Oppanna.com

ಗರುಡಪುರಾಣ – ಅಧ್ಯಾಯ 15 – ಭಾಗ 02

ಬರದೋರು :   ಚೆನ್ನೈ ಬಾವ°    on   30/01/2014    3 ಒಪ್ಪಂಗೊ

ಚೆನ್ನೈ ಬಾವ°

ಭಗವಂತ° ಸುಕೃತಿಯ ಜನನ ಹೇಂಗೆ ಅಪ್ಪದು ಹೇಳ್ವದರ ಹೇದಿಕ್ಕಿ ಬ್ರಹ್ಮ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಂಗಳ ಬಗ್ಗೆ ಮುಂದೆ ಹೇಳುತ್ತೆ ಹೇಳಿದಲ್ಯಂಗೆ ಕಳುದವಾರ ನಿಲ್ಸಿದ್ದದು. ಮುಂದೆ –
 
ಗರುಡಪುರಾಣ – ಅಧ್ಯಾಯ 15 – ಭಾಗ 02images
 
ಕ್ಷಿತಿರ್ವಾರಿ ಹವಿರ್ಭೋಕ್ತಾ ವಾಯುರಾಕಾಶ ಏವ ಚ ।
ಸ್ಥೂಲಭೂತಾ ಇಮೇ ಪ್ರೋಕ್ತಾಃ ಪಿಂಡೋsಯಂ ಪಾಂಚಭೌತಿಕಾಃ ॥೨೫॥
ಭೂಮಿ, ನೀರು, ಹವಿಸ್ಸ ಉಂಬ ಅಗ್ನಿ, ವಾಯು ಮತ್ತೆ ಆಕಾಶ ಇವುಗೊಕ್ಕೆ ಸ್ಥೂಲಭೂತಂಗೊ ಹೇದು ಹೇಳುವದು. ಈ ಪಿಂಡ / ಶರೀರ ಪಂಚಭೂತಂಗಳಿಂದ ಮಾಡಲ್ಪಡುವದು.
ತ್ವಗಸ್ಥಿನಾಡ್ಯೋ ರೂಮಾಣಿ ಮಾಂಸಂ ಚೈವ ಖಗೇಶ್ವರ ।
ಏತೇ ಪಂಚಗುಣಾ ಭೂಮೇರ್ಮಯಾ ತೇ ಪರಿಕೀರ್ತಿತಾಃ ॥೨೬॥
ಏ ಪಕ್ಷೀಂದ್ರ!, ಚರ್ಮ, ಮೂಳೆ, ನಾಡಿ, ಕೂದಲು, ಮತ್ತೆ ಮಾಂಸ ಈ ಐದೂ ಭೂಮಿಯ ಗುಣಂಗೊ. ಇದರ ಆನು ನಿನಗೆ ಹೇಳಿದ್ದೆ.
ಲಾಲಾ ಮೂತ್ರಂ ತಥಾ ಶುಕ್ರಂ ಮಜ್ಜಾ ರಕ್ತಂ ಚ ಪಂಚಕಮ್ ।
ಅಪಾಂ ಪಂಚ ಗುಣಾಃ ಪ್ರೋಕ್ತಾಸ್ತೇಜಸೋsಪಿ ನಿಶಾಮಯ ॥೨೭॥
ಜೊಲ್ಲು, ಉಚ್ಚು, ವೀರ್ಯ, ಮಜ್ಜೆ ಮತ್ತೆ ನೆತ್ತರು – ಈ ಐದೂ ನೀರಿನ ಪಂಚಗುಣಂಗೊ. ಇನ್ನೀಗ ತೇಜಸ್ಸಿನ ಗುಣಂಗಳ ಹೇಳ್ತೆ, ಕೇಳು.
ಕ್ಷುಧಾ ತೃಷಾ ತಥಾಲಸ್ಯಂ ನಿದ್ರಾ ಕಾಂತಿಸ್ತಥೈವ ಚ ।
ತೇಜಃ ಪಂಚಗುಣಂ ತಾರ್ಕ್ಷ್ಯ ಪ್ರೋಕ್ತಂ ಸರ್ವತ್ರ ಯೋಗಿಭಿಃ ॥೨೮॥
ಹಶು, ಆಸರು, ಆಲಸ್ಯ, ಒರಕ್ಕು ಮತ್ತೆ ಅಪೇಕ್ಷೆ – ಇವುಗೊ ಜೇಜಸ್ಸಿನ ಐದು ಗುಣಂಗೊ ಹೇದು ಎಲ್ಲದಿಕ್ಕೆ ಯೋಗಿಗಳಿಂದ ಹೇಳಲ್ಪಟ್ಟಿದು.
ಆಕುಂಚನಂ ಧಾವನಂ ಚ ಲಂಘನಂ ಚ ಪ್ರಸಾರಣಮ್ ।
ಚೇಷ್ಟಿತಂ ಚೇತಿ ಪಂಚೈವ ಗುಣಾ ವಾಯೋಃ ಪ್ರಕೀರ್ತಿತಾಃ ॥೨೯॥
ಬಗ್ಗುವದು, ಓಡುವದು, ದಾಂಟುವದು, ಹರಡುವದು, ಹಂದಾಡುವದು – ಇವುಗೊ ಐದು ವಾಯುವಿನ ಗುಣಂಗೊ ಹೇದು ಹೇಳಲ್ಪಟ್ಟಿದು.
ಘೋಷಶ್ಚಿಂತಾ ಚ ಶೂನ್ಯತ್ವಂ ಮೋಹಶ್ಚಿಂತಾ ಚ ಸಂಶಯಃ ।
ಆಕಾಶಸ್ಯ ಗುಣಾಃ ಪಂಚ ಜ್ಞಾತವ್ಯಾಸ್ತೇ ಪ್ರಯತ್ನತಃ ॥೩೦॥
ಶಬ್ದ, ಚಿಂತೆ, ಶೂನ್ಯತೆ, ಮೋಹ ಮತ್ತೆ ಸಂಶಯ- ಇವುಗೊ ಆಕಾಶದ ಐದು ಗುಣಂಗೊ. ಇವುಗಳ ಪ್ರಯತ್ನಪೂರ್ವಕ ತಿಳ್ಕೊಳ್ಳೆಕು.
ಮನೋಬುದ್ಧಿರಹಂಕಾರಶ್ಚಿತ್ತಂ ಚೇತಿ ಚತುಷ್ಟಯಮ್ ।
ಅಂತಃಕರಣಮುದ್ದಿಷ್ಟಂ ಪೂರ್ವಕರ್ಮಾಧಿವಾಸಿತಮ್ ॥೩೧॥
ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ (ಹೃದಯ) – ಈ ನಾಲ್ಕು ಅಂತಃಕರಣದ ಗುಣಂಗೊ ಹೇದು ಹೇಳಲ್ಪಟ್ಟಿದು. ಅವು ಪೂರ್ವಕರ್ಮಂಗಳ ವಾಸನಾನುಸಾರ ಇರ್ತು.
ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ಘ್ರಾಣಂ ಜ್ಞಾನೇಂದ್ರಿಯಾಣಿ ಚ ।
ವಾಕ್ಪಾಣಿಪಾದಪಾಯೂಪಸ್ಥಾನಿ ಕರ್ಮೇಂದ್ರಿಯಾಣಿ ಚ ॥೩೨॥
ಕೆಮಿ, ಚರ್ಮ, ಕಣ್ಣು, ನಾಲಗೆ ಮತ್ತೆ ಮೂಗು- ಇವುಗೊ ಪಂಚ ಜ್ಞಾನೇಂದ್ರಿಯಂಗೊ. ಬಾಯಿ, ಕೈ, ಕಾಲು ಗುದ, ಗುಹ್ಯಾಂಗಂಗೊ ಇವುಗೊ ಪಂಚ ಕರ್ಮೇಂದ್ರಿಯಂಗೊ.
ದಿಗ್ವಾತಾರ್ಕಪ್ರಚೇತೋಶ್ವಿವಹ್ನೀಂದ್ರೋಪೇಂದ್ರಮಿತ್ರಕಾಃ ।
ಜ್ಞಾನಕರ್ಮೇಂದ್ರಿಯಾಣಾಂ ಚ ದೇವತಾಃ ಪರಿಕೀರ್ತಿತಾಃ ॥೩೩॥
ದಿಕ್, ವಾಯು, ಸೂರ್ಯ°, ವರುಣ°, ಅಶ್ವಿನೀ ದೇವತೆಗೊ, ಅಗ್ನಿ, ಇಂದ್ರ°, ಉಪೇಂದ್ರ° ಮತ್ತೆ ಮಿತ್ರ° – ಇವು ಜ್ಞಾನೇಂದ್ರಿಯ ಮತ್ತೆ ಕರ್ಮೇಂದ್ರಿಯಂಗಳ ದೇವತೆಗೊ ಹೇದು ಹೇಳಲ್ಪಡುತ್ತು.
ಇಡಾ ಚ ಪಿಂಗಲಾ ಚೈವ ಸುಷುಮ್ನಾಖ್ಯಾ ತೃತೀಯಕಾ ।
ಗಾಂಧಾರೀ, ಗಜಜಿಹ್ವಾ ಚ ಪೂಷ ಚೈವ ಯಶಸ್ವಿನೀ ॥೩೪॥
ಇಡಾ ಮತ್ತೆ ಪಿಂಗಲಾ, ಮೂರ್ನೇದಾದ ಸುಷುಮ್ನಾ, ಗಾಂಧಾರೀ, ಗಜಜಿಹ್ವಾ, ಪೂಷಾ ಮತ್ತೆ ಯಶಸ್ವಿನೀ,
ಅಲಂಬುಷಾ ಕುಹೂಶ್ಚಾಪಿ ಶಂಖಿನೀ ದಶಮೀ ತಥಾ ।
ಪಿಂಡಮಧ್ಯ ಸ್ಥಿತಾ ಹ್ಯೇತಾಃ ಪ್ರಧಾನ ದಶನಾಡಿಕಾಃ ॥೩೫॥
ಅಲಂಬುಷಾ, ಕುಹು, ಮತ್ತೆ ಹತ್ತನೇದಾದ ಶಂಖಿನೀ – ಈ ಹತ್ತು ಪ್ರಧಾನ ನಾಡಿಗೊ ಈ ಶರೀರಲ್ಲಿ ನೆಲೆಸಿದ್ದು.
ಪ್ರಾಣೋsಪಾನ ಸಮಾನಾಖ್ಯ ಉದಾನೋ ವ್ಯಾನ ಏವ ಚ ।
ನಾಗಃ ಕೂರ್ಮಶ್ಚ ಕೃಕಲೋ ದೇವದತ್ತೋ ಧನಂಜಯಃ ॥೩೬॥
ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ ಮತ್ತೆ ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ.
ಹೃದಿ ಪ್ರಾಣೋ, ಗುದೇsಪಾನಃ ಸಮಾನೋ ನಾಭಿಮಂಡಲೇ ।
ಉದಾನಃ ಕಂಠದೇಶೇ ಸ್ಯಾದ್ವ್ಯಾನಃ ಸರ್ವಶರೀರಗಃ ॥೩೭॥
ಹೃದಯಲ್ಲಿ ಪ್ರಾಣವೂ, ಮಲದ್ವಾರಲ್ಲಿ ಅಪಾನವೂ, ನಾಭಿಮಂಡಲಲ್ಲಿ ಸಮಾನವೂ, ಕಂಠಪ್ರದೇಶಲ್ಲಿ ಉದಾನವೂ, ಮತ್ತೆ ವ್ಯಾನವು ಶರೀರದ ಎಲ್ಲದಿಕ್ಕೆಯೂ ಇದ್ದು.
ಉದ್ಗಾರೇ ನಾಗ ಆಖ್ಯಾತಃ ಕೂರ್ಮ ಉನ್ಮೀಲನೇ ಸ್ಮೃತಃ ।
ಕೃಕಲಃ ಕ್ಷುತ್ಕರೋ ಜ್ಞೇಯೋ ದೇವದತ್ತೋ ವಿಜೃಂಭಣೇ ॥೩೮॥
ತೇಗು ಉಂಟುಮಾಡುವದು ನಾಗ, ಕಣ್ಣು ಮಿಣುಕುಸುವದು ಕೂರ್ಮ, ಅಹ್ಹಾಕ್ಷಿ  ಉಂಟುಮಾಡುವದು ಕೃಕಲವೂ, ಆವಳಿಗ್ಗೆ ಬೇಕಾಪ್ಪದು ದೇವದತ್ತ ಹೇದು ತಿಳಿಯೆಕು.
ನ ಜಹಾತಿ ಮೃತಂ ವಾಪಿ ಸರ್ವವ್ಯಾಪೀ ಧನಂಜಯಃ ।
ಕವಲೈರ್ಭುಕ್ತಮನ್ನಂ ಹಿ ಪುಷ್ಟಿದಂ ಸರ್ವದೇಹಿನಾಮ್ ॥೩೯॥
ದೇಹದ ಎಲ್ಲದಿಕ್ಕೆ ವ್ಯಾಪ್ತವಾದ ಧನಂಜಯ ಸತ್ತವನನ್ನೂ ಬಿಡ್ತಿಲ್ಲೆ. ಒಂದು ತುತ್ತು ಅಶನ ತಿಂದರೂ ದೇಹದ ಎಲ್ಲ ಭಾಗಕ್ಕೆ ಪುಷ್ಟಿ ಉಂಟಾವ್ತು.
ನಯತೇ ವ್ಯಾನಕೋ ವಾಯುಃ ಸಾರಾಂಶಂ ಸರ್ವನಾಡಿಷು ।
ಆಹಾರೋ ಭುಕ್ತಮಾತ್ರೋ ಹಿ ವಾಯುನಾ ಕ್ರಿಯತೇ ದ್ವಿಧಾ ॥೪೦॥
ವ್ಯಾನ ಹೇಳ್ವ ವಾಯುವು ಸಾರವ ಎಲ್ಲ ನಾಡಿಗೊಕ್ಕೆ ತೆಕ್ಕೊಂಡು ಹೋವ್ತು. ಉಂಡ ಆಹಾರವ ವಾಯು ಎರಡು ಭಾಗಂಗಳನ್ನಾಗಿ ಮಾಡುತ್ತು.
ಸಂಪ್ರವಿಶ್ಯ ಗುದೇ ಸಮ್ಯಕ್ಪೃಥಗನ್ನಂ ಪೃಥಗ್ಜಲಮ್ ।
ಊರ್ಧಮಗ್ನೇರ್ಜಲಂ ಕೃತ್ವಾ ಕೃತಾನ್ನಂ ಚ ಜಲೋಪರಿ ॥೪೧॥
ಗುದ ಭಾಗಕ್ಕೆ ಪ್ರವೇಶಿಸಿ, ತಿಂದ ಅನ್ನ, ನೀರ ಬೇರೆ ಬೇರೆ ಮಾಡುತ್ತು. ಅಗ್ನಿಯ ಮೇಗೆ ನೀರು, ನೀರಿನ ಮೇಗೆ ಅನ್ನ ಇಪ್ಪಾಂಗೆ ಮಾಡಿ,
ಅಗ್ನೇಶ್ಚಾಧಃ ಸ್ವಯಂ ಪ್ರಾಣಃ ಸ್ಥಿತ್ವಾಗ್ನಿಂ ಧಮತೇ ಶನೈಃ ।
ವಾಯುನಾ ಧ್ಮಾಯಮಾನೋsಗ್ನಿಃ ಪೃಥಕ್ಕಿಟ್ಟಂ ಪೃಥಗ್ರಸಮ್ ॥೪೨॥
ಅಗ್ನಿನ ಕೆಳ ಪ್ರಾಣವಾಯು ತಾನೇ ನೆಲೆಗೊಂಡು, ಅಗ್ನಿಯ ಮೆಲ್ಲಂಗೆ ಊದುತ್ತು. ವಾಯುವಿಂದ ಊದಲ್ಪಟ್ಟ ಅಗ್ನಿ ಮಲವನ್ನೂ, ರಸವನ್ನೂ ಬೇರೆ ಬೇರೆ ಮಾಡುತ್ತು.
ಕುರುತೇ ವ್ಯಾನಕೋ ವಾಯುರ್ವಿಷ್ವಕ್ಸಂಪ್ರಾಯೇದ್ರಸಮ್ ।
ದ್ವಾರೈರ್ದ್ವಾದಶಭಿರ್ಭಿನ್ನಂ ಕಿಟ್ಟಂ ದೇಹದ್ಬಹಿಃ ಸ್ರವೇದ್ ॥೪೩॥
ವ್ಯಾನ ಹೇಳ್ವ ವಾಯು ರಸವ ಎಲ್ಲದಿಕ್ಕಂಗೆ ಎತ್ತುತ್ತಾಂಗೆ ಸರಬರಾಜು ಮಾಡುತ್ತು. ಮತ್ತೆ ಮಲವ ಭಿನ್ನಮಾಡಿ ಹನ್ನೆರಡು ದ್ವಾರಂಗಳಿಂದ ದೇಹಂದ ಹೆರ ಕಳುಸುತ್ತು.
ಕರ್ಣಾsಕ್ಷಿನಾಸಿಕಾ ಜಿಹ್ವಾ ದಂತಾ ನಾಭಿರ್ನಖಾ ಗುದಮ್ ।
ಗುಹ್ಯಂ ಶಿರಾ ವಪುರ್ಲೋಮ ಮಲಸ್ಥಾನಾನಿ ಚಕ್ಷತೇ ॥೪೪॥
ಕೆಮಿ, ಕಣ್ಣು, ಮೂಗು, ನಾಲಗೆ, ಹಲ್ಲು, ಹೊಕ್ಕುಳು, ಉಗುರು, ಮಲದ್ವಾರ, ಗುಹ್ಯೇಂದ್ರಿಯ, ತಲೆ, ಶರೀರ ಮತ್ತೆ ರೋಮಂಗೊ ಮಲಸ್ಥಾನ ಹೇದು ಹೇಳಲ್ಪಡುತ್ತು.
ಏವಂ ಸರ್ವೇ ಪ್ರವರ್ತಂತೇ ಸ್ವಸ್ವಕರ್ಮಣಿ ವಾಯವಃ ।
ಉಪಲಭ್ಯಾತ್ಮನಃ ಸತ್ತಾಂ ಸೂರ್ಯಾಲೋಕಂ ಯಥಾ ಜನಾಃ ॥೪೫॥
ಈ ರೀತಿ ಎಲ್ಲ ವಾಯುಗೊ ಆತ್ಮನಿಂದ ಶಕ್ತಿಯ ಪಡಕ್ಕೊಂಡು ಸೂರ್ಯೋದಯವ ನೋಡಿದ ಜೆನರ ಹಾಂಗೆ ತಮ್ಮ ತಮ್ಮ ಕರ್ಮಂಗಳಲ್ಲಿ ನಿರತವಾಗಿರುತ್ತು.
ಇದಾನೀಂ ನರದೇಹಸ್ಯ ಶ್ರುಣು ರೂಪದ್ವಯಂ ಖಗ ।
ವ್ಯಾವಹಾರಿಕಮೇಕಂ ಚ ದ್ವಿತೀಯಂ ಪಾರಮಾರ್ಥಿಕಮ್ ॥೪೬॥
ಏ ಪಕ್ಷಿ ಗರುಡ!, ಈಗ ನರದೇಹದ ಎರಡು ರೂಪಂಗಳ ಕೇಳು. ಒಂದು ವ್ಯಾವಹಾರಿಕ ರೂಪ, ಎರಡ್ನೇದು ಪಾರಮಾರ್ಥಿಕ ರೂಪ.
ತಿಸ್ರಃ ಕೋಟ್ಯೋsರ್ಧಕೋಟೀ ಚ ರೋಮಾಣಿ ವ್ಯಾವಹಾರಿಕೇ ।
ಸಪ್ತಲಕ್ಷಾಣಿ ಕೇಶಾಃ ಸ್ಯುರ್ನಖಾಃ ಪ್ರೋಕ್ತಾಸ್ತು ವಿಂಶತಿಃ ॥೪೭॥
ವ್ಯಾವಹಾರಿಕ ರೂಪಲ್ಲಿ ಮೂರುವರೆ ಕೋಟಿ ರೋಮಂಗೊ, ಏಳು ಲಕ್ಷ ತಲೆಕಸವು, ಇಪ್ಪತ್ತು ಉಗುರುಗೊ ಇದ್ದು ಹೇದು ಹೇಳಿದ್ದು.
ದ್ವಾತ್ರಿಂಶದ್ದಶನಾಃ ಪ್ರೋಕ್ತಾಃ ಸಾಮಾನ್ಯಾದ್ವಿನತಾಸುತ ।
ಮಾಂಸಂ ಪಲಸಹಸ್ರಂ ತು ರಕ್ತಂ ಪಲಶತಂ ಸ್ಮೃತಮ್ ॥೪೮॥
ಏ ವಿನತಾಸುತನಾದ ಗರುಡ!, ಸಾಮಾನ್ಯವಾಗಿ ಮುವತ್ತೆರಡು ಹಲ್ಲುಗೊ, ಒಂದು ಸಾವಿರ ಪಲ ಮಾಂಸ (1ಪಲ/ಪಳ = ಸುಮಾರು ನಾಕು ತೊಲ ತೂಕ, ನೂರು ತೊಲ ಹೇಳಿರೆ ಸುಮಾರು 1.66 ಕಿಲೋಗ್ರಾಮ್), ನೂರು ಪಲ ನೆತ್ತರೂ ಇದ್ದು ಹೇದು ಹೇಳುತ್ತವು.
ಪಲಾನಿ ದಶ ಮೇದಸ್ತು ತ್ವಕ್ಪಲಾನಿ ಚ ಸಪ್ತತಿಃ ।
ಪಲದ್ವಾದಶಕಂ ಮಜ್ಜಾ ಮಹಾರಕ್ತಂ ಪಲತ್ರಯಮ್ ॥೪೯॥
ಕೊಬ್ಬು ಹತ್ತು ಪಲ, ಚರ್ಮ ಎಪ್ಪತ್ತು ಪಲ, ಅಸ್ಥಿಮಜ್ಜೆ (ದೇಹಸಾರ) ಹನ್ನೆರಡು ಪಲ ಮತ್ತೆ ಮಹಾನೆತ್ತರು ಮೂರು ಪಲಂಗಳಷ್ಟು ಇದ್ದು
ಶುಕ್ರಂ ದ್ವಿಕುಡವಂ ಜ್ಞೇಯಂ ಕುಡವಂ ಶೋಣಿತಂ ಸ್ಮೃತಮ್ ।
ಷಷ್ಟ್ಯುತ್ತರಂ ಚ ತ್ರಿಶತಮಸ್ಥ್ನಾಂ ದೇಹೇ ಪ್ರಕೀರ್ತಿತಮ್ ॥೫೦॥
ಶುಕ್ರ ಎರಡು ಕುಡ್ತೆಯಷ್ಟು, ಶೋಣಿತ (ರಜ) ಒಂದು ಕುಡ್ತೆಯಷ್ಟು ಹೇದು ತಿಳುದ್ದು. ಈ ದೇಹಲ್ಲಿ ಮುನ್ನೂರ ಅರುವತ್ತು ಎಲುಬುಗೊ ಇದ್ದು ಹೇದು ಹೇಳಲ್ಪಟ್ಟಿದು.
ನಾಡ್ಯಃ ಸ್ಥೂಲಶ್ಚ ಸೂಕ್ಷ್ಮಾಶ್ಚ ಕೋಟಿಶಃ ಪರಿಕೀರ್ತಿತಾಃ ।
ಪಿತ್ತಂ ಪಲಾನಿ ಪಂಚಾಶತ್ತದರ್ಧಂ ಶ್ಲೇಷ್ಮಣಸ್ತಥಾ ॥೫೧॥
ಸ್ಥೂಲ ಮತ್ತೆ ಸೂಕ್ಷ್ಮ ನಾಡಿಗೊ ಕೋಟ್ಯಂತರ, ಪಿತ್ತ ಐವತ್ತು ಪಲ, ಶ್ಲೇಷ್ಮ(ಕಫ) ಅದರ ಅರ್ಧ ಹೇದು ಹೇಳಿದ್ದು.
ಸತತಂ ಜಾಯಮಾನಂ ತೂ ವಿಣ್ಮೂತ್ರಂ ಚಾ ಪ್ರಮಾಣತಃ ।
ಏತದ್ಗುಣಸಮಾಯುಕ್ತಂ ಶರೀರಂ ವ್ಯಾವಹಾರಿಕಮ್ ॥೫೨॥
ಏವತ್ತೂ ಉತ್ಪನ್ನ ಅಪ್ಪ ಮಲ ಮತ್ತೆ ಮೂತ್ರಂಗೊ ಅಪ್ರಮಾಣವಾಗಿದ್ದು. ವ್ಯಾವಹಾರಿಕ ಶರೀರ ಈ ಗುಣಂಗಳಿಂದ ಕೂಡಿದ್ದು.
ಭುವನಾನಿ ಚ ಸರ್ವಾಣಿ ಪರ್ವತದ್ವೀಪಸಾಗರಾಃ ।
ಆದಿತ್ಯಾದ್ಯಾ ಗ್ರಹಾಃ ಸಂತಿ ಶರೀರೇ ಪಾರಮಾರ್ಥಿಕೇ ॥೫೩॥
ಎಲ್ಲ ಲೋಕಂಗಳೂ, ಪರ್ವತಂಗಳೂ, ದ್ವೀಪಂಗಳೂ, ಸಾಗರಂಗಳೂ, ಸೂರ್ಯಾದಿ ಗ್ರಹಂಗಳೂ ಪಾರಮಾರ್ಥಿಕ ಶರೀರಲ್ಲಿ ಇದ್ದು.
ಪಾರಮಾರ್ಥಿಕದೇಹೇ ಹಿ ಷಟ್‍ಚಕ್ರಾಣಿ ಭವಂತಿ ಚ ।
ಬ್ರಹ್ಮಾಂಡೇ ಯೇ ಗುಣಾಃ ಪ್ರೋಕ್ತಾಸ್ತೇsಪ್ಯಸ್ಮಿನ್ನೇವ ಸಂಸ್ಥಿತಾಃ ॥೫೪॥
ಪಾರಮಾರ್ಥಿಕ ಶರೀರಲ್ಲಿ ಆರು ಚಕ್ರಂಗೊ ಇದ್ದು. ಈ ಬ್ರಹಾಂಡಲ್ಲಿ ಏವ ಗುಣಂಗಳಿದ್ದು ಹೇದು ಹೇಳದ್ದದಿದ್ದೋ ಅವೆಲ್ಲವೂ ಇದರಲ್ಲೂ ಇದ್ದು.
ತಾನಹಂ ತೇ ಪ್ರವಕ್ಷ್ಯಾಮಿ ಯೋಗಿನಾಂ ಧಾರಣಾಸ್ಪದಾನ್ ।
ಯೇಷಾಂ ಭಾವನಯಾ ಜಂತುರ್ಭವೇದ್ವೈರಾಜರೂಪಭಾಕ್ ॥೫೫॥
ಯೋಗಿಗಳ ಧಾರಣಕ್ಕೆ ಆಧಾರವಾದ ಅವುಗಳ ನಿನಗೆ ಆನು ಹೇಳುತ್ತೆ. ಅವುಗಳ ಭಾವನೆಗಳಿಂದ ಜೀವಿ ವೈರಾಜರೂಪದ ಅನುಭವಿಯಾವುತ್ತ°.
 
ಗದ್ಯರೂಪಲ್ಲಿ –
ಭಗವಂತ° ವೈನತೇಯ ಗರುಡಂಗೆ ವಿವರುಸುತ್ತ° –
ಭೂಮಿ, ಜಲ, ಅಗ್ನಿ, ವಾಯು ಮತ್ತೆ ಆಕಾಶ ಇವುಗೊಕ್ಕೆ ಸ್ಥೂಲಭೂತಂಗೊ ಹೇದು ಹೇಳುವದು.  ಈ ಶರೀರ ಇವೇ ಪಂಚಭೂತಂಗಳಿಂದ ನಿರ್ಮಾಣವಪ್ಪದು. ಹಾಂಗಾಗಿ ಪಂಚಭೌತಿಕ ಎನಿಸಿಗೊಂಬದು. ಚರ್ಮ, ಮೂಳೆ, ನಾಡಿ, ರೋಮ ಮತ್ತೆ ಮಾಂಸ ಇವು ಐದು ಭೂಮಿಯ ಗುಣಂಗೊ. ಇದರ ಆನು ನಿನಗೆ ಹೇಳಿದ್ದೆ. ಜೊಲ್ಲು, ಮೂತ್ರ, ರೇತಸ್ಸು, ಮಜ್ಜೆ ಮತ್ತೆ ಐದನೇದು ನೆತ್ತರು – ಇವು ಐದು ಜಲದ ಗುಣಂಗೊ. ಇನ್ನು ತೇಜದ ಗುಣ – ಹಶು, ಆಸರು, ಆಲಸ್ಯ, ಒರಕ್ಕು, ಕಾಂತಿ – ಈ ಐದು ತೇಜದ ಗುಣಂಗೊ ಹೇದು ಯೋಗಿಗೊ ಎಲ್ಲದಿಕ್ಕೆ ಹೇಳಿದ್ದವು. ಸಂಕೋಚನಗೊಂಬದು, ಓಡುವದು, ದಾಂಟುವದು, ವಿಕಸನಗೊಂಬದು ಮತ್ತೆ ಹಂದಾಡುವದು – ಇವೈದು ವಾಯುವಿನ ಗುಣಂಗೊ. ಶಬ್ದ, ಶೂನ್ಯ, ಗಾಂಭೀರ್ಯ, ಶ್ರವಣ ಮತ್ತೆ ಸಂಶಯ – ಈ ಐದು ಗುಣಂಗೊ ಆಕಾಶದ್ದು ಹೇದು ಪ್ರಯತ್ನಪೂರ್ವಕವಾಗಿ ತಿಳಿಯೆಕು.
ಪೂರ್ವಜನ್ಮ ಕರ್ಮಂಗಳಿಂದ ಅಧಿವಾಸಿತ ಮನಸ್ಸು, ಬುದ್ಧಿ, ಅಹಂಕಾರ ಮತ್ತೆ ಚಿತ್ತ – ಇವುಗೊ ಅಂತಃಕರಣ ಚತುಷ್ಟಯಂಗೊ ಹೇದು ಹೇಳಲ್ಪಡುತ್ತು. ಕೆಮಿ, ಚರ್ಮ, ನಾಲಗೆ, ಕಣ್ಣು, ಮೂಗು – ಇವು ಪಂಚ ಜ್ಞಾನೇಂದ್ರಿಯಂಗೊ. ಮತ್ತೆ, ಬಾಯಿ, ಕಾಲು, ಕೈ, ಗುದ ಮತ್ತೆ ಗುಹ್ಯಾಂಗ ಇವು ಐದು ಕರ್ಮೇಂದ್ರಿಯಂಗೊ. ದಿಕ್ಕು, ವಾಯು, ಸೂರ್ಯ°, ಅಶ್ವಿನೀ ದೇವತೆಗೊ, ಅಗ್ನಿ, ಇಂದ್ರ°, ಉಪೇಂದ್ರ° ಮತ್ತೆ ಮಿತ್ರ° – ಇವು ಜ್ಞಾನೇಂದ್ರಿಯ ಮತ್ತೆ ಕರ್ಮೇಂದ್ರಿಯಂಗಳ ದೇವತೆಗೊ ಹೇದು ಹೇಳಲ್ಪಡುತ್ತು.
ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಗಜಜಿಹ್ವಾ. ಪೂಷಾ, ಯಶಸ್ವಿನಿ, ಅಲಂಬುಷಾ, ಕುಹೂ ಮತ್ತೆ ಶಂಖಿನಿ – ಈ ಹತ್ತು ಪ್ರಧಾನ ನಾಡಿಗೊ ಈ ದೇಹಲ್ಲಿ ಇದ್ದು. ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ, ಮತ್ತೆ ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ – ಇವು ಹತ್ತು ಪ್ರಾಣ ವಾಯುಗೊ. ಹೃದಯಲ್ಲಿ ಪ್ರಾಣವಾಯು, ಗುದಲ್ಲಿ ಅಪಾನವಾಯು, ನಾಭಿಮಂಡಲಲ್ಲಿ ಸಮಾನವಾಯು, ಕಂಠಲ್ಲಿ ಉದಾನವಾಯು, ಮತ್ತೆ ಸಂಪೂರ್ಣ ಶರೀರಲ್ಲಿ ವ್ಯಾನವಾಯು ವ್ಯಾಪ್ತವಾಗಿರುತ್ತು. ತೇಗು/ಓಕರಿಕೆಲಿ ನಾಗವಾಯು, ಕಣ್ಣು ಮಿಣುಕುಸುವಲ್ಲಿ ಕೂರ್ಮವಾಯು, ಅಹ್ಹಾಕ್ಷಿ (ಸೀನು) ಉಂಟುಮಾಡುವದು ಕೃಕಲವಾಯು, ಆವಳಿಗೆ ಬೇಕಾಪ್ಪದು ದೇವದತ್ತವಾಯು ಹೇದು ತಿಳಿಯೆಕು. ಸರ್ವವ್ಯಾಪಿ ಧನಂಜಯವಾಯು ಶರೀರ ಸತ್ತರೂ ಅದರ ಬಿಡುತ್ತಿಲ್ಲೆ. ಗ್ರಾಸದ ರೂಪಲ್ಲಿ ಸೇವಿಸಿದ ತುತ್ತು ಅಶನವನ್ನೂ ಸಮಸ್ತ ಜೀವಿಗಳ ಶರೀರವ ಪುಷ್ಟಿಗೊಳುಸುತ್ತು.
ವ್ಯಾನ ಹೇಳ್ವ ವಾಯು ಆ ಪುಷ್ಟಿಕಾರಕ ಅಶನದ ಸಾರಾಂಶಭೂತ ರಸವ ಶರೀರದ ಸಮಸ್ತ ನಾಡಿಗೊಕ್ಕೆ ಎತ್ತುಸುತ್ತು. ಉಂಡ ಆಹಾರವ ಈ ವಾಯು ಎರಡು ಭಾಗಂಗಳಾಗಿ ವಿಂಗಡನೆ ಮಾಡುತ್ತು. ಗುದಭಾಗಲ್ಲಿ ಪ್ರವಿಷ್ಟನಾಗಿ ಸಮಗ್ರರೂಪಂದ ಅಶನ ಮತ್ತೆ ನೀರ ಬೇರೆ ಬೇರೆ ಮಾಡಿ, ಅಗ್ನಿಯ ಮೇಗೆ ನೀರು ಮತ್ತೆ ನೀರಿನ ಮೇಗೆ ಅಶನ ಇಪ್ಪಾಂಗೆ ಮಾಡಿ,ಅಗ್ನಿಯ ಕೆಳ ಆ ಪ್ರಾಣವಾಯು ಸ್ವತಃ ತಾನೇ ನೆಲೆಸಿ, ಆ ಅಗ್ನಿಗೆ ಮೆಲ್ಲಂಗೆ ಗಾಳಿ ಊದುತ್ತು. ಈ ವಾಯುವಿಂದ ಊದಲ್ಪಟ್ಟ ಗಾಳಿಂದಲಾಗಿ ಅಗ್ನಿ ಮೆಲ್ಲಂಗೆ ಕಿಟ್ಟ(ಮಲ)ವನ್ನೂ ರಸವನ್ನೂ ಬೇರೆಬೇರೆ ಮಾಡುತ್ತು. ಅಷ್ಟಪ್ಪಗ ಆ ವ್ಯಾನವಾಯು ಆ ರಸವ ಸಂಪೂರ್ಣ ಶರೀರಕ್ಕೆ ಮುಟ್ಟುಸುತ್ತು. ರಸಂದ ಬೇರ್ಪಟ್ಟ ಮಲ ಶರೀರದ ಕರ್ಣ ನಾಸಿಕಾದಿ ಹನ್ನೆರಡು ರಂಧ್ರಂಗಳಿಂದ ಹೆರ ಬತ್ತು.
ಕೆಮಿ, ಕಣ್ಣು, ಮೂಗು, ನಾಲಗೆ, ಹಲ್ಲು, ಹೊಕ್ಕುಳು, ಉಗುರು, ಮಲದ್ವಾರ, ಗುಹ್ಯೇಂದ್ರಿಯ, ತಲೆ, ಶರೀರ ಮತ್ತೆ ರೋಮಂಗೊ – ಇವು ಹನ್ನೆರಡು ಮಲಸ್ಥಾನಂಗೊ ಹೇದು ಹೇಳಲ್ಪಡುತ್ತು. ಏವ ಪ್ರಕಾರ ಸೂರ್ಯಂದ ಪ್ರಕಾಶವ ಪ್ರಾಪ್ತಿ ಹೊಂದಿ ಜೀವಿಗೊ ತಮ್ಮ ತಮ್ಮ ಚಟುವಟಿಕೆಲಿ ಪ್ರವೃತ್ತರಾವ್ತವೋ, ಅದೇ ಪ್ರಕಾರ ಆತ್ಮ ಚೈತನ್ಯಾಂಶಂದ ಪ್ರಭಾವ ಹೊಂದಿ ಈ ಎಲ್ಲ ವಾಯುಗೊ ತಮ್ಮ ತಮ್ಮ ಕರ್ಮಲ್ಲಿ ಪ್ರವೃತ್ತರಾವ್ತವು.
ಇನ್ನು ನರದೇಹದ ಎರಡು ರೂಪಂಗಳ ಬಗ್ಗೆ – ಒಂದು ವ್ಯಾವಹಾರಿಕ ಮತ್ತೊಂದು ಪಾರಮಾರ್ಥಿಕ.
ವ್ಯಾವಹಾರಿಕ ಶರೀರಲ್ಲಿ ಮೂರುವರೆ ಕೋಟಿ ರೋಮ, ಏಳು ಲಕ್ಷ ಕೇಶ, ಇಪ್ಪತ್ತು ಉಗುರುಗೊ ಮತ್ತೆ ಮುವತ್ತೆರಡು ಹಲ್ಲುಗೊ ಹೇದು ಸಾಮಾನ್ಯವಾಗಿ ಹೇಳಲಾಯ್ದು. ಈ ಶರೀರಲ್ಲಿ ಒಂದು ಸಾವಿರ ಪಲ ಮಾಂಸ (ಪಲ/ಪಳ = ಸುಮಾರು ನಾಕು ತೊಲ ತೂಕ, ನೂರು ತೊಲ ಹೇಳಿರೆ ಸುಮಾರು 1.66 ಕಿಲೋಗ್ರಾಮ್), ನೂರು ಪಲ ನೆತ್ತರೂ ಇದ್ದು ಹೇದು ಹೇಳುತ್ತವು. ಹತ್ತು ಪಳ ಕೊಬ್ಬು (ಮೇದಸ್ಸು), ಎಪ್ಪತ್ತು ಪಳ ಚರ್ಮ, ಹನ್ನೆರಡು ಪಳ ಮಜ್ಜಾ (ಅಸ್ಥಿಮಜ್ಜಾ/ದೇಹಸಾರ) ಮತ್ತೆ ಮೂರು ಪಳಂಗಳಷ್ಟು ಮಹಾನೆತ್ತರು ಇದ್ದು ಹೇದು ಹೇಳ್ತವು. ಪುರುಷನ ಶರೀರಲ್ಲಿ ಎರಡು ಕುಡ್ತೆಯಷ್ಟು  ರೇತಸ್ಸು ಹಾಂಗೂ ಸ್ತ್ರೀ ಶರೀರಲ್ಲಿ ಒಂದು ಕುಡ್ತೆಯಷ್ಟು ಶೋಣಿತ (ರಜ) ಇರುತ್ತು. ಸಂಪೂರ್ಣ ಶರೀರಲ್ಲಿ ಮುನ್ನೂರ ಅರವತ್ತು ಅಸ್ಥಿಗೊ ಇದ್ದು ಹೇದು ಹೇಳಲಾಯ್ದು. ಶರೀರಲ್ಲಿ ಸ್ಥೂಲ ಮತ್ತೆ ಸೂಕ್ಷ್ಮರೂಪಲ್ಲಿ ಕೋಟ್ಯಾಂತರ ನಾಡಿಗೊ ಇರ್ತು. ಇದರಲ್ಲಿ ಐವತ್ತು ಪಳ ಪಿತ್ತ, ಮತ್ತೆ ಇಪ್ಪತ್ತೈದು ಪಳ ಶ್ಲೇಷ್ಮ (ಕಫ) ಹೇದು ಹೇಳಲಾಯ್ದು. ಏವತ್ತೂ ಉತ್ಪನ್ನ ಅಪ್ಪ ಮಲ ಮತ್ತೆ ಮೂತ್ರಂಗೊ ಅಪ್ರಮಾಣವಾಗಿದ್ದು. ವ್ಯಾವಹಾರಿಕ ಶರೀರ ಈ ಗುಣಂಗಳಿಂದ ಕೂಡಿದ್ದು.
ಪಾರಮಾರ್ಥಿಕ ಶರೀರಲ್ಲಿ ಎಲ್ಲ ಹದಿನಾಲ್ಕು ಲೋಕಂಗೊ, ಎಲ್ಲ ಪರ್ವತ, ಸಮಸ್ತ ದ್ವೀಪ, ಹಾಂಗೂ ಸಮಸ್ತ ಸಾಗರಂಗೊ, ಸೂರ್ಯಾದಿ ಸಕಲ ಗ್ರಹಂಗೊ ಸೂಕ್ಷ್ಮರೂಪಲ್ಲಿ ವಿದ್ಯಮಾನವಾಗಿರುತ್ತು. ಪಾರಮಾರ್ಥಿಕ ಶರೀರಲ್ಲಿ ಮೂಲಾಧಾರ ಮುಂತಾದ ಆರು ಚಕ್ರಂಗೊ ಬ್ರಹ್ಮಾಂಡಲ್ಲಿ ಯಾವ ಗುಣಂಗಳ ಹೇಳಲಾಯ್ದೋ ಆ ಎಲ್ಲವೂ ಈ ಶರೀರಲ್ಲಿ ಸ್ಥಿತವಾಗಿದ್ದು. ಯೋಗಿಗೊ ಧಾರಣೆ ಮಾಡುವ ಆ ಗುಣಂಗಳ ನಿನಗೆ ಹೇಳುತ್ತೆ. ಅವುಗಳ ಗ್ರಹಿಕೆಂದ ಜೀವಿ ವಿರಾಟ್‍ಸ್ವರೂಪದ ಭಾಗಿಯಾಗಿಬಿಡುತ್ತ°. 
ಆ ವಿಚಾರವಾಗಿ ಮುಂದೆ ಬಪ್ಪವಾರ ನೋಡುವೊ°.
[ಚಿಂತನೀಯಾ –
ಜೀವಾತ್ಮ ಕರ್ಮಲ್ಲಿ ತೊಡಗಲೆ ಅದಕ್ಕೊಂದು ಶರೀರ ಆವಶ್ಯಕ. ಶರೀರ ಹೇಳ್ವದು ಒಂದು ಸಾಧನ ಮಾತ್ರ. ಹಾಂಗಾಗಿ ಶರೀರ ಮೋಹ ಹೇಳ್ವದು ಬರೇ ಒಂದು ಮರ್ಳು. ಆದರೆ ಅದೂ ಪ್ರಕೃತಿ ಮಾಯೆ, ಅನಿವಾರ್ಯ. ಇನ್ನು ಶರೀರಲ್ಲಿಪ್ಪ ವಿಷಯಂಗೊ ಆಧುನಿಕ ವಿಜ್ಞಾನಲ್ಲೆ ಏನೇನು ಹೆಸರುಗಳಿಂದ ನಾವು ನಂಬಿಗೊಂಡಿದ್ದೋ ಅದೆಲ್ಲವೂ ಸನಾತನ ಕಾಲಲ್ಲಿಯೇ ಹೇಳಲ್ಪಟ್ಟಿದು ಹೇಳ್ವದು ನವಗಿಲ್ಲಿ ಗಮನುಸಲಕ್ಕು. ಒಟ್ಟಾರೆ ನೋಡಿರೆ ನಾವೊಂದು ಕಾರ್ಖಾನೆಯ ಉದಾಹರಣೆಗೆ ತೆಕ್ಕೊಂಡ್ರೆ ಕಾರ್ಖಾನೆಯ ಅಂತಿಮ ಕನಸು ಪೈನಲ್ ಉತ್ಪನ್ನವ ಉಂಟುಮಾಡುವದು. ಈ ಶರೀರವೂ ಅಷ್ಟೇ. ಜನ್ಮಜನ್ಮಾಂತರದ ಪುಣ್ಯವಶಾತ್ ಇದೀಗ ನವಗೆ ಸಿಕ್ಕಿದ ಈ ಶರೀರದ ಮೂಲಕ ಸಾಧನೆಯ ಚಟುವಟಿಕೆಲಿ ತೊಡಗಿ ಗುರಿಯ ಸಾಧುಸುವದೇ ಬುದ್ಧಿವಂತಿಕೆ ಹೇದು ಹೇದುಗೊಂಡು ಈ ಭಾಗಕ್ಕೆ ಹರೇ ರಾಮ.]

3 thoughts on “ಗರುಡಪುರಾಣ – ಅಧ್ಯಾಯ 15 – ಭಾಗ 02

  1. ಪಂಚಭೂತಂಗೊ ಶರೀರಲ್ಲಿ ಹೇಂಗೆ ಅಡಕವಾಯಿದು, ಅವರ ಕಾರ್ಯಂಗೊ ಎಲ್ಲಿ ಹೇಂಗೆ ನೆಡೆತ್ತು ಹೇಳ್ತರ ಸಮಗ್ರ ಮಾಹಿತಿ.
    ಧನ್ಯವಾದಂಗೊ ಚೆನ್ನೈ ಭಾವಂಗೆ.
    [ನವಗೆ ಸಿಕ್ಕಿದ ಈ ಶರೀರದ ಮೂಲಕ ಸಾಧನೆಯ ಚಟುವಟಿಕೆಲಿ ತೊಡಗಿ ಗುರಿಯ ಸಾಧುಸುವದೇ ಬುದ್ಧಿವಂತಿಕೆ]- ಒಪ್ಪ ಮಾತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×