ನಾವು ಎಂತಕೆ ‘ಕಲಶ’ವ ಪೂಜಿಸುತ್ತು?

‘ಕಲಶ’ ಹೇಳಿರೆ ನೀರು ತುಂಬಿದ ಹಿತ್ತಾಳೆ ಮಣ್ಣು ಅಥವಾ ತಾಮ್ರದ ಚೆಂಬು ಅಥವಾ ಕೊಡಪ್ಪಾನ (ಚಿನ್ನ, ಬೆಳ್ಳಿದೂ ಅಕ್ಕು, ಸ್ಟೀಲ್ ಆಗ).
ಅದಕ್ಕೆ  ಹೆರಾಂದ ಸುತ್ತಲೂ ಕೆಂಪು ಅಥವಾ ಬಿಳಿಯ ನೂಲು ಕೊಡಪ್ಪಾನ / ಚೆಂಬಿನ ಸುತ್ತಲು ವಜ್ರಾಕಾರಲ್ಲಿ ಸುತ್ತಿ, ಹಲಸು ಮಾವಿನ ಕೊಡಿ ಜೋಡಿಸಿ ಮಡುಗಿ ಅದರ ಮೇಗಂದ ಕೊಡಿ ಇಪ್ಪ ತೆಂಗಿನಕಾಯಿ ಇರಿಸಿ ಅಲಂಕಾರ. ಹೀಂಗೆ ಮಾಡಿರೆ ಅದರ ಕಲಶ ಹೇಳಿ ಹೇಳ್ವದು. ಕುಂಭದೊಳ ನೀರು ತುಂಬಿಸಿದರೆ ಪೂರ್ಣ ಕುಂಭ ಆತು.
ಸ್ಥೂಲ ಶರೀರಲ್ಲಿ ಚೈತನ್ಯ ತುಂಬಿಯಪ್ಪಗ ಚಟುವಟಿಕೆಲಿ ತೊಡಗಲೆ ಸಾಧ್ಯ ಹೇಳಿ ಪೂರ್ಣಕುಂಭದ ಸಾಂಕೇತಿಕ.

ಶಾಸ್ತ್ರೋಕ್ತ ಪದ್ಧತಿಲಿ ‘ಕಲಶ’ವ ಎಲ್ಲ ಶುಭ ಸಮಾರಂಭಂಗಳಲ್ಲಿ ಪ್ರತಿಷ್ಠಾಪಿಸುತ್ತದು ಕ್ರಮ.
ಗಣ್ಯ ವ್ಯಕ್ತಿಗಳ ಸ್ವಾಗತಕ್ಕೂ ಪೂರ್ಣಕುಂಭವ ಸಾಂಪ್ರದಾಯಿಕವಾಗಿ ನಾವು ಉಪಯೋಗಿಸುತ್ತು.

ಸೃಷ್ಟಿ ರಚನೆ ಅಪ್ಪ ಮದಲು ಕ್ಷೀರ ಸಾಗರಲ್ಲಿ ಮಹಾವಿಷ್ಣು ಶೇಷಶಾಯಿಯಾಗಿತ್ತಿದ್ದನಡ.
ಅವನ ನಾಭಿಂದ ಒಂದು ಕಮಲ ಉದ್ಭವಿಸಿ ಅದರಲ್ಲಿ ಸೃಷ್ಟಿಕರ್ತನಾದ ಬ್ರಹ್ಮನ ಆವಿರ್ಭಾವ ಆತಡ.
ಮತ್ತೆ ಇತರ ಲೋಕ, ವಸ್ತುಗಳ ಬ್ರಹ್ಮ ಸೃಷ್ಟಿಸಿದ ಹೇಳಿ ಕತೆ. ಕಲಶಲ್ಲಿಪ್ಪ ನೀರು ಎಲ್ಲ ಲೋಕಂಗಳೂ ಸೃಜಿಸಲ್ಪಟ್ಟ ಮೂಲ ಪ್ರಕೃತಿಯ ಸಾಂಕೇತಿಕ. ಇದುವೇ ಎಲ್ಲೋರಿಂಗೂ ಪ್ರಾಣ ಶಕ್ತಿಯ ನೀಡುವಂಥಾದ್ದು , ಇದುವೇ ನೈಸರ್ಗಿಕ ಸೊಬಗು ಇತರ ಎಲ್ಲ ಶಕ್ತಿಯ ಮೂಲ, ಸೃಷ್ಟಿಯ ಸಾಮರ್ಥ್ಯ ಇಪ್ಪದು ಹೇಳಿ ಭಾವನೆ. ಅದ್ರ ಮೇಗೆ ಮಡುಗುವ ಹಲಸು, ಮಾವಿನ ಕೊಡಿ, ತೆಂಗಿನ ಕಾಯಿ – ಸೃಷ್ಟಿಯ ಸೂಚಕ.
ಅದಕ್ಕೆ ಸುತ್ತಲ್ಲೂ ಸುಂದುವ ದಾರ – ಸೃಷ್ಟಿಲಿ ಪ್ರತಿಯೊಬ್ಬನೂ ಪ್ರತಿಯೊಂದು ವಿಧಿ, ನಿಯಮಕ್ಕೆ ಒಳಪಡುತ್ತು ಹೇಳಿ ಸಂಜ್ನೆ.  ಆದ್ದರಿಂದಲೇ ಕಲಶವ ಅತ್ಯಂತ ಶ್ರೇಷ್ಠ ಹೇಳಿ ನಾವು ಪೂಜಿಸುತ್ತು.

ಕಲಶಲ್ಲಿ ಎಲ್ಲ ಪವಿತ್ರ ನದಿಗಳ ನೀರು, ವೇದಗಳ ಸಮಸ್ತ ಜ್ಞಾನ, ಸರ್ವ ದೇವತೆಗಳ ಅನುಗ್ರಹ ಆವಾಹಿಸಲ್ಪಡುತ್ತು. ಈ ಜಲವ ಮತ್ತೆ ಅಭಿಷೇಕಕ್ಕೆ ಉಪಯೋಗಿಸುತ್ತು (ಜಲಾಭಿಷೇಕ, ತೀರ್ಥಾಭಿಷೇಕ, ಕುಂಭಾಭಿಷೇಕ).  ದೇವಾಸುರರು ಅಮೃತಮಥನ ಮಾಡಿಯಪ್ಪಗ ಅಖೇರಿಗೆ ಮಹಾವಿಷ್ಣು ಮೋಹಿನಿ ರೂಪಲ್ಲಿ ಅಮೃತ ಕುಂಭದೊಂದಿಂಗೆ ಪ್ರತ್ಯಕ್ಷ ಆದ. ಬಳಿಕ ದೇವತೆಗೊಕ್ಕೆ ಅಮೃತ ಹಂಚಿದ ಹೇಳಿ ನಾವು ಓದಿದ ಕತೆ. ನಾವು ಮಡುಗುವ ಕಲಶವೂ ಇದರ ನೆನಪುಸಲೆ. ಆರಾಧನೆ ಬಳಿಕ ಕಲಶ ತೀರ್ಥ ಸೇವನೆ ಅಮೃತ ಸೇವನೆಗೆ ಸಮಾನ. ಸಾಧು ಸಂತಂಗೊ – ನಿತ್ಯ ತೃಪ್ತ ಹಾಗೂ ಪರಿಪೂರ್ಣರು. ಅವು ಜೀವನದ ರಹಸ್ಯವ ಶೋಧಿಸಿ ಪೂರ್ಣತ್ವ ಪಡೆದವು. ಇಂತಹ ಪೂರ್ಣತ್ವ ಹೊಂದಿದ ಮಹನೀಯರ ಸ್ವಾಗತುಸಲೆ ಪೂರ್ಣಕುಂಭ ವಾಡಿಕೆ.

ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ  ಸಮಾಶ್ರಿತಃ
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೆ ಮಾತೃ ಗಣಾಃಶ್ರಿತಾಃ ||
ಕುಕ್ಷೌತು ಸಾಗರಾಃ ಸರ್ವೇ ಸಪ್ತ ದ್ವೀಪಾ ವಸುಂಧರಾ
ಋಗ್ವೇದೋsಥ ಯಜುರ್ವೆದಃ ಸಾಮವೇದೋಹ್ಯಥರ್ವಣಃ ||
ಅಂಗೈಶ್ಚ ಸಹಿತಾಃ ಸರ್ವೇ ಕಲಶಂ ತು ಸಮಾಶ್ರಿತಾಃ
ಅತ್ರ ಗಾಯತ್ರೀ ಸಾವಿತ್ರೀ ಶಾಂತಿಃ ಪುಷ್ಟಿಕರೀ ತಥಾ ||
ಆಯಾಂತು ಮಮ ದೇಹಸ್ಯ ದುರಿತ ಕ್ಷಯ ಕಾರಕಾಃ
ಸರ್ವೇ ಸಮುದ್ರಾಃ ಸರಿತಸ್ತೀರ್ಥಾನಿ ಜಲದಾ ನದಾಃ ||
ಗಂಗೇಚ ಯಮುನೇ ಚೈವ ಗೋದಾವರೀ ಸರಸ್ವತೀ,
ನರ್ಮದೇ, ಸಿಂಧು, ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

ಹರೇ ರಾಮ.

(ಸಂಗ್ರಹ)

ಚೆನ್ನೈ ಬಾವ°

   

You may also like...

10 Responses

 1. ತೆಕ್ಕುಂಜ ಕುಮಾರ says:

  ಧನ್ಯವಾದ, ಇಣ್ಣಾಣ ಶುದ್ದಿಗೆ ಕಾವದು…

 2. “ಸ್ಥೂಲ ಶರೀರಲ್ಲಿ ಚೈತನ್ಯ ತುಂಬಿಯಪ್ಪಗ ಚಟುವಟಿಕೆಲಿ ತೊಡಗಲೆ ಸಾಧ್ಯ ಹೇಳಿ ಪೂರ್ಣಕುಂಭದ ಸಾಂಕೇತಿಕ.” ಎಷ್ಟು ಒಳ್ಳೆ ಅರ್ಥ ಅಲ್ದಾ?
  ಕಲಶದ ಮಹತ್ವವ ತಿಳುಶಿಕೊಟ್ಟದಕ್ಕೆ ಧನ್ಯವಾದಂಗೊ.

 3. ಒಳ್ಳೆ ಲೇಖನ ಭಾವಾ…
  ಈ ಲೇಖನ ಮಾಲಿಕೆಗೆ ಕಾದು ಕೂಪ ಹಾಂಗೆ ಆಯಿದೀಗ…

 4. ಜಲ ಕಲಶಲ್ಲಿ ವರುಣನ ಸಾನ್ನಿಧ್ಯ ಇದ್ದಡ…ಸಮುದ್ರ ಸರಿತ್ತು ತೀರ್ಥ ನದ ನದಿ ಗಂಗೆ ಯಮುನೆ ಗೋದಾವರಿ ಸರಸ್ವತಿ ನರ್ಮದ ಸಿಂಧು ಕಾವೇರಿ ಇವೆಲ್ಲವ ಸಂಸ್ಥಾಪನೆ ಕಲಶೋದಕಲ್ಲಿ…ಕಲಶದ ಮುಖ ಕಂಠ ಮೂಲಗಳಲ್ಲಿ ತ್ರಿಮೂರ್ತಿಗೊ ಕುಕ್ಷಿಲಿ ಇನ್ನೂ ಹತ್ತು ಹಲವು ದೇವತೆಗೊ….

 5. ಪ್ರಮೋದ ಮುಣ್ಚಿಕ್ಕಾನ says:

  ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಂಗೊ ಭಾವ……….

 6. ಚೆನ್ನೈ ಭಾವ°,
  ಕಲಶದ ಬಗ್ಗೆ ತುಂಬಾ ಲಾಯ್ಕಲ್ಲಿ ವಿವರಣೆ ಕೊಟ್ಟಿದಿ.

  ನಿಂಗಳ ಶುದ್ದಿ ಓದಿ ಅಪ್ಪಗಳೇ ಕಲಶ ಎಷ್ಟು ವಿಸ್ತಾರ ಆಗಿ ಇದ್ದು ಹೇಳಿ ಗೊಂತಾದ್ದು. ಪೂಜಾದಿ ಕಾರ್ಯಲ್ಲಿ ಇದುವರೆಗೆ ಕಲಶದ ಉಪಸ್ಥಿತಿಯ ವಿಶೇಷ ಗಮನಿಸಿಗೊಂಡಿತ್ತಿಲ್ಲೆ. ಈಗ ವಿವರ ಗೊಂತಾದ ಕಾರಣ ಅದರ ಪೂರ್ತಿಯಾಗಿ ಮನಸ್ಸಿಲಿ ಮಡಿಕ್ಕೊಂಡು ಶ್ರದ್ಧೆಲಿ ಪೂಜೆಗಳ ನೆರವೇರ್ಸುಲೆ ಅಕ್ಕು.

  ಲೋಕದ, ನಮ್ಮ ವಿಧಿ ವಿಧಾನದ, ಪ್ರಕೃತಿಯ ಸೂಕ್ಷ್ಮರೂಪದ ಕಲಶದ ಮಾಹಿತಿಗೆ ಧನ್ಯವಾದಂಗ.

 7. ಲೇಖನ ತುಂಬಾ ಒಪ್ಪ ಆಯಿದು.

 8. ರಘು ಮುಳಿಯ says:

  ಚೆನ್ನೈಭಾವಾ,
  ಮಾಹಿತಿಯುಕ್ತ ಬರಹ. ನಮ್ಮ ಪೂರ್ವಜರ ಚಿ೦ತನೆ ಅದ್ಭುತವೇ ಸರಿ. ದೇವತೆಗೊ,ವೇದ೦ಗಳ ಹಾ೦ಗೆಯೇ ಭರತ ಖ೦ಡಲ್ಲಿ ಪ್ರವಹಿಸಿಗೊ೦ಡಿದ್ದ ಎಲ್ಲಾ ನದಿಗೊಕ್ಕೆ ಪೂಜಾಕಾರ್ಯಕ್ರಮಲ್ಲಿ ಎಷ್ಟು ಪ್ರಾಮುಖ್ಯತೆ ಕೊಟ್ಟಿದವು ಹೇಳಿ ಗೊ೦ತಾವುತ್ತು

  (ಚಿನ್ನ, ಬೆಳ್ಳಿದೂ ಅಕ್ಕು, ಸ್ಟೀಲ್ ಆಗ),ಬೋಚ ಭಾವ° ಪ್ಲಾಷ್ಟಿಕ್ ಕೊಡಪ್ಪಾನ ಹೆಗಲಿ೦ಗೆ ಏರುಸುಗೋ?.

 9. ಚೆನ್ನೈ ಭಾವ says:

  ಧನ್ಯವಾದಂಗೋ ಎಲ್ಲೋರಿಂಗೂ. ನೋಡುತ್ತಾ ಇರಿ. ಬರತ್ತಾ ಇರಿ. ನಿಂಗಳತ್ರೆ ಪೂರಕ ಇದ್ದಲ್ಲಿ ಒಪ್ಪಿಸಿ, ತಪ್ಪಿದ್ದಲ್ಲಿ ತಿದ್ದಿ ಕೂಡ ಹೇಳಿ ಅಪೇಕ್ಷೆ.

 10. ಶರ್ಮಪ್ಪಚ್ಚಿ says:

  ಲೇಖನ, ಕಲಶದ ಮಹತ್ವವ ಸರಿಯಾಗಿ ತಿಳಿಶಿ ಕೊಟ್ಟಿದು.
  ಹೀಂಗಿಪ್ಪ ಮಾಹಿತಿಗೊ ಇನ್ನೂದೆ ಸಿಕ್ಕುತ್ತಾ ಇರಳಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *