ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ

June 30, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ

ಆದಿತ್ಯವಾರ ಪೇಪರಿಲ್ಲಿ ಜೋಶಿಯ “ಪರಾಗ ಸ್ಪರ್ಷ” ಓದಿಂಡು ಇಪ್ಪಗ ಎನ್ನ “ಶ್ರೀಶ” ಬಂದ.
ಆನೂ ಶ್ರೀಶನೂ ಹೆಚ್ಚಾಗಿ ಒಟ್ಟಿಂಗೆ ಇಪ್ಪದು. ನಮ್ಮ ಬೈಲಿಂಗೆ ಒಂದೆರಡಿ ಸರ್ತಿ ಬಂದು ಒಪ್ಪ ಕೊಟ್ಟಿಕ್ಕಿ ಹೋಯಿದ. ಆನೂ ಅವನೂ ಚೆಙಾಯಿಗೊ ಹೇಳ್ತಕ್ಕಿಂತಲೂ ಹೆಚ್ಚು ಆತ್ಮೀಯರು. ಎನ್ನ ಅವ “ಶರ್ಮ” ಹೇಳಿಯೇ ದೆನುಗೊಳಿರೆ ಆನು ಅವನ “ಶ್ರೀಶ” ಹೇಳಿಯೇ ದೆನಿಗೊಳುದು. ತುಂಬಾ ಹತ್ತರೆ ಆದ ಮತ್ತೆ ಸಂಬಂಧ ಹೇಳಿ ಹೇಳುದಕ್ಕಿಂತಲೂ ನಿಜ ಹೆಸರೋ ಅಡ್ಡ ಹೆಸರೋ ಹಿಡುದು ಮಾತಾಡ್ಸಿ ಹೋವ್ತಷ್ಟೆ ಅಲ್ಲದ. ಹಾಂಗೆ. ಒಂದೇ ಪ್ರಾಯದವು, ಒಟ್ಟಿಂಗೇ ಇಪ್ಪವು, ಒಂದೇ ಅಭಿರುಚಿಯವು. ಎಲ್ಲವುದೇ. ಇಲ್ಲೇ ಹತ್ರೆ ಮನೆ ಮಾಡಿಂಡು ಇದ್ದ.
ಎಂತ ಶ್ರೀಶ ಆಸರಿಂಗೆ ಬೇಕಾ ಕೇಳಿದೆ.

ಮಳೆಲಿ ಬಂದದಲ್ಲದಾ, ಆಸರ ಎಂತ ಇಲ್ಲೆ, ಬೆಶಿ ಬೆಶಿ ಎಂತಾರು ಕುಡಿದರೆ ರಜ ಚಳಿ ಬಿಡುಗು ಹೇಳಿದ.
ಹೆಂಡತಿ ಮನೆಲಿ ಇತ್ತಿದ್ದಿಲ್ಲೆ.
ನೀನು ಇಲ್ಲೇ ಪೇಪರ್ ಓದಿಂಡು ಕೂರು ಹೇಳಿಕ್ಕಿ ಒಳ ಹೋಗಿ ಚಾ ಮಾಡಿ ತಂದೆ.
ಇದೆಂತ ಕಣ್ಣ ಚಾ ಮಾಡಿದ್ದು, ಹಾಲು ಬಯಿಂದಿಲ್ಲೆಯಾ ಇಂದು” ಕೇಳಿದ.
ಕುಡುದು ನೋಡು. ಇದು “ಗ್ರೀನ್ ಟೀ” ಹೇಳಿದೆ.

ಒಂದು ಮುಕ್ಕುಳಿ ಕುಡುದವಂಗೆ ಕೊಶಿ ಆತು ಹೇಳಿ ಅವನ ಮೋರೆ ನೋಡಿ ಅಪ್ಪಗಳೇ ಗೊಂತಾತು.

ಗ್ರೀನ್ ಟೀ - ಹಸುರು ಚಾಯ

ಇದೆಲ್ಲಾ ಎಲ್ಲಿಂದ ಕಲ್ತೆ, ಎಂತ ಕತೆ ಇದು. ಹಾಲು ಕಮ್ಮಿ ಆದರೆ ಕೈಕ್ಕೆ ಹೇಳಿ ಪರಂಚಿಂಡು ಇತ್ತಿದ್ದವo ಈಗ ಇದೆಂತ “ಹಸಿರು ಚಾಯ” ಹೇಳಿಂಡು ಕಣ್ಣ ಚಾಯ ಮಾಡಿ ಕಣ್ಣು ಮುಚ್ಚಿ ಕುಡಿವದು? ಕೇಳಿದ.
ಆನು ನೀನೂ ಇಬ್ರೂ ಕೊಶಿಲಿ ಕುಡಿತ್ತಾ ಇದ್ದೆಯೊ. ಕಣ್ಣು ಮುಚ್ಚಿ ಕುಡಿವದು ಹೇಳಿ ಎಂತ ತಮಾಷೆ ಮಾಡುದು. ಬೇಕಾರೆ ಇದರ ಬಗ್ಗೆ ಎನಗೆ ಗೊಂತಿಪ್ಪರ ಹೇಳ್ತೆ. ಎಡೆಲಿ ಬಾಯಿ ಹಾಕೆಡ. ಹೇಳಿದೆ
ನಿನ್ನ ಗ್ಲಾಸಿಂಗೆ ಆನು ಬಾಯಿ ಹಾಕ್ತಿಲ್ಲೆ. ಹಾಂಗೆ ಹೇಳಿಂಡು ಬಾಯಿ ಮುಚ್ಚಿ ಕೂದರೆ ಇದರ ಕುಡಿತ್ತು ಹೇಂಗೆ ಹೇಳಿ ಅವನದ್ದೊಂದು ಪೊಟ್ಟು ತಮಾಷೆ.
ಚಾ ತೋಟದ ಎಲೆಂದ ಮುಖ್ಯವಾಗಿ ಮೂರು ನಮೂನೆಯ “ಚಾಯದ ಹೊಡಿ” ಇಲ್ಲದ್ರೆ “ಎಲೆಯ” ತಯಾರು ಮಾಡ್ತವು. “ಗ್ರೀನ್ ಟೀ”, “ಓಲೋಂಗ್ ಟೀ” ಮತ್ತೆ “ಬ್ಲೇಕ್ ಟೀ” ಹೇಳಿ ಹೇಳ್ತವು. ನಾವು ಹೆಚ್ಚಾಗಿ ಹಾಲು ಸಕ್ಕರೆ ಎಲ್ಲ ಹಾಕಿ ಕುಡಿವದು “ಬ್ಲೇಕ್ ಟೀ”. ಸೊಪ್ಪಿನ ಸಂಸ್ಕರಿಸುತ್ತ ಕ್ರಮ ಮೂರಕ್ಕೂ ಬೇರೆ ಬೇರೆ.
ಭತ್ತಂದ ಬೆಳ್ತಿಗೆ ಅಕ್ಕಿ, ಎದುರು ಬೆಳ್ತಿಗೆ, ಕುಚ್ಚಿಲು ಅಕ್ಕಿ ಎಲ್ಲ ಮಾಡ್ತಿಲ್ಲೆಯಾ ಹಾಂಗೇ.
ಗ್ರೀನ್ ಟೀ ಎಲೆ ತಯಾರು ಮಾಡ್ಲೆ ಎಲೆಯ ಹೆಚ್ಚು ಬೆಶಿ ಮಾಡದ್ದೆ, ಉಗಿಲಿ ರಜ ಹೊತ್ತು (1 ರಿಂದ 1.5 ನಿಮಿಷ) ಬೇಯಿಸಿ, ಒಣಗಿಸಿ pack ಮಾಡ್ತವು. ಒಣಗಿಸಿದ ಎಲೆ ಕೂಡಾ ರಜ ಹಸಿರು ಬಣ್ಣ ಇರ್ತು.
ಸೊಪ್ಪಿನ ಸಂಸ್ಕರಿಸುವಾಗ, ಬ್ಲೇಕ್ ಟೀ ಎಲೆ ತಯಾರು ಮಾಡ್ಲೆ, ಜಾಸ್ತಿ ಬೆಶಿ ಮಾಡಿ ಒಣಗುಸ್ತವು, ಓಲೋಂಗ್ ಹೇಳುವದು ಗ್ರೀನ್ ಟೀ ಮತ್ತೆ ಬ್ಲೇಕ್ ಟೀ ಇದರ ಎರಡರ ಮಧ್ಯೆ.
ಗ್ರೀನ್ ಟೀ ಬಗ್ಗೆ ಜನಂಗೊಕ್ಕೆ ಹೆಚ್ಚು ಒಲವು ಬಪ್ಪಲೆ ಕಾರಣ ಎಂತ ಹೇಳಿರೆ ಅದರಲ್ಲಿ ಇಪ್ಪ EGCG (EpiGallo Catachin Gallate) ಹೇಳುವ “ಆಂಟಿ ಓಕ್ಸಿಡೆಂಟ್”. ಎಲೆಯ ಸಂಸ್ಕರಿಸುವ ಕ್ರಮಂದಾಗಿ, ಈ “ಆಂಟಿ ಓಕ್ಸಿಡೆಂಟ್”, ಗ್ರೀನ್ ಟೀಲಿ ಇಪ್ಪಷ್ಟು ಬಾಕಿ ಟೀ ಗಳಲ್ಲಿ ಇರ್ತಿಲ್ಲೆ. ವಿಟಮಿನ್ E ಮತ್ತೆ ವಿಟಮಿನ್ C ಕೂಡಾ “ಆಂಟಿ ಓಕ್ಸಿಡೆಂಟ್” ಆಗಿ ಕೆಲಸ ಮಾಡುತ್ತು. ಆದರೆ EGCG ಹೇಳುವದು ಅದೆಲ್ಲಕ್ಕಿಂತ ಸುಮಾರು ಪಟ್ಟು ಹೆಚ್ಚು ಪರಿಣಾಮ ಕಾರಿಯಾಗಿ ಕೆಲಸ ಮಾಡ್ತು.
ಚೈನಾದವು 4000 ಕ್ಕಿಂತಲೂ ಹೆಚ್ಚು ವರ್ಷಂದ ಇದರ ಉಪಯೋಗಿಸುತ್ತಾ ಇದ್ದವು. “ಗ್ರೀನ್ ಟೀ” ಯ ಪ್ರಯೋಜನಂಗೊ ಎಂತ ಹೇಳಿರೆ ಅದು ನಮ್ಮ ಶರೀರಲ್ಲಿ ಗುಣಪಡಿಸುವ ಕ್ರಿಯೆಗೊಕ್ಕೆ ಸಹಕಾರ ಮಾಡುತ್ತು. ಆದರೆ ಇದುವೇ ಮದ್ದು ಅಲ್ಲ. ಶರೀರಕ್ಕೆ ಬೇಕಾದ “ಆಂಟಿ ಓಕ್ಸಿಡೆಂಟ್” ನ ಪೂರೈಸುತ್ತ ಕಾರಣ ಇದು ಹಲವಾರು ಕಾಯಿಲೆಗಳ (ಕಾನ್ಸರ್, ಹೃದಯದ ತೊಂದರೆ, ಗಂಟು ಬೇನೆ) ಗುಣ ಮಾಡ್ಲೆ ಸಹಕಾರಿ ಆವ್ತು ಹೇಳಿ ಸಂಶೋಧನಾ ಪ್ರಬಂಧಂಗಳಲ್ಲಿ ಹೇಳ್ತವು. ಕೊಲೆಸ್ಟ್ರೋಲ್ ಕಡಿಮೆ ಮಾಡ್ಲೆ ಮತ್ತೆ ಶರೀರಲ್ಲಿ ಇಪ್ಪ ತ್ಯಾಜ್ಯಂಗಳ ವಿಲೇವಾರಿ ಮಾಡ್ಲೆ ಕೂಡಾ ಸಹಕಾರಿ ಹೇಳ್ತವು.
ನೀರು ಹದಾಕೆ ಕೊದಿವಲೆ ಸುರು ಅಪ್ಪಗ ಕಿಚ್ಚು ನಂದಿಸೆಕ್ಕು. ಒಂದು ಗ್ಲಾಸಿಂಗೆ ಒಂದು ಚಮಚದಷ್ಟು “ಗ್ರೀನ್ ಟೀ” ಸೊಪ್ಪಿನ ಹಾಕಿ, ಬೆಶಿ ನೀರಿನ ಎರದು ಎರಡು ನಿಮಿಷ ಮುಚ್ಚಿ ಮಡುಗೆಕ್ಕು. ಮತ್ತೆ ಅರುಶಿದರೆ ಚಾ ರೆಡಿ.
ಇಲ್ಲಿ ತಯಾರು ಮಾಡುವಾಗ ಮುಖ್ಯ ಹೇಳಿರೆ, ನೀರು ಕೊದಿವಲೆ ಆಗ. ಸೊಪ್ಪಿನ ಹಾಕಿಕ್ಕಿ ಕೊದುಸಲೆ ಆಗ. ಎರಡು ನಿಮಿಷಂದ ಹೆಚ್ಚು ಮಡುಗಲೆ ಕೂಡಾ ಆಗ. ಹಾಲು ಹಾಕಲೆ ಆಗ.
ರುಚಿಗೆ ಸಕ್ಕರೆ, ನಿಂಬೆ ಹುಳಿ ಎಸರು, ಪರಿಮಳಕ್ಕೆ ಏಲಕ್ಕಿ ಹೊಡಿ, ಬೇಕಾದವು ಬೇಕಾದ್ದರ ಸೇರಿಸಿಗೊಂಬಲೆ ಅಕ್ಕು.

ತಳೀಯದ್ದೆ ಚಾ ಕುಡ್ಕೊಂಡು ಅವo ಕೇಳಿದ್ದೇ ಎನ್ನ ಪುಣ್ಯ. ಇಲ್ಲದ್ದರೆ ಇಷ್ಟು ಹೊತ್ತು ಸುಮ್ಮನೆ ಕೂಬವ ಅಲ್ಲ ಅವ.

~~~~


ಶರ್ಮಂಗೆ ಮಾವಿನಕಾಯಿಗೆ ಉಪ್ಪು ಮೆಣಸು ಸೇರಿಸಿ ತಿಂಬಲೆ ಇಷ್ಟ ಅಲ್ಲದ ಹಾಂಗೆ ಹುಳಿ ಮಾವಿನ ಕಾಯಿ ಸುರತ್ಕಲ್ ಮಾರ್ಕೆಟಿಂದ ತಯಿಂದೆ ಹೇಳಿದ.
ಮಾವಿನ ಕಾಯಿ ಚಿತ್ರಾನ್ನ ಕೂಡಾ ಇಷ್ಟ ಹೇಳಿ ನಿನಗೆ ಗೊಂತಿಲ್ಲೆಯಾ? ಕೇಳಿದೆ. ಹಾಂಗಾರೆ ಇಂದು ಮಧ್ಯಾನ್ಹಕ್ಕೆ ಅದುವೇ.

ಮಾವಿನಕಾಯಿ ಚಿತ್ರಾನ್ನ (Mango Rice )

ಶ್ರೀಶಂಗೆ ರಜ ರಜ ಅಡಿಗೆ ಮಾಡ್ಲೆ ಅವನ ಅಜ್ಜಿಯ ಟ್ರೈನಿಂಗ್ ಆಯಿದು ಸಣ್ಣ ಇಪ್ಪಗ. (ಎನ್ನ ಹಾಂಗೆ ಅಜ್ಜಿ ಸೆರಗಿಲ್ಲಿ ಕೈ ಬಾಯಿ ಉದ್ದಿಯೊಂಡು ಇತ್ತಿದ್ದ ಮಾತ್ರ ಅಲ್ಲ)
ಇಬ್ರೂ ಒಟ್ಟಿಂಗೆ ಒಳ ಸೇರಿಗೊಂಡೆಯೊ.
ಒಂದು ಗ್ಲಾಸ್ ಬೆಣ್ತಕ್ಕಿಗೆ ಎರಡು ಗ್ಲಾಸ್ ನೀರು ಹಾಕಿ ಕುಕ್ಕರ್ ಕೂಗಿಸಿ ಆತು. ಅದರ ತಣಿವಲೆ ಬಿಟ್ಟೆಯೊ.
(ಚಿತ್ರಾನ್ನಕ್ಕೆ ಅಷನ ರಜ ಉದುರು ಉದುರು ಆಯೆಕ್ಕು. ಅಕ್ಕಿಯ ರಜ ನೀರು ಕಮ್ಮಿ ಹಾಕಿ ಬೇಯಿಸಿದರೆ ಒಳ್ಳೆದು. ಬೇಯಿಶುವ ನೀರಿಂಗೆ ರಜ ಉಪ್ಪು ಹಾಕಿರೂ ಆವುತ್ತು – ಶ್ರೀಶನ ಅನುಭವ )

ಮಾವಿನ ಕಾಯಿಯ ಚೋಲಿ ತೆಗದು, ಗೀಸುವ ಮಣೆಲಿ ಗೀಸಿದೆಯೊ. ರಜ ಕಾಯಿ ಕೂಡಾ ಕೆರದು ಮಡ್ಕೊಂಡೆಯೊ. ಹಸಿ ಮೆಣಸಿನ ಸಣ್ಣಕ್ಕೆ ಕೊಚ್ಚಿ ಆತು.
ಗೇಸಿನ ಸ್ಟೌಲ್ಲಿ ಬಣಲೆ (ಚೀಂಚಟ್ಟಿ) ಮಡುಗಿ, ರಜ ತೆಂಗಿನೆಣ್ಣೆ ಎರದು ನೆಲಕಡ್ಲೆ ಹೊರುದು ಅದರ ಸಣ್ಣ ತಟ್ಟೆಗೆ ಸಮಲಿಸಿ ಆತು.
(ರಜ ಜಾಸ್ತಿಯೇ ಹೊರುದು ಮಡುಗಿದೆಯೊ. ಇಲ್ಲದ್ದರೆ ಅಕೇರಿಗೆ ಮಿಕ್ಸ್ ಮಾಡ್ಲೆ ಅಪ್ಪಗ ತಟ್ಟೆಲಿ ಎಂತದೂ ಇರ).

ಅದೇ ಬಣಲೆಗೆ ರಜ ಎಣ್ಣೆ ಸೇರಿಸಿ ಸಾಸಮೆ, ಉದ್ದಿನ ಬೇಳೆ ಹಾಕಿ, ಒಗ್ಗರಣೆ ತಯಾರು ಅಪ್ಪಗ ಕಿಚ್ಚು ರಜ ಸಣ್ಣ ಮಾಡಿ ಬೇವಿನ ಸೊಪ್ಪನ್ನೂ ಕೊಚ್ಚಿದ ಹಸಿ ಮೆಣಸನ್ನೂ ಹಾಕಿ ಬಾಡಿಸಿ ಆತು.
(ಶ್ರೀಶಂಗೆ ಜೋರು ಆ..ಕ್ಷಿ ಬಪ್ಪಲೆ ಸುರು ಆತು. Exhaust fan ಹಾಕದ್ದರೆ ಅವಂಗೆ ಅಲ್ಲಿ ನಿಂಬಲೇ ಎಡಿಯ)

ಅದಕ್ಕೆ ಮಾವಿನ ಕಾಯಿ ಸುಳಿ, ತೆಂಗಿನ ಕಾಯಿ ಸುಳಿ, ಹೊರುದ ನೆಲ ಕಡ್ಲೆ, ರಜ ಅರಸಿನ ಹೊಡಿ, ಹೊಡಿ ಉಪ್ಪು ಎಲ್ಲಾ ಹಾಕಿ ಸರೀ ಮಿಕ್ಸ್ ಮಾಡಿಕ್ಕಿ, ಅಷನ ಹಾಕಿ ತೊಳಸಿದೆಯೊ. ಸಣ್ಣ ಕಿಚ್ಚಿಲ್ಲಿ ರಜ ಹೊತ್ತು ಬೆಶಿ ಮಾಡಿ ಅಪ್ಪಗ ಎಂಗಳ ಚಿತ್ರಾನ್ನ ತಯಾರು.
TV ಲಿ ಎಲ್ಲ ಮಾಡ್ತವಲ್ಲದ ಹಾಂಗೆ ಇದರ ಅಲಂಕಾರ ಮಾಡೆಡದಾ? ಕೇಳಿದೆ.
ಎನಗೆ ಹಶು ಆವುತ್ತು. ಚಿತ್ರಾನ್ನ ಎನ್ನ ಹೊಟ್ಟೆಯ ಅಲಂಕರಿಸಿರೆ ಸಾಕು ಹೇಳಿದವ ಎರಡು ತಟ್ಟೆ ತೆಕ್ಕೊಂಡು ಊಟದ ಮೇಜಿಂಗೆ ಹೆರಟ.
ಎಂಗೊ ಮಾಡಿದ್ದಕ್ಕೆ ಸಾಕ್ಷಿ ಅಗಿ ಅರ್ಜೆಂಟಿಲ್ಲಿ ಒಂದು ಪಟ ತೆಗದು ಮಡುಗಿದ್ದೆ.

ಮಾವಿನ ಕಾಯಿ ಮುಗಿವನ್ನ ಮೊದಲೇ ನಿಂಗೊಳೂ ಒಂದರಿ ಮಾಡಿ ನೋಡಿ.

~~~~

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ, 5.0 out of 10 based on 5 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಕೃಷ್ಣ ಭಟ್, ಶೇಡಿಗುಮ್ಮೆ

  ಶರ್ಮ ಭಾವ,
  ಹಾಲು ಹಾಕಿದ ಚಾಯ ಕುಡುದು ಅಭ್ಯಾಸ ಆಗಿ, ಹಸಿರು ಚಾಯ ಗಂಟಲಿಂದ ಕೆಲ ಇಲಿತಿಲ್ಲೇ…

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಶರ್ಮಪ್ಪಚ್ಚಿ,
  ನಮಸ್ತೇ.ಬಾರೀ ಲಾಯಿಕಿನ ಸುದ್ದಿ.ಗ್ರೀನ್ ಟೀ + ಮಾವಿನಕಾಯಿ ಚಿತ್ರಾನ್ನ ಮಾಡುವ ಕ್ರಮವ – ವಿವರಣೆ ಓದಿಯಪ್ಪಗ ಒ೦ದು ಸರ್ತಿ ನಿ೦ಗಳ ಕೈ ಪಾಕಲ್ಲೇ ಅವೆರಡರ ರುಚಿ ನೋಡ್ಲೇ ಬೇಕು ಹೇದು ಮನಸ್ಸುಮಾಡಿದ್ದೆ. ಏವಾಗ ನಿ೦ಗಳಲ್ಲಿಗೆ ಬಪ್ಪದು ಹೇಳಿ ದಿನ ನೋಡೆ ಕಾತು.ಕೊಡಿಯಾಲಕ್ಕೆ ಬಪ್ಪಾಗ ನಿ೦ಗೊಗೆ ತಿಳಿಶಿಯೇ ಬಪ್ಪ ದು. ನಿ೦ಗಳ ಮನೆ ವಿಳಾಸ ಗೊ೦ತಿಲ್ಲೆನ್ನೆ ಅಪ್ಪಚ್ಚಿ.ಒ೦ದು ದಿನ ಬಪ್ಪದ೦ ತೂ ಖ೦ಡಿತ.ಬಾರೀ ಲಾಯಕಿನ ನಿ೦ಗಳ ಈ ಸುದ್ದಿಗೆ ಧನ್ಯವಾದ + ಒ೦ದೊ೦ಪ್ಪ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ನಿಂಗಳ ಒಪ್ಪ ನೋಡುವಾಗ ರೆಜ ತಡವಾತು. ಧನ್ಯವಾದಂಗೊ.
  ಮನೆಗೆ ಯಾವಾಗ ಬತ್ತರೂ ಸ್ವಾಗತವೇ. ಒಂದು ಫೋನ್ ಮಾಡಿ ಬನ್ನಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಚೆನ್ನೈ ಬಾವ°ಒಪ್ಪಕ್ಕಅಜ್ಜಕಾನ ಭಾವಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಪವನಜಮಾವವೇಣಿಯಕ್ಕ°ಕಾವಿನಮೂಲೆ ಮಾಣಿಜಯಗೌರಿ ಅಕ್ಕ°ಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣಪುತ್ತೂರಿನ ಪುಟ್ಟಕ್ಕಶರ್ಮಪ್ಪಚ್ಚಿಗಣೇಶ ಮಾವ°ಗೋಪಾಲಣ್ಣಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಸರ್ಪಮಲೆ ಮಾವ°ಕೊಳಚ್ಚಿಪ್ಪು ಬಾವಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಡಾಗುಟ್ರಕ್ಕ°ಮಾಲಕ್ಕ°ನೆಗೆಗಾರ°ಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ