ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ

March 2, 2011 ರ 10:01 amಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ಶಿವರಾತ್ರಿ.
ನಮ್ಮ ಊರಿನ ಎಲ್ಲಾ ಶಿವ ದೇವಸ್ಥಾನಂಗಳಲ್ಲಿಯೂ ಜಾತ್ರೆಯ ಗೌಜಿ.
ನಮ್ಮ ಮಂಡಲದ ದೇವಸ್ಥಾನ ಗೋಕರ್ಣಲ್ಲಿ ಒಂದು ವಾರದ ಹಬ್ಬದ ಗೌಜಿ!

ನಿತ್ಯವೂ ಕೋಟಿರುದ್ರದ ಸಂಭ್ರಮದ ಎಡಕ್ಕಿಲಿ, ಗೋಕರ್ಣದ ಜಾತ್ರೆಯೂ ಸೇರಿ ಗೌಜಿ ಅಪ್ಪಗ ನಾವೆಲ್ಲರೂ ಒಂದರಿ ಗೋಕರ್ಣವ ನೆಂಪು ಮಾಡೆಡದೋ?
ಮೊನ್ನೆ ಶರ್ಮಪ್ಪಚ್ಚಿಯವು ಗೋಕರ್ಣಕ್ಕೆ ಹೋಗಿ ರುದ್ರ ಹೇಳಿಕ್ಕಿ ಬಂದವು.
ಗೋಕರ್ಣದ ಮಹಾ ಶಿವರಾತ್ರಿಯ ದಿನ ಶರ್ಮಪ್ಪಚ್ಚಿಯ ವಿಶೇಷ ಲೇಖನ, ಬೈಲಿಂಗಾಗಿ..

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ :

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಹೇಳಿ ನಮ್ಮ ಬಾಲಣ್ಣ, ಶಿಬಿರ ಗಾನ ಹೇಳ್ಲೆ ಸುರು ಮಾಡಿ ಅಪ್ಪಗ ಅದಕ್ಕೆ ಸ್ವರ ಸೇರಿಸಿದವರಲ್ಲಿ 9 ವರ್ಷದ ಮಾಣಿಂದ ಹಿಡುದು, ತಲೆ ಹಣ್ಣಾದ ಪ್ರಾಯಸ್ಥರೂ ಇತ್ತಿದ್ದವು.
ಈ ಸಮಾಜಕ್ಕೆ ನಮ್ಮಿಂದ ಎಡಿಗಾದ ಸೇವೆಯ ನಿಷ್ಕಲ್ಮಶ ಮನಸ್ಸಿಂದ ಮಾಡೆಕ್ಕು, ಆ ಯಜ್ಞಲ್ಲಿ ನಮ್ಮ ನಾವು ತೊಡಗಿಸಿಂಡು ಅದರಲ್ಲಿ ಸಮಿಧೆ ಅಯೆಕ್ಕು ಹೇಳುವ ಉದಾರ ತತ್ವ ತಿಳಿಶಿ ಕೊಡುವ ಈ ಪದ್ಯ ಕೇಳಿ ಅಪ್ಪಗ ಆರಿಂಗಾರೂ ಒಂದರಿ ಮೈ ರೋಮಾಂಚನ ಆಗದ್ದೆ ಇರ, ಸ್ವರ ಸೇರುಸದ್ದೆ ಇರವು.
ಅಷ್ಟೊಂದು ಶಕ್ತಿ ಇದ್ದು ಅದರಲ್ಲಿ. ಬೆಂಕಿಗೆ ಆಹುತಿ ಅಪ್ಪ ಸಮಿಧೆ, ಆನು ಉರಿತ್ತಾ ಇದ್ದೆ ಹೇಳಿ ಜಾನ್ಸುತ್ತಿಲ್ಲೆ.
ಯಜ್ಞದ ಹವಿಸ್ಸಿನೊಟ್ಟಿಂಗೆ ಭಾಗಿಯಾಗಿ ಪುಣ್ಯ ಕಾರ್ಯಲ್ಲಿ ಪಾಲ್ಗೊಳ್ಳುವ ಅವಕಾಶ
ಎನಗೂ ಸಿಕಿತ್ತನ್ನೆ ಹೇಳಿ ಜಾನ್ಸುತ್ತಡ.
ಸಮಾಜಕ್ಕೆ ನಮ್ಮ ಸೇವೆ ಕೂಡಾ ಇದೇ ರೀತಿ ಆಗಿರೆಕ್ಕು.

ನವಗೆಲ್ಲಾ ಗೊಂತಿಪ್ಪ ವಿಶಯವೇ.
ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಯವು ಶಿಷ್ಯ ಸಮೂಹವ ಒಂದು ಸನ್ಮಾರ್ಗಲ್ಲಿ ಕರಕ್ಕೊಂಡು ಹೋವ್ತಾ ಇದ್ದವು.
ಈಗಾಣ ವಿದ್ಯಾಭ್ಯಾಸದೊಟ್ಟಿಂಗೆ, ನಮ್ಮ ಮೂಲ ವಿದ್ಯೆಯ ಒಳುಶಿ ಬೆಳೆಶೆಕ್ಕು ಹೇಳುವದೇ ಅವರ ಸಂಕಲ್ಪ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು”.
ನವಗೂ ಹಾಂಗೆ ಅಲ್ಲದಾ. ಮೂಲ ಸಂಸ್ಕೃತಿಯ ಬಿಡದ್ದೆ, ಈಗಾಣದ್ದರಲ್ಲಿಯ ಒಳ್ಳೆದರ ತೆಕ್ಕೊಂಡು ಎಲ್ಲರೂ ಎಲ್ಲಾ ರೀತಿಲಿಯೂ ಸಾಕ್ಷರರಾಯೆಕ್ಕಾದ್ದೇ ಇಂದ್ರಾಣ ಅವಶ್ಯಕತೆ.
ಇದರದ್ದೇ ಒಂದು ಅಂಗ, ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಿಲಿ ಕೋಟಿರುದ್ರ ಆಯೆಕ್ಕು ಹೇಳುವ ನಮ್ಮ ಶ್ರೀ ಶ್ರೀಗಳ ಸಂಕಲ್ಪ.
ಈ ಒಂದು ಆಂದೋಲನಲ್ಲಿ ಭಾಗವಹಿಸುವ ಪುಣ್ಯ ನವಗೆ ಸಿಕ್ಕಲೆ ಮೂಲ ಪ್ರೇರಣೆ ಶ್ರೀ ಶ್ರೀಗಳೇ ಹೇಳುವದಕ್ಕೆ ಎರಡು ಮಾತಿಲ್ಲೆ.

*****

ಗೋಕರ್ಣಲ್ಲಿ ರುದ್ರ ಸಮರ್ಪಣೆ ಆಯೆಕ್ಕು ಹೇಳಿ ಪ್ರೇರಣೆ ಬಂದು ಹೆರಟದು ೪೩ ಜೆನಂಗಳ ಎಂಗಳ ತಂಡ. ಎಲ್ಲರೂ ಒಟ್ಟಿಂಗೆ ಹೋದರೆ, ಪರಿಚಯವೂ ಆವುತ್ತು, ಸಂವಹನವೂ ಆವ್ತು ಹೇಳ್ತ ದೃಷ್ಟಿಂದ, ರಾಜ್ಯ ಸುವರ್ಣ ಸಾರಿಗೆ ಬಸ್ಸನ್ನೇ ಏರ್ಪಾಡು ಮಾಡಿ, ಮಂಗಳೂರಿನವರನ್ನೂ ಸೇರಿಸಿಂಡು ಹೆರಟ ತಂಡದ ಕಾರ್ಯ ನಿರ್ವಹಣೆ ಎಂಗಳ ವಲಯದ ಪ್ರಸಾರ ವಿಭಾಗದ ಮುಖ್ಯಸ್ಥರೇ ಆದ, ಶ್ರೀ ಬಾಯಾಡಿ ಬಾಲಕೃಷ್ಣ ಭಟ್.
ಸಮಾನ ಮನಸ್ಕರ ಗುಂಪು ಮಾಡಿ, ಹಲವಾರು ಚಾರಣ ಕಾರ್ಯಕ್ರಮಂಗಳ ನಿರ್ವಹಿಸಿದ ಅನುಭವಿ. ಸಂಘಟನೆ ಮಾಡಿ ಕಾರ್ಯಕ್ರಮದ ರೂಪು ರೇಷೆ ಮಾಡುವದರಲ್ಲಿ ಎತ್ತಿದ ಕೈ.

*****

ಸೂರ್ಯಾಸ್ತ ಆದಪ್ಪಗ ಹೆರಟ ಎಂಗಳ ಪ್ರಯಾಣ, ಕುಂದಾಪುರಕ್ಕೆ ಎತ್ತುವಾಗ ಸಮಯ ಸುಮಾರು 9 ಘಂಟೆ ಇರುಳು.

ಗೋಕರ್ಣಲ್ಲಿ ರುದ್ರ ಸಮರ್ಪಣೆ

ಹೊತ್ತೋಪಗ ಆಪೀಸಿಂದ ಮನಗೆ ಎತ್ತಿಕ್ಕಿ ಗಡಿಬಿಡಿಲಿ ಹೆರಟು ಬಂದವಕ್ಕೆ ಹೊಟ್ಟೆ ತಾಳ ಹಾಕುವ ಸಮಯ.

ಊಟದ ಏರ್ಪಾಡು ಕಲ್ಯಾಣ ಮಂಟಪಲ್ಲಿ.

ಎಂಗಳ ಗೌಜಿ ನೋಡಿದ ದಾರಿ ಕರೇಯಾಣ ಮನೆಯವು ದಿಬ್ಬಣ ಬತ್ತಾ ಇದ್ದಾ ನೋಡ್ಲೆ ಹೆರೆ ಬಂದು ನಿಂದವು.
ಅವರ ಕುತೂಹಲಕ್ಕೆ ತಣ್ಣೀರು ಬಿದ್ದಿಕ್ಕು ಹೇಳಿ ಪ್ರತ್ಯೇಕ ಹೇಳೆಕ್ಕೂಳಿ ಇಲ್ಲೆನ್ನೆ. ಮದಿಮ್ಮಾಯ ಮದಿಮ್ಮಾಳು ಇಲ್ಲದ್ದೆ ಇದೆಂತ ದಿಬ್ಬಾಣ ಜಾನ್ಸಿ, ಅವು ಒಳ ಹೊಕ್ಕರೂ, ಅವರ ನಾಯಿ ಸ್ವಾಗತ ಭಾಷಣ ಮಾಡುವದರ ನಿಲ್ಸಿದ್ದಿಲ್ಲೆ !!!.

ಭರ್ಜರಿ ಊಟದ ವೆವಸ್ಥೆ. ಅವರ ಮನೆ ಜೆಂಬಾರಕ್ಕೆ ಹೋದ ಹಾಂಗೇ ಅನುಭವ ಆತು. ಹಾಲ್ ನ ಯಜಮಾನ್ರು ಖುದ್ದಾಗಿ ನಿಂದು, ಒತ್ತಾಯ ಮಾಡಿ ಸ್ವೀಟ್, ಪಾಯಸ, ಪೋಡಿ ಬಳುಸಿದವು. ಇಲ್ಲಿಯೇ ನಿಂದು ಮರುದಿನ ಉದಿಯಪ್ಪಗ ಹೋಪಲಕ್ಕು ಹೇಳಿ ಹೇಳಿಕೆಯೂ ಬಂತು ಅವರಿಂದ.
ರೆಜ ಹಳಬರಿಂಗೆ, ಮಾವನ ಮನೆಯ ಸುರುವಾಣ ಸಮ್ಮಾನಂಗಳ ನೆಂಪುಮಾಡಿಸಿತ್ತು.

ಬಸ್ಸಿಲ್ಲಿ ಕೂದು ರೆಜ ಹೊತ್ತು ಅಪ್ಪಗ ಹೆಚ್ಚಿನವಕ್ಕೂ ಒರಕ್ಕು ಬಪ್ಪಲೆ ಈ ಊಟ ಸಹಾಯ ಮಾಡಿತ್ತು ಹೇಳ್ತಲ್ಲಿ ಯೇವ ಸಂಶಯವೂ ಇಲ್ಲೆ.

ಎಂಗಳಿಂದ ಮೊದಲೇ ಉದಿಯಪ್ಪಗಳೇ ಇಲ್ಲಿಂದ ಹೋದವು 3 ಜೆನಂಗೊ, ಹಸೆ, ವಸ್ತ್ರ ರೆಡಿ ಮಾಡಿ, ಮನುಗಲೆ ಇಪ್ಪ ವೆವಸ್ಥೆ  ಗೋಕರ್ಣಲ್ಲಿ ಮಾಡಿತ್ತಿದ್ದವು.
ಬಸ್ಸಿಲ್ಲಿ ಈಗಳೇ ಒರಗಿರೆ ಅಲ್ಲಿ ವೆವಸ್ಥೆ ಮಾಡಿದ್ದು ಪ್ರಯೋಜನಕ್ಕೆ ಇಲ್ಲದ್ದ ಹಾಂಗೆ ಅಕ್ಕನ್ನೇ, ಹೇಳಿದ್ದು ಆರ ಕೆಮಿಗೂ ಬಿದ್ದ ಹಾಂಗೆ ಕಂಡತ್ತಿಲ್ಲೆ !!!.

*****

ಗೋಕರ್ಣಕ್ಕೆ ಎತ್ತುವಾಗ ನೆಡು ಇರುಳಾಣ 1:30 ಗಂಟೆ. ಉಳಕ್ಕೊಂಬ ವೆವಸ್ಥೆ, ಕೋಟಿ ತೀರ್ಥದ ಹತ್ರೆ ಇತ್ತೀಚೆಗೆ ಕಟ್ಟಿದ ಹಾಲಿಲ್ಲಿ.

ವಿಶಾಲವಾದ ಹಾಲ್. ಒಂದು ನೂರು ಜೆನಂಗೊ ಇದ್ದರೂ ಮನುಗಲೇ ಬೇಕಾಷ್ಟು ಜಾಗೆ. ಎಂಗೊ ಹೋಪಗ ಅಲ್ಲಿ ಹೀಂಗೆ ರುದ್ರ ಹೇಳ್ಳೆ ಬೊಂಬಾಯಿಂದ  ಬಂದ ಕೆಲವು ಜೆನಂಗೊ ಇತ್ತಿದ್ದವು.
ಹೊತ್ತಲ್ಲದ್ದ ಹೊತ್ತಿಂಗೆ ಎತ್ತಿದ ಎಂಗಳ ಗಲಾಟೆ ಕೇಳಿದ ಆ ಜೆನಂಗೊ, ಅವರ ಒರಕ್ಕು ಹಾಳು ಮಾಡಿದ ಎಂಗಳ ಪರಂಚಿದ್ದು ಎಂಗೊಗೆ ಕೇಳಿದ್ದಿಲ್ಲೆ!!!

*****

ಒರಕ್ಕು ಬಂದವಕ್ಕೆ, ಉದೆಕಾಲ ಬೇಗ ಎದ್ದು ದೇವಸ್ಥಾನಕ್ಕೆ ಹೋಪ ತಯಾರಿ. ಬಾರದ್ದವಕ್ಕೆ ಸಮಯ ಎಷ್ಟು ಆತು ಹೇಳಿ ಅಂಬಗಂಬಗ ವಾಚು ನೋಡುವ ಕೆಲಸ. ಬಡಿವಲೆ ರೆಜ ನುಸಿಗಳೂ ಇತ್ತಿದ್ದವು.

6 ಘಂಟೆಗೇ ದೇವಸ್ಥಾನಲ್ಲಿ ಸಿಕ್ಕುತ್ತೆ ಹೇಳಿತ್ತಿದ್ದವು ಎಂಗೊಗೆ ರುದ್ರ ಕಲಿಶಿದ ಗುರುಗೊ.

ಬೆಶಿ ನೀರೇ ಆಯೆಕ್ಕಾದವು ರೆಜ ಕಾದು ಕೂದರೆ, ಬಾಕಿ ಇಪ್ಪವು, ಆಚಾರಕ್ಕೂ ಆತು ಸೌಕರ್ಯಕ್ಕೂ ಆತು ಹೇಳಿ ಕೋಟಿ ತೀರ್ಥಲ್ಲಿ ಮಿಂದೊಂಡು ಬಂದವು.
ಇನ್ನು ಕೆಲವು ಜೆನಂಗೊಕ್ಕೆ ಓಪನ್ ಬಾತ್ ರೂಂ.
ನಿಂಗಳ ಚೀಲಂಗಳ ಬೇಕಾರೆ ಇಲ್ಲಿ ಮಡುಗಿಕ್ಕಿ ಹೋಗಿ ಆದರೆ ಪೈಸೆ, ಮೊಬೈಲು ಎಲ್ಲಾ ತೆಕ್ಕೊಂಡೇ ಹೋಗಿ ಹೇಳಿ ಜಾಗ್ರತೆ ಹೇಳಿದವು ಅಲ್ಲಿ ಮೇಲುಸ್ತುವಾರಿ ನೋಡುವ ಹಿರಿಯರು.
ಭಟ್ಟಕ್ಕಳ ಮನೆಗಳ ಎಡೆಕ್ಕಿಲಿ ದಾರಿ ಆಗಿ, ಎಂಗಳ ಪ್ರಯಾಣ ದೇವಸ್ಥಾನಕ್ಕೆ ಎತ್ತಿತ್ತು.

ಪ್ರಶಾಂತ ಆಗಿಪ್ಪ ಜಾಗೆ ಆಯೆಕ್ಕು ಹೇಳಿ ಬಡಗ ಗೋಪುರಲ್ಲಿ ಹಸೆ ಹಾಕಿ ಸಾಲಾಗಿ ಕೂದೆಯೊ°.
ಲಘುನ್ಯಾಸ ಆಗಿ, ಏಕ ಸ್ವರಲ್ಲಿ ಸುರು ಮಾಡಿದೆಯೊ° ಓಂ ನಮೋ ಭಗವತೇ ರುದ್ರಾಯ….

******
ದೇವಸ್ಥಾನಕ್ಕೆ ಸುತ್ತು ಹಾಕುವರಲ್ಲಿ ಕೆಲವು ಜೆನಂಗೊಕ್ಕೆ ರುದ್ರ ಕೇಳಿ ಕೊಶೀ ಆಗಿ ಅಲ್ಲಿಯೇ ಕರೇಲಿ ನಿಂದು ಕೇಳಿದವು.
ಇನ್ನು ಕೆಲವು ಭಟ್ಟಕ್ಕೊ ಮಂತ್ರಕ್ಕೆ ಸರಿಯಾಗಿ ತೊಡಿ ಹನುಸಿಂಡು ಸುತ್ತು ಹಾಕುವದೂ ಕಂಡತ್ತು.  ಒಬ್ರು ಪ್ರಾಯದ ಹೆಮ್ಮಕ್ಕೊ, ಬ್ರಹ್ಮ ಸಭೆಗೆ ಭಕ್ತಿಲಿ ಕೈ ಮುಗುದಿಕ್ಕಿ ಮುಂದೆ ಹೋದವು.

ಎಲ್ಲರೂ ಸೇರಿ ಒಟ್ಟಿಂಗೆ ಹೇಳುವದಲ್ಲದ. ಸ್ವರ ರೆಜ ಎತ್ತರಲ್ಲಿ ಇತ್ತಿದ್ದು.

ಒಟ್ಟಿಂಗೆ ಹೆಚ್ಚು ಆವರ್ತನ ಹೇಳಿ ಅಭ್ಯಾಸ ಇಲ್ಲೆ. ಉದಿಯಪ್ಪಗಾಣ ತಿಂಡಿ ಕಾಪಿ ಎಂತ ಅಯಿದಿಲ್ಲೆ. ಹೊಟ್ಟೆಖಾಲಿ.

ಆವರ್ತನ ಆದ ಹಾಂಗೆ, ಕೆಲವು ಜೆನಂಗಳ ಸ್ವರ, ಮಧ್ಯಮಂದ ಮಂದ್ರಕ್ಕೆ ಇಳುದತ್ತು. ಇನ್ನು ಕೆಲವು ಜೆನಂಗೊ, ಮನಸ್ಸಿಲ್ಲಿ ಹೇಳಿದರೂ ಫಲ ಅಷ್ಟೇ ಇದ್ದು ಹೇಳಿ ತಿಳ್ಕೊಂಡಿದವು ಹೇಳಿ ಗೊಂತಾತು.
ಅಂತೂ 8:30 ಘಂಟೆ ಅಪ್ಪಗ ಉಪಹಾರಕ್ಕೆ ಹೆರಟೆಯೊ. ಅವಲಕ್ಕಿ ಉಪ್ಕರಿ, ಅವಲಕ್ಕಿ ಉಸುಳಿ, ಮೊಸರು, ಉಪ್ಪಿನ ಕಾಯಿ, ಕಾಪಿಯೋ ಚಾಯವೋ, ಬೇಕಾದ್ದು, ಬೇಕಾಷ್ಟು ಬಳುಸಿದವು. ಮರ್ಯಾದೆ ಮಾಡಿದರೆ ಹೊಟ್ಟೆ ಕೇಳೆಕ್ಕನ್ನೆ !!!

ಪುನಃ ಕೂದತ್ತು, ನಿಲ್ಸಿದ್ದರ ಮುಂದುವರ್ಸಲೆ.

ಚಾಣಿ ತಲೆಯವಕ್ಕೆ, ಮೋರೆ ತೊಳವಗ ಎಲ್ಲಿವರೆಗೆ ತೊಳೆಕ್ಕಾವ್ತು ಹೇಳಿ ಗೊಂತಾವ್ತಿಲ್ಲೆ ಅಡ – ಹಾಂಗೊಂದು ತಮಾಶೆ.
ಎಲ್ಲಿ ವರೆಗೆ ಈಪುತಿ (ವಿಭೂತಿ) ಉದ್ದೆಕ್ಕು ಹೇಳಿ ಕೂಡಾ ಗೊಂತಾವ್ತಿಲ್ಲೆ ಹೇಳಿ ಅದಕ್ಕೆ ಸೇರ್ಸಲೆ ಅಕ್ಕು ಹೇಳಿ ಅಂಬಗ ಗೊಂತಾತದ.
ಹಾಂಗಿಪ್ಪ ಹಿರಿಯ ತಲೆಯವು ಒಬ್ಬರು ಎಂಗಳ ಗೋಪುರಕ್ಕೆ ಬಂದವು. ದೊಡ್ಡ ಕಂಬಿಯ ಬ್ರಹ್ಮ ವಸ್ತ್ರ, ಕಚ್ಚೆ ಪಂಚೆ, ವಿಭೂತಿ ಅಡ್ಡ ನಾಮ. ನಿಂಗಳೊಟ್ಟಿಂಗೆ ಆನೂ ಸೇರುತ್ತೆ ಹೇಳಿದವು.
ನಮ್ಮ ಭಾಷೆ ಅವಕ್ಕೆ ಬತ್ತಿಲ್ಲೆ, ಅವರ ಭಾಷೆ ನವಗೆ ಅರಡಿಯ. ರುದ್ರ ಹೇಳ್ಲೆ ಭಾಷೆ ಒಂದೇ ಅಲ್ಲದ. ನವಗೆಂತ ತೊಂದರೆ. ಆಗಲಿ ಹೇಳಿದೆಯೊ. ಒಂದು ಆವರ್ತನ ಆತು. ಮತ್ತಾಣ ಆವರ್ತನಕ್ಕೆ ಎಂಗೊ ಸುರು ಮಾಡಿದೆಯೊ°.

ಅದಾ ಆ ಬ್ರಾಹ್ಮಣಂಗೆ ಎಂತದೋ ತಪ್ಪಿದ ಅನುಭವ. ಕೇಳಿಯೇ ಬಿಟ್ಟವು. ಒಂದರಿ ರುದ್ರ ಹೇಳಿಕ್ಕಿ ಒಂದು ಅನುವಾಕ ಚಮಕ ಹೇಳೆಕ್ಕಲ್ಲದಾ.
ನಿಂಗೊ ಪುನಃ ರುದ್ರಕ್ಕೆ ಎಂತಕೆ ಹೋದ್ದು ಹೇಳಿ.
ಎಂಗೊ ನಿಶ್ಚಯ ಮಾಡಿದ್ದೇ ಹಾಂಗೆ. ಎಕಾದಶ ರುದ್ರ ಆಗಿಕ್ಕಿ ಒಂದಾವರ್ತ ಚಮಕ ಹೇಳುವದು ಹೇಳಿ, ಅವಕ್ಕೆ ಅರ್ಥ ಅಪ್ಪ ಭಾಷೆಲಿ ಹೇಳಿದೆಯೊ°.

“ಹಾಂಗೆ ಕ್ರಮ ಇಲ್ಲೆ. ಒಂದು ಆವರ್ತನ ರುದ್ರ ಆಗಿಕ್ಕಿ ಒಂದು ಅನುವಾಕ ಚಮಕ ಆಯೆಕ್ಕೇ”, ಅವರದ್ದು ವಾದ.
ಅತಿ ರುದ್ರಹೇಳುವಾಗ ಉಪ್ಪು ಹಾಕಿದ್ದನ್ನೂ ತಿಂಬಲೆ ಆಗ ಹೇಳ್ತ ಮಾಹಿತಿಯೂ ಕೊಟ್ಟವು ಒಟ್ಟಿಂಗೆ.

ಎರಡು ಸರ್ತಿ ಹಿಂಗೆ ವಾದ ವಿವಾದ ಆತು, ಎಲ್ಲರಿಂಗೂ ಅರ್ಥ ಆದ ಆಂಗ್ಲ ಭಾಷೆಲಿ.
ಹೆಚ್ಚು ವಾಗ್ವಾದ ಮಾಡ್ಲೆ ಎಂಗೊ ತಯಾರು ಇಲ್ಲೆ.
ಈಗ ಅವಕ್ಕೆ ಅರ್ಥ ಆಗದ್ದ ನಮ್ಮ ಭಾಷೆಲಿಯೇ ಹೇಳಿದೆಯೊ “ನಾವು ಮುಂದುವರುಸುವೊ°”

ಓಂ ನಮೋ ಭಗವತೇ ರುದ್ರಾಯ….

ಪುಣ್ಯಾತ್ಮ ಕೂಬಲೆ ಹಾಸಿದ ಹಸೆಯ ತೆಕ್ಕೊಂಡು ಹೆರಟದೇ.

ಇವು ಆರ ಹತ್ರೆ ಕೋಪಿಸಿಗೊಂಬದು !!!.
ಹೋದರೆ ಹೋಗಲಿ. ನಾವಾಗಿ ದೆನುಗೊಳಿ ಹಸೆ ಹಾಕಿ ಅಸರಿಂಗೆ ಕೊಟ್ಟು ಕೂರಿಸಿದವು ಅಂತೂ ಅಲ್ಲ. ಅಹಂಕಾರಕ್ಕೆ ಉದಾಸೀನವೇ ಮದ್ದು.
ಇದೇ ಬ್ರಾಹ್ಮಣ, ಮತ್ತೆ ತಾಮ್ರಗೌರಿ ದೇವಸ್ಥಾನದ ಗೋಪುರಲ್ಲಿ ಸಣ್ಣ ಮಕ್ಕಳೊಟ್ಟಿಂಗೆ ಕೂದು ರುದ್ರ ಜೆಪ ಮುಂದುವರಿಸಿದ್ದು ಕಾಂಬಲೆ ಸಿಕ್ಕಿತ್ತು.

ಏಕಾದಶ ರುದ್ರ, ಚಮಕ, ಪುರುಷಸೂಕ್ತ, ಗಣಪತಿ ಅಥರ್ವಶೀರ್ಷ ಹೇಳಿ, ಕ್ಷೇತ್ರದ ಆತ್ಮ ಲಿಂಗ ದರ್ಶನ, ಸ್ಪರ್ಶನ ಮಾಡಿ ಧನ್ಯತಾ ಭಾವನೆಂದ ಹೆರ ಬಂದು ಉಂಡಿಕ್ಕಿ ಹೆರಟೆಯೊ°.

*****

ಮುಂದಾಣ ನಮ್ಮ ಪ್ರಯಾಣ ಬಸ್ಸಿಲ್ಲಿ. ಊರಿಂಗೆ ವಾಪಾಸು ಬಪ್ಪ ಗೌಜಿ. ಮನೆ ಸೇರುವ ಕೊಶಿ. ಬಸ್ ಸ್ಟೇಂಡಿಲ್ಲಿ ಒಂದು ಕೇಟಿ ಕುಡುದು ಮಧ್ಯಾಹ್ನದ ಒರಕ್ಕು ಬಾರದ್ದ ಹಾಂಗೆ ಒಂದು ವೆವಸ್ಥೆ ಅತು.

ಇಲ್ಲದ್ದರೋ. ಕೆಲವು ಜೆನಂಗೊಕ್ಕೆ ಅದು ಎಂತ ಆವ್ತು ಗೊಂತಿಲ್ಲೆ.

ಬಸ್ ಹತ್ತಿ ಸೀಟಿಲ್ಲಿ ಕೂದ ಕೂಡ್ಲೆ ಬೋಧ ಇಲ್ಲದ್ದ ಒರಕ್ಕು ಬತ್ತು,

ಹತ್ರಾಣವರ ಹೆಗಲು ತಲೆ ದಿಂಬು ಆವುತ್ತು. ಅವ° ಬಿಟ್ರೆ. ಇಲ್ಲದ್ದರೆ ತಾಡುತ್ತ ತಲೆ ಕೊಂಬು ಅಕ್ಕು.

ನಮ್ಮ ಸವಾರಿ ಅಶೋಕೆಗೆ ಹೆರಟತ್ತು. ಮಲ್ಲಿಕಾರ್ಜುನ ದೇವರಿಂಗೆ ಕೈ ಮುಗುದು, ಶ್ರೀ ಗುರುಗಳ ಚಾತುರ್ಮಾಸ್ಯ ಆದಲ್ಲಿಗೆ ಬಂದಪ್ಪಗ, ಅಲ್ಲಿ ಎಂಗೊಗೆ ಸ್ವಾಗತ ಹೇಳ್ಲೆ ಜೆನಂಗೊ ಇತ್ತಿದ್ದವು.
ವಿರಾಟ್ ಪೂಜೆಗೆ ಈಗಾಗಲೇ 70 ಸಾವಿರ ಚದರ ಅಡಿಯಷ್ಟು ಜಾಗೆ ಸಮತಟ್ಟು ಮಾಡಿ ಆಯಿದು , ಇನ್ನು 30 ಸಾವಿರ ಚದರ ಅಡಿಯಷ್ಟು ಜಾಗೆ ತಯಾರು ಮಾಡ್ಲೆ ಇದ್ದು ಹೇಳ್ತ ಮಾಹಿತಿ ಸಿಕ್ಕಿತ್ತು. ಚಾಯ ಕುಡುದಿಕ್ಕಿಯೇ ಹೋಯೆಕ್ಕು ಹೇಳಿ ಅಪ್ಪಣೆ ಅತು. ಚಾತುರ್ಮಾಸ್ಯದ ಸಂದರ್ಭ ನೆಂಪಿಂಗೆ ಬಂತು. ಅದಕ್ಕಿಂತಲೂ ದೊಡ್ಡ ಕಾರ್ಯಕ್ರಮ, ವಿರಾಟ್ ಪೂಜೆ ಇಲ್ಲಿಯೇ ಆಪ್ಪದು ಹೇಳ್ತರ ಮನಸ್ಸಿಲ್ಲಿಯೇ ಕಲ್ಪಿಸಿ, ಅಂಬಗಾಣ ವೈಭವ ಹೇಂಗಿಕ್ಕು ಹೇಳಿ ಆಲೋಚನೆ ಮಾಡಿದೆ. ಹೂಗಿನ ಚೆಪ್ಪರ, ಎಲ್ಲಿ ನೋಡಿರೂ ವೇಷ್ಟಿ ಸುತ್ತಿ,ಶಾಲು ಹೊದಕ್ಕೊಂಡು ಅತ್ತಿತ್ತ ಹೋಪ ಭಕ್ತರ ಸಮೂಹ,  14,641 ಜೆನಂಗೊ ಏಕ ಕಾಲಲ್ಲಿ “ಓಂ ನಮೋ ಭಗವತೇ ರುದ್ರಾಯ” ಹೇಳಿ ಸುರು ಮಾಡುವದು. ಅಲ್ಲಿ ಒಂದು ತರಂಗ ಸೃಷ್ಟಿ ಅಪ್ಪದು, ಅದರಲ್ಲಿ ನಾವು ಭಾಗವಹಿಸುವದು, ಆ ನಾದ ತರಂಗದ ಕಂಪನದ ಅನುಭವ ಪ್ರಾಪ್ತಿ ಅಪ್ಪದು, ಒಂದು ವೈದಿಕ ಲೋಕವೇ ಸೃಷ್ಟಿ ಆದ ಹಾಂಗೆ ಇಕ್ಕು. ಎಲ್ಲವೂ ಕಲ್ಪನೆಗೆ ಸಿಕ್ಕದ್ದು. ನೋಡೆಕ್ಕು, ಕೇಳೆಕ್ಕು, ಅನುಭವಿಸೆಕ್ಕು.

*****

ಸಮಯದ ಅಭಾವಂದಾಗಿ ಹನುಮಂತನ ಜನ್ಮ ಸ್ಥಾನಕ್ಕೆ ಹೋಪ ಕಾರ್ಯಕ್ರಮ ರದ್ದು ಆತು.
ಬಸ್ ಹೋವ್ತ ಸ್ಪೀಡ್ ಸಾಕಾವ್ತಿಲ್ಲೆ ಹೇಳಿದವು ಡ್ರೈವರ್ ಹತ್ರೆ.ಏನ್ ದಾದ ಮಲ್ಪುನ, ಇಂದೆಕ್ಕು ಗವರ್ನರ್ ಪಾಡ್ದೇರು ಹೇಳಿದ  ಡ್ರೈವರ್.

ಅಪ್ಪಲ್ಲದ, ಗವರ್ನರ್ ಕೂದರೆ ಮತ್ತೆ ಸ್ಪೀಡ್ ಹೋಪದು ಹೇಂಗೆ?

ಕಾಣ್ತಿಲ್ಲೆಯೋ ನಮ್ಮ ಸ್ಟೇಟಿಲ್ಲಿ ಗವರ್ನರ್ ನ ಕಾರ್ಬಾರು.
ಇಡೀ ರಾಜ್ಯವನ್ನೇ ಮುಂದೆ ಹೋಪಲೆ ಬಿಡದ್ದಿಪ್ಪ ಗವರ್ನರ್ ಇಪ್ಪಗ ಬಸ್ಸಿನ ಗವರ್ನರ್ ಎಂತ ಲೆಕ್ಕಕ್ಕೆ? ಗವರ್ನರ್ ಇಪ್ಪದೇ ಸ್ಪೀಡ್ ಕಂಟ್ರೋಲ್ ಮಾಡ್ಲೆ ಅಲ್ಲದಾ?

ಹೊತ್ತೋಪಗಾಣ ಚಾ ತಿಂಡಿಗೆ ಎಂತ ವೆವಸ್ಥೆ?. ಹಾಂಗೊಂದು ಸಂಶಯ ಬಂತು ಕೆಲವರಿಂಗೆ. ನಿನ್ನೆಯಾಣ ಸಮ್ಮಾನ ಮರದ್ದಿಲ್ಲೆ ಇದಾ.
ಹೇಂಗೂ ನಿನ್ನೆ ಇರುಳು ಉಂಡ ಕಲ್ಯಾಣ ಮಂಟಪ ಇದ್ದು. ಚಾಯ ತಿಂಡಿಯ ವೆವಸ್ಥೆ ಅಲ್ಲಿಯೇ ಮಾಡುವೊ ಹೇಳಿ ತೀರ್ಮಾನ ಆತು. ಎಲ್ಲರೂ ಒಮ್ಮತಂದ ಸಮ್ಮತಿಸಿದವು.

ಅವಲಕ್ಕಿ, ಸಜ್ಜಿಗೆ, ಉದ್ದಿನ ವಡೆ, ಪಾಯಸ, ಚಾ, ಕಾಪಿ, ಪುನಃ ಸಮ್ಮಾನ. ಇರುಳು ಉಂಡಿಕ್ಕಿ ಹೋವ್ತರೆ ವೆವಸ್ಥೆ ಮಾಡ್ತೆ ಹೇಳ್ತ ಭರವಸೆ.
ಇಷ್ಟೆಲ್ಲಾ ತಿಂದ ಮತ್ತೆ ಸುಮ್ಮನೆ ಕೂದರೆ ಅಕ್ಕಾ? ಪ್ರಯಾಣಲ್ಲಿ ಒಂದು ಗಮ್ಮತ್ತು ಕೂಡಾ ಬೇಕಲ್ಲದ.
ಶಿಬಿರ ಗೀತೆ, ಭಜನೆ, ಸಮೂಹ ಗಾಯನ, ಎಲ್ಲವೂ ಒಂದಾದ ಮತ್ತೆ ಒಂದು. ಪುರುಸ್ತೊತ್ತು ಇಲ್ಲೆ. ಜೆಂಬಾರಂಗಳಲ್ಲಿ ಚೂರ್ಣಿಕೆ ಹೇಳ್ಲೆ ಸ್ಪರ್ಧೆ ಆವ್ತಲ್ಲದಾ, ಹಾಂಗೇ ಆತು. ಎಲ್ಲರೂ ಸ್ವರ ಸೇರಿಸಿದವು.

ಅಂಬಗಳೇ ಅದ ನಮ್ಮ ಬಾಲಣ್ಣ “ಸೇವೆಯೆಂಬ ಯಜ್ಞನದಲ್ಲಿ ಸಮಿಧೆಯಂತೆ ಉರಿಯುವ”- ಹೇಳಿ ಸುರು ಹಚ್ಚಿದ್ದು.
ಒಂದೊಂದು ಗೀತೆ ಆದ ಕೂಡ್ಲೆ ಜೈಕಾರ.

ಬೋಲೋ ಶ್ರೀ ರಾಮ ಚಂದ್ರ ಕೀ- ಒಬ್ಬನ ಗಟ್ಟಿ ಸ್ವರ
ಜೈ-
ಎಲ್ಲರೂ ಜೋರಾಗಿ

ಬೋಲೋ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜೀ ಕೀ
ಜೈ

ಬೋಲೋ ಶ್ರೀ ಹನುಮಾನ್ ಜೀ ಕೀ
ಜೈ

ಬೋಲೋ ಭಾರತ್ ಮಾತಾ ಕೀ
ಜೈ

ಪದ್ಯ ಸುರುಮಾಡಿದವಂಗೂ ಜೈ ಕಾರ ಹಾಕಿ ಆತು.

*****

ಹನುಮಂತನ ಜನ್ಮ ಸ್ಥಾನಕ್ಕೆ ಹೋಪಲೆ ಸಮಯ ಸಿಕ್ಕದ್ದರೂ , ಒಬ್ಬಂಗೆ ಅದೆಂತದೋ ನೆಂಪಾತು.
ಹೇಳಿಯೇ ಬಿಟ್ಟವು ಎಲ್ಲಾ ಪ್ರಾಣಿಗೊಕ್ಕೂ ಬೀಲ ಇದ್ದು. ನವಗೆ ಮನುಷ್ಯರಿಂಗೆ ಮಾತ್ರ ಬೀಲ ಎಂತಕೆ ಇಲ್ಲೆ. ಅದು ಬೇಕು ಹೇಳಿ ದೇವರಿಂಗೆ ಒಂದು ಅರ್ಜಿ ಹಾಕೆಕ್ಕು. ಈಗ ಬೀಲ ಇದ್ದರೆ ಒಳ್ಳೆದೋ ಇಲ್ಲದ್ದರೆ ಒಳ್ಳೆದೋ ಹೇಳಿ ಈ ಸಭೆಲಿ ತೀರ್ಮಾನ ಆಯೆಕ್ಕು ಹೇಳ್ತ ಪ್ರಸ್ತಾವನೆಯೂ ಮಾಡಿದವು.

“ಬೀಲ ಇಲ್ಲದ್ದೇ ಮರ್ಕಟ ಬುದ್ಧಿ ತೋರ್ಸುತ್ತು, ಇನ್ನು ಅದು ಕೂಡಾ ಇದ್ದರೆ ಹೇಂಗಿಕ್ಕು”? ಒಬ್ಬ ಹೇಳಿದ
“ಅದಾ ಮನುಷ್ಯರ ಹಾಂಗೆ ಮಾಡೆಡ ಹೇಳಿ ಮಂಗಂಗೊ ಹೇಳುಗು, ಅವರ ಮಕ್ಕೊಗೆ”  ಇನ್ನೊಬ್ಬ ಹೇಳಿದ
“ಗೆಡ್ಡ ತೆಗವಲೆ ಬ್ರಷ್ ಹುಡ್ಕೆಕ್ಕು ಹೇಳಿ ಇಲ್ಲೆ, ಬೀಲದ ಕೊಡಿಯನ್ನೇ ಉಪಯೋಗಿಸಿರೆ ಆತು”
“ಪೇಂಟ್ ಹಾಕುತ್ಸು ಹೇಂಗೆ”?
“ಅದಕ್ಕೆ ಟೈಲರ್ ಹತ್ರೆ ಹೇಳಿ ವೆವಸ್ಥೆ ಮಾಡ್ಲಕ್ಕು. ಬೆಲ್ಟ್ ತೆಗೆತ್ತ ಪೈಸೆ ಒಳುದತ್ತು”

ವೇಷ್ಟಿ ಸುತ್ತುತ್ತು ಹೇಂಗೆ?
“ಬೀಲವನ್ನೇ ಬೆಲ್ಟ್ ಆಗಿ ಮಾಡಿರೆ ಆತು, ವಸ್ತ್ರ ಜಾರ”
“ಕುರ್ಚಿಲಿ ಕೂರ್ತು ಹೇಂಗೆ”?
“ಹನುಮಂತ ಬೀಲವನ್ನೇ ಸುತ್ತಿ ಕುರ್ಚಿಯ ಹಾಂಗೆ ಮಾಡಿ ಅದರ ಮೇಗೆ ಕೂಯಿದ ಇಲ್ಲೆಯಾ? ಕುರ್ಚಿ ಎಂತಕೆ”?

“ಬಸ್ಸಿಲ್ಲಿ  ನಿಂದೊಂಡು ಹೋಪಗ ಬೀಲವನ್ನೇ ಮೇಗಾಣ ಸರಳಿಂಗೆ ನೇಲ್ಸಿರೆ ಮತ್ತೆ ಬೀಳ ಅದ”

“ಡ್ರೈವ್ ಮಾಡುವಾಗ ಮೊಬೈಲ್ ರಿಂಗ್ ಆದರೆ, ಬೀಲಲ್ಲಿ ಹಿಡ್ಕೊಂಡು ಮಾತಾಡ್ಲೆ ಅಕ್ಕದ”

“ಮದುವೆ ಅಪ್ಪಗ ಕೈ ಪತ್ತಾವಿನ ಹೇಳ್ತರ ಬದಲು ಬೀಲ ಪತ್ತಾವಿನ ಹೇಳಿ ಒಂದು ಕಾರ್ಯಕ್ರಮ ಅಕ್ಕದ”
ಒಬ್ಬೊಬ್ಬ ಒಂದೊಂದು ಮರ್ಕಟ ವಿದ್ಯಮಾನ ಹೇಳಿದವು.

ಬೀಲ ಬೇಕು ಹೇಳಿ ನಿಶ್ಚಯ ಮಾಡಿ ಅರ್ಜಿ ಹಾಕಿದ್ದವೋ ಗೊಂತಾಯಿದಿಲ್ಲೆ. ಆದರೆ, ಎಲ್ಲರೂ ಒಂದರಿ ಬೀಲ ಇಪ್ಪವರ ಹಾಂಗೆ ಮಾತಾಡಿದ್ದಂತೂ ಸತ್ಯ.

******

ಬಸ್ ಮುಲ್ಕಿಗೆ ಎತ್ತಿತ್ತು.
ಇನ್ನು ರಾಮ ತಾರಕ ಮಂತ್ರ ಶಾಂತಿ ಮಂತ್ರ ಹೇಳಿ ಸಭಾ ಕಾರ್ಯಕ್ರಮ ಮುಗುಶುವೊ° ಹೇಳಿ ತೀರ್ಮಾನ ಆತು.

ಪರಸ್ಪರ ಧನ್ಯವಾದ ಸಮರ್ಪಣೆಯೂ ಆತು.

ಒಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಮಂಗಳ ಹಾಡಿ ಆತು.

***

“ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ”– ಆನು ಹೇಳ್ತಾ ಇದ್ದೆ.
ನಿಂಗಳೂ ಸ್ವರ ಸೇರುಸುತ್ತಾ ಇದ್ದಿ ಅಲ್ಲದಾ?

ಸೂ: ಗೋಕರ್ಣ ಯಾತ್ರೆಯ ಸಂದರ್ಭಲ್ಲಿ ತೆಗದ ಕೆಲವು ಪಟಂಗೊ:

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ವಿಮರ್ಶಾತ್ಮಕ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ramesh kainthaje

  sharmaaji,
  ningala article thumba laika iddu, swathaha ningala otting gokarnakke hogi banda haange ayidu. ningala haasya mishritha saral shaili thumba khushi kottattu. bassu prayanada haasya anubhva anthoo thumba rasamaya. baravanige munduvarisi,

  ramesh kainthaje

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  [baravanige munduvarisi,]
  ಈ ಪ್ರೋತ್ಸಾಹದ ಮಾತುಗೊಕ್ಕೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 3. ಸುಭಗ
  ಸುಭಗ

  ಅಪ್ಪಚ್ಚಿ, ‘ಕೋಟಿ ರುದ್ರ’ ಪುಣ್ಯಕಾರ್ಯಲ್ಲಿ ಭಾಗವಹಿಸಿ ಬಂದ ಅನುಭವವ ಸವಿಸ್ತಾರವಾಗಿ ಸ್ವಾರಸ್ಯಕರವಾಗಿ ನಿರೂಪಣೆ ಮಾಡಿದ್ದಿ. ಗಂಭೀರ ವಿಶಯಕ್ಕೆ ತಿಳಿಹಾಸ್ಯ ಲೇಪನ ಕೊಟ್ಟು ಗದ್ಯ ‘ಹೃದ್ಯ’ ಅಪ್ಪಹಾಂಗೆ ಮಾಡಿದ್ದಿ. ಬೈಲಿಲ್ಲಿಪ್ಪ ಇತರರಿಂಗು ಈ ಲೇಖನಂದಾಗಿ ಹೀಂಗಿಪ್ಪ ಸೇವಾಕಾರ್ಯಂಗಳಲ್ಲಿ ಭಾಗವಹಿಸಲೆ ಪ್ರೇರಣೆ ಸಿಕ್ಕುಗು ಹೇಳಿ ಆನು ಗ್ರೇಶುತ್ತೆ.
  ಶುದ್ದಿಗೆ ಸಿಕ್ಕುಸಿದ ‘ಬೀಲ’- ಅದೇ ಒಂದು ಪರಿಪೂರ್ಣ ಲಘುಬರಹ ಅಪ್ಪ ರೀತಿಲಿ ಹಲವಾರು ವಿಷಯಂಗಳ ಪ್ರಸ್ತಾಪ ಮಾಡಿದ್ದಿ!
  ಇದರ ಓದಿಯಪ್ಪಗ ರಾಮಾಯಣದ ಒಂದು ತಮಾಶೆ ಕತೆ ನೆಂಪಾತು-

  ಸೀತೆ ತುಂಬಾ ಚೆಂದ ಇದ್ದು ಹೇಳಿ ಎಲ್ಲೋರೂ ಹೇಳುದು ಕೇಳಿಯಪ್ಪಗ ಕಿಷ್ಕಿಂಧೆಯ ವಾನರಸ್ತ್ರೀಗೊಕ್ಕೆ ಅದರ ಒಂದಾರಿ ಕಣ್ಣಾರೆ ಕಾಣೆಕ್ಕು; ಅದರ ಚೆಂದವ ನೋಡಿ ಕೊಶಿಪಡೆಕು ಹೇಳಿ ತುಂಬಾ ಆಶೆ ಆಗಿಂಡು ಇತ್ತಡ. ಅಕೇರಿಗೆ ಶ್ರೀರಾಮ ಪಟ್ಟಾಭಿಷೇಕ ಸಂದರ್ಭಲ್ಲಿ ಅವಕ್ಕೆ ಸೀತೆಯ ಕಾಂಬ ಅವಕಾಶ ಸಿಕ್ಕಿತ್ತಡ. ಅಷ್ಟಪ್ಪಗ ಒಂದು ಮಂಗೆತ್ತಿ ಹೆಮ್ಮಕ್ಕೊ ಹೇಳಿತ್ತಡ-
  “ಎಬೇಯಾ… ಸೀತೆ ಚೆಂದ ಅಡ, ಚೆಂದ..! ಥೂ ಅದಕ್ಕೆ ಬೀಲವೇ ಇಲ್ಲೆ, ಮತ್ತೆಂತರ ಚೆಂದ..?!!” 😉

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ತಮಾಶೆ ಕತೆಯ ಪೂರಕವಾಗಿ ಕೊಟ್ಟು ವಿಮರ್ಶೆ ಮಾಡಿದ್ದಕ್ಕೆ
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 4. ಅಭಿ

  ಲಾಯ್ಕ ಆಯ್ದು. . .

  [Reply]

  VA:F [1.9.22_1171]
  Rating: 0 (from 0 votes)
 5. ಬಾಯಾಡಿ ಬಾಲಣ್ಣ

  ಪಶ್ತು ಕ್ಲಾಸು ಶರ್ಮಣ್ಣ. ಹೇಳಿದ ಹಾ೦ಗೆ-ನಾವು ಹೋದ ಗಮ್ಮತ್ತು ಹ೦ಚಿದರೆ ಬಾಕಿದ್ದವಕ್ಕೆ ಸ್ಪೂರ್ತಿ ಯಾಯೆಕ್ಕು.ಈಗ ಅವಕ್ಕೆ ಊತದ ವ್ಯವಸ್ಥೆ ಆಯಕ್ಕಲ್ಲದ?ಕುನ್ದಾಪುರದ ವೆ೦ಕಟಲಕ್ಶೀ ಸಭಾಭವನದ ಐತಾಳರ ಫೋನು +೯೧-೯೪೮೧೭೫೪೩೭೦ ಸದಾ ಉಮ್ಬೋರ ಹಶು ತಣಿಸುಲೆ ಇದ್ದು.ಮು೦ಚಿತವಾಗಿ ತಿಳಿಶಿ ಹೋಯೆಕ್ಕು.ನಾಡಿದ್ದಿ೦ಗೆ ವಿರಾಟ್ ಪೂಜೆಗೆ ಹೋಪ ಹೆಮ್ಮಕ್ಕೊ,ಮಕ್ಕೊ,ಪ್ರಾಯಸ್ಟರಿ೦ಗೆ-ಹೋಟೆಲ್ಲಿಲಿ ಪರಡುವ ಕೆಲಸಕ್ಕಿ೦ತ-ಉತ್ತಮ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಜಯಶ್ರೀ ನೀರಮೂಲೆದೇವಸ್ಯ ಮಾಣಿಚೂರಿಬೈಲು ದೀಪಕ್ಕಚೆನ್ನಬೆಟ್ಟಣ್ಣಸುಭಗಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಗಣೇಶ ಮಾವ°ವೆಂಕಟ್ ಕೋಟೂರುಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕಬೋಸ ಬಾವಪುತ್ತೂರುಬಾವವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿಪೆಂಗಣ್ಣ°ಪವನಜಮಾವಮಂಗ್ಳೂರ ಮಾಣಿವಿದ್ವಾನಣ್ಣಹಳೆಮನೆ ಅಣ್ಣಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ