ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಕಳುದ ಸಂಚಿಕೆಯ ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 11 – 21 ಓದಲೆ ಇಲ್ಲಿ ಒತ್ತಿ
ಪ್ರಥಮೋsಧ್ಯಾಯಃ – ಶ್ಲೋಕಂಗೊ 22 – 33
ಯಾವದೇತಾನ್ ನಿರೀಕ್ಷೇsಹಂ ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ॥೨೨॥
ಈ ರಣರಂಗಲ್ಲಿ ಆರಾರು ಎನ್ನೊಟ್ಟಿಂಗೆ ಯುದ್ಧಮಾಡ್ಳೆ ಕಾದೊಂಡಿದ್ದವೋ ಅವರ ನೋಡಿ ಆನು ಆರಾರೊಟ್ಟಿಂಗೆ ಯುದ್ಧಮಾಡೇಕು ಹೇಳಿ ಪರೀಕ್ಷಿಸುತ್ತೆ.
{ಭಗವಂತನ ಪರಿಶುದ್ಧ ಭಕ್ತನಾದ ಅರ್ಜುನಂಗೆ ತನ್ನ ದಾಯಾದಿ ಮತ್ತು ಸಹೋದರ ಬಂಧುಗಳೊಡನೆ ಯುದ್ಧಮಾಡೇಕು ಹೇಳ್ವ ಇಚ್ಛೆ ಇತ್ತಿಲ್ಲೆ. ಆದರೆ ಶಾಂತಿಯ ಯಾವ ಸಂಧಾನಕ್ಕೂ ಒಪ್ಪದ ದುರ್ಯೋಧನನ ಹಠಮಾರಿತನಂದ ಇವೆಲ್ಲ ರಣರಂಗಕ್ಕೆ ಬರೇಕಾಗಿ ಬಂತು. ಇನ್ನೂ ರಣಭೂಮಿಲಿ ಶಾಂತಿಪ್ರಯತ್ನದ ಸಾಧ್ಯತೆ ಇಲ್ಲೆಯಾದರೂ, ಯುದ್ಧಭೂಮಿಗೆ ಬಂದ ಪ್ರಮುಖರ ಮತ್ತು ಈ ಯುದ್ಧಲ್ಲಿ ಅವು ಎಷ್ಟು ಕಾತುರರಾಗಿದ್ದವು ಹೇಳಿ ಒಂದರಿ ನೋಡುವ ಕುತೂಹಲ ಉಂಟಾತು. ಈ ಬಗ್ಗೆ ಬನ್ನಂಜೆ ಹೇಳ್ತವು- ಮಹಾಭಾರತ ಯುದ್ಧ ಇತಿಹಾಸಲ್ಲೇ ದಾಖಲೆಯಾದ ಮೊದಲ ಜಾಗತಿಕ ಯುದ್ಧ. ಅಂತಹ ಮಹಾಯುದ್ಧದ ಮುಂಚೂಣಿಲಿ ನಿಂದ ಅರ್ಜುನಂಗೆ ಆ ಕ್ಷಣಲ್ಲಿ ರಜಾ ಅಹಂಕಾರ ಉಂಟಾತು. ಶ್ರೀಕೃಷ್ಣ ತನ್ನ ಜೊತೆಲಿ ಇದ್ದ ಹೇಳ್ವ ತುಸು ಗರ್ವಲ್ಲಿ ಎನ್ನ ಎದುರು ಯುದ್ಧ ಮಾಡ್ಳೆ ಬಂದವು ಆರೆಲ್ಲಾ ಮತ್ತು ಎನ್ನ ಜೊತೆಲಿ ಯುದ್ಧಕ್ಕೆ ಬಂದವು ಆರೆಲ್ಲಾ ಆನೊಂದರಿ ನೊಡೀಕ್ಕುತ್ತೆ ಅಹಂಕಾರದ ಮಾತು ಆತು ಅದು ಶ್ರೀಕೃಷ್ಣನತ್ರೆ ಹೇಳಿದ್ದು.}
ಯೋತ್ಸ್ಯಮಾನವೇಕ್ಷೇsಹಂ ಯ ಏತೇsತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ದೇರ್ಯುದ್ಧೇಪ್ರಿಯಚಿಕೀರ್ಷವಃ ॥೨೩ ॥
[ಸಂಜಯ ಉವಾಚ । ಏವಂ ಉಕ್ತಃ ಹೃಷೀಕೇಶಃ ಗುಡಾಕೇಶೇನ ಭಾರತ । ಸೇನಯೋಃ ಉಭಯೋಃ ಮಧ್ಯೇ ಸ್ಥಾಪಯಿತ್ವಾ ರಥ ಉತ್ತಮಂ ॥ ಭೀಷ್ಮಃ ದ್ರೋಣಃ ಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಂ । ಉವಾಚ ಪಾರ್ಥ ಪಶ್ಯ ಏತಾನ್ ಸಮವೇತಾನ್ ಕುರೂನ್ ಇತಿ ॥
{ಹೇ ಭಾರತ! ಏವಂ ಗುಡಾಕೇಶೇನ ಉಕ್ತಃ ಹೃಷೀಕೇಶಃ, ಉಭಯೋಃ ಸೇನಯೋಃ ಮಧ್ಯೇ ಭೀಷ್ಮ-ದ್ರೋಣ-ಪ್ರಮುಖತಃ ಸರ್ವೇಷಾಂ ಚ ಮಹೀ-ಕ್ಷಿತಾಂ ರಥ-ಉತ್ತಮಂ ಸ್ಥಾಪಯಿತ್ವಾ , ಹೇ ಪಾರ್ಥ, ಏತಾನ್ ಸಮವೇತಾನ್ ಕುರೂನ್ ಪಶ್ಯ - ಇತಿ ಉವಾಚ।}
ಸಂಜಯ ಉವಾಚ - ಸಂಜಯ ಹೇಳಿದ°, ಏವಮ್ – ಹೀಂಗೆ, ಉಕ್ತಃ – ಹೇಳಲ್ಪಟ್ಟ°, ಹೃಷೀಕೇಶಃ – ಶ್ರೀಕೃಷ್ಣ°, ಗುಡಾಕೇಶೇನ – ಅರ್ಜುನನಿಂದ, ಭಾರತ – ಭಾರತ ವಂಶಜನೇ (ಧೃತರಾಷ್ಟ್ರ), ಸೇನಯೋಃ – ಸೈನ್ಯಂಗಳ, ಉಭಯೋಃ – ಎರಡರ, ಮಧ್ಯೇ – ನಡುಕೆ, ಸ್ಥಾಪಯಿತ್ವಾ – ನಿಲ್ಲುಸಿ, ರಥ ಉತ್ತಮಂ - ಉತ್ತಮವಾದ ರಥವ, ಭೀಷ್ಮ – ಪಿತಾಮಹ ಭೀಷ್ಮ, ದ್ರೋಣ – ಆಚಾರ್ಯ ದ್ರೋಣ, ಪ್ರಮುಖತಃ – ಮುಂಭಾಗಲ್ಲಿ, ಸರ್ವೇಷಾಂ – ಎಲ್ಲೋರ, ಚ – ಕೂಡ, ಮಹೀಕ್ಷಿತಾಂ – ಜಗತ್ಪತಿಗೊ, ಉವಾಚ – ಹೇಳಿದ°, ಪಾರ್ಥ – ಎಲೈ ಪೃಥೆಯ ಪುತ್ರನೇ (ಅರ್ಜುನನೇ), ಪಶ್ಯ – ನೋಡು, ಏತಾನ್ – ಇವೆಲ್ಲರ, ಸಮವೇತಾನ್ – ನೆರೆದ, ಕುರೂನ್ – ಕುರುಕುಲದ ಸದಸ್ಯರಾದ, ಇತಿ – ಎಂದು.]
ಸಂಜಯ ಹೇಳುತ್ತ – ಓ ಭರತವಂಶದ ದೊರೆಯೇ, ಅರ್ಜುನನ ಮಾತುಗಳ ಕೇಳಿದ ಶ್ರೀಕೃಷ್ಣ, ಭೀಷ್ಮ ದ್ರೋಣ ಮುಂತಾದ ಪ್ರಮುಖರ ಎದುರಿಲ್ಲಿ ರಥವ ಎರಡೂ ಸೇನೆಗಳ ಮಧ್ಯೆ ನಿಲ್ಲುಸಿ, ಅರ್ಜುನನತ್ರೆ ಅಲ್ಲಿ ನೆರದ ಕೌರವ ಪಡೆಯ ನೋಡು ಹೇಳಿ ಹೇಳಿದ°
{ಗುಡಾಕೇಶ – ಗುಡಾಕಾ ಹೇಳಿರೆ ನಿದ್ರೆ, ನಿದ್ರೆಯ ಗೆದ್ದವ ಗುಡಾಕೇಶ. ನಿದ್ರೆ ಹೇಳಿರೆ ಅಜ್ಞಾನ ಹೇಳಿಯೂ ಅರ್ಥಡ. ಶ್ರೀಕೃಷ್ಣನ ಒಡನಾಟಂದಾಗಿ ಅರ್ಜುನ ನಿದ್ರೆಯನ್ನೂ, ಅಜ್ಞಾನವನ್ನೂ ಗೆದ್ದ°. ಹೃಷೀಕೇಶ – ಹೃಷಿಕ ಈಶಃ ಹೇಳಿರೆ ಸಕಲ ಇಂದ್ರಿಯಂಗಳ ಮನಸ್ಸುಗಳ ಒಡೆಯ/ ನಿಯಂತ್ರಕ ಅರ್ಥಾತ್ ಪರಮಾತ್ಮ ಭಗವಾನ್ ಶ್ರೀಕೃಷ್ಣ. ಆದ್ದರಿಂದ ಅವಂಗೆ ಅರ್ಜನ° ಎರಡು ಸೇನೆಯ ಮಧ್ಯಲ್ಲಿ ರಥವ ನಿಲ್ಲುಸು ಹೇಳಿ ಹೇಳಿದ್ದು ಎಂತಕೆ ಹೇಳಿ ಅರ್ಥ ಆತು, ಅಂತೆಯೇ, ರಥವ ನಿಲ್ಲುಸಿ ಆ ಸೇನೆಯ ನೋಡು ಹೇಳಿ ಅರ್ಜುನಂಗೆ ಹೇಳುತ್ತ° ಶ್ರೀಕೃಷ್ಣ°. ಪಾರ್ಥ ಹೇಳಿರೆ ಶ್ರೀಕೃಷ್ಣನ ಅಪ್ಪ ವಸುದೇವನ ತಂಗೆ ಪೃಥೆಯ ಮಗ. ಆದ್ದರಿಂದ ಅರ್ಜುನನ ಸಾರಥಿಯಾದ ಶ್ರೀಕೃಷ್ಣ ಹೇಳಿ ಅರ್ಥವತ್ತಾಗಿ ಆ ಶಬ್ದ ಬಳಕೆ ಮಾಡಿದ್ದು ಹೇಳಿ ವಿದ್ವಾಂಸರು ವ್ಯಾಖ್ಯಾನ ಮಾಡಿದ್ದವು }
[ ಬನ್ನಂಜೆಯವು ಈ ಸನ್ನಿವೇಶವ ಈ ರೀತಿ ಚಿತ್ರಿಸುತ್ತವು - ಶ್ರೀಕೃಷ್ಣ ಅರ್ಜುನನ ಆಣತಿಯಂತೆ ರಥವ ಎರಡೂ ಸೈನ್ಯದ ಮಧ್ಯೆ ತಂದು ಭೀಷ್ಮ ದ್ರೋಣ ಕೃಪ ಮತ್ತು ಇತರ ಅರಸರ ಹಾಂಗೂ ಬಂಧುಗಳ ಅರ್ಜುನನ ಕಣ್ಣಿಂಗೆ ನೇರ ಕಾಂಬ ಹಾಂಗೆ ನಿಲ್ಲಿಸಿ 'ಹೇ ಅರ್ಜುನ, ಇಲ್ಲಿ ನೆರೆದಿಪ್ಪ ನಿನ್ನ ಕುರುಗಳ (ಪಶ್ಯ ಏತಾನ್ ಸಮವೇತಾನ್ ಕುರೂನ್) (ಕುರುವಂಶಜರ) ನೋಡು' -ಹೇಳಿ ಹೇಳ್ತ. ಇಲ್ಲಿ ಅರ್ಜುನಂಗೆ ಸಣ್ಣ ಮಾನಸಿಕ ಚಿಕಿತ್ಸೆ ಮಾಡ್ಳೆ ಕೃಷ್ಣ ಬಯಸಿದ್ದ. ಈ ರೀತಿ ಶ್ರೀಕೃಷ್ಣ ರಥವ ಅರ್ಜುನನ ಕಣ್ಣಿಂಗೂ ಮನಸ್ಸಿಂಗೂ ನಾಟುತ್ತಾಂಗೆ ನಿಲ್ಲಿಸಿದ್ದು ಉದ್ದೇಶಪೂರ್ವಕವಾಗಿಯೇ. ಇಲ್ಲಿ ಅರ್ಜುನನ ಮನಃಸ್ಥಿತಿಯ ಪರೀಕ್ಷೆ ಮಾಡ್ಳೆ ಬಯಸಿದ್ದು ಭಗವಂತ. ಅರ್ಜುನ ಒಬ್ಬ ಕ್ಷತ್ರಿಯ. ರಾಜ ವಂಶಜ. ಆತನ ಪ್ರಥಮ ಕರ್ತವ್ಯ ಧರ್ಮದ ಪರ ಹೋರಾಟ ಮತ್ತು ಪ್ರಜಾಪಾಲನೆ. ಹೀಂಗೆ ಕರ್ತವ್ಯಪಾಲನೆ ಮಾಡುತ್ತಿಪ್ಪಗ ಧರ್ಮದ ವಿರುದ್ಧ ನಿಂದವು ಆರೇ ಆಗಿದ್ದರೂ ಅವರ ಶಿಕ್ಷಿಸೆಕ್ಕಾದ್ದು ಕ್ಷತ್ರಿಯನ ಕರ್ತವ್ಯ. ಅವ° ಒಬ್ಬ ನ್ಯಾಯಾಧೀಶ ಇದ್ದಂತೆ. ಇಲ್ಲಿ ತನ್ನ ಕುಟುಂಬದೋರು, ಬಂಧುಗೊ, ಸ್ನೇಹಿತರುಗೊ ಹೇಳಿ ತಾರತಮ್ಯ ಸಲ್ಲ. ಇಂತಹ ಘನತರ ಕಾರ್ಯಲ್ಲಿ ತೊಡಗಿಪ್ಪ ಅರ್ಜುನಂಗೆ ತನ್ನ ಹಿರಿಯರುಗಳ, ಬಂಧುಗಳ, ಗುರುಗಳ, ಸ್ನೇಹಿತರುಗಳ ಕಂಡು ಎಂತಾತು ಹೇಳುವದು ಮುಂದಾಣದ್ದು..] 
ಅರ್ಜುನ° ಯುದ್ಧರಂಗಲ್ಲಿ ನೆರೆದ ಅಪ್ಪಂದ್ರು, ಅಜ್ಜಂದ್ರು, ಗುರುಗೊ, ಸೋದರಮಾವಂದ್ರು, ಸಹೋದರಂಗೊ, ಮೊಮ್ಮಕ್ಕೊ, ನೆಂಟರಿಷ್ಟರು ಮೊದಲಾದ ಸಂಬಂಧಿಗಳ ಮತ್ತು ಸೇನೆಲಿ ಇಪ್ಪ ಇತರ ಎಲ್ಲೋರ ಕಂಡು ಅತೀವ ಕನಿಕರವುಳ್ಳವನಾಗಿ ಆವೇಶಭರಿತನಾಗಿ ವಿಷಣ್ಣನಾಗಿ ಹೀಂಗೆ ಹೇಳಿದ –
{ರಣಭೂಮಿಲಿ ಅರ್ಜುನ, ಭೂರಿಶ್ರವನಂತಹ ತನ್ನ ಅಪ್ಪ ಸದೃಶರ, ಪಿತಾಮಹರಾದ ಭೀಷ್ಮ, ಸೋಮದತ್ತ, ಗುರುಗೋ ಕೃಪ°, ದ್ರೋಣ, ಶಲ್ಯ ಶಕುನಿ ಸೋದರಮಾವಂದ್ರು, ಕೌರವಾದಿ ಸಹೋದರರುಗಳ, ಲಕ್ಷ್ಮಣನಂತಹ ಮೊಮ್ಮಕ್ಕೋ, ಅಶ್ವತ್ಥಾಮನಂತಹ ಮಿತ್ರಂಗೋ, ಕೃತವರ್ಮನಂತಹ ಹಿತೈಷಿಗೊ, ಇತ್ಯಾದಿ ಅನೇಕ ಸ್ನೇಹಿತರುಗೋ ಇತ್ತಿದ್ದ ಕೌರವ ಸೈನ್ಯವ ನೋಡಿ ಮನಸ್ಸು ಸಂಕುಚಿತಗೊಂಡು, ಗಾಬರಿಯಾಗಿ, ಆವೇಶಭರಿತನಾಗಿ ಕೃಷ್ಣನತ್ರೆ ಹೀಂಗೆ ಹೇಳುತ್ತ}.
[ಬನ್ನಂಜೆಯವು ಹೇಳ್ತವು - ಸೂಕ್ಷ್ಮವಾಗಿ ಈ ಶ್ಲೋಕವ ಅವಲೋಕಿಸಿರೆ ಅಲ್ಲಿ ನೆರೆದಿಪ್ಪವು ಅನೇಕಾನೇಕ ಹಿರಿಯರು ಪ್ರಮುಖರು ಇದ್ದರೂ ಅರ್ಜುನಂಗೆ ಕಣ್ಣಿಂಗೆ ಕಂಡು ಮನಸ್ಸಿಂಗೆ ನಾಟಿದ್ದು ಅಜ್ಜ ಮಾವ ಗುರು ಅಣ್ಣ ತಮ್ಮ ಮಕ್ಕೊ ಮೊಮ್ಮಕ್ಕೊ ಮತ್ತು ಸಖರ. ಇಲ್ಲಿ ಅವಂಗೆ ಬಂಧುಜನ ವ್ಯಾಮೋಹ ಆದ್ದು ಸ್ಪಷ್ಟ ಆವ್ತು. ಕರ್ತವ್ಯನಿರತ ಆಗಿಪ್ಪ ಅರ್ಜುನಂಗೆ ಆದ ಮನಃಸ್ಥಿತಿ ಸಾಧುವಲ್ಲ. ಅರ್ಜುನ ತನ್ನ ಪರಿಸ್ಥಿತಿಯ ಹೇಂಗೆ ಕೃಷ್ಣನತ್ರೆ ಸಮಜಾಯಿಸಿ ಹೇಳಿ ಜಾರ್ಲೆ ಪ್ರಯತ್ನಿಸುತ್ತ ಹೇಳ್ವದು ಮುಂದಾಣದ್ದು..]
ಅರ್ಜುನ ಉವಾಚ
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಂ ॥೨೮॥
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚಶರೀರೇ ಮೇ ರೋಮಹರ್ಷಶ್ಚ ಜಾಯತೇ ॥೨೯॥
ಗಾಂಡೀವಂ ಸ್ರಂಸತೇಹಸ್ತಾತ್ ತ್ವಕ್ಚೈವ ಪರಿದಹ್ಯತೇ ।
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ॥೩೦॥
[ಅರ್ಜುನ ಉವಾಚ । ದೃಷ್ವಾ ಇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಂ ॥ ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಃ ಚ ಶರೀರೇ ಮೇ ರೋಮ ಹರ್ಷಃ ಚ ಜಾಯತೇ ॥ ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚ ಇವ ಪರಿದಹ್ಯತೇ । ನ ಚ ಶಕ್ನೋಮಿ ಅವಸ್ಥಾತುಂ ಭ್ರಮತಿ ಇವ ಚ ಮೇ ಮನಃ ॥
{ಅರ್ಜುನಃ ಉವಾಚ - ಹೇ ಕೃಷ್ಣಾ!, ಇಮಂ ಸ್ವಜನಂ ಯುಯುತ್ಸುಂ ಸಮುಪಸ್ಥಿತಂ ದೃಷ್ಟ್ವಾ ಮಮ ಗಾತ್ರಾಣಿ ಸೀದಂತಿ, ಮುಖಂ ಚ ಪರಿಶುಷ್ಯತಿ, ಮೇ ಶರೀರೇ ವೇಪಥುಃ ಚ ರೋಮ-ಹರ್ಷಃ ಚ ಜಾಯತೇ । ಹಸ್ತಾತ್ ಗಾಂಡೀವಂ ಸ್ರಂಸತೇ, ತ್ವಕ್ ಚ ಇವ ಪರಿದಹ್ಯತೇ । ಅವಸ್ಥಾತುಂ ಚ ನ ಶಕ್ನೋಮಿ., ಮೇ ಮನಃ ಚ ಭ್ರಮತಿ ಇವ ॥}
ಅರ್ಜುನ ಉವಾಚ – ಅರ್ಜುನ ಹೇಳಿದ°, ದೃಷ್ಟ್ವಾ – ನೋಡಿಕ್ಕಿ, ಇಮಂ – ಈ, ಸ್ವಜನಂ – ತನ್ನ ಜನರ (ಬಂಧುಗಳ), ಕೃಷ್ಣ – ಎಲೈ ಕೃಷ್ಣನೇ, ಯುಯುತ್ಸುಂ – ಯುದ್ಧೋತ್ಸಾಹಿಗಳಾಗಿಪ್ಪ, ಸಮುಪಸ್ಥಿತಂ – ಇಲ್ಲಿ ಇಪ್ಪ, ಸೀದಂತಿ – ನಡುಗುತ್ತಿದ್ದು, ಮಮ – ಎನ್ನ, ಗಾತ್ರಾಣಿ – ಶರೀರದ ಅವಯವಂಗೊ, ಮುಖಂ – ಬಾಯಿಯು, ಚ - ಕೂಡ, ಪರಿಶುಷ್ಯತಿ – ಒಣಗುತ್ತಿದ್ದು, ವೇಪಥುಃ – ಶರೀರದ ಕಂಪನವು, ಚ – ಕೂಡ, ಶರೀರೇ – ಶರೀರಲ್ಲಿ, ಮೇ – ಎನ್ನ, ರೋಮಹರ್ಷಃ – ರೋಮಾಂಚನ ಚ – ಕೂಡ, ಜಾಯತೇ – ಉಂಟಾವ್ತ ಇದ್ದು, ಗಾಂಡೀವಂ – ಗಾಂಡೀವ ಧನುಸ್ಸು, ಸ್ರಂಸತೇ – ಜಾರುತ್ತ ಇದ್ದು, ಹಸ್ತಾತ್ – ಕೈಂದ, ತ್ವಕ್ – ಚರ್ಮವು, ಚ – ಕೂಡ, ಏವ – ಖಂಡಿತವಾಗಿಯೂ, ಪರಿದಹ್ಯತೇ – ಉರಿತ್ತ ಇದ್ದು, ಚ – ಸಹ, ನ ಶಕ್ನೋಮಿ – ಶಕ್ತನಾಗಿಲ್ಲೆ, ಅವಸ್ಥಾತುಂ – ನಿಂಬಲೂ, ಭ್ರಮತಿ – ಭ್ರಮೆಗೊಳ್ಳುತ್ತಿದ್ದು, ಇವ – ಹಾಂಗೆ, ಚ – ಸಹ, ಮೇ – ಎನ್ನ, ಮನಃ – ಮನಸ್ಸು.]
ಅರ್ಜುನ° ಹೇಳಿದ – ಕೃಷ್ಣಾ! ಯುದ್ಧಮಾಡ್ಳೆ ಬೇಕಾಗಿ ಇಲ್ಲಿ ಸೇರಿದ ಈ ಎನ್ನವರ ನೋಡಿ ಎನ್ನ ಅವಯವಂಗೊ ಸೊರಗಿ ಹೋವ್ತಾ ಇದ್ದು. ಬಾಯಿ ಒಣಗುತ್ತಾ ಇದ್ದು, ಎನ್ನ ಮೈಲಿ (ಶರೀರಲ್ಲಿ) ನಡುಕ ರೋಮಾಂಚನ ಆವ್ತಾ ಇದ್ದು. ಗಾಂಡೀವ ಕೈಂದ ಜಾರುತ್ತಾ ಇದ್ದು. ಚರ್ಮ ಸುಡುತ್ತಾ ಇದ್ದು. ಎದ್ದು ನಿಂಬಲೆ ತ್ರಾಣವೂ ಇಲ್ಲೆ. ಮನಸ್ಸು ಭ್ರಮೆಗೊಳ್ಳುತ್ತಾ ಇದ್ದು.
[ಬನ್ನಂಜೆಯವು ಹೇಳ್ತವು - ಅರ್ಜುನ ಶ್ರೀಕೃಷ್ಣನತ್ರೆ ಹೇಳುತ್ತ - ಇಲ್ಲಿ ನೆರೆದ ಎನ್ನ ಹಿರಿಯೋರ ನೋಡಿ ಎನ್ನ ಅಂಗಾಂಗ ಮುದುಡುತ್ತು. ನಾವು ಪರಸ್ಪರ ಸ್ನೇಹಪೂರ್ವಕ ಬದುಕಬೇಕಾದೋರು ಇಂದು ಎದುರುಬದುರು ಬಡಿವಲೆ ನಿಂತಿಪ್ಪದು ಕಂಡು ಎನ್ನ ಮುಖ ನಾಚಿಕೆಲಿ ಬಾಡುತ್ತು. ತಿಳುವಳಿಕೆ ಇಪ್ಪ ನಾವೇ ಇಂತ ಯುದ್ಧ ಸನ್ನಿವೇಶಲ್ಲಿ ನಿಂದದು ಗ್ರೇಶಿರೆ ಮೈ ಮುದುಡುತ್ತು. ಬಾಯಿ ಒಣಗುತ್ತು. ಶರೀರ ನಡುಗುತ್ತು. ಇಲ್ಲಿ ಅರ್ಜುನ ಮಾತಿನ ಮೊದಲು ಅನುಕಂಪ, ಅದರಿಂದ ಲಜ್ಜೆ, ಅದರಿಂದ ಭಯ, ಅದರಿಂದ ವಿಸ್ಮಯ ಆದ್ದರ ವ್ಯಕ್ತಪಡುಸುತ್ತ°. ಓಬ್ಬ ವ್ಯಕ್ತಿ ತನ್ನ ಆತ್ಮ ವಿಶ್ವಾಸವ ಕಳಕೊಂಡಪ್ಪಗ, ಆತನ ಅಂತರಂಗದ ಅನುಭವ ದೈಹಿಕವಾಗಿ ಹೇಂಗೆ ಹೊರಹೊಮ್ಮುತ್ತು ಹೇಳ್ವದರ ಗಮನುಸೆಕು. ಆತ್ಮವಿಶ್ವಾಸ ಕಳಕ್ಕೊಂಡ ವ್ಯಕ್ತಿ ತನ್ನ ಮುಷ್ಠಿ ಬಿಗಿ ಹಿಡ್ಕೊಂಬಲೆ ಸಾಧ್ಯ ಇರ್ತನಿಲ್ಲೆ. ಅರ್ಜುನಂಗೆ ಆದ್ದು ಅದುವೇ. ಗಾಂಡೀವ ತನ್ನ ಕೈಂದ ಮುಷ್ಠಿ ಸಡಿಲಗೊಂಡು ಜಾರುತ್ತು, ಮೈ ಉರಿ ಎದ್ದು ಹೊಗೆತ್ತು. ರಥಲ್ಲಿ ನಿಂಬಲೆ ಎಡಿತ್ತಿಲ್ಲೆ. ಮನಸ್ಸು ಸ್ಥಿರ ಇಲ್ಲದ್ರೆ ಶರೀರ ತನ್ನ ಸ್ಥಿಮಿತವ ಕಳಕ್ಕೊಳ್ಳುತ್ತು. ಅದೇ ರೀತಿ ದೇಹ ಸ್ಥಿರ ಇಲ್ಲದ್ರೆ ಮನಸ್ಸು ಅಸ್ಥಿರಗೊಳ್ಳುತ್ತು. ಅರ್ಜುನ ಪರಿತಪಿಸುತ್ತಾ ಇದ್ದ°.
ಭಗವಂತ ಶ್ರೀಕೃಷ್ಣ ಅರ್ಜುನನ ವಿತಂಡವಾದಕ್ಕೆ ಕೂಡ್ಳೆ ಯಾವ ಪ್ರತಿಕ್ರಿಯೆಯನ್ನೂ ನೀಡದ್ದೆ (ವಿನಾ ವಾದಕ್ಕೆ ಹಾದಿ ಅಪ್ಪಲಾಗ ಹೇಳಿ ಆಯ್ಕು) ಅವನ ಮಾನಸಿಕ ತುಮುಲವ ಕೇಳುವ ಉತ್ತಮ ಕೇಳುವವನ ಹಾಂಗೆ ( ಮನೋವೈದ್ಯನಾಂಗೆ ) ಕೇಳಿಗೊಳ್ತ ಇದ್ದ°].
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ ।
ನ ಚ ಶ್ರೇಯೋsನುಪಶ್ಯಾಮಿ ಹತ್ವಾ ಸ್ವಜನಮಾಹವೇ ॥೩೧॥
[ ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ । ನ ಚ ಶ್ರೇಯಃ ಅನುಪಶ್ಯಾಮಿ ಹತ್ವಾ ಸ್ವಜನಂ ಆಹವೇ ॥
{ಹೇ ಕೇಶವ!, ನಿಮಿತ್ತಾನಿ ವಿಪರೀತಾನಿ ಚ ಪಶ್ಯಾಮಿ । ಆಹವೇ ಚ ಸ್ವಜನಂ ಹತ್ವಾ ಶ್ರೇಯಃ ನ ಅನುಪಶ್ಯಾಮಿ ॥}
ನಿಮಿತ್ತಾನಿ – ಶಕುನಂಗಳ, ಚ – ಕೂಡ, ಪಶ್ಯಾಮಿ – ನೋಡುತ್ತ ಇದ್ದೆ, ವಿಪರೀತಾನಿ – ವಿಪರೀತವಾದ (ಕೆಟ್ಟದ್ದಾದ / ಅಶುಭವಾದ), ಕೇಶವ – ಎಲೈ ಕೃಷ್ಣನೇ, ನ – ಇಲ್ಲೇ, ಚ – ಕೂಡ, ಶ್ರೇಯಃ – ಶ್ರೇಯಸ್ಸ, ಅನುಪಶ್ಯಾಮಿ - ಭವಿಷ್ಯಲ್ಲಿ ನೋಡುವೆ, (ನ ಅವಪಷ್ಯಾಮಿ – ಭವಿಷ್ಯಲ್ಲಿ ಕಾಂಬಲೆ ಇಲ್ಲೇ), ಹತ್ವಾ – ಕೊಂದು, ಸ್ವಜನಮ್ – ತನ್ನ ಬಂಧುಗಳ, ಆಹವೇ – ಯುದ್ಧಲ್ಲಿ]
ಹೇ ಕೇಶವಾ! ಕಾಂಬಲಾಗದ್ದ ಅಪಶಕುನಂಗೊ, ವಿಪರೀತಂಗೊ ಕಾಣುತ್ತಾ ಇದ್ದು. ಈ ಯುದ್ಧಲ್ಲಿ ಇವರೆಲ್ಲರ ಕೊಂದು ಯಾವ ಶ್ರೇಯಸ್ಸೂ ಎನ ಕಾಣುತ್ತಿಲ್ಲೆ.
['ಶಕುನಂಗೊ' (ನಿಮಿತ್ತಾನಿ) ಮದಲಿಂದಲೇ ನಂಬಿಕೆ ಮತ್ತು ಬಳಕೆ ಇತ್ತಿದ್ದು ಇಲ್ಲಿ ಗಮನುಸಲಕ್ಕು. ಮದಲಾಣವು ಶಕುನಂಗೊಕ್ಕೆ ಬಹು ಮಹತ್ವ ಕೊಟ್ಟೊಂಡಿತ್ತಿದ್ದವಡ. ಈ ಪ್ರಪಂಚಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿಪ್ಪದಡ. ಒಂದು ಪರಮಾಣುವಿಂದ ಹಿಡುದು ಬ್ರಹ್ಮಾಂಡದವರೇಗೆ ಒಂದಕ್ಕೊಂದು ಸುಸಂಬದ್ಧವಾಗಿ ಬೆಸದುಗೊಂಡಿಪ್ಪದು. ಇದುವೇ ಜ್ಯೋತಿಷ್ಯ, ಶಕುನ, ಪಂಚಾಂಗ, ಗಣಿತ. ಇಲ್ಲಿ ಯಾವುದೂ ಆಕಸ್ಮಿಕವಲ್ಲ. ನವಗೆ ತಿಳಿಯದ್ದ ಮಾತ್ರಕ್ಕೆ ಅದು ಆಕಸ್ಮಿಕ ಹೇಳಿ ಗ್ರೇಶುವದು ಶುದ್ಧವಲ್ಲ.
ಅರ್ಜುನ ಹಿಂದೆ ನಡದ ಕೆಲವು ಕೆಟ್ಟ ಶಕುನಂಗಳ ನೆನಪಿಸಿಗೊಳ್ತ°. ಇದು ಅವ° ಯುದ್ಧಭೂಮಿಗೆ ಬರೆಕ್ಕಾರೆ ಮೊದಲೇ ಗಮನಿಸಿದ್ದ°. ಅದು ಈಗ ನೆನಪಿಂಗೆ ಬಪ್ಪಲೆ ಸುರುವಾತು. ಆನೆಗೊ ಕುದುರೆಗೊ ಯುದ್ಧ ಸಿದ್ಧ ಅಪ್ಪಗ ಕಣ್ಣೀರು ಸುರಿಸಿಗೊಂಡಿತ್ತವಡ. ನರಿಗೊ ಸೇನಾಪಡೆಯತ್ತ ಊಳಿಟ್ತುಗೊಂಡಿತ್ತವಡ. ಪ್ರಾಣಿಗೊಕ್ಕೆ ರಕ್ತಪಾತದ ಮತ್ತು ಸಾವಿನ ಮುನ್ಸೂಚನೆ ಇರ್ತಡ. (ನಮ್ಮ ಮನೆಗಳಲ್ಲಿ ಮತ್ತು ಸುತ್ತ ಮುತ್ತ ನಡದ ಘಟನೆಗಳ ಸೂಕ್ಷ್ಮವಾಗಿ ಗಮನಿಸಿದರೆ ಇದು ಅಪ್ಪು ಹೇಳಿ ಕಾಂಗು). ಪ್ರ್ರಾಣಿಗೊ ಪರಿಸರಲ್ಲಿ ಅಪ್ಪಲೆ ಹೋಪ ಬದಲಾವಣೆಯ ಪೂರ್ವವಾಗಿಯೇ ಗ್ರಹಿಸಿಗೊಳ್ಳಬಲ್ಲವು. ಇದು ಮಹಾಭಾರತ ಯುದ್ಧಕ್ಕೆ ಪೂರ್ವವಾಗಿ ಕಂಡುಬಂದ ಒಂದು ಶಕುನ. ಇನ್ನು ಬ್ರಹ್ಮಾಂಡಲ್ಲಿ ಹದಿಮೂರು ದಿನಗಳ ಅಂತರಲ್ಲಿ ಎರಡು ಗ್ರಹಣ ಮಹಾಭಾರತ ಯುದ್ಧಕಾಲ ಘಟ್ಟಲ್ಲಿ ಸಂಭವಿಸಿದ್ದಡ. ಯುದ್ಧ ಪ್ರಾರಂಭವಾಗಿ ಐದನೇ ದಿನ ಒಂದು ಗ್ರಹಣ ಮತ್ತು ಪುನಃ ಹದಿಮೂರು ದಿನಗಳ ಅಂತರಲ್ಲಿ ಇನ್ನೊಂದು ಗ್ರಹಣ. ಇದು ಮೃತ್ಯು ಸೂಚಕ ಭೀಕರ ಶಕುನಡ. ಇದರ ವ್ಯಾಸರು ಮದಲೇ ಧೃತರಾಷ್ಟ್ರಂಗೆ ಹೇಳಿದ್ದವಡ. 'ಲೋಕಕಂಟಕನಾದ ನಿನ್ನ ಮಗನಿಂದ ಲೋಕ ನಾಶ ಆವ್ತು' ಹೇಳಿ.
ಈ ಶಕುನಂಗಳ ನೆನಪಿಸಿಗೊಂಡ ಅರ್ಜುನ ಕೃಷ್ಣನ 'ಕೇಶವ' ಹೇಳಿ ಅಲ್ಲಿ ದೆನಿಗೊಂಡದು. ಕೃಷ್ಣ ಹೇಳಿರೆ ಕೃಷಿ+ಣಃ = ಭೂಮಿಗೆ ಆನಂದವ /ಬಲತುಂಬಲೆ ಬಂದವ°. ಕೇಶವ ಹೇಳಿರೆ= ಕಾ+ಈಶ+ವ. ಇಲ್ಲಿ ಕಾ ಹೇಳಿರೆ ಸೃಷ್ಟಿಗೆ ಕಾರಣವಾಗಿಪ್ಪ ಚತುರ್ಮುಖ ಬ್ರಹ್ಮ. 'ಈಶ' ಹೇಳಿರೆ ಸಂಹಾರಕ್ಕೆ ಕಾರಣವಾಗಿಪ್ಪ ಶಂಕರ. ಕೇಶವ ಹೇಳಿರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿಪ್ಪ ಪರಶಕ್ತಿ. ಇಲ್ಲಿ ಕೇಶವ ಹೇಳಿ ದೆನಿಗೊಂಡದು - ಭೂಮಿಗೆ ಆನಂದವ, ತ್ರಾಣವ ಕೊಡ್ಳೆ ಇಳುದು ಬಂದ ನೀನೇ ಸೃಷ್ಟಿಕರ್ತನಾಗಿ ನೀನೇ ಸಂಹಾರಕನಾಗಿಯೂ ಈ ಮಹಾಯುದ್ಧದ ಸೂತ್ರಧಾರಿಯಾಗಿ ಇದ್ದೆ.]
ಅರ್ಜುನ ಮತ್ತೂ ಹೇಳುತ್ತ°-
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ ।
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥೩೨॥
ಕೃಷ್ಣಾ, ಈ ಗೆಲುವಿಲ್ಲಿಯಾಗಲಿ, ರಾಜ್ಯಗಳಿಸುವದರಲ್ಲಿಯಾಗಲಿ, ಸುಖದಲ್ಲಿಯಾಗಲಿ ಎನ ಆಸೆ ಇಲ್ಲೆ. ಈ ರಾಜ್ಯ ಪದವಿ ಭೋಗಂಗಳ ಅನುಭವಿಸುವ ಆ ಜೀವನಂದ ಎನಗೆ ಎಂತ ಪ್ರಯೋಜನ ?!
[ಅರ್ಜುನ ಧರ್ಮರಾಯನ ಪರ ಹೋರಾಟಕ್ಕೆ ನಿಂದವ°. ಯುದ್ಧ ನಿಲ್ಲುಸುವುದಾಗಲಿ ಅಥವಾ ಬೇರೆ ನಿರ್ಣಯಿಸುವುದಾಗಲಿ ಅದು ಕೊನೆಯದಾಗಿ ಧರ್ಮರಾಯನ ವಿವೇಚನೆಯಂತೇ ನಡೆಕು. ಇಲ್ಲಿ ಈಗ ಅರ್ಜುನ ತಾನೇ ನಿರ್ಣಾಯಕನ ಹಾಂಗೆ ಮಾತಾಡುತ್ತ. 'ಆರಿಂಗೆ ಬೇಕು ಈ ಗುರುಹಿರಿಯರ ಕೊಂದು ಗೆಲುವು ವಾ ವಿಜಯ?!' . ಇಲ್ಲಿ ಕೃಷ್ಣ ಹೇಳಿರೆ ಕರ್ಷಣೆ ಮಾಡುವವ ಹೇಳಿ ಅರ್ಥಡ., ಅರ್ಥಾತ್, ತನ್ನ ಸೌಂದರ್ಯಂದ ಆಕರ್ಷಿಸಿ ಉತ್ಕರ್ಷಣೆ ಮಾಡುವವ°. ಲೋಕದ ಆಕರ್ಷಣಾ ಶಕ್ತಿಯಾದ ನೀನು ಎಂಗಳ ಎಂತಕೆ ಇಲ್ಲಿಗೆ ಎಳತಂದೆ ಹೇಳ್ವ ಧ್ವನಿ. ಮತ್ತೆ ಹೇಳುತ್ತ - ನವಗೆ ಈ ರಾಜ್ಯ, ರಾಜ್ಯಭೋಗಂದ ಎಂತ ಪಡವಲೆ ಇದ್ದು ಗೋವಿಂದಾ?!. ಇಲ್ಲಿ ಗೋವಿಂದ ಹೇಳಿರೆ ವೇದಂಗಳಿಂದ ಪ್ರಶಂಸಿಸಲ್ಪಟ್ಟವ°. ವೇದದ ಸಮಗ್ರ ಅರ್ಥವ ತಿಳುದವ, ಭೂಮಿಗಿಳುದು ಬಂದವ, ಗೋವುಗಳ ಕಾಯ್ದವ ಇತ್ಯಾದಿ. ಕೃಷ್ಣ° ಗೋವುಗಳ ಮತ್ತು ಇಂದ್ರಿಯಂಗಳ ಎಲ್ಲಾ ಸಂತೋಷಕ್ಕೆ ಕಾರಣನಾದವ°. ಆದ್ದರಿಂದ ತನ್ನ ಇಂದ್ರಿಯಂಗಳಿಂಗೆ ಯಾವುದು ಸಂತೋಷ ಕೊಡುಗು ಹೇಳಿ ನೀನು ಅರ್ಥ ಮಾಡಿಗೊ ಹೇಳಿ ಕೃಷ್ಣಂಗೆ ಅರ್ಜುನನ ಪರೋಕ್ಷ ಧ್ವನಿ. ಆದರೆ, ಗೋವಿಂದ ಇಪ್ಪದು ನಮ್ಮ ಇಂದ್ರಿಯಂಗಳ ತೃಪ್ತಿಪಡುಸಲೆ ಅಲ್ಲ. ನಾವು ನಮ್ಮ ಇಂದ್ರಿಯಂಗಳ ಸಮರ್ಥವಾಗಿ ಉಪಯೋಗುಸಿ ಗೋವಿಂದನ ಇಂದ್ರಿಯಂಗಳ ಸಂತೋಷಪಡುಸಲೆ ಯತ್ನಿಸಿದರೆ ನಮ್ಮ ಇಂದ್ರಿಯಂಗಳೂ ತೃಪ್ತಿ ಪಡೆತ್ತು. ಕೃಷ್ಣ ಅದೆಷ್ಟೋ ದುಷ್ಟ ರಕ್ಕಸರ, ರಾಜರುಗಳ ಸಂಹಾರ ಮಾಡಿದವ°. ಆದರೆ, ಎಲ್ಲಿಯೂ ಆ ಸಿಂಹಾಸನವ ಏರಿ ಅರಸೊತ್ತಿಗೆ ಮಾಡಿದ್ದನಿಲ್ಲೆ. ಗೋಪಾಲರ ಜೊತೆಗೂಡಿ ಗೋವುಗಳ ರಕ್ಷಿಸಿದವ°. ನಿನ್ನ ಹಾಂಗೆ ಎನಗೂ ಯಾವುದೇ ಸಿಂಹಾಸನ ಏರುವ ಅಭಿಲಾಷೆ ಇಲ್ಲೆ ಹೇಳಿ ಬನ್ನಂಜೆ ವಿಶ್ಲೇಶಿಸುತ್ತವು.
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ।
ತ ಇಮೇsವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾಧನಾನಿ ಚ ॥೩೩॥
[ಯೇಷಾಂ ಅರ್ಥೇ ಕಾಂಕ್ಷಿತಂ ನಃ ರಾಜ್ಯಂ ಭೋಗಾಃ ಸುಖಾನಿ ಚ । ತೇ ಇಮೇ ಅವಸ್ಥಿತಾಃ ಯುದ್ಧೇ ಪ್ರಾಣಾನ್ ತ್ಯಕ್ತ್ವಾ ಧನಾನಿ ಚ ॥
{ಯೇಷಾಂ ಅರ್ಥೇ ನಃ ರಾಜ್ಯಂ ಕಾಂಕ್ಷಿತಂ, ಭೋಗಾಃ ಸುಖಾನಿ ಚ । ತೇ ಇಮೇ ಪ್ರಾಣಾನ್ ಧನಾನಿ ಚ ತ್ಯಕ್ತ್ವಾಯುದ್ಧೇ ಅವಸ್ಥಿತಾಃ ।}
ಯೇಷಾಮ್ – ಆರ, ಅರ್ಥೇ - ಸಲುವಾಗಿ, ಕಾಂಕ್ಷಿತಂ – ಅಪೇಕ್ಷಿಸುವ, ನಃ – ನಮ್ಮಿಂದ, ರಾಜ್ಯಂ – ರಾಜ್ಯವ, ಭೋಗಾಃ - ಲೌಕಿಕ ಭೋಗಂಗಳ, ಸುಖಾನಿ – ಸುಖಸಂತೋಷಂಗಳ, ಚ – ಕೂಡ, ತೇ – ಅವೆಲ್ಲವೂ, ಇಮೇ – ಇವು, ಅವಸ್ಥಿತಾಃ – ಇದ್ದು. ಯುದ್ಧೇ – ಯುದ್ಧಲ್ಲಿ, ಪ್ರಾಣಾನ್ – ಪ್ರಾಣಂಗಳ, ತ್ಯಕ್ತ್ವಾ – ಬಿಟ್ಟು, ಧನಾನಿ – ಸಂಪತ್ತುಗಳ, ಚ – ಸಹ]
ರಾಜ್ಯ ಸುಖ ಮತ್ತು ಭೋಗಂಗಳ ಬಯಸುವವು ಎಲ್ಲೊರು ತಮ್ಮ ಸಂಪತ್ತನ್ನೂ, ಜೀವದ ಆಸೆಯನ್ನೂ ಬಿಟ್ಟು ಯುದ್ಧಕ್ಕಾಗಿ ನಿಂದುಗೊಂಡಿದ್ದವು.
{ ದಿವ್ಯಪುರುಷರಲ್ಲಿ ವಾ ದೇವತೆಗಳಲ್ಲಿ ಇಪ್ಪ ಎಲ್ಲಾ ಸದ್ಗುಣಂಗೊ ಭಗವಂತನ ಮೇಗೆ ನಿಜ ಭಕ್ತಿ ಇಪ್ಪವರಲ್ಲಿ ಇರ್ತಡ. ಲೌಕಿಕ ಸುಖ ಅಪೇಕ್ಷೆ ಪಡುವವಂಗೆ ಈ ಗುಣ ಇರ್ತಿಲ್ಲೇಡ. ಏಕೇಳಿರೆ, ಅವ ಐಹಿಕ ಶಕ್ತಿಗಳಿಂದ ಆಕರ್ಷಿತನಾಗಿರ್ತ. ಆದ್ದರಿಂದಲೇ ಯುದ್ಧಭೂಮಿಲಿ ತನ್ನ ನೆಂಟರಿಷ್ಟರ ಸ್ನೇಹಿತ ಹಿತೈಷಿಗಳ ಕಂಡು ಅರ್ಜುನಂಗೆ ತಡವಲೆಡಿಗಾಗದ್ದಷ್ಟು ಕರುಣೆ ಉಂಟಾದ್ದಡ. ಎದುರು ಪಕ್ಷಲ್ಲಿಪ್ಪ ತನ್ನ ಬಂಧು ಬಾಂಧವರ ಕಂಡು ಅವನ ಅಂತಃಕರಣ ಕರಗಿ, ಶರೀರ ನಡುಗಿ, ಬಾಯಿ ಒಣಗಿ, ಧನುಸ್ಸು ಕೈ ಜಾರಿ ಅವರ ಮೇಲೆ ಶಕ್ತಿ ಪ್ರಯೋಗಿಸಿ ಪ್ರಾಣ ಹೀರುವಲ್ಲಿ ಅವನ ಮೃದು ಮನಸ್ಸು ಒಪ್ಪಿತ್ತಿಲ್ಲೇಡ. ಭಗವಂತನ ಮನಸ್ಸಿನ ಹಾಂಗೇ ತನ್ನ ನಿಜ ಭಕ್ತನ ಮೃದು ಮನಸ್ಸು ಹೇಳಿ ವಿದ್ವಾಂಸರ ವ್ಯಾಖ್ಯಾನ. ಯುದ್ಧ ಸನ್ನಿವೇಶಲ್ಲಿ ತನ್ನ ಬಾಂಧವರ ಕಂಡು, ಪ್ರಾಣ ಹಾನಿಯ ನೆನೆದು, ಹೃದಯ ಕರಗಿ, ತನ್ನ ಚರ್ಮವೇ ಸುಡುವುದಕ್ಕೆ ಕಾರಣವಾದ್ದು ಅವನ ಲೌಕಿಕ ಭಯ, ಆದ್ದರಿಂದ ತಾಳ್ಮೆಗೆಟ್ಟ. ಲೌಕಿಕ ವಿಷಯಲ್ಲಿ ಅತೀವ ಮೋಹ ಮನುಷ್ಯನ ದಿಗ್ಭ್ರಾಂತ ಸ್ಥಿತಿಗೆ ತಂದೊಡ್ಡುತ್ತು. ಅರ್ಜುನ ಯುದ್ಧಲ್ಲಿ ನೋವುಂಟುಮಾಡುವ ಸೋಲ ಕಲ್ಪಿಸಿಗೊಂಡ. ಶತ್ರುಗಳ ಮೇಲೆ ವಿಜಯ ಸಾಧಿಸಿದರೂ ಅವಂಗೆ ಅದು ಮಾನಸಿಕ ಸುಖ ಅಲ್ಲ ಹೇಳಿ ಕಂಡತ್ತು. ಪ್ರಾಪಂಚಿಕ ನೋವು ಯಾತನೆಯ ಅನುಭವುಸುತ್ತ°. ಯುದ್ಧಲ್ಲಿ ತನಗೆ ವಿಜಯ ಆದರೂ ಅದು ಮುಂದೆ ತನ್ನ ದುಃಖಕ್ಕೆ ಮಾತ್ರ ಕಾರಣ ಆವ್ತು ಹೇಳಿ ಭಾವಿಸಿದ°. ಬಾಹ್ಯ ಪ್ರಪಂಚಕ್ಕೆ ಹೀಂಗೆ ಕಂಡರೂ ಅಲ್ಲಿಪ್ಪ ಒಳಾರ್ಥ ಅರ್ಜುನಂಗೆ ಆದ ನಿಜ ಮಾನಸಿಕ ಗೊಂದಲವ ನಾಜೂಕಿಲ್ಲಿ ಕೃಷ್ಣನತ್ರೆ ತೋಡಿ ತನ್ನ ಕರ್ತವ್ಯಂದ ಜಾರ್ಲೆ ನೋಡ್ತ°. }
ಮುಂದೆ ಎಂತಾತು… ಬಪ್ಪ ವಾರ ನೋಡುವೋ°…
ಮುಂದುವರಿತ್ತು..
ಭಗವದ್ಗೀತಾ ಶ್ಲೋಕ ಶ್ರವಣಕ್ಕೆ:
Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtsey: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಯೋತ್ಸ್ಯಮಾನನ್ – ಯುದ್ಧಮಾಡುವವರ, ಅವೇಕ್ಷೇ – ನೋಡುತ್ತೆ, ಅಹಂ – ಆನು, ಯೇ – ಯಾವ, ಏತೇ – ಅವ್ವು, ಅತ್ರ – ಇಲ್ಲಿ, ಸಮಾಗತಾಃ – ಸೇರಿದ್ದವು, ಧಾರ್ತರಾಷ್ಟ್ರಸ್ಯ – ಧೃತರಾಷ್ಟ್ರನ ಮಗನ (ದುರ್ಯೋಧನನ), ದುರ್ಬುದ್ಧೇಃ – ದುರುಬುದ್ಧಿಯವನಾದ, ಯುದ್ಧೇ – ಯುದ್ಧಲ್ಲಿ, ಪ್ರಿಯ – ಹಿತವ, ಚಿಕೀರ್ಷವಃ –ಮಾಡಬಯಸುವವ್ವು.] ಕೀಳುಮನಸ್ಸಿನ ಬುದ್ಧಿಗೇಡಿ ದುರ್ಯೋಧನನ ಸಂತೋಷಪಡುಸಲೆ ಅವನ ಹಿತಬಯಸಿ ಅವಂಗೆ ಸಹಾಯ ಮಾಡ್ಳೆ ಯುದ್ಧಸನ್ನದ್ಧರಾಗಿ ಇಲ್ಲಿಗೆ ಆರೆಲ್ಲ ಬಯಿಂದವು ಹೇದು ನೋಡಬಯಸುತ್ತೆ.
{ ತನ್ನ ಅಪ್ಪನೊಟ್ಟಿಂಗೆ ಸೇರಿ ದುರ್ಯೋಧನ ದುಷ್ಟಯೋಜನೆ ಎಲ್ಲವನ್ನೂ ಮಾಡಿ ಪಾಂಡವರ ಮುಗುಶಲೆ ಪ್ರಯತ್ನ ಪಟ್ಟದು ರಹಸ್ಯ ಸತ್ಯ. ಆದ್ದರಿಂದ ಅವನ ಪಕ್ಷವ ಸೇರಿದವು ಎಲ್ಲಾ ಒಂದು ಬಗೆಯ ಸಮಾನ ಮನಸ್ಸಿನವ್ವೇ. ಅದು ಆರಾರು ಹೇಳಿ ಯುದ್ಧಂದ ಮದಲೆ ನೋಡೇಕ್ಕು, ಜೊತೆಗೆ ತಾನು ಆರಾರ ಎದುರುಸೇಕು ಹೇಳಿ ತನ್ನ ಜೊತೆ ಇಪ್ಪ ಭಗವಂತನನ್ನೇ ಮರದು ಅಹಂಕಾರದ ದಾಸನಾಗಿ ಅಲ್ಲಿ ಸೇರಿದ ಬಲದ ಕಲ್ಪನೆ ಮಾಡಬಯಸಿದ್ದು ಅರ್ಜುನ}
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನೈ ಭಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
{ಭಗವಂತ ಶ್ರೀಕೃಷ್ಣ ಅರ್ಜುನನ ವಿತಂಡವಾದಕ್ಕೆ ಕೂಡ್ಳೆ ಯಾವ ಪ್ರತಿಕ್ರಿಯೆಯನ್ನೂ ನೀಡದ್ದೆ (ವಿನಾ ವಾದಕ್ಕೆ ಹಾದಿ ಅಪ್ಪಲಾಗ ಹೇಳಿ ಆಯ್ಕು) ಅವನ ಮಾನಸಿಕ ತುಮುಲವ ಕೇಳುವ ಉತ್ತಮ ಕೇಳುವವನ ಹಾಂಗೆ ( ಮನೋವೈದ್ಯನಾಂಗೆ ) ಕೇಳಿಗೊಳ್ತ ಇದ್ದ°]}
ಮನೋವೈದ್ಯಂಗೊಕ್ಕೆ ಶ್ರೀ ಕೃಷ್ನ ಕಲುಶಿದ ಪಾಠ ಇದು ಅಲ್ಲದೋ..?
[ಉತ್ತರುಸಿ]
ಪ್ರತಿ ಗುರುವಾರಕ್ಕೆ ಹೇಳಿ ಎದುರು ನೋಡುವ ಹಾಂಗೆ ಆಯಿದು, ನಿಂಗಳ ಲೇಖನಕ್ಕಾಗಿ. ಧನ್ಯವಾದಂಗೊ.
[ಉತ್ತರುಸಿ]
ಅರ್ಜುನನ ಭಾವಂಗಳ ವಿವರುಸಿದ್ದು ತುಂಬಾ ಇಷ್ಟ ಆತು…
“ಇಲ್ಲಿ ಅರ್ಜುನಂಗೆ ಸಣ್ಣ ಮಾನಸಿಕ ಚಿಕಿತ್ಸೆ ಮಾಡ್ಳೆ ಕೃಷ್ಣ ಬಯಸಿದ್ದ. ಈ ರೀತಿ ಶ್ರೀಕೃಷ್ಣ ರಥವ ಅರ್ಜುನನ ಕಣ್ಣಿಂಗೂ ಮನಸ್ಸಿಂಗೂ ನಾಟುತ್ತಾಂಗೆ ನಿಲ್ಲಿಸಿದ್ದು ಉದ್ದೇಶಪೂರ್ವಕವಾಗಿಯೇ. ಇಲ್ಲಿ ಅರ್ಜುನನ ಮನಃಸ್ಥಿತಿಯ ಪರೀಕ್ಷೆ ಮಾಡ್ಳೆ ಬಯಸಿದ್ದು ಭಗವಂತ. ”
ಸೂಕ್ಷ್ಮವಾಗಿ ಗಮನಿಸಿರೆ ನಮ್ಮ ನಮ್ಮ ಜೀವನಲ್ಲಿಯೂ ಹೀಂಗಿದ್ದ ಸಣ್ಣ ಸಣ್ಣ ಚಿಕಿತ್ಸೆಗಳ ಮೂಲಕ ದೊಡ್ಡ ಯುದ್ದವ ಎದುರುಸುಲೇ ನಮ್ಮ ಸಜ್ಜುಗೊಳಿಸುವ ಆ ಭಗವಂತನ ಕೃಪೆ ಅರ್ಥ ಆವುತ್ತು…
[ಉತ್ತರುಸಿ]
ಅರ್ಜುನನ ಮನಸ್ಥಿತಿಯ ವಿಶ್ಲೇಷಣೆ ಲಾಯಿಕ ಆಯಿದು.
ಪ್ರತಿಯೊಬ್ಬನ ಜೀವನಲ್ಲಿಯೂ ಹೀಂಗಿಪ್ಪ ಘಟನೆಗೊ ಸಂಭವಿಸುತ್ತಾ ಇರ್ತು.
ಎದುರುಸುವ ಧೈರ್ಯವ ಶ್ರೀಕೃಷ್ಣ ಅಂದೇ ಬೋಧಿಸಿದ್ದ.
ನಾವು ಸುಲಾಬಲ್ಲಿ ತಿಳ್ಕೊಳ್ತ ಹಾಂಗೆ ಮಾಡ್ತ ಚೆನ್ನೈ ಭಾವನ ಶ್ರಮಕ್ಕೆ ನಮೋ ನಮಃ
[ಉತ್ತರುಸಿ]
ಹೃಷೀಕೇಶ ಸಿಕ್ಕೆಕಾರೆ ಗುಡಾಕೇಶನೇ ಆಯೆಕು.. ವಾಹ್..!!
ಕೃಷ್ಣ, ಕೇಶವ ಮುಂತಾದ ಶಬ್ದಂದಗಳ ಅರ್ಥವ ತುಂಬ ಚೆಂದಕೆ ವಿವರುಸಿದ್ದಿ…
ಕಾದು ಕೂಯಿದೆ ಇನ್ನಾಣ ವಾರಕ್ಕೆ
[ಉತ್ತರುಸಿ]
ಪ್ರತಿಯೊ೦ದು ವಿಷಯವನ್ನೂ ಎಳೆ ಎಳೆಯಾಗಿ ವಿವರುಸುತ್ತಾ ಇಪ್ಪ ಚೆನ್ನೈಭಾವ೦ಗೆ ನಮನ.
ಹೊಸತನ ತು೦ಬಿದ್ದು ಭಗವದ್ಗೀತಾ ಸಾರಲ್ಲಿ,ಪ್ರತಿ ಕ೦ತಿಲಿಯೂ ಸುಮಾರು ಕಲಿವ ಯೊಗ,ಭಾಗ್ಯ ಸಿಕ್ಕಿತ್ತು.
[ಉತ್ತರುಸಿ]