ಬೆಂಗಳೂರಿಂದ ಕೊಡೆಯಾಲಕ್ಕೆ ಚುಕ್ ಬುಕ್ ರೈಲ್ ಪ್ರಯಾಣ..

March 5, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶರ್ಮಪ್ಪಚ್ಚಿಯ ಬಗ್ಗೆ ಎರಡು ಮಾತು ಹೇಳಲೇಬೇಕು!
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ!
ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.

ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.

ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಈ ಸರ್ತಿ ಶುದ್ದಿಯನ್ನುದೇ ಹೇಳಿ ಕಳುಸಿ, ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.

ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
~
ಒಪ್ಪಣ್ಣ

ಬೆಂಗಳೂರು ಮಂಗಳೂರು ಹಗಲು ರೈಲ್ ಸುರು ಆದಪ್ಪಗ ಒಂದು ಆಲೋಚನೆ ಬಂದದು, ಎಂತ ಹೇಳಿದರೆ -ಮ್ಒಂದು ಸರ್ತಿ ಅದರಲ್ಲಿ ಪ್ರಯಾಣ ಮಾಡೆಕ್ಕು- ಹೇಳಿ.
ಕಾರಣ ಕೇಳಿದರೆ ಸುಮಾರು ಇದ್ದು. ಶಿರಾಡಿ ಘಾಟ್ ಯಾವಾಗ ಹಾಳು ಅಗಿ ರಾಡಿ ಆತೋ ಅಂಬಗಂದ ಅದರಲ್ಲಿ ಪ್ರಯಾಣ ಮಾಡುವದು ಹೇಳಿದರೆ ಒಂದು ಸಂಕಟವೇ ಸರಿ.
ಕಡಂಜ ತ್ಯಾಂಪಣ್ಣ ಭಂಡಾರಿಯ ನೋವಿನ ಎಣ್ಣೆ ಹಿಡುಕ್ಕೊಂಡೇ ಹೆರಡೆಕ್ಕಷ್ಟೆ. ಹಾಂಗೆ ಹೇಳಿಗೊಂಡು ಮಗಳು ಬೆಂಗಳೂರಿಲ್ಲಿ ಇಪ್ಪಗ ಹೋಗದ್ದೆ ಇಪ್ಪಲೆ ಆವುತ್ತಾ!
ಮಕ್ಕಳ ಕಂಡುಗೊಂಡು ಇಲ್ಲದ್ದರೆ ಅಸಕ್ಕ ಅಪ್ಪದು ಇದ್ದಲ್ಲದ, ಫ಼ೋನಿಲ್ಲಿ ಮಾತಾಡಿದರೆ ಕಂಡು ಮಾತಾಡಿದ ಹಾಂಗೆ ಆವುತ್ತಿಲ್ಲೆ ಇದ.
ಇನ್ನೊಂದು ಎಂತ ಹೇಳಿದರೆ, ಮಂಗಳೂರಿನ ಹವ್ಯಕ ಬಂಧುಗಳ ಒಟ್ಟಿಂಗೆ ಒಂದು ಸರ್ತಿ ಎಡಕುಮೇರಿಗೆ ಇದೇ ಮಾರ್ಗಲ್ಲಿ ರೈಲಿಲ್ಲಿ ಹೋಗಿ ಬಂದ ಅನುಭವ ನೆನಪಿಲ್ಲಿ ಇತ್ತಿದ್ದು.
ಹಾಂಗೆ ದಂಪತಿ ಸಮೇತ ರೈಲಿಲ್ಲಿ ಹೋಪದು ಹೇಳಿ ನಿಶ್ಚಯ ಮಾಡಿದೆಯೊ. ಹೋಪಲೆ ಟಿಕೆಟ್ ಸಿಕ್ಕದ್ದೆ ಬಸ್‌ಲ್ಲಿ ಹೋಗಿ ಮೈ ಕೈ ಎಲ್ಲಾ ಬೇನೆ ಮಾಡಿಗೊಂಡು ಹಾಂಗೂ ಹೀಂಗೂ ಎತ್ತಿತ್ತು.
ಬಪ್ಪಲೆ ಟಿಕೆಟ್ ಸಿಕ್ಕಿದ ಕಾರಣ ಕಡಂಜದ ಎಣ್ಣೆಯ ಅಲ್ಲಿಯೇ ಬಿಟ್ಟಿಕ್ಕಿ ಬಂದೆಯೊ (ಇನ್ನೊಂದು ಸರ್ತಿ ಬಸ್‌ಲ್ಲಿ ಹೋದಪ್ಪಗ ಬೇಕಕ್ಕು. ಅಲ್ಲಿಯೇ ಇರಲಿ ಹೇಳಿ ಹೆಂಡತಿಯ ಅಭಿಪ್ರಾಯ).

ರೈಲಿಲ್ಲಿ ಹೋಪದು ಮೊದಲಾಣ ಸರ್ತಿ ಅಲ್ಲದ್ದರೂ ಈ ಟ್ರಿಪ್ ಮಾತ್ರ ಮೊದಲಾಣದ್ದು- ಹಾಂಗೆ ಒಂದು ಖುಶಿ.
ಸಮಯಕ್ಕೆ ಮೊದಲೇ ನಿಲ್ದಾಣಕ್ಕೆ ತಂದು ಬಿಟ್ಟದು ಅಳಿಯನೇ. ಸೀಟ್ ಮೊದಲೇ ಬುಕ್ ಆದ ಕಾರಣ ಅಲ್ಲಿಯೇ ಹೋಗಿ ಕೂರದ್ದೆ ನಿವ್ರುತ್ತಿ ಇಲ್ಲೆ ಅನ್ನೆ.
‘ನಾವು ಈಗ ಎಡ ಹೊಡೆಲಿ ಕೂದರೇ ಲಾಯಿಕ್ಕಿನ ಪ್ರಕೃತಿ ಸೌಂದರ್ಯ ನೋಡಲೆ ಸಿಕ್ಕುವದು’ ಹೇಳಿ ಮಗಳು ಸ್ವಂತ ಅನುಭವ ಕೊಟ್ಟತ್ತು.
‘ಈಗ ಬಲಕ್ಕೆ ಕೂದರೆ ಮತ್ತೆ ಎಡತ್ತು ಆವುತ್ತು’ ಹೇಳಿ ಮಗಳು ಹೇಳುವಾಗ ಇದು ಎಂತ ನಿನ್ನ ಹೊಸ ಸಂಶೋಧನೆ ಹೇಳಿ ಕೇಳಿದ್ದಕ್ಕೆ, ‘ನಿಂಗೊಗೆ ಮತ್ತೆ ಗೊಂತಕ್ಕು’ ಹೇಳಿ ಒಂದು ನೆಗೆ ಮಾಡಿತ್ತು, ಗುಟ್ಟು ಬಿಟ್ಟು ಕೊಟ್ಟಿದಿಲ್ಲೆ.
(ಎಡ-ಬಲ ಹೇಳುವದು ಕೇರಳದವಕ್ಕೆ ಹೆಚ್ಚು ಗೊಂತಿಕ್ಕು. ಎಂಗೊ ಸಣ್ಣ ಇಪ್ಪಗ ಇಲೆಕ್ಷನ್ ಟೈಮಿಲ್ಲಿ ಒಂದು ಸ್ಲೋಗನ್ ಎಡ ಬಲ ಪಣ್ಪೇರು, ದಡ ಬಡ ಮಾಲ್ಪೇರು ಹೇಳಿ.)
ಹೆಚ್ಚು ಒತ್ತಾಯ ಮಾಡಿ ಕೇಳಲೆ ಕೆಲವು ಸರ್ತಿ ಸ್ವಾಭಿಮಾನ ಬಿಡುತ್ತಿಲ್ಲೆ ಅಲ್ಲದ?

ಚುಕ್ ಬುಕ್ ಹೊರಟತ್ತು. ಕಾದು ಕೂದಪ್ಪಗ ಹೊತ್ತು ಹೋವುತ್ತಿಲ್ಲೆ. ಸಮಯಕ್ಕೆ ಸರಿಯಾಗಿ ಹೊರಟತ್ತಲ್ಲದ ಹೇಳಿ ಒಂದು ಸಂತೋಷ. ಒಂದು ಸೈಡ್ ಸೀಟಿಲ್ಲಿ ಹೋಗಿ ಕೂದೆ.
ತುಮಕೂರಿಂಗೆ ಎತ್ತಿ ಅಪ್ಪಗ ಅದು ಎಲ್ಲಿಂದ ಜನ ಬಂದು ಸೇರಿದವು ಹೇಳಿ ಗೊಂತಿಲ್ಲೆ. ಸೀಟ್‌ಗೊ ಎಲ್ಲ ಭರ್ತಿ ಆತು.
ಒಂದು ಜವ್ವನಿಗರ ಸೆಟ್ (ಪುಳ್ಳರುಗೊ ಹೇಳುವಷ್ಟು ಸಣ್ಣವು ಅಲ್ಲ. ಕಾಲೇಜಿಂಗೆ ಹೋಪ ಮಕ್ಕೊ ಹೇಳಿ ಮತ್ತೆ ಅವರ ಭಾಷೆ ಕೇಳಿ ಅಪ್ಪಗ ಗೊಂತಾತು) ಎಂಗಳ ಭೋಗಿಗೆ ಹತ್ತಿ ಆನು ಕೂದ ಸೀಟಿಂಗೆ ಹಕ್ಕು ಚಲಾಯಿಸಿದವು.
(ಆನು ಕೂದ್ದು ಅವರ ಸೀಟಿಲ್ಲಿ ಹೇಳುವದು ಎನಗೆ ಗೊಂತಿದ್ದು). ಸರಿ ಸೈಡ್ ಸೀಟ್ ಬಿಟ್ಟು ಕೊಡುವಗ ಸಂಕಟ ಅಪ್ಪದು ಇದ್ದಲ್ಲದ –  ಸಾಲದ್ದಕ್ಕೆ ಇನ್ನು ಪ್ರಕೃತಿ ಸೌಂದರ್ಯ ನೋಡಿ ಅನುಭವಿಸುವದು ಹೇಂಗೆ ಹೇಳಿ ಕೂಡ ಆತು.
ಪದ್ಯಂಗೊ ಹರಟೆಗೊ ಎಲ್ಲ ಸುರು ಮಾಡಿದವು. ಇವರ ಗಲಾಟೆಲಿ ಎನಗೆ ಎನ್ನ ಮೊಬೈಲಿಲ್ಲಿ ಪದ್ಯ ಕೇಳಲೆ ಎಡಿತ್ತಿಲ್ಲೆ ಹೇಳಿ ಮಗಳ ಕಂಪ್ಲೈಂಟ್. ತೊಂದರೆ ಇಲ್ಲೆ – ಪೈಸ ಕೊಡದ್ದೆ ಅವು ಮನರಂಜನೆ ಕೊಡುತ್ತವಲ್ಲದ ಹೇಳಿ ಸಮಾಧಾನ ಮಾಡಿದೆ.
ಹತ್ತು ಹನ್ನೆರಡು ಭೋಗಿಗೊ ಇಪ್ಪ ಈ ರೈಲಿಲ್ಲಿ ತಲೇಂದ ತಲೇ ವರೆಗೆ ಓಡಾಡಲೆ ಆವುತ್ತು. ಒಂದಕ್ಕೊಂದು ಕನ್ನೆಕ್ಷನ್ ಇದ್ದು.
(ಇಷ್ಟೊಂದು ಲೋಡಿನ ಎಳಾಕ್ಕೊಂದು ಹೋಯೆಕ್ಕಾದರೆ ಎಂಜಿನಿಂಗೆ ಶಕ್ತಿ ಎಷ್ಟು ಬೇಕಲ್ಲದ? ಎಮ್.ಆರ್.ಪಿ.ಎಲ್ ನ ಡೀಸೆಲಿಂಗೆ ಇಷ್ಟು ಪವರ್ ಇದ್ದು ಅಲ್ಲದ?)

ಒಂದೊಂದಾಗಿ ಮಾರಾಟ ಮಾಡುವವು – ಇಡ್ಲಿ, ವಡೆ, ಅಂಬೊಡೆ, ಕಾಫ಼ಿ, ಚಾ, ಮತ್ತೆ ಪುಸ್ತಕಂಗೊ ಇತ್ಯಾದಿ – ರಾಗ ಎಳಕ್ಕೊಂಡು ಬಪ್ಪಲೆ ಸುರು ಮಾಡಿದವು.
ಅವರವರ ಸಾಧನಂಗಳ ಮಾರುವ ಗೌಜಿ ಅವಕ್ಕವಕ್ಕೆ. ಎಲ್ಲ ಒಟ್ಟಿಂಗೆ ಒಂದು ಜುಗಲ್ ಬಂದಿ ಹಾಂಗೆ.
ಚರುಮುರಿ ಮಾಡಿ ಕೊಡುವವರದ್ದು ಒಂದು ಸ್ಟೈಲ್ – ಒಂದು ಸಣ್ಣ ಸ್ಟೀಲ್‌ನ ಅಳಗೆ. ಅದಕ್ಕೆ ಒಂದು ಪಾವು ಚರುಮುರಿ. ಮತ್ತೆ ಕಟ್ ಮಾಡಿ ತಂದ ತರಕಾರಿಗಳ ಚೂರುಗೊ.
ಎಣ್ಣೆ ಎರದ್ದು ಎಲ್ಲರಿಂಗೂ ಗೊಂತಾಯೆಕ್ಕು ಹೇಳಿ ಚಮಚಲ್ಲಿ ತೆಗದು ಎತ್ತರಂದ ಪಾತ್ರಕ್ಕೆ ಬಿಡುವದು ಇದ್ದಲ್ಲದ, ಅದು ನೋಡಿದರೇ ಗೊಂತಕ್ಕಷ್ಟೇ.
ಮತ್ತೆ ಸೌಟಿಲ್ಲಿ ಟಕ ಟಕನೆ ಪಾತ್ರೆಯ ಒಳಾಂಗೆ ಬಡಿದು ಮಿಕ್ಸ್ ಮಾಡಿ, ಅದರ ಕಾಗದದ ಕೋನಿಂಗೆ ಹಾಕುವ ಸ್ಟೈಲೇ..ಅಬ್ಬಬ್ಬಾ…!
ಸಂಗೀತ ಕಛೇರಿಲಿ ಘಟವ ಎತ್ತರಕ್ಕೆ ಹಾರಿಸಿ ಬಡಿವದು ನೋಡಿಪ್ಪಿ – ಹಾಂಗೆ ಸ್ಟೀಲ್ ಪಾತ್ರೆಯ ಹಾರಿಸಿ ಅದರ ಬೀಳದ್ದ ಹಾಂಗೆ ಕೈಲಿ ಹಿಡುದು ಸಮಲಿಸುವ ಕಲೆ, ನೋಡಿ ಕಲಿಯೆಕ್ಕು…!
ಇಷ್ಟೆಲ್ಲಾ ನೋಡಿ ಅಪ್ಪಗ ರುಚಿ ನೋಡದ್ದರೆ ಹೇಂಗೆ?
(ಎಂತ ಆದರೂ ಎಂಗಳ ಸುರತ್ಕಲ್ ಶೆಣೈ ಮಾಮನ ಚರುಮುರಿ ರುಚಿಗೆ ಯಾವುದೂ ಬಾರ ಹೇಳುವದು ಎಂಗಳ ಎಲ್ಲರ ಅಭಿಪ್ರಾಯ)

ಅರಸೀಕೆರೆಂದ ರೈಲ್ ಹೆರಟತ್ತು.
ಹಿಂದೆ ಹಿಂದೆ ಹೋವುತ್ತ ಇದ್ದ ರೈಲು ಮುಂದೆ ಮುಂದೆ ಹೋಪಲೆ ಸುರು ಆತು. ಅರೆ ಇದೆಂತ ವಿಚಿತ್ರ?
‘ಪುನಹ ಬೆಂಗಳೂರಿಂಗೆ ಹೋವುತ್ತಾ’ ಹೇಳಿದೆ ಮಗಳ ಹತ್ರ. ಅಂಬಗ ಅದಕ್ಕೆ ಒಂದು ಖುಷಿ ಆಗಿ ಓರೆ ನೆಗೆ ಮಾಡಿತ್ತು. ‘ಆನು ಆಗ ಹೇಳಿದ್ದು ಈಗ ಗೊಂತಾತಲ್ಲದ? ಬಲ ಎಡ ಆತಲ್ಲದ?’
ಸರಿ ಎಂತಾದರೂ ಮಂಗಳೂರಿಂಗೆ ಹೋಪದಲ್ಲದ ಹೇಳಿ ಧೈರ್ಯ.

ಸಕಲೇಶಪುರ ಕಳುದ ನಂತರವೆ ಒಳ್ಳೊಳ್ಳೆ ಸೀನರಿಗೊ.
ಮೊದಲೇ ಹೇಳಿದ ಮಕ್ಕಳ ಟೀಮ್ ಕೂದಲ್ಲಿ ಕೂಪವು ಅಲ್ಲ.
ರೈಲ್ ಇಡೀ ಓಡಾಡಿಗೊಂಡು ಇತ್ತಿದ್ದವು. ಅವಕ್ಕೆ ಬಾಗಿಲಿಲಿ ನಿಂಬದು ಒಳ್ಳೆದು ಹೇಳಿ ಆಯಿದು. ಹಾಂಗೆ ಗುಂಪು ಗುಂಪಾಗಿ ನಿಂದುಗೊಂಡು ಬೊಬ್ಬೆ ಹೊಡಕ್ಕೊಂಡು ಎಲ್ಲ ಇತಿದ್ದವು.
ಇದುವೇ ಚಾನ್ಸ್ ಹೇಳಿ ಕಿಟಿಕಿ ಹತ್ರಾಣಾ ಸೈಡ್ ಸೀಟ್ ಹಿಡ್ಕೊಂಡೆ.
ಒಂದೊಂದೇ ಸುರಂಗಂಗೊ ಬಪ್ಪಲೆ ಸುರು ಆತು. ಮಕ್ಕೊಗೆ ಖುಶಿಯೋ ಖುಶಿ. ಸೀಟಿ ಹೊಡವದು, ಬೊಬ್ಬೆ ಹಾಕುವದು, ಒಬ್ಬನ ಇನ್ನೊಬ್ಬ ದೆನುಗೊಳುವದು‌ಒ॒ಟ್ಟಾರೆ ಗೌಜಿಯೋ ಗೌಜಿ..!
ಪ್ರತಿ ಸುರಂಗ ಬಪ್ಪಗಲೂ ಹೀಂಗೆ. ಆನು ಸುರಂಗ ಎಸ್ಟು ಇದ್ದು ಹೇಳಿ ಲೆಕ್ಕ ಹಾಕಲೆ ಸುರು ಮಾಡಿದೆ. ಒಂದು ೪೦ ಸುರಂಗ ಅಪ್ಪಗ ಗಲಾಟೆ ಕೇಳುವದು ಕಮ್ಮಿ ಆತು.
ಬಹುಶ: ಅವಕ್ಕೆ ಎಷ್ಟು ಸುರಂಗೊ ಇದ್ದು ಹೇಳಿ ಮೊದಲೇ ಗೊಂತಿತ್ತಿದ್ದಿಲ್ಲೆ. ಬೊಬ್ಬೆ ಹೊಡದು ಹೊಡದು ಸಾಕಾಯಿದಾಯಿಕ್ಕು.
ಸ್ವರ ಕಮ್ಮಿ ಕಮ್ಮಿ ಆಗಿಗೊಂಡು ಬಂತು. ಎನ್ನ ಲೆಕ್ಕ ೫೦ ಕ್ಕೆ ಎತ್ತಿ ಅಪ್ಪಗೆ ಒಬ್ಬೊಬ್ಬ ಒಂದೊಂದು ಸೀಟಿಲ್ಲಿ ಕೂದೊಂಡು ಒರಗಲೆ ಸುರು ಮಾಡಿದವು.
ಘಟ್ಟದ ಮೇಗಾಣವಕ್ಕೆ ವರುಷಕ್ಕೊಂದು ಸರ್ತಿ ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಭೇಟಿ ಕೊಡದ್ದರೆ ಆವುತ್ತಿಲ್ಲೆ.
ಸುಬ್ರಹ್ಮಣ್ಯಕ್ಕೆ ಎತ್ತಿ ಅಪ್ಪಗ ಎಲ್ಲಾ ಇಳುದು ಹೋದವು. ಅವು ಎಷ್ಟು ಬಚಿದ್ದವು ಹೇಳಿ ಅವು ಇಳಿವದು ನೋಡುವಾಗ ಆರಿಂಗಾದರೂ ಗೊಂತಕ್ಕು. ಹಾಂಗಿತ್ತಿದ್ದವು.

ಇದರ ಎಲ್ಲದರ ಎಡೆಲಿ ಸಮಯ ಕಳದ್ದೇ ಗೊಂತಾಯಿದಿಲ್ಲೆ. ಬೆಟ್ಟ ಗುಡ್ಡ, ಸುರಂಗ, ಕಣಿವೆಗಳ ನೋಡಿಗೊಂಡು, ಚಲಿಸಿಗೊಂಡು ಇಪ್ಪ ರೈಲಿಂದಲೇ ಕೆಲವು ಪಟಂಗಳ ತೆಗದೆ.
ನೋಡಿಯೇ ಅನುಭವಿಸೆಕ್ಕಾದ ಪ್ರಕೃತಿ ಸೌಂದರ್ಯ. ೭೦ ಮೀಟರ್ ಎತ್ತರದ ಸಂಕದ ಮೇಲೆ ಎರಡು ಹಳಿಗಳ ಮೇಲೆ ರೈಲ್ ಹೋಪದು, ಗುಡ್ಡೆಯ ಕೊರದು ಸುರಂಗ ಮಾಡಿ ಅದರ ಒಳ ಹೋಪದು, ಎಲ್ಲ ಎಂಜಿನಿಯರಿಂಗ್ ಕೌಶಲ್ಯವೇ ಸರಿ.
ಈ ಮಾರ್ಗ ಆಯೆಕ್ಕಾದರೆ ಎಷ್ಟು ಎಂಜಿನಿಯರ್‌ಗಳ ಮತ್ತೆ ಜನಂಗಳ ಅವಿರತ ಪರಿಶ್ರಮ ಇಕ್ಕು ಹೇಳಿ ಮನಸ್ಸಿಲ್ಲಿ ಆತು. ಅವಕ್ಕೆ ಎಲ್ಲರಿಂಗೂ ನಮ್ಮ ಕೃತಜ್ನತೆ ಸಲ್ಲಿಸೆಕ್ಕಾದ್ದು ನಮ್ಮೆಲ್ಲರ ಕರ್ತವ್ಯ.
ಮಂಗಳೂರಿಂಗೆ ಎತ್ತುವಾಗ ಸೂರ್ಯ ಸಮುದ್ರಲ್ಲಿ ಮೀವಲೆ ಹೋಗಿ, ಆಕಾಶ ನೋಡಲೆ ಇನ್ನೂ ಚಂದ ಕಂಡುಗೊಂಡು ಇತ್ತಿದ್ದು.
ಒಟ್ಟಲ್ಲಿ ಒಂದು ಒಳ್ಳೆ ಅನುಭವ..

ಇನ್ನಾಣ ಸರ್ತಿ ಹೋಪಗ ನಿಂಗಳೂ ಪುರುಸೊತ್ತು ಮಾಡಿ..
ಒಟ್ಟಿಂಗೆ ಹೋಪ, ಆಗದಾ?

ಬೆಂಗಳೂರಿಂದ ಕೊಡೆಯಾಲಕ್ಕೆ ಚುಕ್ ಬುಕ್ ರೈಲ್ ಪ್ರಯಾಣ.., 4.6 out of 10 based on 8 ratings
ಶುದ್ದಿಶಬ್ದಂಗೊ (tags): , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. thejaswi

  Lekhana, photonga… eraDoo laika ithu…

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ. ನಿಂಗಳ ಎಲ್ಲರ ಈ ಪ್ರೋತ್ಸಾಹ ಇನ್ನೂ ಕೂಡಾ ಹೀಂಗೇ ಮುಂದುವರಿಯಲಿ ಹೇಳಿ ಎನ್ನ ಆಶಯ.

  [Reply]

  pattaje shivarama bhat Reply:

  ಆದರೆ hagalaana ರೈಲಿಲ್ಲಿ sleeper ಇಲ್ಲದ್ದ ಕರಣ manugulu ಜಾಗೆ ಇಲ್ಲದ್ದೆ ಕೂದು ಕೂದು bodittu

  [Reply]

  VA:F [1.9.22_1171]
  Rating: 0 (from 0 votes)
 3. Sri Krishana Sharma’s article on Train is noteworthy,when reading this it takes us in getting happy and inspiration mood, KUDOS to Mr.Sharma for his vibrant ideas in preparing such articles especially to us i.e. HAVYAKA, before concluding this comment i have find find humanity,kindness and friendly attitude with SriKrishna Sharma Halemane since contact with him.

  KODAKKAL SHIVAPRASAD
  http://www.kodakkalshivaprasad.blogspot.com

  [Reply]

  VA:F [1.9.22_1171]
  Rating: 0 (from 0 votes)
 4. ರಮೇಶ ಶೇಡಿಗುಮ್ಮೆ

  Timely news. Shows interest.
  GOOD WRITING
  CONTINUE IT.
  JOURNEY IS BORING ALWAYS BUT HERE, JOURNEY INCLUDES SIGHT SEEING WHICH CAN BE SEEN IN THE ARTICLE

  ALSO THE ARTICLE INCLUDES ENJOYMENT & TIMEPASS

  RAMESHWARA BHAT. S
  SHEDIGUMME HOUSE
  KUMBLA. P.O.
  KASARAGOD

  [Reply]

  VA:F [1.9.22_1171]
  Rating: -1 (from 1 vote)
 5. ಡಾ ಪಿ ಕೆ ಭಟ್ಟ

  ಹವಿಗನ್ನಡಲ್ಲಿ ಬರದ ಲೇಖನ ಸೂಪರ್.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ವೆಂಕಟ್ ಕೋಟೂರುವೇಣೂರಣ್ಣಅನಿತಾ ನರೇಶ್, ಮಂಚಿದೇವಸ್ಯ ಮಾಣಿಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣನೆಗೆಗಾರ°ಸರ್ಪಮಲೆ ಮಾವ°ಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುಪುಣಚ ಡಾಕ್ಟ್ರುಶುದ್ದಿಕ್ಕಾರ°ಸುಭಗಅಡ್ಕತ್ತಿಮಾರುಮಾವ°ಮಂಗ್ಳೂರ ಮಾಣಿಪುಟ್ಟಬಾವ°ಕಜೆವಸಂತ°ಬಟ್ಟಮಾವ°ಕೊಳಚ್ಚಿಪ್ಪು ಬಾವಪಟಿಕಲ್ಲಪ್ಪಚ್ಚಿಬಂಡಾಡಿ ಅಜ್ಜಿಶಾಂತತ್ತೆಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ