ಶಾಲಗೆ ಸೇರ್ಸಲೆ ಅಂಬೇರ್ಪು ಮಾಡಿಕ್ಕೆಡಿ

March 12, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮದಲಿಂಗೆ ಮಕ್ಕಳ ಶಾಲಗೆ ಸೇರ್ಸಲೆ ಕೆಲವು ಅಬ್ಬೆ ಅಪ್ಪಂದ್ರಿ೦ಗೆ ರಜಾ ಒಳ್ಳೆತ  ಅಮ್ಸರ.
ಅಂಬಗ ಈಗ 3 ವರ್ಷ ಆಯೆಕ್ಕಾರೇ ಸೇರ್ಸುತ್ತವನ್ನೇ ಹೇದು ನಿಂಗಳೂ ಹೇಳಲೆ ಅಮ್ಬೇರ್ಪು ಮಾಡಿಕ್ಕೆಡಿ ಇನ್ನೀಗ. ನಿಲ್ಲಿ, 
ಈಗ ಸೇರ್ಸೋದು ಈ ಪ್ರಾಯಕ್ಕೆ ಉಚಿತ (ಹೇಳಿ ಹೇಳಿಗೊಂಬ) ಬೇಬಿ ಸಿಟ್ಟಿಂಗ್, ಕಾನ್ವೆಂಟು ಹೀಂಗೇ. ಮದಲಿಂಗೆ 4 ವರ್ಷ ಅಪ್ಪಗಳೇ ಹುಡಿ ಮಕ್ಕೊ ದೊಡ್ಡ ದೊಡ್ಡಕ್ಕೆ ಕಂಡರೆ  6 ವರ್ಷ ಆತು ಹೇಳಿ ಶಾಲಗೆ  ಒಂದನೆ ಕ್ಲಾಸಿಂಗೆ ಸೇರ್ಸಿದ ಹಲವು ಘಟನೆ ಇದ್ದು.
ಮನೇಲಿ ಉಪದ್ರ ತಡೆತ್ತಿಲೆ, ಬಿತ್ತುರುಟಿ, ಬಿಂಗುರುಟಿ ಹೇದು ನಡೆಯಲಿ ಶಾಲಗೆ ಹೇಳಿ ಸೇರ್ಸಿತ್ತಯ್ಯ.
ತಿನ್ನಲಿ ಅಲ್ಲಿ ಮಾಸ್ಟ್ರ ಕೈಂದ ಪೆಟ್ಟು . ಬರಲಿ ಇದಕ್ಕೆ ಬುದ್ದಿ ಹೇದು!.

 ಪರಿಣಾಮ…?.
ಆ ಮಕ್ಕೊ ಕಷ್ಟ ಪಡೋದು ಆ ಪ್ರಾಯಲ್ಲಿ ಮಾತ್ರವಲ್ಲ, ಮುಂದಾಣ ಭವಿಷ್ಯ ಜೀವನಲ್ಲೂ. ದೇಹ ಪ್ರಬುದ್ಧತೆ ಕಾಣುತ್ತರೂ  ಮೆದುಳು ಬಲ ಹೊಂದಿರ್ತಿಲ್ಲೆ.
ಶಾಲೆಲಿ ಇವಕ್ಕೆ ತುಂಬುಸೋದು ಮಂಡಗೆ ಏರುತ್ತೂ ಇಲ್ಲೆ (ಭೂಪಣ್ಣ ಇದಕ್ಕೇ ಹೇಳಿದ್ದೋ – ‘ಎನ್ನ ಮೆಲುಪ್ಪರಿಗೆ ಖಾಲಿ ಇದ್ದು’ ಹೇಳಿ!). ದಡ್ಡ, ಗಜ ದಡ್ಡ, ಹಂದಿ, ಕೋಣ ಹೇಳಿ ಪೆಟ್ಟು ತಿ೦ಬದು ಬಂತು.
ಮದಲಿಂಗೆ ಶಾಲಗಳಲ್ಲಿ ಹಾಂಗೇ ಅಲ್ಲದೋ, – ಪೀಟ್ರೋಲ್, ಬಡಿಗೆ ಕೈಲಿ ಇಲ್ಲದ್ದರೆ ಅವ° ಮಾಸ್ಟರನೇ ಅಲ್ಲ!!. ( ಯೇ ದೇವರೇ, ಎನಗೆ ಮೂರನೇ ಕ್ಲಾಸಿಂದ ಏಳನೇ ಕ್ಲಾಸಿನ ವರೇಗೆ ಪ್ರತಿವರ್ಷ ಒಬ್ಬಬ್ಬ ಮಾಸ್ಟರ ಇತ್ತಿದ್ದವಯ್ಯಾ ಎಷ್ಟು ಸರ್ತಿ ಚಡ್ಡಿ ಚಂಡಿ ಮಾಡಿಗೊಂಡು ಮನಗೆ ಬಯಿಂದನೋ ಅದೂ ಕೆಲವೊಂದರಿ ಅರ್ಧಲ್ಲೆ!!),

ವಿದ್ಯೆ ತಲಗೆ ಯೇರಕ್ಕಾರೆ ಪ್ರಾಯ ಪಭುದ್ಧತೆಯೂ ಅಗತ್ಯ. ಇಲ್ಲದ್ದ್ರೆ 8ನೇ ತರಗತಿಲಿ ಕೂರೆಕ್ಕಾದ ಮಕ್ಕೊ 10ನೇ ತರಗತಿಲಿ ಕೂದೊಂಡು ಎಂತ ಹಸಬಡಿಯೆಕು.
ಹಾಂಗೆ ಮುಂದೆ ಕಾಲೇಜಿಂಗೆ ಹೋಪಗಳೂ ಆ ಭಾಧೆ ಮುಗಿಯಲೇ ಇಲ್ಲೆ ಎಷ್ಟೇ ಬಿದ್ದು ಬಿದ್ದು ಓದಿದರೂ.
ಆತು, ಹೆಂಗಾರು ಪಾಸು ಮಾಡಿ ಉದ್ಯೋಗಕ್ಕೆ ಸೇರಿತ್ತೋ ಅಲ್ಲಿಯೂ ಅಪ್ಪೋದು ಇದುವೆ ಅಲ್ಲದೋ. ಕಡೆಂಗೆ ರೆಟೈರ್ ಆಯೆಕ್ಕಪ್ಪಂದ ಮದಲೇ ರೇಟೈರೂ ಆತು. ನಷ್ಟ ಆರಿಂಗೆ ಈಗ?!

ಹೀಂಗೇ ಉಪನಯನ ಮಾಡ್ಲೂ ಅಂಬರೇಪು. ಬೇಗ ಉಪನಯನ ಮಾಡಿಕ್ಕಿ ಮಂತ್ರ ಪಾಠಕ್ಕೆ ಕಳ್ಸೋದು.
ಬಾಯಿ ತೆರ್ಚುತ್ತಿಲ್ಲೆ. ಕು  ಕೊ ಬ ತೊಳವಲೂ ಅರಡಿಯ. ಗುರುಗೊಕ್ಕೋ ಈ ಸಣ್ಣ ಮಾಣಿಯ ಹಿಡುಕ್ಕೊಂಡು ಎಂತ ಮಾಡ್ಲೆ.
ಆತು ಪುಟ್ಟ ನೀ ಹೇಳಿದ್ದೆ ಸರಿ ಹೇಳಿ ಕರೇಂಗೆ ಬಿಟ್ಟಿಕ್ಕೆಕ್ಕಾವ್ತು. ಅವಂಗೂ ಬಪ್ಪದು ಅದು ಅರ್ದಂಬರ್ಧ. ಮತ್ತೆ ಸರಿ ಮಾಡ್ಲೆ ಇದ್ದೋ ಇದೆಲ್ಲ. !
ಮಂತ್ರ ಕಲಿವ ಪ್ರಾಯಲ್ಲಿ ಕ್ರಮ ಪ್ರಕಾರ ಪಾಠ ಆಗಿ ಕಲ್ತತ್ತೋ ಬಚಾವ್. ಕಂಠಸ್ಥ ಅಪ್ಪಗಳೇ ಶುದ್ಧ ಸರಿಯಾಗದ್ರೆ ಸಭೆಲಿ ಕೂದು ಹೇಳುವಾಗ ಹಿಂದೆ ಕೂದೊಂಡು ಪರಂಚುಗು ಹಿರಿಯರು, ತಿಳುದವು ಎಂತಕೆ ಇದು ಹೀ೦ಗೊ೦ದು ಕೊಲ್ಲುತ್ತು ಹೇದು.

ಯೇ ದೇವರೇ, ಅಂತರ್ಜಾಲ , ‘ಯು ಟ್ಯೂಬ್’ ಇತ್ಯಾದಿಲಿ ಕೆಲವು ಮಂತ್ರ ಪಠಣ ಕೇಳುತ್ತು…. – ಪರಮಾತ್ಮಂಗೇ ಅರ್ಪಿತ.!! ಅಕ್ಷರ – ಶಬ್ಧಕ್ಕೆ ಜೀವ ಇದ್ರೆ ಅಲ್ಲದೋ ಅರ್ಥಕ್ಕೆ ಜೀವ ಇಕ್ಕು. ಪರಮಾತ್ಮಂಗೇ ಜೀವ ಇದ್ದೋ ಹೇಳಿ ವಾದ ಮಾಡಿರೆ ಅಕ್ಕೋ!!
ಹಾ೦ಗಾಗಿ ಮಕ್ಕಳ ವಿಷಯಲ್ಲಿ ರಜಾ ಯೋಚನೆ ಮಾಡುವ° ಆಗದೋ?

ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಲಕ್ಶ್ಮಿ ಅಕ್ಕ

  ಅಕ್ಕು

  [Reply]

  VA:F [1.9.22_1171]
  Rating: 0 (from 0 votes)
 2. ಲಕ್ಶ್ಮಿ ಅಕ್ಕ

  ಪವನನ

  [Reply]

  VA:F [1.9.22_1171]
  Rating: 0 (from 0 votes)
 3. Manu H S heggodu
  Manu H S

  ಅವಶ್ಯ ವಾದ ವಿಚಾರ ಬರದ್ದೋ ನಮ್ಮ ಚೆನ್ನೈ ಭಾವ .
  ಮಕ್ಕಳ ವಿಷಯಲ್ಲಿ ರಜಾ ಯೋಚನೆ ಅಲ್ಲ, ಮಕ್ಕ ವಿಚಾರದಲ್ಲಿ ಗಂಬಿರವಾಗೆ ಯೋಚನೆ ಮಾಡುವ ಸ್ತಿತಿಗೆ ತಂದಿಟ್ಟಿದ್ದೋ ನಮ್ಮ ಶಿಕ್ಷಣ ಕ್ರಮ.
  science ಪ್ರಕಾರ ಮಕ್ಕ ೬-೭ ವರ್ಷ ದವರೆಗೆ ಓಂದು ಕ್ಷಣ ಕೂಡ ಅಬ್ಬೆ ಅಪ್ಪಯನ್ನ ಬಿಟ್ಟಿರಲಾಗ. ಅಂಬಗ ಪಕ್ಕದ ಮನೆಗೂ ಹೊಪ್ಲಿಲ್ಲ್ಯ ಕೆಳಡಿ. ಅವಾಗ ಕೂಡ ಅಬ್ಬೆಯ ಮನೆಲಿದ್ದ or ಹತ್ತಿರದಲ್ಲೇ ಇದ್ದ ಅನ್ನೋ ಭಾವನೆ ಇರ್ತು ಅವಕ್ಕೆ. ಹೆತ್ತವರು ಆ ಭಾವನೆಯನ್ನ ಅರ್ತ ಮಾಡ್ಕ್ಯಳದೆ ಕೆಳದಸ್ಟು ದುಡ್ಡು ಕೊಟ್ಟು ಶಾಲೆಯ ಸುಪರ್ದಿಗೆ ಹಾಕಿದರೆ ಏನೆಲ್ಲಾ ಅಕ್ಕು ಹೇಳಿ ನೋಡುವ!
  ಅದರ ಬಗ್ಗೋ ಓಂದು ಹೊಸ ನಮೂನೆಯ ಶಿಕ್ಷಣ ಕ್ರಮದ ಬಗ್ಗೆ ಕೆಲವು ಸಾಲು ಬರ್ರ್ದೇ, ಕೆಳಗಣ Link ಒತ್ತಿ ಸ್ವಲ್ಪ ಓದಿ ಅಕ್ಕಾ.
  http://www.facebook.com/notes/manuhs-heggodu/ಸಹಜ-ಶಿಕ್ಷಣ-ಹಾಗೂ-ಶಿಕ್ಷಣ-ಸಂಸ್ಥೆ%EF%BF%BD/111150662294524

  [Reply]

  VA:F [1.9.22_1171]
  Rating: 0 (from 0 votes)
 4. ವಿಷ್ಣು ನಂದನ
  vishnunandana

  Shale 5-6 varsha.

  Upanayana 9-10 varshakke ayekku heli yenna abhimatha.

  Makkala 3 varshanda modale shalage kalusudu maha papa.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಚೆನ್ನೈ ಭಾವಾ,
  ಗ೦ಭೀರ ವಿಚಾರವ ತಿಳುಸಿದ್ದಿ.ನಿ೦ಗೊ ಹೇಳುವ ಮಾತು ನಿಜವಾದ್ದು.
  ಈಗಾಣ ಸ್ಪರ್ಧಾಯುಗಲ್ಲಿ ಎಲ್ಲವನ್ನೂ ಆದಷ್ಟು ಬೇಗ ಗಳಿಸೆಕ್ಕು ಹೇಳುವ ಆಸೆಯೇ ಈ ವೆವಸ್ಥೆಗೆ ಕಾರಣವೋ?
  ಒ೦ದು ರಿಕ್ಷಾ ಡ್ರೈವರು ಬೊ೦ಬಾಯಿಲಿ ಹೇಳಿದ ಮಾತು ನೆನಪ್ಪಾತು. ” ನಾವು ಮಕ್ಕ ಸಣ್ಣಾಗಿಪ್ಪಗ ಅವಕ್ಕೆ ಪ್ರೀತಿಯ ಕೊಡದ್ದೆ,ನಮ್ಮ ತಾಪತ್ರಯ ಹೇಳಿಗೊ೦ಡು ಬೇಬಿ ಸಿಟ್ಟಿ೦ಗಿಲಿ ಬಿಟ್ಟರೆ ನವಗೆ ಪ್ರಾಯ ಅಪ್ಪಗ ಆ ಮಕ್ಕೊ ನಮ್ಮ ವೃದ್ಧಾಶ್ರಮಲ್ಲಿ ಬಿಡುಗು ” ಹೇಳಿ.
  ಇನ್ನು ಉಪನಯನದ ವಿಷಯ. ಮಕ್ಕೊ ಒ೦ಭತ್ತು ವರುಷ ಪ್ರಾಯಲ್ಲಿ ಉಪನಯನ ಮಾಡಿ ರಜೆಲಿ ವೇದಪಾಟಕ್ಕೆ ಕಳುಸಿರೆ ಶ್ರದ್ಧೆಲಿ ಮು೦ದುವರಿಸುತ್ತವು ಹೇಳಿ ಎನ್ನ ಅಭಿಪ್ರಾಯ.

  ಸಾಮರ್ಥ್ಯಕ್ಕೆ ತಕ್ಕ ಭಾರ ಹೊರುಶೊದು ಬಿಟ್ಟು ಅತಿ ಮಾಡಿರೆ ಮು೦ದೆ ಕಷ್ಟ ಆಗದ್ದೆ ಇಕ್ಕೊ? ಮಕ್ಕಳ ದೈಹಿಕ ಬೆಳವಣಿಗೆಗೂ ಪೂರಕವಾದ ವಾತಾವರಣ ಇಪ್ಪ ಹಾ೦ಗೆ ನೋಡಿಗೊಳ್ಳೆಕ್ಕು.
  ಧನ್ಯವಾದ ಭಾವ.

  [Reply]

  VA:F [1.9.22_1171]
  Rating: +2 (from 2 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಭಾವಯ್ಯನ್ದ್ರಿಂಗೆ ನಮನಗಳು.

  ರಘು ಭಾವನ ಅನಿಸಿಕೆ ಅತಿ ಸೂಕ್ತ . “ನಾವು ಮಕ್ಕ ಸಣ್ಣಾಗಿಪ್ಪಗ ……..” ನಿಜ ಸತ್ಯವ ಹಲವು ಪೇಟಗಳಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಬಹುಶ ಸುರುವಾಗದ್ರೂ ಅದೆಷ್ಟು ಜೆನ ಆ ರೀತಿಲಿ ಯೋಚಿಸುತ್ತವೋ ಎಂತೋ. ಎಂತಕೆ ಹೇಳಿರೆ ಅವಕ್ಕೂ ಅಬ್ಬೆ ಅಪ್ಪ ಹೇಳುವ ಪ್ರೀತಿ ಎಂತರ ಹೇಳಿ ಗೊಂತಿಲ್ಲದ್ದೇ ಹೋತು. ‘ಸಾಮರ್ಥ್ಯಕ್ಕೆ ತಕ್ಕ ಭಾರ…..’ ಯಥೋಚಿತ ಮಾತು.

  ಧನ್ಯವಾದಂಗಳು. ಪ್ರೀತಿ ಭಾವನೆ ಎಂದೂ ಬೆಳಯಲಿ.

  [Reply]

  VA:F [1.9.22_1171]
  Rating: 0 (from 0 votes)
 7. ಭೂಪಣ್ಣ
  ಭೂಪ

  ಭಾವಯ್ಯ
  ಎಶ್ತು ಒಳ್ಲೆ ವಿಷಯ ಹೇಳಿದ್ದಿ… ನಿಜ ಆಗಿಯೂ ಅಪ್ಪು. ನಾವು ಎಶ್ತು ಕಶ್ಟಾ ಬೈ೦ದೋ ಏನೋ ಶಾಲೆಹಗೆ ಹೋಪಗ.

  ಅದೆಲ್ಲ ಅಪ್ಪು ಭಾವಯ್ಯ…
  ಆನು ನಿ೦ಗಳ ಕೆಮಿ ಲಿ ಹೇಳಿದ ವಿಶಯವ ನಿ೦ಗೊ ಪೂರಾ ಬೈಲಿಲಿ ಪ್ರಚಾರ ಮಾಡಿದರೆ ಹೇ೦ಗೆ …!!!
  ಈಗ ಎನ್ನ ಉಪ್ಪರಿಗೆ ಖಾಲಿ ಹೇಳಿ ಇಡೀ ಬೈಲಿ೦ಗೆ ಗೊ೦ತಾತನ್ನೆ.

  ಎನ್ನ ಹೆ೦ಡತಿ ಮೋಡಿದರೆ……

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಈಗ ಖಾಲಿ ಅಲ್ಲನ್ನೇ ಭಾವ. ಗೆಣಂಗು ತುಂಬ್ಸಿ ಆಯ್ದನ್ನೇ .

  [Reply]

  VA:F [1.9.22_1171]
  Rating: 0 (from 0 votes)
 8. mankuthimma

  ambaga ena managementina
  LKG and UKG schoolinge
  ge baagilu haakekko bhavaa?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಜ್ಜಿಯಾಣೆಗೂ ಬೇಡ. ಹೇಳಿದ್ದು ತಕ್ಕ ಮಕ್ಕಳ ಮಾತ್ರ ಸೇರ್ಸಿಯೋಳಿಯಷ್ಟೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°ಪವನಜಮಾವಶಾ...ರೀಪೆಂಗಣ್ಣ°ವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಸರ್ಪಮಲೆ ಮಾವ°ಕಜೆವಸಂತ°ಡಾಮಹೇಶಣ್ಣದೊಡ್ಮನೆ ಭಾವಅನು ಉಡುಪುಮೂಲೆನೀರ್ಕಜೆ ಮಹೇಶಕೇಜಿಮಾವ°ಮಾಲಕ್ಕ°ಡಾಗುಟ್ರಕ್ಕ°ಶುದ್ದಿಕ್ಕಾರ°ಡೈಮಂಡು ಭಾವವಸಂತರಾಜ್ ಹಳೆಮನೆಚೆನ್ನೈ ಬಾವ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ