Oppanna.com

ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 20 – 30

ಬರದೋರು :   ಚೆನ್ನೈ ಬಾವ°    on   02/08/2012    2 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ ।
ಯತ್ರ ಚೈವಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ॥೨೦॥

ಸುಖಮಾತ್ಯಂತಿಕಂ ಯತ್ತದ್ ಬುದ್ಧಿಗ್ರಾಹ್ಯಮತೀಂದ್ರಿಯಮ್ ।
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ವತಃ ॥೨೧॥

ಯಂ ಲಬ್ಧ್ವಾಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।
ಯಸ್ಮಿನ್ಸ್ಥಿತೋ ನ ದುಃಖೇನ ಗುರೂಣಾಪಿ ವಿಚಾಲ್ಯತೇ ॥೨೨॥

ತಂ ವಿದ್ಯಾದ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್ ।
ಸ ನಿಶ್ಚಯೇನ ಯೋಕ್ತವ್ಯೋ ಯೋಗೋsನಿರ್ವಿಣ್ಣಚೇತಸಾ ॥೨೩॥

ಪದವಿಭಾಗ

ಯತ್ರ ಉಪರಮತೇ ಚಿತ್ತಮ್ ನಿರುದ್ಧಮ್ ಯೋಗ-ಸೇವಯಾ । ಯತ್ರ ಚ ಏವ ಆತ್ಮಾನಾ ಆತ್ಮಾನಮ್ ಯಶ್ಯನ್ ಆತ್ಮನಿ ತುಷ್ಯತಿ ॥

ಸುಖಮ್ ಆತ್ಯಂತಿಕಮ್ ಯತ್ ತತ್ ಬುದ್ಧಿ-ಗ್ರಾಹ್ಯಮ್-ಅತೀಂದ್ರಿಯಮ್ । ವೇತ್ತಿ ಯತ್ರ ನ ಚ ಏವ ಅಯಮ್ ಸ್ಥಿತಃ ಚಲತಿ ತತ್ವತಃ ॥

ಯಮ್ ಲಬ್ಧ್ವಾ ಚ ಅಪರಮ್ ಲಾಭಮ್ ಮನ್ಯತೇ ನ ಅಧಿಕಮ್ ತತಃ । ಯಸ್ಮಿನ್ ಸ್ಥಿತಃ ನ ದುಃಖೇನ ಗುರುಣಾ ಅಪಿ ವಿಚಾಲ್ಯತೇ ॥

ತಮ್ ವಿದ್ಯಾತ್ ದುಃಖ-ಸಂಯೋಗ-ವಿಯೋಗಮ್ ಯೋಗ-ಸಂಜ್ಞಿತಮ್ । ಸಃ ನಿಶ್ಚಯೇನ ಯೋಕ್ತವ್ಯಃ ಯೋಗಃ ಅನಿರ್ವಿಣ್ಣ-ಚೇತಸಾ ॥

ಅನ್ವಯ

ಯೋಗ-ಸೇವಯಾ ನಿರುದ್ಧಂ ಚಿತ್ತಂ ಯತ್ರ ಉಪರಮತೇ, ಚ ಏವ ಯತ್ರ ಆತ್ಮನಾ ಆತ್ಮಾನಂ ಪಶ್ಯನ್ ಆತ್ಮನಿ ತುಷ್ಯತಿ ।

ಯತ್ರ ಯತ್ ತತ್ ಬುದ್ಧಿ-ಗ್ಯಾಹ್ಯಮ್-ಅತೀಂದ್ರಿಯಮ್ ಆತ್ಯಂತಿಕಂ ಸುಖಂ ವೇತ್ತಿ, (ಯತ್ರ) ಚ ಸ್ಥಿತಃ ಅಯಂ ತತ್ವತಃ ನ ಏವ ಚಲತಿ।

ಯಂ ಚ ಲಬ್ಧ್ವಾ, ತತಃ ಅಧಿಕಮ್ ಅಪರಂ ಲಾಭಂ ನ ಮನ್ಯತೇ, ಯಸ್ಮಿನ್ ಸ್ಥಿತಃ ಗುರುಣಾ ಅಪಿ ದುಃಖೇನ ನ ವಿಚಾಲ್ಯತೇ ।

ತಂ ದುಃಖ-ಸಂಯೋಗ-ವಿಯೋಗಂ ಯೋಗ-ಸಂಜ್ಞಿತಂ ವಿದ್ಯಾತ್, ಸಃ ಯೋಗಃ ಅನಿರ್ವಿಣ್ಣ-ಚೇತಸಾ ನಿಶ್ಚಯೇನ ಯೋಕ್ತವ್ಯಃ ॥

ಪ್ರತಿಪದಾರ್ಥ

ಯೋಗಸೇವಯಾ – ಯೋಗಾಚರಣೆಂದ, ನಿರುದ್ಧಮ್ – ಜಡಂದ ನಿರ್ಭಂಧಿತವಾದ, ಚಿತ್ತಮ್ – ಮಾನಸಿಕ ಕಾರ್ಯಂಗಳ, ಯತ್ರ – ಯಾವ ಸ್ಥಿತಿಲಿ, ಉಪರಮತೇ – ನಿಲ್ಲುಸುತ್ತನೋ (ದಿವ್ಯಾನಂದವ ಅನುಭವಿಸಿಗೊಂಡಿಪ್ಪದು), ಚ ಏವ – ಮಾತ್ರವಲ್ಲದೆ ಖಂಡಿತವಾಗಿಯೂ, ಯತ್ರ – ಯಾವುದರಲ್ಲಿ (ಎಲ್ಲಿ), ಆತ್ಮನಾ – ಶುದ್ಧಮನಸ್ಸಿಂದ, ಆತ್ಮಾನಮ್ – ತನ್ನ, ಪಶ್ಯನ್ – ನೋಡಿಗೊಂಡು (ಸ್ಥಾನವ ಸಾಕ್ಷಾತ್ಕರಿಸಿಗೊಂಡು), ತುಷ್ಯತಿ – ತೃಪ್ತನಾವುತ್ತನೋ

ಯತ್ರ – ಎಲ್ಲಿ, ಯತ್ – ಯಾವುದಿದ್ದೋ, ತತ್ – ಅದರ, ಬುದ್ಧಿ-ಗ್ರಾಹ್ಯಮ್-ಅತೀಂದ್ರಿಯಮ್ – ಬುದ್ಧಿಂದ ಪಡವಲೆ ಸಾಧ್ಯವಿಪ್ಪ ಅಲೌಕಿಕವಾದ್ದರ, ಆತ್ಯಂತಿಕಮ್ – ಪರಮೋನ್ನತವಾದ, ಸುಖಮ್ – ಸುಖವ, ವೇತ್ತಿ – ತಿಳಿಯುತ್ತನೋ, (ಯತ್ರ – ಎಲ್ಲಿ), ಚ – ಕೂಡ(ಮತ್ತು), ಸ್ಥಿತಃ  – ನೆಲೆಸಿದ್ದನೋ, ಅಯಮ್ – ಅವ°, ತತ್ವತಃ – ತಾತ್ವಿಕವಾದ ಅರ್ಥಂದ (ಸತ್ಯಂದ), ನ ಏವ ಚಲತಿ – ಚಲಿಸುತ್ತನಿಲ್ಲೆಯೋ,

ಯಮ್ – ಯಾವುದರ, ಚ ಲಬ್ಧ್ವಾ- ಪಡದೂ ಕೂಡ, ತತಃ – ಅದಕ್ಕಿಂತ, ಅಧಿಕಮ್ – ಹೆಚ್ಚಾಗಿ, ಅಪರಮ್ – ಇತರ ಯಾವುದೇ, ಲಾಭಮ್ – ಲಾಭವ, ನ ಮನ್ಯತೇ – ತಿಳಿಯುತ್ತನಿಲ್ಲೆಯೋ, ಯಸ್ಮಿನ್ – ಯಾವುದರಲ್ಲಿ, ಸ್ಥಿತಃ – ನೆಲಸಿದ್ದನೋ, ಗುರುಣಾ ಅಪಿ –  ಬಹುಕಷ್ಟಕರವಾಗಿದ್ದರೂ ಕೂಡ, ದುಃಖೇನ – ದುಃಖಂದ, ನ ವಿಚಾಲ್ಯತೇ – ವಿಚಲಿತನಾಗುತ್ತನಿಲ್ಲೆಯೋ,

ತಂ – ಅದರ, ದುಃಖ-ಸಂಯೋಗ-ವಿಯೋಗಮ್ – ಭೌತಿಕಸಂಪರ್ಕದ ಕ್ಲೇಶಂಗಳ ನಿರ್ಮೂಲನವ, ಯೋಗ-ಸಂಜ್ಞಿತಮ್ – ಯೋಗಲ್ಲಿ ಸಮಾಧಿ ಹೇಳಿ ಕರೆಯಲ್ಪಟ್ಟದು ಹೇದು, ವಿದ್ಯಾತ್ – ನೀನು ತಿಳ್ಕೊಳ್ಳೆಕು, ಸಃ ಯೋಗಃ – ಆ ಯೋಗಪದ್ಧತಿಯು, ಅನಿರ್ವಿಣ್ಣ-ಚೇತಸಾ – ವಿಚಲತೆಯಿಲ್ಲದ್ದೆ,  ನಿಶ್ಚಯೇನ – ದೃಢನಿರ್ಧಾರಂದ, ಯೋಕ್ತವ್ಯಃ – ಅಭ್ಯಾಸಮಾಡಲ್ಪಡೆಕು.

ಅನ್ವಯಾರ್ಥ

ಯೋಗಸೇವೆಯ ಬಲಂದ ಸ್ವಾಧೀನವಾದ ಚಿತ್ತಕ್ಕೆ ಎಲ್ಲಿ ಪ್ರಶಾಂತಿ ದೊರಕುತ್ತೋ, ಶುದ್ಧಾಂತಃಕರಣಲ್ಲಿ ಆತ್ಮವ ದರುಶನ ಮಾಡಿ, ಯೋಗಿಯು ಯಾವ ಸ್ಥಿತಿಲಿ ಸಂತೃಪ್ತಿಯ ಪಡೆತ್ತನೋ, ಉತ್ತಮೋತ್ತಮ ಸುಖವು ಯಾವುದೋ, ಯಾವುದು ಇಂದ್ರಿಯಂಗೊಕ್ಕೆ ಅಗೋಚರವಾಗಿದ್ದರೂ ಶುದ್ಧಬುದ್ಧಿಗೆ ಗ್ರಾಹ್ಯ ಆವುತ್ತೋ, ಯಾವ ಸ್ಥಾನಲ್ಲಿ ಸೇರಿರೆ ಪುನಃ ಚಲನ ಇರುತ್ತಿಲ್ಯೋ, ಯಾವುದಕ್ಕಿಂತ ಹೆಚ್ಚಿನ ಲಾಭ ಬೇರೆ ಇನ್ನೊಂದು ಇಲ್ಲೆಯೋ, ಯಾವುದರ ಹೊಂದಿದವಂಗೆ ದುಃಖಸ್ಪರ್ಶ ಆವುತ್ತಿಲ್ಯೋ, ದುಃಖ, ಕಷ್ಟದ ಪರಿಧಿಗೆ ಯಾವುದು ದೂರವಾಗಿರ್ತೋ, ಅದರ ಯೋಗ ಹೇದು ಹೇಳುವದು. ಅಂತಹ ಯೋಗವ ದೃಢವಾದ ಸಹನೆಂದ ನೀನು ಆಚರುಸೆಕು. 

ಇದರ ಇನ್ನೊಂದು ರೀತಿಲಿ ಹೇಳುವದಾದರೆ – ಯೋಗಾಭ್ಯಾಸಂದ ನಿಗ್ರಹಿಸಲ್ಪಟ್ಟ ಮನಸ್ಸು ತನ್ನಲ್ಲೇ ಆತ್ಮದರ್ಶನ ಮಾಡಿಗೊಂಡು ಆನಂದಗೊಳ್ಳುತ್ತು. ಹೀಂಗೆ ಇಂದ್ರಿಯಾತೀತವಾದ ಪರಮಾನಂದವ ಅನುಭವುಸುವ ಮನುಷ್ಯನ ಮನಸ್ಸು ಮತ್ತೆ ಚಂಚಲಗೊಳ್ಳುತ್ತಿಲ್ಲೆ. ಅಂತಹ ಪರಮಾನಂದವ ಗಳುಸಿದ ಮತ್ತೆ ಅದಕ್ಕಿಂತ ಉತ್ತಮವಾದ್ದು ಬೇರೆ ಎಂತದೂ ಇಲ್ಲೆ ಹೇಳಿ ತಿಳಿತ್ತ°. ಇಂತಹ ಸ್ಥಿತಿಲಿಪ್ಪವವನ ಎಂತಹ ದುಃಖಂಗಳೂ ಆವರುಸುತ್ತಿಲ್ಲೆ, ಚಂಚಲಗೊಳುಸುತ್ತಿಲ್ಲೆ. ಹೀಂಗೆ, ದುಃಖಂದ ಕೂಡಿದ ಮನಸ್ಸಿನ ಬಿಡುಗಡೆಗೊಳುಸುವದು ‘ಯೋಗ’ ಹೇಳಿ ತಿಳುಕ್ಕೊ. ಶುದ್ಧಮನಸ್ಕನಾಗಿ ಈ ಕ್ರಮದ ಯೋಗಕ್ಕೆ ನೀನು ಪ್ರಯತ್ನುಸು.

ತಾತ್ಪರ್ಯ/ವಿವರಣೆ 

‘ಸಮಾಧಿ’ ಹೇಳಿ ಹೇಳುವ ಪರಿಪೂರ್ಣತೆಯ ಹಂತಲ್ಲಿ ಮನಸ್ಸು ಯೋಗಾಭ್ಯಾಸಂದ ಇಹಲೋಕದ ಮಾನಸಿಕ ಚಟುವಟಿಕೆಗಳಲ್ಲಿ ತೊಡಗದ್ದಾಂಗೆ ನಿರ್ಬಂಧಲ್ಲಿ ಇರುತ್ತು. ಈ ಪರಿಪೂರ್ಣತೆಯ ಲಕ್ಷಣ ಎಂತರ ಹೇದರೆ, ಶುದ್ಧಮನಸ್ಸಿಂದ ಆತ್ಮವ ಕಾಂಬ ಶಕ್ತಿ ಮತ್ತೆ ಆತ್ಮವ ಪ್ರೀತಿಸಿ ಸಂತೋಷಪಡುವ ಶಕ್ತಿ. ಈ ಆನಂದ ಸ್ಥಿತಿಲಿ ಮನುಷ್ಯ° ದಿವ್ಯ ಇಂದ್ರಿಯಂಗಳ ಮೂಲಕ ಸಾಧುಸಿದ ಅಮಿತ ಅಲೌಕಿಕ ಸುಖಲ್ಲಿ ನೆಲೆಯಾಗಿರುತ್ತ°. ಹೀಂಗೆ ನೆಲೆಯಾದವ° ಸತ್ಯವ ಎಂದೂ ಬಿಡುತ್ತನಿಲ್ಲೆ. ಇದರ ಪಡದಮತ್ತೆ ಇದಕ್ಕಿಂತ ಹೆಚ್ಚಿನ ಗಳಿಕೆ (ಲಾಭ) ಬೇರೆ ಇನ್ನೊಂದು ಇಕ್ಕು ಹೇಳಿ ಗ್ರೇಶಲೂ ಇಲ್ಲೆ. ಇಂತಹ ಸ್ಥಾನಲ್ಲಿ ನಿಂದವ ಅತ್ಯಂತ ತೀವ್ರ ಕಷ್ಟಂಗಳಲ್ಲಿಯೂ ವಿಚಲಿತನಾವುತ್ತನಿಲ್ಲೆ. ಐಹಿಕ ಸಂಪರ್ಕಂದ ಉಂಟಪ್ಪ ಎಲ್ಲ ದುಃಖಸಂಕಟಂಗಳಿಂದ ವಾಸ್ತವವಾದ ಸ್ವಾತಂತ್ರ್ಯ ಹೇಳಿರೆ ಇದುವೇ.

ಯೋಗಾಭ್ಯಾಸಂದ ಮನುಷ್ಯ° ಕ್ರಮೇಣ ಐಹಿಕ ಪರಿಕಲ್ಪನೆಗಳಿಂದ ದೂರವಾವುತ್ತ°. ಇದರ ನಂತರ ಮನುಷ್ಯ° ಸಮಾಧಿಸ್ಥಿತಿಗೇರುತ್ತ°. ಹೇಳಿರೆ, ಅಲೌಕಿಕ ಮನಸ್ಸು ಮತ್ತೆ ಬುದ್ಧಿಶಕ್ತಿಂದ ಮನುಷ್ಯ° (ಯೋಗಿ) ಪರಮಾತ್ಮನ ಸಾಕ್ಷಾತ್ಕಾರವ ಪಡೆತ್ತ°. ಇದರಲ್ಲಿ ಆತ್ಮವ ಪರಮಾತ್ಮನೊಂದಿಂಗೆ ಒಂದಾಗಿ ಕಾಣುತ್ತ°.

ಬನ್ನಂಜೆ ಈ ಭಾಗವ ಸೊಗಸಾಗಿ ವ್ಯಾಖ್ಯಾನಿಸಿದ್ದವುಧ್ಯಾನಸಾಧನೆಂದ ಬಿಗಿಗೊಂಡ ಒಳಬಗೆ  (ಮನಸ್ಸು) ಈ ಸ್ಥಿತಿಲಿ ಹೆರಾಣ ವಿಷಯಂಗಳತ್ತ ವಿಚಲಿತ ಆವುತ್ತಿಲ್ಲೆ. ಈ ಸ್ಥಿತಿಲಿ ತನ್ನೊಳಾಣ ಬಗೆಂದ ಭಗವಂತನ ಕಂಡುಗೊಂಡು ಸಂತಸಗೊಳ್ಳುತ್ತ°. ಇಲ್ಲಿ ಇಂದ್ರಿಯಂಗೊಕ್ಕೆ ಸಿಕ್ಕದ್ದ, ಒಳಬಗೆಲಿ ಅರಳುವ ಅತಿಶಯ ಆನಂದವ ಅನುಭವುಸುತ್ತ°. ಈ ಸ್ಥಿತಿಲಿ ನಿಂದವ° ಭಗವಂತನೆಡೆಂದ ಹಂದುತ್ತನಿಲ್ಲೆ. ಇದರ ಪಡದ ಮತ್ತೆ ಇನ್ನೇವದನ್ನೂ ಪಡವ ಆಶೆ ಬತ್ತಿಲ್ಲೆ, ಇದಕ್ಕಿಂತ ಹೆಚ್ಚಿನದ್ದು ಬೇರೇವುದೂ ಅವಂಗೆ ಕಾಣುತ್ತಿಲ್ಲೆ. ಈ ಸ್ಥಿತಿಲಿ ನಿಂದುಗೊಂಡವ° ಎಂಥ ಘೋರ ಸಂಕಟ / ದುಃಖಂಗಳಿಂದಲೂ ಕಂಗೆಡುತ್ತನಿಲ್ಲೆ. ಇದುವೇ ಎಲ್ಲ ದುಗುಡಂಗಳಿಂದ ಬಿಡುಗಡೆಗೊಳುಸುವ ‘ಯೋಗ’. ಬಾಹ್ಯವಿಷಯಂಗಳಿಂದ ಮನಸೋತ ಪ್ರತಿಯೊಬ್ಬನೂ ಇಂತಹ ಯೋಗಪದ್ಧತಿಯ ಬುದ್ಧಿಪೂರ್ವಕವಾಗಿ ಸಂಪೂರ್ಣ ಕೃಷ್ಣಪ್ರಜ್ಞೆಂದ ಆಚರುಸೆಕು. ಹೆರಾಣ ಪ್ರಪಂಚದ ಸಂಪರ್ಕವ ಕಳಕ್ಕೊಂಡ ಮನಸ್ಸು ಭಗವಂತನಲ್ಲಿ ನೆಲೆಸಿಯಪ್ಪಗ ಎಂತಾವ್ತು ಹೇಳ್ವದರ ಭಗವಂತ° ಇಲ್ಲಿ ಹೇಳುತ್ತ° – “ಉಪರಮತೇ ಚಿತ್ತಮ್” – ಉತ್ಕೃಷ್ಟವಾದ ಆ ಆನಂದಲ್ಲೆ ಮನಸ್ಸು ನಿಂದುಬಿಡುತ್ತು. ಆ ಆನಂದದ ಸೆಲೆಂದ ಬೇರೆಯಪ್ಪದೂ ಬೇಡ, ಬೇರೆ ಯಾವುದೂ ಬೇಡ ಎನಿಸುತ್ತು. ಸಾಮಾನ್ಯವಾಗಿ ಸುಲಭವಾಗಿ ಈ ಸ್ಥಿತಿಗೆ ಮನಸ್ಸು ಹೋಗಿ ನೆಲೆಸುತ್ತಿಲ್ಲೆ. ಅದಕ್ಕೆ ಬಹಳ ಪ್ರಯತ್ನ ಬೇಕು. ಪ್ರಯತ್ನ ಒಂದು ಜನ್ಮದ್ದಲ್ಲ, ಅನೇಕ ಜನ್ಮದ ಪ್ರಯತ್ನ ಇಲ್ಲದ್ದೆ ಒಂದರಿಯೇ ಈ ಸ್ಥಿತಿಯ ತಲಪುವದು ಅಸಾಧ್ಯ. ನಿರಂತರ ಯೋಗಾಭ್ಯಾಸದ ಸಾಧನೆಂದ ಚಿತ್ತವೃತ್ತಿಯ ನಿರೋಧ ಮಾಡೆಕು. ಹೇಳಿರೆ, ನಮ್ಮ ಮನಸ್ಸಿನ ಸಂಪೂರ್ಣ ನಿಯಂತ್ರಿಸೆಕು. ಅದು ಎಲ್ಲೂ ಹರಿಯದ್ದ ಹಾಂಗೆ ಭಗವಂತನಲ್ಲೇ ನೆಲೆನಿಂಬ ಹಾಂಗೆ ಮಾಡೆಕು.

ನವಗೆ ಆತ್ಮಸಾಕ್ಷಾತ್ಕಾರ ಆದಪ್ಪಗ ಎಂದೂ ಆಗದ್ದ ಅಪೂರ್ವ ಆನಂದ ಉಂಟಾವುತ್ತು. ಇತು ಅತ್ಯಂತ ಶ್ರೇಷ್ಥವಾದ ಅನುಭವ. ಭಗವಂತನ ಬಗ್ಗೆ ಭಕ್ತನ ಭಕ್ತಿ ಮತ್ತೆ ಭಕ್ತನ ಮೇಲೆ ಭಗವಂತನ ವಾತ್ಸಲ್ಯ ಇವೆರಡೂ ಮೇಳೈಸಿಯಪ್ಪಗ ‘ನಿರ್ಭಯ’. ಒಳಗಣ್ಣಿಂದ ಧ್ಯಾನದ ಸ್ಥಿತಿಲಿ ಅಂತರ್ಯಾಮಿಯಾದ ಭಗವಂತನ ಕಾಂಬದು ಧ್ಯಾನಲ್ಲಿ ಬಪ್ಪ ಅನುಭವ. ಇಲ್ಲಿ ಕಾಂಬದು ಮನಸ್ಸು ಕಡದ ಆ ಭಗವಂತನ ಭವ್ಯ ರೂಪ. ಇದು ಕೇವಲ ಭಗವಂತನ ಪ್ರತೀಕ. ನಾವು ಭಗವಂತನ ನಿಜವಾಗಿ ಕಾಣೆಕ್ಕಾರೆ ಅವ° ನಮ್ಮ ಪ್ರೀತಿಸೆಕು. ಅವ° ನಮ್ಮ ಪ್ರೀತಿಸೆಕ್ಕಾರೆ ನಮ್ಮಲ್ಲಿಪ್ಪ ಅಹಂ ಸಂಪೂರ್ಣ ತೊಲಗೆಕು. ಸರ್ವವೂ ಅವನೇ ಹೇಳುವ ಕೃಷ್ಣಪ್ರಜ್ಞೆ ಮನಸ್ಸಿಂಗೆ ಬುದ್ಧಿಪೂರ್ವಕ ಬರೆಕು. ಭಗವದ್ ಅನುಗ್ರಹ ಆದಪ್ಪಗ ನಮ್ಮ ಸ್ವರೂಪ ಭಗವಂತನ ಕಾಣುತ್ತು. ಇದು ಬಹಳ ಉತ್ಕಟಾವಾದ ಸ್ಥಿತಿ. ಈ ಸ್ಥಿತಿಲಿ ಮನಸ್ಸು ಸಂಪೂರ್ಣ ಸ್ತಬ್ಧವಾಗಿ ನೇರವಾಗಿ ಆತ್ಮಸ್ವರೂಪ ತನ್ನ ಆತ್ಮಸ್ವರೂಪದ ಕಣ್ಣಿಂದ ಭಗವಂತನ ಕಾಣುತ್ತು. ಈ ಸ್ಥಿತಿ ಸಂಪೂರ್ಣ ತೃಪ್ತಿಯ ಕೊಡುತ್ತು. ಇಂದ್ರಿಯಂಗಳಿಂದ ಸಿಕ್ಕುವ ಆನಂದ ‘ಸಾಪೇಕ್ಷ’ ಹೇಳ್ವ ನಿಜ ಸ್ಥಿತಿ ಅರ್ಥವಾವ್ತು. ಈ ಉತ್ಕಟವಾದ ಆನಂದವ ಅನುಭವಿಸಿದ ಮತ್ತೆ ಇನ್ನು ಮತ್ತೆ ಬೇರೆ ಬೇಕು, ಇನ್ನು ಇದು ಬೇಡ ಸಾಕು ಹೇಳ್ವ ಬಯಕೆಗೊ ಇಲ್ಲೆ. ಭಗವಂತನ ಪೂರ್ಣ ಅನುಭವ ಬಂದವ° ಇನ್ನು ಮತ್ತೆ ಯಾವ ಪ್ರಾಪಂಚಿಕ ದುಃಖಂಗಳಿಂದ ವಿಚಲಿತನಾವುತ್ತನಿಲ್ಲೆ. ಇದು ಮಾನವ ಜೀವನಲ್ಲಿ ಪಡೆವಲೆಡಿಗಾವ್ತಾಂಗಿಪ್ಪ ಅತೀ ಎತ್ತರದ ಸ್ಥಿತಿ. ನಾವು ನಿಜವಾದ ಆನಂದವ ಕಾಣೆಕ್ಕಾರೆ ಆ ಸ್ಥಿತಿಯ ತಲುಪೆಕು.

ಶ್ಲೋಕ

ಸಂಕಲ್ಪಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನಶೇಷತಃ ।
ಮನಸೈವೇಂದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ॥೨೪॥

ಶನೈಃ ಶನೈರುಪರಮೇದ್ ಬುದ್ಧ್ಯಾ ದೃತಿಗೃಹೀತಯಾ ।
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ॥೨೫॥

ಪದವಿಭಾಗ

ಸಂಕಲ್ಪ-ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ । ಮನಸಾ ಏವ ಇಂದ್ರಿಯ-ಗ್ರಾಮಮ್ ವಿನಿಯಮ್ಯ ಸಮಂತತಃ ॥

ಶನೈಃ ಶನೈಃ ಉಪರಮೇತ್ ಬುದ್ಧ್ಯಾ ಧೃತಿ-ಗೃಹೀತಯಾ । ಆತ್ಮ-ಸಂಸ್ಥಮ್ ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್ ॥

ಅನ್ವಯ

ಸಂಕಲ್ಪ-ಪ್ರಭವಾನ್ ಸರ್ವಾನ್ ಕಾಮಾನ್ ಅಶೇಷತಃ ತ್ಯಕ್ತ್ವಾ, ಮನಸಾ ಏವ ಇಂದ್ರಿಯ-ಗ್ರಾಮಂ ಸಮಂತತಃ ವಿನಿಯಮ್ಯ ॥

ಧೃತಿ-ಗೃಹೀತಯಾ ಬುದ್ಧ್ಯಾ ಶನೈಃ ಶನೈಃ ಉಪರಮೇತ್, ಮನಃ ಆತ್ಮ-ಸಂಸ್ಥಮ್ ಕೃತ್ವಾ, ಕಿಂಚಿತ್ ಅಪಿ ನ ಚಿಂತಯೇತ್ ॥

ಪ್ರತಿಪದಾರ್ಥ

ಸಂಕಲ್ಪ-ಪ್ರಭವಾನ್ – ಊಹಾತ್ಮಕ ಚಿಂತನೆಗಳಿಂದ ಹುಟ್ಟಿದ, ಸರ್ವಾನ್ – ಎಲ್ಲವುಗಳ, ಕಾಮಾನ್ – ಭೌತಿಕ ಅಪೇಕ್ಷೆಗಳ, ಅಶೇಷತಃ – ಸಂಪೂರ್ಣವಾಗಿ (ಅಶೇಷವಾಗಿ , ಶೇಷರಹಿತವಾಗಿ), ತ್ಯಕ್ತ್ವಾ – ತ್ಯಜಿಸಿ, ಮನಸಾ – ಮನಸ್ಸಿಂದ, ಏವ – ಕೂಡ (ಖಂಡಿತವಾಗಿಯೂ), ಇಂದ್ರಿಯ-ಗ್ರಾಮಮ್ – ಇಂದ್ರಿಯಂಗಳ ಸಮೂಹವ, ಸಮಂತತಃ – ಎಲ್ಲ ಕಡೆಂದಲೂ (ಎಲ್ಲ ಬಗೆಲಿಯೂ), ವಿನಿಯಮ್ಯ – ನಿಯಂತ್ರಿಸಿಗೊಂಡು,

ಧೃತಿ-ಗೃಹೀತಯಾ – ಧೃಢನಿರ್ಧಾರಂದ, ಬುದ್ಧ್ಯಾ – ಬುದ್ಧಿಂದ, ಶನೈಃ ಶನೈಃ – ಮೆಲ್ಲ ಮೆಲ್ಲಂಗೆ (ಕ್ರಮೇಣವಾಗಿ, ಹಂತಹಂತವಾಗಿ), ಉಪರಮೇತ್ – ತಡೆಗಟ್ಟೆಕು (ನಿಯಂತ್ರಿಸೆಕು), ಮನಃ – ಮನಸ್ಸಿನ, ಆತ್ಮ-ಸಂಸ್ಥಂ – ದಿವ್ಯತೆಲಿ ಇರಿಸಿದ್ದನ್ನಾಗಿ, ಕೃತ್ವಾ – ಮಾಡಿ, ಕಿಂಚಿತ್ ಅಪಿ – ಬೇರೆಯಾವುದನ್ನೂ ಕೂಡ, ನ ಚಿಂತಯೇತ್ – ಚಿಂತಿಸಲೆ ಆಗ.

ಅನ್ವಯಾರ್ಥ

ಊಹಾತ್ಮಕ ಚಿಂತನೆಂಗಳಿಂದ ಉಂಟಪ್ಪ ಎಲ್ಲ ಕಾಮನೆಗಳ ಪೂರ್ಣವಾಗಿ ಬಿಟ್ಟು, ಮನಸ್ಸಿನ ಮೂಲಕ ಇಂದ್ರಿಯಂಗಳನ್ನೂ ನಿಯಂತ್ರಿಸಿಗೊಂಡು, ಮೆಲ್ಲಮೆಲ್ಲಂಗೆ (ಕ್ರಮೇಣವಾಗಿ/ಹಂತಹಂತವಾಗಿ) ಮನಸ್ಸಿನ ಸ್ಥಿರಬುದ್ಧಿಯ ಆತ್ಮಲ್ಲಿ ನೆಟ್ಟು ಮತ್ತೆ ಬೇರೆ ಯಾವುದೇ ಚಿಂತನೆಗೊ ಮನಸ್ಸಿಂಗೆ ಬಾರದ್ದಾಂಗೆ ಮಾಡಿಗೊಳ್ಳೆಕು.

ತಾತ್ಪರ್ಯ/ವಿವರಣೆ

ಯೋಗಾಭ್ಯಾಸವ ದೃಢಸಂಕಲ್ಪಂದ ಮತ್ತು ಸಂಪೂರ್ಣ ಶ್ರದ್ಧೆಂದ ತೊಡಗೆಕು. ಈ ದಾರಿಗೆ ಬಂದಮತ್ತೆ ಮನಸ್ಸು ಬೇರೆ ದಿಕ್ಕೆ ಹರಿವಲೆ ಬಿಡ್ಳಾಗ. ಊಹಾತ್ಮಕ ಚಿಂತನೆಂದ ಹುಟ್ಟಿದ ಬಯಕೆಗಳಲ್ಲಿ ಒಂದನ್ನೂ ಬಿಡದ್ದೆ ದೂರಮಾಡೆಕು. ಹೀಂಗೆ ಎಲ್ಲ ದಿಕ್ಕಿಂದಲೂ ಇಂದ್ರಿಯಂಗಳ ನಿಯಂತ್ರಣ ಮಾಡೆಕು. ಕ್ರಮಕ್ರಮವಾಗಿ, ಹೆಜ್ಜೆಹೆಜ್ಜೆಯಾಗಿ, ಸಂಪೂರ್ಣ ಸ್ಥೈರ್ಯವ ಆಧಾರಮಾಡಿಗೊಂಡ ಬುದ್ಧಿಶಕ್ತಿಯ ಮೂಲಕ ಮನುಷ್ಯ° ಸಮಾಧಿಸ್ಥಿತಿಲಿ ನಿಲ್ಲೆಕು. ಹೀಂಗೆ ಮನಸ್ಸನ್ನೂ ಆತ್ಮಲ್ಲಿಯೇ ಸ್ಥಿರವಾಗಿ ನಿಲ್ಲುಸೆಕು. ಬೇರೇನನ್ನೂ ಯೋಚಿಸಲಾಗ. ಯೋಗಾಭ್ಯಾಸಿಯು ಮದಾಲು ಅದಕ್ಕೆ ದೃಢಸಂಕಲ್ಪಮಾಡಿರೆಕು, ಅದರಿಂದ ಮತ್ತೆ ವಿಚಲಿತನಾಗದ್ದೆ ತಾಳ್ಮೆಂದ ಅಭ್ಯಾಸವ ಮುಂದುವರುಸೆಕು. ಕಡೇಂಗೆ ಯಶಸ್ಸು ಸಿಕ್ಕಿಯೇ ಸಿಕ್ಕುತ್ತು ಹೇಳ್ವ ದೃಢನಂಬಿಕೆ ಇರೆಕು. ಯಶಸ್ಸಿನ ಹಾದಿಲಿ ವಿಳಂಬ ಆದರೂ ಧೈರ್ಯಗೆಡದ್ದೆ ಅದೇ ದಾರಿಲಿ ವಿಶೇಷ ಅಭ್ಯಾಸಂದ ಮುಂದುವರಿಯೆಕು. ಇದನ್ನೇ ನಿರಂತರ ಪ್ರಯತ್ನ ಹೇಳುವದು. ಕೃಷ್ಣಪ್ರಜ್ಞೆಯುಕ್ತವಾದ ಯೋಗಾಭ್ಯಾಸ ಬಹುಕಠಿಣ ಕೆಲಸ. ಆದರೆ ಬುದ್ಧಿಪೂರ್ವಕ ದೃಢಸಂಕಲ್ಪಂದ ತತ್ವಂಗಳ ಅನುಸರಿಸಿರೆ ನಿಶ್ಚಯವಾಗಿಯೂ ಭಗವಂತ ಸಕಾಯ ಮಾಡುತ್ತ° ಹೇಳ್ವ ದೃಢವಿಶ್ವಾಸವೂ ಇರೆಕು. ಸೂಕ್ತವಾದ ದೃಢನಂಬಿಕೆ ಮತ್ತೆ ಬುದ್ಧಿಶಕ್ತಿಗಳ ಮೂಲಕ ಮನುಷ್ಯ° ಹಂತಹಂತವಾಗಿ ಇಂದ್ರಿಯಕಾರ್ಯಂಗಳ ನಿಲ್ಲುಸೆಕು. ಇದಕ್ಕೆ ‘ಪ್ರತ್ಯಾಹಾರ’ ಹೇಳಿ ಹೆಸರು. ದೃಢನಂಬಿಕೆ, ಧ್ಯಾನ ಮತ್ತೆ ಇಂದ್ರಿಯಂಗಳ ಕಾರ್ಯಂಗಳ ಕೊನೆಗಾಣುಸುವದರಿಂದ ನಿಯಂತ್ರಿತವಾದ ಮನಸ್ಸಿನ ಸಮಾಧಿ ಸ್ಥಿತಿಲಿ ನೆಲೆಗೊಳುಸೆಕು. ಅಷ್ಟಪ್ಪಗ, ಬದುಕಿನ ಐಹಿಕ ಪರಿಕಲ್ಪನೆಲಿ ಮನಸ್ಸು ತೊಡಗುವ ಅಪಾಯ ಇರ್ತಿಲ್ಲೆ. ಐಹಿಕ ದೇಹ ಇಪ್ಪನ್ನಾರವೂ ಮನುಷ್ಯಂಗೆ ಜಡವಸ್ತುಗಳೊಟ್ಟಿಂಗೆ ಸಂಬಂಧ ಹೊಂದಿದ್ದರೂ ಇಂದ್ರಿಯ ತೃಪ್ತಿಯ ವಿಷಯವ ಯೋಚಿಸಲೇ ಆಗ. ಪರಮಾತ್ಮನ ಆನಂದವ ಬಿಟ್ಟು ಬೇರೆ ಯಾವ ಸಂತೋಷದ ಬಗ್ಗೆಯೂ ಯೋಚಿಸಲಾಗ. ನೇರವಾಗಿ ಕೃಷ್ಣಪ್ರಜ್ಞೆಂದ ಅಭ್ಯಾಸಮಾಡುವದರ ಮೂಲಕ ಸುಲಭವಾಗಿ ಈ ಸ್ಥಿತಿಯ ತಲುಪಲಕ್ಕು.

ಬನ್ನಂಜೆಯ ವ್ಯಾಖ್ಯಾನಲ್ಲಿ ಉಲ್ಲೇಖಿಸಿಪ್ಪಂತೆ ಮನಸ್ಸಿನ ಭಗವಂತನಲ್ಲಿ ನೆಲೆಗೊಳುಸುವ ವಿಧಾನವ ಭಗವಂತ° ಇಲ್ಲಿ ಹೇಳಿದ್ದ° –
ಸಂಕಲ್ಪ-ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ..”. ನಮ್ಮ ಎಲ್ಲ ಸಮಸ್ಯೆಗಳ ಮೂಲ ನಮ್ಮ ಸಂಕಲ್ಪಂಗೊ. ಸಂಕಲ್ಪ ಹೇದರೆ ಮುಂದೆ ಏನೇನು ಮಾಡೆಕು ಹೇಳಿ ಮನಸ್ಸಿಲ್ಲಿ ತೀರ್ಮಾನ ಮಾಡುವದು. ನಾವು ಯಾವುದೇ ಒಂದು ತೀರ್ಮಾನ ಅಂತಿಮವಾಗಿ ತೆಕ್ಕಂಬಂದ ಮದಲು ಅದರ ನಾವು ಮನಸ್ಸಿಲ್ಲಿ ಗಟ್ಟಿಗೆ ತೀರ್ಮಾನ ಮಾಡುತ್ತು. ಇಂದು ಇಂತಲ್ಲ್ಯಂಗೆ ಹೋಯೇಕು, ಇಂತವರ ಭೇಟಿಯಾಯೆಕು, ಇಂತ ಕೆಲಸ ಮಾಡೆಕು, ಇಂತದ್ದರ ತೆಕ್ಕೊಳ್ಳೆಕು ಇತ್ಯಾದಿ ವೇಳಾಪಟ್ಟಿ ನಮ್ಮ ಮನಸ್ಸಿಲ್ಲಿ ಸುರುವಿಂಗೆ ನೆಟ್ಟಿರುತ್ತು. ಈ ರೀತಿ ಸಾವಿರ ಸಂಕಲ್ಪಂಗೊ, ಅದರ ಈಡೇರುಸಲೆ ಸಾವಿರ ಬಯಕೆಗೊ. ಹೀಂಗೆ ಮಾಡೆಕು ಹೀಂಗೆ ಆಯೆಕು ಹೇಳ್ವ ಆಸೆಗೊ. ಬದುಕು ಹೇಳಿರೆ ನಾವು ನಮ್ಮ ಮನಸ್ಸಿಲ್ಲಿ ಕಲ್ಪಿಸಿಗೊಂಡ ಬದುಕಿನ ರೂಪುರೇಷೆಯ ಬಾಹ್ಯಪ್ರಪಂಚಲ್ಲಿ ಸಾಕಾರಗೊಳುಸುವ ಪ್ರಯತ್ನ. ಹೀಂಗೆ ಸಾವಿರಾರು ಸಂಕಲ್ಪ ಮತ್ತೆ ಕಾಮನೆಯ ಮನಸ್ಸಿಲ್ಲಿ ತುಂಬಿಗೊಂಡು ಹೋದರೆ ಮನಸ್ಸಿಂಗೆ ಅದರ ಬಿಟ್ಟು ಅದರಿಂದಾಚಿಗಾಣದ್ದರ ಯೋಚಿಸಲೆ ಅವಕಾಶವೇ ಇಲ್ಲದಾವುತ್ತು. ಮನಸ್ಸು ಹೇಳಿರೆ ಬರೀ ಸಂಕಲ್ಪ-ವಿಕಲ್ಪ. ಏನೇಣೊ ಕನಸು ಕಟ್ಟುವದು (ಸಂಕಲ್ಪ), ಮಾಡೆಕೋ, ಬೇಡದೋ, ಯಶಸ್ವಿ ಅಕ್ಕೋ ಆಗದೋ (ವಿಕಲ್ಪ) ಹೇಳಿ ಯೋಚಿಸಿಗೊಂಡು ಮತ್ತೆ ಗೊಂದಲಲ್ಲಿ ಸಿಲುಕಿಗೊಂಬದು . ಇದರಿಂದಾಚಿಗೆ ಹೋಪ ಯೋಚನಗೇ ಮನಸ್ಸು ಹೆರಡುತ್ತಿಲ್ಲೆ. ಹಾಂಗಾಗಿ ಭಗವಂತ° ಇಲ್ಲಿ ಹೇಳುತ್ತ° – ಸಂಕಲ್ಪ-ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ” – ಮದಾಲು ನಿನ್ನ ಮನಸ್ಸಿಲ್ಲಿಪ್ಪ ಎಲ್ಲ ವಿಧವಾದ ಸಂಕಲ್ಪಂಗಳ ಬಿಡು. ಆ ಸಂಕಲ್ಪಂಗೊ ತಿರುಕನ ಕನಸಿನ ಹಾಂಗೆ. ಎಷ್ಟು ಹೆಚ್ಚು ಸಂಕಲ್ಪಂಗೊ ನಮ್ಮ ಮನಸ್ಸಿಂಗೆ ಬತ್ತೋ ಅಷ್ಟೇ ಹೆಚ್ಚು ಹತಾಶೆಗಳೂ ಬಪ್ಪದು, ಅದರಿಂದ ವ್ಯಾಕುಲತೆ. ಮತ್ತೆ ಎಂತರನ್ನೂ ಯೋಚುಸಲೆ ವ್ಯವಧಾನ ಇರ್ತಿಲ್ಲೆ. ಬಯಕೆ ಮನಸ್ಸಿನ ಸಹಜ ಗುಣ. ಬಯಸದ್ದೆ ಬದುಕಿಲ್ಲೆ. ಹಾಂಗಾಗಿ ‘ಎಂತ ಬತ್ತೋ ಅದು ಬರಲಿ’ ಹೇದು ಬಯಸುವದರ ಕಲ್ತು ನಮ್ಮ ಇತರ ಸಂಕಲ್ಪವಿಕಲ್ಪವ ಬಿಟ್ಟುಬಿಡೆಕು. ಇದು ಯಶಸ್ಸಿನ ಸೂತ್ರ. ಬಯಸ್ಸಿದ್ದು ಸಿಕ್ಕುತ್ತಿಲ್ಲೆ, ಬಯಸಿದಂತೆ ಆವುತ್ತಿಲ್ಲೆ ಹೇಳಿ ಆದಮತ್ತೆ, ಅನಗತ್ಯ ಆ ಕನಸಿನ ಗೋಪುರವ ಕಟ್ಟುವದರಲ್ಲಿ ಯೇವ ಅರ್ಥವೂ ಇಲ್ಲೆ. ನಮ್ಮ ಸಂಕಲ್ಪ ಕೇವಲ ಒಂದೇ ಒಂದು – ” ಭಗವಂತನ ಸಂಕಲ್ಪ ಹೇಂಗೋ ಹಾಂಗೆ” ಹೇಳಿ ಇರೆಕು.  “ನಿನ್ನ ಪಾಲಿನ ಕರ್ಮವ ಮಾಡು, ಹರಿಯ ಚರಣದ ಅರಿವ ತಪ್ಪದೆ ಮಾಡು. ತಾನು ತನ್ನದು ಹೇಳ್ವ ಸಂಕಲ್ಪ ಬೇಡ. ಭಗವಂತನ ಇಚ್ಛೆಯೇ ಎನ್ನ ಇಚ್ಛೆಯಾಗಲಿ, ಅವನ ಕಾಮನೆಯೇ ಎನ್ನ ಕಾಮನೆಯಾಗಲಿ. ಅದರಿಂದ ಎನ್ನ ಕಾಮನೆ ಭಗವಂತನ ಕಾಮನೆಲಿ ಶೃತಿಗೂಡಲಿ” – ಈ ರೀತಿ ಮನಸ್ಸಿನ ಸಂಕಲ್ಪ ಆಗಿರೆಕು. ಹಾಂಗಾದಪ್ಪಗ ಮತ್ತೆ ಅಪಸ್ವರಕ್ಕೆ ಆಸ್ಪದ ಇಲ್ಲೆ. ನಮ್ಮ ಬಯಕೆ ಭಗವಂತನ ಇಚ್ಛೆಗೆ ಅನುರಣನವಾದಪ್ಪಗ ಬಾಳಿನ ಸಂಗೀತಲ್ಲಿ ಮಾಧುರ್ಯ ನಿರ್ಮಾಣ ಆವುತ್ತು. ಭಗವಂತ° ಹೇಳುತ್ತ°- ಸರ್ವಾನ್ ಅಶೇಷತಃ”, ಹೇಳಿರೆ.,  ನಿನ್ನೆಲ್ಲ ಸಂಕಲ್ಪವ ಪೂರ್ಣವಾಗಿ (ಅಶೇಷವಾಗಿ)ಬಿಟ್ಟುಬಿಡು. ಭಗವಂತನ ಇಚ್ಛಗೆ ವಿರುದ್ಧವಾದ ಒಂದು ಸಂಕಲ್ಪವೂ ನಮ್ಮದಪ್ಪಲಾಗ. ‘ಭಗವಂತ° ಏನ ಬಯಸಿದನೋ ಅದೇ ಎನ್ನ ಸಂಕಲ್ಪ’ ಹೇಳಿ ಒಬ್ಬ ಯೋಗಿ ಧ್ಯಾನಲ್ಲಿ ತೊಡಗಿಸಿಕೊಳ್ಳೆಕ್ಕಾದ ಏಕೈಕ ಪ್ರಥಮ ಸಂಕಲ್ಪ.

ಸಂಕಲ್ಪ ಎಲ್ಲಿ ಹುಟ್ಟುತ್ತೋ ಅಲ್ಲೇ ಅದರ ತಡೆಕು. ಸಂಕಲ್ಪ ಹುಟ್ಟುದೇ ಮನಸ್ಸಿಂದ. ಹಾಂಗಾಗಿ ನಾವು ನಮ್ಮ ಮನಸ್ಸಿಂಗೆ ನಿರಂತರ ಈ ರೀತಿ ಹೇಳೆಕು – “ನೀನು ಮರ್ಳು ಸಂಕಲ್ಪ ಮಾಡೆಡ, ಮಾಡಿರೆ ಅದು ನಿನಗೆ ದಕ್ಕ, ಮತ್ತೆ ಸಿಕ್ಕಿದ್ದಿಲ್ಲೇಳಿ ಚಡಪಡುಸೆಕ್ಕಕ್ಕು, ಹಾಂಗಾಗಿ ಈ ಬೆಗುಡು ಸಂಕಲ್ಪಂಗಳ ಬಿಡು”. ಈ ರೀತಿ ಮನಸ್ಸಿಂಗೆ ನಿರಂತರ (auto suggestion) ಅದರ ಪಳಗಿಸೆಕು. ಸಾಧಕನ ದಾರಿ ತಪ್ಪುಸುವದೂ ಮನಸ್ಸು. ದಾರಿ ಹೆಚ್ಚುಸುವದೂ ಮನಸ್ಸು. ಹಾಂಗಾಗಿ ನಿರಂತರ ಬೋಧನೆ ಮನಸ್ಸಿಂಗೆ ಮಾಡುತ್ತ ಇದ್ದರೆ ಅಖೇರಿಗೆ ಅದರ ಮನಸ್ಸು ಒಪ್ಪಿಗೊಳ್ಳುತ್ತು. ನಾವು ನಮ್ಮ ಮರ್ಳು ಸಂಕಲ್ಪವ ಬಿಡೆಕ್ಕಾರೆ ಮದಾಲು ನಮ್ಮ ಇಂದ್ರಿಯಸಮುದಾಯವ (ಇಂದ್ರಿಯ-ಗ್ರಾಮಂ) ಹಿಡಿತಲ್ಲಿ ಮಡುಗೆಕು. ಇದಕ್ಕಾಗಿ ನಮ್ಮಲ್ಲಿ ಸಣ್ಣದಾಗಿಪ್ಪಂದಲೇ ಆಧ್ಯಾತ್ಮಿಕ ಸಂಸ್ಕಾರವ ಕಲುಶೆಕು. ಸಣ್ಣದಿಪ್ಪಗಳೇ ನಮ್ಮಲ್ಲಿ ರೂಢಿಗೆ ಬಂತುಹೇಳಿಯಾದರೆ ಮತ್ತೆ ಅದು ಪಕ್ಕಕ್ಕೆ ಬಿಟ್ಟುಹೋಪಲಿಲ್ಲೆ. ಮತ್ತೆ ಇದಕ್ಕೆ ನಿರಂತರ ಅದೇ ಬೋಧನೆ (feeding) ಆವ್ತಾ ಇರೆಕು. ಮನಸ್ಸಿನ ಜಾರಲೂ ಬಿಡ್ಳಾಗ. ಎಲ್ಲ ಹುಸಿಸಂಕಲ್ಪಂಗಳ ತ್ಯಾಗಮಾಡಿ ಭಗವಂತ ಒದಗಿಸಿಕೊಟ್ಟದ್ದರ ಭಗವದ್ ಪ್ರಸಾದ ಹೇದು ಸ್ವೀಕರುಸೆಕು. ಸಂತೋಷವಾಗಿ ಅದರ ಅನುಭೋಗುಸೆಕು. ಇಲ್ಲದ್ದರ ಬೇಕು ಹೇಳಿ ಬಯಸಿ ಕೊರಗಲಾಗ.

ಈ ವಿಷಯ ಕೇಳಿ ಒಮ್ಮಿಂದೊಮ್ಮೆಲೆ ಎಲ್ಲವನ್ನೂ ಬಿಟ್ಟು ಈ ಸ್ಥಿತಿಗೆ ತಲಪುವ ಸಾಹಸಕ್ಕೆ ಇಳಿವಲೆ ಎಡಿಯ. ಹಾಂಗೆ ಮಾಡಿರೆ ಎಂದೂ ಯಶಸ್ಸು ಸಿಕ್ಕಲೆ ಇಲ್ಲೆ. ಭಗವಂತ ಹೇಳುತ್ತ° – “ಶನೈಃ ಶನೈಃ ಉಪರಮೇತ್ ಬುದ್ಧ್ಯಾ ಧೃತಿ-ಗೃಹೀತಯಾ”. ಮೆಲ್ಲಮೆಲ್ಲಂಗೆ ಹಂತಹಂತವಾಗಿ ದೃಢನಿರ್ಧಾರಂದ ಮನಸ್ಸಿನ ತಡೆಗಟ್ಟುತ್ತಾ ಬರೆಕು. “ಆತ್ಮ-ಸಂಸ್ಥಂ ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್”, ಮನಸ್ಸಿನ ಸ್ಥಿರಬುದ್ಧಿಯ ಆತ್ಮಲ್ಲಿ ನೆಟ್ಟು ಮತ್ತೆ ಬೇರೆಯಾವುದನೂ ಚಿಂತುಸಲಾಗ. ಇದು ಕೇವಲ ನಿರಂತರ ಸಾಧನೆಂದ (ಜನ್ಮಜನ್ಮಾಂತರ ಸಾಧನೆಂದ) ಮಾತ್ರ ಆ ಆನಂದವ ಪಡವಲೆ ಎಡಿಗಪ್ಪ ಕಾರ್ಯ. ಇದರ ಪಡದವಂಗೆ ಜೀವನಲ್ಲಿ ಮತ್ತೆ ಎಂತದೂ ಬೇಕಾವುತ್ತಿಲ್ಲೆ. ಹಾಂಗಾಗಿ ಐಹಿಕ ಜೀವನದ ಸುಖವ ಅನುಭವಿಸಿ. ಪ್ರಾಪಂಚಿಕ ಸುಖ ಸಾಕು ಹೇಳಿ ಕಂಡಪ್ಪಗ ಆಧ್ಯಾತ್ಮದ ಆಳಕ್ಕೆ ಇಳಿವ ಪ್ರಯತ್ನ ಮಾಡೆಕು. ಮೆಲ್ಲ-ಮೆಲ್ಲನೆ ಆ ಉತ್ಕೃಷ್ಟ ಆನಂದಕ್ಕೆ ಮನಸ್ಸಿನ ತಿರುಗೆಸು. ಇದಕ್ಕೆ ನಮ್ಮ “ವಿಶ್ಲೇಷಕ ಬುದ್ಧಿಯ” ಸರಿಯಾಗಿ ಬಳಸೆಕು. ಇದಕ್ಕೆ ಛಲ ಬೇಕು, ಧೈರ್ಯ ಬೇಕು. ‘ಗುರಿಮುಟ್ಟುವ ತನಕ ವಿಚಲಿತನಾಗೆ’ ಹೇಳ್ವ ದೃಢಸಂಕಲ್ಪ (ದೃಢಬುದ್ಧಿ) ಇರೆಕು. ಹೀಂಗೆ ತರ್ಕವ ಮೀರಿ ತರ್ಕಾತೀತ ಭಗವಂತನ ಮನಸ್ಸಿಲ್ಲಿ ಅಣಿಗೊಳುಸೆಕು. ಮನಸ್ಸು ಮದಾಲು ನಮ್ಮ ಸ್ವರೂಪವ ಗುರುತಿಸಿ ಅಲ್ಲಿ ನಿಂದುಗೊಂಡು ಮತ್ತೆ ಸ್ವರೂಪಲ್ಲಿಪ್ಪ ಭಗವಂತನಲ್ಲಿ ನೆಲೆನೆಲ್ಲೆಕು. ಒಂದರಿ ಈ ಸ್ಥಿತಿಲಿ ನೆಲೆನಿಂದ ಮತ್ತೆ ಮನಸ್ಸಿನ ಮತ್ತೆ ಬೇರೆ ಯೇವುದೇ ಚಿಂತನೆಗೆ ಒಡ್ಡದ್ದೆ ಅದರ ಅಲ್ಲಿಯೇ ನೆಲೆಗೊಳುಸೆಕು.

ಶ್ಲೋಕ

ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ ।
ತತಸ್ತತೋ ನಿಯಮ್ಯೇತದ್ ಆತ್ಮನ್ಯೇವ ವಶಂ ನಯೇತ್ ॥೨೬॥

ಪದವಿಭಾಗ

ಯತಃ ಯತಃ ನಿಶ್ಚರತಿ ಮನಃ ಚಂಚಲಮ್ ಅಸ್ಥಿರಮ್ । ತತಃ ತತಃ ನಿಯಮ್ಯ ಏತತ್ ಆತ್ಮನಿ ಏವ ವಶಮ್ ನಯೇತ್ ॥

ಅನ್ವಯ

ಚಂಚಲಮ್ ಅಸ್ಥಿರಂ ಮನಃ ಯತಃ ಯತಃ ನಿಶ್ಚರತಿ, ತತಃ ತತಃ ಏತತ್ ನಿಯಮ್ಯ ಆತ್ಮನಿ ಏವ ವಶಂ ನಯೇತ್ ॥

ಪ್ರತಿಪದಾರ್ಥ

ಚಂಚಲಮ್ – ಚಂಚಲವಾದ, ಅಸ್ಥಿರಮ್ – ಅಸ್ಥಿರವಾದ, ಮನಃ – ಮನಸ್ಸು, ಯತಃ ಯತಃ – ಎಲ್ಲೆಲ್ಲಿ, ನಿಶ್ಚರತಿ – ಉದ್ವಿಗ್ನವಾವುತ್ತೋ, ತತಃ ತತಃ – ಅಲ್ಲಲ್ಲಿಂದ, ಏತತ್ – ಇದರ, ನಿಯಮ್ಯ – ನಿಯಂತ್ರಿಸಿ, ಆತ್ಮನಿ ಏವ – ಆತ್ಮನಲ್ಲಿಯೇ (ಏವ – ಖಂಡಿತವಾಗಿಯೂ), ವಶಂ – ವಶಕ್ಕೆ, ನಯೇತ್ – ಕೊಂಡೋಯೆಕು.

ಅನ್ವಯಾರ್ಥ

ಚಂಚಲವಾದ, ಅಸ್ಥಿರವಾದ ಸ್ವಭಾವದ ದೆಸೆಂದ ಮನಸ್ಸು ಎಲ್ಲೆಲ್ಲಿ ಉದ್ವಿಗ್ನವಾವುತ್ತೋ (ಅಲೆದಾಡುತ್ತೋ), ಮನುಷ್ಯ°, ಅದರ ಅಲ್ಲಲ್ಲಿಂದಲೇ ಹಿಂದಕ್ಕೆ ಎಳದು ಆತ್ಮನ ನಿಯಂತ್ರಣಕ್ಕೆ ಒಳಪಡುಸೆಕು (ಆತ್ಮನ ವಶಕ್ಕೆ ತರೆಕು).

ತಾತ್ಪರ್ಯ/ವಿವರಣೆ

ಮನಸ್ಸಿನ ಸ್ವಾಭಾವಿಕ ಸ್ವಭಾವ ಚಂಚಲವಾದ್ದು ಮತ್ತು ಅಸ್ಥಿರವಾದ್ದು. ಆದರೆ ಆತ್ಮಸಾಕ್ಷಾತ್ಕಾರಕ್ಕಾಗಿ ಯೋಗಿಯಾದವ ಅದರ ನಿಯಂತ್ರಿಸೆಕು. ಅವನ ಮನಸ್ಸು ನಿಯಂತ್ರಿಸುತ್ತಪ್ಪಾಂಗೆ ಅಪ್ಪಲಾಗ. ಸದಾ ಕೃಷ್ಣಪ್ರಜ್ಞೆಲಿಪ್ಪದರಿಂದ ಇದು ಸಾಧ್ಯ. ಇದುವೇ ಯೋಗಾಭ್ಯಾಸದ ಅತ್ಯುನ್ನತ ಪರಿಪೂರ್ಣತೆ. ನಿಜವಾದ ಕೃಷ್ಣಪ್ರಜ್ಞೆಯ ಮೂಲಕ ಯೋಗಾಭ್ಯಾಸಂದ ಮನಸ್ಸು ಮತ್ತು ಇಂದ್ರಿಯಂಗಳ ವಶಕ್ಕೆ (ನಿಯಂತ್ರಣಕ್ಕೆ) ತಪ್ಪಲೆಡಿಗು. ಭಗವಂತ ಹೇಳುತ್ತ° – ಯತಃ ಯತಃ ನಿಶ್ಚರತಿ ಮನಃ” – ಎಲ್ಲೆಲ್ಲಿ ಮನಸ್ಸು ಚಂಚಲಗೊಳ್ಳುತ್ತೋ, ಅಸ್ಥಿರಗೊಳ್ಳುತ್ತೋ,  “ತತಃ ತತಃ ನಿಯಮ್ಯ ಏತತ್ ಆತ್ಮನಿ ಏವ ವಶಂ ನಯೇತ್ ” – ಅಲ್ಲಲ್ಲಿಂದಲೇ ಹಿಡುದು ಆತ್ಮಲ್ಲೇ ಮನಸ್ಸಿನ ಕೇಂದ್ರೀಕರುಸೆಕು, ಅಲ್ಲಲ್ಲಿ ‘ಭಗವಂತ’ನೆಂಬ ತಡೆಯ ಹಾಕಿ ಮನಸ್ಸಿನ ಆ ಭಗವಂತನಲ್ಲೇ ನೆಲೆನಿಂಬಹಾಂಗೆ ಮಾಡೆಕು. ಇದಕ್ಕೆ ನಿರಂತರ ಪ್ರಯತ್ನ ಅಗತ್ಯ.

ಶ್ಲೋಕ

ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ ।
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಶಂ ॥೨೭॥

ಪದವಿಭಾಗ

ಪ್ರಶಾಂತ-ಮನಸಮ್ ಹಿ ಏನಮ್ ಯೋಗಿನಮ್ ಸುಖಮ್ ಉತ್ತಮಮ್ । ಉಪೈತಿ ಶಾಂತಿ-ರಜಸಮ್ ಬ್ರಹ್ಮ-ಭೂತಮ್ ಅಕಲ್ಮಶಮ್ ॥

ಅನ್ವಯ

ಪ್ರಶಾಂತ-ಮನಸಂ ಶಾಂತ-ರಜಸಮ್ ಅಕಲ್ಮಶಂ ಬ್ರಹ್ಮ-ಭೂತಮ್ ಏನಂ ಯೋಗಿನಮ್ ಉತ್ತಮಂ ಸುಖಮ್ ಉಪೈತಿ ಹಿ ॥

ಪ್ರತಿಪದಾರ್ಥ

ಪ್ರಶಾಂತ-ಮನಸಮ್ – ಪ್ರಶಾಂತಯುತ ಮನಸ್ಸುಳ್ಳ (ಭಗವಂತನಲ್ಲೇ ಸಂಪೂರ್ಣ ಮನಸ್ಸಿನ ನೆಟ್ಟುಳ್ಳ), ಶಾಂತ-ರಜಸಮ್ – ರಜೋಗುಣ ಶಾಂತವಾದ, ಅಕಲ್ಮಶಮ್ – ಪೂರ್ವದ ಎಲ್ಲ ಪಾಪಂಗಳಿಂದ ಮುಕ್ತನಾದ, ಬ್ರಹ್ಮ-ಭೂತಮ್ – ಪರಾತ್ಪರನೊಂದಿಂಗೆ ಗುರುತಿಸಿಗೊಂಡು ಮೋಕ್ಷವ ಪಡದ, ಏನಮ್ – ಈ , ಯೋಗಿನಮ್ – ಯೋಗಿಯ (ಯೋಗಿಯ ಮನಸ್ಸು), ಉತ್ತಮಮ್ ಸುಖಮ್ – ಅತ್ಯುತ್ತಮವಾದ ಸುಖವ, ಉಪೈತಿ ಹಿ – ಖಂಡಿತವಾಗಿಯೂ ಹೊಂದುತ್ತು. 

ಅನ್ವಯಾರ್ಥ

(ಭಗವಂತನಲ್ಲಿ ನಿಷ್ಕಲ್ಮಶ ಮನಸ್ಸಿನ ನಿಲ್ಲುಸಿದ ಯೋಗಿಗೆ) ಪ್ರಶಾಂತ ಮನಸ್ಸಿಂದ ರಜೋಗುಣವ ದೂರಮಾಡಿ ಪೂರ್ವಪಾಪಂಗಳಿಂದ ಮುಕ್ತನಾಗಿ ಬ್ರಹ್ಮವೇ ಆಗಿಪ್ಪ ಯೋಗಿಗೆ ಅತ್ಯಂತ ಪರಮಾನಂದ ಖಂಡಿತ ಉಂಟಾವ್ತು.

ತಾತ್ಪರ್ಯ/ವಿವರಣೆ

ಭಗವಂತನಲ್ಲಿ ಮನಸ್ಸ ನಿಲ್ಲುಸಿದ ಯೋಗಿ ನಿಶ್ಚಯವಾಗಿಯೂ ಅಲೌಕಿಕ ಸುಖದ ಅತ್ಯುನ್ನತ ಪರಿಪೂರ್ಣತೆಯ ಮುಟ್ಟುತ್ತ°. ಅವ° ರಜೋಗುಣವ ಮೀರಿದವನಾಗಿರುತ್ತ°. ಅವ° ಪರಮೋನ್ನತದೊಂದಿಂಗೆ ತನ್ನ ಗುಣಾತ್ಮಕ ಏಕತ್ವವ ಸಾಧುಸುತ್ತ. ಹೀಂಗೆ ಅವ° ಹಿಂದಾಣ ಸಕಲಪಾಪಂಗಳಿಂದ ಬಿಡುಗಡೆ ಹೊಂದಿ ಪರಮಾತ್ಮನ ಅಮಿತ ಆನಂದವ ಅನುಭವುಸುತ್ತ°.

ಒಂದರಿ ನಮ್ಮ ಮನಸ್ಸು ಭಗವಂತನಲ್ಲಿ ನೆಲೆನಿಂದರೆ ಗೊಂದಲದ ಗೂಡಾದ ನಮ್ಮ ಮನಸ್ಸು ಅಲ್ಲಿ ಪ್ರಶಾಂತವಾವುತ್ತು. ಇದರ ಸಾಧಿಸಿದವ ಮತ್ತೆ ಎಂತ ಸನ್ನಿವೇಶಲ್ಲಿಯೂ ಉದ್ವೇಗಕ್ಕೆ ಒಳಗಾವುತ್ತನಿಲ್ಲೆ. ಜೀವನಲ್ಲಿ ನಾವು ಅನುಭವುಸೆಕ್ಕಾದ ನಿಜವಾದ ಶ್ರೇಷ್ಠ ಸುಖ ಎಂತದು ಹೇಳ್ವದು ಈ ಸ್ಥಿತಿಲಿ ಗೊಂತಾವುತ್ತು. ಮನಸ್ಸು ಸಾಮಾನ್ಯವಾಗಿ ಬಯಸುವ ರಾಜಸ ಸುಖಲ್ಲಿ ಇಪ್ಪ ನಿರಾಶೆ ಇಲ್ಲೆ ಇಪ್ಪಲೇ ಇರ. ಈ ಸ್ಥಿತಿಲಿ ಮನಸ್ಸು ಸ್ವಚ್ಛವಾವುತ್ತು, ನಾವೂ ಸ್ವಚ್ಛವಾವುತ್ತು. ಇದು ನಿಜವಾದ ಮಡಿ (ಶುದ್ಧ). ಮನಸ್ಸಿನ ಸ್ವಚ್ಛತೆಯ ಸಾಧಿಸದ್ದೆ ಬಾಹ್ಯಮಡಿಗೆ ಪ್ರಾಶಸ್ತ್ಯ ಕೊಟ್ಟು ಎಂತ ಗುಣವೂ ಇಲ್ಲೆ. ಆದರೆ ಅಂತಃಶುದ್ಧಿ ಆಯೆಕ್ಕಾರೆ ಬಾಹ್ಯಶುದ್ಧಿಯೂ ಅಗತ್ಯವೇ. ಹೀಂಗಿಪ್ಪ ಶುದ್ಧಮನಸ್ಸಿಂಗೆ ಯಾವುದೂ ಮೈಲಿಗೆ ಅಲ್ಲ. ಆ ಮನಸ್ಸಿಂಗೆ ಎಲ್ಲವೂ ಭಗವಂತನೇ. ಮನಸ್ಸು ಮಡಿಯಾದರೆ ಮತ್ತೆ ಬಾಹ್ಯ ಮೈಲಿಗೆ ಹೇಳ್ವ ಸಾಧ್ಯತೆ ಇಲ್ಲೆ. ಇದು ಮಾನವ ತನ್ನ ಜೀವಮಾನಲ್ಲಿ ಪಡೆವಲೆಡಿಗಪ್ಪ ಪರಮಾನಂದದ ಸ್ಥಿತಿ ಹೇಳಿ ಬನ್ನಂಜೆಯವರ ವ್ಯಾಖ್ಯಾನ.

ಶ್ಲೋಕ

ಯುಂಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮ್ ಅತ್ಯಂತಂ ಸುಖಮಶ್ನುತೇ ॥ ೨೮॥

ಪದವಿಭಾಗ

ಯುಂಜನ್ ಏವಮ್ ಸದಾ ಆತ್ಮಾನಮ್ ಯೋಗೀ ವಿಗತ-ಕಲ್ಮಷಃ । ಸುಖೇನ ಬ್ರಹ್ಮ- ಸಂಸ್ಪರ್ಶಮ್ ಅತ್ಯಂತಮ್ ಸುಖಮ್ ಅಶ್ನುತೇ ॥

ಅನ್ವಯ

ಏವಂ ಸದಾ ಆತ್ಮಾನಂ ಯುಂಜನ್ ಯೋಗೀ ವಿಗತ-ಕಲ್ಮಷಃ ಬ್ರಹ್ಮ-ಸಂಸ್ಪರ್ಶಮ್ ಅತ್ಯಂತಂ ಸುಖಂ ಸುಖೇನ ಅಶ್ನುತೇ ॥

ಪ್ರತಿಪದಾರ್ಥ

ಏವಮ್ – ಈ ರೀತಿಯಾಗಿ, ಸದಾ – ನಿರಂತರವಾಗಿ, ಆತ್ಮಾನಮ್ – ತನ್ನ, ಯುಂಜನ್ – ತೊಡಗಿಸಿಗೊಂಡು, ಯೋಗೀ – ಆಧ್ಯತ್ಮಿಕವಾದಿ (ಯೋಗಿ, ಪರಮೋನ್ನತ ಆತ್ಮನೊಂದಿಂಗೆ ಸಂಪರ್ಕವುಳ್ಳವ°), ವಿಗತ-ಕಲ್ಮಷಃ – ಸಕಲ ಭೌತಿಕ ಕಲ್ಮಷಂಗಳಿಂದ ಮುಕ್ತನಾಗಿ, ಬ್ರಹ್ಮ-ಸಂಸ್ಪರ್ಶಮ್ – ಪರಮೋನ್ನತದೊಂದಿಂಗೆ ಸತತ ಸಂಪರ್ಕವ, ಅತ್ಯಂತಮ್ ಸುಖಮ್- ಅತ್ಯುನ್ನತ ಸುಖವ (ಬ್ರಹ್ಮಾನಂದ ಸುಖವ), ಸುಖೇನ – ದಿವ್ಯ ಸುಖಂದ (ಕೊಶಿಲಿ) ಅಶ್ನುತೇ – ಹೊಂದುತ್ತ° (ಪಡೆತ್ತ°).

ಅನ್ವಯಾರ್ಥ

ಈ ರೀತಿಯಾಗಿ ನಿರಂತರವಾಗಿ ಮನಸ್ಸಿನ ಯೋಗಲ್ಲಿ ತೊಡಗಿಸಿಗೊಂಡು ಯೋಗಿಯು ದೋಷಂಗಳ (ವಿಗತ-ಕಲ್ಮಷಃ) ನಿವಾರಣೆ ಮಾಡಿಗೊಂಡು ಎಲ್ಲಕ್ಕಿಂತಲೂ ಶ್ರೇಷ್ಠವಾದ (ಅತ್ಯಂತ ಸುಖಂ) ಬ್ರಹ್ಮಾನಂದ ಸುಖವ ಸಂತೋಷಲ್ಲಿ ಪಡಕ್ಕೊಳ್ಳುತ್ತ°.

ತಾತ್ಪರ್ಯ/ವಿವರಣೆ

ಸದಾ ಯೋಗಾಭ್ಯಾಸಲ್ಲಿ ನಿರತನಾದ ಆತ್ಮಸಂಯಮಿಯಾದ ಯೋಗಿಯು ಎಲ್ಲ ಐಹಿಕ ಕಲ್ಮಷಂದ ಮುಕ್ತನಾಗಿ, ಭಗವಂತನ ಅಲೌಕಿಕ ಪ್ರೇಮಸೇವೆಲಿ ಪರಿಪೂರ್ಣ ಸುಖದ ಅತ್ಯುನ್ನತ ಹಂತವ ತಲಪುತ್ತ. ಆತ್ಮಸಾಕ್ಷಾತ್ಕಾರ ಹೇಳಿರೆ ಪರಮಪ್ರಭು ವಿನೊಡನೆ  (ಭಗವಂತನಲ್ಲಿ) ಮನುಷ್ಯಂಗೆ ಇಪ್ಪ ಸಂಬಂಧದ ಸಹಜ ಸ್ವರೂಪವ ತಿಳಿವದು. ವೈಯಕ್ತಿಕ ಆತ್ಮವು ಆ ಭಗವಂತನ ವಿಭಿನ್ನಾಂಶ. ಈ ಆತ್ಮನ ಮೂಲಕವಾಗಿ ಆ ಪರಮಾತ್ಮನ ಕಾಂಬದೇ ಆತ್ಮಸಾಕ್ಷಾತ್ಕಾರ. ಭಗವಂತನನೊಟ್ಟಿಂಗೆ ಈ ದಿವ್ಯಸಂಪರ್ಕಕ್ಕೆ ‘ಬ್ರಹ್ಮಸಂಸ್ಪರ್ಶ’ ಹೇಳಿ ಹೇಳುವದು.

ಬನ್ನಂಜೆ ವ್ಯಾಖ್ಯಾನಿಸುತ್ತವುಭಗವದ್ ಅನುಭೂತಿ ಆದಪ್ಪಗ ಅಪ್ಪ ಅಂತರಂಗದ ಆನಂದವ ಭಗವಂತ° ಇಲ್ಲಿ ನಿರೂಪಿಸಿದ್ದ°. “ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ”. ಇಲ್ಲಿ ಎರಡು ಮುಖ್ಯ ವಿಷಯವ ಗಮನುಸೆಕು. ಒಂದು ‘ವಿಗತಕಲ್ಮಷ ಸನ್ ಆತ್ಮಾನಂ ಯುಂಜನ್’ – ವಿಗತಕಲ್ಮಷವಾದ (ಪಾಪರಹಿತವಾದ) ಮನಸ್ಸಿಂದ ಭಗವಂತನ ಕಾಣೆಕು., ಇನ್ನೊಂದು, “ಆತ್ಮಾನಂ ಯುಂಜನ್ ಸನ್ ವಿಗತಕಲ್ಮಷಃ” – ಭಗವಂತನ ಧ್ಯಾನಮಾಡಿಗೊಂಡು ವಿಗತಕಲ್ಮಷರಪ್ಪದು. ಭಗವಂತನ ಧ್ಯಾನಕ್ಕೋಸ್ಕರ ಮನಸ್ಸಿನ ಸ್ವಚ್ಛಗೊಳುಸಿ ಒಂದರಿ ಭಗವಂತನ ಕಾಂಬಲೆಡಿಗು, ಆದರೆ, ಭಗವಂತನ ಅನುಭವಂದ ಕೆಳಯಿಳುದ ಕೂಡ್ಳೆ ಮತ್ತೆ ತಾಮಸ ಆವೇಶ ನಮ್ಮ ಮನಸ್ಸಿನ ಕೆಡುಸುಕು. ಹಾಂಗಪ್ಪಲೆ ಬಿಡ್ಳಾಗ. ಮನಸ್ಸಿನ ಅಲ್ಲೇ ಸ್ಥಿರಗೊಳುಸೆಕು. ಅದಕ್ಕಾಗಿ ಸದಾ ಭಗವದ್ ಅನುಭೂತಿಲಿಯೇ ನೆಲೆಗೊಳುಸೆಕು. ಇದರಥ ದಿನದ ಇಪ್ಪತ್ತಾಲ್ಕು ಗಂಟೆಯೂ ಧ್ಯಾನಲ್ಲೇ ಕೂರೆಕು ಹೇಳಿ ಅಲ್ಲ. ಬದಲಾಗಿ, ಸದಾ ಆ ಭಗವಂತನ ಗುಂಗಿಲ್ಲಿಯೇ ಇಪ್ಪದು. ಹೀಂಗಾದಪ್ಪಗ ಮನಸ್ಸು ನಿರಂತರ ಸ್ವಚ್ಛವಾಗಿರುತ್ತು. ಹೀಂಗೆ ಭಗವದ್ಪ್ರಜ್ಞೆ ಗಟ್ಟಿಯಾದಪ್ಪಗ ಸಾಧಕ° ಅನಾಯಾಸವಾಗಿ ಭಗವಂತನ ನೇರವಾಗಿ ಕಾಂಬ “ಅತ್ಯಂತಂ ಸುಖಂ ಅಶ್ನುತೇ” –  ಅತ್ಯಂತ ಸುಖಾನುಭವವ ಪಡೆತ್ತ°.

ಶ್ಲೋಕ

ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ ।
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ॥೨೯॥

ಪದವಿಭಾಗ

ಸರ್ವ-ಭೂತಸ್ಥಮ್ ಆತ್ಮಾನಮ್ ಸರ್ವ-ಭೂತಾನಿ ಚ ಆತ್ಮನಿ । ಈಕ್ಷತೇ ಯೋಗ-ಯುಕ್ತ-ಆತ್ಮಾ ಸರ್ವತ್ರ ಸಮದರ್ಶನಃ ॥

ಅನ್ವಯ

ಯೋಗ-ಯುಕ್ತ-ಆತ್ಮಾ ಸರ್ವತ್ರ ಸಮ-ದರ್ಶನಃ, ಆತ್ಮಾನಂ ಸರ್ವ-ಭೂತಸ್ಥಂ ಸರ್ವ-ಭೂತಾನಿ ಚ ಆತ್ಮನಿ ಈಕ್ಷತೇ ॥

ಪ್ರತಿಪದಾರ್ಥ

ಯೋಗ-ಯುಕ್ತ-ಆತ್ಮಾ – ಕೃಷ್ಣಪ್ರಜ್ಞೆಲಿ ಯುಕ್ತನಾಗಿಪ್ಪವ°, ಸರ್ವತ್ರ – ಎಲ್ಲ ದಿಕ್ಕುಗಳಲ್ಲಿಯು, ಸಮ-ದರ್ಶನಃ – ಸಮಾನನೋಟ ಉಳ್ಳವ°, ಆತ್ಮಾನಮ್ – ಪರಮಾತ್ಮನ, ಸರ್ವ-ಭೂತಸ್ಥಮ್ – ಎಲ್ಲ ಜೀವಿಗಳಲ್ಲಿಯೂ ಇಪ್ಪ, ಚ ಆತ್ಮನಿ – ತನ್ನ ಆತ್ಮಲ್ಯೂ ಕೂಡ, ಈಕ್ಷತೇ – ನೋಡುತ್ತ°.

ಅನ್ವಯಾರ್ಥ

ಯೋಗಯುಕ್ತ ಚಿತ್ತವುಳ್ಳವನಾಗಿ (ಕೃಷ್ಣಪ್ರಜ್ಞೆಲಿ ಯುಕ್ತನಾಗಿ), ಎಲ್ಲಾ ದಿಶೆಲಿಯೂ, ಬಗೆಲಿಯೂ, ಸಮದೃಷ್ಟಿಯುಳ್ಳವನಾಗಿ (ಸಮಾನ ನೋಟಕನಾಗಿ), ಎಲ್ಲ ಜೀವರಾಶಿಲಿಯೂ, ತನ್ನಲ್ಲಿಯೂ ಇಪ್ಪ ಆ ಸರ್ವಾಂತರ್ಯಾಮಿ ಭಗವಂತನ ನೋಡುತ್ತ°. (ಆ ಭಗವಂತನ ಎಲ್ಲದರಲ್ಲಿಯೂ, ಎಲ್ಲೆಲ್ಲಿಯೂ, ತನ್ನಲ್ಲಿಯೂ ಕಾಣುತ್ತ°).

ತಾತ್ಪರ್ಯ/ವಿವರಣೆ

ನಿಜವಾದ ಯೋಗಿಯು (ಸಾಧಕ) ಎಲ್ಲಾ ಜೀವಿಗಳಲ್ಲಿಯೂ, ಎಲ್ಲ ವಸ್ತುಗಳಲ್ಲಿಯೂ, ದಿಕ್ಕುಗಳಲ್ಲಿಯೂ ಭಗವಂತನ ಕಾಣುತ್ತ°. ಹಾಂಗೇ ಆ ಎಲ್ಲವನ್ನೂ ಭಗವಂತನಲ್ಲಿ ಕಾಣುತ್ತ°. ಆತ್ಮಸಾಕ್ಷಾತ್ಕಾರವ ಪಡದ ಅಂತಹ ಮನುಷ್ಯ° (ಸಾಧಕ°) ಪರಮಶ್ರೇಷ್ಠನಾದ ಆ ಭಗವಂತನ ಎಲ್ಲದರಲ್ಲಿಯೂ ಕಾಣುತ್ತ°. ಪಶುಪಕ್ಷಿಮನುಷ್ಯ ಮತ್ತು ಸಕಲ ಜೀವರಾಶಿಲಿಯೂ ಚರಾಚರ ವಸ್ತುಗಳಲ್ಲಿಯೂ ಅವಂಗೆ ಭಗವಂತ° ಏಕರೂಪವಾಗಿ ಕಾಣುತ್ತ° (ಏಕರೂಪವಾಗಿ ತಿಳಿತ್ತ°). ಇಡೀ ಪ್ರಪಂಚವೇ ಅವನದ್ದು. ಪ್ರಪಂಚಲ್ಲಿ ಇಪ್ಪದಲ್ಲೆವೂ ಅವನಿಂದಲೇ. ಕರ್ಮಫಲಕ್ಕನುಗುಣವಾಗಿ ಬೇರೆಬೇರೆ ಸನ್ನಿವೇಶಲ್ಲಿ ಬೇರೆಬೇರೆ ರೂಪಲ್ಲಿ ಇಪ್ಪದು ಹೇಳ್ವದರ ಸರಿಯಾಗಿ ತಿಳಿದಿರುತ್ತ°. ಐಹಿಕ ಶಕ್ತಿಲಿಪ್ಪಗ ಜೀವಿಯು ಐಹಿಕ ಇಂದ್ರಿಯಂಗಳ ಸೇವೆ ಮಾಡುತ್ತ°. ಆಧ್ಯಾತ್ಮಿಕ ಶಕ್ತಿಲಿ ಅವ° ಭಗವಂತನ ನೇರವಾಗಿ ಸೇವೆ ಮಾಡುತ್ತ°. ಹೇಂಗೇ ಆದರೂ ಎಲ್ಲ ಜೀವಿಯೂ ಭಗವಂತನ ಸೇವಕ. ಈ ಸಮಾನತೆಯ ದೃಷ್ಟಿಯು ಕೃಷ್ಣಪ್ರಜ್ಞೆಲಿಪ್ಪ ಮನುಷ್ಯಂಗೆ ಪರಿಪೂರ್ಣವಾಗಿ ತಿಳಿದಿರುತ್ತು.

ಬನ್ನಂಜೆಯವು ವಿವರುಸುತ್ತವುಇಲ್ಲಿ ಭಗವಂತ°, ಭಗವಂತನಲ್ಲಿ ಸಾಧಕ ಎಂತಹ ಗುಣದ ಅನುಸಂಧಾನ ಮಾಡೆಕು ಹೇಳ್ವದರ ವಿವರಿಸಿದ್ದ°. ಧ್ಯಾನಯೋಗಕ್ಕೆ ಸಜ್ಜುಗೊಂಡ ಸಾಧಕ° ಎಲ್ಲ ಜೀವಿಗಳಲ್ಲೂ ಭಗವಂತನ ಕಾಣುತ್ತ°, ಹಾಂಗೇ, ಎಲ್ಲ ಜೀವಿಗಳನ್ನೂ ಭಗವಂತನಲ್ಲಿ ಕಾಣುತ್ತ°. ಅವಂಗೆ ಎಲ್ಲೆಡೆ ಇಪ್ಪ ಭಗವಂತ° ಏಕರೂಪನಾಗಿ ಕಾಣುತ್ತ°. ನಾವು ಭಗವಂತನ ‘ಬ್ರಹ್ಮ’, ‘ಪರಮಾತ್ಮ’ ಹೇಳಿ ಎಲ್ಲ ಹೇಳುತ್ತು. ಎಂತರ ಹಾಂಗೇಳಿರೆ?. ಎಲ್ಲ ಕಾಲಲ್ಲಿಯೂ ಎಲ್ಲ ದೇಶಲ್ಲಿಯೂ ತುಂಬಿಪ್ಪ ಬೃಹತ್ತಾದ್ದು – ‘ಬ್ರಹ್ಮ’. ಎಲ್ಲ ದಿಕ್ಕೆ ವ್ಯಾಪಿಸಿಪ್ಪ ಸರ್ವ ಗುಣಪೂರ್ಣನಾಗಿ ಕಾಲತಃ, ದೇಶತಃ, ಗುಣತಃ, ಶಕ್ತಿತಃ ಅನಂತವಾಗಿಪ್ಪದು – ‘ಪರಮಾತ್ಮ’. ಇಲ್ಲಿ ಭಗವಂತ ಹೇಳಿದ್ದು “ಸರ್ವಭೂತಸ್ಥಮಾತ್ಮಾನಂ” – ಸಮಸ್ತ ಜೀವಜಾತದೊಳ ಅಂತರ್ಯಾಮಿಯಾಗಿ ಬಿಂಬರೂಪಿ ಭಗವಂತ°. ಮಾತ್ರವಲ್ಲ, “ಸರ್ವ ಭೂತಾನಿ ಚ ಆತ್ಮನಿ” ಸಮಸ್ತ ಜೀವಲ್ಲಿಯೂ ಭಗವಂತನಿದ್ದ°. ನಮ್ಮ ಒಳವೂ ಹೆರವೂ ತುಂಬಿದ್ದ°. ಇದು ನಾವು ಉಪಾಸನೆ ಮಾಡುವಾಗಿ ತಿಳುದಿರೆಕ್ಕಪ್ಪ ಮುಖ್ಯವಾದ ಅಂಶ. ಒಬ್ಬ ಧ್ಯಾನಯೋಗಲ್ಲಿಪ್ಪ ಸಾಧಕ° ಭಗವಂತನ ಕಾಂಬ ದೃಷ್ಟಿ ಇದು.  ಭಗವಂತ° ಎಲ್ಲಾ ಜೀವರಾಶಿಲಿಯು ತುಂಬಿದ್ದರೂ ಕೂಡ ಒಬ್ಬ° ಸಾಧಕ° ಅವನ (ಭಗವಂತನ) “ಸರ್ವತ್ರ ಸಮದರ್ಶನಃ” – ಏಕರೂಪಲ್ಲಿ ಕಾಣುತ್ತ°. ಭಗವಂತನ ಅವತಾರ, ಆವೇಶ, ಸನ್ನಿಧಾನ, ಗುಣ, ಕೃತಿ, ರೂಪ ಎಲ್ಲವೂ ಅಖಂಡ. ಅದರಲ್ಲಿ ವ್ಯತ್ಯಾಸ ಇಲ್ಲೆ. ಎಲ್ಲವುದರ ಒಳವೂ ಹೇರವೂ ತುಂಬಿಪ್ಪ ಅವ ಏಕರೂಪ°. ಹೀಂಗೆ ಭಗವಂತ° ಸರ್ವಾಂತರ್ಯಾಮಿ ಮತ್ತೆ ಸರ್ವಗತ (ಎಲ್ಲದರಲ್ಲಿಯೂ ಇಪ್ಪವ°) ಹೇಳ್ವ ಅನುಸಂಧಾನ ನಮ್ಮ ನಿತ್ಯ ಉಪಾಸನೆಲಿ ಇರೆಕು.

ಶ್ಲೋಕ

ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ ।
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ॥೩೦॥

ಪದವಿಭಾಗ

ಯೋ ಮಾಮ್ ಪಶ್ಯತಿ ಸರ್ವತ್ರ ಸರ್ವಮ್ ಚ ಮಯಿ ಪಶ್ಯತಿ । ತಸ್ಯ ಅಹಮ್ ನ ಪ್ರಣಶ್ಯಾಮಿ ಸಃ ಚ ಮೇ ನ ಪ್ರಣಶ್ಯತಿ ॥

ಅನ್ವಯ

ಯಃ ಮಾಂ ಸರ್ವತ್ರ ಪಶ್ಯತಿ, ಸರ್ವಂ ಚ ಮಯಿ ಪಶ್ಯತಿ, ತಸ್ಯ ಅಹಂ ನ ಪ್ರಣಶ್ಯಾಮಿ, ಸಃ ಚ ಮೇ ನ ಪ್ರಣಶ್ಯತಿ ॥

ಪ್ರತಿಪದಾರ್ಥ

ಯಃ – ಆರು, ಮಾಮ್ – ಎನ್ನ, ಸರ್ವತ್ರ – ಎಲ್ಲ ಕಡೆಲಿಯೂ, ಪಶ್ಯತಿ – ಕಾಣುತ್ತನೋ (ನೋಡುತ್ತನೋ), ಸರ್ವಮ್ – ಪ್ರತಿಯೊಂದನ್ನೂ, ಚ – ಕೂಡ, ಮಯಿ – ಎನ್ನಲ್ಲಿ, ಪಶ್ಯತಿ – ನೋಡುತ್ತನೋ, ತಸ್ಯ – ಅವನ (ಅವಂಗೆ ಹೇಳ್ವ ಅರ್ಥ ಇಲ್ಲಿ), ಅಹಮ್ – ಆನು, ನ ಪ್ರಣಶ್ಯಾಮಿ – ನಷ್ಟ ಆವುತ್ತಿಲ್ಲೆ, ಸಃ ಚ – ಅವ° ಕೂಡ (ಅವಂಗೆ ಕೂಡ), ಮೇ  – ಎನಗೆ, ನ ಪ್ರಣಶ್ಯತಿ  – ನಷ್ಟನಾವುತ್ತನಿಲ್ಲೆ.

ಅನ್ವಯಾರ್ಥ

ಆರು ಎನ್ನ ಎಲ್ಲೆಲ್ಲಿಯೂ ಕಾಣುತ್ತನೋ, ಮತ್ತೆ ಎನ್ನಲ್ಲಿ ಎಲ್ಲವನ್ನೂ ಕಾಣುತ್ತನೋ, ಅವ° ಎನ್ನ ಎಂದೂ ಎನ್ನ ಕಳಕ್ಕೊಳ್ಳುತ್ತನಿಲ್ಲೆ ( ನ ಪ್ರಣಶ್ಯತಿ). ಆನೂ ಅವನ ಯಾವತ್ತೂ ಕಳಕ್ಕೊಳ್ಳುತ್ತಿಲ್ಲೆ.

ತಾತ್ಪರ್ಯ/ವಿವರಣೆ

ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ನಿಶ್ಚಯವಾಗಿಯೂ ಎಲ್ಲೆಲ್ಲಿಯೂ ಆ ಭಗವಂತನ ಏಕರೂಪಂದ ಕಾಣುತ್ತ°. ಮತ್ತೆ, ಎಲ್ಲವನ್ನೂ ಆ ಭಗವಂತನಲ್ಲಿ ಕಾಣುತ್ತ°. ಇಂತಹ ಮನುಷ್ಯ° ಐಹಿಕ ಪ್ರಕೃಯೆಯ ಪ್ರತ್ಯೇಕ ಅಭಿವ್ಯಕ್ತಿಗಳ ನೋಡುತ್ತಾಂಗೆ ಕಾಂಗು. ಆದರೆ, ಪ್ರತಿಯೊಂದರಲ್ಲಿಯೂ ಪ್ರತಿಸರ್ತಿಯೂ ಅವಂಗೆ ಆ ಭಗವಂತನ ಬಗ್ಗೆ ಜ್ಞಾನ ಇರುತ್ತು. ಅವನ ದೃಷ್ಟಿಲಿ ಪ್ರತಿಯೊಂದೂ ಭಗವದ್ ಶಕ್ತಿಯ ಅಭಿವ್ಯಕ್ತಿ ಅದು. ಭಗವಂತ° ಇಲ್ಲದ್ದೆ ಯಾವುದೂ ಇಲ್ಲೆ. ಭಗವಂತ° ಎಲ್ಲವುದರ ಒಡೆಯ°. ಈ ರೀತಿಯ ಪ್ರಜ್ಞೆ ಕೃಷ್ಣಪ್ರಜ್ಞೆ ಇಪ್ಪ ಮನುಷ್ಯನದ್ದು. ಕೃಷ್ಣಪ್ರಜ್ಞೆಯು ಕೃಷ್ಣಪ್ರೇಮದ (ಭಗವದ್ಪ್ರೇಮದ) ವರ್ಧನೆ. ಐಹಿಕ ಮೋಕ್ಷವ ಮೀರಿದ ಸ್ಥಿತಿ ಇದು. ಆತ್ಮಸಾಕ್ಷಾತ್ಕಾರವ ಮೀರಿದ ಕೃಷ್ಣಪ್ರಜ್ಞೆಯ ಈ ಹಂತಲ್ಲಿ ಭಕ್ತ° ಭಗವಂತನಲ್ಲಿ ಅವಿಭಾಜ್ಯ° ಆವುತ್ತ°. ಅವಂಗೆ ಆ ಭಗವಂತನೇ ಸರ್ವಸ್ವ°. ಭಗವದ್ಪ್ರೇಮಲ್ಲಿ ಭಕ್ತ°  ಸಂಪೂರ್ಣ ಲೀನನಾವುತ್ತ°. ಈ ಹಂತಲ್ಲಿ ಭತವಂತಂಗೂ ಆ ಸಾಧಕಂಗೂ ನಡೆವೆ ಒಂದು ಆತ್ಮೀಯ ಸಂಬಂಧ ಇರುತ್ತು. ಈ ಘಟ್ಟಲ್ಲಿ ಜೀವಿಯ ಆ ಭಗವಂತನಿಂದ ಬೇರ್ಪಡುಸಲೆ ಎಡಿಯ. ಭಕ್ತನ ದೃಷ್ಟಿಲಿ ಭಗವಂತ° ಅವನಿಂದ ಬೇರೆಯಾವುತ್ತನೂ ಇಲ್ಲೆ.

ಬನ್ನಂಜೆ ವಿವರುಸುತ್ತವುಭಗವಂತ° ಹೇಳುತ್ತ° – “ಆರು ಹೀಂಗೆ ಎಲ್ಲದರಲ್ಲಿಯೂ ಎನ್ನ, ಮತ್ತೆ, ಎಲ್ಲವನ್ನೂ ಎನ್ನಲ್ಲಿಯೂ ಕಾಣುತ್ತನೋ ಅವಂಗೆ ಆನೆಂದೂ ಇಲ್ಲೆ ಹೇಳಿ ಆವುತ್ತಿಲ್ಲೆ. ಅವನ ಯೋಗಕ್ಷೇಮ ನೋಡಿಗೊಂಬದು ಎನ್ನ ಹೊಣೆ. ಅದೇ ರೀತಿ, ಆನು ಅವನ ಯೋಗಕ್ಷೇಮವ ನೋಡಿಗೊಳ್ಳುತ್ತೆ ಹೇಳ್ವ ಎಚ್ಚರ ಅವನಲ್ಲಿ ಸದಾ ಇರುತ್ತು” ಹೀಂಗೆ ಭಕ್ತಂಗೂ ಭಗವಂತಂಗೂ ಅನ್ಯೋನ್ಯ ಸಂಬಂಧ. ದೇವರು ಎಂದೂ ನಮ್ಮ ಬಿಟ್ತು ಹಾಕುತ್ತನಿಲ್ಲೆ ಹೇಳ್ವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರೆಕು. ಈ ಮದಲೇ ಹೇಳಿಪ್ಪಂತೆ, ನಾವು ಭಗವಂತನ ಹೇಂಗೆ ಕಾಣುತ್ತೋ , ಅವ° ನಮ್ಮ ಹಾಂಗೇ ಕಾಣುತ್ತ°. ನಮ್ಮಲ್ಲಿಪ್ಪ ಈ ಎಚ್ಚರಂದ ಯಾವತ್ತೂ ನವಗೆ ಜೀವನಲ್ಲಿ ಬಗೆಹರಿಯದ್ದ ಸಮಸ್ಯೆ ಎದುರಾವುತ್ತಿಲ್ಲೆ. ಪ್ರಾರಬ್ಧಕರ್ಮಂದ ಬಂದಿದ್ದರೂ ಕೂಡ ಕಾಣದ್ದ ಕೈ ನಮ್ಮ ಕೈ ಹಿಡುದು ನಡೆಸುತ್ತಿಪ್ಪ ಅನುಭವ ಉಂಟಾವುತ್ತು. ‘ನಮ್ಮ ಕಾಪಾಡುವವ° ಇದ್ದ°, ಅವ° ನಮ್ಮ ಯೋಗಕ್ಷೇಮವ ನೋಡಿಗೊಳ್ಳುತ್ತ°, ನಾವೆಂತಕೆ ಹೆದರೆಕು’ ಹೇಳ್ವ ಧೈರ್ಯ ಬತ್ತು. ಕೆಟ್ಟ ಯೋಚನೆಗೊ ದೂರವಾವುತ್ತು. ಸಾಮಾಜಿಕ ಪ್ರತಿಕ್ರಿಯೆಗೊಕ್ಕೆ, ಟೀಕೆ-ಟಿಪ್ಪಣಿಗೊಕ್ಕೆ, ಅಪವಾದ-ನಿಂದನೆಗೊಕ್ಕೆ, ಯಾವುದಕ್ಕೂ ವಿಚಲಿತನಾಯೆಕ್ಕಾದ್ದಿಲ್ಲೆ. ಭಗವಂತ ಕೈಬಿಟ್ಟ° ಹೇಳ್ವ ಸ್ಥಿತಿ ಭಕ್ತಂಗೆ ಎಂದೂ ಬತ್ತಿಲ್ಲೆ. ಭಗವಂತ° ಎಂದೂ ತನ್ನ ಆತ್ಮೀಯ ಭಕ್ತನಿಂದ ದೂರವಾವ್ತನಿಲ್ಲೆ. ಹಾಂಗಾಗಿಯೇ ಭಗವಂತನ ‘ಭಕ್ತಪರಾಧೀನ’ ಹೇದು ಹೇಳ್ವದು.

ಮುಂದೆ ಎಂತರ…?     ಬಪ್ಪ ವಾರ ನೋಡುವೋ°.

ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 06 – SHLOKAS 20 – 30 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

2 thoughts on “ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 20 – 30

  1. ಅತಿ ಕ್ಲಿಷ್ಟವಾದ ಯೋಗದ ದಾರಿಯ ಕೃಷ್ಣ ಇಲ್ಲಿ ವಿವರಿಸಿದ್ದ.ಓದುವಾಗ ಸುಲಭ ಹೇಳಿ ತೋರುಗು-ಆದರೆ ಅನುಸರಿಸುದು ಕಷ್ಟ.ಇಂತಾ ಸಾಧನೆಯ ಬಹುಶಃ ಇನ್ನಾಣ ಜನ್ಮಕ್ಕೆ ಮುಂದೆ ಹಾಕೆಕಾವುತ್ತೋ ಏನೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×