ನಾವು ಎಂತಕೆ ‘ಕಮಲ’ವ ವಿಶೇಷ ಹೇಳಿ ತಿಳ್ಕೊಳ್ಳುತ್ತು?

‘ಕಮಲ’ ಭಾರತದ ರಾಷ್ಟ್ರೀಯ ಹೂಗು.
ಭಾರತಲ್ಲಿ ಮದಲಿಂಗೆ ಅನೇಕ ಕೆರೆ ಕೊಳಂಗಲ್ಲಿ ವಿವಿಧ ವರ್ಣಂಗಳ ತಾವರೆ ಇದ್ದತ್ತು.

ತಾವರೆಯ ಹೂಗು (ಕಮಲ) – ಆತ್ಮಜ್ಞಾನ (ಸತ್ಯಂ), ಪಾವಿತ್ರ್ಯತೆ (ಶಿವಂ), ಹಾಂಗೂ ಸೌಂದರ್ಯ (ಸುಂದರಂ) ಇವುಗಳ ಸಂಕೇತ.
ಪರಮಾತ್ಮನ  ಸ್ವರೂಪವೂ ಸಚ್ಚಿದಾನಂದವೇ.
ಅವನ ವಿವಿಧ ಅಂಗಂಗಳ ಕಮಲಕ್ಕೆ ಹೋಲುಸುತ್ತವು – ಕಮಲ ನಯನ, ಕರಕಂಜ, ಹೃದಯ ಕಮಲ, ಚರಣಾರವಿಂದ ಇತ್ಯಾದಿ.

ಅಧ್ಯಾತ್ಮ ಶಾಸ್ತ್ರಲ್ಲಿ, ಪ್ರಾಚೀನ ಗ್ರಂಥಂಗಳಲ್ಲಿಯೂ ಕಮಲದ ಸೌಂದರ್ಯವವ ಬಹು ವರ್ಣಿಸಿದ್ದವಡ.
ಕಲೆ, ವಾಸ್ತು ಶಿಲ್ಪಂಗಳಲ್ಲೂ ಕಮಲವ ಚಿತ್ರೀಕರ್ಸಿದ್ದು ನಾವು ಕಾಣುತ್ತು.
ಶೇಷಶಾಯಿ ಮಹಾವಿಷ್ಣುವಿನ ನಾಭಿಂದ ಉದ್ಭಿಸಿದ್ದು ತಾವರೆ ಹೇಳಿ ನಾವು ಓದಿದ್ದು.
ಪ್ರಚಲಿತಲ್ಲಿ ಅನೇಕರು ತಾವರೆ ವಾ ತಾವರೆ ಸಂಬಂಧೀ ಹೆಸರು ಮಡುಗುತ್ತದು ನಾವು ಕಾಣುತ್ತು – ಕಮಲಾ, ಪಂಕಜಾ, ಪದ್ಮಾ, ಕಮಲಾಕ್ಷಿ, ಪಂಕಜಾಕ್ಷಿ ಇತ್ಯಾದಿ ಇತ್ಯಾದಿ.

ಐಶ್ವರ್ಯದೇವತೆ ಮಹಾಲಕ್ಷ್ಮಿ ತಾವರೆ ಮೇಗೆ ಕೂದಂಡಿಪ್ಪದು ನಾವು ಪಟಲ್ಲಿ ಕಾಣುತ್ತು. ಲಕ್ಷ್ಮಿಯ ಒಂದು ಕೈಲಿ ಕಮಲವೂ ಇದ್ದು.
ಸೂರ್ಯೋದಯದ ಜೊತಗೆ ತಾವರೆ ಅರಳುತ್ತು. ಇದೇ ರೀತಿ ನಮ್ಮೆಲ್ಲರ ಮನಸ್ಸು ಜ್ನಾನೋದಯದ ಜಾಗೃತಿಲಿ ವಿಕಸನಗೊಳ್ಳುತ್ತು.
ಕೆಸರ ನೀರಲ್ಲಿ ತಾವರೆ ಇಪ್ಪದಾದರೂ ಅತ್ಯಂತ ಸುಂದರವಾಗಿಯೇ ಹಾಂಗೂ ಅದರ ನಿರ್ಲಿಪ್ತತೆಯ ಕಾಪಾಡಿಗೊಂಡಿದ್ದಾಂಗೆ ಕಾಣುತ್ತು. ಹೇಳಿರೆ, ಎಂತಹ ವಿಷಮ ಪರಿಸ್ಥಿತಿಲಿಯೂ ನಾವು ಪ್ರಶಾಂತ ಚಿತ್ತರಾಗಿಯೇ ಇರೆಕು ಹೇಳಿ ತಾತ್ಪರ್ಯ. ತಾವರೆಯ ಎಲೆ ನೀರಿಲ್ಲಿ ಇಪ್ಪದಾರೂ ಅದು ಕಿಂಚಿತ್ತೂ ಒದ್ದೆ ಆವ್ತಿಲ್ಲೆ.
ಇದು ಜ್ಞಾನಿಯ ಲಕ್ಷಣ – ಸರ್ವದಾ ಆನಂದಲ್ಲಿದ್ದು ಪ್ರಪಂಚದ ಯಾವ ಬದಲಾವಣೆ ಕಷ್ಟ ದುಃಖ ಅವರ ಸ್ಪರ್ಶಿಸುತ್ತಿಲ್ಲೆ.

ಭಗವದ್ಗೀತೆಲಿ ಹೇಳಿದಾಂಗೆ –

ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ |
ಲಿಪ್ಯತೆ ನ ಸ ಪಾಪೇನ ಪದ್ಮ ಪತ್ರಮಿವಾಂಭಸಾ ||

(ಆರು ಬ್ರಹ್ಮಾರ್ಪಣ ಭಾವಂದ ಅಸಂಗವಾಗಿ ಕರ್ಮವ ಮಾಡ್ತನೋ – ಅವಂಗೆ ತಾವರೆಎಲೆ ಹೇಂಗೆ ನೀರಿಲ್ಲಿ ಚೆಂಡಿ ಆಗದ್ದೆ ಇರುತ್ತೋ – ಹಾಂಗೆಯೇ ಪಾಪದ ಅಂಟಿಲ್ಲದ್ದೆ ಇರುತ್ತ).

ಯೋಗ ಶಾಸ್ತ್ರಲ್ಲಿಯೂ – ನಮ್ಮ ಶರೀರಲ್ಲಿ ಕೆಲವು ಶಕ್ತಿ ಕೇಂದ್ರ ಇರ್ತಡ.
ಇದರ ‘ಚಕ್ರ’ ಹೇಳಿ ಹೆಸರಿಸಿದ್ದವು. ಪ್ರತಿಯೊಂದು ಚಕ್ರವೂ ಇಂತಿಷ್ಟು ದಳಗಳುಳ್ಳ ಕಮಲದ ಹೂವಿನಾಂಗೆ ಹೇಳಿ ಸೂಚಿತ ಇದ್ದಡ.
ಮಾತ್ರವಲ್ಲ ಧ್ಯಾನಕ್ಕೆ ‘ಪದ್ಮಾಸನ’ಲ್ಲಿ ಕೂರೆಕು ಹೇಳಿ ಆದೇಶ.

ಭಗವಂತನ ನಾಭಿಯಿಂದ ಒಂದು ಕಮಲವು ಉಧ್ಬವಿಸಿ ಅದರಿಂದ ಸೃಷ್ಟಿ ಕಾರ್ಯಕ್ಕೆ ಬ್ರಹ್ಮನ ಆವಿರ್ಭಾವ ಆದ್ದು ಹೇಳಿ ನಾವು ಓದಿದ್ದು.
ಆದಕಾರಣ ಸೃಷ್ಟಿಕರ್ತಾ ಹಾಂಗೂ ಸೃಷ್ಟಿಗೆ ಆಧಾರವಾಗಿಪ್ಪ ಪಾರಮಾರ್ಥಿಕ ತತ್ವ ಇವ್ವೆರಡರ ಜೋಡುಸುವ ಒಂದು ಸೇತು ಹೇಳಿ ಕಲ್ಪನೆ. ತಾವರೆ ಬ್ರಹ್ಮನ ವಾಸಸ್ಥಾನ ‘ಬ್ರಹ್ಮಲೋಕ’ ದ ಸಂಕೇತ ಹೇಳಿಯೂ ನಂಬಿಕೆ.

‘ಸ್ವಸ್ತಿಕ’ ಹೇಳ್ವ ಶುಭ ಸಂಕೇತವು ಕಮಲದ ವಿಸ್ತೀರ್ಣ ಹೇಳಿಯೂ ನಂಬಿಕೆ ಇದ್ದು.

ಹರೇ ರಾಮ.

(ಸಂಗ್ರಹ)

ಚೆನ್ನೈ ಬಾವ°

   

You may also like...

14 Responses

  1. ಶರ್ಮಪ್ಪಚ್ಚಿ says:

    ಒಳ್ಳೆ ವಿಚಾರಂಗೊ.
    ಸೂರ್ಯನ ಕಿರಣಕ್ಕೆ ಅರಳುವ ತಾವರೆ ಹಾಂಗೆ, ನಮ್ಮ ಜ್ಞಾನ ಭಂಡಾರವೂ ವಿಕಸನ ಆಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *