Oppanna.com

ಗರುಡಪುರಾಣ – ಅಧ್ಯಾಯ 15 – ಭಾಗ 03

ಬರದೋರು :   ಚೆನ್ನೈ ಬಾವ°    on   06/02/2014    2 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರ ಭಗವಂತ° ವ್ಯಾವಹಾರಿಕ ದೇಹಲಕ್ಷಣಂಗಳ ಹೇಳಿಕ್ಕಿ, ಪಾರಮಾರ್ಥಿಕ ಶರೀರಲ್ಲಿ ಎಲ್ಲ ಲೋಕಂಗಳೂ, ಪರ್ವತ, ದ್ವೀಪ, ಸಾಗರಂಗೊ ಅಲ್ಲದ್ದೆ ಸೂರ್ಯಾದಿ ಗ್ರಹಂಗಳೂ ಇದ್ದು. ಮತ್ತೆ ಆ ಪಾರಮಾರ್ಥಿಕ ಶರೀರಲ್ಲಿ ಆರು ಚಕ್ರಂಗೊ ಹಾಂಗೇ ಬ್ರಹ್ಮಾಂಡಲ್ಲಿ ಇಪ್ಪ ಎಲ್ಲ ಗುಣಂಗಳೂ ಇದ್ದು. ಯೋಗಿಗೊ ಧಾರಣೆಮಾಡುವ ಆ ಗುಣಂಗಳ ವಿವರ ಹೇಳುತ್ತೆ ಕೇಳು ಹೇದು ಕಳುದವಾರದ ಭಾಗಲ್ಲಿ ಓದಿದ್ದದು. ಹಾಂಗಾರೆ ಆ ಗುಣಂಗಳ ಬಗ್ಗೆ ಭಗವಂತ° ಗರುಡಂಗೆ ಎಂತ ಹೇಳಿದ್ದ° ಹೇಳ್ವದು ಮುಂದೆ –
 
ಗರುಡಪುರಾಣ – ಅಧ್ಯಾಯ 05 – ಭಾಗ 03images
 
ಪಾದಾಧಸ್ತಾತ್ತಲಂ ಜ್ಞೇಯಂ ಪಾದೋರ್ಧ್ವಂ ವಿತಲಂ ತಥಾ ।
ಜಾನುನೋಃ ಸುತಲಂ ವಿದ್ಧಿ ಸಕ್ಥಿದೇಶೇ ಮಹಾತಲಮ್ ॥೫೬॥
ಪಾದದ ಕೆಳ ತಲ, ಪಾದದ ಮೇಗೆ ವಿತಲ, ಮೊಳಪ್ಪಿಲ್ಲಿ (ಮೊಣಕಾಲಿಲ್ಲಿ) ಸುತಲ, ಮತ್ತೆ ತೊಡೆಲಿ ಮಹಾತಲ ಹೇದು ತಿಳಿಯೆಕು.
ತಲಾತಲಂ ಸಕ್ಥಿಮೂಲೇ ಗುಹ್ಯದೇಶೇ ರಸಾತಲಮ್ ।
ಪಾತಾಲಂ ಕಟಿಸಂಸ್ಥಂ ಚ ಸಪ್ತಲೋಕಾಃ ಪ್ರಕೀರ್ತಿತಾಃ ॥೫೭॥
ತೊಡೆಸಂಧಿಲಿ ತಲಾತಲ, ಗುಹ್ಯ ಪ್ರದೇಶಲ್ಲಿ ರಸಾತಲ, ಸೊಂಟಲ್ಲಿ ಪಾತಾಳ – ಈ ರೀತಿ ಸಪ್ತಲೋಕಂಗಳ ಹೇಳಲ್ಪಟ್ಟಿದು.
ಭೂರ್ಲೋಕಂ ನಾಭಿಮಧ್ಯೇ ತು ಭುವರ್ಲೋಕಂ ತದೂರ್ಧ್ವಕೇ ।
ಸ್ವರ್ಲೋಕಂ ಹೃದಯೇ ವಿದ್ಯಾತ್ಕಂಠದೇಶೇ ಮಹಸ್ತಥಾ ॥೫೮॥
ನಾಭಿಮಧ್ಯಲ್ಲಿ ಭೂಲೋಕ, ಅದರ ಮೇಗೆ ಭುವರ್ಲೋಕ, ಹೃದಯಲ್ಲಿ ಸ್ವರ್ಗಲೋಕ, ಕಂಠಲ್ಲಿ ಮಹರ್ಲೋಕ ಹೇದು ತಿಳಿಯೆಕು.
ಜನಲೋಕಂ ವಕ್ತ್ರದೇಶೇ ತಪೋಲೋಕಂ ಲಲಾಟಕೇ ।
ಸತ್ಯಲೋಕಂ ಬ್ರಹ್ಮರಂಧ್ರೇ ಭುವನಾನಿ ಚತುರ್ದಶ ॥೫೯॥
ಮುಖಲ್ಲಿ ಜನಲೋಕ, ಹಣೆಲಿ ತಪೋಲೋಕ, ಬ್ರಹ್ಮರಂಧ್ರಲ್ಲಿ ಸತ್ಯಲೋಕ – ಹೀಂಗೆ ಇವುಗೊ ಹದಿನಾಲ್ಕು ಲೋಕಂಗೊ ಪಾರಮಾರ್ಥಿಕ ಶರೀರಲ್ಲಿ.
ತ್ರಿಕೋಣೇ ಸಂಸ್ಥಿತೋ ಮೇರುರಧಃಕೋಣೇ ಚ ಮಂದರ ।
ದಕ್ಷಕೋಣೇ ಚ ಕೈಲಾಸೋ ವಾಮಕೋಣೇ ಹಿಮಾಚಲಃ ॥೬೦॥
ತಲೆಕೆಳ ಆದ ತ್ರಿಕೋಣಲ್ಲಿ ಮೇರುಪರ್ವತ, ಅದರ ಕೆಳಾಣ ಕೋನಲ್ಲಿ ಮಂದರ ಪರ್ವತವೂ, ಬಲದ ಹೊಡೆಲಿ ಕೈಲಾಸವೂ, ಎಡತ್ತಿಂಗೆ ಹಿಮಾಚಲವೂ ಇದ್ದು.
ನಿಷಧಶ್ಚೋಧ್ವರೇಖಾಯಾಂ ದಕ್ಷಾಯಾಂ ಗಂಧಮಾದನಃ ।
ರಮಣೋ ವಾಮರೇಖಾಯಾಂ ಸಪ್ತೈತೇ ಕುಲಪರ್ವತಾಃ ॥೬೧॥
ಮೇಗಾಣ ರೇಖೆಲಿ ನಿಷಧ ಪರ್ವತ, ಬಲಹೊಡೆಯಾಣ ರೇಖೆಲಿ ಗಂಧಮಾದನಪರ್ವತ, ಎಡದ ಹೊಡೆಲಿ ರಮಣ ಪರ್ವತ – ಇವು ಏಳು ಕುಲಪರ್ವತಂಗೊ.
ಅಸ್ಥಿಸ್ಥಾನೇ ಭವೇಜ್ಜಂಬುಃ ಶಾಕೋ ಮಜ್ಜಾಸು ಸಂಸ್ಥಿತಃ ।
ಕುಶದ್ವೀಪೋ ಸ್ಥಿತೋ ಮಾಂಸೇ ಕ್ರೌಂಚದ್ವೀಪಃ ಸಿರಾಸು ಚ ॥೬೨॥
ಮೂಳೆಲಿ (ಅಸ್ಥಿಲಿ) ಜಂಬೂದ್ವೀಪ, ಮಜ್ಜೆಲಿ ಶಾಕದ್ವೀಪ, ಮಾಂಸಲ್ಲಿ ಕುಶದ್ವೀಪ ಮತ್ತೆ ರಕ್ತನಾಳಲ್ಲಿ ಕ್ರೌಂಚದ್ವೀಪ ಇದ್ದು.
ತ್ವಚಾಯಾಂ ಶಾಲ್ಮಲೀದ್ವೀಪೋ ಗೋಮೇದೋ ರೋಮಸಂಚಯೇ ।
ನಖಸ್ಥಂ ಪುಷ್ಕರಂ ವಿದ್ಯಾತ್ಸಾಗರಸ್ತದನಂತರಮ್ ॥೬೩॥
ಚರ್ಮಲ್ಲಿ ಶಾಲ್ಮಲೀ ದ್ವೀಪ, ಕೂದಲಸಮೂಹಲ್ಲಿ ಗೋಮೇದದ್ವೀಪ, ಉಗುರಿಲ್ಲಿ ಪುಷ್ಕರ ದ್ವೀಪವೂ ಇದ್ದು. ಮತ್ತೆ ಸಾಗರಂಗಳ ವಿಷಯವ ಕೇಳು-
ಕ್ಷಾರೋದೋ ಹಿ ಭವೇನ್ಮೂತ್ರೇ ಕ್ಷೀರೇ ಕ್ಷೀರೋದಸಾಗರಃ ।
ಸುರೋದಧಿಃ ಶ್ಲೇಷ್ಮಸಂಸ್ಥೋ ಮಜ್ಜಾಯಾಂ ಘೃತಸಾಗರಃ ॥೬೪॥
ಮೂತ್ರಲ್ಲಿ ಕ್ಷಾರಸಾಗರ, ಹಾಲಿಲ್ಲಿ ಕ್ಷೀರಸಾಗರ, ಕಫಲ್ಲಿ ಸುರಸಾಗರ, ಮಜ್ಜೆಲಿ ತುಪ್ಪದ ಸಾಗರವೂ ಇದ್ದು.
ರಸೋದಧಿಂ ರಸೇ ವಿದ್ಯಾಚ್ಛೋಣಿತೇ ದಧಿಸಾಗರಃ ।
ಸ್ವಾದೂದೋ ಲಂಬಿಕಾಸ್ಥಾನೇ ಜಾನೀಯಾದ್ವಿನತಾಸುತ ॥೬೫॥
ಏ ವಿನತಾಸುತನೇ!, ರಸಂಗಳಲ್ಲಿ ರಸದ ಸಾಗರವೂ, ನೆತ್ತರಿಲ್ಲಿ ಮೊಸರಿನ ಸಾಗರವೂ, ಅಂಕುಳಲ್ಲಿ ಸಿಹಿನೀರಿನ ಸಾಗರವೂ ಇದ್ದು ಹೇದು ತಿಳ್ಕೊ.
ನಾದಚಕ್ರೇ ಸ್ಥಿತಃ ಸೂರ್ಯೋ ಬಿಂದುಚಕ್ರೇ ಚ ಚಂದ್ರಮಾಃ ।
ಲೋಚನಸ್ಥ ಕುಜೋ ಜ್ಞೇಯೋ ಹೃದಯೇ ಜ್ಞಃ ಪ್ರಕೀರ್ತಿತಃ ॥೬೬॥
ನಾದಚಕ್ರಲ್ಲಿ ಸೂರ್ಯ°, ಬಿಂದುಚಕ್ರಲ್ಲಿ ಚಂದ್ರ° ಇದ್ದವು. ಕಣ್ಣುಗಳಲ್ಲಿ ಮಂಗಳ°, ಹೃದಯಲ್ಲಿ ಬುಧ° ಇದ್ದವು ಹೇದು ಹೇಳಲ್ಪಟ್ಟಿದು.
ವಿಷ್ಣುಸ್ಥಾನೇ ಗುರುಂ ವಿದ್ಯಾಚ್ಛ್ರುಕ್ರೇ ಶುಕ್ರೋ ವ್ಯವಸ್ಥಿತಃ ।
ನಾಭಿಸ್ಥಾನೇ ಸ್ಥಿತೋ ಮಂದೋ ಮುಖೇ ರಾಹುಃ ಪ್ರಕೀರ್ತಿತಃ ॥೬೭॥
ವಿಷ್ಣು ಸ್ಥಾನಲ್ಲಿ ಗುರುವೂ, ವೀರ್ಯಸ್ಥಾನಲ್ಲಿ ಶುಕ್ರನೂ, ನಾಭಿಸ್ಥಾನಲ್ಲಿ ಶನೀಶ್ವರನೂ, ಮತ್ತೆ ಮೋರೆಲಿ ರಾಹುವು ಇದ್ದ° ಹೇದು ಹೇಳಲ್ಪಟ್ಟಿದು.
ವಾಯುಸ್ಥಾನೇ ಸ್ಥಿತಃ ಕೇತುಃ ಶರೀರೇ ಗ್ರಹಮಂಡಲಮ್ ।
ಏವಂ ಸರ್ವಸ್ವರೂಪೇಣ ಚಿಂತಯೇದಾತ್ಮನಸ್ತನುಮ್ ॥೬೮॥
ಶ್ವಾಷಕೋಶಲ್ಲಿ ಕೇತು ಇದ್ದ. ಹೀಂಗೆ ಶರೀರಲ್ಲಿ ಗ್ರಹಮಂಡಲ ಇದ್ದು . ಈ ಎಲ್ಲ (14 ಲೋಕ, 7 ಪರ್ವತ, 7 ದ್ವೀಪ, 7 ಸಾಗರ, 9 ಗ್ರಹಂಗೊ) ರೂಪಂಗಳಲ್ಯೂ ತನ್ನ ಶರೀರವ ಧ್ಯಾನಿಸೆಕು.
ಸದಾ ಪ್ರಭಾತಸಮಯೇ ಬದ್ಧಪದ್ಮಸನಃ ಸ್ಥಿತಃ ।
ಷಟ್‍ಚಕ್ರಚಿಂತನಂ ಕುರ್ಯಾದ್ಯಥೋಕ್ತಮಜಪಾಕ್ರಮಮ್ ॥೬೯॥
ಏವತ್ತೂ ಪ್ರಭಾತ ಸಮಯಲ್ಲಿ ಬದ್ಧ ಪದ್ಮಾಸನಲ್ಲಿ ಕೂದುಗೊಂಡು ಅಜಪಾಕ್ರಮವ ಹೇಳಿದಾಂಗೆ ಷಟ್‍ಚಕ್ರ ಚಿಂತನೆಯ ಮಾಡೆಕು.
ಅಜಪಾ ನಾಮ ಗಾಯತ್ರೀ ಮುನೀನಾಂ ಮೋಕ್ಷದಾಯಿನೀ ।
ಅಸ್ಯಾಃ ಸಂಕಲ್ಪಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ ॥೭೦॥
ಅಜಪಾ ಹೇಳ್ವ ಗಾಯತ್ರಿ ಮುನಿಗೊಕ್ಕೆ ಮೋಕ್ಷಪ್ರದಾಯಿನಿ. ಆ ಗಾಯತ್ರಿಯ ಧ್ಯಾನಮಾಡ್ತೆ ಹೇದು ಸಂಕಲ್ಪಮಾಡುವದರಿಂದಲೇ ಎಲ್ಲ ಪಾಪಂಗಳಿಂದ ಬಿಡುಗಡೆ ಆವ್ತು.
ಶ್ರುಣು ತಾರ್ಕ್ಷ್ಯ ಪ್ರವಕ್ಷ್ಯೇsಹಮಜಪಾಕ್ರಮಮುತ್ತಮಮ್ ।
ಯಂ ಕೃತ್ವಾ ಸರ್ವದಾ ಜೀವೋ ಜೀವಭಾವಂ ವಿಮುಂಚತಿ ॥೭೧॥
ಏ ಗರುಡ!, ಉತ್ತಮವಾದ ಅಜಪಾ ಕ್ರಮವ ನಿನಗೆ ಆನು ಹೇಳುತ್ತೆ. ಅದರ ಮಾಡಿ ಜೀವಿ ಏವತ್ತೂ ಜೀವಭಾವವ ಬಿಡುತ್ತ°.
ಮೂಲಾಧಾರಃ ಸ್ವಾಧಿಷ್ಠಾನಂ ಮಣಿಪೂರಕಮೇವ ಚ ।
ಅನಾಹತಂ ವಿಶುದ್ಧ್ಯಾಖ್ಯಮಾಜ್ಞಾಷಟ್‍ಚಕ್ರಮುಚ್ಯತೇ ॥೭೨॥
ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ – ಇವು ಷಟ್‍ಚಕ್ರಂಗೊ ಹೇದು ಹೇಳಲ್ಪಟ್ಟಿದು.
ಮೂಲಾಧಾರೇ ಲಿಂಗದೇಶೇ ನಾಭ್ಯಾಂ ಹೃದಿ ಚ ಕಂಠಗೇ ।
ಭ್ರುವೋರ್ಮಧ್ಯೇ ಬ್ರಹ್ಮರಂಧ್ರೇ ಕ್ರಮಾಚ್ಚಕ್ರಾಣಿ ಚಿಂತಯೇತ್ ॥೭೩॥
ಮೂಲಾಧಾರ, ಲಿಂಗಪ್ರದೇಶ, ನಾಭಿ, ಹೃದಯ, ಕಂಠ, ಭ್ರೂಮಧ್ಯ ಮತ್ತೆ ಬ್ರಹ್ಮರಂಧ್ರ ಇವುಗಳಲ್ಲಿ ಕ್ರಮವಾಗಿ ಚಕ್ರಂಗಳ ಧ್ಯಾನುಸೆಕು.
ಆಧಾರಂ ತು ಚತುರ್ದಲಾನಲಸಮಂ ವಾಸಾಂತವರ್ಣಾಶ್ರಯಮ್ ।
ಸ್ವಾಧಿಷ್ಠಾನಮಪಿ ಪ್ರಭಾಕರಸಮಂ ಬಾಲಾಂತಷಟ್‍ಪತ್ರಕಮ್ ॥
ರಕ್ತಾಭಂ ಮಣಿಪೂರಕಂ ದಶದಲಂ ಡಾದ್ಯಂ ಫಕಾರಾಂತಕಂ ।
ಪತ್ರೈರ್ದ್ವಾದಶಭಿಸ್ತ್ವನಾಹತಪುರಂ ಹೈಮಂ ಕರಾಂತವೃತಮ್ ॥೭೪॥
ಮೂಲಾಧಾರಲ್ಲಿ ಅಗ್ನಿಯ ಸಮಾನವಾಗಿಪ್ಪ ‘ವ’ ‘ಶ’ ‘ಷ’ ‘ಸ’ ವರ್ಣಂಗೊಕ್ಕೆ ಆಶ್ರಯವಾದ ನಾಲ್ಕು ದಳಂಗೊ ಇದ್ದು. ಸ್ವಾಧಿಷ್ಠಾನಲ್ಲಿ ಸೂರ್ಯಂಗೆ ಸಮಾನವಾದ ‘ಬ’ ‘ಭ’ ‘ಮ’ ‘ಯ’ ‘ರ’ ‘ಲ’ ವರ್ಣಂಗೊಕ್ಕೆ ಆಶ್ರಯವಾದ ಆರು ದಳಂಗೊ. ಮಣಿಪೂರಕವು ರಕ್ತವರ್ಣದ್ದಾಗಿ, ‘ಡ’ ‘ಢ’ ‘ಣ’ ‘ತ’ ‘ಥ’ ‘ದ’ ‘ಧ’ ‘ನ’ ‘ಪ’ ‘ಫ’ ಹೇಳ್ವ ವರ್ಣಂಗೊಕ್ಕೆ ಆಶ್ರಯವಾದ ಹತ್ತು ದಳಂಗೊ. ಅನಾಹತವು ಚಿನ್ನದ ಬಣ್ಣದ ‘ಕ’ ‘ಖ’ ‘ಗ’ ‘ಘ’ ‘ಙ’ ‘ಚ’ ‘ಛ’ ‘ಜ’ ‘ಝ’ ‘ಞ’ ‘ಟ’ ‘ಠ’ ಹೇಳ್ವ ವರ್ಣಂಗೊಕ್ಕೆ ಆಶ್ರಯವಾದ ಹನ್ನೆರಡು ಪತ್ರಂಗಳಿಂದ ಆವೃತವಾಗಿದ್ದು.
ಪತ್ರೈಃ ಸಸ್ವರಷೋಡಶೈಃ ಶಶಧರಜ್ಯೋತಿರ್ವಿಶುದ್ಧಾಂಬುಜಮ್ ।
ಹಂಸೇತ್ಯಕ್ಷರಯುಗ್ಮಕಂ ದ್ವಯದಲಂ ರಕ್ತಾಭಮಾತ್ರಂಬುಜಮ್ ॥
ತಸ್ಮಾದೂರ್ಧ್ವಗತಂ ಪ್ರಭಾಸಿತಮಿದಂ ಪದ್ಮಂ ಸಹಸ್ರಚ್ಛದಮ್ ।
ಸತ್ಯಾನಂದಮಯಂ ಸದಾ ಶಿವಮಯಂ ಜ್ಯೋತಿರ್ಮಯಂ ಶಾಶ್ವತಮ್ ॥೭೫॥
ವಿಶುದ್ಧಲ್ಲಿಪ್ಪ ಕಮಲ ಚಂದ್ರನ ಜ್ಯೋತಿಯ ಸಮಾನವಾಗಿ ‘ಅ’ ‘ಆ’ ‘ಇ’ ‘ಈ’ ‘ಉ’ ‘ಊ’ ‘ಋ’ ‘ೠ’ ‘ಲೃ’ ‘ಲ್ಯೃ’ ‘ಏ’ ‘ಐ’ ‘ಓ’ ‘ಔ’ ‘ಅಂ’ ‘ಅಃ’ – ಎಂಬೀ ವರ್ಣಂಗಳ ಹದಿನಾರು ದಳಂದ ಕೂಡಿದ್ದು. ಆಜ್ಞಾಚಕ್ರಲ್ಲಿ ‘ಹ’ ‘ಸ’ ಹೇಳ್ವ ಎರಡು ಅಕ್ಷರಂಗಳಿಂದ ಕೂಡಿದ ಎರಡು ದಳಂಗೊ ಇಪ್ಪ ರಕ್ತವರ್ಣದ ಕಮಲವು ಇದ್ದು. ಇದರ ಮೇಗೆ ಪ್ರಕಾಶಮಾನವಾದ ಸಹಸ್ರದಳ ಕಮಲ ಇದ್ದು . ಅದು ಸದಾನಂದಮಯವೂ, ಸದಾಶಿವಮಯವೂ, ಜ್ಯೋತಿರ್ಮಯವೂ, ಶಾಶ್ವತವೂ ಆಗಿದ್ದು.
ಗಣೇಶಂ ವ ವಿಧಿಂ ವಿಷ್ಣುಂ ಶಿವಂ ಜೀವಂ ಗುರುಂ ತತಃ ।
ವ್ಯಾಪಕಂ ಚ ಪರಂ ಬ್ರಹ್ಮ ಕ್ರಮಾಚ್ಚಕ್ರೇಷು ಚಿಂತಯೇತ್ ॥೭೬॥
ಗಣೇಶ°, ಬ್ರಹ್ಮ°, ವಿಷ್ಣು, ಶಿವ° ಜೀವ° ಮತ್ತೆ  ಗುರು, ಅದರಮತ್ತೆ ಸರ್ವವ್ಯಾಪಿಯಾದ ಪರಬ್ರಹ್ಮ° ಇವರ ಕ್ರಮವಾಗಿ ಚಕ್ರಲ್ಲಿ ಧ್ಯಾನಮಾಡೆಕು.
ಏಕವಿಶಸ್ತಹಸ್ರಾಣಿ ಷಟ್‍ಶತಾನ್ಯಧಿಕಾನಿ ಚ ।
ಅಹೋರಾತ್ರೇಣ ಶ್ವಾಸಸ್ಯ ಗತಿಃ ಸೂಕ್ಷ್ಮಾಸ್ಮೃತಾ ಬುಧೈಃ ॥೭೭॥
ಒಂದು ದಿನಾಣ ಹಗಲು ಇರುಳಿಲ್ಲಿ ಶ್ವಾಸದ ಸೂಕ್ಷ್ಮಗತಿ ಇಪ್ಪತ್ತೊಂದು ಸಾವಿರದ ಆರುನೂರು ಸರ್ತಿ ಹೇದು ಪಂಡಿತರುಗಳಿಂದ ಹೇಳಲ್ಪಟ್ಟಿದು.
ಹಕಾರೇಣ ಬಹಿರ್ಯಾತಿ ಸಕಾರೇಣ ವಿಶೇತ್ಪುನಃ ।
ಹಂಸೋ ಹಂಸೇತಿ ಮಂತ್ರೇಣ ಜೀವೋ ಜಪತಿ ತತ್ತ್ವತಃ ॥೭೮॥
‘ಹ’ಕಾರಂದ ಶ್ವಾಸ ಹೆರಹೋವ್ತು, ಸಕಾರಂದ ಶ್ವಾಸ ಒಳ ಬತ್ತು. ಈ ರೀತಿ ‘ಹಂಸ-ಹಂಸ’ ಹೇಳ್ವ ಮಂತ್ರವ ಜೀವ ತತ್ತ್ವಪ್ರಕಾರವಾಗಿ ಜೆಪಿಸಿಗೊಂಡು ಇರ್ತು.
ಷಟ್‍ಶತಂ ಗಣನಾಥಾಯ ಷಟ್‍ಸಹಸ್ರಂ ತು ವೇಧಸೇ ।
ಷಟ್‍ಸಹಸ್ರಂ ಚ ಹರಯೇ ಷಟ್‍ಸಹಸ್ರಂ ಹರಾಯ ಚ ॥೭೯॥
ಆರ್ನೂರು ಗಣೇಶಂಗೆ, ಆರುಸಾವಿರ ಬ್ರಹ್ಮಂಗೆ, ಆರುಸಾವಿರ ಹರಿಗೆ ಮತ್ತೆ ಆರು ಸಾವಿರ ಹರಂಗೆ,
ಜೀವಾತ್ಮನೇ ಸಹಸ್ರಂ ಚ ಸಹಸ್ರಂ ಗುರವೇ ತಥಾ ।
ಚಿದಾತ್ಮನೇ ಸಹಸ್ರಂ ಚ ಜಪಸಂಖ್ಯಾಂ ನಿವೇದಯೇತ್ ॥೮೦॥
ಜೀವಾತ್ಮಂಗೆ ಒಂದು ಸಾವಿರ, ಗುರುವಿಂಗೆ ಒಂದು ಸಾವಿರ ಮತ್ತೆ ಚಿತ್ಸ್ವರೂಪನಾದ ಆತ್ಮಕ್ಕೆ ಒಂದು ಸಾವಿರ ಸಂಖ್ಯೆಯ ಜೆಪ ನಿವೇದುಸೆಕು.
ಏತಾಂಶ್ಚಕ್ರಗತಾನ್ ಬ್ರಹ್ಮ ಮಯೂಖಾನ್ಮುನಯೋsಮರಾನ್ ।
ಸತ್ಸಂಪ್ರದಾಯವೇತ್ತಾರಶ್ಚಿಂತಯಂತ್ಯಾರುಣಾದಯಃ ॥೮೧॥
ಸತ್ಸಂಪ್ರದಾಯಂಗಳ ಗೊಂತುಮಾಡಿಗೊಂಡಿಪ್ಪ ಅರುಣ ಮೊದಲಾದ ಮುನಿಗೊ, ಈ ಚಕ್ರಂಗಳಲ್ಲಿಪ್ಪ ಪರಬ್ರಹ್ಮನ ಕಿರಣಸ್ವರೂಪದ ದೇವತೆಗಳ ಧ್ಯಾನಿಸುತ್ತವು.
ಶುಕಾದಯೋsಪಿ ಮುನಯಃ ಶಿಷ್ಯಾನುಪದಿಶಂತಿ ಚ ।
ಅತಃ ಪ್ರವೃತ್ತಿಂ ಮಹತಾಂ ಧ್ಯಾತ್ವಾ ಧ್ಯಾಯೇತ್ಸದಾ ಬುಧಃ ॥೮೨॥
ಶುಕಮೊದಲಾದ ಮುನಿಗೊ ಸಾನ ಶಿಷ್ಯರಿಂಗೆ ಇದನ್ನೇ ಉಪದೇಶಿಸುತ್ತವು. ಹಾಂಗಾಗಿ ಆ ಮಹಾನುಭಾವರ ವರ್ತನೆಯ ಮನಸ್ಸಿಲ್ಲಿ ಮಡಿಕ್ಕೊಂಡು ವಿದ್ವಾಂಸರುಗೊ ಏವತ್ತೂ ಷಟ್‍ಚಕ್ರಂಗಳ್ಳಿ ಧ್ಯಾನುಸುತ್ತವು.
ಕೃತ್ವಾ ಚ ಮಾನಸೀಂ ಪೂಜಾಂ ಸರ್ವಚಕ್ರೇಷ್ವನನ್ಯಧೀಃ ।
ತತೋ ಗುರೂಪದೇಶೇನ ಗಾಯತ್ರೀಮಜಪಾಂ ಜಪೇತ್ ॥೮೩॥
ಏಕಾಗ್ರ ಚಿತ್ತವ ಮಾಡಿಗೊಂಡು, ಎಲ್ಲ ಚಕ್ರಂಗಳಲ್ಲಿಯೂ ಮಾನಸಿಕ ಪೂಜೆಯ ಮಾಡಿಕ್ಕಿ ಮತ್ತೆ ಗುರುವಿನ ಉಪದೇಶಂದ ಅಜಪಾ ಗಾಯತ್ರಿಯ ಜೆಪ ಮಾಡೆಕು.
ಅಧೋಮುಖೇ ತತೋ ರಂಧ್ರೇ ಸಹಸ್ರದಲಪಂಕಜೇ ।
ಹಂಸಗಂ ಶ್ರೀಗುರುಂ ಧ್ಯಾಯೇದ್ವರಾಭಯಕರಾಂಬುಜಮ್ ॥೮೪॥
ಮತ್ತೆ ಅಧೋಮುಖವಾದ, ಬ್ರಹ್ಮರಂಧ್ರಲ್ಲಿಪ್ಪ ಸಹಸ್ರದಲ ಕಮಲಲ್ಲಿ, ಹಂಸಾರೂಢನಾಗಿಪ್ಪ, ಕರಕಮಲಂಗಳಲ್ಲಿ ವರ ಅಭಯ ಮುದ್ರೆಗಳ ಹೊಂದಿಪ್ಪ ಶ್ರೀಗುರುವಿನ ಧ್ಯಾನುಸೆಕು.
ಕ್ಷಾಲಿತಂ ಚಿಂತಯೇದ್ದೇಹಂ ತತ್ಪದಾಮೃತಧಾರಯಾ ।
ಪಂಚೋಪಚಾರೈಃ ಸಂಪೂಜ್ಯ ಪ್ರಮೇತ್ತತ್ಸ್ತವೇನ ಚ ॥೮೫॥
ಅವನ ಚರಣಾಮೃತ ಧಾರೆಂದ ತನ್ನ ದೇಹವ ಚಂಡಿಮಾಡಿಗೊಂಡಾಂಗೆ ಧ್ಯಾನಿಸಿ, ಪಂಚೋಪಚಾರಂಗಳಿಂದ ಶ್ರೀಗುರುವ ಪೂಜಿಸಿ, ಅವನ ಸ್ತುತಿಮಾಡಿ ನಮಸ್ಕಾರ ಮಾಡೆಕು.
ತತಃ ಕುಂಡಲಿನೀಂ ಧ್ಯಾಯೇದಾರೋಹಾದವರೋಹತಃ ।
ಷಟ್‍ಚಕ್ರಕೃತಸಂಚಾರಂ ಸಾರ್ಧತ್ರಿವಲಯಾಂ ಸ್ಥಿತಾಮ್ ॥೮೬॥
ಮತ್ತೆ ಮೂರುವರೆ ಸುರುಳಿಯೊಳ ಇಪ, ಆರುಚಕ್ರಂಗಳಲ್ಲಿ ಸಂಚರುಸುವ ಕುಂಡಲಿನಿಯ ಆರೋಹಣ ಅವರೋಹಣ ಮಾಡ್ತಾಂಗೆ ಧ್ಯಾನುಸೆಕು.
ತತೋ ಧ್ಯಾಯೇತ್ಸುಷುಮ್ನಾಖ್ಯಂ ಧಾಮ ರಂಧ್ರಾದ್ಬಹಿರ್ಗತಮ್ ।
ತಥಾ ತೇನ ಗತಾ ಯಾಂತಿ ತದ್ವಿಷ್ಣೋಃ ಪರಮಂ ಪದಮ್ ॥೮೭॥
ಮತ್ತೆ ಬ್ರಹ್ಮರಂಧ್ರಂದ ಹೆರ ಹೋಗಿಪ್ಪ ಸುಷುಮ್ನಾ ಹೇಳ್ವ ಹೆಸರಿನ ಜಾಗೆಯ ಧ್ಯಾನುಸೆಕು. ಆ ಮಾರ್ಗಲ್ಲಿ ಹೆರಾಂಗೆ ಹೋದವ° ಆ ವಿಷ್ಣುವಿನ ಪರಮ ಪದಕ್ಕೆ ಹೋವುತ್ತ°.
ತತೋ ಮಚ್ಚಿಂತಿತಂ ರೂಪಂ ಸ್ವಯಂಜ್ಯೋತಿಃ ಸನಾತನಮ್ ।
ಸದಾನಂದಂ ಸದಾ ಧ್ಯಾಯೇನ್ಮುಹೂರ್ತೇ ಬ್ರಾಹ್ಮಸಂಜ್ಞಕೇ ॥೮೮॥
ಸ್ವಯಂಜ್ಯೋತಿಯಾದ, ಸನಾತನವಾದ, ಸದಾನಂದವೇ ತಾನಾದ, ಎನ್ನ ಧ್ಯಾನರೂಪವ ಏವತ್ತೂ ಬ್ರಾಹ್ಮೀ ಮುಹೂರ್ತಲ್ಲೇ (ಬ್ರಾಹ್ಮೀ ಮುಹೂರ್ತ = ಸೂರ್ಯೋದಯಂದ ನಾಲ್ಕು ಘಳಿಗೆ, ಹೇದರೆ – ಸುಮಾರು ಒಂದುವರೆ ಗಂಟೆ ಮದಲು) ಧ್ಯಾನುಸೆಕು.
ಏವಂ ಗುರೂಪದೇಶೇನ ಮನೋ ನಿಶ್ಚಲತಾಂ ನಯೇತ್ ।
ನ ತು ಸ್ವೇನ ಪ್ರಯತ್ನೇನ ತದ್ವಿನಾ ಪತನಂ ಭವೇತ್ ॥೮೯॥
ಈ ರೀತಿ ಗುರುವಿನ ಉಪದೇಶಂದ ಮನಸ್ಸಿನ ನಿಶ್ಚಲಸ್ಥಿತಿಗೆ ತರೆಕು. ತನ್ನ ಪ್ರಯತ್ನಂದಲೇ ಮಾಡ್ಳಾಗ. ಅದಿಲ್ಲದ್ರೆ ಅಧೋಗತಿಗೆ ಬೀಳೆಕ್ಕಾವ್ತು.
ಅಂತರ್ಯಾಗಂ ವಿಧಾಯೈವಂ ಬಹಿರ್ಯಾಗಂ ಸಮಾಚರೇತ್ ।
ಸ್ನಾನಸಂಧ್ಯಾಧಿಕಂ ಕೃತ್ವಾ ಕುರ್ಯಾದ್ಧರಿಹರಾರ್ಚನಮ್ ॥೯೦॥
ಈ ರೀತಿಯಾಗಿ ಅಂತರ್ಯಾಗವ ಮಾಡಿಕ್ಕಿ, ಬಹಿರ್ಯಾಗವ ಆಚರುಸೆಕು. ಸ್ನಾನ ಸಂಧ್ಯಾದಿಗಳ ಮಾಡಿಕ್ಕಿ, ಹರಿಹರರ ಪೂಜೆಯ ಮಾಡೆಕು.
ದೇಹಾಭಿಮಾನಿನಾಮಂತರ್ಮುಖೀ ವೃತ್ತಿರ್ನ ಜಾಯತೇ ।
ಅತಸ್ತೇಷಾಂ ತು ಮದ್ಭಕ್ತಿಃ ಸುಕರಾಮೋಕ್ಷದಾಯಿನೀ ॥೯೨॥
ದೇಹಾಭಿಮಾನಿಗಳಲ್ಲಿ ಅಂತರ್ಮುಖೀ ಪ್ರವೃತ್ತಿ ಉತ್ಪನ್ನ ಆವ್ತಿಲ್ಲೆ. ಹಾಂಗಾಗಿ ಅವಕ್ಕೆ ಎನ್ನ ಭಕ್ತಿ ಸುಲಭವಾಗಿ ಮೋಕ್ಷವ ಕೊಡುವಂತಾದ್ದು.
ತಪೋಯೋಗಾದಯೋ ಮೋಕ್ಷಮಾರ್ಗಾಃ ಸಂತಿ ತಥಾಪಿ ಚ ।
ಸಮೀಚೀನಸ್ತು ಮದ್ಭಕ್ತಿಮಾರ್ಗಃ ಸಂಸರತಾಮಿಹ ॥೯೨॥
ತಪಸ್ಸು, ಯೋಗ ಇತ್ಯಾದಿಗೊ ಮೋಕ್ಷಮಾರ್ಗಂಗೊ ಆಗಿದ್ದು. ಅಂದರೂ ಸಂಸಾರಿಗೊಕ್ಕೆ ಎನ್ನ ಭಕ್ತಿಮಾರ್ಗವೇ ಶ್ರೇಷ್ಠವಾದ್ದಾಗಿದ್ದು.
ಬ್ರಹ್ಮಾದಿಭಿಶ್ಚ ಸರ್ವಜ್ಞೈರಯಮೇವ ವಿನಿಶ್ಚಿತಃ ।
ತ್ರಿವಾರಂ ವೇದಶಾಸ್ತ್ರಾಣಿ ವಿಚಾರ್ಯ ಚ ಪುನಃ ॥೯೩॥
ಬ್ರಹ್ಮಾದಿ ಸರ್ವಜ್ಞರೆಲ್ಲೊರೂ ಮೂರು ಸರ್ತಿ ವೇದಶಾಸ್ತ್ರಂಗಳ ಪುನಃ ಪುನಃ ವಿಚಾರ ಮಾಡಿಕ್ಕಿ ಈ ರೀತಿ ನಿಶ್ಚೈಸಿದ್ದವು.
ಯಜ್ಞಾದಯೋsಪಿ ಸದ್ಧರ್ಮಾಶ್ಚಿತ್ತಶೋಧನಕಾರಕಾಃ ।
ಫಲರೂಪಾ ಚ ಮದ್ಭಕ್ತಿ ಸ್ತಾಂ ಲಬ್ಧ್ವಾನಾವಸೀದತಿ ॥೯೪॥
ಯಜ್ಞಾದಿಗಳೂ ಸದ್ಧರ್ಮಂಗಳೇ. ಚಿತ್ತವ ಶುದ್ಧಿ ಮಾಡುವಂತವುಗೊ. ಎನ್ನಲ್ಲಿ ಭಕ್ತಿ ಅವುಗಳ ಫಲ. ಅದರ ಪಡದವ° ಎಂದೂ ನಾಶ ಆವುತ್ತನಿಲ್ಲೆ.
ಏವಮಾಚರಣಂ ತಾರ್ಕ್ಷ್ಯ ಕರೋತಿ ಸುಕೃತೀ ನರಃ ।
ಸಂಯೋಗೇನ ಚ ಮದ್ಭಕ್ತ್ಯಾ ಮೋಕ್ಷಂ ಯಾತಿ ಸನಾತನಮ್ ॥೯೫॥
ಏ ಗರುಡ!, ಯಾವ ಧರ್ಮಾತ್ಮನಾದ ಮನುಷ್ಯ° ಈ ರೀತಿ ಆಚರಣೆ ಮಾಡುತ್ತನೋ, ಅವ° ಎನ್ನ ಭಕ್ತಿಯ ಸಂಯೋಗಂದ ಸನಾತನವಾದ ಮೋಕ್ಷವ ಹೊಂದುತ್ತ°.
ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಸುಕೃತಿಜನಜನ್ಮಾಚರಣನಿರೂಪಣಂ ನಾಮ ಪಂಚದಶೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ಸಾರೋದ್ಧಾರ ವಿಭಾಗಲ್ಲಿ ‘ಸುಕೃತಿಜನಂಗಳ ಜನ್ಮ ಮತ್ತೆ ಆಚರಣೆಗಳ ನಿರೂಪಣೆ’ ಹೇಳ್ವ ಹದ್ನೈದನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
 
ಪಾರಮಾರ್ಥಿಕ ಶರೀರಲ್ಲಿ ಬ್ರಹ್ಮಾಂಡದ ಲಕ್ಷಣಂಗಳ ಬಗ್ಗೆ ವಿವರುಸುತ್ತ ಇದ್ದ° ಭಗವಂತ° – ಪಾರಮಾರ್ಥಿಕ ಶರೀರಲ್ಲಿ ಪಾದಂದ ಕೆಳ ತಲಲೋಕ, ಪಾದದ ಮೇಗೆ ವಿತಲಲೋಕ. ಹಾಂಗೇ, ಮೊಳಪ್ಪಿಲ್ಲಿ (ಮೊಣಕಾಲಿಲ್ಲಿ) ಸುತಲ, ತೊಡೆಲಿ ಮಹಾತಲ, ತೊಡೆಮೂಲಲ್ಲಿ ತಲಾತಲ, ಗುಹ್ಯಸ್ಥಾನಲ್ಲಿ ರಸಾತಲ, ಸೊಂಟಭಾಗಲ್ಲಿ ಪಾತಾಳ ಲೋಕ ಹೇದು ತಿಳಿಯೆಕು. ಹೀಂಗೆ ಪಾದಂದ ಮೇಗೆ ಸೊಂಟದ ವರೇಂಗೆ ಏಳು ಲೋಕಂಗಳ ಹೇಳಲಾಯ್ದು.
ನಾಭಿಮಧ್ಯಲ್ಲಿ ಭೂರ್ಲೋಕ, ನಾಭಿಂದ ಮೇಗೆ ಭುವರ್ಲೋಕ, ಹೃದಯಲ್ಲಿ ಸುವರ್ಲೋಕ, ಕಂಠಲ್ಲಿ ಮಹರ್ಲೋಕ, ಮೋರೆಲಿ ಜನಲೋಕ, ಲಲಾಟಲ್ಲಿ ತಪೋಲೋಕ ಮತ್ತೆ ಬ್ರಹ್ಮರಂಧ್ರಲ್ಲಿ ಸತ್ಯಲೋಕ ಇದ್ದು.  ಈ ಪ್ರಕಾರ ಹದ್ನಾಲ್ಕು ಲೋಕಂಗೊ ಪಾರಮಾರ್ಥಿಕ ಶರೀರಲ್ಲಿ ಇದ್ದು. ತಲೆಕೆಳ ಆದ ತ್ರಿಕೋಣಲ್ಲಿ ಮೇರುಪರ್ವತ, ಅದರ ಕೆಳಾಣ ಕೋನಲ್ಲಿ ಮಂದರ ಪರ್ವತವೂ, ಬಲದ ಹೊಡೆಲಿ ಕೈಲಾಸವೂ, ಎಡತ್ತಿಂಗೆ ಹಿಮಾಚಲವೂ ಇದ್ದು. ಮೇಗಾಣ ರೇಖೆಲಿ ನಿಷಧ ಪರ್ವತ, ಬಲಹೊಡೆಯಾಣ ರೇಖೆಲಿ ಗಂಧಮಾದನಪರ್ವತ, ಎಡದ ಹೊಡೆಲಿ ರಮಣ ಪರ್ವತ – ಇವು ಏಳು ಕುಲಪರ್ವತಂಗೊ ಈ ಪಾರಮಾರ್ಥಿಕ ದೇಹಲ್ಲಿ ಇದ್ದು. ಅಸ್ಥಿಲಿ ಜಂಬೂದ್ವೀಪ, ಅಸ್ಥಿಮಜ್ಜೆಲಿ ಶಾಖದ್ವೀಪ, ಮಾಂಸಲ್ಲಿ ಕುಶದ್ವೀಪ, ನರಂಗಳಲ್ಲಿ ಕ್ರೌಂಚದ್ವೀಪ, ಚರ್ಮಲ್ಲಿ ಶಾಲ್ಮಲೀದ್ವೀಪ, ರೋಮಸಮೂಹಲ್ಲಿ ಗೋಮೇದದ್ವೀಪ, ಮತ್ತೆ ಉಗುರಿಲ್ಲಿ ಪುಷ್ಕರದ್ವೀಪದ ಸ್ಥಿತಿ ಇದ್ದು ಹೇಳ್ವದರ ತಿಳಿಯೆಕು. ಅದಾದಿಕ್ಕಿ, ಸಾಗರಂಗಳ ಸ್ಥಿತಿ – ಮೂತ್ರಲ್ಲಿ ಕ್ಷಾರಸಮುದ್ರ, ಹಾಲಿಲ್ಲಿ ಕ್ಷೀರಸಾಗರ, ಕಫಲ್ಲಿ ಸುರಸಾಗರ, ಮಜ್ಜೆಲಿ ತುಪ್ಪದ ಸಾಗರವೂ ಇದ್ದು. ರಸಂಗಳಲ್ಲಿ ರಸದ ಸಾಗರವೂ, ನೆತ್ತರಿಲ್ಲಿ ಮೊಸರಿನ ಸಾಗರವೂ, ಅಂಕುಳಲ್ಲಿ ಸಿಹಿನೀರಿನ ಸಾಗರವೂ ಇದ್ದು ಹೇದು ತಿಳ್ಕೊಳೆಕು.
ನಾದಚಕ್ರಲ್ಲಿ ಸೂರ್ಯ°, ಬಿಂದುಚಕ್ರಲ್ಲಿ ಚಂದ್ರ° ಇದ್ದವು. ಕಣ್ಣುಗಳಲ್ಲಿ ಮಂಗಳ°, ಹೃದಯಲ್ಲಿ ಬುಧ° ಇದ್ದವು ಹೇದು ಹೇಳಲ್ಪಟ್ಟಿದು. ವಿಷ್ಣು ಸ್ಥಾನಲ್ಲಿ ಗುರುವೂ, ವೀರ್ಯಸ್ಥಾನಲ್ಲಿ ಶುಕ್ರನೂ, ನಾಭಿಸ್ಥಾನಲ್ಲಿ ಶನೀಶ್ವರನೂ, ಮತ್ತೆ ಮೋರೆಲಿ ರಾಹುವು ಇದ್ದ° ಹೇದು ಹೇಳಲ್ಪಟ್ಟಿದು. ಶ್ವಾಷಕೋಶಲ್ಲಿ ಕೇತು ಇದ್ದ. ಹೀಂಗೆ ಶರೀರಲ್ಲಿ ಗ್ರಹಮಂಡಲ ಇದ್ದು . ಈ ಎಲ್ಲ (14 ಲೋಕ, 7 ಪರ್ವತ, 7 ದ್ವೀಪ, 7 ಸಾಗರ, 9 ಗ್ರಹಂಗೊ) ರೂಪಂಗಳಲ್ಯೂ ತನ್ನ ಶರೀರಲ್ಲಿ ಬ್ರಹ್ಮಾಂಡದ ಚಿಂತನೆಯ ಮಾಡೆಕು, ಧ್ಯಾನಿಸೆಕು. ಏವತ್ತೂ ಪ್ರಾತಃಕಾಲಲ್ಲಿ ಬದ್ಧ ಪದ್ಮಾಸನಲ್ಲಿ ಕೂದುಗೊಂಡು ಅಜಪಾಕ್ರಮವ ಹೇಳಿದಾಂಗೆ ಷಟ್‍ಚಕ್ರ ಚಿಂತನೆಯ ಮಾಡೆಕು.
ಅಜಪಾ ಹೇಳ್ವ ಗಾಯತ್ರಿ ಮುನಿಗೊಕ್ಕೆ ಮೋಕ್ಷಪ್ರದಾಯಿನಿ. ಆ ಗಾಯತ್ರಿಯ ಧ್ಯಾನಮಾಡ್ತೆ ಹೇದು ಸಂಕಲ್ಪಮಾಡುವದರಿಂದಲೇ ಎಲ್ಲ ಪಾಪಂಗಳಿಂದ ಬಿಡುಗಡೆ ಆವ್ತು. ಉತ್ತಮವಾದ ಅಜಪಾ ಕ್ರಮವ ನಿನಗೆ ಆನು ಹೇಳುತ್ತೆ. ಅದರ ಮಾಡಿ ಜೀವಿ ಏವತ್ತೂ ಜೀವಭಾವವ ಬಿಡುತ್ತ°. ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ – ಇವು ಷಟ್‍ಚಕ್ರಂಗೊ ಹೇದು ಹೇಳಲ್ಪಟ್ಟಿದು. ಮೂಲಾಧಾರ, ಲಿಂಗಪ್ರದೇಶ, ನಾಭಿ, ಹೃದಯ, ಕಂಠ, ಭ್ರೂಮಧ್ಯ ಮತ್ತೆ ಬ್ರಹ್ಮರಂಧ್ರ ಇವುಗಳಲ್ಲಿ ಕ್ರಮವಾಗಿ ಚಕ್ರಂಗಳ ಧ್ಯಾನುಸೆಕು.
ಮೂಲಾಧಾರಲ್ಲಿ ಅಗ್ನಿಯ ಸಮಾನವಾಗಿಪ್ಪ ‘ವ’ ‘ಶ’ ‘ಷ’ ‘ಸ’ ವರ್ಣಂಗೊಕ್ಕೆ ಆಶ್ರಯವಾದ ನಾಲ್ಕು ದಳಂಗೊ ಇದ್ದು. ಸ್ವಾಧಿಷ್ಠಾನಲ್ಲಿ ಸೂರ್ಯಂಗೆ ಸಮಾನವಾದ ‘ಬ’ ‘ಭ’ ‘ಮ’ ‘ಯ’ ‘ರ’ ‘ಲ’ ವರ್ಣಂಗೊಕ್ಕೆ ಆಶ್ರಯವಾದ ಆರು ದಳಂಗೊ. ಮಣಿಪೂರಕವು ರಕ್ತವರ್ಣದ್ದಾಗಿ, ‘ಡ’ ‘ಢ’ ‘ಣ’ ‘ತ’ ‘ಥ’ ‘ದ’ ‘ಧ’ ‘ನ’ ‘ಪ’ ‘ಫ’ ಹೇಳ್ವ ವರ್ಣಂಗೊಕ್ಕೆ ಆಶ್ರಯವಾದ ಹತ್ತು ದಳಂಗೊ. ಅನಾಹತವು ಚಿನ್ನದ ಬಣ್ಣದ ‘ಕ’ ‘ಖ’ ‘ಗ’ ‘ಘ’ ‘ಙ’ ‘ಚ’ ‘ಛ’ ‘ಜ’ ‘ಝ’ ‘ಞ’ ‘ಟ’ ‘ಠ’ ಹೇಳ್ವ ವರ್ಣಂಗೊಕ್ಕೆ ಆಶ್ರಯವಾದ ಹನ್ನೆರಡು ಪತ್ರಂಗಳಿಂದ ಆವೃತವಾಗಿದ್ದು. ವಿಶುದ್ಧಲ್ಲಿಪ್ಪ ಕಮಲ ಚಂದ್ರನ ಜ್ಯೋತಿಯ ಸಮಾನವಾಗಿ ‘ಅ’ ‘ಆ’ ‘ಇ’ ‘ಈ’ ‘ಉ’ ‘ಊ’ ‘ಋ’ ‘ೠ’ ‘ಲೃ’ ‘ಲ್ಯೃ’ ‘ಏ’ ‘ಐ’ ‘ಓ’ ‘ಔ’ ‘ಅಂ’ ‘ಅಃ’ – ಎಂಬೀ ವರ್ಣಂಗಳ ಹದಿನಾರು ದಳಂದ ಕೂಡಿದ್ದು. ಆಜ್ಞಾಚಕ್ರಲ್ಲಿ ‘ಹ’ ‘ಸ’ ಹೇಳ್ವ ಎರಡು ಅಕ್ಷರಂಗಳಿಂದ ಕೂಡಿದ ಎರಡು ದಳಂಗೊ ಇಪ್ಪ ರಕ್ತವರ್ಣದ ಕಮಲವು ಇದ್ದು. ಇದರ ಮೇಗೆ ಪ್ರಕಾಶಮಾನವಾದ ಸಹಸ್ರದಳ ಕಮಲ ಇದ್ದು . ಅದು ಸದಾನಂದಮಯವೂ, ಸದಾಶಿವಮಯವೂ, ಜ್ಯೋತಿರ್ಮಯವೂ, ಶಾಶ್ವತವೂ ಆಗಿದ್ದು. ಗಣೇಶ°, ಬ್ರಹ್ಮ°, ವಿಷ್ಣು, ಶಿವ° ಜೀವ° ಮತ್ತೆ  ಗುರು, ಅದರಮತ್ತೆ ಸರ್ವವ್ಯಾಪಿಯಾದ ಪರಬ್ರಹ್ಮ° ಇವರ ಕ್ರಮವಾಗಿ ಚಕ್ರಲ್ಲಿ ಧ್ಯಾನಮಾಡೆಕು.
ಒಂದು ದಿನಾಣ ಹಗಲು ಇರುಳಿಲ್ಲಿ ಶ್ವಾಸದ ಸೂಕ್ಷ್ಮಗತಿ ಇಪ್ಪತ್ತೊಂದು ಸಾವಿರದ ಆರುನೂರು ಸರ್ತಿ ಹೇದು ಪಂಡಿತರುಗಳಿಂದ ಹೇಳಲ್ಪಟ್ಟಿದು. ‘ಹ’ಕಾರಂದ ಶ್ವಾಸ ಹೆರಹೋವ್ತು, ಸಕಾರಂದ ಶ್ವಾಸ ಒಳ ಬತ್ತು. ಈ ರೀತಿ ‘ಹಂಸ-ಹಂಸ’ ಹೇಳ್ವ ಮಂತ್ರವ ಜೀವ ತತ್ತ್ವಪ್ರಕಾರವಾಗಿ ಜೆಪಿಸಿಗೊಂಡು ಇರ್ತು. ಆರ್ನೂರು ಗಣೇಶಂಗೆ, ಆರುಸಾವಿರ ಬ್ರಹ್ಮಂಗೆ, ಆರುಸಾವಿರ ಹರಿಗೆ ಮತ್ತೆ ಆರು ಸಾವಿರ ಹರಂಗೆ, ಜೀವಾತ್ಮಂಗೆ ಒಂದು ಸಾವಿರ, ಗುರುವಿಂಗೆ ಒಂದು ಸಾವಿರ ಮತ್ತೆ ಚಿತ್ಸ್ವರೂಪನಾದ ಆತ್ಮಕ್ಕೆ ಒಂದು ಸಾವಿರ ಸಂಖ್ಯೆಯ ಜೆಪ ನಿವೇದುಸೆಕು. ಸತ್ಸಂಪ್ರದಾಯಂಗಳ ಗೊಂತುಮಾಡಿಗೊಂಡಿಪ್ಪ ಅರುಣ ಮೊದಲಾದ ಮುನಿಗೊ, ಈ ಚಕ್ರಂಗಳಲ್ಲಿಪ್ಪ ಪರಬ್ರಹ್ಮನ ಕಿರಣಸ್ವರೂಪದ ದೇವತೆಗಳ ಧ್ಯಾನಿಸುತ್ತವು. ಶುಕಮೊದಲಾದ ಮುನಿಗೊ ಸಾನ ಶಿಷ್ಯರಿಂಗೆ ಇದನ್ನೇ ಉಪದೇಶಿಸುತ್ತವು. ಹಾಂಗಾಗಿ ಆ ಮಹಾನುಭಾವರ ವರ್ತನೆಯ ಮನಸ್ಸಿಲ್ಲಿ ಮಡಿಕ್ಕೊಂಡು ವಿದ್ವಾಂಸರುಗೊ ಏವತ್ತೂ ಷಟ್ಚಕ್ರಂಗಳ್ಳಿ ಧ್ಯಾನುಸುತ್ತವು. ಏಕಾಗ್ರ ಚಿತ್ತವ ಮಾಡಿಗೊಂಡು, ಎಲ್ಲ ಚಕ್ರಂಗಳಲ್ಲಿಯೂ ಮಾನಸಿಕ ಪೂಜೆಯ ಮಾಡಿಕ್ಕಿ ಮತ್ತೆ ಗುರುವಿನ ಉಪದೇಶಂದ ಅಜಪಾ ಗಾಯತ್ರಿಯ ಜೆಪ ಮಾಡೆಕು. ಮತ್ತೆ ಅಧೋಮುಖವಾದ, ಬ್ರಹ್ಮರಂಧ್ರಲ್ಲಿಪ್ಪ ಸಹಸ್ರದಲ ಕಮಲಲ್ಲಿ, ಹಂಸಾರೂಢನಾಗಿಪ್ಪ, ಕರಕಮಲಂಗಳಲ್ಲಿ ವರ ಅಭಯ ಮುದ್ರೆಗಳ ಹೊಂದಿಪ್ಪ ಶ್ರೀಗುರುವಿನ ಧ್ಯಾನುಸೆಕು. ಅವನ ಚರಣಾಮೃತ ಧಾರೆಂದ ತನ್ನ ದೇಹವ ಚಂಡಿಮಾಡಿಗೊಂಡಾಂಗೆ ಧ್ಯಾನಿಸಿ, ಪಂಚೋಪಚಾರಂಗಳಿಂದ ಶ್ರೀಗುರುವ ಪೂಜಿಸಿ, ಅವನ ಸ್ತುತಿಮಾಡಿ ನಮಸ್ಕಾರ ಮಾಡೆಕು.
ಮತ್ತೆ ಮೂರುವರೆ ಸುರುಳಿಯೊಳ ಇಪ, ಆರುಚಕ್ರಂಗಳಲ್ಲಿ ಸಂಚರುಸುವ ಕುಂಡಲಿನಿಯ ಆರೋಹಣ ಅವರೋಹಣ ಮಾಡ್ತಾಂಗೆ ಧ್ಯಾನುಸೆಕು. ಮತ್ತೆ ಬ್ರಹ್ಮರಂಧ್ರಂದ ಹೆರ ಹೋಗಿಪ್ಪ ಸುಷುಮ್ನಾ ಹೇಳ್ವ ಹೆಸರಿನ ಜಾಗೆಯ ಧ್ಯಾನುಸೆಕು. ಆ ಮಾರ್ಗಲ್ಲಿ ಹೆರಾಂಗೆ ಹೋದವ° ಆ ವಿಷ್ಣುವಿನ ಪರಮ ಪದಕ್ಕೆ ಹೋವುತ್ತ°. ಸ್ವಯಂಜ್ಯೋತಿಯಾದ, ಸನಾತನವಾದ, ಸದಾನಂದವೇ ತಾನಾದ, ಎನ್ನ ಧ್ಯಾನರೂಪವ ಏವತ್ತೂ ಬ್ರಾಹ್ಮೀ ಮುಹೂರ್ತಲ್ಲೇ  (ಬ್ರಾಹ್ಮೀ ಮುಹೂರ್ತ = ಸೂರ್ಯೋದಯಂದ ನಾಲ್ಕು ಘಳಿಗೆ, ಹೇದರೆ – ಸುಮಾರು ಒಂದುವರೆ ಗಂಟೆ ಮದಲು) ಧ್ಯಾನುಸೆಕು. ಈ ರೀತಿ ಗುರುವಿನ ಉಪದೇಶಂದ ಮನಸ್ಸಿನ ನಿಶ್ಚಲಸ್ಥಿತಿಗೆ ತರೆಕು. ತನ್ನ ಪ್ರಯತ್ನಂದಲೇ ಮಾಡ್ಳಾಗ. ಅದಿಲ್ಲದ್ರೆ ಅಧೋಗತಿಗೆ ಬೀಳೆಕ್ಕಾವ್ತು.
ಈ ರೀತಿಯಾಗಿ ಅಂತರ್ಯಾಗವ ಮಾಡಿಕ್ಕಿ, ಬಹಿರ್ಯಾಗವ ಆಚರುಸೆಕು. ಸ್ನಾನ ಸಂಧ್ಯಾದಿಗಳ ಮಾಡಿಕ್ಕಿ, ಹರಿಹರರ ಪೂಜೆಯ ಮಾಡೆಕು. ದೇಹಾಭಿಮಾನಿಗಳಲ್ಲಿ ಅಂತರ್ಮುಖೀ ಪ್ರವೃತ್ತಿ ಉತ್ಪನ್ನ ಆವ್ತಿಲ್ಲೆ. ಹಾಂಗಾಗಿ ಅವಕ್ಕೆ ಎನ್ನ ಭಕ್ತಿ ಸುಲಭವಾಗಿ ಮೋಕ್ಷವ ಕೊಡುವಂತಾದ್ದು. ತಪಸ್ಸು, ಯೋಗ ಇತ್ಯಾದಿಗೊ ಮೋಕ್ಷಮಾರ್ಗಂಗೊ ಆಗಿದ್ದು. ಅಂದರೂ ಸಂಸಾರಿಗೊಕ್ಕೆ ಎನ್ನ ಭಕ್ತಿಮಾರ್ಗವೇ ಶ್ರೇಷ್ಠವಾದ್ದಾಗಿದ್ದು. ಬ್ರಹ್ಮಾದಿ ಸರ್ವಜ್ಞರೆಲ್ಲೊರೂ ಮೂರು ಸರ್ತಿ ವೇದಶಾಸ್ತ್ರಂಗಳ ಪುನಃ ಪುನಃ ವಿಚಾರ ಮಾಡಿಕ್ಕಿ ಈ ರೀತಿ ನಿಶ್ಚೈಸಿದ್ದವು. ಯಜ್ಞಾದಿಗಳೂ ಸದ್ಧರ್ಮಂಗಳೇ. ಚಿತ್ತವ ಶುದ್ಧಿ ಮಾಡುವಂತವುಗೊ. ಎನ್ನಲ್ಲಿ ಭಕ್ತಿ ಅವುಗಳ ಫಲ. ಅದರ ಪಡದವ° ಎಂದೂ ನಾಶ ಆವುತ್ತನಿಲ್ಲೆ.
ಏ ಗರುಡ!, ಯಾವ ಧರ್ಮಾತ್ಮನಾದ ಮನುಷ್ಯ° ಈ ರೀತಿ ಆಚರಣೆ ಮಾಡುತ್ತನೋ, ಅವ° ಎನ್ನ ಭಕ್ತಿಯ ಸಂಯೋಗಂದ ಸನಾತನವಾದ ಮೋಕ್ಷವ ಹೊಂದುತ್ತ°.
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ಸಾರೋದ್ಧಾರ ವಿಭಾಗಲ್ಲಿ ‘ಸುಕೃತಿಜನಂಗಳ ಜನ್ಮ ಮತ್ತೆ ಆಚರಣೆಗಳ ನಿರೂಪಣೆ’ ಹೇಳ್ವ ಹದ್ನೈದನೇ ಅಧ್ಯಾಯ ಮುಗುದತ್ತು.
 
[ಚಿಂತನೀಯಾ –
ಶರೀರಲ್ಲಿ ಇಪ್ಪ ಆತ್ಮ ಪರಮಾತ್ಮನ ಒಂದು ಕಿಡಿ. ಹಾಂಗಾಗಿ ನಮ್ಮೊಳ ಇಪ್ಪ ಆ ಆತ್ಮ ಪರಮಾತ್ಮಂಗೆ ಸಮಾನ ಹೇದು ತಿಳಿಯೆಕು. ಆ ಪರಮಾತ್ಮನ ಅಂಶ ಧಾರಣ ಮಾಡಿದ ಈ ದೇಹವೇ ದೇವಾಲಯ (ದೇಹೋ ದೇವಾಲಯಃ ಪ್ರೋಕ್ತಃ…). ಹಾಂಗಾಗಿ ದೇಹವನ್ನೂ ಪವಿತ್ರ ಹೇದು ಕಾಣೆಕು. ಅದರ ಪಾವಿತ್ರ್ಯವ ನಮ್ಮ ಸಚ್ಚಾರಿತ್ರೆಂದ ಕಾಪಾಡೆಕು. ಅಜ್ಞಾನ ಹೇಳ್ವ ಮಲಿನತೆಂದ ನಮ್ಮ ಜ್ಞಾನ ಹೇಳ್ವ ಪಾವಿತ್ರ್ಯವ ಬೆಳೆಶಿ ಕಾಪಾಡಿಗೊಳ್ಳೆಕು. ಇದಕ್ಕೆ ಸದಾಚಾರ, ಸತ್ಸಂಗ, ಸತ್ಕರ್ಮ, ಸ್ಥಿರಚಿತ್ತ ನಮ್ಮದ್ದಾಗಿರೆಕು. ಬ್ರಹ್ಮಮಯ ಪ್ರಕೃತಿಲಿ ಬ್ರಹ್ಮಮಯವಾಗಿ ಲೀನ ಅಪ್ಪದೇ ನಮ್ಮ ಜೀವನ ಉದ್ದೇಶ ಹೇಳ್ವ ತತ್ವ ನಮ್ಮ ನೆತ್ತರಿನಾಳಲ್ಲಿ ಬೇರೂರೆಕು. ಭಗವಂತ° ಈ ಮೂಲಕ ನವಗೆ ಸಾರಿದ ಪಾರಮಾರ್ಥಿಕ ಶರೀರಲ್ಲಿ ಬ್ರಹ್ಮಾಂಡದ ಚಿಂತನೆ ನಮ್ಮ ಏವತ್ತೂ ಜಾಗೃತಗೊಳಿಸಿಗೊಂಡಿರಲಿ ಹೇಳ್ವದು ಈ ಸಂದರ್ಭಲ್ಲಿ ಸದಾಶಯ. ನಾವು ಉಸುರಾಡುವಾಗ ‘ಹಂಸ’ ಉಚ್ಚಾರಣೆ ಮಾತ್ರಂದಲೇ ನಮ್ಮೊಳ ಎಂತ ಇದ್ದು ಹೇಳ್ವದರ ನಾವು ಪ್ರಜ್ಞಾಪೂರ್ವಕ ಅರ್ತುಗೊಂಡ್ರೆ ಮತ್ತೆ ಬಾಕಿಪ್ಪದರ ಅನುಷ್ಠಾನಕ್ಕೆ ಮನಸ್ಸು ಒಡ್ಳೆ ಭಂಙ ಆಗ. ನಾವು ನಾಲಗೆಲಿ ದೇವರಿಲ್ಲೆ ಹೇದು ಹೇಳಿರೂ ನಮ್ಮ ಉಸಿರಿಲ್ಲಿ ಒಂದು ದಿನಲ್ಲಿ ೭೧೬೦೦ ಸರ್ತಿ ‘ಸೋsಹಮ್’ (ಹಂಸಃ) ಹೇಳ್ವದರ ಮೂಲಕ ಭಗವಂತನ ಇರುವಿಕೆಯ ಒಳಂದೊಳ ಹೇದುಗೊಂಡಿರ್ತು. ಶ್ವಾಸ ಒಳ ತೆಕ್ಕೊಂಬಗ ‘ಸೋ’ ಹೇದೂ, ಹೆರಬಿಡುವಾಗ ‘ಹಂ’ ಹೇದು ಬಿಡುವದು ಒಳ ಇಪ್ಪ ಆ ‘ಅವನ’ ಸ್ಮರಣೆಯೇ ಆಗಿದ್ದು. ಅದನ್ನೇ ನಾವು ನಿತ್ಯ ಪೂಜೆಲಿ ಹೇಳುವದು – “ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸದಾಶಿವಃ । ತ್ಯಜೇದಜ್ಞಾನನಿರ್ಮಾಲ್ಯಂ ಸೋsಹಂ ಭಾವೇನ ಪೂಜಯೇತ್” ॥
 ‘ಭಕ್ತ’ ಹೇದರೆ ಭಗವಂತನ ‘ವಿಭಕ್ತ°’ ಆಗಿಪ್ಪದು ಹೇದು ತತ್ತ್ವಚಿಂತಕರ ಅಂಬೋಣ. ಹಾಂಗಾಗಿ ಸರ್ವದೇಶ, ಸರ್ವಕಾಲ, ಸರ್ವಾವಸ್ಥೆಲಿ ನಾವು ‘ಭಕ್ತ’ ಆಗಿಯೇ ಇಪ್ಪೊ°. ಇದು ಎಲ್ಲರಲ್ಲಿಯೂ ಮನೋವಾಕ್ಕಾಯ ಶುದ್ಧವಾಗಿದ್ದು ಕಾರ್ಯರೂಪಲ್ಲಿ ಸ್ಥಿತವಾಗಿರಲಿ, ಎಲ್ಲೊರು ‘ಸುಕೃತಿಗೊ’ ಅಪ್ಪಂತಾಗಲಿ ಹೇದು ಭಗವಂತನ ಬೇಡಿಗೊಂಡು ಈ ಭಾಗಕ್ಕೆ ಹರೇ ರಾಮ.]
 
ಬಪ್ಪ ವಾರ ಕಾಂಬೊ°.

2 thoughts on “ಗರುಡಪುರಾಣ – ಅಧ್ಯಾಯ 15 – ಭಾಗ 03

  1. ಚೆನ್ನೈ ಭಾವ,ನಮಸ್ತೇ.ಅತ್ಯದ್ಭುತವಾಗಿ ಲಾಯಕಕೆ ಬತ್ತಾ ಇದ್ದು ನಿ೦ಗಳ ವಿವರಣೆ.ಮೋಹಕ ಶೈಲಿ ತು೦ಬಾ ಕೊಶಿಕೊಡುತ್ತು.ಧನ್ಯವಾದ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×