ಇನ್ನೊಂದು ಚೋದ್ಯ..

ಒಬ್ಬ ಯಜಮಾನನ ಹತ್ರ ಒಂದು ಆನೆ ಇತ್ತಿದ್ದಡ. ಅವಂಗೆ ಪೈಸಗೆ ಅರ್ಜೆಂಟ್ ಆಗಿ ಅದರ ಮಾರುವ ಹೇಳಿ ನಿಜ ಮಾಡಿದ.
ಕ್ರಯ ಮಾಡ್ಲೆ ಬಂದ ಬ್ಯಾರಿ ಹತ್ರ ಇದಕ್ಕೆ 20 ಲಕ್ಷ ಕ್ಕಿಂತ ಕಮ್ಮಿಗೆ ಕೊಡ್ತಿಲ್ಲೆ ಹೇಳಿದ. ಹೇಂಗೂ ಕಚ್ಚೋಡ ಮಾಡುವ ಬ್ಯಾರಿ ಅಲ್ಲದ, ರಜ ಚರ್ಚೆ ಮಾಡಿರೆ ಕಮ್ಮಿಗೆ ಬಕ್ಕು ಹೇಳಿ ಆಲೋಚನೆ ಬಂತು.
‘ಇದು ತುಂಬಾ ಜಾಸ್ತಿ ಆತು, ರಜ ಕಮ್ಮಿ ಮಾಡಿ’ ಹೇಳಿ ಒರಂಜಿತ್ತಡ.
(ಎಂಗಳ ಊರಿನ ಬ್ಯಾರಿಗೊ ಆದರೆ “ಕೊರ್ಚ ಕೊರಕ್ಕಿ ಸಾಮಿ” ಹೇಳುಗು, ಕೊರಪ್ಪಲೆ ಎಂತ ನಾವು ನಾಯಿಗಳ?).
ಯಜಮಾನಂಗೆ ಇದರ ರಜ ಆಟ ಆಡುಸುವ ಹೇಳಿ ಆತು.

“ಆತು – ಆನು ಒಂದು ಕ್ರಯ ಹೇಳ್ತೆ, ನೀನು ಮತ್ತೆ ಬೇಡ ಹೇಳಿ ತಪ್ಪುಸಲೆ ಆಗ.
ಈ ಆನೆಗೆ ಮುಂದಾಣ ಕಾಲುಗಳಲ್ಲಿ ಒಟ್ಟು 10 ಉಗುರು, ಹಿಂದಾಣ ಕಾಲುಗಳಲ್ಲಿ ಒಟ್ಟು 8 ಉಗುರುಗೊ.
ಒಟ್ಟಪ್ಪಗ 18 ಆವುತ್ತು..

ಸುರುವಾಣ ಉಗುರಿಂಗೆ 10ರೂಪಾಯಿ,
ಎರಡನೆದಕ್ಕೆ ಅದರ ಎರಡು ಪಾಲು, (20)
ಮೂರನೆದಕ್ಕೆ ಎರಡನೆದರ ಎರಡು ಪಾಲು, (40)
ನಾಲ್ಕನೆದಕ್ಕೆ , ಮೂರನೆದರ ಎರಡು ಪಾಲು (80)
ಹೀಂಗೆ 18 ಉಗುರುಗೊಕ್ಕೂ ಲೆಕ್ಕ ಹಾಕಿ ಒಟ್ಟು ಎಷ್ಟು ಆವುತ್ತೋ ಅಷ್ಟು ಕೊಟ್ಟರೆ ಸಾಕು” ಹೇಳಿದ.

ಇಷ್ಟು ಕಮ್ಮಿಗೆ ಆನೆ ಸಿಕ್ಕುತ್ತನ್ನೆ ಹೇಳಿ ಬ್ಯಾರಿಗೆ ಕೊಶಿ ಅಗಿ ಆಕು ಹೇಳಿ ಒಪ್ಪಿ ಅಡ್ವಾನ್ಸ್ ಕೊಟ್ಟತ್ತು.
ಬ್ಯಾರಿ ಜಾಗೆಲಿ ನಿಂಗೊ ಇದ್ದರೆ ಎಂತ ಮಾಡ್ತಿ?
20 ಲಕ್ಷಕ್ಕೆ ತೆಕ್ಕೊಳ್ತೀರಾ ಇಲ್ಲೆ ಉಗುರಿನ ಲೆಕ್ಕಲ್ಲಿ ತೆಕ್ಕೊಳ್ತೀರಾ?

ಶರ್ಮಪ್ಪಚ್ಚಿ

   

You may also like...

17 Responses

 1. ಆದರ್ಶ says:

  🙂 ಬ್ಯಾರಿ ಜಾಗೆಲಿ ಆನಿದ್ದರೆ ಕಣ್ಣು ಮುಚ್ಚಿ 20ಲಕ್ಷಕ್ಕೆ ತೆಕ್ಕೊತ್ತಿತೆ.. ಎಂತಕೆ ಗೊಂತಿದ್ದಾ, ಆನು ಲೆಕ್ಕಲ್ಲಿ ಬಾರಿ ಹಿಂದೆ, 🙂

  ಆದರುದೆ,, ಬ್ಯಾರಿ ಮಂಗ ಆತು.. ಲೆಕ್ಕ ನೋಡ್ಲೆ ಬಾರಿ ಸುಲಾಬ ಕಾಣ್ತು, ಆದರೆ ಲೆಕ್ಕ ಹಾಕಲೆ ಸುರು ಮಾಡಿದ ಮತ್ತೆ ಅಸಲು ಸಂಗತಿ ಗೊಂತಪ್ಪದು.. 20ಲಕ್ಷಂದ ಜಾಸ್ತಿ ಅಪ್ಪದಂತು ಗ್ಯಾರೆಂಟಿ.. probabilityಯ ಲೆಕ್ಕ ಎನಗೆ ಈಗ ಮರದ್ದು.. 🙂 ಹಾಂಗಾಗಿ ಎಷ್ಟು ಉತ್ತರ ಬಕ್ಕು ಹೇಳಿ ಗೊಂತಿಲ್ಲೆ. ಆರಿಂಗಾರು ಗೊಂತಿಪ್ಪೋರು ಲೆಕ್ಕ ಮಾಡಿ ಹೇಳಿರೆ ಆನು ತಲೆ ಆಡ್ಸುವೆ…

 2. Prashantha V K says:

  Ugurina Lekhalli tekkonbadu labha heli kanuttu….. enthake helire 13,10,720kke aane sikkuttanne…

  1 10
  2 20
  3 40
  4 80
  5 160
  6 320
  7 640
  8 1,280
  9 2,560
  10 5,120
  11 10,240
  12 20,480
  13 40,960
  14 81,920
  15 1,63,840
  16 3,27,680
  17 6,55,360
  18 13,10,720

  • ಆದರ್ಶ says:

   ನೋಡುವಾಗ ಪ್ರಶಾಂತಣ್ಣನ ಲೆಕ್ಕ ಸರಿ ಇಪ್ಪ ಹಾಂಗೆ ಕಾಣ್ತು!! 🙂 ಆದರು ಎನಗೊಂದು ಸಂಶಯ… ಈ ಉತ್ತರ ಸರಿ ಹೇಳಿ ಆದರೆ, ಮತ್ತೆ ಅದರಲ್ಲಿ ಬ್ಯಾರಿಗೆ ಬುದ್ದಿಕಲಿಶುವ ಸಂಗತಿ ಎಲ್ಲಿ ಹೋತು>>??

 3. ಡಾ.ಸೌಮ್ಯ ಪ್ರಶಾಂತ says:

  1-10
  2-20
  3-40
  4-80
  5-160
  6-320
  7-640
  8-1280
  9-2560
  10-5120
  11-10240
  12-20480
  13-40960
  14-81920
  15-163840
  16-327680
  17-655360
  18-1310720

  ಉಗುರಿನ ಲೆಕ್ಕಲ್ಲಿ ತೆಕ್ಕೊಂಡರೆ ಬ್ಯಾರಿಗೆ ತುಂಬಾ ಲಾಭ ಆವುತ್ತು.. ಹಾಂಗಾಗಿ ಅದು ಬೇಗ ಒಪ್ಪಿಗೊಂಡದು…
  ಯಜಮಾನ ಉಗುರಿನ ಲೆಕ್ಕಲ್ಲಿ ಮಾರುದು ಸೂಕ್ತ ಅಲ್ಲ ಹೇಳಿ ಎನಗೆ ಕಾಣ್ತು….

  • ಗಣೇಶ ಹಾಲುಮಜಲು says:

   ಎಲ್ಲಾ ಉಗುರಿನ ಒಟ್ಟು ಸೇರ್ಸಿರೆ 26,21,430 ಆವ್ತು. ಯಜಮಾನಂಗೆ ಲಾಭ ಅಲ್ಲದಾ ?

 4. ಆದರ್ಶ says:

  ಆದರುದೆ, ಎನಗೆ ಸಂಶಯದ ಮೇಲೊಂದು ಅನುಮಾನ, ಎಲ್ಲಿಯೋ ಸಣ್ಣಕ್ಕೆ ಲೆಕ್ಕ ತಪ್ಪಿದ್ದು, 🙂

 5. Prashantha Korikkar says:

  Ugurina Lekkalli paise kodthare Ottu 26,21,430 rupayi kodeku.
  enthake helidare prathi ugurina paise serisi appaga ashtu aavuthu

  byaari mosa hooddade. Adakke haangayekku.

  • ಡಾ.ಸೌಮ್ಯ ಪ್ರಶಾಂತ says:

   ಅಣ್ಣ ಹೇಳಿದ್ದು ಸರಿ… ಲೆಕ್ಕ ಮಾಡುದರಲ್ಲಿ ಆನುದೆ ಮೋಸ ಹೋದೆ… 🙁 🙁

   • ಚೆ ಚೆ!!
    ಡಾಗುಟ್ರಕ್ಕಂಗೆ ಲೆಕ್ಕ ತಪ್ಪಿರೆ ಎಂಗಳಾಂಗಿದ್ದೋರು ಬದುಕ್ಕುಗು!
    ಅರಿಷ್ಟವೂ ಲೇಹವೂ ತೆಕ್ಕೊಂಡ್ರೆ – ಅರಿಷ್ಟಕ್ಕೆ ಮಾಂತ್ರ ಪೈಸೆ ತೆಕ್ಕೊಂಗು, ಲೇಹ ಫ್ರೀ…! 😉 😉

    • ಡಾ.ಸೌಮ್ಯ ಪ್ರಶಾಂತ says:

     ಹಾಂಗಿಪ್ಪದರಲ್ಲಿ ಎಂಗೊ ಉಶಾರಿದ್ದೆಯ… ಅದೆಲ್ಲಾ ತಪ್ಪುತ್ತಿಲ್ಲೆ….
     ತಪ್ಪಿದರೂ ಆ ಲೆಕ್ಕಲ್ಲಿ ರಜ ಹೆಚ್ಚು ತಪಾಸಣೆ ಮಾಡಿ ರೋಗಿಗ ಡಾಕ್ಟ್ರಿಂಗೆ ಕೊಡೆಕ್ಕಾದ ಪೈಸೆಯ ತೆಕ್ಕೊಂಬಗ ಲೇಹ್ಯದ ಪೈಸೆಯನ್ನೂ ಸೇರ್ಸಿದರೆ ಆತು…. ;೦ ;೦ ;೦

 6. RavikumaraKADUMANE says:

  alla ee 18 ugurugala rupoayi ottu sersedado hangare?

  • ಶ್ರೀಕೃಷ್ಣ ಶರ್ಮ.ಹಳೆಮನೆ says:

   ಅಪ್ಪು. ಎಲ್ಲಾ ಒಟ್ಟು ಸೇರ್ಸೆಕ್ಕು

 7. Krishna Mohan Bhat says:

  maathe hangallado prati ugurina paiseyannu kodle beku haangaagi byari sotadu khanditha. lekha barada sharmappachi tappiddan elle nave confuse maadikondadu.

 8. gopalakrishna BHAT S.K. says:

  innu heengippa chodya keli

 9. ರಾಜಾರಾಮ ಸಿದ್ದನಕೆರೆ says:

  ಲಾಯಕಾಯಿದು ಬ್ಯಾರಿಗೆ ಹಾಂಗೆ ಆಯೆಕ್ಕು ಸದಾ ಕುಟ್ಟಿ ಬದನೆ!!; ಆ ಬ್ಯಾರಿ ಎಟ್ಟು ಎಟ್ಟು ಪೋಯಿನೆಟ್ಟು ಹೇಳಿ ಲೆಕ್ಕ ಮಾಡಿತ್ತಾಯಿಕ್ಕು!!!!

 10. ಕೋರಿಕ್ಕಾರು ಪ್ರಶಾಂತ ಲೆಕ್ಕಲ್ಲಿ ಪಸ್ಟ್ಟುಅವನ ಲೆಕ್ಕ ಸರಿ ಇಕ್ಕಪ್ಪ…ಅಂತೂ ಬ್ಯಾರಿ ಸೋತ ಲೆಕ್ಕವೆ…!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *