ಹದಿನಾರು ಸಂಸ್ಕಾರಂಗೊ: ಎಂತರ – ಎಂತಕೆ?

September 1, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ವಿನಾಯಕ ಚತುರ್ಥಿ ಹಬ್ಬದ ಶುಭಾಶಯಗಳು.

ಮನಸಾ ಶ್ರೀ ಗುರು ಹಿರಿಯರಿಂಗೆ ಪೊಡಮಟ್ಟು, ಶ್ರೀ ಗಣೇಶನ ನುತಿಸಿ, ವಾಕ್ದೇವಿಗೆ ನಮಿಸಿ, ಸಕಲ ದೇವರುಗಳ ಭಕ್ತಿಲಿ ನಂಬಿ ಬರವದಾವ್ತು ಇದೀ ಕಿರು ಪ್ರಯತ್ನ –

ಕೆಲವು ತಿಂಗಳಿಂದ ಇಷ್ಟನ್ನಾರ ನಾವು ಇಲ್ಲಿ ಹಲವು ‘ಎಂತಕೆ’ಗಳ ಬಗ್ಗೆ ದೃಷ್ಟಿ ಹಾಯಿಸಿತ್ತು ಅಪ್ಪೋ.
ಇನ್ನು ಈಗ ಕೆಲವು ‘ಎಂತರ – ಎಂತಕೆ’ ಹೇಳಿ ಅರ್ತುಗೊಂಬಲೆ ಪ್ರಯತ್ನ ಪಡುವೊ.

ಮನುಷ್ಯನ ವೃತ್ತಿ ಧರ್ಮಕ್ಕನುಗುಣವಾಗಿ ಚಾತುರ್ವರ್ಣ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಭಗವಂತನಿಂದ ಆದೇಶ ಆದ್ದು ಹೇಳಿ ಶ್ರೀಮದ್ ಭಗವದ್ಗೀತೆಲಿ ಹೇಳಿದ್ದು.
ಚಾತುರ್ವರ್ಣ್ಯಂ ಮಯಾ ಸೃಷ್ಟಮ್  ಗುಣ ಕರ್ಮ ವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಂ ||

ಒಂದು ಸಮಾಜದ ಸರ್ವತೋಮುಖ ಸಮಾನ ಅಭಿವೃದ್ಧಿಗೆ ಇದು ಅತೀ ಪ್ರಾಮುಖ್ಯ ಕೂಡ (ಪುರುಷ ಸೂಕ್ತ : ಬ್ರಾಹ್ಮಣೋಸ್ಯ ಮುಖ ಮಾಸೀತ್ , ಬಾಹೂ ರಾಜನ್ಯ ಕೃತಃ , ಊರೂತದಸ್ಯ  ಯದ್ವೈಶ್ಯಃ, ಪದ್ಭ್ಯಾಗುಂ ಶೂದ್ರೋ ಅಜಾಯತ).
ಇಲ್ಲಿ ತಾನು ಮೇಲು – ಕೀಳು ಹೇಳ್ವ ಸಂಕುಚಿತ ಭಾವನೆ ಜನರ ಮೌಢ್ಯವೇ ಸರಿ. ದೇಹದ ಪ್ರತಿಯೊಂದು ಭಾಗವೂ ಎಷ್ಟೊಂದು ಪ್ರಾಮುಖ್ಯವೋ ಹಾಂಗೇ ಇದುದೇ.
ಹುಟ್ಟಿಲ್ಲಿ ಪ್ರತಿಯೊಬ್ಬನೂ ಮನುಷ್ಯನೇ. ವೃತ್ತಿ ಧರ್ಮದ ಅರ್ಹತೆ ಮತ್ತು ಶಕ್ತಿ – ತೇಜಸ್ಸು ಅಭಿವೃದ್ಧಿಗಾಗಿ (ಬ್ರಹ್ಮತೇಜೋಭಿವೃದ್ಧ್ಯರ್ಥಂ) ಬ್ರಾಹ್ಮಣಂಗೆ ಸಂಸ್ಕಾರ ಹೇಳಿ ಭಗವಂತನ ಉಪದೇಶ.
ಜನ್ಮನಾ ಜಾಯತೇ ಜಂತುಃ | ಕರ್ಮಣಾ ಜಾಯತೇ ದ್ವಿಜಃ ||
ವೇದಾಧ್ಯಯನತೋ ವಿಪ್ರಃ | ಬ್ರಹ್ಮವಿತ್ ಬ್ರಾಹ್ಮಣೋ ಸ್ಮೃತಃ ||

ಗರ್ಭಧಾರಣೆಂದ ವಿವಾಹದವರೇಂಗೆ ಅಪ್ಪ, ಅಬ್ಬೆ, ಕುಲಪುರೋಹಿತರು ಮಗುವಿಂಗೆ ಮುಂದೆ ಅವರಿಂದ ಸಾತ್ವಿಕ ಕೃತಿಗೊ ಉಂಟಾಯೆಕು ಹೇಳಿ ವೈದಿಕ ಪದ್ಧತಿಗನುಸಾರವಾಗಿ ಮಾಡುವ ಕರ್ಮವೇ (ವಿಧಿಯೇ) ಸಂಸ್ಕಾರ ಹೇಳಿ ಹೇಳ್ವದು.
ಇದರಲ್ಲಿ ಹದಿನಾರು (ಷೋಡಶ ಸಂಸ್ಕಾರ) ಪ್ರಮುಖ ಸಂಸ್ಕಾರಂಗೊ.
ಷೋಡಶ ಸಂಸ್ಕಾರ ಮಾಣಿಯಂಗೊಕ್ಕೆ ಮಾತ್ರ ಶಾಸ್ತ್ರ ವಿಹಿತ.  ಕೂಸುಗೊಕ್ಕೆ ಪಾಣಿಗ್ರಹಣ ಆಗದ್ದೆ ಕರ್ಮದ ಅಧಿಕಾರಲ್ಲಿ ಕರ್ತೃ ಸ್ಥಾನ ಇಲ್ಲದ ಕಾರಣ ಯೋಗ್ಯ ಕೆಲವೇ ಸಂಸ್ಕಾರಂಗೊ ಮಂತ್ರ ರಹಿತ ಹೇಳಿ ಶಾಸ್ತ್ರ ವಿಹಿತ.

ಸಂಸ್ಕಾರ ಒಂದು ಮೌಲ್ಯವರ್ಧಕ ಚಟುವಟಿಕೆ.
ಸಂಸ್ಕಾರ = ಸಮ್ + ಕೃ + ಘ್ಞ .
ಒಂದು ವಸ್ತುವಲ್ಲಿಪ್ಪ ಅವಗುಣಂಗಳ ತೊಳದು, ಶುದ್ಧಗೊಳುಸಿ, ಉತ್ತಮಗೊಳುಸಿ , ಅದಕ್ಕೆ ಚೇತನ, ಕಾಂತಿ, ತುಂಬಿಸಿ ಹೊಳಪು ನೀಡುವುದೇ ಸಂಸ್ಕಾರದ ಮೂಲ ಅರ್ಥ.
ಯಾವ ಕ್ರಿಯೆಂದ ಮನುಷ್ಯನ ಆಂತರಿಕ ದೋಷಂಗೊ ನಿವಾರಣೆ ಆಗಿ ಸದ್ಗುಣಂಗೊ ವಿಕಸಿಸಿ ಶಕ್ತಿ ಸಂವರ್ಧನೆ ಆವ್ತೋ ಅದು ಸಂಸ್ಕಾರ. ಸಂಸ್ಕಾರ ಕಲ್ಪನೆಯ ವಿಸ್ತಾರ, ಅವುಗಳ ವಿಷಯ ವಿವರವಾಗಿ ಕಂಡುಬಪ್ಪದು ‘ಗೃಹ್ಯಸೂತ್ರಲ್ಲಿ’. ಗೃಹ ಜೀವನಕ್ಕೆ ಸಂಬಂಧಪಟ್ಟ ಆಳವಾದ ಚಿಂತನೆ ಗೃಹ್ಯಸೂತ್ರಲ್ಲಿಪ್ಪದು.
ಮರಣೋತ್ತರ ಸಂಸ್ಕಾರಂಗೋ ದೈಹಿಕ ಸಂಸ್ಕಾರಕ್ಕೆ ಸಂಬಧಪಟ್ಟದಲ್ಲ. ಅದು ಔರ್ಧ್ವ ದೈಹಿಕ ಕ್ರಿಯೆಗೊ (ಅಂತ್ಯೇಷ್ಟಿ).

ಶರ್ಮಪ್ಪಚ್ಚಿಯ ರುದ್ರ ಗೀತೆ ಅನುವಾದ ಮತ್ತು ಎನ್ನ ‘ಎಂತಕೆ’ ಸರಣಿಗೆ ನಿಂಗೊ ಕೊಟ್ಟ ಪ್ರೋತ್ಸಾಹ ಎನಗೆ ಈ ಶುದ್ಧಿ ಬರವಲೆ ಉತ್ತೇಜಿಸಿತ್ತು.
ನಮ್ಮ ಕರ್ಮ ಸಂಸ್ಕಾರ ವಿಷಯಲ್ಲಿ ಆಳವಾದ ವಿಚಾರ ರಹಸ್ಯ ಅಡಗಿದ್ದು. ಪ್ರತಿಯೊಂದನ್ನೂ ದೀರ್ಘ ವಿಶ್ಲೇಷಣೆ ಇಲ್ಲಿ ಮಾಡ್ಳ ಕಷ್ಟ ಸಾಧ್ಯ, ಅಲ್ಲವೇ, ಮೆಗಾ ಧಾರವಾಹಿ ಮಾಡಿರೆ ನಿಂಗೊಗೂ ಕಿರಿಕಿರಿ.

ಆದ ಕಾರಣ ನಮ್ಮ ಸಂಸ್ಕಾರದ ಬಗ್ಗೆ ಕಿರು ಪರಿಚಯ, ಪಕ್ಷಿನೋಟ ಮಾಡುವ ಪ್ರಯತ್ನ ಇದು.
ಹಲವಾರು ಸಂಶಯಂಗೊ ನವಗೆ ಇದ್ದೇ ಇದ್ದು. ಪ್ರತಿಯೊಂದಕ್ಕೂ ಇಲ್ಲಿ ವಿವರುಸಲೆ ಎಡಿಯಾ. ಬೈಲಿಲಿ ಒಂದು ‘ಪ್ರಶ್ನೋತ್ತರ’ ಅಂಕಣ ಸುರುಮಾಡಿ, ವಿದ್ವಾಂಸರಿಂದ, ಅನುಭವಿಗಳಿಂದ ಬೈಲು ಬಂಧುಗಳ ಸಂಶಯಂಗೊಕ್ಕೆ ಉತ್ತರುಸುತ್ತ, ವಾರ ವಾರ ಪ್ರಕಟಮಾಡೆಕ್ಕು ಹೇಳಿ ಮತ್ತು ವೈದಿಕ ಪ್ರತಿಯೊಂದು ಸಂಸ್ಕಾರದ ಬಗ್ಗೆ  ವಿದ್ವಾಂಸರಿಂದ ಆಧಾರ ಸಹಿತ ಕಿರು ವಿವರಣೆ ಪ್ರವಚನ ರೂಪಲ್ಲಿ ಬೈಲಿಲ್ಲಿ ಪ್ರಕಟುಸುವ ಆಲೋಚನೆ ಇದ್ದು.

ಷೋಡಶ (16) ಸಂಸ್ಕಾರಂಗೊ:

 1. ಗರ್ಭಾಧಾನ (ಋತುಶಾಂತಿ)
 2. ಪುಂಸವನ (ಗರ್ಭ ಸೃಷ್ಟಿ)
 3. ಸೀಮಂತ
 4. ಜಾತಕರ್ಮ
 5. ನಾಮಕರಣ
 6. ನಿರ್ಗಮನ (ಮನೆಂದ ಕರಕ್ಕೊಂಡು ಹೋಪದು)
 7. ಅನ್ನಪ್ರಾಶನ
 8. ಕರ್ಣ ವೇಧನ
 9. ಚೌಲ (ಜೊಟ್ಟು ಮಡುಗುವುದು)
 10. ಉಪನಯನ
 11. ಚತುರ್ವೇದ ವ್ರತ
 12. ಚತುರ್ವೇದ ವ್ರತ
 13. ಚತುರ್ವೇದ ವ್ರತ
 14. ಚತುರ್ವೇದ ವ್ರತ (ಮಹಾನಾಮ್ನೀ ವ್ರತ)
 15. ಸಮಾವರ್ತನ
 16. ವಿವಾಹ

ಇಲ್ಲಿ ೧೧ ರಿಂದ ೧೪ ರ ತನಕ ಚತುರ್ವೇದ ವ್ರತ .

ಪ್ರತಿಯೊಂದು ಸಂಸ್ಕಾರಕ್ಕೂ ಒಂದೊಂದು ಸಮಯ (ವಯಸ್ಸು) ಹೇಳಿ ಇದ್ದು.
ಆಯಾ ಸಮಯಲ್ಲಿ ತಪ್ಪದೆ ಮಾಡೆಕ್ಕಪ್ಪದು ಆಸ್ತೀಕ ಧರ್ಮ. ಕಾರಣಾಂತರಂದ ಆ ಕಾಲಕ್ಕೆ ಮಾಡ್ಳೆ ಎಡಿಗಾಯ್ದಿಲ್ಲೇ ಹೇಳಿ ಆದರೆ, ಮತ್ತಾಣ ಸಂಸ್ಕಾರ ಕರ್ಮದ ಒಟ್ಟಿಂಗೆ ಬಿಟ್ಟು ಹೋದ ಪೂರ್ವ ಸಂಸ್ಕಾರ ಪ್ರಾಯಶ್ಚಿತ್ತ ಮಾಡಿಯೇ ಮಾಡುವದು ರೂಢಿ.

ಪ್ರಾಚೀನ ಕಾಲಲ್ಲಿ ಮಾಣಿಯಂಗೊಕ್ಕೆ ಮಾಡುತ್ತಾಂಗೆ ಕೂಸುಗೊಕ್ಕೂ ಸಂಸ್ಕಾರಂಗಳ ಮಾಡಿಗೊಂಡಿತ್ತಿದ್ದವಡ. ಉಪನಯನವೂ ಕೂಸುಗೊಕ್ಕೆ ಆಗಿಯೊಂಡಿತ್ತಿದ್ದು.
ವೇದ ಕಾಲಲ್ಲಿ (ಋಷಿ ಕಾಲಲ್ಲಿ) ಅದು ಹಿಂದೆ ಉಳುದು ಹೋತು.
‘ಷೋಡಶ ಸಂಸ್ಕಾರಂಗೊ’ ಪ್ರಮುಖವಾಗಿ ತ್ರಿವರ್ಣ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ದವಕ್ಕೆ ಹೇಳಿ ಇಪ್ಪದು. ಹುಚ್ಚರಿಂಗೆ ಸಂಸ್ಕಾರ ಮಾಡಲಾಗ ಹೇಳಿ ಶಂಖಸ್ಮೃತಿ ಹೇಳುತ್ತು.

ಸಂಸ್ಕಾರ ದಿನಂದ ಎರಡು ಮೂರು ದಿನ ಮದಲೆಯೇ ಮನೆ ಒಳ ಮತ್ತು ಹೆರ ಸಗಣ ಬಳುಗಿ , ನೆಲ ಸಾರ್ಸಿ ರಂಗವಲ್ಲಿ ಹಾಕಿ ತಳಿರು ತೋರಣ ಕಟ್ಟಿ ಶೃಂಗರಿಸೆಕ್ಕು.
ಪರಿಸರ ಶುಭ್ರವಾಗಿಯೂ, ಆಕರ್ಷಕವಾಗಿಯೂ ಮಡುಗೆಕ್ಕು. ಇದರಿಂದ ಕೆಟ್ಟ ಶಕ್ತಿಗೊ ದೂರ ಉಳಿತ್ತವು. ಭೂತ, ಪ್ರೇತ ಇತ್ಯಾದಿ ಇದ್ದರೆ ಸಂಸ್ಕಾರಂದ ಮದಲೇ ಅವುಗೊಕ್ಕೆ ಬಲಿ, ಕಾಣಿಕೆ, ಹರಕ್ಕೆ ಕೊಟ್ಟು ಅವುಗಳತ್ರೆ ಪ್ರಾರ್ಥನೆ ಮಾಡಿ  ತೃಪ್ತಿ ಪಡಿಸಿ  ಸಂಸ್ಕಾರ ಸಂದರ್ಭಲ್ಲಿ ಅವುಗಳ ಉಪದ್ರ ಇಲ್ಲದಿರುತ್ತಾಂಗೆ  ನೋಡಿಕೊಳ್ಳೆಕ್ಕು.

ಎಲ್ಲಾ ಸಂಸ್ಕಾರಂಗಳ ಮೊದಲಿಂಗೆ ಗುರುವಂದನೆ, ಗಣಪತಿ ಪೂಜೆ, ಪುಣ್ಯಾಹವಾಚನೆ, ನಾಂದಿ ಶ್ರಾದ್ಧ, ಆಚಾರ್ಯವರಣ ವಿಧಿಗೊ ಪ್ರಾಮುಖ್ಯವಾದ್ದು.

ಸಿದ್ಧತೆ:
ಉದಿಯಪ್ಪಗಳೇ ಯಜಮಾನ ಯಜಮಾಂತಿ ಶುಚ ಶೌಚ ಸ್ನಾನದಿ ನಿತ್ಯ ಕರ್ಮವ ಮಾಡಿ ಶುಚಿ ಬಟ್ಟೆಯ ಉಟ್ಟು
(ರೇಷ್ಮೆ ಬಟ್ಟೆ ಪ್ರಶಸ್ತ ಹೇಳುತ್ತವು. ಕಾರಣ – ಪೂಜೆಂದ ಸಿಕ್ಕಿದ ಅಂತರ್ಶಕ್ತಿ, ಜ್ಯೋತಿ, ತೇಜಸ್ಸು ಬೇಗಕ್ಕೆ ಶರೀರಂದ ಕೂಡಲೇ ಹೆರ ಹೋಗಿ ನೆಲ ಸೇರಲಾಗ ಹೇಳ್ವ ನಂಬಿಕೆ) ಭಸ್ಮ ಚಂದನ ಅರಶಿನ ಕುಂಕುಮ ಲೇಪಿಸಿ ದೇವರ ದೀಪ ಹೊತ್ತಿಸಿ ಜಪ  ತಪ ನಿತ್ಯ ವಿಧಿಯ ಮಾಡಿಗೊಂಬದು.  ಪುರೋಹಿತರ ಆದೇಶ ಪ್ರಕಾರ ಪೂರ್ವಾಭಿಮುಖವಾಗಿ ಮಣೆಲಿ ಕೂದುಗೊಂಬದು.
ಪೂರ್ವ ದಿಕ್ಕು, ಸೂರ್ಯೋದಯ ದಿಕ್ಕು, ಉದಿಸಿದ ಸೂರ್ಯ ರಜರಜವಾಗಿ ಮೇಲೆದ್ದು ಬಪ್ಪಾಂಗೆ ಚೈತನ್ಯ ಆ ಭಾಗಲ್ಲಿ ಮೂಡಿ ಬಂದು ರಜ ರಜವಾಗಿ ಮೇಲೆ ಬತ್ತು (ವೃದ್ಧಿಸುತ್ತು).
ಶುಭದಾಯಕ ಹೇಳ್ವ ನಂಬಿಕೆ. ಸೂರ್ಯ ಉದಿಯಪ್ಪಗ ಪೂರ್ವಲ್ಲಿ  ಉದಿಸಿ ಮಧ್ಯಾಹ್ನ ನಡು ನೆತ್ತಿಲಿ ಸಂಪೂರ್ಣ ಪ್ರಜ್ವಲಿಸಿ ಮತ್ತೆ ರಜ ರಜವಾಗಿ ಕ್ಷೀಣಿಸಿ ಪಡುಗಡಲದತ್ತ ಸಾಗಿ ಸಾಯಂಕಾಲ ಅಸ್ತಂಗತ ಅಪ್ಪ ಹಾಂಗೆ ಇದು ನಮ್ಮ ಜೀವನ ಚಕ್ರವನ್ನೂ ನೆನಪಿಸುತ್ತು.
ಇವಿಷ್ಟು ಅರ್ಥಮಾಡಿ, ನಾವು ಪೂರ್ವ ತಯಾರಿ ಮಾಡಿಗೊಂಡು, ನಿಂಗಳೂ ತಯಾರಿ ಹೇಳಿ ಆದರೆ, ಮುಂದೆ ಆಚಮನ ಮಾಡಿ ಸುರುಮಾಡೆಕ್ಕಪ್ಪದ್ದೆ.

ನಿಂಗೊ ಒಂದು ದ್ವಿರಾಚಮನ ಮಾಡಿಕ್ಕಿ. ಅಷ್ಟರೊಳ ಆನು ಎರಡು ದರ್ಭೆ ತೆಗದು ಒಂದು ಪವಿತ್ರ ಕಟ್ಟಿಕ್ಕುತ್ತೆ. ಆಗದೋ ಏ.. :-)

|| ಹರೇ ರಾಮ ||

~*~*~

(ಮುಂದುವರಿತ್ತು)

ಹದಿನಾರು ಸಂಸ್ಕಾರಂಗೊ: ಎಂತರ - ಎಂತಕೆ?, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಕಲ್ಮಕಾರು ಪ್ರಸಾದಣ್ಣ

  ಷೋಡಶ ಸ್೦ಸ್ಕಾರಗಳ ಬಗ್ಗೆ ತಿಳಿಸಿಕೊಟ್ಟದು ತು೦ಬಾ ಚೆ೦ದ ಆಯಿದು, ಭಾವ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಬೈಲಿಂಗೆ ಬಂದಮತ್ತೆ ಹಳೆಶುದ್ದಿಗಳ ಆಸಕ್ತಿಲಿ ನಿಂಗೊ ಓದುತ್ತದು ಕಂಡು ಕೊಶಿ ಆತು ಕಲ್ಮಕಾರು ಭಾವ. ಬಂದುಗೊಂಡಿರಿ. ಬರಕ್ಕೊಂಡಿರಿ. ಶುದ್ದಿಯೂ ಬರ್ಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಪುಣಚ ಡಾಕ್ಟ್ರು

  ಹಳೆ ಶುದ್ಧಿಗೆ ಹೊಸ ಹೊಸ ಒಪ್ಪಂಗೋ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಹರೇ ರಾಮ ಡಾಕ್ಟ್ರು ಭಾವ. ಬೈಲಿಲಿ ಕಂಡೊಂಡಿಪ್ಪೋ. ನಿಂಗಳೂ ಶುದ್ದಿ ಹೇಳಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಚುಬ್ಬಣ್ಣಶರ್ಮಪ್ಪಚ್ಚಿವಿಜಯತ್ತೆಶ್ಯಾಮಣ್ಣವೇಣಿಯಕ್ಕ°ನೆಗೆಗಾರ°ಪ್ರಕಾಶಪ್ಪಚ್ಚಿಪೆಂಗಣ್ಣ°ಚೆನ್ನಬೆಟ್ಟಣ್ಣಶಾ...ರೀಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿಅಜ್ಜಕಾನ ಭಾವಸುಭಗವಿನಯ ಶಂಕರ, ಚೆಕ್ಕೆಮನೆವಾಣಿ ಚಿಕ್ಕಮ್ಮದೀಪಿಕಾಗಣೇಶ ಮಾವ°ಡಾಗುಟ್ರಕ್ಕ°ಶಾಂತತ್ತೆಕೆದೂರು ಡಾಕ್ಟ್ರುಬಾವ°ಚೆನ್ನೈ ಬಾವ°ಎರುಂಬು ಅಪ್ಪಚ್ಚಿಸಂಪಾದಕ°ಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ