Oppanna.com

ಸರ್ಪಮಲೆ ಅತ್ತೆಯ ಕೈ ತೋಟ

ಬರದೋರು :   ಸರ್ಪಮಲೆ ಮಾವ°    on   22/06/2011    39 ಒಪ್ಪಂಗೊ

ಸರ್ಪಮಲೆ ಮಾವ°

ಬೈಲಿಂಗೆ ಇಳಿಯದ್ದೆ ತುಂಬ ಸಮಯ ಆತು. ಸೆಕೆ ತಡವಲೆ ಎಡಿಯದ್ದೆ, ಮಳೆ ಬರಲಿ, ಮಳೆ ಬಂದು ತಂಪಾಗಲಿ ಹೇಳಿ ಕಾದ್ದದು.

ಮಳೆ ಬಂತು, ಮಾರ್ಗ ಹೊಂಡ ಬೀಳ್ಳೆ ಸುರು ಆತು!
ಮಾಣಿಂದ ಪುತ್ತೂರು ಹೊಡೇಂಗೆ ಹೋಯೆಕ್ಕಾರೆ ಮಳೆ ಬಪ್ಪಂದ ಮದಲೆ ಮೂಗಿಂಗೆ ಬಾಯಿಗೆ ಮಾಸ್ಕ್ ಹೇಳ್ತ ವಸ್ತ್ರವ ಕಟ್ಟೆಗಾಗಿತ್ತು, ಈಗ ಅದು ಬೇಕು ಹೇಳಿ ಇಲ್ಲೆ; ಆದರೆ ಮಾರ್ಗ ಇಲ್ಲೆ, ಕೆಸರು ಗೆದ್ದೆಲೇ ಹೋಪದು!

ಮದುವೆಗೊ, ಎಂತಾರು ಜೆಂಬ್ರಕ್ಕೊ ಮಣ್ಣ ಪಟ್ಟೆ ಸೀರೆ ಸುತ್ತೆಂಡು ಹೆರಟ ಹೆಮ್ಮಕ್ಕೊ, ವೇಷ್ಟಿ ಸುತ್ತಿ, ಬೆಳಿ ಅಂಗಿ, ಶಾಲು ಹಾಕೆಂಡು ಹೆರಟ ಗೆಂಡು ಮಕ್ಕೊ ಮಣ್ಣ ಆದರೆ ಅವರ ಅವಸ್ಥೆ ಹೇಳೊದೇ ಬೇಡ.

ಬೈಕಿಲ್ಲಿ ಹೋದರೆ ಕೆಸರಿನ ಅಭಿಷೇಕ – ಬೈಕಿಂಗೂ, ಅದಲ್ಲಿ ಕೂದವಕ್ಕೂ!!
ಕಾರಿಲ್ಲಿ ಹೋದರೆ ಕಾರಿಂಗೆ ಅಭಿಷೇಕ – ಗ್ಲಾಸು ಮುಚ್ಚದ್ದರೆ ಒಳ ಕೂದವಕ್ಕೂ!!
ಬಸ್ಸಿಲ್ಲಿ ಹೋಪ° ಹೇಳಿದರೆ, ಬಸ್ಸು ಎಲ್ಲಿ ಹುಗಿತ್ತೋ, ಮೊಗಚ್ಚುತ್ತೋ ಹೇಳುವ ಹೆದರಿಕೆ!!
ಅಂತೂ ಪುತ್ತೂರು ಹೊಡೇಂಗೆ ಹೋಗದ್ದೆ ಕೆಲಾವು ದಿನ ಆತು.

ನಿನ್ನೆಂದ ಮಳೆ ರಜ ಕಮ್ಮಿ ಆಯಿದು; ರಜ ಬೆಳಿಕ್ರಿ ಕಾಣುತ್ತು.
ಸರ್ಪಮಲೆಮಾವಂಗೆ ಮನೆಲೇ ಕೂದು ಬೇಜಾರಪ್ಪಲೆ ಸುರು ಆತು; ಮನೆಲಿ ಕೆಲಸ ಇದ್ದರೂ, ಮಾಡ್ಳೆ ಅರಡಿಯ; ಅರಡಿತ್ತರೂ, ಮನೆ ಕೆಲಸ ಮಾಡಿ ಅಬ್ಯಾಸ ಇಲ್ಲೆ; ಅಬ್ಯಾಸ ಇದ್ದರೂ, ಮಾಡ್ಳೆ ಉದಾಸೀನ ಬಿಡುತ್ತಿಲ್ಲೆ, ಮನಸ್ಸೂ ಇಲ್ಲೆ.

ಆದರೆ ಸರ್ಪಮಲೆ ಅತ್ತೆ ಹಾಂಗಲ್ಲ; ಒಂದುನಿಮಿಷ ಸುಮ್ಮನೆ ಕೂರ, ಏನಾರು ಕೆಲಸ ಮಾಡ್ಯೊಂಡೇ ಇಕ್ಕು- ಮನೆ ಒಳವೂ, ಹೆರವೂ.
ಮಾವ° ಅತ್ತೆಯ ಕೆಲಸಂಗೊಕ್ಕೆ ಸಕಾಯ ಮಾಡ್ಳೆ ಹೋಗವು; ಹೋದರೆ ಅತ್ತಗೆ ಸರಿಯೂ ಆಗ; ಅದು ಉಪದ್ರವೇ ಅಕ್ಕು.
ಪೇಟೆ ಮನೆ ಆದರೂ ಮನೆಯ ಎದುರ ರಜೆ ಜಾಗೆ ಇದ್ದ ಕಾರಣ,- ಅತ್ತಗೆ ಕೈಕಾಲು ಎಡಿಯದ್ದರೂ,- ಸುಮ್ಮನೆ ಕೂಬಲೆ ಅರಡಿಯ.

ಒಂದು ಸಣ್ಣ ಕೈ ತೋಟ (ಪೇಟೆಯವು ಕಿಚ್ಚನ್ ಗಾರ್ಡನ್ ಹೇಳ್ತವು) ಮಾಡಿದ್ದು.
ಇಂದು ಸುಮ್ಮನೆ ಕೂದೊಂಡಿಪ್ಪಗ ಕಟ್ಟಿ ಮಡಿಗಿದ ಕೆಮರ ನೆಂಪಾತು ನವಗೆ. ಹಾಂಗೆ ಕೆಮರ ತೆಕ್ಕೊಂಡು ಹೆರ ಬಂದೆ.
ಸರ್ಪಮಲೆ ಅತ್ತೆಯ ಕೈ ತೋಟದ ಕೆಲವು ಪಟಂಗಳ ಇಲ್ಲಿ ನೇಲುಸಿದ್ದೆ:

39 thoughts on “ಸರ್ಪಮಲೆ ಅತ್ತೆಯ ಕೈ ತೋಟ

    1. ಒಪ್ಪ ನೋಡಿ ಎನಗೂ ಕೊಶಿ ಆತು ಮಾಣಿ!

  1. ಮನೆಯ ಸುತ್ತಲೂ ಹಸುರು ತು೦ಬಿಗೊ೦ಡಿದ್ದರೆ ಮನಸ್ಸೂ ಹಸುರಾಗಿರ್ತು ಹೇಳುವ ಮಾತು ಸತ್ಯ. ಸರ್ಪಮಲೆ ಅತ್ತೆಯ ಪರಿಶ್ರಮ ಸಾರ್ಥಕ ಆಯಿದು.ವ೦ದನೆ,ಅಭಿನ೦ದನೆ.
    ಮಾವಾ,ನಿ೦ಗಳ ಮನೆ ಮೇರಿಹಿಲ್ ಹತ್ತರೆ ಗುರುನಗರಲ್ಲಿ ಅಲ್ಲದೊ? ಅಲ್ಲಿ ಮ೦ಗನ ಉಪದ್ರ ಇಲ್ಲದ್ದರೂ ನಮ್ಮ ಪೆ೦ಗಣ್ಣನ ಉಪದ್ರ ಇಕ್ಕು ಹೇಳಿ ಬೋಚ ಉವಾಚ..

    1. ಒಪ್ಪಕ್ಕೆ ಧನ್ಯವಾದ.

      ಅಪ್ಪು ರಘು, ಇಪ್ಪದು ಗುರುನಗರಲ್ಲೆ.

      ಮಂಗಂಗಳ ಉಪದ್ರ ಇಲ್ಲೆ; ಪೆಂಗಂಗಳ ಉಪದ್ರವೂ ಇಲ್ಲೆ!

      ಬೋಚ, ನೆಗೆ, ಅರ್ಗೆಂಟುಗಳ ಕರಕ್ಕೊಂಡು ಬತ್ತೆ ಹೇಳಿದ ಪೆಂಗನ ಕಾಣುತ್ತಿಲ್ಲೆನ್ನೆ!

      ದಾರಿ ತಪ್ಪಿತ್ತೋ ಏನೊ?

  2. ಅತ್ತೆಯ ಕೈತೋಟ ಕಂಡು ಕುಶೀ ಆತು. ಮನಸ್ಸಿಂಗೆ ನೆಮ್ಮದಿ ಕೊಡುವ ಒಳ್ಳೆ ಹವ್ಯಾಸ ಇದು.

    1. ಒಪ್ಪಕ್ಕೆ ಧನ್ಯವಾದ.

      ಅನುಶ್ರೀಯ ಮಾತು ಅತ್ತಗೆ ಕುಶಿ ಆತು!

  3. ಮನ್ನೆ ಪೆಂಗಣ್ಣ, ನೆಗೆಮಾಣಿ, ನಡುಕೆ ಬೋಚಭಾವ ಕೂಡಿಗೊಂಡು ಅದ್ಕತ್ತಿಮಾರು ಮಾವನ ಗೆದ್ದೆಗೆ ಹೋಯಿದವಡ. ಇನ್ನು ಇವು ಸೇರಿ ಉದೆಗಾಲಲ್ಲಿ ಸರ್ಪಮೂಲೆ ತೋಟಕ್ಕೂ ಎತ್ತಿದವೋ ಹೇಂಗೆ ಭಾವಯ್ಯ..ಉಮ್ಮಪ್ಪ..!

  4. ಮಾವಿನ ಹಣ್ಣು ಹೇಳ್ತ ಪಟಲ್ಲಿ ಜೀಗುಜ್ಜೆಯುದೇ ಬಾಳೆಯುದೇ ಬಿಟ್ರೆ ಒಂದು ಸಣ್ಣ ಮಾವಿನ ಕಾಯಿ ಕಾಣ್ತಷ್ಟೆನ್ನೇ…………..

    1. ಒಪ್ಪಕ್ಕೆ ಧನ್ಯವಾದ.

      ಒಂದು ಪಟ ಬಿಟ್ಟು ಹೋದ್ದರ ತಿಳಿಶಿದ್ದು ಒಳ್ಳೆದಾತು; ಪ್ರಕಟುಸುವ ಮದಲು ಹೆಚ್ಚು ಜಾಗ್ರತೆ ವಹಿಸೆಕಾತು.

      1. ತಪ್ಪು ಹುಡ್ಕುದು ಭಾರೀ ಸುಲಾಬ.

  5. ಅತ್ತೆಯ ಪರಿಶ್ರಮ ಫಲ ಕೊಟ್ಟಿದು. ಮಾವಂಗೆ ಚೀಲ ಹಿಡ್ಕಂಡು ಪೇಟೆಗೆ ಹೋಪ ಕೆಲಸವೂ ತಪ್ಪಿತ್ತು. ಏ ಮಾವಾ, ನಿಂಗಳೂ ರಜ ಸೇರಿ ಸಕಾಯ ಮಾಡಿದ್ದರೆ ಆ ಬಸಳೆಗೆ ರಜ ಲಾಯ್ಕದ ದೊಡ್ಡ ಚೆಪ್ಪರ ಮಾಡ್ಲಾವ್ತಿತ್ತು! 🙂

    1. ಈ ತಿಂಗಳು ಮಾವ° ಪೇಟಗೆ ಚೀಲ ಹಿಡ್ಕೊಂಡು ಹೋಯಿದವಿಲ್ಲೆ!!

      [ಏ ಮಾವಾ, ನಿಂಗಳೂ ರಜ ಸೇರಿ ಸಕಾಯ ಮಾಡಿದ್ದರೆ ಆ ಬಸಳೆಗೆ ರಜ ಲಾಯ್ಕದ ದೊಡ್ಡ ಚೆಪ್ಪರ ಮಾಡ್ಲಾವ್ತಿತ್ತು!] ಒಳ್ಳೆ ಸಲಹೆ! ಮುಂದಕ್ಕೆ* ಮಾಡುವ°.

      * ಬಪ್ಪ ವರ್ಷ

    1. ಪ್ರದೀಪನ ಪ್ರೋತ್ಸಾಹದ ಮಾತುಗೊ ಅತ್ತಗೆ ಕೊಶಿ ಆಯಿದು! ಧನ್ಯವಾದ.

  6. ಮಾವಾ ಆ ಪಟಲ್ಲಿಪ್ಪದರ ಅಡಿಗೆಲಿ ಉಪಯೋಗಿಸುದು ಯಾವಾಗ ಹೇಳಿ.
    ಆನು ಬೋಚ, ನೆಗೆ ಮಾಣಿ ಬತ್ತೆಯೊ. ಒಟ್ಟಿಂಗೆ ಅರ್ಗೆಟು ಮಾಣಿಯೂ ಬಕ್ಕು, ನಾಕು ದಿನ ಕಳದು ಮಾಡುದಾದರೆ!

    1. ಎಲ! ಈ ಪೆಂಗಣ್ಣಂಗೆ ಅಂದಂದು ಕೊಯ್ದ ತರಕಾರಿಯ ಅಡಿಗೆ ಮಾಡಿರೆ ಉಂಬಲೆಡಿತ್ತಿಲ್ಯೋ? ‘ನಾಕು ದಿನ ಕಳುದು’ ಮಾಡಿರೆ ಮಾಂತ್ರ ಉಂಬದೊ? ಉಮ್ಮಪ್ಪ!

      1. ಅಥವಾ ಅಡಿಗೆ ಮಾಡಿ ನಾಕು ದಿನ ಕಳುದಿಕ್ಕಿ ಉಂಬದೋ….

        1. ಹ್ಹ ಹ್ಹ ಹ್ಹಾ..! ಇದು ಮತ್ತೂ ಜೋರಾಯಿದು! 😉

  7. ಆಹಾ… ಇದರ ನೋಡುವಗಳೇ ಮನಸ್ಸಿ೦ಗೆ ಸ೦ತೋಷ ಆವ್ತು. ಎಲ್ಲಾ ರೀತಿಲಿಯುದೆ ಒಳ್ಳೆ ಅಭ್ಯಾಸ. ಎಲ್ಲೋರಿ೦ಗುದೆ ಮಾದರಿಯಾದ ಅಭ್ಯಾಸ. ಅತ್ತೆಯ ಹತ್ರೆ ಎನ್ನ ಅಭಿನ೦ದನೆಗಳ ಹೇಳಿಕ್ಕಿ.

    1. ಗಣೇಶನ ಪ್ರೋತ್ಸಾಹದ ಮಾತುಗೊ ಅತ್ತಗೆ ಕೊಶಿ ಆಯಿದು!

  8. ಸರ್ಪಮಲೆ ಮಾವ°,
    ಮೊನ್ನೆ ಅತ್ತೆಯ ಕಂಡಪ್ಪಗಳೇ ಗ್ರೇಶಿತ್ತಿದ್ದೆ ಅತ್ತೆ ಸುಮ್ಮನೆ ಕೂಪೋರು ಅಲ್ಲ ಹೇಳಿ. ನಿಂಗೊ ಪಟ ಹಾಕಿದ ಕಾರಣ ಗೊಂತಾತಿದಾ.
    ಲಾಯ್ಕಾಯಿದು ಅತ್ತೆಯ ಕೃಷಿ.

    ಮಾವ°,
    ನಿಂಗೋ ಒಪ್ಪಣ್ಣನ ಬೈಲಿಲಿ ಲಾಯ್ಕ ಕೃಷಿ ಮಾಡ್ತಿ, ಅಲ್ಲಿಯೇ ಮಾಡಿ ಹೇಳಿಯೇ ಅತ್ತೆ ನಿಂಗಳ ಹತ್ತರೆ ಮನೆಲಿ ಹೇಳದ್ದೆ ಇಪ್ಪದು.
    ಬೈಲು, ಬೈಲಿನೋರು ಕಾಯ್ತಾ ಇಪ್ಪದು ಮಾವ°, ನಿಂಗೋ ಯಾವಾಗ ಬತ್ತಿ ಹೇಳಿ!!!
    ಶುದ್ದಿ ಬರಲಿ ಮಾವ°.

    1. ಶ್ರೀದೇವಿ,
      ನಿನ್ನ ಒಪ್ಪ ಓದಿ ಅತ್ತಗೆ ಸಂತೋಷ ಆಯಿದು. ಇನ್ನೂ ಹೆಚ್ಚು ಕೆಲಸ ಮಾಡ್ಳೆ ಸುರು ಮಾಡಿದ್ದಿದಾ!!

      ನಮ್ಮ ಬೈಲ್ಲಿ ಕೃಷಿಗೆ ಬೇಕಾದಷ್ಟು ಜೆನ ಇದ್ದವು! ಆನು ಬೈಲಿನ ಕರೇಲಿ ನಿಂದೊಂಡು ನೋಡ್ತಾ ಇದ್ದೆ; ನೋಡಿ ಕೊಶಿ ಆವುತ್ತು. ಈ ಕೃಷಿಕರ ಉತ್ಸಾಹ, ಮಾಡ್ತ ಕೆಲಸ ಅದ್ಭುತ!! ಅಷ್ಟು ಕೆಲಸ ಮಾಡ್ಳೆ ಮಾವಂಗೆ ಎಡಿಗೊ?

      ಎಡೇಲಿ ಒಂದೊಂದು ಸರ್ತಿ ಮನಸ್ಸಾದರೆ ಮಾವನೂ ಬೈಲಿಂಗೆ ಇಳಿಗು. ಮಾವನೂ ಬೈಲಿನ ಮಾವನೆ ಅನ್ನೆ!

  9. ಮಾರ್ಗದ ಪರಿಸ್ಥಿತಿ ಕೊಡೆಯಾಲಲ್ಲಿಯುದೆ ಹಾಂಗೆಯೇ. ಒಂದು ಜಾತಿ “ರೋಡು ಹಂಪು”ಗೊ ಹೇಳಿ ಮಾಡಿ ಹಾಕುತ್ತವು. ಅದೆಂತಕೆ ಸುಮ್ಮನೆ, ಮಾರ್ಗದ ಹೊಂಡಂಗಳೇ ಸಾಕಾನೆ, ಸ್ಪೀಡಿನ ತಗ್ಗುಸಲೆ.
    ಅತ್ತೆ, ಒಳ್ಳೆ ಹವ್ಯಾಸವ ಬೆಳೆಸಿಂಡಿದವು. ಮನೆ ಅಂಗಳಲ್ಲಿ ಪಚ್ಚೆಗೆಡುಗೊ ನಳನಳಿಸೆಂಡಿದ್ದರೆ, ಮಾಡಿದವಂಗು ಕೊಶಿ, ನೋಡಿದವಂಗು ಕೊಶಿ. ಚೆಂದದ ಕೈತೋಟ ಬೆಳಸಿದ್ದಕ್ಕೆ ಅಭಿನಂದನೆಗೊ. ಪಟಂಗಳುದೆ ಲಾಯಕು ಬಯಿಂದು. ಇನ್ನು ರಜಾ ಹತ್ರಂದ ಪಟ ತೆಗದಿದ್ದರೆ ಇನ್ನುದೆ ಲಾಯಕಾವುತ್ತಿತು.

    1. ಒಪ್ಪ ಓದಿ ಕೊಶಿ ಆತು. ಸಲಹೆ ಕೊಟ್ಟದಕ್ಕೆ ಧನ್ಯವಾದಂಗೊ.

    1. ಅತ್ತೆಯ ಶ್ರಮವ ಮೆಚ್ಚಿ ಬರದ ಮಾತಿಂಗೆ ಧನ್ಯವಾದ.

  10. ಕೈ ತೋಟವ ಮಾಡೆಕ್ಕಾರೆ ಪಟ್ಟ ಪರಿಶ್ರಮ ಪಟಲ್ಲಿ ಕಾಣ್ತು.

  11. ತೋಟ ನೋಡಿ ಖುಶಿ ಆತು..ಮತ್ತೆ ಮನೆಗೆ ಹೋಗಿ ಒಟ್ಟಿಂಗೆ ಕೂದೊಂಡು ಇನ್ನೊಂದರಿ ನೋಡ್ತೆ.

    1. { ಮತ್ತೆ ಮನೆಗೆ ಹೋಗಿ ಒಟ್ಟಿಂಗೆ ಕೂದೊಂಡು }

      ಯಾರೊಟ್ಟಿಂಗೆ ಹೇಳಿ ಬೊಚ ಬಾವ ಕೇಳ್ತಾ ಇದ್ದ!

      1. ಬೋಚ ಭಾವ ಆರತ್ತರೆ ಕೇಳ್ತಾ ಇಪ್ಪದು..?

        1. ಬೋಚ ಬಾವ ಎನ್ನತ್ರೆ ಕುಮಾರ ಮವ ಆರೊಟ್ಟಿಂಗೆ ಕೂದ್ದದು ಕೇಳಿದ. ಎನಗೆ ಅರಡಿಯದ್ದೆ ನಿಂಗಳತ್ರೆ ಕೇಳಿದ್ದಪ್ಪ!

    2. ಎರಡೆರಡು ಸರ್ತಿ ನೋಡಿದ್ದು ತಿಳುದು ಕೊಶಿ ಆತು.

  12. [ಮಾವ° ಅತ್ತೆಯ ಕೆಲಸಂಗೊಕ್ಕೆ ಸಕಾಯ ಮಾಡ್ಳೆ ಹೋಗವು; ಹೋದರೆ ಅತ್ತಗೆ ಸರಿಯೂ ಆಗ;] – ಹಾಂಗಲ್ಲ ಅದು., ಮಾವ ಹೆರಟ್ರೆ ಮತ್ತೆ ಮಾವನ ಕೈಲಿಯೇ ಮಾಡ್ಸಿಕ್ಕುಗು. ಅಷ್ಟಕ್ಕೆ ಮಾವಂಗೆ ಪುರುಸೋತ್ತಿಲ್ಲೆದಾ.

    ಅತ್ತೆ ಹಸಿರು ಕಾಡು ತೋಟಗಾರಿಕೆ ಪಷ್ಟಾಯಿದು. ಹೊತ್ತು ಹೋಪಲೂ ಆತು, ಕೂದು ತಿಂಬಲೂ ಆತು ಅತ್ತೆಯ ತೋಟಲ್ಲಿ ಸಿಕ್ಕಿದ ಫಲ.
    ಎಲ್ಲೋರ ಮನೆ ಎದುರು ಹೀಂಗಿರ್ತ ಸಣ್ಣ ತೋಟ ಇರೆಕ್ಕು ಮಾಡೆಕ್ಕು ಬೆಳೆಸೆಕ್ಕು ಹೇಳಿ ಪರೋಕ್ಷ ಸಂದೇಶ ಲಾಯಕ್ಕ ಆಯ್ದು ಹೇಳಿಗೊಂಡು ಇಲ್ಲಿಂದ ಒಪ್ಪ.

    1. ಥೇಂಕ್ಸ್ ಭಾವ°,

      ಚೆನ್ನೈ ಭಾವ° ಎಲ್ಲದಲ್ಲಿಯೂ ಫಸ್ಟ್ – ಶುದ್ದಿ ಬರವದಲ್ಲಿ, ಒಪ್ಪ ಕೊಡುವದಲ್ಲಿ, ನೆರೆಕರೆಂಗೆ ಬಪ್ಪದಲ್ಲಿ ಎಲ್ಲದಲ್ಲಿಯೂ. ಫಸ್ಟಾಯಿದು ಒಪ್ಪ, ಫಸ್ಟ್ ಭಾವ° .

      ಬರದ ಶುದ್ದಿಯ ಪರೋಕ್ಷ ಸಂದೇಶವ ಸರಿಯಾಗಿ ತಿಳುಕ್ಕೊಂಡು ಹೇಳಿದ್ದಕ್ಕೆ ಇದಾ ಭಾವಂಗೊಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×