ಗರುಡ ಪುರಾಣ – ಅಧ್ಯಾಯ 04 – ಭಾಗ 02

September 5, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರದ ಭಾಗಲ್ಲಿ ನರಕಯಾತನೆಯ ಉಂಟುಮಾಡುವ ಪಾಪಚಿಹ್ನೆಗಳ ವಿವರುಸುತ್ತ ಇಪ್ಪದರ ನಾವು ಓದಿದ್ದು. ಯಾವ ಯಾವ ರೀತಿಯ ಪಾಪ ಕರ್ಮಾತ್ಮರು ನರಕದ ಕಡೆಂಗೆ ಹೋವುತ್ತವು, ಯಾವ ಪಾಪಿಗೊ ವೈತರಣೀ ನದಿಲಿ ಬೀಳುತ್ತವು,  ಯಾವ್ಯಾವ ಪಾಪಿಗೊ ಶಾಲ್ಮಲೀ ವೃಕ್ಷದತ್ರೆ ಕಷ್ಟವ ಅನುಭವುಸುತ್ತವು ಹೇಳ್ವದು ಕಳದವಾರದ ಭಾಗಲ್ಲಿ ಓದಿದ್ದದು. ಶಾಲ್ಮಲೀ ವೃಕ್ಷದತ್ರೆ ಹೊಡೆತವ ತಿಂದು ಬಿದ್ದವರ ನೆಗ್ಗಿ ಯಮದೂತರು ಕಠಿಣ ನರಕಕ್ಕೆ ಇಡ್ಕುತ್ತವು. ಯಾವ್ಯಾವ ಪಾಪಿಗೊ ನರಕಕ್ಕೆ ಹೋವ್ತವು ಹೇಳ್ವದು ಮುಂದೆ –

 

ಗರುಡ ಪುರಾಣ – ಅಧ್ಯಾಯ 4 – ಭಾಗ 2

 

ನಾಸ್ತಿಕಾ ಭಿನ್ನಮರ್ಯಾದಾಃ ಕದರ್ಯಾ ವಿಷಯಾತ್ಮಕಾಃ ।
ದಾಂಭಿಕಾಶ್ಚ ಕೃತಾಘ್ನಾಶ್ಚ ತೇ ವೈ ನರಕಗಾಮಿನಃ ॥೩೨॥

ನಾಸ್ತಿಕರು, ಮರ್ಯಾದಿಯ ನಿಯಮವ ಮುರಿವುವವು, ಜಿಪುಣರು, ಇಂದ್ರಿಯ ಭೋಗ ವಿಷಯಲ್ಲಿ ನಿರತರಾದೋರು, ಗರ್ವಿಷ್ಠರು, ಕೃತಘ್ನರು ಇವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋವುತ್ತವು ಆವ್ತವು.

ಕೂಪಾನಾಂ ಚ ತಡಾಗಾನಾಂ ವಾಪೀನಾಂ ದೇವಸದ್ಮನಾಮ್ ।hqdefault copy
ಪ್ರಜಾಗೃಹಾಣಾಂ ಭೇತ್ತಾರಸ್ತೇ ವೈ ನರಕಗಾಮಿನಃ ॥೩೩॥

ಬಾವಿ, ಕೆರೆ, ಕೊಳ, ದೇವಾಲಯ ಮತ್ತೆ ಪ್ರಜೆಗಳ ಮನೆಗಳ ನಾಶಮಾಡುವವು ನಿಶ್ಚಯವಾಗಿ ನರಕೆ ಹೋವ್ತವು ಆವ್ತವು.

ವಿಸೃಜ್ಯಾಶ್ನಂತಿ ಯೇ ದಾರಾಂವಿಶೂನ್ಛೃತ್ಯಾಂಸ್ತಥಾ ಗುರೂನ್ ।
ಉತ್ಸೃಜ್ಯ ಪಿತೃದೇವೇಜ್ಯಾಂ ತೇ ವೈ ನರಕಗಾಮಿನಃ ॥೩೪॥

ಹೆಂಡತಿ ಮಕ್ಕಳ, ಸೇವಕರ ಮತ್ತೆ ಗುರುಗಳ ಬಿಟ್ಟಿಕ್ಕಿ ಪಿತೃಯಜ್ಯ, ದೇವಯಜ್ಞ ಮಾಡದ್ದೆ ಊಟ ಉಂಬವು ನಿಶ್ಚಯವಾಗಿ ನರಕಕ್ಕೆ ಹೋವುತ್ತವು ಆವ್ತವು.

ಶಂಕುಭಿಃ ಸೇತುಭಿಃ ಕಾಷ್ಠೈಃ ಪಾಷಾಣೈಃ ಕಂಟಕೈಸ್ತಥಾ ।
ಯೇ ಮಾರ್ಗಮುಪರುಂಧಂತಿ ತೇ ವೈ ನರಕಗಾಮಿನಃ ॥೩೫॥

ಸೂಜಿ (ಆಣಿ), ಮಣ್ಣಿನ ಗುಡ್ಡೆ, ಮರತ್ತುಂಡು, ಕಲ್ಲುಗಳಿಂದ ಅಥವಾ ಮುಳ್ಳುಗಳಿಂದ ಮಾರ್ಗ ತಡೆಯುಂಟುಮಾಡುತ್ತವು ನಿಶ್ಚಯವಾಗಿ ನರಕಕ್ಕೆ ಹೋವುತ್ತವು.

ಶಿವಂ ಶಿವಾಂ ಹರಿಂ ಸೂರ್ಯಂ ಗಣೇಶಂ ಸದ್ಗುರುಂ ಬುಧಮ್ ।
ನ ಪೂಜಯಂತಿ ಯೇ ಮಂದಾಸ್ತೇ ವೈ ನರಕಗಾಮಿನಃ ॥೩೬॥

ಶಿವ°, ಪಾರ್ವತಿ, ವಿಷ್ಣು, ಸೂರ್ಯ°, ಗಣೇಶ°, ಸದ್ಗುರು ಮತ್ತೆ ಪಂಡಿತರ ಪೂಜೆಯ ಮಾಡದ್ದೇ ಇಪ್ಪ ಮಂದಬುದ್ಧಿಯ ಜನಂಗೊ ನಿಶ್ಚಯವಾಗಿ ನರಕಕ್ಕೆ ಹೋವುತ್ತವು.

ಆರೋಪ್ಯ ದಾಸೀಂ ಶಯನೇ ವಿಪ್ರೋ ಗಚ್ಛೇದಧೋಗತಿಮ್ ।
ಪ್ರಜಾಮುತ್ಪಾದ್ಯ ಶೂದ್ರಾಯಾಂ ಬ್ರಾಹ್ಮಣ್ಯಾದೇವ ಹೀಯತೇ ॥೩೭॥

ದಾಸಿಯ ಹಸಗೆ ಕರಕ್ಕೊಂಬ ಬ್ರಾಹ್ಮಣ ಅಧೋಗತಿಯ ಹೊಂದುತ್ತ°. ಶೂದ್ರಸ್ತ್ರೀಲಿ ಸಂತಾನ ಉತ್ಪನ್ನ ಮಾಡುವ ಬ್ರಾಹ್ಮಣ° ಬ್ರಾಹ್ಮಣತ್ವಂದಲೇ ಚ್ಯುತನಾವ್ತ°.

ನ ನಮಸ್ಕಾರಯೋಗ್ಯೋ ಹಿ ಸ ಕದಾಪಿ ದ್ವಿಜೋsಧಮಃ ।
ತಂ ಪೂಜಯಂತಿ ಯೇ ಮೂಢಾಸ್ತೇ ವೈ ನರಕಗಾಮಿನಃ ॥೩೮॥

ಆ ಅಧಮ ಬ್ರಾಹ್ಮಣ ಎಂದಿಂಗೂ ನಮಸ್ಕಾರಕ್ಕೆ ಯೋಗ್ಯನಾವುತ್ತನಿಲ್ಲೆ.  ಯಾವ ಮೂರ್ಖ° ಇಂಥ ಬ್ರಾಹ್ಮಣನ ಪೂಜೆ ಮಾಡುತ್ತನೋ ಅವ° ನರಕಕ್ಕೆ ಹೋಪವನಾವುತ್ತ°

ಬ್ರಾಹ್ಮಣಾನಾಂ ಚ ಕಲಹಂ ಗೋಯುದ್ಧಂ ಕಲಹಪ್ರಿಯಾಃ ।
ನ ವರ್ಜಂತ್ಯನುಮೋದಂತೇ ತೇ ವೈ ನರಕಗಾಮಿನಃ ॥೩೯॥

ಕಲಹಪ್ರಿಯರು, ಬ್ರಾಹ್ಮಣ ಕಲಹವ, ಗೋಕಲಹವ ನಿವಾರುಸದ್ದೆ ಅದಕ್ಕೆ ಪ್ರೋತ್ಸಾಹ ಕೊಡುವವು ನಿಶ್ಚಯವಾಗಿ ನರಕಕ್ಕೆ ಹೋವ್ತವರಾವ್ತವು.

ಅನನ್ಯಶರಣಸ್ತ್ರೀಣಾಮೃತುಕಾಲವ್ಯತಿಕ್ರಮಮ್ ।
ಯೇ ಪ್ರಕುರ್ವಂತಿ ವಿದ್ವೇಷಾತ್ತೇ ವೈ ನರಕಗಾಮಿನಃ ॥೪೦॥

ಕೇವಲ ಗೆಂಡನತ್ರೇ ಶರಣಳಾದ ಸ್ತ್ರೀಯ ಋತುಕಾಲವ ದ್ವೇಷಭಾವನೆಂದ ವ್ಯರ್ಥಗೊಳುಸುವುವವು ನಿಶ್ಚಯವಾಗಿ ನರಕಕ್ಕೆ ಹೋವುತ್ತವು.

ಯೇsಪಿ ಗಚ್ಛಂತಿ ರಾಗಾಂಧಾ ನರಾ ನಾರೀಂ ರಜಸ್ವಲಾಮ್ ।
ಪರ್ವಸ್ವಪ್ಸು ದಿವಾ ಶ್ರಾದ್ಧೇ ತೇ ವೈ ನರಕಗಾಮಿನಃ ॥೪೧॥

ಯೇವ ಯುವಕರು ಕಾಮಾಂಧರಾಗಿ ಸ್ತ್ರೀಯರೊಟ್ಟಿಂಗೆ ರಜಸ್ವಲೆಯಾಗಿಪ್ಪಗ. ಪರ್ವದಿನಂಗಳಲ್ಲಿ, ನೀರಿಲ್ಲಿ, ಹಗಲಿಲ್ಲಿ, ಶ್ರಾದ್ಧದ ದಿನಂಗಳಲ್ಲಿ ಸೇರುತ್ತವೋ ಅವು ನರಕಗಾಮಿಗೊ ಆವ್ತವು.

ಯೇ ಶಾರೀರಂ ಮಲಂ ವಹ್ನೌ ಪ್ರಕ್ಷಿಪಂತಿ ಜಲೇsಪಿ ಚ ।
ಆರಾಮೇ ಪಥಿ ಗೋಷ್ಠೇ ವಾ ತೇ ವೈ ನರಕಗಾಮಿನಃ ॥೪೨॥

ಆರು ಶರೀರದ ಮಲವ ಅಗ್ನಿಲಿ, ಕುಡಿತ್ತ ನೀರಿಲ್ಲಿ, ಉದ್ಯಾನವನಲ್ಲಿ, ಮಾರ್ಗಲ್ಲಿ, ದನದ ಕೊಟ್ಟಗೆಲಿ ಹಾಕುತ್ತವೋ ಅವು ನಿಶ್ಚಯವಾಗಿ ನರಕಗಾಮಿಗೊ ಆವ್ತವು.

ಶಸ್ತ್ರಾಣಾಂ ಯೇ ಚ ಕರ್ತಾರಃ ಶರಾಣಾಂ ಧನುಷಾಂ ತಥಾ ।
ವಿಕ್ರೇತಾರಶ್ಚ ಯೇ ತೇಷಾಂ ತೇ ವೈ ನರಕಗಾಮಿನಃ ॥೪೩॥

ಶಸ್ತ್ರಂಗಳ, ಕತ್ತಿ, ಬಿಲ್ಲು, ಬಾಣಂಗಳ ಆರು ತಯಾರುಸುತ್ತವೋ, ಆರು ಮಾರುತ್ತವೋ ಅವು ನಿಶ್ಚಯವಾಗಿ ನರಕಕ್ಕೆ ಹೋವ್ತವು ಆವ್ತವು.

ಚರ್ಮವಿಕ್ರಯಿಣೋ ವೈಶ್ಯಾಃ ಕೇಶವಿಕ್ರೇಯಕಾಃ ಸ್ತ್ರಿಯಃ ।
ವಿಷವಿಕ್ರಯಿಣಃ ಸರ್ವೇ ತೇ ವೈ ನರಕಗಾಮಿನಃ ॥೪೪॥

ಚರ್ಮವ ಮಾರುವ ವೈಶ್ಯರು (ವ್ಯಭಿಚಾರ ದಂಧೆ ಮಾಡುವವು), ಕೂದಲು ಮಾರುವ ಸ್ತ್ರೀಯರು (ವ್ಯಭಿಚಾರಿಣಿಗೊ), ವಿಷವ ಮಾರುವವು ಅವೆಲ್ಲೋರು ನಿಶ್ಚಯವಾಗಿ ನರಕಗಾಮಿಗೊ ಆವ್ತವು.

ಅನಾಥಂ ನಾನುಕಂಪಂತಿ ಯೇ ಸತಾಂ ದ್ವೇಷಕಾರಕಾಃ ।
ವಿನಾಪರಾಧಂ ದಂಡಂತಿ ತೇ ವೈ ನರಕಗಾಮಿನಃ ॥೪೫॥

ಆರು ಅನಾಥರಲ್ಲಿ ದಯೆ ತೋರುತ್ತವಿಲ್ಯೋ, ಸಜ್ಜನರ ದ್ವೇಷಿಸುತ್ತವೋ, ಅಪರಾದ್ಹ ಇಲ್ಲದ್ದಿಪ್ಪಗಳೂ ದಂಡುಸುತ್ತವೋ ಅವೆಲ್ಲೋರು ನಿಶ್ಚಯವಾಗಿ ನರಕಗಾಮಿಗೊ ಆವ್ತವು.

ಆಶಯಂ ಸಮನುಪ್ರಾಪ್ತಾನ್ಬ್ರಾಹ್ಮಣಾನರ್ಥಿನೋ ಗೃಹೇ ।
ನ ಭೋಜಯಂತಿ ಪಾಕೇsಪಿ ತೇ ವೈ ನರಕಗಾಮಿನಃ ॥೪೬॥

ಆಶಾಯುಕ್ತರಾಗಿ ಮನಗೆ ಬಂದ ಯಾಚಕ ಬ್ರಾಹ್ಮಣರಿಂಗೆ ಅಡಿಗೆ ತಯಾರಾಗಿದ್ದರೂ ಊಟ ಹಾಕದ್ದಿಪ್ಪವು ನಿಶ್ಚಯವಾಗಿ ನರಕಕ್ಕೆ ಹೋವ್ತರಾವ್ತವು.

ಸರ್ವಭೂತೇಷ್ವವಿಶ್ವಸ್ತಾಸ್ತಥಾ ತೇಷು ವಿನಿರ್ದಯಾಃ ।
ಸರ್ವಭೂತೇಷು ಜಿಹ್ಮಾ ಯೇ ತೇ ವೈ ನರಕಗಾಮಿನಃ ॥೪೭॥

ಎಲ್ಲ ಜೀವಗಳಲ್ಲಿಯೂ ವಿಶ್ವಾಸರಹಿತರಾಗಿಪ್ಪೋರು, ಅವರಲ್ಲಿ ನಿರ್ದಯರಾಗಿಪ್ಪೋರು ಮತ್ತೆ ಎಲ್ಲ ಜೀವಿಗಳತ್ರೆ ಕುಟಿಲತೆಂದ ವರ್ತುಸುವವು ನಿಶ್ಚಯವಾಗಿ ನರಕಗಾಮಿಗೊ ಆವ್ತವು.

ನಿಯಮಾನ್ಸಮುಪಾದಾಯ ಯೇ ಪಶ್ಚಾದಜಿತೇಂದ್ರಿಯಾಃ ।
ವಿಗ್ಲಾಪಯಂತಿ ತಾನ್ಭೂಯಸ್ತೇ ವೈ ನರಕಗಾಮಿನಃ ॥೪೮॥

ಆರು ವ್ರತನಿಯಮಾದಿಗಳ ಸಂಕಲ್ಪಮಾಡಿಕ್ಕಿ ಮತ್ತೆ ಇಂದ್ರಿಯಂಗಳನ್ನೂ ಗೆಲ್ಲಲೆಡಿಯದ್ದೆ ಅವುಗಳ ಬಿಡುತ್ತವೋ ಅವು ನಿಶ್ಚಯವಾಗಿ ನರಕಗಾಮಿಗೊ ಆವ್ತವು.

ಅಧ್ಯಾತ್ಮ ವಿದ್ಯಾದಾತಾರಂ ನೈವ ಮನ್ಯಂತಿ ಯೇ ಗುರುಮ್ ।
ತಥಾ ಪುರಾಣವಕ್ತಾರಂ ತೇ ವೈ ನರಕಗಾಮಿನಃ ॥೪೯॥

ಆರು ಅಧ್ಯಾತ್ಮವಿದ್ಯೆಯ ಹೇಳಿಕೊಡುವವನ, ಪುರಾಣವ ಹೇಳುವವನ ಗುರು ಹೇದು ಒಪ್ಪುತ್ತವಿಲ್ಲೆಯೋ ಅವು ನಿಶ್ಚಯವಾಗಿ ನರಕಗಾಮಿಗೊ ಆವ್ತವು.

ಮಿತ್ರದ್ರೋಹಕರಾ ಯೇ ಚ ಪ್ರೀತಿಚ್ಛೇದಕರಾಶ್ಚ ಯೇ ।
ಆಶಾಚ್ಛೇದಕರಾ ಯೇ ಚ ತೇ ವೈ ನರಕಗಾಮಿನಃ ॥೫೦॥

ಆರು ಮಿತ್ರದ್ರೋಹ ಮಾಡುತ್ತವೋ, ಆರು ಪ್ರೀತಿಯ ಕಡುದು ಹಾಕುತ್ತವೋ ಮತ್ತೆ ಆರೊ ಆಶಾಭಂಗ ಮಾಡುತ್ತವೋ ಅವು ನಿಶ್ಚಯವಾಗಿ ನರಕಕ್ಕೆ ಹೋಪೋರಾವ್ತವು.

ವಿವಾಹಂ ದೇವಯಾತ್ರಾಂ ಚ ತೀರ್ಥಸಾರ್ಥಾನ್ವಿಲುಂಪತಿ ।
ಸ ವಸೇನ್ನರಕೇ ಘೋರೇ ತಸ್ಮಾನಾವರ್ತನಂ ಪುನಃ ॥೫೧॥

ವಿವಾಹ, ದೇವರ ಮೆರವಣಿಗೆ ಮತ್ತೆ ತೀರ್ಥಯಾತ್ರಿಕರ ಗುಂಪಿಂಗೆ ಅಡ್ಡಿತಪ್ಪೋರು ಘೋರ ನರಕವಾಸಿಗಳಾಗಿ ಮತ್ತೆ ಅಲ್ಲ್ಯೇ ಮತ್ತೆ ಮತ್ತೆ ಸುತ್ತಿಗೊಂಡಿರುತ್ತವು.

ಅಗ್ನಿಂ ದದ್ಯಾನ್ಮ ಹಾಪಾಪೀ ಗೃಹೇ ಗ್ರಾಮೇ ತಥಾ ವನೇ ।
ಸ ನೀತೋ ಯಮದೂತೈಶ್ಚ ವಹ್ನಿಕುಂಡೇಷು ಪಚ್ಯತೇ ॥೫೨॥

ಮನಗೆ, ಗ್ರಾಮಕ್ಕೆ, ಅಥವಾ ಉದ್ಯಾನವನಕ್ಕೆ ಕಿಚ್ಚು ಹಾಕಿದ ಮಹಾಪಾಪಿಯ ತಂದು ಯಮದೂತರು ಅಗ್ನಿಕುಂಡಲ್ಲಿ ಬೇಶುತ್ತವು.

ಅಗ್ನಿನಾ ದಗ್ಧಗಾತ್ರೋsಸೌ ಯದಾ ಛಾಯಾಂ ಪ್ರಯಾಚತೇ ।
ನೀಯತೇ ಚ ತದಾ ದೂತೈರಸಿಪತ್ರವನಾಂತರೇ ॥೫೩॥

ಶರೀರ ಅಗ್ನಿಲಿ ಬೆಂದಪ್ಪಗ ಅಂವ ನೆರಳ ಯಾಚಿಸುತ್ತ. ಅಂಬಗ ಅವನ ಯಮದೂತರು ಅಸಿಪತ್ರವನಕ್ಕೆ (ಕತ್ತಿಹರಿಯಾಂಗಿಪ್ಪ ಎಲೆಗಳಿಪ್ಪ ವೃಕ್ಷಗಳ ವನ) ಕರಕ್ಕೊಂಡು ಹೋವುತ್ತವು.

ಖಡ್ಗತೀಕ್ಷ್ಣೈಶ್ಚ ತತ್ಪತ್ರೈರ್ಗಾತ್ರಚ್ಛೇದೋ ಯದಾ ಭವೇತ್ ।
ತದೋಚುಃ ಶೀತಲಚ್ಛಾಯೇ ಸುಖನಿದ್ರಾಂ ಕುರುಷ್ವ ಭೋಃ ॥೫೪॥

ಖಡ್ಗದಷ್ಟು ತೀಕ್ಷ್ಣವಾದ ಆ ಎಲೆಗಳಿಂದ ಶರೀರ ಛಿದ್ರವಪ್ಪಗ ಅವು (ಯಮದೂತರು) ಹೇಳುತ್ತವು – “ಎಲೈ ಪಾಪಿಯೇ ಶೀತಲವಾದ ನೆರಳಿಲ್ಲಿ ಸುಖನಿದ್ರೆಯ ಮಾಡು”.

ಪಾನೀಯಂ ಪಾತುಮುಚ್ಛನ್ವೈ ತೃಷಾರ್ತೋ ಯದಿ ಯಾಚತೇ ।
ಪಾನಾರ್ಥಂ ತೈಲಮತ್ಯುಷ್ಣಂ ತಾದಾ ದೂತೈಃ ಪ್ರದೀಯತೇ ॥೫೫॥

ನೀರ ಕುಡಿವಲೆ ಇಚ್ಛೆಪಟ್ಟು, ಆಸರಂದ ಆರ್ತನಾಗಿ ನೀರು ಕೇಳಿಯಪ್ಪಗ ಯಮದೂತರು ಅತಿಬೆಶಿಯಾದ ಎಣ್ಣೆಯ ಕೊಡುತ್ತವು.

ಪೀಯತಾಂ ಭುಜ್ಯತಾಂ ಪಾನಮನ್ನಮೂಚುಸ್ತದೇತಿ ತೇ ।
ಪೀತಮಾತ್ರೇಣ ತೇನೈವ ದಗ್ಧಾಂತ್ರಾ ನಿಪತಂತಿ ತೇ ॥೫೬॥

ಅಂಬಗ ಅವು ಹೀಂಗೆ ಹೇಳುತ್ತವು – “ನೀರ ಕುಡಿ, ಅಶನ ತಿನ್ನು”. ಅದರ ಕುಡುದ ಮಾತ್ರಕ್ಕೆ ಕರುಳೆಲ್ಲ ಸುಟ್ಟು ಅವು ಕೆಳ ಬೀಳುತ್ತವು.

ಕಥಂ ಚಿತ್ರುನರುತ್ಥಾಯ ಪ್ರಲಪಂತಿ ಸುದೀನವತ್ ।
ವಿವಶಾ ಉಚ್ಛ್ವಸಂತಶ್ಚ ತೇ ವಕ್ತುಮಪಿ ನಾಶಕನ್ ॥೫೭॥

ಹೇಂಗೋ ಪುನಃ ಎದ್ದು ನಿಂದುಗೊಂಡು ದೀನರಾಗಿ ಪ್ರಲಾಪಿಸಿಗೊಂಡು ವಿವಶರಾಗಿ ಏದುಸುರು ಬಿಟ್ಟುಗೊಂಡು ಮಾತಾಡಲೂ ಅಶಕ್ಯರಾವುತ್ತವು.

ಇತ್ಯೇವಂ ಬಹುಶಸ್ತಾರ್ಕ್ಷ್ಯ ಯಾತನಾಃ ಪಾಪಿನಾಂ ಸ್ಮೃತಾಃ ।
ಕಿಮೇತೈರ್ವಿಸತಾತ್ಪ್ರೋಕ್ತೈಃ ಸರ್ವಶಾಸ್ತ್ರೇಷುಟ ಭಾಷಿತೈಃ ॥೫೮॥

ಏ ಗರುಡ!, ಈ ರೀತಿಯಾಗಿ ಪಾಪಿಗೊಕ್ಕೆ ಅನೇಕ ಯಾತೆನೆಗೊ ಇದ್ದು ಹೇದು ಹೇಳಲ್ಪಟ್ಟಿದು. ಎಲ್ಲಾ ಶಾಸ್ತ್ರಂಗಳಲ್ಲಿಯೂ ಅವುಗೊ ಹೇಳಲ್ಪಟ್ಟಿಪ್ಪಗ ಆನು ವಿಸ್ತಾರವಾಗಿ ಹೇಳ್ಳೆ ಎಂತ ಇದ್ದು?

ಏವಂ ವೈ ಕ್ಲಿಶ್ಯಮಾನಾಸ್ತೇ ನರಾ ನಾರ್ಯಃ ಸಹಸ್ರಶಃ ।
ಪಚ್ಯಂತೇ ನರಕೇ ಘೋರೇ ಯಾವದಾಭೂತಸಂಪ್ಲವಮ್ ॥೫೯॥

ಈ ರೀತಿಯಾಗಿ ನಿಶ್ಚಯವಾಗಿ ಪೀಡಿಸಲ್ಪಟ್ಟು ಸಾವಿರಾರು ನರನಾರಿಯರು ಪ್ರಳಯಕಾಲದವರೇಂಗೆ ಘೋರವಾದ ನರಕಲ್ಲಿ ಬೇಯಿಸಲ್ಪಡುತ್ತವು.

ಸಸ್ಯಾಕ್ಷಯಂ ಫಲಂ ಭುಕ್ತ್ವಾ ತತ್ರೈವೋತ್ಪದ್ಯತೇ ಪುನಃ ।
ಯಮಾಜ್ಞಯಾ ಮಹೀಂ ಪ್ರಾಪ್ಯ ಭವಂತಿ ಸ್ಥಾವರಾದಯಃ ॥೬೦॥

ಅದರ ಅಕ್ಷಯಫಲವ ಅಲ್ಲಿಯೇ ಅನುಭವುಸಿ ಪುನಃ ಹುಟ್ಟುತ್ತವು. ಯಮನ ಆಜ್ಞೆಯ ಪ್ರಕಾರ ಭೂಮಿಗೆ ಬಂದು ಸ್ಥಾವರ ಇತ್ಯಾದಿಗೊ ಆವ್ತವು.

ವೃಕ್ಷಗುಲ್ಮಲತಾವಲ್ಲೀಗಿರಯಶ್ಚ ತೃಣಾನಿ ಚ ।
ಸ್ಥಾವರಾ ಇತಿ ವಿಖ್ಯಾತ ಮಹಾಮೋಹಸಮಾವೃತಾಃ ॥೬೧॥

ಮರ, ಪೊದೆ, ಗೆಡು, ಬಳ್ಳಿ, ಪರ್ವತ ಮತ್ತೆ ಹುಲ್ಲುಗೊ ಸ್ಥಾವರವಸ್ತುಗೊ ಹೇದು ಪ್ರಸಿದ್ಧವಾಗಿದ್ದು ಮತ್ತು ಮಹಾಮೋಹಂದ ಆವೃತವಾಗಿದ್ದು.

ಕೀಟಾಶ್ಚ ಪಶವಶ್ಚೈವ ಪಕ್ಷಿಣಶ್ಚ ಜಲೇಚರಾಃ ।
ಚತುರಶೀತಿಲಕ್ಷೇಷು ಕಥಿತಾ ಜೀವಯೋನಯಃ ॥೬೨॥

ಕ್ರಿಮಿಗೊ, ಪಕ್ಷಿಗೊ, ಪ್ರಾಣಿಗೊ ಮತ್ತೆ ಜಲಚರಂಗೊಹೇದು 84ಲಕ್ಷ ಜೀವಜಾತಿಗೊ ಹೇದು ಹೇಳಲ್ಪಟ್ಟಿದು.

ಏತಾಃ ಸರ್ವಾಃ ಪರಿಭ್ರಮ್ಯ ತತೋ ಯಾಂತಿ ಮನುಷ್ಯತಾಮ್ ।
ಮಾನುಷೇsಪಿ ಶ್ವಪಾಕೇಷು ಜಾಯಂತೇ ನರಕಾಗತಾಃ ।
ತತ್ರಾಪಿ ಪಾಪಚಿಹ್ನೈಸ್ತೇ ಭವಂತಿ ಬಹುದುಃಖಿತಾಃ ॥೬೩॥

ಈ ಎಲ್ಲದರಲ್ಲಿಯೂ ಸುತ್ತಾಡಿಕ್ಕಿ ಮತ್ತೆ ಮನುಷ್ಯ ಜನ್ಮವ ಪಡೆತ್ತವು. ಮನುಷ್ಯರಲ್ಲೂ ನರಕಂದ ಬಂದವು ಚಾಂಡಾಲರಾಗಿ ಹುಟ್ಟುತ್ತವು. ಅಲ್ಲಿಯೂ ಪಾಪಚಿಹ್ನೆಗಳಿಂದ (ರೋಗಂಗಳಿಂದ) ಬುಹುದುಃಖಿತರಾಗಿರುತ್ತವು.

ಗಲತ್ಕುಷ್ಠಾಶ್ಚ ಜನ್ಮಾಂಧಾ ಮಹಾರೋಗಸಮಾಕುಲಾಃ ।
ಭವಂತ್ಯೇವಂ ನರಾ ನಾರ್ಯಃ ಪಾಪಚಿಹ್ನೋಪಲಕ್ಷಿತಾಃ ॥೬೪॥

ಈ ರೀತಿ ತೀವ್ರವಾದ ಕುಷ್ಠರೋಗಿಗೊ, ಹುಟ್ಟುಕುರುಡರು, ಮಹಾರೋಗಂಗಳಿಂದ ಕೂಡಿ ಪಾಪಚಿಹ್ನೆಗಳ ಸೂಚುಸುವ ನರನಾರಿಯರಾವುತ್ತವು.

 

ಇತಿ ಗರುಡಪುರಾಣೇ ಸಾರೋದ್ಧಾರೇ ನರಕಪ್ರದ ಪಾಪಚಿಹ್ನನಿರೂಪಣಂ ನಾಮ ಚತುರ್ಥೋsಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ನರಕವ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ’ ಹೇಳ್ವ ನಾಲ್ಕನೇ ಅಧ್ಯಾಯ ಮುಗುದತ್ತು.

 

ಗದ್ಯರೂಪಲ್ಲಿ-

 

ಆರೆಲ್ಲ ನರಕಗಾಮಿಗೊ ಆವ್ತವು ಹೇಳ್ವದರ ಭಗವಂತ° ಗರುಡಂಗೆ ಹೇಳುತ್ತ° –

ನಾಸ್ತಿಕರು, ಮರ್ಯಾದೆಯ ನಿಯಮವ ಉಲ್ಲಂಘಿಸುವವು, ಜಿಪುಣರು, ಇಂದ್ರಿಯ ಭೋಗಲೋಲುಪರು, ಗರ್ವಿಷ್ಠರು, ಕೃತಘ್ನರು, ಇತ್ಯಾದಿ ಪಾಪ ಕರ್ಮಿಗೊ ನರಕಕ್ಕೆ ಹೋಪವು ಆವ್ತವು. ಬಾವಿ, ಕೆರೆ, ಕೊಳ, ದೇವಾಲಯ ಮತ್ತೆ ಪ್ರಜೆಗಳ ಮನೆಯ ನಾಶಮಾಡುವವು ಇತ್ಯಾದಿಯೋರು ಕೂಡ ನರಕಕ್ಕೆ ಹೋವ್ತವರಾವ್ತವು. ಹೆಂಡತಿ ಮಕ್ಕಳ (ಸ್ತ್ರೀಯರ, ಸಣ್ಣಮಕ್ಕಳ ಹೇದರ್ಥ), ಸೇವಕರ ಮತ್ತೆ ಗುರುಗಳ ಬಿಟ್ಟು (ಶ್ರೇಷ್ಠ ಜೆನರ ಹೇದರ್ಥ), ಪಿತೃಯಜ್ಞ, ದೇವಯಜ್ಞ ಮಾಡದ್ದೆ (ದೇವರ ಪೂಜೆ, ಪಿತೃಗಳ ಪೂಜೆ ಮಾಡದ್ದೆ ಹೇಳಿ ಅರ್ಥ) ಉಂಬವು ನರಕಕ್ಕೆ ಹೋಪವರಾವ್ತವು. ಆರು ಮಾರ್ಗವ ಆಣಿ, ಕಲ್ಲು, ಮುಳ್ಳು, ಅಡ್ಡಗೋಡೆಗಳಿಂದ ಮತ್ತೆ ಮರತುಂಡುಗಳಿಂದ ಮಾರ್ಗಕ್ಕೆ ಅಡ್ಡಿಯುಂಟುಮಾಡುತ್ತವೋ ಅವು ನರಕಕ್ಕೆ ಹೋಪವರಾವ್ತವು.

ಶಿವ°, ಪಾರ್ವತಿ (ಶಕ್ತಿ), ನಾರಾಯಣ°, ಸೂರ್ಯ°, ಗಣೇಶ, ಸದ್ಗುರು ಮತ್ತೆ ವಿದ್ವಾಂಸರ ಪೂಜೆಯ ಮಾಡದ್ದೆ ಇಪ್ಪ ಮಂದಮತಿಗೊ ನರಕಕ್ಕೆ ಹೋವ್ತವು. ಕಲಹಪ್ರಿಯರು, ಬ್ರಾಹ್ಮಣಕಲಹವ ಮತ್ತೆ ಗೋವಿನ ಕದನವ ನಿವಾರುಸದ್ದೆ ಅದಕ್ಕೆ ಪ್ರೋತ್ಸಾಹ ನೀಡುವವ್ವು ನರಕಕ್ಕೆ ಹೋವುತ್ತವು. ದಾಸಿಯ ಹಸಗೆ ಕರಕ್ಕೊಂಬ ಬ್ರಾಹ್ಮಣ ಅಧೋಗತಿಯ ಹೊಂದುತ್ತ°. ಶೂದ್ರಸ್ತ್ರೀಲಿ ಸಂತಾನ ಉತ್ಪನ್ನ ಮಾಡುವ ಬ್ರಾಹ್ಮಣ° ಬ್ರಾಹ್ಮಣತ್ವಂದಲೇ ಚ್ಯುತನಾವ್ತ°. ಆ ಅಧಮ ಬ್ರಾಹ್ಮಣ ಎಂದಿಂಗೂ ನಮಸ್ಕಾರಕ್ಕೆ ಯೋಗ್ಯನಾವುತ್ತನಿಲ್ಲೆ.  ಯಾವ ಮೂರ್ಖ° ಇಂಥ ಬ್ರಾಹ್ಮಣನ ಪೂಜೆ ಮಾಡುತ್ತನೋ ಅವ° ನರಕಕ್ಕೆ ಹೋಪವನಾವುತ್ತ°. ಅನ್ಯರ ಕಲಹಂದ ಸಂತೋಷಗೊಂಬ ಕಲಹಪ್ರಿಯರು, ಬ್ರಾಹ್ಮಣರ ಕಲಹ ಮತ್ತೆ ಗೋವುಗಳ ಕದನವ ನಿಲ್ಲುಸಲೆ ಹೆರಡದ್ದವು (ನೋಡಿ ನಿಲ್ಲುಸಲೆ ಮುಂದಾಗದ್ದೆ ಕೊಶಿ ಪಟ್ಟುಗೊಂಡು ನಿಂಬವು), ಅದಕ್ಕೆ ಪ್ರೋತ್ಸಾಹ, ಪ್ರಚೋದನೆ ಕೊಡುವವು ನಿಶ್ಚಯವಾಗಿ ನರಕಕ್ಕೆ ಹೋಪವರಾವುತ್ತವು. ಗೆಂಡನತ್ರೆಯೇ ಆಶ್ರಿತಳಾದ ಪತಿಪರಾಯಣಾ ಸ್ತ್ರೀಯ ಋತುಕಾಲವ ದ್ವೇಷಂದ ಉಪೇಕ್ಷೆ ಮಾಡುವವು ಖಂಡಿತವಾಗಿಯೂ ನರಕಕ್ಕೆ ಹೋವುತ್ತವು. ಆರು ಕಾಮಾಂಧರಾಗಿ ರಜಸ್ವಲಾ ಸ್ತ್ರೀಸಂಗ ಮಾಡ್ತವೋ, ಅಮಾಸೆ, ಹುಣ್ಣಮೆ ಇತ್ಯಾದಿ ಪರ್ವದಿನಂಗಳಲ್ಲಿ, ನೀರಿಲ್ಲಿ, ಹಗಲು ಹೊತ್ತಿಲ್ಲಿ, ಶ್ರಾದ್ಧದ ದಿನಂಗಳಲ್ಲಿ ಕಾಮುಕರಾಗಿ ಸ್ತ್ರೀಸಂಗ ಮಾಡುತ್ತವೋ ಅವು ನಿಶ್ಚಯವಾಗಿ ನರಕಕ್ಕೆ ಹೋಪವರಾವ್ತವು.   ಆರು ಶರೀರದ ಮಲವ ಅಗ್ನಿಲಿ,  ನೀರಿಲಿ, ಉಪವನ, ಮಾರ್ಗ ಅಥವಾ ಗೋಶಾಲೆಲಿ ಇಡ್ಕುತ್ತವೋ ಅವು ಖಂಡಿತವಾಗಿಯೂ ನರಕಕ್ಕೆ ಹೋವುತ್ತವು. ಆರು ಆಯುಧಂಗಳ ತಯಾರುಸುತ್ತವೋ, ಕತ್ತಿ, ಬಿಲ್ಲು-ಬಾಣಂಗಳ ತಯಾರುಸುತ್ತವೋ, ಮಾರಾಟಮಾಡುತ್ತವೋ ಅವು ಖಂಡಿತವಾಗಿ ನರಕಕ್ಕೆ ಹೋವುತ್ತವು. ಚರ್ಮವ ಮಾರುವ ವೈಶ್ಯರು (ವ್ಯಭಿಚಾರ ದಂಧೆಲಿ ತೊಡಗಿಪ್ಪವು), ತಲೆಕಸವ ಮಾರುವ ಸ್ತ್ರೀಯರು (ವ್ಯಭಿಚಾರಿಣಿಗೊ) ಮತ್ತೆ ವಿಷವ ಮಾರುವವು ಇವೆಲ್ಲೋರು ನರಕಕ್ಕೆ ಹೋವುತ್ತವು. 

ಆರು ಅನಾಥರಲ್ಲಿ ದಯೆ ತೋರುತ್ತವಿಲ್ಲೆಯೋ, ಸತ್ಪುರುಷರ ದ್ವೇಷಿಸುತ್ತವೋ, ನಿರಪರಾಧಕ್ಕೆ ದಂಡನೆ ನೀಡುತ್ತವೋ ಅವು ನರಕಕ್ಕೆ ಹೋವ್ತವು. ಆರು ಆಶೆಂದ ಮನಗೆ ಬಂದ ಬ್ರಾಹ್ಮಣರಿಂಗೆ ಮತ್ತೆ ಯಾಚಕರಿಂಗೆ ಅಶನ ಸಿದ್ಧವಾಗಿದ್ದರೂ ಭೋಜನ ನೀಡುತ್ತವಿಲ್ಲೆಯೋ ಅವು ನರಕಕ್ಕೆ ಹೋಪವರಾವ್ತವು. ಆರು ಸಮಸ್ತ ಜೀವಿಗಳಲ್ಲಿ ವಿಶ್ವಾಸವ ಹೊಂದಿರುತ್ತವಿಲ್ಯೋ, ಅವರ ಬಗ್ಗೆ ದಯೆ ತೋರುತ್ತವಿಲ್ಯೋ, ಆರು ಸಮಸ್ತ ಜೀವಿಗಳತ್ರೆ ಕುಟಿಲತೆಯ ವ್ಯವಹಾರ ಮಾಡ್ತವೋ ಅವು ನಿಶ್ಚಯವಾಗಿ ನರಕಕ್ಕೆ ಹೋಪವರಾವ್ತವು.

ಆರು ವ್ರತನಿಯಮಾದಿಗಳ ಸಂಕಲ್ಪಮಾಡಿಕ್ಕಿ ಮತ್ತೆ ಇಂದ್ರಿಯಚಾಪಲ್ಯವ ಗೆಲ್ಲಲೆಡಿಯದ್ದೆ ಅವುಗಳ ಬಿಡ್ತವೋ ಅವು ನರಕಕ್ಕೆ ಹೋಪವರಾವ್ತವು. ಆರು ಅಧ್ಯಾತ್ಮ ವಿದ್ಯೆಯ ನೀಡುವವರ, ಪುರಾಣ ಪ್ರವಚನ ಮಾಡುವವರ, ಗುರು ಹೇದು ಒಪ್ಪಿಗೊಳ್ತವಿಲ್ಯೋ ಅವು ನಿಶ್ಚಯವಾಗಿ ನರಕಕ್ಕೆ ಹೋವುತ್ತವು. ಆರು ಮಿತ್ರಂಗೆ ದ್ರೋಹ ಬಗೆತ್ತನೋ, ಆರು ಅನ್ಯವ್ಯಕ್ತಿಗಳ ನಡುಕೆ ಇಪ್ಪ ಪ್ರೀತಿಯ ನಷ್ಟಗೊಳುಸುತ್ತವೋ, ಆರು ಅನ್ಯರ ಆಸೆಗಳ ನಾಶಪಡುಸುತ್ತವೋ ಅವು ನಿಶ್ಚಿತವಾಗಿ ನರಕಕ್ಕೆ ಹೋವುತ್ತವು. ಮದುವೆಯ ತಡವವು, ದೇವತಾಯಾತ್ರೆ (ಉತ್ಸವ ಬಲಿ ಇತ್ಯಾದಿ) ವಿಘ್ನ ಉಂಟುಮಾಡುವವು ಹಾಂಗೂ ತೀರ್ಥಯಾತ್ರಿಗಳ ದರೋಡೆ ಮಾಡುವವು ಘೋರ ನರಕಲ್ಲಿ ವಾಸಮಾಡುವರಾವ್ತವು. ಅಲ್ಲಿಂದ ಅವರ ಪುನರಾವರ್ತನೆ ಆವುತ್ತಿಲ್ಲೆ. ಅಲ್ಲಿಯೇ ಸುತ್ತಿಗೊಂಡಿರುತ್ತವು. 

ಮನಗೆ, ಗ್ರಾಮಕ್ಕೆ ಅಥವಾ ಉದ್ಯಾನವನಕ್ಕೆ (ಕಾಡಿಂಗೆ/ಅರಣ್ಯಕ್ಕೆ) ಕಿಚ್ಚು ಮಡುಗುವ ಮಹಾಪಾಪಿಗಳ ಯಮದೂತರು ಎಳಕ್ಕೊಂಡೋಗಿ ಅಗ್ನಿಕುಂಡಲ್ಲಿ ಬೇಶುತ್ತವು. ಆ ಅಗ್ನಿಕುಂಡಲ್ಲಿ ಸುಟ್ಟುಹೋದ ಆ ಪಾಪಿ ನೆರಳ ಯಾಚಿಸುತ್ತ°. ಅಷ್ಟಪ್ಪಗ ಯಮದೂತರು ಅವನ ಅಸಿಪತ್ರವನಕ್ಕೆ (ಕತ್ತಿಯ ಹರಿಯಾಂಗಿಪ್ಪ ಎಲೆಗಳಿಪ್ಪ ಮರಂಗಳ ವನ) ಎಳಕ್ಕೊಂಡು ಹೋವ್ತವು. ಅಲ್ಲಿ ಖಡ್ಗಕ್ಕೆ ಸಮಾನ ಹರಿತವಾದ ಎಲೆಗಳಿಂದ ಅವನ ಅಂಗಾಂಗಂಗೊ ಕತ್ತರಿಸಲ್ಪಟ್ಟಪ್ಪಗ “ಎಲೈ ಪಾಪಿ!, ತಂಪಾದ ನೆರಳಿನಡಿಲಿ ಸುಖವಾದ ನಿದ್ರೆ ಮಾಡು” ಹೇದು ಯಮದೂತರುಗೊ ಹೇಳುತ್ತವು. ಅಷ್ಟಪ್ಪಗ ಆ ಪಾಪಿ ದಾಹಂದ ವ್ಯಾಕುಲನಾಗಿ ನೀರು ಕುಡಿವ ಇಚ್ಛೆಂದ ನೀರು ಕೇಳಿಯಪ್ಪಗ ಅವಂಗೆ ಕುಡಿವಲೆ ಕೊದಿವ ಎಣ್ಣೆಯ ಕೊಡುತ್ತವು. ಆ ಸಮಯಲ್ಲಿ “ನೀರು ಕುಡಿ ಮತ್ತೆ ಅಶನ ತಿನ್ನು” ಹೇದು ಯಮದೂತರುಗೊ ಹೇಳುತ್ತವು. ಆ ಕೊದಿವ ಎಣ್ನೆಯ ಕುಡುದಪ್ಪಗ ಆ ಪಾಪಿಯ ಕರುಳು ಸುಟ್ಟು ಬೆಂದು ಹೋಗಿ ಕುಸುದು ಬೀಳ್ತ°. ಹೇಂಗೋ ಪ್ರಯತ್ನಪಟ್ಟು ಎದ್ದು ನಿಂದು ಅತ್ಯಂತ ದೀನನಾಗಿ ರೋದಿಸುತ್ತ°. ವಿವಶನಾಗಿ ಏದುಸುರು ಬಿಟ್ಟುಗೊಂಡು ಇಪ್ಪ ಆ ಪಾಪಿಗೆ ಎಂತ ಹೇಳ್ಳೂ ಎಡಿಗಾವ್ತಿಲ್ಲೆ.

ಏ ಗರುಡ!, ಈ ಪ್ರಕಾರ ಪಾಪಿಗೊಕ್ಕೆ ನರಕಲ್ಲಿ ಅನೇಕ ಯಾತನೆಗೊ ಇದ್ದು ಹೇದು ಹೇಳಲಾಯ್ದು. ವಿಸ್ತಾರವಾಗಿ ಇದರ ಹೇಳೇಕ್ಕಾದ್ದು ಎಂತಿದ್ದು!. ಇವುಗಳ ವಿಷಯಂಗಳ ಎಲ್ಲ ಶಾಸ್ತ್ರಂಗಳಲ್ಲಿ ವಿವರವಾಗಿ ಹೇಳಿಪ್ಪಗ ಆನಿನ್ನು ಪ್ರತ್ಯೇಕವಾಗಿ ಹೇಳ್ಳೆ ಎಂತಿದ್ದು ?!. ಈ ಪ್ರಕಾರವಾಗಿ ಸಹಸ್ರಾರು ಪುರುಷರು-ಸ್ತ್ರೀಯರು ನರಕೀಯ ಯಾತನೆಗಳ ಅನುಭವುಶಿಗೊಂಡು ಪ್ರಳಯಕಾಲದ ವರೇಂಗೆ ನರಕಲ್ಲೇ ಬೆಂದುಗೊಂಡಿರುತ್ತವು. ಆ ಪಾಪದ ಅಕ್ಷಯ ಫಲವ ಅನುಭವುಸಿ, ಪುನಃ ಅಲ್ಯೇ ಜನ್ಮ ತಳೆತ್ತವು ಮತ್ತೆ ಯಮನ ಆಜ್ಞೆಯ ಪ್ರಕಾರ ಪೃಥ್ವಿಗೆ ಬಂದು ಸ್ಥಾವರಾದಿ (ಗೆಡುಗೆಂಟೆ)ಯೋನಿಲಿ ಹುಟ್ಟುತ್ತವು.

ಮರ, ಪೊದೆ, ಗೆಡು ಬಳ್ಳಿಗೊ, ಪರ್ವತಂಗೊ, ಹುಲ್ಲು ಇವುಗೊ ಸ್ಥಾವರಯೋನಿಗೊ ಹೇದು ಹೇಳಲಾಯ್ದು. ಇವು ಅತ್ಯಂತ ಮೋಹಂದ ಆವೃತವಾಗಿದ್ದು. ಕ್ರಿಮಿ-ಕೀಟ, ಪಶು-ಪಕ್ಷಿ, ಜಲಚರ ಹಾಂಗೂ ದೇವಯೋನಿಗಳ ಒಟ್ಟು ಸೇರ್ಸಿ 84ಲಕ್ಷ ಯೋನಿಗೊ (ಜೀವಜಾತಿಗೊ) ಇದ್ದು ಹೇದು ಹೇಳಲಾಯ್ದು.

ಈ ಎಲ್ಲ ಯೋನಿಗಳಲ್ಲಿ ಸುತ್ತಿ ಆದಿಕ್ಕಿ, ಜೀವ ಮನುಷ್ಯ ಯೋನಿಯ ಪ್ರಾಪ್ತಿ ಹೊಂದುತ್ತು. ನರಕಂದ ಬಂದ ಜೀವಿ ಕೂಡ ಚಾಂಡಾಲರಾಗಿ ಹುಟ್ಟುತ್ತು. ಅಲ್ಲಿಯೂ ಪಾಪಚಿಹ್ನೆಗಳಿಂದ (ಕುಷ್ಠಾದಿ ರೋಗಂಗಳಿಂದ) ಬಹುದುಃಖಿತರಾವ್ತವು. ಈ ರೀತಿಯಾಗಿ ತೀವ್ರ ಕುಷ್ಠಾದಿ ರೋಗಂಗಳಿಂದ, ಹುಟ್ಟು ಕುರುಡುತನ ಅಥವಾ ತೀವ್ರ ರೋಗಂಗಳ ಪಾಪಚಿಹ್ನೆಗಳ ಸೂಚಿಸುವ ಬಹು ದುಃಖಿತ ನರನಾರಿಯರಾವ್ತವು. ಈ ರೀತಿಯಾಗಿ ಪಾಪದ ಚಿಹ್ನೆಗಳಾಗಿ ಮನುಷ್ಯರು (ಸ್ತೀ-ಪುರುಷರು) ಕಂಡುಬತ್ತವು.

ಈ ರೀತಿಯಾಗಿ ಭಗವಂತ° ಗರುಡಂಗೆ ಹೇಳಿದಲ್ಯಂಗೆ ಗರುಡಪುರಾಣದ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ನರಕಯಾತನೆಯುಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ ಹೇಳ್ವ ನಾಲ್ಕನೇ ಅಧ್ಯಾಯ ಮುಗುದತ್ತು. 

 

[ಚಿಂತನೀಯಾ-

ಭಗವಂತನ ಈ ಪ್ರಪಂಚಲ್ಲಿ ನಮ್ಮ ನೇಮನಿಷ್ಠನಾಗಿ ಬದುಕಿ ವಾಪಸು ಅಲ್ಲಿಗೆ ಹೋಪಲೆ ಕಳುಹಿಸಿಕೊಟ್ಟದು. ಇಲ್ಲಿ ಈ ಪ್ರಪಂಚಲ್ಲಿ ವರ್ಣರಂಜಿತ ವಿಷಯಂಗಳ ಕಂಡು ತನ್ನ ಮೂಲತನವ ಕಳಕ್ಕೊಳ್ಳದ್ದೆ ಇರೆಕ್ಕಾದ್ದು ನಮ್ಮ ಕರ್ತವ್ಯ. ಅದಲ್ಲದ್ದೆ ಇಲ್ಯಾಣ ವ್ಯಾಮೋಹಕ್ಕೆ ಬಲಿಯಾದರೆ ಮತ್ತೆ ಆ ಭಗವಂತನನ್ನೂ ನೆಂಪಿರ್ತಿಲ್ಲೆ, ತನ್ನನ್ನೂ ನೆಂಪಿರ್ತಿಲ್ಲೆ. ಪರಿಣಾಮ ನಾಸ್ತಿಕನಪ್ಪದು. ನೇಮನಿಯಮಂಗಳ ಉಲ್ಲಂಘಿಸುವ ಉದ್ಧಟನಪ್ಪದು. ಎಲ್ಲವೂ ತನ್ನದ್ದಾಯೇಕ್ಕು ಹೇಳ್ವ ಆಶಗೆ ಬಲಿಯಾಗಿ ತನ್ನ ಅಧಃಪತನಕ್ಕೆ ನಾಂದಿ ಹೂಡುವವು ನಾವೇ ಆಗಿರ್ತು. ಇದು ನಮ್ಮ ಪಾಪಕರ್ಮಿಗಳನ್ನಾಗಿಸಿ ನರಕಕ್ಕೆ ಎಳಕ್ಕೊಂಡು ಹೋವ್ತು.

ತನ್ನಲ್ಲಿ ಇಲ್ಲದ್ದಿಪ್ಪಂಗೆ ಇತರರಿಂದ ಸಹಾಯವ ಯಾಚುಸುವದು ತಪ್ಪಲ್ಲ. ಆದರೆ ಆ ಸಕಾಯವ ಎಂದೂ ಮರವಲಾಗ. ಸಕಾಯದ ಪ್ರಮಾಣ ಹೆಚ್ಚು ಕಡಮ್ಮೆ ಸಾಕಾಯ್ದಿಲ್ಲೆ ಹೇಳ್ವ ತಾರತಮ್ಯ ಬಪ್ಪಲಾಗ. ನಮ್ಮ ಯೋಗ್ಯತಗೆ ತಕ್ಕ ಹಾಂಗೆ ಭಗವಂತ° ಆ ಅವರ ಮೂಲಕ ಅಷ್ಟು ಮಾತ್ರ ಕೊಡಿಸಿದ್ದು ಹೇಳ್ವ ತೃಪ್ತಿ ಇರೆಕು. ಹಾಂಗೇ ತಾನು ತನ್ನಿಂದ ಬಡವನ (ಅಸಹಾಯಕನ) ಕಂಡಪ್ಪಗ ತನ್ನಲ್ಲಿಪ್ಪದರ ನೀಡಿ ಸಕಾಯ ಮಾಡ್ವ ಕರ್ತವ್ಯ ಇದ್ದು ಹೇಳ್ವದರನ್ನೂ ಮರವಲಾಗ. ಹಾಂಗೆ ಮರದತ್ತು ಹೇಳಿ ಆದರೆ ಅದು ಕೃತಘ್ನತೆ. ಸಿಕ್ಕ ಯಾವತ್ತೂ ಸಕಾಯವ ಮರವದು ಅಥವಾ ತನ್ನಲ್ಲಿ ಇಪ್ಪಗ ಬೇಕು ಹೇಳಿ ಕೇಳಿ ಬೇಡಿದ್ದರ ವಾಪಾಸು ನೀಡದ್ದಪ್ಪದು ಕೃತಘ್ನತಾ ಪಾಪ ಆವ್ತು. ಭಗವಂತ° ಅದರ ರಜವೂ ಸಹಿಸುತ್ತನಿಲ್ಲೆ. 

ಬಾವಿ, ಕೆರೆ, ಕೊಳ, ದೇವಾಲಯ ಎಲ್ಲವೂ ಸಕಲ ಚರಾಚರಂಗೊಕ್ಕೆ ಆಶ್ರಯತಾಣ. ಅದರ ಎಂದೂ ನಿರ್ಲಕ್ಷಿಸಲಾಗ. ಅದರ ಪಾವಿತ್ರ್ಯತೆಯ ಕಾಪಾಡೇಕ್ಕಾದ್ದು ಪ್ರತಿಯೊಬ್ಬನ ಕರ್ತವ್ಯ. ಸರ್ವಾಂತರ್ಯಾಮಿ, ಸರ್ವಗತ ಭಗವಂತನ ನೆಂಪು ಏವತ್ತೂ ಇರೆಕು. ಅದು ಮನುಷ್ಯ ಆದಿಕ್ಕು, ಮೃಗ ಆದಿಕ್ಕು, ಪಶು ಪಕ್ಷಿ ಆದಿಕ್ಕು. ಯಾವುದೇ ಅತಿಕ್ರಮಣ ಭಗವಂತಂಗೇ ಮಾಡಿದ ನೇರ ದ್ರೋಹಕ್ಕೆ ಸಮ ಆವ್ತು. ಅವು ಪಾಪತ್ವಕ್ಕೆ ಬಲಿಯಾವ್ತು. ಆರಿಂಗೂ ದೈಹಿಕವಾಗಿಯೋ ಮಾನಸಿಕವಾಗಿಯೋ ಬೇನೆ ಉಂಟುಮಾಡ್ಳಾಗ. ಅದು ತನ್ನ ಹೆಂಡತಿಯೇ ಆದಿಕ್ಕು ಅಥವಾ ಪರಸ್ತ್ರೀ ಆದಿಕ್ಕು. ನವಗೆ ಇಪ್ಪ ಅಧಿಕಾರ ನಿಯಮಕ್ಕೆ ಒಳಪ್ಪಟ್ಟದು ಹೊರತು ಸ್ವೇಚ್ಛಗೆ ಅಲ್ಲ ಹೇಳ್ವ ಪ್ರಜ್ಞೆ ಸದಾ ಇರೆಕು. ಗೃಹಸ್ಥನಾದವ ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ಅತಿಥಿಯಜ್ಞ, ಭೂತಯಜ್ಞ ಹೇಳ್ವ ಈ ಪಂಚಯಜ್ಞಂಗಳ ನಿತ್ಯವೂ ಆಚರುಸೆಕು. ಕ್ಷಣಿಕವಾದ ಆನಂದವ ನೀಡುವ  ದೇಹಾರಾಧನೆಯ ನಿಲ್ಲುಸಿ ಶಾಶ್ವತ ಆನಂದ ನೀಡುವ ದೇವತಾರಾಧನೆಲಿ ನಿರತನಾಗಿರೆಕು. ದೇವತಾರಾಧನೆಲಿ ಭಗವದ್ಪ್ರಜ್ಞೆ ಜಾಗೃತಸ್ಥಿತಿಲಿ ಇರೆಕು ಹೊರತು ಕೇವಲ ಯಾಂತ್ರಿಕತೆ ಅಪ್ಪಲಾಗ. ನಾಲ್ಕು ಜೆನಕ್ಕೆ ನಡದು ಹೋಪ ಮಾರ್ಗವ ಏವತ್ತೂ ಅಡ್ಡಕಟ್ಳಾಗ. ಇದು ಕೇವಲ ಮನುಷ್ಯ ಕಾಲಿಲ್ಲಿ ನಡವ ಮಾರ್ಗಕ್ಕೆ ಅನ್ವಯ ಅಪ್ಪದು ಅಲ್ಲ, ಬದಲಾಗಿ, ಮನುಷ್ಯ ಜೀವನದ ಮಾರ್ಗವೂ ಅಪ್ಪು ಹೇಳ್ವ ಸತ್ಯಾಂಶವ ಮನಗಾಣೆಕು.

ಯಾವುದೋ ಪ್ರಚೋದನೆಂದ ಉಂಟಾದ ಕಲಹವ ನೋಡಿಗೊಂಡು ಆನಂದ ಪಟ್ಟುಗೊಂಡು ನಿಂಬದು ಮನುಷ್ಯತ್ವ ಅಲ್ಲ. ಅದರ ಪರಿಹರಿಸಿ ಮುಂದೆ ಹಾಂಗಾಗದ್ದಾಂಗೆ ಪ್ರೀತಿಯ ಬೀಜವ ಬಿತ್ತೆಕು. ದೈಹಿಕವಾಗಿ ಕೃಶರಾಗಿಪ್ಪೋರ ಎಳದು ಆನಂದಪಡುವ ಕೀಳ್ಮಟ್ಟಕ್ಕೆ ನಮ್ಮ ಮನಸ್ಸು ಎಂದೂ ಮುಂದಪ್ಪಲಾಗ. ವಿಶೇಷತಃ ಸ್ತ್ರೀಯರ ವಿಷಯಲ್ಲಿ ಇದು ಗಂಭೀರವಾಗಿ ನಮ್ಮ ಪ್ರಜ್ಞೆಲಿ ಇರೆಕು. ಅದಕ್ಕಾಗಿಯೇ ಕಾಮವ ಕಟ್ಟುನಿಟ್ಟಿಲ್ಲಿ ಮಡುಗೆಕು ಹೇಳಿ ಪ್ರತಿಯೊಂದು ದಿಕ್ಕೆಯೂ ಹೇಳಿದ್ದದು. ಪ್ರತಿಯೊಂದು ಕಾರ್ಯಕ್ಕೂ ಕಾಲಾಕಾಲದ ವಿವೇಚನೆ ಇರೆಕು. ಅಕಾಲಲ್ಲಿ ಮಾಡ್ವ ಕಾರ್ಯಂದ ಉಪದ್ರಂಗಳೇ ಉಂಟಪ್ಪದು ಹೇಳ್ವ ಎಚ್ಚರಿಕೆ ಇರೆಕು.

ತ್ಯಾಜ್ಯಂಗಳ ಕಂಡಕಂಡಲ್ಲಿ ಹಾಕುವದೋ ಅಥವಾ ನೀರಿಲ್ಲಿ ಕರಗುಸುವದೋ, ಅಗ್ನಿಲಿ ಹೊತ್ತುಸುವದೋ ಮಾಡ್ಳಾಗ. ಇದರಿಂದ ಪರಿಸರ ಕಷ್ಮಲ ಆವ್ತು ಹೇಳ್ವ ಪ್ರಜ್ಞೆ ಸದಾ ಇರೆಕು. ಇನ್ನೊಬ್ಬನ ಸೋಲುಸಲೆ, ಕೊಲ್ಲುಲೆ ಹೆರಡುವ ಕಾರ್ಯವೂ ಅದಕ್ಕೆ ಸಹಕಾರ ಕೊಡುವ ಕಾರ್ಯವೂ ಅಪರಾಧವೇ ಅಪ್ಪು. ಹಾಂಗೇ ಅನಾರೋಗ್ಯವ ಉಂಟುಮಾಡಿ ಸರ್ವನಾಶಕ್ಕೆ ಕಾರಣವಪ್ಪ ವ್ಯಭಿಚಾರ ಕಾರ್ಯಲ್ಲಿ ತೊಡಗಲಾಗ, ಅದರ ಸಂಪರ್ಕವನ್ನೂ ಮಡಿಕ್ಕೊಂಬಲಾಗ. ರಾಮವೂ ಕಾಮವೂ ಏವತ್ತೂ ಒಂದುಸೇರ್ಲೆ ಬಿಡ್ಳಾಗ.  ಸೇವಗೆ ಹೇದು ಇಪ್ಪದರ ಮೇಲೆ ಭೋಗದ ಆಶೆಯೂ ಅಕ್ಷಮ್ಯ ಅಪರಾಧ. ದಯೆ, ಕರುಣೆ ಜೀವನದ ಉಸಿರು ಆಗಿರೆಕು. ಯಾವ ಕಾರಣಕ್ಕೂ ಎಲ್ಲಿಯೂ ದ್ವೇಷ ಭಾವನೆ ಉಂಟಪ್ಪಲಾಗ. ದ್ವೇಷಂದ ನಾಶವೇ ಹೊರತು ಎಂದೂ ಉದ್ಧಾರ ಆದ ಚರಿತ್ರೆ ಎಲ್ಲಿಯೂ ಇಲ್ಲೆ. ದ್ವೇಷ ಬಿಟ್ಟುಬಿಟ್ರೆ ಸಾಲ. ಅದರ ಪ್ರೀತಿಂದ ಕಾಂಬ ವಿಶಾಲತೆ ನಮ್ಮ ಹೃದಯಲ್ಲಿ ಇರೆಕು. ಇಡೀ ಜಗತ್ತಿನ ಪ್ರೇಮಮಯವಾಗಿ ಇಪ್ಪಲೆ ನಾವು ಸಹಕರುಸೆಕು. ನಂಬಿಕೆ ವಿಶ್ವಾಸ ಪ್ರತಿಯೊಂದರಲ್ಲಿಯೂ ಇರೆಕು. ಅದು ತಪ್ಪಾಗದ್ದಾಂಗೆ ನಾವೇ ನೋಡಿಗೊಳ್ಳೆಕು.

ಭಗವಂತನ ವಿಷಯಲ್ಲಿ, ಅಧ್ಯಾತ್ಮ ವಿಷಯಲ್ಲಿ, ಪುರಾಣ ವಿಷಯಲ್ಲಿ ನಂಬಿಕೆಯೂ ಶ್ರದ್ಧೆಯೂ ಗೌರವವೂ ಇರೆಕು. ಅಧ್ಯಾತ್ಮವಾದಿಗಳ ಪೂಜ್ಯಭಾವನೆಲಿ ಮಡಿಕ್ಕೊಂಡು ಅವರಿಂದ ಮಾರ್ಗದರ್ಶನವ ಪಡಕ್ಕೊಂಡು ಆ ತತ್ವಂಗಳ ನಮ್ಮ ಜೀವನಲ್ಲಿ ಅಳವಡಿಸಿಕೊಳ್ಳೆಕು.

ಸಾರ್ವಜನಿಕ ಕಾರ್ಯಕ್ರಮಕ್ಕೆ ಸಣ್ಣ ಪುಟ್ಟ ದೋಷಂಗಳ ಎತ್ತಿ ಹಿಡುದು ವಿಘ್ನವ ಉಂಟು ಮಾಡ್ಳೆ ಹೋಪಲಾಗ. ಹತ್ತು ಜನರ ಹಿತಕ್ಕಾಗಿ ನಡವ ಕಾರ್ಯಕ್ರಮಕ್ಕೆ ಸಕಾಯವ ಕೊಡೆಕೇ ಹೊರತು ಅದಕ್ಕೆ ಉಪದ್ರ ಮಾಡ್ಳೆ ಹೋಪಲಾಗ. ತನ್ನ ನಂಬಿ ಬಂದವಂಗೆ ಯಥಾಸಾಧ್ಯ ಸಕಾಯವ ಮಾಡೆಕೇ ಹೊರತು ಮೊಸಳೆ ಕಣ್ಣೀರು ಹಾಕುವದೋ, ನುಣಿಚಿಗೊಂಬದೋ ಏವತ್ತೂ ಒಳ್ಳೆದಲ್ಲ. ಅದೇರೀತಿ ನಮ್ಮ ನಂಬಿದೋರಿಂಗೆ ದ್ರೋಹವನ್ನೂ ಮಾಡ್ಳಾಗ. ಅದು ಅವನ ಕೊಂದ ಹಾಂಗೇ ಸಮ.

ಮನುಷ್ಯ ಯಾವ ಕರ್ಮವ ಮಾಡೆಕು, ಏವ ಕರ್ಮವ ಮಾಡ್ಳಾಗ ಹೇಳಿ ಹೇಳ್ತದೇ ಶಾಸ್ತ್ರ. ಅದು ಪುಣ್ಯಕರವಾದ ವಿಷಯ. ಅದಕ್ಕೆ ವಿರುದ್ಧವಾಗಿ ಮಾಡುವ ಏವುದೇ ಕಾರ್ಯ ಪಾಪಕರ. ಅದರಲ್ಲಿ ಶ್ರದ್ಧಾ ಭಕ್ತಿ ಇಟ್ಟು ಜವಾಬ್ದಾರಿಯ ಅರ್ತುಗೊಂಡು ಜೀವನಲ್ಲಿ ಅಳವಡಿಸಿ ತನ್ನ ಮುಂದಾಣ ದಾರಿಯ ಸುಗಮಗೊಳಿಸಿಗೊಂಡು ಹೋಪದು ಮನುಷ್ಯಂಗೆ ಶ್ರೇಯಸ್ಕರ. ಮನುಷ್ಯ ಜನ್ಮ ಹೇಳಿ ಸಿಕ್ಕುವದು ಜನ್ಮಜನ್ಮಾಂತರಂಗಳ ಪುಣ್ಯಫಲ. ಅದರ ಸಾರ್ಥಕ ಪಡಿಸಿ ಮೋಕ್ಷವ ಸಾಧುಸುವದು ಮನುಷ್ಯನಾದವನವ ಕರ್ತವ್ಯ. ಇಲ್ಲದ್ರೆ ಮುಂದೆ ಘೋರನರಕಲ್ಲಿ ಬಿದ್ದು ಅಲ್ಲಿಯೇ ನರಳಿಗೊಂಡಿರೆಕ್ಕಾವ್ತು ಹೇಳ್ವ ಎಚ್ಚರ ಏವತ್ತೂ ನಮ್ಮಲ್ಲಿ ಇರೆಕು. ]

 

ಎಲ್ಲೋರಿಂಗೂ ಭಗವಂತ° ಸದ್ಬುದ್ಧಿಯ ಕೊಡಲಿ, ಸನ್ಮಾರ್ಗವ ತೋರಲಿ.

 

ಹರೇ ರಾಮ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ವಿಜಯತ್ತೆ

  ಹರೇರಾಮ ಯಪ್ಪಾ ಬೇಡದ್ದ ಕೆಲಸ ಏವದೇ ಮಾಡಿರು ಅದಕ್ಕೆ ತಕ್ಕುದಾದ ಪಾಪ ಇದ್ದೇ ಇದ್ದಲ್ಲೊ? ಇದರ ಓದಲಾಗ ಹೇಳುವದು ಸುಮ್ಮನೆ. ಓದಿರಾದರು ಜನಂಗೊ ರಜ್ಜ ಪರಿವರ್ತನೆ ಅಪ್ಪಲೂ ಸಾಕು ಚೆನ್ನೈ ಭಾವ, ಹೀಂಗಿದ್ದು ಇನ್ನು ಇನ್ನೂ ಬರಲಿ ಲೋಕಾ: ಸಮಸ್ತಾ: ಸುಖಿನೋ ಭವಂತು

  [Reply]

  VN:F [1.9.22_1171]
  Rating: +2 (from 2 votes)
 2. ಕೆ. ವೆಂಕಟರಮಣ ಭಟ್ಟ

  ಅಕ್ಕಾ, ಇದರ ಓದಲಾಗ ಹೇಳಿದೋರೂ ಕೂಡಾ ನರಕಕ್ಕೆ ಹೋಕು ಹೇಳಿ ಸೇರ್ಸೆಕ್ಕು. ಈ ಒಂದು ಅಧ್ಯಾಯವೇ ಮನುಷ್ಯ ತನ್ನ ತಿದ್ದಿಕೊಂಬಲೆ ಧಾರಾಳ ಸಾಕು. ಆನಂತೂ ಎಲ್ಲೋರಿಂಗೂ ಓದಲೆ ಹೇಳ್ತೆ. ಇದರ ಹವ್ಯಕ ಸಮಾಜಕ್ಕೆ ತಿಳಿಸಿದ ಭಾವಯ್ಯಂಗೆ ಧನ್ಯವಾದ.

  [Reply]

  VA:F [1.9.22_1171]
  Rating: +3 (from 3 votes)
 3. ಶ್ಯಾಮಣ್ಣ
  ಶ್ಯಾಮಣ್ಣ

  ಅಪ್ಪೋ ಬಾವ.. ಹಾಂಗಾರೆ ಈ ಕಲಿಯುಗಲ್ಲಿ ನರಕ ಹೇಳ್ತದು ಓವರ್-ಲೋಡ್ ಅಕ್ಕನ್ನೇ….

  [Reply]

  VN:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘುಮುಳಿಯ

  ಚೆನ್ನೈಭಾವಾ,
  ನರಕಭಯ೦ದಾಗಿಯಾದರೂ ಜೆನ ಸನ್ಮಾರ್ಗಲ್ಲಿ ನೆಡೆಯಲಿ ಹೇಳುವ ಆಶಯ ಈ ಮಹಾನ್ ಗ್ರ೦ಥದ್ದು ಆಗಿರೇಕು.
  ಎಲ್ಲಾ ತಲೆಮಾರುಗೊಕ್ಕೂ ಪ್ರಸ್ತುತವಾದ,ಬದುಕ್ಕಿನ ನಡೆಗೆ ಮುನ್ನುಡಿಯಾದ ಗರುಡಪುರಾಣದ ಸಾರವ ಹ೦ಚುವ ನಿ೦ಗಳ ಪ್ರಯತ್ನಕ್ಕೆ ಕೈಮುಗಿತ್ತೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಮಾಷ್ಟ್ರುಮಾವ°ಡಾಗುಟ್ರಕ್ಕ°ಶಾ...ರೀಶರ್ಮಪ್ಪಚ್ಚಿಬೊಳುಂಬು ಮಾವ°ವಸಂತರಾಜ್ ಹಳೆಮನೆಕೆದೂರು ಡಾಕ್ಟ್ರುಬಾವ°ಸುವರ್ಣಿನೀ ಕೊಣಲೆಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆಶಾಂತತ್ತೆಪವನಜಮಾವಬೋಸ ಬಾವಮಾಲಕ್ಕ°ಸರ್ಪಮಲೆ ಮಾವ°ವಾಣಿ ಚಿಕ್ಕಮ್ಮಅಜ್ಜಕಾನ ಭಾವವಿಜಯತ್ತೆಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಪ್ರಕಾಶಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ಗಣೇಶ ಮಾವ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ