ನಾವು ಎಂತಕೆ ‘ಓಂ’ ಕಾರ ಪಠಿಸುತ್ತು?

May 12, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಬ್ದಬ್ರಹ್ಮ ಅಥವಾ ನಾದಬ್ರಹ್ಮನ ಸಂಕೇತವಾಗಿ ನಾವು ಓಂಕಾರವ ಜಪಿಸುತ್ತು.
ಓಂಕಾರ ಪಠಿಸುವವನ ಶರೀರ ಹಾಗೂ ಮನಸ್ಸಿನ ಮೇಲೆ ವಿಶೇಷ ಪ್ರಭಾವ ಬೀರುತ್ತು.

ಎಲ್ಲಾ ಮಂತ್ರಂಗೊ ಓಂಕಾರಂದ ಪ್ರಾರಂಭವಾವ್ತು .

ಓಂಕಾರ – ಋಗ್,ಯಜು,ಸಾಮವೇದಂಗಳ ಭಟ್ಟಿ ಇಳಿಸಿದ ಸಾರ.
ಓಂಕಾರವನ್ನೇ ಬೀಜಮಂತ್ರವಾಗಿ ಪಠಿಸುವ ಕ್ರಮ ಇದ್ದು. ಓಂಕಾರವ ಶ್ರೇಯಸ್ಸಿನ ಚಿಹ್ನೆಯಾಗಿ ಗುರುತಿಸಿದ್ದು.

‘ಓಂ’ ವಿಶ್ವಾತ್ಮನಾದ ಪರಮಾತ್ಮನ ಒಂದು ನಾಮ.

‘ಓಂ’ ಹೇಳ್ವದು ಒಂದು ಸಂಯುಕ್ತಾಕ್ಷರ.
‘ಅ’ , ‘ಉ’ ‘ಮ್’ ಇವುಗಳ ಸಂಗಮವೇ ಓಂಕಾರ. (ಅ+ಉ+ಮ್ = ಓಂ).
‘ಅ’ಕಾರ ಶಬ್ದವು ಗಂಟಲಿಂದ ಉಗಮ. ಬಾಯಿ ಮತ್ತು ಗಂಟಲಿನ ಮಧ್ಯಂದ ‘ಉ’.
ಬಾಯಿ ಮುಚ್ಚಿ ಹೊರಬಪ್ಪೋದೇ ‘ಮ್’.
ಈ ಮೂರು ಅಕ್ಷರಂಗೊ ‘ತ್ರಿಪುಟಿ’ಗಳ ಸೂಚಿಸುವುದಡ,
– ಮೂರು ಅವಸ್ಥೆ (ಜಾಗ್ರತ್, ಸ್ವಪ್ನ, ಸುಷುಪ್ತಿ),
ತ್ರಿಮೂರ್ತಿ (ಬ್ರಹ್ಮ, ವಿಷ್ಣು, ಮಹೇಶ್ವರ ),
ಆದಿ ಮಧ್ಯ ಅಂತ್ಯ  (ಸೃಷ್ಟಿ,ಸ್ಥಿತಿ, ಲಯ ),
ಮೂರು ವೇದ (ಋಗ್ , ಯಜು, ಸಾಮ),
ತ್ರಿಲೋಕ (ಭೂ: , ಭುವಃ, ಸುವಃ),

ಓಂಕಾರವ ‘ಪ್ರಣವ’ (ಯಾವ ಶಬ್ದದ ಮೂಲಕ ಪರಮಾತ್ಮನ ಸ್ತುತಿಸುತ್ತೋ ಅದು ಪ್ರಣವ) ಹೇಳಿ ಹೇಳುತ್ತವು.
ಓಂಕಾರ ಪದ ಉಚ್ಚರಿಸಿಯೇ ಪರಮಾತ್ಮ° ಈ ಜಗತ್ತಿನ ಸೃಷ್ಟಿಸಿದ° ಹೇಳಿಯೂ ಹೇಳುತ್ತವು.

ಹಾಂಗಾಗಿ ಯಾವ ಕಾರ್ಯವನ್ನು ಮಾಡುತ್ತರೂ ಮದಾಲು ಓಂಕಾರ ಜಪಿಸಿರೆ ಅದರ ನಾದ ನಮ್ಮ ಅಂತರಾಳಲ್ಲಿ ಹೊಕ್ಕಿ ಶುಭ ಉಂಟುಮಾಡುತ್ತು ಹೇಳಿ ನಂಬಿಕೆ.
ಓಂಕಾರ ಜಪವು ಘಂಟಾನಾದ ಶಬ್ದಕ್ಕೆ ಹೋಲೆಕ್ಕಡ. ಇದು ಮನಸ್ಸಿಂಗೆ ಆಹ್ಲಾದಕರವಾದ ಪ್ರಶಾಂತತೆ ಅನುಭವ ಉಂಟು ಮಾಡಿ ಶರೀರವ ಪರಮಾನಂದವಾಗಿ ಪ್ರಚೋದಿಸುತ್ತು ಎಂಬುದು ಬಲ್ಲವರ ಹೇಳಿಕೆ.

ಭಗವಂತ° ಭಗವದ್ಗೀತೇಲಿ ಹೇಳಿದ್ದ°  “ಪ್ರಣವಃ ಸರ್ವವೇದೇಷು” (“ರಸೋsಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ । ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ॥ಭ.ಗೀ – ೭.೮॥) ಈ ಐಹಿಕ ಪ್ರಪಂಚದ ಪ್ರತಿಯೊಂದು ಚರಾಚರ ವಸ್ತುಗಳಲ್ಲಿ ವಿಷಯಂಗಳಲ್ಲಿ ಒಂದೊಂದು ಶಕ್ತಿಯಾಗಿ ಭಗವಂತ° ಇದ್ದ. ಅವ° ಇಲ್ಲದ್ರೆ ಅದಕ್ಕೆ ಬೆಲೆಯೂ ಇರ್ತಿತ್ತಿಲ್ಲೆ. ಸರ್ವವೇದಂಗಳ ಸಾರವಾದ ‘ಪ್ರಣವ’, ಹೇಳಿರೆ ಓಂಕಾರ. ಅದು ಭಗವಂತ°. ಹಾಂಗಾಗಿ ಧ್ಯಾನಕ್ಕೆ ಶ್ರೇಷ್ಠವಾದ್ದು – ಓಂಕಾರ. ಋಗ್, ಯಜು, ಸಾಮ – ಈ ಮೂರುವೇದಮಂತ್ರಂಗಳ ಭಟ್ಟಿಇಳಿಸಿ ತಯಾರಾದ್ದು ಪುರುಷಸೂಕ್ತ. ಪುರುಷಸೂಕ್ತವ ಭಟ್ಟಿಇಳಿಸಿ ತಯಾರಾದ್ದು ಗಾಯತ್ರೀಮಂತ್ರ. ಗಾಯತ್ರೀ ಮಂತ್ರವ ಭಟ್ಟಿಇಳಿಸಿ ಸೂಕ್ಷ್ಮರೂಪವಾದ ಓಂಕಾರ ತಯಾರಿಸಿದ್ದು. ಹಾಂಗಾಗಿ ಎಲ್ಲ ವೇದಮಂತ್ರಂಗಳ ಬೀಜಮಂತ್ರ -ಓಂಕಾರ.

ಓಂಕಾರಲ್ಲಿ ಸರ್ವ ವೇದಂಗಳ ಸಾರ ಇದ್ದು ಹೇಳುತ್ತವು. ಅದು ಹೇಂಗೆ ?! – ವೇದಂಗೊ ಅನೇಕ. ಋಗ್ವೇದಲ್ಲಿ 24 ಶಾಖೆಗೊ, ಯಜುರ್ವೇದಲ್ಲಿ 101 ಶಾಖೆಗೊ, ಸಾಮವೇದಲ್ಲಿ 1000 ಶಾಖೆಗೊ, ಅಥರ್ವವೇದಲ್ಲಿ 12 ಶಾಖೆಗೊ. ಹೀಂಗೆ ಒಟ್ಟು 1137 ಸಂಹಿತೆಗೊ. ಮತ್ತೆ ಅದಕ್ಕೆ ಅಷ್ಟೇ ಬ್ರಾಹ್ಮಣ, ಅರಣ್ಯಕ, ಉಪನಿಷತ್ತುಗೊ. ಹೀಂಗೆ ವೇದ ಹೇಳಿರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಂಗೊ ಇದ್ದರೂ ಕೂಡ ಮೂಲತಃ ವೇದಲ್ಲಿ ಪ್ರಮುಖವಾಗಿ ಮೂರು ವಿಭಾಗಂಗೊ. ಪದ್ಯರೂಪ (ಋಗ್ವೇದ), ಗದ್ಯರೂಪ (ಯಜುರ್ವೇದ), ಗಾನರೂಪ (ಸಾಮವೇದ). ಈ ಮೂರು ವೇದಂಗಳ ಮೂರು ಅಕ್ಷರಂಗಳ ತೆಕ್ಕೊಂಡು ನಿರ್ಮಾಣ ಅಪ್ಪದು ‘ಓಂಕಾರ’.  ಓಂಕಾರಕ್ಕೆ ಸಾರತ್ವವ ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ಓಂಕಾರಲ್ಲಿ ಭಗವಂತ ನೆಲೆಸಿಗೊಂಡಿದ್ದ°. ಪ್ರಾಕಿಲ್ಲಿ ಮೂರು ವೇದಂಗಳ ಸಂಕಲಿಸಿ ಭಟ್ಟಿ ಇಳಿಸಿ ಅದರ ಸಾರವಾದ ಮೂರು ವರ್ಗಂಗಳ ಒಂದು ಸೂಕ್ತ ಮಾಡಿದವು. ಅದೇ ಪುರುಷಸೂಕ್ತ. ಹಾಂಗಾಗಿಯೇ ವೇದಸೂಕ್ತಂಗಳಲ್ಲಿ ಅತ್ಯಂತ ಶ್ರೇಷ್ಠವಾದ್ದು ‘ಪುರುಷಸೂಕ್ತ’.  ಈ ಸೂಕ್ತವ ಮತ್ತೆ ಭಟ್ಟಿಇಳಿಸಿ ಮೂರು ಪಾದಂಗಳ ಗಾಯತ್ರೀ ಮಂತ್ರ (ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್ ॥) ನಿರ್ಮಾಣ ಆತು. ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟದ್ದು, ‘ಧೀಯೋ ಯೋನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟದ್ದು. ಹೀಂಗೆ ಮೂರು ವೇದಂಗಳ ಸಾರ ಗಾಯತ್ರಿಯ ಮೂರು ಪಾದಂಗಳುಳ್ಳ ಒಂದು ಮಂತ್ರ. ಹಾಂಗಾಗಿ ಗಾಯತ್ರೀ ಮಂತ್ರವ ‘ವೇದಮಾತೆ’ ಹೇಳಿ ಹೇಳುತ್ತವು. ಈ ಗಾಯತ್ರಿಂದ ‘ರಸ’ ತೆಗದಪ್ಪಗ ಮೂರು ಪಾದಂಗಳಿಂದ ಮೂರು ಪದಗಳಿಪ್ಪ ವ್ಯಾಹೃತಿ “ಭೂಃ ಭುವಃ ಸ್ವಃ”; ಈ ಮೂರು ಪದಂಗಳ ಸಾರ ಮೂರು ಅಕ್ಷರದ ಅ+ಉ+ಮ = ‘ಓಂ’ಕಾರ.

ಇನ್ನು ‘ಓಂಕಾರ’ ಮತ್ತೆ ‘ಪ್ರಣವ’ ಪದದ ಒಂದೊಂದು ಅಕ್ಷರ ಒಂದೊಂದು ಅಕ್ಷರದ ವಿಂಗಡುಸಿ ವಿವರಣಾರೂಪ. ಅ+ಉ+ಮ = ಓಂ. ಸುರುವಾಣ ‘ಅ’ – ಅಧಿಕ. ಎಲ್ಲವುದಕ್ಕಿಂತ ಅಧಿಕ ಆ ಭಗವಂತ°. ‘ಪ್ರಣವ’ ಪದದ ಪ್ರ ಅಕ್ಷರ ಪ್ರಕೃಷ್ಟವಾಗಿಪ್ಪದು ಹೇಳಿ ಸೂಚಿಸುತ್ತು, ಎಲ್ಲಕ್ಕಿಂತ ಪ್ರಕೃಷ್ಟವಾದ ಅನಂತ ಶಕ್ತಿ ಆ ಭಗವಂತ°. ಓಂಕಾರದ ಎರಡನೇ ಅಕ್ಷರ ‘ಉ’. ಉ ಹೇಳಿರೆ ಉತ್ತಮವಾದ. ಜ್ಞಾನಾನಂದಂದ ತುಂಬಿ ಉನ್ನತವಾದ್ದು. ‘ಪ್ರಣವ’ದ ಎರಡನೇ ಅಕ್ಷರ ‘ಣ’ . ಣ ಹೇಳಿ ಜ್ಞಾನಾನಂದದ ಆತ್ಮಬಲ. ಹಾಂಗಾಗಿ ಭಗವಂತ° ಜ್ಞಾನಾನಂದ ಸ್ವರೂಪ° ಸರ್ವ ಸಮರ್ಥ°. ಓಂಕಾರದ ಮೂರನೇ ಅಕ್ಷರ ‘ಮ’. ‘ಮ’ ಹೇಳಿರೆ ಜ್ಞಾನಸ್ವರೂಪ. ಪ್ರಣವದ ಮೂರನೇ ಅಕ್ಷರ ‘ವ’. ‘ವ’ ಹೇಳಿರೆ ಜ್ಞಾನ. ಅದು ಸರ್ವಜ್ಞ° ಹೇಳ್ವ ಅರ್ಥವ ಕೊಡುತ್ತದು. ಹೀಂಗೆ ಓಂಕಾರದ ಒಂದು ಮುಖವ ‘ಪ್ರಣವ’ ಸೂಚಿಸುತ್ತು. ಹೀಂಗೆ ಮಾತ್ರವಲ್ಲದೆ ಓಂಕಾರದ ಬಗ್ಗೆ ಇನ್ನೂ ಹೆಚ್ಚಿನ ವಿವರಣೆಯ ಬನ್ನಂಜೆಯವು ಭಗವದ್ಗೀತಾ ವ್ಯಾಖ್ಯಾನಲ್ಲಿ ಹೇಳಿದ್ದವು.

ಓಂ ತತ್ಸತ್.
ಹರೇ ರಾಮ.

(ಸಂಗ್ರಹ)

ನಾವು ಎಂತಕೆ ‘ಓಂ’ ಕಾರ ಪಠಿಸುತ್ತು?, 5.0 out of 10 based on 5 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಚುಬ್ಬಣ್ಣ
  ಚುಬ್ಬಣ್ಣ

  ಓ೦ ಕಾರ ಬ್ರಹ್ಮಾಂಡ, ಶಕ್ತಿಯ ಮೂಲವೇ ಓ೦’ ಕಾರ.. ಹೇಳಿಯೂ ಹೇಳ್ತವು.. :)
  ಲಾಯಕೆ ಆಯಿದು ಬರದ್ದು…

  [Reply]

  VN:F [1.9.22_1171]
  Rating: 0 (from 0 votes)
 2. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕ್ಕಾನ

  ತಿಳಿಸಿದ್ದಕ್ಕೆಧನ್ಯ್ಯವಾದಂಗೋ……..

  [Reply]

  VA:F [1.9.22_1171]
  Rating: 0 (from 0 votes)
 3. ಸುಭಗ
  ಸುಭಗ

  ಬ್ರಹ್ಮಾಂಡದಷ್ಟು ವಿಸ್ತಾರವಾದ ವಿಷಯವ ಒಂದು ಮುಷ್ಟಿಲಿ ಹಿಡುದು ತಂದು ತೋರ್ಸಿದ್ದವು ಚೆನ್ನೈ ಭಾವ. ಇನ್ನೂ ರಜ ವಿಚಾರಂಗಳ ಇದಕ್ಕೆ ಸೇರ್ಸಿರೆ ಚೆಂದ ಆವ್ತಿತ್ತು.
  ಆದರೂ ‘ಆದಲ್ಲಿಂಗೆ ಒಪ್ಪ ಆಯಿದು’ ಹೇಳಿ ಈ ಒಪ್ಪ. :)

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಚೆನ್ನೈಭಾವ,
  ಬಾಲಣ್ಣನ ಬರಹಲ್ಲಿ ” ಓ೦”ಕಾರದ ವಿಮರ್ಶೆ ಬ೦ದಿತ್ತು.ನಿ೦ಗಳ ಈ ಸಣ್ಣ ಆದರೆ ಚೊಕ್ಕದ ಬರಹ ಓದಿ ಕೊಶಿ ಆತು.
  ಮಾಹಿತಿಗೊಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರಿಂಗೂ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  ಓದಿ ಸಂತೋಷ ಆತು..
  ಹೊಸ ವಿಷಯ ಗೊಂತಾದ ಹಾಂಗೂ ಆತಿದಾ…

  ಎನ್ನ ಮಾವನ ಮಗಂಗೆ ಮೊನ್ನೆ ಮೊನ್ನೆ ಉಪನಯನ ಆತು. ಇನ್ನು ಅವ ಅದೆಂತಕೆ ಕೇಳಿರೆ ಹೇಳ್ಲಕ್ಕಿದಾ..

  ಒಂದೊಪ್ಪ…:):):):)

  [Reply]

  VA:F [1.9.22_1171]
  Rating: 0 (from 0 votes)
 7. ಮಂಗ್ಳೂರ ಮಾಣಿ

  ಭಾವಾ,
  ಓ ಮೊನ್ನೆ ಮಾಂಡೂಕ್ಯ ಉಪನಿಷತ್ತು ಸಿಕ್ಕಿತ್ತು…
  ಅದರಲ್ಲಿ ತುಂಬ ಲಾಯಕಕ್ಕೆ ವಿವರುಸಿದ್ದವು..
  ಸಿಕ್ಕಿರೆ ಬಿಡೆಡಿ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಸರ್ಪಮಲೆ ಮಾವ ಮೊನ್ನೆ ಅಜ್ಜಕ್ಕಾನ ಭಾವಂಗೆ, ಒಪ್ಪಣ್ಣಂಗೆ ಕೊಂಕಣಿ ಇತಿ ಹ ಸ ಸೂಕ್ಷಲ್ಲಿ ವಿವರಿಸಿದಾಂಗೆ ನಿಂಗೊ ಇದರ ಇಲ್ಲೇ ರಜಾ ಬರದಿಕ್ಕುಲಾವ್ತಿತ್ತನ್ನೇ ಭಾವಯ್ಯ

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ತೂಷ್ಣಿಲಿ ಬರೆಕೂ ಹೇಳಿ ಹೆರಟೆ.. 😉
  ಎಷ್ಟು ಬರೆಕು ಎಷ್ಟು ಬಿಡೆಕು ಗೊಂತಾಯಿದಿಲ್ಲೆ :(
  ಇದಾ ನಿಂಗೊಗೆ ಕಳುಸುತ್ತೆ…

  [Reply]

  VA:F [1.9.22_1171]
  Rating: 0 (from 0 votes)
 8. ಜಯಶ್ರೀ ನೀರಮೂಲೆ
  jayashree.neeramoole

  ಲಲಿತಾಸಹಸ್ರನಾಮವ ಓದುವಾಗ ಹೆಮ್ಮಕ್ಕೋ ‘ ಓ೦’ ಬಳಸುಲಾಗ… ‘ಶ್ರೀ’ ಬಳಸೆಕ್ಕು ಹೇಳಿ ನಮ್ಮ ಮಠಲ್ಲಿ ಹೇಳುತ್ತವು…
  ಹೆಮ್ಮಕ್ಕೋ ‘ ಓ೦’ ಕಾರವ ಪಠಿಸುಲಾಗ ಹೇಳಿ ಎಂತಾರೂ ಇದ್ದ? ಅಥವಾ ಲಲಿತಾಸಹಸ್ರನಾಮ ಓದುವಾಗ ಮಾಂತ್ರ ಬಳಸುಲೇ ಆಗದ್ದದೋ? ತಿಳುಕ್ಕೊಂಬಲೆ ತುಂಬಾ ಕುತೂಹಲ ಇದ್ದ ಕಾರಣ ಕೇಳಿದ್ದು…

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದೇಕೆ ಅಕ್ಕೊ ಮತ್ತೆ ನಿಂಗೊ ಅಲ್ಲೇ ಅವರತ್ರೆ ಕೇಳದ್ದು ಅದು ಎಂತಕೆ ಹಾಂಗೆ ಹೇದು ?!!

  [ತಿಳುಕ್ಕೊಂಬಲೆ ತುಂಬಾ ಕುತೂಹಲ ಇದ್ದ ಕಾರಣ ಕೇಳಿದ್ದು…] ಅಕ್ಕು ಹೇದು..ಅದಕ್ಕೇ ಇದಾ.. ಎನಗೊಂತಿದ್ದರ ಇಲ್ಲಿ ಬರೆತ್ತೆ. ಹೆಚ್ಚು ಕಡಮ್ಮೆ ಇದ್ದರೆ ಅರ್ತವು, ಹಿರಿಯರು ತಿದ್ದಿಕೊಡೆಕು. …., ಮತ್ತೆ…, ಅಂಬಗ ಹೆಮ್ಮಕ್ಕೊ ಓಂಕಾರ ಹಾಡಿ ಸಿ.ಡಿ ಕ್ಯಾಸೆಟ್ಟು ರೆಕಾರ್ಡ್ ಮತ್ತೊಂದು ಮಗುದೊಂದು ಇದ್ದನ್ನೇ ಹೇದು ಇತ್ಲಾಗಿ ಕೇಳ್ಳಾಗ ಮ್ಮ್ಮ್ !

  ಸ್ತ್ರೀಯರು ಓಂಕಾರ ಜಪಿಸಲಾಗ ಹೇದು ಏವಿತ್ತಿಂದ ಸುರುವಾದ್ದು ಹೇದು ಎನಗರಡಿಯ. ಆದ್ರೆ, ಋಷಿ ಮುನಿಗಳ ಕಾಲಂದಲೇ ನಿರ್ಬಂಧ ಇತ್ತು ಹೇದು ಗೊಂತಾವ್ತು. ಇದಕ್ಕೆ ಸ್ತ್ರೀಯರ ಶರೀರ ನಿರ್ಮಾಣ ವ್ಯವಸ್ಥೆಯೇ ಕಾರಣಡಾ. ಓಂಕಾರದ ಉಗಮ ಮತ್ತು ಮಹತ್ವ ಮೇಗೆ ಶುದ್ದಿಲಿ ಇದ್ದು. ಓಂಕಾರ ಪಠಿಸುವದು ಹೇಳಿರೆ ಹೂಡ್ತ ಗೋಣನ ನಿಲ್ಲುಸ್ಸುತ್ತಾಂಗೋ ಗಾಡಿ ಎತ್ತಿನ ಎಬ್ಬುತ್ತಾಂಗೋ ಅಲ್ಲನ್ನೆ. ಓಂಕಾರವ ಜೋರಾಗಿ (ಹೆರಂಗೆ ಶಬ್ಧ ಬಪ್ಪ ಹಾಂಗೆ) ಜಪಿಸಲೆ ದೀರ್ಘವಾದ, ಕ್ರಮವಾದ ನಿಧಾನವಾದ ವಿಧಲ್ಲಿ ಶ್ವಾಸವ ಹೆರ ಬಿಡೆಕ್ಕಾವ್ತು. ಹಾಂಗೆ ‘ಓಂ’ ನಾಭಿಂದ ಉಚ್ಚರುಸುವಾಗ ಶರೀರದ ಸುತ್ತೂ ಹೆಚ್ಚಿನ ಸ್ಥಾಯಿಲಿ ಶಕ್ತಿ ತರಂಗಂಗೊ ವ್ಯಕ್ತವಾವ್ತು. ಈ ಶಬ್ಧ ತರಂಗಂಗೊ ಉತ್ಪತ್ತಿಯಪ್ಪ ಮಧ್ಯ ಭಾಗಲ್ಲಿ ಗರ್ಭಾಶಯ ಇಪ್ಪ ಕಾರಣ ಈ ಶಬ್ಧ ತರಂಗಂಗೊ ಗರ್ಭಾಶಯಕ್ಕೆ ವಿರುದ್ಧವಾಗಿ ಪ್ರಭಾವಿತ ಆವ್ತು ಮತ್ತು ಮುಚ್ಚಿ ಹೋಪ ಅಪಾಯವೂ ಇದ್ದಡ. ನಾಲ್ಕಾರು ಬಾರಿ ಹಾಂಗೆ ಮಾಡಿದ್ದರಿಂದ ದೊಡ್ಡಾ ತೊಂದರೆಗೊ ಇಲ್ಲದ್ದಿಪ್ಪದು ಅಪ್ಪಯ್ಕು. ಆದರೆ, ಬಹುಬಾರಿ ಈ ರೀತಿ ಮಾಡುವದರಿಂದ ಮುಂದೆ ತೊಂದರೆಗೊ ಅಪ್ಪ ಸಾಧ್ಯತೆ ಇದ್ದಡ. ಮಾತ್ರವಲ್ಲ , ಸ್ತ್ರೀಯರು ಬಹಳ ಸಮಯ ಶ್ವಾಸವ ಕ್ರಮಬದ್ಧವಾಗಿ ಓಂಕಾರವ ಜಪಿಸಲೆ ಅವರ ಸ್ವರ ಯಂತ್ರಾಂಗ ಅನುಕೂಲವಾಗಿ ಇರ್ತಿಲ್ಲೆಡ. ಆದ್ದರಿಂದ ಸ್ತ್ರೀಯರು ‘ಓಂ’ಕಾರವ ಜಪಿಸಲಾಗ ಹೇಳಿ ನಿಯಮ ಬಂದದ್ದಡ. ಸುದೀರ್ಘವಲ್ಲದ ಅಲ್ಪ ಸಮಯದ ಓಂಕಾರ ಪಠಣಕ್ಕೆ ಸ್ತ್ರೀಯರಿಂಗೆ ತೊಂದರೆ ಇಲ್ಲೆಡ. ಮಾನಸಿಕ ಜಪಕ್ಕೆ ಅಡ್ಡಿಯೂ ಇಲ್ಲೆ. ಹಾಂಗೇಳಿ ಪದ್ಯವ ಗದ್ಯವಾಗಿ ಓದಿರೆ ಸಮ ಆವ್ತೋ, ಶಾಸ್ತ್ರೀಯ ಸಂಗೀತವ ಶ್ರುತಿಬದ್ಧವಿಲ್ಲದ್ರೆ ಕೇಳ್ಳೆ ಎಡಿತ್ತೋ, ಭಾವನೆ ವ್ಯಕ್ತಪಡುಸದ್ದ ಅಭಿನಯ ನೋಡ್ಳೆ ಎಡಿತ್ತೋ….. ಹಾಂಗೇ ಇದು. ಇನ್ನು ಅಕ್ಕೋ ಆಗದೋ ನಿಂಗೊಗೇ ಬಿಟ್ಟದು.

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ವಿರಾಟ್ ಪೂಜೆಲ್ಲಿ ಸಾವಿರ ಗಟ್ಟಲೆ ಹೆಮ್ಮಕ್ಕೋ ಕೂದುಗೊಂಡು ಓದುವ ಮೊದಲು ಮೈಕ್ ಲ್ಲಿ ಹೇಳಿದವು “ಲಲಿತಾಸಹಸ್ರನಾಮವ ಓದುವಾಗ ಹೆಮ್ಮಕ್ಕೋ ‘ ಓ೦’ ಬಳಸುಲಾಗ… ‘ಶ್ರೀ’ ಬಳಸೆಕ್ಕು”… ಹಾಂಗಾಗಿ ಅಲ್ಲೇ ಅವರತ್ರೆ ಕೆಳುಲೇ ಆಯಿದಿಲ್ಲೇ…

  “ಸುದೀರ್ಘವಲ್ಲದ ಅಲ್ಪ ಸಮಯದ ಓಂಕಾರ ಪಠಣಕ್ಕೆ ಸ್ತ್ರೀಯರಿಂಗೆ ತೊಂದರೆ ಇಲ್ಲೆಡ. ಮಾನಸಿಕ ಜಪಕ್ಕೆ ಅಡ್ಡಿಯೂ ಇಲ್ಲೆ”. ಹಾಂಗೆ ಉಪಯೋಗಿಸಿರೆ ಆತು…

  ತಿಳಿಸಿದ್ದಕ್ಕೆ ತುಂಬಾ ಧನ್ಯವಾದ…

  [Reply]

  VA:F [1.9.22_1171]
  Rating: 0 (from 0 votes)
 9. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ತಸ್ಯ ವಾಚಕಃ ಪ್ರಣವಃ ಹೇಳಿ ಈಶ್ವರನ ಹೇಳಿರೆ ಪುರುಷ ವಿಶೇಷನ ವಿವರಿಸಿದ್ದವು ಯೋಗಸೂತ್ರಲ್ಲಿ..ಲೇಖನ ಲಾಯ್ಕ ಆಯ್ದು..

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ವೇಣೂರಣ್ಣದೊಡ್ಮನೆ ಭಾವಪುತ್ತೂರಿನ ಪುಟ್ಟಕ್ಕಪಟಿಕಲ್ಲಪ್ಪಚ್ಚಿರಾಜಣ್ಣಮುಳಿಯ ಭಾವಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆಶ್ಯಾಮಣ್ಣದೀಪಿಕಾಕೇಜಿಮಾವ°ನೀರ್ಕಜೆ ಮಹೇಶಶಾ...ರೀವಿದ್ವಾನಣ್ಣದೇವಸ್ಯ ಮಾಣಿಕಾವಿನಮೂಲೆ ಮಾಣಿಹಳೆಮನೆ ಅಣ್ಣಕೊಳಚ್ಚಿಪ್ಪು ಬಾವಗಣೇಶ ಮಾವ°ದೊಡ್ಡಭಾವಅನಿತಾ ನರೇಶ್, ಮಂಚಿಶರ್ಮಪ್ಪಚ್ಚಿಗೋಪಾಲಣ್ಣಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ