ಎಸ್.ಎನ್.ಪಿ

December 22, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮಲ್ಲಿ ಹೆಸರುಗಳ ಚುಟುಕ ಮಾಡಿ ಚಟಕ್ಕನೆ ಹೇಳ್ವ ಕ್ರಮ ಸುಮಾರು ಮದಲಿಂದಲೇ ಇದ್ದು.
ಉದಾಹರಣಗೆ, ಕೃಷ್ಣ ಭಟ್ಟ ತಲೆಂಗಳ = ಕೆಬಿಟಿ,
ಗೋಪಾಲಕೃಷ್ಣ – ಜೀಕೆ,
ಏನಂಕೋಡ್ಳು ಕಿಶೋರ = ಏಕೆ.. ಇತ್ಯಾದಿ.

ಅನುಕ್ಕೂಲಕ್ಕೆ ಬೇಕಾವ್ತು ಹೇಳಿ ಎಲ್ಲಾ ಕ್ಷೇತ್ರಲ್ಲಿಯೂ ಹೆಸರು ಚುಟುಕುಸುವದು ಸುರುವಾಯ್ದು.
ಇದು ಮುಂದುವರುದು ಪೂಜೆ ಹೋಮಂಗಳ ಹೆಸರುಗಳೂ ಸಣ್ಣದಾಗಿ ಡಿ.ಪಿ = ದುರ್ಗಾಪೂಜೆ, ಟಿ.ಪಿ = ತ್ರಿಕಾಲ ಪೂಜೆ, ಜಿ.ಹೆಚ್ = ಗಣಪತಿ ಹೋಮ, ಎಸ್ ಎಸ್ = ಸಂಧಿಶಾಂತಿ, ಎಸ್.ಎನ್.ಪಿ = ಸತ್ಯನಾರಾಯಣ ಪೂಜೆ ಹೀಂಗೆ ಹೇಳುವ ಕ್ರಮವೂ ಇದ್ದು.
ಅವರವರ ಅನೂಕ್ಕೂಲಕ್ಕೆ ಮಾಡಿಗೋಳ್ತವು.

ಎಸ್.ಎನ್.ಪಿ (ಸತ್ಯನಾರಾಯಣ ಪೂಜೆ) ನವಗೆ ಹೊಸತ್ತೇನಲ್ಲ. ನಮ್ಮಲ್ಲಿ ಸಾಧಾರಣ ಆಗಿಯೊಂಡೇ ಇರ್ತು.
ಈ ಕಲಿಯುಗಲ್ಲಿ ದೊಡ್ಡಮಟ್ಟಿನ ಸುಲಭ ಪೂಜೆ ಹೇಳಿಯೂ ಹೊಗಳಿಕೆ ಎಸ್.ಎನ್.ಪಿಗೆ. ‘ಏವ ಪೂಜೆ ಆದರೂ ಮಾಡ್ಳೂ ಭಂಙ ಇಲ್ಲೆ, ಮಾಡುಸಲೂ ಭಂಙ ಇಲ್ಲೆ’ – ಭಟ್ಟ ಮಾವ° ಹೇಳುಗು ಯೇವತ್ತೂ.

ಎಲ್ಲಾ ಪೂಜೆಲಿ ನಡವದು ಒಂದೇ ಕ್ರಮಡ್ಡ.
ಸಣ್ಣಕೆ ಆದರೆ ಷೋಡಶೋಪಚಾರ ಪೂಜೆ (ಷೋಡಶೋಪಚಾರ ಪೂಜೆ ಯಾವುದಯ್ಯಾ ಎಂದರೆ… ಹೇಳಿ ನಾವು ಇತ್ತೀಚಗೆ ಭವಂತಃ ಸರ್ವಜ್ಞಾಃ ಹೇಳಿ ಹೇಳಿದ ಸಭಾವಂದನ ಶುದ್ದಿಲಿ ಓದಿದ್ದಪ್ಪೋ),
ಉದ್ದ ಮಾಡ್ತರೆ ಕಲ್ಪೋಕ್ತ ಪೂಜೆ [ಷೋಡಶೋಪಚಾರ ಪೂಜೆಯ ವಿಸ್ತಾರ ರೂಪವೇ ಕಲ್ಪೋಕ್ತ ಪೂಜೆ (ಕಲ್ಪಗ್ರಂಥಂಗಳಲ್ಲಿ ಉಕ್ತ) ಹೇಳಿ ಹೇಳ್ಳಕ್ಕು].
ನಿತ್ಯ ಪೂಜಾವಿಧಿಲಿ ಷೋಡಶೋಪಚಾರ ಕ್ರಮ ಇದ್ದು. (ಉಪಚಾರಲ್ಲಿ ಹಲವು ಇದ್ದು – ಧ್ಯಾನ ಆವಾಹನ ಆಸನ ಪಾದ್ಯ ಅರ್ಘ್ಯ ಆಚಮನ ಮಧುಪರ್ಕ ಸ್ನಾನ ಪುನರಾಚಮನ ಉಪವೀತ ವಸ್ತ್ರ ಆಭರಣ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ನೀರಾಜನ ಮಂತ್ರಪುಷ್ಪ ಪ್ರದಕ್ಷಿಣ ನಮಸ್ಕಾರ ವೇದ ಸ್ತೋತ್ರ ಛತ್ರ ಚಾಮರ ವಾಹನ ನೃತ್ಯ ಗೀತ ವಾದ್ಯ ಪ್ರಾರ್ಥನಾ. ಷೋಡಶೋಪಚಾರಂಗಳಲ್ಲಿ ಯಾವ ಯಾವ ಹೆಸರಿನವು ಹೇಳ್ವದರಲ್ಲಿ ಭಿನ್ನಾಭಿಪ್ರಾಯ ಇದ್ದಡ.
ಇದರಲ್ಲಿ ನಾವು ನಿತ್ಯ ಪೂಜೆಲಿ ಅಳವಡಿಸಿಗೊಂಡದು – ಧ್ಯಾನ ಆವಾಹನ ಆಸನ ಪಾದ್ಯ ಅರ್ಘ್ಯ ಆಚಮನ ಸ್ನಾನ ವಸ್ತ್ರ ಉಪವೀತ ಆಭರಣ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ನೀರಾಜನ ಮಂತ್ರಪುಷ್ಪ ಪ್ರದಕ್ಷಿಣ ನಮಸ್ಕಾರ) ಅದೇ ತತ್ವವ ಎಲ್ಲಾ ಪೂಜೆಗಳಲ್ಲಿಯೂ ಅಳವಡಿಸಿಗೊಂಡರೆ ಆತು.
ಆಯಾ ದೇವರ ಮಂತ್ರಂಗಳ ಸೇರ್ಸಿಗೊಂಡರೆ ಆತು.
ಮಂತ್ರಂಗಳೇ ಗೊಂತಿಲ್ಲದ್ದಮತ್ತೆ ಸೇರುಸುತ್ತೆಲ್ಲಿಂದ ಅಲ್ಲದೋ.
ಇರ್ಲಿ ಬಿಡಿ. ಭಟ್ಟಮಾವ° ಒಟ್ಟಿಂಗೇ ಇಪ್ಪಗ ನವಗೆಂತಕೆ ಹೆದರಿಕೆ. ರಜ ರಜಾವೇ ಕಲ್ತೊಂಡ್ರೆ ಆತು ಅವರತ್ರಂದ.

ಶ್ರೀ ಸತ್ಯನಾರಾಯಣ ದೇವರು

ಪೂಜಾಮಂಟಪಲ್ಲಿ ದೀಪ ಪ್ರಜ್ವಲಿಸಿ, ಆಚಮನ, ಪವಿತ್ರಪಾಣಿಯಾಗಿ, ಶ್ರೀಗುರುಗಣಪತಿ ಕುಲದೇವತಾ ಮನಸಾ ವಂದಿಸಿ, ಪ್ರಾಣಾಯಾಮ, ಶರೀರ ಶುದ್ಧಿ, ಜಲಪೂಜ, ಶಂಖಪೂಜಾ, ಶ್ರೀ ಸತ್ಯನಾರಾಯಣ ಪೂಜಾ ಸಂಕಲ್ಪ ಮಾಡಿ , ಶ್ರೀ ಗುರು ಗಣಾಧಿಪರ ಪೂಜಿಸಿ, ಪ್ರಾರ್ಥಿಸಿ, ವಾಸ್ತೋಷ್ಪತಿ, ಕ್ಷೇತ್ರಪಾಲರ ಪ್ರಾರ್ಥಿಸಿ, ಪಂಚವಾಕ್ಯ ಪುಣ್ಯಾಹ ವಾಚನೆ ಮಾಡಿಗೊಂಡು,  ಪುರುಷಸೂಕ್ತ  ಅಂಗನ್ಯಾಸ ಮಾಡಿ, ‘ಆಗಮಾರ್ಥಂತು ದೇವಾನಾಂ … ಹೇಳಿಗೊಂಡು ಘಂಟಾನಾದ ಮಾಡಿ, ದ್ವಾರಪಾಲ ಪೂಜೆ ಮಾಡಿ, ತೀರ್ಥಶಂಖ ಪೂಜೆಮಾಡಿ, ಕಲಶಪ್ರತಿಷ್ಠೆ ಮಾಡಿ, ಪೀಠಪೂಜೆ ನೆರವೇರಿಸಿ, ಸಪರಿವಾರ ಸಹಿತ ಆದಿತ್ಯಾದಿ ನವಗ್ರಹ ದೇವತೆಗಳ ಆವಾಹಿಸಿ, ಇಂದ್ರಾದಿ ಲೋಕಪಾಲರನ್ನೂ ಆವಾಹಿಸಿ, ಗಣಪತ್ಯಾದಿ ಚತುಷ್ಟಯ ದೇವತೆಗಳ ಆವಾಹಿಸಿ, ಸಪರಿವಾರ ಸಹಿತ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಆವಾಹಿಸಿ ಪ್ರಾಣಪ್ರತಿಷ್ಠೆ ಮಾಡಿ, ಷೋಡಶೋಪಚಾರ ಮಾಡಿ ಕಲ್ಪೋಕ್ತ ಪೂಜಾವಿಧಾನಲ್ಲಿ ಪಂಚಾಮೃತ ಅಭಿಷೇಕ, ಪುರುಷಸೂಕ್ತ – ಶ್ರೀಸೂಕ್ತ – ಘರ್ಮಸೂಕ್ತ ಮಂತ್ರ ಹೇಳಿಗೊಂಡು ಮಹಾಭಿಷೇಕ, ಅಲಂಕಾರ, ಸಹಸ್ರನಾಮ, ಅಂಗ ಪೂಜಾ, ಪುಷ್ಪ ಪೂಜಾ, ಪತ್ರ ಪೂಜಾ, ಅಷ್ಟೋತ್ತರ ಅರ್ಚನೆ, ಆವರಣ ಪೂಜೆ ಮಾಡಿ, ಧೂಪ, ದೀಪ, ಸಪಾದ ಭಕ್ಷ್ಯ,  ಫಲಾಷ್ಟಕ, ತಾಂಬೂಲ – ನೈವೇದ್ಯ ಮಾಡಿ, ಮಂಗಳಾರತಿ, ಮಂತ್ರಪುಷ್ಪ, ಪ್ರದಕ್ಷಿಣ, ಪ್ರಾರ್ಥನಾ  ನಮಸ್ಕಾರ ಮಾಡಿ ಬ್ರಹ್ಮಾರ್ಪಣ ಮಾಡಿದಲ್ಲ್ಯಂಗೆ ಪೂಜೆ ಮಾಡಿ ಮುಗಿಸಿದ ಹಾಂಗೆ ಆತು. ಮತ್ತೆ ಕಥಾಶ್ರವಣ.

ಕಥಾಶ್ರವಣ ಹೇಳಿರೆ ನವಗೆಲ್ಲಾ ಗೊಂತಿಪ್ಪದ್ದೇ. ಎಲ್ಲಾ ಕಡೆ ಎಸ್.ಎನ್.ಪಿ.ಲಿಯೂ ಅದೇ ಕತೆ ಓದುವದು ಭಟ್ಟಮಾವ°!
ಕಥಾಶ್ರವಣಕ್ಕೆ ಆತು ಹೇಳಿ ದೊಡ್ಡಕ್ಕೆ ಚಾವಡಿಗೆ ಕೆಳ್ತಾಂಗೆ ಹೇಳ್ತವು. ಬಂದೋರೆಲ್ಲಾ ಒಂದರಿ ಸರ್ತಕೂದು ಕಥಾಶ್ರವಣಕ್ಕೆ ಸಿದ್ಧರಾವ್ತವು.
ನೊಣೆ ಹೇಳಿಗೊಂಡು ನೆಣೆ ತಿರ್ಪಿಗೊಂಡಿಪ್ಪ ಅಕ್ಕಂದ್ರೂ ಒಂದರಿ ಚಕ್ಕನಾಟಿ ಕೂರ್ತವು.

ಭಟ್ಟಮಾವ° ಸುರುಮಾಡ್ತವು – “ಏಕದಾ ನೈಮಿಷಾರಣ್ಯೇ ಮುನಯಃ ಶೌನಕಾದಯಃ.…….
ಮತ್ತೆ? ಮುಂದೆ.. ?? ಭಟ್ಟಮಾವನೂ ನಿಲ್ಲುಸದ್ದೆ ಮುಂದುವರುಸತ್ತವು. ನೆಣೆ ಮಾಡ್ತವ್ವು ನೆಣೆ ಮಾಡ್ತರ ಮುಗಿಶಿಕ್ಕಿ ಹಣ್ಣುಹಂಪಲು ಕೊರವಲೆ ಸುರುಮಾಡುತ್ತವು.. ಚಾವಡಿಲಿ ಕತೆಯೂ ಮುಂದುವರಿತ್ತು. ಮತ್ತೆ ಮಂಗಳಾರತಿಗೆ ಆತು ಹೇಳಿಯಪ್ಪಗ ಓಹ್ ಕಥಾಶ್ರವಣ ಮುಗುತ್ತೋ ಹೇಳಿ ಕೇಳಿಯೂ ಆವ್ತು.
ಬೇಗ ಮುಗುದರೆ “ಭಟ್ಟಮಾವ° ಐದು ಅಧ್ಯಾಯ ಓದಿದ್ದವಿಲ್ಲೆ”! (ಆರಿಂಗೆ ಓದೆಕ್ಕಾದ್ದೋ!!) ಹೇಳುಗು.

ನಿಜವಾಗಿ ಸತ್ಯನಾರಾಯಣ ಕಥೆ ಹೇಳಿರೆ ಐದು ಅಧ್ಯಾಯಲ್ಲಿ ಮುಗಿತ್ತೋ?!. ಬೇರೆ ದೃಷ್ಟಾಂತಂಗೊ ಇಲ್ಯೋ!!. ಸತ್ಯನಾರಾಯಣ ಪೂಜೆ ಮಾಡಿಕ್ಕಿ ಮತ್ತೆ ಬೇಗ ಉಂಡಿಕ್ಕಿ ಮನುಗಿ ಒರಗುವದೋ, ಚಾಂಬುವದೋ ಅಲ್ಲಾ.
‘..ಉಪವಿಶ್ಯ ಕಥಾಂ ಶ್ರುತ್ವಾ ಜನೈಃ ಸಹ |
ತತಶ್ಚ ಬಂಧುಭಿಃ ಸಾರ್ಧಂ ವಿಪ್ರಾಂಶ್ಚ ಪ್ರತಿಭೋಜಯೇತ್ |
ಸಪಾದಂ ಭಕ್ಷೆಯೇದ್ಭಕ್ತ್ಯಾ  ನೃತ್ಯ ಗೀತಾದಿಕಂ ಚರೇತ್’’|
ಹೇಳಿ ಹೇಳಿದ್ದು. ಬಂದವೆಲ್ಲಾ ಸೇರಿಗೊಂಡು ಶ್ರೀ ಸತ್ಯನಾರಾಯಣ ದೇವರ ಮಹಿಮೆಯ ಸಾರುವ ಕತೆಗಳ ಕೇಳಿ, ಬಂಧುಜನರೊಂದಿಗೆ ಪ್ರಸಾದ, ಭೋಜನವ ಸ್ವೀಕರಿಸಿ, ಸ್ವಾಮಿಯ ಮಹಿಮಾ ವಿಶೇಷದ ಕಥೆ ಕೇಳಿ, ಗೀತೆ, ನೃತ್ಯ, ಗಾಯನ, ಆಟ , ಕೂಟ, ನಾಟಕ ಕೇಳಿ ನೋಡಿ / ಮಾಡಿ ಧನ್ಯರಾಯೇಕು ಹೇಳಿ ಹೇಳಿದ್ದು.

ಕಾಲಾಯ ತಸ್ಮೈ ನಮಃ ಹೇಳಿ ಇದ್ದಾಂಗೆ ಈ ಪುರುಸೊತ್ತಿಲ್ಲದ ಕಾಲಗಟ್ಟಲ್ಲಿ, ಕೆಲವೊಂದು ದೃಷ್ಟಾಂತಂಗಳ ಒಳಗೊಂಡ, ಸೂಕ್ಷ್ಮವಾಗಿ, – ಐದು ಅಧ್ಯಾಯದ ಕತೆ ಹೇಳಿ ಮಾಡಿಗೊಂಡದು.
ಎಡಿಯದ್ರೆ ಒಂದು ಅಧ್ಯಾಯ ಓದಿರೂ ಸಾಕು. ಐದು ಅಧ್ಯಾಯ ಓದಿಯೇ ಆಯೇಕು ಹೇಳಿ ಶಾಸ್ತ್ರ ಏನೂ ಇಲ್ಲೆ. ಮನಸ್ಸಿಲ್ಲಿ ಸತ್ಯನಾರಾಯಣ ಮಹಾಮಹಿಮ ಹೇಳಿ ನೆನಪಿಸಿಗೊಂಡರೂ ಸಾಕು.
ಬರೇ ಭಟ್ಟಮಾವ° ಐದು ಅಧ್ಯಾಯ ಓದುವುದು ಶ್ಲೋಕ ರೂಪಲ್ಲಿ ಇಪ್ಪದರ, ಪೂಜೆ ಮಾಡ್ತವ° ವಿಧಿ ಇಲ್ಲದ್ದೆ ಚಕ್ಕನಾಟಿ ಮಡುಸಿದ ಕಾಲುಮೊಳಪ್ಪು ನೆಗ್ಗಿ ಅದಕ್ಕೆ ಎರಡು ಕೈಸುಂದಿ ವಿಶೇಷಾಸನಲ್ಲಿ ಕೂದು ಭಟ್ಟಮಾವ° ಓದಿ ಮುಗುಶಲೆ  ಕಾದುಕೂಬದು, – ಈ ರೀತಿ ಮಾಡುವದಿರಿಂದ ಏನೂ ಗುಣ ಇಲ್ಲೆ.

ಶ್ಲೋಕ ಓದಲೆ ಚಂದ. ಕೇಳ್ಳೆ ಚಂದ. ಶ್ಲೋಕ ಓದುತ್ತಾ ಹೋವ್ತಾಂಗೆ ಅದರ ತಾತ್ಪರ್ಯ ಕೇಳುವವಂಗೆ ಅರ್ಥ ಆಗಿಯೊಂಡು ಹೋಯೇಕು.
ಅಂದರಷ್ಟೇ ಓದಿದ್ದು ಸಾರ್ಥಕ, ಕೇಳಿದ್ದು ಸಾರ್ಥಕ. ಅದಕ್ಕಾವ್ತು ಕೆಲವು ಕಡೇಲಿ ಹರಟೆ ಜೋರಿಪ್ಪಲ್ಲಿ ಒಂದು ಅಧ್ಯಾಯಲ್ಲೇ ಮುಗಿವದು. ಭಟ್ಟಮಾವಂಗೆ ದಕ್ಷಿಣೆ ಕೊಡ್ತದು ಸಾಕಾವ್ತಿಲ್ಲೇ ಹೇಳಿ ಏನೂ ಅಲ್ಲ ಒಂದು ಅಧ್ಯಾಯಲ್ಲಿ ಮುಗುಶುವದು. ನವಗೆ ಬೇಕಾರೆ ಭಟ್ಟಮಾವನತ್ರೆ ವಿವರುಸಲೆ ಹೇಳೆಕು.!

ಬಪ್ಪದೇ ಮಂಗಳಾರತಿಗೆ ಅಪ್ಪಗ. ಇದಿನ್ನು ಕತೆ ಹೇಳ್ಳೆ ಸುರುಮಾಡಿ ಉದ್ದ ಎಳದರೆ ಹೇಂಗಪ್ಪ!. ‘ಪಕ್ಕ ಹೋಯಿಕ್ಕಿ ಬತ್ತೆ’ ಹೇಳಿ ಹೇಳಿಕ್ಕಿ ಬಂದವನೂ ಕೊಯಂಙುವದು ಅಲ್ಲದೋ ಮತ್ತೆ! .
ನಿಂಗಳೂ ಇದೆಂತರ ಎಸ್.ಎನ್.ಪಿ ಹೇಳಿ ಗ್ರೇಶಿಯೊಂಡು ಬೇಗ ನೋಡಿಕ್ಕೀತೇ ಹೇಳಿ ಕ್ಲಿಕ್ಕಿಸಿದಿ. ಪೀಠಿಕೆಯೇ ಇಷ್ಟು ಉದ್ದ ಹೋತು. ಇನ್ನು ಕತೆ ಸುರುಮಾಡಿರೆ ನಿಂಗಳ ಕಾರ್ಯವೂ ಕೊಯಂಙುಗು.
ಇವ° ಬರದರೆ ಎಂಟು ಮೊಳ ಇಲ್ಲದ್ರೆ ಎಂತದೂ ಇರ ಹೇಳಿ ಇನ್ನಾಣ ಸರ್ತಿ ನೋಡ್ಳೇ ಹೆರಡೇಯಿ ಇದಾ..!.
ಹಾಂಗಾಗಿ ನಿಂಗಳೂ ಆಸಕ್ತಿ ಇಪ್ಪೋರು ಶ್ರೀ ಸತ್ಯನಾರಾಯಣ ಕತೆ ಕೇಳ್ಳೆ/ಓದಲೆ ತಯಾರಾಗಿ ಬಂದು ಕೂರಿ. ನಿಂಗೊಗೆ ಓದುತ್ತಾಂಗೆ ಬರವಲೆ ನಾವೂ ಪ್ರಯತ್ನ ಪಡುತ್ತು.

ಓಂ ನಮೋ ನಾರಾಯಣಾಯ |
ಗೋವಿಂದಾ.. ಗೋ..ವಿಂದ ||

ಬಪ್ಪ ವಾರ ಕಾಂಬೋ ಅಲ್ಲದಾ ಏ°

ಎಸ್.ಎನ್.ಪಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಇದಾ,ತಡವಾದರೂ ಬ೦ದು ಸೇರಿಗೊ೦ಡೆ. ಶುರು ಮಾಡಲಕ್ಕು ಭಾವ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಹೋ.. ಎಲ್ಲೋರು ಬಂದಿರೋ. ಎಲ್ಲೋರಿಂಗೂ ಧನ್ಯವಾದ. ತುಂಬಾ ಸಂತೋಷ ಆತಿದ. ಇನ್ನು ಕಾವಲೆ ಇಲ್ಲೆ , ಸುರುಮಾಡಿಕ್ಕುದೇ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಬೋಸ ಬಾವಚುಬ್ಬಣ್ಣಅಕ್ಷರ°ರಾಜಣ್ಣಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿದೊಡ್ಡಭಾವಅಕ್ಷರದಣ್ಣವಿದ್ವಾನಣ್ಣಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿದೀಪಿಕಾಕಜೆವಸಂತ°ಡಾಮಹೇಶಣ್ಣಪೆರ್ಲದಣ್ಣವಿನಯ ಶಂಕರ, ಚೆಕ್ಕೆಮನೆನೆಗೆಗಾರ°ಗಣೇಶ ಮಾವ°ಅಡ್ಕತ್ತಿಮಾರುಮಾವ°ಡೈಮಂಡು ಭಾವಕಳಾಯಿ ಗೀತತ್ತೆವಸಂತರಾಜ್ ಹಳೆಮನೆಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ