ಸಪ್ತಪದಿ

ಎಲ್ಲೋರಿಂಗೂ ನಮಸ್ಕಾರ,
ಆಟಿ ತಿಂಗಳ ಮಳೆ ಸೊಯ್ಪುತ್ತಾ ಇದ್ದು.
ಸಾಮಾನ್ಯವಾಗಿ ಈಗ ಜೆಂಬರಂಗ ಕಮ್ಮಿ..
ಗಣೇಶ ಮಾವನ ಕಾಂಬಲೇ ಇಲ್ಲೆ ಹೇಳಿ ಅಜ್ಜಕಾನ ಭಾವನ ಹತ್ರೆ ಚೆನ್ನೈಭಾವ ಹೇಳಿಯೊಂಡು ಇತ್ತವಡ.
ಎಂತಕೆ ಹೇಳಿ ಕೇಳಿಯಪ್ಪಗ ಇನ್ನು ಶುದ್ಧಿ ಹೇಳದ್ರೆ ಸುವರ್ಣಿನಿ ಅಕ್ಕನ ಕಾಣೆಪಟ್ಟಿಲಿ ಗಣೇಶಮಾವನೂ ಸೇರುಗು ಹೇಳಿ ಹೇಳಿದವಡ!!
ಉಮ್ಮಪ್ಪ! ಅದು ನವಗೆ ಗೊಂತಿಲ್ಲೆ!!! ಆದರೆ ಬೈಲಿಂಗೆ ಯಾವಾಗಲೂ ಇಳುದು ನೋಡ್ತೆ.
ಹ, ಜೆಂಬ್ರ ಹೇಳುಗ ನೆಂಪಾತು.
ಕಳುದ ಒಂದು ಶುದ್ಧಿಲಿ ವಿವಾಹ ದ ಬಗ್ಗೆ ರಜ್ಜ ಹೇಳಿತ್ತೆ.
ಈ ಸರ್ತಿ ಅದರ್ಲಿ ಒಂದು ಪ್ರಮುಖ ಭಾಗ “ಸಪ್ತಪದಿ”ಯ ಬಗ್ಗೆ ಹೇಳ್ತೆ.

ವಿವಾಹದ ಜೀವನಾಡಿಯೇ ಸಪ್ತಪದಿ ಹೇಳುವ ವಾಕ್ಯ ಹೆಚ್ಚು ಪ್ರಚಲಿತ.
ಎಂತಕೆ ಹೇಳಿರೆ ಇದು ಅಷ್ಟು ಸ್ಪಷ್ಟಲ್ಲಿ ನಂಬಿ ಒಪ್ಪಿ ಹೆರಿಯೋರ ಸಮ್ಮುಖಲ್ಲಿ ನೆಡವ ಕಾರ್ಯಕ್ರಮ.
ಶಾಸ್ತ್ರದ ದೃಷ್ಟಿಂದಲೂ,ಲೌಕಿಕವಾಗಿಯೂ ಇದಕ್ಕೆ ಅತ್ಯಂತ ಮಹತ್ತರ ಸ್ಥಾನ ಇದ್ದು. ಹೀಂಗಿಪ್ಪ ಕಾರಣಂದ ಭಾರತೀಯ ಸಂವಿಧಾನಲ್ಲಿ ಸಪ್ತಪದಿಗೆ ಅಗ್ರಸ್ಥಾನ.
ಹಿಂದಾಣ ಕಾಲಲ್ಲಿ ಪಂಚಾತಿಗೆ ಕಟ್ಟೇಲಿ ಮದುವೆ ವಿಷಯಲ್ಲಿ ನ್ಯಾಯ ತೀರ್ಮಾನ ಮಾಡುವಗ ಅಥವಾ ಈ ವಿಷಯಲ್ಲಿ ಗೊಂದಲ,ಸಂಶಯ ಕಂಡುಬಂದರೆ ಸಪ್ತಪದಿ ಶಾಸ್ತ್ರ ಆಯಿದು ಹೇಳಿ ಕಂಡರೆ ವಿವಾಹ ಆಯಿದು ಹೇಳುದಕ್ಕೆ ಅದುವೇ ಸಾಕ್ಷಿ ಹೇಳಿ ತೀರ್ಪು ಕೊಟ್ಟುಗೊಂಡು ಇತ್ತವಡ.
ಹೀಂಗಿಪ್ಪ ಶಾಸ್ತ್ರದ ಬಗ್ಗೆ ಚೌಕ್ಕಾರು ಮಾವನ ಹತ್ರೆ ಕೇಳಿಯಪ್ಪಗ ಅವು ಕೊಟ್ಟ ರೀತಿಲಿ ಮಂತ್ರ ಸಹಿತ ವಿವರಣೆ ಹೇಳ್ತೆ.

 1. ಏಕಮಿಷೆ ವಿಷ್ಣುಸ್ತ್ವಾನ್ವೇತು = ಭೂಮಿಲಿ ಅನ್ನದ ವೃದ್ದಿಗೆ
 2. ದ್ವೇ ಊರ್ಜೇ ವಿಷ್ಣುಸ್ತ್ವಾನ್ವೇತು = ಶರೀರದ ಬಲವೃದ್ಧಿಗೆ
 3. ತ್ರೀಣಿ ವ್ರತಾಯ ವಿಷ್ಣುಸ್ತ್ವಾನ್ವೇತು = ಅರ್ಥ(ಧನ)ಸಂಪಾದನೆ ಹೇಳುವ ವ್ರತ
 4. ಚತ್ವಾರಿಮಾಯೋಭಾವಾಯ = ಸಂಸಾರದ ಸುಖಕ್ಕೆ
 5. ಪಂಚ ಪಶುಭ್ಯೋ ವಿಷ್ಣುಸ್ತ್ವಾನ್ವೇತು = ಕುಟುಂಬ ಪರಿವಾರಕ್ಕೆ
 6. ಷಡ್ರಾಯಸ್ಪೋಶಾಯ ವಿಷ್ಣುಸ್ತ್ವಾನ್ವೇತು = ಋತುಚರ್ಯೆ(ಸಂತತಿ)ಗೆ
 7. ಸಪ್ತಸಪ್ತಭ್ಯೋ ಹೋತ್ರಾಭ್ಯೋ ವಿಷ್ಣುಸ್ತ್ವಾನ್ವೇತು = ಸ್ನೇಹ,ಪ್ರೀತಿಗೆ

ಈ ಮಂತ್ರ ಹೇಳಿ “ಸಖಾಯಃ ಸಪ್ತಪದಾ ಅಭೂಮ” ಹೇಳಿ; ಮದುಮಾಳು ಜೀವನ ಪರ್ಯಂತ ನಾವು ಈ ಸಪ್ತ ಸೂತ್ರಂಗಳ ಒಪ್ಪಿ ಸಂಸಾರಲ್ಲಿ ಸಖರು(ಗೆಳೆಯರು)ಅಪ್ಪ – .ಹೇಳಿ ಒಪ್ಪಿ ನೆಡವ ಶಾಸ್ತ್ರ ಇದು.

ಈ ರೀತಿಯಾಗಿ ವಿವಾಹಲ್ಲಿ ವಧೂ-ವರರು ಕಾರ್ಯಕ್ರಮಗಳ ಮೂಲಕ ಮನಸ್ಸಿನ ಒಂದು ಮಾಡಿಗೊಳ್ತವು.
ಈ ಸಮಯಲ್ಲಿ ಪರಸ್ಪರ ಇಬ್ರಿಂಗೂ ನ್ಯಾಯ ಸಂಗತವಾದ ಯೋಗದಾನದ ಮನಸ್ಸು ಇರೆಕ್ಕು.ಎಂತಹ ಪರೀಕ್ಷೆಗ ಪರಸ್ಪರ ಇದ್ದರೂ ಇದರಿಂದ ಮೊದಲೇ ಮುಗಿಶಿರೆಕ್ಕು.
ಈ ಶಾಸ್ತ್ರದ ರೂಪುರೇಖೆಗಳ ವಿವರಣೆ ಮುಂದೆ ಹೇಳ್ತೆ.

ಒಂದರಿಂದ ಏಳು..

1.ಪ್ರಥಮ ಹೆಜ್ಜೆ : ಅನ್ನವೃದ್ಧಿಗೋಸ್ಕರ
ಉಂಬ ಆಹಾರಂಗ ಸ್ವಾಸ್ಥ್ಯವರ್ಧಕವಾಗಿರೆಕ್ಕು. ಮನೆಲಿ ರಾಜಸ ಆಹಾರಕ್ಕೆ ಸ್ಥಾನ ಮಡುಗಲೇ ಆಗ.
ಅಡಿಗೆ ಒಳ ತಯಾರು ಮಾಡ್ತ ಆಹಾರಂಗ ಸ್ವಾಸ್ಥ್ಯ ರಕ್ಷಣೆಗೆ ಪೂರಕವಾಗಿರೆಕ್ಕು.
ಸುರೂವಿಂಗೆ ರುಚಿಯಾಗಿ ಮಾಡ್ಲೆ ಕಷ್ಟ ಆದರೂ ಸಹಿಸಿಗೊಂಡು ಪರಸ್ಪರ ಪ್ರೀತಿ ವಿಶ್ವಾಸವನ್ನೇ ಮುಖ್ಯವಾಗಿಸಿ ಅನ್ನದ ರಕ್ಷಣೆ ಮಾಡಿ ಅದರ ಸದುಪಯೋಗ ಮಾಡ್ಲೆ ಪ್ರಯತ್ನ ಪಡುದರ ಮೂಲಕ ಸಫಲ ಗೃಹಸ್ಥರು ಅಪ್ಪ ದಾರಿಯತ್ತ ನೋಡುವ ಗುರಿ ಮಾತ್ರ ಇರೆಕ್ಕು.
ಹೆಚ್ಚು ತಯಾರು ಮಾಡುದು,ಎಂಜಲು ಬಿಡುದು,ಪಾತ್ರದ ಮುಚ್ಚಲು ತೆಗದು ಮಡುಗಿ ಬೇಜವಾಬ್ದಾರಿತನ ಯಾವತ್ತೂ ಮಾಡಲೇ ಆಗ.
ಹೆಚ್ಚು ಮಸಾಲೆಯುಕ್ತ ಆಹಾರಂಗಳ ತಿನ್ನದ್ದೆ ಪರಸ್ಪರ ರುಚಿಯ ಬಗ್ಗೆ ತಿಳ್ಕೊಂಬದು.
ಈ ರೀತಿಯಾಗಿ ಶರೀರದ ಆರೋಗ್ಯವ ಕಾಪಾಡಿಗೊಂಡು ಇಬ್ರೂ ಸಾತ್ವಿಕತೆಲಿ ಜೀವನ ಮಾಡ್ಲೆ ಸುರುಮಾಡೆಕ್ಕು.

2. ಎರಡನೇ ಹೆಜ್ಜೆ: ಶರೀರದ ಬಲವೃದ್ಧಿಗೆ

ಶಾರೀರಿಕ ಮತ್ತೆ ಮಾನಸಿಕ ಬಲಂಗ ಪರಸ್ಪರ ಒಂದಕ್ಕೆ ಒಂದು ಪೂರಕ.
ವ್ಯಾಯಾಮ,ಪರಿಶ್ರಮ,ಉಚಿತ ನಿಯಮಿತ ಆಹಾರ ವಿಹಾರಂದ ಶರೀರದ ಬಲ ಸ್ಥಿರ ಆವ್ತು.ಅಧ್ಯಯನ,ವಿಚಾರ ವಿಮರ್ಶೆಂದ ಮನೋಬಲ ಸ್ಥಿರ ಆವ್ತು.
ಯಾವ ಯಾವ ಪ್ರಯತ್ನಂದ ಎಲ್ಲಾ ಎರಡೂ ಪ್ರಕಾರದ ಬಲವೃದ್ಧಿ ಅಪ್ಪಲೆ ಸಾಧ್ಯ ಆವ್ತೋ ಅಂತಹ ದಿಕ್ಕಿಂಗೆ ಯೋಚನೆ ಮಾಡ್ತಾ ಇರೆಕ್ಕು.ಈ ರೀತಿಲಿ ಇಬ್ರುದೇ ಸಮರ್ಥ,ಸ್ವಸ್ಥ,ಸಶಕ್ತವಾಗಿ ಇಪ್ಪಲೆ ಪ್ರಯತ್ನ ಮಾಡ್ತಾ ಇರೆಕ್ಕು.

3. ಮೂರನೇ ಹೆಜ್ಜೆ: ಅರ್ಥಸಂಪಾದನೆ
ಸಂಸಾರದ ಆರ್ಥಿಕ ವ್ಯವಸ್ಥೆಯ ಇಬ್ರೂ ಸೇರಿ ಬಜೆಟ್ ಮಾಡಿ ಖರ್ಚು ಮಾಡೆಕ್ಕು.
ಆರ್ಥಿಕ ಮಟ್ಟ ಯಾವ ರೀತಿ ಇದ್ದು ಹೇಳುದು ಪರಸ್ಪರ ಅವಕ್ಕೆ ಮಾಂತ್ರ ಗೊಂತಿರೆಕ್ಕು. ತಪ್ಪಿಯೂ ಕೂಡಾ ಮೂರನೇ ವ್ಯಕ್ತಿಯ ಹತ್ರೆ ಹೇಳುಲೆ ಆಗ.
ಒಂದು ಕುರುಡು ಕವಡೆಯೂ ಅಪವ್ಯಯ ಆಗದ್ದ ಹಾಂಗೆ ನೋಡಿಗೊಂಬಲೆ ಪ್ರಯತ್ನ ಮಾಡೆಕ್ಕು.
ಅವರ ಒಳಾಣ ಕೆಲಸಕ್ಕೆ ಜಿಪುನತನವ ಪ್ರದರ್ಶನ ಮಾಡ್ಲೆ ಆಗ.ಉಪಾರ್ಜನೆಗೆ ಮಾಂತ್ರ ಎಷ್ಟು ಬೇಕೋ ಅಷ್ಟು ಖರ್ಚು ಮಾಡಿ ಆರ್ಥಿಕ ಪರಿಸ್ಥಿತಿಯ ಕಾಪಾಡಿಗೊಂಡು ಹೋಪದು ಉತ್ತಮ.
ಗೆಂಡ ಮನೆಂದ ಹೆರ ಹೋಗಿ ಮಾಡಿಯೊಂಡು ಬಂದ ಸಂಪಾದನೆಯ ವಿವರ ಹೆಂಡತಿಯ ಹತ್ತರೆ ಪೂರ್ತಿ ವಿವರ ತಿಳಿಶೆಕ್ಕು.
ಇದರಿಂದ ಮೂರನೆ ವ್ಯಕ್ತಿ ಸಂಶಯ ಪಡುದು ತಪ್ಪುತ್ತು.ಪರಸ್ಪರ ದೃಢ ವಿಶ್ವಾಸ ಬೆಳೆತ್ತು.ಈ ರೀತಿಲಿ ಅರ್ಥವ್ಯವಸ್ಥೆಯ
ಸಂಪಾದುಸುವ ಮಟ್ಟಿಲಿ ಎಷ್ಟು ಗಮನ ಕೊಡ್ತೋ ಅಷ್ಟೇ ಖರ್ಚು ಮಾಡುವಲ್ಲಿಯೂ ಕೊಡ್ತಾ ಬಂದರೆ ಆ ಮನೆಯ ಅರ್ಥವ್ಯವಸ್ಥೆಯ ಮಟ್ಟ ಗಟ್ಟಿ ಆಗಿಯೊಂಡು ಹೋವ್ತು .

4. ನಾಲ್ಕನೇ ಹೆಜ್ಜೆ: ಸಂಸಾರದ ಸುಖಕ್ಕೆ
ವಿಶ್ರಾಮ , ಮನೋರಂಜನೆ, ವಿನೋದ, ಹಾಸ್ಯ-ಪರಿಹಾಸ್ಯದ ವಾತಾವರಣವ ಉಂಟುಮಾಡಿ ಬಡತನ ಇದ್ದರೂ ಆನಂದಲ್ಲಿ ಶ್ರೀಮಂತಿಕೆ ಸಿಕ್ಕುವಾಂಗಿರೆಕ್ಕು.
ಯಾವಾಗಲೂ ಪ್ರಸನ್ನ ಚಿತ್ತರಾಗಿ ಮುಗುಳು ನೆಗೆಯ ಮೊರೆಯ ಮಡಿಕ್ಕೊಂಡು ನೆಗೆಮಾಡ್ತಾ, ಮಾಡ್ಸುತ್ತಾ ಜೀವನವ ನಡೆಶೆಕ್ಕು.
ಮನಸ್ಸಿನ ಏವತ್ತೂ ಹಗುರ ಮಾಡಿಯೊಂಡು “ಸಂತೋಷೀ ಸದಾ ಸುಖೀ‘ಹೇಳುವ ನೀತಿಯ ಅಳವಡ್ಸಿಗೊಳ್ಳೆಕ್ಕು.

5.ಐದನೇ ಹೆಜ್ಜೆ: ಕುಟುಂಬ ಪರಿವಾರಕ್ಕೆ
ಅತ್ತೆ ಮಾವಂದ್ರ ಇಬ್ರನ್ನೂ(ಎರಡೂ ದಿಕ್ಕೆ ಪರಸ್ಪರ)ಸಮುಚಿತ ರೀತಿಲಿ ಗೌರವಿಸೆಕ್ಕು.
ಜಾನುವಾರುಗಳ ಮೇಲೆ ದಯೆ ಹೊಂದಿರೆಕ್ಕು.ಎಲ್ಲಾ ಆಶ್ರಿತರನ್ನೂ(ಕೆಲಸದವರ) ಒಂದೇ ರೀತಿಲಿ ನೋಡಿಗೊಳ್ಳೆಕ್ಕು.
ಕುಟುಂಬ ಸುರಕ್ಷೆ,ಉನ್ನತಿ ಅಪ್ಪಲೆ ಯಾವ ರೀತಿಲಿ ಆಲೋಚನೆ ಮಾಡ್ತೋ ಅದರ ಪರಸ್ಪರ ಕೂದೊಂಡು ಚರ್ಚೆ ಮಾಡಿ ಸ್ಪಷ್ಟ ನಿರ್ಧಾರ ಮಾಡೆಕ್ಕು.
ಈ ರೀತಿಯ ಕೆಲಸಕ್ಕೆ ಯಾವುದೇ ರೀತಿಯ ಅಸಡ್ಡೆ ತೋರ್ಸದ್ದೆ ಹೆರಿಯೋರ ಮನಸ್ಸಿನ ಗೆಲ್ಲೆಕ್ಕು.

6.ಆರನೇ ಹೆಜ್ಜೆ: ಋತುಚರ್ಯೆ(ಸಂತತಿ)ಗೆ
ಸಂಸಾರಲ್ಲಿ ದಾಂಪತ್ಯ ಹೇಳುವ ಪದಕ್ಕೆ ಅರ್ಥ ಬರೆಕು ಹೇಳಿ ಆದರೆ ಸಂತಾನ ಪರಂಪರೆ ಮುಂದೆ ಹೋಯೆಕ್ಕು.
ಆದರಿಂದ ವಿವಾಹದ ನಂತರಲ್ಲಿ,ದಾಂಪತ್ಯ ಜೀವನಲ್ಲಿ ಇದಕ್ಕೆ ಮಹತ್ತರವಾದ ಸ್ಥಾನ ಸಮಾಜಲ್ಲಿ ಹೆರಿಯೋರು ಕೊಟ್ಟಿದವು.ಆದರೆ ಆ ಕ್ರಿಯೆಗೆ ಶರೀರ ಆರೋಗ್ಯ ದೃಢವಾಗಿಪ್ಪ ಬಗ್ಗೆ ಇಬ್ರೂ ಸ್ಪಷ್ಟ ನಿರ್ಧಾರ ಮಾಡುದು ಉತ್ತಮ.
ಎಂತಕೆ ಹೇಳಿರೆ ಸಂಯಮ ಇಲ್ಲದ್ದೇ ಗರ್ಭಧಾರಣೆ ಅಪ್ಪದರಿಂದ ಆರೋಗ್ಯಲ್ಲಿ ಏರುಪೇರು ಅಪ್ಪ ಸಾಧ್ಯತೆಗ ಹೆಚ್ಚು.ಇದಕ್ಕೆ ಬೇಕಾಗಿ ಗೃಹಸ್ಥರಾದರೂ ಬ್ರಹ್ಮಚರ್ಯವ ಸಮುಚಿತವಾಗಿ ಪಾಲನೆ ಮಾಡಿಗೊಂಬದು ಒಳ್ಳೆದು.
ಈ ವಿಷಯಲ್ಲಿ ಇಬ್ರೂ ಪರಸ್ಪರ ಏಕಮನಸ್ಕರಾಗಿ ಹತ್ತು ಸರ್ತಿ ಯೋಚನೆ ಮಾಡಿ ಸಮಯ ಯೋಗ್ಯವಾಗಿ ಇದ್ದೋ ಹೇಳುದರ ಬಗ್ಗೆ ತೀರ್ಮಾನ ಮಾಡೆಕ್ಕು.ಅದೇ ರೀತಿಯ ಗೌರವಂದ ಸಂತಾನವ ಪಡವಲೆ ಜವಾಬ್ದಾರಿಯ ಇಬ್ರೂ ವಹಿಸಿಗೊಳ್ಳೆಕ್ಕು.

7.ಏಳನೇ ಹೆಜ್ಜೆ: ಸ್ನೇಹ,ಪ್ರೀತಿಗೆ
ಈ ವಿಷಯಲ್ಲಿ ಜೀವನ ಇಡೀ ಪರಸ್ಪರ ಸ್ನೇಹ ಸಂಪಾದನೆ ಮಾಡಿ ಪ್ರೀತಿಯ ಶಾಶ್ವತವಾಗಿ ಮಾಡಿಕ್ಕೊಂಬಲೆ ಸದಾ ಯೋಚನೆ ಮಾಡ್ತಾ ಇರೆಕ್ಕು.
ಪರಸ್ಪರ ಅಸಂತುಷ್ಟತೆಂದ ಏನಾದರೂ ಲೋಪಂಗ ಬಂದರೆ ಅವರವರ ಒಳದಿಕೆಯೇ ಪರಿಹಾರ ಮಾಡಿಯೊಳ್ಳೆಕ್ಕು.ಇದರಿಂದ ಕುಟುಂಬಲ್ಲಿ,ಹೆರಿಯೋರ ನಡೂಕೆ ಗೌರವ ಭಾವನೆ ಬೆಳೆತ್ತು.
ಆತ್ಮೀಯ ಜೆನಂಗಳ ನಡೂಕೆ ಇಪ್ಪಗ ಉದಾರತೆ,ಸೌಜನ್ಯ,ಕ್ಷಮಾ ಗುಣಂಗಳ ಉಪಯೋಗ್ಸಿಗೊಂಡು ಆದರ್ಶ ದಂಪತಿಗಳಾಗಿ ಇರೆಕ್ಕು.
ಈ ಎಲ್ಲಾ ಸಪ್ತಸೂತ್ರಂಗಳ ಪ್ರತೀಕವಾಗಿ ವೈದಿಕ ವಿಧಿಲಿ(ಪದ್ಧತಿ,ಆಚರಣೆಗ ಬೇರೆ ಇಕ್ಕು)ಎಲ್ಲವೂ ಸುವರ್ಣಮಯವಾಗಿ ಇರೆಕ್ಕು ಹೇಳುವ ಸಂಕಲ್ಪಲ್ಲಿ ಅಕ್ಕಿಯಮೇಲೆ ಸುವರ್ಣದ ನಾಣ್ಯ(ಈಗ ಚಲಾವಣೆಲಿ ಇಪ್ಪ)ದ ಮೇಲೆ ವರ,ವಧುವಿನ ಕೈ ಹಿಡ್ಕೊಂಡು ಒಪ್ಪಿಗೊಂಬ ವಿಶಿಷ್ಟ ಕಾರ್ಯಕ್ರಮ.

ಈ ಇಷ್ಟು ಸೂತ್ರವ ಇಬ್ರೂ ಹೃದಯಂಗಮವಾಗಿ ಮಾಡಿ ಈ ಆದರ್ಶಂಗಳ,ಸಿದ್ಧಾಂತವ ಅಳವಡ್ಸಿಗೊಂಡರೆ ಅದೇ ಮಾರ್ಗಲ್ಲಿ ಸಂಸಾರ ಮಾಡ್ಲೆ ಸಾಧ್ಯ ಆವ್ತು.
ಈ ಕಾರ್ಯಕ್ರಮಂದಾಗಿ ಜೀವನಲ್ಲಿ ದೇವಶಕ್ತಿಗಳ ಅನುಗ್ರಹದ ಮೂಲಕ ಯೋಜನಾಬದ್ಧ,ಪ್ರಗತಿಶೀಲ ಜೀವನಕ್ಕೆ ಒಳಗಾಯಿದು ಹೇಳುವ ದಿವ್ಯ ಭಾವನೆ ವಧೂವರರಲ್ಲಿ ಮೂಡೆಕ್ಕು.
ಈ ರೀತಿ ಸಪ್ತಪದಿಯ ಸಪ್ತಸೂತ್ರಂಗಳ ಮೂಲಕ ನವ ವಧೂವರರಲ್ಲಿ ಸಮರ್ಥ,ಸ್ವಸ್ಥ,ಸಶಕ್ತ ಜೀವನ ಮಾಡ್ಲೆ ಸಾಧ್ಯ ಆವ್ತು.

ಗಣೇಶ ಮಾವ°

   

You may also like...

29 Responses

 1. ಶರ್ಮಪ್ಪಚ್ಚಿ says:

  ಮದುವೆಯ ಶುಭ ಕಾರ್ಯಲ್ಲಿ ಎಷ್ಟೊಂದು ಮತ್ವದ ಸಂಗತಿಗಳ ಅಳವಡಿಸಿದ್ದವು ಹಿರಿಯರು. ದಂಪತಿಗೊಕ್ಕೆ ತುಂಬಾ ಮಾರ್ಗದರ್ಶನ ಕೊಡುವ ಒಂದು ಹಂತವೇ ಈ ಸಪ್ತಪದಿ. ಅವು ಮುಂದಂಗೆ ಯಾವರೀತಿ ಜೀವನ ನೆಡೆಶೆಕ್ಕು ಹೇಳ್ತರ ಸರಿಯಾಗಿ ತಿಳಿಶಿ ಕೊಟ್ಟಿದವು.
  ಸಂಸ್ಕೃತಲ್ಲಿ ಇಪ್ಪದರ ಗಣೇಶ ಇಲ್ಲಿ ತುಂಬಾ ಚೆಂದಕೆ ವಿವರಿಸಿ, ಅದಕ್ಕೊಂದು ತೂಕ ತಂದು ಕೊಟ್ಟಿದ ಹೇಳ್ಲಕ್ಕು.
  ಅಂಬೆರ್ಪಿನ ಈ ಕಾಲಲ್ಲಿ, ಭಟ್ಟಕ್ಕೊ ಹೇಳುವ ಮಂತ್ರಂಗಳ ಅರ್ಥ ತಿಳಿವಲೆ ಆಸಕ್ತಿ ತೋರುಸುವವು ಅತ್ಯಂತ ಕಮ್ಮಿ ಜೆನಂಗೊ ಹೇಳಿಯೇ ಹೇಳ್ಲಕ್ಕು. ಅವು ಎಂತದೋ ಹೇಳಿದವು, ಆನು ಎಂತದೋ ಮಾಡಿದೆ ಹೇಳ್ತಲ್ಲಿಂಗೆ ನಮ್ಮ ಕ್ರಮಂಗೊ ಅಪ್ಪಲಾಗ.
  ಮಾಡುತ್ತ ಕ್ರಿಯೆಗೆ ಅರ್ಥ ಸಹಿತ ಅದರ ಪ್ರಾಧಾನ್ಯತೆ ಗೊಂತಾದರೆ, ಮತ್ತೆ ಅದರ ಅಳವಡಿಸಿರೆ, ಜೀವನ ಸುಖಮಯ ಅಕ್ಕು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.

  • ಗಣೇಶ ಮಾವ° says:

   ಖಂಡಿತಾ,ನಿಂಗ ಹೇಳುದು ನೂರಕ್ಕೆ ನೂರು ಸತ್ಯ.ತಿಳಿವ ಸಮಯ,ಆಸಕ್ತಿ ಸಮಾಜಲ್ಲಿ ಬರೆಕು.ಒಪ್ಪಕ್ಕೆ ಧನ್ಯವಾದ ಶರ್ಮಪ್ಪಚ್ಚೀ

 2. ಗಣೇಶಮಾವ°,
  ತುಂಬಾ ಲಾಯ್ಕಾಯಿದು ವಿವರಣೆ. ಎಷ್ಟು ಅರ್ಥವತ್ತಾಗಿ ಇದ್ದು. ನಮ್ಮ ಹಿರಿಯರು ಮದುವೆಮಂಟಪಲ್ಲಿ ಅಪ್ಪ ಕಾರ್ಯಕ್ರಮ ಹೆಚ್ಚಿಂದರ ಕೂದುಗೊಂಡು ಮಾಡುಲೆ ವೆವಸ್ತೆ ಮಾಡಿದ್ದವು.. ಮಾಲೆ ಹಾಕುತ್ತದು, ಸಪ್ತಪದಿಯ ನಿಂದುಗೊಂಡು ಮಾಡ್ತದು.

  ನಮ್ಮ ಶರೀರ ಇಡೀ ಒಂದೇ ದಿಕ್ಕೆ ಗಮನ ಕೊಟ್ಟು, ಅಷ್ಟು ಜವಾಬ್ದಾರಿಲಿ ಈ ವಚನವ ಪಾಲುಸೆಕ್ಕು ಹೇಳಿಯೇ ಆದಿಕ್ಕು ಅಲ್ಲದಾ ಆ ಏಳು ಹೆಜ್ಜೆಗಳ ನಡದು ಕೂಸು ಮಾಣಿಯ ಹತ್ತರೆ ಬಪ್ಪ ಹಾಂಗೆ ಇಪ್ಪದು. ಇದರಲ್ಲಿ ಮಾಣಿಯೂ ಅಷ್ಟೇ ವಚನಬದ್ಧ ಆಗಿರ್ತ°.
  ಮದುವೆಯ ಸಮಯದ ವಚನವ ಜೀವನ ಪೂರ್ತಿ ಪಾಲುಸೆಕ್ಕಾದ್ದು ಎಲ್ಲೋರ ಕರ್ತವ್ಯ ಅಲ್ಲದಾ.. ಇದು ನಮ್ಮ ಕುಟುಂಬ ಬೆಳವಲೆ, ಬೆಳಗಲೆ, ಎಲ್ಲಾ ರೀತಿಲೂ ಗಟ್ಟಿ ಅಪ್ಪಲೆ ಇಪ್ಪ ಜೀವನ ಸೂತ್ರಂಗ.

  ಒಳ್ಳೆ ವಿಚಾರ ಹಂಚಿದ ಗಣೇಶ ಮಾವಂಗೆ ತುಂಬಾ ತುಂಬಾ ಧನ್ಯವಾದಂಗಾ.

  • ಗಣೇಶ ಮಾವ° says:

   ಶ್ರೀ ಅಕ್ಕನ ಒಪ್ಪವಾದ ಒಪ್ಪಕ್ಕೆ ಧನ್ಯವಾದ.ನಮ್ಮ ಬೈಲಿಲಿ ಪ್ರೀತಿಂದ ಅಕ್ಕ ಹೇಳಿಯೇ ಕರೆಶಿಗೊಂಬ ಶ್ರೀ ಅಕ್ಕಂಗೆ ಯಾವುದೇ ಕಾರ್ಯಕ್ರಮ ನೆಡೆತ್ತರೆ ಅದರ ಸಂಪೂರ್ಣ ಚಿತ್ರಣ ರೂಪುರೇಶೆ(ರೇಖೆ)ಗೊಂತಿರ್ತು. ಹಾಂಗಾಗಿ ಪಟಲ್ಲಿಪ್ಪ ಮದಿಮ್ಮಾಯನ ಉತ್ತರೀಯಲ್ಲಿಯೂ ಶ್ರೀ ಅಕ್ಕನ ಕೈಚಳಕದ ರೇಖೆ ಇಕ್ಕು ಹೇಳಿ ಎನ್ನ ಭಾವನೆ.ಹಾಂಗಾದ ಕಾರಣ ಆನು ಶ್ರೀ ಅಕ್ಕನ ಹತ್ತರೆಯೇ ಕೇಳುಲೆ ಹೇಳಿದೆ.ಆಗದೋ?

 3. ಮೌನಾಚಾರಿ.ಜಿ.ಬಿ says:

  ತುಂಭ ಚೆನ್ನಾಗಿದೆ ಪಂಡಿತರೆ ಅರುಂಧತಿ ದರ್ಶನದ ಬಗ್ಗೆಯೂ ತಿಳಸಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *