ನಾವು ಎಂತಕೆ ಪುಸ್ತಕ, ಕಾಗದವ ಕಾಲಿಂದ ಮೆಟ್ಟುಲಾಗ?

August 11, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಾರತೀಯ ಸಂಸ್ಕೃತಿಲಿ ಕಾಗದ, ಪುಸ್ತಕಗಳ ಕಾಲಿಂದ ಮುಟ್ಟಲಾಗ, ಮೆಟ್ಟಲಾಗ ಹೇಳಿ ಸಣ್ಣದಿಪ್ಪಗಂದಲೇ ಬೋಧುಸುತ್ತವು.
ಅಕಸ್ಮಾತ್ ಕಾಗದ, ಪುಸ್ತಕ, ಸಂಗೀತೋಪಕರಣ ಅಥವಾ ಶಿಕ್ಷಣಿಕ ಸಾಮಾಗ್ರಿ ವಾ ಕಲಾವಸ್ತು ಕಾಲಿಂಗೆ ತಾಗಿರೆ ಕೂಡಲೇ ಕೈಂದ ಮುಟ್ಟಿ ಕಣ್ಣಿಂಗೆ ಒತ್ತಿಗೊಂಡು ಕ್ಷಮೆಯಾಚಿಸೇಕು ಹೇಳಿ ಹಿರಿಯರು ನವಗೆ ಹೇಳಿಕೊಟ್ಟದು.

ಭಾರತೀಯರಿಂಗೆ ಜ್ಞಾನವು ಅತ್ಯಂತ ಶ್ರೇಷ್ಠ, ಪವಿತ್ರ, ಪೂಜನೀಯ.
ವಿದ್ಯೆಯು /ಜ್ಞಾನವು ಸರಸ್ವತೀ ದೇವಿಯ ಕೃಪೆ. ಆದ್ದರಿಂದ ಜ್ಞಾನ ಆ ಸರಸ್ವತೀ ದೇವಿಗೆ ಸದೃಶ. ಆದ್ದರಿಂದಲೇ ಭಾರತೀಯರು ವಿದ್ಯೆ, ಜ್ಞಾನವ ಅಪಾರ ಗೌರವಂದ ನೋಡುತ್ತವು.
ಜ್ಞಾನವ – 1. ಪಾರಮಾರ್ಥಿಕ (ಸೇಕ್ರೆಡ್), 2. ಪ್ರಾಪಂಚಿಕ (ಸೆಕ್ಯುಲರ್) ಹೇಳಿ ವಿಂಗಡಿಸಿದ್ದವು.
ಹಿಂದಿನ ಸಂಪ್ರದಾಯಲ್ಲಿ ಕೇವಲ ತೋರಿಕೆಗಾಗಿ ಅಥವಾ ಜೀವನೋಪಾಯಕ್ಕಾಗಿ ಶೈಕ್ಷಣಿಕ ವೃತ್ತಿ ಧರ್ಮ ಮಾಡುತ್ತಿದ್ದವಿಲ್ಲೆಡ.
ಭಾರತೀಯ ಸಂಸ್ಕೃತಿಲಿ ಜ್ಞಾನಕ್ಕೆ ಕೊಡುತ್ತಿದ್ದ ಅತ್ಯುನ್ನತ ಗೌರವ ಮತ್ತು ಶಿಸ್ತು ಅನುಷ್ಠಾನವ ನಾವು ತಿಳ್ಕೋಳ್ಳೆಕು.
ಈ ವಿವೇಕ ಚಿಕ್ಕಂದಿಲಿಂದಲೇ ಬಂದರೆ ಶೈಕ್ಷಣಿಕ ಧರ್ಮದ ಬಗ್ಗೆ ಅಪಾರ ಗೌರವ ಶ್ರದ್ಧೆ ನಮ್ಮಲ್ಲಿ ನಿಲ್ಲುತ್ತು. ಈ ಕಾರಣಂದಲೇ ನಾವು ಒರುಶಕ್ಕೊಂದರಿ ಸರಸ್ವತಿ ಪೂಜೆ ಆಯುಧ ಪೂಜೆ ಹೇಳಿ ಭಕ್ತಿಂದ ಆಚರಿಸುತ್ತು.
ಪ್ರತಿ ದಿನ ನಾವು ನಮ್ಮ ಸ್ವಾಧ್ಯಾಯ ಆರಂಭಿಸೆಕ್ಕಾರೆ ಈ ಪ್ರಾರ್ಥನೆ ಹೇಳುವುದಿದ್ದು –

ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಮಾನವ ಸರ್ವ ಪ್ರಾಣಿಗಳಲ್ಲಿ ಶ್ರೇಷ್ಠ. ಭೌದ್ಧಿಕ ಶಕ್ತಿ ಇಪ್ಪವ. ಚಿಂತನಾ ಶಕ್ತಿ ಇಪ್ಪವ, ವಿವೇಕ ಇಪ್ಪವ.
ಆದ್ದರಿಂದ ನಮ್ಮ ಸಮಾನ ವಾ ನಮ್ಮಿಂದ ಹಿರಿಯರ ಪಾದಮುಟ್ಟಿ ನಮಸ್ಕರಿಸಿರೆ ಅವರಲ್ಲಿಪ್ಪ ದೈವತ್ವವ ನಾವು ಗೌರವಿಸಿದ  ಹಾಂಗೆ ಅರ್ಥ.
ಇಲ್ಲದ್ರೆ ಕಾಲಿಂದ ಮುಟ್ಟಿರೋ ತಟ್ಟಿರೋ ನಮ್ಮಲ್ಲಿಪ್ಪ ದೈವಾಂಶವ ನಾವೇ ಅಲ್ಲಗೆಳದ ಹಾಂಗೇ.
ಹಾಂಗಾಗಿ ಅಚಾತುರ್ಯಲ್ಲಿ ನಮ್ಮ ಕಾಲು / ಪಾದ ಸ್ಪರ್ಶ ಆದರೆ ಕೂಡಲೇ ನಾವು ಕೈಂದ ಮುಟ್ಟಿ ಕಣ್ಣಿಂಗೆ ಒತ್ತಿ ನಮ್ಮ ಶ್ರದ್ಧಾ ಭಕ್ತಿಯ ವಿನಯ ಪೂರ್ವಕ ತೋರ್ಸಿ ಅಜಾಗರೂಕತೆಗೆ ಕ್ಷಮೆ ಯಾಚಿಸುತ್ತು.

ಹೀಂಗೆ, ನಮ್ಮ ಹಲವು ಆಚರಣೆಗೊ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಅತ್ಯಂತ ಅರ್ಥಗರ್ಭಿತ ಹಾಗೂ ಪಾರಮಾರ್ಥಿಕ ಸತ್ಯವ ಸ್ಪಷ್ಟ ನಿರೂಪಿಸುವ ದಿಕ್ಸೂಚಿ.
ಈ ಕಾರಣಂದಲೇ ಭಾರತೀಯ ಸಂಸ್ಕೃತಿ ಶತಶತಮಾನಗಳಾದರೂ  ಇನ್ನೂ ಜೀವಂತವಾಗಿದ್ದು.

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ಪುಸ್ತಕ, ಕಾಗದವ ಕಾಲಿಂದ ಮೆಟ್ಟುಲಾಗ?, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಗಬ್ಬಲಡ್ಕ ಕೇಶವ

  ಲೇಖನ ಒಳ್ಳೆದಿದ್ದು…

  ಶೀರ್ಷಿಕೆಲಿ “ಕಾಲಿಂದ” ಹೇಳುವ ಶಬ್ದ ಇಲ್ಲದ್ರೂ ಆವ್ತೋಳಿ…. 😉

  ಅಧಿಕಪ್ರಸಂಗ ಹೇಳಿ ಗ್ರೇಶೆಡಿ…. 😀

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಧಾರಾಳ ಅಕ್ಕು ಕೇಚಣ್ಣ. ಚಪ್ಪಲಿ ಕಾಲಿಂಗೆ ಹಾಕಿಗೋ ಹೇಳಿ ಎಲ್ಲಿಯೂ ಹೇಳಿಕ್ಕೇಡಿನ್ನು ಆತೋ ಏ. ತಲಗೆ ಮುಟ್ಟಾಳೆ ಹಾಕಿಗೋ, ಕೈಲಿ ವಾಚು ಕಟ್ಟು ಹೇಳೆಡಿ. ಕೈಲಿ ಕತ್ತಿ ಹಿಡ್ಕೊಂಡು ಹೋವ್ತಿಯೋ ಅಪ್ಪಚ್ಚಿ ಹೇಳಿಯೂ ಕೇಳ್ಳಾಗ ಮಿನಿಯಾ.

  [Reply]

  ಗಬ್ಬಲಡ್ಕ ಕೇಶವ

  ಕೇಚಣ್ಣ Reply:

  😀 ಇಲ್ಲೆಪ್ಪಾ…
  {ತಲಗೆ ಮುಟ್ಟಾಳೆ ಹಾಕಿಗೋ, ಕೈಲಿ ವಾಚು ಕಟ್ಟು ಹೇಳೆಡಿ}
  ಹೇಳ್ತಿಲ್ಲೆ… 😉

  “ಸುಮ್ನೆ ತಮಾಶೆಗೆ” ಹೇಳಿದ್ಸು ಮಿನಿಯಾ… 😉

  [Reply]

  ಡಾಮಹೇಶಣ್ಣ

  ಮಹೇಶ Reply:

  ಭಾವ೦ದ್ರೇ!
  `ಲಘು’-ಪ್ರಶ್ನೆಯೂ ಲಾಯಕಾಯಿದು; ಉತ್ತರವೂ ರೈಸಿದ್ದು !!

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಎಂತಕೆ?-ಸರಣಿ ಲಾಯ್ಕ ಬತ್ತಾ ಇದ್ದು.
  ಎಂದುಕೊಂಡು……..ಹೇಳಿ ಮಲೆಯಾಳಲ್ಲಿ ಒಂದು ಪದ್ಯ ಇದ್ದು.ಅದು ನೆಂಪಾತು.
  ನಮ್ಮ ಕ್ರಮಂಗಳ ಹಿಂದೆ ಇಪ್ಪ ಹುರುಳು ಪಕ್ಕನೆ ಗೊಂತಾಗದ್ದೆ ಜನಂಗೊ ಹಾಸ್ಯ ಮಾಡುದು ಇದ್ದು.ಇದು ಅದರ ದೂರ ಮಾಡುವ ಯತ್ನ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಧನ್ಯವಾದ ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಚೆನ್ನಬೆಟ್ಟಣ್ಣದೊಡ್ಡಭಾವಬಟ್ಟಮಾವ°ಪುತ್ತೂರುಬಾವಶೀಲಾಲಕ್ಷ್ಮೀ ಕಾಸರಗೋಡುಬೋಸ ಬಾವಅನುಶ್ರೀ ಬಂಡಾಡಿಬೊಳುಂಬು ಮಾವ°ಡಾಮಹೇಶಣ್ಣಶ್ರೀಅಕ್ಕ°ಅನು ಉಡುಪುಮೂಲೆಚೆನ್ನೈ ಬಾವ°ಅಡ್ಕತ್ತಿಮಾರುಮಾವ°ವಸಂತರಾಜ್ ಹಳೆಮನೆಪುತ್ತೂರಿನ ಪುಟ್ಟಕ್ಕಸುವರ್ಣಿನೀ ಕೊಣಲೆಗಣೇಶ ಮಾವ°ಅಕ್ಷರದಣ್ಣಪುಟ್ಟಬಾವ°ಜಯಗೌರಿ ಅಕ್ಕ°ತೆಕ್ಕುಂಜ ಕುಮಾರ ಮಾವ°ಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಗೋಪಾಲಣ್ಣಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ