ನಾವು ಎಂತಕೆ ಮಂಗಳಾರತಿ ಬೆಳಗುಸುತ್ತದು?

May 5, 2011 ರ 6:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಾಂಪ್ರದಾಯಿಕ ವಾ ನಿತ್ಯ ಪೂಜಾ ಮಾಡಿಕ್ಕಿ ಅಕೇರಿಗೆ ಮಾಡುವ ಕ್ರಿಯೆಯೇ ಮಂಗಳ ನೀರಾಜನ ಅಥವಾ ಮಂಗಳಾರತಿ.
ಗಣ್ಯ ವ್ಯಕ್ತಿಗಳ ಹಾಗೂ ಸಾಧು ಸಂತರ ಬರಮಾಡಿಕೊಂಬಗಳೂ ಆರತಿ ಎತ್ತುತ್ತು. ಮಂಗಳಾರತಿ ಜೊತೇಲಿ ಶಂಖನಾದ ಜಾಗಟೆ ಜೈಘಂಟೆ ಮಣಿ ತಾಳ ನಾದವನ್ನೂ ಮಾಡಿಕೊಂಬದು ಪದ್ಧತಿ.

ಮಂಗಳಾರತಿ ಶೋಡಶೋಪಚಾರ ಪೂಜಾವಿಧಿಲಿ ಬಪ್ಪ ಹದಿನಾರು ವಿಧಾನಲ್ಲಿ ಒಂದು.
(ಧ್ಯಾನ ಆವಾಹನ ಆಸನ ಪಾದ್ಯ ಅರ್ಘ್ಯ ಆಚಮನ ಸ್ನಾನ ವಸ್ತ್ರ ಉಪವೀತ ಆಭರಣ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ಮಂಗಳನೀರಾಜನ ಮಂತ್ರಪುಷ್ಪ ಪ್ರದಕ್ಷಿಣ ನಮಸ್ಕಾರ) .

ಆರತಿಯ ಬಲದ ಕೈಲಿ ಹಿಡುಕ್ಕೊಂಡು ಪ್ರದಕ್ಷಿಣಾಕಾರವಾಗಿ ವಿಗ್ರಹ / ಮೂರ್ತಿ ಸಂಪೂರ್ಣವಾಗಿ ಬೆಳಗುಸುತ್ತು / ಎತ್ತುತ್ತದು ಸಾಮಾನ್ಯ ಕಾಣುತ್ತು. ಅನುಭವಸ್ಥರು, ಭಟ್ಟಕ್ಕೊ, ದೇವಸ್ಥಾನಲ್ಲಿ ನಾವು ಗಮನಿಸಿರೆ ಕ್ರಮವಾಗಿ ಪಾದ ಹೃದಯ ಮುಖ ಆಮೇಲೆ ವಿಗ್ರಹ ಮುಂಭಾಗ ಸುತ್ತು (ಸರ್ವಾಂಗ ಹೇಳ್ವ ಅರ್ಥಲ್ಲಿ)  ಮೂರು ಮೂರು ಸುತ್ತು ಹೀಂಗೆ ಒಟ್ಟು ಹನ್ನೆರಡು ಸುತ್ತು  ಏಕಪ್ರಕಾರವಾಗಿ (ನಿಶ್ಚಿತ ಒಂದೇ ಕ್ರಮಪ್ರಕಾರ ವೇಗಲ್ಲಿ) ಆರತಿ ಎತ್ತೊದರ ಕಾಂಗು. ಕೆಳಭಾಗಂದ ಎಡತ್ತಿಂದಾಗಿ ಬಲತ್ತಿಂಗೆ ವೃತ್ತಾಕಾರಲ್ಲಿ ಸುರುಮಾಡಿ, ಅಕೇರಿಗೆ ಸುರುಮಾಡಿದ ಕೆಳಭಾಗಂದ ಮೇಗೆ ಮೋರೆ ವರೇಗೆ ಸರ್ತಕ್ಕೆ ತಂದು ನಿಲ್ಸುವದು. ಅದರ ನೋಡ್ಲೂ ಒಂದು ಚಂದ ಇರ್ತು. ಮನಸ್ಸಿಂಗೂ ಪರಮಾತ್ಮನ ಆನಂದ ಅನುಭವ ಆವ್ತು. (ಅರಡಿಯದ್ದವು ಕೈ ಬಚ್ಚುತ್ತಷ್ಟು ಹೊತ್ತು ವಾ ಮತ್ತಾಣ ಆರತಿ ಹೊತ್ತಿಸಿ ಅಪ್ಪಷ್ಟು ಹೊತ್ತು ಸುತ್ತಿಗೊಂಡೇ ಇರ್ತವು. ಗೊಂತಿಲ್ಲದ್ದವು ಒಟ್ಟು ಮೂರು ಸುತ್ತು ಚಂದಕೆ ಎತ್ತಿ ಬಿಟ್ರೆ ಅದೇ ಚಂದ). ಸರ್ತ ಕೂದೊಂಡು ಆರತಿ ಬೆಳಗುವವನ ನೋಡ್ಲೂ ಚಂದ.
ಆ ಸಂದರ್ಭಲ್ಲಿ ನಾವು ಭಕ್ತಿಯಿಂದ ಮಾನಸಿಕವಾಗಿ ವಾ ಗಟ್ಟಿಯಾಗಿ ಪ್ರಾರ್ಥನೆಯನ್ನೋ, ಮಂತ್ರಂಗಳನ್ನೋ, ಸ್ತೋತ್ರಂಗಳನ್ನೋ , ಭಜನೆ ಹಾಡುಗಳನ್ನೋ ಹೇಳುವದು ಅಥವಾ ಸುಮ್ಮನಿದ್ದು ಪರಮಾತ್ಮನ ವಿಗ್ರಹ / ಮೂರ್ತಿಯ ನೋಡುತ್ತಾ ಇರುತ್ತು. ಮಂಗಳಾರತಿ ನಡವ ಸಂದರ್ಭಲ್ಲಿ ನಮ್ಮ ಪ್ರಾರ್ಥನಗೆ ವಿಶೇಷ ಬಲ ಇದ್ದ ಹಾಂಗೂ ವಿಗ್ರಹ ವಿಶೇಷ , ದಿವ್ಯ ಕಳೆ, ಚೇತನಂದ ಇಪ್ಪ ಹಾಂಗೆ ಕಾಣುತ್ತು. ಮಂಗಳಾರತಿ ಆದ ಮೇಲೆ ಆರತಿ ತೆಕ್ಕಂಬದಕ್ಕೂ ಕ್ರಮ ಇದ್ದು. ಉರಿತ್ತಾ ಇಪ್ಪ ಮಂಗಳಾರತಿಗೆ ನಮ್ಮ ಎರಡೂ ಕೈಗಳ ಜೊತೆಗೂಡಿಸಿ ಆರತಿಗೆ ಒಡ್ಡಿ ಹಸ್ತವ ಕಣ್ಣಿಂಗೆ ಒತ್ತಿಕ್ಕೊಳ್ಳೆಕು , ಮೂಸಿಗೊಳ್ಳೆಕು. ಇದು ಕಣ್ಣುಗೊಕ್ಕೆ, ಮೂಗಿಂಗೆ ವಿಶೇಷ ಪ್ರಭಾವ ಬೀರುತ್ತಡ.

ಮಂಗಳಾರತಿ ತುಪ್ಪಲ್ಲಿ / ಎಣ್ಣೆಲಿ ಅದ್ದಿದ ಬತ್ತಿಲಿ ಅಥವಾ ಕರ್ಪೂರ ಉರಿಸಿ ಮಾಡುತ್ತದು. ದೀಪ ಹೊತ್ತಿದ ಹೊಗಗೆ ಅಣುಶಕ್ತಿ ಬಾಧೆಯ ಕಡಮ್ಮೆ ಮಾಡುವ ಗುಣ ಇದ್ದು ಹೇಳಿ ವಿಜ್ನಾನಿಗೋ ಕಂಡುಹಿಡುದ್ದವಡ.
(ಅಂಬಗ ಜಪಾನಿಲ್ಲಿ ಇದರ ಮದಾಲು ಮಾಡುವನೋ ಹೇಳಿ ಎನ್ನತ್ರೆ ಕೇಳೆಡಿ ). ಮಂಗಳಾರತಿ ಸಮಯಲ್ಲಿ ನಾವು ಶಾಂತಚಿತ್ತರಾಗಿ ಮನಸ್ಸು ಪರಮಾತ್ಮನಲ್ಲಿ ಶ್ರದ್ಧಾ ಭಕ್ತಿಂದ ಇದ್ದುಗೊಂಡು ದೇವರ ದಿವ್ಯ ದರುಶನದ ಪರಮಾನಂದವ ಪಡೆತ್ತು, ನಮ್ಮಲ್ಲಿ ಒಂದು ರೀತಿಯ ಹೊಸ ಶಕ್ತಿ, ಚೇತನ , ಸ್ಫೂರ್ತಿ ಪ್ರಚೋದನೆ ಆವ್ತು.
ಭಗವಂತನ ಮೂರ್ತಿಗೆ ಬೆಳಗಿದ ಈ ಜ್ಯೋತಿಯು ನಮ್ಮ ಬುದ್ಧಿಯನ್ನೂ ಬೆಳಗಲಿ, ದೃಷ್ಟಿಯು ದಿವ್ಯತೆಯ ಕಡೆ ನೋಡುವಂತಾಗಲಿ ಮತ್ತು ನಮ್ಮ ವೃತ್ತಿಗೊ ನೈತಿಕ ಹಾಗೂ ಅಧ್ಯಾತ್ಮಿಕತೆಂದ ಕೂಡಿರಲಿ ಹೇಳ್ವ ತಾತ್ಪರ್ಯ.

ನಾವೀಗ ಪ್ರಸ್ತಾಪ ಮಾಡಿದ್ದು ‘ಮಂಗಳಾರತಿ’ ಹೇಳಿ ಒಂದು ಸ್ಥೂಲ ವಿಷಯವ. ಇದರೊಳ ಇನ್ನು ಸೂಕ್ಷ್ಮವಾಗಿ ಆರತಿಲಿ ಎಷ್ಟು ವಿಧ, ಅದರ ಐತಿಹ್ಯ,  ಔಚಿತ್ಯ, ಮಹತ್ವದ ಬಗ್ಗೆ ವಾ ಏಕಾರತಿ, ಪಂಚಾರತಿ, ನೆಲಆರತಿ, ಸರ್ಪಾರತಿ, ಕೂರ್ಮಾರತಿ, ನೀರಾಜನ ನೀಲಾಂಜನ  ಇತ್ಯಾದಿ ಹೇಳಿರೆ ಎಂತರ, ಇದಕ್ಕೆ ಯಾವ ಬತ್ತಿ ಹಾಕೆಕು, ಎಷ್ಟು ಬತ್ತಿ ಹಾಕೆಕು, ಎಷ್ಟು ಉದ್ದಕೆ ಬೇಕು,  ಎಣ್ಣೆ ಆದರೆ ಯಾವ ಎಣ್ಣೆ, ಬತ್ತಿಗೆ ಎಷ್ಟು ಎಣ್ಣೆ / ತುಪ್ಪ  ಹಾಕೆಕು, ಯಾವ ಕೈಲಿ ಹಾಕೆಕು, ಬತ್ತಿ  ಹತ್ತಿದೋ ವಸ್ತ್ರದ್ದೋ ನೂಲಿಂದೋ (ಹತ್ತಿ ಬತ್ತಿಯೇ ಉತ್ತಮ ಹೇಳಿ ಬಲ್ಲವರ ಮಾತು), ನೆಣೆಹರ್ಕು ಹಳತ್ತು ವೇಷ್ಟಿಯೋ ಹೊಸ ತೋರ್ತೋ  ಹೀಂಗೆಲ್ಲ ಸಂಶಯಕ್ಕೆ ಮಾಹಿತಿ ಎನಗೆ ಈ ವರೇಗೆ ಸಿಕ್ಕಿದ್ದಿಲ್ಲೆ. ನಿಂಗಳತ್ರೆ ಇದ್ದರೆ ಸ್ವಾಗತಿಸುತ್ತು. ಅಷ್ಟನ್ನಾರ ಈ ವರೆಂಗೆ ನಮ್ಮಲ್ಲಿ ಯಾವುದು ವಾಡಿಕೆಯೋ ಅದು ಸರಿ.

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ಮಂಗಳಾರತಿ ಬೆಳಗುಸುತ್ತದು?, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  [ಭಗವಂತನ ಮೂರ್ತಿಗೆ ಬೆಳಗಿದ ಈ ಜ್ಯೋತಿಯು ನಮ್ಮ ಬುದ್ಧಿಯನ್ನೂ ಬೆಳಗಲಿ, ದೃಷ್ಟಿಯು ದಿವ್ಯತೆಯ ಕಡೆ ನೋಡುವಂತಾಗಲಿ ಮತ್ತು ನಮ್ಮ ವೃತ್ತಿಗೊ ನೈತಿಕ ಹಾಗೂ ಅಧ್ಯಾತ್ಮಿಕತೆಂದ ಕೂಡಿರಲಿ ಹೇಳ್ವ ತಾತ್ಪರ್ಯ.]-ಒಳ್ಳೆ ಮಾಹಿತಿ.
  ಯಾವದೇ ಕರೆಂಟಿನ ದೀಪಂಗೊ ಇಲ್ಲದ್ದೆ, ದೇವರ ಗುಡಿಲಿ ದೀಪ ಹೊತ್ತುಸಿ, ಚೆಂದಕೆ ಆರತಿ ಎತ್ತುವದರ ನೋಡುವದು ಮನಸ್ಸಿಂಗೆ ತುಂಬಾ ಸಂತೋಷ ಕೊಡ್ತು. ಎಲ್ಲವನ್ನೂ ಮರತ್ತು, ನಮ್ಮ ದೃಷ್ಟಿ ಮತ್ತೆ ಮನಸ್ಸು ಅಲ್ಲಿಯೇ ತಲ್ಲೀನ ಅಪ್ಪ ಆ ಸಂದರ್ಭ ಅನುಭವಕ್ಕೆ ಇಪ್ಪದು, ವಿವರ್ಸಲೆ ಎಡಿಯದ್ದದು.
  “ಅವನ ಮೋರೆಗೆ ಸಮಕ್ಕೆ ಮಂಗಳಾರತಿ ಮಾಡಿದೆ” ಹೇಳಿ ಬ್ಬೈತ್ತ ಕ್ರಮವೂ ಇದ್ದು ಅಲ್ಲದ್ದಾ?

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಕಳುದ ಸರ್ತಿ ನಮ್ಮ ಶ್ರೀ ಗುರುಗೊ ಚೆನ್ನೈಗೆ ಬಂದಿಪ್ಪಗ ಕರೆಂಟಿನ ದೀಪಂಗಳ ಆರಿಸಿ ಬರೆ ನೆಣೆ ದೀಪಲ್ಲಿ ಪೂಜೆ ಮಾಡಿತ್ತಿದ್ದವು. ನಿಜಕ್ಕೂ ಮರವಲೆಡಿಯ. ನಮ್ಮ ಮನಸ್ಸಿಂಗೆ ಅತ್ಯಂತ ಚೇತೋಹಾರಿ ಆಗಿತ್ತು. ಒಪ್ಪಕ್ಕೆ ಧನ್ಯವಾದ ಅಪ್ಪಚ್ಚಿಗೆ.

  [ಅವನ ಮೋರಗೆ ಮಂಗಳಾರತಿ ಮಾಡಿದ್ದು] – ಎಷ್ಟು ದಕ್ಕುಗೋ! ಅಲ್ಲದೋ

  [Reply]

  VA:F [1.9.22_1171]
  Rating: 0 (from 0 votes)
 3. ಮುಣ್ಚಿಕಾನ ಭಾವ

  ಲೇಖನ ಒಪ್ಪ ಆಯಿದು. “ಮಂಗಳಾರತಿ”ಯ ಮಹತ್ವದ ಬಗ್ಗೆ ವಿವರಿಸಿದ್ದಕ್ಕೆ ಚೆನ್ನೈಭಾವಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಆರತಿಯ ಬೆಣಚ್ಚಿ ಕತ್ತಲೆಯ ಕಳದು ಭಕ್ತ೦ಗೆ ಪರಮಾತ್ಮನ ಮೂರ್ತಿಯ ದರ್ಶನ ಮಾಡುಸುತ್ತು,ಅಲ್ಲದೋ ಚೆನ್ನೈಭಾವ.
  ಆ ಹೊತ್ತಿ೦ಗೆ ವಿದ್ಯುತ್ ದೀಪ೦ಗ ಇಲ್ಲದ್ದರೆ ಸಿಕ್ಕುವ ಅನುಭವವೇ ಬೇರೆ.
  ಆರತಿಯ ಕಣ್ಣಿ೦ಗೆ ಒತ್ತಿಗೊ೦ಬ ಸ೦ಕೇತದ ಮಹತ್ವ ಚೆ೦ದಕೆ ಬರದ್ದಿ.ಸದಭಿರುಚಿಯ ಚಿ೦ತನೆಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಮಂಗಳಾರತಿ ಬಗೆಲಿ ವಿವರಪೂರ್ಣ ಲೇಖನ. ಎಲ್ಲ ಸಂಶಯಂಗಳ ನಿವಾರಣೆ ಮಾಡಿತ್ತದ. ಸಣ್ಣಗಿಪ್ಪಗ, ಮಣಿ ಆಡುಸೆಂಡು ಆರತಿ ಎತ್ತಲೆ ಹೆರಟು, ಆರತಿ ಆಡಿ, ಒಟ್ಟಿಂಗೆ ಮಣಿ ತಿರುಗಲೆ ಸುರುಆದ್ದು ನೆಂಪಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣಜಯಗೌರಿ ಅಕ್ಕ°ನೆಗೆಗಾರ°ಶುದ್ದಿಕ್ಕಾರ°ದೊಡ್ಮನೆ ಭಾವಜಯಶ್ರೀ ನೀರಮೂಲೆಶಾಂತತ್ತೆಪಟಿಕಲ್ಲಪ್ಪಚ್ಚಿದೀಪಿಕಾಅಜ್ಜಕಾನ ಭಾವಸಂಪಾದಕ°ವೇಣೂರಣ್ಣಮಾಷ್ಟ್ರುಮಾವ°ವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಶರ್ಮಪ್ಪಚ್ಚಿಕಾವಿನಮೂಲೆ ಮಾಣಿಪುಟ್ಟಬಾವ°ವಿಜಯತ್ತೆಯೇನಂಕೂಡ್ಳು ಅಣ್ಣಗಣೇಶ ಮಾವ°ಅಕ್ಷರ°ಕೇಜಿಮಾವ°ಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ