e-ವೇಸ್ಟ್ – ನಮ್ಮೆಲ್ಲರ ಕೊಡುಗೆ ಎಷ್ಟೆಷ್ಟು?

December 24, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉಪವಾಸ ಹೇಳಿರೆ, ಮನಸ್ಸಿನ ಸಂಪೂರ್ಣವಾಗಿ  ದೇವರಲ್ಲಿ ಮಡುಗಿ ಅವನದ್ದೇ ಧ್ಯಾನಲ್ಲಿ ಇಡೀ ದಿನ ಇಪ್ಪದು, ಹಶು ಆಸರು ಎಲ್ಲವೂ ನಗಣ್ಯ ಅಲ್ಲಿ.
ಬೇರೆ ಯಾವದೇ ಯೋಚನೆಗೊ ತಲೆಲಿ ಸುಳಿವಲೆ ಆಗ ಹೇಳ್ತ ಅರ್ಥ ಇದ್ದು.

ನಿಂಗೊ ಒಂದು ದಿನದ ಉಪವಾಸ ಮಾಡೆಕ್ಕು. ಹೇಂಗೆ ಹೇಳಿರೆ ಆ ದಿನ ಮೊಬೈಲ್, ಇಂಟರ್ನೆಟ್, ಟೀವಿ, ಕಂಪ್ಯೂಟರ್ ಯಾವುದನ್ನೂ ಉಪಯೋಗುಸಲೆ ಆಗ -ಹೇಳ್ತ ಅರ್ಥಲ್ಲಿ ಮೊನ್ನೆ ಒಂದು ಸಂಕ್ಷಿಪ್ತ ಮೊಬೈಲ್ ಸಂದೇಶ (ಬೈಲಿನ ಭಾಷೆಲಿ ಹೇಳುತ್ತರೆ-ಸಮೋಸ) ಬಂತು.

ನಾವೀಗ ಹೀಂಗಿಪ್ಪ ಇಲೆಕ್ಟ್ರೋನಿಕ್ಸ್ ಮಾಧ್ಯಮಕ್ಕೆ ಎಷ್ಟೊಂದು ಹೊಂದಿಗೊಂಡಿದು ಹೇಳಿರೆ, ನವಗೆ ಅದು ಇಲ್ಲದ್ದೆ ಒಂದು ದಿನ ಹೋಗಲಿ, ಒಂದು ಹೊತ್ತು ಕೂಡ ಇಪ್ಪಲೆ ಸಾಧ್ಯ ಇಲ್ಲೆ ಹೇಳ್ತ ಪರಿಸ್ಥಿತಿ.
ಒಂದು ಸಮೋಸ ಕಳ್ಸಿದ್ದಕ್ಕೆ ಅಂಬಗಳೇ ಉತ್ತರ ಸಿಕ್ಕದ್ದರೆ, ಒಂದು ಕಾಲ್ ಮಾಡಿರೆ ಆಚ ಹೊಡೆಯಾಣವನ ಉತ್ತರ ಇಲ್ಲದ್ರೆ, ಕಾದು ಕೂಬ ವ್ಯೆವಧಾನ ನವಗೆ ಇರ್ತಿಲ್ಲೆ.
ಇನ್ನು ಕಾಲೇಜ್ ಮಕ್ಕಳ ಕೈಲಿ ಮೊಬೈಲ್ ಇದ್ದರಂತೂ ಕೇಳುವದೇ ಬೇಡ. ಯಾವುದರ ಗೊಡವೆಯೂ ಇಲ್ಲದ್ದೇ ಕೈ ಬೆರಳು ಅಲ್ಲಿ ಆಡಿಂಡು ಇಕ್ಕು, ಇಲ್ಲದ್ದರೆ ಅದರಿಂದ ಎರಡು ವೈರ್ ಕೆಮಿಗೆ ಸಿಕ್ಕಿಸಿ ಪದ್ಯ ಕೇಳಿಂಡು ಇಕ್ಕು.
ಬಹುಶಃ ಯಾವ ದೇವರಲ್ಲಿಯೂ ನಾವು ಇಷ್ಟೊಂದು ಮನಸ್ಸು ಮಡುಗಿ ದ್ಯಾನ ಖಂಡಿತಾ ಮಾಡ. ಹಾಂಗಾಗಿ ಹೀಂಗಿಪ್ಪ ಸಾಧನಂಗೊ  ಇದ್ದರೇ ಉಪವಾಸವೇ ಹೊರತು ಇಲ್ಲದ್ದರೆ ಅಲ್ಲ ಹೇಳಿ ಕಂಡತ್ತು.
ಇನ್ನೊಂದು ಅರ್ಥಲ್ಲಿ, ಇದರೆಲ್ಲಾ ಬಿಟ್ಟೊಂಡು ಕೂರೆಕ್ಕಾರೆ ಏಕಾದಶಿ ಉಪವಾಸ ಮಾಡ್ತಕ್ಕಿಂತಲೂ ಬಂಙ ಹೇಳಿ ಕಾಂಗು.
ಒಂದು ಕಾಲಲ್ಲಿ ಮೊಬೈಲ್ ಎಲ್ಲಿದ್ದರೂ ಮಾತಾಡ್ಲೆ ಅನುಕೂಲ ಆವ್ತು ಹೇಳಿ ಇದ್ದರೆ, ಇಂದು ಅದರಲ್ಲಿ ಮಾತಾಡ್ಲೆ ಕೂಡಾ ಎಡಿತ್ತು ಹೇಳ್ತಲ್ಲಿಂಗೆ ಬಯಿಂದು.
ತಯಾರು ಮಾಡುವ ಕಂಪೆನಿಯವು ಗಂಟೆಗೊಂದು ಹೇಳ್ತ ಹಾಂಗೆ ಮೋಡೆಲ್ಗಳ ಬಿಡುಗಡೆ ಮಾಡ್ತಾ ಇರ್ತವು.
ಹೊಸ ಹೊಸ ಅನುಕೂಲಂಗಳ ಒದಗಿಸಿ ಕೊಡ್ತವು.

ಮೊನ್ನೆ ಎನ್ನ ಮೊಬೈಲ್ ಕೆಲಸ ಮಾಡಿಂಡು ಇತ್ತಿದ್ದಿಲ್ಲೆ. ಸೋಫ಼್ಟ್‍ವೇರ್ ಪುನಃ ಲೋಡ್ ಮಾಡೆಕ್ಕು ಹೇಳಿ ಆತು.
ಎನ್ನ ಫ್ರೆಂಡ್‍ನ ಹತ್ರೆ ಹೇಳಿದೆ. ಎನ್ನ ಹತ್ರೆ ಬೇಕಾಷ್ಟು ಮೊಬೈಲ್ ಮನೆಲಿ ಇದ್ದು. ನಿನ್ನದು ಸಿಕ್ಕುವನ್ನಾರ ಬೇಕಾದ್ದರ ತೆಕ್ಕೊಂಡು ಉಪಯೋಗಿಸಲೆ ಅಕ್ಕು ಹೇಳಿದ°.
ಎಂತಕೆ ಮಾರಾಯ ಇಷ್ಟೊಂದು ಮಡ್ಕೊಂಡಿದೆ ಕೇಳಿರೆ ಅವ° ಹೇಳ್ತ°,
ಒಂದಲ್ಲಿ ಸೋಶಿಯಲ್ ನೆಟ್‍ವರ್ಕ್ ಸಿಕ್ಕಿಂಡು ಇತ್ತಿದ್ದಿಲ್ಲೆ. ಹಾಂಗೆ ಹೊಸತು ತೆಕ್ಕೊಂಡೆ.
ಇನ್ನೊಂದರಲ್ಲಿ ಎರಡು ಸಿಮ್ ಹಾಕಲೆ ವೆವಸ್ಥೆ ಇತ್ತಿಲ್ಲೆ,
ಇನ್ನೊಂದು ಟಚ್ ಸ್ಕ್ರೀನ್ ಇಪ್ಪದು ಆಯೆಕ್ಕಿತ್ತು,
ಇನ್ನೊಂದು ಕ್ವಾರ್ಟಿ ಕೀ, ಅದಲ್ಲಿ ಸಮೋಸ ಟೈಪ್ ಮಾಡ್ಲೆ ಸುಲಾಭ ಆವ್ತು.
ಮತ್ತೆ ಈಗ 3G ಬಯಿಂದನ್ನೆ, ಅದು ಇಲ್ಲದ್ರೆ ಹೇಂಗೆ?

– ಹೀಂಗೆ ಒಂದೊಂದು ಕಾರಣಂಗೊ. ಅಂತೂ ಮನೆಲಿ ಹಳೆ ಮೊಬೈಲ್‍ಗಳ ರಾಶಿಯೇ ಇತ್ತಿದ್ದು!

ಟೀವಿ ಕೂಡಾ ಇದಕ್ಕೆ ಹೊರತಲ್ಲ.
ಹಳೆ ಟೀವಿಲಿ ಇಲ್ಲದ್ದ ಎಷ್ಟೋ ಹೊಸ ಅನುಕೂಲಂಗೊ ಈಗಾಣ ಹೊಸ ಮೋಡೆಲ್‍ಗಳಲ್ಲಿ ಸಿಕ್ಕುತ್ತು.

ಜೆನಂಗೊಕ್ಕೆ ಹೊಸ ಹೊಸ ಅನುಕೂಲಂಗೊ ಸಿಕ್ಕುವಾಗ ಹಳತ್ತರ ಮಡ್ಕೊಂಬದು ಎಂತಕೆ, ಹೊಸತ್ತೇ ತೆಕ್ಕೊಂಬಲಕ್ಕನ್ನೆ ಹೇಳಿ ಮನಸ್ಸು ಅಪ್ಪದು ಸಹಜ.
ರೆಜ ಹಳತ್ತು ಆತು, ಇಲ್ಲದ್ರೆ ರಿಪೇರಿಗೆ ಬಂತು ಹೇಳಿ ಆದರೆ, ಹೊಸತ್ತೇ ತೆಗವ ಹೇಳಿ ನಿರ್ಧಾರ ಮಾಡುವವೇ ಹೆಚ್ಚು ಜೆನಂಗೊ.
ಅಂಬಗ ಈ ಹಳತ್ತೆಲ್ಲಾ ಎಲ್ಲಿಗೆ ಹೋವುತ್ತು?

ಹೆಚ್ಚಿನ ಮಾರಾಟಗಾರಂಗೊ ಹಳತ್ತು ಕೊಟ್ಟರೆ, ಹೊಸತ್ತು ತೆಕ್ಕೊಂಬಗ ಅದರಲ್ಲಿ ಡಿಸ್ಕೌಂಟ್ ಕೊಟ್ಟು ಎಕ್ಸ್ಚೇಂಜ್ ಆಫರ್ ಹೇಳಿ ಗ್ರಾಹಕರ ಆಕರ್ಶಿಸುತ್ತವು.
ಹಳತ್ತಕ್ಕೆ ಮೂರು ಕಾಸು ಆದರೂ ಸಿಕ್ಕುತ್ತನ್ನೆ, ಮನೆಲಿ ಹರಗಣ ಎಂತಕೆ ಹೇಳಿ, ಸಿಕ್ಕಿದ ಕ್ರಯಕ್ಕೆ ವಾಪಾಸು ಮಾಡುವವು ಇಲ್ಲದ್ದಿಲ್ಲೆ.
ಕೆಲವೊಂದು ಸಾಧನಂಗೊ ರಿಪೇರಿ ಮಾಡಿ ಪುನಃ ಉಪಯೋಗ ಆವ್ತ ಹಾಂಗೆ ಮಾಡಿ, ಅದರ ಸಿಕ್ಕಿದ ಕ್ರಯಕ್ಕೆ ಸೆಕೆಂಡ್ ಹೇಂಡ್ ಹೇಳಿ ಮಾರ್ತವು.
ಇದಕ್ಕೂ ಕೆಲವು ಗ್ರಾಯಿಕಿಗೊ ಇರ್ತವು. ಇಲ್ಲೆ ಹೇಳಿ ಅಲ್ಲ.  ಹಳತ್ತು ಎಷ್ಟಾದರೂ ಹಳತ್ತು, ರಿಪೇರಿ ಬಂದೊಂಡು ಇರ್ತು ಹೇಳಿ ಎಲ್ಲರೂ ಹೀಂಗಿಪ್ಪದರ ತೆಕ್ಕೊಂಬಲೆ ತಯಾರು ಇರ್ತವಿಲ್ಲೆ.
ಅಷ್ಟು ಮಾತ್ರ ಅಲ್ಲದ್ದೆ, ತಿಂಗಳು ತಿಂಗಳು ಸಂಬಳ ತೆಕ್ಕೊಂಬವು, ಕೆಲಸಲ್ಲಿ ಇಪ್ಪವು ಹೇಳಿ ಗೊಂತಾದರೆ, ಮಾರಾಟ ಮಾಡ್ತವರ ಹತ್ರೆ ಒಂದು ಸರ್ತಿ ಹೋಗಿ ವಿಚಾರಿಸಿರೆ ಸಾಕು, ಮತ್ತೆ ಅವೇ ಬಂದು ವಿಚಾರುಸಲೆ ಸುರು ಮಾಡ್ತವು.
ತಿಂಗಳ ಸ್ಕೀಂ ಹೇಳಿ ಜೆನಂಗಳ ಮರುಳು ಮಾಡ್ತವು.ಹಾಂಗಾಗಿ ಸೆಕೆಂಡ್ ಹೇಂಡ್ ಸಾಧನಂಗೊಕ್ಕೆ ಪೇಟೆಲಿ  ಗಿರಾಕಿಗೊ ಕಮ್ಮಿ ಹೇಳಿಯೇ ಹೇಳ್ಲಕ್ಕು.

ಎಲೆಕ್ಟ್ರೋನಿಕ್ಸ್ ಸಾಧನಂಗೊ ಹೇಳಿರೆ ಯಾವುದೆಲ್ಲಾ ಬತ್ತು ಹೇಳಿ ಕೇಳಿರೆ, ದೊಡ್ದ ಲೀಸ್ಟ್ ಮಾಡ್ಲೆ ನವಗೆ ಎಡಿಗು.
ಅದು ದಿನ ನಿತ್ಯ ಉಪಯೋಗುಸುವ ಮೊಬೈಲ್, ಮನೆಲಿಯೇ ಮಡುಗುವ ಫೋನ್‍ಗೊ, ಟೀವಿ, ಫ್ರಿಡ್ಜ್, ಕಂಪ್ಯೂಟರ್, ಅದರ ಮೋನಿಟರ್ (CRT-ಕೇಥೋಡ್ ರೇ ಟ್ಯೂಬ್, LED-ಲಿಕ್ವಿಡ್ ಎಮಿಷನ್ ಡಿಸ್‍ಪ್ಲೇ,LCD-ಲಿಕ್ವಿಡ್ ಕ್ರಿಸ್ಟಲ್ ಡಿಸ್‍ಪ್ಲೇ) ಮೌಸ್, ಕೀ ಬೋರ್ಡ್,  ಮಕ್ಕಳ ಆಟದ ಸಾಮಾನುಗೊ, ಡಿಜಿಟಲ್ ಕೆಮರಾ, ರೇಡಿಯೋ, ಡಿ.ವಿ.ಡಿ ಪ್ಲೇಯರ್, ಮ್ಯೂಸಿಕ್ ಸಿಸ್ಟಮ್, ಲಿಥಿಯಮ್ ಸೆಲ್ (ಬೇಟ್ರಿ), ನಿಕ್ಕೆಲ್-ಕ್ಯಾಡ್ಮಿಯಮ್ ಸೆಲ್, ಇನ್ನೂ ಹಲವಾರು ಇಕ್ಕು.

ಹಳತ್ತರ ಈ ರಾಶಿಯನ್ನೇ e-ವೇಸ್ಟ್ ಹೇಳುವದು.
ಸರಿ ಸುಮಾರು ೫೦ ಮಿಲಿಯನ್ ಟನ್‍ನಷ್ಟು e-ವೇಸ್ಟ್ ಪ್ರತೀ ವರ್ಷ ಉಂಟಾವ್ತು ಹೇಳಿ ಅಂದಾಜು ಮಾಡಿದ್ದವು ಅಮೇರಿಕಾಲ್ಲಿ ಇಪ್ಪ ಪರಿಸರ ರಕ್ಷಣಾ ಸಂಸ್ಥೆ (Environmental Protection AgencyEPA) ಯವು.
ಇದು ಮತ್ತೆ ಎಂತ ಆವ್ತು ಹೇಳುವದೇ ಪ್ರಶ್ನೆ. ಅದಕ್ಕೆ ಎಂತಾದರೊಂದು ಗತಿ ಕಾಣ್ಸೆಕ್ಕನ್ನೆ?

~

ಇದರ ವಿಲೇವಾರಿ ಮಾಡ್ಲೆ ಎರಡು ವಿಧಂಗೊ

 • ಒಂದೋ ಮಣ್ಣಿಲ್ಲಿ ಹುಗುದು ಹಾಕುವದು,
 • ಇಲ್ಲದ್ರೆ ಕಿಚ್ಚಿಲ್ಲಿ ಸುಡುವದು.

ಇದಾ ಈಗ ಬಂತದ ತೊಂದರೆಗೊ!!!

ಮಣ್ಣಿಲ್ಲಿ ಹುಗುದು ಹಾಕಿರೆ ಎಂತ ಆವ್ತು ನೋಡುವೊ° :

ನಾವು ಉಪಯೋಗಿಸುವ ಎಲ್ಲಾ ಎಲೆಕ್ಟ್ರೋನಿಕ್ಸ್ ಸಾಧನಂಗಳಲ್ಲಿ, ರೆಸಿಸ್ಟರ್, ಕೆಪೇಸಿಟರ್, ಟ್ರಾನ್ಸಿಸ್ಟರ್,ಇಂಟೆಗ್ರೇಟೆಡ್ ಚಿಪ್ಸ್ (IC) ಹೀಂಗೆ  ಹಲವಾರು ಬಿಡಿ ಭಾಗಂಗೊ ಇರ್ತು.
ಇದರ ಎಲ್ಲಾ ವೆವಸ್ಥಿತ ರೀತಿಲಿ ಒಂದು ಬೋರ್ಡಿಲ್ಲಿ ಜೋಡುಸುತ್ತವು. ಈ ರೀತಿ ಜೋಡುಸಲೆ, ಬಿಡಿಭಾಗಂಗಳ ಸೋಲ್ಡರಿಂಗ್ ಮಾಡೆಕ್ಕು, ಇದಕ್ಕೆ ಲೆಡ್ (ಸೀಸ) ಉಪಯೋಗ ಅಗತ್ಯ.
ಹಾಂಗಿಪ್ಪ ಹಲವಾರು ಬೋರ್ಡುಗೊ (ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್-PCB) ಒಂದೊಂದು ಇಲೆಕ್ಟ್ರೋನಿಕ್ಸ್ ಸಾಧನಂಗಳಲ್ಲಿಯೂ ಇರ್ತು.
ಯಾವುದೇ ರಿಪೇರಿ ಅಂಗಡಿಗೆ ಹೋಗಿ ನೋಡಿರೆ ಈ ನಮೂನೆಯ ಕೆಲಸ ಮಾಡದ್ದ ಬೋರ್ಡ್‍ಗಳೂ, ಬಿಡಿ ಭಾಗಂಗಳೂ, ಉಪಕರಣಂಗಳದ್ದು ರಾಶಿಯೇ ಇರ್ತು.

ಹಾಳಾದ PCB ಲಿ  ಚಿನ್ನ, ಬೆಳ್ಳಿ, ತಾಮ್ರ,ಪ್ಲೇಟಿನಮ್ ಇತ್ಯಾದಿ ಅಮೂಲ್ಯ ಲೋಹಂಗೊ ಇರ್ತು.
ಇದರ ತೆಗದು ಬೇರೆ ಉಪಯೋಗಕ್ಕೆ ಆವ್ತ ಹಾಂಗೆ ಪರಿವರ್ತನೆ ಮಾಡುವ ಘಟಕಂಗೊ ಬೆಂಗಳೂರು ಮತ್ತೆ ನವದೆಹಲಿಲಿ ಇದ್ದು.
ಇದರಲ್ಲಿ ಹೆಚ್ಚು ಹೇಳಿರೆ ಪ್ರತಿ ಶತ ೧೫ ರಿಂದ ೨೦ ರಷ್ಟು ಮಾತ್ರ ಪುನರ್‍ಬಳಕೆ  ಅಪ್ಪಂತಾದ್ದು. ಬಾಕಿ ಇಪ್ಪದೆಲ್ಲಾ ಒಂದೋ ಭೂಮಿ ಅಡಿಂಗೆ ಹಾಕಿ ಹುಗಿತ್ತವು, ಇಲ್ಲದ್ರೆ ಕಿಚ್ಚು ಕೊಟ್ಟು ಸುಡುತ್ತವು.

e-ವೇಸ್ಟಿನ ಭೂಮಿಲಿ ಹುಗುದರೆ:
ಈ ಮೊದಲೇ ಹೇಳಿದ ಹಾಂಗೆ, ನಿಕ್ಕೆಲ್, ಲಿಥಿಯಮ್, ಕ್ಯಾಡ್ಮಿಯಮ್, ಪಾದರಸ, ಸೀಸ ಹೀಂಗಿಪ್ಪ ಭಾರ ಲೋಹಂಗೊ ನಿಧಾನಕ್ಕೆ ನಾವು ಉಪಯೋಗಿಸುವ ನೀರಿಂಗೆ ಸೇರುವ ಸಂಭವ ಹೆಚ್ಚು.
ಇದರಿಂದ ಆರೋಗ್ಯಕ್ಕೆ ಆವ್ತ ಹಾನಿಗೊ ತುಂಬಾ ಜಾಸ್ತಿ.

 • ನೀರಿಲ್ಲಿ ಪಾದರಸ ಅಂಶ ಜಾಸ್ತಿ ಆದರೆ, ನರ ದೌರ್ಬಲ್ಯ, ಮೆದುಳಿಂಗೆ ಹಾನಿ,
 • ಕ್ಯಾಡ್ಮಿಯಮ್ ಜಾಸ್ತಿ ಆದರೆ, ಎಲುಬು ರೋಗಂಗೊ,
 • ಆರ್ಸೆನಿಕ್ ಇದ್ದರೆ ಲಿವರ್ ಮತ್ತೆ ಹೃದಯಕ್ಕೆ ತೊಂದರೆ,
 • ಸೆಲೇನಿಯಮ್ ಇದ್ದರೆ ಕಿಡ್ನಿ ಮತೆ ಲಿವರಿಂಗೆ ಹಾನಿ,

ಹೀಂಗೆ ಈ ಲೋಹಂಗೊ ದೇಹದ ಒಂದೊಂದು ಭಾಗಂಗೊಕ್ಕೂ ತೊಂದರೆ ಕೊಡುತ್ತು,

ಆರೋಗ್ಯ ಕೆಡುಸುತ್ತು, ನೆಮ್ಮದಿ ಹಾಳು ಮಾಡುತ್ತು.
ಹಾಂಗಾಗಿ ಭೂಮಿಲಿ ಹುಗಿವದು ಅರೋಗ್ಯದ ದೃಷ್ಟಿಂದ ಒಳ್ಳೆದಲ್ಲ.

ಇನ್ನು ಕಿಚ್ಚು ಕೊಟ್ಟರೆ ಎಂತ ಆವ್ತು ನೋಡುವೊ° :

ಅಂಬಗ ಎಲೆಕ್ಟ್ರೋನಿಕ್ಸ್ ಸಾಧನ ಹೇಳಿರೆ ಬರೇ ಕೆಪೇಸಿಟರ್, ಟ್ರಾನ್ಸಿಸ್ಟರ್, ರೆಸಿಸ್ಟರ್ ಅಷ್ಟೆಯಾ ? ಅಲ್ಲ. ಟೀವಿಯಪೆಟ್ಟಿಗೆ ಮಾಡಿದ್ದು ಪ್ಲೇಸ್ಟಿಕಿಂದ.
ಕಂಪ್ಯೂಟರ್‍ನ ಹೆಚ್ಚಿನ ಭಾಗಂಗಳೂ ಪ್ಲೇಷ್ಟಿಕೇ., PCB ಕೂಡಾ ಪ್ಲಾಸ್ಟಿಕ್ಕಿನ ಇನ್ನೊಂದು ಅವತಾರ.
ಕಿಚ್ಚು ಹಿಡಿವದರ ತಡವಲೆ ಹೇಳಿ ಟೀವಿಯ, ಕಂಪ್ಯೂಟರಿನ ಪ್ಲಾಸ್ಟಿಕ್‍ಗೊಕ್ಕೆ ಬೇರೆ ರಾಸಾಯನಿಕಂಗಳ ತಯಾರಿ ಸಮಯಲ್ಲಿ ಮಿಕ್ಸ್ ಮಾಡಿರ್ತವು.
ಕಿಚ್ಚು ಕೊಟ್ಟಪ್ಪಗ ಪ್ಲೇಷ್ಟಿಕ್ ಹೊತ್ತುವಾಗ ಡೈಒಕ್ಸಿನ್ (Dioxin) ಹೇಳ್ತ ಕೆಮಿಕಲ್ ಬಿಡುಗಡೆ ಆವ್ತು. ಇದು ಮುಖ್ಯವಾಗಿ ನರ ದೌರ್ಬಲ್ಯಕ್ಕೆ ಕಾರಣ ಆವುತ್ತು.
(ಪ್ಲೇಶ್ಟಿಕ್ ಬಗ್ಗೆ ನಾವು ಈ ಮೊದಲು ಒಂದರಿ ಮಾತಾಡಿದ್ದು)

e-ವೇಸ್ಟಿನ ಹೊತ್ತುಸುವಾಗ ಅದರಲ್ಲಿಪ್ಪ ಲೋಹಂಗಳ ಆವಿ ಕೂಡಾ ಪರಿಸರ ಮಾಲಿನ್ಯ ಮಾಡುತ್ತು ಮಾತ್ರ ಅಲ್ಲದ್ದೆ ಅರೋಗ್ಯಕ್ಕೆ ಕೂಡಾ ತುಂಬಾ ಹಾನಿ ಮಾಡುತ್ತು.
ಹಾಂಗಾಗಿ e-ವೇಸ್ಟಿನ ನಾವು ಭೂಮಿಲಿ ಹುಗಿವ ಹಾಂಗೂ ಇಲ್ಲೆ, ಕಿಚ್ಚು ಕೊಟ್ಟು ಸುಡುವ ಹಾಂಗೂ ಇಲ್ಲೆ.

ಟನ್ ಗಟ್ಲೆ ರಾಶಿ ಹಾಕಿ ಚೆಂದ ನೋಡುವದೊಂದೇ ದಾರಿ ಕಾಣ್ತಷ್ಟೆ ಸದ್ಯಕ್ಕೆ.

~

e-ವೇಸ್ಟ್
e-ವೇಸ್ಟ್

ಅಬಿವೃದ್ಧಿ ಹೊಂದಿದ ದೇಶ ಹೇಳಿಸಿಗೊಳ್ಳುವವು ,ನಿಧಾನಕ್ಕೆ ಹೀಂಗಿಪ್ಪದರ ಅಭಿವೃದ್ದಿ ಹೊಂದುತ್ತ ದೇಶಕ್ಕೆ ಯಾವುದಾರೂ ರೀತಿಲಿ ಸಾಗಿಸಿ ಕೈ ತೊಳಕ್ಕೊಳ್ತವು.
ಹಾಂಗಾರೆ ಎಂತ ಮಾಡ್ಲಕ್ಕು ಹೇಳಿ ರೆಜ ಆಲೋಚನೆ ಮಾಡೆಕ್ಕಾದ್ದೇ.

ಸರ್ಕಾರ ಕೂಡಾ ಈ ಬಗ್ಗೆ ಆಲೋಚನೆ ಮಾಡಿದ್ದು.

ಕರ್ನಾಟಕ  ಸರಕಾರ ೨೦೧೨ ರ ಮೇ ತಿಂಗಳಿಲ್ಲಿ ಒಂದು ಹೊಸ ಕಾನೂನು ತಪ್ಪ ಅಲೋಚನೆಲಿ ಇದ್ದು.
ಅದರ ಪ್ರಕಾರ, ಹೊಸತ್ತು ಇಲೆಕ್ಟ್ರೋನಿಕ್ಸ್ ಸಾಧನಂಗಳ ತೆಕ್ಕೊಂಬಗ ಹಳತ್ತರ  ಅದೇ ಅಂಗಡಿಯವೇ ತೆಕ್ಕೊಳೆಕ್ಕು.
ಅವು ಅದರ ಮತ್ತೆ ಯೋಗ್ಯ ರೀತಿಲಿ ವಿಲೇವಾರಿ ಮಾಡೆಕ್ಕು.
ಇದರಲ್ಲಿಪ್ಪ ಪುನರ್ಬಳಕೆ ಅಪ್ಪ ಸಾಮಾನುಗಳ ವಿಂಗಡಿಸುವ ಮೂರು ನಾಕು ಕಂಪೆನಿಯವು ಬೆಂಗಳೂರಿಲ್ಲಿ ಇದ್ದವಡ.

ಕೇಂದ್ರ ಸರಕಾರ ಕೂಡಾ ಈ ನಿಟ್ಟಿಲ್ಲಿ ಅಲೋಚನೆ ಮಾಡಿ, ತಯಾರು ಮಾಡುವವಕ್ಕೆ, ಮುಖ್ಯ ಡೀಲರ್‍ಗೊಕ್ಕೆ, ಚಿಲ್ಲರೆ ಮಾರಾಟ ಮಾಡ್ತವಕ್ಕೆ, ಮತ್ತೆ ಉಪಯೋಗ ಮಾಡುವವಕ್ಕೆ ಅವರವರ  ಜವಾಬ್ದಾರಿ ಎಂತದು ಹೇಳ್ತರ ಕಾನೂನು ಮೂಲಕ ತಪ್ಪ ಅಲೋಚನೆಲಿ ಇದ್ದು.
ಇದಕ್ಕಾಗಿ ಜನ ಜಾಗೃತಿ ಕಾರ್ಯಕ್ರಮಂಗಳ ಯೋಜನೆಲಿಯೂ ಇದ್ದು.
ಬೆಂಗಳೂರು ಬೃಹತ್ ಮಹಾ ನಗರ ಪಾಲಿಕೆ (BBMP) e-ವೇಸ್ಟಿನ ಸಂಗ್ರಹಿಸುವ  ಔಟ್‍ಲೆಟ್ ಕೊಡುವ ಅಂದಾಜು ಇದ್ದಡ.

ಹಾಂಗಾರೆ ನಾವು ಎಂತ ಮಾಡ್ಲಕ್ಕು?

 • ಯಾವುದೇ ಸಾಧನಂಗಳ ತೆಕ್ಕೊಂಬಗ ನವಗೆ ಅದರ ಅಗತ್ಯ ಇದ್ದೋ ಹೇಳಿ ವಿಮರ್ಶಿಸಿ ತೆಕ್ಕೊಂಬದು.
 • ಇಪ್ಪ ಸಾಧನಂಗಳ ಮೇಲ್ದರ್ಜೆಗೆ ಏರುಸಲೆ ಎಡಿಗಾದಲ್ಲಿ, ಹೊಸತ್ತು ತೆಕ್ಕೊಂಬ ಬದಲು, ಹಾಂಗೆ ಮಾಡುವದು
 • ದಿನ ದಿನವೂ ತಂತ್ರಜ್ಞಾನ ಬೆಳೆತ್ತಾ ಇಪ್ಪ ಈ ಸಮಯಲ್ಲಿ, ತೆಕ್ಕೊಂಡ ಸಾಧನಂಗಳ ಮುಂದೆ ಬೇಕಾದಲ್ಲಿ ಮೇಲ್ದರ್ಜೆಗೆ (upgrading) ಮಾಡ್ಲೆ ಇಪ್ಪ ವೆವಸ್ಥೆ ಇದ್ದಾ ಹೇಳಿ ನೋಡಿ ಹಾಂಗಿಪ್ಪದನ್ನೇ ತೆಕ್ಕೊಂಬದು.
 • ಹಳತ್ತು ಆಯಿದು, ಉಪಯೋಗಿಸುವ ರೀತಿಲಿ ಇದ್ದು, ಆದರೂ ಬದಲುಸೆಕ್ಕು ಹೇಳಿ ಇದ್ದರೆ, ಅದರ ಅಗತ್ಯ ಇಪ್ಪವು ಇದ್ದರೆ ಅವಕ್ಕೆ ಕೊಡುವದು.
 • ಹೊಸತ್ತು ತೆಕ್ಕೊಂಬಗ ಹಳತ್ತರ ವಾಪಾಸು ತೆಕ್ಕೊಳ್ತವೋ ಹೇಳಿ ತಿಳ್ಕೊಂಡು ಅಲ್ಲಿಂದಲೇ ತೆಕ್ಕೊಂಬದು.
 • ಹಾಳಾದ ಐಟಮ್‍ಗಳ ಅಲ್ಲಿ ಇಲ್ಲಿ ಇಡ್ಕದ್ದೆ, ಇಪ್ಪದು. ಮತ್ತೆ ಕಿಚ್ಚು ಕೊಟ್ಟು ಹೊತ್ತುಸದ್ದೆ ಇಪ್ಪದು.
 • ಸಿಕ್ಕಿದ ಕ್ರಯ ಸಾಕು ಹೇಳಿ ಅದರ ವಾಪಾಸು ಮಾಡುವದು.

* * *

ಹೊಸ ಹೊಸ ತಂತ್ರಜ್ಞಾನಂಗಳ ಉಪಯೋಗ ಮಾಡುವೊ°.
ಈ ಭೂಮಿ ನವಗೆ ಮೊದಲಾಣ ಪೀಳಿಗೆಂದ ಬಳುವಳಿ ಆಗಿ ಬಂದದು, ಅದರ ಅವಕ್ಕೆ ಸುಸ್ಥಿಲಿ ಕೊಡುವ ಜವಾಬ್ದಾರಿ ಇದ್ದು ಹೇಳುವದನ್ನೂ ಮರವದು ಬೇಡ.
ನಮ್ಮ ಆರೋಗ್ಯ, ನೆಮ್ಮದಿ ನಮ್ಮ ಕೈಲಿ ಇದ್ದು.

* * *

ಪಟ-ಇಂಟರ್ನೆಟ್  ಕೃಪೆ

e-ವೇಸ್ಟ್ – ನಮ್ಮೆಲ್ಲರ ಕೊಡುಗೆ ಎಷ್ಟೆಷ್ಟು?, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಒಪ್ಪಣ್ಣ

  ಅಪ್ಪಚ್ಚಿ,
  ನಿತ್ಯಜೀವನಲ್ಲಿ ನಿಜವಾಗಿ ಅಗತ್ಯ ಇದ್ದೊಂಡೋ, ಆಶೆಮಾಡಿಯೋ, ಕೇಡಿಲಿಯೋ – ಹೊಸಹೊಸ ಮೊಬಿಳಿ, ಕಂಪ್ಲೀಟ್ರು ತೆಗೆತ್ಸು ಈಗಾಣ ಪೇಶನು ಆಗಿ ಬಿಟ್ಟಿದು.

  ಎನ್ನತ್ರೆ ಕಪ್ಪಿಂದಿದ್ದರೆ ಆಚವಂಗೆ ಕಲರು ಆಯೇಕು.
  ಅವನತ್ರೆ ಕಲರು ಇದ್ದರೆ ಎನಗೆ ಒತ್ತುದಾಯೇಕು.
  ಅವನತ್ರೆ ಒತ್ತುದಿದ್ದರೆ ಎನಗೆ ಕುಟ್ಟುದಾಯೇಕು.
  ಅವನತ್ರೆ ಕುಟ್ಟುದಿದ್ದರೆ ಎನಗೆ ಮುಟ್ಟುದಾಯೇಕು.
  ಅವನತ್ರೆ ಮುಟ್ಟುದಿದ್ದರೆ ಎನಗೆ ಎರಡು ಆಯೇಕು!
  ಸುರೂವಾಣ ಕಪ್ಪಿನ ಪೋನಿಲಿ ನಾಕುಜೆನರತ್ರೆ ಮಾತಾಡುಗು. ಅಕೇರಿಯಾಣ ಮುಟ್ಟುತ್ತರಲ್ಲಿಯೂ – ಅದನ್ನೇ ಮಾಡುದು.
  ಅಂತೂ ಊರು ತುಂಬ ಪೋನುಗೊ ತುಂಬಿತ್ತತ್ತೆ!

  ಇಲ್ಲೊಬ್ಬ ಭಾವಯ್ಯ ಅವನ ಕಂಪ್ಲೀಟ್ರು ಹಳತ್ತರ ಎಂತಾರು ಮಾಡೇಕು ಹೇಳಿಗೊಂಡಿದ್ದ. ಮಾಡ್ಳಿ ಮಾಡ್ಳಿ – ನಿಂಗಳ ಶುದ್ದಿ ಓದಿ ಆದರೂ ಎಚ್ಚರಿಗೆ ಆತನ್ನೇ!

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ವಿಮರ್ಷಾತ್ಮಕ ಒಪ್ಪಕ್ಕೆ ಧನ್ಯವಾದಂಗೊ ರಾಮಚಂದ್ರ

  [Reply]

  VA:F [1.9.22_1171]
  Rating: 0 (from 0 votes)
 3. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಇದು ನಿಜಕ್ಕೂ ಸಕಾಲಿಕ ಲೇಖನ .ಉತ್ತಮ ಮಾಹಿತಿ ನೀಡಿದ್ದಿ. ಒಂದರಿ ಎಲ್ಲರೂ ಉಪವಾಸ ಮಾಡಿ ನೋಡುವ ಆಗದ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಸುಮಾರು ಸಮಯ೦ದ ಮತ್ತೆ ಅಪ್ಪಚ್ಚಿಯ ವೈಜ್ನಾನಿಕ ಶುದ್ದಿ ಓದಿ ಕೊಶಿ ಆತು.ನಮ್ಮ ಅನುಕೂಲತೆಗೆ ಬೇಕಾಗಿ ಪ್ಲಾಷ್ಟಿಕ್ ಸಾಮಗ್ರಿಗಳ ಉಪಯೋಗ ಮಾಡುವ ಅಭ್ಯಾಸ ಬೆಳದ ಹಾ೦ಗೆ ಈ ಸಮಸ್ಯೆಯೂ ಬೆಳದತ್ತು.ನಿ೦ಗೊ ಹೇಳಿದ ಪರಿಹಾರ೦ಗಳ ನಾವು ಅನುಸರಿಸಿರೆ ಸಮಸ್ಯೆಯ ಪರಿಣಾಮ ರಜ್ಜ ಆದರೂ ಕಮ್ಮಿ ಅಕ್ಕು.
  ಅ೦ದು,ವರ್ಲ್ಡ್ ಟ್ರೇಡ್ ಸೆ೦ಟರ್ ವಿಮಾನದಾಳಿ೦ದ ಬಿದ್ದಪ್ಪಗ ಟನ್ನುಗಟ್ಟಲೆ ಸಿಮೆ೦ಟು,ಕಬ್ಬಿಣ ತ್ಯಾಜ್ಯ೦ಗೊ ಹಡಗಿಲಿ ಸಾಗಣೆ ಆಗಿ ಚೆನ್ನೈ ಬ೦ದರಿನ ಮೂಲಕ ನಮ್ಮ ದೇಶವ ಸೇರಿದ್ದು ನೆ೦ಪಾತು.
  ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 5. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಸಕಾಲಿಕ ಲೇಖನ, ಬಾಧ್ಯತೆ, ಸಾಧ್ಯತೆ ಎಲ್ಲಾ ಚೆಂದಕೆ ವಿವರಣೆ ಕೊಟ್ಟಿದಿ. ಧನ್ಯವಾದಂಗೊ
  ಐರೋಪ್ಯ ರಾಷ್ಟ್ರಂಗಳಲ್ಲಿ ಹೊಸತ್ತು ತೆಕ್ಕೊಂಬಗ ಹಳತ್ತನ್ನೂ ವಿಲೇವಾರಿ ಮಾಡೆಕು ಹೇಳುವ ಕಾಯಿದೆ ಇದ್ದು, ಆದರೆ ಹಳತ್ತರ ಚೀನಾ, ಭಾರತದಾಂಗಿಪ್ಪ ರಾಷ್ಟ್ರಂಗೊಕ್ಕೆ ಕಳುಸಿ ಕೈ ತೊಳಕ್ಕೊಳ್ತವು..ನಿಂಗೊ ಹೇಳಿದಾಂಗೆ, {ಅಬಿವೃದ್ಧಿ ಹೊಂದಿದ ದೇಶ ಹೇಳಿಸಿಗೊಳ್ಳುವವು ,ನಿಧಾನಕ್ಕೆ ಹೀಂಗಿಪ್ಪದರ ಅಭಿವೃದ್ದಿ ಹೊಂದುತ್ತ ದೇಶಕ್ಕೆ ಯಾವುದಾರೂ ರೀತಿಲಿ ಸಾಗಿಸಿ ಕೈ ತೊಳಕ್ಕೊಳ್ತವು.} ಹೇಂಗೆ ನಮ್ಮಲ್ಲಿ ಗುಜರಾತಿನ ಅಳಂದ್ ಲ್ಲಿ ಹಡಗು ಒಡವ ಉದ್ಯಮ ಇದ್ದೋ ಹಾಂಗೆ..

  ನಮ್ಮಲ್ಲಿ ಬ್ಯಾಟರಿ ದೀಲರುಗೊಕ್ಕೆ ಹಳತ್ತರ ವಾಪಾಸು ತೆಕ್ಕೊಳೆಕು ಹೇಳುವ ನಿಯಮ ಈಗಳೂ ಇದ್ದು. ಕೆಲವು ಪ್ರತಿಷತ ಆದರೂ ತೆಕ್ಕೊಳೆಕು ಅವು..ಅದರ ಅವು ಲೈಸನ್ಸ್ ಇಪ್ಪ ಪರಿಷ್ಕರಿಸುವವಕ್ಕೆ ಕೊಟ್ಟು ವಿಲೇವಾರಿ ಮಾಡೆಕು.

  ಹೀಂಗೆಯೇ ಇಪ್ಪ ಇನ್ನೊಂದು ಸಂಗತಿ carbon credit. ಅಭಿವೃದ್ಧಿ ಹೊಂದಿದ ರಾಷ್ಟ್ರಂಗೊ ಅಭಿವೃದ್ಧಿ ಅಪ್ಪ ದೇಶಂಗಳ ಕಡೆ ಮೋರೆ ಮಾಡಿದ್ದವು. ಭೂ ತಾಪಮಾನ ಕಮ್ಮಿ ಮಾಡ್ಲೆ..

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅಭಿವೃದ್ಧಿ ಹೊಂದಿದವು ಹೇಳಿಗೊಂಬವು ಮಾಡುವದು ಮಾತ್ರ ಹೀಂಗಿಪ್ಪ ಕೆಲಸಂಗೊ. ಅವರ ಕಸವಿನ ತುಂಬುಸಲೆ ಅಭಿವೃದ್ಧಿ ಹೊಂದುವ ದೇಶಂಗೊ ಬೇಕಾದ್ದು ಅವಕ್ಕೆ.
  ಬೌದ್ಧಿಕವಾಗಿ ಅಭಿವೃದ್ಧಿ ಹೊಂದಿದವು ಹೀಂಗೆ ಮಾಡುಗೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಚೆನ್ನೈ ಬಾವ°ಡಾಮಹೇಶಣ್ಣಶರ್ಮಪ್ಪಚ್ಚಿಜಯಶ್ರೀ ನೀರಮೂಲೆಅನು ಉಡುಪುಮೂಲೆಯೇನಂಕೂಡ್ಳು ಅಣ್ಣಸುಭಗವೇಣೂರಣ್ಣಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಸಂಪಾದಕ°ಚೂರಿಬೈಲು ದೀಪಕ್ಕಒಪ್ಪಕ್ಕವಿದ್ವಾನಣ್ಣಶ್ಯಾಮಣ್ಣಚೆನ್ನಬೆಟ್ಟಣ್ಣಶಾಂತತ್ತೆಪವನಜಮಾವಬೋಸ ಬಾವಉಡುಪುಮೂಲೆ ಅಪ್ಪಚ್ಚಿvreddhiಮಾಲಕ್ಕ°ನೀರ್ಕಜೆ ಮಹೇಶಡಾಗುಟ್ರಕ್ಕ°ಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ