ಜೀವನ ವಿಕಾಸ

April 19, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೆನ್ನೈಲಿ ವೇದಾಧ್ಯಾಪನ ಮಾಡಿಗೊಂಡು, ಬೈಲಿಂಗೆ ಆಪ್ತರಾಗಿಪ್ಪ “ತುಪ್ಪೆಕಲ್ಲು ತಮ್ಮ” ಸಂಸ್ಕಾರಂಗಳ ಬಗ್ಗೆ ತಿಳುಶಿಕೊಡ್ತವು.
ಎಲ್ಲೋರುದೇ ಇದರ ಸದುಪಯೋಗ ಮಾಡಿಗೊಳೇಕು ಹೇಳ್ತದು ಆಶಯ.

ನಾವು ಮನುಷ್ಯರಾಗಿ ಈ ಪ್ರಪಂಚಲ್ಲಿ ಹುಟ್ಟಿದ್ದು.
ಮನುಷ್ಯ ಜೀವನ ಸಿಕ್ಕುದೇ ಭಾರೀ ವಿಶೇಷ. ಹುಟ್ಟಿದ ಮನುಷ್ಯಂಗೆ ಜೀವನ ಶಾಶ್ವತ ಏನೂ ಅಲ್ಲ.
ಇಂದು ಹುಟ್ಟಿ ನಾಳೆ ಉಳುದು ನಾಡದು ಸಾಯ್ವ ಈ ಜೀವನಕ್ಕೆ ಮೂರು ದಿನದ ಬಾಳ್ವೆ ಹೇಳಿದ್ದವು.
ಹುಟ್ಟುವಾಗ ನಾವು ತಂದದೆಂತೂ ಇಲ್ಲೆ. ಹೋಪಗ ಕೊಂಡೋಪಲೂ ಇಲ್ಲೆ.
ಇಪ್ಪಷ್ಟು ದಿನ ನಾಕು ಜೆನರೋಡನಾಟಲ್ಲಿ ಪ್ರೀತಿ ವಿಶ್ವಾಸ ಕೀರ್ತಿಲಿ ಜೀವಿಸುವುದೇ ನಮ್ಮ ನಂತರಕ್ಕೆ ನಾವು ಬಿಟ್ಟು ಹೋಪ ಕೊಡುಗೆ.
ಹಾಂಗಿಪ್ಪಗ ಹುಟ್ಟಿದ ನಮ್ಮ ಜೀವನ ವಿಕಾಸ ಆಯೆಕ್ಕರೆ ಕೆಲವೊಂದು ಸಿದ್ದಾಂತಂಗಳ ನಾವು ನಮ್ಮ ಜೀವನಲ್ಲಿ ಅಳವಡಿಸಿ ಆಚರಿಸುವಂತವರಾಗಿರೆಕು.
ಇದು ನಮ್ಮ ಕರ್ತವ್ಯ ಹೇಳಿ ತಿಳ್ಕೋಳ್ಳೆಕು.

 1. ದೇವರು ಒಬ್ಬನೇ. ಅವನ ಯಾವಹೆಸರಿಂದ ದಿನಿಗೇಳಿರೂ, ಯಾವ ರೂಪಂದ ಧ್ಯಾನಿಸಿದರು, ಹೇಂಗೆ ಪೂಜೆ ಮಾಡಿರೂ, ಎಲ್ಲಾ ನದಿಗಳ ನೀರು ಸಮುದ್ರಕ್ಕೆ ಸೇರುವಹಾಂಗೆ [ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ , ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ] ಎಲ್ಲಾ ಆರಾಧನೆಗಳೂ ಅವನನ್ನೇ ಸೇರುತ್ತು.
  ಅವ ದಯಾಮಯನೂ, ಎಲ್ಲರನ್ನೂ ತುಂಬಾ ಪ್ರೀತಿಯಿಂದ ನೋಡುವವ, ಸಮಸ್ತ ಕಲ್ಯಾಣ ಗುಣ ಸಂಪನ್ನನೂ ಆಗಿದ್ದ.
 2. ಸೂರ್ಯ, ಗಾಳಿ, ನೀರು, ಪ್ರಕೃತಿ ಇವುಗಳ ಕರುಣಿಸಿ ನಮ್ಮ ಜೀವನವ ಸಂತೋಷಮಯವಾಗಿ ಆ ಭಗವಂತನ ದಿನಾಗುಳು ರಜಾ ಹೊತ್ತು ಆರಾಧನೆ ಮಾಡುದು ಪ್ರತಿಯೊಬ್ಬನ ಕರ್ತವ್ಯ.
 3. ಮಾತೃ ದೇವೋ ಭವ ಪಿತೃ ದೇವೋ ಭವ : ಅಬ್ಬೆ, ಅಪ್ಪ ದೇವರಿಂಗೆ  ಸಮಾನ. ನಮ್ಮ ಕಷ್ಟಪಟ್ಟು ಹೊತ್ತು ಹೆತ್ತು ಸಾಂಕಿ ಬೆಳೆಶಿದ್ದಕ್ಕೆ ಅವಕ್ಕೆ ನಮ್ಮ ಕ್ರತಜ್ನತೆ ಸಲ್ಲೆಕ್ಕು. ಅವರ ಸಂತೋಷವಾಗಿ ನೋಡಿಯೊಂಬದೇ ನಮ್ಮ ಕರ್ತವ್ಯ ಆಗಿರೆಕ್ಕು. ಅವರ ಸೇವೆ, ಶುಶ್ರೂಷೆ ಮಾಡುದೆ ನಮ್ಮ ಕರ್ತವ್ಯ.
 4. ಆಚಾರ್ಯ ದೇವೋ ಭವ : ಗುರುಗಳೇ ಎಲ್ಲಾ ವಿದ್ಯಗೂ ಆಧಾರ. (ಅಜ್ನಾನ ತಿಮಿರಾಂಧಸ್ಯ ಜ್ನಾನಾಂಜನ  ಶಲಾಕಯ, ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ) ಅಜ್ಞಾನ ವೆಂಬ ಕತ್ತೆಲೆಯ ನೀಗಿ ಜ್ಞಾನವೆಂಬ ಬೆಳಕನ್ನು ಕೊಡುವ ಗುರುವಿಂಗೆ ಸದಾ ನಮನ.
  ಗುರುಗಳತ್ರೆ ಭಕ್ತಿಂದ ಇದ್ದು ಎಲ್ಲಾ ವಿದ್ಯೆಗಳ ಕಲಿಯಕ್ಕು. ವಿದ್ಯೆಕಲಿಸಿದ ಗುರುಗಳ ಎಂದೂ ಮರವಲಾಗ, ಗುರುಗಳ ಯಾವತ್ತೂ ಬೈವಲೂ ಆಗ.
 5. ಸತ್ಯಂ ವದಾ ಧರ್ಮಂ ಚರ : ಯಾವಾಗುಳು ಸತ್ಯವನ್ನೇ ಹೇಳೆಕು. ಸತ್ಯ ಹೇಳುವವಂಗೆ ಯಾವ ವಿಧವಾದ ಹೆದರಿಕೆಯೂ ಇರ್ತಿಲ್ಲೆ. ಸತ್ಯಕ್ಕೆ ಎಂದೂ ಸೋಲು ಇಲ್ಲೇ. ಸತ್ಯವ ತಪ್ಪಿನಡದರೆ ಪರಮಾತ್ಮ ಮೆಚ್ಚುತ್ತಾ ಇಲ್ಲೆ.
 6. ಪ್ರಾಮಾಣಿಕತೆಯುದೇ ಪರೋಪಕಾರವುದೇ ಶ್ರೇಷ್ಠ ಗುಣಂಗೋ. ಇದು ಮನುಷ್ಯನ ಅನೇಕ ಕಷ್ಟಂದ ಪಾರು ಮಾಡ್ತು. ಈಗುಣ  ಇಪ್ಪವಂಗೆ ಜೀವನೋಪಾಯ ಕಷ್ಟ ಆವುತ್ತಿಲ್ಲೆ.
 7. ನಿಸ್ವಾರ್ಥ ಸೇವೆ, ಪ್ರೇಮ ಇವು ದೆವರಿಂಗೆ ಅತ್ಯಂತ ಪ್ರಿಯವಾದ ಗುಣಂಗೋ. ಈ ಗುಣ ಇಪ್ಪಲ್ಲಿ ಶಾಂತಿಯು ತುಂಬಿರ್ತು. ಅಲ್ಲಿ ದ್ವೇಶ – ಅಸೂಯೆಯು ಇರ್ತಿಲ್ಲೆ.
 8. ಕರ್ತವ್ಯವ ಯಾವಾಗುಳು ಮರವಲಾಗ. ಮಾಡೆಕ್ಕಾದ ಕೆಲಸವ ತಪ್ಪದ್ದೇ ಮಾಡುದರಿಂದ ಜೀವನ ಸುಗಮ ಆವುತ್ತು. ಅನೇಕ ಮಹಾತ್ಮರ ಜೀವನಲ್ಲಿ ಕರ್ತವ್ಯ ನಿಷ್ಠೆ ಎದ್ದು ಕಾಣುತ್ತು .
 9. ಆಚಾರಲ್ಲಿ, ವಿಚಾರಲ್ಲಿ ನಡೆನುಡಿಲಿ ಪರಿಶುದ್ಧತೆಯೇ ಬ್ರಹ್ಮಚರ್ಯ ಹೇಳಿ ಹೇಳುತ್ತು. ಇದರ ನೋಡಿಗೊಂಬದು ಬಹಳ ಮುಖ್ಯ. ಇದರಿಂದ ಮುಖ ಕಾಂತಿಯೂ, ಆರೋಗ್ಯವೂ ಜ್ಞಾಪಕಶಕ್ತಿಯು ಹೆಚ್ಚುತ್ತು. ಅಸಾಧಾರಣವಾದ ಮನಶ್ಶಕ್ತಿಯನ್ನೂ ಶಾಂತಿಯನ್ನೂ ಕೊಡುತ್ತು.
 10. ಸುಖ, ಶಾಂತಿಯುತ ಜೀವನಕ್ಕೆ ಆರೋಗ್ಯವೇ ಆಧಾರ. ಯಾವಾಗುಳು ಶುದ್ಧವಾದ ಗಾಳಿ, ನೀರು ಇವುಗಳ ಸೇವನೆಂದ ಆರೋಗ್ಯ ಉತ್ತಮಗೊಳ್ಳುತ್ತು. ಕೆಲವು ಯೋಗಾಸನದ ಅಭ್ಯಾಸಂದ ಶರೀರ ಬಲ ಆವುತ್ತು . ತಿಂಗಳಿಂಗೆ ಒಂದು ದಿನ ಉಪವಾಸ ಇದ್ದರೆ ಒಳ್ಳೆದು.
 11. ಭಗವದ್ಗೀತೆ ಪರಮ ಪವಿತ್ರವಾದ ಗ್ರಂಥ. ಇದರ ಪ್ರತಿಯೊಬ್ಬನೂ ಒದೆಕ್ಕು.
  [ಆಪದಂ ನರಕಂ ಘೋರಂ ಗೀತಾಧ್ಯಾಯೀ ನ ಪಶ್ಯತಿ]. ಗೀತೆಯ ಸ್ವಾಧ್ಯಾಯ ಮಾಡುವ ಮನುಷ್ಯಂಗೆ ಆಪತ್ತುದೇ ಘೋರ ನರಕವೂ  ಕಾಂಬಲೆ ಸಿಕ್ಕುತ್ತಿಲ್ಲೆ.
  [ಪಾದಸ್ಯಾಷ್ಯರ್ಧ ಪಾದಂ ವಾ ಶ್ಲೋಕಂ ಶ್ಲೋಕಾರ್ಧ ಮೇವವಾ ನಿತ್ಯಂ ಧಾರಯತೇ ಯಸ್ತು ಸ ಮೋಕ್ಷಮಧಿಗಚ್ಚತಿ.] ಆರು ಗೀತೆಯ ಇಡೀ ಒಂದು ಶ್ಲೋಕ, ಅರ್ಧ ಶ್ಲೋಕ, ಒಂದು ಚರಣ ಅಥವಾ ಅರ್ಧ ಚರಣ ಪ್ರತೀ ದಿನ ಓದುತ್ತನೋ ಅವ ಅಕೇರಿಗೆ ಮೋಕ್ಷವ ಹೊಂದುತ್ತ. ಪ್ರತೀದಿನ ಒಂದು ಶ್ಲೋಕವನ್ನಾರು ಓದಿ ವಿಚಾರ ಮಾಡೆಕ್ಕು. ಹಿಂಗೆ ಎಲ್ಲಾ ಶ್ಲೋಕವನ್ನು ಓದಿದರೆ ಜ್ಞಾನ ಹೆಚ್ಚಾವುತ್ತು.
  [ಮಲ ನಿರ್ಮೋಚನಂ ಪುಂಸಾಂ ಗಂಗಾ ಸ್ನಾನಂ ದಿನೇದಿನೇ, ಸಕೃದ್ ಗೀತಾಂಭಸಿ ಸ್ನಾನಂ ಸಂಸಾರ ಮಲನಾಶನಂ] – ಗಂಗೆಲಿ ಪ್ರತಿದಿನ ಮೀವದರಿಂದ ಮನುಷ್ಯರ ಕೊಳೆ ದೂರ ಆವುತ್ತು ಹಾಂಗೇ ಗೀತಾಧ್ಯಯನ ನಿತ್ಯ ಮಾಡುವುದರಿಂದ  ಗೀತಾರೂಪಿಯಾದ ಗಂಗೆಯ ನೀರಿಲಿ ಮಿಂದು  ಇಡೀ ಸಂಸಾರಮಲ ನಾಶ ಆವುತ್ತು ಹೇಳಿ ಗೀತಾ ಫಲ ಶ್ರುತಿ ಹೇಳುತ್ತು.
 12. ವ್ಯಕಿತ್ವ ವಿಕಾಸಕ್ಕಾಗಿ ಪ್ರಯತ್ನ ಮಾಡೆಕ್ಕು. ಮಹಾತ್ಮರ ಚರಿತ್ರೆಯ ಓದಿ ಅವರ ದರ್ಶನ ಮಾಡಿ ಸತ್ಸಂಗ ಮಾಡೆಕ್ಕು . ರಾಮ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರ , ಶಯನೇ ಯ:ಸ್ಮರೇತ್ ನಿತ್ಯಂ ದು:ಸ್ವಪ್ನಂ ತಸ್ಯ ನಶ್ಯತಿ. ಇರುಳು ಮನುಗುವಗ   ದೇವರ ಧ್ಯಾನ ಮಾಡಿ ಒಳ್ಳೆ ವಿಚಾರಂಗಳ ಯೋಚನೆ ಮಾಡ್ತಾ ಮನುಗೆಕ್ಕು.
 13. ಸತ್ಯ, ಧರ್ಮ, ನ್ಯಾಯ, ಪ್ರೇಮ, ನಿಸ್ವಾರ್ಥ ಸೇವೆ, ದಯೆ ಹಾಂಗೂ ಆದರ್ಶ ತತ್ವವ ನಮ್ಮಲ್ಲಿ ರೂಢಿಸಿಗೊಂಬಲೆ  ಪ್ರಯತ್ನ ಮಾಡೆಕ್ಕು.
 14. ಮನೆಲಿ ಅಣ್ಣ, ತಮ್ಮ, ಅಕ್ಕ ತಂಗೆಕ್ಕಳೊಟ್ಟಿಂಗೆ  ಲಡಾಯಿ ಮಾಡ್ಲಾಗ. ಹಿರಿಯರ ಗೌರವಿಸೆಕ್ಕು. ಎಲ್ಲರೊಟ್ಟಿಂಗೆ ಒಳ್ಳೆ ರೀತಿಲಿ ಬಾಳೆಕು.
 15. ಪಾಠ ಶಾಲೆಲಿ ಒಳ್ಳೆಯ ಹೆಸರು ಪಡೆಯೆಕು. ಶಾಲಗೆ ತಪ್ಪದ್ದೆ ಹೊಯಕ್ಕು. ಗುರುಗಳಿಂಗೆ ವಿಧೇಯರಾಗಿ ನಡಕ್ಕೊಂಡು ಪಾಠವ ಗಮನ  ಮಡುಗಿ ಕಲಿಯಕ್ಕು .
  [ವಿದ್ಯಾ ದದಾತಿ ವಿನಯಂ, ವಿನಯಾಧ್ಯಾತಿ ಪಾತ್ರತಾಂ. ಪಾತ್ರತ್ವಾಧನ ಮಾಪ್ನೋತಿ ಧನಾದ್ಧರ್ಮಂ ತತಃಸುಖಂ]
 16. ಶಾಲೆಲಿ ಆಟವ ಆಸಕ್ತಿಂದ ಆಡೆಕ್ಕು. ಮೋಸಮಾಡದ್ದೇ ಲಡಾಯಿಮಾಡದ್ದೆ ಎಲ್ಲರೊಟ್ಟಿಂಗೆ ಸಹಕರಿಸಿ ಆಡೆಕ್ಕು. ಬುದ್ಧಿವಂತ ರೊಟ್ಟಿಂಗೆ ಒಳ್ಳೆಯವರೊಟ್ಟಿಂಗೆ ಸ್ನೇಹ ಬೆಳೆಶೆಕ್ಕು.
 17. ಪ್ರತಿದಿನ ಮಿಂದು ದೇವರಿಂಗೆ ಪ್ರಾರ್ಥನೆ ಮಾಡಿ ಶುಭ್ರ ವಸ್ತ್ರವ ಸುತ್ತೆಕ್ಕು. ವಿದ್ಯಾಭ್ಯಾಸ ಮಾಡುವ ಮೊದಲು ದೇವರಿಂಗೆ ಪ್ರಾರ್ಥನೆ ಮಾಡಿ ಓದುಲೇ ಸುರು ಮಾಡೆಕ್ಕು.
 18. ಎಲ್ಲರಲ್ಲಿಯೂ ಒಳ್ಳೆಯ ಗುಣವ ನೋಡಿ ಕಲಿಯಕ್ಕು. ಕೆಟ್ಟ ಗುಣ ಕಂಡರೆ ಅದರ ಕಲಿವಲಾಗದ್ದ ಹಾಂಗೆ ನೋಡಿಯೋಳ್ಳೆಕ್ಕು.
 19. ಆರನ್ನಾರು ಕಂಡರೆ ಸುರೂವಿಂಗೆ ಹರೇ ರಾಮ, ಹರಿಃ ಓಂ, ನಮಸ್ಕಾರ  ಹೇಳಿ ಹೇಳೆಕ್ಕು. ಯಾವಗುಳು ಒಳ್ಳೆಯ ಮಾತನ್ನೇ ಆಡೆಕ್ಕು. ಹಿರಿಯರಿಂಗೆ ಕರಜೋಡಿಸಿ ತಲೆಬಾಗಿ ನಮಿಸೆಕು, ಕಿರಿಯರಿಂಗೆ ಕೈ ಎತ್ತಿ ಆಶೀರ್ವದಿಸೆಕ್ಕು.
 20. ಬಂಧುಗಳೊಟ್ಟಿಂಗೆ ವಾರಕ್ಕೊಂದರಿ ಆದರೂ ದೇವಸ್ಥಾನಕ್ಕೆ  ಹೊಯಿಕ್ಕಿ  ಬರೆಕ್ಕು. ಮನೆಲಿ ಮನೆಯೋರೆಲ್ಲರೂ ಸೇರಿ ಹಬ್ಬಂಗಳ ಆಚರುಸೆಕ್ಕು.
 21. ಸರಕಾರದ ಕಾನುನು, ನಿಯಮಂಗ ಪಾಲುಸೆಕ್ಕು. ದೇಶ ಪ್ರೇಮವ ಬೆಳೆಷೆಕ್ಕು. ನಾಡು,ನುಡಿಗಳ ಬಗ್ಗೆ ಅಭಿಮಾನ ಇರೆಕ್ಕು. ದೇಶವೇ ಹೆಮ್ಮೆ ಪಡುವಂಥಾ ಪ್ರೆಜೆಯಾಗಿ ಆದರ್ಶ ಜೀವಿ ಆಯಕ್ಕು.

|| ಹರೇ ರಾಮ ||

ಜೀವನ ವಿಕಾಸ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ನೀರ್ಕಜೆ ಮಹೇಶ
  ನೀರ್ಕಜೆ ಮಹೇಶ

  ಭಾರಿ ಲಾಯ್ಕ ಆಯಿದು ಬರದ್ದುದೆ ಬರದ ವಿಷಯಂಗಳುದೆ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಎಲ್ಲಾ ಮತದವರೂ ಆಚರಿಸೆಕಾದ ಸಾರ್ವತ್ರಿಕ ಜೀವನಮೌಲ್ಯಂಗಳ ಬರೆದ್ದಕ್ಕೆ ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ತಮ್ಮನ ವಿಚಾರಧಾರೆ ಚೆಂದಕೆ ಬಯಿಂದು. ಜೀವನಲ್ಲಿ ಅಳವಡಿಸೆಳಕಾದ ವಿಷಯಂಗಳ ಕ್ಯಾಪ್ಸೂಲ್ ರೂಪಲ್ಲಿ , ಮನಸ್ಸಿಂಗೆ ನಾಟುತ್ತ ಹಾಂಗೆ ಹೇಳಿದ್ದ. ಮುಂದೆಯು ಇಂತಹ ಅಮೂಲ್ಯ ವಿಚಾರಂಗೊ ಬೈಲಿಂಗೆ ಬತ್ತಾ ಇರಳಿ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಶ್ರೀಅಕ್ಕ°ಜಯಶ್ರೀ ನೀರಮೂಲೆದೊಡ್ಡಭಾವಅಕ್ಷರ°ಚೆನ್ನೈ ಬಾವ°ಅನಿತಾ ನರೇಶ್, ಮಂಚಿಅನು ಉಡುಪುಮೂಲೆಶರ್ಮಪ್ಪಚ್ಚಿಡಾಗುಟ್ರಕ್ಕ°ಶ್ಯಾಮಣ್ಣಮಾಲಕ್ಕ°ಡೈಮಂಡು ಭಾವಪವನಜಮಾವಮಂಗ್ಳೂರ ಮಾಣಿಪೆರ್ಲದಣ್ಣವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ದೊಡ್ಮನೆ ಭಾವದೊಡ್ಡಮಾವ°vreddhiವಾಣಿ ಚಿಕ್ಕಮ್ಮಪೆಂಗಣ್ಣ°ಚುಬ್ಬಣ್ಣಶೇಡಿಗುಮ್ಮೆ ಪುಳ್ಳಿಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ