ನಾವು ಘಂಟಾನಾದ ಮಾಡುವದು ಎಂತಕೆ?

June 16, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲಾ ದೇವಸ್ಥಾನಂಗಳ ಮುಂಭಾಗಲ್ಲಿ ಒಂದು ವಾ ಹಲವು ಘಂಟೆಗಳ ತೂಗಿ ಹಾಕಿಯೊಂಡಿಪ್ಪದರ ಕಾಣುತ್ತು. ಭಕ್ತರು ದೇವಸ್ಥಾನ ಪ್ರವೇಶಿಸಿದೊಡನೆ ಆ ಘಂಟೆಯ ಘಂಟಾನಾದ ಮಾಡುತ್ತವು. ಆನಂತರ ಮುಂದೆ ಹೋಗಿ ದೇವರ ದರ್ಶನ ಮಾಡುತ್ತವು. ಮಕ್ಕೊಗೆ ಆ ಘಂಟೆಗಳ ಬಾರಿಸಿ ಆ ಶಬ್ಧಕ್ಕೆ (ನಾದ) ಅಪ್ಪ ಮೋಜೇ ನೋಡುವ ನವಗೂ ಖುಶೀ. ಮಕ್ಕೊಗೆ ಕೈಗೆ ಎಟಕದ್ರೆ ಅವರ ಎತ್ತಿ ಘಂಟೆ ಭಾರ್ಸಲೆ ಸಹಾಯ ಮಾಡುತ್ತವು.

ನಾವು ಹೀಂಗೆ ಘಂಟೆ ಬಡಿವದು ಎಂತಕೆ? ಗರ್ಭಗುಡಿಲಿಪ್ಪ ದೇವರ ಏಳ್ಸಲೋ?! ಆದರೆ, ದೇವರು ಒರಗುತ್ತ ಕ್ರಮ ಇಲ್ಲೆನ್ನೇ . ಅಲ್ಲಾ , ನಾವೂ ದೇವಸ್ಥಾನಕ್ಕೆ ಬಯಿಂದು ಹೇಳಿ ಅವಂಗೆ ತಿಳುಸಲೋ?. – ದೇವರು ಸರ್ವಶಕ್ತ ಸರ್ವಜ್ಞ . ಅವಂಗೆ ನಾವೂ ಬಯಿಂದು ಹೇಳಿ ಹಾಜರು ಹಾಕುವ ಅವಶ್ಯಕತೆ ಇಲ್ಲೆ. ಅಲ್ಲಾ , ದೇವರ ಸನ್ನಿಧಿಗೆ ಮುಂದೆ ಬಪ್ಪಲೆ ಅಪ್ಪಣೆಯೇ? ಪರಮಾತ್ಮ ಎಲ್ಲೋರಿಂಗೂ ಬೇಕಾದವ°. ಎಲ್ಲೋರನ್ನೂ ಸದಾ ಬರಮಾಡಿಗೊಳ್ತ°. ಅಂಬಗ ಎಂತಕೆ ಇದು ಏಕುಟು?!

ಘಂಟಾನಾದಂದ ಹೆರಡುವ ಶಬ್ದ (ನಾದ) ತರಂಗ ನಮ್ಮ ಕೆಮಿಗೂ ಕೆಮಿ ಸಂಬಂದೀ ನರಗಳ ಮೇಲೂ ಒಳ್ಳೆ ಪ್ರಭಾವ ಬೀರುತ್ತಡ. ಈ ನಾದ ತರಂಗ ಪರಮಾತ್ಮನ ಸಾರ್ವತ್ರಿಕ ನಾಮ – ‘ಓಂ’ಕಾರವ ಉತ್ಪಾದಿಸುತ್ತಡ. ದೇಹಶುದ್ಧಿ , ಮನಶುದ್ಧಿ ಆಗಿದ್ರೆ ಮಾತ್ರ ಪರಮಾತ್ಮನ ದರ್ಶನ ಭಾಗ್ಯ ಫಲ ಸಿಕ್ಕುವದು.

ನಿತ್ಯ ಪೂಜೆ, ವಿಶೇಷ ಪೂಜೆಗಳಲ್ಲಿಯೂ ನಾವೂ ಘಂಟಾನಾದ (ಮಣಿ) ಮಾಡುತ್ತು . ಮಂಗಳಾರತಿ ಸಮಯಲ್ಲಿ ಘಂಟಾನಾದದ ಜೊತೆ ಶಂಖ ಜಾಗಟೆ ಇತ್ಯಾದಿಯನ್ನೂ ಮೊಳಗುಸುವದು ಪ್ರಚಲಿತ. ಹೀಂಗೆ ಮಾಡುವದರಿಂದ ಇವುಗಳಿಂದ ಹೆರಡುವ ಸುಮಧುರ ನಾದ ತರಂಗ ಕೆಮಿಯ ಮೂಲಕ ನಮ್ಮ ನರಂಗಳ ಪ್ರವಹಿಸಿ ಮನಸ್ಸಿಂಗೂ ಹರ್ಷವನ್ನುಂಟುಮಾಡುತ್ತು. ಅಲ್ಲದೇ ದುಷ್ಟ ಶಕ್ತಿಯೂ ಹತ್ರ ಬತ್ತಿಲ್ಲೆ. ಆದಕಾರಣ ದೇವರ ಉಪಾಸನಗೆ ಶಾಂತ ಚಿತ್ತ ವಾತಾವರಣ ನಿರ್ಮಾಣ ಆವುತ್ತು.

ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ ||

ಈ ಘಂಟಾನಾದಂದ ಸದ್ಗುಣ ಹಾಗೂ ಧಾರ್ಮಿಕ ಪ್ರವೃತ್ತಿ ಎನ್ನಲ್ಲಿ ಪ್ರವಹಿಸಲಿ ಮತ್ತು ಆಸುರೀ ಹಾಗೂ ದುಶ್ಚಟ ಹೊರ ದೂಡಲ್ಪಡಲಿ.
ಹೀಂಗೆ ದಿವ್ಯತೆಯ ಆವಾಹಿಸುತ್ತೆ ಹೇಳ್ವ ತಾತ್ಪರ್ಯ.

ಹರೇ ರಾಮ.

(ಸಂಗ್ರಹ)

ನಾವು ಘಂಟಾನಾದ ಮಾಡುವದು ಎಂತಕೆ?, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. P.Ishwara Bhat

  ನಮ್ಮ ಕ್ರಮದ (ಯಯುರ್ವೆದ) ಮನ್ತ್ರನ್ಗಲ ಮುಝಿಗ್ಲ್ ವೆಬ್ ಸಇತೆ(muzigle web site) ಲಿ ಸಿಕ್ಕುವ ಹಾನ್ಗೆ ಮಾಡ್ಡೀದಕ್ಕೆ ಧನ್ಯವಾದ……..Excuse me…me trying kannada fonts….

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಪೆರ್ಮುಖ ಈಶ್ವರ ಮಾವಂಗೆ ಬೈಲಿಂಗೆ ಸ್ವಾಗತ. ಆನು ಬಹುದಿನಂದ ನಿರೀಕ್ಷೆಲಿ ಇದ್ದ ನಿಂಗಳ ಇಂದು ಬೈಲಿಲಿ ಕಂಡು ಕುಶೀ ಆತು. ಒಪ್ಪಣ್ಣಂಗೂ ಕೂಡ.

  ಬರುತ್ತಾ ಇರಿ. ಬರೆತ್ತಾ ಇರಿ. ಕನ್ನಡ ಬರವಲೆ ಸುರುವಿಂಗೆ ರಜಾ ಕಷ್ಟ ಆದಾಂಗೆ ಅಕ್ಕು. ಇಲ್ಲಿ ಕನ್ನಡ ಲಿಪಿ ಇದ್ದು ನೋಡಿ. ಅದರ ಆಯ್ದುಗೊಂಡು ಅದರ ಪಕ್ಕಲ್ಲಿಪ್ಪ ‘?’ ಒಂದಾರಿ ಒತ್ತಿ ನೋಡಿ. ಯಾವ ಅಕ್ಷರ ಯಾವ ರೀತಿ ಟೈಪ್ ಮಾಡೆಕು ಹೇಳಿ ಅಲ್ಲಿ ಹೆಲ್ಪ್ ಇದ್ದು.

  ನಿಂಗಳ ಒಪ್ಪಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಒಪ್ಪಕ್ಕಚೂರಿಬೈಲು ದೀಪಕ್ಕಶ್ಯಾಮಣ್ಣಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುವಿಜಯತ್ತೆವಾಣಿ ಚಿಕ್ಕಮ್ಮವಿದ್ವಾನಣ್ಣಅನುಶ್ರೀ ಬಂಡಾಡಿದೊಡ್ಡಮಾವ°ಬಟ್ಟಮಾವ°ಶೀಲಾಲಕ್ಷ್ಮೀ ಕಾಸರಗೋಡುಗಣೇಶ ಮಾವ°ಕಳಾಯಿ ಗೀತತ್ತೆಸುಭಗಡಾಗುಟ್ರಕ್ಕ°ಪೆರ್ಲದಣ್ಣvreddhiಶೇಡಿಗುಮ್ಮೆ ಪುಳ್ಳಿವೆಂಕಟ್ ಕೋಟೂರುಪ್ರಕಾಶಪ್ಪಚ್ಚಿವೇಣೂರಣ್ಣಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ