“ಮಾಹಿತಿ ಹಕ್ಕು ಕಾಯಿದೆ”- ಇದರ ತಿಳಿವದು ನಮ್ಮ ಹಕ್ಕು

January 11, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 92 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ದೇಶಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ರೀತಿಲಿ ತೆರಿಗೆ ಕಟ್ಟುತ್ತ°.
ಅದು ನೇರವಾಗಿ ಕಟ್ಟುವ  ಆದಾಯ ತೆರಿಗೆಯೇ ಆದಿಕ್ಕು, ವೃತ್ತಿ ತೆರಿಗೆಯೇ ಆದಿಕ್ಕು, ಸಂಪತ್ತು ತೆರಿಗೆಯೇ ಆದಿಕ್ಕು. ಜಾಗೆಗೆ ಕಟ್ಟುವ ತೀರ್ವೆ ಆಗಿಕ್ಕು, ಜಾಗೆ ರಿಜಿಸ್ಟ್ರಿ ಮಾಡುವಾಗ ಕಟ್ಟುವ ಸ್ಟೇಂಪ್ ಫೀಸ್ ಆದಿಕ್ಕು ಅಥವಾ ಇನ್ನಿತರ ಯಾವದೇ ರೂಪಲ್ಲಿ ಆಗಿಕ್ಕು.

ಮಾಹಿತಿ ಹಕ್ಕು ಕಾಯಿದೆ
ಮಾಹಿತಿ ಹಕ್ಕು ಕಾಯಿದೆ

ಇದೆಲ್ಲಾ ಕಟ್ಟದ್ದೆ ಇಪ್ಪ ಸಾಮಾನ್ಯ ಪ್ರಜೆ ಕೂಡಾ ಅಂಗಡಿಂದ ಸಾಮಾನು ತೆಕ್ಕೊಂಬಗ ಅದಕ್ಕೆ ತೆರಿಗೆ ಕಟ್ಟುತ್ತ°. ಹಾಂಗಾಗಿ ಪರೋಕ್ಷವಾಗಿ ಅವನು ಕೂಡಾ ತೆರಿಗೆದಾರನೇ ಆವ್ತ°. ಸರ್ಕಾರ ನೆಡವದೇ ಈ ತೆರಿಗೆ ಸಂಗ್ರಹಿಸಿದ ಪೈಸೆಂದ.
ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಂಗಳಲ್ಲಿ, ನಾವು ಹಾಕಿದ ಪೈಸೆಯ ಉಪಯೋಗ ಆವ್ತು.
ಅಂಬಗ ನಾವು ಹಾಕಿದ ಪೈಸೆ ಎಂತ ಆವ್ತು ಹೇಳಿ ತಿಳ್ಕೊಳೆಕ್ಕು ಹೇಳಿ ನವಗೆ ಇರ್ತಿಲ್ಲೆಯೋ?
ತೆರಿಗೆ ರೂಪಲ್ಲಿ ಸಂಗ್ರಹಿಸಿದ ಎಲ್ಲಾ ಪೈಸೆ ಕೂಡಾ ಸರಿಯಾದ ದಾರಿಲಿಯೇ ಖರ್ಚು ಆವ್ತಿಲ್ಲೆ ಹೇಳುವದು ಎಲ್ಲರಿಂಗೂ ಗೊಂತಿಪ್ಪ ವಿಚಾರ.
ಯಾವದೇ ಒಂದು ಸರ್ಕಾರಿ ಕಾಮಗಾರಿ ಸುರು ಆದರೆ ಅದು ನೇರ್ಪಕೆ ಆವ್ತು ಹೇಳ್ಲೆ ಬತ್ತಿಲ್ಲೆ. ಸಾಮಾನ್ಯ ಜೆನಂಗೊಕ್ಕು ಕೂಡಾ ಮಾರ್ಗಲ್ಲಿ ಹೋಪಗ  ಗೊಂತಾವ್ತು.
ಪ್ರತಿ ವರ್ಷ ರಿಪೇರಿ ಹೇಳಿ ಅದಕ್ಕೆ ಖರ್ಚು ಎಷ್ಟು ಮಾಡ್ತವು!!!. ಆದರೆ ಒಂದು ಮಳೆ ಬಂದ ಕೂಡ್ಲೆ ಮಾರ್ಗ  ಮಾಯ ಆಗಿ ಎಲ್ಲೊಡಿಕೆ ತೋಡು ಆಗಿಂಡು ಇರ್ತು.
ಇದೆಲ್ಲಾ ನಾವು ಕಟ್ಟಿದ ಪೈಸೆಯ ದುರುಪಯೋಗ ಹೇಳಿ ನವಗೆ ಅನ್ಸುತ್ತಿಲ್ಲೆಯಾ?

ಹಾಂಗಾರೆ ಇದೆಲ್ಲಾ ನೋಡಿಂಡು ನಾವು ಸುಮ್ಮನೆ ಕೂರೆಕ್ಕಾ? ನಮ್ಮ ಪೈಸೆ ಹಾಳು ಅಪ್ಪದರ ನೋಡಿಂಡು ಕಣ್ಣು ಮುಚ್ಚಿ ಸಹಿಸಿಂಡು ಇರೆಕ್ಕಾ?
ಇದಕ್ಕೆಲ್ಲಾ ಒಂದೇ ಉತ್ತರ ಹೇಳಿರೆ, ನಮ್ಮ ಪೈಸೆ ಎಲ್ಲಿಗೆ ಹೋವ್ತು, ಹೇಂಗೆ ಖರ್ಚು ಆವ್ತು, ಇದರ  ಎಲ್ಲದರ ಬಗ್ಗೆ ನವಗೆ ಮಾಹಿತಿ ತಿಳಿತ್ತ ವ್ಯವಸ್ಥೆ ಇರೆಕ್ಕು ಮಾತ್ರ ಅಲ್ಲದ್ದೆ ಅದು ನಮ್ಮ ಹಕ್ಕು ಕೂಡಾ ಅಗಿರೆಕು.
ಇದಕ್ಕಾಗಿಯೇ ಬಂದದು “ಮಾಹಿತಿ ಹಕ್ಕು ಅಧಿನಿಯಮ ೨೦೦೫”. ಇದು ಸರ್ಕಾರದ ಅಧೀನಲ್ಲಿ ಇಪ್ಪ ಯಾವುದೇ ಕಾರ್ಯಾಲಯಂಗಳಂದ ನವಗೆ ಬೇಕಾದ ಮಾಹಿತಿ ತೆಕ್ಕೊಂಬಲೆ ಎಡಿತ್ತ ಹಾಂಗಿಪ್ಪ ಕಾನೂನು.

ಅಂಬಗ ಬಡಿಗೆ ಕೊಟ್ಟು ಬಡುಶಿಗೊಂಬಲೆ ಸರ್ಕಾರ ತಯಾರು ಇದ್ದೋ ಹೇಳಿ ಕಾಂಗು ನಿಂಗೊಗೆ
ಕೆಲವೊಂದು ಅನಿವಾರ್ಯತೆಂದಾಗಿ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಈ ಕಾನೂನು ತಾರದ್ದೆ ನಿವೃತ್ತಿ ಇಲ್ಲದ್ದೆ ಆಯಿದು ಕೇಂದ್ರ ಸರಕಾರಕ್ಕೆ.
ಕೇಂದ್ರದ ಈ ಕಾನೂನಿನ ಎಲ್ಲಾ ರಾಜ್ಯಂಗಳೂ ಅನುಷ್ಠಾನಕ್ಕೆ ತರೆಕು ಹೇಳಿ ಆದ ಕಾರಣ ದೇಶದ ಎಲ್ಲಾ ರಾಜ್ಯಂಗಳಲ್ಲಿಯೂ ಇದು ಜ್ಯಾರಿಗೆ ಬಯಿಂದು. ಆದರೆ ಈ ಕಾನೂನು ಜಮ್ಮು ,ಮತ್ತೆ ಕಾಶ್ಮೀರಕ್ಕೆ ಅನ್ವಯ ಆವ್ತಿಲ್ಲೆ.
ಅಂಬಗ ಈ ಕಾನೂನಿನ ಉಪಯೋಗ ನಾವು ಹೇಂಗೆ ಪಡವಲೆ ಅಕ್ಕು ಹೇಳಿ ತಿಳ್ಕೊಂಬ°

ಎರಡು ದಿನದ ಕಾರ್ಯಾಗಾರಲ್ಲಿ ಆನು ತಿಳುದ ವಿಶಯವ ನಿಂಗೊಗೆ ತಿಳುಶುವದು ಎನ್ನ ಉದ್ದೇಶವೇ ಹೊರತು, ಕಾನೂನಿನ ಪ್ರತಿಯೊಂದು ನಿಯಮಂಗಳ ವಿವರಿಸಿ ತಿಳುಸುವಷ್ಟು ಜ್ಞಾನ ಎನಗೆ ಇಲ್ಲೆ. ಆದರೂ ಪ್ರಾಥಮಿಕ ಜ್ಞಾನ ಎಲ್ಲರಿಂಗೂ ಸಿಕ್ಕಲಿ  ಹೇಳ್ತದೇ ಈ ಲೇಖನದ ಉದ್ದೇಶ.
ಮಾಹಿತಿ ಹಕ್ಕು ಹೇಳುವದು ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಿಂಗೆ ಒಳಪಟ್ಟಿದು ಹೇಳಿ ಸುಪ್ರೀಂ ಕೋರ್ಟು ತೀರ್ಪು ಕೊಟ್ಟಿದು.

“ಮಾಹಿತಿ ಹಕ್ಕು ಅಧಿನಿಯಮ ೨೦೦೫” ಹೇಳ್ತ ಹೆಸರಿಲ್ಲಿ (Right to Information Act 2005) ಈ ಕಾಯಿದೆ ೧೨/೧೦/೨೦೦೫ ರಿಂದ ಜ್ಯಾರಿಲಿ ಇದ್ದು.
ಈ ಕಾನೂನಿನ ವ್ಯಾಪ್ತಿಗೆ ಆರೆಲ್ಲಾ ಬತ್ತವು (ಹೇಳಿರೆ ನಾವು ಯಾವ ಯಾವ ಕಾರ್ಯಾಲಯಂಗಳಿಂದ ಮಾಹಿತಿ ತೆಕ್ಕೊಂಬಲೆ ಎಡಿಗು)?

 • ಕೇಂದ್ರ ಸರ್ಕಾರ ಮತ್ತೆ ಅದರ ಅಧೀನಲ್ಲಿ ಬಪ್ಪ ಸಂಸ್ಥೆಗೊ, ಮತ್ತೆ ಕಾರ್ಯಾಲಯ
 • ರಾಜ್ಯ ಸರ್ಕಾರ ಮತ್ತೆ ಅದರ ಅಧೀನಲ್ಲಿ ಬಪ್ಪ ಸಂಸ್ಥೆಗೊ ಮತ್ತೆ ಕಾರ್ಯಾಲಯ.
 • ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಕಾರ್ಯಾಲಯ.
 • ವಿತ್ತ ಮಂತ್ರಾಲಯ (Finance Ministry)
 • ಪಾಸ್‍ಪೋರ್ಟ್ ಆಪೀಸು
 • ಮುನ್ಸಿಪಾಲಿಟಿ ಆಫೀಸು,
 • ಪೋಲಿಸ್ ಸ್ಟೇಶನ್,
 • ನ್ಯಾಯಾಲಯ
 • ಸಾರ್ವಜನಿಕ ಕ್ಷೇತ್ರ ಘಟಕಂಗೊ (Public Sector Units)-ONGC, BHEL, HAL, NTPC ಇತ್ಯಾದಿ
 • ಬ್ಯಾಂಕ್ ಗೊ (Public Sector Banks)
 • ಸರ್ಕಾರದ ಅನುದಾನಂದ ನೆಡವ ಯಾವುದೇ ಸರ್ಕಾರೇತರ ಸಂಸ್ಥೆಗೊ (NGO-Non Government Organisation)

ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಬೇಹುಗಾರಿಕೆ ಮತ್ತೆ ರಕ್ಷಣಾ ವಿಭಾಗಂದ ಮಾಹಿತಿ ತೆಕ್ಕೊಂಬಲೆ ಸಾಧ್ಯ ಇಲ್ಲದ್ದರೂ, ಬ್ರಷ್ಟಾಚಾರ ಮತ್ತೆ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮಾಹಿತಿಯ ಕೇಳಿದಲ್ಲಿ ಅವು ಕೊಡೆಕ್ಕಾವ್ತು

ಸಾಮಾನ್ಯವಾಗಿ ಹೇಳುವದಾದರೆ, ಸಾಮಾನ್ಯ ಜನರಿಂದ ಕೂಡಾ ಸಂಗ್ರಹ ಆವ್ತಾ ಇಪ್ಪ ತೆರಿಗೆ ಹಣಂದ ನೆಡವಂಥಹ ಯಾವುದೇ ಸಂಸ್ಥೆ, ಕಾರ್ಯಾಲಯಂಗೊಇದರ ವ್ಯಾಪ್ತಿಲಿ ಬತ್ತವು.

ಮಾಹಿತಿ ಪಡಕ್ಕೊಂಬಲೆ ನಾವು ಎಂತ ಮಾಡೆಕ್ಕು?

 • ಪ್ರತಿಯೊಂದು ಸಂಸ್ಥೆ/ಕಾರ್ಯಾಲಯಂಗಳಲ್ಲಿ, ಇದರ ಬಗ್ಗೆ ಅರ್ಜಿ ತೆಕ್ಕೊಂಬಲೆ ಹೇಳಿ ಪ್ರತ್ಯೇಕ ಅಧಿಕಾರಿಯ ನೇಮಕ ಮಾಡಿರ್ತವು. ಅವಕ್ಕೆ ಪಬ್ಲಿಕ್ ಇನ್ಫೋರ್ಮೇಷನ್ ಆಫೀಸರ್ (PIO) ಹೇಳ್ತವು. ಇವಕ್ಕೆ ನಮ್ಮ ಅರ್ಜಿ ಕಳುಸೆಕ್ಕು.
 • ದೊಡ್ಡ ಕಾರ್ಯಾಲಯಂಗಳಲ್ಲಿ, ಹಲವಾರು ವಿಭಾಗಂಗೊ ಇಪ್ಪಗ ಪ್ರತಿಯೊಂದು ವಿಭಾಗಲ್ಲಿ ಇವರ ಅಧೀನಲ್ಲಿ ಅಸ್ಸಿಸ್ಟೆಂಟ್ ಪಬ್ಲಿಕ್ ಇನ್ಫೋರ್ಮೇಷನ್ ಆಫೀಸರ್ (APIO) ಕೂಡಾ ಇಪ್ಪ ಸಾಧ್ಯತೆ ಇದ್ದು.
 • ನಮ್ಮ ಅರ್ಜಿಯ ಬಿಳಿ ಕಾಗದಲ್ಲಿ ಬರದು ಕಳುಸಲೆ ಅಕ್ಕು. ಅರ್ಜಿಯ ಇಂಗ್ಲೀಷ್, ಹಿಂದಿ ಅಥವಾ ಆಯಾಯ ಪ್ರಾಂತ್ಯದ ಭಾಷೆ (ಕನ್ನಡ)ಲ್ಲಿ ಬರವಲೆ ಅಕ್ಕು
 • ಅರ್ಜಿಲಿ ನಮ್ಮ ಹೆಸರು ಮತ್ತೆ ವಿಳಾಸ ಇರೆಕು.
 • ಯಾವದರ ಬಗ್ಗೆ ಮಾಹಿತಿ ಬೇಕು ಹೇಳುವದು ಸ್ಪಷ್ಟವಾಗಿ ಬರೆಕು.
 • ವೈಯಕ್ತಿಕ ಹೆಸರಿಲ್ಲಿಯೇ ಅರ್ಜಿ ಇರೆಕು.
 • ನವಗೆ ಯಾವುದರ ಬಗ್ಗೆ ಮಾಹಿತಿ ಬೇಕಾದ್ದು ಹೇಳಿ ಮೊದಲೇ ಸರಿಯಾಗಿ ತಿಳ್ಕೊಳೆಕ್ಕು.
 • ಆ ಮಾಹಿತಿ ಎಲ್ಲಿ ಸಿಕ್ಕುಗು ಹೇಳ್ತ ಬಗ್ಗೆ ತಿಳ್ಕೊಂಡು ಅಲ್ಲಿಯ PIO ಗೇ ಅರ್ಜಿಯ ಕಳುಸೆಕ್ಕು
 • ಪ್ರಶ್ನೆ ನೇರವಾಗಿರೆಕು ಮತ್ತೆ ಸ್ಪಷ್ಟತೆ ಇರೆಕ್ಕು. ಹಾರಿಕೆಯ ಪ್ರಶ್ನೆ ಅಪ್ಪಲಾಗ.
 • ನವಗೆ ಯಾವ ಉದ್ದೇಶಕ್ಕೆ ಆ ಮಾಹಿತಿ ಬೇಕು ಹೇಳ್ತ ವಿವರ ಅದರಲ್ಲಿ ಕೊಡೆಕಾದ ಅಗತ್ಯ ಇಲ್ಲೆ.
 • ಒಂದು ವಿಶಯಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳ ಒಂದು ಅರ್ಜಿಲಿ ಕೇಳಲಕ್ಕು

ನಮ್ಮ ಹುದ್ದೆಯ ಬಗ್ಗೆ ಬರವಲೆ ಆಗ. ನಮ್ಮ ವೈಯಕ್ತಿಕ ವಿವರಂಗೊ (ಜಾತಿ, ಭಾಷೆ, ಪಂಗಡ, ಖಾಯಂ ವಿಳಾಸ) ಕೊಡೆಕು ಹೇಳಿ ಇಲ್ಲೆ.

ಅರ್ಜಿಯ ಯಾವುದೇ ಸಂಘ ಸಂಸ್ಥೆಯ ಲೆಟರ್ ಹೆಡ್ ಲ್ಲಿ ಕಳುಸಲೆ ಆಗ. ಎಂತಕೆ ಹೇಳಿರೆ ಇದು ಸಾಮಾನ್ಯ ಪ್ರಜೆಗೊಕ್ಕೆ ಬೇಕಾಗಿ ಇಪ್ಪ ಕಾನೂನು.

 • ಬೇರೆ ಬೇರೆ ವಿಶಯಂಗಳ ಬಗ್ಗೆ ಕೇಳುವಾಗ ಪ್ರತಿಯೊಂದು ವಿಶಯಕ್ಕೆ ಸಂಬಂಧ ಪಟ್ಟು ಒಂದೊಂದು ಅರ್ಜಿ ಸಲ್ಲುಸೆಕ್ಕು.
 • ಅರ್ಜಿ ಶುಲ್ಕ ಕಟ್ಟಿರೆಕು.
 • ಅರ್ಜಿಲಿ ೧೫೦ ಶಬ್ದವ ಮೀರಲೆ ಆಗ ಹೇಳಿ ಕರ್ನಾಟಕ ರಾಜ್ಯ ಇತ್ತೀಚೆಗೆ ಕಾನೂನು ಮಾಡಿದ್ದು
 • ಅರ್ಜಿ ಶುಲ್ಕ ೧೦ ರೂಪಾಯಿ. ಇದರ ಪೋಸ್ಟಲ್ ಓರ್ಡರ್, ಅಥವಾ ಇನ್ನಾವುದೇ (ಡಿಮಾಂಡ್ ಡ್ರಾಫ್ಟ್, ನಗದು) ರೂಪಲ್ಲಿ ಕೊಡ್ಲೆ ಅಕ್ಕು
 • ಅರ್ಜಿಯ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ಡ್ ಪೋಸ್ಟಿಲ್ಲಿ ಕಳುಸುವದು ಸೂಕ್ತ. ಎಂತಕೆ ಹೇಳಿರೆ ನಾವು ಕಳುಸಿದ್ದಕ್ಕೆ ದಾಖಲೆ ಇರ್ತು.

ನಾವು ಕೇಳುವ ಮಾಹಿತಿಗೊ ಯಾವದೇ ರೂಪಲ್ಲಿ ಇಪ್ಪಲಕ್ಕು

 • CD, Floppy, Hard Disk,
 • ಮೈಲ್,
 • ಸುತ್ತೋಲೆ, ಕರಾರು ಪತ್ರ, ಆದೇಶಂಗೊ, ಲಾಗ್ ಪುಸ್ತಕ, ವರದಿ, ಕಾಗ ಪತ್ರ, ವಿದ್ಯುನ್ಮಾನ ರೂಪಲ್ಲಿ ಇಪ್ಪ ಯಾವುದೇ ಮಾಹಿತಿಗೊ (Soft Copy)

ನಾವು ಈ ರೀತಿ ಅರ್ಜಿ ಕೊಟ್ಟ ಮತ್ತೆ ಎಂತ ಆವ್ತು?

 • ಕೊಟ್ಟ ಅರ್ಜಿ PIO ಗೆ ತಲುಪಿದರೆ, ಅದು ಅವಂಗೆ ಸಿಕ್ಕಿದ ೩೦ ದಿನ ಒಳ ನವಗೆ ಮಾಹಿತಿ ಒದಗಿಸಿ ಕೊಡೆಕು.
 • ಒಬ್ಬ ವ್ಯಕ್ತಿಯ ಜೀವಕ್ಕೆ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧ ಪಟ್ಟ ಮಾಹಿತಿ ಕೇಳಿದಲ್ಲಿ, ಆ ಮಾಹಿತಿಗಳ ೪೮ ಗಂಟೆಗಳ ಒಳ ಅವು ಒದಗಿಸಿ ಕೊಡೆಕ್ಕಾವ್ತು.
 • ಕಳುಸಿದ ಅರ್ಜಿಗೆ ಬೇಕಾದ ವಿವರ PIO ಹತ್ರೆ ಇಲ್ಲೆ,  APIO ಹತ್ರಂದ ಅವ° ಪಡದು ನವಗೆ ಕೊಡೆಕು ಹೇಳಿ ಆದರೆ, ಇದಕ್ಕಾಗಿ ಅವ  ೫ ದಿನದ ಹೆಚ್ಚಿದ ಅವಧಿ ತೆಕ್ಕೊಂಬಲೆ ಅಕ್ಕು. ಹಾಂಗಾಗಿ ನವಗೆ ಮಾಹಿತಿ ಸಿಕ್ಕುವಾಗ ೩೫ ದಿನ ಆಗಿ ಹೋಕು.
 • ಈ ವಾಯಿದೆಂದ ಒಳ ನವಗೆ ಅಲ್ಲಿಂದ ಉತ್ತರ ಬಪ್ಪಲೇ ಬೇಕು. ಬಾರದ್ದರೆ, ಇವರ ಮೇಗಾಣ ಅಧಿಕಾರಿಗೆ ನಾವು ದೂರು ಕೊಡ್ಲೆ ಅಕ್ಕು
 • ಯಾವುದೇ ಕಾರಣಕ್ಕೆ ತಡವಾಗಿ ಅವು ಮಾಹಿತಿ ಕೊಟ್ಟಲ್ಲಿ, ಅದಕ್ಕೆ ಅವು ಯಾವುದೇ ಶುಲ್ಕ ವಸೂಲು ಮಾಡುವ ಹಾಂಗಿಲ್ಲೆ.
 • ನಿಗದಿ ಮಾಡಿದ ೩೦/೩೫ ದಿನ ಒಳ ಮಾಹಿತಿ ಕೊಡದ್ದಲ್ಲಿ, ದಿನಕ್ಕೆ ೨೫೦ ರೂಪಾಯಿಯ ಹಾಂಗೆ ಆ ಅಧಿಕಾರಿಗೊ ದಂಡ ಕಟ್ಟೆಕ್ಕಾವ್ತು.

ಹಾಂಗಾರೆ ೧೦ ರೂಪಾಯಿ ಕಟ್ಟಿದ್ದಲ್ಲಿ ಎಲ್ಲಾ ಮಾಹಿತಿ ಅವು ಕೊಡ್ತವೋ ಕೇಳಿರೆ, ಇಲ್ಲೆ ಹೇಳ್ಲಕ್ಕು

 • ನಾವು ಕೇಳಿದ ಮಾಹಿತಿಗೊ ಹಸ್ತ ಪ್ರತಿ ಅಥವಾ ಮುದ್ರಿತ ರೂಪಲ್ಲಿ ಇದ್ದರೆ, ಅದರ ಫೋಟೊ ಕೋಪಿ ತೆಗದು ಕೊಡೆಕು.
 • ಆದರೆ ಇದಕ್ಕೆ ಪ್ರತಿ ಪುಟಕ್ಕೆ ಅವು ೨ ರೂಪಾಯಿ ಹಾಂಗೆ ನವಗೆ ಚಾರ್ಜ್ ಮಾಡ್ಲೆ ಅಕ್ಕು. ಈ ಬಗ್ಗೆ ನವಗೆ ಮಾಹಿತಿ ಕೊಟ್ಟು, ನಾವು ಪೈಸೆ ಕಟ್ಟಿದ ಮತ್ತೆ, ನವಗೆ ಫೋಟೊ ಕೋಪಿಯ ಅವು ಕಳುಸಿ ಕೊಡೆಕ್ಕಾವ್ತು.
 • ನಾವು ಕೇಳಿದ ಮಾಹಿತಿ ವಿದ್ಯುನ್ಮಾನ ಮಾಧ್ಯಮ (soft copy) ಲ್ಲಿ ಇದ್ದರೆ, ಅದರ ಪ್ರತಿಗೆ ಪ್ರತಿ CD ಗೆ ೫೦ ರೂಪಾಯಿಯ ಹಾಂಗೆ ಚಾರ್ಜ್ ಮಾಡ್ತವು.
 • ಯಾವದೇ ರಿಕಾರ್ಡುಗಳ ನಾವೇ ಹೋಗಿ ನೋಡೆಕ್ಕಾದರೆ, ಮೊದಲಾಗಿ ಇಂಥಾ ದಿನ ಇಷ್ಟು ಹೊತ್ತಿಂಗೆ ಬತ್ತೆ, ಇಷ್ಟು ಹೊತ್ತು ವರೆಗೆ ಇರ್ತೆ ಹೇಳ್ತ ಮಾಹಿತಿ ಅವಕ್ಕೆ ಕೊಡೆಕು.
  ನಾವು ಅಲ್ಲಿ ಇಪ್ಪ  ಸುರುವಾಣ ಒಂದು ಗಂಟೆಗೆ ಎಂತ ಚಾರ್ಜ್ ಮಾಡುವ ಹಾಂಗಿಲ್ಲೆ. ಮತ್ತೆ ಪ್ರತಿ ಗಂಟೆಗೆ ೫ ರೂಪಾಯಿಯ ಹಾಂಗೆ ಅವು ಚಾರ್ಜ್ ಮಾಡ್ಲೆ ಅಕ್ಕು
 • ದೇಶದ ರಕ್ಷಣೆಗೆ ಸಂಬಂಧ ಪಟ್ಟದು, ಕೋರ್ಟ್ ಕೇಸಿಲ್ಲಿ ಇಪ್ಪ ಮಾಹಿತಿಗೊ, ವೈಜ್ಞಾನಿಕ ಮಾಹಿತಿಗೊ, ಅಥವಾ ತುಂಬಾ ರಹಸ್ಯ ಮಾಹಿತಿಗಳ ನಾವು ಕೇಳಿದರೂ, ಅವು ಕೊಡೆಕಾದ ಅಗತ್ಯ ಇಲ್ಲೆ.
  ಒಬ್ಬನ ವೈಯಕ್ತಿಕ ವಿಶಯಂಗಳ ಬಗ್ಗೆ ನಾವು ಕೇಳಿದ ಮಾಹಿತಿ ಅವು ಕೊಡೆಕಾದ ಅಗತ್ಯ ಇಲ್ಲೆ.
 • ಒಂದು ವೇಳೆ ನಾವು ಕೇಳಿದ ಮಾಹಿತಿ ಅವು  ಒದಗುಸುತ್ತವಿಲ್ಲೆ ಹೇಳಿ ಆದರೆ, ಅದಕ್ಕೆ ಸರಿಯಾದ ಕಾರಣ ಕೊಡೆಕು. ಮತ್ತೆ ಇಂತಿಷ್ಟು ದಿನದ ಒಳ ಈ ಬಗ್ಗೆ ಅಪೀಲ್ ಮಾಡ್ಲಕ್ಕುಹೇಳಿಯೂ,ಅದರ ಆರಿಂಗೆ ಮಾಡೆಕ್ಕಾದ್ದು ಹೇಳಿಯೂ ತಿಳುಶೆಕ್ಕು.
 • ಈ ಕಾನೂನಿನ ಬಲಂದಾಗಿ ಎಷ್ಟೋ ಅವ್ಯವಹಾರಂಗೊ, ಬ್ರಷ್ಟಾಚಾರಂಗೊ ಬಯಲಿಂಗೆ ಬಯಿಂದು.
 • ಇಂದು ಜೈಲಿಲ್ಲಿ ಕೂರಿಸಿ ಸಮ್ಮಾನ ಮಾಡ್ತ ಕಸಬಿಂಗೆ ಅಥವಾ ಅಬ್ಜಲ್ ಗುರುವಿಂಗೆ ನಮ್ಮ ತೆರಿಗೆಂದ ಎಷ್ಟು ಪೈಸೆ ಖರ್ಚು ಮಾಡಿದ್ದವು ಹೇಳ್ತ ವಿವರಂಗೊ ಎಲ್ಲಾ ತಿಳಿವಲೆ ಸಹಕಾರಿ ಆದ್ದು ಇದೇ ಕಾನೂನು.

ಜ್ಯಾರಿಲಿ ಇಪ್ಪ ಒಂದು ಪ್ರಬಲವಾದ ಕಾಯಿದೆಯ ಉಪಯೋಗ ಮಾಡಿ ಮಾಹಿತಿ ತೆಕ್ಕೊಂಬ ಅಧಿಕಾರ ನವಗೆ ಇದ್ದು.

ಈ ಅಸ್ತ್ರವ ಬೇಕಾದ ಕಾಲಕ್ಕೆ ಉಪಯೋಗಿಸಿ ಬೇಕಾದ ಮಾಹಿತಿ ಪಡಕ್ಕೊಂಬೊ°.

~*~*~

ಈ ಲೇಖನದ ಉದ್ದೇಶ ಹೀಗೊಂದು ಕಾಯಿದೆ ಇದೆ ಎಂದು ತಿಳಿಯಪಡಿಸುವುದು ಮಾತ್ರ. ನಾವು ಯಾವುದೇ  consultation ಸಂಘಟನೆಯಲ್ಲ.
"ಮಾಹಿತಿ ಹಕ್ಕು ಕಾಯಿದೆ"- ಇದರ ತಿಳಿವದು ನಮ್ಮ ಹಕ್ಕು, 2.0 out of 10 based on 1 rating

ಈ ಶುದ್ದಿಗೆ ಇದುವರೆಗೆ 92 ಒಪ್ಪಂಗೊ

 1. ಶಿವರಾಜ ಕಟ್ಟಿಮನಿ

  ಬಿ. ಫಿ. ಎಲ್ ಕಾರ್ಡ ಬಗ್ಗೆ ಮಾಹಿತಿಯನ್ನು ಉಚಿತವಾಗಿ ಕೊಡಬೇಕು

  VA:F [1.9.22_1171]
  Rating: 0 (from 0 votes)
 2. ಶಿವರಾಜ ಕಟ್ಟಿಮನಿ

  VA:F [1.9.22_1171]
  Rating: 0 (from 0 votes)
 3. Durgappa Hosamani

  sir nanage police ilake bagge mahiti Baku
  mattu.t m c bagge

  VA:F [1.9.22_1171]
  Rating: 0 (from 0 votes)
 4. ನಾನು ಮಾಹಿತಿ ಕೇಳಿ ೩೫ ದಿನ ಕಳಿದಿವೇ ಇನ್ನೂ ಮಾಹಿತಿ ಕೋಟ್ಟಿಲಾ ಅಧಿಕಾರಿಗಳು ಏನು ಮಾಡಬೇಕು ಸರ್

  VA:F [1.9.22_1171]
  Rating: 0 (from 0 votes)
 5. ramkumar

  sir nanu mahithi kelli 40 divasa kaledhive innu mahithi kottilla

  VA:F [1.9.22_1171]
  Rating: 0 (from 0 votes)
 6. ಸರ್ ಒಬ್ಬ ಸರಕಾರಿ ಅಧಿಕಾರಿ ತನ್ನ ಅನ್ಯಾರೋಗದಿಂದ ಇರುವಾಗ ಅಂತ ಬೇರೆ ವ್ಯಕ್ತಿಯನ್ನು ತನ್ನ ಸಹಾಯಕ ಕೆಲಸಗಾರನಾಗಿ ತೆಗೆದುಕೊಳ್ಳಬಹುದ ಇಲ್ಲವಾ ಇದ್ದರ ಬಗ್ಗೆ ಮಾಹಿತಿ ಬೇಕು

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಶರ್ಮಪ್ಪಚ್ಚಿಯ ಶುದ್ದಿಗೆ ಡಿಮಾಂಡಪ್ಪೋ ಡಿಮಾಂಡ್.

  VA:F [1.9.22_1171]
  Rating: 0 (from 0 votes)

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆವಿಜಯತ್ತೆಬೊಳುಂಬು ಮಾವ°ದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿಶಾಂತತ್ತೆರಾಜಣ್ಣಗೋಪಾಲಣ್ಣಶ್ಯಾಮಣ್ಣಶಾ...ರೀಪೆಂಗಣ್ಣ°ಬೋಸ ಬಾವಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಪುಟ್ಟಬಾವ°ನೆಗೆಗಾರ°ದೊಡ್ಮನೆ ಭಾವಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಪವನಜಮಾವವಾಣಿ ಚಿಕ್ಕಮ್ಮಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ