ಗರುಡ ಪುರಾಣ – ಅಧ್ಯಾಯ 08 – ಭಾಗ 02

October 24, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನುಷ್ಯ° ಅಂತ್ಯಕಾಲ ಸಮೀಪಿಸಿತ್ತು ಹೇಳಿ ಗೊಂತಾದೊಡನೆ ವೃಥಾ ಚಿಂತನೆ ಪಶ್ಚಾತ್ತಾಪ ಮಾಡಿಗೊಂಡು ನರಕ್ಕಿಂಡಿಪ್ಪದಕ್ಕಿಂತ ತನ್ನ ಮುಂದಾಣ ದಾರಿಯ ಸುಗಮಗೊಳುಸಲೆ ಭಗವದ್ ಸ್ಮರಣೆಯ ಮಾಡಿಗೊಂಡಿರೆಕು. ಎಲ್ಲ ಪಾಪಂಗಳನ್ನೂ ಕ್ಷಯಮಾಡುವ ಮಹಾವಿಷ್ಣುವಿನ ಪೂಜೆ, ದಾನ, ನಾಮಸ್ಮರಣೆ, ಗೀತಾಪಠಣ, ಸಹಸ್ರನಾಮ ಪಾರಾಯಣ ಮುಂತಾದ ಕಾರ್ಯಂಗಳಲ್ಲಿ ತಲ್ಲೀನ ನಾದರೆ ಅವಂಗೆ ಮುಂದಂಗೆ ಒಳ್ಳೆದಾವ್ತು. ಅದನ್ನೇ ಭಗವಂತ° ಭಗವದ್ಗೀತೆಲಿ ಹೇಳಿದ್ದದು ಅಂತಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಲೇವರಂ । ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥ಭ.ಗೀ. ೮.೫॥ – ಅಂತ್ಯಕಾಲಲ್ಲಿ ಆರು ಎನ್ನ ಸ್ಮರಿಸಿಗೊಂಡೇ ದೇಹತ್ಯಾಗ ಮಾಡುತ್ತನೊ ಅವ° ಎನ್ನ ಸ್ವಭಾವವ ಹೊಂದುತ್ತ°. ಇದರಲ್ಲಿ ಸಂಶಯವೇ ಇಲ್ಲೆ.

ಮುಂದೆ –

 

ಗರುಡ ಪುರಾಣ – ಅಧ್ಯಾಯ 08  – ಭಾಗ 02

ಏಕಾದಶೀವ್ರತಂ ಗೀತಾ ಗಂಗಾಂಬು ತುಲಸೀದಲಮ್ । images
ವಿಷ್ಣೋಃ ಪಾದಾಂಬು ನಾಮಾನಿ ಮರಣೇ ಮುಕ್ತಿದಾನಿ ಚ ॥೨೬॥

ಏಕಾದಶೀವ್ರತ, ಗೀತಾ, ಗಂಗಾಜಲ, ತುಲಸೀದಳ, ವಿಷ್ಣುವಿನ ಪಾದತೀರ್ಥ ಮತ್ತೆ ನಾಮಂಗೊ ಇವೆಲ್ಲವೂ ಮರಣ ಕಾಲಲ್ಲಿ ಮುಕ್ತಿಯ ಕೊಡುತ್ತು.

ತತಃ ಸಂಕಲ್ಪಯೇದನ್ನಂ ಸಘೃತಂ ಚ ಸಕಾಂಚನಮ್ ।
ಸವತ್ಸಾ ಧೇನವೋ ದೇಯಾಃ ಶ್ರೋತ್ರಿಯಾಯ ದ್ವಿಜಾತಯೇ ॥೨೭॥

ಇದರ ಮತ್ತೆ, ತುಪ್ಪ ಮತ್ತೆ ಸುವರ್ಣ ಸಹಿತ ಅನ್ನದಾನದ ಸಂಕಲ್ಪ ಮಾಡೆಕು. ಶ್ರೋತ್ರಿಯನಾದ ದ್ವಿಜಂಗೆ ಕಂಜಿ ಸಮೇತವಾದ ದನವ ದಾನ ಕೊಡೆಕು.

ಅಂತೇ ಜನೋ ಯದ್ದದಾತಿ ಸ್ವಲ್ಪಂ ವಾ ಯದಿ ವಾ ಬಹು ।
ತದಕ್ಷಯಂ ಭವೇತ್ತಾರ್ಕ್ಷ್ಯ ಯತ್ಪುತ್ರಸ್ಚಾನುಮೋದತೇ ॥೨೮॥

ಏ ಗರುಡನೇ!, ಅಂತ್ಯಕಾಲಲ್ಲಿ ಜನರು ರಜಾ ಆಗಲೀ, ಬಹುವಾಗಲೀ, ಯಾವುದರ ದಾನ ಮಾಡುತ್ತವೋ, ಯಾವುದರ ಮಗ° ಅನುಮೋದುಸುತ್ತನೋ ಅದು ಅಕ್ಷಯವಾವ್ತು.

ಅಂತಕಾಲೇ ತು ಸತ್ಪುತ್ರಃ ಸರ್ವದಾನಾನಿ ದಾಪಯೇತ್ ।
ಯತ್ತದರ್ಥಂ ಸುತೋ ಲೋಕೇ ಪ್ರಾರ್ಥ್ಯತೇ ಧರ್ಮಕೋವಿದೈಃ ॥೨೯॥

ಅಂತ್ಯಕಾಲಲ್ಲಿ ಸತ್ಪುತ್ರನಾದವ° ತನ್ನ ಅಪ್ಪನಿಂದ ಎಲ್ಲ ದಾನಂಗಳ ಮಾಡುಸೇಕು. ಈ ಉದ್ದೇಶಂದಲೇ ಧರ್ಮವ ತಿಳುದೋರು ಲೋಕಲ್ಲಿ ಪುತ್ರಪ್ರಾಪ್ತಿಗೋಸ್ಕರವಾಗಿ ಪ್ರಾರ್ಥಿಸುತ್ತವು.

ಭೂಮಿಷ್ಠಂ ಪಿತರಂ ದೃಷ್ಟ್ವಾ ಅರ್ಧೋನ್ಮೀಲಿತಲೋಚನಮ್ ।
ಪುತ್ರೈಸ್ತೃಷ್ಣಾನ ಕರ್ತವ್ಯಾ ತದ್ಧನೇ ಪೂರ್ವಸಂಚಿತೇ ॥೩೦॥

ಭೂಶಾಯಿಯಾದ, ಅರ್ಧ ಬಿಡುಸಿದ ಕಣ್ಣುಗಳಿಪ್ಪ ಅಪ್ಪನ ನೋಡಿ ಮಕ್ಕೊ ಅಂವ° ಹಿಂದೆ ಸಂಪಾದುಸಿದ ಸಂಪತ್ತಿಂಗೆ ಆಸೆಪಡ್ಳಾಗ.

ಸತದ್ದದಾತಿ ಸತ್ಪುತ್ರೋ ಯಾವಜ್ಜೀವತ್ಯಸೌ ಚಿರಮ್ ।
ಅತಿವಾಹಸ್ತು ತನ್ಮಾರ್ಗೇ ದುಃಖಂ ನ ಲಭತೇ ಯತಃ ॥೩೧॥

ಸತ್ಪುತ್ರ° ಬಹುಕಾಲ ಜೀವನಾಧಾರವಪ್ಪ ದಾನವ ಕೊಡುತ್ತ°. ಮರಣಕಾಲದ ದಾನಂದ ಯಮಮಾರ್ಗಲ್ಲಿ ಪ್ರೇತಕ್ಕೆ ದುಃಖಂಗೊ ಉಂಟಾವ್ತಿಲ್ಲೆ.

ಆತುರೇ ಚೋಪರಾಗೇ ಚ ದ್ವಯಂ ದಾನಂ ವಿಶಿಷ್ಯತೇ ।
ಅತೋsವಶ್ಯಂ ಪ್ರತಾತವ್ಯಮಷ್ಟದಾನಂ ತಿಲಾದಿಕಮ್ ॥೩೨॥

ಮರಣಕಾಲ, ಗ್ರಹಣಕಾಲ – ಈ ಎರಡರಲ್ಲಿ ಕೊಡ್ತ ದಾನಂಗೊ ಎಲ್ಲ ದಾನಂಗಳಿಂದ ವಿಶೇಷವಾದ್ದು. ಆದ್ದರಿಂದ ಎಳ್ಳು ಮುಂತಾದ ಎಂಟು ದಾನಂಗಳ ಅವಶ್ಯವಾಗಿ ಕೊಡ್ಳೇ ಬೇಕು.

ತಿಲಾ ಲೋಹಂ ಹಿರಣ್ಯಂ ಚ ಕಾರ್ಪಾಸೋ ಲವಣಂ ತಥಾ ।
ಸಪ್ತದಾನಂ ಕ್ಷಿತಿರ್ಗಾವಂ ಏಕೈಕಂ ಪಾವನಂ ಸ್ಮೃತಮ್ ॥೩೩॥

ಎಳ್ಳು, ಲೋಹ, ಚಿನ್ನ, ಹತ್ತಿಯ ವಸ್ತು, ಉಪ್ಪು, ಸಪ್ತಧಾನ್ಯಂಗೊ, ಭೂಮಿ, ಗೋವು – ಇವುಗೊ ಒಂದೊಂದು ದಾನವೂ ಪವಿತ್ರ ಹೇದು ಹೇಳಲಾಯ್ದು.

ಏತಾದಷ್ಟಮಹಾದಾನಂ ಮಹಾಪಾತಕನಾಶನಮ್ ।
ಅಂತಕಾಲೇ ಪ್ರದಾತವ್ಯಂ ಶ್ರುಣು ತಸ್ಯ ಚ ಸತ್ಫಲಮ್ ॥೩೪॥

ಈ ಎಂಟು ಮಹಾದಾನಂಗೊ ಮಹಾಪಾಪಂಗಳ ನಾಶಮಾಡುತ್ತು. ಮರಣ ಕಾಲಲ್ಲಿ ಈ ದಾನಂಗಳ ಮಾಡಿರೆ ಉಂಟಪ್ಪ ಸತ್ಫಲಂಗಳ ಕೇಳು –

ಮಮ ಸ್ವೇದಸಮುದ್ಭೂತಾಃ ಪವಿತ್ರಾಸ್ತ್ರಿವಿಧಾಸ್ತಿಲಾಃ ।
ಅಸುರಾ ದಾನವಾ ದೈತ್ಯಾಸ್ತೃಪ್ಯಂತಿ ತಿಲದಾನತಃ ॥೩೫॥

ಎನ್ನ ಬೆವರಿಂದ, ಪವಿತ್ರವಾದ ಮೂರು ವಿಧವಾದ ಎಳ್ಳುಗೊ ಉತ್ಪನ್ನವಾಯ್ದು. ಎಳ್ಳಿನ ದಾನ ಮಾಡುವದರಿಂದ ಅಸುರರು, ದಾನವರು, ದೈತ್ಯರು ತೃಪ್ತಿ ಹೊಂದುತ್ತವು.

ತಿಲಾಃ ಶ್ವೇತಾಸ್ತಥಾ ಕೃಷ್ಣಾ ದಾನೇನ ಕಪಿಲಾಸ್ತಿಲಾಃ ।
ಸಂಹರಂತಿ ತ್ರಿಧಾ ಪಾಪಂ ವಾಙ್ಮನಃ ಕಾಯಸಂಚಿತಮ್ ॥೩೬॥

ಬೆಳಿ, ಕಪ್ಪು ಮತ್ತೆ ಕಂದು- ಈ ಮೂರು ವಿಧ ಬಣ್ಣದ ಎಳ್ಳುಗಳ ದಾನಮಾಡುವದರಿಂದ ವಾಚಾ, ಮನಸಾ, ಕಾಯಾ ಮಾಡಿದ ಪಾಪಂಗೊ ನಾಶವಾವ್ತು.

ಲೋಹದಾನಂ ಚ ದಾತವ್ಯಂ ಭೂಮಿಯುಕ್ತೇನ ಪಾಣಿನಾ ।
ಯಮಸೀಮಾಂ ನ ಚಾಪ್ನೋತಿ ನ ಗಚ್ಛೇತ್ತಸ್ಯ ವರ್ತ್ಮನಿ ॥೩೭॥

ಭೂಮಿಲಿ ಕೈಯಮಡುಗಿ ಲೋಹದಾನವ ಮಾಡೆಕು. ಹಾಂಗೆ ಮಾಡಿದವ° ಯಮಪುರಿಯ ಸೀಮೆಯೊಳಂಗೆ ಹೋವುತ್ತನಿಲ್ಲೆ ಹಾಂಗೂ ಯಮನ ಮಾರ್ಗಲ್ಲಿಯೂ ಹೋವುತ್ತನಿಲ್ಲೆ.

ಕುಠಾರೋ ಮುಸಲೋ ದಂಡಃ ಖಡ್ಗಶ್ಚ ಛುರಿಕಾ ತಥಾ ।
ಶಸ್ತ್ರಾಣಿ ಯಮಹಸ್ತೇ ಚ ನಿಗ್ರಹೇ ಪಾಪಕರ್ಮಣಾಮ್ ॥೩೮॥

ಕೊಡಲಿ, ಒನಕೆ, ದೊಣ್ಣೆ, ಖಡ್ಗ, ಮತ್ತೆ ಚೂರಿ – ಈ ಶಸ್ತ್ರಂಗಳ ಪಾಪಿಯ ಪಾಪರ್ಮಂಗೊಕ್ಕೆ ಶಿಕ್ಷೆ ವಿಧುಸುಲೆ ಯಮಧರ್ಮರಾಜ° ತನ್ನ ಹಸ್ತಲ್ಲಿ ಧರಿಸಿರುತ್ತ°.

ಯಮಾಯುಧಾನಾಂ ಸಂತುಷ್ಟೈ ದಾನಮೇತದುದಾಹೃತಮ್ ।
ತಸ್ಮಾದ್ದದ್ಯಾಲ್ಲೋಹದಾನಂ ಯಮಲೋಕೇ ಸುಖಾವಹಮ್ ॥೩೯॥

ಯಮನ ಆಯುಧಂಗಳ ಪ್ರಸನ್ನಗೊಳುಸಲೆ ಈ ದಾನವು ಹೇಳಲ್ಪಟ್ಟಿದು. ಹಾಂಗಾಗಿ ಯಮಲೋಕಲ್ಲಿ ಸುಖವನ್ನುಂಟುಮಾಡುವ ಲೋಹದಾನವ ಮಾಡೆಕು.

ಊರಣಃ ಶ್ಯಾಮಸೂತ್ರಶ್ಚ ಶುಂಡಾಮರ್ಕೋsಪ್ಯುದಂಬರಃ ।
ಶೇಷಂಬಲೋ ಮಹಾದೂತಾ ಲೋಹದಾನಾತ್ಸುಖಪ್ರದಾಃ ॥೪೦॥

ಊರುಣ, ಶ್ಯಾಮಸೂತ್ರ, ಶುಂಡಾಮರ್ಕ, ಉದುಂಬರ, ಶೇಷಂಬಲ ಹೇಳ್ವ ಯಮನ ಮಹಾದೂತರು ಲೋಹದಾನಂದ ಸುಖಕೊಡುವವಾಗಿದ್ದವು.

ಶ್ರುಣು ತಾರ್ಕ್ಷ್ಯ ಪರಂ ಗುಹ್ಯಂ ದಾನಾನಾಂ ದಾನಮುತ್ತಮಮ್ ।
ದತ್ತೇನ ತೇನ ತುಷ್ಯಂತಿ ಭೂರ್ಭುವಃಸ್ವರ್ಗವಾಸಿನಃ ॥೪೧॥

ಏ ಗರುಡನೇ!, ಎಲ್ಲ ದಾನಂಗಳಲ್ಲಿ ಅತಿ ಉತ್ತಮವೂ, ಅತಿ ಗುಪ್ತವೂ ಆದ ದಾನವ ಕೇಳು. ಆ ದಾನಂದ ಭೂಲೋಕ, ಭುವರ್ಲೋಕ, ಸ್ವರ್ಗಲೋಕಂಗಳ ನಿವಾಸಿಗೊ ಸಂತೋಷಪಡುತ್ತವು.

ಬ್ರಹ್ಮಾದ್ಯಾ ಋಷಯೋ ದೇವಾ ಧರ್ಮರಾಜಸಭಾಸದಾಃ ।
ಸ್ವರ್ಣದಾನೇನ ಸಂತುಷ್ಟಾ ಭವಂತಿ ವರದಾಯಕಃ ॥೪೨॥

ಬ್ರಹ್ಮಾದಿಗೊ, ಋಷಿಗೊ, ದೇವತೆಗೊ ಮತ್ತೆ ಧರ್ಮರಾಜನ ಸಭಾಸದರು ಸುವರ್ಣದಾನಂದ ಸಂತುಷ್ಟರಾಗಿ ವರದಾಯಕರಾವುತ್ತವು.

ತಸ್ಮಾದ್ದೇಯಂ ಸ್ವರ್ಣದಾನಂ ಪ್ರೇತೋದ್ಧರಣ ಹೇತವೇ ।
ನ ಯಾತಿ ಯಮಲೋಕಂ ಸ ಸ್ವರ್ಗತಿಂ ತಾತ ಗಚ್ಛತಿ ॥೪೩॥

ಏ ಪ್ರಿಯ ಗರುಡನೇ!, ಹಾಂಗಾಗಿ ಪ್ರೇತದ ಉದ್ದಾರಕ್ಕಾಗಿ ಸುವರ್ಣದಾನವ ಮಾಡೆಕು. ಅದರಿಂದ ಅಂವ° ಯಮಲೋಕಕ್ಕೆ ಹೋಗದ್ದೆ ಸ್ವರ್ಗಲೋಕಕ್ಕೆ ಹೋವುತ್ತ°.

ಚಿರಂ ವಸೇತ್ಸತ್ಯಲೋಕೇ ತತೋ ರಾಜಾ ಭವೇದಿಹ ।
ರೂಪವಾನ್ಧಾರ್ಮಿಕೋ ವಾಗ್ಮೀ ಶ್ರೀಮಾನತುಲಕ್ರಮಃ ॥೪೪॥

ಅವ° ಬಹುಕಾಲದವರೇಂಗೆ ಸತ್ಯಲೋಕಲ್ಲಿ ವಾಸಮಾಡಿಗೊಂಡಿದ್ದು ಮತ್ತೆ ಇಹಲೋಕಲ್ಲಿ ರೂಪವಂತನೂ, ಧರ್ಮಾತ್ಮನೂ, ವಾಗ್ಮಿಯೂ, ಶ್ರೀಮಂತನೂ, ಅತಿ ಪರಾಕ್ರಮಶಾಲಿಯೂ ಆದ ರಾಜನಾವುತ್ತ°.

ಕಾರ್ಪಾಸಸ್ಯ ತು ದಾನೇನ ದೂತೇಭ್ಯೋ ನ ಭಯಂ ಭವೇತ್ ।
ಲವಣಂ ದೀಯತೇ ಯಚ್ಚ ತೇನ ನೈವ ಭಯಂ ಯಮಾತ್ ॥೪೫॥

ಹತ್ತಿಯ ಸಾಮಾನುಗಳ ದಾನಂದ ಯಮದೂತರ ಭಯ ಇರುತ್ತಿಲ್ಲೆ. ಮತ್ತೆ ಉಪ್ಪು ದಾನ ಮಾಡುವದರಿಂದ ಯಮಧರ್ಮರಾಜನ ಭಯ ಇರುತ್ತಿಲ್ಲೆ.

ಅಯೋಲವಣಕಾರ್ಪಾಸತಿಲಕಾಂ ಚನದಾನತಃ ।
ಚಿತ್ರಗುಪ್ತಾದಯಸ್ತುಷ್ಟಾ ಯಮಸ್ಯ ಪುರವಾಸಿನಃ ॥೪೬॥

ಲೋಹ, ಉಪ್ಪು, ಹತ್ತಿಯ ಸಾಮಾನು, ಎಳ್ಳು, ಬಂಗಾರ ದಾನಂಗಳಿಂದ ಯಮನ ಪಟ್ಟಣಲ್ಲಿ ವಾಸಮಾಡಿಗೊಂಡಿಪ್ಪ ಚಿತ್ರಗುಪ್ತ ಮೊದಲಾದವು ಸಂತುಷ್ಟರಾವುತ್ತವು.

ಸಪ್ತಧಾನ್ಯ ಪ್ರದಾನೇನ ಪ್ರೀತೋ ಧರ್ಮಧ್ವಜೋ ಭವೇತ್ ।
ತುಷ್ಟಾ ಭವಂತಿ ಯೇsನ್ಯೇsಪಿ ತ್ರಿಷು ದ್ವಾರೇಷ್ವಧಿಷ್ಠಿತಾಃ ॥೪೭॥

ಸಪ್ತಧಾನ್ಯಂಗಳ ದಾನ ಮಾಡುವದರಿಂದ ಧರ್ಮದ್ವಜ° ಪ್ರಸನ್ನನಾವುತ್ತ°. ಮತ್ತೆ ಇನ್ನುಳುದ ಮೂರು ದ್ವಾರಂಗಳಲ್ಲಿಪ್ಪೋರೂ ಪ್ರಸನ್ನರಾವುತ್ತವು.

ವ್ರೀಹಯೋ ಯವಗೋಧೂಮಾ ಮುದ್ಗಾ ಮಾಷಾಃ ಪ್ರಿಯಂಗವಃ ।
ಚಣಕಾಃ ಸಪ್ತಮಾ ಜ್ಞೇಯಾಃ ಸಪ್ತಧಾನ್ಯಮುದಾಹೃತಮ್ ॥೪೮॥

ಭತ್ತ, ಜವೆಗೋಧಿ, ಗೋಧಿ, ಹಸರು, ಉದ್ದು, ನವಣೆ, ಕಡಲೆ- ಇವೇಳು ಸಪ್ತಧಾನ್ಯಂಗೊ ಹೇದು ಹೇಳಲ್ಪಟ್ಟಿದು.

ಗೋಚರ್ಮಮಾತ್ರಂ ವಸುಧಾ ದತ್ತಾ ಪಾತ್ರೇ ವಿಧಾನತಃ ।
ಪುನಾತಿ ಬ್ರಹ್ಮಹತ್ಯಾಯಾ ದೃಷ್ಟಮೇತನ್ಮುನೀಶ್ವರೈಃ ॥೪೯॥

ಒಂದು ಗೋಚರ್ಮದಷ್ಟು* ಭೂಮಿಯ ಸತ್ಪಾತ್ರಂಗೆ ವಿಧಿಪೂರ್ವಕವಾಗಿ ಕೊಟ್ಟ ದಾನವು ಬ್ರಹ್ಮಹತ್ಯಾದೋಷಂದ ಪರಿಶುದ್ಧಗೊಳುಸುತ್ತು ಹೇಳ್ವದು ಮುನೀಶ್ವರರಿಂದ ಕಂಡುಗೊಂಡಿದು.

ನ ವ್ರತೇಭ್ಯೋ ನ ತೀರ್ಥೇಭ್ಯೋ ನಾನ್ಯದ್ದಾನಾದ್ವಿನಶ್ಯತಿ ।
ರಾಜ್ಯೇ ಕೃತಂ ಮಹಾಪಾಪಂ ಭೂಮಿದಾನಾದ್ವಿಲೀಯತೇ ॥೫೦॥

ರಾಜತ್ವಲ್ಲಿ ಮಾಡಿದ ಮಹಾಪಾಪಂಗೊ ವ್ರತಂಗಳಿಂದಲಾಗಲೀ, ತೀರ್ಥಂಗಳಿಂದಾಗಲೀ, ಅನ್ಯ ದಾನಂಗಳಿಂದಲಾಗಲೀ ನಾಶವಾವುತ್ತಿಲ್ಲೆ. ಆದರೆ ಭೂದಾನಂದ ಅವುಗೊ ನಾಶವಾವುತ್ತು.

ಪೃಥಿವೀಂ ಸಸ್ಯಸಂಪೂರ್ಣಾಂ ಯೋ ದದಾತಿ ದ್ವಿಜಾತಯೇ ।
ಸ ಪ್ರಯಾತೀಂದ್ರಭುವನೇ ಪೂಜ್ಯಮಾನಃ ಸುರಾಸುರೈಃ ॥೫೧॥

ಯಾವಾತ° ಸಸ್ಯಭರಿತವಾದ ಭೂಮಿಯ ದ್ವಿಜಂಗೆ ದಾನಮಾಡುತ್ತನೋ ಅಂವ° ಸುರಾಸುರರಿಂದ ಪೂಜಿತನಾಗಿ ಇಂದ್ರಲೋಕಕ್ಕೆ ಹೋವುತ್ತ°.

ಅತ್ಯಲ್ಪಫಲದಾನಿ ಸ್ಯುರನ್ಯದಾನಾನಿ ಕಾಶ್ಯಪ ।
ಪೃಥಿವೀದಾನಜಂ ಪುಣ್ಯಮಹನ್ಯಹನಿ ವರ್ಧತೇ ॥೫೨॥

ಹೇ ಕಾಶ್ಯಪನೇ!, ಇತರ ದಾನಂಗಳಿಂದ ಅತಿ ಕಮ್ಮಿ ಫಲವು ಬಪ್ಪದು. ಆದರೆ ಭೂದಾನ ಮಾಡುವದರಿಂದ ಮಾಡುವವನ ಪುಣ್ಯವು ದಿನೇ ದಿನೇ ವೃದ್ಧಿಯಾವುತ್ತು.

ಯೋ ಭೂತ್ವಾ ಭೂಮಿಪೋ ಭೂಮಿಂ ನೋ ದದಾತಿ ದ್ವಿಜಾತಯೇ ।
ಸ ನಾಪ್ನೋತಿ ಕುಟೀಂ ಗ್ರಾಮೇ ದರಿದ್ರೀ ಸ್ಯಾದ್ಭವೇ ಭವೇ ॥೫೩॥

ಯಾವಾತ° ರಾಜನಾಗಿಯೂ ದ್ವಿಜಂಗೆ ಭೂಮಿಯ ದಾನ ಕೊಡುತ್ತನಿಲ್ಲೆಯೋ, ಅಂವ° ಹಳ್ಳಿಲಿ ಗುಡಿಚ್ಚಲೂ ಇಲ್ಲದ್ದೆ ಅನೇಕ ಜನ್ಮಂಗಳಲ್ಲಿ ದರಿದ್ರನಾಗಿ ಇರುತ್ತ°.

ಅದಾನಾದ್ಭೂಮಿದಾನಸ್ಯ ಭೂಪತಿತ್ವಾಭಿಮಾನತಃ ।
ನಿವಸೇನ್ನರಕೇ ಯಾವಚ್ಛೇಷೋ ಧಾರಯತೇ ಧರಾಮ್ ॥೫೪॥

ಯಾವಾತ° ರಾಜ° ದುರಭಿಮಾನಂದ ಭೂದಾನವ ಮಾಡದ್ದೆ ಇರುತ್ತನೋ, ಅಂವ° ಆದಿಶೇಷ ಈ ಭೂಮಿಯ ಧರಿಸಿಪ್ಪಲ್ಲಿವರೇಂಗೆ ನರಕಲ್ಲಿ ವಾಸಮಾಡುತ್ತ°.

ತಸ್ಮಾದ್ಭೂಮೀಶ್ವರೋ ಭೂಮಿದಾನಮೇವ ಪ್ರದಾಪಯೇತ್ ।
ಅನ್ಯೇಷಾಂ ಭೂಮಿದಾನಾರ್ಥಂ ಗೋದಾನಂ ಕಥಿತಂ ಮಯಾ ॥೫೫॥

ಹಾಂಗಾಗಿ ಭೂಮೀಶ್ವರನಾದವ° ಭೂದಾನವ ಕೊಡೆಕು. ಇತರರಿಂಗೆ ಭೂದಾನದ ಬದಲಿಂಗೆ ಗೋದಾನ ಎನ್ನಿಂದ ಹೇಳಲ್ಪಟ್ಟಿದು.

ತತೋಂsತಧೇನುರ್ದಾತವ್ಯಾ ರುದ್ರಧೇನುಂ ಪ್ರದಾಪಯೇತ್ ।
ಋಣಧೇನುಂ ತತೋ ದತ್ವಾ ಮೋಕ್ಷಧೇನುಂ ಪ್ರದಾಪಯೇತ್ ॥೫೬॥

ಕೊನೆಗಾಲಲ್ಲಿ ಗೋದಾನ ಮಾಡೆಕು. ಮೃತ್ಯು ಹಾಂಗೂ ಕಷ್ಟಂಗಳ ಗೆಲ್ಲಲೆ ಒಂದು ಗೋವಿನ, ಋಣಂದ ಮುಕ್ತನಪ್ಪಲೆ ಇನ್ನೊಂದು ದನವ, ಮೋಕ್ಷ ಪಡವಲೆ ಮತ್ತೊಂದು ದನವ ದಾನಮಾಡೆಕು.

ದದ್ಯಾದ್ವೈತರಣೀಂ ಧೇನುಂ ವಿಶೇಷವಿಧಿನಾ ಖಗ ।
ತಾರಯಂತಿ ನರಂ ಗಾವಸ್ತ್ರಿವಿಧಾಚ್ಚೈವ ಪಾತಕಾತ್ ॥೫೭॥

ಏ ಪಕ್ಷಿಯೇ!, ವೈತರಣೀ ಧೇನುವ ವಿಶೇಷ ವಿಧಿಗಳಿಂದ ದಾನ ಕೊಡೆಕು. ಗೋವು ಮನುಷ್ಯನ ಮೂರು ವಿಧವಾದ ಪಾಪಂಗಳಿಂದ ದಾಂಟುಸುತ್ತು.

ಬಾಲತ್ವೇ ಯಚ್ಚ ಕೌಮಾರೇ ಯತ್ಪಾಪಂ ಯೌವನೇ ಕೃತಮ್ ।
ವಯಃ ಪರಿಣತೌ ಯಚ್ಚ ಯಚ್ಚ ಜನ್ಮಾಂತರೇಷ್ವಸಿ ॥೫೮॥

ಬಾಲ್ಯಲ್ಲಿ, ಕೌಮಾರಲ್ಲಿ, ಯೌವನಲ್ಲಿ, ವೃದ್ಧಾಪ್ಯಲ್ಲಿ ಮತ್ತೆ ಇತರ ಜನ್ಮಂಗಳಲ್ಲಿ ಮಾಡಿದ ಪಾಪಂಗೊ

ಯನ್ನಿಶಾಯಾಂ ತಥಾ ಪ್ರಾತರ್ಯನ್ನಧ್ಯಾಹ್ನಾಪರಾಹ್ನಯೋಃ ।
ಸಂಧ್ಯಯೋರ್ಯತ್ಕೃತಂ ಪಾಪಂ ಕಾಯೇನ ಮನಸಾ ಗಿರಾ ॥೫೯॥

ರಾತ್ರಿಲಿ, ಪ್ರಾತಃಕಾಲಲ್ಲಿ, ಮಧ್ಯಾಹ್ನಲ್ಲಿ, ಅಪರಾಹ್ನಲ್ಲಿ, ಎರಡೂ ಸಂಧ್ಯೆಲಿ, ಕಾಯಾಮನಸಾವಾಚಾ ಮಾಡಿದ ಪಾಪಂಗೊ-

ದತ್ವಾಧೇನುಂ ಸಕೃದ್ವಾಪಿ ಕಪಿಲಾಂ ಕ್ಷೀರಸಂಯುತಾಮ್ ।
ಸೋಪಸ್ಕರಾಂ ಸವತ್ಸಾಂ ಚ ತಪೋವೃತ್ತಸಮನ್ವಿತೇ ॥೬೦॥

(ಜೀವನಲ್ಲಿ)ಒಂದು ಸರ್ತಿಯಾದರೂ, ಹಾಲು ಕೊಡುವ ಕಪಿಲೆ ದನವ ಸಾಮಾಗ್ರಿಗಳ ಮತ್ತೆ ಕಂಜಿಯ ಸಮೇತವಾಗಿ ತಪೋನಿರತನಾದ-

ಬ್ರಾಹ್ಮಣೇ ವೇದವಿದುಷಿ ಸರ್ವಪಾಪೈಃ ಪ್ರಮುಚ್ಯತೇ ।
ಉದ್ಧರೇದಂತಕಾಲಂ ಸ ದಾತಾರಂ ಪಾಪಸಂಚಯಾತ್ ॥೬೧॥

ವೇದವ ತಿಳುದ ಬ್ರಾಹ್ಮಣಂಗೆ ದಾನ ಕೊಟ್ರೆ, ಈ ಎಲ್ಲ ಪಾಪಂಗಳಿಂದ ಮುಕ್ತನಾವುತ್ತ°. ಅದು ಅಂತ್ಯಕಾಲಲ್ಲಿ ಅವನ ಪಾಪಸಮೂಹಂದ ಉದ್ಧರುಸುತ್ತು.

ಏಕಾ ಗೌಃ ಸ್ವಸ್ಥಚಿತ್ತಸ್ಯ ಆತುರಸ್ಯ ಚ ಗೋಶತಮ್ ।
ಸಹಸ್ರಂ ಮ್ರಿಯಮಾಣಸ್ಯ ದತ್ತಂ ಚಿತ್ತ ವಿವರ್ಜಿತಮ್ ॥೬೨॥

ಆರೋಗ್ಯವಾಗಿಪ್ಪಗ ಒಂದು ಗೋವು, ರೋಗಿಯಾಗಿದ್ದಿಪ್ಪಗ ನೂರು ಗೋವುಗ, ಮನಃಸ್ವಾಸ್ಥ್ಯವ ಕಳಕ್ಕೊಂಡು ಮರಣಹೊಂದುತ್ತಿಪ್ಪಗ ಸಾವಿರ ಗೋವುಗ,

ಮೃತಸ್ಯೈತತ್ಪುನರ್ಲಕ್ಷಂ ವಿಧಿಪೂತಂ ಚ ತತ್ಸಮಮ್ ।
ತೀರ್ಥಪಾತ್ರ ಸಮೋಪೇತಂ ದಾನಮೇಕಂ ಚ ಲಕ್ಷಧಾ ॥೬೩॥

ಮರಣಾನಂತರ ಒಂದು ಲಕ್ಷ ಗೋವುಗ, ವಿಧಿಪೂರ್ವಕವಾಗಿ ದಾನ ಮಾಡಿರೆ ಸಮವಾದ ಫಲವ ಕೊಡುತ್ತು. ತೀರ್ಥ, ಸತ್ಪಾತ್ರರಿಂದ ಯುಕ್ತವಾದ ದಾನವು ಲಕ್ಷದಷ್ಟು ಫಲವ ಕೊಡುತ್ತು.

ಪಾತ್ರೇ ದತ್ತಂ ಚ ಯದ್ದಾನಂ ತಲ್ಲಕ್ಷಗುಣಿತಂ ಭವೇತ್ ।
ದಾತುಂ ಫಲಮನಂತಂ ಸ್ಯಾನ್ನ ಪಾತ್ರಸ್ಯ ಪ್ರತಿಗ್ರಹಃ ॥೬೪॥

ಸತ್ಪಾತ್ರಂಗೆ ಕೊಟ್ಟಂತಹ ದಾನವು ಲಕ್ಷದಷ್ಟಾವುತ್ತು. ಅದರಿಂದ ದಾನಿಗೆ ಅನಂತ ಫಲವು ಲಭಿಸುತ್ತು. ಮತ್ತೆ ಆ ಸತ್ಪಾತ್ರಂಗೆ ದಾನವ ಸ್ವೀಕರಿಸಿದ ದೋಷವು ಉಂಟಾವುತ್ತಿಲ್ಲೆ.

ಸ್ವಾಧ್ಯಾಯಹೋಮಸಂಯುಕ್ತಃ ಪರಪಾಕವಿವರ್ಜಿತಃ ।
ರತ್ನಪೂರ್ಣಾಮಪಿ ಮಹೀಂ ಪ್ರತಿಗೃಹ್ಯ ನ ಲಿಪ್ಯತೇ ॥೬೫॥

ಸ್ವಾಧ್ಯಾಯ ಮತ್ತೆ ಹೋಮಕರ್ಮಂಗಳಲ್ಲಿ ನಿರತ°, ಪರರು ಮಾಡಿದ ಅನ್ನವ ಉಣ್ಣದ್ದೆ ಇಪ್ಪವ°, ರತ್ನಭರಿತವಾದ ಭೂಮಿಯ ಸ್ವೀಕರಿಸಿರೂ ಅಪವಿತ್ರನಾವುತ್ತನಿಲ್ಲೆ.

ವಿಷಶೀತಾಪಹೌ ಮಂತ್ರವಹ್ನೀ ಕಿಂ ದೋಷಭಾಗಿನೌ ।
ಅಪಾತ್ರೇ ಸಾ ಚ ಗೌರ್ದತ್ತಾ ದಾತಾರಂ ನರಕಂ ನಯೇತ್ ॥೬೬॥

ವಿಷವ ನಾಶಮಾಡುವ ಮಂತ್ರವೂ, ಶೀತವ ದೂರಮಾಡುವ ಅಗ್ನಿಯೂ, ದೋಷಭಾಗಿಗಳಾಗಿರ್ತೋ? ಆದರೆ, ಅಪಾತ್ರಂಗೆ ದಾನ ಮಾಡಿದ ಗೋವು, ದಾನಿಯ ನರಕಕ್ಕೆ ಕರಕ್ಕೊಂಡು ಹೋವುತ್ತು.

ಕುಲೈಕಶತಸಂಯುಕ್ತಂ ಗ್ರಹೀತಾರಂ ತು ಪಾತಯೇತ್ ।
ನಾಪಾತ್ರೇ ವಿದುಷಾ ದೇಯಾ ಆತ್ಮನಃ ಶ್ರೇಯ ಇಚ್ಛತಾ ॥೬೭॥

ದಾನ ಸ್ವೀಕರುಸುವವನ ವಂಶದ ನೂರೊಂದು ತಲೆವರೆಂಗೆ ನರಕಕ್ಕೆ ಬೀಳುಸುತ್ತು. ಹಾಂಗಾಗಿ ತನ್ನ ಆತ್ಮದ ಶ್ರೇಯಸ್ಸ ಇಚ್ಚಿಸುವಂತಹ ಬುದ್ಧಿವಂತ° ಅಪಾತ್ರಂಗೆ ದಾನ ಕೊಡ್ಳಾಗ.

ಏಕಾ ಹ್ಯೇಕಸ್ಯ ದಾತವ್ಯಾ ಬಹೂನಾಂ ನ ಕದಾಚನ ।
ಸಾ ವಿಕ್ರೀತಾ ವಿಭಕ್ತಾ ವಾ ದಹತ್ಯಾಸಪ್ತಮಂ ಕುಲಮ್ ॥೬೮॥

ಒಂದು ಗೋವಿನ ಒಬ್ಬಂಗೇ ದಾನ ಕೊಡೆಕು. ಬಹು ಜನರಿಂಗೆ ಎಂದಿಂಗೂ ದಾನ ಮಾಡ್ಳಾಗ. ಎಂತಕೇಳಿರೆ, ಮಾರಲ್ಪಟ್ಟ ಅಥವಾ ಹಂಚಲ್ಪಟ್ಟ ಗೋವು ಏಳು ಕುಲಂಗಳ ಸುಟ್ಟುಹಾಕುತ್ತು.

ಕಥಿತಾ ಯಾ ಮಯಾ ಪೂರ್ವಂ ತವ ವೈತರಣೀ ನದಿ ।
ತಸ್ಯಾ ಉದ್ಧರಣೋಪಾಯಂ ಗೋದಾನಂ ಕಥಯಾಮಿ ತೇ ॥೬೯॥

ನಿನಗೆ ವೈತರಣೀ ನದಿಯ ಬಗ್ಗೆ ಎನ್ನಂದ ಈ ಮದಲೇ ಹೇಳಲ್ಪಟ್ಟಿದು. ಈಗ ಅದರ ದಾಂಟುವ ಉಪಾಯವಾದ ಗೋದಾನದ ಬಗ್ಗೆ ಹೇಳುತ್ತೆ.

 

ಗದ್ಯರೂಪಲ್ಲಿ –

ಭಗವಂತ° ಗರುಡಂಗೆ ಹೇಳಿಗೊಂಡಿಪ್ಪದರ ಮುಂದುವರ್ಸಿಗೊಂಡು ಹೇಳುತ್ತ° – ಏಕಾದಶಿ ವ್ರತ, ಗೀತಾ, ಗಂಗಾಜಲ, ತುಳಸೀದಳ, ಭಗವಂತ ವಿಷ್ಣುವಿನ ಚರಣಾಮೃತ ಮತ್ತೆ ನಾಮ- ಇವುಗೊ ಮರಣಕಾಲಲ್ಲಿ ಮುಕ್ತಿಯ ಕೊಡುವಂತಾದವುಗೊ. ಇದರ ಮತ್ತೆ, ತುಪ್ಪ ಮತ್ತೆ ಸುವರ್ಣ ಸಹಿತ ಅನ್ನದಾನದ ಸಂಕಲ್ಪ ಮಾಡೆಕು. ವೇದಪಾಠಿ ಬ್ರಾಹ್ಮಣಂಗೆ ಕಂಜಿಸಮೇತ ದನವ ದಾನ ಮಾಡೆಕು. ಹೇ ಗರುಡನೇ!, ಯಾವ ಮನುಷ್ಯ° ಅಂತ್ಯಕಾಲಲ್ಲಿ ರಜಾ ಅಥವಾ ಅಧಿಕ ದಾನವ ನೀಡುತ್ತನೋ ಮತ್ತೆ ಮಕ್ಕೊ ಅದರ ಅನುಮೋದುಸುತ್ತವೋ ಅಂತಹ ದಾನ ಅಕ್ಷಯವಾವುತ್ತು.

ಸತ್ಪುತ್ರನಾದವ° ತನ್ನ ಅಪ್ಪನ ಅಂತ್ಯಕಾಲಲ್ಲಿ ಎಲ್ಲ ಪ್ರಕಾರದ ದಾನವ ಅಪ್ಪನ ಕೈಂದ ಕೊಡುಸೆಕು. ಲೋಕಲ್ಲಿ ಧರ್ಮಜ್ಞ ಪುರುಷರು ಇದಕ್ಕಾಗಿಯೇ ಪುತ್ರ° ಆಯೇಕು ಹೇಳು ಪ್ರಾಥಿಸುತ್ತವು. ನೆಲಕ್ಕಲಿ ಮನುಗಿದ, ಅರ್ಧಕಣ್ಣು ಬಿಡಿಸಿಪ್ಪ ತನ್ನ ಅಪ್ಪನ ನೋಡಿ ಮಕ್ಕೊ ಅವನತ್ರೆ ಅವನ ಪೂರ್ವ ಸಂಚಿತ ಸಂಪತ್ತಿನ ವಿಷಯಲ್ಲಿ ಆಸೆ ಪಡ್ಳಾಗ. ಸತ್ಪುತ್ರನಿಂದ ನೀಡಲಾದ ದಾನಂದ ಅಪ್ಪ° ಜೀವಿತವಾಗಿಪ್ಪನ್ನಾರ ಮತ್ತೆ ಮರಣದ ನಂತ್ರ ಸೂಕ್ಷ್ಮಶರೀರಂದ ಪರಲೋಕದ ಮಾರ್ಗಲ್ಲಿ ದುಃಖಪ್ರಾಪ್ತಿ ಹೊಂದುತ್ತನಿಲ್ಲೆ.

ಮರಣಕಾಲ ಮತ್ತೆ ಗ್ರಹಣಕಾಲ- ಈ ಎರಡೂ ಕಾಲಂಗಳಲ್ಲಿ ನೀಡಲಾದ ದಾನಕ್ಕೆ ವಿಶೇಷ ಮಹತ್ವ ಇದ್ದು. ಹಾಂಗಾಗಿ ತಿಲಾದಿ ಅಷ್ಟದಾನ ಅವಶ್ಯ ಮಾಡೆಕು. ತಿಲ, ಲೋಹ, ಬಂಗಾರ, ಹತ್ತಿಯ ವಸ್ತುಗೊ, ಉಪ್ಪು, ಸಪ್ತಧಾನ್ಯ, ಭೂಮಿ ಮತ್ತು ಗೋವು – ಇವುಗಳಲ್ಲಿ ಒಂದೊಂದರ ದಾನವೂ ಪವಿತ್ರವಾದ್ದು ಹೇದು ತಿಳಿಯಲಾಯ್ದು. ಈ ಅಷ್ಟಮಹಾದಾನ ಮಹಾಪಾಪಂಗಳ ನಾಶಪಡುಸುವಂತಾದ್ದು. ಹಾಂಗಾಗಿ ಅಂತ್ಯಕಾಲಲ್ಲಿ ಇವುಗಳ ದಾನ ಕೊಡೆಕು. ಈ ದಾನಂಗಳ ಯಾವು ಉತ್ತಮ ಫಲಂಗ ಇದ್ದೋ ಅದರ ಹೇಳುತ್ತೆ, ಕೇಳು-

ಮೂರು ವಿಧದ ಎಳ್ಳು ಎನ್ನ ಬೆವರಿಂದ ಉತ್ಪನ್ನವಾಯ್ದು. ಅಸುರರು, ದಾನವರು ಮತ್ತೆ ದೈತ್ಯರು ತಿಲದಾನಂದ ತೃಪ್ತರಾವುತ್ತವು. ಶ್ವೇತ, ಕೃಷ್ಣ, ಕಪಿಲ (ಬೆಳಿ, ಕಪ್ಪು, ಕಂದು) ವರ್ಣದ ತಿಲದಾನ ಶರೀರ, ಮನಸ್ಸು, ಮಾತುಗಳ ಮೂಲಕ (ಕಾಯಾ ಮನಸಾ ವಾಚಾ) ಮಾಡಿದ ಪಾಪಂಗಳ ನಷ್ಟಗೊಳುಸುತ್ತು.

ಲೋಹದ ದಾನವ ಭೂಮಿಯ ಮೇಗೆ ಕೈಮಡುಗಿ ಮಾಡೆಕು. ಹೀಂಗೆ ಮಾಡುವದರಿಂದ ಜೀವ ಯಮಸೀಮೆಯ ಪ್ರಾಪ್ತಿ ಹೊಂದುತ್ತಿಲ್ಲೆ ಹಾಂಗೂ ಯಮಮಾರ್ಗಲ್ಲಿ ಹೋವುತ್ತಿಲ್ಲೆ. ಪಾಪಕರ್ಮಂಗಳ ಮಾಡುವ ವ್ಯಕ್ತಿಗಳ ಶಿಕ್ಷಿಸುಲೆ ಯಮನ ಕೈಲಿ ಕೊಡಲಿ, ವನಕೆ, ದಂಡ, ಖಡ್ಗ, ಚೂರಿ – ಆಯುಧಂಗಳಾಗಿ ಇರುತ್ತು. ಯಮರಾಜನ ಆಯುಧಂಗಳ ಸಂತುಷ್ಟಗೊಳುಸಲೆ ಈ ಲೋಹದಾನವ ಹೇಳಲಾಯ್ದು. ಹಾಂಗಾಗಿ ಯಮಲೋಕಲ್ಲಿ ಸುಖ ನೀಡುವಂತಹ ಲೋಹದಾನವ ಮಾಡೆಕು.

ಉರಣ, ಶ್ಯಾಮಸೂತ್ರ, ಶಂಡಾಕರ್ಮ, ಉದುಂಬರ, ಶೇಷಂಬಲ – ಹೇಳ್ವ ಯಮನ ಮಹಾದೂತರು ಲೋಹದಾನಂದ ಸುಖಪ್ರದಾಯಕರಾವುತ್ತವು. ಹೇ ಗರುಡ!, ಪರಮ ಗೌಪ್ಯವಾದ ಮತ್ತೆ ದಾನಂಗಳಲ್ಲೇ ಉತ್ತಮ ದಾನದ ವಿಷಯದ ಬೆಗ್ಗೆ ಹೇಳುತ್ತೆ ಕೇಳು. ಅದರನೀಡುವದರಿಂದ ಭೂಲೋಕ(ಪೃಥ್ವಿ), ಭುವರ್ಲೋಕ (ಅಂತರಿಕ್ಷ) ಹಾಂಗೂ ಸ್ವರ್ಗಲೋದಕದ ನಿವಾಸಿಗೊ (ಅರ್ಥಾತ್- ಮನುಷ್ಯ, ಭೂತ-ಪ್ರೇತ ಹಾಂಗೂ ದೇವಗಣ) ಸಂತುಷ್ಟರಾವುತ್ತವು. ಬ್ರಹ್ಮಾದಿ ದೇವತೆಗೊ, ಋಷಿಗಣ, ಮತ್ತೆ ಧರ್ಮರಾಜನ ಸಭಾಸದರು ಸುವರ್ಣದಾನಂದ ಸಂತುಷ್ಟರಾಗಿ ವರಪ್ರದಾಯಕರಾವುತ್ತವು. ಹಾಂಗಾಗಿ ಪ್ರೇತದ ಉದ್ಧಾರಕ್ಕಾಗಿ ಸ್ವರ್ಣದಾನವ ಮಾಡೆಕು. ಹೇ ಗರುಡ!, ಸ್ವರ್ಣ ದಾನವ ಕೊಡುವದರಿಂದ ಜೀವಾತ್ಮ° ಯಮಲೋಕಕ್ಕೆ ಹೋವುತ್ತಿಲ್ಲೆ. ಅದಕ್ಕೆ ಸ್ವರ್ಗ ಪ್ರಾಪ್ತಿಯಾವುತ್ತು.

ದೀರ್ಘಕಾಲದವರೇಂಗೆ ಆ ಜೀವ ಸತ್ಯಲೋಕಲ್ಲಿ ನಿವಾಸ ಮಾಡುತ್ತ°. ಮತ್ತೆ ಈ ಲೋಕಲ್ಲಿ ರೂಪವಂತ°, ಧಾರ್ಮಿಕ°, ವಾಕ್ಪಟು, ಶ್ರೀಮಂತ° ಮತ್ತೆ ಅಪಾರ ಪರಾಕ್ರಮಿ ರಾಜನಾವುತ್ತ°. ಹತ್ತಿಯ ದಾನಂದ ಯಮದೂತರಿಂದ ಭಯ ಇಲ್ಲೆ. ಲವಣದ ದಾನಂದ ಯಮನ ಭಯ ಇಲ್ಲೆ. ಲೋಹ, ಉಪ್ಪು, ಹತ್ತಿ, ಎಳ್ಳು, ಹಾಂಗೂ ಸ್ವರ್ಣದ ದಾನಂದ ಯಮಪುರದ ನಿವಾಸಿ ಚಿತ್ರಗುಪ್ತ ಮುಂತಾದವು ಸಂತುಷ್ಟರಾವುತ್ತವು.

ಸಪ್ತಧಾನ್ಯಂಗಳ ದಾನ ಕೊಡುವದರಿಂದ ಧರ್ಮರಾಜ ಮತ್ತೆ ಯಮಪುರದ ಮೂರು ದ್ವಾರಂಗಳಲ್ಲಿಪ್ಪ ಅನ್ಯ ದ್ವಾರಪಾಲಕರೂ ಕೂಡ ಪ್ರಸನ್ನರಾವ್ತವು. ಅಕ್ಕಿ, ಯವ, ಗೋಧಿ, ಹಸರು, ಉದ್ದು, ನವಣೆ, ಕಡಲೆ – ಇವುಗೊ ಸಪ್ತಧಾನ್ಯಂಗೊ ಹೇದು ಹೇಳಲ್ಪಟ್ಟಿದು.

ಯಾವ ವ್ಯಕ್ತಿ ಗೋಚರ್ಮಮಾತ್ರ ಭೂಬಿಯ ವಿಧಿಪೂರ್ವಕವಾಗಿ ಸತ್ಪಾತ್ರಂಗೆ ದಾನ ನೀಡುತ್ತನೋ ಅಂವ° ಬ್ರಹ್ಮಹತ್ಯಾ ಪಾಪಂದ ಮುಕ್ತನಾಗಿ ಪವಿತ್ರನಾಗಿ ಬಿಡುತ್ತ. ಇದರ ಮುನಿವರ್ಯರು ಅನುಭವಪೂರ್ವಕ ಕಂಡುಗೊಂಡಿದವು. (* ಗವಾಂ ಶತಂ ವೃಷಶ್ಚೈಕೋ ಯತ್ರ ತಿಷ್ಠತ್ಯಯಂತ್ರಿತಃ । ತದ್ ಗೋಚರ್ಮತಿ ವಿಖ್ಯಾತಂ ದತ್ತಂ ಸರ್ವಾಘನಾಶನಮ್ ॥ – ನೂರು ಗೋವುಗೊ (ಕಂಜಿ ಸಮೇತ) ಮತ್ತೆ ಒಂದು ಹೋರಿ ಎಷ್ಟು ವಿಸ್ತಾರದ ಭೂಮಿಲಿ ಸ್ವತಂತ್ರವಾಗಿ ನಿವಾಸ ಮಾಡುತ್ತೋ ಅಷ್ಟು ವಿಸ್ತಾರವಾದ ಭೂಮಿಗೆ ‘ಗೋಚರ್ಮ’ ಹೇದು ಹೇಳುವದು. ಇದರ ದಾನ ಸಮಸ್ತ ಪಾಪಂಗಳ ನಾಶಪಡುಸುವಂತಾದ್ದು). ರಾಜತ್ವಲ್ಲಿ ರಾಜನಿಂದ ಮಾಡಲ್ಪಡುವ ಮಹಾಪಾಪಂಗೊ, ವ್ರತಾನುಷ್ಠಾನಂದಲಾಗಲೀ, ತೀರ್ಥಸೇವೆಂದಲಾಗಲೀ ಅಥವಾ ಅನ್ಯ ಯಾವುದೇ ದಾನಂದಲಾಗಲೀ ನಷ್ಟ ಆವುತ್ತಿಲ್ಲೆ. ಅದು ಕೇವಲ ಭೂಮಿ ದಾನಂದಲೇ ನಾಶವಾಗಿ ಹೋವುತ್ತು. ಯಾವ ವ್ಯಕ್ತಿ ಬ್ರಾಹ್ಮಣಂಗೆ ಧಾನ್ಯಪೂರ್ಣ್ ಭೂಮಿಯ ದಾನ ಮಾಡುತ್ತನೋ, ಅಂವ° ದೇವತೆಗಳ ಮತ್ತು ಅಸುರರಿಂದ ಪೂಜಿತನಾಗಿ ಇಂದ್ರಲೋಕಕ್ಕೆ ಹೋವುತ್ತ°.

ಹೇ ಗರುಡ!, ಅನ್ಯ ದಾನಂಗಳ ಫಲ ಅತ್ಯಲ್ಪವಾಗಿದ್ದು. ಆದರೆ, ಭೂಮಿದಾನದ ಪುಣ್ಯ ನಿತ್ಯ ವೃದ್ಧಿಯಾವುತ್ತು. ಭೂಮಿಯ ಒಡೆಯನಾಗಿಯೂ (ರಾಜನಾಗಿಯೂ) ಕೂಡ ಆರು ಬ್ರಾಹ್ಮಣಂಗೆ ಭೂಮಿದಾನ ನೀಡುತ್ತನಿಲ್ಲೆಯೋ, ಅಂವ° ಜನ್ಮಾಂತರಲ್ಲಿ ಯಾವುದಾರೊಂದು ಗ್ರಾಮಲ್ಲಿ, ಗುಡಿಸಲೂ ಕೂಡ ಪ್ರಾಪ್ತಿ ಹೊಂದುತ್ತನಿಲ್ಲೆ. ಮತ್ತೆ, ಜನ್ಮ-ಜನ್ಮಾಂತರಲ್ಲಿ (ಪ್ರತಿ ಜನ್ಮಲ್ಲಿ) ದರಿದ್ರನೇ ಆವುತ್ತ°. ಭೂಮಿಯ ಒಡೆಯನಾಗಿ (ರಾಜನಾಗಿ) ಯಾವಾತ° ಅಹಂಕಾರಂದ ಭೂಮಿಯ ದಾನ ಮಾಡುತ್ತನಿಲ್ಲೆಯೋ ಅಂವ°, ಎಲ್ಲಿವರೇಂಗೆ ಶೇಷ° ಭೂಮಿಯ ಧಾರಣೆ ಮಾಡಿಗೊಂಡಿರುತ್ತನೋ ಅಲ್ಲಿವರೇಂಗೆ ನರಕಲ್ಲಿ ಬಿದ್ದುಗೊಂಡಿರುತ್ತ°. ಹಾಂಗಾಗಿ ಭೂಮಿಯ ಒಡೆಯನಾಗಿಪ್ಪವ° (ರಾಜ°) ಭೂಮಿಯ ದಾನ ಮಾಡೆಕು. ಅನ್ಯರಿಂಗೆ ಭೂದಾನದ ಬದಲಿಂಗೆ ಗೋದಾನ ವಿಧಾನ ಎನ್ನಿಂದ ಹೇಳಲ್ಪಟ್ಟಿದು.

ಮನುಷ್ಯನ ಕೊನೆಗಾಲಲ್ಲಿ ಗೋದಾನ ಮಾಡೆಕು. ಮೃತ್ಯು ಹಾಂಗೂ ಕಷ್ಟಂಗಳ ಗೆಲ್ಲುಲೆ ಒಂದು ಗೋದಾನ, ಋಣಂಗಳಿಂದ ಮುಕ್ತನಪ್ಪಲೆ ಇನ್ನೊಂದು ಗೋದಾನ ಮತ್ತು ಮೋಕ್ಷ ಪಡವಲೆ ಮತ್ತೊಂದು ಗೋವಿನ ದಾನ ಮಾಡೆಕು. ಹೇ ಗರುಡನೇ!, ವೈತರಣೀ ಧೇನುವ ವಿಶೇಷ ವಿಧಿಗಳಿಂದ ದಾನ ಮಾಡೆಕು. ಗೋವು ಮನುಷ್ಯನ ಮೂರು ವಿಧವಾದ ಪಾಪಂಗಳಿಂದ ದಾಂಟುಸುತ್ತು.

ಬಾಲ್ಯ, ಕೌಮಾರ, ಯೌವ್ವನ, ವೃದ್ಧ ಈ ಅವಸ್ಥೆಗಳಲ್ಲಿ ಅಥವಾ ಅನ್ಯ ಜನ್ಮಂಗಳಲ್ಲಿ, ರಾತ್ರಿ, ಪ್ರಾತಃಕಾಲ, ಮಧ್ಯಾಹ್ನ, ಅಪರಾಹ್ನ, ಎರಡು ಸಂಧ್ಯಾಕಾಲಂಗಳಲ್ಲಿ ಕಾಯಾವಾಚಾಮನಸಾ ಮಾಡಿದ ಯಾವ ಯಾವ ಪಾಪಂಗೊ ಮಾಡಲ್ಪಟ್ಟಿದೋ, ಕರವ ಕಪಿಲೆ ಹಸುವಿನ ಸಾಮಾಗ್ರಿಗಳ ಮತ್ತು ಕರು ಸಹಿತವಾಗಿ, ತಪೋನಿರತ ವೇದಜ್ಞ ಬ್ರಾಹ್ಮಣಂಗೆ ಒಂದು ಸರ್ತಿಯಾದರೂ ದಾನ ಕೊಟ್ರೆ ಈ ಎಲ್ಲಾ ಪಾಪಂಗಳಿಂದ ಮುಕ್ತನಾವುತ್ತ°. ಅಂತ್ಯಕಾಲಲ್ಲಿ ಗೋದಾನ ನೀಡುವದರಿಂದ ವ್ಯಕ್ತಿಯ ಸಂಚಿತ ಪಾಪಂಗೊ ನಷ್ಟವಾಗಿ ಅಂವ° ಉದ್ಧಾರ ಆವುತ್ತ°.

ಆತುರಾವಸ್ಥೆಲಿ ನೀಡಿದ ನೂರು ಗೋವು ಮತ್ತು ಮೃತ್ಯುಕಾಲಲ್ಲಿ ಚಿತ್ತ ವಿವರ್ಜಿತ ವ್ಯಕ್ತಿಯ ಮೂಲಕ ನೀಡಿದ ಒಂದು ಸಾವಿರ ಗೋವು ಹಾಂಗೂ ಮರಣದ ನಂತರ ವಿಧಿಪೂರ್ವಕವಾಗಿ ನೀಡಿದ ಒಂದು ಲಕ್ಷ ಗೋವುಗಳ ದಾನದ ಫಲವು ಆರೋಗ್ಯವಂತ° ಶುದ್ಧ ಮನಸ್ಸಿಂದ ನೀಡಿದ ಒಂದು ಗೋದಾನ ಫಲಕ್ಕೆ ಸಮಾನವಾಗಿದ್ದು. ಸತ್ಪಾತ್ರಂಗೆ ನೀಡಿದ ದಾನದ ಫಲ ಲಕ್ಷಪಟ್ಟು ಹೆಚ್ಚಾಗಿರುತ್ತು. ಹಾಂಗಾಗಿ  ದಾನಿಗೆ ಅನಂತ ಫಲ ಲಭಿಸುತ್ತು. ಮತ್ತು, ಆ ಸತ್ಪಾತ್ರಂಗೆ ದಾನ ಸ್ವೀಕರಿಸಿದ ದೋಷ ಉಂಟಾವುತ್ತಿಲ್ಲೆ.

ಸ್ವಾಧ್ಯಾಯ ಮತ್ತೆ ಹೋಮಕರ್ಮಲ್ಲಿ ನಿರತನಾದವ°, ಅನ್ಯರು ಮಾಡಿದ ಅನ್ನವ ಸೇವಿಸದ್ದವ° ಅರ್ಥಾತ್ ಸ್ವಯಂಪಾಕೀ ಬ್ರಾಹ್ಮಣ ರತ್ನಯುಕ್ತ ಭೂಮಿಯ ದಾನ ಪಡದೂ ಕೂಡಾ ಪ್ರತಿಗೃಹ (ದಾನ ಸ್ವೀಕರಿಸಿದ) ದೋಷ ಉಂಟಾವುತ್ತಿಲ್ಲೆ. ಚೇಳುಗಳ ವಿಷಹರಣ ಮಾಡುವ ಮಂತ್ರದಾಂಗೆ, ಅಗ್ನಿಯು ಶೀತವ ನಷ್ಟಗೊಳುಸುವ ಹಾಂಗೆ ಸತ್ಪಾತ್ರಂಗೆ ದಾನ ಮಾಡುವದರಿಂದ ದಾನಿಯ ದೋಷಂಗೊ ನಷ್ಟವಾಗಿ ಹೋವುತ್ತು. ಆದರೆ ಅಪಾತ್ರಂಗೆ ಗೋದಾನ ಮಾಡುವ ವ್ಯಕ್ತಿ ನರಕಲ್ಲಿ ಬೀಳುತ್ತ°. ಅಪಾತ್ರ° ಲೋಭಂದ ದಾನವ ಸ್ವೀಕರುಸಿರೆ ಅವನ ನೂರೊಂದು ವಂಶಜರು ನರಕಲ್ಲಿ ಬೀಳುತ್ತವು. ಹಾಂಗಾಗಿ ತಮ್ಮ ಕಲ್ಯಾಣದ ಇಚ್ಛೆಯ ಹೊಂದಿದ ವಿದ್ವಾಂಸ ವ್ಯಕ್ತಿಗೊ ಅಪಾತ್ರರಿಂದ ದಾನವ ಕೊಡ್ಳಾಗ. ಒಂದು ಗೋವಿನ ಒಬ್ಬನೇ ಬ್ರಾಹ್ಮಣಂಗೆ ಕೊಡೆಕು. ಒಂದೇ ಗೋವಿನ ಅನೇಕ ಬ್ರಾಹ್ಮಣರಿಂಗೆ ಸರ್ವಥಾ ಕೊಡ್ಳಾಗ. ಆ ಗೋವಿನ ಒಂದು ವೇಳೆ ಮಾರಾಟ ಮಾಡಿರೆ ಅಥವಾ ಅದರ ಹಂಚಿರೆ ಅದರ ಹಂಚಿದ ಪಾಪವು ದಾನ ನೀಡಿದ ವ್ಯಕ್ತಿಯ ಏಳು ಪೀಳಿಗೆಯ ಸುಟ್ಟುಹಾಕುತ್ತು.

ಹೇ ಗರುಡ! ಆನು ಮದಲೆ ನಿನಗೆ ವೈತರಣೀ ನದಿಯ ಕುರಿತು ಹೇಳಿತ್ತಿದ್ದೆ. ಅದರ ದಾಂಟುವ ಉಪಾಯಭೂತ ವೈತರಣೀ ಗೋದಾನದ ವಿಷಯವ ನಿನಗೆ ಹೇಳುತ್ತೆ ಕೇಳು..

 

ವೈತರಣೀ ಗೋದಾನದ ವಿಷಯವಾಗಿ ಭಗವಂತ° ಗರುಡಂಗೆ ಎಂತ ಹೇಳುತ್ತ ಹೇಳ್ವದರ ಬಪ್ಪವಾರ ನೋಡುವೋ°

 

[ಚಿಂತನೀಯಾ –

ಭಗವಂತನ ನಿತ್ಯ ಕೀರ್ತನೆ, ಸ್ಮರಣೆ, ಧ್ಯಾನ ಎಂತಹವನನ್ನೂ ಘೋರ ಸಂಕಷ್ಟಂಗಳಿಂದ ಪಾರು ಮಾಡುತ್ತು. ಇದಕ್ಕೆ ಪುರಾಣಂಗಳಲ್ಲಿ ಸಾಕಷ್ಟು ದೃಷ್ಟಾಂತಂಗಳ ಭಗವಂತ° ಹೇಳಿದ್ದ. ದೀರ್ಘ ಕಾಲದ ನಿರಂತರ ಅಭ್ಯಾಸಂದ ಮಾತ್ರವೇ ಅಂತ್ಯಕಾಲಲ್ಲಿಯೂ ಇದು ಉಪಯೋಗಕ್ಕೆ ಬಕ್ಕು. ಪ್ರಾರ್ಥನೆ, ಭಜನೆ, ಸ್ಮರಣೆ, ಧ್ಯಾನಂದ ಮನಸ್ಸು ನಿರ್ಮಲವಾಗಿ ಅಂತಃಕರಣ ಶುದ್ಧಿಯಾಗಿ ಜ್ಞಾನೋದಯವುಂಟಾವುತ್ತು. ಅದು ಜೀವನ್ಮುಕ್ತಿಯ ಸೋಪಾನ. ಏಕಾದಶಿ ಇತ್ಯಾದಿ ಹಬ್ಬ ಹರಿದಿನಂಗೊ, ನಿತ್ಯ ಗೀತಾ ಪಾರಾಯಣ, ತೀರ್ಥಯಾತ್ರೆ, ವಿಷ್ಣುಸ್ಮರಣೆ ಇತ್ಯಾದಿಗೊ ಮನುಷ್ಯನ ಜೀವನಲ್ಲಿ ನಿರಂತರ ಶ್ರದ್ಧಾಭಕ್ತಿಂದ ಮಾಡಿಗೊಂಡು ಬರೆಕಾದ ಕರ್ತವ್ಯಂಗೊ. ಇದರಿಂದ ಜೀವನದ ಪ್ರತಿ ಹೆಜ್ಜೆಲಿಯೂ ಭಗವದ್ ಪ್ರಜ್ಞೆ ನಮ್ಮಲ್ಲಿ ಸ್ಥಿರ ಆವುತ್ತು.

ದಾನ ಮನುಷ್ಯ ಜೀವನಲ್ಲಿ ಆಚರುಸೆಕ್ಕಾದ ಅತಿ ದೊಡ್ಡ ಕಾರ್ಯ. ತನ್ನಲ್ಲಿಪ್ಪದರ ಇಲ್ಲದ್ದವಂಗೆ ಉಪಕಾರ ಆಗಿ ಅವಂಗೆ ಒಳ್ಳೆದಾಯೆಕು ಹೇಳ್ವ ಮನೋಭಾವಂದ ಮಾಡುವದು ದಾನ. ದಾನ ಮಾಡುವಾಗ ತನಗೆ ಫಲಾಪೇಕ್ಷೆ ಮನಸ್ಸಿಲ್ಲಿಪ್ಪಲಾಗ. ಶ್ರೀಪರಮೇಶ್ವರ ಪ್ರೀತ್ಯರ್ಥಮ್ ಹೇಳ್ವ ಮನಸಾ ಸಂಕಲ್ಪ ನಮ್ಮದಾಯೇಕು. ದಾನ ಕೊಡುವದು ಸತ್ಪಾತ್ರಂಗೆ ಕೊಡೆಕು. ಆರಿಂಗೋ ಉಪಯೋಗ ಇಲ್ಲದ್ದವಂಗೆ ಅಥವಾ ಇಪ್ಪವಂಗೇ ಮತ್ತಷ್ಟು ಕೊಟ್ಟದರಿಂದ ಉದ್ದೇಶ ಪರಿಪೂರ್ಣ ಆವ್ತಿಲ್ಲೆ. ತೆಕ್ಕೊಂಬವನೂ ತನಗೆ ಆ ಯೋಗ್ಯತೆ ಇದ್ದೋ ಹೇಳಿ ನೋಡಿಗೊಂಡೇ ತೆಕ್ಕೊಳ್ಳೆಕು. ಕೊಡ್ತ ಹೇಳಿ ಕೈ ಒಡ್ಡಲಾಗ. ಪ್ರತಿಗ್ರಹ ದೋಷ ಇದ್ದೇ ಇದ್ದು. ಅದು ತನ್ನ ಮೂಲಕ ಮಾಡಲ್ಪಡುವ ದಾನಂದ ಪರಿಹಾರ ಆವುತ್ತು. ಒಟ್ಟಿಲ್ಲಿ ದಾನ ಪ್ರತಿಯೊಬ್ಬನೂ ಜೀವನಲ್ಲಿ ಮಾಡೇಕ್ಕಾದ ಕರ್ತವ್ಯ. ದಾನ ತೆಕ್ಕೊಂಡವನೂ ಅಷ್ಟೇ ಸಂತೋಷಲ್ಲಿ ಸ್ವೀಕರಿಸಿ ಅದರ ಸದುಪಯೋಗ ಪಡಿಸಿಕೊಳ್ಳೆಕ್ಕಾದ ಕರ್ತವ್ಯ ಇದ್ದು. ದಾನ ತೆಕ್ಕೊಂಡಿಕ್ಕಿ ಅಲ್ಲೇ ಕರೇಲಿ ಹಾಕಿಕ್ಕಿ ಹೋಪದೋ, ಹೋಪ ಮಾರ್ಗಲ್ಲಿ ಆರಿಂಗಾರು ಕೈದಾಂಟಿಸಿಯೋ, ಮಾರಿಕ್ಕಿ ಹೋಪದೋ ಸರ್ವಥಾ ಒಳ್ಳೆದಲ್ಲ.
ನಾವು ನಮ್ಮ ಜೀವಮಾನಲ್ಲಿ ಕೈಕಾಲು ಗಟ್ಟಿಯಾಗಿಪ್ಪಗಳೇ ದಾನಾದಿ ಕರ್ಮಂಗಳಲ್ಲಿ ನಿರತನಾಗಿರೆಕು. ಅಂತೇ ಸಾವಲಪ್ಪಗ ‘ಅದರ ಮಾಡುತ್ತೆ, ಇದರ ಮಾಡೆಕು’ ಹೇಳಿ ಪರಿತಪಿಸಿ ಎಂತ ಗುಣ!. ನಮ್ಮ ಕೈಯ್ಯಾರೆ ದಾನ ಮಾಡುತ್ತದೇ ಶ್ರೇಷ್ಠ. ‘ಪುಮ್’ ನರಕಂದ ಪಾರುಮಾಡುವವನೇ ಸತ್ಪುತ್ರ ಎನಿಸಿಗೊಳ್ಳುತ್ತ°. ಭಗವಂತನ ವಿಶೇಷ ಅನುಗ್ರಹಂದಲೇ ಸುಪುತ್ರರು ಹುಟ್ಟುವದು. ಅಪ್ಪನ ಆಸ್ತಿಪಾಸ್ತಿಯನ್ನೇ ದೃಷ್ಟಿಲಿ ಕೇಂದ್ರವಾಗಿರಿಸಿಗೊಂಡು ಅಪ್ಪ°- ಅಬ್ಬೆಯ ಆರೈಕೆ ಮಾಡುವದು ಬರೇ ಸ್ವಾರ್ಥ ಲಕ್ಷಣ. ಅಪ್ಪ-ಅಬ್ಬೆಯ ಶ್ರೇಯಸ್ಸಿನ ಬಯಸುವ ಮಗ° ಅವರ ಕೈಂದಲೇ ಅವಕ್ಕೆ ಗೊಂತಿದ್ದುಗೊಂಡೇ ದಾನ ಮಾಡುಸೆಕು. ಸಾವಲೆ ಬಿದ್ದವನ, ತನ್ನತನವ ಕಳಕ್ಕೊಂಡವನ ಕೈಂದ ದಾನ ಮಾಡಿಸಿರೆ ಅಂತೇ ಪ್ರದರ್ಶನ ಮಾಂತ್ರವೇ ಅದಕ್ಕು.
ತನ್ನಲ್ಲಿಪ್ಪದರ ಅರ್ಹನಾದ ಇನ್ನೊಬ್ಬಂಗೆ (ಇಲ್ಲದ್ದವಂಗೆ) ಉಪಯೋಗವಪ್ಪಂತಹ ಯಾವುದೇ ವಸ್ತು ಕಾರ್ಯ ಸೇವೆ ನೀಡುವದು ದಾನವೇ. ಅದು ಜನತಾಸೇವೆ. ಅದಲ್ಲದ್ದೇ ತನ್ನ ಶ್ರೇಯಸ್ಸಿಂಗಾಗಿ ಸಪ್ತದಾನ, ಅಷ್ಟದಾನ, ದಶದಾನ, ಉಪದಾನ ಇತ್ಯಾದಿ ಇತ್ಯಾದಿಗೊ. ಆ ನಿಟ್ಟಿಲ್ಲಿ ಭಗವಂತ° ಇಲ್ಲಿ ಈ ಸಂದರ್ಭಲ್ಲಿ ಹೇಳಿಪ್ಪದು – ಸಪ್ತಧಾನ್ಯ, ತಿಲ, ಲೋಹ, ಚಿನ್ನ, ಹತ್ತಿಯ ವಸ್ತುಗೊ, ಉಪ್ಪು, ಭೂದಾನ, ಗೋದಾನ. ಪ್ರತಿಯೊಂದು ವಸ್ತುವಿನ ದಾನಂಗೊ ಇಲ್ಲಿ ಜೀವಿಯ ಶ್ರೇಯಸ್ಸಿನ ದೃಷ್ಟಿಲ್ಲಿ ಮಹತ್ವ ಇಪ್ಪಂತಾದ್ದು.
‘ಸಾಯಿಬೋಧಾಮೃತಸಾರ’ ಪುಸ್ತಕಲ್ಲಿ ಹೇಳಿಪ್ಪಂತೆ, ತಿಲದಾನ – ತಿಲ ಭಗವಂತನ ಬೆವರಿಂದ ಉತ್ಪನ್ನವಾದ್ದು. ಅರ್ಥಾತ್ ಅದು ಶ್ರಮದ ಫಲ – ಹೇಳಿರೆ, ಕರ್ಮಫಲದ ಸಂಕೇತ. ತಿಲದಾನ ಮಾಡ್ತದು ಹೇಳಿರೆ ತನ್ನ ಕರ್ಮಫಲವ ಭಗವಂತಂಗೆ ಅರ್ಪಣೆ ಮಾಡ್ತದು. ಇದರಿಂದ ಮನುಷ್ಯ° ಕಾಯಾ, ಮನಸಾ, ವಾಚಾ ಮಾಡಿದ ಕರ್ಮಫಲಂಗಳ ಭಗವಂತಂಗೆ ಅರ್ಪಣೆ ಮಾಡಿದಾಂಗೆ ಆವ್ತು. ಇದರಿಂದ ಅಸುರ ದಾನವ ದೈತ್ಯರು ಸಂತುಷ್ಟರಾವ್ತವು ಹೇಳಿರೆ ದುಷ್ಟ ಗುಣ, ವೃತ್ತಿ ನಾಶ ಆವ್ತು. ಲೋಹದಾನ – ಲೋಹ ಆಯುಧಂಗಳ ಸಂಕೇತ. ಯಮ° ಐದು ಕಠಿಣ ಆಯುಧಂಗಳಿಂದ ಯಮದೂತರ ಮೂಲಕ ಶಿಕ್ಷೆಯ ಕೊಡುಸುತ್ತ°. ಲೋಹ ಹೇಳಿರೆ ಕಠಿಣ ಹೃದಯದ ಸೂಚ್ಯ. ನಮ್ಮ ಹೃದಯ ಕಾಠಿಣ್ಯವ ಭಗವಂತಂಗೆ ಸಮರ್ಪುಸುವದು ಲೋಹದಾನ. ಇದರಿಂದ ಕರ್ಮದೊಳ ಇಪ್ಪ ಹಿಂಸಾ ಪ್ರವೃತ್ತಿ ನಾಶ ಆವ್ತು. ಸುವರ್ಣದಾನ – ಆಭರಣ ಸಂಕೇತ. ಚಿನ್ನವ ಅನೇಕ ಸಂಸ್ಕಾರದ ಮೂಲಕ ಶುದ್ಧ ಗೊಳುಸುವದು. ಹಾಂಗೇ ಅನೇಕ ವಿವಿಧ ಬೇಧಂಗಳಿಂದ ಮುಕ್ತಿಹೊಂದಿದ ನಮ್ಮ ನಿಷ್ಕಲ್ಮಶ ಮನಸ್ಸಿನ ಭಗವಂತಂಗೆ ಅರ್ಪುಸುವದು. ಕಾರ್ಪಾಸ (ಹತ್ತಿಯ ವಸ್ತುಗೊ) ದಾನ – ವಸ್ತ್ರ ಜೀವಿಯ ಆವರಿಸಿಪ್ಪ ಮೋಹದ ಸಂಕೇತ. ಮೋಹತ್ಯಾಗ ಮಾಡಿ ಮೋಕ್ಷವ ಬಯಸುವದೇ ವಸ್ತ್ರ ದಾನದ ಸಂಕೇತ. ಮೋಕ್ಷಕ್ಕೆ ಕರಕ್ಕೊಂಡು ಹೋಪದು ಯಮದೂತರಲ್ಲ ಬದಲಾಗಿ ದೇವದೂತರು. ಹಾಂಗಾಗಿ ಉಪ್ಪು, ವಸ್ತ್ರ ದಾನಂಗಳಿಂದ ಯಮದೂತರ ಭಯ ಇಲ್ಲೆ. ಲವಣ ದಾನ – ಷಡ್ರಸಂಗಳಲ್ಲಿ ಒಂದಾದ ಉಪ್ಪು, ನಾಲಗಗೆ ಬಿಡ್ಳೆ ಅತೀ ಕಷ್ಟವಾದ ರುಚಿ – ಉಪ್ಪು. ಇದು ಇಂದ್ರಿಯ ಚಪಲತೆಯ ಸಂಕೇತ. ಸಪ್ತಧಾನ್ಯಂಗಳ ದಾನ – ಶರೀರದ ಸಪ್ತಧಾತುಗೊಕ್ಕೆ ಪುಷ್ಟಿ ಕೊಡುವ ಆಹಾರವೇ ಸಪ್ತಧಾನ್ಯಂಗೊ. ಶರೀರ ಮೋಹದ ಸಂಕೇತ. ಹೀಂಗೆ ಪ್ರತಿಯೊಂದು ವಿಷಯಲ್ಲಿಯೂ ಒಳಮರ್ಮ ಇದ್ದು ಹೇಳ್ವದರ ನಾವು ಅತೀ ಅಗತ್ಯವಾಗಿ ಗಮನಿಸೆಕ್ಕಾದ ವಿಷಯವಾಗಿದ್ದು.
ಭೂದಾನದ ವಿಚಾರಲ್ಲಿ ‘ಗೋಚರ್ಮ’ ಹೇಳ್ವ ವಿಷಯ ಮಹತ್ವವಾದ್ದು. ನೂರು ದನಂಗೊ ಕಂಜಿ ಸಮೇತ ಮತ್ತು ಒಂದು ಎತ್ತು ಅಡ್ಡಿಯಿಲ್ಲದ್ದೆ ವಾಸಕ್ಕೆ ಯೋಗ್ಯವಾದ ವಿಸ್ತಾರ ಪ್ರದೇಶವ ‘ಗೋಚರ್ಮ’ ವ್ಯಾಪ್ತಿಯ ಪ್ರದೇಶ ಭೂಮಿ ಹೇಳಿ ಹೇಳುವದು. ಅಳತೆ ಲೆಕ್ಕಲ್ಲಿ ನೋಡಿರೆ ಹತ್ತು ಮೊಳದ ಗಳುವಿಂದ ಅಳವ ಹದಿನೈದು ಚದರ ಅಳತೆ ಹೇಳಿ ಹೇಳಿದ್ದವು. ‘ಸಾಯಿಮೃತಾಸಾರ’ಲ್ಲಿ ಹೇಳಿದ್ದವು – ಈ ದೇಹವೇ ಒಂದು ಕ್ಷೇತ್ರ (ಭೂಮಿ). ಅದರ ಕ್ಷೇತ್ರಪಾಲನೇ ಜೀವಿ.  ದೇಹವೇ ಆನು ಹೇಳ್ವ ಭಾವನೆಯ, ದೇಹಾಭಿಮಾನವ ದೂರ ಮಾಡುವದೇ ಭೂದಾನದ ಸಂಕೇತ. ಪಶುಪತಿ ಹೇಳಿರೆ ಪಶುಗಳ ಅಧಿಪನಾಗಿ ಗೋಪಾಲನೂ ಅಪ್ಪು ಪಶು (ಜೀವಿ)ಗಳ ಅಧಿಪನಾದ ಪಶುಪತಿಯೂ ಅಪ್ಪು. ಅಂತಹ ಜೀವರುಗಳ ಪಾಲುಸುವವನಲ್ಲಿ, ಪರಮಾತ್ಮನಿಂದ ಬೇರೆಯಾದ ಜೀವ ತಾನು ಹೇಳಿ ಅಹಂಕಾರ ಜೀವವ ತ್ಯಾಗ ಮಾಡುವದೇ ಗೋದಾನದ ಗೂಢಾರ್ಥಲ್ಲಿ ಒಂದು.
ಇನ್ನು ದಾನಲ್ಲಿ ಸತ್ವ, ರಜ, ತಮ ಹೇಳಿ ಮೂರು ವಿಧವಾದ ಗುಣಂಗಳ ಬಗ್ಗೆ ಭಗವದ್ಗೀತೆಲಿ ಭಗವಂತ° ಪ್ರತ್ಯೇಕವಾಗಿ ಹೇಳಿದ್ದರ ನಾವಿಲ್ಲಿ ನೆಂಪುಮಾಡಿಗೊಂಬಲಕ್ಕು. ದಾನವ ದೇಶ, ಕಾಲ, ಪಾತ್ರಂಗಳ ಅರ್ತು ಕೊಡೆಕು ಹೇಳ್ವದು ಬಹುಮುಖ್ಯ ವಿಷಯ. ಭಗವದುನುಗ್ರಹವ ಬಯಸಿ ಮಾಡುವದು- ಸಾತ್ವಿಕ ದಾನ, ಪ್ರತ್ಯುಪಕಾರ ಬಯಸಿ ಅಥವಾ ಪ್ರತಿಷ್ಥೆಗಾಗಿ ಮನಸ್ಸಿಲ್ಲಿ ಕ್ಲೇಶವ ಬಯಸಿ ಕೊಡುವ ದಾನ- ರಾಜಸ, ಸತ್ಕಾರ ಮಾಡದ್ದೆ ಕೇವಲ ತಿರಸ್ಕಾರ ಭಾವಂದ ಮಾಡುವ ದಾನ- ತಾಮಸ.
ಇನ್ನು ಬ್ರಾಹ್ಮಣ° ಹೇದು ವೇದ ಪುರಾಣಂಗಳಲ್ಲಿ ಹೇಳಿಪ್ಪದು ಜಾತಿಸೂಚಕವಾಗಿ ಅಲ್ಲ. ಬ್ರಹ್ಮನಿಷ್ಥಾಪರನಾಗಿಪ್ಪವ ಯಾವನೇ ಆದರೂ ಬ್ರಾಹ್ಮಣ ಎನುಸುತ್ತು. ಶೂದ್ರ ಕುಲಲ್ಲಿ ಹುಟ್ಟಿ ಬ್ರಾಹ್ಮಣತ್ವ ಪಡದ ಅನೇಕ ಉದಾಹರಣೆಗೊ ಪುರಾಣಂಗಳಲ್ಲಿ ಉಲ್ಲೇಖಿತವಾಗಿದ್ದು.
ಇನ್ನಷ್ಟು ವಿಚಾರಂಗಳ ಮುಂದಾಣ ಭಾಗಲಿ ಚಿಂತನೆ ಮಾಡುವೋ. ಎಲ್ಲೋರ ಮನಸ್ಸೂ ಭಗವದ್ ಪ್ರಜ್ಞೆಯತ್ತ ಕೇಂದ್ರೀಕೃತವಾಗಲಿ. ಹರೇ ರಾಮ.]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಇಂದ್ರಾಣ ಕಾಲಲ್ಲಿ ಗೋದಾನ ಮಾಡುವದು ಸಾಮಾನ್ಯ ಜನರಿಂಗೆ ಕಷ್ಟವಾದ ಕೆಲಸವಾದ್ದರಿಂದ ನಮ್ಮ ಮಠಲ್ಲಿ ಗೋದಾನಕ್ಕೆ ವ್ಯವಸ್ತೆ ಮಾಡಿದ್ದವು. ಆಸ್ಥಿಕರು ಇದರ ಸದ್ಬಳಕೆ ಮಾಡಿಕೊಳ್ಳೇಕ್ಕಾಗಿ ಪ್ರಾರ್ಥನೆ.ಹರೇ ರಾಮ.

  [Reply]

  VA:F [1.9.22_1171]
  Rating: +2 (from 2 votes)
 2. durgasharma korikkar

  ಒಂದೊಂದು ದಾನದ ಒಳಮರ್ಮ ಒಂದೊಂದು…ಅಲ್ಲದೋ…?ಎಲ್ಲರೂ ತಿಳ್ಕೊಳೆಕ್ಕಾದ ವಿಷಯ.ಮನಸ್ಸಿಂಗೆ ಒಳ್ಳೆತ ನಾಟಿತ್ತು..!!ಹರೇ ರಾಮ.

  [Reply]

  VA:F [1.9.22_1171]
  Rating: +2 (from 2 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಯಾವ ಯಾವ ದಾನಂಗಕ್ಕೊ ಯಾವ ಯಾವ ಫಲ ಹೇಳ್ತರ ತುಂಬಾ ವಿವರವಾಗಿ ಕೊಟ್ಟ ಉಪಯುಕ್ತ ಮಾಹಿತಿ.
  ಆತ್ಮ ಪರಮಾತ್ಮ ಬಗ್ಗೆ ತಿಳಿಯದ್ದ ಮರಂಗೊ, ಪಶು ಪಕ್ಷಿಗೊ ತಮ್ಮಲ್ಲಿ ಇಪ್ಪದರ ನಿಸ್ವಾರ್ಥಂದ ದಾನ ಮಾಡ್ತಾ ಇಪ್ಪಗ, ವಿವೇಚನೆ ಮಾಡ್ಲೆ ಬುದ್ಧಿ ಶಕ್ತಿ ಇಪ್ಪ ನಾವು ನಮ್ಮ ಶಕ್ತಿಗೆ ಎಡಿಗಾದಷ್ಟು ದಾನ ಮಾಡುವದು ನಮ್ಮ ಕರ್ತವ್ಯ ಕೂಡಾ.
  ಒಳ್ಳೆ ಚಿಂತನೆಗೆ ಹಚ್ಚುವ ಈ ಲೇಖನ ಮಾಲೆ ಕೊಡ್ತಾ ಇಪ್ಪ ಚೆನ್ನೈ ಭಾವಯ್ಯಂಗೆ ನಮೋ ನಮಃ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಡೈಮಂಡು ಭಾವವಾಣಿ ಚಿಕ್ಕಮ್ಮವಿಜಯತ್ತೆಸರ್ಪಮಲೆ ಮಾವ°ಶುದ್ದಿಕ್ಕಾರ°ಹಳೆಮನೆ ಅಣ್ಣಗೋಪಾಲಣ್ಣಶ್ರೀಅಕ್ಕ°ಅನು ಉಡುಪುಮೂಲೆಪೆರ್ಲದಣ್ಣಬೋಸ ಬಾವದೇವಸ್ಯ ಮಾಣಿಮಾಲಕ್ಕ°ಕಳಾಯಿ ಗೀತತ್ತೆವೇಣಿಯಕ್ಕ°ನೀರ್ಕಜೆ ಮಹೇಶಶಾ...ರೀಮುಳಿಯ ಭಾವವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣಚೆನ್ನೈ ಬಾವ°ರಾಜಣ್ಣಬಟ್ಟಮಾವ°ಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ