ನಾವು ಎಂತಕೆ ‘ತುಳಸಿ’ಯ ಪೂಜಿಸುತ್ತು?

June 9, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅನೇಕ ಭಾರತೀಯ ಮನೆಗಳ ಮುಂಭಾಗಲ್ಲಿ ತುಳಸಿ ಕಟ್ಟೆ, ಹಿಂಭಾಗ ಅಥವಾ ಮನೆ ಜಾಲ ಕರೇಲಿ ‘ತುಳಸಿ ವೃಂದಾವನ’ ನೆಟ್ಟು ಬೆಳಸುತ್ತು. ಪೇಟೆಗಳಲ್ಲಿಯೂ ಬಹುಮಾಡಿ ಕಟ್ಟಡ ಬಡಾವಣೆಗಳಲ್ಲಿಯೂ ತುಳಸಿ ಕುಂಡ ಮಡಿಕ್ಕೊಳ್ಳುತ್ತವು. ಅದಕ್ಕೆ ನಿತ್ಯ ದೀಪ ಹಚ್ಚಿ ನೀರೆರದು ಪ್ರದಕ್ಷಿಣೆ ಬಂದು ನಮಸ್ಕರಿಸಿ ಪೂಜಿಸುತ್ತು. ತುಳಸಿ ಗಿಡಡ ಕಾಂಡ, ಎಲೆ, ಬೀಜ ಎಂತಕೆ ಬುಡಲ್ಲಿ ಇಪ್ಪ ಮಣ್ಣು (ಮೃತ್ತಿಕೆ) ಕೂಡ ಪವಿತ್ರವೇ. ದೇವರಿಂಗೆ ನೈವೇದ್ಯ ಮಾಡುವಾಗ ದಳವ ನೀರು ಪ್ರೋಕ್ಷಿಸಿ ಅದರ ಮೇಗೆ ಮಡುಗುತ್ತು. ದೇವರ ಅರ್ಚನೆ ಕೂಡ ತುಳಸಿಯಿಂದಲೇ ಮಾಡುವುದು ಇದ್ದು. ವಿಶೇಷವಾಗಿ ವೈಷ್ಣವಂಗೋ ಪೂಜೆಲಿ ಹೆಚ್ಚಾಗಿ ತುಳಸಿಯನ್ನೇ ಉಪಯೋಗುಸುವದು. ಮಹಾವಿಷ್ಣುವಿಂಗೆ ತುಳಸಿ ಬಹು ಪ್ರಿಯ. ಪವಿತ್ರವಾದ ಈ ತುಳಸಿಲಿ ಔಷಧೀಯ ಗುಣ ಕೂಡ ಇದ್ದು.

ತುಳಸಿ = ತುಲನಾ ನಾಸ್ತಿ ಅಥೈವ ತುಳಸಿ.
ಯಾವುದು (ತನ್ನ ಗುಣಂಗಳಿಂದ) ಅನುಪಮವೋ ಅದು ತುಳಸಿ.

ಶಂಖಚೂಡ ಹೇಳ್ವ ಒಬ್ಬ ಗಂಧರ್ವನ ಪತ್ನಿ ಹೆಸರು ಆಗಿದ್ದತ್ತು ತುಳಸಿ. ಅದೊಂದು ಸಂದರ್ಭಲ್ಲಿ ಶ್ರೀಕೃಷ್ಣ ಮೋಸಲ್ಲಿ ತಾನು ಪಾಪಕಾರ್ಯ ಮಾಡುತ್ತಾಂಗೆ ಪ್ರೇರೇಪಿಸಿದ ಹೇಳಿ ಭಾವಿಸಿ ‘ಸಾಲಿಗ್ರಾಮ’ದ ಕಲ್ಲು ಅಪ್ಪಹಾಂಗೆ ಶಾಪ ಕೊಟ್ಟತ್ತಡ. ತುಳಸಿಯ ಭಕ್ತಿ ಹಾಂಗೂ ಅದರ ಧರ್ಮವ್ರತವ ಕಂಡು ಪರಮಾತ್ಮ ಅದಕ್ಕೆ ಪೂಜನೀಯ ಗಿಡ ಆಗು ಹೇಳಿ ಹರಸಿ ಅದು ತನ್ನ ಶಿರವ ಅಲಂಕರಿಸಲಿ ಹೇಳಿ ಹರಸಿದನಡ. ಇಷ್ಟಲ್ಲದ್ದೆ ತುಳಸಿ ಇಲ್ಲದ್ದೆ ತನಗೆ ಎಂತ ಸಮರ್ಪಿಸಿರೂ ಅದು ಅಪೂರ್ಣ ಹೇಳಿ ಹೇಳಿದನಡ. ಆದ್ದರಿಂದಲೇ ಭಗವಂತನ ಅತಿ ಪ್ರಿಯವಾದ ತುಳಸಿಯ ನಾವು ಭಕ್ತಿ ಭಾವಂದ ಪೂಜಿಸುತ್ತು.

ಸತ್ಯಭಾಮೆಯು ಶ್ರೀಕೃಷ್ಣನ ತುಲಾಭಾರ ಮಾಡಲೆ ಹೆರಟು ತನ್ನ ಎಲ್ಲಾ ಸಂಪತ್ತು ಮಡುಗಿ ತೂಗಿತ್ತಡ. ಅಂದರೂ ತಕ್ಕಡಿ ಸಮಭಾರ ಸ್ಥಿತಿಗೆ ಬಯಿಂದಿಲ್ಲೆ. ಸೋತತ್ತನ್ನೇ ಹೇಳಿ ಗ್ರೇಶಿಯೊಂಡಿಪ್ಪಗ ರುಕ್ಮಿಣಿ ಅತ್ಯಂತ ವಿನಯ ಭಕ್ತಿ ಭಾವಂದ ಒಂದು ತುಳಸಿ ದಳ ಆ ಸತ್ಯಭಾಮೆಯ ಸಂಪತ್ತಿನ ಮೇಗೆ ಮಡಗಿದ ತಕ್ಷಣ ತಕ್ಕಡಿ ಸಮಸ್ಥಿತಿಗೆ ಬಂತಡ. ಹೀಂಗೆ, ತುಳಸಿ ಅತ್ಯಂತ ಉತ್ಕೃಷ್ಟ ಹೇಳಿ ಜಗತ್ತಿಗೆ ಸಾರಲ್ಪಟ್ಟತ್ತು. ಹೇಳಿರೆ, ಇಲ್ಲಿ ಮುಖ್ಯ ಗೂಢ ಅರ್ಥ ಎಂತರ ಕೇಳಿರೆ, ಪರಮಾತ್ಮಂಗೆ ನಮ್ಮ ಸಮರ್ಪಣೆ ಅತ್ಯಂತ ಅಲ್ಪ ಪ್ರಮಾಣದ್ದು ಆಗಿದ್ದರೂ ಅದನ್ನೇ ನಿಜ ಭಕ್ತಿ ಭಾವಂದ ಅರ್ಪಿಸಿರೆ ಬಾಕಿ ಎಲ್ಲವೂ ಗೌಣ . ಇದುವೇ ಅತ್ಯಂತ ಬೆಲೆಯುಳ್ಳದ್ದು .

ಔಷಧೀಯವಾಗಿ ನೋಡಿರೆ ನಮ್ಮ ಸಾಮಾನ್ಯ ನೆಗಡಿ ಸೇರಿದಂತೆ, ದೀರ್ಘ ಕಾಯಿಲೆಗಳಾದ ಸಿಹಿಮೂತ್ರ, ವ್ರಣಾದಿ (ಕೇನ್ಸರ್), ಗೂರಲು , ತೊನ್ನು ಇತ್ಯಾದಿ ಅನೇಕ ರೋಗ ಪರಿಹಾರಕ ಶಕ್ತಿ ಹೊಂದಿದ್ದು ಹೇಳಿ ಕಂಡುಹಿಡುದ್ದವು. ಆದ್ದರಿಂದಲೇ, ತುಳಸಿಯ ಮಹತ್ವ ಗಮನಿಸಿಯೇ ಇದಕ್ಕೆ ದೇವತೆಯ ಸ್ಥಾನ ಕಲ್ಪಿಸಿದ್ದವು.

ತುಳಸಸ್ಯಮೃತ ಸಂಭೂತೆ ಕೃಷ್ಣಸ್ಯ ಪ್ರಿಯ ವಲ್ಲಭೆ
ವಿಷ್ಣೋರಾರಾಧನಾರ್ಥಾಯ ಛಿಂದಂತಿ ಕ್ಷಮಯಾ ಕುರು ||

ಹೇ, ಅಮೃತ ಸಂಭೂತೆಯಾದ ತುಳಸಿಯೇ, ಕೃಷ್ಣಂಗೆ ಪ್ರಿಯವಾದವಳೇ, ವಿಷ್ಣುವಿನ ಪೂಜೆಗಾಗಿ ಈ ತುಳಸಿ ಎಲೆಯ ಕೀಳುತ್ತಾ ಇದ್ದೆ. ದಯಮಾಡಿ ಎನ್ನ ಕ್ಷಮಿಸು.

ಯನ್ಮೂಲೇ ಸರ್ವ ತೀರ್ಥಾನಿ ಯನ್ನಗ್ರೇ ಸರ್ವ ದೇವತಾಃ
ಯನ್ಮಧ್ಯೇ ಸರ್ವ ವೇದಾಶ್ಚ ತುಳಸೀ ತಾಂ ನಮಾಮ್ಯಹಂ ||

ಯಾವ ಗಿಡದ ಮೂಲಲ್ಲಿ ಎಲ್ಲಾ ಪುಣ್ಯ ಕ್ಷೇತ್ರಂಗಳೂ, ತುದಿಲಿ ಎಲ್ಲ ದೇವತೆಗಳೂ, ಮಧ್ಯಲ್ಲಿ ಸರ್ವ ವೇದಂಗಳೂ ಅಡಕವಾಗಿದ್ದೋ ಅಂತಹ ತುಳಸೀ ಗಿಡಕ್ಕೆ ಆನು ನಮಸ್ಕರಿಸುತ್ತೆ.

ಹರೇ ರಾಮ.

(ಸಂಗ್ರಹ)

ನಾವು ಎಂತಕೆ ‘ತುಳಸಿ’ಯ ಪೂಜಿಸುತ್ತು?, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ತುಳಸಿಯ ಮಹಿಮೆಯ ಅರುಹಿದ ಚೆನ್ನೈ ಭಾವಂಗೆ ಧನ್ಯವಾದಂಗೊ. ಭಾವನ ವಿಚಾರಮಾಲಿಕೆಗೆ ತುಳಸಿಯುದೆ ಸೇರಿದ ಹಾಂಗಾತು. ವೃಂದಾ ಹೇಳಿರುದೆ ತುಳಸಿಯ ಮದಲಾಣ ಹೆಸರು ಅಲ್ಲದೊ.

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ

  ಒಳ್ಳೇ ಲೇಖನಕ್ಕೆ ಒಪ್ಪ೦ಗೊ ಚೆನ್ನೈ ಭಾವಾ.. ಎ೦ಗಳ ಆಫೀಸಿನ ಕರೇಲಿಯುದೆ ಒ೦ದು ಹತ್ತೈವತ್ತ್ತು ಗೆಡುಗೊ ಇಪ್ಪ ಸಣ್ಣ ಒ೦ದು ತುಳಸಿ ತೋಟವನ್ನೇ ಮಾಡಿದ್ದೆಯೊ°. ಉದಿಯಪ್ಪಗ ಆಫೀಸಿ೦ಗೆ ಹೊಗುವದರ ಮೊದಲೇ ಇದರ ಕರೇಲಿ ಹೋಗಿ ಒ೦ದರ ಈ ಗೆಡುಗಳ ಮುಟ್ಟಿ ಮಾತನಾಡುಸಲೆ ಭಾರೀ ಕೊಶಿ ಆವ್ತು. ತುಳಸಿಯ ಕಥೆಲಿ ಜಲ೦ಧರನ ಬಗ್ಗೆ ಎಲ್ಲಿಯೋ ಕೇಳಿದ ನೆ೦ಪು.. ಅದು ಎ೦ತರಪ್ಪಾ..?

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಜಲ೦ಧರನ ಹೆ೦ಡತಿ ವೃ೦ದೆ,ಮಹಾನ್ ಪತಿವೃತೆ. ದೇವಲೋಕವ ಗೆದ್ದ ಜಲ೦ಧರನ ವಧೆ ಆಯೆಕ್ಕಾರೆ ವೃ೦ದೆಯ ಪಾತಿವೃತ್ಯವ ಕೆಡುಸೆಕ್ಕಾಗಿ ಬತ್ತು.(ಹಾ೦ಗೊ೦ದು ವರ ಇತ್ತು). ವಿಷ್ಣು,ಜಲ೦ಧರನ ರೂಪಲ್ಲಿ ವೃ೦ದೆಯ ಹತ್ತರೆ ಬ೦ದು ವಧೆಗೆ ಕಾರಣ ಆವುತ್ತ. ಆವಗ ದುಖಲ್ಲಿ ವೃ೦ದೆ ತನ್ನನ್ನೇ ಸುಟ್ತುಗೊ೦ಡು ಬೂದಿ ಆವುತ್ತು. ಭಕ್ತೆಯಾದ ವೃ೦ದೆಗೆ ಮುಕ್ತಿ ಸಿಕ್ಕುಲೆ ಬೇಕಾಗಿ ವಿಷ್ಣು ಅದರ ತೊಳಸಿ ಸೆಸಿಯಾಗಿಸುತ್ತ°,ಲಕ್ಷ್ಮಿಯ ತೊಳಸಿಗೆ ಕಟ್ಟೆಯಾಗು ಹೇಳುತ್ತ°.
  ಇದು ಯಕ್ಷಗಾನ ರೂಪಲ್ಲಿ ನೋಡಿದ ನೆನಪ್ಪು.
  ಡಾಗುಟ್ರಕ್ಕ ಬರದ ತುಳಸಿಯ ಮಹತ್ವದ ವೈದ್ಯಕೀಯ ಲೇಖನ ಮದಲು ಓದಿದ್ದು.ಈಗ ಬ೦ದ ಈ ವಿವರ೦ಗೊಕ್ಕೆ ಚೆನ್ನೈಭಾವ೦ಗೆ ಧನ್ಯವಾದ.

  [Reply]

  VA:F [1.9.22_1171]
  Rating: +1 (from 1 vote)
 3. ಸುವರ್ಣಿನೀ ಕೊಣಲೆ

  ತುಳಸಿಯ ಮಹತ್ವದ ಬಗ್ಗೆ ಬರದ್ದು ಲಾಯ್ಕಾಯ್ದು. ತುಳಸಿಯ ಬಗ್ಗೆ ಆರೋಗ್ಯದ ಅಂಕಣಲ್ಲಿ ಆನು ಬರದಿತ್ತಿದ್ದೆ, ಇಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಕೊಟ್ಟದು ಸಂತೋಷ ಆತು :)

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರಿಂಗೂ ಧನ್ಯವಾದ. ಪೂರಕ ಮಾಹಿತಿ ಕೊಟ್ಟು ಸಹಕರಿಸಿದ್ದಕ್ಕೆ ಮುಳಿಯ ಭಾವಂಗೂ ಪ್ರತ್ಯೇಕ ಧನ್ಯವಾದ.

  ಹೇಳಿದಾಂಗೆ ಒಂದು ವಿಚಾರ ಬಿಟ್ಟು ಹೋತು. ನಾವು ಮನೆ ಎದುರು ಕಟ್ಟುವ ತುಳಸಿ ಕಟ್ಟಗೂ ಕಟ್ಟೆಯ ಉದ್ದ ಅಗಲ ಎತ್ತರ ಒಂದು ಇತಿ ಮಿತಿ ಲೆಕ್ಕಾಚಾರ ಇದ್ದಡ ( ಮನೆ ಮೆಟ್ಟು ಕಲ್ಲಿಂದ ೫ ವಾ ೭ ಅಡಿ [ಬೆಸ ಸಂಖ್ಯೆ ಸ್ತ್ರೀ ಸೂಚಕ]) ಎದುರು. ಹೇಂಗೆ ಹೇಳಿ ಸರೀ ನೆಂಪಿಲ್ಲೆ. ಬೈಲಿಲಿ ಆರಿಂಗಾರು ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿಕ್ಕಿ. ತುಳಸಿ ಕಟ್ಟೆ ದೇವರ ಕೋಣೆಯ ಅದೇ ಲೆವೆಲಿಲಿ ಇರೆಕು ದೇವರ ಕೋಣೆ ಬಾಗಿಲಿನ ತುಸು ಬಲ ಬದಿಗೆ (ಬಲ ಬದಿ ಲಕ್ಷ್ಮೀ ಮತ್ತು ಶಕ್ತಿ ಆಕರ್ಷಕ ಕೇಂದ್ರ). ತಗ್ಗಾದರೆ ಲಕ್ಷ್ಮೀ ಮನೆಂದ ಹೆರ, ಎತ್ತರ ಆದರೆ ಅದು ಬರೆ ಒಂದು ಕಟ್ಟೆ ಹೇಳಿ ಕೇಳಿದ ನೆಂಪು. ಹಾಂಗೇ ತುಳಸಿ ಕಟ್ಟೆಲಿ ಮತ್ತು ಆರ್ಚನೆಗೆ ಉಪಯೋಗಿಸೆಕ್ಕಾದ್ದು ಬಿಳಿ ತುಳಸಿ. ಕರಿ ತುಳಸಿ ಔಷಧಿಗೆ ಉಪಯುಕ್ತ. ಕೆಲವು ಬಗೆ ವಿಷ ನೀಗುಸುವ ಗುಣ ಕರಿ ತುಳಸಿ (ಕೃಷ್ಣ ತುಳಸಿ)ಲಿ ಇದ್ದಡ.

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಎಲ್ಲಾ ಹಿಂದುಗಳ ಮನೆ ಎದುರು ಒಂದು ತುಳಸಿ ಕಟ್ಟೆ ಇದ್ದೇ ಇರ್ತು.
  ತುಳಸಿ ಇಲ್ಲದ್ದೆ ಯಾವದೇ ದೇವತಾ ಕಾರ್ಯ ಇಲ್ಲೆ. ಅರೋಗ್ಯಲ್ಲಿ ಸಣ್ಣ ಮಟ್ಟಿನ ಏರುಪೇರು ಬಂದಪ್ಪಗ ಮೊದಾಲು ನೆಂಪು ಆಗಿ ಉಪಯೋಗಕ್ಕೆ ಸಿಕ್ಕುವದು ಇದೇ ತುಳಸಿ
  [ತುಳಸಿ = ತುಲನಾ ನಾಸ್ತಿ ಅಥೈವ ತುಳಸಿ.
  ಯಾವುದು (ತನ್ನ ಗುಣಂಗಳಿಂದ) ಅನುಪಮವೋ ಅದು ತುಳಸಿ]-ಇದು ವ್ಯಾಪಕ ಅರ್ಥ ಕೊಟ್ಟತ್ತು
  ಒಳ್ಳೆ ಮಾಹಿತಿ ಕೊಟ್ಟ ಚೆನ್ನೈ ಭಾವಂಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  “ನಾವು ಎಂತಕೆ…” ಹೇಳ್ತ ಸಂಸ್ಕಾರ ಲೇಖನಮಾಲೆ ನಿಜಕ್ಕೂ ಸತ್ವಯುತವಾಗಿದ್ದು ಭಾವ.
  ಹಲವಾರು ವಿಚಾರಂಗೊ ಗೊಂತಾತು.

  ಎಲ್ಲರ ಮನೆಯೆದುರೆ ಇರ್ತ ತೊಳಶಿಯ ವಿಚಾರವ ತೊಳಶಿ ತಿಳುಶಿದಿ.
  ಕೊಶಿ ಆತು.

  ಇನ್ನೂ ಬತ್ತಾ ಇರಳಿ. ಹರೇರಾಮ.

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ತುಳಸಿ ಸೆಮ್ಮಕ್ಕೆ ರಾಮಬಾಣ.
  ಕೆಲವು ಸರ್ತಿ ಕೈಗೆ ಒಂದು ಜಾತಿ ಕರೀ ಹುಳು ತಾಗಿರೆ ಎಷ್ಟು ಸೋಪು ಹಾಕಿ ತೊಳೆದರೂ ವಾಸನೆ ಹೋವ್ತಿಲ್ಲೆ.ಆದರೆ ತುಳಸಿ ಎಲೆ ಹಾಕಿ ಸರೀ ತಿಕ್ಕಿರೆ ವಾಸನೆ ಹೋವ್ತು!ಚಿಮಿಣಿ ಎಣ್ಣೆ ವಾಸನೆ ಆದರೂ ಹೋವ್ತು.ಹೀಂಗೆ ಶುಚಿಕಾರಕವಾಗಿಯೂ ತುಲಸಿ ಉಪಯೋಗ ಆವುತ್ತು!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಜಯಗೌರಿ ಅಕ್ಕ°ಪುತ್ತೂರಿನ ಪುಟ್ಟಕ್ಕಜಯಶ್ರೀ ನೀರಮೂಲೆದೊಡ್ಮನೆ ಭಾವಗೋಪಾಲಣ್ಣಅಕ್ಷರದಣ್ಣರಾಜಣ್ಣಅನುಶ್ರೀ ಬಂಡಾಡಿಪೆಂಗಣ್ಣ°ಮಂಗ್ಳೂರ ಮಾಣಿವಿಜಯತ್ತೆಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶಸರ್ಪಮಲೆ ಮಾವ°ಶಾಂತತ್ತೆಕೇಜಿಮಾವ°ಮಾಲಕ್ಕ°ಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿವೆಂಕಟ್ ಕೋಟೂರುಡಾಮಹೇಶಣ್ಣಕಳಾಯಿ ಗೀತತ್ತೆಚುಬ್ಬಣ್ಣಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ