Oppanna.com

ಶರ ಶೇಪು ಬಂಧ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   20/03/2012    27 ಒಪ್ಪಂಗೊ

ಅಪ್ಪದ ಕಾವಲಿ
ಇಪ್ಪದು ಕರಿಕರಿ
ರಪ್ಪನೆ ಕಾವಗ ಹಿಟ್ಟೆರದು
ತುಪ್ಪವ ಉದ್ದಿದ
ರಪ್ಪದು ಗರಿಗರಿ
ಅಪ್ಪವು ತಿಂಬಲೆ ರುಚಿರುಚಿಯೂ

ಅಕ್ಕನು ಬಪ್ಪಗ
ಪಕ್ಕದ ಬೀದಿಲಿ
ಫಕ್ಕನೆ ಬೊಗಳುವ ನಾಯಿಗಳೂ
ಪಕ್ಕದಿ ಕೂಟರು
ಗಕ್ಕನೆ ನಿಲ್ಲುಸಿ
ದಕ್ಕನ ಕಂಡೂ ಓಡಿದವೂ

ದಾಸನ ಅರಳಿರೆ
ವಾಸನೆ ಬಾರಾ
ಮಾಸದ ಬಣ್ಣವು ಅದರದ್ದೂ
ಕಾಸನು ಕೊಟ್ಟರು
ದಾಸನ ಸಿಕ್ಕದು
ವಾಸದ ಪೇಟೆಯ ಮನೆಕರೆಲೀ

ದಾಸನ ಪದ್ಯದ
ಮಾಸದ ನೆನಪಿಲಿ
ಮೀಸೆಯ ಕುತ್ತಕೆ ನಿಲ್ಲುಸಿದಾ
ಆಸರು ಆದರು
ಬೀಸಳೆ ಗಾಳಿಲಿ
ಮೀಸಲೆ ಅರಡಿವ ಒಪ್ಪಣ್ಣ

ಕಾಯಿಯ ಕೆರವಗ
ಬಾಯಿಯ ಬಿಟ್ಟರೆ
ಕಾಯಿಗೆ ಎಂತಾ ತೊಂದರೆಯೂ
ಕಾಯಿಯ ಸುಳಿಯಾ
ಬಾಯಿಗೆ ಹಾಕಿರೆ
ಮಾಯದ ಮಳೆಹನಿ ಮದುವೆದಿನ

27 thoughts on “ಶರ ಶೇಪು ಬಂಧ

  1. ಶೇಪುಭಾವನುದೆ ಬೋದಾಳ (!!!!????) ಭಾವನುದೆ ರೈಸಿದ್ದವು, ಪಷ್ಟುಕ್ಲಾಸಾಯಿದು, ಒಪ್ಪ೦ಗೊ

  2. ಅಲ್ಲಾ ಈ ಲಚ್ಚಿ ಆರು ಕೆಲಸದ ಹೆಣ್ಣೋ ಬಾಯಿ ಬಿಟ್ಟು ಹೇಳದ್ದರೂ ಮನಸ್ಸಿಲೇ ಪರಂಚಿಯೊಂಗು ಜಾಗ್ರತೆ ಮಾಡ್ಯೊಳಿ ಬಾವ ಈಗಳೇ ಹೇಳ್ತೆ!

  3. ಸರಿಯಾದ ಶೇಪಿಲ್ಲಿ ಶರ ಬಂಧ ಆಯಿದು ಹೇಳಿ ಎಲ್ಲರೂ ಹೊಗಳುತ್ತಾ ಇಪ್ಪದು ನೋಡಿ ಖುಷಿ ಆವುತ್ತಾ ಇದ್ದು… ಛಂದೋ ಬದ್ದವಾದ ಹಲವು ಗೀತೆಗಳ ಬೈಲಿಲ್ಲಿ ಕಾಮ್ಬಗ ಭಾವನೆಗಳ ಉತ್ತಮ ರೀತಿಲ್ಲಿ ಹಂಚುವ ದ್ರುಷ್ಟಿಂದ ವ್ಯಾಕರಣ ಕಲ್ತಿದ್ದರೆ ಒಳ್ಳೇದಿತ್ತು ಹೇಳಿ ಅನ್ನಿಸುತ್ತು… ವ್ಯಾಕರಣದ ಗಂಧ ಗಾಳಿಯೇ ಅರಡಿಯದ್ದವಂಗೆ ಇನ್ನು ವ್ಯಾಕರಣ ಕಲ್ತು ಛಂದೋ ಬದ್ದವಾದ ಕವಿತೆ ರಚಿಸುದು ಕಷ್ಟದ ಕೆಲಸವೇ… ಆದರೂ ಅವಕಾಶ ಸಿಕ್ಕಿರೆ ಕಲಿಯೇಕ್ಕು ಹೇಳಿ ಆಸೆಯೂ ಇದ್ದು… ಶೇಡಿಗುಮ್ಮೆ ಪುಳ್ಳಿಗೆ ಅಭಿನಂದನೆಗೋ…

      1. ಒಪ್ಪಣ್ಣ ನಿಜವಾಗಿಯೂ ಒಳ್ಳೆ ಗುರು… ಲಘು,ಗುರು ಎಂತರ ಹೇಳಿಯೇ ಗೊಂತಿಲ್ಲದ್ದ ಎನಗೆ ಒಪ್ಪಣ್ಣ ಹೇಳಿಕೊಟ್ಟ ಥೀಯರಿ ಅರ್ಥ ಆತು…

        ಮೇಲಿನ ಪದ್ಯಲ್ಲಿ
        4 | 4
        4 | 4
        4 | 4 | 4 | 2 ||
        4 | 4
        4 | 4
        4 | 4 | 4 | 2 ||

        ದ್ವಿತೀಯಾಕ್ಷರ ಪ್ರಾಸ ಗುರುತಿಸಿ ಶರ ಷಟ್ಪದಿ ಹೇಳಿ ಅರ್ಥ ಆತು… ಈ ಥೀಯರಿ ಅಳವಡಿಸಿಗೊಂಡು ಕವಿತೆ ರಚನೆ ಮಾಡುದೇ ಕಷ್ಟ…

        ಸಂಕೋಲೆ ಕೊಟ್ಟದಕ್ಕೆ ಧನ್ಯವಾದ ಅಪ್ಪಚ್ಚಿ…

    1. {padyapaana.com} ಲಿ ಒಂದರಿ ಇಣ್ಕಿಕ್ಕಿ. ಛಂದೋಬದ್ಧ ಕವಿತೆ ಬರವದು ಹೇಂಗೆ ಹೇಳಿ ಶತಾವಧಾನಿ ಡಾ. ಆರ್. ಗಣೇಶರು ಹೇಳಿಕೊಡ್ತವು.

      1. ಇಷ್ಟು ದೊಡ್ಡ ಸಮದ್ರಲ್ಲಿ ಹೋಗಿ ರತ್ನ ಹುಡುಕ್ಕುದು ಎನ್ನ ಹಾಂಗೆ ಏನೂ ಗೊಂತಿಲ್ಲದ್ದವಕ್ಕೆ ಕಷ್ಟವೋ ಹೇಳಿ… ಸಮಯ ಸಿಕ್ಕುವಗ ಹೋಗಿ ನೋಡುತ್ತೆ… ತಿಳಿಸಿದ್ದಕ್ಕೆ ತುಂಬಾ ಧನ್ಯವಾದ ಮಾವ…

      2. ಮಾವ,
        ಎನ್ನ ಒಪ್ಪಂಗಳಲ್ಲಿ ಕಾಂಬ ಪುಟ್ಟ ಪುಟ್ಟ ಸಾಲುಗಳ ನೋಡಿ ಯಾವುದಾದರೂ ಕವಿತಾ ಪ್ರಕಾರ ಅಭ್ಯಾಸ ಮಾಡಿರೆ ಒಲುದು ಬಕ್ಕು ಹೇಳಿ ಅನ್ನಿಸುತ್ತರೆ ಸಲಹೆ ಕೊಡಿ… ಅದರ ಅಭ್ಯಾಸ ಮಾಡಿಗೊಮ್ಬಲೆ ಎಡಿಗೋ ಹೇಳಿ ಪ್ರಯತ್ನ ಮಾಡುತ್ತೆ…

        1. ಪ್ರತೀ ಸಾಲಿಲಿ ೨೦ ಮಾತ್ರೆಗೊ (೫+೫+೫+೫ ಆದರೆ ಒಳ್ಳೆದು) ಬಪ್ಪ ಹಾಂಗೆ ನಾಕು ನಾಕು ಸಾಲಿನ ಪದ್ಯ ಬರವಲೆ ಪ್ರಯತ್ನ ಮಾಡಿ. ಆದಿ ಪ್ರಾಸ ಅಥವಾ ಅಂತ್ಯ ಪ್ರಾಸ ಹಾಕಿ ಬರೆರಿ.ಒಂದರಿ ಅಭ್ಯಾಸ ಆದ ಮತ್ತೆ ಚಂದೊಬದ್ದ ಕವಿತೆ ಬರವದು ಸುಲಭ ಅಕ್ಕು.

          1. ನೋಡ್ಲೆ ಹೋದೆ ಮಾವ ಹೇಳಿದ ಪದ್ಯಪಾನ
            ಕೂಡ್ಲೆ ಕಂಡೆ ಅಲ್ಲಿ ನಮ್ಮ ಬೈಲಿನ ಒಪ್ಪಣ್ಣನ
            ಮಾಡ್ಲೆ ಹೆರಟೆ ಸಮಸ್ಯಾ ಪೂರಣ ಚಿತ್ರ ಕವನ
            ಆಡ್ಲೆ ಆಸೆ ಆದರೂ ಗೊಂತಿಲ್ಲೆ ಭಾಷೆ ವ್ಯಾಕರಣ

            ಮಾವ ಹೇಳಿದ ಹಾಂಗೆ (೫+೫+೫+೫) ಬರವಲೆ ಹೆರಟೆ. ಇದರ ಸೌಂದರ್ಯ,ಭಾವ ಎಲ್ಲ ಒಳಿಶಿಗೊಂಡು (೫+೫+೫+೫) ಮಾಡುಲೆ ಗೊಂತಾಯಿದಿಲ್ಲೇ… ಸುಮ್ಮನೆ ಹಾಂಗೆ ಇಲ್ಲಿ ಹಾಕಿದೆ…

  4. ಬೈಲಿಂಗೆ ಬಂದ ಶರಶೇಪು ಬಂಧ ಚೆಂದ ಆಯಿದು ಶೇಡಿಗುಮ್ಮೆ ಪುಳ್ಳಿ ಬಾಣ ಬಿಟ್ಟದು ಸರೀ ನಾಟಿದ್ದು. ಪದ್ಯ ಒಳ್ಳೆ ಓದುಸೆಂಡು ಹೋವುತ್ತು.

  5. ಲಾಯ್ಕ ಆಯಿದು.

  6. ಶರ ಶಟ್ಪದಿಲಿ ಕವನ ಲಾಯಿಕ ಆಯಿದು

  7. ಆನುದೆ ಶರ ಬೋಪು ಬಂಧ ಬರೆತ್ತೆ….

    ಪುಚ್ಹಗೆ ಮನುಗುಲೆ
    ಬೆಚ್ಹಗೆ ಹಾಸಿಗೆ
    ಹೆಚ್ಹಿಗೆ ಎಂತಕೆ ಬೇಕಂತೇ
    ಉಚ್ಚೊಯಿದರೆ ಅದು
    ಲಚ್ಚಿಗೆ ಕೆಲಸವು
    ಹೆಚ್ಚಿಗೆ ಆದರೆ ಪರೆಂಚುಗೂ

    ಉಹ್ಹಾಹ್ಹಾ…..

    1. [ಹೆಚ್ಚಿಗೆ ಆದರೆ ಪರೆಂಚುಗೂ]

      ಭಾರೀ ಲಾಯ್ಕ ಇದ್ದು ನಿಂಗೊ ಬರದ್ದದೂ. ಕಾಯಂ ಬರಕ್ಕೊಂಡಿರಿ.

      1. ಹೇಂಗೆ? ಟೇಬ್ಲೆಟ್ಟುಗೋ ಎಲ್ಲಾ ಇರೆಕ್ಕಾದಲ್ಲೇ ಇದ್ದೋ? ಅಲ್ಲ ಪುಚ್ಹೆ ತಿಂದಿದೋ…?

        1. ಹ..ಹ್ಹಾ.
          ಗುಳಿಗೆ ಪ್ರಮಾಣ ಸರೀ ಇದ್ದು ಭಾವ. ಒಟ್ಟಾರೆ ಪುಚ್ಚೆ ಉಚ್ಚು ಹೊಯ್ಯದ್ದರೆ ಸಾಕು..

          1. ಲಚ್ಹಿ ಪರೆಂಚುಗು…. ಓಹ್ಹಹ್ಹಹ್ಹಾ…

          2. ಬೋದಾಳನ ಬೋಪು “ಬಾಣ” ಪಷ್ಟಾಯಿದು. ಗುಳಿಗ್ಗ , ಟೇಬ್ಲೆಟ್ಟು ಎಲ್ಲ ಹೆದರಿ ಅಲ್ಲಲ್ಲಿ ಕೂಯಿದು, ಅಪ್ಪೋ..? ಹೂ.ಹ..ಹ್ಹ..ಹ್ಹಾ..

  8. ಎನಗೆಂತದೂ ಗೊಂತಾಯಿದಿಲ್ಲೆ… ಎಂತರ ಶರ? ಎಂತರ ಶೇಪು? ಎಂತರ ಬಂಧ? ಎಂತರ ಆರು ಕಾಲಿಂದು? ರಜ್ಜಾ ಮನುಶ್ಯರಿಂಗೆ ಅರ್ಥ ಅಪ್ಪಾಂಗಿಪ್ಪದರ ಹೇಳ್ಲಾಗದಾ ಈ ಅಣ್ಣಂದ್ರಿಂಗೆ?

    ಆ ಸುರೂವಾಣ ಅಪ್ಪ ಮಾಂತ್ರ ಗೊಂತಾತು… ಮತ್ತೆಂತದೂ ಅರಡಿಯ…. ಃ-(

    1. ಆಗಲಿ . ಬೋದಾಳಂಗೂ ತಿಂಬಲಿಪ್ಪದು ಮದಾಲು ಗೊಂತಾವ್ತು ಹೇಳ್ವದರ ಸಾಬೀತು ಮಾಡಿದಿ ಬೋ.. ಬಾವ.

      1. ಅಪ್ಪ ಅಮ್ಮನ ಅರಡಿಯದ್ದ ಮಕ್ಕೊ ಇಕ್ಕ ಈ ಪ್ರಪಂಚಲ್ಲಿ…? ಎನ್ನ ಎಂತ ಅಷ್ಟೂ ಅರಡಿಯದ್ದ ಬೋದಾಳ ಹೇಳಿ ಗ್ರೇಶಿದಿರೋ????
        ಎಂಥ?

        1. ಎಂಗೊ ಎಂತಕಿನ್ನು ಅದರ ಪ್ರತ್ಯೇಕ ಹೇಳೆಕು? ಬೋದಾಳ ಹೇಳಿಗೊಂಡು ಒಳ ಬಂದು ಕೂದ್ದಾರು ?!

  9. ತು೦ಬಾ ಲಾಯಿಕಿದ್ದು. ಮನೆಲಿಪ್ಪ ಸಣ್ಣ ಮಕ್ಕೊಗೆ ಕಲಿಶಿದರೆ ಕೊಶಿಲಿ ಹೇಳುಗು.

  10. ಶೇಪು ಭಾವನ ಈ ಸರ್ತಿಯಾಣ “ಶರ” ಸರೀ ಬಯಿಂದು.
    ಬೈಲಿಲಿ ಒಬ್ಬೊಂಬ್ಬಂಗೆ ಒಂದೊಂದು “೬ ಕಾಲಿಂದು” ಒಲುದ್ದದು ಕೊಶಿಯ ವಿಷಯ.

  11. ಪದ್ಯ ಭಾರೀ ಲಾಯ್ಕ ಆಯಿದು. ತುಪ್ಪ ಹಾಕಿದ ಗರಿಗರಿ ಅಪ್ಪ ದ ಸುದ್ದಿ ಹೇಳುಗ ಎದಾ ಇಲ್ಲಿ ಬಾಯಿಲಿ ನೀರು ಬಪ್ಪಲೆ ಸುರುವಾತಿದಾ…

    ಕೊದಿಗೆ ಮಂತರ್ಸುದು ಒಳ್ಳೆದು ಇಲ್ಲದ್ದರೆ ಹೊಟ್ಟೆ ಬೇನೆ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×