುಸಲಾಗ. ನಿತ್ಯ ನೈಮಿತ್ತಿಕ ಕರ್ಮಂಗಳ ನಿಲ್ಲುಸೆಕು. ಅವ° ನಿತ್ಯ ನೈಮಿತ್ತಿಕ ಇಲ್ಲದ್ದೆ ಕರ್ಮಲೋಪದೋಷಭಾಗಿ ಆವುತ್ತ. ಹಾಂಗಾಗಿ ನಿರಗ್ನಿಕನಾಗಲಿ, ಸಾಗ್ನಿಕನಾಗಲಿ, ಹನ್ನೆರಡ್ಣೇ ದಿನ ಸಪಿಂಡೀಕರಣವ ಆಚರುಸೆಕು. ಸಮಸ್ತ ತೀರ್ಥ ಕ್ಷೇತ್ರಂಗಳಲ್ಲಿ ಮೀವದರಿಂದ ಮತ್ತೆ ಸಮಸ್ತ ಯಜ್ಞಾನುಷ್ಠಾನ ಮಾಡುವದರಿಂದ ಏವ ಫಲ ಪ್ರಾಪ್ತಿ ಆವುತ್ತೋ ಅಂಥ ಫಲವೇ ಹನ್ನೆರಡ್ನೇ ದಿನ ಸಪಿಂಡಿಶ್ರಾದ್ಧವ ಮಾಡುವದರಿಂದ ಪ್ರಾಪ್ತಿ ಆವುತ್ತು.
ಹಾಂಗಾಗಿ, ಮಿಂದಿಕ್ಕಿ, ಮೃತಸ್ಥಾನಲ್ಲಿ ಗೋಮಯ ಸಾರುಸಿ, ಮಗ° ಶಾಸ್ತ್ರೋಕ್ತ ವಿಧಿಂದ ಪಿಂಡದಾನ ಮಾಡೆಕು. ಪಾದ್ಯ, ಅರ್ಘ್ಯ, ಆಚಮನೀಯಾದಿಗಳಿಂದ ವಿಶ್ವೇದೇವರಿಂಗೆ ಪೂಜೆ ಮಾಡೆಕು. ಮತ್ತೆ ಅಸದ್ಗತಿಯಾದ ಪಿತೃಗೊಕ್ಕೆ ಬೇಕಾಗಿ ಭೂಮಿಲಿ ವಿಕಿರಪಿಂಡವ ಹಾಕಿ, ಕೈ-ಕಾಲು ತೊಳಕ್ಕೊಂಡು ಪುನಃ ಆಚಮನ ಮಾಡೆಕು. ಮತ್ತೆ, ವಸು, ರುದ್ರ, ಆದಿತ್ಯಸ್ವರೂಪ ಪಿತೃ, ಪಿತಾಮಹ ಮತ್ತೆ ಪ್ರಪಿತಾಮಹರಿಂಗೆ ಅನುಕ್ರಮವಾಗಿ ಒಂದೊಂದು- ಹೇಳಿರೆ, ಮೂರು ಪಿಂಡಂಗಳ ನೀಡೆಕು. ಚಂದನ, ತುಳಸೀಪತ್ರ, ಧೂಪ-ದೀಪ, ಸುಭೋಜನ, ತಾಂಬೂಲ, ಸುವಸ್ತ್ರ ಹಾಂಗೂ ದಕ್ಷಿಣಾದಿಗಳಿಂದ ಪೂಜಿಸೆಕು. ಮತ್ತೆ, ಬಂಗಾರದ ಕಡ್ಡಿಂದ ಪ್ರೇತದ ಪಿಂಡವ ಮೂರು ಭಾಗಗಳಾಗಿ ವಿಂಗಡಿಸಿ ಪಿತಾಮಹ ಮುಂತಾದವರ ಪಿಂಡಂಗಳಲ್ಲಿ ಬೇರೆ ಬೇರೆಯಾವಿ ಅವುಗಳ ಕೂಡುಸೆಕು. ಹೇಳಿರೆ, ಒಂದು ಭಾಗ ಪಿತಾಮಹನ ಪಿಂಡಲ್ಲಿ, ಎರಡ್ನೇ ಭಾಗ ಪ್ರಪಿತಾಮಹನ ಪಿಂಡಲ್ಲಿ, ಮತ್ತೆ ಮೂರ್ನೇ ಭಾಗವ ಪ್ರಪ್ರಪಿತಾಮಹಿನ ಪಿಂಡಲ್ಲಿ ಕೂಡುಸೆಕು. ಹೇ ಗರುಡ!, ಎನ್ನ ಅಭಿಪ್ರಾಯ ಎಂತ ಹೇದರೆ, ಮಾತೃವಿನ ಪಿಂಡವ ಪಿತಾಮಹಿ ಮುಂತಾದವರ ಪಿಂಡದೊಟ್ಟಿಂಗೆ ಸೇರಿಸಿ ಹಾಂಗೂ ಪಿತೃವಿನ ಪಿತಾಮಹ ಮುಂತಾದವರ ಪಿಂಡದೊಟ್ಟಿಂಗೆ ಕೂಡುಸಿ ಸಪಿಂಡೀಕರಣ ಶ್ರಾದ್ಧವ ಸಂಪನ್ನಗೊಳುಸೆಕು.

ಆರ ಪಿತಾಮಹ ಜೀವಿತವಾಗಿದ್ದು, ಪಿತೃವಿನ ಮರಣವಾಗಿರ್ತೋ, ಅಂಬಗ ಪ್ರಪಿತಾಮಹಾದಿಗಳ ಹೆಸರಿಂದ ಮೂರು ಪಿಂಡಂಗಳ ಮಾಡಿ ಅವುಗಳಲ್ಲಿ ಪಿತನ ಪಿಂಡವ ಮೂರು ಭಾಗ ಮಾಡಿ ಆ ಮೂರರಲ್ಲಿ ಸೇರುಸೆಕು. ಮಾತೃವಿನ ಮರಣ ಆದಪ್ಪಗ, ಪಿತಾಮಹಿ ಜೀವಂತವಾಗಿದ್ದರೆ, ಮಾತೃವಿನ ಸಪಿಂಡೀಕರಣ ಶ್ರಾದ್ಧಲ್ಲಿ ಕೂಡ ಪಿತೃಸಂಪಿಂಡೀಕರಣದ ಹಾಂಗೆಯೇ ಪ್ರಪಿತಾಮಹಿ ಮುಂತಾದೋರಲ್ಲಿ ಮಾತೃಪಿಂಡವ ಕೂಡುಸೆಕು ಅಥವಾ ಪಿತೃಪಿಂಡವ ಎನ್ನ ಪಿಂಡಲ್ಲಿ (ವಿಷ್ಣುವಿನ) ಮತ್ತು ಮಾತೃಪಿಂಡವ ಮಹಾಲಕ್ಷ್ಮಿ ಪಿಂಡಲ್ಲಿ ಕೂಡುಸೆಕು. ಅಪುತ್ರವತಿಯಾದ ಸ್ತ್ರೀಗೆ ಸಪಿಂಡನಾದಿಗಳ ಪತಿ ಮಾಡೆಕು. ಅದರ ಅತ್ತೆಯೋರು ಮೊದಲಾದೋರ ಒಟ್ಟಿಂಗೇ ಅದರ ಸಪಿಂಡೀಕರಣ ಆವುತ್ತು. ಸ್ತ್ರೀಗೆ ಸಪಂಡೀಕರಣವು ಪತಿ ಮೊದಲಾದ ಮೂರು ಜೆನರ ಒಟ್ಟಿಂಗೆ ಆಯೇಕು ಹೇದು ಎನ್ನ ಅಭಿಪ್ರಾಯ ಅಲ್ಲ. ಹೇ ಗರುಡ!, ಸ್ತ್ರೀಯು ಪತಿಯ ಒಟ್ಟಿಂಗೆ ಸಪಿಂಡೀಕರಣಕ್ಕೆ ಯೋಗ್ಯೆ ಅಲ್ಲ. ಹೇ ಕಾಶ್ಯಪ(ಗರುಡ)ನೇ!, ಒಂದುವೇಳೆ ದಂಪತಿಗೊ ಇಬ್ರೂ ಒಂದೇ ಚಿತೆಯ ಏರಿದ್ದರೆ, ನೆಡುಕೆ ದರ್ಭೆಯ ಮಡುಗಿ, ಅತ್ತೆ ಮೊದಲಾದರೊಟ್ಟಿಂಗೆ ಸಪಿಂಡೀಕರಣವ ಮಾಡೆಕು. ಒಂದೇ ಚಿತೆಲಿ ಮಾತೃ-ಪಿತೃವಿನ ದಹನ ಮಾಡಿದ್ದಾಗಿದ್ದರೆ, ಮಗ° ಮದಾಲು ಪಿತೃವಿನ ಉದ್ದೇಶಂದ ಪಿಂಡದಾನ ಮಾಡಿ, ಮಿಂದಿಕ್ಕಿ ಬಂದು ಮತ್ತೆ ಮಾತೃವಿನ ಪಿಂಡದಾನ ಮಾಡಿಕ್ಕಿ ಪುನಃ ಹೋಗಿ ಮಿಂದಿಕ್ಕಿ ಬರೆಕು. ಒಂದುವೇಳೆ, ಹತ್ತುದಿನದ ಒಳ ಆರಾರು ಸತಿ ಅಗ್ನಿಪ್ರವೇಶ ಮಾಡಿದ್ದರೆ, ಅದರ ಶಯ್ಯಾದಾನ ಮತ್ತೆ ಪಿಂಡದಾನಾದಿ ಕರ್ಮಂಗಳ ಪತಿಯ ಸಪಿಂಡೀಕರಣದ ದಿನವೇ ಮಾಡೆಕು. ಹೇ ಗರುಡ!, ಸಪಿಂಡೀಕರಣ ಮಾಡಿಕ್ಕಿ ಮತ್ತೆ ಪಿತೃಗೊಕ್ಕೆ ತರ್ಪಣ ನೀಡೆಕು ಮತ್ತು ಈ ಕ್ರಿಯೆಲಿ ವೇದಮಂತ್ರಂಗಳಿಂದ ಸಮನ್ವಿತ ಸ್ವಧಾಕಾರದ ಉಚ್ಚಾರಣೆ ಮಾಡೆಕು.

ಇದಾದಿಕ್ಕಿ ಅತಿಥಿಗೊಕ್ಕೆ ಭೋಜನ ಮಾಡುಸೆಕು. ಮತ್ತೆ ಹಂತಕಾರ (ಹದ್ನಾರು ಭಿಕ್ಷೆ) ಪ್ರದಾನ ಮಾಡೆಕು. ಹೀಂಗೆ ಮಾಡುವದರಿಂದ ಪಿತೃಗಣ, ಮುನಿಗಣ, ದೇವತಾಗಣ, ಹಾಂಗೂ ದಾನವಗಣ ತೃಪ್ತರಾವುತ್ತವು. ಭಿಕ್ಷಾ ಹೇಳಿರೆ ಒಂದು ಗ್ರಾಸಕ್ಕೆ (ತುತ್ತು) ಸಮಾನವಾದ್ದು. ನಾಲ್ಕು ಗ್ರಾಸಂಗೊ ಒಂದು ಪುಷ್ಕಲ. ನಾಲ್ಕು ಪುಷ್ಕಲಂಗೊ ಒಂದು ‘ಹಂತಕಾರ’ ಆವುತ್ತು. ಸಪಿಂಡೀಕರಣಲ್ಲಿ ವೇದಜ್ಞ ಬ್ರಾಹ್ಮಣನ ಪಾದಂಗಳ ತೊಳದು ಚಂದನ ಅಕ್ಷತೆಂದ ಪೂಜಿಸಿ ಮತ್ತೆ ಪಿತೃಗಳ ಅಕ್ಷಯ ತೃಪ್ತಿಗಾಗಿ ಅವಂಗೆ ದಾನ ನೀಡೆಕು. ಒಂದು ವರ್ಷಪರ್ಯಂತ ಜೀವನ ನಿರ್ವಹಣಗೆ ಸಾಕಪ್ಪಷ್ಟು ತುಪ್ಪ, ಅನ್ನ, ಸುವರ್ಣ, ಬೆಳ್ಳಿ, ಸುಂದರ ಗೋವು, ಅಶ್ವ, ಗಜ, ರಥ ಮತ್ತೆ ಭೂಮಿಯ ಆಚರ್ಯಂಗೆ ದಾನ ಮಾಡೆಕು. ಇದಾಗಿಕ್ಕಿ, ಸ್ವಸ್ತಿವಾಚನಪೂರ್ವಕ ಮಂತ್ರಂಗಳಿಂದ ಕುಂಕುಮ, ಅಕ್ಷತೆ ಮತ್ತೆ ನೈವೇದ್ಯಾದಿಗಳ ಮೂಲಕ ನವಗ್ರಹಂಗಳ, ದೇವಿ, ವಿನಾಯಕನ ಪೂಜೆ ಮಾಡೆಕು. ಮತ್ತೆ ಆಚಾರ್ಯ° ಮಂತ್ರೋಚ್ಛಾರಣೆ ಮಾಡಿಗೊಂಡು ಅಭಿಷೇಕ ಮಾಡೆಕು. ಮತ್ತೆ ಯಜಮಾನನ ಕೈಲಿ ರಕ್ಷಾಸೂತ್ರ (ದಾರ) ಕಟ್ಟಿಕ್ಕಿ ಮಂತ್ರಪೂರ್ವಕ ಪವಿತ್ರ ಅಕ್ಷತೆಯ ನೀಡೆಕು.

ಮತ್ತೆ, ವಿವಿಧ ಪ್ರಕಾರದ ಸುಸ್ವಾದ ಮೃಷ್ಠಾನ್ನಂಗಳಿಂದ ಬ್ರಾಹ್ಮಣರಿಂಗೆ ಭೋಜನವ ಮಾಡುಸೆಕು. ಮತ್ತೆ ದಕ್ಷಿಣೆಸಹಿತ ಅನ್ನ ಮತ್ತು ಜಲಯುಕ್ತ ಹನ್ನೆರಡು ಘಟ ಹನ್ನೆರಡು ಬ್ರಾಹ್ಮಣರಿಂಗೆ ದಾನ ಕೊಡೆಕು. ಮತ್ತೆ, ಬ್ರಾಹ್ಮಣಾದಿ ವರ್ಣಕ್ರಮಂದ ಅವರ ಶುದ್ಧಿಗಾಗಿ ಕ್ರಮವಾಗಿ ಜಲ, ಶಸ್ತ್ರ, ಬಾರುಕೋಲು ಮತ್ತೆ ದಂಡದ ಸ್ಪರ್ಶ ಮಾಡುಸೆಕು. ಹೇಳಿರೆ ಬ್ರಾಹ್ಮಣಂಗೆ ಜಲ, ಕ್ಷತ್ರಿಯಂಗೆ ಶಸ್ತ್ರ, ವೈಶ್ಯಂಗೆ ಬಾರುಕೋಲು ಮತ್ತೆ ಶೂದ್ರವರ್ಣದೋರಿಂಗೆ ದಂಡಸ್ಪರ್ಶ ಮಾಡೆಕು. ಹೀಂಗೆ ಮಾಡುವದರಿಂದ ಅವು ಶುದ್ಧರಾವ್ತವು. ಈ ಪ್ರಕಾರ ಸಪಿಂಡೀಕರಣ ಶ್ರಾದ್ಧ ಮಾಡಿ, ಧರಿಸಿದ ವಸ್ತ್ರಂಗಳ ತೆಗದು ಹಾಕಿ, ಬೇರೆ ಹೊಸವಸ್ತ್ರ ಧರಿಸಿ ಶಯ್ಯಾದಾನ ಮಾಡೆಕು.

ಅದೇಂಗೆ ಹೇದು ಬಪ್ಪವಾರ ನೋಡುವೋ°

 

[ ಚಿಂತನೀಯಾ –

ಈ ಭಾಗಲ್ಲಿ ಮುಖ್ಯವಾಗಿ ಸೂತಕ ಕಾಲ ನಿರ್ಣಯ, ಶೌಚ ಮತ್ತು ಸಪಿಂಡೀಕರಣದ ಮಹತ್ವದ ಬಗ್ಗೆ ಉಲ್ಲೇಖ ಆಯ್ದು. ಇಲ್ಲಿ ಹೇಳಲ್ಪಟ್ಟದೆಲ್ಲವೂ ಒಟ್ಟು ಸಾರ ರೂಪವಾಗಿ. ಪುರಾಣಂಗಳಲ್ಲಿ ಹೇಳಿದ್ದದು ಇಷ್ಟೆಯೋ ಹೇದು ನಾವು ಗ್ರೇಶಿಗೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಮುಖ್ಯವಿಷಯವ ಕೇಂದ್ರವಾಗಿರಿಸಿ ಬಾಕಿ ವಿಷಯಂಗಳ ಬೇಕಾದಷ್ಟೇ ಸೇರಿಸಿ ಮುಖ್ಯವಿಷಯದ ಬಗ್ಗೆ ಉಲ್ಲೇಖಿಸಿಗೊಂಡು ಹೋಪದು ಸಹಜ. ಎಲ್ಯೋ ಒಂದು ಹಂತಲ್ಲಿ ಯಾವುದಾರು ವಿಷಯದ ಬಗ್ಗೆ ಜಿಜ್ಞಾಸೆ ಬಂದರೆ ಆ ವಿಷಯ ಬಪ್ಪ ಗ್ರಂಥವ ಅರಸೆಕು ವಿನಾ ಇದರ್ಲಿ ಇಷ್ಟೇ ಹೇಳಿದ್ದದು, ಇದುವೇ ಅಂತಿಮ ಹೇಳ್ವ ನಿರ್ಧಾರಕ್ಕೆ ಬಪ್ಪದು ತಪ್ಪಾವ್ತು.

ಮೃತನ ಸದ್ಗತಿ ಉದ್ದೇಶಂದ ಶ್ರದ್ಧೆಲಿ ಮಾಡುವದೇ ಶ್ರಾದ್ಧ. ಈ ಸಂದರ್ಭಲ್ಲಿ ಸೂತಕ (ಅಶೌಚ) ಶುದ್ಧಿ ಮತ್ತೆ ಮೃತನ ಪಿತೃಗಣಂಗಳೊಟ್ಟಿಗೆ  ಸೇರ್ಸಿ ತೃಪ್ತಿ ಪಡುಸುವದು ಮುಖ್ಯ ವಿಚಾರ. ಸಪಿಂಡೀಕರಣ ಬಗ್ಗೆ ವಿವಾರವಾಗಿ ಮೇಗೆ ವಿವೃತವಾಯ್ದು. ಇಲ್ಲಿ ಗಮನುಸೆಕ್ಕಾದ ವಿಷಯ ಎಂತರ ಹೇಳಿರೆ ಸಪಿಂಡೀಕರಣ ಮಾಡಿ ಮೃತ ಸಂಪಾದಿಸಿದ್ದರ ಮಾತ್ರ ಅಲ್ಲದ್ದೆ ತಾನು ಸಂಪಾದಿಸಿದ್ದನ್ನೂ ಸೇರ್ಸಿ ಖರ್ಚಿ ಮಾಡಿ ದೀವಾಳಿ ಅಪ್ಪದು ಅಲ್ಲ. ಅಧ್ಯಾಯಲ್ಲಿ ಉಲ್ಲೇಖಿಸಲ್ಪಟ್ಟ ಚಿನ್ನ, ಕುದುರೆ, ಆನೆ, ಭೂಮಿ, ವಸ್ತು, ಸಾಧನ, ಸಾಮಾಗ್ರಿ ಎಲ್ಲವೂ ಮುಖ್ಯವೋ ಹೇಳ್ವದು ವಿಷಯ ಅಲ್ಲ. ಶ್ರದ್ಧಾಪೂರ್ವಕ ವಿಧಿವತ್ತಾಗಿ ಕರ್ಮ ಮಾಡುವದು ಮುಖ್ಯ. ಹೂಗಿಲ್ಲದ್ದಲ್ಲಿ ಹೂಗಿನೆಸಳು, ಎಸಳು ಇಲ್ಲದ್ದಲ್ಲಿ ಪತ್ರ, ಅದೂ ಇಲ್ಲದ್ದಲ್ಲಿ ಒಂದು ಹುಂಡು ನೀರು ಹೇದು ಭಗವಂತ ಗೀತೆಲಿ ಹೇಳಿದಾಂಗೆ ಎಷ್ಟು ಶ್ರದ್ಧಾಭಕ್ತಿಂದ ಅರ್ಪಿಸಿದ್ದೆ ಹೇಳ್ವದು ಮುಖ್ಯ ವಿಚಾರ. ಪಿಂಡಸಂಯೋಜನಗೆ ಚಿನ್ನದ ಕಡ್ಡಿಗೆ ಎಲ್ಲಿಗೆ ಹೋವ್ತದು?!. ಅದಕ್ಕೆ ನಮ್ಮಲ್ಲಿ ದರ್ಭೆಯ ದಾರ ಉಪಯೋಗ್ಸುವದು. ಈ ರೀತಿ ನಮ್ಮತ್ರೆ ಎಂತ ಇದ್ದೋ ಅದರ ಮಡಿಕ್ಕೊಂಡು ಮೃತನ ಸದ್ಗತಿ ಉದ್ದೇಶಂದ ಪ್ರಾರ್ಥಿಸಿಗೊಂಡು ಕರ್ಮ ಮಾಡೇಕ್ಕಾದ್ದು ಮಗನಾದವನ ಕರ್ತವ್ಯ.

‘ಕರ್ಮ’ ಹೇಳ್ವದು ಜೀವಾತ್ಮನ ಅವಿಭಾಜ್ಯ ಕರ್ತವ್ಯ. ‘ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್’ – ಕರ್ಮ ಮಾಡದ್ದೆ ಒಂದು ಕ್ಷಣವೂ ಇಪ್ಪಲೆಡಿಯ ಹೇಳಿ ಭಗವಂತ° ಭಗವದ್ಗೀತೆಲಿ ಹೇಳಿದ್ದದು. ನಿತ್ಯ-ನೈಮಿತ್ತಿಕ ಅನುಷ್ಠಾನವ ಸೂತಕಲ್ಲಿ ಮಾಡ್ಳಾಗ ಹೇದು ಇಲ್ಲಿ ಹೇಳಲ್ಪಟ್ಟಿದು. ಹಾಂಗಾರೆ ಅದು ಹೇಂಗೆ ಸಮ ಬತ್ತದು ಹೇಳ್ವದು ಸಹಜವಾಗಿ ಒಂದು ಜಿಜ್ಞಾಸೆ ಮನಸ್ಸಿಲ್ಲಿ ಮೂಡುತ್ತು. ಇದಕ್ಕೆ ನೇರ ಉತ್ತರ ಇಲ್ಲಿ ಉಲ್ಲೇಖವಾಗಿಲ್ಲದ್ದರೂ ಇಂತಹ ಸಂದೇಹ ಬಪ್ಪಗ ಈ ವಿಷಯದ ಬಗ್ಗೆ ಅನ್ಯಗ್ರಂಥಲ್ಲಿ ನೋಡಿಗೊಳ್ಳದ್ದೆ ತೀರ್ಮಾನಕ್ಕೆ ಬಂದರೆ ಅದು ತಪ್ಪಾವ್ತು. ಸಂಧ್ಯಾವಂದನೆ ಇತ್ಯಾದಿಗೊ ನಿತ್ಯಕರ್ಮ. ಅದು ಕಾಮ್ಯಕರ್ಮ ಅಲ್ಲ. ಕಾಮ್ಯಕರ್ಮವ ತತ್ಕಾಲಕ್ಕೆ ನಿಲ್ಲುಸಲಕ್ಕು. ಆದರೆ ನಿತ್ಯಕರ್ಮ ಹಾಂಗೆ ಮಾಡ್ಳಾವ್ತಿಲ್ಲೆ. ಅದು ಮಾಡಿಯೇ ಮಾಡೇಕ್ಕಾದ್ದು. ಆದರೆ ಅದಕ್ಕೂ ಒಂದು ನಿಯಮ ಇದ್ದು. (ಸೂತಕೇ ಮೃತಕೇ ಕುರ್ಯಾತ್ ಪ್ರಾಣಾಯಾಮಮಮಂತ್ರಕಮ್ । ತಥಾ ಮಾರ್ಜನಮಂತ್ರಾಸ್ತು ಮನಸೋಚ್ಛಾರ್ಯ ಮಾರ್ಜಯೇತ್ ॥)-  ಸೂತಕಾದಿ ಅಶೌಚಲ್ಲಿ, ಅಥವಾ ಸಂಧ್ಯಾಕಾಲಲ್ಲಿ ಸಂಧ್ಯಾವಂದನೆ ಮಾಡ್ತಾಂಗೆ ಅವಕಾಶ ಇಲ್ಲದ್ದಲ್ಲಿ ಕುಶಜಲಾದಿ ಪರಿಕರಂಗಳ ಉಪಯೋಗುಸದ್ದೇ ಮಾರ್ಜನ-ತರ್ಪಣಂಗಳಾದಿಗಳ ಮಾನಸಿಕವಾಗಿ ಮಂತ್ರೋಚ್ಛಾರಣೆ ತೂಷ್ಣಿಲಿ ಮಾಡಿರೆ ಆತು. ಅದೇ ರೀತಿ ಸೂತಕಲ್ಲಿ ವ್ರತಾನುಷ್ಠಾನಕ್ಕೂ ನಿಷೇಧ ಇದ್ದು. ಅಂದರೂ ಏಕಾದಶಿ, ಪ್ರದೋಷಾದಿ ವ್ರತಂಗಳಲ್ಲಿ ಅಶನ ತೆಕ್ಕೊಳ್ಳದ್ದೆ ಇಪ್ಪದೇ ಉತ್ತಮ.

ಸ್ಥೂಲ ಶರೀರವ ಬಿಟ್ಟಿಕ್ಕಿ ಮೃತ ಜೀವಾತ್ಮ ಹಸ್ತ್ರಮಾತ್ರ ಗಾತ್ರದ ಸೂಕ್ಷ್ಮ ಶರೀರದ ಪ್ರಾಪ್ತಿಯಾಗಿ ಮೃತನಾದಕೂಡಲೆ ಯಮದೂತರಿಂದ ಒಂದರಿ ಯಮನಲ್ಲಿಗೆ ಅತೀ ಶೀಘ್ರಲ್ಲಿ ಕರಕ್ಕೊಂಡು ಹೋಗಲ್ಪಟ್ಟು ಕೂಡ್ಳೆ ಅಲ್ಲಿಂದ ಹಿಂತಿರುಗಿ ಬಂದು ಮೃತಸ್ಥಳವ ಹೊಂದುತ್ತ° ಹೇಳಿ ಈ ಮದಲೇ ಓದಿದ್ದದು. ಇಲ್ಲಿಂದ ಮತ್ತೆ ಹದಿಮೂರನೇ ದಿನಂದ ಅವನ ಪರಲೋಕ ಯಾತ್ರೆ ಸುರುವಾವ್ತು. ಹಾಂಗಾಗಿ, ಹನ್ನೆರಡು ದಿನಂದೊಳ ಅವಂಗೆ ಮಾಡೇಕ್ಕಪ್ಪ ಕಾರ್ಯಂಗಳ ಮಾಡಿ ಮುಗಿಶಿ ಅವನ ಪರಲೋಕಯಾತ್ರೆ ಸುಗಮವಾವ್ತಾಂಗೆ ಮಾಡೇಕ್ಕಾದ್ದು ಮಗನಾದವನ ಕರ್ತವ್ಯ. ಅದರ ಮಾಡ್ಳೆ ಹಿಂದುಳುದ ಮಗ° ಅತೀ ನೀಚನಾವ್ತ°, ಪಿತೃ ಪ್ರೇತತ್ವವೂ ತೊಲಗುತ್ತಿಲ್ಲೆ. ಹಾಂಗಾಗಿ ವಿಧಿಪೂರ್ವಕ ಸಪಿಂಡೀಕರಣ, ದಾನಾದಿಗಳ ಮಾಡಿ ಪಿತೃವಿನ ಪ್ರೇತತ್ವ ವಿಮೋಚನೆಗೊಳುಸೆಕ್ಕಾದ್ದು ಮಗನ ಕರ್ತವ್ಯ.

ಇನ್ನು ಪುನಃ ಸೂತಕದ ಬಗ್ಗೆ ಒಂಚೂರು ಕಣ್ಣು ಹಾಯ್ಸಿರೆ ಸೂತಕ  ಹೇಳಿರೆ ಎಂತರ?!  ಸೂತಿ ಹೇಳಿರೆ ಹೆರುವದು. ಪ್ರಸೂತಿ ಹೇಳಿ ಕೇಳಿ ಗೊಂತಿದ್ದಲ್ಲದ! ಸೂತ ಹೇಳಿರೆ ಹೆರಲ್ಪಟ್ಟದು/ಹುಟ್ಟಿದ್ದದು/ಸಂಭವಿಸಿದ್ದು (ಮರಣಸಂಭವಿಸಿದ್ದು).  ಸೂತಕ ಹೇಳಿರೆ ಜನನಂದಾಗಿ ಆದ ಅಶುದ್ಧಿ/ಅಶೌಚ – ವೃದ್ಧಿ ಸೂತಕ, ಮರಣಂದಾಗಿ ಸಂಭವಿಸಿದ್ದು – ಕ್ಷಯಸೂತಕ. ಒಟ್ಟಿಲ್ಲಿ,  ಸೂತಕ ಹೇಳಿರೆ ಅಶೌಚ., ಇದು ಈ ‘ಸೂತಕ’ ಹೇಳ್ವದು ಈಗಾಣ ಕಾಲಕ್ಕೆ ಎಷ್ಟು ಸರಿ?. ವೈಜ್ಞಾನಿಕವಾಗಿ ಇದಕ್ಕೆ ಸಮರ್ಥನೆ ಇದ್ದೋ?! ಎಲ್ಲಿಯೋ ವಿದೇಶಲ್ಲಿಯೋ, ಅಥವಾ ಏವುದೋ ಆಸ್ಪತ್ರೆಲಿಯೋ ಹುಟ್ಟಿದ್ದೋ ಸತ್ತದೋ ಆದರೆ ಅದರ ಸೂತಕ ವೈಜ್ಞಾನಿಕವಾಗಿ ಎಷ್ಟು ಸರಿ. ವೈಜ್ಞಾನಿಕವಾಗಿ ಹುಟ್ಟು ವಾ ಸಾವಿನ ಸಂದರ್ಭಲ್ಲಿ ಅಪ್ಪ ಭೌತಿಕ ಶರೀರದ ಅಶುಚಿಂದ ಅಪ್ಪ ಅಶೌಚ. ಹಾಂಗಾದ ಕಾರಣ ಆ ಅಶುಚ ಹೊಳೆ ದಾಂಟಿ, ಗುಡ್ಡೆ ಹತ್ತಿ ಎಲ್ಲ ಬಪ್ಪಲೆ ಇಲ್ಲೆ. ಇಲ್ಯೋ ಕೇಳಿರೆ ಇದ್ದುದೇ. ಇಲ್ಲದ್ರೆ ವಿದೇಶಲ್ಲಿಯೂ, ಪರ ಊರಿಲ್ಲಿಯೋ ಸುರುವಾದ ರೋಗಂಗೊ ಇಡೀ ಲೋಕಕ್ಕೆ ಹಬ್ಬುತ್ತದು ಹೇಂಗೆ?!. ಅದೇ ಅಲ್ಲದ ವೈರಸ್ಸು. ಆ ವೈರಸ್ಸೂ ಕೂಡ ಒಂದು ರೀತಿಯ ಸೂತಕವೆ. ಆದರೆ ಅದು ಹತ್ತು ದಿನಲ್ಲಿ ಇಪ್ಪತ್ತು ದಿನಲ್ಲಿ ಮುಗಿತ್ತಾಂಗಿಪ್ಪದಲ್ಲ!.   ಆದರೆ ಸಂಸ್ಕಾರಲ್ಲಿ ಹೇಳ್ವ ಸೂತಕ- ಅದು ಭೌತಿಕ ಶರೀರ ಮತ್ತು ಮಾನಸಿಕವಾದ್ದು. ಮಾನಸಿಕ ಉದ್ವೇಗಕ್ಕೆ ಕಾರಣ ಅಪ್ಪಂತಾದ್ದು. ಹಾಂಗಾಗಿ ವಿದೇಶಲ್ಲಿ ಹುಟ್ಟಿರೋ ಸತ್ತರೋ ಕೂಡ ಸೂತಕಾಚರಣೆ ಕರ್ತವ್ಯ. ಇದೇ ಹಂತಲ್ಲಿ ಇನ್ನೊಂದು ಜಿಜ್ಞಾಸೆಯೂ ಮನಸ್ಸಿಲ್ಲಿ ಹುಟ್ಟಿಗೊಳ್ತು. ಆರೋ ಕುಟುಂಬದೋನಡ. ಈ ವರೇಗೆ ಕಂಡೂ ಗೊಂತಿಲ್ಲೆ, ಕೇಳಿಯೂ ಗೊಂತಿಲ್ಲೆ., ಅದೂ ಸೂತಕ ಇದ್ದೋ?!-  ಖಂಡಿತಾ ಇದ್ದು. ಕುಟುಂಬದೋರ ಸಂಬಂಧಿಗಳ ದೂರ ಮಾಡ್ಯೊಂಡದು, ಗುರ್ತ ಇಲ್ಲದ್ದೆ ಇತ್ತಿದ್ದದು ನಮ್ಮ ತಪ್ಪು ಅಷ್ಟೇ. ಐಹಿಕ ಬಂಧುತ್ವ ಅಳುದುಹೋಪಲಿಲ್ಲೆ. ಆದರೆ ಎಷ್ಟು ದೂರವರೇಂಗೆ ಇದ್ದು ಹೇಳ್ವದು ಮತ್ತೊಂದು ಜಿಜ್ಞಾಸೆ. ಅದೂ ಶಾಸ್ತ್ರಲ್ಲೇ ಮೂರು ತಲೆಮಾರಿಂದ ಹಿಡುದು ಹತ್ತು ತಲೆಮಾರಿನ ಸೂತಕ ಆಚರಣೆ ಅವಧಿಯ ಉಲ್ಲೇಖಿಸಲ್ಪಟ್ಟಿದು. ಹಾಂಗಾಗಿ ಆರೋ ಸತ್ತದು ಅಲ್ಲ. ಈ ತಲೆಮಾರಿನ ಒಳಾಣವೇ ಹೊರತು ದೂರಲ್ಲಿಪ್ಪವ ದೂರಾದ° ಹೇಳಿ ಅಪಾರ್ಥ ಮಾಡಿಗೊಂಬದು ಭೂಷಣ ಅಲ್ಲ.  ನವಗೆ ಗೊಂತಿಲ್ಲದ್ದೆ ಇತ್ತಿತ್ತದ್ದು ಅಷ್ಟೆ. ಹಾಂಗಾಗಿ, ಸೂತಕ (ಅಮೆ – ಜನನ ಸೂತಕ – ವೃದ್ಧಿ ಸೂತಕ ಮತ್ತು ಮರಣ ಸೂತಕ – ಕ್ಷಯಸೂತಕ) ಆಚರಣೆ ಅಗತ್ಯ ಮಾಡೇಕ್ಕಾದ್ದು ಶಾಸ್ತ್ರ ವಿಹಿತ  ಕರ್ತವ್ಯ.  ಅಂಬಗ ಸೂತಕ ಆರು ದಿನಲ್ಲಿ,…, ಹತ್ತು ದಿನಲ್ಲಿ , ಒಂದು ಬರೇ ಮೀಯಾಣಲ್ಲಿ ಉದ್ದಿ ಹೋವ್ತಾ?! ಹೋಯೇಕು ಹೇದೇನಿಲ್ಲೆ. ವರ್ಷಪೂರ್ತಿ ಇಕ್ಕು, ಮತ್ತೂ ಇಕ್ಕು, ಅಲ್ಲ ಕೆಲವು ಗಂಟೆಲಿಯೂ ಹೋಪಲೂ ಸಾಕು. ಅವನವನ ಮಾನಸಿಕ ಸ್ಥಿತಿ. ಒಟ್ಟಿಂಗೆ ಹುಟ್ಟಿದ ಅಣ್ಣ ತಮ್ಮನೊಳ ಅಷ್ಟೊಂದು ವೈರಾಗ್ಯ ಅಥವಾ ಜಿಗುಪ್ಸೆ ಇದ್ದರೆ, ಇದು ಸತ್ತರೇ ನೆಮ್ಮದಿ ಹೇದು ಗ್ರೇಶುತ್ತೋರಿಂಗೆ ಸೂತಕ ಏನಾರು ಅಂಟುಗೋ ಈಗಾಣ ಕಾಲಲ್ಲಿ! ಅದರ ಎಲ್ಲ ಗಣೆನೆಲಿ ತೆಕ್ಕೊಂಡೇ ಸೂತಕ ಕಾಲಾವಧಿ ಇಂತಿಷ್ಟು ಹೇದು ನಿರ್ಣಯಿಸಿ ಶಾಸ್ತ್ರಲ್ಲಿ ಹೇಳಿದ್ದದು. ಮಾಡ್ತದು ಬಿಡ್ತದು ಅವಕ್ಕವಕ್ಕೆ ಬಿಟ್ಟದು. ಆದರೆ ಮಾಡಿದ್ದನೋ, ಇಲ್ಯೋ , ನಿರ್ಲಕ್ಷಿಸಿದ್ದನೋ ಹೇದು ನೋಡ್ವವು ಪ್ರತ್ಯೇಕ ಇದ್ದವು ಅವರ ಡೈರಿಲಿ ಬರಕ್ಕೊಂಡು. ಬೇಕಪ್ಪಗ ಅದು ಸಾಕ್ಷಿ ಹೇಳುತ್ತು!. ಜೋಯ್ಸಪ್ಪಚ್ಚಿ ಕವಡೆ ಮೊಗಚ್ಚುವಾಗ ಇದೆಲ್ಲ ಎದ್ದು ಕಾಂಗು !.

ಸೂತಕ ಶೌಚಕ್ಕೆ ಶಾಸ್ತ್ರೋಕ್ತ ವಿಧಿ ಇದ್ದು. ಆ ವಿಧಿಯ ಆಚರಿಸಿ ಸೂತಕ ಪರಿಮಾರ್ಜನೆ ಮಾಡಿಗೊಂಡು ಮುಂದಾಣ ಯಶಸ್ಸಿನತ್ತೆ ಹೋಯೇಕ್ಕಾದ್ದು ನಮ್ಮ ಕರ್ತವ್ಯ. ಇಲ್ಲಿ ಇನ್ನೊಂದು ಜಿಜ್ಞಾಸೆ – ಹನ್ನೆರಡ್ನೇ ದಿನ ನೀರು ಮುಟ್ಟಿಯಪ್ಪಗ, ಶಸ್ತ್ರ ಮುಟ್ಟಿಯಪ್ಪಗ, ಸೈಂಗೋಲು ಮುಟ್ಟಿಯಪ್ಪಗ, ದೊಣ್ಣೆ ಮುಟ್ಟಿಯಪ್ಪಗ ಶುದ್ಧ ಅಪ್ಪದ?! .-  ಅಲ್ಲ., ಅದು ಸಾಂಕೇತಿಕವಾಗಿ ವ್ಯಕ್ತಪಡುಸುವದು ಅಷ್ಟೇ.

ಎಲ್ಲೋರಲ್ಲಿಯೂ ಧಾರ್ಮಿಕತೆ ಜಾಗೃತವಾಗಲಿ ಹೇದು ಹೇದುಗೊಂಡು ಈ ಭಾಗಕ್ಕೆ ಹರೇ ರಾಮ.]

 

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಭಾವಯ್ಯಾ, ತುಂಬಾ ಉತ್ತಮವಾದ ಚಿಂತನೀಯ. ಸಪಿಂಡಿಕರಣದ( ಶಪುಂಡಿ) ಮಹತ್ವ, ಅದರ ಕ್ರಮಾಚರಣೆಗೊ, ಸೂತಕ, ಅಮೆ ಆಚರಣೆಯ ಬಗ್ಗೆ ವಿವರವಾಗಿ ತಿಳುಸಿದ್ದಕ್ಕೆ ಧನ್ಯವಾದ. ನಿಂಗೊ ಹೇಳಿದಾಂಗೆ, ಕೊಡುವ ದಾನಂಗಳೊ, ಉಪಯೋಗಿಸುವ ವಸ್ತುಗಳೋ ಮುಖ್ಯ ಅಲ್ಲ. ಅಪ್ಪ, ಅಮ್ಮನ ಬಗ್ಗೆ ತನಗೆ ಇಪ್ಪ ಪ್ರೀತಿ, ಗೌರವವೇ ಇಲ್ಲಿ ಮುಖ್ಯ. ಇದರ ಓದಿದರೆ ಶ್ರಾದ್ಧ ಮಾಡುವಾಗ ತಾನು ಮಾಡುವ ಕ್ರಿಯೆಗಳ ಬಗ್ಗೆ ಅಪಾರ ಶ್ರದ್ಧೆ ಬಪ್ಪದು ಖಂಡಿತ.ಧನ್ಯವಾದ. ಹರೇ ರಾಮ.

  [Reply]

  VA:F [1.9.22_1171]
  Rating: +2 (from 2 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶ್ರದ್ಧೆಲಿ ಮಾಡೆಕ್ಕಾದ ಸಪಿಂಡೀಕರಣ ಬಗ್ಗೆ ತುಂಬಾ ವಿವರವಾದ ಲೇಖನ. ಪ್ರೇತತ್ವಂದ, ಪಿತೃಗಣಕ್ಕೆ ಸೇರುಸುವ ಕಾರ್ಯ ಹೇಂಗೆ ಆಯೆಕ್ಕು ಹೇಳಿ ತುಂಬಾ ಚೆಂದಕೆ ವಿವರಿಸಿದ್ದಕ್ಕೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: +2 (from 2 votes)
 3. ಪವನಜಮಾವ

  ಎನಗೆ ಗೊತ್ತಿದ್ಹಾಂಗೆ ಸಹಪಿಂಡೀಕರಣವೇ ಸಪಿಂಡೀಕರಣ ಆದದ್ದು. ಈ ಕಾರ್ಯಲ್ಲಿ ಮೃತನ ಪಿಂಡವ ಅವರ ಮೊದಲಾಣ ಮೂರು ತಲೆಮಾರಿನವರ ಪಿಂಡದೊಟ್ಟಿಗೆ ಸೇರಿಸುವ ಕ್ರಿಯೆಯೇ ಸಹ-ಪಿಂಡೀಕರಣ. ಈಗ ಎಲ್ಲೋರೂ ಅದರ ಶಪಿಂಡಿ ಹೇಳಿಯೇ ಹೇಳೊದು.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆನೀರ್ಕಜೆ ಮಹೇಶಕೆದೂರು ಡಾಕ್ಟ್ರುಬಾವ°ಜಯಗೌರಿ ಅಕ್ಕ°ಬಂಡಾಡಿ ಅಜ್ಜಿಗೋಪಾಲಣ್ಣಶ್ರೀಅಕ್ಕ°ಪುತ್ತೂರುಬಾವಅನು ಉಡುಪುಮೂಲೆಪೆಂಗಣ್ಣ°ಅಕ್ಷರದಣ್ಣಶುದ್ದಿಕ್ಕಾರ°ವೇಣಿಯಕ್ಕ°ಸುವರ್ಣಿನೀ ಕೊಣಲೆಬಟ್ಟಮಾವ°ಗಣೇಶ ಮಾವ°ಪವನಜಮಾವವಿದ್ವಾನಣ್ಣಚೆನ್ನಬೆಟ್ಟಣ್ಣಬೋಸ ಬಾವಚುಬ್ಬಣ್ಣಕಾವಿನಮೂಲೆ ಮಾಣಿಡಾಗುಟ್ರಕ್ಕ°ವಿಜಯತ್ತೆದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ