Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 10 – 20

ಬರದೋರು :   ಚೆನ್ನೈ ಬಾವ°    on   13/12/2012    7 ಒಪ್ಪಂಗೊ

ಚೆನ್ನೈ ಬಾವ°

ವ್ಯಾಸರಿಂದ ದಿವ್ಯದೃಷ್ಟಿ ಪಡದು, ಯುದ್ಧರಂಗಲ್ಲಿ ನಡಕ್ಕೊಂಡಿಪ್ಪ ಸನ್ನಿವೇಶವ ಹುಟ್ಟುಕುರುಡನಾದ ರಾಜ° ದೃತರಾಷ್ಟ್ರಂಗೆ ಸಂಜಯ° ಕೊಡುತ್ತಾ ಇದ್ದ° ಹೇಳಿ ನಾವು ಓದುತ್ತಾ ಇದ್ದು. ಮಹಾಯೋಗೇಶ್ವರನಾದ ಆ ಭಗವಂತ° ಅರ್ಜುನಂಗೆ ದಿವ್ಯವಾದ ಕಣ್ಣುಗಳ ಅನುಗ್ರಹಿಸಿ ತನ್ನ ವಿಶ್ವರೂಪವ ತೋರಿಸಿದ° ಹೇಳಿ ಸಂಜಯ° ವರದಿ ಮಾಡಿಗೊಂಡಿದ್ದ°. ಆ ಸರ್ವತೋಮುಖ° ಭಗವಂತನ ಒಳ ಅರ್ಜುನ° ಎಂತ ನೋಡಿದ° ಹೇಳ್ವ ವಿವರ ಇಲ್ಲಿ ಮುಂದಂಗೆ –

ಶ್ರೀಮದ್ಭಗವದ್ಗೀತಾ – ಏಕಾದಶೋsಧ್ಯಾಯಃ – ವಿಶ್ವರೂಪದರ್ಶನಯೋಗಃ – ಶ್ಲೋಕಾಃ 10 – 20

ಶ್ಲೋಕ

ಅನೇಕವಕ್ತ್ರನಯನಮ್ ಅನೇಕಾದ್ಭುತದರ್ಶನಮ್ ।
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥೧೦॥

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಮ್ ಅನಂತಂ ವಿಶ್ವತೋಮುಖಮ್ ॥೧೧॥

ಪದವಿಭಾಗ

ಅನೇಕ-ವಕ್ತ್ರ-ನಯನಮ್ ಅನೇಕ-ಅದ್ಭುತ-ದರ್ಶನಮ್ । ಅನೇಕ-ದಿವ್ಯ-ಆಭರಣಮ್ ದಿವ್ಯ-ಅನೇಕ-ಉದ್ಯತ-ಆಯುಧಮ್ ॥

ದಿವ್ಯ-ಮಾಲ್ಯ-ಅಂಬರ-ಧರಮ್  ದಿವ್ಯ-ಗಂಧ-ಅನುಲೇಪನಮ್ । ಸರ್ವ-ಆಶ್ಚರ್ಯಮಯಮ್ ದೇವಮ್ ಅನಂತಮ್ ವಿಶ್ವತೋಮುಖಮ್

ಅನ್ವಯ

ಅನೇಕ-ವಕ್ತ್ರ-ನಯನಮ್, ಅನೇಕ-ಅದ್ಭುತ-ದರ್ಶನಮ್, ಅನೇಕ-ದಿವ್ಯ-ಆಭರಣಮ್, ದಿವ್ಯ-ಅನೇಕ-ಉದ್ಯತ-ಆಯುಧಮ್ ,

ದಿವ್ಯ-ಮಾಲ್ಯ-ಅಂಬರ-ಧರಮ್, ದಿವ್ಯ-ಗಂಧ-ಅನುಲೇಪನಮ್, ಸರ್ವ-ಆಶ್ಚರ್ಯಮಯಮ್, ಅನಂತಮ್, ವಿಶ್ವತೋಮುಖಮ್, ದೇವಮ್  (ಅರ್ಜುನಃ ಅಪಶ್ಯತ್) ।

ಪ್ರತಿಪದಾರ್ಥ

ಅನೇಕ-ವಕ್ತ್ರ-ನಯನಮ್ – ಅನೇಕ ಮುಖಂಗೊ, ಕಣ್ಣುಗೊ ಇಪ್ಪವನ, ಅನೇಕ-ಅದ್ಭುತ-ದರ್ಶನಮ್ – ಅನೇಕ ಅದ್ಭುತಕರವಾದ ನೋಟಂಗೊ ಇಪ್ಪ, ಅನೇಕ-ದಿವ್ಯ-ಆಭರಣಮ್ – ಅನೇಕ ದಿವ್ಯವಾದ ಒಡವೆಗಳಿಪ್ಪ, ದಿವ್ಯ-ಅನೇಕ-ಉದ್ಯತ-ಆಯುಧಮ್ – ಅನೇಕ ದಿವ್ಯಾಯುಧಂಗಳ ಮೇಲೆತ್ತಿಪ್ಪ,

ದಿವ್ಯ-ಮಾಲ್ಯ-ಅಂಬರ-ಧರಮ್ – ದಿವ್ಯವಾದ ಹೂಮಾಲೆಯ ದಂಡೆಗಳಿಪ್ಪ ವಸ್ತ್ರಂಗಳ ಧರಿಸಿದವನ, ದಿವ್ಯ-ಗಂಧ-ಅನುಲೇಪನಮ್ – ದಿವ್ಯವಾದ ಸುಗಂಧವ ಪೂಸಿಗೊಂಡಿಪ್ಪವನ, ಸರ್ವ-ಆಶ್ಚರ್ಯಮಯಮ್ – ಎಲ್ಲ ವಿಧಲ್ಲಿಯೂ ಆಶ್ಚರ್ಯಪೂರ್ಣನಾದವನ, ಅನಂತಮ್ – ಅಪರಿಮಿತನ,  ವಿಶ್ವತೋಮುಖಮ್ (ವಿಶ್ವತಃ ಮುಖಮ್) – ವಿಶ್ವವ್ಯಾಪ್ತನ, ದೇವಮ್ – ದೇವ ದೇವೋತ್ತಮ ಪರಮ ಪುರುಷನ (ಅರ್ಜುನಃ ಅಪಷ್ಯತ್ – ಅರ್ಜುನ ನೋಡಿದ°).

ಅನ್ವಯಾರ್ಥ

ಅಸಂಖ್ಯಾತ ಮೋರೆಗಳಿಪ್ಪ, ಅಸಂಖ್ಯಾತ ಕಣ್ಣುಗಳಿಪ್ಪ, ಅಸಂಖ್ಯಾತ ಅದ್ಭುತ ನೋಟಂಗಳಿಪ್ಪ(ದರ್ಶನ), ಅನೇಕ ದಿವ್ಯಾಭರಣಗಂಗಳ ಧರಿಸಿದವನಾದ, ಅನೇಕ ದಿವ್ಯಾಯುಧಂಗಳ ಮೇಲೆತ್ತಿ ಹಿಡುದು ನಿಂದುಗೊಂಡಿಪ್ಪ,

ದಿವ್ಯ ಮಾಲೆಗಳ ಮತ್ತು ವಸ್ತ್ರಂಗಳ ಧರಿಸಿಗೊಂಡಿಪ್ಪವನಾದ, ದಿವ್ಯಗಂಧಾನುಲೇಪಿತನಾದ, ಎಲ್ಲ ವಿಧಲ್ಲಿಯೂ ಆಶ್ಚರ್ಯಪೂರ್ಣನಾದ, ಅಪರಿಮಿತನಾದ, ವಿಶ್ವವ್ಯಾಪ್ತನಾಗಿಪ್ಪ ಆ ಕೃಷ್ಣನ ಅರ್ಜುನ° ನೋಡಿದ°.

ತಾತ್ಪರ್ಯ / ವಿವರಣೆ

ಇಲ್ಲಿ ಅನೇಕ ಹೇಳ್ವ ಪದ ಮತ್ತೆ ಮತ್ತೆ ಬಳಸಲ್ಪಟ್ಟಿದು. ಹೇಳಿರೆ ಅರ್ಜುನ ಆ ಭಗವಂತನಲ್ಲಿ ಕಾಣುತ್ತಿಪ್ಪ ಮೋರೆ, ಬಾಯಿ, ಕೈ-ಕಾಲು  ಎಲ್ಲವೂ ಅನೇಕವೆ. ಭಗವಂತನ ಅಭಿವ್ಯಕ್ತಿಗಳ ಸಂಖ್ಯೆಗೆ ಮಿತಿಯೇ ಇಲ್ಲೆ ಹೇಳ್ವದು ತೋರ್ಸುತ್ತು. ಯಾವನೇ ಒಬ್ಬ ಸಾಮಾನ್ಯನ ಕಲ್ಪನಾಶಕ್ತಿಗೆ ಸಿಕ್ಕದ್ದ ಆ ಮಹತ್ ಶಕ್ತಿಯ, ಆಶ್ಚರ್ಯಪೂರ್ಣ ಅವೆಲ್ಲವ ಒಂದೇ ದಿಕ್ಕೆ  ಅರ್ಜುನಂಗೆ ನೋಡ್ಳೆ ಭಗವಂತನ ಅನುಗ್ರಹಂದ ಎಡಿಗಾತು. ಆ ಅರ್ಜುನ° ಭಗವಂತನಲ್ಲಿ ಕಂಡದ್ದೆಂತರ ? – ಎಣಿಕೆ ಇಲ್ಲದ್ದ ಬಾಯಿ, ಕಣ್ಣುಗಳ ರೂಪ, ಅಚ್ಚರಿಯ ನೋಟಂಗಳ ರೂಪ, ಎಣಿಕೆ ಇಲ್ಲದ್ದ ಚೆಲುವಾಭರಣಂಗಳ ರೂಪ, ಎಣಿಕೆ ಇಲ್ಲದ್ದ ಹೊಳೆವ ಆಯುಧಂಗಳ ಮೇಲಂಗೆ ಎತ್ತಿ ಹಿಡುದ ರೂಪ, ಹೊಳವ ಹೂದಂಡೆಗಳುಟ್ಟ ಉಡಿಗೆಗಳ ತೊಟ್ಟ ರೂಪ, ಹೊಳೆವ ಸುಗಂಧ ಲೇಪಿತ ರೂಪ. ಎಲ್ಲ ಅಚ್ಚರಿಗಳ ಸೆಲೆ. ಎಲ್ಲೆಡೆ ತುಂಬಿ ಕಂಗೊಳಿಪ ರೂಪ.

ಭಗವಂತ° ಕೃಷ್ಣ ಅವತಾರಿಯಾಗಿ ಮನುಷ್ಯ ಆಕಾರಲ್ಲಿ ಕಂಡುಗೊಂಡಿತ್ತಿದ್ದ. ಆದರೆ ಈ ಕ್ಷಣಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣನ ಮುಖ. ಅಲ್ಲಿ ಸೇರಿಪ್ಪ ಪ್ರತಿಯೊಂದು ಜೀವಿಯ ಒಳವೂ ಹೆರವೂ ಎಲ್ಲೆಲ್ಲಿಯೂ ಕೃಷ್ಣನ ಮೋರೆ ಕಾಣುತ್ತು. ಅರ್ಜುನಂಗೆ ಕಂಡದೆಂತರ, ಅವೆಲ್ಲವೂ ಸಂಜಯಂಗೂ ಕಾಣುತ್ತು. ಹಾಂಗಾಗಿ ಯಥಾವತ್ತಾಗಿ ದೃತರಾಷ್ಟ್ರಂಗೆ ವರದಿ ಮಾಡ್ಳಾವ್ತು. ಸಂಜಯಂಗೆ ಅಲ್ಲಿ ಆನೆ ಕುದುರೆ ಸೈನಕರು ಕಂಡಿದಿಲ್ಲೆ. ಬದಲಿಂಗೆ ಎಲ್ಲೆಲ್ಲಿಯೂ, ಪ್ರತಿಯೊಂದರಲ್ಲಿಯೂ ಕೃಷ್ಣನೇ ತುಂಬಿಗೊಂಡಿಪ್ಪ ಆ ಭಗವಂತ° ಕಾಣಿಸಿಗೊಂಡ°. ಭಗವಂತನ ಈ ರೂಪವ ವರ್ಣುಸಲೆ ಸಾಧ್ಯ ಇಲ್ಲೆ. ಕೇವಲ ನೋಡಿಯೇ ಅನುಭವುಸೆಕ್ಕಷ್ಟೆ. ಅದೊಂದು ಅಚ್ಚರಿ. ಸರ್ವಾಭರಣಂಗಳಿಂದ ಶೋಭಿಪ, ದಿವ್ಯಾಯುಧಂಗಳ ಧರಿಸಿಪ್ಪ, ಹೂವಿನ ಮಾಲೆಗಳ ಇರಿಸಿಪ್ಪ ಉಡುಪಿನ ತೊಟ್ಟ, ಸುಗಂಧ ಬಳುದ, ಸರ್ವಾಶ್ಚರ್ಯ ಸ್ವರೂಪ°, ವಿಸ್ಮಯ ಮೂರ್ತಿ ಆ ಭಗವಂತನ ಅಲ್ಲಿ ಕಂಡ°. 

ಶ್ಲೋಕ

ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸಸ್ತಸ್ತ್ಯ ಮಹಾತ್ಮನಃ ॥೧೨॥

ಪದವಿಭಾಗ

ದಿವಿ ಸೂರ್ಯ-ಸಹಸ್ರಸ್ಯ ಭವೇತ್ ಯುಗಪತ್ ಉತ್ಥಿತಾ । ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸಃ ತಸ್ಯ ಮಹಾತ್ಮನಃ

ಅನ್ವಯ

ಯದಿ ದಿವಿ ಸೂರ್ಯ-ಸಹಸ್ರಸ್ಯ ಭಾಃ ಯುಗಪತ್ ಉತ್ಥಿತಾ ಭವೇತ್, (ತರ್ಹಿ) ಸಾ ತಸ್ಯ ಮಹಾತ್ಮನಃ ಭಾಸಃ ಸದೃಶೀ ಸ್ಯಾತ್ ।

ಪ್ರತಿಪದಾರ್ಥ

ಯದಿ – ಒಂದುವೇಳೆ, ದಿವಿ – ಆಕಾಶಲ್ಲಿ, ಸೂರ್ಯ-ಸಹಸ್ರಸ್ಯ – ಸಹಸ್ರಾರು ಸೂರ್ಯರ, ಭಾಃ – ಪ್ರಕಾಶ, ಯುಗಪತ್ – ಏಕಕಾಲಲ್ಲಿ, ಭವೇತ್ – ಆದರೆ, ತರ್ಹಿ – ಆ ರೀತಿಲಿ (ಅಂಬಗ, ಹಾಂಗಾದರೆ), ಸಾ – ಅದು, ತಸ್ಯ – ಅದರ, ಮಹಾತ್ಮನಃ  – ಪರಮ ಪ್ರಭುವಿನ, ಭಾಸಃ ಸದೃಶೀ – ಪ್ರಕಾಶದಂತೆ (ಭಾಸಃ – ಪ್ರಕಾಶ/ಜ್ಯೋತಿ),  ಸ್ಯಾತ್ – ಇದ್ದಿಕ್ಕು.

ಅನ್ವಯಾರ್ಥ

ಸಹಸ್ರಾರು ಸೂರ್ಯರು ಒಟ್ಟಿಂಗೆ (ಏಕಕಾಲಲ್ಲಿ) ಆಕಾಶಲ್ಲಿ ಉದಿಸಿರೆ ಅವರ ಪ್ರಭೆ ಹೇಂಗಿಕ್ಕೋ ಹಾಂಗೆ ಭಗವಂತನ ತೇಜಸ್ಸು ಇದ್ದತ್ತು.

ತಾತ್ಪರ್ಯ / ವಿವರಣೆ

ಅರ್ಜುನ° ಕಂಡದು ವರ್ಣನೆಗೆ ಸಿಲುಕದ್ದು. ಅಂದರೂ ಸಂಜಯ ಒಂದು ಮಾನಸಿಕ ಹೋಲಿಕೆಯ ಚಿತ್ರಣವ ದೃತರಾಷ್ಟ್ರಂಗೆ ಹೇಳುತ್ತ°ಇಲ್ಲಿ. “ಸಾವಿರಾರು ಸೂರ್ಯರು ಆಕಾಶಲ್ಲಿ ಏಕಕಾಲಲ್ಲಿ ಉದಿಸಿರೆ ಎಷ್ಟು ಪ್ರಕಾಶಮಾನವಾಗಿಕ್ಕೋ ಅಂತಹ ಪ್ರಕಾಶಮಾನನಾಗಿ ಭಗವಂತ° ಕಾಣಿಸಿಗೊಂಡ°.

ಶ್ಲೋಕ

ತತ್ರೈಕಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ ।
ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ ॥೧೩॥

ಪದವಿಭಾಗ

ತತ್ರ ಏಕಸ್ಥಮ್ ಜಗತ್ ಕೃತ್ಸ್ನಮ್ ಪ್ರವಿಭಕ್ತಮ್ ಅನೇಕಧಾ । ಅಪಶ್ಯತ್ ದೇವ-ದೇವಸ್ಯ ಶರೀರೇ ಪಾಂಡವಃ ತದಾ ॥

ಅನ್ವಯ

ಪಾಂಡವಃ ತದಾ ಅನೇಕಧಾ ಪ್ರವಿಭಕ್ತಂ ಕೃತ್ಸ್ನಂ ಜಗತ್, ತತ್ರ ದೇವ-ದೇವಸ್ಯ ಶರೀರೇ ಏಕಸ್ಥಮ್ ಅಪಶ್ಯತ್ ।

ಪದವಿಭಾಗ

ಪಾಂಡವಃ – ಅರ್ಜುನ°, ತದಾ – ಅಂಬಗ, ಅನೇಕಧಾ – ಅನೇಕವಾಗಿ, ಪ್ರವಿಭಕ್ತಮ್ – ವಿಭಜಿತವಾಗಿಪ್ಪ, ಕೃತ್ಸ್ನಮ್ ಜಗತ್ – ಸಂಪೂರ್ಣ ವಿಶ್ವವ, ತತ್ರ – ಅಲ್ಲಿ, ದೇವ-ದೇವಸ್ಯ – ದೇವೋತ್ತಮ ಪರಮ ಪುರುಷನ, ಶರೀರೇ – ಶರೀರಲ್ಲಿ (ವಿಶ್ವರೂಪಲ್ಲಿ), ಏಕಸ್ಥಮ್ – ಒಂದೇ ದಿಕ್ಕೆ, ಅಪಶ್ಯತ್ – ನೋಡಿದ°.

ಅನ್ವಯಾರ್ಥ

ಅಂಬಗ  ಖಂಡ ಖಂಡವಾಗಿ ವಿಭಜಿತವಾಗಿಪ್ಪ ಇಡೀ ವಿಶ್ವವ ಭಗವಂತನ ವಿಶ್ವರೂಪಲ್ಲಿ (ಭಗವಂತನ ಮೈಲಿ) ಅಲ್ಲಿ ಒಂದೇ ದಿಕ್ಕೆ ಇಪ್ಪದರ ಅರ್ಜುನ ನೋಡಿದ°.

ತಾತ್ಪರ್ಯ / ವಿವರಣೆ

ಈ ಶ್ಲೋಕಲ್ಲಿ ‘ತತ್ರ’ (ಅಲ್ಲಿ) ಹೇಳ್ತ ಪದ ಬಹುಮುಖ್ಯವಾದ್ದು. ಅರ್ಜುನ° ವಿಶ್ವರೂಪವ ನೋಡುವಾಗ ಅರ್ಜುನನೂ ಕೃಷ್ಣನೂ ಅಲ್ಲಿ ಒಂದೇ ರಥಲ್ಲಿ (ಒಂದೇ ದಿಕ್ಕೆ) ಇತ್ತಿದ್ದವು ಹೇಳ್ತದು ಸೂಚಿಸುತ್ತು. ಭಗವಂತ ಅರ್ಜುನಂಗೆ ರಣರಂಗಲ್ಲಿ ತೋರಿದ ವಿಶ್ವರೂಪ ತುಂಬಾ ವಿಶಿಷ್ಟವಾದ್ದು. ಅರ್ಜುನಂಗೆ ಭಗವಂತನ ವಿಶ್ವರೂಪ ದರ್ಶನ ಅಪ್ಪಗ, ಪ್ರಪಂಚಲ್ಲಿ ಭಗವಂತನ ವಿಶ್ವರೂಪ ದರ್ಶನ ಅರ್ಹತೆ ಇಪ್ಪ ಎಲ್ಲರಿಂಗೂ ಈ ದರ್ಶನ ಆಗಿತ್ತು. ಅರ್ಜುನಂಗೆ ಅಲ್ಲಿ ಕಂಡದು ಕೇವಲ ಎಲ್ಲೆಡೆ ತುಂಬಿಪ್ಪ ಭಗವಂತನ ಮಾಂತ್ರ ಅಲ್ಲ, ಅವನೊಳ ತುಂಬಿಪ್ಪ ಇಡೀ ಪ್ರಪಂಚ. ಹೆರಾಣೋರ ಕಣ್ಣಿಂಗೆ ಈ ಪ್ರಪಂಚ ಖಂಡ ತುಂಡವಾಗಿ ಅನೇಕ ಭಾಗವಾಗಿ ಕಂಡರೂ ಅಲ್ಲಿ ಅರ್ಜುನಂಗೆ ಇಡೀ ಪ್ರಪಂಚ ಭಗವಂತನ ಶರೀರಲ್ಲಿ ಕಂಡತ್ತು. ಇಲ್ಲಿ ಭಗವಂತನೊಳ ವಿಶ್ವವ ಕಾಂಬದು ಹೇಳಿರೆ ಧ್ಯಾನಲ್ಲಿ ಪರಮಾತ್ಮನ, ಅವನಿಂದ ಸೃಷ್ಟವಾದ ಸೃಷ್ಟಿಯ ಕಂಡಾಂಗೆ. ಸತ್ವಂದ ಸ್ವಚ್ಛವಾದ ಮನಸ್ಸಿಪ್ಪ ಅರ್ಜುನ° (ಪಾಂಡವಃ), ತನ್ನ ದಿವ್ಯ ದೃಷ್ಟಿಂದ ಭಗವಂತನಲ್ಲಿ ತುಂಬಿಪ್ಪ ಇಡೀ ವಿಶ್ವವ ಸ್ಪಷ್ಟವಾಗಿ ಕಂಡ°. ಅರ್ಜುನ° ಅಲ್ಲಿ ನೋಡಿದ° ಹೇಳಿರೆ ರಥಲ್ಲಿ ಕೂದಲ್ಲಿಯೇ ತನ್ನತ್ರವೇ ಇಪ್ಪ ಭಗವಂತನಲ್ಲಿ ಭಗವಂತನಿಂದ ಸೃಷ್ಟಿಯಾದ ಇಡೀ ಜಗತ್ತನ್ನೇ ನೋಡಿದ°. 

ಶ್ಲೋಕ

ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥೧೪॥

ಪದವಿಭಾಗ

ತತಃ ಸಃ ವಿಸ್ಮಯ-ಆವಿಷ್ಟಃ ಹೃಷ್ಟ-ರೋಮಾ ಧನಂಜಯಃ । ಪ್ರಣಮ್ಯ ಶಿರಸಾ ದೇವಮ್ ಕೃತ-ಅಂಜಲಿಃ ಅಭಾಷತ ॥

ಅನ್ವಯ

ತತಃ ವಿಸ್ಮಯ-ಆವಿಷ್ಟಃ ಹೃಷ್ಟ-ರೋಮಾ ಸಃ ಧನಂಜಯಃ, ದೇವಂ ಶಿರಸಾ ಪ್ರಣಮ್ಯ, ಕೃತ-ಅಂಜಲಿಃ ಅಭಾಷತ ॥

ಪ್ರತಿಪದಾರ್ಥ

ತತಃ – ಮತ್ತೆ, ಸಃ – ಅವ°, ವಿಸ್ಮಯ-ಆವಿಷ್ಟಃ – ಆಶ್ಚರ್ಯಂದ ದಿಗ್ಬ್ರಾಂತನಾಗಿ, ಹೃಷ್ಟ-ರೋಮಾ ಧನಂಜಯಃ – ಭಾವೋದ್ರೇಕಂದ ರೋಮಾಂಚನಗೊಂಡ ಧನಂಜಯನು, ದೇವಮ್ ಶಿರಸಾ ಪ್ರಣಮ್ಯ – ಭಗವಂತನ ಶಿರಬಾಗಿ ನಮಿಸಿ, ಕೃತ-ಅಂಜಲಿಃ – ಕೈ ಮುಗುದು, ಅಭಾಷತ – ಹೇಳಿದ°.

ಅನ್ವಯಾರ್ಥ

ಮತ್ತೆ, ಆಶ್ಚರ್ಯಚಕಿತನಾಗಿ / ದಿಗ್ಭ್ರಾಂತನಾಗಿ, ರೋಮಾಂಚನಗೊಂಡ ಆ ಅರ್ಜುನ ದೇವರಿಂಗೆ (ಭಗವಂತಂಗೆ) ಶಿರಬಾಗಿ ಕೈಮುಗುದು ಹೇಳುತ್ತ°.

ತಾತ್ಪರ್ಯ / ವಿವರಣೆ

ಭಗವಂತನ ದೈವೀಶಕ್ತಿಯ ಕಂಡು ಅರ್ಜುನ ಆಶ್ಚರ್ಯಚಕಿತನಾಗಿ ವಿಸ್ಮಯವ ಕಂಡು ದಿಗ್ಭ್ರಾಂತನಾಗಿ, ರೋಮಾಂಚನಗೊಂಡು ಭಾವೋದ್ವೇಗಂದ ಕಂಗಾಲಾವ್ತ°. ಭಗವಂತನಲ್ಲಿ ಅವನ ಸಂಬಂಧ ತುಸು ಬದಲಾವಣೆ ಆವ್ತು. ಇಲ್ಲಿವರೇಗೆ ಅರ್ಜುನಂಗೂ ಭಗವಂತಂಗೂ ಸಂಬಂಧಕ್ಕೆ  ಸ್ನೇಹ ಆಧಾರವಾಗಿತ್ತು. ಭಗವಂತನ ವಿಸ್ಮಯಕಾರೀ ರೂಪವ ನೋಡಿ ಅರ್ಜುನ° ಬಹುಗೌರವಂದ ಶಿರಬಾಗಿ ಕೈಮುಗುದು ಮಾತಾಡ್ಳೆ ಹೆರಡುತ್ತ°.  ಈ ವರೇಂಗೆ ಅರ್ಜುನಂಗೆ ಸ್ನೇಹ ಸಲುಗೆ ಇದ್ದತ್ತು. ಭಗವಂತನ ರೂಪವ ನೋಡಿಯಪ್ಪಗ ಅವನ ಬೆರಗಿನ ಬಾಂಧವ್ಯ ಸ್ಪೂರ್ತಿಯ ಕೊಟ್ಟತ್ತು. ಅರ್ಜುನ° ಸಮಾಧಾನ, ಶಾಂತ, ನಿರುದ್ವಿಗ್ನ ಸ್ವಭಾವದವ°. ಅಂದರೂ ಅವನ ಅವನ ಬೆರಗಿಲ್ಲಿ ಅವಂಗೆ ಹರ್ಷೋನ್ಮಾದವಾತು. ಅವಂಗೆ ರೋಮಾಂಚನ ಅನುಭವ. ಆದರೆ ಇದು ಹೆದರಿಕೆ ಆದ್ದು ಅಲ್ಲ. ಈ ವರೇಂಗೆ ಬರೇ ಮಾತುಗಳಲ್ಲಿ ಭಗವಂತನ ಬಗ್ಗೆ ತಿಳ್ಕೊಂಡ ಅರ್ಜುನ ತನ್ನ ಕಣ್ಣಾರೆ ಭಗವಂತನ ಅದ್ಭುತ ವಿಸ್ಮಯವ ಕಂಡು ಅರ್ಜುನಂಗೆ ಭಕ್ತಿ ಭಾವ ಉಕ್ಕಿತ್ತು. ತನ್ನೊಡನೆ ಇಪ್ಪ° ಈ ಭಗವಂತ ಹೀಂಗೂ ಒಂದು ವಿಚಿತ್ರವೋ ಹೇದು ಕಣ್ಣಾರೆ ಕಂಡಪ್ಪಗ ಹೇಳ್ಳೆಡಿಗಾಗದ್ದ ಎಲ್ಲ ಭಾವ ಒಂದರಿಯೇ ಎದ್ದು ಬಂತು ಅರ್ಜುನಂಗೆ. ಭಗವಂತನ ಅದ್ಭುತ ರೂಪ ಅರ್ಜುನನಲ್ಲಿ ವಿಶೇಷ ಪ್ರಭಾವವ ಬೀರಿತ್ತು. ಅವನ ಸ್ನೇಹ ಬೆರಗಿಂದ ದುರ್ಬಲವಾತು. ಭಗವಂತನ ಅದ್ಭುತ ದರ್ಶನ ಸಂಪತ್ತಿನ (ಧನ) ಪಡದ ಅವ° (ಧನಂಜಯಃ) ಭಕ್ತಿಪೂರ್ವಕವಾಗಿ ಅವನ ತಕ್ಷಣದ ಪ್ರತಿಕ್ರಿಯೆ ಶಿರಬಾಗಿ ಕೈ ಮುಗುದ್ದದು. ಮತ್ತೆ ಅರ್ಜುನ° ಹೇಳುತ್ತ°  –

ಶ್ಲೋಕ

ಅರ್ಜುನ ಉವಾಚ

ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಮ್ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥೧೫॥

ಪದವಿಭಾಗ

ಅರ್ಜುನಃ ಉವಾಚ

ಪಶ್ಯಾಮಿ ದೇವಾನ್ ತವ ದೇವ ದೇಹೇ ಸರ್ವಾನ್ ತಥಾ ಭೂತ-ವಿಶೇಷ-ಸಂಘಾನ್ । ಬ್ರಹ್ಮಾಣಮ್ ಈಶಂ ಕಮಲ-ಆಸನಸ್ಥಮ್ ಋಷೀನ್ ಚ ಸರ್ವಾನ್ ಉರಗಾನ್ ಚ ದಿವ್ಯಾನ್ ॥

ಅನ್ವಯ

ಅರ್ಜುನಃ ಉವಾಚ

ಹೇ ದೇವ!, ಅಹಂ ತವ ದೇಹೇ ಸರ್ವಾನ್ ದೇವಾನ್, ತಥಾ ಭೂತ-ವಿಶೇಷ-ಸಂಘಾನ್, ಕಮಲ-ಆಸನಸ್ಥಂ ಬ್ರಹ್ಮಾಣಮ್,  ಈಶಂ ಚ, ಸರ್ವಾನ್ ಋಷೀನ್, ದಿವ್ಯಾನ್ ಉರಗಾನ್ ಚ ಪಶ್ಯಾಮಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ದೇವ! – ಏ ದೇವೋತ್ತಮ ಪರಮ ಪುರುಷನಾದ ಭಗವಂತನೇ!, ಅಹಮ್ – ಆನು, ತವ ದೇಹೇ – ನಿನ್ನ ದೇಹಲ್ಲಿ (ಶರೀರಲ್ಲಿ) ಸರ್ವಾನ್ ದೇವಾನ್ – ಎಲ್ಲಾ ದೇವತೆಗಳ,  ತಥಾ – ಹಾಂಗೇ, ಭೂತ-ವಿಶೇಷ-ಸಂಘಾನ್ – ವಿಶೇಷವಾಗಿ ಸೇರಿದ ಜೀವಗಡಣವ (ಬಗೆಬಗೆಯ ಜೀವ ಸಮೂಹವ), ಕಮಲ-ಆಸನಸ್ಥಮ್ ಈಶಮ್ – ಕಮಲಪುಷ್ಪದ ಮೇಗೆ ಆಸೀನನಾದ ಬ್ರಹ್ಮನ, ಈಶಮ್ ಚ  – ಶಿವನನ್ನೂ ಕೂಡ, ಸರ್ವಾನ್ ಋಷೀನ್ – ಸಮಸ್ತ ಋಷಿವೃಂದವ, ದಿವ್ಯಾನ್ ಉರಗಾನ್ ಚ – ಎಲ್ಲ ಜಾತಿಯ ಸರ್ಪಂಗಳನ್ನೂ ಕೂಡ, ಪಶ್ಯಾಮಿ – ನೋಡುತ್ತಲಿದ್ದೆ. 

ಅನ್ವಯಾರ್ಥ

ಅರ್ಜುನ° ಹೇಳಿದ° – ಪ್ರೀತಿಯ ಹೇ ಪ್ರಭುವೇ!, ನಿನ್ನ ದಿವ್ಯವಾದ ಶರೀರಲ್ಲಿ ಆನು ಸಮಸ್ತ ದೇವತಾಗಡಣವ, ಎಲ್ಲ ಜೀವ ಸಮೂಹವ, ಕಮಲಾಸನನಾದ ಬ್ರಹ್ಮನ, ಮತ್ತೆ ಶಿವನ, ಹಾಂಗೇ ಸಮಸ್ತ ಋಷಿಗಳ, ದಿವ್ಯ ಶಕ್ತಿಯ ಉರಗಂಗಳ ಕಾಣುತ್ತಲಿದ್ದೆ.

ತಾತ್ಪರ್ಯ / ವಿವರಣೆ

ಅರ್ಜುನ° ಭಗವಂತನ ಅತ್ಯದ್ಭುತ ರೂಪವ ನೋಡುತ್ತಲಿದ್ದ°. ಅವಂಗೆ ರೋಮಾಂಚನ ಅಪ್ಪಲೆ ಕಾರಣ ಬರೇ ಇಡೀ ಈ ಜಗತ್ತು ಮಾಂತ್ರ ಕಂಡದಲ್ಲ. ಭಗವಂತನ ಸೃಷ್ಟಿಲ್ಲಿ ಏವೆಲ್ಲ ಜಗತ್ತು ಇದ್ದೋ ಅವೆಲ್ಲವನ್ನೂ, ಅದರಲ್ಲಿಪ್ಪವೆಲ್ಲವನ್ನೂ ಕಾಣುತ್ತ°. ಅರ್ಜುನ° ಶಿರಬಾಗಿ ಕೈಮುಗುದು ಹೇಳುತ್ತ°, “ಹೇ ದೇವಾದಿದೇವನೇ!, ನಿನ್ನ ಈ ಶರೀರರಲ್ಲಿ ಸಮಸ್ತ ಜಗತ್ತಿನ ಕಾಣುತ್ತಲಿದ್ದೆ. ದೇವತೆಗೊ ರಾಕ್ಷಸರು, ಅಸುರರು, ಗಂಧರ್ವರು, ಅಪ್ಸರರು, ಯಕ್ಷರು, ಮನುಷ್ಯರು, ಪ್ರಾಣಿಗೊ…. ಹೀಂಗೆ ಎಲ್ಲವೂ. ಅದರ್ಲಿಯೂ ಮುಖ್ಯವಾಗಿ ಕಮಲಾಸನನಾಗಿಪ್ಪ ಚತುರ್ಮುಖ ಬ್ರಹ್ಮ° , ಲಯಾಧಿಕಾರಿ ಶಿವ°,  ನಿನ್ನನ್ನೇ ಅನವರತವೂ ಧ್ಯಾನಿಸಿ ನಿನ್ನನ್ನೇ ಸೇರ್ಲೆ ಹಾತೊರೆವ ಮಹಾನ್ ಋಷಿವೃಂದ, ದೇವಾಂಶ ಸಂಭೂತ ದಿವ್ಯ ಉರಗಂಗೊ, ಆ ಶೇಷಶಾಯಿ ಎಲ್ಲವನ್ನೂ ನಿನ್ನಲ್ಲಿ ಕಾಣುತ್ತ ಇದ್ದೆ”.

ಶ್ಲೋಕ

ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋsನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥೨೬॥

ಪದವಿಭಾಗ

ಅನೇಕ-ಬಾಹು-ಉದರ-ವಕ್ತ್ರ-ನೇತ್ರಮ್ ಪಶ್ಯಾಮಿ ತ್ವಾಮ್ ಸರ್ವತಃ ಅನಂತ-ರೂಪಮ್ । ನ ಅಂತಮ್ ನ ಮಧ್ಯಮ್ ನ ಪುನಃ ತವ ಆದಿಮ್ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥

ಅನ್ವಯ

ಅಹಂ ತ್ವಾಮ್ ಅನೇಕ-ಬಾಹು-ಉದರ-ವಕ್ತ್ರ-ನೇತ್ರಂ ಸರ್ವತಃ ಅನಂತ-ರೂಪಂ ಪಶ್ಯಾಮಿ । ಹೇ ವಿಶ್ವರೂಪ ವಿಶ್ವೇಶ್ವರ!, ಪುನಃ ತವ ಅಂತಂ ಮಧ್ಯಮ್ ಆದಿಂ ನ ಪಶ್ಯಾಮಿ ।

ಪ್ರತಿಪದಾರ್ಥ

ಅಹಮ್ – ಆನು, ತ್ವಾಮ್ – ನಿನ್ನ, ಅನೇಕ-ಬಾಹು-ಉದರ-ವಕ್ತ್ರ-ನೇತ್ರಮ್ –  ತೋಳು,ಹೊಟ್ಟೆ,ಮೋರೆ,ಕಣ್ಣುಗಳ, ಸರ್ವತಃ ಅನಂತ-ರೂಪಮ್ – ಎಲ್ಲೆಡೆಲ್ಲಿಯೂ ಅನಂತರೂಪವ, ಪಶ್ಯಾಮಿ – ಕಾಣುತ್ತಲಿದ್ದೆ. ಹೇ ವಿಶ್ವರೂಪ ವಿಶ್ವೇಶ್ವರ! – ಓ ವಿಶ್ವರೂಪನಾದ ವಿಶ್ವದ ಪ್ರಭುವೇ!, ಪುನಃ – ಮತ್ತೆ, ತವ – ನಿನ್ನ, ಅಂತಮ್  – ಕೊನೆ, ಮಧ್ಯಮ್ – ಮಧ್ಯ, ಆದಿ – ಬುಡ (ಆರಂಭ)ವ, ನ ಪಶ್ಯಾಮಿ – ಕಾಣುತ್ತಿಲ್ಲೆ.

ಅನ್ವಯಾರ್ಥ

ಏ ವಿಶ್ವರೂಪನಾದ ವಿಶ್ವದ ಒಡೆಯನೇ!, ಆನು ನಿನ್ನ ದೇಹಲ್ಲಿ ಅಮಿತವಾಗಿ ವಿಸ್ತಾರಗೊಂಡ ಅನೇಕಾನೇಕ ತೋಳು, ಉದರ, ಮೋರೆ, ಕಣ್ಣುಗಳ ಕಾಣುತ್ತಲಿದ್ದೆ. ಮತ್ತೆ ನಿನ್ನ ಕೊಡಿ ಮಧ್ಯ ಬುಡವ ಕಾಂಬಲೆಡಿತ್ತಿಲ್ಲೆ.

ತಾತ್ಪರ್ಯ /ವಿವರಣೆ

ಭಗವಂತ° ದೇವೋತ್ತಮ ಪರಮ ಪುರುಷ°. ವಿಶ್ವವ್ಯಾಪಿ. ಅನಂತ°, ಅಮಿತ°. ಹಾಂಗಾಗಿ ಅವನ ಮೂಲಕ ಎಲ್ಲವನ್ನೂ ಕಾಂಬಲೆ ಎಡಿಗಾತು ಅರ್ಜುನಂಗೆ. ಆದರೂ ಭಗವಂತನ ಆದಿ ಮಧ್ಯ ಅಕೇರಿಯ ಕಾಂಬಲೆ ಎಡಿಗಾಯ್ದಿಲ್ಲೆ. ಎಲ್ಲಿ ನೋಡಿರೂ ಭಗವಂತನ ರೂಪಂಗಳೇ ಕಾಂಬದು. ಅರ್ಜುನ° ಹೇಳುತ್ತ° – “ಹೇ ವಿಶ್ವರೂಪನಾದ ವಿಶ್ವೇಶ್ವರನೇ! ಎಲ್ಲಿ ನೋಡಿರೂ ನಿನ್ನ ಮೋರೆ ಕಣ್ಣು ತೋಳು ಹೊಟ್ಟೆ ಕಾಣುತ್ತಲಿದ್ದು. ನಿನ್ನ ಆದಿ ಎಲ್ಲಿ , ಮಧ್ಯ ಏವುದು, ಕೊಡಿ ಎಲ್ಲಿ ಹೇಳ್ವದು ಗೊಂತಾವುತ್ತಿಲ್ಲೆ”. ಪುರುಷಸೂಕ್ತಲ್ಲಿ ಹೇಳಿಪ್ಪಂತೆ “ಓಂ ಸಹಸ್ರಶೀರ್ಷಾ ಪುರುಷಃ । ಸಹಸ್ರಾಕ್ಷ ಸಹಸ್ರಪಾತ್ । – ಭಗವಂತಂಗೆ ಸಹಸ್ರಾರು ಶಿರಂಗೊ, ಸಹಸ್ರಾರು ಕಣ್ಣುಗೊ. ಇದೊಂದು ವಿಚಿತ್ರ ಅನುಭವ. ಅನಂತರೂಪಿ ಭಗವಂತಂಗೆ ಕಡೆ-ಕೊಡಿ ಇಲ್ಲೆ. ಮತ್ತೆಲ್ಲಿಂದ ಮಧ್ಯ ಇಪ್ಪದು. ಸಮಸ್ತ ವಿಶ್ವದ ಸ್ವಾಮಿ ಆಗಿಪ್ಪ ಭಗವಂತ° ‘ಅಣೋರಣೀಯಃ ಮಹತೋ ಮಹೀಯಃ’ – ಅಣುವಿಲ್ಲಿ ಪರಮಾಣು, ಮಹತ್ತಿಲ್ಲಿ ಮಹಾಮಹಿಮ° ಮಹತೋಮಯ°.

ಶ್ಲೋಕ

ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತಾನಲಾರ್ಕದ್ಯುತಿಮಪ್ರಮೇಯಮ್ ॥೧೭॥

ಪದವಿಭಾಗ

ಕಿರೀಟಿನಮ್ ಗದಿನಮ್ ಚಕ್ರಿಣಮ್ ಚ ತೇಜೋ-ರಾಶಿಮ್ ಸರ್ವತಃ ದೀಪ್ತಿಮಂತಮ್ । ಪಶ್ಯಾಮಿ ತ್ವಾಮ್ ದುರ್ನಿರೀಕ್ಷ್ಯಮ್ ಸಮಂತಾತ್ ದೀಪ್ತ-ಅನಲ-ಅರ್ಕ-ದ್ಯುತಿಮ್ ಅಪ್ರಮೇಯಮ್ ॥

ಅನ್ವಯ

ತ್ವಾಂ ಕಿರೀಟಿನಮ್, ಗದಿನಮ್, ಚಕ್ರಿಣಮ್, ತೇಜೋ-ರಾಶಿಮ್ ಸರ್ವತೋ ದೀಪ್ತಿಮಂತಮ್, ಸಮಂತಾತ್ ದೀಪ್ತ-ಅನಲ-ಅರ್ಕ-ದ್ಯುತಿಮ್ ಅಪ್ರಮೇಯಂ ದುರ್ನೀರಿಕ್ಷ್ಯಂ ಚ ಪಶ್ಯಾಮಿ ।

ಪ್ರತಿಪದಾರ್ಥ

ತ್ವಾಮ್ – ನಿನ್ನ, ಕಿರೀಟಿನಮ್ – ಕಿರೀಟಂಗಳೊಟ್ಟಿಂಗೆ ಇಪ್ಪ, ಗದಿನಮ್ – ಗದೆಗಳೊಟ್ಟಿಂಗೆ ಇಪ್ಪ, ಚಕ್ರಿಣಮ್ – ಚಕ್ರಂಗಳೊಟ್ಟಿಂಗೆ ಇಪ್ಪ, ತೇಜೋ-ರಾಶಿಮ್ – ತೇಜೋರಾಶಿಯ, ಸರ್ವತಃ ದೀಪ್ತಿಮಂತಮ್ – ಎಲ್ಲ ಕಡೆಗಳಲ್ಲಿಯೂ ಪ್ರಕಾಶಿಸುತ್ತಿಪ್ಪ, ಸಮಂತಾತ್ – ಎಲ್ಲೆಡೆಲಿಯೂ, ದೀಪ್ತ-ಅನಲ-ಅರ್ಕ-ದ್ಯುತಿಮ್ – ಹೊತ್ತಿಗೊಂಡಿಪ್ಪ ಅಗ್ನಿಯಾದ ಸೂರ್ಯನ ಪ್ರಕಾಶವುಳ್ಳ, ಅಪ್ರಮೇಯಮ್ – ಅಳೆಯಲಾಗದ, ದುರ್ನಿರೀಕ್ಷ್ಯಮ್ – ನೋಡ್ಳೆ ಕಷ್ಟಸಾಧ್ಯವಾಗಿಪ್ಪದರ, ಚ – ಕೂಡ, ಪಶ್ಯಾಮಿ – ನೋಡುತ್ತಲಿದ್ದೆ.

ಅನ್ವಯಾರ್ಥ

ಕಿರೀಟಂಗಳೊಟ್ಟಿಂಗೆ, ಗದೆಗಳೊಟ್ಟಿಂಗೆ, ಚಕ್ರಂಗಳೊಟ್ಟಿಂಗೆ ತೇಜೋರಾಶಿಯಾದ ಎಲ್ಲೆಡೆ ಪ್ರಕಾಶಿಸುತ್ತಿಪ್ಪ  ನಿನ್ನ ತೇಜೋರಾಶಿಯ  ಎಲ್ಲ ದಿಕ್ಕೆಯೂ ಉರಿವ ಸೂರ್ಯನ ಪ್ರಕಾಶದಂತೆ ಎಲ್ಲೆಡೆ ಕಾಣುತ್ತಲಿದ್ದೆ.

ತಾತ್ಪರ್ಯ / ವಿವರಣೆ

ತಲೆಲಿ ಮಕುಟ (ಕಿರೀಟ), ಕೈಲಿ – ಗದೆ ಮತ್ತೆ ಚಕ್ರ ಅದೂ ಅನೇಕ ರೂಪಲ್ಲಿ ಬೆಣಚ್ಚಿಯ ಪ್ರಭೆಯ ಕಾಂತಿಯುತವಾಗಿ ಶೋಭಿಪ ನಿನ್ನ ತೇಜೋರಾಶಿ ಎಲ್ಲ ದಿಕ್ಕೆ ಉರಿವ ಸೂರ್ಯನ ಪ್ರಕಾಶದಂತೆ ಪ್ರಕಾಶಮಾನನಾಗಿ ಕಾಣುತ್ತಲಿದ್ದೆ. ಸರ್ವಾಭರಣಭೂಷಿತನಾಗಿ ಭಗವಂತನ ಮನಮೋಹಕ ರೂಪ ಒಂದಿಕ್ಕೆ ಆದರೆ, ಅದೇ ಸಮಯಲ್ಲಿ, ಕಿರೀಟಧಾರಿಯಾಗಿ, ಚಕ್ರಗದೆಯುಕ್ತನಾಗಿ ಶತ್ರುಭಯಂಕರ ರೂಪ ಇನ್ನೊಂದಿಕ್ಕೆ. ಎಲ್ಲವೂ ಬೆಣಚ್ಚಿಯ ಪುಂಜದ ಹಾಂಗೆ ಅತ್ಯಂತ ಪ್ರಕಾಶಮಾನನಾಗಿ ಸಾಮಾನ್ಯ ಕಣ್ಣುಗಳ ಕೋರೈಸುವ ಸುಡುವ  ಸೂರ್ಯನ ಕಿಚ್ಚಿನ ಸದೃಶನಾಗಿ ಅಳವಲೆಡಿಯದ್ದ, ಕಾಂಬಲೆ ಸಾಧ್ಯ ಇಲ್ಲದ್ದ ಭಗವಂತನ ಅತ್ಯದ್ಭುತ ರೂಪವ ಅರ್ಜುನ ಕಾಣುತ್ತಲಿದ್ದ°.

ಶ್ಲೋಕ

ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ ॥೧೮॥

ಪದವಿಭಾಗ

ತ್ವಮ್ ಅಕ್ಷರಮ್ ಪರಮಮ್ ವೇದಿತವ್ಯಮ್ ತ್ವಮ್ ಅಸ್ಯ ವಿಶ್ವಸ್ಯ ಪರಮಮ್ ನಿಧಾನಮ್ । ತ್ವಮ್ ಅವ್ಯಯಃ ಶಾಶ್ವತ-ಧರ್ಮ-ಗೋಪ್ತಾ ಸನಾತನಃ ತ್ವಮ್ ಪುರುಷಃ ಮತಃ ಮೇ ॥

ಅನ್ವಯ

ತ್ವಂ ವೇದಿತವ್ಯಂ ಪರಮಮ್ ಅಕ್ಷರಮ್, ತ್ವಮ್ ಅಸ್ಯ ವಿಶ್ವಸ್ಯ ಪರಮಂ ನಿಧಾನಮ್, ತ್ವಮ್ ಅವ್ಯಯಃ ಶಾಶ್ವತ-ಧರ್ಮ-ಗೋಪ್ತಾ, ತ್ವಂ ಸನಾತನಃ ಪುರುಷಃ (ಇತಿ) ಮೇ ಮತಃ ॥

ಪ್ರತಿಪದಾರ್ಥ

ತ್ವಮ್ – ನೀನು, ವೇದಿತವ್ಯಮ್ – ತಿಳಿಯಲ್ಪಡೇಕಾದ, ಪರಮಮ್ ಅಕ್ಷರಮ್ – ಪರಮ (ಶ್ರೇಷ್ಠ) ಅಚ್ಯುತ°/ಅಕ್ಷರ° (ಚ್ಯುತಿರಹಿತ°/ ಕ್ಷರ ರಹಿತ°/), ತ್ವಮ್ – ನೀನು, ಅಸ್ಯ – ಈ, ವಿಶ್ವಸ್ಯ – ಜಗತ್ತಿನ (ವಿಶ್ವದ), ಪರಮಮ್ ನಿಧಾನಮ್ – ಪರಮ ಆಧಾರ°, ತ್ವಮ್ – ನೀನು, ಅವ್ಯಯಃ – ಅವಿನಾಶಿ, ಶಾಶ್ವತ-ಧರ್ಮ-ಗೋಪ್ತಾ – ಶಾಶ್ವತವಾದ ಧರ್ಮದ ಪಾಲಕ°, ತ್ವಮ್ – ನೀನು, ಸನಾತನಃ ಪುರುಷಃ – ಶಾಶ್ವತವಾದ ಪರಮ ಪುರುಷ°, (ಇತಿ) ಮೇ ಮತಃ – (ಹೇದು) ಎನ್ನ ಅಭಿಪ್ರಾಯ.

ಅನ್ವಯಾರ್ಥ

ನೀನು ಎಲ್ಲೋರಿಂದಲೂ ತಿಳಿಯಲ್ಪಡೇಕಾದ ಪರಮ ಶ್ರೇಷ್ಠ ಚ್ಯುತಿರಹಿತ°, ಇಡೀ ವಿಶ್ವಕ್ಕೆ ನೀನೇ ಆಧಾರ°, ಅವಿನಾಶಿ, ಶಾಶ್ವತ ಧರ್ಮದ ಪಾಲಕ° ಮತ್ತು ಶಾಶ್ವತನಾದ ಪರಮ ಪುರುಷನಾಗಿದ್ದೆ ಹೇಳಿ ಎನ್ನ ಅಭಿಪ್ರಾಯ.    

ತಾತ್ಪರ್ಯ / ವಿವರಣೆ

ಭಗವಂತನ ನಿಜರೂಪವ ಕಣ್ಣಾರೆ ಕಂಡ ಅರ್ಜುನ° ಭಗವಂತನತ್ರೆ ಹೇಳುತ್ತ° – ‘ನೀನು ಪರಮ ಅಕ್ಷರನಾಗಿದ್ದೆ’. ಇಲ್ಲಿ ಅಕ್ಷರ° ಹೇಳಿರೆ ಸರ್ವವ್ಯಾಪ್ತ°, ನಾಶ ಇಲ್ಲದ್ದ ತತ್ವ, ಸರ್ವಶಬ್ದವಾಚ್ಯ° ಇತ್ಯಾದಿ. ನಾವು ತಿಳ್ಕೊಳ್ಳೆಕ್ಕಾದ್ದರಲ್ಲಿ ಸರ್ವಶ್ರೇಷ್ಠವಾದ್ದು – ಭಗವಂತ°. “ಇಡೀ ವಿಶ್ವದ ಸೃಷ್ಟಾರ°, ಆಶ್ರಯದಾತ (ಆಧಾರ°). ಸಮಸ್ತ ಜಗತ್ತಿನ ಮೂಲಾಶ್ರಯ°. ಅನಾದಿ ಅನಂತ ಕಾಲಲ್ಲಿ ಶಾಶ್ವತ ಧರ್ಮರಕ್ಷಣೆ ಮಾಡುವವ° ನೀನು. ಸಮಸ್ತ ವೇದ ಪ್ರತಿಪಾದ್ಯ ನೀನು ಹೇಳ್ವದು ಎನಗೆ ಗೊಂತಾತು”.

ಶ್ಲೋಕ

ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್ ॥೧೯॥

ಪದವಿಭಾಗ

ಅನಾದಿ-ಮಧ್ಯ-ಅಂತಮ್ ಅನಂತ-ವೀರ್ಯಮ್ ಅನಂತ-ಬಾಹುಮ್  ಶಶಿ-ಸೂರ್ಯ-ನೇತ್ರಮ್ । ಪಶ್ಯಾಮಿ ತ್ವಾಮ್ ದೀಪ್ತ-ಹುತಾಶ-ವಕ್ತ್ರಮ್ ಸ್ವ-ತೇಜಸಾ ವಿಶ್ವಮ್ ಇದಮ್ ತಪಂತಮ್ ॥

ಅನ್ವಯ

ಅನಾದಿ-ಮಧ್ಯ-ಅಂತಮ್, ಅನಂತ-ವೀರ್ಯಮ್, ಅನಂತ-ಬಾಹುಮ್, ಶಶಿ-ಸೂರ್ಯ-ನೇತ್ರಮ್, ದೀಪ್ತ-ಹುತಾಶ-ವಕ್ತ್ರಮ್, ಸ್ವ-ತೇಜಸಾ ಇದಂ ವಿಶ್ವಂ ತಪಂತಮ್, ತ್ವಾಂ ಪಶ್ಯಾಮಿ ।

ಪ್ರತಿಪದಾರ್ಥ

ಅನಾದಿ-ಮಧ್ಯ-ಅಂತಮ್ – ಆದಿ-ಮದ್ಯ-ಅಂತ ಇಲ್ಲದ್ದ, ಅನಂತ-ವೀರ್ಯಮ್ – ಅಪರಿಮಿತ ವೈಭವಂಗಳಿಪ್ಪ/ಶಕ್ತಿಗಳಿಪ್ಪ, ಅನಂತ-ಬಾಹುಮ್ – ಅಪರಿಮಿತ ಬಾಹುಗಳಿಪ್ಪ, ಶಶಿ-ಸೂರ್ಯ-ನೇತ್ರಮ್ – ಚಂದ್ರ ಸೂರ್ಯರ ಕಣ್ಣುಗಳಾಗಿಪ್ಪ, ದೀಪ್ತ-ಹುತಾಶ-ವಕ್ತ್ರಮ್ – ಉರಿವ ಅಗ್ನಿಯ ಜ್ವಾಲೆಯಂತಿಪ್ಪ ಬಾಯಿಗಳಿಪ್ಪ, ಸ್ವ-ತೇಜಸಾ – ಸ್ವಪ್ರಕಾಶಂದ, ಇದಮ್ ವಿಶ್ವಮ್ – ಈ ವಿಶ್ವವ, ತಪಂತಮ್ – ಸುಡುತ್ತಿಪ್ಪ, ತ್ವಾಮ್ ಪಶ್ಯಾಮಿ – ನಿನ್ನ ನೋಡುತ್ತಲಿದ್ದೆ.

ಅನ್ವಯಾರ್ಥ

ನಿನ್ನ ಬುಡ-ನಡು-ಕೊಡಿ ಇಲ್ಲದ್ದ ಗುಣ ವೈಶಿಷ್ಟ್ಯಂಗೊ ಅಪರಿಮಿತ ಶಕ್ತಿ ಸಾಮರ್ಥ್ಯಂಗಳಿಪ್ಪ ಬಾಹುಗಳಿಂದ ಶೋಭಿಪ, ಸೂರ್ಯಚಂದ್ರರಾಂಗೆ ಕಣ್ಣುಗಳಿಪ್ಪ, ಉರಿವ ಅಗ್ನಿಯ ಜ್ವಾಲೆಯ ಹಾಂಗೆ ಬಾಯಿಗಳಿಪ್ಪ, ಸ್ವಪ್ರಕಾಶಂದ ಈ ಇಡೀ ವಿಶ್ವವನ್ನೇ ಸುಡುವ ನಿನ್ನ ರೂಪವ ಕಾಣುತ್ತಲಿದ್ದೆ.

ತಾತ್ಪರ್ಯ / ವಿವರಣೆ

ಭಗವಂತನ ಗುಣಂಗೊಕ್ಕೆ ಆದಿ ಮಧ್ಯ ಅಂತ್ಯ ಹೇಳಿಯೇ ಇಲ್ಲೆ. ಅವ° ಅನಂತವೀರ್ಯ° (ಅಪರಿಮಿತ ಶಕ್ತಿಸಾಮರ್ಥ್ಯವುಳ್ಳವ°), ಭಗವಂತನ ಕಣ್ಣುಗಳಿಂದ ಹುಟ್ಟಿದ ಆ ಸೂರ್ಯಚಂದ್ರರಂತೆ ಕಣ್ಣುಗಳ ಹೊಂದಿಪ್ಪ ಭಗವಂತ° ಉರಿವ ಅಗ್ನಿಯ ಪ್ರಖರಜ್ಞಾಲೆಯಾಂಗೆ ಬಾಯಿಗಳಿಪ್ಪ, ತನ್ನ ತೇಜಸ್ಸಿಂದಲೇ ಇಡೀ ವಿಶ್ವವನ್ನೇ ಏಕಕಾಲಕ್ಕೆ ಸುಡುವ ಸಾಮರ್ಥ್ಯ ಇಪ್ಪ ಬಾಯಿಂದ ಕಾಂಬ ಭಗವಂತನ ರೂಪ ಅತ್ಯದ್ಭುತ!.

ಶ್ಲೋಕ

ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥೨೦॥

ಪದವಿಭಾಗ

ದ್ಯಾವಾ-ಪೃಥಿವ್ಯೋಃ ಇದಮ್ ಅಂತರಮ್ ಹಿ ವ್ಯಾಪ್ತಮ್ ತ್ವಯಾ ಏಕೇನ ದಿಶಃ ಚ ಸರ್ವಾಃ । ದೃಷ್ಟ್ವಾ ಅದ್ಭುತಮ್ ರೂಪಮ್ ಉಗ್ರಮ್ ತವ ಇದಮ್ ಲೋಕ-ತ್ರಯಮ್ ಪ್ರವ್ಯಥಿತಮ್ ಮಹಾತ್ಮನ್ ॥

ಅನ್ವಯ

ಹೇ ಮಹಾತ್ಮನ್!, ತ್ವಯಾ ಏಕೇನ ದ್ಯಾವಾ-ಪೃಥಿವ್ಯೋಃ ಇದಮ್ ಅಂತರಂ ವ್ಯಾಪ್ತಮ್, ಸರ್ವಾಃ ದಿಶಾಃ ಚ ವ್ಯಾಪ್ತಾಃ , ಇದಂ ತವ ಅದ್ಭುತಮ್ ಉಗ್ರಂ ರೂಪಂ ದೃಷ್ಟ್ವಾ ಲೋಕ-ತ್ರಯಂ ಪ್ರವ್ಯಥಿತಂ ಹಿ ।

ಪ್ರತಿಪದಾರ್ಥ

ಹೇ ಮಹಾತ್ಮನ್! – ಏ ಮಹಾತ್ಮನೇ!, ತ್ವಯಾ ಏಕೇನ – ನಿನ್ನೊಬ್ಬಂದಲೇ, ದ್ಯಾವಾ-ಪೃಥಿವ್ಯೋಃ (ದ್ಯೌ-ಆ-ಪೃಥಿವ್ಯೋಃ) – ಆಕಾಶಂದ (ಅಂತರಿಕ್ಷಂದ/ಸ್ವರ್ಗಂದ) ಭೂಮಿವರೇಂಗೆ, ಇದಮ್ ಅಂತರಮ್ – ಈ ನಡುಕೆ, ವ್ಯಾಪ್ತಮ್ – ವ್ಯಾಪಿಸಲ್ಪಟ್ಟಿಪ್ಪದರ, ಸರ್ವಾಃ ದಿಶಾಃ ಚ – ಎಲ್ಲಾ ಕಡೆಗಳೆಲ್ಲಿಯೂ ಕೂಡ, ವ್ಯಾಪ್ತಮ್ – ವ್ಯಾಪಿಸಲ್ಪಟ್ಟಿಪ್ಪದರ, ಇದಮ್ ತವ – ಈ ನಿನ್ನ, ಅದ್ಭುತಮ್ ಉಗ್ರಮ್ ರೂಪಮ್ – ಅದ್ಭುತ ಉಗ್ರ ರೂಪವ, ದೃಷ್ಟ್ವಾ – ನೋಡಿ, ಲೋಕ-ತ್ರಯಮ್ – ಮೂರ್ಲೋಕವೂ, ಪ್ರವಿಥಿತಮ್ ಹಿ – ಖಂಡಿತವಾಗಿಯೂ ಕ್ಷೋಭೆಗೊಂಡಿದು.

ಅನ್ವಯಾರ್ಥ

ಏ ಮಹಾತ್ಮನೇ!, ನಿನ್ನೊಬ್ಬಂದಲೇ ಆಕಾಶಂದ ಭೂಮಿವರೇಂಗೆ ಎಲ್ಲಾ ದಿಕ್ಕುಗಳಲ್ಲಿಯೂ ವ್ಯಾಪಿಸಲ್ಪಟ್ಟಿಪ್ಪ ನಿನ್ನ ಈ ಅದ್ಭುತ ಉಗ್ರ ರೂಪವ ನೋಡಿ ಮೂರು ಲೋಕವೂ ಕ್ಷೋಭೆಗೊಂಡಿದು.

ತಾತ್ಪರ್ಯ / ವಿವರಣೆ

‘ದ್ಯಾವಾ ಪೃಥಿವ್ಯೋ’ – ಹೇಳಿರೆ ಸ್ವರ್ಗ ಮತ್ತೆ ಭೂಮಿಗಳ ನಡುವಣ ಅಂತರ/ಜಾಗೆ, ಮತ್ತೆ ‘ಲೋಕತ್ರಯಂ’ – ಮೂರ್ಲೋಕಂಗೊ ಹೇಳ್ವ ಈ ಶಬ್ದಂಗೊ ಇಲ್ಲಿ ಅತೀ ಮಹತ್ವವಾದ್ದು. ಈ ಸಂದರ್ಭಲ್ಲಿ ಭಗವಂತನ ವಿಶ್ವರೂಪವ ಕಂಡದು ಅರ್ಜುನ° ಮಾಂತ್ರ ಅಲ್ಲ, ಭಗವಂತನ ವಿಶ್ವರೂಪವ ನೋಡ್ಳೆ ಅರ್ಹ/ಯೋಗ್ಯರಾದ ಮೂರ್ಲೋಕಲ್ಲಿಪ್ಪ ಇತರರೂ ಕಂಡಿದವು ಹೇಳ್ವದು ಇಲ್ಲಿ ಸ್ಪಷ್ಟವಾವ್ತು.  ಹಾಂಗಾಗಿ ಅರ್ಜುನ° ಹೇಳುತ್ತ° – ‘ಅಂತರಿಕ್ಷಂದ ಭೂಮಿವರೇಂಗೆ ಎಲ್ಲ ದಿಕ್ಕುಗಳಲ್ಲಿಯೂ ಅನಂತವಾಗಿ ಆವರಿಸಿಪ್ಪ ನಿನ್ನ ಅತ್ಯದ್ಭುತ ರೂಪವ ಕಂಡು ಮೂರ್ಲೋಕದವೂ ದಿಗ್ಭ್ರಮೆಗೊಂಡಿದವು, ಜಗತ್ತು ತತ್ತರಿಸಿದ್ದು’ ಹೇಳಿ ತನ್ನ ಅನುಭವವ ಭಗವಂತನಲ್ಲಿ ಹೇಳಿಗೊಳ್ಳುತ್ತ°. ಭಗವಂತನ ಸಮಸ್ತ ಸೃಷ್ಟಿಯ/ಇಡೀ ಜಗತ್ತಿನ ಅರ್ಜುನ° ಭಗವಂತನ ಶರೀರಲ್ಲಿ ಕಾಣುತ್ತಲಿದ್ದ°. ಹಾಂಗಾಗಿ ಅವಂಗೆ ಅಲ್ಲಿ ನಡವ ಪ್ರತಿಯೊಂದೂ ಕಾಂಬಲೆ ಎಡಿಗಾವ್ತು.

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 11 – SHLOKAS 10 -20

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

7 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 10 – 20

  1. [ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ…]
    ಅಣುಬಾಂಬಿನ ಪರೀಕ್ಷಾ ಪ್ರಯೋಗ ಅಮೇರಿಕಲ್ಲಿ ಮಾಡಿದವಡ,ಜಪಾನಿಲಿ ಹಾಕುವ ಮೊದಲು.
    ಆವಾಗ ಅದರ ಪ್ರಭೆಯ ನೋಡಿ,ರಾಬರ್ಟ್ ಓಪನ್ ಹೀಮರ್[ಎನ್ನ ನೆಂಪು ಸರಿಯಾಗಿದ್ದರೆ] ಹೇಳುವ ಸಯಂಟಿಸ್ಟ್ ಭಗವದ್ಗೀತೆಲಿ ಬಪ್ಪ ಈ ವಾಕ್ಯವ ಉದ್ಧರಿಸಿ,ಅಣುಬಾಂಬು ಅಷ್ಟು ಪ್ರಕಾಶಮಾನ ಆಗಿತ್ತು ಹೇಳಿ ಹೇಳಿತ್ತಡ.
    ನೋಡಿ-ನಮ್ಮ ಕೃಷ್ಣನ ವರ್ಣನೆ ವ್ಯಾಸರಿಂದ ಎಷ್ಟು ಅದ್ಭುತವಾಗಿ ಬಯಿಂದು ಹೇಳಿ.

  2. ವಿಶ್ವರೂಪವ ನೋಡಿ ಆನಂದವೂ ಭಯವೂ ಹೊಂದಿದ ಅರ್ಜುನ…
    ಮಹತ್ತಾದ್ದರ ವರ್ಣನೆ ಲಾಯಕ ಮೂಡಿಬೈಂದು.

  3. ಅರ್ಜುನಂಗೆ, ಕೃಷ್ಣ ತೋರಿಸಿದ ದಿವ್ಯ ರೂಪದ ವರ್ಣನೆ ಅದ್ಭುತವಾಗಿ ನಿರೂಪಣೆ ಆಯಿದು.
    ಓದುತ್ತಾ ಹೋದ ಹಾಂಗೆ ನಾವು ಇದುವರೆಗೆ ಕಾಣದ್ದ ಆ ವಿಷ್ವರೂಪವ ಕಲ್ಪಿಸಿಗೊಂಬಗ ಸಿಕ್ಕುವ ಭಾವ ಪ್ರಪಂಚ ವಿವರಣೆಗೆ ಸಿಕ್ಕದ್ದು..
    ಚೆನ್ನೈ ಭಾವಯ್ಯಂಗೆ ನಮೋ ನಮಃ

  4. ಹರೇ ರಾಮ . ಧನ್ಯವಾದಂಗೊ ಅಪ್ಪಚ್ಹಿ & ಮಹೇಶಣ್ಣ.

    ಕೆಲವೊಂದು ಅಕ್ಷರ ದೋಷಂಗೊ ಗಂಟೆಕಟ್ಳೆ ಕೂದು ಟೈಪು ಮಾಡುವಾಗ ಕಣ್ತಪ್ಪಿ ಬತ್ತಾ ಇದ್ದು. ಹಾಂಗಿರ್ತದು ಕೆಲವು ಸರ್ತಿ ಗೋಷ್ಠಿಯಾಗದ್ದೆ ಬಾಕಿ ಆದ್ದು ಇದ್ದು. ಗೊಂತಾದಾಂಗೆ ಸರಿಮಾಡಿಗೊಳ್ತು. ಓದುಗರು ಕಂಡದರ ತಿದ್ದಿ ತಿಳಿಶೆಕ್ಕಾಗಿ ನಮ್ರ ವಿನಂತಿ.

    1. ನಿಂಗಳ ವಿನಯ ದೊಡ್ಡದು.ನಮಸ್ಕಾರ.

  5. ನಮಸ್ಕಾರ,
    ಆರಂಭಲ್ಲಿ ಕೊಟ್ಟ ಪೀಠಿಕೆ ಲಾಯಕ ಬಯಿಂದು. ಕಳುದ ವಾರ ಓದಿದ ವಿಷಯವ ನೆಂಪು ಮಾಡಿ ಇಂದಿನ ವಿಷಯದ ಪ್ರಸ್ತಾವನೆ ಮಾಡುವ ರೀತಿ ಕೊಶಿ ಕೊಟ್ಟತ್ತು.

    ಒಂದು ಅಕ್ಷರ ಬದಲಿದ್ದು-
    ಅರ್ಜುನಃ “ಅಪಷ್ಯತ್” – ಇಲ್ಲಿ “ಅಪಶ್ಯತ್” ಹೇಳಿ ಆಯೆಕು.

  6. ಚೆನ್ನೈ ಭಾವ, ನಿಂಗೊಗೆ ನಮೋ ನಮ:
    ಅರ್ಜುನಂಗೆ ಆದ ವಿಶ್ವ ರೂಪ ಹರ್ಶನವ ಅತ್ಯಂತ ಸುಂದರವಾಗಿ ವಿವರಿಸಿದ್ದಿ. ಅದರ ಓದಿದ್ದು ಎನ್ನ ಭಾಗ್ಯ. ನಿಂಗೊಗೆ ಎಷ್ಟು ಧನ್ಯವಾದ ಹೇಳಿರೂ ಕಡಮ್ಮೆಯೇ. ಮುಂದಾಣ ಕಂತಿಂಗೆ ಕಾತರನಾಗಿ ಕಾಯ್ತಾ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×