ನಾವು ಎಂತಕೆ ಪ್ರದಕ್ಷಿಣೆ ಮಾಡುತ್ತು?

ನಾವು ದೇವಸ್ಥಾನಕ್ಕೆ ಹೋದಿಪ್ಪಗ, ಮನೇಲಿ ಪೂಜೆ ಮಾಡಿಯಪ್ಪಗ ಗರ್ಭಗುಡಿಗೆ ಅಥವಾ ನಾವು ನಿಂದಲ್ಯಂಗೇ ಪ್ರದಕ್ಷಿಣೆ ಮಾಡುತ್ತು. ಮತ್ತೆ ನಮಸ್ಕರಿಸುತ್ತು.
ದೇವರ ಷೋಡಶೋಪಚಾರ (ಧ್ಯಾನ, ಆವಾಹನ, ಆಸನ, ಪಾದ್ಯ, ಅರ್ಘ್ಯ, ಆಚಮನ, ಸ್ನಾನ, ವಸ್ತ್ರ, ಉಪವೀತ, ಆಭರಣ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ನೀರಾಜನ, ಮಂತ್ರಪುಷ್ಪ, ಪ್ರದಕ್ಷಿಣ, ನಮಸ್ಕಾರ) ಪೂಜೆಲಿ  ಪ್ರದಕ್ಷಿಣೆ ನಮಸ್ಕಾರವೂ ಒಂದು ಅಂಗ.

ಒಂದು ವೃತ್ತ ಬರೆಕ್ಕಾರೆರೆ ಅಥವಾ ಚಿತ್ರಿಸೆಕ್ಕಾರೆ ಅದಕ್ಕೊಂದು ಕೇಂದ್ರ ಬಿಂದು ಹೇಳಿ ಬೇಕು.
ನಮ್ಮೆಲ್ಲರ ಜೀವನಕ್ಕೆ ಪರಮಾತ್ಮನೇ ಕೇಂದ್ರ ಬಿಂದು, ಮೂಲ ಹಾಗೂ ಆಧಾರ. ಆ ಪರಮಾತ್ಮನ ಕೇಂದ್ರವಾಗಿಟ್ಟು ನಮ್ಮ ದಿನ ನಿತ್ಯದ ವ್ಯವಹಾರಲ್ಲಿ ತೊಡಗುತ್ತು ಹೇಳಿ ಸಾಂಕೇತಿಕವಾಗಿ ಸೂಚಿಸುವದೇ ಪ್ರದಕ್ಷಿಣೆ.
ಪ್ರದಕ್ಷಿಣೆ ಮಾಡುವಾಗ ಎಡದಿಂದ ಬಲಕ್ಕೆ ಸುತ್ತುವದು. ಹಾಂಗೇ ಪ್ರದಕ್ಷಿಣೆ ಮಾಡುವಾಗ  ವಿಗ್ರಹ / ಗರ್ಭಗುಡಿ ಬಲಕ್ಕೆ ಇಪ್ಪಾಂಗೆ ನೋಡಿಗೊಳ್ಳುತ್ತು.
ಭಾರತಲ್ಲಿ ಬಲಬದಿ (ದಕ್ಷಿಣ) ಶುಭ ಹೇಳಿ ನಂಬಿಕೆ. ಪ್ರದಕ್ಷಿಣೆ ಮಾಡುವಾಗ ಪರಮಾತ್ಮನ ಕರುಣೆ ಹಾಂಗೂ ಅನುಗ್ರಹಂದ ಪ್ರಾಮಾಣಿಕ ಮತ್ತು ಶುದ್ಧ ಜೀವನ ನಡೆಸುವಂತಾಗಲಿ ಹೇಳಿ ಮನಸಾ ಪ್ರಾರ್ಥಿಸುತ್ತು, ಹಾಂಗೂ ಧಾರ್ಮಿಕ ಸಂಕೇತವಾಗಿ , ಪರಮಾತ್ಮ ನಮ್ಮ ಬಲಗೈ , ನಮ್ಮ ಜೀವನದ ಬಲ, ಮಾರ್ಗದರ್ಶಕ ಹೇಳಿ ನಾವು ಮನಗಾಣುತ್ತು.
ಹೀಂಗೆ ನಮ್ಮ ಹಳೆ ತಪ್ಪುಗಳ ಮರದು ಮತ್ತೆ ಪುನರಾವರ್ತನೆ ಆಗದ ಹಾಂಗೇ ಜಾಗ್ರತೆ ವಹಿಸುತ್ತು.

ಮಾತೃ ದೇವೋ ಭವ , ಪಿತೃ ದೇವೋ ಭವ , ಆಚಾರ್ಯ ದೇವೋ ಭವ , ಅತಿಥಿ ದೇವೋ ಭವ  – ಹೇಳಿ ನಂಬುವ ಕಾರಣ ಮಾತಾ ಪಿತಾ ಗುರು ಅತಿಥಿ ಇವರುನ್ನುದೆ ಪ್ರದಕ್ಷಿಣೆ ಬಂದು ನಮಸ್ಕರಿಸೆಕು ಹೇಳಿ ಶಾಸ್ತ್ರ ಸಾರುತ್ತು.
ಗಣಪತಿ ಅವನ ಅಬ್ಬೆ ಅಪ್ಪಂಗೆ (ಶಿವ – ಪಾರ್ವತಿ) ಪ್ರದಕ್ಷಿಣೆ ಬಂದ ಕಥೆಲಿ ಇದರ ಮಹತ್ವ ನಾವು ತಿಳ್ಕೊಂಬಲಾವ್ತು.
ನಿತ್ಯ ಪೂಜೆಲಿ ನಾವು ನಿಂದಲ್ಯೇ ಪ್ರದಕ್ಷಿಣೆ ಮಾಡುವದು. ಈ ಕ್ರಮಲ್ಲಿ ನಮ್ಮಲ್ಲಿಯೇ ಇಪ್ಪ ಪರಮಾತ್ಮನ ದಿವ್ಯತೆಯ ಒಂದು ಮೂರ್ತಿ ರೂಪ ಕಲ್ಪಿಸಿಕೊಳ್ಳುತ್ತು.

ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ ||

(ಸಾಧಕರು ಪ್ರತಿಬಾರಿ ಪ್ರದಕ್ಷಿಣೆ ಮಾಡಿಯಪ್ಪಗಳೂ ತಮ್ಮ ಅನೇಕ ಜನ್ಮಂಗಳಲ್ಲಿ ಗೊಂತಿದ್ದೋ – ಗೊಂತಿಲ್ಲದ್ದೆಯೋ ಮಾಡಿದ ಯಾವುದೇ ಪಾಪವಾದರೂ , ಅವೆಲ್ಲವೂ ನಶಿಸಿಹೋವುತ್ತು )

ಹರೇ ರಾಮ

(ಸಂಗ್ರಹ)

ಚೆನ್ನೈ ಬಾವ°

   

You may also like...

20 Responses

 1. ತೆಕ್ಕುಂಜ ಕುಮಾರ says:

  {ಒಂದು ವೃತ್ತ ಬರೆಕ್ಕಾರೆರೆ ಅಥವಾ ಚಿತ್ರಿಸೆಕ್ಕಾರೆ ಅದಕ್ಕೊಂದು ಕೇಂದ್ರ ಬಿಂದು ಹೇಳಿ ಬೇಕು.
  ನಮ್ಮೆಲ್ಲರ ಜೀವನಕ್ಕೆ ಪರಮಾತ್ಮನೇ ಕೇಂದ್ರ ಬಿಂದು, ಮೂಲ ಹಾಗೂ ಆಧಾರ. ಆ ಪರಮಾತ್ಮನ ಕೇಂದ್ರವಾಗಿಟ್ಟು ನಮ್ಮ ದಿನ ನಿತ್ಯದ ವ್ಯವಹಾರಲ್ಲಿ ತೊಡಗುತ್ತು ಹೇಳಿ ಸಾಂಕೇತಿಕವಾಗಿ ಸೂಚಿಸುವದೇ ಪ್ರದಕ್ಷಿಣೆ.}
  ಒಳ್ಳೆ ವಿವರಣೆ.

 2. ಗಣೇಶ ಪೆರ್ವ says:

  ಒಪ್ಪ೦ಗೊ..

 3. Suvarnini Konale says:

  ವಿವರಣೆ ಲಾಯ್ಕಿದ್ದು 🙂 ನಮ್ಮ ಪ್ರತಿಯೊಂದೂ ಆಚರಣೆಗೊಕ್ಕೆ ಕಾರಣ ಇದ್ದೇ ಇದ್ದು, ಅದರ ಅರ್ಥ ಮಾಡಿಗೊಂಡು ಜೀವನ ನಡೆಶಿರೆ ಒಳ್ಳೆದು 🙂

 4. ಶರ್ಮಪ್ಪಚ್ಚಿ says:

  ಲಾಯಿಕದ ವಿವರಣೆ.
  ಆನೊಂದು ಸೊನ್ನೆ, ನೀನು ಎನ್ನ ಮೇಲೆತ್ತುವ “ಸನ್ನೆ” (lever) ಹೇಳಿ ಸಂಪೂರ್ಣ ಶರಣಾಗತಿ ಆಗಿಂಡು ಪ್ರದಕ್ಷಿಣೆ ಮಾಡೆಕ್ಕಡ.

 5. ಚುಬ್ಬಣ್ಣ says:

  ಲಾಯಕೆ ಆಯಿದು ಬಾವ, ಒಳ್ಳೆ ಮಾಹಿತಿ.. ಹಾ ಮತ್ತೆ ನಾವು ಪ್ರದಕ್ಷಿಣೆ ಹಾಕುವಾಗ ಒ೦ದು ಅಲ್ಲದ್ರೆ ಮೂರು ಹೇಳಿ ಏನಾರು ಲೆಕ್ಕ ಇದ್ದೊ?? ಮತ್ತೆ ಶಿವನ ದೇವಸ್ಥಾನಕ್ಕೆ ಹೋದಿಪ್ಪಗ ಅಲ್ಲಿ ಪೂರ್ತಿ ಸುತ್ತು ಹಾಕುಲೆ ಇಲ್ಲೆ ಬರೀ ಅರ್ಧ ಮಾ೦ತ್ರ.. ಇದು ಎ೦ತ ಹೇಳಿರೆ ಶಿವನ ಅಭಿಶೇಕ ಮಾಡ ಬಿಟ್ಟ ತೀರ್ಥವ ನಾವು ಅಡ್ಡ ದಾ೦ಟ್ಲಾಗ ಹೇಳಿ ಅಲ್ಲದೋ??

  • ಚೆನ್ನೈ ಭಾವ says:

   ಎಲ್ಲೋರಿಂಗೂ ಧನ್ಯವಾದಂಗೊ.

   @ಚುಬ್ಬಣ್ಣ –

   ಸಾಮಾನ್ಯವಾಗಿ ನಾವು ಒಂದು ಅಥವಾ ಮೂರು ಹೀಂಗೆ ನಮ್ಮ ಶಕ್ತ್ಯಾನುಸಾರ ಇಷ್ಟಾನುಸಾರ ಮಾಡುವದು ಕ್ರಮ. ಶಾಸ್ತ್ರದ ಪ್ರಕಾರ –

   ‘ಏಕಂ ವಿನಾಯಕೇ ಕುರ್ಯಾತ್ ದ್ವೇ ಸೂರ್ಯೇ ತಿಸ್ರ ಈಶ್ವರೇ ಚತ್ರುಸ್ರ ಕೇಶವೇ ಪಂಚ ದುರ್ಗಾಯಾಂ ಷಟ್ ಕುಮಾರಕೇ. ಸಪ್ತಾಶ್ವತ್ಥೆ ಇತಿನ್ನಮಸ್ಕಾರ ಪ್ರದಕ್ಷಿಣಮ್’ ಎಂಬ ಆಧಾರ ಪ್ರಕಾರ ಗಣಪತಿಗೆ ಒಂದು , ಸೂರ್ಯಂಗೆ ಎರಡು , ಶಿವಂಗೆ ಮೂರು ನಾರಾಯಣಂಗೆ ನಾಕು ದುರ್ಗಗೆ ಐದು ಅಶ್ವತ್ಥ ಮರಕ್ಕೆ ಏಳು ಬಾರಿ ಪ್ರದಕ್ಷಿಣ ನಮಸ್ಕಾರ. ಇದಾ ಪ್ರದಕ್ಷಿಣೆ ಮಾಡುವಾಗ ಕೈಮುಕ್ಕೊಂಡು ದೇವರ ಮನಸ್ಸಿಲ್ಲಿ ಕೇಂದ್ರೀಕ್ಕರಿಸೆಕ್ಕು ಮಿನಿಯಾ, ಕೈ ಬೀಸಿಯೊಂಡು ಅಲ್ಲ.!

   ಮತ್ತೆ ನಿಂಗೊ ಹೇಳಿದಾಂಗೆ ಅಭಿಷೇಕ ತೀರ್ಥ ಅಡ್ಡ ದಾಂಟ್ಳಾಗ ಹೇಳುವದಕ್ಕಾವ್ತು (ಅಭಿಷೇಕಪ್ರಿಯ ಶಿವಂಗೆ ಪಂಚಾಮೃತ ಧಾರಾಳ ಅಭಿಷೇಕ ಅಪ್ಪದರಿಂದ ತುಪ್ಪದ ಪಸೆ ಹಾಲಿನ ಪಸೆ ಇತ್ಯಾದಿ ಕಾಲಿಂಗೆ ತಾಗಿ ಜಾರಿ ಬೀಳುಗಿದಾ!). ಶಿವಂಗೆ ಪ್ರದಕ್ಷಿಣೆ ಬಪ್ಪಗ ಸೋಮಸೂತ್ರಲ್ಲಿ ಹರುದು ಬಪ್ಪ ನೀರೋಪ ದಾರಿಯ ಮುಚ್ಚದ್ದೇ ಇದ್ದರೆ (ಎಂತಕೆ ಮುಚ್ಚುತ್ತವಿಲ್ಲೆ ಎನಗರಡಿಯ., ಬಹುಶಃ ಅಧಿಕ ಪ್ರವಾಹಯುಕ್ತವಾಗಿಕ್ಕು ಹೇದು ಆಯ್ಕು) ಅದರ ದಾಂಟಿ ಪ್ರದಕ್ಷಿಣೆ ಬಪ್ಪಲಾಗ. ಸುರುವಿಂಗೆ ನಂದಿಗೆ ವಂದಿಸಿ , ಶಿವಂಗೆ ನಮಸ್ಕರಿಸಿ, ಬಲದ ಹೊಡೆಗಾಗಿ ವರ್ತುಲಾಕಾರಕ್ಕೆ ಪ್ರದಕ್ಷಿಣೆ ಬಂದು ಆ ನೀರು ಹೋಪ ಜಾಗೆಯಲ್ಲಿವರೆಂಗೆ (ಗೋಮುಖಿ) ಬಂದು ಅಲ್ಲಿಂದ ತಿರುಗಿ ಈಚ ಹೊಡೆಲಿ ಬಂದು ಪುನ ಆ ನೀರೋವ್ತಲ್ಲಿ ವರೆಂಗೆ ಬಂದು ಶಿವಂಗೆ ನಮಸ್ಕರಿಸಿ ನಂದಿಗೆ ನಮಸ್ಕರಿಸುವದು ಕ್ರಮ. ದಾಂಟಿ ಪ್ರದಕ್ಷಿಣೆ ಬಂದರೆ ಒಂದೇ ಫಲ , ದಾಂಟದ್ದೆ ಪ್ರದಕ್ಷಿಣೆ ಮಾಡಿರೆ ಹತ್ತು ಸಾವಿರ ಫಲ ಹೇಳಿ ಒಂದಿಕ್ಕೆ ಓದಿದ ನೆಂಪು. ಹೆಚ್ಚಿನ ವಿವರಕ್ಕೆ ಒಂದರಿ ಇದನ್ನೂ ನೋಡಿಕ್ಕಿ – http://www.pradosham.com/pradoshapuranam.php

   ಹೆಚ್ಚಾಗಿ ಶಿವಂಗೆ ಹಾಕುವ ಪ್ರದಕ್ಷಿಣೆ ಅರ್ಧಚಂದ್ರ ವರ್ತುಲಲ್ಲಿಯೇ. ಪಾಣಿಪೀಠಂದ ಉತ್ತರ ದಿಕ್ಕಿಂಗೆ (ಸೋಮನ ದಿಕ್ಕಿಂಗೆ ) ಮಂದಿರದ (ಗೋಪುರದ) ವಿಸ್ತಾರದ ಕೊನೆಯವರೇಂಗೆ (ಪ್ರಾಂಗಣದವರೇಂಗೆ) ಹೋಪ ಹರಿನಾಳಕ್ಕೆ ಸೋಮಸೂತ್ರ ಹೇದು ಹೇಳ್ತದು. ಪ್ರದಕ್ಷಿಣೆ ಹಾಕುವಾಗ ಎಡತ್ತಿಂದ ಹರಿನಾಳದವರೇಂಗೆ ಹೋಗಿ ಅದರ ದಾಂಟದ್ದೆ ಹಿಂದಂಗೆ ತಿರುಗಿ ಮತ್ತೆ ವಿರುದ್ಧ ದಿಕ್ಕಿಲ್ಲಿ ಬಲಂತಾಗಿ ಹರಿನಾಳದವರೇಂಗೆ ಹೋಗಿ ಪ್ರದಕ್ಷಿಣೆ ಮುಗಿಶೆಕು. ಈ ನಿಯಮ ಶಿವಲಿಂಗ ಮಾನವಸ್ಥಾಪಿತ ಅಥವಾ ಮಾನವ ನಿರ್ಮಿತವಾಗಿದ್ದಲ್ಲಿ ಮಾಂತ್ರ ಅನ್ವಯಿಸುವದು. ಈ ನಿಯಮ ಸ್ವಯಂಭೂ ಲಿಂಗಕ್ಕೆ ಮತ್ತೆ ಚಲಲಿಂಗಕ್ಕೆ (ಮನೆಲಿಪ್ಪ ಶಿವಲಿಂಗಕ್ಕೆ) ಅನ್ವಯಿಸುತ್ತಿಲ್ಲೆ. ಪಾಣಿಪೀಠಂದ ಹರಿನಾಳಲ್ಲಿ ಹರುದುಹೋಪ ನೀರಿನ ಪ್ರವಾಹ ಶಕ್ತಿ ಅಧಿಕ ಇಪ್ಪದರಿಂದ ಅದರ ದಾಂಟ್ಳಾಗ ಹೇಳಿ ಕ್ರಮ ಮಾಡಿದ್ದದು. ಅದರ ದಾಂಟುವಾಗ ಕಾಲು ಜಾರೋದು, ಕಾಲು ನೀಡಿ ದಾಂಟುವದರಿಂದ ಕಾಲು ಅಗಲವಪ್ಪದರಿಂದ ವೀರ್ಯನಿರ್ಮಿತಿಯ ಮೇಗೆ ಮತ್ತೆ ಐದು ವಾಯುವಿನ ಮೇಲೆ ವಿಪರೀತ ಪರಿಣಾಮ ಉಂಟಾವ್ತು. ದೇವದತ್ತ ಮತ್ತೆ ಧನಂಜಯ ವಾಯುಗೊ ಕುಗ್ಗುತ್ತು. ಆದರೆ ಅದರ ದಾಂಟುವಾಗ ವ್ಯಕ್ತಿಯು ತನ್ನ ತಾನು ಬಿಗಿಹಿಡ್ಕೊಂಡ್ರೆ ನರಂಗೊ ಬಿಗಿಯಾಗಿ ಅದರ ಪರಿಣಾಮ ಉಂಟಾವ್ತಿಲ್ಲೆ. ಈ ಅಪಾಯವ ತಪ್ಪುಸಲೆ ಹೀಂಗೆ ಒಂದು ಉಪಾಯವ ಮದಲಾಣೋರು ಕಂಡುಮಡಿಕ್ಕೊಂಡಿದವು.

   • ಚುಬ್ಬಣ್ಣ says:

    ಓ..!! ಹಾ೦ಗೋ… ಧನ್ಯವಾದ ಭಾವ.. ಭಾರಿ ಒಳ್ಳೆ ಸ೦ಕೋಲೆ.. 🙂

   • ತೆಕ್ಕುಂಜ ಕುಮಾರ says:

    {ಗಣಪತಿಗೆ ಒಂದು , ಸೂರ್ಯಂಗೆ ಎರಡು , ಶಿವಂಗೆ ಮೂರು ನಾರಾಯಣಂಗೆ ನಾಕು ದುರ್ಗಗೆ ಐದು ಅಶ್ವತ್ಥ ಮರಕ್ಕೆ ಏಳು ಬಾರಿ ಪ್ರದಕ್ಷಿಣ ನಮಸ್ಕಾರ.} ನಡುಕೆ ಆರು ನಮಸ್ಕಾರ ಬಿಟ್ಟದೆಂತಕೆ ಭಾವ ?

    • ಬೊಳುಂಬು ಮಾವ says:

     ಅದು ಕುಮಾರಂಗೆ ಆದ ಕಾರಣ ಆಯ್ಕೋ ?!!

    • ಚೆನ್ನೈ ಭಾವ says:

     ಓಹ್, ಕೈ ಬಿಟ್ಟೋದ್ದು ಅಷ್ಟಪ್ಪಗ. ಇದಾ ಕುಮಾರಂಗೆ ಆರು .

     ಷಟ್ ಕುಮಾರಕೇ = ಸುಬ್ರಹ್ಮಣ್ಯಂಗೆ ಆರು.

     • 🙁
      ಕುಮಾರಮಾವಂಗೆ ಇದ್ದಡ, ಎನಗೇಕೆ ಇಲ್ಲೆ? 🙁

     • ಪೆಂಗ says:

      ನಿನಗೆ ಇಲ್ಲೆಯೋ! ಇದ್ದನ್ನೇ!

     • ಸುಭಗ says:

      ನೆಗೆಮಾಣಿಗೆ ‘ಸುತ್ತು ಕಮ್ಮಿ’ ಆಯಿದೂಳಿ ಬೇಜಾರೋ?!

     • ತೆಕ್ಕುಂಜ ಕುಮಾರ says:

      ಹೆಹೆಹ್ಹೆ…
      ಅಲ್ಲ ಪೆಟ್ಟು ಕಮ್ಮಿಯೋ… ” ಷಟ್ ಕುಮಾರಗೆ.. ಪೆಟ್ಟು ನೆಗೆಗಾರಗೆ” ಹೇಳಿ ಮಾಡಿರೆ ಸಮಾಧಾನ ಅಕ್ಕೊ..?

    • ಶರ್ಮಪ್ಪಚ್ಚಿ says:

     [ಷಟ್ ಕುಮಾರಕೇ.] ಹೇಳಿದ್ದವಲ್ಲದಾ. ಇನ್ನೊಂದು ಸರ್ತಿ ಕೇಳಿರೆ ಷಟಪ್ ಕುಮಾರಕೇ ಹೇಳುಗಾ 🙂

     • ತೆಕ್ಕುಂಜ ಕುಮಾರ says:

      ಆನು ಎಂತ ಹೇಳಿದ್ದಿಲೆ ಈಗ…!

  • ಉಂಡೆಮನೆ ಕುಮಾರ° says:

   ಬೈಲಿಲ್ಲಿ ಶರ್ಮಪ್ಪಚ್ಚಿ ಪ್ರದೋಷ ಪೂಜೆಯ ಬಗ್ಗೆ ಲಾಯಿಕ ಮಾಹಿತಿ ಕೊಟ್ಟ ಲೇಕನ..ಸಂಕೋಲೆ
   http://oppanna.com/lekhana/sharmappacchi/pradosha-pooje
   ಸೋಮಸೂತ್ರದ ಬಗ್ಗೆ ಚೆಂದಕೆ ವಿವರಣೆ ಕೊಟ್ಟಿದವು. ಪುನಃ ಬರದ ಚೆನ್ನೈ ಭಾವಂಗೆ ವಂದನಗೋ..

 6. ಪ್ರದಕ್ಷಿಣೆ ಹಾಕುವಾಗ ಸ್ತ್ರೀ ದೇವತೆ ಆದರೆ ವಿಸಮ ಸಂಖ್ಯೆಲ್ಲಿಯುದೇ (೧,೩,…) ಪುರುಶ ದೇವತೆ ಆದರೆ ಸಮ ಸಂಖ್ಯೆಯ (೨, ೪, …) ಪ್ರದಕ್ಷಿಣೆ ಹಾಕೆಕ್ಕು ಹೇಳಿ ಅಲ್ಲದಾ ನಿಯಮ ಇಪ್ಪದು. ಲೇಖನ ಒಪ್ಪ ಆಯಿದು… ಒಪ್ಪಂಗೊ… 🙂

 7. ಬೊಳುಂಬು ಮಾವ says:

  ಚೆನ್ನೈ ಭಾವ, ಒಳ್ಳೆ ಮಾಹಿತಿ ಕೊಟ್ಟ ಲೇಖನ. ಧನ್ಯವಾದಂಗೊ.

 8. ರಘು ಮುಳಿಯ says:

  ಸೂರ್ಯನ ಸುತ್ತಲೂ ಸುತ್ತುವ ಗ್ರಹ೦ಗೊ ಸೌರವ್ಯೂಹಕ್ಕೆ ಅರ್ಥ ಕೊಡುವ ಹಾ೦ಗೆ,ಅಗೋಚರವಾದ ಕೆ೦ದ್ರ ಬಿ೦ದುವಿ೦ದ ಎಳೆದ ಈ ಜೀವನ ಹೇಳುವ ವೃತ್ತ ಅರ್ಥಪೂರ್ಣ ಆಯೆಕ್ಕಾರೆ ನಮ್ಮ ನಡೆಯೂ ಆ ವೃತ್ತದ ಕೆ೦ದ್ರಬಿ೦ದುವಿನ ಸುತ್ತಲೇ ಇರೆಕ್ಕಲ್ಲದೋ?ಅಲ್ಲದ್ದರೆ ವೃತ್ತದ ಅರ್ಥ ಕಳಕ್ಕೊ೦ಡ ಹಾ೦ಗೆಯೇ ನಮ್ಮ ಜೀವನವೂ ಅರ್ಥಹೀನ ಆವುತ್ತಲ್ಲದೋ?
  ಸೂಕ್ಷ್ಮ ವಿಷಯವ ಸರಳವಾಗಿ ನಿರೂಪಿಸಿದ್ದಕ್ಕೆ ಚೆನ್ನೈಭಾವ೦ಗೆ ಧನ್ಯವಾದ.ಒಳುದ ಮಾತುಕತೆ೦ದ ಸುಮಾರು ವಿಷಯ ಸಿಕ್ಕಿತ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *