ನಾವು ಎಂತಕೆ ವೃಕ್ಷಂಗಳ ದಿವ್ಯ ಭಾವನೆಂದ ಪೂಜಿಸುತ್ತು?

July 14, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೂರ್ವ ಕಾಲಂದಲೂ ನಾವು ಭಾರತೀಯರು ಗಿಡ ಮರಂಗಳ ಹೂ ವನಸ್ಪತಿಗಳನ್ನೂ ಪವಿತ್ರ ಹೇಳಿ ಭಾವಿಸಿ ಪೂಜಿಸುತ್ತು.
ಇದು ಭಾರತೀಯ ಸಂಸ್ಕೃತಿಯ ಸೂಕ್ಷ್ಮತೆ, ಮುಂದಾಲೋಚನೆ, ಚಿತ್ತ ಶುದ್ಧಿ ವಿಚಾರವ ಎತ್ತಿ ತೋರುಸುತ್ತು.

ನಮ್ಮ ಜೀವನಾಧಾರವಾಗಿಪ್ಪ ಪರಮಾತ್ಮ  ಸರ್ವಾಂತರ್ಯಾಮಿ. ಅವ ನಮ್ಮಲ್ಲಿ ಮಾತ್ರವಲ್ಲ ಪ್ರತಿಯೊಂದು ಜೀವ, ಸಸ್ಯ, ವಸ್ತು ವಾ ಅಣುವಿಲ್ಲಿಯೂ ಇದ್ದ ಹೇಳಿ ನಮ್ಮ ನಂಬಿಕೆ.
ಆದ್ದರಿಂದಲೇ ಎಲ್ಲವನ್ನೂ ನಾವು ಪವಿತ್ರ , ಪೂಜನೀಯ ಭಾವಂದ ನೋಡಿಗೊಳ್ಳುತ್ತು. ಮನುಷ್ಯ ತನ್ನ ಜೀವನ ನಿರ್ವಹಣಗೆ ಪ್ರಕೃತಿಲಿಪ್ಪ ಇತರ ಜೀವ ವಸ್ತು ಸಸ್ಯಂಗಳನ್ನೂ ಅನಿವಾರ್ಯವಾಗಿ ಅವಲಂಬಿಸಿರ್ತ. ಪ್ರಕೃತಿಲಿಪ್ಪ ಈ ವಿಶಷಂಗೋ  ನವಗೆ ಉಸಿರಾಟಕ್ಕೆ ಆಮ್ಲಜನಕ , ಆಹಾರ , ವಸ್ತ್ರ, ವಸತಿ , ಔಷಧಿ ಒದಗುಸುತ್ತು. ಪರಿಸರದ ಅಂದವ ಕಾಪಾಡುತ್ತು.
ಇತರರ ಜೀವನಕ್ಕಾಗಿ ಅವ್ವು ಅವುಗಳ ಜೀವನ ತ್ಯಜಿಸುತ್ತು. ಸರಳವಾಗಿ ಹೇಳ್ತರೆ, ತ್ಯಾಗಕ್ಕೆ ಪ್ರತೀಕ – ಗಿಡ ಬಳ್ಳಿ ಮರ. ಮಾವಿನ ಹಣ್ಣಿನ ಮರಕ್ಕೆ ಕಲ್ಲು ಇಡ್ಕಿರೆ ಸಿಕ್ಕುದು ನವಗೆ ಮಾವಿನಹಣ್ಣೆ.
ನಿಜಕ್ಕೆ ನೋಡುತ್ತರೆ ಮನುಷ್ಯ ಸಂಕುಲ ಇಲ್ಲಿ ಹುಟ್ಟೆಕ್ಕಾರೆ ಮದಲೇ ಇಲ್ಲಿ ಸಸ್ಯ ಸಂಕುಲವೇ ದಟ್ಟವಾಗಿ ಇತ್ತು.

ಮನುಷ್ಯನ ಸ್ವಾರ್ಥಕ್ಕಾಗಿ ಪ್ರಾಣಿ ಸಸ್ಯವರ್ಗ ನಾಶ ಆತು. ನವಗೆ ಜೀವನಾಧಾರಕ್ಕೆ ಯಾವುದು ಪರೋಕ್ಷ ಮುಖ್ಯವೋ ಅದರ ಸರ್ವ ರೀತಿಲಿ ಕಾಪಾಡೆಕ್ಕಾದ್ದು ಮುಖ್ಯ.
ಆದ್ದರಿಂದಲೇ ನಮ್ಮ ಭಾರತಲ್ಲಿ ನಾವು ಪ್ರಕೃತಿಲಿಪ್ಪ ಹೂ ಬಳ್ಳಿ ಮರಂಗಳ ಪರಮಾತ್ಮ ಹೇಳಿ  ಪ್ರೀತಿ ಗೌರವಂದ ಪೂಜಿಸುತ್ತು.

ಕಾರಣಾಂತರಂದ ನವಗೆ ಯಾವುದಾದರೊಂದು ಮರವ ಕಡಿಯೆಕ್ಕಾಗಿ ಬಂದರೆ ಅಂತಹುದೇ ಹತ್ತು ಮರಂಗಳ ನೆಡೆಕು ಹೇಳಿ ತತ್ವಶಾಸ್ತ್ರ ಸಾರುತ್ತು.
ನಮ್ಮ ಆಹಾರ, ಇಂಧನ, ವಸತಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಿ ಮಿತವ್ಯಯ ಮಾಡಿಗೊಂಡು  ಈ ಸಂಪತ್ತು ನಾವು ಕಾಪಾಡೆಕು.
ಹಾಂಗೆಯೇ, ಒಂದು ಮರವ ಕಡಿಯೆಕ್ಕಾರೆ ‘ಸೂನಾ’ ಎಂಬ ಪಾಪ ಅಂಟಲಾಗ ಹೇದು ಅದರತ್ರೆ ಕ್ಷಮೆ ಯಾಚಿಸೆಕ್ಕಡ. ಅತ್ಯದ್ಭುತ ಓಷಧೀಯ ಗುಣ ಇಪ್ಪ ಮರಂಗಳ ನಾವು ಹಾಂಗಾಗಿ ಅತಿ ಭಕ್ತಿ ಭಾವಂದ ಪೂಜಿಸೆಕ್ಕಾದ್ದು ನಮ್ಮ ಧರ್ಮ. ದೈವಾಂಶ ಸಂಭೂತರೂ ಕೂಡ ಭಗವಂತನ ಪ್ರೀತ್ಯರ್ಥವಾಗಿ ಮರ ಗಿಡ ಗಳಾಗಿ ಹುಟ್ಟುತ್ತವಡ. ಮರಕ್ಕೂ ಜೀವ ಇದ್ದು. ಮರಲ್ಲಿಯೂ ಪರಮಾತ್ಮ ಇದ್ದ ಹೇಳಿ ಮನಗಂಡು ನಾವೂ ಮರಂಗಳ ಪೂಜ್ಯ ಭಾವಂದ ನೋಡಿಗೊಂಬೊ. ಆ ಪರಮಾತ್ಮನ ಪ್ರೀತಿಗಾಗಿ ನಾವೂ ಗಿಡ ಮರಂಗಳ ನೆಟ್ಟು ಬೆಳೆಸುವೋ.

ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ |
ಅಗ್ರತಃ ಶಿವ ರೂಪಾಯ ವೃಕ್ಷ ರಾಜಾಯ ತೇ ನಮಃ ||

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ವೃಕ್ಷಂಗಳ ದಿವ್ಯ ಭಾವನೆಂದ ಪೂಜಿಸುತ್ತು?, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಒಳ್ಳೇದು
  ‘ಧರ್ಮೋ ರಕ್ಷತಿ ರಕ್ಷಿತಃ’ ಹೇಳ್ತ ಹಾ೦ಗೆ ಪ್ರಕೃತಿಯನ್ನು ನಾವು ರಕ್ಷಿಸಿರೆ ನಮ್ಮ ರಕ್ಷಿಸುಗು. ನಮ್ಮ ಭಾರತಲ್ಲಿ ಇಪ್ಪ ಸಸ್ಯಸ೦ಕುಲದ ಮಹತ್ವ ನವಗೆ ಗೊ೦ತಾಯಿದದಿಲ್ಲೆ. ಕಣ್ಣು ಇಪ್ಪಗ ಕಣ್ಣಿನ ಬೆಲೆ ಗೊ೦ತಾಗ ಹೇಳ್ತ ಹಾ೦ಗೆ.
  ಒಪ್ಪ೦ಗೊ

  [Reply]

  VA:F [1.9.22_1171]
  Rating: +1 (from 1 vote)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಹೀಂಗೆ ಪೂಜೆ ಮಾಡದ್ದೆ ಮರದ ಬುಡಕ್ಕೆ ಮಂಗಳಾರತಿ ಮಾಡ್ಲೆ ಹೆರಟದಕ್ಕೆ ಈಗ ನಮ್ಮ ಪರಿಸರವೇ ನಾಶದ ಅಂಚಿಂಗೆ ಹೋವುತಾ ಇದ್ದು. ಹೀಂಗೆ ನಾಶ ಮಾಡ್ಲೆ ಹೆರಟದಕ್ಕೆ ‘ಗ್ಲೋಬಲ್ ವಾರ್ಮಿಂಗ್’ ನ ಭೂತ ನವಗೆ ಸಿಕ್ಕಿದ “ಶಾಪ”. ಎಲ್ಲ ಸಸ್ಯ, ಮರಂಗಳ ಪೂಜಿಸಿ ಕಾಪಾಡುದು ನಮ್ಮೆಲ್ಲರ ಕರ್ತವ್ಯ ಆಯೆಕ್ಕು.

  [Reply]

  VN:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘು ಮುಳಿಯ

  ವರುಷ೦ಗಳಿ೦ದ ” ಬನ” ಹೇಳಿ ಪೂಜ್ಯ ಭಾವನೆಲಿ ಪ್ರಕೃತಿಯ ಆರಾಧನೆ ಮಾಡಿಗೊ೦ಡು ಬಯಿ೦ದವು,ನಮ್ಮ ಹಿರಿಯರು.
  ಕಾಡುಗಳ ಕಡುದು ನಾಡು ಮಾಡೊದೇ ಬೆಳವಣಿಗೆಯ ಸ೦ಕೇತ ಹೇಳುವ ಧೂರ್ತತೆ ನಮ್ಮ ಮನಸ್ಸಿನೊಲ ಆಗಿ ಹೋಯಿದು.
  ವೃಕ್ಷಲ್ಲಿ ದೇವರ ಕ೦ಡು ನಮಸ್ಕರಿಸೆಕ್ಕು ಹೇಳುವ ಮನೋಭಾವವ ಸಕಲರೂ ಬೆಳೆಶುಲೆ ಈ ಬರಹ ಸಹಕಾರಿಯಾಗಲಿ.
  ಎಡಿಗಾದಷ್ಟು ಸೆಸಿಗಳ ನೆಟ್ಟು ಬೆಳೆಶಿ ಪುಣ್ಯ ಕಟ್ಟಿಗೊ೦ಬ°,ಮು೦ದಾಣ ಪೀಳಿಗೆಗೆ ಬದುಕ್ಕುಲೆ ಒಳ್ಳೆ ಪರಿಸರವ ನಿರ್ಮಾಣ ಮಾಡುವ°.
  ದಿನನಿತ್ಯ,ಮರದ ಉತ್ಪನ್ನ೦ಗಳ ಬಳಕೆಯ ( ಕಾಗದ ಇತ್ಯಾದಿ) ಕಡಮ್ಮೆ ಮಾಡೊದರ ಮೂಲಕ ಪರಿಸರದ ರಕ್ಷಣೆಯ ಮಾಡುವಲ್ಲಿ ಅಳಿಲ ಸೇವೆ ಸಲ್ಲುಸುಲೆ ಎಡಿಗು.
  ಚೆನ್ನೈ ಭಾವ೦ಗೆ ಧನ್ಯವಾದ,ಒಳ್ಳೆ ಚಿ೦ತನೆಗೆ.

  [Reply]

  VA:F [1.9.22_1171]
  Rating: +1 (from 1 vote)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಮಾರ್ಗ ಅಗಲೀಕರಣ ಹೇಳಿ ಎಷ್ಟು ಮರಂಗಳ ಕಡುದು ಹಾಕುತ್ತಾ ಇದ್ದವು. ಅವಕ್ಕೆ ಅಂಬಗ ಎಷ್ಟು “ಸೂನಾ” ಪಾಪ ಅಂಟಿರ.
  ಇವಕ್ಕೆಲ್ಲ ಏವಗ ಬುದ್ದಿ ಬತ್ತೋ ದೇವರಿಂಗೇ ಗೊಂತು. ಮರ ಕಡುದ್ದಕ್ಕೆ ಎರಡು ಸೆಸಿ ನೆಡಕಾದ್ದು ನಿಜ ಭಾವಯ್ಯ. ಆದರೆ ಎಲ್ಲಿ ನೆಡುತ್ತದು, ಜಾಲಿಂಗೆಲ್ಲ ಸಿಮೆಂಟು ಹಾಕಿದ್ದಾನೆ ? ಇಂಟರ್ ಲಾಕ್ ಹಾಕಿ ಲಾಕು ಮಾಡಿ ಆಯಿದು. ನಿಂಗಳ ಕಳಕಳಿಗೆ ಎನ್ನದುದೆ ಒಮ್ಮತ ಇದ್ದು. ಅದಕ್ಕೊಂದು ಒಪ್ಪ.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಬೊಳು೦ಬು ಮಾವನ ಒಪ್ಪ ನೋಡಿಯಪ್ಪಗ ನೆ೦ಪಾತು.
  ಆಸ್ಟ್ರೇಲಿಯಾಲ್ಲಿ ಮರ೦ಗಳ ಮುಟ್ಟುಲೆ ಹೋವುತ್ತವಿಲ್ಲೆ.ಮನೆ ಕಟ್ಟೊಗ,ಮಾರ್ಗ ಅಗಲ ಮಾಡೊಗ ಮರ೦ಗಳ ಬಿಡುತ್ತವು. ಕೆಲವು ಮಾರ್ಗ೦ಗಳ ಮಧ್ಯಲ್ಲಿ ಮರ೦ಗೊ ವೇಗತಡೆಯ ಹಾ೦ಗೆ ಇರ್ತು.(ಆದರೆ ಅಲ್ಲಿ ಕಾಡ್ಗಿಚ್ಚಿಲಿ ಸುಮಾರು ಹಸಿರು ನಾಶ ಆಯಿದು,ಅದು ಬೇರೆ ಕತೆ.)
  ಅಲ್ಯಾಣ ಕಾನೂನು ಹಾ೦ಗಿದ್ದು,ಇಲ್ಯಾಣ ಕಾನೂನು ಎಲ್ಲಿದ್ದು?
  ಬೆ೦ಗಳೂರಿನ ಕತೆ ನೋಡಿ,ಮೈಸೂರು ರಸ್ತೆಯ ಎರಡೂ ಹೊಡೆಲಿದ್ದ ಮರ೦ಗಳ ಅಗಲೀಕರಣದ ನೆವಲ್ಲಿ ಕಡುದು ವರುಷ ಒ೦ದರ ಮೇಲಾತು,ಮಾರ್ಗ ಅಗಲ ಅಪ್ಪದು ಬಿಡಿ,ಮದಲಿದ್ದ ಮಾರ್ಗವೂ ಮಾಯ ಆಯಿದು.ಮರ ಕಡುದು ಮಾರುವ ಸ್ವಾರ್ಥಿಗಳ ಕೈಲಿ ಅಧಿಕಾರ ಇಪ್ಪನ್ನಾರ ಇದೇ ಗತಿ..

  [Reply]

  VA:F [1.9.22_1171]
  Rating: +1 (from 1 vote)
 5. ಸುವರ್ಣಿನೀ ಕೊಣಲೆ
  Suvarnini Konale

  ಲೇಖನ ಲಾಯ್ಕಿದ್ದು. ಅಪ್ಪು, ನವಗೆ ಪೂಜ್ಯ ಭಾವ ಇರೆಕಾದ್ದು ಅಗತ್ಯ, ಆದರೆ ಅದು ಮೂಢ ನಂಬಿಕೆ ಅಪ್ಪಲಾಗ. ಸಮಾಜಲ್ಲಿ ಜನಂಗೊಕ್ಕೆ ಇರೆಕಾದ ನಂಬಿಕೆಂದ ಹೆಚ್ಚು ಮೂಢನಂಬಿಕೆಗೊ ಇದ್ದು..ಇದರಿಂದಾಗಿಯೂ ಹಲವು ತೊಂದರೆಗೊ ಆವ್ತು.

  [Reply]

  VA:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಾವು ಇಪ್ಪದು ಈ ಪ್ರಕೃತಿಂದಾಗಿ ಹೇಳಿ ತಿಳ್ಕೊಂಡರೆ ಎಲ್ಲದಕ್ಕೂ ಮಿತವ್ಯಯ ಮಾಡ್ಲೆ ಮನಸ್ಸು ಬಕ್ಕು.
  ಸ್ವಾರ್ಥ ತುಂಬಿ ಅಪ್ಪಗ ಎಲ್ಲವೂ ತನಗೆ ಮಾತ್ರ ಹೇಳಿ ಸರ್ವವೂ ನಾಶ ಆಕ್ಕು.
  “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಹೇಳ್ತ ಹಾಂಗೆ, ಒಂದು ಸೆಸಿ ದೊಡ್ಡ ಅಗಿ ಮರ ಆಯೆಕ್ಕಾರೆ ಎಷ್ಟು ವರ್ಷ ಬೇಕು. ಆದ್ರ ನೆಲಸಮ ಮಾಡ್ಲೆ ಯಂತ್ರಂಗೊಕ್ಕೆ ನಿಮಿಷಂಗೊ ಸಾಕು.
  ಇಲ್ಲಿ ನಾವು ನಾಶ ಮಾಡುವದು ಮರ ಮಾತ್ರ ಅಲ್ಲ, ನಮ್ಮ ಬದುಕು ಕೂಡಾ

  [Reply]

  VA:F [1.9.22_1171]
  Rating: 0 (from 0 votes)
 7. ಒಪ್ಪಣ್ಣ

  ಗೆಡುಮರಂಗಳ ಮೇಗೆ ನಮ್ಮೋರಿಂಗೆ ಇದ್ದ ಪ್ರೀತಿ ಇದರ್ಲೇ ಕಾಣ್ತದಾ –
  ಅದು ನಮ್ಮ ಸಂಸ್ಕಾರ.

  ಒಳ್ಳೆ ಕ್ರಮದ ಬಗ್ಗೆ ಒಳ್ಳೆ ರೀತಿಲಿ ಹೇಳ್ತ ’ಎಂತಕೆ’ ಇನ್ನೂ ಬರಳಿ.
  ಅದು ನಿಂಬದೆಂತಕೆ? ಅಲ್ಲದೋ? :-)

  [Reply]

  VA:F [1.9.22_1171]
  Rating: +1 (from 1 vote)
 8. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರಿಂಗೂ ಧನ್ಯವಾದ. ನಿಂಗೊಲ್ಲಾ ಇಟ್ಟು ಒಪ್ಪ ಹೇಳುವಾಗ ಎಂತಕೆ ಈ ‘ಎಂತಕೆ’ ನಿಲ್ಲೇಕು ಹೇಳಿಯೂ ಆವ್ತು. ಅಪ್ಪು, ಮುಂದುವರಿಯಲಿ. ನಮ್ಮ ನಿತ್ಯ ಜೀವನಲ್ಲಿ ನಮ್ಮ ಕಾಲಡಿಲಿಯೇ ಬಹಳಷ್ಟು ಎಂತಕೆ ಬಾಕಿ ಇದ್ದು. ಎಂತಕೆ ಒಂದೊಂದೇ ಹೆರ್ಕಿ ನೋಡ್ಲಾಗ. ಬನ್ನಿ, ನಿಂಗಳತ್ರೆ ಇಪ್ಪದೂ ಎಂತಕೆ ಸೇರ್ಲಾಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಅಕ್ಷರ°ಜಯಶ್ರೀ ನೀರಮೂಲೆಬೋಸ ಬಾವಡಾಗುಟ್ರಕ್ಕ°ಸುವರ್ಣಿನೀ ಕೊಣಲೆಬೊಳುಂಬು ಮಾವ°ಅಜ್ಜಕಾನ ಭಾವಪವನಜಮಾವಕಜೆವಸಂತ°ಡಾಮಹೇಶಣ್ಣಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕಸುಭಗವೇಣೂರಣ್ಣಶಾ...ರೀಪೆಂಗಣ್ಣ°ಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ಕೊಳಚ್ಚಿಪ್ಪು ಬಾವಸಂಪಾದಕ°ಕಳಾಯಿ ಗೀತತ್ತೆದೇವಸ್ಯ ಮಾಣಿಜಯಗೌರಿ ಅಕ್ಕ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ