ಗರುಡಪುರಾಣ – ಅಧ್ಯಾಯ 14 – ಭಾಗ 01

ಸಂಪಿಡೀಕರಣಾದಿ ಕರ್ಮಂಗಳ ಮಹತ್ವದ ಕುರಿತಾಗಿ ಭಗವಂತ° ಗರುಡಂಗೆ ಹೇದ್ದರ ಕಳುದ ಭಾಗಲ್ಲಿ ಓದಿದ್ದದು ನಾವು. ಮುಂದೆ

 

ಗರುಡಪುರಾಣಮ್                                             ಗರುಡಪುರಾಣ

ಅಥ ಚತುರ್ದಶೋsಧ್ಯಾಯಃ                                  ಅಧ್ಯಾಯ – 14

ಧರ್ಮರಾಜನಗರನಿರೂಪಣಮ್                                ಧರ್ಮರಾಜನ ನಗರ ನಿರೂಪಣೆ

 

ಗರುಡ ಉವಾಚimages
ಯಮಲೋಕಃ ಕಿಯನ್ಮಾತ್ರಃ ಕೀದೃಶಃ ಕೇನ ನಿರ್ಮಿತಃ ।

ಸಭಾ ಚ ಕೀದೃಶೀ ತಸ್ಯಾಂ ಧರ್ಮ ಆಸ್ತೇ ಚ ಕೈಃ ಸಹ ॥೦೧॥

ಗರುಡ ಹೇಳಿದ° – ಯಮಲೋಕವು ಎಷ್ಟು ದೊಡ್ಡದಾಗಿದ್ದು? ಯಾವ ರೀತಿಲಿ ಇದ್ದು? ಅದು ಆರಿಂದ ನಿರ್ಮಿತವಾತು? ಅವನ  ಸಭೆ (ಯಮಧರ್ಮರಾಜನ ಸಭೆ) ಹೇಂಗೆ ಇದ್ದು. ಆ ಸಭೆಲಿ ಅವ° ಆರೊಟ್ಟಿಂಗೆ ಇರ್ತ°?

ಯೇ ಧರ್ಮಮಾರ್ಗೈರ್ಗಚ್ಛಂತಿ ಧಾರ್ಮಿಕಾ ಧರ್ಮಮಂದಿರಮ್ ।
ತಾನ್ಧರ್ಮಾನಪಿ ಮಾರ್ಗಾಂಶ್ಚ ಸಮಾಖ್ಯಾಹಿ ದಯಾನಿಧೇ ॥೦೨॥

ಓ ದಯಾನಿಧೇ!, ಧರ್ಮಾತ್ಮರು ಏವ ಧರ್ಮ ಮಾರ್ಗಲ್ಲಿ ಧರ್ಮಮಂದಿರಕ್ಕೆ ಹೋವುತ್ತವೋ ಆ ಧರ್ಮವನ್ನೂ ಮಾರ್ಗವನ್ನೂ ಕೂಡ ಎನಗೆ ವಿವರಿಸಿ ಹೇಳು.

ಶ್ರೀಭಗವಾನುವಾಚ
ಶ್ರುಣುತಾರ್ಕ್ಷ್ಯ ಪ್ರವಕ್ಷ್ಯಾಮಿ ಯದ್ಗಮ್ಯಂ ನಾರದಾದಿಭಿಃ ।

ತದ್ಧರ್ಮನಗರಂ ದಿವ್ಯಂ ಮಹಾಪುಣ್ಯೈರವಾಪ್ಯತೇ ॥೦೩॥   

ಭಗವಂತ° ಹೇದ° – ಏ ಗರುಡ!, ಹೇಳ್ತೆ, ಕೇಳು. ನಾರದಾದಿಗೊ ಏವ ನಗರಕ್ಕೆ ಹೋವುತ್ತವೋ ಆ ಧರ್ಮನಗರವು ದಿವ್ಯವಾಗಿಯೂ ಮಹಾಪುಣ್ಯಂದ ಸಿಕ್ಕುವಂತದ್ದೂ ಆಗಿದ್ದು.

ಯಾಮ್ಯನೈರ್ರತಯೋರ್ಮಧ್ಯೇ ಪುರಂ ವೈವಸ್ವತಸ್ಯ ಯತ್ ।
ಸರ್ವವಜ್ರಮಯಂ ದಿವ್ಯಮಭೇದ್ಯಂ ತತ್ಸುರಾಸುರೈಃ ॥೦೪॥

ತೆಂಕ ಮತ್ತೆ ನೈರುತ್ಯ ದಿಕ್ಕಿನ ನೆಡುಕೆ ವೈವಸ್ವತನ (ಯಮನ) ಏವ ಪುರ ಇದ್ದೋ, ಅದು ಸಂಪೂರ್ಣವಾಗಿ ವಜ್ರಮಯವೂ, ದಿವ್ಯವೂ ಮತ್ತು ಸುರಾಸುರರಿಂದ ಅಭೇದ್ಯವೂ ಆಗಿದ್ದು.

ಚತುರಸ್ರಂ ಚತುರ್ದ್ವಾರಮುಚ್ಚಪ್ರಾಕಾರವೇಷ್ಟಿತಮ್ ।
ಯೋಜನಾನಾಂ ಸಹಸ್ರಂ ಹಿ ಪ್ರಮಾಣೇನ ತದುಚ್ಯತೇ ॥೦೫॥

ಅದು ಚೌಕಾಕಾರವಾಗಿದ್ದು, ನಾಕು ದ್ವಾರಂಗಳಿಂದ ಕೂಡಿ, ಅತಿ ಎತ್ತರವಾದ ಗೋಡೆಂದ ಸುತ್ತುವರುದು, ಸಾವಿರ ಯೋಜನಂಗಳ ಪ್ರಮಾಣದಷ್ಟು ವಿಸ್ತಾರವಾಗಿದ್ದು ಹೇದು ಹೇಳಲ್ಪಡುತ್ತು.

ತಸ್ಮಿನ್ಪುರೇsಸ್ತಿ ಸುಭಗಂ ಚಿತ್ರಗುಪ್ತಸ್ಯ ಮಂದಿರಮ್ ।
ಪಂಚವಿಂಶತಿಸಂಖ್ಯಾಕೈರ್ಯೋಜನೈರ್ವಿಸ್ತೃತಾಯತಮ್ ॥೦೬॥

ಆ ಪುರಲ್ಲಿ ಸುಂದರವಾದ ಚಿತ್ರಗುಪ್ತನ ಮನೆ ಇದ್ದು. ಅದು ಇಪ್ಪತ್ತೈದು ಯೋಜನಂಗಳಷ್ಟು ವಿಸ್ತಾರವಾಗಿದ್ದು.

ದಶೋಚ್ಛ್ರಿತಂ ಮಹಾದಿವ್ಯಂ ಲೋಹಪ್ರಾಕಾರವೇಷ್ಟಿತಮ್ ।
ಪ್ರತೋಲೀಶತಸಂಚಾರಂ ಪತಾಕಾಧ್ವಜಭೂಷಿತಮ್ ॥೦೭॥

ಹತ್ತು ಯೋಜನಂಗಳಷ್ಟು ಎತ್ತರವಾಗಿ ಮಹಾದಿವ್ಯವಾಗಿ ಲೋಹದ ಗೋಡೆಗಳಿಂದ ಸುತ್ತುವರುದು ನೂರಾರು ರಾಜಮಾರ್ಗಂಗಳಿಂದ ಕೂಡಿ ಧ್ವಜಪತಾಕೆಗಳಿಂದ ಶೋಭಿತವಾಗಿದ್ದು.

ವಿಮಾನಗಣಸಂಕೀರ್ಣಂ ಗೀತವಾದಿತ್ರನಾದಿತಮ್ ।
ಚಿತ್ರಿತಂ ಚಿತ್ರ ಕುಶಲೈರ್ನಿರ್ಮಿತಂ ದೇವಶಿಲ್ಪಿಭಿಃ ॥೦೮॥

ಅನೇಕವಿಮಾನಂಗಳಿಂದ ಕೂಡಿ (ಬಹುಅಂತಸ್ತಿನ ಕಟ್ಟಡ), ಗೀತವಾದ್ಯಂಗಳಿಂದ ಪ್ರತಿಧ್ವನಿತವಾಗಿ, ಚತುರಚಿತ್ರಕಾರರಿಂದ ಚಿತ್ರಿತವಾಗಿ ದೇವಶಿಲ್ಪಿಗಳಿಂದ ನಿರ್ಮತವಾಗಿದ್ದು.

ಉದ್ಯಾನೋಪವನೈ ರಮ್ಯಂ ನಾನಾವಿಹಗಕೂಜಿತಮ್ ।
ಗಂಧರ್ವೈರಪ್ಸರೋಭಿಶ್ಚ ಸಮಂತಾತ್ಪರಿವಾರಿತಮ್ ॥೦೯॥

ಅನೇಕ ಉದ್ಯಾನವನಂಗಳಿಂದ, ಹೂದೋಟಂಗಳಿಂದ ಮನೋಹರವಾಗಿ, ನಾನಪ್ರಕಾರದ ಹಕ್ಕಿಗಳ ಮಧುರ ಶಬ್ದಂದ ನಿನಾದಿತವಾಗಿ, ಎಲ್ಲೆಲ್ಲಿಯೂ ಗಂಧರ್ವ ಮತ್ತೆ ಅಪ್ಸರೆಯರಿಂದ ಕೂಡಿದ್ದು.

ತತ್ಸಭಾಯಾಂ ಚಿತ್ರಗುಪ್ತಃ ಸ್ವಾಸನೇ ಪರಮಾದ್ಭುತೇ ।
ಸಂಸ್ಥಿತೋ ಗಣಯೇದಾಯುರ್ಮಾನುಷಾಣಾಂ ಯಥಾತಥಮ್ ॥೧೦॥

ಆ ಸಭೆಲಿ ಚಿತ್ರಗುಪ್ತ° ತನ್ನ ಪರಮ ಅದ್ಭುತವಾದ ಆಸನದ ಮೇಗೆ ಕೂದೊಂಡು ಮನುಷ್ಯನ ಆಯುಸ್ಸ ಯಥಾರ್ಥವಾಗಿ ಲೆಕ್ಕ ಮಾಡುತ್ತ°.

ನ ಮುಹ್ಯತಿ ಕಥಂಚಿತ್ಸ ಸುಕೃತೇ ದುಷ್ಕೃತೇsಪಿ ವಾ ।
ಯದ್ಯೇನೋಪಾರ್ಜಿತಂ ಕರ್ಮ ಶುಭಂ ವಾ ಯದಿ ವಾsಶುಭಮ್ ॥೧೧॥

ಅವ ಸತ್ಕರ್ಮವ ಅಥವಾ ದುಷ್ಕರ್ಮವ ಎಂದೂ ಮರೆತ್ತನಿಲ್ಲೆ. ಜೀವಿ ಏವ ಶುಭ ಅಥವಾ ಅಶುಭ ಕರ್ಮಫಲವ ಸಂಪಾದಿಸಿದ್ದನೋ

ತತ್ಸರ್ವಂ ಭುಂಜತೇ ಯತ್ರ ಚಿತ್ರಗುಪ್ತಸ್ಯ ಶಾಸನಾತ್ ।
ಚಿತ್ರಗುಪ್ತಾಲಯಾತ್ಪ್ರಾಚ್ಯಾಂ ಜ್ವರಸ್ಯಾsಸ್ತಿ ಮಹಾಗೃಹಮ್ ॥೧೨॥

ಅವೆಲ್ಲವನ್ನೂ, ಅಲ್ಲಿ ಚಿತ್ರಗುಪ್ತನ ಆಜ್ಞೆ ಪ್ರಕಾರ ಅನುಭವುಸುತ್ತ°. ಚಿತ್ರಗುಪ್ತನ ಮನೆಯ ಮೂಡ ದಿಕ್ಕಿಲ್ಲಿ ಜ್ವರದ ಮಹಾಗೃಹ ಇದ್ದು.

ದಕ್ಷಿಣಸ್ಯಾಂ ಚ ಶೂಲಸ್ಯ ಲೂತಾವಿಸ್ಫೋಟಯೋಸ್ತಥಾ ।
ಪಶ್ಚಿಮೇ ಕಾಲಪಾಶಃ ಸ್ಯಾದಜೀರ್ಣಸ್ಯಾರುಚೇಸ್ತಥಾ ॥೧೩॥

ಮತ್ತೆ, ತೆಂಕಹೊಡೆಲಿ ಬೇನೆಯ, ಚರ್ಮರೋಗದ ಮತ್ತು ಸಿಡುಬಿನ ಮನೆ ಇದ್ದು. ಪಡು ಹೊಡೆಲಿ ಕಾಲಪಾಶ, ಅಜೀರ್ಣ ಮತ್ತೆ ಅರುಚಿಯ ಮನೆ ಇದ್ದು.

ಉದೀಚ್ಯಾಂ ರಾಜರೋಗೋsಸ್ತಿ ಪಾಂಡುರೋಗಸ್ತಥೈವ ಚ ।
ಐಶಾನ್ಯಾಂ ತು ಶಿರೋರ್ತಿಃಸ್ಯಾದಾಗ್ನೇಯ್ಯಾಮಸ್ತಿ ಮೂರ್ಚ್ಛನಾ ॥೧೪॥

ಬಡಗ ದಿಕ್ಕಿಲ್ಲಿ ರಾಜರೋಗದ ಮತ್ತೆ ಪಾಂಡುರೋಗ ಇತ್ಯಾದಿಗಳ, ಈಶಾನ್ಯ ದಿಕ್ಕಿಲ್ಲಿ ತಲೆಬೇನೆ ಮತ್ತೆ ಆಗ್ನೇಯ ದಿಕ್ಕೆ ಮೂರ್ಛೆರೋಗದ ಮನೆಗೊಇದ್ದು.

ಅತಿಸಾರೋ ನೈರ್ರುತೇ ತು ವಾಯವ್ಯಾಂ ಶೀತದಾಹಕೌ ।
ಏವಮಾದಿಭಿರನ್ಯೈಶ್ಚ ವ್ಯಾದಿಭಿಃ ಪರಿವಾರಿತಃ ॥೧೫॥

ನೈರುತ್ಯ ದಿಕ್ಕಿಲ್ಲಿ ಅತಿಸಾರ ಮತ್ತೆ ವಾಯವ್ಯಲ್ಲಿ ಶೀತ ಮತ್ತೆ ದಾಹದ ಮನೆಗೊ ಇದ್ದು. ಈ ರೀತಿ ಆ ಪುರ ಇನ್ನೂ ಇತರ ಅನೇಕ ವ್ಯಾಧಿಗಳಿಂದ ಕೂಡಿದ್ದು.

ಲಿಖಿತೇ ಚಿತ್ರಗುಪ್ತಸ್ತು ಮಾನುಷಾಣಾಂ ಶುಭಾಶುಭಮ್ ।
ಚಿತ್ರಗುಪಾಲಯಾದಗ್ರೇ ಯೋಜನಾನಾಂ ಚ ವಿಂಶತಿಃ ॥೧೬॥

ಚಿತ್ರಗುಪ್ತ° ಮನುಷ್ಯನ ಶುಭಾಶುಭ ಕರ್ಮಂಗಳ ಬರೆತ್ತ°. ಚಿತ್ರಗುಪ್ತನ ಮನೆ ಮುಂದಿಕ್ಕೆ ಇಪ್ಪತ್ತು ಯೋಜನಂಗಳಷ್ಟು ದೂರಲ್ಲಿ

ಪುರಮಧ್ಯೇ ಮಹಾದಿವ್ಯಂ ಧರ್ಮರಾಜಸ್ಯ ಮಂದಿರಮ್ ।
ಅಸ್ತಿ ರತ್ನಮಯಂ ದಿವ್ಯಂ ವಿದ್ಯುಜ್ವಾಲಾರ್ಕವರ್ಚಸಮ್ ॥೧೭॥

ಆ ಊರ ಮಧ್ಯಲ್ಲಿ ಮಹಾದಿವ್ಯವಾದ ಧರ್ಮರಾಜನ ಮಂದಿರ ಇದ್ದು. ಅದು ಬಹು ರತ್ನಂಗಳಿಂದ ತುಂಬಿ, ದಿವ್ಯವಾಗಿ, ವಿದ್ಯುಜ್ವಾಲೆ ಮತ್ತೆ ಸೂರ್ಯನ ತೇಜಸ್ಸಿನಷ್ಟು ಪ್ರಕಾಶಮಾನವಾಗಿದ್ದು.

ದ್ವಿಶತಂ ಯೋಜನಾನಾಂ ಚ ವಿಸ್ತಾರಾಯಾಮತಃ ಸ್ಫುಟಮ್ ।
ಪಂಚಾಶಚ್ಚ ಪ್ರಮಾಣೇನ ಯೋಜನಾನಾಂ ಸಮುಚ್ಛ್ರಿತಮ್ ॥೧೮॥

ಅದು ಇನ್ನೂರು ಯೋಜನದಷ್ಟು ವಿಸ್ತಾರವಾಗಿದ್ದು ಮತ್ತು ಇಪ್ಪತ್ತೈದು ಯೋಜನಂಗಳಷ್ಟು ಎತ್ತರವಾಗಿದ್ದು.

ಧೃತಂ ಸ್ತಂಭಸಹಸ್ರೈಶ್ಚ ವೈಡೂರ್ಯಮಣಿಮಂಡಿತಮ್ ।
ಕಾಂಚನಾಲಂಕೃತಂ ನಾನಾಹರ್ಮ್ಯಪ್ರಾಸಾದಸಂಕುಲಮ್ ॥೧೯॥

ವೈಡೂರ್ಯಮಣಿಗಳಿಂದ ಶೋಭಿತವಾದ ಸಾವುರಾರು ಕಂಬಂಗಳಿಂದಲೂ, ಚಿನ್ನಂದಲೂ ಅಲಂಕೃತವಾದ ಅನೇಕ ಭವ್ಯ ಮನೆ ಮತ್ತೆ ಅರಮನೆಗಳಿಂದ ಕೂಡಿ,

ಶಾರದಾಭ್ರನಿಭಂ ರುಕ್ಮಕಲಶೈಃ ಸುಮನೋಹರಮ್ ।
ಚಿತ್ರಸ್ಫಟಿಕಸೋಪಾನಂ ವಜ್ರಕುಟ್ಟಿಮಶೋಭಿತಮ್ ॥೨೦॥

ಶರತ್ಕಾಲದ ಮೋಡಂಗೊಕ್ಕೆ ಸಮಾನವಾದ ಬಣ್ಣದ್ದಾಗಿ, ಬಂಗಾರದ ಕಲಶಂಗಳಿಂದ ಮನೋಹರವಾಗಿ, ಚಿತ್ರವಿಚಿತ್ರ ಸ್ಫಟಿಕದ ಮೆಟ್ಳುಗಳಿಂದಲೂ, ವಜ್ರದ ನೆಲಂದಲೂ ಶೋಭಾಯಮಾನವಾಗಿ,

ಮುಕ್ತಾಜಾಲಗವಾಕ್ಷಂ ಚ ಪತಾಕಾಧ್ವಜಭೂಷಿತಮ್ ।
ಘಂಟಾನಕನಿನಾದಾಢ್ಯಂ ಹೇಮತೋರಣಮಂಡಿತಮ್ ॥೨೧॥

ಮುತ್ತಿನಸರದ ಪರದೆಗಳಿಪ್ಪ ಕಿಟಿಕಿಗಳಿಂದಲೂ, ಧ್ವಜ ಮತ್ತೆ ಪತಾಕೆಗಳಿಂದಲೂ ಭೂಷಿತವಾಗಿ, ಘಂಟೆ ಮತ್ತೆ ನಗಾರಿಗಳ ಶಬ್ದಂದ ತುಂಬಿ, ಬಂಗಾರದ ತೋರಣಂಗಳಿಂದ ಶೋಭಾಯಮಾನವಾಗಿ,

ನಾನಾಶ್ಚರ್ಯಮಯಂ ಸ್ವರ್ಣಕಪಾಟಶತಸಂಕುಲಮ್ ।
ನಾನಾಧುಮಲತಾಗುಲ್ಮೈರ್ನಿಷ್ಕಂಟೈಃ ಸುವಿರಾಜಿತಮ್ ॥೨೨॥

ಅನೇಕರೀತಿಯ ಆಶ್ಚರ್ಯಂಗಳ ಉಂಟುಮಾಡುವ ನೂರಾರು ಚಿನ್ನದ ಬಾಗಿಲ ಕೊಂಡಿ(ಚಿಲುಕ)ಗಳಿಂದ ಕೂಡಿ, ಮುಳ್ಳುಗೊ ಇಲ್ಲದ್ದ ಅನೇಕ ಮರ, ಬಳ್ಳಿ, ಗೆಡು ಗೆಂಟೆಗಳಿಂದ ವಿರಾಜಮಾನವಾಗಿ,

ಏವಮಾದಿಭಿರನ್ಯೈಶ್ಚ ಭೂಷಣೈರ್ಭೂಷಿತಂ ಸದಾ ।
ಆತ್ಮಯೋಗ ಪ್ರಭಾವೈಶ್ಚ ನಿರ್ಮಿತಂ ವಿಶ್ವಕರ್ಮಣಾ ॥೨೩॥

ಇದೇ ರೀತಿ ಇನ್ನೂ ಅನೇಕ ರೀತಿಯ ಭೂಷಣಂಗಳಿಂದ ಏವತ್ತೂ ಶೋಭಿತವಾಗಿದ್ದು. ವಿಶ್ವಕರ್ಮ° ಅದರ ತನ್ನ ಯೋಗದ ಪ್ರಭಾವಂದ ನಿರ್ಮಿಸಿದ್ದ°.

ತಸ್ಮಿನ್ನಸ್ತಿ ಸಭಾ ದಿವ್ಯಾ ಶತಯೋಜನಮಾಯತಾ ।
ಅರ್ಕಪ್ರಕಾಶಾ ಭ್ರಾಜಿಷ್ಟುಃ ಸರ್ವತಃ ಕಾಮರೂಪಿಣೀ ॥೨೪॥

ಅದರ್ಲಿ ನೂರು ಯೋಜನದಷ್ಟು ವಿಸ್ತಾರವಾದ, ಸೂರ್ಯಪ್ರಕಾಶದಾಂಗೆ ಹೊಳಕ್ಕೊಂಡಿಪ್ಪ, ಸರ್ವತ್ರ ಕಾಮರೂಪಿಣಿಯಾದ (ಇಚ್ಛಾನುಸಾರ ಸ್ವರೂಪವ ಧಾರಣೆ ಮಾಡುವಂತ) ದಿವ್ಯಸಭೆ ಇದ್ದು.

ನಾತಿಶೀತಾ ನ ಚಾತ್ಯುಷ್ಣಾ ಮನಸೋsತ್ಯಂತಹರ್ಷಿಣೇ ।
ನ ಶೋಕೋ ನ ಜರಾ ತಸ್ಯಾಂ ಕ್ಷುತ್ಪಿಪಾಸೇ ನ ಚಾಪ್ರಿಯಮ್ ॥೨೫॥

ಅಲ್ಲಿ ಅತಿಯಾದ ಶೀತ ಇಲ್ಲೆ, ಅತಿಯಾದ ಉಷ್ಣವೂ ಇಲ್ಲೆ. ಅದು ಮನಸ್ಸಿಂಗೆ ಅತ್ಯಂತ ಹರ್ಷವ ಕೊಡುವಂತಾದ್ದಾಗಿದ್ದು. ಅಲ್ಲಿ ಶೋಕ ಇಲ್ಲೆ, ಮುಪ್ಪು ಇಲ್ಲೆ, ಹಶು, ಆಸರ ಕಷ್ಟಂಗಳೂ ಇಲ್ಲೆ.

ಸರ್ವೇ ಕಾಮಾಃ ಸ್ಥಿತಾ ಯಸ್ಯಾಂ ಯೇ ದಿವ್ಯಾ ಯೇ ಚ ಮಾನುಷಾಃ ।
ರಸವಚ್ಚ ಪ್ರಭೂತಂ ಚ ಭಕ್ಷ್ಯಂ ಭೋಜ್ಯಂ ಚ ಸರ್ವಶಃ ॥೨೬॥

ಏವ ದೈವೀಕವಾದ ಮತ್ತೆ ಮಾನವೀಯ ಕಾಮನೆಗೊ ಇದ್ದೋ ಅವೆಲ್ಲವೂ ಅಲ್ಲಿ ಇದ್ದು. ಮತ್ತು ರಸಭರಿತವಾದ ಅನೇಕ ಭಕ್ಷ್ಯಭೋಜ್ಯಂಗಳೂ ಅಲ್ಲಿ ಇದ್ದು.

ರಸವಂತಿ ಚ ತೋಯಾನಿ ಶೀತಾನ್ಯುಷ್ಣಾನಿ ಚೈವ ಹಿ ।
ಪುಣ್ಯಾಃ ಶಬ್ದಾದಯಸ್ತಸ್ಯಾಂ ನಿತ್ಯಂ ಕಾಮಫಲದ್ರುಮಾಃ ॥೨೭॥

ಮಧುರವಾದ, ಶೀತಲವಾದ ಮತ್ತು ಬೆಶಿಯಾದ ನೀರು ಇದ್ದು. ಪುಣ್ಯಕರವಾದ ಶಬ್ದಂಗೊ ಇದ್ದು. ಮತ್ತೆ ಅದರ್ಲಿ ನಿತ್ಯವೂ ಇಷ್ಟಾರ್ಥವ ಕೊಡುವ ವೃಕ್ಷಂಗಳೂ ಇದ್ದು.

ಅಸಂಬಾಧಾ ಚ ಸಾ ತಾರ್ಕ್ಷ್ಯ ರಮ್ಯಾ ಕಾಮಾಗಮಾ ಸಭಾ ।
ದೀರ್ಘಕಾಲಂ ತಪಸ್ತಪ್ತ್ವಾ ನಿರ್ಮಿತಾ ವಿಶ್ವಕರ್ಮಣಾ ॥೨೮॥

ಏ ಗರುಡ!, ಬಾಧಾರಹಿತವಾಗಿಯೂ, ಮನೋಹರವಾಗಿಯೂ, ಸರ್ವಕಾಮನೆಗಳ ಪೂರೈಸುವಂಥದ್ದೂ ಆದ ಆ ಸಭೆಯ ವಿಶ್ವಕರ್ಮ° ದೀರ್ಘತಪಸ್ಸಿನ ಸಾಧನೆಂದ ನಿರ್ಮಿಸಿದ್ದು.

ತಾಮುಗ್ರತಪಸೋ ಯಾಂತಿ ಸುವ್ರತಾಃ ಸತ್ಯವಾದಿನಃ ।
ಶಾಂತಾಃ ಸಂನ್ಯಾಸಿನಃ ಸಿದ್ಧಾಃ ಪೂತಾಃ ಪೂತೇನ ಕರ್ಮಣಾ ॥೨೯॥

ಕಠಿಣ ತಪಸ್ಸು ಮಾಡಿದವು, ಸುವ್ರತಿಗೊ, ಸತ್ಯವಂತರು, ಶಾಂತಸ್ವಭಾವದವು, ಸನ್ಯಾಸಿಗೊ, ಸಿದ್ಧರು, ಪವಿತ್ರಕಾರ್ಯಂಗಳ ಮಾಡಿ ಪವಿತ್ರರಾದವು ಅಲ್ಲಿಗೆ ಹೋವ್ತವು.

ಸರ್ವೇ ಭಾಸ್ವರದೇಹಾಸ್ತೇsಲಂಕೃತಾ ವಿರಜಾಂಬರಾಃ ।
ಕೃತೈಶ್ಚ ಕರ್ಮಭಿಃ ಪುಣೈಸ್ತತ್ರ ತಿಷ್ಠಂತಿ ಭೂಷಿತಾಃ ॥೩೦॥

ಅಲ್ಲಿ ಎಲ್ಲೋರು ತೇಜೋಮಯ ಶರೀರದವರಾಗಿ, ಅಲಂಕೃತವಾಗಿ ನಿರ್ಮಲವಸ್ತ್ರವ ಧರಿಸಿಗೊಂಡು, ತಾವು ಮಾಡಿದ ಪುಣ್ಯಕರ್ಮಂಗಳಿಂದ ಭೂಷಿತರಾಗಿ ನೆಲೆಸಿದ್ದವು.

ತಸ್ಯಾಂ ಸ ಧರ್ಮೋ ಭಗವಾನಾಸನೇsನುಪಮೇ ಶುಭೇ ।
ದಶಯೋಜನವಿಸ್ತೀರ್ಣೇ ಸರ್ವರತ್ನೈಃ ಸುಮಂಡಿತೇ ॥೩೧॥

ಅಲ್ಲಿ ಭಗವಾನ್ ಧರ್ಮರಾಜ° ಅನುಪಮವಾದ, ಶುಭ್ರವಾದ, ಹತ್ತುಯೋಜನವಿಸ್ತೀರ್ಣದ ಎಲ್ಲ ರತ್ನಂಗಳಿಂದಲೂ ಅಲಂಕರಿಸಲ್ಪಟ್ಟ ಆಸನಲ್ಲಿ,

ಉಪವಿಷ್ಟಃ ಸತಾಂ ಶ್ರೇಷ್ಠಶ್ಛತ್ರಶೋಭಿತಮಸ್ತಕಃ ।
ಕುಂಡಲಾಲಂಕೃತಃ ಶ್ರೀಮಾನ್ಮಹಾಮುಕುಟಮಂಡಿತಃ ॥೩೨॥

ಕೂದುಗೊಂಡು, ಸಜ್ಜನರಲ್ಲಿ ಶ್ರೇಷ್ಠನಾದ ಅವ°, ತಲೆಮೇಲ್ಕಟೆ ಕೊಡೆಂದ ಶೋಭಿತನಾಗಿ, ಕುಂಡಲಂಗಳಿಂದಲಕೃತನಾಗಿ, ಶ್ರೀಸಂಪನ್ನನಾಗಿ, ಮಹಾಕಿರೀಟಂದ ಶೋಭಿತನಾಗಿದ್ದ°.

ಸರ್ವಾಲಂಕಾರಸಂಯುಕ್ತೋ ನೀಲಮೇಘಸಮಪ್ರಭಃ ।
ವಾಲವ್ಯಜನಹಸ್ತಾಭಿರಪ್ಸರೋಭಿಶ್ಚ ವೀಜಿತಃ ॥೩೩॥

ಸರ್ವಾಲಂಕಾರಂಗಳಿಮ್ದ ಕೂಡಿದ, ನೀಲಮೇಘಕ್ಕೆ ಸಮಾನವಾದ ಕಾಂತಿಯಿಪ್ಪ ಕೈಲಿ ಚಾಮರವ ಹಿಡುದಿಪ್ಪ ಅಪ್ಸರ ಸ್ತ್ರೀಯರಿಂದ ಗಾಳಿ ಹಾಕಿಸಲ್ಪಡುತ್ತಿದ್ದ°.

ಗಂಧರ್ವಾಣಾಂ ಸಮೂಹಾಶ್ಚ ಸಂಘಸಶ್ಚಾಪ್ಸರೋಗಣಾಃ ।
ಗೀತವಾದಿತ್ರನೃತ್ಯಾದ್ಯೈಃ ಸೇವಯಂತಿ ತಮ್ ॥೩೪॥

ಗಂಧರ್ವರ ಸಮೂಹವೂ ಮತ್ತೆ ಅಪ್ಸರೆಯರ ಸಮೂಹವೂ ಸಂಗೀತ, ವಾದ್ಯ ಮತ್ತ್ತೆ ನೃತ್ಯ ಇತ್ಯಾದಿಗಳಿಂದ ಅವನ ಎಲ್ಲ ದಿಕ್ಕಂದಲೂ ಸೇವೆ ಮಾಡುತ್ತವು.

ಮೃತ್ಯುನಾ ಪಾಶಹಸ್ತೇನ ಕಾಲೇನ ಚ ಬಲೀಯಸಾ ।
ಚಿತ್ರಗುಪ್ತೇನ ಚಿತ್ರೇಣ ಕೃತಾಂತೇನ ನಿಷೇವಿತಃ ॥೩೫॥

ಪಾಶವ ಕೈಲಿ ಹಿಡುಕ್ಕೊಂಡಿಪ್ಪ ಮೃತ್ಯು, ಬಲಶಾಲಿಯಾದ ಕಾಲ°, ಕರ್ಮಂಗಳ ಚಿತ್ರಿಸಿಗೊಂಬ ಚಿತ್ರಗುಪ್ತ° ಇವರುಗಳಿಂದ ಯಮಧರ್ಮರಾಜ° ಸೇವಿಸ್ಪಲ್ಪಟ್ಟುಗೊಂಡಿರುತ್ತ°.

ಪಾಶದಂಡಧರೈರುಗ್ರೈರ್ನಿದೇಶವರ್ತಿಭಿಃ ।
ಆತ್ಮತುಲ್ಯಬಲೈರ್ನಾನಾಸುಭಟೈಃ ಪರಿವಾರಿತಃ ॥೩೬॥

ಪಾಶ ಮತ್ತೆ ದಂಡವ ಧರಿಸಿಪ್ಪ, ಉಗ್ರರಾದ ಆಜ್ಞಾನುವರ್ತಿಗಳಾದ ಅವನಷ್ಟೇ ಬಲಶಾಲಿಗಳಾದ ಅನೇಕ ಸುಭಟರಿಂದ ಯಮಧರ್ಮರಾಜ° ಸುತ್ತುವರಿಯಲ್ಪಟ್ಟಿದ್ದ°.

ಅಗ್ನಿಷ್ಟಾತ್ತಾಶ್ಚ ಪಿತರಃ ಸೋಮಪಾಶ್ಚೋಷ್ಮಪಾಶ್ಚ ಯೇ ।
ಸ್ವಧಾವಂತೋ ಬರ್ಹಿಷದೋ ಮೂರ್ತಾಮೂರ್ತಾಶ್ಚ ಯೇ ಖಗ ॥೩೭॥

ಏ ಗರುಡ!, ಅಗ್ನಿಷ್ವಾತ್ತ ಪಿತೃಗೊ, ಸೋಮಪಾ, ಊಷ್ಮಪಾ, ಸ್ವಧಾವಂತ, ಬರ್ಹಿಷದ ಹೇಳ್ವ ಮೂರ್ತಿವಂತರು ಮತ್ತು ಅಮೂರ್ತಿವಂತರು,

ಅರ್ಯಮಾದ್ಯಾಃ ಪಿತೃಗಣಾ ಮೂರ್ತಿಮಂತಸ್ತಥಾ ಪರೇ ।
ಸರ್ವೇ ತೇ ಮುನಿಭಿಃ ಸಾರ್ಧಂ ಧರ್ಮರಾಜಮುಪಾಸತೇ ॥೩೮॥

ಅರ್ಯಮಾ ಮುಂತಾದ ಪಿತೃಗಣದವು, ಮತ್ತೆ ಇನ್ನು ಬೇರೆ ಮೂರ್ತಿವಂತರು ಅವೆಲ್ಲೊರು ಮುನಿಗಳ ಒಟ್ಟಿಂಗೆ ಧರ್ಮರಾಜನ ಸೇವೆ ಮಾಡಿಗೊಂಡಿದ್ದವು.

ಅತ್ರಿರ್ವಸಿಷ್ಠಃ ಪುಲಹೋ ದಕ್ಷಃ ಕ್ರತುರಥಾಂಗಿರಾಃ ।
ಜಾಮದಗ್ನ್ಯೋ ಭೃಗುಶ್ಚೈವ ಪುಲಸ್ತ್ಯಾಗಸ್ತ್ಯನಾರದಾಃ ॥೩೯॥

ಅತ್ರಿ, ವಶಿಷ್ಠ°, ಪುಲಹ°, ದಕ್ಷ°, ಕ್ರತು, ಅಂಗಿರಾ, ಪರಶುರಾಮ°, ಭೃಗು, ಪುಲಸ್ತ್ಯ°, ಅಗಸ್ತ್ಯ°, ನಾರದ°,

ಏತೇ ಚಾನ್ಯೈ ಚ ಬಹವಃ ಪಿತೃರಾಜಸಭಾಸದಃ ।
ನ ಶಕ್ಯಾಃ ಪರಿಸಂಖ್ಯಾತುಂ ನಾಮಭಿಃ ಕರ್ಮಭಿಸ್ತಥಾ ॥೪೦॥

ಇವೆಲ್ಲೊರೂ ಅಲ್ಲದ್ದೆ ಇನ್ನೂ ಇತರ ಅನೇಕರು ಪಿತೃರಾಜ° ಧರ್ಮರಾಜನ ಸಭಾಸದರಾಗಿದ್ದವು. ಅವರ ಹೆಸರುಗಳನ್ನೋ ಮತ್ತೆ ಅವರ ಕರ್ಮಂಗಳನ್ನೋ ಎಣುಸಲೆ ಎಡಿಯ.

ವ್ಯಾಖ್ಯಾಭಿರ್ಧರ್ಮಶಾಸ್ತ್ರಾಣಾಂ ನಿರ್ಣೇತಾರೋ ಯಥಾತಥಮ್ ।
ಸೇವಂತೇ ಧರ್ಮರಾಜಂ ತೇ ಶಾಸನಾತ್ಪರಮೇಷ್ಠಿನಃ ॥೪೧॥

ಧರ್ಮಶಾಸ್ತ್ರಂಗಳ ವ್ಯಾಖ್ಯಾನಂಗಳಿಂದ ಯಥಾರ್ಥವಾಗಿ ನಿರ್ಣಯಮಾಡುವವು, ಶ್ರೀಪರಮೇಶ್ವರನ ಆಜ್ಞೆ ಪ್ರಕಾರ ಯಮಧರ್ಮರಾಜನ ಸೇವೆ ಮಾಡುತ್ತವು.

ರಾಜಾನಃ ಸೂರ್ಯವಂಶೀಯಾಃ ಸೋಮವಂಶ್ಯಾಸ್ತಥಾಪರೇ ।
ಸಭಾಯಾಂ ಧರ್ಮರಾಜಂ ತೇ ಧರ್ಮಜ್ಞಾಃ ಪರ್ಯುಪಾಸತೇ ॥೪೨॥

ಧರ್ಮಜ್ಞರಾದ, ಸೂರ್ಯವಂಶದ ಮತ್ತೆ ಚಂದ್ರವಂಶದ ರಾಜರುಗೊ ಆ ಸಭೆಲಿ ಧರ್ಮರಾಜನ ಪೂಜಿಸುತ್ತವು.

ಮನುರ್ದಿಲೀಪೋ ಮಾಂಧಾತಾ ಸಗರಶ್ಚ ಭಗೀರಥಃ ।
ಅಂಬರೀಷೋsನರಣ್ಯಶ್ಚ ಮುಚುಕುಂದೋ ನಿಮಿಃ ಪೃಥುಃ ॥೪೩॥

ಮನು, ದಿಲೀಪ°, ಮಾಂಧಾತಾ°, ಸಗರ°, ಭಗೀರಥ°, ಅಂಬರೀಷ°, ಅನರಣ್ಯ°, ಮುಚುಕುಂದ°, ನಿಮಿ, ಪೃಥು,

ಯಯಾತಿರ್ನಹುಷುಃ ಪೂರೂರ್ದುಷ್ಯಂತಶ್ಚ ಶಿಬಿರ್ನಲಃ ।
ಭರತಃ ಶಂತನುಃ ಪಾಂಡುಃ ಸಹಸ್ರಾರ್ಜುನ ಏವ ಚ ॥೪೪॥

ಯಯಾತಿ, ನಹುಷ°, ಪೂರು, ದುಷ್ಯಂತ°, ಶಿಬಿ, ನಳ°, ಭರತ°, ಶಂತನು, ಪಾಂಡು ಮತ್ತೆ ಸಹಸ್ರಾರ್ಜುನ –

ಏತೇ ರಾಜರ್ಷಯಃ ಪುಣ್ಯಾಃ ಕೀರ್ತಿಮಂತೋ ಬಹುಶ್ರುತಾಃ ।
ಇಷ್ಟ್ವಾsಶ್ವಮೇಧೈರ್ಬಹುಭಿರ್ಜಾತಾ ಧರ್ಮಸಭಾಸದಃ ॥೪೫॥

ಈ ಪುಣ್ಯವಂತರೂ, ಕೀರ್ತಿವಂತರೂ, ಸಕಲಶಾಸ್ತ ಪಾರಂಗತರಿಇ ಆದ ರಾಜರ್ಷಿಗೊಮ್ ಅನೇಕ ಅಶ್ವಮೇಧ ಯಾಗಂಗಳ ಮಾಡಿ ಧರ್ಮರಾಜನ ಸಭಾಸದರಾಗಿದ್ದವು.

ಸಭಾಯಾಂ ಧರ್ಮರಾಜಸ್ಯ ಧರ್ಮ ಏವ ಪ್ರವರ್ತತೇ ।
ನ ತತ್ರ ಪಕ್ಷಪಾತ್sಸ್ತಿ ನಾನೃತಂ ನ ಚ ಮತ್ಸರಃ ॥೪೬

ಆ ಧರ್ಮರಾಜನ ಸಭೆಲಿ ಕೇವಲ ಧರ್ಮ ಒಂದೋ ನಡವದು. ಅಲ್ಲಿ ಪಕ್ಷಪಾತ ಆಗಲೀ, ಸುಳ್ಳಾಗಲೀ, ಮತ್ಸರವಾಗಲೀ ಇಲ್ಲೆ.

ಸಭ್ಯಾಃ ಸರ್ವೇ ಶಾಸ್ತ್ರವಿದಃ ಸರ್ವೇ ಧರ್ಮಪರಾಯಣಾಃ ।
ತಸ್ಯಾಂ ಸಭಾಯಾಂ ಸತತಂ ವೈವಸ್ವತಮುಪಾಸತೇ ॥೪೭॥

ಅಲ್ಲಿ ಸಭಾಸದರಾಗಿಪ್ಪೊ ಅವೆಲ್ಲೋರೂ ಶಾಸ್ತ್ರವ ತಿಳುದೋರು, ಎಲ್ಲೋರು ಧರ್ಮಪರಾಯಣರು. ಅವೆಲ್ಲೊಗು ಸಭೆಲಿ ಏವತ್ತೂ ವೈವಸ್ವತನ (ಯಮಧರ್ಮರಾಜನ) ಸೇವೆ ಮಾಡುತ್ತವು.

ಈದೃಶೀ ಸಾ ಸಭಾ ತಾರ್ಕ್ಷ್ಯ ಧರ್ಮರಾಜ್ಞೋ ಮಹಾತ್ಮನಃ ।
ನ ತಾಂ ಪಶ್ಯಂತಿ ಯೇ ಪಾಪಾ ದಕ್ಷಿಣೇನ ಪಥಾಗತಾಃ ॥೪೮॥

ಏ ಗರುಡ!, ಮಹಾತ್ಮ ಧರ್ಮರಾಜನ ಸಭೆ ಈ ರೀತಿ ಇದ್ದು. ಏವ ಪಾಪಿಗೊ ದಕ್ಷಿಣ ಮಾರ್ಗಲ್ಲಿ ಹೋವುತ್ತವೋ ಅವು ಈ ಸಭೆಯ ಕಾಣುತ್ತವಿಲ್ಲೆ.

ಧರ್ಮರಾಜಪುರೇ ಗಂತುಂ ಚತುರ್ಮಾರ್ಗಾ ಭವಂತಿ ಚ ।
ಪಾಪಿನಾಂ ಗಮನೇ ಪೂರ್ವಂ ಸ ತು ತೇ ಪರಿಕೀರ್ತಿತಃ ॥೪೯॥

ಧರ್ಮರಾಜನ ಪುರಕ್ಕೆ ಹೋಪಲೆ ನಾಕು ಮಾರ್ಗಂಗೊ ಇದ್ದು. ಅವುಗಳಲ್ಲಿ ಪಾಪಿಗೊ ಹೋಪ ಮಾರ್ಗವ ಈ ಮದಲೇ ನಿನಗೆ ಹೇಳಿದ್ದೆ.

ಪೂರ್ವಾದಿಭಿಸ್ತ್ರಿಭಿರ್ಮಾರ್ಗೈರ್ಯೇ ಗತಾ ಧರ್ಮಮಂದಿರೇ ।
ತೇ ವೈ ಸುಕೃತಿನಃ ಪುಣ್ಯೈಸ್ತಸ್ಯಾಂ ಗಚ್ಛಂತಿ ತಾನ್ ಶೃಣು ॥೫೦॥

ಪೂರ್ವಾದಿ ಮೂರು ಮಾರ್ಗಂಗಳಲ್ಲಿ ಆರು ಧರ್ಮಮಂದಿರಕ್ಕೆ ಹೋವುತ್ತವೋ, ಅವು ಸುಕೃತಿಗೊ (ಪುಣ್ಯಾತ್ಮರು). ಅವು ತಮ್ಮ ಪುಣ್ಯಬಲಂದ ಅಲ್ಲಿಗೆ ಹೋವುತ್ತವು. ಅದರ ಹೇಳ್ತೆ, ಕೇಳು.

 

ಗದ್ಯರೂಪಲ್ಲಿ –

ಗರುಡ° ಕೇಳಿದ° – ಹೇ ದಯಾನಿಧೇ!, ಯಮಲೋಕ ಎಟ್ಟು ದೊಡ್ಡದಿದ್ದು? ಅದು ಹೇಂಗೆ ಇದ್ದು? ಅದು ಆರಿಂದ ನಿರ್ಮಿತ ಆದ್ದು? ಅಲ್ಯಾಣ ಸಭೆ ಹೇದರೆ ಹೇಂಗಿಪ್ಪದು? ಆ ಸಭೆಲಿ ಧರ್ಮರಾಜನೊಟ್ಟಿಂಗೆ ಇಪ್ಪವಾದರೂ ಆರು? ಏವ ಧರ್ಮಾಚರಣೆ ಮಾಡ್ವ ಮೂಲಕ ಜೀವಿ ಆ ಧರ್ಮಮಂದಿರಕ್ಕೆ ಹೋವುತ್ತವು? ಆ ಧರ್ಮವ ಮತ್ತೆ ಆ ಮಾರ್ಗಂಗಳ ಬಗ್ಗೆ ಎನಗೆ ಹೇಳು.

ಭಗವಂತ° ಹೇಳಿದ° – ಹೇ ಗರುಡ!, ನಾರದಾದಿ ಮಹಾತ್ಮರು ಏವ ಆ ನಗರಕ್ಕೆ ಹೋವುತ್ತವೋ ಆ ಧರ್ಮನಗರ ದಿವ್ಯವಾಗಿಯೂ, ಮಹಾಪುಣ್ಯಂದ ದೊರಕುವಂತಾಗಿಪ್ಪದೂ ಆಗಿದ್ದು ಆ ಧರ್ಮರಾಜನ ಪುರ. ಅದರ ಕುರಿತಾಗಿ ಹೇಳ್ತೆ, ಕೇಳು – ತೆಂಕ ಮತ್ತೆ ನೈಋತ್ಯ ಕೋನದ ನೆಡುಕೆ ವೈವಸ್ವತನ (ಯಮನ) ಏವ ನಗರ ಇದ್ದೋ ಅದು ಸಂಪೂರ್ಣ ನಗರ ವಜ್ರಂದ ನಿರ್ಮಿತವಾಗಿದ್ದು. ಅದು ದಿವ್ಯವೂ ಮತ್ತೆ ಅಸುರರು ಹಾಂಗೂ ದೇವತೆಗಳಿಂದ ಅಭೇದ್ಯವಾಗಿಪ್ಪದಾಗಿದ್ದು.

ಆ ಪುರವು ಚೌಕಾಕಾರವಾಗಿದ್ದು, ನಾಕು ದ್ವಾರಂಗೊ ಮತ್ತೆ ಎತ್ತರದ ಆವರಣದ ಗೋಡೆಗಳಿಂದ ಆವೃತವಾಗಿದ್ದು. ಅದು ಒಂದು ಸಾವಿರ ಯೋಜನ ವಿಸ್ತಾರ ಇಪ್ಪದು ಹೇದು ಹೇಳುತ್ತವು. ಆ ಪುರಲ್ಲಿ ಚಿತ್ರಗುಪ್ತನ ಸುಂದರ ಮನೆ ಇದ್ದು ಅದು ಇಪ್ಪತ್ತೈದು ಯೋಜನ ಉದ್ದಗಲ ವ್ಯಾಪ್ತವಾಗಿದ್ದು. ಅದರ ಎತ್ತರ ಹತ್ತು ಯೋಜನಂಗಳಷ್ಟಿದ್ದು, ಅದು ಲೋಹದ ಅತ್ಯಂತ ದಿವ್ಯ ಆವರಣದ ಗೋಡೆಂದ ಆವೃತವಾಗಿದ್ದು. ಅಲ್ಲಿ ತಿರುಗಾಡ್ಳೆ ನೂರಾರು ಬೀದಿಗೊ ಇದ್ದು ಮತ್ತು ಅವು ಪತಾಕೆ ಧ್ವಜಗಳಿಮ್ದ ಶೋಭಿತವಾಗಿದ್ದು. ಅವು ಅನೇಕ ಬಹುಅಂತಸ್ತಿನ ಕಟ್ಟಡಗಳಿಂದ ಕೂಡಿ, ಗೀತಾವಾದ್ಯಂಗಳಿಂದ ಪ್ರತಿಧ್ವನಿತವಾಗಿ, ಚತುರ ಚಿತ್ರಕಾರರಿಂದ ಚಿತ್ರಿತವಾಗಿ ದೇವಶಿಲ್ಪಿಗಳಿಂದ ನಿರ್ಮಿತವಾಗಿದ್ದು.

ಅದು ಅನೇಕ ಉದ್ಯಾನ ಮತ್ತೆ ಉಪವನಂಗಳಿಂದ ರಮಣೀಯವಾಗಿದ್ದು. ಅನೇಕ ಪ್ರಕಾರದ ಹಕ್ಕಿಗಳ ಸಮೂಹ ಅಲ್ಲಿ ಕಲರವ ಮಾಡಿಗೊಂಡಿದ್ದು. ಎಲ್ಲ ದಿಕ್ಕೆ ಗಂಧರ್ವ ಮತ್ತೆ ಅಪ್ಸರೆಯರಣ ಗಣಂಗಳಿಂದ ಕೂಡಿದ್ದು. ಆ ಸಭೆಲಿ ಚಿತ್ರಗುಪ್ತ° ತನ್ನ ಪರಮ ಅದ್ಭುತ ಆಸನಲ್ಲಿ ಕೂದುಗೊಂಡು ಮನುಷ್ಯರ ಯಥಾವತ್ ಆಯುಸ್ಸು ಲೆಕ್ಕಮಾಡಿಗೊಂಡಿರುತ್ತ°. ಅವ° ಜೀವಿಗಳ ಸತ್ಕಾರ್ಯ ಮತ್ತೆ ದುಷ್ಕಾರ್ಯಂಗಳ ಲೆಕ್ಕ ಹಾಕುತ್ತರ್ಲಿ ಏವತ್ತೂ ಕಿಂಚಿತ್ತೂ ತಪ್ಪುತ್ತನಿಲ್ಲೆ. ಜೀವಿ ಏವ ಶುಭ ಅಶುಭ ಕಾರ್ಯಂಗಳ ಎಸಗಿದ್ದನೋ, ಚಿತ್ರಗುಪ್ತನ ಆಜ್ಞೆಪ್ರಕಾರ ಅವೆಲ್ಲೊರು ಅವೆಲ್ಲವನ್ನೂ ಅನುಭೋಗುಸೆಕ್ಕಾವ್ತು. ಚಿತ್ರಗುಪ್ತನ ಮನೆಯ ಮೂಡ ಹೊಡೆಲಿ ಜ್ವರದ ಒಂದು ದೊಡ್ಡ ವಿಶಾಲವಾದ ಮನೆ ಇದ್ದು ಮತ್ತೆ ತೆಂಕ ಹೊಡೆಲಿ ಶೂಲವ್ಯಾಧಿ, ಚರ್ಮವ್ಯಾಧಿ ಮತ್ತೆ ಸಿಡುಬು ವ್ಯಾಧಿಗಳ ಮನೆಗೊ ಇದ್ದು ಹಾಂಗೂ ಪಡುದಿಕ್ಕಿಲ್ಲಿ ಕಾಲಪಾಶ, ಅಜೀರ್ಣ ಮತ್ತೆ ಅರುಚಿಯ ಮನೆಗೊ ಇದ್ದು. ಚಿತ್ರಗುಪ್ತನ ನಿವಾಸದ ಬಡಗಹೊಡೆಲಿ ರಾಜರೋಗ ಮತ್ತೆ ಪಾಂಡುರೋಗ ನಿವಾಸಂಗೊ ಇದ್ದು. ಈಶಾನ್ಯ ಹೊಡೆಲಿ ಶಿರೋವೇದನೆಯ ಹಾಂಗೂ ಮೂರ್ಛೆವ್ಯಾಧಿಯ ಮನೆಗೊ ಇದ್ದು. ನೈಋತ್ಯಕೋನಲ್ಲಿ ಅತಿಸಾರವ್ಯಾಧಿಯ, ವಾಯವ್ಯ ಕೋನಲ್ಲಿ ಶೀತ ಹಾಂಗೂ ದಾಹದ ಸ್ಥಾನಂಗೊ. ಈ ಪ್ರಕಾರ ಇನ್ನೂ ಹೆಚ್ಚಿಗಾಣ ವ್ಯಾಧಿಗಳಿಂದ ಚಿತ್ರಗುಪ್ತನ ಭವನ ಆವರಿಸಲ್ಪಟ್ಟಿದ್ದು. ಚಿತ್ರಗುಪ್ತ° ಮನುಷ್ಯನ ಶುಭಾಶುಭ ಕರ್ಮಂಗಳ ಲೆಕ್ಕಾಚಾರವ ಬರಕ್ಕೊಂಡಿರುತ್ತ°.

ಚಿತ್ರಗುಪ್ತನ ಭವನಂದ ಇಪ್ಪತ್ತು ಯೋಜನಂಗಳಷ್ಟು ಮುಂದಂಗೆ ನಗರದ ನೆಡು ಭಾಗಲ್ಲಿ ಧರ್ಮರಾಜನ ಮಹಾದಿವ್ಯ ಭವನ ಇದ್ದು. ಅದು ದಿವ್ಯರತ್ನಂಗಳಿಂದ ಕೂಡಿದ್ದು, ವಿದ್ಯುತ್ ಜ್ವಾಲೆ ಹಾಂಗೂ ಸೂರ್ಯನ ತೇಜದಷ್ಟು ದೇದೀಪ್ಯಮಾನವಾಗಿದ್ದು. ಅದು ಇನ್ನೂರು ಯೋಜನ ಅಗಲ, ಇನ್ನೂರು ಯೋಜನ ಉದ್ದ ಮತ್ತೆ ಐವತ್ತು ಯೋಜನ ಎತ್ತರವಾಗಿಪ್ಪ ಬೃಹತ್ ಭವನ ಆಗಿದ್ದು. ವೈಡೂರ್ಯಮಣಿಗಳಿಂದ ಶೋಭಿತವಾಗಿಪ್ಪ ಸಾವಿರಾರು ಕಂಬಂಗಳಿಂದಲೂ ಚಿನ್ನಂದಲೂ ಅಲಂಕೃತವಾದ ಅನೇಕ ಭವ್ಯ ಮನೆ ಮತ್ತೆ ಅರಮನೆಗಳಿಂದ ಕೂಡಿಪ್ಪದಾಗಿದ್ದು. ಶರತ್ಕಾಲದ ಮೇಘಕ್ಕೆ ಸಮಾನ ಉಜ್ವಲ, ನಿರ್ಮಲ, ಸುವರ್ಣ ನಿರ್ಮಿತ ಕಲಶಂಗಳಿಂದ ಅತ್ಯಂತ ಶೋಭಾಯಮಾನವಾಗಿ ಮನೋಹರವಾಗಿದ್ದು. ಅದರಲ್ಲಿ ವಿವಿಧ ವರ್ಣದ ಸ್ಪಟಿಕಂಗಳಿಂದ ನಿರ್ಮಿಸಿದ ಮೆಟ್ಳುಗಳಿಂದ ಮತ್ತೆ ನೆಲಂದ ಸುಶೋಭಿತವಾಗಿದ್ದು. ಅಲ್ಯಾಣ ಕಿಟಿಕಿಗೊ ಮುತ್ತಿನ ಸರಗಳ ಪರದೆಗಳಿಂದ, ಧ್ವಜ ಪತಾಕೆಗಳಿಂದ ವಿಭೂಷಿತವಾಗಿದ್ದು. ಘಂಟೆ, ನಗಾರಿ ಶಬ್ಧಂಗಳಿಂದ ನಿನಾದಿತವಾಗಿ ಸ್ವರ್ಣತೋರಣಂಗಳಿಂದ ಶೋಭಾಯಮಾನವಾಗಿ ಅನೇಕ ರೀತಿಲಿ ಆಶ್ಚರ್ಯವ ಉಂಟುಮಾಡುವ ನೂರಾರು ಚಿನ್ನದ ಬಾಗಿಲ ಕೊಂಡಿ(ಚಿಲುಕ)ಗಳಿಂದ ಕೂಡಿ, ಮುಳ್ಳುಗೊ ಇಲ್ಲದ್ದ ಅನೇಕ ಪ್ರಕಾರದ ವೃಕ್ಷಂಗೊ, ಬಳ್ಳಿಗೊ, ಪೊದರುಗೊ ಇತ್ಯಾದಿಗಳಿಂದ ಸುಶೋಭಿತವಾಗಿದ್ದು. ಈ ಪ್ರಕಾರ ಇನ್ನೂ ಅನೇಕ ಅನ್ಯ ಭೂಷಣಂಗಳಿಂದ ಕೂಡಿ ಆ ಭವನ ವಿಭೂಷಿತವಾಗಿದ್ದು. ದೇವಶಿಲ್ಪಿ ವಿಶ್ವಕರ್ಮ° ತನ್ನ ಆತ್ಮಯೋಗದ ಪ್ರಭಾವಂದ ಅದರ ನಿರ್ಮಾಣ ಮಾಡಿಪ್ಪದಾಗಿದ್ದು. 

ಆ ಧರ್ಮರಾಜನ ಭವನಲ್ಲಿ ನೂರು ಯೋಜನ ಉದ್ದ-ಅಗಲದ ದಿವ್ಯ ಸಭಾಭವನ ಇದ್ದು. ಅದು ಸೂರ್ಯನ ಸಮಾನ ಪ್ರಕಾಶಿತವಾಗಿದ್ದು, ನಾಕೂ ದಿಕ್ಕಿಂದ ದೇದೀಪ್ಯಮಾನ ಹಾಂಗೂ ಇಚ್ಛಾನುಸಾರ ಸ್ವರೂಪವ ಧಾರಣೆ ಮಾಡುವಂತಾಗಿದ್ದು. ಅಲ್ಲಿ ಅತಿ ಶೀತ ಇಲ್ಲೆ ಅತಿ ಉಷ್ಣವೂ ಇಲ್ಲೆ. ಅದು ಮನಸ್ಸಿಂಗೆ ತುಂಬ ಹರ್ಷವ ಕೊಡುವಂತಹುದಾಗಿದ್ದು. ಅದರಲ್ಲಿಪ್ಪ ಆರಿಂಗೂ ಏವುದೇ ಶೋಕ ಉಂಟಾವುತ್ತಿಲ್ಲೆ, ವೃದ್ಧಾವಸ್ಥೆ ಪೀಡನೆ ಇಲ್ಲೆ, ಹಶು-ಆಸರ ಉಪದ್ರ ಇಲ್ಲೆ, ಅಪ್ರಿಯ ಘಟನೆಗೊ ನಡೆತ್ತೇ ಇಲ್ಲೆ. ದೇವಲೋಕ ಮತ್ತೆ ಮನುಷ್ಯ ಲೋಕಲ್ಲಿ ಎಷ್ಟು ಕಾಮ್ಯವಿಷಯಾಭಿಲಾಷೆಗೊ ಇದ್ದೋ ಅವೆಲ್ಲವೂ ಅಲ್ಲಿ ಲಭ್ಯವಾಗಿದ್ದು. ಅಲ್ಲಿ ಸಮಸ್ತ ಪ್ರಕಾರದ ರಸಂಗಳಿಂದ ಪರಿಪೂರ್ಣ ಭಕ್ಷ್ಯ ಮತ್ತೆ ಭೋಜನ ಸಾಮಾಗ್ರಿಗೊ ಎಲ್ಲದಿಕ್ಕೆ ಸಾಕಷ್ಟು ಪ್ರಮಾಣಲ್ಲಿ ಇದ್ದು. ಅಲ್ಲಿ ಸದಾ ಶೀತಲ ಹಾಂಗೂ ಬೆಶಿ ನೀರಿನ ಲಭ್ಯತೆಯ ವ್ಯವಸ್ಥೆ ಇದ್ದು, ನಿತ್ಯ ಮನೋವಾಂಛಿತ ಫಲ ನೀಡುವ ಕಲ್ಪವೃಕ್ಷಂಗೊ ಕೂಡ ಅಲ್ಲಿ ಇದ್ದು. ಬಾಧಾರಹಿತವಾಗಿಯೂ, ಮನೋಹರವಾಗಿಯೂ, ಸಕಲಕಾಮನೆಗಳ ಪೂರೈಸುವಂತದ್ದಾಗಿಯೂ ಇಪ್ಪ ಆ ಭವನವ ವಿಶ್ವಕರ್ಮ ದೀರ್ಘಕಾಲದ ತಪಸ್ಸಿನ ಫಲವಾಗಿ ಅದರ ನಿರ್ಮಾಣ ಮಾಡಿದ.

ಕಠೋರ ತಪಸ್ವಿಗೊ, ಸುವ್ರತಿ, ಸತ್ಯವಾದಿ, ಶಾಂತ, ಸನ್ಯಾಸಿ, ಸಿದ್ಧ ಹಾಂಗೂ ಪವಿತ್ರ ಕರ್ಮವ ಮಾಡಿ ಶುದ್ಧರಾದ ಪುರುಷರು ಅಲ್ಲಿಗಂಗೆ ಹೋವುತ್ತವು. ಅಲ್ಲಿ ಎಲ್ಲೋರು ತೇಜೋಮಯ ಶರೀರದವರಾಗಿ, ದಿವ್ಯ ವಸ್ತ್ರಾಭರಣ ಭೂಷಿತರಾಗಿ ವಿರಾಜಮಾನವಾಗಿದ್ದವು. ಹತ್ತು ಯೋಜನ ವಿಸ್ತೀರ್ಣ ಇಪ್ಪ ಮತ್ತೆ ಸಮಸ್ತ ಪ್ರಕಾರದ ರತ್ನಂಗಳಿಂದ ಸುಶೋಭಿತವಾಗಿಪ್ಪ ಆ ಅನುಪಮ ಉತ್ತಮ ಆಸನದ ಮೇಗೆ ಧರ್ಮರಾಜ ಕೂದುಗೊಂಡು, ಸಜ್ಜನರಲ್ಲಿ ಶ್ರೇಷ್ಥನಾದ ಅವ° ತನ್ನ ತಲೆ ಮೇಲ್ಕಟೆ ಛತ್ರಿಂದ ಶೋಭಿತನಾಗಿ, ಕರ್ಣಕುಂಡಲಂಗಳಿಂದ ಅಲಂಕೃತನಾಗಿ, ಆ ಶ್ರೀಮಂತ° ಮಹಾಮುಕುಟಂದ ಸುಶೋಭಿತನಾಗಿದ್ದ°. ಅವ° ಸಮಸ್ತ ಪ್ರಕಾರದ ಅಲಂಕರಣಂಗಳಿಂದ ಸುಶೋಭಿತನಾಗಿ ನೀಲಮೇಘಕ್ಕೆ ಸಮಾನ ಕಾಂತಿ ಇಪ್ಪ, ಕೈಲಿ ಚಾಮರವ ಹಿಡುದಿಪ್ಪ ಅಪ್ಸರ ಸ್ತ್ರೀಯರಿಂದ ಗಾಳಿ ಹಾಕಿಸಲ್ಪಡುತ್ತಿದ್ದ°.   

ಗಂಧರ್ವರ ಸಮೂಹ ಮತ್ತೆ ಅಪ್ಸರಾಂಗನೆಯರ ಗಡಣ, ಗಾಯನ, ವಾದನ ಮತ್ತೆ ನೃತ್ಯಾದಿಗಳ ಮೂಲಕ ಎಲ್ಲ ಕಡೆಂದಲೂ ಆ ಯಮಧರ್ಮರಾಜನ ಸೇವೆಮಾಡಿಗೊಂಡಿರುತ್ತವು. ಕೈಲಿ ಪಾಶ ಹಿಡ್ಕೊಂಡಿಪ್ಪ ಮೃತ್ಯು ಮತ್ತೆ ಬಲಿಷ್ಠನಾದ ಕಾಲ ಹಾಂಗೂ ವಿಚಿತ್ರ ಆಕೃತಿಯಿಪ್ಪ ಚಿತ್ರಗುಪ್ತ ಹಾಂಗೂ ಕೃತಾಂತರಿಂದ ಅವ° ಅಲ್ಲಿ ಸೇವೆಗೈಯ್ಯಲ್ಪಟ್ಟುಗೊಂಡಿರುತ್ತ°. ಕೈಲಿ ಪಾಶ ಮತ್ತೆ ದಂಡವ ಧರಿಸಿಪ್ಪ ತನ್ನಷ್ಟೇ ಬಲಾಢ್ಯರಾದ, ಉಗ್ರರಾದ ಆಜ್ಞಾನುವರ್ತಿ ದೂತರಿಂದ ಧರ್ಮರಾಜ° ಸುತ್ತುವರಿಯಲ್ಪಟ್ಟಿರುತ್ತ°. ಅಗ್ನಿಷ್ವಾತ್ತ, ಸೋಮಪ, ಉಷ್ಮಪ, ಸ್ವಧಾವಾನ್, ಬರ್ಹಿಷದ್, ಮೂರ್ತಿಮಾನ್ ಪಿತೃಗೊ – ಇವೆಲ್ಲೊರೂ ಮುನಿಗಳೊಟ್ಟಿಂಗೆ ಧರ್ಮರಾಜನ ಉಪಾಸನೆ ಮಾಡಿಗೊಂಡಿರುತ್ತವು. ಅತ್ರಿ, ವಶಿಷ್ಠ°, ಪುಲಹ°, ದಕ್ಷ°, ಕ್ರತು, ಅಂಗೀರಾ°, ಜಮದಗ್ನಿನಂದನ ಪರಶುರಾಮ°, ಭೃಗು, ಪುಲಸ್ತ್ಯ°, ಅಗಸ್ತ್ಯ°, ನಾರದ° ಇವೆಲ್ಲೊರೂ ಅಲ್ಲದ್ದೆ ಇನ್ನೂ ಅನೇಕರು ಪಿತೃರಾಜ° ಧರ್ಮರಾಜನ ಸಭಾಸದರಾಗಿದ್ದವು. ಇವರ ಹೆಸರುಗಳ, ಇವರ ಕರ್ಮಂಗಳ ಲೆಕ್ಕ ಹಾಕುತ್ಸು ಎಳ್ಪದ ಕೆಲಸ ಅಲ್ಲ. ಇವೆಲ್ಲೊರು ಧರ್ಮಶಾಸ್ತ್ರಂಗಲ ವ್ಯಾಖ್ಯಾನಂಗಳಿಂದ ಯಥಾರ್ಥವಾಗಿ ನಿರ್ಣಯ ಹೇಳುವವು ಆಗಿದ್ದವು. ಶ್ರೀಪರಮೇಶ್ವರನ ಆಜ್ಞಾನುಸಾರವಾಗಿ ಅವೆಲ್ಲೊರು ಧರ್ಮರಾಜನ ಸೇವೆ ಮಾಡುತ್ತವು. ಆ ಸಭೆಲಿ ಸೂರ್ಯವಂಶದ ಮತ್ತೆ ಚಂದ್ರವಂಶದ ಅನೇಕ ಧರ್ಮಾತ್ಮರುಗರಾದ ರಾಜರು ಧರ್ಮರಾಜನ ಸೇವೆ ಮಾಡುತ್ತವು. ಮನು, ದಿಲೀಪ°, ಮಾಂಧಾತಾ°, ಸಗರ°, ಭಗೀರಥ°, ಅಂಬರೀಷ°, ಅನರಣ್ಯ°, ಮುಚುಕುಂದ°, ನಿಮಿ, ಪೃಥು, ಯಯಾತಿ, ನಹುಷ°, ಪೂರು, ದುಷ್ಯಂತ°, ಶಿಬಿ, ನಳ°, ಭರತ°, ಶಂತನು, ಪಾಂಡು ಮತ್ತೆ ಸಹಸ್ರಾರ್ಜುನ – ಈ ಪುಣ್ಯಾತ್ಮ ರಾಜರ್ಷಿಗೊ ಮತ್ತೆ ಅನೇಕ ಪ್ರಖ್ಯಾತ ರಾಜರುಗೊ ಅನೇಕಾನೇಕ ಅಶ್ವಮೇಧ ಯಜ್ಞಂಗಳ ಅನುಷ್ಠಾನ ಮಾಡಿದ್ದರ ಫಲವಾಗಿ ಧರ್ಮರಾಜನ ಸಭಾಸದರಾಗಿದ್ದವು.

ಧರ್ಮರಾಜನ ಸಭೆಲಿ ಏವತ್ತೂ ಧರ್ಮದ ಪ್ರವೃತ್ತಿಯೇ ನಡವದು. ಅಲ್ಲಿ ಪಕ್ಷಪಾತವಾಗಲೀ, ಅಸತ್ಯ ನುಡಿಗಾಗಲಿ ಜಾಗೆಯೇ ಇಲ್ಲೆ. ಅಲ್ಲಿ ಆರಿಂಗೂ ಅರತ್ರೆಯೂ ಮಾತ್ಸರ್ಯದ ಭಾವನೆಯೇ ಇಲ್ಲೆ. ಎಲ್ಲ ಸಭಾಸದರು ಶಾಸ್ತ್ರಜ್ಞಾನಿಗೊ ಹಾಂಗೂ ಧರ್ಮಪರಾಯಣರುಗೊ ಆಗಿದ್ದವು. ಅವೆಲ್ಲರೂ ಸದಾ ವೈವಸ್ವತನ (ಯಮನ) ಉಪಾಸನೆ ಮಾಡಿಗೊಂಡಿರುತ್ತವು.

ಭಗವಂತ° ಹೇಳುತ್ತ° – ಹೇ ಗರುಡ!, ಮಹಾತ್ಮ ಧರ್ಮರಾಜನ ಆ ಸಭೆ ಈ ಪ್ರಕಾರವಾಗಿದ್ದು. ಪಾಪಾತ್ಮರುಗೊ ದಕ್ಷಿಣ ದ್ವಾರಂದ ಅಲ್ಲಿಗೆ ಹೋವುತ್ತವು. ಅವಕ್ಕೆ ಈ ಸಭೆ ಕಾಂಬಲೆ ಅವಕಾಶ ಸಿಕ್ಕುತ್ತಿಲ್ಲೆ. ಧರ್ಮರಾಜನ ಪುರಕ್ಕೆ ಹೋಪಲೆ ನಾಲ್ಕು ಮಾರ್ಗಂಗೊ ಇದ್ದು. ಪಾಪಿಗೊ ಹೋಪಂತ ಏವ ಮಾರ್ಗ ಇದ್ದೋ ಅದರ ಈ ಮದಲೇ ನಿನಗೆ ಹೇಳಿದ್ದೆ. ಪೂರ್ವಾದಿ ಮೂರು ಮಾರ್ಗಂಗಳಲ್ಲಿ ಆರು ಧರ್ಮರಾಜನ ಮಂದಿರಕ್ಕೆ ಹೋವುತ್ತವೋ, ಅವು ಸುಕೃತಿಗೊ(ಪುಣ್ಯಾತ್ಮರು), ತಮ್ಮ ಪುಣ್ಯಕರ್ಮಂಗಳ ಬಲಂದ ಅಲ್ಲಿಗೆ ಹೋವುತ್ತವು. ಆ ವಿಷಯವಾಗಿ ಹೇಳ್ತೆ, ಕೇಳು.

ಭಗವಂತ° ಮುಂದೆ ಎಂತ ಹೇಳಿದ್ದ° ಹೇಳ್ವದರ ಬಪ್ಪವಾರ ನೋಡುವೋ°.

 

[ ಚಿಂತನೀಯಾ –

ಯಮ, ಮೃತ್ಯು, ನರಕ ಹೇದು ಹೇಳ್ಯಪ್ಪಗಲೇ ನವಗೆ ಉಂಟಪ್ಪದು ಭಯ ನಡುಕ. ಆದರೆ ಅದು ಧರ್ಮರಾಜನ ಒಂದು ಹೊಡೆಯ ಮಾಂತ್ರ ನಾವು ಏವತ್ತೂ ಮನಸ್ಸಿಲ್ಲಿ ಅಡರಿಸಿಗೊಂಡಿಪ್ಪ ಕಾರಣಂದ. ಸ್ವರ್ಗವೇ ಆಗಿಪ್ಪ ಯಮಪುರದ ಇನ್ನೊಂದು ಹೊಡೆಯ ವಿವರವ ನಾವಿಲ್ಲಿ ಓದುತ್ತಾ ಇದ್ದು. ಕರ್ಮಲ್ಲಿ ಶ್ರದ್ಧೆ ಮಡಿಕ್ಕೊಂಡು ಸತ್ಕರ್ಮ ಸದ್ಧರ್ಮ ನಿರತನಾಗಿಪ್ಪವಂಗೆ ಮೃತ್ಯುವಿನ ಭಯ ಕಿಂಚಿತ್ತೂ ಅಗತ್ಯ ಇಲ್ಲೆ. ಭಗವಂತ° ಸುಕೃತಿ ಮಾರ್ಗದ ವಿಷಯವಾಗಿ ಎಂತ ಹೇಳ್ತ° ಹೇಳ್ವದರ ಬಪ್ಪವಾರ ನೋಡುವೋ°.

ಎಲ್ಲೊರಿಂಗೂ ಒಳ್ಳೆದಾಗಲಿ, ಹರೇ ರಾಮ. ]

ಚೆನ್ನೈ ಬಾವ°

   

You may also like...

2 Responses

  1. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

  2. ಶರ್ಮಪ್ಪಚ್ಚಿ says:

    ಚಿತ್ರಗುಪ್ತನ ಭವನ, ಧರ್ಮರಾಜನ ಮಹಾಭವನ ಇವುಗಳ ವರ್ಣನೆ, ಚಿತ್ರಗುಪ್ತನ ಕರ್ತವ್ಯ, ಧರ್ಮರಾಜನ ಭವನಕ್ಕೆ ಹೋಯೆಕ್ಕಾದವಕ್ಕೆ ಯೇವ ಅರ್ಹತೆ ಇರೆಕು, ಎಲ್ಲವೂ ಸ್ಫುಟವಾಗಿ ನಿರೂಪಣೆ ಆಯಿದು.
    ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *