ನಾವು ಎಂತಕೆ ‘ಶಾಂತಿ’ಯ ಮೂರು ಸರ್ತಿ ಹೇಳುತ್ತು?

May 26, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳದ ವಾರ ವಿವೇಕ ಮುಳಿಯ ಭಾವನ ರಾಣಿ, ದೇವಿ, ಸಾವಿತ್ರಿ, ಕುಮಾರಿ ನೋಡಿ ಆತು.

ಈಗ ನಾವಿಲ್ಲಿ ಶಾಂತಿಯ ನೋಡುವೋ.

ಶಾಂತಿ ಹೇಳಿರೆ ಪ್ರಶಾಂತತೆ.
ಇದು ಎಲ್ಲದರ ಸಹಜ ಸ್ಥಿತಿ. ಗೊಂದಲಂಗಳ ನಾವಾಗಿಯೇ ವಾ ಇತರರಿಂದ ಸೃಸ್ಟಿಸಲ್ಪಡುತ್ತದು.

ಒಂದು ಜಾಗೆಲಿ ಆರಾರೊಬ್ಬ ಧ್ವನಿ ಏರಿಸಿರೆ ಅದರಿಂದ ಮದಲು ಅಲ್ಲಿ ಪ್ರಶಾಂತತೆ ಇದ್ದತ್ತು.
ಹಾಂಗಾಗಿ ಶಾಂತಿ ಅಥವಾ ಪ್ರಶಾಂತತೆ ನಮ್ಮ ತಳಮಳಕ್ಕೆ ಅಧಿಸ್ಥಾನ. ತಾತ್ಕಾಲಿಕ ತಳಮಳ ನಿಂದಪ್ಪಗ ಪುನಃ ಶಾಂತಿಯೇ ಸ್ವಾಭಾವಿಕವಾಗಿ ನೆಲೆ ನಿಲ್ಲುತ್ತು.
ಯಾವಾಗ ಶಾಂತಿಯ ಅನುಭವ ನವಗೆ ಉಂಟಾವ್ತೋ ಅಂಬಗ ಮನಸ್ಸಿಂಗೆ ಆನಂದವೂ ದೊರಕುತ್ತು. ಆದ್ದರಿಂದಲೆ ಶಾಂತಿಯುಕ್ತ ಜೀವನವನ್ನೇ ಪ್ರತಿಯೊಬ್ಬನೂ ಬಯಸುವದು.

ಆದರೂ ಬಾಹ್ಯ ಶಕ್ತಿಯ ಪ್ರೇರಣೆಯಿಂದಲಾಗಿ ನಮ್ಮ ಮನಸ್ಸು ಹಲವು ಬಾರಿ ಉದ್ವೇಗ , ತಳಮಳಕ್ಕೆ ತಳ್ಳಲ್ಪಡುತ್ತು. ಅಂತಹ ಪರಿಸ್ಥಿತಿಲಿ ನಮ್ಮ ಮನಸ್ಸಿಂಗೆ ನೆಮ್ಮದಿ ನೀಡು ಹೇಳಿ ಭಗವಂತನಲ್ಲಿ ನಾವು ಪ್ರಾರ್ಥಿಸುತ್ತು.
ಅಂತರಾಳಲ್ಲಿ ಎಷ್ಟೇ ತಳಮಳ ಇದ್ದರೂ ಸರ್ವ ಸಮರ್ಪಣ ಮನೋಭಾವಂದ ಪರಮಾತ್ಮನನ್ನೇ ನಂಬಿ ಮನಃಪೂರ್ವಕ ಪ್ರಾರ್ಥನಾ ಪಠಣ ಮಾಡುವದರಿಂದ ಅದೆಲ್ಲ ನಿಂದು ಸಮಾಧಾನಕಾರವಾದ ಶಾಂತಿಯು ಆಂತರಿಕವಾಗಿ ಅನುಭವಿಸಲ್ಪಡುತ್ತು. ಇಂಥಹ ಎಲ್ಲ ಪ್ರಾರ್ಥನೆಗೊ ಶಾಂತಿ ಹೇಳಿ ಮೂರು ಸರ್ತಿ ಪಠಿಸಿ ಮುಕ್ತಾಯ ಮಾಡುತ್ತು.

ತ್ರಿವರಮ್ ಸತ್ಯಮ್’ ಹೇಳ್ವದು ನಮ್ಮ ಹಿರಿಯರ ನಂಬಿಕೆ.
ಯಾವುದು ಮೂರು ಸರ್ತಿ ಹೇಳಲ್ಪಡುತ್ತೋ ಅದು ಸತ್ಯ ಆವ್ತು.
ಯಾವುದೇ ಪ್ರಾಮುಖ್ಯತೆ ಇಪ್ಪ ವಿಷಯಂಗಳ ಹೇಳುವಾಗ ಅದರ ಮೂರು ಸರ್ತಿ ಹೇಳ್ವ ಕ್ರಮ. ನಮ್ಮ ಪುಣ್ಯಾಹ ವಾಚನಲ್ಲಿಯೂ ನಿಂಗೊ ಗಮನಿಸಿರೆ – ‘ಮಹ್ಯಂ ಸಹಕುಟುಂಬಿನೇ ……………. ಪುಣ್ಯಾಹಂ ಭವಂತೋ ಬ್ರುವಂತು’ ಹೇಳಿ ಮೂರು ಮೂರು ಸರ್ತಿ ಕೇಳಿಗೊಂಬದು.
ಪ್ರತಿವಚನವೂ ‘ಓಂ ಪುಣ್ಯಾಹಂ’ ಹೇಳಿ ಮೂರು ಸರ್ತಿ ಹೇಳ್ವದು.
ನ್ಯಾಯಾಲಯಲ್ಲಿಯೂ ಸಹ, ಸಾಕ್ಷಿದಾರ – ‘ಸತ್ಯವನ್ನೇ ಹೇಳುತ್ತೇನೆ, ಸಂಪೂರ್ಣ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ’ ಹೇಳಿ ಪ್ರಮಾಣ ಮಾಡುತ್ತದು ಇದೇ ಉದ್ದೇಶ ಆಗಿಕ್ಕೋ.

ಹಾಂಗಾಗಿ ನಾವೆಲ್ಲಾ ಪ್ರಶಾಂತತೆಯ ಪ್ರಧಾನ ಹಾಂಗೂ ತೀವ್ರ ಅನುಸಂಧಾನ ಮಾಡಲಿಚ್ಚಿಸುವದರಿಂದ ‘ಶಾಂತಿ’ಯ ಮೂರು ಸರ್ತಿ ಉಚ್ಚರಿಸುತ್ತು.

ಎಲ್ಲಾ ಅಡಚಣೆಗೊ, ತೊಂದರಗೊ, ದುಃಖಂಗೊ ಮೂರು ‘ತಾಪತ್ರಯ’ಗಳಿಂದಲೇ ಉಗಮ ಅಪ್ಪದಡ –

 1. ಆದಿದೈವಿಕ : ಅಗೋಚರವಾಗಿಪ್ಪ ದೈವಶಕ್ತಿಯ ಪ್ರಭಾವಂದ ಉಂಟಪ್ಪ – ಭೂಕಂಪ, ಅತೀವೃಷ್ಟಿ, ಕ್ಷಾಮ, ಅನಾವೃಷ್ಟಿ , ಜ್ವಾಲಾಮುಖಿ, ಬಿರುಗಾಳಿ, ಸುಳಿ, ಸುಂಟರಗಾಳಿ ಇತ್ಯಾದಿ.
 2. ಆದಿಭೌತಿಕ : ನಮ್ಮ ಸುತ್ತಮುತ್ತ ಗೋಚರವಪ್ಪ ತಾಪಂಗೊ. – ಪರಿಸರ ಮಾಲಿನ್ಯ, ಅಪಘಾತ, ಅಪರಾಧ, ಕುಟುಂಬ ಕಲಹ, ನೆರೆಕರೆ/ಸಂಬಂಧಿ ಕಿರುಕುಳ ಇತ್ಯಾದಿ.
 3. ಆಧ್ಯಾತ್ಮಿಕ : ಶರೀರಂದ ಬಪ್ಪ ರೋಗ (ವ್ಯಾಧಿ) ಮತ್ತು ಮಾನಸಿಕ ಸಂಕಟ – ಶೀತ, ಜ್ವರ , ಕೆಮ್ಮು, ಉಷ್ಣ, ಕ್ರೋಧ, ಮತ್ಸರ, ಜಿಗುಪ್ಸೆ ಇತ್ಯಾದಿ.

ಈ ಮೂರು ತಾಪಂಗಳ ನಿವಾರಣೆಗಾಗಿ ಪರಮಾತ್ಮನಲ್ಲಿ ನಮ್ಮ ಆಂತರಿಕ ಪ್ರಾರ್ಥನೆ ಮಂಡುಸುವುವದು.
ಸದಾ ಸರ್ವದಾ ಎಲ್ಲೆಲ್ಲೂ ಶಾಂತಿಯೇ ನೆಲೆಸಲಿ ಹೇಳಿ. ಆದ್ದರಿಂದಲೇ ಶಾಂತಿಯ ಮೂರು ಬಾರಿ ಉಚ್ಚರಿಸುವದು. ಈ ಶಾಂತಿಯ ಹೇಳುವದರ್ಲ್ಲಿಯೂ ಒಂದು ಕ್ರಮ ಇದ್ದಡ. ಪ್ರಣವ ಮಂತ್ರ ‘ಓಂ’ಕಾರವ ಮೊದಲುಚ್ಚರಿಸಿ

 • ಅಗೋಚರ ಶಕ್ತಿಯ ಉದ್ದೇಶಿಸಿ ಸುರೂವಾಣ ಸರ್ತಿ ಗಟ್ಟಿಗೆ
 • ಸುತ್ತಮುತ್ತ ಪರಿಸರ ಉದ್ದೇಶಿಸಿ ಎರಡನೇ ಸರ್ತಿ ಹದಾಕೆ
 • ಸ್ವತಃ ಉದ್ದೇಶಿಸಿ ಮೂರನೇ ಸರ್ತಿ ಮೃದು ಧ್ವನಿಲಿ

ಓಂ ಶಾಂತಿಃ ಶಾಂತಿಃ ಶಾಂತಿಃ ||

ಶಾಂತಿಮಂತ್ರಾಃ

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇಣ ಮಾರ್ಗೇಣ ಮಹೀಂ ಮಹೀಶಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ |
ದೇಶೋsಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ ||

ಅಪುತ್ರಃ  ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ |
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್ ||

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಭಾಗ್ಭವೇತ್ ||

ಓಂ ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ
ಓಂ ಶಾಂತಿಃ ಶಾಂತಿಃ ಶಾಂತಿಃ ||

ಗಾವೋಮೇ ಪುರತಃ ಸಂತು
ಗಾವೋಮೇ ಸಂತು ಪೃಷ್ಠತಃ ।
ಗಾವೋಮೇ ಹೃದಯೇ ನಿತ್ಯಮ್
ಗವಾಂ ಮಧ್ಯೇ ವಸಾಮ್ಯಹಮ್ ॥
ಓಂ ಶಾಂತಿಃ ಶಾಂತಿಃ ಶಾಂತಿಃ ॥

ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು –
ಮಾವಿದ್ವಿಶಾವಹೈ ||

ಓಂ ಶಾಂತಿಃ ಶಾಂತಿಃ ಶಾಂತಿಃ ||

ಶ್ರೀ ಕೃಷ್ಣಾರ್ಪಣಮಸ್ತು

|| ಹರಿಃ ಓಂ ||

(ಸಂಗ್ರಹ)

ನಾವು ಎಂತಕೆ ‘ಶಾಂತಿ’ಯ ಮೂರು ಸರ್ತಿ ಹೇಳುತ್ತು?, 4.5 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಉದೀಯಪ್ಪಗ ಶಾಂತಿ ಮಂತ್ರ ಓದಿ ಮನಸ್ಸು ಪ್ರಶಾಂತ ಅತು. ಇನ್ನು ಇಡೀ ದಿನಾಣ ಕೆಲಸಕ್ಕೆ ಯೇವ ಅಡ್ಡಿ ಇಲ್ಲೆ…
  ಧನ್ಯವಾದ ಭಾವಯ್ಯ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಹೇಳಿರೆ ಅರ್ಥ ಆಗದ್ದವಂಗುದೆ, ಅರ್ಥ ಮಾಡುಸಿದ ಲೇಖನ. ಒಳ್ಳೆಯ ಮಾಹಿತಿ ಒದಗಿಸಿದ ಚೆನ್ನೈ ಭಾವಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಒಪ್ಪ ಲೇಖನಕ್ಕೆ ಒಪ್ಪ೦ಗೊ ಭಾವಯ್ಯಾ..
  ಇ೦ದು ಒಟ್ಟಾರೆ ಲೋಕಲ್ಲಿ ಕಮ್ಮಿ ಆವ್ತಾ ಇಪ್ಪ ಒ೦ದು ಸ೦ಗತಿಯೇ ಶಾ೦ತಿ. ಬೇರೆ ಎ೦ತೆಲ್ಲ ಇದ್ದುದೆ ಶಾ೦ತಿ, ಸಮಾಧಾನ ಇಲ್ಲದ್ರೆ ಎ೦ತರನ್ನುದೆ ಅನುಭವಿಸಲೆ ಎಡಿಯ. ಬೇರೆ ಎ೦ತ ಇಲ್ಲದ್ರುತೆ ಶಾ೦ತಿ ಸಮಾಧಾನ ಇದ್ದು ಹೇಳಿ ಆದರೆ ಬೇರೆ ಎ೦ತ ಬೇಕು? ಅಲ್ಲದೊ?

  ಸ್ವಾಮೀ ದೇವರೇ.. ಎಲ್ಲೋರಿ೦ಗು ಒಳ್ಳೇದಾಗಲಿ, ಲೋಕಲ್ಲಿ ಎಲ್ಲೊರಿ೦ಗುದೆ ಶಾ೦ತಿ ಸಿಕ್ಕಲಿ ಹೇಳಿ ಹೃದಯಪೂರ್ವಕ ಪ್ರಾರ್ಥನೆ.

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಳ್ಳೆ ಮಾಹಿತಿ ಕೊಟ್ಟ ಪರಿಪೂರ್ಣ ಲೇಖನ.
  ಓಂ ಶಾಂತಿಃಶಾಂತಿಃಶಾಂತಿಃ

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ನಮ್ಮ ಆಚರಣೆಗಳ ಹಿ೦ದೆ ಅಡಕವಾಗಿಪ್ಪ ಕಾರಣ೦ಗಳ ತಿಳುಕ್ಕೊ೦ಡರೆ ಮು೦ದೆ ಅರ್ಥಪೂರ್ಣವೂ ಅಕ್ಕು,ಅಲ್ಲದೋ?
  ಶಾ೦ತಿಮ೦ತ್ರಲ್ಲಿ ಸಕಲರಿ೦ಗೂ ಒಳ್ಳೆಯದಾಯೆಕ್ಕು ಹೇಳ್ತ ಆಶಯ ಇದ್ದು.ಇದು ನಮ್ಮ ಜೀವನದ ಮೂಲಮ೦ತ್ರವಾಗಲಿ.
  ಧನ್ಯವಾದ ಚೆನ್ನೈಭಾವ.

  [Reply]

  VA:F [1.9.22_1171]
  Rating: 0 (from 0 votes)
 6. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಒಳ್ಳೆ ಮಾಹಿತಿ ಕೊಟ್ಟ ಲೇಖನ.ಧನ್ಯವಾದ ಚೆನ್ನೈಭಾವ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣದೀಪಿಕಾಪುಣಚ ಡಾಕ್ಟ್ರುಮಂಗ್ಳೂರ ಮಾಣಿಸಂಪಾದಕ°ಒಪ್ಪಕ್ಕಗಣೇಶ ಮಾವ°ಶುದ್ದಿಕ್ಕಾರ°ಅನುಶ್ರೀ ಬಂಡಾಡಿಚೂರಿಬೈಲು ದೀಪಕ್ಕಚುಬ್ಬಣ್ಣಜಯಶ್ರೀ ನೀರಮೂಲೆರಾಜಣ್ಣಪುಟ್ಟಬಾವ°ಪ್ರಕಾಶಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆvreddhiಅಕ್ಷರ°ಕೊಳಚ್ಚಿಪ್ಪು ಬಾವಡೈಮಂಡು ಭಾವಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ