ನಾವು ಎಂತಕೆ ಉಪವಾಸ ಆಚರುಸುತ್ತು?

ನಾವು  ಧರ್ಮಶೀಲ ಭಾರತೀಯರು ಕೆಲವರು ಕ್ರಮಬದ್ದವಾಗಿ ಉಪವಾಸ ವ್ರತವ ಆಚರುಸುತ್ತು, ಇನ್ನು ಕೆಲವು ಜೆನಂಗೊ ನಿರ್ದಿಷ್ಟ ಹಬ್ಬ ಹರಿ ದಿನಲ್ಲಿ ಉಪವಾಸ ವ್ರತವ ಮಾಡುತ್ತವು.

ಉಪವಾಸದಂದು ಏನನ್ನೂ ತಿಂಬಲೆ ಕುಡಿವಲೆ ಇಲ್ಲೆ – ನಿರಾಹಾರ, ಒಂದು ಹೊತ್ತು ಮಾತ್ರ ಆಹಾರ – ಒಪ್ಪತ್ತು , ಊಟದ ಬದಲು ಹಣ್ಣುಗೊ, ಖಾದ್ಯ ಇತ್ಯಾದಿ ಸೇವನೆ – ಉಪಹಾರ.  ಆಹಾರ ಉಳುಶಲೋ, ವಾ ಉಪವಾಸ ಬಳಿಕ ಸಮಕ್ಕೆ ತಿಂಬಲೋ  ಈ ಉಪವಾಸ ಆಚರುಸುದು? – ಖಂಡಿತಾ ಅಲ್ಲ.

ಉಪ (ಹತ್ತಿರ) + ವಾಸ = ಉಪವಾಸ. ಅರ್ಥಾತ್ – ಭಗವಂತನ ಸಾನ್ನಿಧ್ಯಲ್ಲಿ (ಹತ್ತಿರ) ಇಪ್ಪದು, ಹೇಳಿರೆ ಮಾನಸಿಕವಾಗಿ ಪರಮಾತ್ಮನ ಧ್ಯಾನಲ್ಲಿ ಇಪ್ಪದು.

ಅಂಬಗ ಉಪವಾಸಕ್ಕೂ ಆಹಾರಕ್ಕೂ ಎಂತ ಸಂಬಂಧ?

ನಾವು ಆಹಾರ ಪದಾರ್ಥಂಗಳ ಶೇಖರಣೆ, ತಯಾರಿಕೆ, ಅಡುಗೆ, ತಿಂಬದು, ಜೀರ್ಣಿಸುವದು ಹೀಂಗೆ ಇದರಲ್ಲೇ ಹೆಚ್ಚಿನ ಸಮಯ, ಸಾಮರ್ಥ್ಯ, ಪರಿಶ್ರಮ ಕಳೆತ್ತು. ಕೆಲವು ಆಹಾರವಂತೂ ನಮ್ಮ ಮಾನಸಿಕ ಹಾಗೂ ಶಾರೀರಿಕ ಸಮತೋಲನವ ಕಲುಷಿತಗೊಳುಸುತ್ತು. ಆದ್ದರಿಂದ ಕೆಲವು ನಿರ್ದಿಷ್ಟ ದಿನಂಗಳಲ್ಲಿ ಮನುಷ್ಯನ ಈ ಸಮಯ, ಶಕ್ತಿ, ಸಾಮರ್ಥ್ಯವ ಉಳುಸಲೆ ಮತ್ತು ಮಾನಸಿಕ ಶಕ್ತಿ, ಸಾಮರ್ಥ್ಯವ ಬಲಪಡುಸಲೆ ಉಪವಾಸ – ಉಪಹಾರ ಉತ್ತಮ ಸಹಕಾರಿ. ತನು ಮನವ ಶಿಸ್ತಿನಿಂದ ನಮ್ಮ ಸ್ಥಿಮಿತಲ್ಲಿ ಮಡಿಕ್ಕೊಂಬಲೆ ಸಹಕಾರಿ. ಇದರಿಂದಾಗಿ ಸದಾ ಆಹಾರ, ಆದಾಯದ ಚಿಂತನೆಲಿ ಇಪ್ಪ ಮನಸ್ಸು ಪರಮಾತ್ಮನ ಚಿಂತನೆಲಿ ತೊಡಗುಸಲಾವ್ತು. ಶರೀರದ ಪಚಕ ಕ್ರಿಯೆಗೂ ರಜಾ ವಿಶ್ರಾಂತಿ ಸಿಕ್ಕಿದಾಂಗೆ ಆವ್ತು. ಮಾನವ ಇಂದ್ರಿಯಂಗಳು ಎಷ್ಟು ಸುಖ ಸಿಕ್ಕಿರೂ ಇನ್ನೂ ಮತ್ತಷ್ಟು ಸುಖಕ್ಕೆ ಆಗ್ರಹಿಸುತ್ತು. ಉಪವಾಸ ಇಪ್ಪದರಿಂದಾಗಿ ಇಂದ್ರಿಯಂಗಳ ಹತೋಟಿ ಕೂಡ ಸಾಧ್ಯ. ಉಪವಾಸ ಮುಗುದಾಕ್ಷಣ ಹೊಟ್ಟೆಬಾಕನ ಹಾಂಗೆ ತಿಂಬ ಕ್ರಮವೂ ಇಲ್ಲೆ. ಸಾತ್ವಿಕ ಪಥ್ಯ ಆಹಾರ ಯಥೋಚಿತ ತೆಕ್ಕೊಳ್ಳೆಕು.

ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತ ಸ್ವಪ್ನಾವ ಬೋಧಸ್ಯ ಯೋಗೋ ಭವತಿ ದುಃಖ: ||

[ಆರು ನಿಜ, ನಿದ್ರೆ, ಸ್ವಪ್ನಲ್ಲಿಯೂ  ಆಹಾರ ವಿಹಾರ ಕಾರ್ಯ ವಿಚಾರಲ್ಲಿಯೂ ಸಾತ್ವಿಕನಾಗಿ ಇರ್ತನೋ ಅವನ ಮಾನಸಿಕ ಕಷ್ಟ ದುಃಖ ದೂರವಾಗಿ ಯೋಗಿ ಅಪ್ಪಲೆ ಸಾಧ್ಯ. (ಭಗವದ್ಗೀತೆ – ಅಧ್ಯಾಯ ೬ – ಶ್ಲೋಕ ೧೭)]

ಉಪವಾಸದ ಬಗ್ಗೆ ಒಪ್ಪಣ್ಣ ಭಾವನ ಶುದ್ದಿಲ್ಲಿಯೂ ಒಂದಿಕ್ಕೆ ಹೇಳಿದ್ದಿದ್ದು – http://oppanna.com/oppa/maha-shiva-ratri

ಹರೇ ರಾಮ

(ಸಂಗ್ರಹ)

ಚೆನ್ನೈ ಬಾವ°

   

You may also like...

16 Responses

  1. ಚೆನ್ನೈ ಭಾವ says:

    [….ಉಪವಾಸ ಮಾಡ್ಲೆ ಇದ್ದಡ್ಡ.] – ಅಲ್ಲಾ., ಬಿಡುಗೊ ನಾವು.! ಬೇಡದ್ದ ಕೆಲಸ ಅಲ್ಲದೋ ಇದು ಈ ಸಾಹಸಕ್ಕೆ ಹೆರಡುವದು. ಬೆಂಗಳೂರು ಟ್ರಾಫಿಕ್ ಜಾಮು ಅಕ್ಕೋ ಅಲ್ಲಾ ಮೊಬೈಲ್ ನೆಟ್ವರ್ಕ್ ಟ್ರಾಫಿಕ್ ಜಾಮು ಅಕ್ಕೋ!! ಮಿಸ್ಸ್ ಕಾಲು ಕೊಟ್ಟಾರು ಹೆರ ಬಲುಗ್ಯೊಂಡು ಬಾರದೋ ನಾವು?!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *