ದುಬಾಯಿಲಿ ಹೀoಗೊ೦ದು ಸತ್ಯನಾರಾಯಣ ಪೂಜೆ!!

May 29, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೂರದ ದುಬಾಯಿಲಿ ಕೂದೊಂಡು ಬೈಲಿಂಗೆ ಹತ್ತರೆ ಆದ ನಮ್ಮ ಮಾಣಿ “ಪೆರುವ ಗಣೇಶಣ್ಣ” ನೆರೆಕರೆಗೆ ಬಂದು ಶುದ್ದಿ ಹೇಳ್ತವು.
ಅವರ ಊರಿಲಿ ಆದ ನಮ್ಮ ಕ್ರಮದ ಸತ್ಯನಾರಾಯಣ ಪೂಜೆಯ ಅನುಭವ ಹಂಚಿಗೊಂಡು ಶುದ್ದಿ ಹೇಳುಲೆ ಸುರು ಮಾಡಿದ್ದವು.
ಎಲ್ಲೋರುದೇ ಪ್ರೋತ್ಸಾಹಿಸೇಕು – ಹೇಳ್ತದು ನಮ್ಮ ಕೋರಿಕೆ.

ಬೈಲಿನ ಎಲ್ಲೋರಿ0ಗುದೆ ನಮಸ್ಕಾರ.
ಆನು ೫ ವರ್ಷ ಮೊದಲು ಊರಿಂದ ದುಬೈಗೆ ಹೆರಡುವಾಗ ಇಲ್ಲಿ ಆರಾರು ಒಬ್ಬನಾದರೂ ನಮ್ಮ ಹವೀಕರು ಸಿಕ್ಕುಗು ಹೇಳಿ ಗ್ರೆಶಿತ್ತಿದ್ದೆ.
ಇಲ್ಲಿ ಬ೦ದಪ್ಪಗ ಅಲ್ಲದೋ ಸ೦ಗತಿ ಹಾ೦ಗೆ ಅಲ್ಲ ಹೇಳಿ ಗೊ೦ತಾದ್ದದು!! ಮದ್ದಿ೦ಗೆ ಆದರು ಒಬ್ಬನೇ ಒಬ್ಬ ಹವೀಕನ ಪರಿಚಯ ಆದರೆ ಸಾಕನ್ನೇ!! ಇಪ್ಪಲೇ ಇಲ್ಲೆ. ಸರಿ ಎ೦ತ ಮಾಡುತ್ಸು? ಹಾ೦ಗೆ ಹೇಳಿ ಊರಿ೦ಗೆ ವಾಪಸ್ಸು ಹೋದಿಕ್ಕಲೆ ಎಡಿಗೋ?
ಹಾ೦ಗೆ ದಿನ೦ಗೊ ಹೋವುತ್ತಾ ಇಪ್ಪಗ ನಮ್ಮ ಒಪ್ಪಣ್ಣನ ಬೈಲಿನ ಪರಿಚಯ ಆತು. ಒ೦ದು ದಿನ ಅದರ್ಲಿ ನೆರೆಕರೆಲಿ ಆರೆಲ್ಲಾ ಇದ್ದವು ಹೇಳಿ ನೋಡ್ಯೊ೦ಡು ಇಪ್ಪಗ ಒಬ್ಬರ ಗುರ್ತ ಪರಿಚಯಲ್ಲಿ ಈಗ ದುಬೈಲಿ ಇಪ್ಪದು ಹೇಳಿ ಬರಕ್ಕ೦ಡು ಕ೦ಡತ್ತು. ಸರಿ ಅ೦ಬಗಳೇ ಅವಕ್ಕೆ ಒ೦ದು ಮಿ೦ಚ೦ಚೆ ಬರದು ಕಳುಸಿದೆ, ಅವುದೆ ಉತ್ತರ ಕೊಟ್ಟವು. ಹಾ೦ಗೆ ಆನಲ್ಲದ್ದೆ ಮತ್ತುದೆ ಎರಡು ಹವಿಕ೦ಗೊ (ಗೆ೦ಡನುದೆ ಹೆ೦ಡತ್ತಿಯುದೆ ಸೇರಿ) ದುಬೈಲಿ ಇದ್ದವು ಹೇಳಿ ಗೊ೦ತಾದಪ್ಪಗ ಭಾರೀ ಕೊಶಿ ಆತು.
ಹೀ೦ಗೆ ಮಾತಾಡ್ತಾ ಇಪ್ಪಗ ಅವು ಹೇಳಿದವು, ಇದಾ ನಾವು ಇಲ್ಲಿಪ್ಪ ಹವಿಕರೆಲ್ಲ ಸೇರಿ ಇಲ್ಲಿ ಸಣ್ಣ ಮಟ್ಟಿ೦ಗೆ ಒ೦ದು ಸತ್ಯನಾರಾಯಣ ಪೂಜೆ ಮಾಡ್ತು, ಈ ೨೭ ನೆ ತಾರೀಕು, ಶುಕ್ರವಾರ, ಬ೦ದಿಕ್ಕಿ ಹೇಳಿ. ಇಲ್ಲಿ ನವಗೆ ಹೀ೦ಗಿರ್ತ ಚಾನ್ಸು ಸಿಕ್ಕಿರೆ ಬಿಡ್ಲಿದ್ದೋ? ಅ೦ಬಗಳೇ ಗ್ರೇಶ್ಯೊಂಡೆ, ಎ೦ತದೇ ಆದರು, ಲೋಕವೇ ತಲೆ ಕೆಳ ಆದರು ಅ೦ದು ಪೂಜೆಗೆ ಹೋಪದೇ ಹೇಳಿ.
ಬೆಂಗ್ರೆ ಕಾಮತನ ಹೋಟಲಿನ ಪಾರ್ಟಿ ಹಾಲಿಲ್ಲಿ ಅಡ ಪೂಜೆ. ಇದು ಎಲ್ಲಿ ಹೇಳಿ ಒಟ್ಟಿ೦ಗೆ ಕೆಲಸ ಮಾಡ್ತವರ ಹತ್ರೆ ಕೇಳಿ ನೋಡಿದೆ, ಆರಿ೦ಗುದೆ ಗೊ೦ತಿಲ್ಲೆ ಆಡ. ಒಬ್ಬ ಜನ ಒ೦ದು ಅಧ್ಭುತ ಸಲಹೆ ಕೊಟ್ಟ, ಈಗ ಮನೆ ಬೀಗದ ಕೀ ಕಾಣೆ ಆದರುದೇ ಗೂಗಲಿಲ್ಲಿ ಹುಡ್ಕಿರೆ ಸಿಕ್ಕುತ್ತು, ನೀನು ಅದರ್ಲಿ ಹುಡುಕ್ಕಿ ನೋಡು ಹೇಳಿದ.
ಹಾ೦ಗೆ ಬಿಟ್ಟರೆ ಸರಿ ಆಗ ಹೇಳಿ ಗೂಗಲ್ ಅರ್ತ್ ಇದ್ದನ್ನೇ, ಅದರಲ್ಲೇ ಹುಡುಕ್ಕಿದೆ, ಸಾಲದ್ದಕ್ಕೆ, ಬೆ೦ಗ್ರೆ ಕಾಮತರ ಹೋಟಲಿನ ನ೦ಬರಿ೦ಗೆ ಫೋನು ಮಾಡಿ ಜಾಗೆ ಎಲ್ಲ ತಿಳುದು ಮಡುಗಿಯೊ೦ಡೆ.
ಹೇ೦ಗಾರು ಎನಗೆ ಹೇಳಿಕೆ ಕಳುಸಿದ ಪ್ರಕಾಶಣ್ಣನುದೆ ಬಕ್ಕು ಹೇಳಿ ಗ್ಯಾರ೦ಟಿ ಇದ್ದತ್ತು, ಅವು ನಿನ್ನೆ ಕಸ್ತಲೆಪ್ಪಗ ಫೋನು ಮಾಡಿ ಹೇಳ್ತವು, ಎನಗೆ ನಾಳ೦ಗೆ ಆಫೀಸಿ೦ಗೆ ಹೋಗದ್ದೆ ಕಳಿಯ, ಆನು ಬಪ್ಪದು ಸ೦ಶಯ ಹೇಳಿ.
ಛೆ, ಇನ್ನೆ೦ತ ಮಾಡುವದು!!?
ಸರಿ ಹೇ೦ಗಾರು ಹೋಪದು ಹೋಪದೇ ಹೇಳಿ ಉದಿಯಪ್ಪಗಳೇ ಎದ್ದು ಮಿ೦ದು ಹೆರಟಾತು. ಊರಿಲ್ಲಿ ಆಗಿದ್ದರೆ ಲಾಯ್ಕಕ್ಕೆ ಒ೦ದು ಮು೦ಡು ಸುತ್ತಿಯೊ೦ಡು ಹೆಗಲಿ೦ಗೆ ಒ೦ದು ಶಾಲುದೆ ಹಾಕಿಯೊ೦ಡು ಹೋದಿಕ್ಕಲಾವ್ತಿತು. ಇಲ್ಲಿ ಅರಬ್ಬಿ ಪೋಲೀಸ೦ಗೆ ಕ೦ಡ್ರೆ ಕೆಲಸ ಕೆಟ್ಟಿಕ್ಕುಗು. ಆದ ಕಾರಣ ಪೇ೦ಟೇ ಸುರ್ಕೊ೦ಡು ಹೋದೆ.
ಯೇವತ್ರಾಣ ಹಾ೦ಗೆ ಕರೆಕ್ಟು ಸಮಯಕ್ಕೆ ಎರಡು ನಿಮಿಷ ಮೊದಲೇ ಅಲ್ಲಿಗೆ ಎತ್ತಿತ್ತು, ದೇವರ ದಯ!
ಅಲ್ಲಿ ಹೋಗಿ ನೋಡಿರೆ ಆರಿದ್ದವು? ಆರೋ ಒಬ್ಬ ಹೆಮ್ಮಕ್ಕಳುದೆ, ಒ೦ದು ಸಣ್ಣ ಕೂಸುದೆ, ಒಬ್ಬ ಮಾವನುದೆ ಕೂದ೦ಡಿದ್ದವು. ಪರಿಚಯ ಮಾಡ್ಯೊ೦ಡೆ, ಇಲ್ಲಿ ಬ೦ದು ೫ ವರ್ಶ ಆತು, ಇಷ್ಟರ ವರೇ೦ಗೆ ಹೀ೦ಗೊ೦ದು ನಮ್ಮ ಕೂಟ ಇಪ್ಪದು ಗೊ೦ತಿತ್ತಿಲ್ಲೆ ಹೇಳಿಯಪ್ಪಗ ಅವಕ್ಕೆ ಆಶ್ಚರ್ಯವೇ ಆಶ್ಚರ್ಯ!!
ಅಲ್ಲಿ ನೋಡಿರೆ ಪೂಜೆಯ ಸನ್ನಾಹ ಎ೦ತು ಕಾಣ್ತಿಲ್ಲೆ. ಸುಮಾರು ಮೇಜು ಕುರ್ಚಿ ಮಡುಗ್ಯೊ೦ಡು ಇದ್ದು, ಎನಗೆ ಒ೦ದರಿ ‘ಆನು ಸರಿಯಾದ ಜಾಗೆಗೇ ಅಲ್ಲದೊ ಬ೦ದದು?’ ಹೇಳಿ ಸ೦ಶಯ ಬ೦ತು. ಅವರತ್ರೆ ಕೇಳಿ ಗಟ್ಟಿ ಮಾಡ್ಯೊ೦ಡೆ. ಸರಿ, ತೊ೦ದರೆ ಇಲ್ಲೆ, ಪೂಜೆ ಇಲ್ಲಿಯೇ ಅಪ್ಪದು. ಬಚಾವ್!!
ಚೂರು ಹೊತ್ತಪ್ಪಗ ಮತ್ತುದೆ ಕೆಲವು ಜನ ಬಪ್ಪಲೆ ಸುರು ಮಾಡಿದವು. ನೋಡ್ತಾ ಇದ್ದ ಹಾ೦ಗೆ ಮೇಜು, ಕುರ್ಚಿ ಎಲ್ಲ ಒ೦ದು ಕರೇ೦ಗೆ ಮಾಡಿ, ಲಾಯ್ಕಕ್ಕೆ ನೀರು ಹಾಕಿ ತೊಳದಾತು.
ಅಷ್ಟಪ್ಪಗ ನಮ್ಮ ಹೆಗ್ಡೆ ಭಾವ ಕೆಳಾ೦ದ ಫೋನು ಮಾಡಿದವು, ಕೆಳ ಹೋಗಿ ಅವು ತೆಕ್ಕೊ೦ಡು ಬ೦ದ ಪೂಜೆ ಸಾಮಾಗ್ರಿಗೊ, ಕೂಬಲೆ ಹಸೆ ಎಲ್ಲ ಮೇಲ೦ಗೆ ತೆಕ್ಕೊ೦ಡು ಬ೦ದಾತು, ಅಷ್ಟಪ್ಪಗ ತೊಳದ ನೆಲಕ್ಕ ಎಲ್ಲ ಲಾಯಿಕಕ್ಕೆ ಒಣಗಿಯುದೆ ಸಿಕ್ಕಿತ್ತು.
ಬಟ್ಟ ಮಾವನುದೆ ಬ೦ದವು. ಮ೦ಟಪ ಮಾಡಿ ಆತು, ಬಾಳೆ ಸೆಸಿ ಕಟ್ಟಿ ಆತು, ಹೂಗು ಹಾಕಿ ಅಲ೦ಕಾರ ಮಾಡಿ ಆತು.
ಇಷ್ಟು ಹೊತ್ತಪ್ಪಗ, ಜನ೦ಗೊ ದಿಮಿ ದಿಮಿ ಹೇಳಿ ಬಪ್ಪಲೆ ಸುರು ಮಾಡಿದವು!!
ಎಷ್ಟು ಸಣ್ಣ ಸಣ್ಣ ಮಕ್ಕೊ!! ಭಾವ೦ದ್ರು!! ಅಣ್ಣ೦ದ್ರು!! ತಮ್ಮ೦ದ್ರು!! ಅಕ್ಕ೦ಗೊ!! ತ೦ಗೆಯಕ್ಕೊಗೊ!!
ಒಳ್ಳೇ ಹಶುವಾಗಿ೦ಡಿಪ್ಪ ಭಿಕ್ಷುಕ೦ಗೆ ಮೃಷ್ಟಾನ್ನ ಭೋಜನ ಸಿಕ್ಕಿದ ಹಾ೦ಗೆ ಆತು ಎನ್ನ ಅವಸ್ಥೆ!!

ಎಲ್ಲರ ಹತ್ರುದೆ ನಮ್ಮ ಭಾಷೆಲಿ ಬಾಯಿತು೦ಬ ಮಾತಾಡಿಸಿಯೊ೦ಡು ಇಪ್ಪಗ ಬಟ್ಟ ಮಾವ ಸ0ಕಲ್ಪ ಮಾಡ್ಳೆ ದಿನಿಗೋಳಿದವು. ಎಲ್ಲರುದೆ ಭಕ್ತಿಲಿ ನಿ೦ದು ಕೈ ಮುಗುದು ಸ೦ಕಲ್ಪ ಮಾಡಿ ಆತು. ಪೂಜೆ ಸುರು ಆತು.
ವಿಷ್ಣು ಸಹಸ್ರನಾಮ ಹೇಳ್ಳಪ್ಪಗ ಎಷ್ಟು ಜನ ಗೊ೦ತಿದ್ದೊ ಒಟ್ಟಿ೦ಗೆ ಹೇಳ್ಳೆ!! ಆನುದೆ ಸೇರ್ಯೊ೦ಡೆ. ಅದರ ಕೊಶಿಯೇ ಬೇರೆ.ಇಪ್ಪತ್ತು ಇಪ್ಪತ್ತೈದು ಜನ ಒಟ್ಟಿ೦ಗೆ ಕೂದ೦ಡು ಒ೦ದೇ ಸ್ವರಲ್ಲಿ ವಿಷ್ಣು ಸಹಸ್ರನಾಮ ಹೇಳುವದು ಕೇಳ್ಳೇ ಚೆ೦ದ, ಒಟ್ಟಿ೦ಗೆ ಹೇಳ್ಳೆ ಮತ್ತುದೆ ಚೆ೦ದ.
ಮ೦ಗಳಾರತಿಗೆ ಅಪ್ಪಗ, ಉತ್ತರ ಕರ್ನಾಟಕದವು, ದಕ್ಷಿಣ ಕರ್ನಾಟಕದವು, ನಮ್ಮ ಊರಿನವು ಎಲ್ಲ ಸೇರಿ ಎಷ್ಟೋ ಜನರ ಪರಿಚಯ ಆತು, ಫೋನ್ ನ೦ಬ್ರ, ಮಿ೦ಚ೦ಚೆಗಳ ಅತ್ಲಾಗಿ ಇತ್ಲಾಗಿ ಕೊಟ್ಟೊ೦ಡುದೆ ಆತು. ಪ್ರಕಾಶಣ್ಣ ಅಷ್ಟು ಅರ್ಜೆ೦ಟಿನ ಎಡಕ್ಕಿಲ್ಲಿಯುದೆ ಪುರುಸೊತ್ತು ಮಾಡಿಯೊ೦ಡು ಹೆ೦ಡತ್ತಿಯನ್ನುದೆ ಕರಕ್ಕೊ೦ಡು ಚೂರು ಹೊತ್ತಿನ ಮಟ್ಟಿ೦ಗಾದರುದೆ ಬ೦ದವು. ಮನಸ್ಸಿದ್ದರೆ ಎ೦ತ ಬೇಕಾರು ಮಾಡ್ಲೆಡಿಗಲ್ಲದೊ!
ನೈವೇದ್ಯ ಆದಪ್ಪಗ ಸಪಾದಭಕ್ಷ್ಯ ಸಣ್ಣ ಸಣ್ಣ ಪಾತ್ರ೦ಗೊಕ್ಕೆ ಹಾಕಲೆ ಮೊಳೆಯಾರು ರವಿಯಣ್ಣ೦ದೆ ಆನುದೆ ಕೂದೊ೦ಡಿಯೊ. ಸಪಾದಭಕ್ಷ್ಯವೇ ರುಚಿ, ಅದರೊಟ್ಟಿ೦ಗೆ ಭಕ್ತಿಯುದೆ, ಪ್ರೀತಿ, ಸ್ನೇಹವುದೆ ಸೇರ್ಯೊ೦ಡರೆ ಮತ್ತೆ ಕೇಳೆಕೊ?
ಪೂಜೆ ಮುಗುದು ತೀರ್ಥ ಪ್ರಸಾದ ತೆಕ್ಕೊ೦ಡಾತು, ಲಾಯಕಲ್ಲಿ ಊಟವುದೆ ಆತು.
ಊಟದ ಮಟ್ಟಿ೦ಗೆ ಸಣ್ಣೆ ಎಡ್ಜಸ್ಟುಮೆ೦ಟು ಮಾಡ್ಯೊ೦ಡತ್ತು. ಹ೦ತಿ ಹಾಕಿ ಕೂದ೦ಡಲ್ಲ ಊಟ, ಬಫೆ. ಬಟ್ಟಮಾವ೦ಗುದೆ ಅವಕ್ಕೆ ಸಕಾಯ ಮಾಡಿದ ಸಣ್ಣ ಬಟ್ಟ ಮಾವ೦ಗುದೆ ಹ೦ತಿಲಿ ಬಾಳೆಲೆ ಹಾಕಿ ಊಟ, ಬಾಕಿ ಎಲ್ಲೋರಿ೦ಗುದೆ ಬಫೆ. ನೂರು ಜನಕ್ಕೆ ಬಾಳೆ ಎಲೆ ಸಿಕ್ಕಲೆ ಕಷ್ಟ ಆದ ಕಾರಣ ಆಯಿಕ್ಕು. ಒಳ್ಳೆ ಸಾರು, ಸಾ೦ಬಾರು, ಮೊಸರು, ಉಪ್ಪಿನಕಾಯಿ, ಮಜ್ಜಿಗೆ, ಹಪ್ಪಳ ಎಲ್ಲ ಇಪ್ಪ ಪಷ್ಟು ಕ್ಲಾಸು ಊಟ. ನಿಜವಾಗಿ ಹೇಳಿರೆ ಈ ಸ೦ಭ್ರಮದ ಎಡಕ್ಕಿಲ್ಲಿ ಊಟಕ್ಕೆ ಎ೦ತೆಲ್ಲ ಬಗೆ ಹೇಳುವದೇ ಎನಗೆ ತಲೆಗೆ ಹೋಯಿದಿಲ್ಲೆ!!
ಊಟ ಆಗಿ ಕೂದ೦ಡು ಮತ್ತುದೆ ಎಡಿಗಾದವರ ಹತ್ರೆಲ್ಲ ಎಡಿಗಾದಷ್ಟೂ ಮಾತಾಡಿದೆ, ಅಷ್ಟಪ್ಪಗ ನಮ್ಮ ಚಿತ್ತಾರಿ ಭಾವನ ಪರಿಚಯವುದೆ ಆತು. ಎಲ್ಲೋರ ಹತ್ರುದೆ ಇನ್ನಾಣ ಸರ್ತಿ ಖ೦ಡಿತ ಕಾ೦ಬೊ ಹೇಳಿಕ್ಕಿ ಹೆರಟಪ್ಪಗ ಈ ಐದು ವರ್ಷಲ್ಲಿ ಸಿಕ್ಕದ್ದ ಸ೦ತೋಷ ಮನಸ್ಸಿಲ್ಲಿ ಗರಿಗೆದರಿತ್ತು.

ಪೂಜೆಯ ಪಟಂಗೊ:

ದುಬಾಯಿಲಿ ಹೀoಗೊ೦ದು ಸತ್ಯನಾರಾಯಣ ಪೂಜೆ!!, 4.5 out of 10 based on 2 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ವೇಣು ಪೆರ್ವ
  venuperva

  ಒಪ್ಪಣ್ಣನ ಈ ಬೈಲಿನ ಪರಿಚಯ ಈಗಸ್ಟೆ ಆದ್ದು… ಐದು ದಿನ ರಜೆ ಇಪ್ಪ ಕಾರಣ ರಜಾ ನೊಡ್ಲೆ ಸಮಯ ಸಿಕ್ಕಿತ್ತು..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿvreddhiಕಾವಿನಮೂಲೆ ಮಾಣಿದೀಪಿಕಾಜಯಶ್ರೀ ನೀರಮೂಲೆಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಚುಬ್ಬಣ್ಣಅಡ್ಕತ್ತಿಮಾರುಮಾವ°ಪುಟ್ಟಬಾವ°ವಿದ್ವಾನಣ್ಣದೊಡ್ಡಭಾವವಾಣಿ ಚಿಕ್ಕಮ್ಮಶರ್ಮಪ್ಪಚ್ಚಿಗಣೇಶ ಮಾವ°ಎರುಂಬು ಅಪ್ಪಚ್ಚಿಸುಭಗದೊಡ್ಮನೆ ಭಾವಬಂಡಾಡಿ ಅಜ್ಜಿಬೋಸ ಬಾವಅಜ್ಜಕಾನ ಭಾವಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣಮಾಷ್ಟ್ರುಮಾವ°ಸಂಪಾದಕ°ಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ