ಗಾಳಿ ಮತ್ತೆ ಮಳೆಯ ಅಳವದು ಹೇಂಗೆ?

August 25, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾರ, ಆಟಿ, ಸೋಣೆ ತಿಂಗಳ ಮಳೆ ಹೇಳಿರೆ ಭಾರೀ ಜೋರು ಹೇಳಿಯೇ ಲೆಕ್ಕ.
ಮನೆ ಒಳ ಕೂದೊಂಡು ಬೆಶಿ ಬೆಶಿ ಕಾಫಿ ಕುಡ್ಕೊಂಡು, ಹೊರುದ ಹಪ್ಪಳ, ಒಟ್ಟಿಂಗೆ ಕಾಯಿ ಹೋಳು ತಿಂದೊಂಡು ಇಪ್ಪಗ ಅದರ ಅಬ್ಬರ ನೋಡ್ಲೆ ಚೆಂದ.
ಹೊಳೆ ಕರೇಲಿ ಮನೆಯೋ, ತೋಟವೋ ಇಪ್ಪವಕ್ಕೆ ತಲೆ ಬೆಶಿ ಆಗದ್ದೆ ಇರ. ಯಾವಾಗ ತೋಟ ಮುಳುಗುತ್ತೋ, ಮನೆ ಒಳಾಂಗೆ ನೀರು ಹರುದು ಬತ್ತೋ, ಒಟ್ಟಿಂಗೆ ಹರವದು ಬತ್ತೋ ಹೇಳಿ ಆತಂಕ ಆಗದ್ದೆ ಇರ.
ಪೇಟೆಲಿ ಇಪ್ಪವಕ್ಕೆ ಮಾರ್ಗ ಯಾವುದು ತೋಡು ಯಾವುದು ಹೇಳಿ ಗೊಂತಾಗದ್ದ ಅವ್ಯವಸ್ಥೆ.
ಹಳ್ಳಿದು ಪ್ರಾಕೃತಿಕ ಬೆಳ್ಳ ಆದರೆ ಪೇಟೆದು ನಾವೇ ಮಾಡಿಗೊಂಡದು.

ಹೀಂಗಿಪ್ಪ ಒಂದು ದಿನ ರಾಮಜ್ಜನ ಕಾಲೇಜಿಂಗೆ ಹೋಪ ಕೀರ್ತಿ ಮಾಣಿ ಮನೆಗೆ ಬಂದ.
ಅಲ್ಲ ಮಾವ ಧಿಳಿ ಧಿಳಿನೆ ಮಳೆ ಬತ್ತು, ಒಟ್ಟಿಂಗೆ ಗಾಳಿಯೂ ಸೊಂಯ್ ಬತ್ತು.  ಪೇಪರಿಲ್ಲಿ ನೋಡಿರೆ ಮಿಲ್ಲಿ ಮೀಟರಿಲ್ಲಿ ಮಳೆ ಬರೆತ್ತವಲ್ಲದ, ಇದರ ಅಳೆತ್ತ ಕ್ರಮ ಹೇಂಗೆ? ಕೇಳಿದ.

ಎಷ್ಟು ಮಳೆ ಬಯಿಂದು ಹೇಳುವದರ ಮಿಲ್ಲಿ ಮೀಟರ್ (mm) ಲೆಕ್ಕಲ್ಲಿ ತಿಳುಸುವದು ಕ್ರಮ.
ಸಾಮಾನ್ಯವಾಗಿ ಹೇಳುವದಾದರೆ, ಮಳೆ ಬಪ್ಪಗ ಒಂದು ಪಾತ್ರ ಹೆರ ಮಡುಗಿರೆ ಅದರಲ್ಲಿ ನೀರು ತುಂಬುತ್ತಲ್ಲದ. ಹಾಂಗೆ ತುಂಬಿದ ನೀರು ಎಷ್ಟು ಎತ್ತರಕ್ಕೆ ಆ ಪಾತ್ರಲ್ಲಿ ತುಂಬಿದ್ದು ಹೇಳುವದರ ಮಿಲ್ಲಿ ಮೀಟರ್ ಲ್ಲಿ ಅಳದರೆ ಆತು.
ಆದರೆ ಹಾಂಗೆ ಅಳವಲೆ ಸುಲಾಭ ಇಲ್ಲೆ. ಪಾತ್ರೆಲಿ ಕಮ್ಮಿ ನೀರು ಇದ್ದರೆ, ಸ್ಕೇಲ್ ಹಿಡುದು ಅಳವಗ ತಪ್ಪು ಅಪ್ಪ ಚಾನ್ಸ್ ಹೆಚ್ಚು.
ತುಂಬಾ ನೀರು ತುಂಬಿರೆ ಹೆಚ್ಚು ವೆತ್ಯಾಸ ಬಾರ. ಅದಕ್ಕೆ ಬೇಕಾಗಿ ಹವಾಮಾನ ವರದಿ ಮಾಡುವ ವಿಭಾಗಲ್ಲಿ ಅದಕ್ಕಾಗಿಯೇ ರೂಪಿಸಿದ ಪಾತ್ರೆ ಇದ್ದು.
ಈ ಪಾತ್ರೆಗೆ ಮಳೆ ಮಾಪಕ, (Rain gauge) ಹೇಳ್ತವು.  ಮೇಗೆ ವೃತ್ತಾಕಾರದ ಬಾಯಿ ಇಪ್ಪ ಜೂಲಿ (funnel) ಇರ್ತು (ಚಿತ್ರ-1 ನೋಡಿ, ಇದರ ತ್ರಿಜ್ಯ=r).

ಬಿದ್ದ ನೀರು, ಕೆಳ ಒಂದು ಪಾತ್ರೆಲಿ ತುಂಬುವ ಹಾಂಗೆ ವ್ಯವಸ್ತೆ ಇರ್ತು. ಒಂದು ದಿನ ಆದಪ್ಪಗ ಕೆಳಾಣ ಪಾತ್ರೆಲಿ ಸಂಗ್ರಹ ಆದ ನೀರಿನ ಅಳದು (Volume) ಮಳೆ ಎಷ್ಟು ಬಂದದು ಹೇಳಿ ಲೆಕ್ಕ ಹಾಕುತ್ತವು.

ನಿಂಗೊಗೆಲ್ಲ ಗೊಂತಿಪ್ಪ ಹಾಂಗೆ ಸಿಲಿಂಡರ್ ಆಕಾರದ ಪಾತ್ರೆಲಿ ನೀರು ಎಷ್ಟು ಹಿಡಿತ್ತು ಹೇಳಿ ಲೆಕ್ಕ ಹಾಕಲೆ ಉಪಯೋಗಿಸುವ ಸೂತ್ರ:
Volume = πr2h. ಇದರಲ್ಲಿ r= ಸಿಲಿಂಡರ್ ನ ತ್ರಿಜ್ಯ (ರೇಡಿಯಸ್), h= ಎತ್ತರ.

ಮೇಲೆ ಹೇಳಿದ ಪಾತ್ರೆಲಿ ಎಷ್ಟು ನೀರು ತುಂಬಿದ್ದು ಹೇಳಿ ಯಾವುದಾದರೂ ಅಳತೆ ಪಾತ್ರೆಲಿ ಅಳೆಕು.
ಇದಕ್ಕೆ ಗಾಜಿನ ಅಳತೆ ಪಾತ್ರೆ (Measuring Cylinder) ಉಪಯೋಗಿಸುತ್ತವು. ನವಗೆ ಪ್ರಮಾಣ (Volume) ಗೊಂತಾವುತ್ತು, ಮಳೆ ನೀರು ಬೀಳುವ ಪಾತ್ರೆಯ ತ್ರಿಜ್ಯ ಗೊಂತಿದ್ದು.
ಲೆಕ್ಕ ಹಾಕಿರೆ ಎತ್ತರ ಸಿಕ್ಕುತ್ತು, ಈ ಎತ್ತರವ ಮಿಲ್ಲಿ ಮೀಟರಿಲ್ಲಿ ಹೇಳಿರೆ ಆತು.

ಉದಾಹರಣೆಗೆ, ನೀರು ಬೀಳುವ ಪಾತ್ರೆಯ ತ್ರಿಜ್ಯ 5.64 cm ಇದ್ದೊಂಡು ಒಂದು ದಿನಲ್ಲಿ 100 ಮಿಲ್ಲಿ ಲೀಟರ್ ನೀರು ಸಂಗ್ರಹ ಆದರೆ, 10 ಮಿಲ್ಲಿ ಮೀಟರ್ ಮಳೆ ಬಯಿಂದು ಹೇಳಿ ಲೆಕ್ಕ.
ನಮ್ಮ ಊರಿಲ್ಲಿ ಸಾಧಾರಣ ಒಂದು ಮಳೆಗಾಲ ಮುಗಿವಾಗ ಒಟ್ಟು 3250-4000 ಮಿಲ್ಲಿ ಮೀ ಮಳೆ ಬಂದಿರ್ತು.

ಭಾರತಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಅಲ್ಲದ? ಅಲ್ಲಿ ಅಂಬಗ ಎಷ್ಟು ಬೀಳ್ತು? ಕೇಳಿದ ಮಾಣಿ.

ಅಲ್ಲಿ ಸುಮಾರು 1270 ಸೆಂಟಿ ಮೀಟರ್ (12700 mm) ನಷ್ಟು, ಹೇಳಿರೆ ನಮಲ್ಲಿ ಬೀಳುವದರ 4 ರಿಂದ 5 ಪಾಲು ಹೆಚ್ಚು.
ಕರ್ನಾಟಕಲ್ಲಿ ಆಗುಂಬೆ ಅತೀ ಹೆಚ್ಚು ಮಳೆ ಬೀಳುವ ಜಾಗೆ.
ವರ್ಷಕ್ಕೆ ಸುಮಾರು 8300 ಮಿಲ್ಲಿ ಮೀಟರ್ ಆದರೆ, ಅತೀ ಕಮ್ಮಿ ಬೀಳುವ ಜಾಗೆ ಬಿಜಾಪುರ, ರಾಯಚ್ಚೂರು, ಬಳ್ಳಾರಿ (ಸುಮಾರು 500-600 ಮಿಲ್ಲಿ ಮೀಟರ್).

ಬೊಂಬಾಯಿಲಿ 26 ಜುಲಾಯಿ 2005 ರಂದು ಒಂದೇ ದಿನ 94.4 ಸೆಂಟಿಮೀಟರ್ (944 mm)ಬಂದು ಭಾರೀ ಅನಾಹುತ ಆಯಿದು.
ಇತ್ತೀಚೆಗೆ (5/8/10 ಇರುಳು) ಕಾಶ್ಮೀರದ ಲೇಹ್ ಹೇಳುವಲ್ಲಿ ಮೇಘ ಸ್ಫೋಟ (cloud burst) ಆಗಿಪ್ಪಗ ಒಂದು ಘಂಟೆ ಸಮಯಲ್ಲಿ 250 ಮಿಲ್ಲಿ ಮೀಟರ್ ಮಳೆ ಬಂದು ತುಂಬಾ ಸಾವು ನೋವು ಸಂಭವಿಸಿದ್ದು.

ಹಾಂಗಾರೆ ಎಂಗಳ ಟೇರೇಸಿನ ವಿಸ್ತೀರ್ಣ 1000 ಸ್ಕ್ವೇರ್ ಫೀಟ್ ಇಪ್ಪದರಲ್ಲಿ ಒಂದು ಮಳಗಾಲಲ್ಲಿ ಸಾಧಾರಣ 3000 ಮಿಲ್ಲಿ ಮೀಟರ್ ಮಳೆ ಬಂದಿಪ್ಪಗ ಎಷ್ಟು ಮಳೆ ನೀರು ಹರುದು ಹೋದಿಕ್ಕು, ಲೆಕ್ಕ ಹಾಕ್ತೆ ಹೇಳಿದ.
ಮಾಣಿ ಹುಶಾರು ಇದ್ದ. ನಿಂಗಳೂ ಲೆಕ್ಕ ಮಾಡಿ.

ಮಳೆಯ ಅಳತೆ ಮಾಡ್ತ ಹಾಂಗೆ ಗಾಳಿಯನ್ನೂ ಅದರ ವೇಗ (speed) ಲೆಕ್ಕ ಹಾಕಿ ಹೇಳ್ತವು.
ಘಂಟೆಗೆ ಎಷ್ಟು ಕಿಲೋಮೀಟರ್ ವೇಗಲ್ಲಿ ಗಾಳಿ ಬೀಸುತ್ತು ಹೇಳುವದು ಕ್ರಮ. ಅದಕ್ಕಾಗಿ ಪ್ರತ್ಯೇಕ ಮಾಪನ ಇದ್ದು.
ಚಿತ್ರ 2 ರಲ್ಲಿ ಎಡತ್ತು ಮೇಗೆ ನೋಡಿ, ಸಣ್ಣ ಕಪ್ ನ ಹಾಂಗಿಪ್ಪ ಪ್ಲಾಸ್ಟಿಕ್ ಸಾಧನ ಇಪ್ಪದು ಕಾಂಗು (3 cup anemometer).
ಇದು ಗಾಳಿ ಬೀಸುವಾಗ ತಿರುಗುತ್ತು. ಗಾಳಿಯ ವೇಗಕ್ಕೆ ಅನುಗುಣವಾಗಿ ಇದರ ವೇಗವು ಹೆಚ್ಚು ಕಮ್ಮಿ ಆವುತ್ತು. ಈ ಮಾಪನವ ಒಂದು ಅಟೊಮೇಟಿಕ್ ಉಪಕರಣಕ್ಕೆ ಅಳವಡಿಸಿರ್ತವು.
ಅದು ಗಾಳಿಯ ವೇಗವ ತಿಳುಸುತ್ತು.

ಗಾಳಿಯ ದಿಕ್ಕನ್ನೂ ಅಳೆತ್ತವು. ಉತ್ತರ ದಿಕ್ಕಿನ ಸೊನ್ನೆ ಡಿಗ್ರೀ ಹೇಳಿ ತೆಕ್ಕೊಂಡು, ಅಲ್ಲಿಂದ ಪ್ರದಕ್ಷಿಣಾಕಾರವಾಗಿ (clockwise) 360 ಡಿಗ್ರಿ ವರೆಗೆ ಯಾವ ಹೊಡೆಂಗೆ ಗಾಳಿ ಬೀಸುತ್ತು ಹೇಳುವ ಕ್ರಮ.
ಇದಕ್ಕೆ ವಿಂಡ್ ವೇನ್ (Wind Vane) ಉಪಕರಣ ಇದ್ದು. ಚಿತ್ರ 2 ಬಲತ್ತು ಮೇಗೆ ಕಾಣುತ್ತು.

ಈ ಮಳೆಗೆ ವಸ್ತ್ರಂಗೊ ಒಣಗುತ್ತೇ ಇಲ್ಲೆ ಹೇಳಿ ಹೆಮ್ಮಕ್ಕಳ ದೂರು ಇದ್ದೇ ಇಕ್ಕು.
ತೊಳದು ಹಾಕಿರೆ ಸಾಕೋ, ಅದು ಒಣಗದ್ದರೆ ಎಂತ ಮಾಡ್ಲೆ ಎಡಿಗು. ಮಳೆಗೆ ಚೆಂಡಿ ಆಗಿಂಡು ಬಪ್ಪ ಶಾಲೆಮಕ್ಕಳ ಸಮವಸ್ತ್ರ, ದೊಡ್ಡವರ ಅಂಗಿ, ಪೇಂಟು, ಆರುಸಲೇ ಜಾಗೆ ಇಲ್ಲೆ ಹೇಳುವ ಅವಸ್ಥೆ.

ಮಳೆಗಾಲಲ್ಲಿ ವಾತಾವರಣಲ್ಲಿ ಇಪ್ಪ ನೀರಿನ ಅಂಶ ಜಾಸ್ತಿ ಇರ್ತು. ಇದಕ್ಕೆ “ಆರ್ದ್ರತೆ” (humidity) ಹೇಳ್ತವು.

ಆರ್ದ್ರತೆ ಜಾಸ್ತಿ ಇಪ್ಪಗ, ವಸ್ತ್ರಂಗಳಲ್ಲಿ ಇಪ್ಪ ನೀರಿನ ಅಂಶ ವಾತಾವರಣ ತೆಕ್ಕೊಳ್ತಿಲ್ಲೆ. ಹಾಂಗಾಗಿ ವಸ್ತ್ರಂಗೊ ಒಣಗುತ್ತಿಲ್ಲೆ. ಅದುವೇ ಬೇಸಿಗೆಲಿ ಆದರೆ ಆರ್ದ್ರತೆ ಕಮ್ಮಿ ಇರ್ತು. ವಸ್ತ್ರಲ್ಲಿ ಇಪ್ಪ ನೀರು ಬೇಗ ವಾತಾವರಣಕ್ಕೆ ಸೇರುತ್ತು.
ಮಂಗಳೂರಿನ ಆರ್ದ್ರತೆಗೆ ಹೋಲಿಸಿರೆ, ಬೆಂಗಳೂರಿಲ್ಲಿ ಯಾವಾಗಲೂ ಕಮ್ಮಿ ಇರ್ತು. ಅಲ್ಲಿ ಬೇಗ ವಸ್ತ್ರಂಗೊ ಒಣಗುತ್ತು. ಹಪ್ಪಳ ಹೊರುದು ಮಡುಗಿರೆ ಞಾಣುತ್ತಿಲ್ಲೆ.

ಆರ್ದ್ರತೆಯ ಹೇಳುವಾಗ “relative humidity” ಹೇಳ್ತವು. ವಾತಾವರಣಕ್ಕೆ ನೀರಿನ ಆವಿಯ ಸೇರಿಸಿಗೊಂಡು ಹೋದರೆ,(ಮಳೆಗಾಲಲ್ಲಿ ಅಪ್ಪ ಹಾಂಗೆ) ಒಂದು ಸಮಯ ಅಪ್ಪಗ ಅದು ಪರಿಪೂರ್ಣ (saturate) ಆವುತ್ತು.
ನಂತ್ರ ಆ ವಾತಾವರಣಕ್ಕೆ ನೀರಿನ ತೆಕ್ಕೊಂಬಲೆ ಎಡಿತ್ತಿಲ್ಲೆ.
ಈ ಸ್ಥಿತಿಲಿ ಇಪ್ಪದಕ್ಕೆ 100% ಆರ್ದ್ರತೆ ಹೇಳಿ ತೆಕ್ಕೊಂಡು ಬಾಕಿ ಇಪ್ಪ ದಿನದ ಆರ್ದ್ರತೆಯ ಇದಕ್ಕೆ ಹೋಲಿಸಿ ಹೇಳುವದೇ relative humidity.
ಮಳೆಗಾಲಲ್ಲಿ ಇದು 85-90% ವರೇಗೆ ಹೋಪದು ಇದ್ದು. ಬೇಸಿಗೆ ಕಾಲಲ್ಲಿ 35-40 ಕ್ಕೆ ಇಳಿವದು ಇದ್ದು. (ಚಿತ್ರ 2 ಬಲತ್ತು ಕೆಳ-ಇದಕ್ಕೆ ಇಪ್ಪ ಉಪಕರಣ)

ಈಗ ಎಲ್ಲದಕ್ಕೂ ಅಟೋಮೇಟಿಕ್ ಉಪಕರಣಂಗೊ ಇದ್ದು.
ಅದು ಪ್ರತಿ ನಿಮಿಷಕ್ಕೆ ಬೇಕಾರೂ ಎಲ್ಲಾ ಮಾಹಿತಿಗಳ ಸಂಗ್ರಹಿಸಿ ಮಡುಗುತ್ತು. ಹೀಂಗಿಪ್ಪ ಮಾಹಿತಿ ಸಂಗ್ರಹಕ್ಕೆ “Data Logger” (ಚಿತ್ರ 3) ಹೇಳ್ತವು. ಬೇಕಾದಪ್ಪಗ ಇದರಿಂದ ಸಂಗ್ರಹಿಸಿದ ಮಾಹಿತಿಗಳ ಉಪಯೋಗಕ್ಕೆ ತೆಕ್ಕೊಂಬಲೆ ಆವುತ್ತು.

ಹವಾಮಾನ ಮುನ್ಸೂಚನೆ  INSAT ನ KALPANA-1 ಮೂಲಕ ಸಿಕ್ಕುತ್ತು (ಚಿತ್ರ 4).
ಇದರಿಂದಾಗಿ ಯಾವಾಗ ಎಲ್ಲಿ ಹೇಂಗಿಪ್ಪ ಹವಾಮಾನ ಇಕ್ಕು ಹೇಳಿ ಹವಾಮಾನ ಇಲಾಖೆಯವು
(INDIAN METEOROLOGICAL DEPARTMENT) ತಿಳುಸುತ್ತವು.
ಅವರ ವೆಬ್ ಸೈಟ್ : http://www.imd.gov.in/

ಕೀರ್ತಿ ಮಾಣಿ ಅರ್ತ ಆಯಿದು ಹೇಳಿಂಡು ಹೋಯಿದ. ಸಂಶಯ ಇದ್ದರೆ ಕೇಳ್ಲೆ ಬತ್ತೆ ಹೇಳಿದ್ದ.

ನಿಂಗೊಗೆ ಹೇಂಗೆ ಆತು, ತಿಳಿಸಿ.

ಚಿತ್ರಂಗೊ:

ಗಾಳಿ ಮತ್ತೆ ಮಳೆಯ ಅಳವದು ಹೇಂಗೆ?, 5.0 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಅಜ್ಜಕಾನ ಭಾವ

  ಗಾಳಿ ಬಿಡುದರ ಅಂದಾಜು ಮಾಡುದು ಹೇಂಗೆ ಹೇಳಿ ಬಲ್ನಾಡು ಮಾಣಿ ಲೆಕ್ಕ ಹಾಕಿಯೊಂಡು ಇದ್ದನಡ..

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  raghumuliya

  ಎಂಗಳ ಟೇರೇಸಿನ ವಿಸ್ತೀರ್ಣ 1000 ಸ್ಕ್ವೇರ್ ಫೀಟ್ ಇಪ್ಪದರಲ್ಲಿ ಒಂದು ಮಳೆಗಾಲಲ್ಲಿ ಸಾಧಾರಣ 3000 ಮಿಲ್ಲಿ ಮೀಟರ್ ಮಳೆ ಬಂದಿಪ್ಪಗ ಎಷ್ಟು ಮಳೆ ನೀರು ಹರುದು ಹೋದಿಕ್ಕು?
  ೨೭೫೪೯೦ ಲೀಟರು ಹೇಳಿ ಎನ್ನ ಲೆಕ್ಕ.ಸರಿಯೋ ? ಮಾಹಿತಿ ತುಂಬಾ ಲಾಯಿಕ್ಕಿದ್ದು ಅಪ್ಪಚ್ಚಿ,ಧನ್ಯವಾದಂಗೋ.

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ಲೆಕ್ಕ ಸರಿ ಇದ್ದು. ಇದರ ಎಲ್ಲಾ ಹಿಡುದು ಮಡುಗಲೆ ಎಡಿಗಾರೆ (?) ನವಗೆ ಒಂದು ವರ್ಷಕ್ಕೆ ಸಾಕಕ್ಕು (ದಿನಕ್ಕೆ 750 ಲೀಟರ್ ಲೆಕ್ಕಲ್ಲಿ)

  [Reply]

  ಮುಳಿಯ ಭಾವ

  raghumuliya Reply:

  ಒಪ್ಪೆಕ್ಕಾದ್ದೆ.ಆದರೆ ವರುಷದ ಅರೆವಾಶಿ ಮಳೆನೀರಿನ ಹಿಡುದು ಮಡುಗೆಕ್ಕಾರು, ೧೫೦೦೦೦ ಲೀಟರು ನೀರು ಹಿಡಿತ್ತಷ್ಟು ದೊಡ್ಡ ಟ್ಯಾಂಕಿನ ವ್ಯವಸ್ಥೆ ಮಾಡೆಕ್ಕಲ್ಲದ?

  [Reply]

  VA:F [1.9.22_1171]
  Rating: 0 (from 0 votes)
 3. ಚುಬ್ಬಣ್ಣ
  ಚುಬ್ಬಣ್ಣ...

  ಯೋ… ದೇವರೇ…!!!
  ಎ೦ತೆಂತೆಲ್ಲಾ ಕ೦ಡು ಹಿಡ್ದವಪ್ಪಾ… ಭಾರಿ ಲೆಕ್ಕಾಚಾರ ಇದ್ದು….
  ಈ ವಿಚಾರಾ ತಿಳುಶಿ ಕೊಟದಕ್ಕೆ ಧನ್ಯವಾದಗಳು ಅಪ್ಪಚ್ಚಿ….. 😛
  ಆನು ಪೇಟೆಗೆ ಹೊಪಲೆ ಇದ್ದು ಹೇಳಿರೆ, ಬೇಗಿಲಿ ಒ೦ದು ಸಣ್ಣ ಕೊಡೆಮಡಿಕೊಳ್ಸು, ಮಳೆಗಾಲಲ್ಲಿ ಅ೦ತು ಒ೦ದು ದೊಡ್ಡ ಅಜ್ಜ೦ದ್ರ ಕೊಡೆಬೇಕಾವುತಿದಾ ಅಲ್ಲದ್ರೆ ಪೂರ ಚೆಂಡಿ… :) . 😛

  ಇಲ್ಲಿವರೆಗೆ, ದೂರಲ್ಲಿ ಕಾ೦ಬ ಮೋಡ ನೋಡಿಗೊಂಡು, ಗುಡ್ಡೆ ಕೊಡಿಲಿ ಕಾ೦ಬ ತೆ೦ಗಿನ ಮರದ ಗರಿಗೊ ನೋಡಿ ಎಷ್ಟು ಮಳೆ ಗಾಳಿ ಬಕ್ಕು ಹೆಳಿ ಅ೦ದಾಜಿ ಮಡಿಗೊ೦ಡಿತ್ತೆ..
  ಮತ್ತೆ ಈ ದನ೦ಗಳ ಮಳೆಗೆ ಹೆರಬಿಟ್ರೆ ಭಾರಿ ಕಷ್ಟ, ಪಾಪ…
  ಮೇದೊ೦ಡು ಗುಡ್ಡೆ ಗುಡ್ಡೆ ಹೊವುತ್ತವು, ಮತ್ತೆ ಹುಡುಕೆ೦ಡೂ ಹೊಪದು ಬಾರಿ ತೊ೦ದರೆ…. 😛

  ಇನ್ನು ಮು೦ದೆ….. ಅದು ಎ೦ತಪಾ ಓಟೆ ಹಾ೦ಗೆ.. ?? ಹಾ.. Rain Gauge.. 😛 ಒ೦ದು ತ೦ದು.. ಕೊಟ್ಟಗೆಲಿ ಮಡುಗೆಕು..
  ಮಾಳೆಯ ಸುಚನೆ ಬ೦ದಪ್ಪಗ ಓಡಿಹೋಗಿ ಜಾಲಿಲಿ ಮಡುಗೆಕ್ಕು… :)
  ಹಾ… ಹ೦ಗೆ ಒ೦ದು.. ಆನೆಯೋ, ಮೀಟರೋ ಎಂತ್ಸೋ ಕರ್ಮ (anemometer) ತ೦ದು ಜಾಲ್ಲಿ ಕುತ್ತಿ ಮಡುಗೆಕ್ಕು…
  ಇದರಿ೦ದ ಮಳೆ ಮುನ್ಸೂಚನೆ ನೋಡ್ಲೆ ಸುಲಬಾತು..
  ಹಾಂಗೆ ಅಪ್ಪಚ್ಚಿ ಕೊಟ್ಟ ಸ೦ಕೊಲೆ ನೋಡಿರೆ ಸಾಕು, ಎಲ್ಲಾ ತಿಳಿತ್ತು ಇದಾ…. 😛 😀

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  (ಇದರಿ೦ದ ಮಳೆ ಮುನ್ಸೂಚನೆ ನೋಡ್ಲೆ ಸುಲಬಾತು..)

  rain gauge ಮಳೆಯ ಮುನ್ಸೂಚನೆ ಕೊಡ. ಬಂದದು ಎಷ್ಟು ಲೆಕ್ಕ ಹಾಕಲೆ ಮಾತ್ರ

  [Reply]

  VA:F [1.9.22_1171]
  Rating: 0 (from 0 votes)

  ಸುನಿತಾ Reply:

  ಒಪ್ಪಣ್ಣ ಕೊಟ್ಟ ಮಾಹಿತಿ ಲಾಇಕ ಇದ್ದು…ಇದರೋತ್ತಿನ್ಗೆ ಮಳೆ ನೀರಿನ ಸಂಗ್ರಹಣೆ ಬಗ್ಗೆದೆ ಮಾಹಿತಿ ಕೊಟ್ರೆ ಮತ್ತುದೆ ಒಳ್ಳೇದು ಹೇಳಿ ಅನ್ಸುತ್ತೆನಗೆ… ಎಲ್ಲರು ಅದರ ಅನುಸರಿಸಿರೆ ನೀರಿನ ಉಳಿತಾಯದ ಯೋಜನೆಗೆ ನಮ್ಮ ಕೊಡುಗೆಯುದೆ
  ಆವತು ಹೇಳಿ ಎನ್ನ ಅಭಿಪ್ರಾಯ…

  [Reply]

  VA:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ

  ಅಪ್ಪಚ್ಚಿ ತುಂಬಾ ಒಳ್ಳೆ ಮಾಹಿತಿ. ಎನಗೂ ಇದರ ಹೇಂಗೆ ಅಳೆತ್ತವಪ್ಪ ಹೇಳಿ ಆಗಿಯೊಂಡಿತ್ತು. ಈಗ ಸಂಶಯ ಪರಿಹಾರ ಆತು.
  ಆದರೆ ಮಳೆಯ ಪ್ರಮಾಣ ಒಂದು ಊರಿನ ಒಳವೇ, ಜಾಗೆಂದ ಜಾಗಗೆ ಬದಲಾವುತ್ತಲ್ಲದ? [ಈಗ ಕೊಣಾಜೆಲಿ ಮಳೆ ಬಂದೊಂಡಿದ್ದರೆ ಅದು ಕೊಟ್ಟಾರಲ್ಲೂ ಬಂದೊಂಡಿಕ್ಕೂಳಿ ಹೇಳ್ಳೆಡಿಯ]
  ಅವ್ವು ಮಳೆ ಮಾಪಕವ ಯಾವ ಪ್ರದೇಶಲ್ಲಿ ಮಡುಗಿ ನೋಡುತ್ತವು ಅಂಬಗ?

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  (ಧನ್ಯವಾದ ಅನುಶ್ರೀ
  ಮಳೆ ಎಲ್ಲಿ ಬಂದದೋ ಅಲ್ಲಿಯಾಣದ್ದು ಮಾತ್ರ ಅಳದು ಹೇಳುವದು. ಎಲ್ಲ ದಿಕ್ಕೆಯೂ ಒಂದೇ ಸಮಯಲ್ಲಿ ಒಂದೇ ರೀತಿ ಇರ.
  ಮಳೆ ಮಾಪಕ ಹೆಚ್ಚಾಗಿ ಟೇರೇಸ್ ಮೇಗೆ ಮಡುಗುತ್ತವು. ಮಳೆ ಬೀಳುವಾಗ ಅದಕ್ಕೆ ಮರಂಗಳೋ, ಬೇರೆ ಕಟ್ಟಡಂಗಳೋ, ಅಥವಾ ಬೇರೆ ಎಂತದೂ ಅಡ್ಡ ಬಾರದ್ದ ಹಾಂಗೆ ಮಡುಗಿರೆ ಆತು.

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಮಾವ°

  ಮಾವಾ,,,ಲೇಖನ ಓದಿಯಪ್ಪಗ ಶಾಲೇಲಿ ಪಾಠ ಕೇಳಿದ ಹಾಂಗೆ ಆತು…ಒಳ್ಳೆ ಮಾಹಿತಿ…ವಿಷಯಂಗ ಮತ್ತೆ ಪುನರಾವರ್ತನೆ ಆತು. ಧನ್ಯವಾದ ಮಾವ.

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಗೋಪಾಲ ಮಾವ

  ಗಾಳಿ ಹಾಂಗೂ ಮಳೆ ಅಳೆವ ಬಗ್ಗೆ ಒಳ್ಳೆ ಮಾಹಿತಿಯುಳ್ಳ ಲೇಖನ. ಗೊಂತಿಲ್ಲದ್ದ ಹಲವಾರು ವಿಷಯಂಗೊ ಗೊಂತಾತು ಶರ್ಮಪ್ಪಚ್ಚಿ.
  ಡಾಮರು ಮಾರ್ಗಂಗಳಲ್ಲಿ ಹೊಂಡ ಬೀಳ್ತಕ್ಕೆ ಸುಮ್ಮನೇ ಮಳೆಯ ದೂರು ಹಾಕಿ ಪೈಸೆ ಗುಳುಂ ಮಾಡ್ತ ಕಂಟ್ರಾಟು (ಕೆಟ್ಟ ಪದ ಬಳಕೆ ಮಾಡ್ಳಾಗ ಹೇಳಿ ಅಷ್ಟೇ ಹೇಳಿದೆ ಅಷ್ಟೆ!) ಗವಕ್ಕೆ, ರಾಜಕಾರಣಿಗವಕ್ಕೆ ಎಂತ ಮಾಡುವೋ ಹೇಳಿ ?

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  {ರಾಜಕಾರಣಿಗವಕ್ಕೆ ಎಂತ}
  ಬೊಳುಂಬು ಮಾವ ನಿಂಗೊ ಹೀಂಗೆ ಹೇಳಿರೆ ಗುಣಾಜೆ ಮಾಣಿ “ಮಾನ ನಷ್ಟ ಮೊಕದ್ದಮೆ” ಹಾಕುಗು..

  [Reply]

  VN:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಶರ್ಮಪ್ಪಚ್ಚಿ ಬರವಲೆ ಸುರು ಮಾಡಿದವು ಹೇಳಿ ಆದರೆ ಅದರಲ್ಲಿ ಸಂಶಯ ಬಾರದ್ದ ರೀತಿಲಿ ಅಷ್ಟೂ ಚೆಂದಕ್ಕೆ ವಿವರ್ಸಿ ಬರೆತ್ತವು. ಸರಿಯಾಗಿ ಓದಿದವಂಗೆ ಅರ್ಥ ಅಪ್ಪ ಹಾಂಗೆ!!
  ನೀರು ಎಷ್ಟು ಬೀಳ್ತು ಹೇಳಿ ಗೊಂತಪ್ಪದು ಹೇಳಿದರೆ ನಮ್ಮ ಮನೆ, ಜಾಲಿಲಿ ಎಷ್ಟು ನೀರು ತೋಡಿನ್ಗೆ ಸೇರಿತ್ತು ಹೇಳಿದೆ ಆತಲ್ಲದಾ?
  ಅದರ ನೋಡಿಗೊಂಡು ನಾವು ನಮ್ಮ ಲೆಕ್ಕಲ್ಲಿ ಭೂಮಿಗೆ ಎಷ್ಟು ಇಂಗುಸುಲೆ ಅಕ್ಕು ಹೇಳಿದೆ ನೋಡಿಗೊಂಬಲಾತು. ಒಳ್ಳೆ ಮಾಹಿತಿ ಎಲ್ಲೋರಿಂಗೂ ಸಿಕ್ಕಿತ್ತು.
  ಅಪ್ಪಚ್ಚಿ, ತುಂಬಾ ಲಾಯಕ ಬರದ್ದಿ ಆತೋ? ಇನ್ನು ಇನ್ನಾಣ ವಿಷಯ ಅಪ್ಪಚ್ಚಿ ಎಂತ ಹೇಳುಗಪ್ಪಾ ಬೈಲಿಂಗೆ ಹೇಳುವ ಕುತೂಹಲ…
  ಹೊಸ ವಿಷಯ ಬೇಗ ಬರಲಿ…..

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ಧನ್ಯವಾದ ಶ್ರೀ..
  ನವಗೆ ವರ್ಷಕ್ಕೆ ಸರಾಸರಿ 3000 ಮಿ.ಮೀ (ಸುಮಾರು 3 ಮೀಟರ್) ನಷ್ಟು ಎತ್ತರಕ್ಕೆ ಮಳೆ ಬತ್ತು. ಈ ಎಲ್ಲಾ ನೀರಿನ ಹಿಡುದು ಮಡುಗಲೆ ಪ್ರಾಯೋಗಿಕವಾಗಿ ಸಾಧ್ಯ ಇಲ್ಲೆ. ಆದರೂ ಒಪ್ಪಣ್ಣ ಹೇಳಿದ ಹಾಂಗೆ ನೀರಿನ ಇಂಗಿಸುವ ಬಗ್ಗೆ ಎಲ್ಲರೂ ಆಲೋಚನೆ ಮಾಡ್ಲಕ್ಕು

  [Reply]

  VA:F [1.9.22_1171]
  Rating: +1 (from 1 vote)
 8. ಗಬ್ಬಲಡ್ಕ ಕೇಶವ

  ಲೇಖನ ಒಳ್ಳೆದಾಯಿದು….. ಎನ್ನ ಅಜ್ಜ ಇಪ್ಪಗ ಅವ್ವು ಮಳೆಗಾಲಲ್ಲಿ ಒಂದು ಕುಪ್ಪಿಗೆ ಅರಿಪ್ಪೆ (ಕುಪ್ಪಿಯಷ್ಟೇ ಅಗಲದ) ಮಡುಗಿ ಬಾವಿ ಕಟ್ಟೆಯ ಮೇಲೆ ಮಡುಗುಗು…..

  ಅದರ ನೋಡಿಯೊಂಡು ಎಷ್ಟು ಮಳೆ ಆಯಿದು ಈಸರ್ತಿ ಹೇಳಿ ಹೇಳುಗು……..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಬೋಸ ಬಾವಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವಶ್ರೀಅಕ್ಕ°ಎರುಂಬು ಅಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಒಪ್ಪಕ್ಕಸುವರ್ಣಿನೀ ಕೊಣಲೆಅಜ್ಜಕಾನ ಭಾವಯೇನಂಕೂಡ್ಳು ಅಣ್ಣವೆಂಕಟ್ ಕೋಟೂರುದೊಡ್ಡಭಾವಚುಬ್ಬಣ್ಣವಸಂತರಾಜ್ ಹಳೆಮನೆಕಜೆವಸಂತ°ಅನು ಉಡುಪುಮೂಲೆಅಡ್ಕತ್ತಿಮಾರುಮಾವ°ಮಾಲಕ್ಕ°ಬೊಳುಂಬು ಮಾವ°ಅನುಶ್ರೀ ಬಂಡಾಡಿಡಾಮಹೇಶಣ್ಣಡೈಮಂಡು ಭಾವಕಳಾಯಿ ಗೀತತ್ತೆವಾಣಿ ಚಿಕ್ಕಮ್ಮಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ