ನಾವು ಎಂತಕೆ ಇನ್ನೊಬ್ಬಂಗೆ ಅಥವಾ ಮಾತಾ ಪಿತೃ ಗುರು ಹಿರಿಯರಿಂಗೆ ನಮಸ್ಕರಿಸುತ್ತು?

ನಾವು ಒಬ್ಬ ಇನ್ನೊಬ್ಬನ ಭೇಟಿಯಪ್ಪಗ ‘ನಮಸ್ತೆ’, ‘ನಮಸ್ಕಾರ’ ಹೇಳಿ ಸ್ವಾಗತಿಸುತ್ತು.
ನಮಸ್ಕಾರ , ನಮಸ್ತೆ ಹೇಳುವಾಗ ನಮ್ಮ ಎರಡೂ ಕೈಗಳ ಎದೆಯ ಮುಂದೆ ಜೋಡಿಸಿ ತಲೆ ತುಸು ಬಾಗಿ ಪರಸ್ಪರ ವಂದಿಸುತ್ತು.
ಈ ರೀತಿಯ ವಂದನೆ ಸರ್ವರಿಂಗೂ ಅನ್ವಯಿಸುತ್ತು , – ನಮಗಿಂತ ಹಿರಿಯರು, ಕಿರಿಯರು, ಸಮಕಾಲೀನರು, ಮಿತ್ರರು ವಾ ಆಗಂತುಕರು ಅಥವಾ ಅಪರಿಚಿತರೊಂದಿಗೆ ಭೇಟಿ.
ಶಾಸ್ತ್ರವು ನಿಯಮಿಸಿದ ಸಾಂಪ್ರದಾಯಿಕ ಸ್ವಾಗತಲ್ಲಿ ‘ನಮಸ್ಕಾರ’ವೂ ಒಂದು.

ಸಾಷ್ಟಾಂಗ ಪ್ರಣಾಮ ದೇವರಿಂಗೆ, ಹಿರಿಯರಿಂಗೆ. ಒಬ್ಬ ಇನ್ನೊಬ್ಬನ ಭೇಟಿಯಪ್ಪಗ ಹೇಳುವ ‘ನಮಸ್ತೆ’ ಪರಸ್ಪರ ಗೌರವ ಸೂಚಕ.
ನಮಸ್ತೆ ನಮಸ್ಕಾರ ವು ಅನೌಪಚಾರಿಕ ಅಥವಾ ಸಾಂಪ್ರದಾಯಿಕ ಸ್ವಾಗತ ಆಗಿಕ್ಕು; ಅಂದರೂ ಇದು ಭಾರತ ಸಂಸ್ಕೃತಿಯ  ಸಂಕೇತ ಹಾಗೂ ಪೂಜೆಯ ಒಂದು ಕ್ರಿಯ ಕೂಡ.

– ನಮಃ + ತೇ =‘ನಮಸ್ತೆ’.

ನಾನು ನಿನಗೆ ನಮಸ್ಕರಿಸುತ್ತೇ, ಗೌರವ ಅರ್ಪಿಸುತ್ತೇ. ನಮ (ನ ಮಮ) – ನನ್ನದಲ್ಲ. ಇನ್ನೊಬ್ಬನ ಸಮ್ಮುಖಲ್ಲಿ ನಮ್ಮ ಅಹಂ ಏನೂ ಇಲ್ಲೆ ಹೇಳಿ ಸೂಚ್ಯ.
ಎರಡು ಕರ ಎದೆಯ ಮುಂದೆ ಜೋಡಿಸಿ ಸ್ವಾಗತಿಸುವಾಗ ನಾವು ಮನಸ್ಸಿಲ್ಲಿ ಭಾವಿಸುದು ‘ನಮ್ಮೆಲ್ಲರ ಮನಸ್ಸು ಏಕ ವಿಚಾರಲ್ಲಿ ಇರಲಿ. ಶಿರಬಾಗಿ ವಂದಿಸುವಾಗ ಸ್ನೇಹಪರತೆ, ವಿನಯತೆಯ ಸೂಚಿಸುವ ಒಂದು ಶ್ರೇಷ್ಠ ಪದ್ಧತಿ.

ಆಧ್ಯಾತ್ಮಿಕ ಹಿನ್ನಲೆ ಇನ್ನೂ ವಿಶೇಷವಾಗಿ ಅರ್ಥೈಸುತ್ತು. ಪ್ರಾಣಶಕ್ತಿ, ಚೈತನ್ಯ, ಆತ್ಮ ಸ್ವರೂಪ ಅಥವಾ ಎನ್ನಲ್ಲಿಪ್ಪ ಪರಮಾತ್ಮನೇ ಎಲ್ಲೋರಲ್ಲೂ ಇಪ್ಪದು ಹೇಳ್ವ ಭಾವನೆ.
ಈ ಏಕತೆಯ ನಮ್ಮ ಎರಡೂ ಕೈ ಜೋಡಿಸಿ ಸಾಂಕೇತಿಕವಾಗಿ ಗುರುತುಸುತ್ತು. ನಾವು ಭೇಟಿಯಪ್ಪ   ವೈಕ್ತಿಲಿ ದಿವ್ಯವಾದ ಚೈತನ್ಯ ಶಕ್ತಿಯ ಗಮನಿಸಿ ಅವಂಗೆ ಶಿರಬಾಗಿ ವಂದಿಸುತ್ತು.
ನಾವು ಗುರು ಹಿರಿಯರಿಂಗೆ ನಮಸ್ಕರಿಸುವಾಗ ಅಂತರ್ವೀಕ್ಷಣೆ ರೀತಿಲಿ
ನಮ್ಮ ಕಣ್ಣುಗಳ ಮುಚ್ಚಿ ‘ಹರಿ ಓಂ’ ‘ರಾಮ್ ರಾಮ್’ ‘ಹರೇ ರಾಮ್’ ‘ಹರೇ ಕೃಷ್ಣಾ’ ‘ಜೈ ಶ್ರೀರಾಮ್ಓಂ ಶಾಂತಿ’ ಇತ್ಯಾದಿ ಪದಗಳ ಆ ದಿವ್ಯತೆಯ ಸೂಚನಾತ್ಮಕವಾಗಿ  ಮನನ ಮಾಡಿಕೊಳ್ಳುತ್ತು.

ಈ ಸಾಂಕೇತಿಕ ಅರ್ಥವ ನಾವು ತಿಳುಕೊಂಡಪ್ಪಗ ನಮ್ಮ ಗೌರವಾರ್ಪಣೆಯು ಬರೀ ತೋರಿಕೆ ಆಗಿರದ್ದೆ ಪರಸ್ಪರ ಅನ್ಯೋನ್ಯತೆ ಹಾಗೂ ಗಾಢ ಪ್ರೀತ್ಯಾದರಂಗಳಿಗೆ ಅವಕಾಶ ಮಾಡಿಕೊಡುತ್ತು.

ಭಾರತೀಯ ಸಂಪ್ರದಾಯಸ್ಥರು ಮಾತಾ ಪಿತೃ ಗುರು ಹಿರಿಯರಿಂಗೆ ಮತ್ತು ಸಾಧು ಸಂತರಿಂಗೆ ಅವರ ಪಾದ ಮುಟ್ಟಿ ಸಾಷ್ಟಾಂಗ ಪ್ರಣಾಮ ಸಲ್ಲುಸುತ್ತು.
ಇದಕ್ಕೆ ಪ್ರತಿಕ್ರಿಯಿಸಿ ಅವ್ವು ನಮಸ್ಕರಿಸಿದವನ ಶಿರ ನೇವರಿಸಿ ಅಶೀರ್ವದಿಸುತ್ತವು.
ಸಾಷ್ಟಾಂಗ ಮಾಡುವಾಗ ತನ್ನ ಗೋತ್ರ ಪ್ರವರ ಹೇಳಿಗೊಂಡೇ (ತನ್ನ ತಾನೇ ಪರಿಚಯಿಸುವುದು ಮಾತ್ರವಲ್ಲ ತನ್ನ ಕುಲ ಗೋತ್ರ ಪ್ರವರ ಇತ್ಯಾದಿ ವಿವರ ತಿಳಿಯಪಡುಸುದು) ನಮಸ್ಕರಿಸೆಕು ಹೇಳಿ ಶಾಸ್ತ್ರ.

ಮನುಷ್ಯ ತನ್ನ ಪಾದದ ಮೇಲೆ ನಿಂಬದು.
ಸಾಷ್ಟಾಂಗ ಪ್ರಣಾಮಲ್ಲಿ ಗುರು ಹಿರಿಯರ ಪಾದಂಗಳ ಸ್ಪರ್ಸಿಸುವುದು ಹೇಳಿರೆ ಅವರ ವಯೋಧರ್ಮ, ಬಾಳಿನ ಪರಿಪಕ್ವತೆ, ಸಭ್ಯತೆ ಮತ್ತು ದಿವ್ಯತೆಗೆ ನಾವು ಸಲ್ಲುಸುವ ಗೌರವ ಸೂಚನೆ. ಅವು ನಮ್ಮ ಅಭ್ಯುದಯಕ್ಕೆ  ನೀಡಿದ ನಿಸ್ವಾರ್ಥ ಪ್ರೇಮ, ತ್ಯಾಗ, ಪಟ್ಟ ಪರಿಶ್ರಮಂಗೊಕ್ಕೆ ನಾವು ನೀಡುವ ಕಿಂಚಿತ್ ಗೌರವಾರ್ಪಣೆ, ಕೃತಜ್ಞತಾ ಭಾವ.  ಇಂತಹ ಸಂಸ್ಕೃತಿಂದ ಗುರು ಹಿರಿಯರ ಮಹತ್ವ ತಿಳ್ಕೊಂಬ ವಿನಯವ ನಮ್ಮಲ್ಲಿ ರೂಢಿ ಆವುತ್ತು.

ಗುರುಹಿರಿಯರ ನೀತಿಯುಕ್ತ ಆದೇಶ, ಸಲಹೆ, ಮಾರ್ಗದರ್ಶನ, ಆಶೀರ್ವಾದ ನಮ್ಮಲ್ಲಿ ಸಕಾರಾತ್ಮಕ ಸ್ಪಂದನ ಉಂಟುಮಾಡುತ್ತು. ನಮ್ಮಲ್ಲಿ ಒಳಾಂದೊಳ ಆತ್ಮ ಸ್ಥೈರ್ಯ ಬಲ  ಚೇತನಾ ಶಕ್ತಿ ವಿಶ್ವಾಸ ಮೂಡುತ್ತು. ಇಂತಹ ಶಕ್ತಿಯ ಪ್ರೀತಿ ಪ್ರೇಮ ಭಯ ಭಕ್ತಿಂದ ಸ್ವೀಕರುಸಲೆ ಆವ್ತು ಸಾಷ್ಟಾಂಗ ಪ್ರಣಾಮ.

ಗೌರವಾರ್ಪಣೆ ಸಲ್ಲುಸುವ ವಿವಿಧ ರೀತಿ :

ಪ್ರತ್ಯುತ್ತಾನ – ಗುರು ಹಿರಿಯರು ಸಮೀಪಿಸಿದಾಗ ಎದ್ದು ನಿಂದು ಕೈ ಮುಗುದು ಸ್ವಾಗತಿಸುವುದು.

ನಮಸ್ಕಾರ, ನಮಸ್ತೆ, ಹರಿ ಓಂ, ಹರೇ ರಾಮ, ಎಂಬಿತ್ಯಾದಿ ಉಚ್ಚರದೊಂದಿಗೆ  ಕೈ ಮುಗುದು ಗೌರವಿಸುವದು.

ಉಪ ಸಂಗ್ರಹಣ – ಗುರು ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು.

ಸಾಷ್ಟಾಂಗ – ಎರಡು ಪಾದ, ಎರಡು ಮೊಣಕಾಲು, ಎದೆ, ಹಣೆ, ಎರಡು ಕೈ ತೋಳು – ಇಷ್ಟೂ ನೆಲಕ್ಕೆ ಸ್ಪರ್ಸಿಸುವಂತೆ ನೀಟಂಬ ಬಿದ್ದು ಅವರ ಪಾದ ಮುಟ್ಟಿ ನಮಸ್ಕರಿಸುವದು. ಸಾಷ್ಟಾಂಗ ಪ್ರಣಾಮ ಗೆಂಡು ಮಕ್ಕೊಗೆ ಮಾತ್ರ ವಿಹಿತ. ಹೆಮ್ಮಕ್ಕೊಗೆ ನಿಷಿದ್ದ. ಹೆಮ್ಮಕ್ಕೋ ಮಂಡಿಯೂರಿ ನಮನ.  (ಹೆಮ್ಮಕ್ಕಳ ಮುಂಬದಿ  ಹಾಗೂ ಗೆಂಡು ಮಕ್ಕಳ ಹಿಂಬದಿ ಶಂಖಕ್ಕೆ ಸಮಾನ, ಶಂಖವ ನಾವು ಬರೀ ನೆಲಲ್ಲಿ ಮಡುಗುಲೆ ಇಲ್ಲೆ. – ಆಧಾರಂ ನಿಧಾಯ , ತದುಪರಿ ಶಂಖಂ ನಿಧಾಯ ಹೇಳಿ ಹೇಳಿದ್ದು., ಗೆಂಡು ಮಕ್ಕೊ ಅಂತೆ ನೆಲಕ್ಕಲ್ಲಿ ಕೂಬಲಾಗ- ಮಣೆ , ಹಸೆ ಏನಾರು ಮಡುಗಿ ಅದರ ಮೇಗೆ ಕೂರೆಕ್ಕಡ)

ಪ್ರತ್ಯಭಿವಾದನ – ಗೌರವ ಸ್ವೀಕರಿಸಿದ್ದರ ಪುನಃ ಪ್ರತಿಬಿಂಬುಸುವದು / ಅರ್ಪಿಸುವದು.

ಆರು ಆರಿಂಗೆ ನಮಸ್ಕರಿಸೆಕು ಹೇಳಿ ಶಾಸ್ತ್ರಲ್ಲಿ ಹೇಳಿದ ಪ್ರಕಾರ , ಸಂಪತ್ತು, ವಂಶದ ಕೀರ್ತಿ, ವಯಸ್ಸು, ನೈತಿಕ ಬಲ, ಅಧ್ಯಾತ್ಮ ಜ್ಞಾನ, ಇತ್ಯಾದಿ ಸಾಧಕರಿಂಗೆ ತಪ್ಪದೇ ನಾವು ಗೌರವ ಸಲ್ಲುಸೇಕು. ಒಬ್ಬ ರಾಜ ಒಂದು ಸಾಮ್ರಾಜ್ಯದ ಒಡೆಯ ಆಗಿದ್ದರೂ ಒಬ್ಬ ಆತ್ಮ ಜ್ಞಾನಿಗೆ ಶಿರಬಾಗಿ ನಮಿಸುವದು ಕ್ರಮ. ಪುರಾಣ ಕಥೆಗಳಲ್ಲಿ ನಾವು ಇಂತ ಹಲವು ದೃಷ್ಟಾಂತ ಓದಿದ್ದು.

ಹೀಂಗೇ ಸಾಷ್ಟಾಂಗ ಪ್ರಣಾಮ ಹೇಳ್ವ ಈ ಸಂಪ್ರದಾಯವು ಪರಸ್ಪರ ಪ್ರೇಮ ಮತ್ತು ಗೌರವ ವಾತಾವರಣವ ಜನರಲ್ಲಿ ಮೂಡಿಸಿ ಸಹಬಾಳ್ವೇ ಹಾಗೂ ಸಾಮರಸ್ಯವ ಸಮಾಜಲ್ಲಿ ಉಂಟುಮಾಡುತ್ತು.

ಸಾಷ್ಟಾಂಗ ನಮಸ್ಕಾರದ ಬಗ್ಗೆ ಬೈಲಿ ಈ ಮದಲೇ ವೇಣೂರಣ್ಣ ಶುದ್ದಿ ಹೇಳಿದ್ದು ಇಲ್ಲಿದ್ದು – http://oppanna.com/lekhana/ballirenayya/sasthanga-namaskara

ಹರೇ ರಾಮ.

(-ಸಂಗ್ರಹ)

ಚೆನ್ನೈ ಬಾವ°

   

You may also like...

22 Responses

 1. ಚೆನ್ನೈ ಭಾವ says:

  ಶುದ್ದಿ ಓದಿ ಒಪ್ಪ ರೂಪಲ್ಲಿ ಪ್ರೋತ್ಸಾಹಿಸುವ ನಿಂಗೊ ಎಲ್ಲೋರಿಂಗೂ ಧನ್ಯವಾದಂಗೋ.

 2. ನಮ್ಮ ಸಂಸ್ಕೃತಿಯ ತಿಳಿಸುವ ಉತ್ತಮ ಲೇಖನ ಭಾವಾ……….
  ಧನ್ಯವಾದ೦ಗೊ………….

  • ಚೆನ್ನೈ ಭಾವ says:

   ಧನ್ಯವಾದಂಗೋ. ಕೋಲೇಜಿನ ತೆರಕ್ಕಿನಡೆಲಿಯೂ ಬೈಲಿಂಗೆ ಬಂದುಗೊಂಡಿರಿ. ನಿಂಗಳ ಕೊಲೇಜಿಲಿ ಸ್ವಾರಸ್ಯಂಗೊ ಹತ್ತು ಹಲವು ಇದ್ದೇ ಇರುತ್ತು. ಬೈಲಿಂಗೆ ಹಂಚಿ. ಓದಿ ಎಂಗಳೂ ಎಡಿಗಾಷ್ಟು ಕಿತಾಪತಿ ಮಾಡುವೆಯೋ ಅಲ್ಲದಾ ಒಪ್ಪಲ್ಲಿ.

 3. ಚೆನ್ನೈ ಭಾವ,

  ತುಂಬಾ ಲಾಯ್ಕಲ್ಲಿ ನಮ್ಮ ಸಂಸ್ಕಾರಲ್ಲಿ ಬಂದ ನಮಸ್ಕಾರದ ಬಗ್ಗೆ ವಿವರ್ಸಿದ್ದಿ. ಹಲಾವರು ವಿಷಯಂಗ ಇದುವರೆಗೆ ತಿಳಿಯದ್ದದು ಸಿಕ್ಕಿತ್ತು. ತುಂಬಾ ಧನ್ಯವಾದಂಗೋ. ಪ್ರತಿಯೊಬ್ಬನಲ್ಲಿಪ್ಪ ದೇವತಾ ಸ್ವರೂಪಕ್ಕೆ ನಮಿಸೆಕ್ಕು ಹೇಳಿ ನಮ್ಮ ಹಿರಿಯರು ಎಷ್ಟು ಚೆಂದಕ್ಕೆ ನವಗೆ ಸಂಸ್ಕಾರ ರೂಪಲ್ಲಿ ಕೊಟ್ಟಿದವಲ್ಲದಾ?

  ನಮ್ಮ ಪ್ರತಿಯೊಂದು ಆಚರಣೆಗೆ ಎಂತ ಮಹತ್ವ ಇದ್ದು ಹೇಳಿ, ಎಂಗೋ ‘ಎಂತಕ್ಕೆ’ ಹೇಳಿ ಕೇಳೆಕ್ಕಾದರೆ ಮದಲೇ ನಿಂಗೋ ಹಾಂಗೆ ಕೇಳಿಗೊಂಡೇ ಉತ್ತರ ಕೊಡ್ತಿ. ಪ್ರತಿಯೊಂದು ವಿಚಾರವೂ ಸುಮಾರು ವಿಷಯಂಗಳ ಬೈಲಿಂಗೆ ಕೊಡ್ತಾ ಇದ್ದು. ಇನ್ನುದೇ ‘ಎಂತಕ್ಕೆ’ ಇಪ್ಪ ಆಚರಣೆಗೋ, ವಿಧಿಗೋ ಹೇಳುದು ಬರಲಿ ಬೈಲಿಲಿ….

 4. ಚೆನ್ನೈ ಭಾವ says:

  ಧನ್ಯವಾದಂಗೋ. ಅನುಭವಿಸಿ ಓದಿ ಒಪ್ಪ ಕೊಡ್ತದು ಶ್ರೀ ಅಕ್ಕನ ಸ್ಪೆಷಲ್ . ಪ್ರೋತ್ಸಾಹಕ್ಕೆ ಧನ್ಯವಾದ.

 5. ದೀಪಿಕಾ says:

  ಲೇಖನ೦ಗಳ ಮೂಲಕ ನಮ್ಮ ಸಂಸ್ಕೃತಿಯ ಬಿ೦ಬಿಸುದು ಭಾರೀ ಲಾಯಿಕಾವ್ತು ಮಾವ…ಧನ್ಯವಾದ..

 6. ಚೆನ್ನೈ ಭಾವ says:

  ಧನ್ಯವಾದಂಗೊ ದೀಪಿಕ ಅಕ್ಕೋ. ಬತ್ತಾ ಇರಿ – ಬರೆತ್ತಾ ಇರಿ. ಶುದ್ದಿ ಸಿಕ್ಕುವಾಗ ಬರವಲೆ ಮರದಿಕ್ಕೆಡಿ , ಶುದ್ದಿ ಓದಿಕ್ಕಿ ಬರವಲೂ ಮರದಿಕ್ಕೆಡಿ. ಇದುವೇ ಎನ್ನಯ ಪ್ರತ್ಯೊಪ್ಪ.

 7. ರಘು ಮುಳಿಯ says:

  ಸಾವಿರಾರು ವರುಷದ ಚರಿತ್ರೆ ಇಪ್ಪ ನಮ್ಮ ದೇಶ ಗೌರವ ಸೂಚನೆಲಿ ಭಿನ್ನ.ಇದು ಏಕೆ ಹೇಳೊದರ ಚೆ೦ದಕೆ ವಿವರಿಸಿದ ಲೇಖನ ಓದಿ ಸ೦ತೋಷ ಆತು.ಭಾವಶುದ್ಧಿಲಿ ಸೂಚಿಸುವ ಗೌರವ ಎಷ್ಟು ಮಹತ್ವಪೂರ್ಣ,ಅಲ್ಲದೋ?
  ಚೆನ್ನೈಭಾವನ ಶುದ್ದಿಗೊ ಬೈಲಿ೦ಗೆ ಮೆರುಗು ತಯಿ೦ದು.ಧನ್ಯವಾದ.

 8. ಚೆನ್ನೈ ಭಾವ says:

  ಸನಾತನ ಧರ್ಮ ಕರ್ಮ ಸಂಸ್ಕೃತಿಲಿ ನಮ್ಮ ಭಾರತ ಹೆಮ್ಮೆಯ ಭೂಮಿ ಹೇಳಿ ಹೇಳ್ವ ರಘುಭಾವನ ಒಪ್ಪಕ್ಕೆ ನಮನ. ಪಾಶ್ಚಾತ್ಯರೂ ಬೆರಗು ಕಣ್ಣಿಂದ ನೋಡಿ ಅರ್ಥೈಸಿ ಶ್ಲಾಘಿಸುವ ನಮ್ಮ ನಮ್ಮತನವ ಎಂದಿಂಗೂ ಉಳುಸುವೋ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *