ಗರುಡಪುರಾಣ – ಅಧ್ಯಾಯ 05 – ಭಾಗ 01

September 12, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಅಧ್ಯಾಯದ ಭಾಗಲ್ಲಿ ನರಕಯಾತನೆಯ ಉಂಟುಮಾಡುವ ಪಾಪಚಿಹ್ನೆಗಳ ಬಗ್ಗೆ ಓದಿದ್ದದು. ಮುಂದೆ –

 

ಗರುಡಪುರಾಣಮ್                                                                ಗರುಡಪುರಾಣ

ಅಥ ಪಂಚಮೋsಧ್ಯಾಯಃ                                                     ಅಧ್ಯಾಯ ಐದು

ಪಾಪಚಿಹ್ನನಿರೂಪಣಮ್                                                         ಪಾಪಚಿಹ್ನೆಗಳ ನಿರೂಪಣೆ

 

ಗರುಡ ಉವಾಚ
ಯೇನ ಯೇನ ಚ ಪಾಪೇನ ಯದ್ಯಚ್ಚಿಹ್ನಂ ಪ್ರಜಾಯತೇ ।
ಯಾಂ ಯಾಂ ಯೋನಿಂ ಚ ಗಚ್ಛಂತಿ ತನ್ಮೇ ಕಥಯ ಕೇಶವ ॥೦೧॥

ಗರುಡ° ಹೇಳುತ್ತ°- ಹೇ ಕೇಶವ!, ಏವ ಏವ ಪಾಪಂಗಳಿಂದ ಏವ ಏವ ಚಿಹ್ನೆಗೊ ಉಂಟಾವ್ತು, ಏವ ಏವ ಯೋನಿಗೆ (ಗರ್ಭಕ್ಕೆ) ಹೋವುತ್ತವು. ಅದರ ಎನಗೆ ಹೇಳು.

ಶ್ರೀಭಗವಾನುವಾಚshri_narayana_on_shesha_venerated_by_garuda_wj19 copy
ಯೈಃ ಪಾಪೈರ್ಯಾಂತಿ ಯಾಂ ಯೋನಿಂ ಪಾಪಿನೋ ನರಕಾಗತಾಃ ।
ಯೇನ ಪಾಪೇನ ಯಚ್ಚಿಹ್ನಂ ಜಾಯತೇ ಮಮ ತಚ್ಛೃಣು ॥೦೨॥

ಭಗವಂತ° ಹೇಳಿದ° – ನರಕಂದ ಬಂದ ಪಾಪಿಗೊ ಏವ ಪಾಪಂಗಳಿಂದ ಏವ ಗರ್ಭಂಗೊಕ್ಕೆ ಹೋವುತ್ತವು, ಏವ ಪಾಪಂದ ಏವ ಚಿಹ್ನೆ ಉಂಟಾವ್ತು ಹೇಳ್ತದರ ಎನ್ನತ್ರಂದ ಕೇಳು.

ಬ್ರಹ್ಮ ಹಾ ಕ್ಷಯಾರೋಗೀ ಸ್ಯಾದ್ಗೋಘ್ನಃ ಸ್ಯಾತ್ಕುಬ್ಜಕೋ ಜಡಃ ।
ಕನ್ಯಾಘಾತೀ ಭವೇತ್ಕುಷ್ಠೀ ತ್ರಯಶ್ಚಾಂಡಾಲಯೋನಿಷು ॥೦೩॥

ಬ್ರಹ್ಮಹತ್ಯೆ ಮಾಡಿದಂವ° ಕ್ಷಯರೋಗಿಯೂ, ಗೋಹತ್ಯೆ ಮಾದಿದಂವ° ಗೂನು ಬೆನ್ನಿನನವನೂ, ಜಡನೂ, ಕನ್ಯಾಹತ್ಯೆ ಮಾಡಿದಂವ° ಕುಷ್ಠರೋಗಿಯೂ ಆವುತ್ತ. ಈ ಮೂವರೂ ಚಾಂಡಾಲರಾಗಿ ಹುಟ್ಟುತ್ತವು.

ಸ್ತ್ರೀಘಾತೀ ಗರ್ಭಪಾತೀ ಚ ಪುಲಿಂದೋ ರೋಗವಾನ್ಭವೇತ್ ।
ಅಗಮ್ಯಾಗಮನಾತ್ಷಂಢೋ ದುಶ್ಚರ್ಮಾ ಗುರುತಲ್ಪಗಃ ॥೦೪॥

ಸ್ತ್ರೀಹತ್ಯೆ ಮಾಡಿದಂವ° ಮತ್ತೆ ಗರ್ಭಪಾತ ಮಾಡಿಸಿದಂವ° ಅನಾಗರಿಕನಾಗಿ (ಬೇಡನಾಗಿ) ರೋಗಿಯಾಗಿ ಹುಟ್ಟುತ್ತ°. ಅಗಮ್ಯಸ್ತ್ರೀಯರಲ್ಲಿ ಗಮನ ಮಾಡಿದಂವ° ಷಂಡನಾಗಿಯೂ, ಗುರುಪತ್ನಿಯ ಗಮನ ಮಾಡಿದಂವ° ಕೆಟ್ಟಚರ್ಮರೋಗಿಯಾಗಿಯೂ ಆವುತ್ತ°.

ಮಾಂಸಭೋಕ್ತಾsತಿರಕ್ತಾಂಗಃ ಶ್ಯಾಮದಂತಸ್ತು ಮದ್ಯಪಃ ।
ಅಭಕ್ಷ್ಯಭಕ್ಷಕೋ ಲೌಲ್ಯಾದ್ಬ್ರಾಹ್ಮಣಃ ಸ್ಯಾನ್ಮಹೋದರಃ ॥೦೫॥

ಮಾಂಸ ತಿಂಬಂವ° ಅತಿ ಕೆಂಪು ಬಣ್ಣದ ಶರೀರವುಳ್ಳವನೂ, ಮದ್ಯಪಾನ ಮಾಡುವಂವ° ಕಪ್ಪು ಹಲ್ಲುಗಳುಳ್ಳವನೂ, ತಿಂಬಲಾಗದ್ದರ ಚಪಲತೆಂದ ತಿಂಬ ಬ್ರಾಹ್ಮಣ° ಮಹೋದರ (ಜಲೋದರ) ರೋಗಿಯೂ ಆವುತ್ತ°.

ಅದತ್ತ್ವಾಮಿಷ್ಟಮಶ್ನಾತಿ ಸ ಭವೇದ್ಗಲಗಂಡವಾನ್ ।
ಶ್ರಾದ್ಧೇsನ್ನಮಶುಚಿಂ ದತ್ತ್ವಾಚಿತ್ರಕುಷ್ಠಿ ಪ್ರಜಾಯತೇ ॥೦೬॥

ಇಷ್ಟವಾದ ತಿಂಡಯ ಇನ್ನೊಬ್ರಿಂಗೆ ಕೊಡದ್ದೆ ತಿಂಬಂವ° ಗಳಗಂಡ ರೋಗಿ ಆವುತ್ತ°. ಶ್ರಾದ್ಧಲ್ಲಿ ಅಶುಚಿ ಅನ್ನವ ಕೊಡುವಂವ° ಚಿತ್ರಕುಷ್ಠರೋಗಿ ಆವುತ್ತ°.

ಗುರೋರ್ಗರ್ವೇಣಾವಮಾನಾದಪಸ್ಮಾರೀ ಭವೇನ್ನರಃ ।
ನಿಂದಕೋ ವೇದಶಾಸ್ತ್ರಾಣಾಂ ಪಾಂಡುರೋಗಿ ಭವೇದ್ಧ್ರುವಮ್ ॥೦೭॥

ಗರ್ವಂದ ಗುರುಗೊಕ್ಕೆ ಅವಮಾನ ಮಾಡಿದ ಮನುಷ್ಯ° ಅಪಸ್ಮಾರ ರೋಗದಂವ° ಆವುತ್ತ°. ವೇದಶಾಸ್ತ್ರಂಗಳ ನಿಂದಿಸಿದಂವ° ಖಂಡಿತವಾಗಿಯೂ ಪಾಂಡುರೋಗಿ ಆವುತ್ತ°.

ಕೂಟಸಾಕ್ಷೀ ಭವೇನ್ಮೂಕಃ ಕಾಣಃ ಸ್ಯಾತ್ಪಂಕ್ತಿಭೇದಕಃ ।
ಅನೋಷ್ಠಃ ಸ್ಯಾದ್ವಿವಾಹಘ್ನೋ ಜನ್ಮಾಂಧಃ ಪುಸ್ತಕಂ ಹರೇತ್ ॥೦೮॥

ಸುಳ್ಳುಸಾಕ್ಷಿ ಹೇಳುವಂವ° ಮೂಕನಾವುತ್ತ°. ಪಂಕ್ತಿಭೇದ ಮಾಡುವಂವ° ಒಂದು ಕಣ್ಣು ಕುರುಡನೂ, ವಿವಾಹಕ್ಕೆ ವಿಘ್ನತಂದಂವ° ತುಟಿ ಇಲ್ಲದಂವನಾಗಿಯೂ, ಪುಸ್ತಕ ಕಳ್ಳುವಂವ° ಹುಟ್ಟುಕುರುಡನೂ ಆವುತ್ತ°.

ಗೋಬ್ರಾಹ್ಮಣಪದಾಘಾತಾತ್ಖಂಜಃ ಪಂಗುಶ್ಚ ಜಾಯತೇ ।
ಗದ್ಗದೋsನೃತವಾದೀ ಸ್ಯಾತ್ತಚ್ಛ್ರೋತಾ ಬಧಿರೋ ಭವೇತ್ ॥೦೯॥

ಗೋವಿನ ಮೆಟ್ಟುವಂವ ಒಂದು ಕಾಲಿಲ್ಲದಂವನಾಗಿಯೂ, ಬ್ರಾಹ್ಮಣನ ಮೆಟ್ಟುವಂವ ಎರಡು ಕಾಲಿಲ್ಲದ್ದಂವನಾಗಿಯೂ ಆವುತ್ತ°. ಸುಳ್ಳು ಹೇಳುವಂವ ಕೊಕ್ಕಳಿಕೆ ಬಾಯಿಯಂವನೂ, ಅದರ ಕೇಳುವಂವ ಕಿವುಡನೂ ಆವುತ್ತ°.

ಗರದಃ ಸ್ಯಾಜ್ಜಡೋನ್ಮತ್ತಃ ಖಲ್ವಾಟೋsಗ್ನಿ ಪ್ರದಾಯಕಃ ।
ದುರ್ಭಗಃ ಪಲವಿಕ್ರೇತಾ ರೋಗವಾನ್ಪರಮಾಂಸಭುಕ್  ॥೧೦॥

ವಿಷಕೊಡುವಂವ° ಮರ್ಳನೂ, ಕಿಚ್ಚು ಹಾಕುತ್ತಂವ ಬೋಳು ತಲೆಯೋನೂ, ಮಾಂಸ ಮಾರುವಂವ° ಅದೃಷ್ಟಹೀನನೂ, ಇತರ ಜೀವಿಗಳ ಮಾಂಸ ತಿಂಬಂವ° ರೋಗಿಯೂ ಆವುತ್ತ°.

ಹೀನಜಾತೌ ಪ್ರಜಾಯೇತ ರತ್ನಾನಾಮಪಹಾರಕಃ ।
ಕುನಖೀ ಸ್ವರ್ಣಹರ್ತಾಸ್ಯಾದ್ಧಾತುಮಾತ್ರ ಹರೋsಧನಃ ॥೧೧॥

ರತ್ನಂಗಳ ಅಪಹರುಸುವಂವ° ಹೀನ ಜಾತಿಲಿ ಹುಟ್ಟುತ್ತ°. ಚಿನ್ನವ ಅಪಹರುಸುವಂವ° ಕೆಟ್ಟ ಉಗುರು ಇಪ್ಪವಂವನಾಗಿಯೂ, ಬೆಳ್ಳಿ ತಾಮ್ರ ಮುಂತಾದ್ದರ ಅಪಹರುಸುವಂವ° ನಿರ್ಧನನೂ ಆವುತ್ತ°.

ಅನ್ನಹರ್ತಾ ಭವೇದಾಖುಃ ಶಲಭೋ ಧಾನ್ಯಹಾರಕಃ ।
ಚಾತಕೋ ಜಲಹರ್ತಾ ಸ್ಯಾದ್ವಿಷಹರ್ತಾ ಚ ವೃಶ್ಚಿಕಃ ॥೧೨॥

ಅಶನವ ಕಳ್ಳುವಂವ° ಇಲಿಯೂ, ಧಾನ್ಯಂಗಳ ಕಳ್ಳುತ್ತಂವ° ಮಿಡತೆಯೂ, ನೀರ ಕಳ್ಳುವಂವ° ಚಾತಕ ಹಕ್ಕಿಯೂ, ವಿಷವ ಕಳ್ಳುವಂವ° ಚೇಳೂ ಆವುತ್ತ°.

ಶಾಕಂ ಪತ್ರಂ ಶಿಖೀ ಹೃತ್ವಾ ಗಂಧಾಂಶ್ಛುಂಛುಂದರೀ ಶುಭಾನ್ ।
ಮಧು ದಂಶಃ ಪಲಂ ಗೃಧ್ರೋ ಲವಣಂ ಚ ಪಿಪೀಲಿಕಾ ॥೧೩॥

ತರಕಾರಿ, ಸೊಪ್ಪುಗಳ ಕಳ್ಳುವಂವ° ನವಿಲಾಗಿಯೂ, ಶುಭವಸ್ತುವಾದ ಗಂಧವ ಕಳ್ಳುವಂವ° ಮೂಗಿಲಿಯಾಗಿಯೂ, ಜೇನ ಕಳ್ಳುತ್ತಂವ° ನೆಳವಾಗಿಯೂ, ಮಾಂಸ ಕಳ್ಳುವಂವ° ಹದ್ದು ಆಗಿಯೂ, ಉಪ್ಪು ಕಳ್ಳುತ್ತಂವ° ಎರುಗು ಆಗಿಯೂ ಆವುತ್ತ°.

ತಾಂಬೂಲಫಲಪುಷ್ಪಾದಿಹರ್ತಾ ಸ್ಯಾದ್ವಾನರೋವನೇ ।
ಉಪಾನತ್ತೃಣಕಾರ್ಪಾಸಹರ್ತಾ ಸ್ಯಾನ್ಮೇಷಯೋನಿಷು ॥೧೪॥

ತಾಂಬೂಲ, ಹಣ್ಣು, ಹೂವು ಇತ್ಯಾದಿಗಳ ಅಪಹರುಸುವಂವ° ಕಾಡಿಲ್ಲಿ ವಾನರ°ನಾವುತ್ತ°. ಮೆಟ್ಟು, ಹುಲ್ಲು, ಹತ್ತಿಮರ ಇವುಗಳ ಅಪಹರುಸುವಂವ° ಕುರಿಯ ಗರ್ಭಲ್ಲಿ ಹುಟ್ಟುತ್ತ°.

ಯಶ್ಚ ರೌದ್ರೋಪಜೀವೀ ಚ ಮಾರ್ಗೇ ಸಾರ್ಥಾನ್ವಿಲುಂಪತಿ ।
ಮೃಗಯಾವ್ಯಸನೀ ಯಸ್ತು ಛಾಗಃ ಸ್ಯಾದ್ವಧಿಕಗೃಹೇ ॥೧೫॥

ಯಾವಾತ° ಹಿಂಸಾಕೃತ್ಯೆಗೊಗಳಿಂದ ಜೀವನ ನಡೆಸುತ್ತನೋ, ಯಾವಾತ° ಮಾರ್ಗಲ್ಲಿ ಯಾತ್ರಿಕರ ಧನವ ಲೂಟಿಮಾದುತ್ತನೋ, ಯಾವಾತ° ಬೇಟೆ ಆಡ್ವ ದುರ್ಗುಣವುಳ್ಳಂವನೋ, ಅಂವ ಕಟುಕನ ಮನೆಲಿ ಕುರಿಯಾಗಿ ಜನ್ಮ ತಾಳುತ್ತ°.

ಯೋ ಮೃತೋ ವಿಷಪಾನೇನ ಕೃಷ್ಣ ಸರ್ಪೋ ಭವೇದ್ಗಿರೌ ।
ನಿರಂಕುಶಸ್ವಭಾವಃ ಸ್ಯಾತ್ಕುಂಜರೋ ನಿರ್ಜನೇ ವನೇ ॥೧೬॥

ವಿಷ ಸೇವಿಸಿ ಮರಣ ಹೊಂದುವಂವ° ಪರ್ವತಲ್ಲಿ ಕೃಷ್ಣಸರ್ಪ ಆವುತ್ತ°. ನಿರಂಕುಶ ಸ್ವಭಾವದಂವ (ಅಮರ್ಯಾದಿತ ಸ್ವಭಾವದಂವ), ನಿರ್ಜನ ಅರಣ್ಯಲ್ಲಿ ಆನೆ ಆವುತ್ತ°.

ವೈಶ್ವದೇವಮಕರ್ತಾರಃ ಸರ್ವಭಕ್ಷಾಶ್ಚ ಯೇ ದ್ವಿಜಾಃ ।
ಅಪರೀಕ್ಷಿತಭೋಕ್ತಾರೋ ವ್ಯಾಘ್ರಾಃ ಸ್ಯುರ್ನಿರ್ಜನೇ ವನೇ ॥೧೭॥

ದ್ವಿಜನಾದ ಯಾವಾತ° (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ವೈಶ್ವದೇವ ಪೂಜೆ (ವೈಶ್ವದೇವಬಲಿ) ಮಾಡದ್ದೆ ಎಲ್ಲ ಅಶನವ ಉಣ್ತನೋ, ಪರೀಕ್ಷಣೆ (ಪರಿಷಿಂಚನೆ) ಮಾಡದ್ದೆ ಊಟ ಮಾಡ್ತನೋ, ಅಂವ ನಿರ್ಜನ ಕಾಡಿಲ್ಲಿ ಹುಲಿಯಾಗಿ ಇರುತ್ತ°.

ಗಾಯತ್ರೀಂ ನ ಸ್ಮರೇದ್ಯಸ್ತು ಯೋ ನ ಸಂಧ್ಯಾಮುಪಾಸತೇ ।
ಅಂತರ್ದುಷ್ಟೋ ಬಹಿಃಸಾಧುಃ ಸ ಭವೇದ್ಬ್ರಾಹ್ಮಣೋ ಬಕಃ ॥೧೮॥

ಗಾಯತ್ರಿ ಸ್ಮರಣೆ ಮಾಡದ್ದೆ ಇಪ್ಪ, ಸಂಧ್ಯೋಪಾಸನೆ ಮಾಡದ್ದೆ ಇಪ್ಪ, ಅಂತರಂಗಲ್ಲಿ ದುಷ್ಟನಾಗಿಯೂ, ಬಹಿರಂಗಲ್ಲಿ ಸಾಧುವಾಗಿಯೂ ಇಪ್ಪ ಬ್ರಾಹ್ಮಣ ಬಕಪಕ್ಷಿ ಆವುತ್ತ°.

ಅಯಾಜ್ಯ ಯಾಜಕೋ ವಿಪ್ರಃ ಸ ಭದೇದ್ದ್ರಾಮಸೂಕರಃ ।
ಖರೋ ವೈ ಬಹುಯಾಜಿತ್ವಾತ್ಕಾಕೋ ನಿರ್ಮಂತ್ರ ಭೋಜನಾತ್ ॥೧೯॥

ಯಜ್ಞಮಾಡ್ಳೆ ಅನರ್ಹನಾಗಿಪ್ಪವನಿಂದ ಯಜ್ಞಮಾಡುಸುವ ಬ್ರಾಹ್ಮಣ° ಹಳ್ಳಿಲಿ ಹುಟ್ಟುವ ಹಂದಿಯಾವುತ್ತ°. ಎಡಿಗಪ್ಪದರಿಂದ ಹೆಚ್ಚಿಗೆ ಯಜ್ಞ ಮಾಡುಸುವಂವ ನಿಶ್ಚಯವಾಗಿಯೂ ಕತ್ತೆ ಆವುತ್ತ°. ಆಮಂತ್ರಣ ಇಲ್ಲದ್ದೆ ಊಟ ಉಂಬವ° ಕಾಕೆ ಆವುತ್ತ°.

ಪಾತ್ರೇ ವಿದ್ಯಾಮದಾತಾ ಚ ಬಲೀವರ್ದೋ ಭವೇದ್ದ್ವಿಜಃ ।
ಗುರುಸೇವಾಮಕರ್ತಾ ಚ ಶಿಷ್ಯಃ ಸ್ಯಾದ್ಗೋಖರ ಪಶುಃ ॥೨೦॥

ಸತ್ಪಾತ್ರಂಗೆ ವಿದ್ಯೆಯ ಹೇಳಿ ಕೊಡದ್ದಿಪ್ಪ ದ್ವಿಜ° ಗೂಳಿ (ಎತ್ತು/ಹೋರಿ)ಆವುತ್ತ°. ಗುರುಸೇವೆಯ ಮಾಡದ್ದಿಪ್ಪ ಶಿಷ್ಯ° ಗೋಗಾರ್ದಭ (ಎತ್ತು ಮತ್ತೆ ಕತ್ತೆ) ಪಶು ಆವುತ್ತ°.

ಗುರುಂ ಹುಂಕೃತ್ಯ ತುಂಕೃತ್ಯ ವಿಪ್ರಂ ನಿರ್ಜಿತ್ಯ ವಾದತಃ ।
ಅರಣ್ಯೇ ನಿರ್ಜಲೇ ದೇಶೇ ಜಾಯತೇ ಬ್ರಹ್ಮ ರಾಕ್ಷಸಃ ॥೨೧॥

ಗುರುವಿನ ಹೆದರುಸುವಂವ°, ತಿರಸ್ಕರುಸುವಂವ ( ಹುಮ್ಮ್  ಹೂಮ್ಮ್ಮ್ ಹೇದು ದುರುಗುಟ್ಟಿ ಹೆದರುಸುವಂವ°), ವಿಪ್ರನ ವಾದಲ್ಲಿ ಮುಖಭಂಗ ಮಾಡುವಂವ° ನೀರಿಲ್ಲದ್ದ ಅರಣ್ಯಪ್ರದೇಶಲ್ಲಿ ಬ್ರಹ್ಮರಾಕ್ಷಸನಾವುತ್ತ°.

ಪ್ರತಿಶ್ರುತಂ ದ್ವಿಜೇ ದಾನಮದತ್ತ್ವಾ ಜಂಬುಕೋ ಭವೇತ್ ।
ಸತಾಮಸತ್ಕಾರಕರಃ ಫೇತ್ಕಾರೋsಗ್ನಿ ಮುಖೋ ಭವೇತ್ ॥೨೨॥

ಪ್ರತಿಜ್ಞೆಮಾಡಿಕ್ಕಿ ದ್ವಿಜಂಗೆ ದಾನವ ಕೊಡದ್ದೆ ಇಪ್ಪಂವ° ನರಿಯಾವುತ್ತ°, ಸಜ್ಜನರಿಂಗೆ ಸತ್ಕಾರ ಮಾಡದ್ದೆ ಇಪ್ಪವ ಫೇತ್ಕಾರ ಮಾಡುವ ಅಗ್ನಿಮುಖ ಹೇಳ್ವ ದುಷ್ಟ ಶಕ್ತಿ ಆವುತ್ತ° (ಅಗ್ನಿಮುಖ ನರಿಯಾವುತ್ತ°).

ಮಿತ್ರಧ್ರುಗ್ಗಿರಿಗೃಧ್ರಃ ಸ್ಯಾದುಲೂಕಃ ಕ್ರಯವಂಚನಾತ್ ।
ವರ್ಣಾಶ್ರಮಪರೀವಾದಾತ್ಕಪೋತೋ ಜಾಯತೇ ವನೇ ॥೨೩॥

ಮಿತ್ರದ್ರೋಹಿಯಾದಂವ° ಪರ್ವತದ ಹದ್ದು ಆವುತ್ತ°. ಕೊಟ್ಟು ತೆಕ್ಕೊಂಬಗ (ವ್ಯಾಪಾರಲ್ಲಿ) ಮೋಸ ಮಾಡುವಂವ° ಗೂಬೆ ಆವ್ತ°. ವರ್ಣಾಶ್ರಮವ ನಿಂದುಸುವಂವ° ಕಾಡಿಲ್ಲಿ ಪಾರಿವಾಳವಾಗಿ ಹುಟ್ಟುತ್ತ°.

ಆಶಾಚ್ಛೇದಕರೋ ಯಸ್ತು ಸ್ನೇಹಚ್ಛೇದಕರಸ್ತು ಯಃ ।
ಯೋ ದ್ವೇಷಾತ್ ಸ್ತ್ರೀಪರಿತ್ಯಾಗೀ ಚಕ್ರವಾಕಶ್ಚಿರಂ ಭವೇತ್ ॥೨೪॥

ಆಶಾಭಂಗ ಮಾಡುವಂವ°, ಸ್ನೇಹವ ಒಡವಂವ°, ದ್ವೇಷಂದ ಸ್ತ್ರೀಯ ಪರಿತ್ಯಜಿಸುವಂವ° ಬಹುಕಾಲದವರೆಂಗೆ ಚಕ್ರವಾಕ ಪಕ್ಷಿಯಾಗಿ ಇರುತ್ತ°.

ಮಾತಾಪಿತೃಗುರುದ್ವೇಷೀ ಭಗಿನೀಭ್ರಾತೃವೈರಕೃತ್ ।
ಗರ್ಭೇ ಯೋನೌ ವಿನಷ್ಟಃ ಸ್ಯಾದ್ಯಾವದ್ಯೋನಿಸಹಸ್ರಶಃ ॥೨೫॥

ಅಬ್ಬೆ ಅಪ್ಪ° ಗುರುಗಳ ದ್ವೇಷುಸುವಂವ°, ಸೋದರ ಸೋದರಿಯರತ್ರೆ ವೈರತ್ವವ ತೋರುಸುವಂವ° ಸಾವಿರಾರು ಜನ್ಮಂಗಳ ಹೊಂದಿರೂ ಗರ್ಭಲ್ಲೇ ನಷ್ಟಹೊಂದುತ್ತ°

ಶ್ವಶ್ರ್ವೋರ್ಗಾಲಿಪ್ರದಾ ನಾರೀ ನಿತ್ಯಂ ಕಲಹಕಾರಿಣೀ ।
ಸಾ ಜಲೌಕಾ ಚ ಯೂಕಾ ಸ್ಯಾದ್ಭರ್ತಾರಂ ಭರ್ತ್ಸತೇ ಚ ಯಾ ॥೨೬॥

ಅತ್ತೆ ಮಾವನೋರ ನಿಂದುಸುವ, ನಿತ್ಯವೂ ಕಲಹ ಮಾಡುವ ನಾರಿ ಜಿಗಣೆಯಾವುತ್ತು. ತನ್ನ ಗಂಡನನ್ನೇ ಹೀಯಾಳುಸುವ ಸ್ತ್ರೀ ಹೇನಾವುತ್ತು.

ಸ್ವಪತಿಂ ಚ ಪರಿತ್ಯಜ್ಯ ಪರಪುಂಸಾನುವರ್ತಿನೀ ।
ವಲ್ಗುಲೀ ಗೃಹಗೋಧಾ ಸ್ಯಾದ್ದ್ವಿಮುಖೀವಾsಥ ಸರ್ಪಿಣೀ ॥೨೭॥

ತನ್ನ ಪತಿಯ ಬಿಟ್ಟಿಕ್ಕಿ ಪರಪುರುಷನ ಅನುಸರುಸೋಲು, ಬಾವಲಿ, ಹಲ್ಲಿ ಅಥವಾ ಎರುಡು ಮೋರೆಯ ಹೆಣ್ಣು ಸರ್ಪವಾವುತ್ತು.

ಯಃ ಸ್ವಗೋತೋಪಘಾತೀ ಚ ಸ್ವಗೋತ್ರಸ್ತ್ರೀ ನಿಷೇವಣಾತ್ ।
ತರಕ್ಷುಃ ಶಲ್ಲಕೋ ಭೂತ್ವಾ ಋಕ್ಷಯೋನಿಷು ಜಾಯತೇ ॥೨೮॥

ತನ್ನ ಗೋತ್ರವ ನಾಶಮಾಡುವಂವ, ಮತ್ತ ತನ್ನ ಗೋತ್ರದ ಸ್ತ್ರೀಯನ್ನೇ ಸೇರುವವ ಕಿರುಬನಾಗಿ, ಮುಳ್ಳಂದಿಯಾಗಿ, ಕರಡಿಯಾಗಿ ಹುಟ್ಟುತ್ತ°.

ತಾಪಸೀಗಮನಾಕ್ಕಾಮೀ ಭವೇನ್ಮರುಪಿಶಾಚಕಃ ।
ಅಪ್ರಾಪ್ತ ಯೌವನಾಸಂಗಾದ್ಭವೇದಜಗರೋ ವನೇ ॥೨೯॥

ತಾಪಸೀ ಸ್ತ್ರೀಲಿ ಗಮನಮಾಡುವ ಕಾಮೀ ಪುರುಷ° ಮರುಭೂಮಿಲಿ ಪಿಶಾಚಿಯಾಗಿ ಇರುತ್ತ°. ಯೌವ್ವನಪ್ರಾಪ್ತವಾಗದ್ದ ಕೂಸಿನ (ಸ್ತ್ರೀಯ) ಸೇರುವಂವ° ಕಾಡಿಲ್ಲಿ ಹೆಬ್ಬಾವಾಗಿ ಹುಟ್ಟುತ್ತ°.

ಗುರುದಾರಾಭಿಲಾಷೀ ಚ ಕೃಕಲಾಸೋ ಭವೇನ್ನರಃ ।
ರಾಜ್ಞೀಂ ಗತ್ವಾ ಭವೇದ್ದುಷ್ಟ್ರೋ ಮಿತ್ರಪತ್ನೀಂ ಚ ಗರ್ದಭಃ ॥೩೦॥

ಗುರುಪತ್ನಿಯ ಇಚ್ಚಿಸುವಂವ° ನರ° ಓಂತಿಯಾವುತ್ತ°. ರಾಜಪತ್ನಿಯ ಸೇರುವಂವ ಒಂಟೆ ಆವುತ್ತ°. ಮಿತ್ರನ ಪತ್ನಿಯ ಸೇರುವಂವ ಕತ್ತೆ ಆವುತ್ತ°.

ಗುದಗೋ ವಿಡ್ವರಾಹಃ ಸ್ಯಾದ್ವೃಷಸ್ಯಾದ್ವೃಷಲೀಪತಿ ।
ಮಹಾಕಾಮೀ ಭವೇದ್ಯಸ್ತು ಸ್ಯಾದಶ್ವಃ ಕಾಮಲಂಪಟಃ ॥೩೧॥

ಗುದಾಗಮನ ಮಾಡುವಂವ° ಮಲಭೋಗಿ ಹಂದಿ ಹಾಂಗೂ ಮಲಿನಗಾಮಿ ಎತ್ತು ಆವುತ್ತ°. ಮಹಾಕಾಮಿಯಾಗಿಪ್ಪ ಮನುಷ್ಯ° ಕಾಮಲಂಪಟ ಕುದುರೆ ಆವುತ್ತ°.

ಮೃತಸ್ಯೇಕಾದಶಾಹಂ ತು ಭುಂಜಾನಃ ಶ್ವಾ ವಿಜಾಯತೇ ।
ಲಭೇದ್ದೇವಲಕೋ ವಿಪ್ರೋಯೋನಿಂ ಕುಕ್ಕುಟಸಂಜ್ಞಕಾಮ್ ॥೩೨॥

ಮರಣಸೂತಕಲ್ಲಿ ಮೃತನ ಹನ್ನೊಂದನೇ ದಿನದ ಆಹಾರವ ತಿಂಬವ° ನಾಯಿಯಾವುತ್ತ°. ದೇವದ್ರವ್ಯವ ಭೋಗುಸುವ ವಿಪ್ರ° ಕೋಳಿ ಜನ್ಮವ ಹೊಂದುತ್ತ°.

 

ಗದ್ಯರೂಪಲ್ಲಿ –

ಗರುಡ° ಭಗವಂತನತ್ರೆ ಕೇಳ್ತ° – ಹೇ ಕೇಶವನೇ!, ಏವ ಏವ ಪಾಪಂದ ಏವ ಏವ ಚಿಹ್ನೆಗೊ ಉಂಟಾವ್ತು?, ಏವ ಏವ ಯೋನಿಗೆ ಅವು ಹೋವ್ತವು? ಅದರ ಕುರಿತಾಗಿ ಎನಗೆ ವಿವರುಸು.

ಭಗವಂತ° ಹೇಳ್ತ° – ನರಕಂದ ಬಂದ ಪಾಪಿ ಏವ ಪಾಪಂಗಳ ಮೂಲಕ ಏವ ಯೋನಿಗೆ ಹೋವುತ್ತವು ಮತ್ತೆ ಏವ ಪಾಪಂದ ಏವ ಏವ ಚಿಹ್ನೆ ಉಂಟಾವ್ತು ಹೇಳ್ವದರ ಎನ್ನತ್ರಂದ ಕೇಳು –

ಬ್ರಾಹ್ಮಣನ ಹತ್ಯೆಗೈದಂವ° (ಬ್ರಹ್ಮಹತ್ಯೆ ಮಾಡಿದಂವ°) ಕ್ಷಯರೋಗಿ ಆವ್ತ°, ಗೋಹತ್ಯೆ ಮಾಡಿದಂವ° ಮೂರ್ಖ ಮತ್ತೆ ಕುಬ್ಜ°ನಾವ್ತ°. ಕನ್ಯಾಹತ್ಯೆ ಮಾಡಿದಂವ° ಕುಷ್ಠರೋಗಿಯಾವ್ತ ಮತ್ತೆ ಈ ಮೂರು ಪಾಪಿಗೊ ಚಾಂಡಾಲರಾಗಿ ಹುಟ್ಟುತ್ತವು.

ಸ್ತ್ರೀಹತ್ಯೆ ಮಾಡುವಂವ° ಮತ್ತೆ ಗರ್ಭಪಾತ ಮಾಡುಸುವಂವ° ಬೇಡ°ನಾಗಿ ರೋಗಿ ಆವುತ್ತ°. ಪರಸ್ತ್ರೀ ಗಮನ ಮಾಡುವಂವ ನಪುಂಸಕ° ಮತ್ತೆ ಗುರುಪತ್ನಿಯತ್ರೆ ವ್ಯಭಿಚಾರ ಮಾಡುವಂವ° ಚರ್ಮರೋಗಿ ಆವುತ್ತ°. ಮಾಂಸ ಭಕ್ಷಣೆ ಮಾಡುವಂವ° ರಕ್ತವರ್ಣದಂವ° ಆವುತ್ತ°. ಜಿಹ್ವಾಚಾಪಲ್ಯಕ್ಕೆ ಅಭಕ್ಷ್ಯ ಭಕ್ಷಣ ಮಾಡುವ ಬ್ರಾಹ್ಮಣಂಗೆ ಜಲೋದರ ರೋಗ ಆವುತ್ತು.

ಆರು ಅನ್ಯರಿಂಗೆ ನೀಡದ್ದೆ ಮೃಷ್ಠಾನ್ನ ಉಣ್ತವೋ ಅವಕ್ಕೆ ಗಂಡಮಾಲಾ ರೋಗ ಆವುತ್ತು. ಶ್ರಾದ್ಧಲ್ಲಿ ಅಪವಿತ್ರ ಅನ್ನು ನೀಡುವವಂಗೆ ಶ್ವೇತಕುಷ್ಠರೋಗ ಆವುತ್ತು.

ಗರ್ವಂದ ಗುರುವಿನ ಅಪಮಾನ ಮಾಡುವ ಮನುಷ್ಯ° ಅಪಸ್ಮಾರ ರೋಗಿ ಆವುತ್ತ°. ವೇದಶಾಸ್ತ್ರದ ನಿಂದನೆ ಮಾಡುವಂವ° ಖಂಡಿತವಾಗಿಯೂ ಪಾಂಡುರೋಗಿ ಆವುತ್ತ°. ಸುಳ್ಳು ಸಾಕ್ಷಿ ಹೇಳುವಂವ° ಮೂಕ°, ಪಂಕ್ತಿಭೇದ (ಪಕ್ಷಪಾತ) ಮಾಡುವಂವ° ಒಕ್ಕಣ್ಣ°, ವಿವಾಹಕ್ಕೆ ವಿಘ್ನವ ಉಂಟುಮಾಡುವಂವ° ಸಿರಿಬಾಯಿ (ಹರುದ ತುಟಿ), ಪುಸ್ತಕಂಗಳ ಕಳ್ಳುವಂವ° ಹುಟ್ಟುಕುರುಡ°ನಾವುತ್ತ°. ಗೋವು ಮತ್ತೆ ಬ್ರಾಹ್ಮಣನ ಕಾಲಿಂದ ಮೆಟ್ಟುತ್ತಂವ° ಕುಂಟ°-ಹೆಳವ°ನಾವುತ್ತ°. ಸುಳ್ಳು ಹೇಳುವಂವ° ಕೊಕ್ಕಳಿಕೆ ಬಾಯಿಯಂವನಾವುತ್ತ°, ಸುಳ್ಳು ಹೇಳ್ವದರ ಕೇಳಿ ಆನಂದುಸುವಂವ ಕಿವುಡ°ನಾವುತ್ತ°.

ವಿಷ ಹಾಕುವಂವ ಮೂರ್ಖ ಮತ್ತೆ ಮರ್ಳ°ನಾವುತ್ತ°. ಕಿಚ್ಚು ಹಾಕಿ ನಾಶಕ್ಕೆ ಪ್ರಯತ್ನುಸುವಂವ ಬೋಳುಮಂಡೆಯಂವ° ಆವುತ್ತ°. ಮಾಂಸ ಮಾರುವಂವ° ನತದೃಷ್ಟ° ಮತ್ತೆ ಅನ್ಯರಿಂದ ಮಾಂಸ ಸೇವುಸುವಂವ ರೋಗಿಯಾವುತ್ತ°. ರತ್ನಂಗಳ ಅಪಹರುಸುವಂವ° ಹೀನ ಜಾತಿಲಿ ಜನ್ಮತಾಳುತ್ತ°. ಬಂಗಾರವ ಅಪಹರುಸುವಂವ° ಉಗುರಿನ ರೋಗಿ (ಕೆಟ್ಟ ಉಗುರಿನಂವ°) ಆವುತ್ತ°. ಅನ್ಯ ಲೋಹಂಗಳ ಅಪಹರುಸುವಂವ° ಧನಹೀನನಾವುತ್ತ°.

ಅಶನ ಕಳ್ಳುವಂವ° ಎಲಿ ಮತ್ತೆ ಧಾನ್ಯವ ಅಪಹರುಸುವಂವ° ಮಿಡತೆಯಾವುತ್ತ°. ಜಲವ ಅಪಹಾರ ಮಾಡುವಂವ° ಚಾತಕ ಪಕ್ಷಿಯಾವುತ್ತ°, ವಿಷದ ವ್ಯವಹಾರ ಮಾಡುವಂವ° ಚೇಳು ಆವುತ್ತ°. ತರಕಾರಿ ಸೊಪ್ಪುಗಳ ಅಪಹರುಸುವಂವ° ನವಿಲಿನ ಜನ್ಮತಾಳುತ್ತ°, ಶುಭ ಪರಿಮಳ ದ್ರವ್ಯವ ಅಪಹರುಸುವಂವ° ಸೊಂಡಿಲಿ ಆವುತ್ತ°. ಜೇನುತುಪ್ಪ ಕಳ್ಳುವಂವ° ಸೊಳ್ಳೆ ಆವುತ್ತ°. ಮಾಂಸ ಅಪಹರುಸುವಂವ° ಹದ್ದು, ಉಪ್ಪು ಅಪಹರುಸುವಂವ° ಎರುಗು ಆವುತ್ತ°.ತಾಂಬೂಲ, ಫಲ ಹಾಗೂ ಪುಷ್ಪ ಮುಂತಾದವುಗಳ ಅಪಹರುಸುವಂವ° ಕಾಡಿಲ್ಲಿ ಮಂಗ ಆವುತ್ತ°. ಪಾದರಕ್ಷೆ, ಹುಲ್ಲು ಮತ್ತೆ ಹತ್ತಿಯ ಅಪಹರುಸುವಂವ° ಕುರಿಯ ಗರ್ಭಲ್ಲಿ ಹುಟ್ಟುತ್ತ°.

ಯಾವಾತ° ಕ್ರೂರಕರ್ಮಂಗಳಿಂದ ಜೀವನ ನಿರ್ವಹಣೆ ಮಾಡುತ್ತನೋ, ಯಾವಾತ° ದಾರಿ ತಡದು ಯಾತ್ರಿಕರ ಧನವ ಲೂಟಿಗೈಯ್ತನೋ, ಯಾವಾತ° ಬೇಟೆ ವ್ಯಸನಿಯೋ, ಅಂವ ಕಟುಕನ ಮನೆಲಿ ಕುರಿಯಾಗಿ ಜನ್ಮತಾಳುತ್ತ°. ವಿಷ ಸೇವಿಸಿ ಮರಣ ಹೊಂದುವಂವ° ಪರ್ವತಲ್ಲಿ ಕರಿನಾಗಸರ್ಪ ಆವುತ್ತ°. ಅಮರ್ಯಾದಿತ ಸ್ವಭಾವ ಇಪ್ಪಂವ° ನಿರ್ಜನ ವನಲ್ಲಿ ಆನೆ ಆವುತ್ತ°.

ವೈಶ್ವದೇವ ಬಲಿ ಮಾಡದಂವ° ಮತ್ತೆ ಎಲ್ಲವನ್ನೂ ತಿಂದು ಮುಗುಶುವ ದ್ವಿಜ° ಮತ್ತೆ ಪರಿಷಿಂಚನೆ ಮಾಡದ್ದೇ ಭೋಜನ ಉಂಬ ವ್ಯಕ್ತಿ ನಿರ್ಜನ ವನಲ್ಲಿ ಹುಲಿ ಆವುತ್ತ°. ಏವ ಬ್ರಾಹ್ಮಣ° ಗಾಯತ್ರೀ ಸ್ಮರಣೆ ಮಾಡ್ತನಿಲ್ಯೋ, ಆರು ಸಂಧ್ಯೋಪಾಸನೆ ಮಾಡ್ತವಿಲ್ಯೋ, ಆರ ಅಂತಃಸ್ವರೂಪ ದೂಷಿತ ಹಾಂಗೂ ಬಾಹ್ಯಸ್ವರೂಪ ಸಾಧುವಿನ ಹಾಂಗೆ ಪ್ರತೀತ ಆವುತ್ತೋ ಅಂಥ ಬ್ರಾಹ್ಮಣ ಬಕಪಕ್ಷಿ ಆವುತ್ತ°.

ಯಜ್ಞಮಾಡ್ಳೆ ಅನರ್ಹನಾಗಿಪ್ಪವನ ಮೂಲಕ ಯಜ್ಞ ಮಾಡುಸುವ ಬ್ರಾಹ್ಮಣ° ಹಳ್ಳಿಯ ಹಂದಿ ಆವುತ್ತ°, ಸಾಮರ್ಥ್ಯಂದಲೂ ಹೆಚ್ಚಿಗೆ ಯಜ್ಞ ಮಾಡುವಂವ° ಕತ್ತೆ ಆವುತ್ತ° ಮತ್ತೆ ಆಮಂತ್ರಣ ಇಲ್ಲದ್ದೇ ಭೋಜನ ಸ್ವೀಕರುಸುವಂವ ಕಾಕೆ ಆವುತ್ತ°. ಸತ್ಪಾತ್ರ ಶಿಷ್ಯಂಗೆ ವಿದ್ಯೆಯ ನೀಡದ ಬ್ರಾಹ್ಮಣ ಎತ್ತಿಂಗೆ ಸಮವಾದ ಜೀವಿ ಆವುತ್ತ°. ಗುರುವಿನ ಸೇವೆ ಮಾಡದ್ದ ಎತ್ತು ಮತ್ತೆ ಕತ್ತೆಯಾವುತ್ತ°. ಗುರುವಿನತ್ರೆ ಹುಂ – ಹೂಮ್ಮ್ ಹೇದು ಗರ್ವದ ಅವಮಾನ ದೃಷ್ಟಿಂದ ಹೂಂಕರುಸುವಂವ°, ವಾದ-ವಿವಾದಲ್ಲಿ ಬ್ರಾಹ್ಮಣನ ಸೋಲುಸುವಂವ° ಜಲರಹಿತ ಅರಣ್ಯಲ್ಲಿ ಬ್ರಹ್ಮರಾಕ್ಷಸ° ಆವುತ್ತ°.

ಮಾತು ಕೊಟ್ಟಿಕ್ಕಿ (ಪ್ರತಿಜ್ಞೆ ಮಾಡಿಕ್ಕಿ) ಬ್ರಾಹ್ಮಣಂಗೆ ದಾನ ನೀಡದ್ದಂವ° ನರಿಯಾವುತ್ತ°. ಸತ್ಪುರುಷರ ಅನಾದರ ಮಾಡುವ ವ್ಯಕ್ತಿ ಅಗ್ನಿಮುಖದ ನರಿಯಾವುತ್ತ°. ಮಿತ್ರಂಗೆ ದ್ರೋಹ ಬಗೆವಂವ° ಪರ್ವತ ಮೇಗಾಣ ಹದ್ದು ಆವುತ್ತ°.  ವ್ಯಾಪಾರಲ್ಲಿ ಮೋಸ ಮಾಡ್ತವ° ಗೂಬೆ ಆವುತ್ತ°. ವರ್ಣಾಶ್ರಮವ ನಿಂದನೆ ಮಾಡುವಂವ° ವನಲ್ಲಿ ಪಾರವಾಳ ಆವುತ್ತ. ಆಶೆಯ ಭಂಗ ಮಾಡುವಂವ° ಮತ್ತೆ ಸ್ನೇಹವ ಮುರಿವಂವ°, ದ್ವೇಷಲ್ಲಿ ಸ್ತ್ರೀಯ (ಹೆಂಡತಿಯ) ಬಿಡ್ತವ° ಬಹುಕಾಲ ಚಕ್ರವಾಕ ಪಕ್ಷಿ ಆವುತ್ತ°.

ಅಬ್ಬೆ-ಅಪ್ಪ° ಗುರುವಿನತ್ರೆ ದ್ವೇಷ ಮಾಡುವಂವ° ಮತ್ತೆ ಸೋದರ ಸೋದರಿಯರತ್ರೆ ಶತ್ರುತ್ವ ಸಾಧುಸುವಂವ° ಸಹಸ್ರಾರು ವರ್ಷಂಗಳ ವರೇಂಗೆ ಗರ್ಭಲ್ಲಿ ಅಥವಾ ಯೋನಿಲಿ ನಾಶ ಆವುತ್ತ°. ಅತ್ತೆ ಮಾವನ ನಿಂದುಸುವ ಸೊಸೆ (ಸ್ತ್ರೀ), ನಿತ್ಯ ಜಗಳಗಂಟಿ ನಾರಿ ಜಿಗಣೆ ಆವುತ್ತು. ಗೆಂಡನ ದೂಷಿಸಿ ಹೀಯಾಳುಸುವ ಹೆಣ್ಣು ಹೇನು ಆವುತ್ತು. ಗೆಂಡನ ಬಿಟ್ಟಿಕ್ಕಿ ಪರಪುರುಷನ ಸಂಗವ ಮಾಡುವ ಹೆಣ್ಣು ಬಾವಲಿ ಅಥವಾ ಹಲ್ಲಿ ಅಥವಾ ಇರ್ತಲೆ ಹಾವು ಆವುತ್ತು.  

ಸಗೋತ್ರದ ಸ್ತ್ರೀಯೊಟ್ಟಿಂಗೆ ಸಂಬಂಧ ಮಾಡಿ ತನ್ನ ಗೋತ್ರವ ಕೆಡುಸುವಂವ° ಕತ್ತೆಕಿರುಬ, ಮುಳ್ಳುಹಂದಿ ಮತ್ತೆ ಕರಡಿ ಯೋನಿಲಿ ಜನಿಸುತ್ತ°. ತಪಸ್ವಿನಿಯತ್ರೆ ವ್ಯಭಿಚಾರ ಮಾಡುವ ಪುರುಷ° ಮರುಭೂಮಿಲಿ ಪಿಶಾಚಿ ಆವುತ್ತ°. ಅಪ್ರಾಪ್ತ ಕೂಸಿನೊಟ್ಟಿಂಗೆ ಸಂಗ ಮಾಡುವಂವ° ವನಲ್ಲಿ ಹೆಬ್ಬಾವು ಆವುತ್ತ°. ಗುರುಪತ್ನಿಯತ್ರೆ ಗಮನ ಇಚ್ಛೆ ಹೊಂದಿದ ವ್ಯಕ್ತಿ ಓಂತಿ ಆವುತ್ತ°. ರಾಜಪತ್ನಿಯೊಟ್ಟಿಂಗೆ ಗಮನ ಮಾಡುವಂವ° ಕತ್ತೆ ಜನ್ಮವ ತಾಳುತ್ತ°. ಗುದಾಗಮನ ಮಾಡುವಂವ° ಮಲಭೋಗಿ ಹಂದಿ ಹಾಂಗೂ ಮಲಿನಗಾಮಿ ಎತ್ತು ಆವುತ್ತ°. ಮಹಾಕಾಮಿಯಾಗಿಪ್ಪ ವ್ಯಕ್ತಿ ಕಾಮಲಂಪಟ ಕುದುರೆ ಆವುತ್ತ°. ಆರದ್ದಾರು ಮರಣಸೂತಕಲ್ಲಿ ಏಕಾದಶಹತಕ ಭೋಜನ ಮಾಡುವಂವ° ನಾಯಿ ಆವುತ್ತ°. ದೇವದ್ರವ್ಯವ ಭೋಗುಸುವ ದೇವಲಕ ಬ್ರಾಹ್ಮಣ° ಕೋಳಿ ಆವುತ್ತ°.

 

 

[ಚಿಂತನೀಯಾ –

 

‘ಜಂತೂನಾಂ ನರಜನ್ಮ ದುರ್ಲಭಮ್’ – ಹೇದು ಹೇಯ್ದವು. ಜನ್ಮ-ಜನ್ಮಾಂತರದ ಸುಕೃತ ಕರ್ಮದ ಫಲವಾಗಿ ಸಿಕ್ಕುವಂತಾದ್ದು ನರಜನ್ಮ.  ಪ್ರಪಂಚಲ್ಲಿ ಅತೀ ದೊಡ್ಡ ಐಶ್ವರ್ಯ ಹೇದರೆ ಮನುಷ್ಯತ್ವ / ಮಾನವತ್ವ. ಅಪೂರ್ವವಾಗಿ ಸಿಕ್ಕಿದ ನರಜನ್ಮ ಸದ್ಬುದ್ಧಿಯ ಉಪಯೋಗುಸಿ ಸನ್ಮಾರ್ಗಲ್ಲಿ ಸಾಗಿ ಮೋಕ್ಷ ಸಾಧನೆ ಮಾಡಿಗೊಂಬವನೇ ಬುದ್ಧಿವಂತ°. ಮನುಷ್ಯ ಜನ್ಮಕ್ಕೇ ಮೋಕ್ಷ ಸಾಧನೆಯ ಅರ್ಹತೆ ಇಪ್ಪದು. ಹಾಂಗಾಗಿ ಪುಣ್ಯಪ್ರದವಾಗಿ ಸಿಕ್ಕಿದ ಅವಕಾಶವ ದುರುಪಯೋಗ ಪಡುಸದ್ದೆ ಸಾಧನೆಯ ಹಾದಿಲಿ ಸಾಗಿರೆ ಚಿರಶಾಂತಿಯ ಪಡವಲೆ ಸುಸಂದರ್ಭ. ದುಷ್ಕರ್ಮಂದಲಾಗಿ ಪಾಪತ್ವ ಅಂಟಿಗೊಳ್ತು. ತಾನು ಮಾಡಿದ ಕರ್ಮವ ತಾನು ಅನುಭವಿಸಿಯೇ ತೀರೇಕು. ಅದು ಏವಾಗ ಹೇಳ್ತದು ನಮ್ಮ ಕೈಲಿ ಇಲ್ಲೆ. ಅದು ಮುಂದಾಣ ಜನ್ಮ ಜನ್ಮಂಗಳ ವರೇಂಗೂ ಸಾಗುಗು. ಬರೇ ನರಕಕ್ಕೆ ಹೋದಲ್ಯಂಗೆ ಅಲ್ಲಿ ಶಿಕ್ಷೆ ಅನುಭವುಸಿ ಮುಗಿತ್ತು ಹೇದು ಗ್ರೇಶೋದು ತಪ್ಪು ಕಲ್ಪನೆ. ಮೋಕ್ಷ ಪ್ರಾಪ್ತಿ ಅಪ್ಪನ್ನಾರವೂ ಜನ್ಮ ಮರುಜನ್ಮ ಹೇಳಿ ಆವರ್ತಿಸಿಗೊಂಡೇ ಇರುತ್ತು. ಈ ಜನ್ಮದ ಕೃತ ಫಲ ಮುಂದಾಣ ಜನ್ಮಕ್ಕೂ ಕಾರಣ ಆವ್ತು ಹೇಳ್ವ ಅಂಶವ ನಾವು ಈ ಭಾಗಲ್ಲಿ ಅರ್ಥ ಮಾಡಿಗೊಂಬಲಕ್ಕು.

ಮಾಂಸ ಭಕ್ಷಣೆ, ಅಮಲು ಪದಾರ್ಥಂಗೊ ನಮ್ಮ ಮನಸ್ಸಿನ ಉದ್ವೇಗ ಗೊಳುಸುತ್ತು. ಇದರಿಂದ ನಮ್ಮ ಮನಸ್ಸು ತಪ್ಪು ದಾರಿಗೆ ಜಾರುತ್ತು. ಹಾಂಗಾಗಿ ಆಹಾರವಿಹಾರಲ್ಲಿ ಕಡಿವಾಣ ನಾವೇ ಬುದ್ಧಿಪೂರ್ವಕ ಹಾಕಿಕ್ಕೊಳ್ಳೆಕ್ಕಾದ್ದು ಕರ್ತವ್ಯ. ಪ್ರಚ್ಛನ್ನ ಪಾಪಿಗಳ ಯಮ ಶಿಕ್ಷಿಸದ್ದೆ ಬಿಡುತ್ತನಿಲ್ಲೆ. ದುಷ್ಕರ್ಮದ ಫಲ ನರಕ.

ಶರೀರ ಇಲ್ಲಿಯೇ ಬಿದ್ದು ಹೋಪ ಮತ್ತೆ ನರಕ ಎಲ್ಲಿಂದ ಹೇಳುವವು ಇದ್ದವು. ಆದರೆ ಜೀವಾತ್ಮಂಗೆ ಈ ಸ್ಥೂಲ ಶರೀರ ಅಲ್ಪಕಾಲಿಕ. ಜೀವಾತ್ಮ ಮೂಲವಾಗಿ ಇಪ್ಪದು ಸೂಕ್ಷಶರೀರಲ್ಲಿ. ಸೂಕ್ಷ್ಮ ಶರೀರದೊಟ್ಟಿಂಗೆ ಸ್ಥೂಲ ಶರೀರವ ಪ್ರೆವೇಶಿಸುವುದಾವ್ತು ಜೀವಾತ್ಮ. ಹಾಂಗಾಗಿ ಮರಣಾನಂತರ ಜೀವಿ ಮತ್ತಾಣ ಸ್ಥೂಲ ಶರೀರ ಸಿಕ್ಕುವನ್ನಾರ ಮತ್ತೆ ಸೂಕ್ಷ್ಮ ಶರೀರಲ್ಲಿ ಕರ್ಮಫಲವ ಅನುಭವಿಸಿಗೊಂಡು ಇರುತ್ತ°.

ಹೆತ್ತ ಅಬ್ಬೆ-ಅಪ್ಪ, ವಿದ್ಯೆ ಕಲಿಸಿದ ಗುರು ನಾವಗೆ ದಾರಿ ದೀಪ. ನಮ್ಮ ದಾರಿಲಿ ಕಾಂಬ ಪಂಡಿತರೂ, ವಿದ್ವಾಂಸರೂ ಅದಕ್ಕೆ ಸಮಾನ. ಅವರೆಲ್ಲರ ನಾವು ಗೌರವಂದ ಕಾಣೆಕು, ಸನ್ಮಾನಿಸೆಕ್ಕಾದ್ದು ನಮ್ಮ ಕರ್ತವ್ಯ ಆಗಿದ್ದು.

ನಾವು ತಿಂಬ ಆಹಾರ ಶುದ್ಧವಾಗಿರೆಕು. ನಾವು ಕೊಡುವ ಆಹಾರ ಶುದ್ಧವಾಗಿರೆಕು. ಇಲ್ಲದ್ರೆ ಅನಾರೋಗ್ಯ ಪಸರುಸುತ್ತು. ಹಾಂಗಾಗಿ ಶುಚಿತ್ವದ ಕಡೆಂಗೆ ಮಹತ್ವ ಕೊಡೆಕು.

ಯಾವುದೇ ವಿಷಯಕ್ಕೆ ಗರ್ವಪಡ್ಳಾಗ. ಇನ್ನೊಬ್ಬನ ತಿರಸ್ಕಾರ ದೃಷ್ಟಿಂದ ನೋಡ್ಳಾಗ. ಎಲ್ಲರಲ್ಲಿಯೂ ಇಪ್ಪದು ಆ ಪರಮಾತ್ಮ° ಹೇಳ್ವ ಪ್ರಜ್ಞೆ ನಮ್ಮಲ್ಲಿ ಸದಾ ಇರೆಕು. ವೇದಶಾಸ್ತ್ರಂಗೊ ನಮ್ಮ ಸುಸಂಸ್ಕೃತರನ್ನಾಗಿ ಮಾಡ್ಳೆ ಇಪ್ಪದು. ಅದರ ಗೌರವುಸುವದು ಪಾಲುಸುವದು ಜೀವನದ ಬಹುಮುಖ್ಯ ವಿಷಯ.

ಸುಳ್ಳು ಹೇಳುವದು, ಮೋಸ ಮಾಡುವದು, ಕದ್ದುಗೊಂಬದು ಅತ್ಯಂತ ನೀಚ ಕಾರ್ಯ. ಇದರಿಂದ ನಮ್ಮ ಅಧಃಪತನವೂ ಆವ್ತು ಪರರನ್ನೂ ದಾರಿತಪ್ಪಿಸಿದ ಹಾಂಗೆ ಆವುತ್ತು.

ಪ್ರಪಂಚವೇ ಒಂದು ವಿಸ್ಮಯ, ಆಕರ್ಷಕ. ಎಲ್ಲೋರು ಅದರಿಂದ ಆಕರ್ಷಿತರಪ್ಪೋರೇ. ಆದರೆ ಅದಕ್ಕೊಂಡು ಮಿತಿ ಇರೆಕು. ಕಂಡದ್ದೆಲ್ಲ ತನ್ನದು, ತನಗೆ ಆಯೆಕು ಹೇದೊಂಡು ಹೆರಟ್ರೆ ನಾವು ದಾರಿ ತಪ್ಪಿ ಹೋದಾಂಗೆ.

ಸ್ತ್ರೀಯರು ಹೇಳಿರೆ ಪ್ರಪಂಚಲ್ಲಿ ಅವಕ್ಕೆ ಪ್ರತ್ಯೇಕ ಸ್ಥಾನಮಾನ. ಅದರ ಗೌರವ ಭಾವಂದ ಪಾಲುಸೆಕು. ಚಂದ ಕಂಡತ್ತು ಹೇದು ತನಗೆ ಬೇಕು ಹೇದು ಹಾರಿ ಬೀಳ್ಳಾಗ. ಮನಸ್ಸು ಅತ್ಯಂತ ಹತೋಟಿಲಿ ಇರೆಕು. ಇಲ್ಲದ್ರೆ ಬಲತ್ಕಾರದತ್ತ ನಮ್ಮ ಮನಸ್ಸು ಬಲವಂತವಾಗಿ ತಳ್ಳಲ್ಪಡುತ್ತು. ಇದಕ್ಕೆಲ್ಲ ಮೂಲವಾಗಿ ಶಾಸ್ತ್ರಂಗಳ ಪರಿಜ್ಞಾನ, ಗೌರವ, ಶ್ರದ್ಧೆ, ನಂಬಿಕೆ ಇಲ್ಲದ್ದಿಪ್ಪದು. ಶಾಸ್ತ್ರಂಗಳ ಚಿಂತನೆಲಿ ಮಗ್ನನಾಗಿ ಶಾಸ್ತ್ರೋಕ್ತ ಜೀವನಲ್ಲಿ ಮುಂದುವರುದರೆ ದಾರಿಲಿ ಏವ ಅಡೆತಡೆಗಳೂ ಬಾರ. ಆಶಗೊಂದು ಮಿತಿ ಇರೆಕು. ಇಲ್ಲದ್ರೆ ಬಲತ್ಕಾರಕ್ಕೋ, ಮೋಸ, ಸುಳ್ಳು, ಕಳ್ಳತನಕ್ಕೋ ಪ್ರಚೋದನೆ ಆವ್ತು. ಅದರಿಂದ ನಮ್ಮ ಈಗಾಣ ಜನ್ಮ ಮಾತ್ರ ಅಲ್ಲ ಮುಂದಾಣ ಜೆನ್ಮಕ್ಕೂ ಪ್ರಭಾವ ಉಂಟಾವ್ತು. ‘ಸತ್ಯವೇ ಧರ್ಮ, ಸತ್ಯವೇ ಜೀವನ, ಸತ್ಯವ ಮೀರಿ ನಡೆದರೆ ಮೆಚ್ಚನಾ ಪರಮಾತ್ಮನು’- ಇದು ನಮ್ಮ ಉಸಿರಿಲ್ಲಿ ಸದಾ ಜಾಗೃತಾವಸ್ಥೆಲಿ ಇರೆಕು.

ವರ್ಣಾಶ್ರಮ ಧರ್ಮ ಸಮಾಜದ ಉದ್ಧಾರಕ್ಕಾಗಿ ಇಪ್ಪದು. ಅದು ನಿನ್ನೆ ಇಂದು ಉಂಟಾದ್ದಲ್ಲ. ವರ್ಣಾಶ್ರಮ ಧರ್ಮವ ಕೆದಕ್ಕಿರೆ ಸಮಾಜ ಹಾಳಾವ್ತು. ಇದರ್ಲಿ ಮೇಲು ಕೀಳು ಹೇಳ್ತ ಭಾವನೆ ಮನುಷ್ಯರ ಕೀಳರಿಮೆ. ಅದರ ಗೌರವಂದ ಕಂಡು ಪಾಲುಸುವದು ಶ್ರೇಯಸ್ಕರ. ಆಯಾ ವರ್ಣದಂವ ಅವನ ವಿಹಿತ ಕರ್ಮವ ಮಾಡ್ಳೇ ಬೇಕು. ಉದಾಸನ ಎಳ್ಳಟ್ಟೂ ಇಪ್ಪಲಾಗ. ಸಂಧ್ಯಾವಂದನೆ, ಪರಿಷಂಚನೆ ಮಾಡ್ಳೆ ಎಡಿಯದ್ದ ಬ್ರಾಹ್ಮಣ°, ಸಾಧನಾ ಪಥಲ್ಲಿ ಮತ್ತೆ ಎಂತ ಹರಿವಲೂ ಇಲ್ಲೆ ಈ ಜೀವನಲ್ಲಿ. ಬರೇ ಜೀವನದ ಅಲ್ಪ ಭೋಗದ ಸುಖ ಕನಸಿನ ಹೊತ್ತುಗೊಂಡು ಹೋಪವ° ಮುಂದೆ ದುರ್ಗಮ ಹಾದಿಲಿ ನಡವಲೆ ಕಾರಣ ಆವ್ತು. 

ಬದುಕು ಸಾವು ನಮ್ಮ ಕೈಲಿ ಇಲ್ಲೆ. ಅದು ಭಗವದಿಚ್ಛೆ. ನವಗೆ ಸನ್ಮಾರ್ಗಲ್ಲಿ ಬದುಕುವದು ಒಂದೇ ಕರ್ತವ್ಯ. ಅದರ ಬಿಟ್ಟಿಕ್ಕಿ, ಆನು ಸಾಯ್ತೆ ಹೇದು ಆತ್ಮಹತ್ಯೆ ಕೃತ್ಯಕ್ಕೆ ಹೆರಡುವದು ನೀಚತನ. ಅದರಿಂದ ಈಗಾಣ ಅಧ್ಯಾಯಕ್ಕೆ ಮಂಗಳ ಆತು ಹೇದು ಗ್ರೇಶುತ್ತದು ಮೂಢತನ.

ತನ್ನಲ್ಲಿಪ್ಪದು ತನಗೆ. ಪರರತ್ರೆ ಇಪ್ಪದು ಪರರಿಂಗೆ ಹೇಳ್ವ ಭಾವನೆ ಮನಸ್ಸಿಲ್ಲಿ ಇರೆಕು. ತನ್ನಲ್ಲಿ ಇಲ್ಲದ್ದದು ತನಗಿಪ್ಪದಲ್ಲ ಹೇಳ್ವ ಭಾವನೆ ಮನಸ್ಸಿಲ್ಲಿ ಬೇರೂರಿರೆ ಅನಗತ್ಯ ಉದ್ವೇಗವ ತಡವಲಕ್ಕು. ಅಗತ್ಯಕ್ಕೆ ಬೇಕಾದ್ದು ಇಲ್ಲದ್ರೆ ಇಪ್ಪೋರತ್ರೆ ಕೇಳ್ವದು ತಪ್ಪಲ್ಲ. ಆದರೆ ಬೇಕೋ ಬೇಡದೋ ಹೇಳ್ವ ನಿರ್ಣಯ ನಾವು ಮಾಡೇಕ್ಕಪ್ಪದು.

ಗುರುಹಿರಿಯರತ್ರೆ ಸದಾ ವಿನಯ ವಿನಮ್ರತೆ ಮಡಿಕ್ಕೊಳ್ಳೆಕು. ದುರುಗುಟ್ಟುತ್ತದು, ಹೂಂಕರುಸುವದು ಎಲ್ಲ ನಮ್ಮ ದರ್ಪವ ತೋರುಸುತ್ತು. ಇದರಿಂದ ಅವನ ಮನಸ್ಸಿಂಗೆ ಬೇನೆ ಉಂಟಾವ್ತು ಹೇಳ್ವ ಬೋಧ ನವಗೆ ಇರೆಕು. ಇಲ್ಲದ್ರೆ ಅವನ ಮನಸ್ಸಿಲ್ಲಿ ಉಂಟಾದ ಬೇನೆಯೇ ನವಗೆ ಶಾಪವಾಗಿ ಪರಿಣಮುಸುಗು. ಎಲ್ಲೋರನ್ನೂ ಪ್ರೀತಿಂದ ಕಾಣೆಕು, ಪ್ರೀತಿಂದ ಗೆಲ್ಲೆಕು.

ಸತ್ಪಾತ್ರಂಗೆ ದಾನವ ಕೊಡೆಕು, ಸತ್ಪಾತ್ರನಿಂದ ಪೌರೋಹಿತ್ಯ ಮಾಡುಸೆಕು. ಸತ್ಪಾತ್ರನ ಸೇವೆ ದೇವರ ಸೇವಗೆ ಸಮಾನ.

ಸ್ನೇಹ ಹೇಳ್ವದು ಸುಲಭಲ್ಲಿ ಬಪ್ಪದಲ್ಲ. ಅಲ್ಲಿ ನಂಬಿಕೆ ವಿಶ್ವಾಸ ಆಳವಾದ ಬೇರು. ಅದರ ಗೌರವಂದ ಉಳಿಶಿಗೊಳ್ಳೆಕ್ಕಾದ್ದು ಕರ್ತವ್ಯ. ಇಲ್ಲದ್ರೆ ಮಿತ್ರದ್ರೋಹ, ಸ್ನೇಹಭಂಗ, ಆಶಾಭಂಗ ನಮ್ಮ ಚಕ್ರವಾಕ ಪಕ್ಷಿಯನ್ನಾಗುಸುಗು.

ನೆಂಟಸ್ತಿಕೆ ಸುಲಭಲ್ಲಿ ಉಂಟಪ್ಪದಲ್ಲ. ಆದ ನೆಂಟಸ್ತಿಕೆ ಭದ್ರವಾಗಿ ಉಳಿಶಿ ಬೆಳೆಶಿ ಕೀರ್ತಿಗೊಳುಸೆಕ್ಕಾದ್ದು ಮಾಣಿ ಕೂಸುಗೊಕ್ಕೆ ಇಬ್ರಿಂಗೂ ಕರ್ತವ್ಯ. ಗಂಡ ಹೆಂಡತಿ ಆಗಿರಲ್ಲೊ ಗಂಡನ ಕಡೆಯೋರತ್ರೆ ಆಗಿರಲಿ, ಹೆಂಡತಿ ಕಡೆಯೋರತ್ರೆ ಆಗಿರಲಿ ಬಾಂಧವ್ಯ ಪ್ರೀತಿಂದ ಉಳಿಶಿ ಬೆಳೆಶೆಕು. ಹೆಂಡತಿ-ಗಂಡನ ನಡುವೆ ಪರಸ್ಪರ ಗಾಢಪ್ರೀತಿ ನಿರಂತರವಾಗಿ ಇರೆಕು. ಇದರಿಂದ ದಾರಿ ತಪ್ಪುವ ಅವಕಾಶವೂ ಇಲ್ಲೆ. ಇಲ್ಲದ್ರೆ ಮನೆಲಿ ಬಿರುಕು ಏರ್ಪಡುತ್ತು.

ಒಟ್ಟಿಲ್ಲಿ ಧರ್ಮವೇ ನಮ್ಮ ಜೀವನ. ಧರ್ಮ ತಪ್ಪಿದವಂಗೆ ಅಧಃಪತನ ಕಟ್ಟಿಮಡಿಗಿದ ಬುತ್ತಿ.]

 

ಮುಂದೆ ಎಂತರ…  ಬಪ್ಪ ವಾರ ನೋಡುವೋ°

ಹರೇ ರಾಮ.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ವಿಜಯತ್ತೆ

  ಅಯ್ಯೊ ಚೆನ್ನೈಭಾವ! ಇನ್ನೆಂತಾರೂ ಸಣ್ಣ ಪರಮೋಸಿ ಬಂದು ಹೋದರೋ ಆದಕ್ಕೂ ರಿಯಾಯಿತಿ ಇಲ್ಯೋ? ಅಂಬಗ? ಇರಲಿ ಒೞೆದಾತು ಮಿನಿಯ ಅಂತೂ ಓದಿಸಿಗೊಂಡು ಹೋವುತ್ತು

  [Reply]

  VN:F [1.9.22_1171]
  Rating: +1 (from 1 vote)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಧರ್ಮ ಮಾರ್ಗಲ್ಲಿ ನೆಡದವ ಮುಂದೆ ಎಂತ ಆವ್ತ ಹೇಳಿ ತುಂಬಾ ಲಾಯಿಕಲಿ ವಿವರಿಸಿದ್ದವು.
  ಧರ್ಮಾಧರ್ಮದ ಚಿಂತನೆ ಮಾಡಿಯೇ ಯಾವುದಾದರೂ ಕಾರ್ಯ ಮಾಡೆಕ್ಕು ಹೇಳಿ ವಿಷದಪಡಿಸಿದ ಸೂಕ್ತ ವಿವರಂಗೊ.
  ಧನ್ಯವಾದ ಚೆನ್ನೈ ಭಾವಯ್ಯಂಗೆ

  [Reply]

  VA:F [1.9.22_1171]
  Rating: +1 (from 1 vote)
 3. ಕೆ. ವೆಂಕಟರಮಣ ಭಟ್ಟ

  ಎನಗೀಗ ಯಾವ ಪ್ರಾಣಿಯ ಕಂಡರೂ ಅದರ ಪೂರ್ವ ಜನ್ಮವ ಗ್ರಹಿಸಿ ನೆಗೆ ಬತ್ತು. (ತಮಾಷೆಗೆ ಬರದ್ದು, ಬೇಜಾರ ಮಾಡೆಡಿ.) ದನ್ಯವಾದ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣಗಣೇಶ ಮಾವ°ಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿವಸಂತರಾಜ್ ಹಳೆಮನೆಚೆನ್ನಬೆಟ್ಟಣ್ಣಶಾ...ರೀಡಾಗುಟ್ರಕ್ಕ°ರಾಜಣ್ಣತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಅನುಶ್ರೀ ಬಂಡಾಡಿಅಜ್ಜಕಾನ ಭಾವಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಕಳಾಯಿ ಗೀತತ್ತೆಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆಎರುಂಬು ಅಪ್ಪಚ್ಚಿನೀರ್ಕಜೆ ಮಹೇಶದೊಡ್ಮನೆ ಭಾವಸುವರ್ಣಿನೀ ಕೊಣಲೆಕೇಜಿಮಾವ°ಪ್ರಕಾಶಪ್ಪಚ್ಚಿಗೋಪಾಲಣ್ಣಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ